ಶುಕ್ರವಾರ, ಆಗಸ್ಟ್ 10, 2018
ಶನಿವಾರ, ಜನವರಿ 27, 2018
ಎರಡು ವಿಧದ ವಿಶ್ವದ ಜನ - ಎ .ಟಿ. ನಾಗರಾಜ
ಎರಡು ವಿಧದ ವಿಶ್ವದ ಜನ - ಎ .ಟಿ. ನಾಗರಾಜ
ನಾವು ನಮ್ಮನ್ನು ಬಿಟ್ಟು ಬೇರೆ ಎಲ್ಲರನ್ನು ಗಮನವಿಟ್ಟು ಗಮನಿಸುವವರು. ಹಾಗಾಗಿಯೇ ವಿಶ್ವದ ತೊಂಭತ್ತೈದು ಭಾಗದ ಜನ ಸಂಸಾರಿಗಳಾಗಿದ್ದು, ಉಳಿದ ಕೇವಲ ಐದು ಭಾಗದ ಜನ ವಿಶ್ವದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದು.
ತೊಂಭತ್ತೈದು ಭಾಗದ ಜನ ತಮ್ಮ ಹೆಂಡತಿ, ಮಕ್ಕಳು, ಸಂಸಾರ ಹೀಗೆ ಇದರ ಬೆನ್ನ ಹತ್ತಿ , ಯಾಕಪ್ಪ ಈ ಸಂಸಾರ! ಈ ಹೆಂಡತಿ, ಮಕ್ಕಳು, ಎಂದು ಜೀವನ ಸಾಗಿಸುವವರು.
ಇನ್ನು ಐದು ಭಾಗದ ಜನ ವಿಧ್ಯೆ,ವ್ಯವಹಾರ, ರಾಜಕೀಯ, ತಂದೆ ,ತಾಯಿ, ಸಮಾಜ, ಈ ರೀತಿ ವಿಶ್ವದಲ್ಲಿ ಕುಣಿದು ನಲಿದವರು.
ಈ ತೊಂಭತ್ತೈದು ಭಾಗದ ಜನರಿಗೆ ತಂದೆ, ತಾಯಿ, ಸಮಾಜ ಬೇಡ, ತಾವು ತಮ್ಮ ಹೆಂಡತಿ ,ಮಕ್ಕಳು ಚೆನ್ನಾಗಿರಬೇಕು..
ಈ ಐದು ಭಾಗದ ಜನರಿಗೆ ತಂದೆ ,ತಾಯಿ, ಸಮಾಜ ಚೆನ್ನಾಗಿರಬೇಕು.
ತೋಭತ್ತೈದು ಭಾಗದ ಜನರಿಗೆ ಬೆಳಿಗ್ಗೆ ಬೇಗ ಏಳುವುದು, ಜಾಸ್ತಿ ಕೆಲಸ ಮಾಡುವುದು. ಬೇರೆಯವರಿಗೆ ಸಹಾಯ ಮಾಡುವುದು ಅಲರ್ಜಿ.
ಐದು ಭಾಗದ ಜನರಿಗೆ ಬೆಳಿಗ್ಗೆ ಬೇಗ ಏಳುವುದು, ಜಾಸ್ತಿ ಕೆಲಸ ಮಾಡುವುದು ,ಬೇರೆಯವರಿಗೆ ಸಹಾಯ ಮಾಡುವುದು ತುಂಭಾ ಇಷ್ಟ .
ನೀವೇ ಯೋಚಿಸಿ. ನೀವು ಯಾವ ವರ್ಗದ ಜನ.
ಭಾನುವಾರ, ಜೂನ್ 11, 2017
ನಮ್ಮಲ್ಲಿ ಕೆಲವರು ತಮ್ಮ ತಪ್ಪನ್ನು ಒಪ್ಪಿ ಕೊಳ್ಳದವರು ಬೇರೆಯವರ ಮೇಲೆ ಗೂಬೆ ಕೂರಿಸುವವರು ಇದ್ದಾರೆ. ಆದರೆ ಅವರು ತಿಳಿದಿರಬಹುದು ತಾವು ಬುದ್ಧಿವಂತರೆಂದು. ಆದರೆ, ಅದು ಒಂದು ಮೂರ್ಖತನದ ಬುನಾದಿ. ಯಾಕೆಂದರೆ,ಯಾವುದೇ ವ್ಯಕ್ತಿ ತನ್ನ ತಪ್ಪನ್ನು ತಾನು ಒಪ್ಪಿಕೊಂಡು ಮುಂದೆ ಹೋಗಬೇಕೆ ಹೊರತು ಬೇರೆಯವರ ಮೇಲೆ ಕೈ ತೋರಿಸಿ ಮುಂದೆ ಹೋಗಬಾರದು. ಅದು ಜೀವನದಲ್ಲಿ ಮುಂದೆ ಬರಲು ಮಾರಕವೇ ಹೊರತು ಪೂರಕವಲ್ಲ.
ಇತ್ತೀಚಿಗೆ ಒಂದು ಘಟನೆ ನಡೆಯಿತು. ಒಂದು ಐ,ಎಸ್..ಓ .ಕಂಪನಿಗೆ ಒಬ್ಬ ಮೇಲ್ವಿಚಾರಕ ಬಂದಿದ್ದರು. ಅದೇ ವೇಳೆಗೆ ಆ ಕಂಪನಿಯಲ್ಲಿ ಕೆಲಸಮಾಡುವ ಸಿಬ್ಬಂಧಿಯೊಬ್ಬನಿಗೆ ಬೇರೆ ಬ್ರಾಂಚ್ ನಿಂದ ಕರೆಬಂತು. ಕರೆ ಸ್ವೀಕರಿಸಿ ಮಾತನಾಡಿದ. ಆ ಕರೆಮಾಡಿದ ವ್ಯಕ್ತಿ ಲಿಫ್ಟ್ನಲ್ಲಿ ಸ್ಟ್ರಕ್ ಆಗಿದ್ದಾಗಿಯೂ ಆತನನ್ನು ಲಿಫ್ಟ್ನಿಂದ ಬಿಡಿಸಬೇಕಾಗಿಯೂ ಆ ವ್ಯಕ್ತಿ ಹೇಳಿದ್ದ. ಆತನ ಪಕ್ಕದಲ್ಲಿ ಇದ್ದ ಮೇಲ್ವಿಚಾರಕ ಎಲ್ಲವನ್ನು ಕೇಳಿಸಿಕೊಂಡಿದ್ದ .
ಎಲ್ಲ ಕೇಳಿಸಿಕೊಂಡ ಮೇಲೆ ಮೇಲ್ವಿಚಾರಕ ಕೇಳಿದ. ಲಿಫ್ಟ್ ಸ್ಟ್ರಕ್ ಯಾಕೆ ಆಯ್ತು.?
ಲಿಫ್ಟ್ನಲ್ಲಿ ಜಾಸ್ತಿ ಜನ ಇದ್ದುದ್ದರಿಂದ ,
ಯಾವ ಫ್ಲೋರಿನಲ್ಲಿ ?
ನಾಲ್ಕನೇ ಫ್ಲೋರಿನಲ್ಲಿ .
ಲಿಫ್ಟ್ ಕೆಪ್ಯಾಸಿಟಿಗಿಂತ ಜಾಸ್ತಿಜನ ಲಿಫ್ಟ್ನಲ್ಲಿ ಹೋದರೆ ಲಿಫ್ಟ್ ಚಲಿಸುವುದಿಲ್ಲ. ನಾನು ಈ ವಿಷಯದಲ್ಲಿ ಪಿ.ಹೆಚ್ .ಡಿ,ಮಾಡುವುದು ಒಂದು ಬಾಕಿ ಇದೆ. ನಿನ್ನ ರೀತಿಯವರನ್ನು ಬಹಳ ಜನ ರನ್ನು ಕಂಡಿದ್ದೇನೆ. ಎಂದಾಗ ಆ ಅಧಿಕಾರಿಯ ಮುಖ ಸಪ್ಪಗೆ ಆಯ್ತು.
ಇತ್ತೀಚಿಗೆ ಒಂದು ಘಟನೆ ನಡೆಯಿತು. ಒಂದು ಐ,ಎಸ್..ಓ .ಕಂಪನಿಗೆ ಒಬ್ಬ ಮೇಲ್ವಿಚಾರಕ ಬಂದಿದ್ದರು. ಅದೇ ವೇಳೆಗೆ ಆ ಕಂಪನಿಯಲ್ಲಿ ಕೆಲಸಮಾಡುವ ಸಿಬ್ಬಂಧಿಯೊಬ್ಬನಿಗೆ ಬೇರೆ ಬ್ರಾಂಚ್ ನಿಂದ ಕರೆಬಂತು. ಕರೆ ಸ್ವೀಕರಿಸಿ ಮಾತನಾಡಿದ. ಆ ಕರೆಮಾಡಿದ ವ್ಯಕ್ತಿ ಲಿಫ್ಟ್ನಲ್ಲಿ ಸ್ಟ್ರಕ್ ಆಗಿದ್ದಾಗಿಯೂ ಆತನನ್ನು ಲಿಫ್ಟ್ನಿಂದ ಬಿಡಿಸಬೇಕಾಗಿಯೂ ಆ ವ್ಯಕ್ತಿ ಹೇಳಿದ್ದ. ಆತನ ಪಕ್ಕದಲ್ಲಿ ಇದ್ದ ಮೇಲ್ವಿಚಾರಕ ಎಲ್ಲವನ್ನು ಕೇಳಿಸಿಕೊಂಡಿದ್ದ .
ಎಲ್ಲ ಕೇಳಿಸಿಕೊಂಡ ಮೇಲೆ ಮೇಲ್ವಿಚಾರಕ ಕೇಳಿದ. ಲಿಫ್ಟ್ ಸ್ಟ್ರಕ್ ಯಾಕೆ ಆಯ್ತು.?
ಲಿಫ್ಟ್ನಲ್ಲಿ ಜಾಸ್ತಿ ಜನ ಇದ್ದುದ್ದರಿಂದ ,
ಯಾವ ಫ್ಲೋರಿನಲ್ಲಿ ?
ನಾಲ್ಕನೇ ಫ್ಲೋರಿನಲ್ಲಿ .
ಲಿಫ್ಟ್ ಕೆಪ್ಯಾಸಿಟಿಗಿಂತ ಜಾಸ್ತಿಜನ ಲಿಫ್ಟ್ನಲ್ಲಿ ಹೋದರೆ ಲಿಫ್ಟ್ ಚಲಿಸುವುದಿಲ್ಲ. ನಾನು ಈ ವಿಷಯದಲ್ಲಿ ಪಿ.ಹೆಚ್ .ಡಿ,ಮಾಡುವುದು ಒಂದು ಬಾಕಿ ಇದೆ. ನಿನ್ನ ರೀತಿಯವರನ್ನು ಬಹಳ ಜನ ರನ್ನು ಕಂಡಿದ್ದೇನೆ. ಎಂದಾಗ ಆ ಅಧಿಕಾರಿಯ ಮುಖ ಸಪ್ಪಗೆ ಆಯ್ತು.
ಶುಕ್ರವಾರ, ಅಕ್ಟೋಬರ್ 5, 2012
ಎಲ್ಲರೂ ಮಹಾತ್ಮಾ ರಾಗದಿರಲೂ ಕಾರಣವೇನು ?
ಎಲ್ಲರೂ ಮಹಾತ್ಮಾ ರಾಗದಿರಲೂ ಕಾರಣವೇನು ?
ನಾನು ಬಹಳ ದಿನದಿಂದಲೂ ಬಹಳ ಯೋಚಿಸುತ್ತಿದ್ದೆ , ನಾವು ಶಾಲಾ - ಕಾಲೇಜು ಗಳಲ್ಲಿ ದೊಡ್ಡ ದೊಡ್ಡ ಸಭೆ ಸಮಾರಂಭ ಗಳಲ್ಲಿ ಮಹಾತ್ಮರ ಬಗ್ಗೆ , ಅವರ ಜೇವನ ಕ್ರಮದ ಬಗ್ಗೆ , ಅವರು ನಡೆದು ಬಂದ ದಾರಿಯ ಬಗ್ಗೆ , ಅವರ ಪ್ರಾಮಾಣಿಕತೆಯ ಬಗ್ಗೆ ಹೇಳುತ್ತೇವೆ , ಆದರೆ ಹೆಚ್ಚಿನ ಜನರು ಮಹಾತ್ಮ ರಾಗದಿರಲೂ ಮುಖ್ಯ ಕಾರಣ ಅದರಲ್ಲೂ ನೈಜ ಕಾರಣ ನನಗೆ ಹೊಳೆದಿದೆ . "ಹಲಾವಾರು ಮಹಾತ್ಮರು (ಹುತಾತ್ಮರು ) ಸಜೀವ ದಹನಕ್ಕೆ ಒಳಗಾದವರೆ !",
ರಾಷ್ಟ್ರಪಿತ ಮಹಾತ್ಮ ಗಾಂಧೀ ನಾತ ರಾಮ್ ಗೂಡ್ಸ್ ರವರ ಗುಂಡಿಗೆ ಬಲಿಯಾದರು !, ಇಂದಿರಾ ಗಾಂಧೀ ಮಾನವ ಹತ್ಯೆ ಬಾಂಬ್ಗೆ ಬಲಿಯಾದರು . ರಾಜೀವ ಗಾಂಧೀ ಅವರು ಮಾನವ ಹತ್ಯೆ ಬಾಂಬ್ ಗೆ ಬಲಿಯಾದರು !, ಈ ಎಲ್ಲಾ ಕಾರಣ ಗಳ ಹಿಂದೆ ಶಾಂತಿ ವಾದ ಅಡಗಿದೆ .
ಒಂದೆಡೆ ಅರವಿಂದ ಕೆಜ್ರಿವಾಲ ಹೀಗೆ ಹೇಳಿದ್ದಾರೆ "ಸಾರ್ವಜನಿಕವಾಗಿ ಗುರುತಿಸಿಕೊಂಡ ಮೇಲೆ ಜವಾಬ್ದಾರಿಯ ಜತೆಗೆ ಆಪತ್ತನ್ನೂ ಕಟ್ಟಿ ಕೊಳ್ಳಬೇಕಾಗುತ್ತದೆ . ಎಷ್ಟೋ ಬಾರಿ ಪ್ರಾಣ -ಅಪಾಯದ ಸಂಧರ್ಭಗಳೂ ಎದುರಾಗುವುದು ಉಂಟು" !..
ಹಾಗೆಯೇ ಮಾನ್ಯ ಯಡಿಯೂರಪ್ಪ ಒಂದೆಡೆ ಹೇಳಿದ್ದಾರೆ "ಆಕ್ರಮಣ ಮಾಡುವುದು ಗೊತ್ತು . ಆಪತ್ತಿನಿಂದ ಪಾರಾಗುವುದು ಗೊತ್ತು "!. ಅಂದರೆ ಇದೆಲ್ಲ ಒಬ್ಬ ಇಂದೋ , ನಿನ್ನೆಯೋ ಹುಟ್ಟಿದ , ಲೋಕ ಪರಿಜ್ಞಾನ ವಿಲ್ಲದ ವ್ಯಕ್ತಿಗಳು ಹೇಳಿದ್ದರೆ ನಾವು ಅನುಮಾನ ಪಡಬಹುದು , ಆದರೆ ಇವರ ಜೀವಮಾನ ವಿಡಿ ಸಮಾಜ ಸೇವೆಗಾಗಿಯೇ ಸವೆದವರು.
ಅಂದರೆ ಇದಕ್ಕೆಲ್ಲ ಪರಿಹಾರ ವೇನು ? ಎಲ್ಲಿಂದ ಪ್ರಾರಂಭ ವಾಗಬೇಕು ? ಪರಿವರ್ತನೆ ? . ಇದಕ್ಕೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಮದರ್ ತೆರೇಸಾ ಸ್ಪಷ್ಟವಾಗಿ ಹೇಳಿದ್ದಾರೆ ." ಅವರವರ ಮನೆ ಮುಂದೆ ಸ್ವಚ್ಹ ಮಾಡಿಕೊಂಡರೆ ಇಡಿ ವಿಶ್ವವೇ ಸ್ವಚ್ಹ ವಾಗುತ್ತದೆ ".
ಅಂದರೆ ಇದರ ಅರ್ಥ ನಮಗೆ ನಾವು ಪ್ರಾಮಾಣಿಕರಾಗಿ ಇರಬೇಕು ಎಂದರ್ಥ ವಲ್ಲವೇ !
ಆತ್ಮಿಯರೇ ಈ ಲೇಖನಕ್ಕೆ ಸಂಭದಪಟ್ಟ ನಿಮ್ಮ ಅಭಿಪ್ರಾಯ ,ಅನಿಸಿಕೆ ,ಟೀಕೆ ,ಟಿಪ್ಪಣಿ ನಮಗೆ ಬರೆದು ಕಳುಹಿಸಿ .
ಪ್ರೀತಿ ಹಾಗೂ ವಿಶ್ವಾಸಗಳೊಂದಿಗೆ
ನಿಮ್ಮೊಂದಿಗೆ ನಿಮ್ಮ ನೆಟ್ ನಾಗ
ಮಂಗಳವಾರ, ಆಗಸ್ಟ್ 2, 2011
ಮಂಗಳವಾರ, ಏಪ್ರಿಲ್ 26, 2011
ನೆಟ್ ನಾಗದಲ್ಲಿ ವಿಧ್ಯಾರ್ಥಿಗಾಗಿ ವಿಷಯದ ವಿಡಿಯೋ ಇಂದಿಗೆ ಮುಗಿಯುತ್ತಿದೆ.
ನೆಟ್ ನಾಗದಲ್ಲಿ ವಿಧ್ಯಾರ್ಥಿಗಾಗಿ ವಿಷಯದ ವಿಡಿಯೋ ಇಂದಿಗೆ ಮುಗಿಯುತ್ತಿದೆ.
ಇದು ಬಹಳ ದಿನದ ಆಸೆ . ನೆಟ್ ನಾಗದಲ್ಲಿ ಕನ್ನಡ ವಿಧ್ಯಾರ್ಥಿಗಳಿಗಾಗಿ ಹಾಗೂ ಯುವಕರಿಗಾಗಿ ಉಪಯುಕ್ತವಾಗುವ ಕನ್ನಡ ಲೇಖನಗಳನ್ನು ಹಾಗೂ ವಿಡಿಯೋ ಗಳನ್ನೂ ಕನ್ನಡದಲ್ಲಿ ತರಬೇಕು ಎಂಬ ಒಂದು ದೊಡ್ಡ ಆಸೆ ಇತ್ತು. ಈಗಾಗಲೇ ನಿಮ್ಮ ಎದುರಿಗೆ , ನಿಮ್ಮ ಬಿಡುವಿನ ವೇಳೆಯಲ್ಲಿ ನೋಡುವಷ್ಟು ಸುಲಭವಾಗಿ ಪ್ರಕಟಗೊಂಡಿದೆ. ನಿಮ್ಮ ಅನಿಸಿಕೆ, ಅಭಿಪ್ರಾಯ, ನಿಮ್ಮ ಸಲಹೆ ಸೂಚನೆಗಳೇನಾದರೂ ಇದ್ದರೆsunnaturalflash@gmail.com ಗೆ ಬರೆಯಿರಿ.
ಕೆಲವು ಸ್ನೇಹಿತರು you are network marketer ? ಎಂದು ನನ್ನನ್ನು ಕೇಳಿದ್ದಾರೆ. ವಿಷಯ ಇಷ್ಟೇ. ನೆಟ್ವರ್ಕ್ ಮಾರ್ ಕೆಟರ್ ಗೂ ವಿದ್ಯಾರ್ಥಿಗಾಗಿ ಲೇಖನಗಳಿಗೂ , ವಿಡಿಯೋಗಳಿಗೂ ಗೋಕುಲ ಅಷ್ಟಮಿಗೂ ಮುಸ್ತಪ ಸಾಹೇಬರಿಗೂ ಯಾವ ರೀತಿಯ ಒಂದಕ್ಕೊಂದು ಸಂಬಂದವಿಲ್ಲವೋ ಆ ರೀತಿ. ಆದರೆ ಒಬ್ಬ ನೆಟ್ ವರ್ಕ್ ಮಾರ್ ಕೆಟರ್ ತನ್ನನ್ನು ಬೆಳೆಸಿದ ಸಮಾಜಕ್ಕೆ ಸಹಾಯಕಾರಿ ಯಾಗುವ ಏನಾದರೊಂದು ಕೊಡುಗೆಯನ್ನು ಕೊಡಲೇ ಬೇಕೆಂಬ ಒಂದು ನಿಯಮ ಇದೆ. ಹಾಗಾಗಿಯೇ ಪ್ರಪಂಚದ ಯಾವುದೇ ವ್ಯವಹಾರಸ್ಥ ಒಂದು ಸಮಾಜದಿಂದ ಎಷ್ಟು ತೆಗೆದುಕೊಂಡಿದ್ದಾನೋ ಅಷ್ಟೇ ಪ್ರಮಾಣದಲ್ಲಿ , ಸ್ವಲ್ಪ ಜಾಸ್ತಿ ಆಗಬಹುದು ಅಥವಾ ಕಡಿಮೆ ಆಗಬಹುದು ಹಿಂದಿರುಗಿಸಿಯೇ ಹಿಂದಿರುಗಿಸುತ್ತಾನೆ.
ಒಂದು ಹಳೆಯ ಕನ್ನಡ ಗೀತೆ. ನಿಮ್ಮ ಹಣಖಾಸಿನ ಸಮಸ್ಯೆಗೆ ಸುಲಭ ಹಾಗೂ ಸರಳ ಪರಿಹಾರ ಒದಗಿಸುತ್ತದೆ ಸನ್ ನ್ಯಾಚುರಲ್ ಪ್ಲಾಸ್ ಹಾಗಾಗಿ ನಾವು ಕಳುಹಿಸುವ ಹಾಗೂ ಕಳುಹಿಸಿದ ಲಿಂಕ್ ತಿರಸ್ಕ್ರುತವಾಗಿ ನೋಡಬೇಡಿ. ಅದು ಬಲು ಕಷ್ಟಪಟ್ಟು ಬಡತನದಿಂದ ದುಡಿದು ಹೇಗೆ ಮೇಲೆ ಬಂದರು . ಶ್ರೀಮಂತರಾದರು ಎನ್ನುವ ಬಗ್ಗೆ , ಶ್ರೀಮಂತರಾದವರೇ ಹೇಳುವ ನೈಜ ಚಿತ್ರಣ. ಇದುವರೆವಿಗೂ ನನಗೆ ಗೊತ್ತಿದ್ದಂತೆ ಈ ರೀತಿ ವಿಚಿತ್ರವಾಗಿ ನೇರ ಮಾರುಕಟ್ಟೆಯನ್ನು ಕನ್ನಡಕ್ಕೆ ತಂದವರು ನನಗೆ ಯಾರೂ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ನನಗೆ ತಿಳಿಸಿ. ನೀವೂ ಇಲ್ಲಿಯ ಯಾವುದೇ ಇ-ಪುಸ್ತಕ ಖರೀಧಿಮಾಡಿದರೆ ನೀವು ದೊಡ್ಡ ವ್ಯಕ್ತಿ ಆಗುತ್ತೀರಿ ಎನ್ನುವ ಭರವಸೆ ನಾವು ಕೊಡುವುದಿಲ್ಲ. ನೀವು ಏನೂ ಇ ಪುಸ್ತಕ ತೆಗೆದುಕೊಂಡಿರುತ್ತೀರೋ ಅದನ್ನು ಜೀವನದಲ್ಲಿ ಮುಂದೆ ಬರುತ್ತೇನೆ ಎನ್ನುವವರಿಗೆ ತಲುಪಿಸುವಂತೆ ಮಾಡಿದರೆ ನಿಮ್ಮ ಕೆಲಸ ಸಾರ್ಥಕ .
ಪ್ರೀತಿ ಪೂರ್ವಕ ವಂದನೆಗಳು ನಿಮ್ಮ ಕಡೆಗೆ ನಮ್ಮ ಕಡೆಯಿಂದ ಹರಿದು ಹೋಗಲಿ
ಎ.ಟಿ.ನಾಗರಾಜ
ಸೋಮವಾರ, ಏಪ್ರಿಲ್ 25, 2011
ಓದಿಗಿಂತ ಅನುಭವ ದೊಡ್ಡದು !
ಓದಿಗಿಂತ ಅನುಭವ ದೊಡ್ಡದು !. ಇತ್ತೀಚಿಗೆ ನಾನು ಒಬ್ಬ ದೊಡ್ಡ ಉದ್ದಿಮೆ ದಾರರೋಬ್ಬರನ್ನು ಭೇಟಿ ಆದೆ. ಸುಮಾರು ಒಂದೂವರೆ ಸಾವಿರ ಕೆಲಸಗಾರರನ್ನು ಹೊಂದಿರುವ ದೊಡ್ಡ ಕಂಪನಿಯ ಯಜಮಾನ ಅವರು. ನಾವು ಪರಸ್ಪರ ಉಭಯ ಕುಶಲೋಪರಿಯನ್ನು ವಿಚಾರಿಸಿದ ಬಳಿಕ ಅವರ ಕಂಪನಿಯ ಬಗ್ಗೆ ಮಾತು ಪ್ರಾರಂಭಿಸಿದರು. ಅವರು ತಮ್ಮ ಬಡತನದಲ್ಲಿ ಸಾಮಾನ್ಯ ಒಬ್ಬ ಸೆಕ್ಯುರಿಟಿ ಗಾರ್ಡ್ ಆಗಿ ದಿನದಲ್ಲಿ ಹನ್ನೆರಡು ಗಂಟೆ, ಇಪ್ಪತ್ತು ನಾಲ್ಕು ಗಂಟೆ, ಮೂವತ್ತಾರು ಗಂಟೆ, ಒಮ್ಮೊಮ್ಮೆ ನಲವತ್ತೆಂಟು ಗಂಟೆ ಕೆಲಸ ಮಾಡಿದ್ದು. ನಿದ್ದೆ , ಸರಿಯಾದ ಆಹಾರ, ಸರಿಯಾದ ಭದ್ರತೆ ಇಲ್ಲದೆ ದುಡಿದದ್ದು. ಎಷ್ಟೋ ಬಾರಿ ಕೆಲಸ ಕಳೆದುಕೊಂಡಿದ್ದು. ಮನೆಯ ಹಿರಿಯ ಅಣ್ಣ ನ ವಂಚನೆಗೆ ಒಳಗಾಗಿದ್ದು . ಹೀಗೆ ಅವರ ಜೀವನದ ನೋವಿನ ಸುರುಳಿ ಬಿಚ್ಚುತ್ತಾ ಬಂದು ಅಂತಹ ಒಂದು ಬೃಹದ್ ಆಕಾರದ ಕಂಪನಿಯ ಉದಯಕ್ಕೆ ಕಾರಣ ವಾದದ್ದು ಹೇಳುತ್ತಾ ಬಂದು ಮುಗಿಸಿದರು.
ಅವರು ಒಂದನ್ನು ಒತ್ತಿ ಒತ್ತಿ ಹೇಳಿದರು ನಾನು ನವ ಉದ್ದಿಮೆದಾರರಿಗೆ ಹೇಳುವುದೇನೆಂದರೆ ನೀವು ನಿಮ್ಮ ಉದ್ದಿಮೆಗೆ ದುಡಿಯುವ ದುಡಿಮೆವನ್ತರನ್ನು ಕೆಲಸಕ್ಕೆ ಸೇರಿಸಿಕೊಳ್ಳಿ. ಒಂದು ಕೆಲಸ ಆಗಬೇಕು ಅಂತ ಹೇಳಿ. ಇದೆ ರೀತಿ ಮಾಡಿ ಎಂದು ಹೇಳಬೇಡಿ. ಅವನ ಅನುಭವದಿಂದ ಉತ್ತಮ ವಾಗಿಯೇ ಮಾಡುತ್ತಾನೆ. ಯಾವತ್ತು ಕೆಲಸಕ್ಕೆ ನಿಯಮಿಸಿಕೊಳ್ಳುವಾಗ ಪಕ್ಷ ಭೇದ ಮಾಡಬೇಡಿ. ಎಲ್ಲಾ ಕಾರ್ಮಿಕರಿಗೂ ಭತ್ಯೆ ಸರಿ ಸಮಾನವಾಗಿ ಕೊಡಿ. ಹೀಗೆ ಅವರ ಮಾತು ಸಾಗಿತ್ತು. ಒಬ್ಬ ವ್ಯಕ್ತಿ ಬೀಡಿ, ಸಿಗರೇಟು, ಮಧ್ಯಪಾನ, ದೂಮಪಾನ,ಕೆಟ್ಟ ಚಟ , ಸಿನಿಮಾ ಇವುಗಳಿಗೆ ಪ್ರತಿಯೊಬ್ಬ ವ್ಯಕ್ತಿ ತನ್ನ ದುಡಿಮೆಯ ಸ್ವಲ್ಪ ಹಣವನ್ನು ವಿನಿಯೋಗಿಸುತ್ತಾನೆ. ಹಾಗೆಯೇ ನಾನು ನನ್ನ ಹಣವನ್ನು ಉತ್ತಮ ಪುಸ್ತಕಗಳಿಗೆ ವಿನಿಯೋಗಿಸಿದೆ. ಆ ಪುಸ್ತಕಗಳು ನನ್ನನ್ನು ಪ್ರಗತಿಯ ಕಡೆ ಉದ್ದಿಮೆ ಕಡೆ , ಹಣ ಸಂಪಾದನೆಯ ಕಡೆ ಹೋಗುವಂತೆ ತೋರಿಸಿದವು. ಹಾಗೆಯೇ ನನ್ನ ಹಣ ಹಣ ಸಂಪಾದನೆಯ ಕಡೆ ಪ್ರಯೋಗಕ್ಕೆ ತೊಡಗಿದೆ. ಇಂದು ದೊಡ್ಡ ಉದ್ದಿಮೆದಾರ ನಾಗಿದ್ದೇನೆ. ನನ್ನ ಜತೆಗೆ ಕೆಲಸ ಮಾಡುತ್ತಿದ್ದ ಹಲವಾರು ಜನ ಇಂದಿಗೂ ಅಂದು ಹೇಗೆ ಇದ್ದರೋ ಇಂದು ಹಾಗೆಯೇ ಇದ್ದಾರೆ. ಎಂದು ತಮ್ಮ ಮಾತು ಮುಗಿಸಿದರು. ಅಂದರೆ ಅವರ ಪ್ರಕಾರ ನಾವು ಮಾಡುವ ಕೆಲಸದ ಜತೆಯಲ್ಲಿಯೇ ನಮ್ಮ ವಯಕ್ತಿಕ ದುಡಿಮೆಗೆ ಹಣವನ್ನು ಹೂಡಿಕೆಮಾಡಬೇಕು ಎಂದು ಅಲ್ಲವೇ.?
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಭಾನುವಾರ, ಏಪ್ರಿಲ್ 24, 2011
ಸಾಯಿ ಬಾಬಾ ರವರಿಗೊಂದು ಶ್ರದ್ದಾಂಜಲಿ
ಸಾಯಿ ಬಾಬಾ ರವರಿಗೊಂದು ಶ್ರದ್ದಾಂಜಲಿ . ಒಬ್ಬ ಪವಾಡ ಪುರುಷ , ಆಧ್ಯಾತ್ಮಿಕ ವ್ಯಕ್ತಿ, ಬಡವರ ಬಂದು ,ಹಲವರ ಜೀವನಕ್ಕೆ ದಾರಿದೀಪ ವಾಗಿದ್ದ ಸಾಯಿ ಬಾಬಾ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ಒಂದು ದಿಶೆಯಲ್ಲಿ ಸಾವಿರಾರು -ಲಕ್ಷಾಂತರ ಜನ ಅನುಯಾಯಿಗಳು , ಭಕ್ತರು, ಶೋಕಸಾಗರ ದಲ್ಲಿ ಮುಳುಗಿದ್ದಾರೆ. ಈ ಒಂದು ಹಿನ್ನೆಯಲ್ಲಿ ಸನ್ ನ್ಯಾಚುರಲ್ ಪ್ಲಾಸ್ ಭಗವಂತನಲ್ಲಿ ಶೋಕ ಸಾಗರದಲ್ಲಿ ಮುಳುಗಿರುವ ಭಕ್ತರ ಮನಸ್ಸಿಗೆ ಆ ಶೋಕವನ್ನು ನಿವಾರಿಸುವ ಶಕ್ತಿಯನ್ನು ಕೊಡು ಎಂದು ಪ್ರಾರ್ಥಿಸುತ್ತದೆ.
ಜತೆಗೆ ಸತ್ಯ ಸಾಯಿಬಾಬಾ ರವರ ಒಂದು ಅಪೂರ್ವ ಭೋಧನೆ ಇಲ್ಲಿದೆ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಶನಿವಾರ, ಏಪ್ರಿಲ್ 23, 2011
ದೇವರನ್ನು ನೋಡಿ ಕಲಿಯಬೇಕು !
ದೇವರನ್ನು ನೋಡಿ ಕಲಿಯಬೇಕು ! ಹೌದು ಸಾರ್ ದೇವರನ್ನು ನೋಡಿ ಕಲಿಯಬೇಕು. ಈ ಭೂಮಂಡಲ ಆತನದು. ಆತ ನಮಗೆಲ್ಲರಿಗೂ ಉಪಯೋಗಿಸಲು ಉಚಿತವಾಗಿ ಕೊಟ್ಟಿದ್ದಾನೆ. ನಾವು ಆ ಭೂಮಿ ನನ್ನದು , ನನಗೆ ಮಾತ್ರ ಒಡೆತನ ಎಂದೆಲ್ಲ ಏನೇನೋ ಮಾಡುತ್ತೇವೆ. ಒಂದು ದಿನ ಸಾವು ಎನ್ನುವುದು ಬಂದು ಆವಾರಸಿ ಎಲ್ಲವನ್ನು ಬಿಟ್ಟು ಹೋಗುತ್ತೇವೆ. ಮತ್ತೆ ಆ ಭೂಮಿ ಬೇರೆಯವರು ನಾವು ಮಾಡಿದ ರೀತಿಯೇ ಮಾಡಲು ಶುರುಮಾಡುತ್ತಾರೆ. ಅವರಿಗೂ ಅದೇ ರೀತಿ ಸಾವು . ಆದರೆ ನಿಜವಾದ ಭೂಮಿ ದೇವರದ್ದು ದೇವರಲ್ಲಿ ಹಾಗೆಯೇ ಇರುತ್ತದೆ. ನಾವು ಬೇಡವಾದದ್ದು ಮಾಡಿ ಬೇಡವಾಗಿಯೇ ಹೋಗುತ್ತೇವೆ. ಇದು ಒಂದು ರೀತಿಯ ಸೋಜಿಗ !
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೆರಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
ಶುಕ್ರವಾರ, ಏಪ್ರಿಲ್ 22, 2011
ಮಳೆಯ ಬಗ್ಗೆ ಒಂದೆರಡು ಮಾತು
ಮಳೆಯ ಬಗ್ಗೆ ಒಂದೆರಡು ಮಾತು
ನನ್ನ ದೂರದ ಸ್ನೇಹಿತ ಒಬ್ಬ ಮಳೆಯ ಬಗ್ಗೆ ಒಂದೆರಡು ಮಾತು ನಿನ್ನ ನೆಟ್ ನಾಗದಲ್ಲಿ ಬರೆ ಎಂದು ಇ-ಮೇಲ್ ಕಳುಹಿಸಿದ್ದಾನೆ. ನನಗೆ ಅರೆ ಮಲೆನಾಡಿನಲ್ಲಿ ಬೆಳೆದವನಿಗೆ ಈ ಮಳೆ ಹೊಸದೇನಲ್ಲ!. ಬೆಂಗಳೂರಿನಂಥ ಬಾರೀ ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ಹಾಗೆಯೇ ಅರ್ಜಿ , ಗ್ರಾಹಕರ ಸೇವಾ ಕೇಂದ್ರ, ಕಂಪ್ಲೇಂಟ್ ಇವೆಲ್ಲ ತಲೆ ನೋವಿನವು , ಕಾರ್ಯಕ್ಕೆ ಬಾರದವು ಎಂದು ತಿಳಿದ ಸಾರ್ವಜನಿಕರು ಜಲಮಂಡಳಿಯ ಅಧಿಕಾರಿಗಳನ್ನು ನೇರ ನೇರ ತರಾಟೆಗೆ ತೆಗೆದುಕೊಳ್ಳುವುದು . ಮಾಧ್ಯಮ ದವರ ಎದುರಿಗೆ ಯೋಗ್ಯ ಹಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುವಂತೆ ಮಾಡುವುದು ಮಾಡುತ್ತಿದ್ದಾರೆ. ಒಂದೆರಡು ಜನರಿಗೆ ಒಂದೆರಡು ಕಡೆ ಒದೆಗಳು ಬಿದ್ದುದ್ದರಿಂದ , ಅಧಿಕಾರಿಗಳೆಲ್ಲರೂ ದೇವರಲ್ಲಿ ಮೊರೆ ಹೋಗಿರಬೇಕು .:" ಓ ದೇವರೇ , ನಮಗೆ ಇಡೀ ಬೆಂಗಳೂರು ನಗರಕ್ಕೆ ಎಲ್ಲ ಏರಿಯಾಕ್ಕೆ ನೀರು ಸರಬರಾಜು ಮಾಡುವಷ್ಟು ನೀರು ದೊರಕಿಸು. ಇಲ್ಲವಾದರೆ ನಮಗೂ ಒದೆ ಗಳನ್ನೂ ಸಾರ್ವಜನಿಕರು ಹೇಳದೆ ಕೇಳದೆ ತಿನ್ನಲಾರದಷ್ಟು ಕೊಡುತ್ತಾರೆ . ಹಾಗಾಗಿ ದೇವರು ಇವರ ಪ್ರಾರ್ಥನೆಯನ್ನು ಈಡೇರಿಸಿ ಕೊಟ್ಟಿರಬೇಕು.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
ಗುರುವಾರ, ಏಪ್ರಿಲ್ 21, 2011
ಯಜಮಾನನ ಹಟಮಾರಿತನಕ್ಕೆ ಕೆಲಸಗಾರರು ಕೊಟ್ಟ ಉತ್ತಮ ಮರೆಯಲಾರದ ಶಿಕ್ಷೆ !
ಯಜಮಾನನ ಹಟಮಾರಿತನಕ್ಕೆ ಕೆಲಸಗಾರರು ಕೊಟ್ಟ ಉತ್ತಮ ಮರೆಯಲಾರದ ಶಿಕ್ಷೆ !
ಇದು ನಡೆದ ಘಟನೆ . ಇತ್ತೀಚಿಗೆ ಒಂದು ಪ್ರಸಿದ್ದ ಕಂಪನಿಯ ಬಟ್ಟೆ ಅಂಗಡಿಗೆ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕೆಲಸಗಾರನನ್ನು ಮ್ಯಾನೇಜರ್ ಅನ್ನಾಗಿ ನೇಮಕ ಮಾಡಿದ ಆ ಅಂಗಡಿಯ ಮಾಲೀಕ.. ಆ ಹೊಸ ಮ್ಯಾನೇಜರ್ ನಿಗೆ ಸಂಭಳದ ಜತೆಗೆ ಸ್ವಲ್ಪ ಹಣವನ್ನು ಕೊಡುತ್ತಾ ಬಂದ. ಆ ಹೊಸ ಮ್ಯಾನೇಜರ್ ಅಂಗಡಿಯಲ್ಲಿ ಏನೇನನ್ನೋ ಬದಲಾಯಿಸಿದ. ಅದು ಬದಲಾಯಿಸಿ ಇದು ಬದಲಾಯಿಸಿ. ಕೆಲಸ ಗಾರರಿಗೆ ಕೊಡುವ ಕಮಿಷನ್ ಗೂ ಕಡಿತ ಗೊಳಿಸಿದ. ಆ ಅಂಗಡಿಯ ಕೆಲಸಗಾರರೆಲ್ಲರೂ ತಮ್ಮಲ್ಲಿ ವಿಚಾರ ವಿನಿಮಯ ನಡೆಸಿ. ಅವರು ತಿಂಗಳಲ್ಲಿ ಎಷ್ಟು ಹಣವನ್ನು ಕಮಿಷನ್ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದರೋ ಅದರ ಎರಡರಷ್ಟು ಬಟ್ಟೆಯನ್ನು ಗ್ರಾಹಕರಿಗೆ ಮಾರಾಟ ಮಾಡಿ ಗಳಿಸಲು ಪ್ರಾರಂಭಿಸಿದರು. ಇದು ಒಂದು ವರ್ಷದ ವರೆವಿಗೆ ನಡೆಯಿತು. ಇವರು ಯಜಮಾನನ ಹತ್ತಿರ ಕಮೀಶನ್ ಬಗ್ಗೆ ಕೇಳಲೇ ಇಲ್ಲ. ಎಪ್ರಿಲ್ ತಿಂಗಳಲ್ಲಿ ಬೋನಸ್ ಕೊಡುವ ಮುನ್ನ ತನ್ನ ಅಂಗಡಿಯ ವ್ಯವಹಾರವನ್ನು ಪರೀಕ್ಷಿಸಲು ಆಡಿಟ್ ವಿಭಾಗಕ್ಕೆ ಒಪ್ಪಿಸಿದ. ಆಗ ಸುಮಾರು ಒಂದೂವರೆ ಸಾವಿರ ಮೀಟರ್ ಬಟ್ಟೆ ಅಂಗಡಿಯಿಂದ ಕಣ್ಮರೆ ಆಗಿತ್ತು. ನಾನು ಬೋನಸ್ ಕೊಡುವುದಿಲ್ಲ ಎಂದ. ನಿಮ್ಮ ಸಂಭಳದಲ್ಲಿ ಹಣ ಕಟ್ ಮಾಡಿ ನನ್ನ ಹಣ ಗಿಟ್ಟಿಸಿ ಕೊಳ್ಳುತ್ತೇನೆ ಎಂದ. ಯಾವುದು ಕಾರ್ಯರೂಪಕ್ಕೆ ಬರಲೇ ಇಲ್ಲ. ಕೆಲಸಗಾರರು ಜಗ್ಗಲೇ ಇಲ್ಲ. ಏನಾದರೂ ಮಾಡಿಕೊಳ್ಳಲಿ ಅವರ ಬೋನಸ್ ಅವರಿಗೆ ಕೊಡುತ್ತೇನೆ ಎಂದು ಒಂದು ದಿನ ಬೋನಸ್ ಕೊಟ್ಟೆ ಬಿಟ್ಟ ಯಜಮಾನ. ಆದರೂ ಇವತ್ತಿಗೂ ಕೂಡ ಕೆಲಸಗಾರರು ತಮಗೆ ಬರಬೇಕಾದ ಕಮೀಶನ್ ಗಾಗಿ ಬಟ್ಟೆ ಮಾರಿಕೊಂಡು ಎರಡರಷ್ಟು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ಶಿಕ್ಷೆ ಕೊಡದೆ ಯಜಮಾನನ ಹಟಮಾರಿತನಕ್ಕೆ ಯಾವ ರೀತಿ ಶಿಕ್ಷೆ ಕೊಟ್ಟಾರು ಕೆಲಸಗಾರರು.!
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
ನಿಮ್ಮ ಕೆಲವು ಸಮಸ್ಯೆಗಳಿಗೆ ಪರಿಹಾರ ಕೆಳಗಿನ ಲಿಂಕ್ ನಲ್ಲಿ
ಬುಧವಾರ, ಏಪ್ರಿಲ್ 20, 2011
ಪೀಳ್-ಡ್-ಇಂಗ್ ಮಾಡುವವರು ಯಾರು ?
ತಾರೀಖು ಇಪ್ಪತ್ತನೆ ಎಪ್ರಿಲ್ ಎರಡುಸಾವಿರದ ಹನ್ನೊಂದನೇ ಇಸವಿಯ ನಿನ್ನೆ ಡಿ ಎನ್ ಎ ಪತ್ರಿಕೆಯ ಪುಟ ಸಂಖ್ಯೆ ಐದರಲ್ಲಿ NO BOUNCER PLEASE ಎಂಬ ತಲೆಬರಹ ದೊಂದಿಗೆ ಯಡ್ಡಿಯೂರಪ್ಪ ನವರು ಬ್ಯಾಟಿಂಗ್ ಮಾಡುತ್ತಿದ್ದು , ಶೋಭಾ ಕರಂಡಿ- ಅಜೆ ಬೌಲಿಂಗ್ ಮಾಡುವ ಚಿತ್ರ ಮೂಡಿಬಂದಿತ್ತು. ತುಂಬಾ ಚೆನ್ನಾಗಿತ್ತು. ಆದರೆ ಇಲ್ಲಿ ಒಂದು ಯೋಚಿಸಬೇಕಾದ ವಿಷಯ ಇದೆ. ಅದೇನೆಂದರೆ ಯಡ್ಡಿಯೂರಪ್ಪ ಬ್ಯಾಟಿಂಗ್ ಮಾಡುವುದರಲ್ಲಿ ಎತ್ತಿದ ಕೈ ಎನ್ನುವುದು ಇಡೀ ಕರ್ನಾಟಕದ ಜನತೆಗೆ ಬಿಡಿ ಇಡೀ ವಿಶ್ವದ ಜನತೆಗೂ ಗೊತ್ತಿದ್ದಿದ್ದೆ . ಹಾಗೆಯೇ ಶೋಭಾ ಕರಂಡಿ ಆಜೆ ಯೂ ಕೂಡಾ ಯಡ್ಡಿಯೂರಪ್ಪ ಬ್ಯಾಟಿಂಗ್ ಮಾಡಲು ನಿಂತರೆ ಯಾವ ರೀತಿ ಬ್ಹೊವ್ಲಿಂಗ್ ಮಾಡಬೇಕು ಎನ್ನುವುದು ಚೆನ್ನಾಗಿ ಗೊತ್ತು ಅವರಿಗೆ. ಇವರ ಬ್ಯಾಂಟಿಂಗ್ ಹಾಗೂ ಬ್ಹೊವ್ಲಿಂಗ್ ಕ್ರಿಕೆಟ್ ಆಟಕ್ಕೆ ಪೀಳ್-ಡ್-ಇಂಗ್ ಮಾಡುವವರು ಯಾರು ಎನ್ನುವುದು ಚರ್ಚಿಸ ಬೇಕಾದ ಅಂಶ.
ಇಲ್ಲಿ ಅಧಿಕಾರಿಗಳು ಪೀಳ್ -ಡ್ -ಇಂಗ್ ಮಾಡುತ್ತಾರೋ ಇಲ್ಲವೇ ಸಾರ್ವಜನಿಕರೂ ಪೀಳ್ -ಡ್ -ಇಂಗ್ ಮಾಡುತ್ತಾರೋ , ಇಲ್ಲವೇ ಯಡಿಯೂರಪ್ಪ ನವರ ಮಕ್ಕಳು ಪೀಳ್ -ಡ್ -ಇಂಗ್ ಮಾಡುತ್ತಾರೋ ತಿಳಿಯುತ್ತಿಲ್ಲ. ಈಗಾಗಲೇ ನಮ್ಮ ರಾಜಕೀಯದ ಕ್ರೆಕೆಟ್ ಆಟ ನೋಡಿ ಜನತೆಗೆ ಬೇಸರವಾಗಿದೆ.
ಇದೆ ರೀತಿ ಐವತ್ತು ಎಪ್ಪತ್ತರ ವಯಸ್ಸಿನ ವ್ಯಕ್ತಿಗಳು ಕ್ರಿಕೆಟ್ ಆಡುತ್ತಲೇ ಇದ್ದರೆ ಈಗಾಗಲೇ ಬಾಯಿ ನೀರು ಬಿಡುತ್ತಿರುವ ಮೂವತ್ತರಿಂದ ಐವತ್ತು ವಯಸ್ಸಿನ ಉತ್ಸಾಹಿ ಯುವಕರಿಗೆ ಒಂದು ಅವಕಾಸ ಸಿಗುವುದೆಂತು? ಕಾದು ನೋಡಬೇಕಾಗಿದೆ..
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಬೇತಿ ಗಾರ .
ನಿಮಗಾಗಿ ವಿಡಿಯೋ ಗಳು
ಮಂಗಳವಾರ, ಏಪ್ರಿಲ್ 19, 2011
"ನಿನ್ನ ಶ್ರೀಮಂತಿಕೆ ನಿನ್ನ ಮನೆಯೊಳಗೇ ಮಾತ್ರ "
"ನಿನ್ನ ಶ್ರೀಮಂತಿಕೆ ನಿನ್ನ ಮನೆಯೊಳಗೇ ಮಾತ್ರ " ಹೌದು !. ಯಾವುದೇ ವ್ಯಕ್ತಿಯ ಶ್ರೀಮಂತಿಕೆ ಆತನ ಮನೆಯೊಳಗೇ ಮಾತ್ರ , ಹೊರಗಡೆ ಅದು ಯಾವುದೇ ಪ್ರಯೋಜನಕ್ಕೆ ಬರದು. ಒಬ್ಬ ಕೈ ಕಾಲು ಇಲ್ಲದ ಅಂಗವಿಕಲ ಭಿಕ್ಷುಕ ಪ್ರಪಂಚದ ಅತೀ ದೊಡ್ಡ ಶ್ರೀಮಂತ ಎಂದು ನಾನು ಹೇಳುತ್ತೇನೆ. ಯಾಕೆಂದರೆ ಆತ ಯಾರಿಗೂ ಭಯಪಡುವುದಿಲ್ಲ. . ತನ್ನದೆನ್ನುವ ಮನೆಯೂ ಇಲ್ಲ. ತನ್ನದೆನ್ನುವ ಏನೂ ಇಲ್ಲ. ಪೋಲಿಸ ರವರಿಂದ ಹಿಡಿದು ಕಳ್ಳರು, ಮಳ್ಳರು , ಹುಡುಗರು, ದೊಡ್ಡವರು ಎಲ್ಲರೂ ಆತನ ಸ್ನೇಹಿತರು . ಆದರೆ ಕೆಲವು ದುರಂಕಾರಿಗಳು ಈ ಅಪಾರ್ಟ್ ಮೆಂಟ್ ಗಳಲ್ಲಿ ಇರುತ್ತಾರೆ ನೋಡಿ ಅವರಿಗಿಂತಲೂ ಆತ ದೊಡ್ಡ ಶ್ರೀಮಂತ ಹಾಗೂ ಸಂತುಷ್ಟ. ಊಟ ತಂದು ಕೊಟ್ಟ ಹುಡುಗನಿಗೆ ತಾನು ಭಿಕ್ಷೆ ಬೇಡಿದ ಹಣದಲ್ಲಿ ಟಿಪ್ಸ್ ಕೊಡುತ್ತಾನೆ. ಆದರೆ ಈ ಅಪಾರ್ಟ್ ಮೆಂಟ್ ನಲ್ಲಿರುವ ದುರಂಕಾರಿ ಯಾವುದೋ ಕಂಪನಿಯ ಕೆಲಸಗಾರ ಬಟ್ಟೆ ಡ್ರೈ ಕ್ಲೀನಿಂಗ್ ಮಾಡಿದ್ದು ಕೊಡಲು ಹೋದರೆ ಜಸ್ಟ್ ಥ್ಯಾಂಕ್ಸ್ ಹೇಳುವುದಿಲ್ಲ. ದೂರದಿಂದ ಬಂದಿದ್ದೀರಿ ನೀರು ಕುಡಿಯಿರಿ ಎಂದು ಕೇಳುವುದಿಲ್ಲ. ಹೀಗೆ ಹೇಳುತ್ತಾ ಹೋದರೆ ಪುಟಗಳು ಸಾಕಾಗುವುದಿಲ್ಲ. ಏನೇ ಇರಲಿ ನೀವು ಯಾವುದೇ ಇಂತಹ ದುರಂಕಾರಿಗಳ ಬಗ್ಗೆ ಬೇಸರ ಪಟ್ಟಿದ್ದರೆ ನಿಮ್ಮ ಒಂದೆರಡು ಮಾತು ಬರೆದು ಕಳುಹಿಸಿ . ಸ್ನೇಹಿತರೊಡನೆ ಹಂಚಿ ಕೊಳ್ಳೋಣ.
ಒಂದು ಉತ್ತಮ ಅವಕಾಸದ ಬಗ್ಗೆ ಕ್ಲಿಕ್ ಮಾಡಿ
ನಿಮ್ಮ ಕಾಮೆಂಟ್ ಇಲ್ಲಿ ಇರಲಿ sunnaturalflash@gmail.comನಿಮಗೆಂದೇ ಬಿಸಿ ಬಿಸಿ ವಿಡಿಯೋಗಳು
ಸೋಮವಾರ, ಏಪ್ರಿಲ್ 18, 2011
ಸುಳ್ಳು ಗೆಲ್ಲಿಸುತ್ತದೆಯೇ ?
ಸುಳ್ಳು ಗೆಲ್ಲಿಸುತ್ತದೆಯೇ ? ಇದು ಒಂದು ರೀತಿಯಲ್ಲಿ ಹೌದು ಗೆಲ್ಲಿಸುತ್ತದೆ ಎನ್ನುವವರು ಉಂಟು . ಇನ್ನು ಕೆಲವರು ಸತ್ಯ ಗೆಲ್ಲಿಸುತ್ತದೆ ಎನ್ನುತ್ತಾರೆ. ಅಂದರೆ ಸತ್ಯ ಎನ್ನುವುದು ಯಾವಾಗಲು ಗಟ್ಟಿಯೇ . ಶಾಸ್ವತವಾಗಿಯೇ !. ಇತ್ತೀಚಿಗೆ ನನ್ನ ಮಿತ್ರ ಒಬ್ಬರು ಒಂದು ಡ್ರೈ ಕ್ಲೀನಿಂಗ್ ಅಂಗಡಿಯಲ್ಲಿ ತಮ್ಮ ಸೂಟ್ ಗಳನ್ನೂ ಡ್ರೈ ಕ್ಲೀನಿಂಗ್ ಮಾಡಲು ಕೊಟ್ಟಿದ್ದರು. ನಿಗದಿತ ದಿನಕ್ಕಿಂತ ಎರಡು ದಿನ ತಡವಾಗಿಯೇ ಹೋದರು. ಆದರೆ ಆ ಅಂಗಡಿಯವರು ಇನ್ನು ಆಗಿಲ್ಲ ಎರಡು ದಿನ ಬಿಟ್ಟು ಬನ್ನಿ ಸಾರ್ ಅಂದರು . ಇವರು ಎರಡು ದಿನ ಬಿಟ್ಟು ಹೋದರು. ಸಾರಿ ಸಾರ್ ಪ್ಯಾಂಟ್ ಸರಿಯಾಗಿ ಆಗಿದೆ. ಸೂಟ್ ಸರಿಯಾಗಿ ಬಂದಿಲ್ಲ ಹಾಗಾಗಿ ಮತ್ತೆ ವಾಪಾಸು ಕಳಿಸಿದ್ದೇವೆ ನಾಳೆ ಬರುತ್ತದೆ ಎಂದರು. ಪರವಾಗಿಲ್ಲ ನಿಮ್ಮ ಅಂಗಡಿ ವಿಸಿಟಿಂಗ್ ಕಾರ್ಡ್ ಕೊಡಿ ನಾನೇ ನಾಳೆ ಫೋನ್ ಮಾಡುತ್ತೇನೆ ಎಂದರು. ಇಲ್ಲ ಸಾರ್ ನಮ್ಮ ಅಂಗಡಿಯಲ್ಲಿ ಎಲ್ಲ ವಿಸಿಟಿಂಗ್ ಕಾರ್ಡ್ ಖಾಲಿಯಾಗಿದೆ. ಹಾಗಾದರೆ ನಿಮ್ಮ ಅಂಗಡಿಯ ಟೆಲಿಪೋನ್ ನಂಬರ್ ಕೊಡಿ. ಸಾರಿ ಸಾರ್ ಟೆಲಿಫೋನ್ ಡೆಡ್ ಆಗಿದೆ. ವಿಸಿಟಿಂಗ್ ಕಾರ್ಡು ಇಲ್ಲ . ಟೆಲಿಫೋನ್ ನಂಬರೂ ಇಲ್ಲ . ಇದೆಲ್ಲ ಹೇಳಿದ್ದು ಕೇವಲ ಕೆಲಸಕ್ಕೆ ನೇಮಿಸಿಕೊಂಡ "ಮಿರಾಕಲ್ ಟೆಕ್ " ಡಿಸ್ ಪೆನ್ಸರಿ ರೋಡ ನ ಒಬ್ಬ ಸಾಮಾನ್ಯ ಕೆಲಸದವಳು. ನಂತರ ನಮ್ಮ ಸ್ನೇಹಿತ ಮಿರಾಕಲ್ ಟೆಕ್ ನ ಮಾಲಿಕರ ದೂರವಾಣಿ ಸಂಖ್ಯೆ ಪಡೆದುಕೊಂಡು ಅವರ ಎದುರಿನಲ್ಲಿಯೇ ತಮ್ಮ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದಾಗ ಆ ಹುಡುಗಿಯ ಮುಖದ ಮೇಲೆ ಕಣ್ಣೀರು ಬೀಳುತ್ತಿತ್ತು. ಅಂದರೆ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಯಾವಾಗಲೂ ನಾವೂ ಕೆಲಸಕ್ಕೆ ನೇಮಿಸಿದ ವ್ಯಕ್ತಿಯ ಮೇಲೆ ನಂಬಿಕೆ ಅಥವಾ ಭರವಸೆ ಇಡಬಾರದು.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿಗಾರ ಮತ್ತು ನೇರ ಮಾರುಕಟ್ಟೆ ಪ್ರತಿನಿಧಿ.
ಜೀವನದಲ್ಲಿ ತಾಳ್ಮೆ ಇರಲಿ. ಶಾಂತಿ ತಂದು ಕೊಳ್ಳಿ. ಈ ಹಾಡನ್ನು ಕಣ್ಣು ಮುಚ್ಚಿಕೊಂಡು ಹಲವಾರು ಬಾರಿ ಕೇಳಿ . ಯೋಚಿಸಿ. ಜೀವನ ದೊಡ್ಡದು ಹಾಗಾಗಿ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ , ಸಾಯಲು ಪ್ರಯತ್ನಿಸುವುದು ಮೂರ್ಖತನದ ಕೆಲಸ.
ಭಾನುವಾರ, ಏಪ್ರಿಲ್ 17, 2011
ಊಟಕ್ಕೂ ನೆಂಟಸ್ತಿಗೆ ಗೂ ಸಂಬಂಧ ವಿದೆ ಏನ್ರಿ !
"ಊಟಕ್ಕೂ ನೆಂಟಸ್ತಿಗೆ ಗೂ ಸಂಬಂಧ ವಿದೆ ಏನ್ರಿ !" ಈ ಶೀರ್ಷಿಕೆ ಯಡಿ ಒಂದು ಲೇಖನ ಬರೆಯಬೇಕಾದದ್ದು ಅನ್ನಿವಾರ್ಯ ಅನಿಸಿತು ಕಾರಣ ವಿಷ್ಟೇ ಇದು ಬರೆದಿದ್ದದ್ದು ಅಕ್ಷರಸ್ಥ ಅನಕ್ಷರಸ್ಥರಿಗೋ , ಅನಕ್ಷರಸ್ಥ ಅಕ್ಷರಸ್ಥರಿಗೋ ನೀವೇ ಯೋಚಿಸಿ. ಎಷ್ಟೋ ಸಲ ಗಂಡಿನ ಕಡೆಯವರು ಹೆಣ್ಣು ನೋಡಲು ಹೆಣ್ಣಿನ ಮನೆಗೆ ಹೋಗುತ್ತಾರೆ. ಅಲ್ಲಿ ಪಾಪ ಹೆಣ್ಣಿನ ಕಡೆಯವರು ತಮ್ಮ ಸಕ್ತಾನುಸಾರ ಸಿಹಿ ತಿಂಡಿ ವ್ಯವಸ್ಥೆ ಅಥವಾ ಹಣ್ಣು ನೀಡುವ ವ್ಯವಸ್ಥೆ , ಅಥವಾ ಟೀ-ಕಾಪಿ ಯಾ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಹೆಣ್ಣು ನೋಡಲು ಹೋದವರಿಗೆ ಅದನ್ನು ತಿನ್ನುವಷ್ಟು ಸಮಯವಿಲ್ಲ. ನಮಗೆ ವೇಳೆ ಆಗುತ್ತದೆ. ನಾವು ಹೋಗುತ್ತೇವೆ. ಇಲ್ಲ ನಾವು ಈಗಷ್ಟೇ ಬರುವವರು ಅಲ್ಲಿ ಹೋಟೆಲ್ ನಲ್ಲಿ ತಿಂಡಿ ಮುಗಿಸಿಕೊಂಡು ಬಂದಿದ್ದೇವೆ ಎಂದು ಹೆಣ್ಣಿನ ಮನೆಯವರು ಕೊಟ್ಟ ಆತಿಥ್ಯ ಸ್ವೀಕರಿಸದೆ ಹೋಗುತ್ತಾರೆ. ಹೆಣ್ಣಿನ ಮನೆಯವರು ಇಷ್ಟೆಲ್ಲಾ ಖರ್ಚು ಮಾಡಿದ್ದು ತಾವು ತಿನ್ನಲೆಂದೇ ?. ಅಲ್ಲ ಅತಿಥಿಗಳಿಗಾಗಿ ! . ಹಾಗಾಗಿ ಮುಟ್ಟಾಳ ಗಂಡಿನ ಕಡೆಯವರು ತಮ್ಮ ಮುಟ್ಟಾಳ ತನವನ್ನು ತೋರಿಸಿಕೊಳ್ಳುವ ಬದಲು ಹೆಣ್ಣು ಇಷ್ಟವಾಗಲಿ ಇಲ್ಲದಿರಲಿ ಉಭಯ ಕುಸಲೋಪರಿ ವಿಚಾರಿಸಿ ಆತೀಥ್ಯ ಸ್ವೀಕರಿಸಿ ಒಂದು ವೇಳೆ ಯಾವುದಾದರು ಹುಡುಗ ಅವರಿಗೆ ಪರಿಚಯ ಇದ್ದರೆ ಇಂತಲ್ಲಿ ಒಬ್ಬ ಹುಡುಗ ಇದ್ದಾನೆ ನೋಡಿ ಎಂದು ಹೇಳಿ ಒಂದು ಸಂಭಂದ ಅಥವಾ ಸ್ನೇಹ ಕುದುರಿಸಿ ಬರಬಹುದಲ್ಲ !. ಇದರ ಬಗ್ಗೆ ನೀವೆನ್ನುತ್ತೀರಿ.
ನಿಮಗಾಗಿ ಒಂದು ನೇರ ಮಾರುಕಟ್ಟೆ ವಿಡಿಯೋ
ನಿಮ್ಮ ಅನಿಸಿಕೆ ಅಭಿಪ್ರಾಯಗಳು ಬಂದು ನಮಗೆ ಸೇರುವಲ್ಲಿ sunnaturalflash@gmail.com
ವಿಧ್ಯಾರ್ಥಿಗಾಗಿ ಮುಂದು ವರಿದ ಭಾಗ ವೀಕ್ಷಿಸಿ .
ಚೌ ಚೌ ಬಾತ್ !
ವಂದನೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
ಶನಿವಾರ, ಏಪ್ರಿಲ್ 16, 2011
ಮರೆವಿನ ಹಿಂದೆ ಕಾರಣಗಳು ವಿಡಿಯೋ ದಲ್ಲಿ ವೀಕ್ಷಿಸಿ.
ಮರೆವಿನ ಹಿಂದೆ ಕಾರಣಗಳು ವಿಡಿಯೋ ದಲ್ಲಿ ವೀಕ್ಷಿಸಿ. "ರಾಷ್ಟ್ರಬಂದು ರಾಜೀವ ದೀಕ್ಷಿತರ ಭಾಷಣಗಳ ಆಯ್ದ ಭಾಗಗಳು "ತಪ್ಪದೆ ಓದಿ . ತುಂಬಾ ಆಸಕ್ತಿ ದಾಯಕ ವಿಷಯ ಅಲ್ಲಿದೆ.
ನಿಮಗಾಗಿ ನೇರ ಮಾರುಕಟ್ಟೆ ಯಲ್ಲಿ ಒಂದು ಅವಕಾಸಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕ್ ಮಾಡಿ. ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಹಂಚಿಕೊಳ್ಳಲು ಅವಕಾಸ ಇದೆ. http://sunnaturalflash.freeppcleads.com/
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿಗಾರ ಮತ್ತು ನೇರ ಮಾರುಕಟ್ಟೆ ಪ್ರತಿನಿಧಿ
ಶುಕ್ರವಾರ, ಏಪ್ರಿಲ್ 15, 2011
ಸಮಯದ ಕುರಿತು ಇನ್ನೂ ಕೆಲವು ಅಂಶಗಳು
ಸಮಯದ ಕುರಿತು ಇನ್ನೂ ಕೆಲವು ಅಂಶಗಳು ಇದರಲ್ಲಿ ಯಾರೂ ತಮ್ಮ ಸಮಯವನ್ನು ಎಲ್ಲಿ ವ್ಯರ್ಥ ಹಾಳು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಹೇಳಲಾಗಿದೆ. ಜತೆಗೆ ಉಪಯುಕ್ತ ಮಾಹಿತಿ ಇದೆ ಈ ಕೆಳಗಿನ ವಿಡಿಯೋ ದಲ್ಲಿ.
ಯಶಸ್ಸಿನ ಹಿಂದೆ ಈ ವಿಡಿಯೋ ವೀಕ್ಷಿಸಿ http://sunnaturalflash.blackbeltrecruiting.com/
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ನೇರ ಮಾರುಕಟ್ಟೆ ಪ್ರತಿನಿಧಿ
ಗುರುವಾರ, ಏಪ್ರಿಲ್ 14, 2011
ನಿಮ್ಮ ಅನಿಸಿಕೆ , ಅಭಿಪ್ರಾಯ, ಟೀಕೆ ಟಿಪ್ಪಣಿ ನಮಗೆ ಕಳುಹಿಸಿ
ರಾಷ್ಟ್ರಬಂಧು ರಾಜೀವ ದೀಕ್ಷಿತರ ಭಾಷಣ ಗಳ ಆಯ್ದ ತುಣುಕುಗಳು _ಬರಹಗಳು ;ಮಲ್ಲೇಶ್ . ಸಹಾಯ ;ಸುರೇಶ ಕರೆಮಣಿ
ನೆಟ್ ನಾಗದಲ್ಲಿ ಪ್ರಸಾರವಾಗುತ್ತಲಿದೆ , ತಪ್ಪದೆ ಓದಿ.ನಿಮ್ಮ ಅನಿಸಿಕೆ , ಅಭಿಪ್ರಾಯ, ಟೀಕೆ ಟಿಪ್ಪಣಿ ನಮಗೆ ಕಳುಹಿಸಿ
ವಿಧ್ಯಾರ್ಥಿಗಾಗಿ ವಿಡಿಯೋ ವೀಕ್ಷಿಸಿ.
ಮರೆಯದೆ ವೀಕ್ಷಿಸಿ ಬಹಳ ಕಷ್ಟದಿಂದ ಹದಿನೆಂಟನೆ ವರ್ಷಕ್ಕೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ತಮ್ಮ ಮಾರುಕಟ್ಟೆ ವಿಸ್ತರಣೆ ಮಾಡಿದವರ ಜೀವನ ಗಾತೆ !https://sunnaturalflash.therenegadenetworkmarketer.com/
ನಿಮ್ಮ ಅನಿಸಿಕೆ , ಅಭಿಪ್ರಾಯ ಈ ವಿಳಾಸಕ್ಕೆ ಕಳುಹಿಸಿ sunnaturalflash@gmail.com
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
www.sunnaturalflash.com/
ನೆಟ್ ನಾಗದಲ್ಲಿ ಪ್ರಸಾರವಾಗುತ್ತಲಿದೆ , ತಪ್ಪದೆ ಓದಿ.ನಿಮ್ಮ ಅನಿಸಿಕೆ , ಅಭಿಪ್ರಾಯ, ಟೀಕೆ ಟಿಪ್ಪಣಿ ನಮಗೆ ಕಳುಹಿಸಿ
ವಿಧ್ಯಾರ್ಥಿಗಾಗಿ ವಿಡಿಯೋ ವೀಕ್ಷಿಸಿ.
ಮರೆಯದೆ ವೀಕ್ಷಿಸಿ ಬಹಳ ಕಷ್ಟದಿಂದ ಹದಿನೆಂಟನೆ ವರ್ಷಕ್ಕೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ತಮ್ಮ ಮಾರುಕಟ್ಟೆ ವಿಸ್ತರಣೆ ಮಾಡಿದವರ ಜೀವನ ಗಾತೆ !https://sunnaturalflash.therenegadenetworkmarketer.com/
ನಿಮ್ಮ ಅನಿಸಿಕೆ , ಅಭಿಪ್ರಾಯ ಈ ವಿಳಾಸಕ್ಕೆ ಕಳುಹಿಸಿ sunnaturalflash@gmail.com
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
www.sunnaturalflash.com/
ಬುಧವಾರ, ಏಪ್ರಿಲ್ 13, 2011
ಮುತ್ತು ಕಳೆದರೆ ಸಿಗುವುದು ಹೊತ್ತು ಹೋದರೆ ಬಾರದು "
ನಾನು ಓದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ -ದಾಸಕೊಪ್ಪದ ಸರಕಾರೀ ಹೈಸ್ಕೂಲ್ ನಲ್ಲಿ ಎಂಟನೆ ತರಗತಿಯಿಂದ ಹತ್ತನೇ ತರಗತಿ. ಆ ವೇಳೆಗೆ ನಮಗೆ ಇತಿಹಾಸ ವನ್ನು ಭೋಧಿಸಲು ಚೆನ್ನಾಗಿರಿ ಮೂರ್ತಿ ಎನ್ನುವ ಉಪಾಧ್ಯಾಯರು ಇದ್ದರು. ಅವರು ಯಾವಾಗಲು ಒಂದು ಮಾತನ್ನು ಹೇಳುತ್ತಿದ್ದರು "ಮುತ್ತು ಕಳೆದರೆ ಸಿಗುವುದು ಹೊತ್ತು ಹೋದರೆ ಬಾರದು " ಎಂದು . ಅಂದರೆ ನಮ್ಮಲ್ಲಿರುವ ಬಂಗಾರ , ಚಿನ್ನ, ಹೊನ್ನು, ಮುತ್ತು ಏನೇ ಕಳೆದು ಹೋದರೆ ದುಡಿದು ಹೊಸದೊಂದನ್ನು ಸಂಪಾದಿಸಬಹುದು . ಆದರೆ ಕಾಲ ಎಂಬುದು ಕಳೆದು ಹೋದರೆ ಅದೇ ಕಾಲವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲವೆಂದು !. ಹಾಗಾಗಿ ನಮ್ಮ ಯುವಕರು , ವಿಧ್ಯಾರ್ಥಿಗಳು ಸರಿಯಾಗಿ ಕಾಲವನ್ನು ಉಪಯೋಗಿಸಿಕೊಂಡು ಮುಂದೆಬರಬೇಕು.
ವಿಧ್ಯಾರ್ಥಿಗಾಗಿ ಒಂದು ವಿಡಿಯೋ
ಒಬ್ಬ ಯಶಸ್ವಿ ವ್ಯಕ್ತಿಯ ಒಂದು ಅನುಭವ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ
ಮಂಗಳವಾರ, ಏಪ್ರಿಲ್ 12, 2011
ಹತೋಟಿ ಯಲ್ಲಿ ಇಡದ ಇಂದ್ರಿಯಗಳು ಮನುಷ್ಯನನ್ನು ಧ್ವಂಸ ಮಾಡಿಬಿಡಬಲ್ಲವು!
ಹತೋಟಿ ಯಲ್ಲಿ ಇಡದ ಇಂದ್ರಿಯಗಳು ಮನುಷ್ಯನನ್ನು ಧ್ವಂಸ ಮಾಡಿಬಿಡಬಲ್ಲವು!
ಕೊಡಗಾನ ಕೊಳಿ ನುಂಗಿತ್ತಾ(ಶಿಶುನಾಳ ಶರಿಫ಼)
ನಿಮ್ಮ ವಿಶ್ವಾಸಿ
ಎ.ಟಿ.ನಾಗರಾಜ
sunnaturalflash@gmail.com
https://sunnaturalflash.therenegadenetworkmarketer.com/
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್‌ಗಳು (Atom)

