MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜನವರಿ 31, 2011

ವೈಯಕ್ತಿಕ ಪರಿವರ್ತನೆಯ ವಿವೇಕ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನಾನು ಜೀವನದ ಕಲಾವಿದ - ಜೀವನವೇ ನನ್ನ ಕಲೆ- ಸುಜುಕಿ

ಜೂಲಿಯನ್ ಕೊಟ್ಟ ಮಾತಿಗೆ ತಪ್ಪಲಿಲ್ಲ . ಮರುದಿನ ಸಂಜೆ ಏಳರ ಹೊತ್ತಿಗೆ ನನ್ನ ಮನೆಗೆ ಬಂದಿದ್ದ. ಇವತ್ತು ಹಿಂದಿನ ದಿನಕ್ಕಿಂತಲೂ ಬದಲಾಗಿದ್ದ. ಅವನ ವ್ಯಕ್ತಿತ್ವದಲ್ಲಿ ಆರೋಗ್ಯದ ಕಾಂತಿ ಹೆಚ್ಚಿತ್ತು. ಮುಖದಲ್ಲಿ ವಿಶಿಷ್ಟ ಪ್ರಶಾಂತಿಯಿತ್ತು. ಆದರೆ ಆತನ ಉಡುಗೆ ನನಗೆ ಕೊಂಚ ಮುಜುಗರವನ್ನು ಉಂಟುಮಾಡಿತು. ಆ ಕೆಂಪು ನಿಲುವಂಗಿ ಅವನ ಇಡೀ ಶರೀರವನ್ನು ಮುಚ್ಚಿತ್ತು. ಅದು ಸೆಕೆಗಾಲ ವಾಗಿದ್ದರೂ ತಲೆಯನ್ನು ಕುಸುರಿ ಕಸೂತಿಯಿಂದ ಅಲಂಕೃತವಾದ ಟೋಪಿ-ಬಹುತೇಕ ಮುಚ್ಚಿತ್ತು.

"ನಮಸ್ಕಾರ ಗೆಳೆಯ"
"ನಮಸ್ಕಾರ "
"ನನ್ನ ಉಡುಪನ್ನು ಕಂಡು ಹೆದರಬೇಡ, ನಾನೇ ಬೇರೇನೂ ತೊಟ್ಟಿರುತ್ತೆನೆಂದು ನಿರೀಕ್ಷಿಸಿದ್ದೆ ?
ನಾವಿಬ್ಬರೂ ಗಹಗಹಿಸಿ ನಕ್ಕೆವು. ಆತನ ತುಂಬ ಹಾಸ್ಯ ಪ್ರಜ್ಞೆ ಈಗಲೂ ಹಿಂದಿನಂತೆ ನಗಿಸುತ್ತಿತ್ತು.
ನಾವು ಕುಳಿತ ನಂತರ ಆತನ ಕೊರಳಲ್ಲಿದ್ದ ಯಾವುದೊ ಮರದ ಮಣಿಗಳ ಮಾಲೆ ಕಾಣಿಸಿತು.
"ಅದೇನು ?ನೋಡಲು ತುಂಬ ಚೆನ್ನಾಗಿದೆ ."
"ಅದರ ಬಗ್ಗೆ ಆ ಮೇಲೆ ಹೇಳುತ್ತೇನೆ ," ಆತ ಅದರ ಮೇಲೆ ಕೈಯಾಡಿಸುತ್ತಾ ಹೇಳಿದ. "ಈ ರಾತ್ರಿ ನಾವು ಬಹಳ ಮಾತಾಡಲಿಕ್ಕಿದೆ."
"ಹೌದು , ಶುರುಮಾಡೋಣ, ಇವತ್ತು ಇಡೀದಿನ ನಿನ್ನನ್ನು ಭೇಟಿಯಾಗುವ ಯೋಚನೆಯಲ್ಲಿ ನಾನು ಏನೂ ಮಾಡಲಾಗಲಿಲ್ಲ."
ಈ ಮಾತನ್ನು ಕೇಳಿದ ಕೂಡಲೇ ಜೂಲಿಯನ್ ತಾನನುಭವಿಸಿದ ಪರಿವರ್ತನೆಯ ಕತೆಯನ್ನು ಹೇಳತೊಡಗಿದ. ನಮ್ಮಿ ಸಂಕೀರ್ಣ ಸಮಾಜದಲ್ಲಿ ಜೀವ ಹಿಂಡುತ್ತಿರುವ , ಚಿಂತಿಸುವ ಚಟವನ್ನು ಹೋಗಲಾಡಿಸುವ ಪ್ರಾಚೀನ ತಂತ್ರಗಳ ಬಗ್ಗೆ ಹೇಳಿದ. ಯೋಗಿರಾಮನ್ ಮತ್ತು ಇತರ ಸಹಯೋಗಿಗಳು ತಿಳಿಸಿದ ಸಾರ್ಥಕ ಜೀವನ ಸೂತ್ರಗಳ ಬಗ್ಗೆ ಮಾತಾಡಿದ . ನಮ್ಮೆಲ್ಲರ ಆಂತರ್ಯದಲ್ಲಿ ಸುಪ್ತವಾಗಿರುವ ಅದ್ಭುತ ಆತ್ಮಶಕ್ತಿಯನ್ನು ಜಾಗೃತಗೊಳಿಸಿ , ತಾರುಣ್ಯವನ್ನೂ, ಚೈತನ್ಯವನ್ನೂ ಉದ್ದೀಪಿಸುವ ವಿಧಾನಗಳ ಬಗ್ಗೆ ವಿವರಿಸಿದ.


ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.buildingonabudget.com/



ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/

......................................................................
ನಿಮಗೆ ನನ್ನ ಜತೆ ನೇರವಾಗಿ ಮಾತನಾಡಬೇಕೆಂದು ಅನಿಸಿದರೆ, ನಿಮ್ಮ ಅನುಭವಗಳನ್ನು ,ಅನಿಸಿಕೆಗಳನ್ನು ನೇರವಾಗಿ ನನ್ನ ಜತೆಗೆ ಹಂಚಿ ಕೊಳ್ಳಬೇಕೆನಿಸಿದರೆ ನಿಮ್ಮ ಹೆಸರು, ನಿಮ್ಮ ಈ ಮೇಲ್ ವಿಳಾಸ, ನಿಮ್ಮ ಮೊಬೇಲ್ ದೂರವಾಣಿ ಸಂಖ್ಯೆ ಜತೆಗೆ ನೀವು ಕರೆಯನ್ನು ಸ್ವೀಕರಿಸುವ ಸಮಯ ಬರೆದು ಕೆಳಗಿನ ಈ ಮೇಲ್ ವಿಳಾಸಕ್ಕೆ ಕಳುಹಿಸಿ . ನಾನು ನಿಮ್ಮ ಕೋರಿಕೆಯ ಇಪ್ಪತ್ತು ನಾಲ್ಕು ಗಂಟೆಯ ಯಿಂದ ನಲವತ್ತೆಂಟು ಗಂಟೆಯ ಒಳಗೆ ನಿಮ್ಮೊಂದಿಗೆ ಸಂಭಾಷಣೆಯಲ್ಲಿ ಇರುತ್ತೇನೆ.sunnaturalflash@gmail.com





ಗುರುವಾರ, ಜನವರಿ 27, 2011

ಸಾಧುಗಳ ಅಡಿಯಲ್ಲಿ ಆಧ್ಯಾತ್ಮಿಕ ಶಿಷ್ಯ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

"ಮಹಾನ್ ಕನಸುಗಾರರ ಕನಸುಗಳು ಎಂದೂ ನನಸಾಗುವುದಿಲ್ಲ. ಅವು ನನಸನ್ನು ಮೀರಿಹೊಗುತ್ತವೆ"_ಆಲ್ಪ್ರೆಡ್ ನಾರ್ತ್ ಹೆಡ್

ಆಗ ರಾತ್ರಿ ಎಂಟು ಗಂಟೆ, ಮರುದಿನದ ಕೋರ್ಟಿನ ಕೆಲಸಕ್ಕಾಗಿ ನಾನಿನ್ನೂ ಸಿದ್ಧತೆ ನಡೆಸಿರಲಿಲ್ಲ. ಆದರೂ ಭಾರತೀಯ ಸಾಧುಗಳ ಸನ್ನಿಧಿಯಲ್ಲಿ ಅದ್ಭುತ ಪರಿವರ್ತನೆಗೊಳಗಾಗಿದ್ದ ನನ್ನ ಮಿತ್ರನ ಅನುಭವಗಳಿಂದ ನಾನು ತೀವ್ರ ಆಕರ್ಷಣೆಗೆ ಒಳಗಾಗಿದ್ದೆ. ಎಂಥ ಆಶ್ಚರ್ಯಕರ ಪರಿವರ್ತನೆ ಇದು ! ಈ ಅನುಭವಗಳು ನನ್ನ ಬದುಕಿನ ಮೌಲ್ಯವನ್ನು ಹೆಚ್ಚಿಸಬಹುದೇ ? ನನ್ನ ಸೊರಗುತ್ತಿರುವ ಜೀವನಾಸಕ್ತಿಯನ್ನು ವರ್ಧಿಸಬಹುದೇ ? ಈ ಪ್ರಶ್ನೆಗಳು ನನ್ನ ಮನಸ್ಸಿನೊಳಗೆ ಮೂಡತೊಡಗಿದವು.. ಜೂಲಿಯನ್ ನ ಮಾತುಗಳನ್ನು ಕೇಳುತ್ತಾ ಹೋದಂತೆ ನನ್ನ ಅಂತಸ್ಪೂರ್ತಿಗೆ ತುಕ್ಕುಹಿಡಿದಿರುವುದು ನನಗೆ ಸ್ಪಷ್ಟವಾಗುತ್ತ ಹೋಯಿತು. ಯುವಕನಾಗಿದ್ದಾಗ ನಾನು ತೊಡಗಿಕೊಂಡಿದ್ದ ಪ್ರತಿಯೊಂದು ಚಟುವಟಿಕೆಯಲ್ಲೂ ತುಂಬಿರುತ್ತಿದ್ದ ಆಸಾಧಾರಣ ಸ್ಫೂರ್ತಿ ಈಗೆಲ್ಲಿ ಹೋಯಿತು ? ಆಗ ಬದುಕಿನ ಚಿಕ್ಕಪುಟ್ಟ ಸಂಗತಿಗಳೂ ಖುಷಿ ನೀಡುತ್ತಿದ್ದವು . ಬಹುಶ; ನಾನು ನನ್ನ ಭವಿಷ್ಯವನ್ನು ಪುನ; ಸಂಶೋಧಿಸಬೇಕಾಗಿದೆ ಅಂದುಕೊಂಡೆ.

ನನ್ನ ಮನಸ್ಸಿನಲ್ಲಿ ಜೂಲಿಯನ್ ಕಲಿತುಬಂದ ಆ ಸಾಧುಗಳ ಜೀವನತತ್ವಗಳ ಬಗ್ಗೆ ಕುತೂಹಲ ಬೆಳೆಯುತ್ತಿರುವುದನ್ನು ಆತ ಗ್ರಹಿಸಿದ. ತನ್ನ ಕಥನವನ್ನು ಮುಂದುವರಿಸಿದ. "ನನ್ನ ಜ್ಞಾನದಾಹ ಹಾಗೂ ವೃತ್ತಿಜೀವನದಲ್ಲಿ ಹರಿತಗೊಂಡ ಮೇದಾಶಕ್ತಿಗಳಿಂದ ನಾನು 'ಶಿವನ ಸಾಧು'ಗಳ ಗುಂಪಿನ ಮೆಚ್ಚಿಗೆ ಗಳಿಸಿದೆ. ಅದರ ಸಂಕೇತವಾಗಿ ಅವರು ನನ್ನನ್ನು ತಮ್ಮ ಗುಂಪಿನ ಗೌರವಸದಸ್ಯನಾಗಿ ಸ್ವೀಕರಿಸಿದರು. ತಮ್ಮ ಕುಟುಂಬದ ಓರ್ವ ಸದಸ್ಯನಂತೆ ಅಕ್ಕರೆಯಿಂದ ನೋಡಿಕೊಂಡರು.

ಶರೀರ, ಮನಸ್ಸು ಮತ್ತು ಆತ್ಮ- ಈ ಮೂರರ ಮೇಲೂ ನಿಯಂತ್ರಣ ಸಾಧಿಸುವ ಉದ್ದೇಶದಿಂದ ನಾನು ಯೋಗಿರಾಮನ್ನನ ಮಾರ್ಗದರ್ಶನದಲ್ಲಿ ಪ್ರತಿಕ್ಷಣವನ್ನೂ ವ್ಯಯಿಸಿದೆ. ನನಗೂ ಅವನಿಗೂ ವಯಸ್ಸಿನಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿದ್ದರೂ , ಆತ ನನ್ನ ಪಾಲಿಗೆ ಗುರುವಿಗಿಂತಲೂ ಹೆಚ್ಚಾಗಿ ತಂದೆಯನ್ತಾಗಿದ್ದ . ಆತನಲ್ಲಿ ಅನೇಕ ಜನ್ಮಗಳ ಜ್ಞಾನ ತುಂಬಿತ್ತು. ಅದನ್ನು ನನ್ನೊಂದಿಗೆ ಸಂತೋಷದಿಂದ ಹಂಚಿಕೊಳ್ಳಲು ಸಿದ್ಧನಾಗಿದ್ದ.

ಪ್ರತಿದಿನ ಪ್ರಾತ;ಕಾಲ ಆಶ್ರಮದಲ್ಲಿ ಕುಳಿತುಕೊಂಡು ಜೀವನದಲ್ಲಿ ಚೈತನ್ಯ ಸೃಜನಶೀಲತೆ ಹಾಗೂ ಸಾರ್ಥಕ್ಯವನ್ನು ವರ್ಧಿಸುವ ವಿಭಿನ್ನ ತಂತ್ರಗಳನ್ನು ಯೋಗಿರಾಮನ್ ಮುಖೇನ ತಿಳಿದುಕೊಳ್ಳುತ್ತಿದ್ದೆ. ಆತ ಉಪದೇಶಿಸಿದ ತತ್ವಗಳನ್ನು ಆಯುಷ್ಯ , ಆರೋಗ್ಯ , ಆನಂದ ವರ್ಧನೆಗಾಗಿ ಯಾರೂ ಬೇಕಾದರೂ ಉಪಯೋಗಿಸಬಹುದಾಗಿತ್ತು. ಆತ್ಮಪ್ರಭುತ್ವ ಹಾಗೂ ಸ್ವಯಂ ಸಾಧ್ಯತೆಗಳ ಸಾಧನೆಯಿಂದ ಹಿಂದೆ ತಾನು ವ್ರುತ್ತಿಜೀವನಕಾಲದಲ್ಲಿ ಅನುಭವಿಸಿದ್ದ ಗೊಂದಲ ಅನಾಹುತಗಳನ್ನು ಹೇಗೆ ನಿವಾರಿಸಿಕೊಳ್ಳಬಹುದೆನ್ನುವುದೂ ನನಗೆ ಅರಿವಾಯಿತು. ಸಾಧನೆಯಲ್ಲಿ ವಾರಗಳು ಕಳೆಯುತ್ತಿದ್ದಂತೆ ನನ್ನಲ್ಲಿ ಅದ್ಭುತವಾದ ಶಕ್ತಿ ಸುಪ್ತವಾಗಿದೆ. ಅದು ಜಾಗೃತಗೊಂಡು ಉದ್ದಾತ್ತ ಉದ್ದೇಶಗಳನ್ನು ಸಾಧಿಸಲು ಕಾಯುತ್ತಿದೆ ಎನ್ನುವ ಅರಿವು ಮೂಡಿತು. ಒಮ್ಮೊಮ್ಮೆ ನಾವಿಬ್ಬರೂ ಸುಮ್ಮನೆ ನಿಂತು ಆ ಹಿಮಾಲಯದ ಹಸಿರು ಕಣಿವೆಯನ್ನು ಬೆಳಗುತ್ತಿರುವ ಸೂರ್ಯನನ್ನು ವೀಕ್ಷಿಸುತ್ತಿದ್ದೆವು. ಕೆಲವೊಮ್ಮೆ ಮೌನದಲ್ಲಿ ಧ್ಯಾನಮಗ್ನರಾಗುತ್ತಿದ್ದೆವು . ಕೆಲವೊಮ್ಮೆ ತತ್ವಜ್ಞಾನ ಮಾಡುತ್ತಾ ದೇವದಾರು ವೃಕ್ಷಗಳ ಅರಣ್ಯದಲ್ಲಿ ಸುತ್ತಾಡುತ್ತಿದ್ದೆವು.

ಸುಮಾರು ಮೂರು ವಾರಗಳ ನಂತರ ನನಗೆ ಆತ್ಮವಿಸ್ತಾರದ ವಿಶಿಷ್ಟ ಅನುಭವ ಉಂಟಾಯಿತು. ಅದರ ಪರಿಣಾಮವಾಗಿ ರಾತ್ರಿಯ ತಾರಾಖಚಿತ ಆಕಾಶ , ಮಳೆನೀರಿನಿಂದ ತೋಯ್ದ ಜೇಡರಬಲೆ ಯಂತಹ ಚಿಕ್ಕ ಪುಟ್ಟ ಸಾಮಾನ್ಯ ವಸ್ತುಗಳಲ್ಲೂ ಸೌಂದರ್ಯ ದರ್ಶನ ಉಂಟಾಗತೊಡಗಿತು. ಅದೆಲ್ಲವನ್ನೂ ನಾನು ಹೀರಿಕೊಂಡೆ . ಹೊಸ ಜೀವನಶೈಲಿ ಮತ್ತು ಅಭ್ಯಾಸಗಳು ಆಂತರಿಕ ಜಗತ್ತಿನ ಮೇಲೂ ಗಾಢ ಪರಿಣಾಮ ಬೀರ ತೊಡಗಿದವು . ಒಂದೇ ತಿಂಗಳಲ್ಲಿ ಹಿಂದೆಂದೂ ಅನುಭವಿಸದಿದ್ದ ಮಾನಸಿಕ ಶಾಂತಿ ಹಾಗೂ ಗಾಂಭೀರ್ಯವನ್ನು ಅನುಭವಿಸತೊಡಗಿದೆ.

ದಿನೇ ದಿನೇ ನನ್ನಲ್ಲಿ ಸಂತೋಷ, ಸ್ಫೂರ್ತಿ, ಸೃಜನಶೀಲ ಚೈತನ್ಯ ಬೆಳೆಯುತ್ತಿತ್ತು. ದೈಹಿಕ ಶಕ್ತಿ ಹಾಗೂ ಆಧ್ಯಾತ್ಮಿಕ ಚೈತನ್ಯಗಳಿಂದ ನನ್ನ ಮನೋಧರ್ಮದಲ್ಲಿಯೂ ಪರಿವರ್ತನೆ ಉಂಟಾಯಿತು. ದೇಹದಲ್ಲಿ ಹಿಂದಿದ್ದ ಬೊಜ್ಜು ಕರಗಿತು. ಮುಖದಲ್ಲಿದ್ದ ನಿಸ್ತೇಜತೆ ಮಾಯಾವಾಗಿ ಆರೋಗ್ಯದ ಕಾಂತಿ ಕಾಣಿಸಿಕೊಂಡಿತು. ನಾನೀಗ ಏನನ್ನೂ ಮಾಡಬಲ್ಲೆ, ಏನೂ ಆಗಬಲ್ಲೆ , ನನ್ನ ಅಂತರ್ಯದಲ್ಲಿರುವ ಅಪಾರ ಸುಪ್ತಶಕ್ತಿಯ ದ್ವಾರವನ್ನು ತೆರೆಯಬಲ್ಲೆ ಎಂಬ ಭಾವನೆ ಉಂಟಾಯಿತು. ಬದುಕಿನ ಪ್ರತಿಯೊಂದು ಅಂಶದಲ್ಲೂ ದೈವಿಕತೆಯನ್ನೂ ಗುರುತಿಸುತ್ತಾ, ಜೀವನ ಪ್ರೀತಿಯನ್ನು ಹೆಚ್ಚಿಸಿ ಕೊಳ್ಳತೊಡಗಿದೆ. ಈ ರೀತಿಯಲ್ಲಿ ನಿಗೂಢ ಸಾಧುಗಳ ಪ್ರಾಚೀನ ತಂತ್ರಗಳು ಪವಾಡ ಮಾಡಲು ಆರಂಭಿಸಿದವು.

ಕೊಂಚ ಹೊತ್ತು ಸುಮ್ಮನಿದ್ದ ಜೂಲಿಯನ್ ಮತ್ತೆ ದಾರ್ಶನಿಕನಂತೆ ಹೀಗೆ ಹೇಳಿದ "ಜಾನ್, ನಾನು ತುಂಬಾ ಮಹತ್ವದ ವಿಷಯವೊಂದನ್ನು ಅರಿತುಕೊಂಡೆ, ನಮ್ಮ ಈ ಪ್ರಪಂಚ , ಮಾನಸಿಕ ಪ್ರಪಂಚವೂ ಸೇರಿದಂತೆ , ಒಂದು ವಿಶಿಷ್ಟ ಪ್ರದೇಶ , ಆಂತರಿಕ ಯಶಸ್ಸಿಲ್ಲದಿದ್ದರೆ ಬಾಹ್ಯ ಯಶಸ್ಸು ಅರ್ಥಹೀನವಾಗುತ್ತದೆ. ಶ್ರೀಮಂತನಾಗಿರುವುದಕ್ಕೂ ಸುಖಯಾಗಿರುವುದಕ್ಕೂ ಅಪಾರ ವ್ಯತ್ಯಾಸವಿದೆ. ಹಿಂದೆ ಪ್ರಸಿದ್ದ ಲಾಯರ್ ಆಗಿದ್ದ ಕಾಲದಲ್ಲಿ ನನಗೆ ಆಂತರಿಕ ಜೀವನದ ಸುಧಾರಣೆಯಲ್ಲಿ ತೊಡಗಿರುವವರ ಬಗ್ಗೆ ತಿರಸ್ಕಾರವಿತ್ತು. ಜೀವನದಲ್ಲಿ ಮಜಾ ಬೇಕು ಎನ್ನುವುದು ನನ್ನ ಆಗಿನ ಭಾವನೆಯಾಗಿತ್ತು. ಆದರೆ ದೇಹ , ಮನಸ್ಸು , ಆತ್ಮ -ಈ ಮೂರನ್ನೂ ಸರಿಯಾಗಿ ಫೋಶಿಸುವುದು ಬದುಕಿನ ಕನಸುಗಳನ್ನು ನನಸು ಮಾಡುವುದಕ್ಕೂ , ಅತ್ಯುನ್ನತ ಆನಂದವನ್ನು ಪಡೆಯುವುದಕ್ಕೂ ಅತ್ಯಗತ್ಯ ಎನ್ನುವುದನ್ನು ಕಲಿತಿದ್ದೇನೆ. ನಿನ್ನ ಆರೈಕೆಯನ್ನು ನೀನೆ ಮಾಡಿಕೊಳ್ಳದಿದ್ದರೆ , ಬೇರೆಯವರ ಆರೈಕೆಯನ್ನು ಹೇಗೆ ಮಾಡಲು ಸಾಧ್ಯ ?ನನ್ನ ಮೇಲೆ ನನಗೆ ಪ್ರೀತಿಯಿಲ್ಲದಿದ್ದರೆ , ಅನ್ಯರನ್ನು ಪ್ರೀತಿಸುವುದೂ ಅಸಾಧ್ಯ ."

ಸ್ವಲ್ಪ ಹೊತ್ತು ಜೂಲಿಯನ್ ಏನೋ ಸಂಕೋಚ ಭಾವನೆಯಿಂದ ಸುಮ್ಮನಾದಂತೆ ಕಂಡಿತು. ಅನಂತರ ಆತ ಮುಂದುವರಿದ . "ಕ್ಷಮಿಸು ಜಾನ್ , ನಾನು ಈವರೆಗೆ ನನ್ನ ಹೃದಯದೊಳಗಿದ್ದ ಈ ಅನುಭವಗಳನ್ನೂ ಯಾರೆದುರೂ ತೋಡಿಕೊಂಡಿರಲಿಲ್ಲ . ಹಿಮಾಲಯದ ಕಣಿವೆಯಲ್ಲಿ ನಾನು ಸಾಧುಗಳಡಿಯಲ್ಲಿ ಆಧ್ಯಾತ್ಮಿಕ ಶಿಷ್ಯನಾಗಿ ಪಡೆದ ಅಧ್ಬುತ ಅನುಭವ ಹಾಗೂ ವಿಶ್ವದ ಶಕ್ತಿಗಳ ಕುರಿತು ಅಲ್ಲಿ ನನ್ನಲ್ಲಿ ಉಂಟಾಗಿದ್ದ ಆಧ್ಯಾತ್ಮಿಕ ಜ್ಞಾನಸ್ಪೋಟ ಎನ್ತಹದಾಗಿತ್ತೆಂದರೆ ಅದನ್ನು ಯಾರಿಗೂ ಹೇಳಬೇಕೆಂಬ ಆಂತರಿಕ ಒತ್ತಡ ಉಂಟಾಗಿದೆ.

ಸಮಯ ಮೀರುತ್ತಿದೆ ಎಂದು ಭಾವಿಸಿದ ಜೂಲಿಯನ್ ನನಗೆ ವಿದಾಯ ಹೇಳಲು ಎದ್ದು ನಿಂತ . ಆಗ ನಾನೆಂದೆ ; "ಜೂಲಿಯನ್ , ನೀನೀಗ ಹೋಗಕೂಡದು, ನೀನು ಹಿಮಾಲಯದ ಸಾಧುಗಳಿಂದ ಪಡೆದ ಆ ದಿವ್ಯಸಂದೇಶಗಳನ್ನು ಕೇಳಲು ನನ್ನ ಮನಸ್ಸು ಕುತೂಹಲಿಯಾಗಿದೆ . ನನ್ನನ್ನು ಹೀಗೆ ಸಸ್ಪೆನ್ಸ್ ನಲ್ಲಿ ನರಳಿಸಬೇಡ . ಅದು ನನ್ನಿಂದಾಗದೆಂದು ನಿನಗೂ ಗೊತ್ತು ತಾನೇ".

"ಇಲ್ಲ . ನಾನು ಮತ್ತೊಮ್ಮೆ ಬರುತ್ತೇನೆ . ನಿನಗೂ ಗೊತ್ತಿದೆ -ಕತೆ ಹೇಳತೊಡಗಿದರೆ ಅದನ್ನು ಮುಗಿಸದೇ ಇರಲು ನನ್ನಿಂದ ಸಾಧ್ಯವಿಲ್ಲ . ನಿನಗೂ ಈಗ ನಿನ್ನ ಕೆಲಸವಿದೆ. ನನಗೂ ಸ್ವಲ್ಪ ಕೆಲಸ ಇದೆ." ಅವನೆಂದ.

"ಹಾಗಾದರೆ ಒಂದೇ ಮಾತು. "ಶಿವನಸ್ಥಾನದಲ್ಲಿ" ನೀನು ಕಲಿತ ವಿಷಯಗಳಿಂದ ನನಗೂ ಪ್ರಯೋಜನವಾದೀತೆ ?ನಾನೆಂದೆ.

"ಶಿಷ್ಯ ಸಿದ್ಧನಾದಾಗ ಗುರುಪ್ರತ್ಯಕ್ಷನಾಗುತ್ತಾನೆ. ನೀನೂ ,ನಿನ್ನಂತಹ ಇನ್ನೂ ಹಲವು ಗೆಳೆಯರು ನಾನು ಪಡೆದಿರುವ ಜ್ಞಾನವನ್ನು ಪಡೆದುಕೊಳ್ಳಲು ಸಿದ್ಧರಾಗಿದ್ದಾರೆ. ಆ ಸಾಧುಗಳು ನೀಡಿದ ಜ್ಞಾನವನ್ನು ಎಲ್ಲರೂ ಪಡೆಯಬೇಕು. ಪ್ರತಿಯೊಬ್ಬನಿಗೂ ಅದರಿಂದ ಲಾಭವಿದೆ. ಪ್ರತಿಯೊಬ್ಬನೂ ತನ್ನೊಳಗೆ ಸಹಜವಾಗಿರುವ ಪೂರ್ಣತೆಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಆ ಜ್ಞಾನವನ್ನು ನಾನು ನಿಮ್ಮೊಡನೆ ಖಂಡಿತ ಹಂಚಿಕೊಳ್ಳುವೆ. ಆದರೆ ಸ್ವಲ್ಪ ತಾಳ್ಮೆ ಇರಲಿ. ನಾಳೆ ಇದೇ ಸಮಯದಲ್ಲಿ ನಿನ್ನ ಮನೆಯಲ್ಲಿ ಭೇಟಿಯಾಗುವೆ. ನಿನ್ನ ಬದುಕಿಗೆ ಇನ್ನಷ್ಟು ಚೈತನ್ಯ ನೀಡುವ ಎಲ್ಲ ವಿಷಯಗಳನ್ನು ತಿಳಿಸುವೆ . ಸರಿತಾನೆ ?"

"ಸರಿ . ಇಷ್ಟು ವರ್ಷ ಅದಿಲ್ಲದೆ ಕಳೆದಿರುವಾಗ , ಇನ್ನು ಇಪ್ಪತ್ತನಾಲ್ಕು ತಾಸು ಕಳೆಯುವುದೇನೂ ದೊಡ್ಡದಲ್ಲ ." ನಾನೆಂದೆ ಕೊಂಚ ನಿರಾಶೆಯಿಂದ. ಕೂಡಲೇ ಭಾರತೀಯ ಯೋಗಿಯಾಗಿ ಬದಲಾದ ಖ್ಯಾತ ಲಾಯರ್ ಹೊರಟು ಹೋದ . ಕೂಡಲೇ ನೂರಾರು ಪ್ರಶ್ನೆಗಳೂ , ಯೋಚನೆಗಳೂ ನನ್ನ ಮನಸ್ಸನ್ನು ತುಂಬಿಕೊಂಡವು.

ನಾನು ಆಫೀಸಿನಲ್ಲಿ ಮೌನವಾಗಿ ಕುಳಿತೆ. ನಮ್ಮ ಜಗತ್ತು ಅದೆಷ್ಟು ಚಿಕ್ಕದು ಎಂದು ನನಗನಿಸಿತು. ಜ್ಞಾನಸಾಗರದ ನೀರಿಗೆ ನಾನಿನ್ನೂ ಬೆರಳನ್ನೂ ತೂರಿಸಿಲ್ಲವಲ್ಲ ಎಂದು ಯೋಚಿಸಿದೆ. ಒಂದು ಕಾಲದಲ್ಲಿ ನಾನು ತರುಣನಾಗಿದ್ದಾಗ ನನ್ನಲ್ಲಿದ್ದ ಜೀವನೋತ್ಸಾಹ ಕುತೂಹಲಗಳನ್ನು ಪುನ; ಪಡೆಯಲು ಸಾಧ್ಯವಾದರೆ ಹೇಗೆ ? ಆಗ ನನ್ನ ದೈನಂದಿನ ಚಟುವಟಿಕೆಗಳಿಗೆ ಇನ್ನಷ್ಟು ಚೈತನ್ಯ ತುಂಬಬಹುದು. ನನಗೂ ಒಂದು ಅಲೌಕಿಕದ ಕರೆ ಬರಬಹುದೆ? ಹೀಗೆಲ್ಲ ಯೋಚನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು , ಲೈಟುಗಳನ್ನು ಆರಿಸಿ , ಆಫೀಸಿಗೆ ಬೀಗ ಹಾಕಿ ಸೆಕೆಗಾಲದ ಆ ರಾತ್ರಿಯಲ್ಲಿ ಹೊರಹೊರಟೆ.

ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.buildingonabudget.com/



ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/

......................................................................
ನಿಮಗೆ ನನ್ನ ಜತೆ ನೇರವಾಗಿ ಮಾತನಾಡಬೇಕೆಂದು ಅನಿಸಿದರೆ, ನಿಮ್ಮ ಅನುಭವಗಳನ್ನು ,ಅನಿಸಿಕೆಗಳನ್ನು ನೇರವಾಗಿ ನನ್ನ ಜತೆಗೆ ಹಂಚಿ ಕೊಳ್ಳಬೇಕೆನಿಸಿದರೆ ನಿಮ್ಮ ಹೆಸರು, ನಿಮ್ಮ ಈ ಮೇಲ್ ವಿಳಾಸ, ನಿಮ್ಮ ಮೊಬೇಲ್ ದೂರವಾಣಿ ಸಂಖ್ಯೆ ಜತೆಗೆ ನೀವು ಕರೆಯನ್ನು ಸ್ವೀಕರಿಸುವ ಸಮಯ ಬರೆದು ಕೆಳಗಿನ ಈ ಮೇಲ್ ವಿಳಾಸಕ್ಕೆ ಕಳುಹಿಸಿ . ನಾನು ನಿಮ್ಮ ಕೋರಿಕೆಯ ಇಪ್ಪತ್ತು ನಾಲ್ಕು ಗಂಟೆಯ ಯಿಂದ ನಲವತ್ತೆಂಟು ಗಂಟೆಯ ಒಳಗೆ ನಿಮ್ಮೊಂದಿಗೆ ಸಂಭಾಷಣೆಯಲ್ಲಿ ಇರುತ್ತೇನೆ.sunnaturalflash@gmail.com




ಸೋಮವಾರ, ಜನವರಿ 24, 2011

'ಶಿವನ' ಸಾಧುಗಳೊಡನೆ ಮಾಂತ್ರಿಕ ಸಮಾಗಮ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಕೆಲವು ತಾಸುಗಳ ಕಾಲ ಹುಲ್ಲು ಹಾಸಿನ ಕಾಲುದಾರಿಗಳಲ್ಲಿ ನಡೆದು ನಾವಿಬ್ಬರೂ ಒಂದು ಹಚ್ಹ ಹಸಿರು ತುಂಬಿದ ವಿಶಾಲ ಕಣಿವೆಗೆ ಕಾಲಿಟ್ಟೆವು. ಅದರ ಒಂದು ಬದಿಯಲ್ಲಿ ಹಿಮಾಚ್ಛಾದಿತ ಉನ್ನತ ಶಿಖರಗಳಿದ್ದರೆ ಇನ್ನೊಂದು ಬದಿಯಲ್ಲಿ ದೇವದಾರು ವೃಕ್ಷಗಳ ದಟ್ಟ ಅರಣ್ಯ ಬೆಳೆದಿತ್ತು. ಇವೆರಡೂ ಸೇರಿ ಅಲ್ಲಿ ಒಂದು ಅದ್ಬುತರಮ್ಯಲೋಕ ಸೃಷ್ಟಿಯಾಗಿತ್ತು.

ಸಾಧು ನನ್ನ ಕಡೆ ನೋಡಿ "ಶಿವನ ನಿರ್ವಾಣಕ್ಕೆ ಸುಸ್ವಾಗತ" ಎಂದು ಮುಗುಳ್ನಗುತ್ತಾ ಹೇಳಿದ.

ಇಬ್ಬರೂ ಅರಣ್ಯದೊಳಗಿನ ಅಸ್ವಷ್ಟ ಕಾಲುದಾರಿಯಲ್ಲಿ ನಡೆದೆವು. ಗಂಧ, ಚಂದನ ವೃಕ್ಷಗಳ ಪರಿಮಳ ಹೊತ್ತ ಮಂದಾನಿಲ ತಂಪಾಗಿ ಬೀಸುತ್ತಿತ್ತು. ಬೂಟಿನಲ್ಲಿ ಬಿಗಿದಿದ್ದ ಕಾಲ್ಬೆರಳುಗಳನ್ನು ಸಡಿಲಿಸಲು ನಾನು ಬರಿಗಾಲಿನಲ್ಲಿ ನಡೆಯುತ್ತಿದ್ದೆ. ನೆಲದಲ್ಲಿ ಬೆಳೆದಿದ್ದ ಹಾವಸೆಗಳನ್ನು ನನ್ನ ಪಾದಗಳು ಮುದ್ದಿಸುತ್ತಿದ್ದವು. ನಾನಾ ರೀತಿಯ ಗಿಡಮರ-ಬಳ್ಳಿಗಳು ಬಣ್ಣಬಣ್ಣದ ಹೂವುಗಳನ್ನು ಹೊತ್ತು ಲಾಸ್ಯವಾಡುತ್ತಿದ್ದವು. ಎಲ್ಲವೂ ಸೇರಿ ಒಂದು ಸುಂದರ, ಅನುಪಮ ಸ್ವರ್ಗವನ್ನೇ ಸೃಷ್ಟಿಸಿದನ್ತಿತ್ತು.

ದೂರದಲ್ಲಿ ಕಿವಿಗೆ ಹಿತವಾದ ಮ್ರದುಮಧುರ ದನಿಗಳು ಕೇಳಿಸುತ್ತಿದ್ದವು. ನಿಶಬ್ಧವಾಗಿ ಸಾಧುವನ್ನು ಹಿಂಬಾಲಿಸಿದೆ. ಇನ್ನು ಹದಿನೈದು ನಿಮಿಷ ನಡೆದ ನಂತರ ಒಂದು ಗೇಟನ್ನು ತಲಪಿದೆವು. ನಮ್ಮ ಮುಂದೆ ಕೇವಲ ಗುಲಾಬಿ ಹೂವುಗಳಿಂದಲೇ ನಿರ್ಮಿಸಲಾದನ್ತಿದ್ದ ಒಂದು ಹಳ್ಳಿಯಿತ್ತು. ಇದು ಸಾಕಷ್ಟು ಪ್ರವಾಸ ಮಾಡಿದ್ದ ನನಗೆ ಊಹಿಸಲಸಾಧ್ಯವಾದ ದೃಶ್ಯವಾಗಿತ್ತು. ನಡುವೆ ಒಂದು ಪುಟ್ಟ ದೇವಾಲಯ ಕಾಣಿಸುತ್ತಿತ್ತು. ಮೇಲ್ನೋಟಕ್ಕೆ ಅದು ನೇಪಾಳ , ಥೈಲ್ಯಾಂಡಿನಲ್ಲಿ ನಾನು ಹಿಂದೊಮ್ಮೆ ನೋಡಿದ್ದ ದೇವಾಲಯದನ್ತಿದ್ದರೂ , ನಿಜವಾಗಿ ಹಾಗಿರಲಿಲ್ಲ. ಈ ಗುಡಿಯಿಡೀ ನಾನ ವರ್ಣಗಳ ಹೂವುಗಳಿಂದಲೇ ನಿರ್ಮಿತವಾದನ್ತಿತ್ತು. ಸಮೀಪದ ಸುತ್ತುಮುತ್ತಲಲ್ಲಿ ನಾಲ್ಕಾರು ಗುಡಿಸಲುಗಳಿದ್ದವು. ಬಹುಶ; ಅವು ಅಲ್ಲಿದ್ದ ಸಾಧುಗಳ ಆಶ್ರಮಗಳಾಗಿರಬೇಕು. ಅವೂ ಗುಲಾಬಿಹೂವುಗಳಿಂದ ತುಂಬಿಕೊಂಡಿದ್ದವು. ಈ ಅಪೂರ್ವ ದೃಶ್ಯವನ್ನು ಕಂಡು ನಾನು ಮೂಕನಾದೆ.

ನನ್ನನ್ನು ಅಲ್ಲಿಗೆ ಕರೆತಂದಿದ್ದ ಸಾಧುವಿನ ಹೆಸರು ಯೋಗಿರಾಮನ್. ಅವ್ರು ಇಲ್ಲಿನ ಸಾದುಗಳಲ್ಲೇ ಅತ್ಯಂತ ಹಿರಿಯರು . ಹಾಗೂ ಸಾದು ಗುಂಪಿನ ಮುಖ್ಯಸ್ಥರು . ಈ ಸ್ವಪ್ನಸದ್ರುಷ ಹಳ್ಳಿಯಲ್ಲಿ ವಾಸಿಸುತ್ತಿರುವ ಎಲ್ಲರೂ , ಯೌವನ ಭರಿತರಾಗಿಯೂ, ತತ್ವನಿಷ್ಟ ಜೀವನ ನಡೆಸುತ್ತಿದ್ದ ಪ್ರಭುದ್ಧ ಮುನುಷ್ಯರಾಗಿಯೂ ಕಾಣುತ್ತಿದ್ದರು. ಆಗ ಅವರಲ್ಲಿ ಯಾರೂ ನನ್ನನ್ನು ಮಾತಾಡಿಸಲಿಲ್ಲ. ಆ ಸ್ಥಳದ ಅಗಾಧ ನೀರವತೆಯನ್ನು ಗೌರವಿಸಲೋ ಎಂಬಂತೆ ಎಲ್ಲರೂ ಮೌನವಾಗಿಯೇ ತಂತಮ್ಮ ಚಟುವಟಿಕೆಗಳಲ್ಲಿ ಮಗ್ನರಾಗಿದ್ದರು.

ಅಲ್ಲಿ ಸುಮಾರು ಹತ್ತು ಮಂದಿ ಸಾಧುಗಳಿದ್ದಿರಬಹುದು. ಅವರೆಲ್ಲರ ಉಡುಗೆಯೂ ಯೋಗಿರಾಮನ್ ಧರಿಸಿದ ಉಡುಗೆಯಂತಿತ್ತು. ನಾನು ಸಮೀಪಿಸಿದಾಗ ಮುಗುಳ್ನಗೆಯಿಂದ ಸ್ವಾಗತಿಸಿದರು. ನಮ್ಮ ಆಧುನಿಕ ಜಗತ್ತನ್ನು ಕಾಡುತ್ತಿರುವ ಪ್ರಕ್ಷುಬ್ಧತೆ , ಮಾನಸಿಕ ಒತ್ತಡ ಮತ್ತು ಉದ್ವಿಗ್ನತೆಗಳು ಈ ಪ್ರಶಾಂತ ಜಗತ್ತಿಗೆ ಕಾಲಿಡಲು ಹೆದರಿ ಓಡಿಹೊದಂತಿತ್ತು. ನನ್ನಂತಹ ಹೊಸಬನನ್ನು ಅವರು ನೋಡಿ ಅನೇಕ ಅನೇಕ ವರ್ಷಗಳಾಗಿದ್ದರೂ ಅವರ ಸ್ವಾಗತದಲ್ಲಿ ಅಪೂರ್ವ ಸಂಯಮವಿತ್ತು. ಮುಗುಳ್ನಗೆಯಿಂದ ತಲೆಬಾಗುವುದರಲ್ಲೇ ಅದು ವ್ಯಕ್ತವಾಗಿತ್ತು.

ಅಲ್ಲಿದ್ದ ಹೆಂಗಸರೂ ಲಕ್ಷಣವಾಗಿದ್ದರು. ಸುಂದರವಾದ ಸೀರೆಯನ್ನುಟ್ಟು , ಮುದುಗೆ ಕಮಲದ ಹೂವುಗಳನ್ನು ಮುಡಿದಿದ್ದ ಅವರು ಚುರುಕಾಗಿ ಓಡಾಡುತ್ತಿದ್ದರು. ಆದರೆ ಅವರ ಚಟುವಟಿಕೆಯನ್ನು ನಮ್ಮ ನಾಗರಿಕ ಸಮಾಜದ ಅತ್ಯಾಧುನಿಕ ಮಹಿಳೆಯರ ಚಟುವಟಿಕೆ ಯಂತೆ ಇರಲಿಲ್ಲ. ಅವರ ವರ್ತನೆಯಲ್ಲಿದ್ದ ಗಾಂಬೀರ್ಯವೇ ಭಿನ್ನವಾಗಿತ್ತು . ಝೆನ್ ಸಾಧಕರ ಏಕಾಗ್ರತೆಯಿಂದ ಅವರು ದೇವಾಲಯದ ಯಾವುದೋ ಉತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಂತೆ ಕಾಣಿಸುತ್ತಿತ್ತು. ಅವರಲ್ಲಿ ಕೆಲವರು ಕಟ್ಟಿಗೆ ತುಂಡುಗಳನ್ನೂ , ಬಟ್ಟೆಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು. ಎಲ್ಲರೂ ಒಂದು ಸೃಜನಶೀಲ ಚಟುವಟಿಕೆಯಲ್ಲಿ ಮಗ್ನರಾಗಿದ್ದರು. ಖುಷಿಯಾಗಿದ್ದರು.

ಕೊನೆಗೂ ಶಿವನ ಸಾಧುಗಳ ಮುಖಗಳು ಅವರ ವಿಶಿಷ್ಟ ಜೀವನ ವಿಧಾನ ಶಕ್ತಿಯನ್ನು ತೋರಿದವು. ಅವರೆಲ್ಲ ಪ್ರೌಢ ವಯಸ್ಕರಾಗಿದ್ದರು . ಅವರ ಕಣ್ಣಿನಲ್ಲಿ ಮಗುವಿನ ಮುಗ್ಧತೆಯಿತ್ತು. ಶರೀರದಲ್ಲಿ ತಾರುಣ್ಯದ ಲಾವಣ್ಯವಿತ್ತು. ಯಾರಮುಖದಲ್ಲೂ ಸುಕ್ಕುಗಳಿಲ್ಲ. ಯಾರ ತಲೆಯಲ್ಲೂ ಬಿಳಿಕೂದಲಿಲ್ಲ. ಯಾರೂ ವೃದ್ಧರಂತೆ ಕಾಣುತ್ತಿರಲಿಲ್ಲ.

ಇದನ್ನೆಲ್ಲ ನೋಡುತ್ತ ಅಚ್ಚರಿ ಪಡುತ್ತಿರುವಾಗಲೇ ನನಗೆ ತಾಜಾ ಹಣ್ಣು , ತರಕಾರಿಗಳ ಆಹಾರವನ್ನು ನೀಡಿದರು. ಈ ಆಹಾರವೇ ಸಾಧುಗಳ ದೀರ್ಘ ಆಯುಷ್ಯ . ಆರೋಗ್ಯದ ಗುಟ್ಟು ಎನ್ನುವ ಸತ್ಯ ನನಗೆ ಕಾಲಕ್ರಮೇಣ ಅರಿವಾಯಿತು. ಭೋಜನದ ನಂತರ ಯೋಗಿರಾಮನ್ ನನ್ನನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದರು. ಅದೊಂದು ಹೂ ಮುಡಿದಿಟ್ಟ ಪುಟ್ಟ ಗುಡಿಸಲು . ಅಲ್ಲಿದ್ದುದು ಒಂದು ಸಣ್ಣ ಹಾಸಿಗೆ ಹಾಗೂ ಬರೆಯುವ ಪ್ಯಾಡ್ , ಇದೆ ಅವರ ಬಹುಕಾಲದ ನಿವಾಸ.

ಇಂಥ ಅನೂಹ್ಯ ಲೋಕವನ್ನು ನಾನು ಹಿಂದೆಂದೂ ನೋಡಿರಲಿಲ್ಲವಾದರೂ , ಇಲ್ಲಿಗೆ ಬಂದ ಮೇಲೆ , ಸ್ವರ್ಗದಂತಿರುವ ನನ್ನದೇ ಮನೆಗೆ ಬಹುಕಾಲದ ನಂತರ ಹಿಂತಿರುಗಿದಂತಹ ಭಾವನೆ ಮೂಡಿತು. ಈ ಗುಲಾಬಿ ಹೂಗಳು ತುಂಬಿದ ಹಳ್ಳಿ ಅದೇಕೋ ಅಜ್ನಾತವೆನಿಸಲಿಲ್ಲ. ಅಲ್ಪಕಾಲಕ್ಕೆ ಆಗಲಿ ನಾನು ಇಲ್ಲಿಗೆ ಸೇರಿದವನು ಎಂದು ನನ್ನ ಅಂತರಾತ್ಮ ಹೇಳಿತು. ವೃತ್ತಿ ನಾಶಮಾಡಿದ ನನ್ನ ಜೀವನ ಸ್ಪೂರ್ತಿಯನ್ನು ಪುನ; ಪಡೆದುಕೊಳ್ಳಲು, ಅದರ ಅಘಾತದಿಂದಾದ ಗಾಯವನ್ನು ವಾಸಿಮಾದಿಕೊಳ್ಳಲು ಇದೇ ಸೂಕ್ತವಾದ ತಾಣವೆಂದು ಮನದಟ್ಟಾಯಿತು. ಈ ರೀತಿ ಶಿವನ ಸಾಧುಗಳ ಸಾನ್ನಿಧ್ಯದಲ್ಲಿ ಸರಳತೆ, ಗಾಂಭೀರ್ಯ , ಸಾಮರಸ್ಯ ತುಂಬಿದ ಹೊಸಬದುಕು ಆರಂಭವಾಯಿತು. ಮುಂದಿನ ಉನ್ನತ ಹಂತಕ್ಕೆರಲು ಸೋಪಾನವಾಯಿತು.

ನಿಮಗಾಗಿ ನಮ್ಮ ಅವಕಾಸಕ್ಕಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.
http://sunnaturalflash.buildingonabudget.com/letter.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ
http://www.sunnaturalflash.com/
....................................................................................................................................
ನಿಮಗೆ ನನ್ನ ಜತೆ ನೇರವಾಗಿ ಮಾತನಾಡಬೇಕೆಂದು ಅನಿಸಿದರೆ, ನಿಮ್ಮ ಅನುಭವಗಳನ್ನು ,ಅನಿಸಿಕೆಗಳನ್ನು ನೇರವಾಗಿ ನನ್ನ ಜತೆಗೆ ಹಂಚಿ ಕೊಳ್ಳಬೇಕೆನಿಸಿದರೆ ನಿಮ್ಮ ಹೆಸರು, ನಿಮ್ಮ ಈ ಮೇಲ್ ವಿಳಾಸ, ನಿಮ್ಮ ಮೊಬೇಲ್ ದೂರವಾಣಿ ಸಂಖ್ಯೆ ಜತೆಗೆ ನೀವು ಕರೆಯನ್ನು ಸ್ವೀಕರಿಸುವ ಸಮಯ ಬರೆದು ಕೆಳಗಿನ ಈ ಮೇಲ್ ವಿಳಾಸಕ್ಕೆ ಕಳುಹಿಸಿ . ನಾನು ನಿಮ್ಮ ಕೋರಿಕೆಯ ಇಪ್ಪತ್ತು ನಾಲ್ಕು ಗಂಟೆಯ ಯಿಂದ ನಲವತ್ತೆಂಟು ಗಂಟೆಯ ಒಳಗೆ ನಿಮ್ಮೊಂದಿಗೆ ಸಂಭಾಷಣೆಯಲ್ಲಿ ಇರುತ್ತೇನೆ.sunnaturalflash@gmail.com

ಶುಕ್ರವಾರ, ಜನವರಿ 7, 2011

ಪವಾಡಸದೃಶ ಪರಿವರ್ತನೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಜೂಲಿಯನ್ ನ ಬದಲಾದ ಹೊಸ ವ್ಯಕ್ತಿತ್ತ್ವವನ್ನು ಕಂಡು ನಾನು ದಂಗಾಗಿಹೋದೆ.

'ಕೆಲವೇ ವರ್ಷಗಳ ಹಿಂದೆ ಸುಸ್ತಾದ ಮುದುಕನಂತಿದ್ದ ಮನುಷ್ಯ ಈಗ ಉತ್ಸಾಹಭರಿತ ಯುವಕನಂತಾಗಲು ಹೇಗೆ ಸಾಧ್ಯ?' ಎಂದು ನನ್ನೊಳಗೆ ಅಂದುಕೊಂಡೆ. ಆತ ನವತಾರುನ್ಯ ನೀಡುವ ಯಾವುದೋ ಮಾಂತ್ರಿಕ ಔಷಧ ವನ್ನು ಕುಡಿದಿರಬಹುದೇ? ಇಂಥ ಆಶ್ಚರ್ಯಕರ ಪರಿವರ್ತನೆಯ ರಹಸ್ಯವೇನು ? ಎಂದು ಯೋಚಿಸಿದೆ. ಅಷ್ಟರಲ್ಲೇ ಆತ ಮಾತಾಡತೊಡಗಿದ. ವೃತ್ತಿಯ ಅತಿಸ್ಪರ್ಧೆಯ ಅಸಹನೀಯ ಒತ್ತಡಗಳು ದೈಹಿಕ, ಮಾನಸಿಕ ಆಧ್ಯಾತ್ಮಿಕ ಅಸ್ತಿತ್ವವನ್ನೇ ಹಾಳುಗೆಡಹಿದ್ದನ್ನು ಹೇಳಿದ. ಅವುಗಳಿಂದಾಗಿ ಆತನ ದೇಹ ಬಸವಳಿದಿತ್ತು. ಮನಸ್ಸು ಭಗ್ನವಾಗಿತ್ತು. ಆಗಿದ್ದ ಹೃದಯಾಘಾತ ಆತನ ಆಳದಲ್ಲಿದ್ದ ಗಂಭೀರ ಸಮಸ್ಯೆಯ ಒಂದು ಲಕ್ಷಣವಾಗಿತ್ತಷ್ಟೇ. ಅಂತರಾಷ್ಟ್ರೀಯ ಮಟ್ಟದ ಕ್ರಿಮಿನಲ್ ಲಾಯರ್ ಎಂಬ ಪ್ರಸಿದ್ಧಿ ಪಡೆಯಲು ಆತ ಪಟ್ಟ ಅಪಾರ ಶ್ರಮ, ಅಸಹನೀಯ ಒತ್ತಡಗಳು ಅವನ ಅಮೂಲ್ಯ ಅಂತ ಶ್ಯಕ್ತಿಯನ್ನೇ ಕೆಡವಿಬಿಟ್ಟಿದ್ದವು . ಹೃದಯಾಘಾತದ ನಂತರ ಡಾಕ್ಟರು "ಒಂದೋ ವೃತ್ತಿಯನ್ನು ಬಿಡಬೇಕು ಅಥವಾ ಪ್ರಾಣ ಬಿಡಬೇಕು "ಎನ್ನುವ ಸವಾಲನ್ನು ಎಸೆದಾಗ ಜೂಲಿಯನ್ ತನ್ನಲ್ಲಿ ತಾರುಣ್ಯಾದಲ್ಲಿದ್ದು ಕ್ರಮೇಣ ಕುಂದಿಹೊಗಿದ್ದ ಅಂತಶ್ಯಕ್ತಿಯನ್ನು ಪುನ; ಜಾಗೃತಗೊಳಿಸಲು ಇದೊಂದು ಸುವರ್ಣ ಅವಕಾಶವೆಂದು ಭಾವಿಸಿದ್ದ.

ಜೂಲಿಯನ್ ಎಲ್ಲವನ್ನೂ ನನಗೆ ವಿವರವಾಗಿ ಹೇಳತೊಡಗಿದ. ಪ್ರಾಚೀನ ಸಂಸ್ಕೃತಿಗೆ ಹೆಸರಾದ ಭಾರತದ ಬಗ್ಗೆ ಅವನಲ್ಲಿದ್ದ ಅದಮ್ಯ ಆಕರ್ಷಣೆ , ಅಲ್ಲಿಗೆ ಹೋಗಲು ಸಂಕಲ್ಪಿಸಿದ್ದು, ತನ್ನ ಎಲ್ಲ ಆಸ್ತಿ ಪಾಸ್ತಿಗಳನ್ನು ಮಾರಾಟಮಾಡಿದ್ದು. ಇತ್ಯಾದಿ. "ಭಾರತದ ಮೂಲೆಗಳಲ್ಲಿ ಸಂಚರಿಸಿದೆ . ಒಮ್ಮೊಮ್ಮೆ ಕಾಲ್ನಡಿಗೆಯಲ್ಲಿ , ಒಮ್ಮೊಮ್ಮೆ ರೈಲಿನಲ್ಲಿ , ನನ್ನ ಪಯಣ ಸಾಗಿತ್ತು. ಭಾರತೀಯರ ಸಂಪ್ರದಾಯಗಳನ್ನು ಕಲಿಯುತ್ತಾ , ಅವರ ಮುಗ್ಧ ಮಾನವ ಪ್ರೇಮ, ಸರಳತೆ, ನವೀನ ಜೀವನ ದೃಷ್ಟಿಕೋನಗಳನ್ನು ಮೆಚ್ಚಿಕೊಳ್ಳುತ್ತಾ , ಕಾಲಾತೀತ ದೃಶ್ಯಗಳನ್ನು ವೀಕ್ಷಿಸುತ್ತಾ ನನ್ನ ಯಾತ್ರೆ ಮುಂದುವರೆದಿತ್ತು . ಅಲ್ಲಿ ಬಡವರೂ ತಮ್ಮ ಮನೆ, ಮನೆಗಳನ್ನು ಈ ವಿದೇಶೀ ಯಾತ್ರಿಕನಿಗಾಗಿ ತೆರೆದಿದ್ದರು. ಹೀಗೆ ಈ ರಮ್ಯ ವಾತಾವರಣದಲ್ಲಿ ದಿನಗಳುರುಳಿದವು. ವಾರಗಳೂ ,ತಿಂಗಳುಗಳೂ ಕಳೆದವು. ಕ್ರಮೇಣ ನನ್ನಲ್ಲಿ ಜೀವಂತಿಕೆ ಮೊಳೆಯತೊಡಗಿತು - ಆಗ ತಾನೇ ಹುಟ್ಟಿದ್ದ ಮಗುವಿನಂತೆ , ಸ್ವಾಭಾವಿಕ ಕುತೂಹಲ ಸೃಜನಶೀಲತೆಯ ಕಿಡಿ, ಜೀವನೋತ್ಸಾಹಗಳು ಮರಳಿ ಬರತೊಡಗಿದವು . ನನ್ನೊಳಗೆ ಶಾಂತಿ , ಆನಂದದ ಅನುಭವ ಆಗತೊಡಗಿತು. ನಾನು ಪುನ; ನಗಲಾರಂಭಿಸಿದೆ."

ಭಾರತದ ರಮ್ಯ ಭೂಮಿಯಲ್ಲಿ ಪ್ರತಿಕ್ಷಣವನ್ನೂ ಅನುಭವಿಸುತ್ತಿದ್ದರೂ, ಈ ಯಾತ್ರೆ ಕೆಲಸದಿಂದ ಸುಸ್ತಾಗಿ ವಿಶ್ರಾಂತಿ ಬಯಸುವ ವ್ಯಕ್ತಿಯ ಮಾಮೂಲಿ ಪ್ರವಾಸವಾಗಿರಲಿಲ್ಲ. ಜೂಲಿಯನ್ ಹೇಳುವಂತೆ ಅದೊಂದು ಅಂತರಾತ್ಮದ ಆಧ್ಯಾತ್ಮಿಕಯಾತ್ರೆಯಾಗಿತ್ತು . ಕಾಲ ಮಿಂಚಿ ಹೋಗುವ ಮೊದಲೇ ತನ್ನ ನಿಜ ಸ್ವರೂಪವೇನು , ತನ್ನ ಜೀವನದ ಅರ್ಥ-ಉದ್ದೇಶಗಳೇನು ಎನ್ನುವುದನ್ನು ಕಂಡುಕೊಳ್ಳುವುದು ಅವನ ನಿರ್ಧಾರವಾಗಿತ್ತು. ಅದಕ್ಕಾಗಿ ಧನ್ಯತೆಯನ್ನೂ ಕಂಡುಕೊಳ್ಳುವುದು ಅವನ ನಿರ್ಧಾರವಾಗಿತ್ತು. ಅದಕ್ಕಾಗಿ ಧನ್ಯತೆಯನ್ನೂ ಪೂರ್ಣತೆಯನ್ನೂ , ಸಾಕ್ಷಾತ್ಕಾರವನ್ನೂ ನೀಡುವ ಪ್ರಾಚೀನ ಜ್ಞಾನಭಂಡಾರ ದೊಂದಿಗೆ ಸಂಬಂಧ ಜೋಡಿಸಿಕೊಳ್ಳುವುದೂ ಅತಿ ಮುಖ್ಯವಾಗಿತ್ತು.

ಆತ ಹೇಳಿದ್ದ " ಜಾನ್ , ನಾನು ತೀರ ತತ್ವಜ್ಞಾನಿಯ ಭಾಷೆಯಲ್ಲಿ ಮಾತಾಡಬಯಸುತ್ತಿಲ್ಲ. ಆದರೂ ಹೇಳುತ್ತೇನೆ . ಅದೊಂದು ಅಂತರಾತ್ಮದ ಕರೆಯಾಗಿತ್ತು. ನಾನು ಕಳೆದುಕೊಂಡಿದ್ದ ಅಂತ;ಶಕ್ತಿಯ ಕಿಡಿಯನ್ನು ಪುನ; ಉದ್ದೀಶಿಸುವಂತೆ ಮಾಡಲು ಅವಶ್ಯವಾಗಿದ್ದ ಆಧ್ಯಾತ್ಮಿಕಯಾತ್ರೆ ಕೈ ಕೊಳ್ಳಬೇಕೆಂಬ ಪ್ರೇರಣೆಯಾಗಿತ್ತು. ಆ ಯಾತ್ರೆ ನನ್ನ ಪಾಲಿಗೆ ಒಂದು ಅಧ್ಬುತ ಬಿಡುಗಡೆಯ ಅನುಭವವಾಗಿತ್ತು."

ಯಾತ್ರೆ ಸಾಗಿದಂತೆ ಆತ ಅನೇಕ ಸಾಧು-ಸಂತರನ್ನೂ , ಯೋಗಿಗಳನ್ನೂ , ಸನ್ಯಾಸಿಗಳನ್ನೂ ನೋಡಿದ. ಅವರಲ್ಲಿ ಕೆಲವರು ನೂರು ವರ್ಷ ದಾಟಿದ್ದರೂ, ಯೌವನದ ಕಾಂತಿ, ಚೈತನ್ಯಗಳನ್ನು ಉಳಿಸಿಕೊಂಡಿದ್ದರು . ಅವರೆಲ್ಲ ಯೋಗಸಾಧನೆಯಿಂದ ಮನೋನಿಗ್ರಹವನ್ನೂ , ಅಧ್ಯಾತ್ಮಿಕ ಜಾಗೃತಿಯನ್ನೂ ಸಾಧಿಸಿಕೊಂಡಿದ್ದರು . ನೋಡಿದಷ್ಟೂ ಅವರಲ್ಲಿ ಅವನ ಆಸಕ್ತಿ ಬೆಳೆಯಿತು. ಮನುಷ್ಯ ಸ್ವಭಾವದ ಈ ಅದ್ಭುತ ಪವಾಡಗಳ ಹಿಂದಿನ ರಹಸ್ಯಗಳನ್ನು ತಿಳಿದುಕೊಳ್ಳಬೇಕು . ತನ್ನ ಜೀವನದರ್ಶನಕ್ಕೆ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಬಯಕೆ ತೀವ್ರವಾಯಿತು.

ಯಾತ್ರೆಯ ಮೊದಲ ಹಂತದಲ್ಲಿ ಜೂಲಿಯನ್ ಪ್ರಸಿದ್ಧರೂ , ಗೌರವಾನ್ವಿತರೂ ಆಗಿದ್ದ ಸಾಧು ಸಂತರ ಭೇಟಿಯಾಗಿದ್ದ . ಅವರೆಲ್ಲರೂ ತೆರೆದ ಹೃದಯದಿಂದ ಅವನನ್ನು ಸ್ವಾಗತಿಸಿದ್ದರು. ತಾವು ಜೀವನವಿಡೀ ತಪಸ್ಸು ಮಾಡಿ ಪಡೆದುಕೊಂಡ ಜ್ಞಾನ ರತ್ನಗಳನ್ನು ಹಂಚಿಕೊಂಡಿದ್ದರು. ಇದರೊಂದಿಗೆ, ಆತ ಭಾರತದ ಉದ್ದಗಲಕ್ಕೂ ಹರಡಿ ಇದ್ದ ನೂರಾರು ಸುಂದರ ದೇವಾಲಯಗಳನ್ನು ಸಂದರ್ಶಿಸಿದ್ದ ಅವುಗಳ ಪವಿತ್ರ ಸಾನ್ನಿಧ್ಯ , ಪ್ರಶಾಂತ ವಾತಾವರಣ ಅವನ ಮನಸ್ಸನ್ನು ಸೂರೆಗೊಂಡಿತ್ತು . ಯುಗಯುಗಗಳ ಆಧ್ಯಾತ್ಮಿಕ ಜ್ಞಾನಕ್ಕೆ ಮಹಾದ್ವಾರಗಳಿದ್ದಂತೆ ಇವು ಕಾಣಿಸಿದ್ದವು.

"ಇದೊಂದು ವಿಚಿತ್ರ ಜಾನ್ . ನಾನೊಬ್ಬ ದುಡಿದು ಸುಸ್ತಾಗಿದ್ದ ಹಿರಿಯ ಲಾಯರ್, ರೇಸ್ ಕುದುರೆಯಿಂದ ಹಿಡಿದು ರೋಲೆಕ್ಸ್ ವಾಚಿನವರೆಗೆ ಎಲ್ಲ ಸೊತ್ತುಗಳನ್ನೂ ಮಾರಾಟಮಾಡಿ , ಉಳಿದದ್ದನ್ನು ಗಂಟುಕಟ್ಟಿಕೊಂಡು ಪೂರ್ವದ ಈ ಸುದೀರ್ಘ ಪರಂಪರೆಯ ಯಾತ್ರೆಗೆ ಹೊರಟಿದ್ದೆ "

"ಬಿಟ್ಟು ಹೋಗುವಾಗ ತುಂಬಾ ಸಂಕಟವಾಯಿತೆ?" ನಾನು ಕೇಳಿದೆ.

"ಇಲ್ಲ . ನಿಜ ಹೇಳಬೇಕೆಂದರೆ ಅದು ಅತ್ಯಂತ ಸುಲಭದ ಕೆಲಸವಾಗಿತ್ತು. ಆ ಹೊತ್ತಿಗೆ ವೃತ್ತಿಯನ್ನೂ , ಸಂಪತ್ತನ್ನು ತ್ಯಜಿಸುವುದು ನನಗೆ ಸ್ವಾಭಾವಿಕ ವೆನಿಸಿಬಿಟ್ಟಿತ್ತು. ಆಲ್ಬರ್ಟ್ ಕಾಮು ಹೇಳುತ್ತಾನಲ್ಲ ;“Real generosity towards future lies in giving all to the present” ನನ್ನಲ್ಲಿ ಆಗ ಇದ್ದ ಭಾವನೆ ಅದೇ . ನಾನು ಬದಲಾಗಬೇಕೆಂದು ನಿರ್ಧರಿಸಿದ್ದೆ . ಅದಕ್ಕಾಗಿ ನನ್ನ ಹೃದಯದ ಮಾತನ್ನು ಕೇಳಿದೆ. ಅದನ್ನು ನಾಟಕೀಯವಾಗಿ ಮಾಡಲು ನಿರ್ಧರಿಸಿದೆ." ಗತಕಾಲದ ಆ ದೊಡ್ಡ ಹೊರೆಯ ಭಾರವನ್ನಿಳಿಸಿದಾಕ್ಷಣ ಬದುಕು ಸರಳವಾಯಿತು. ಹಗುರವಾಯಿತು. ಬದುಕಿನ ಬಾರೀ ಸುಖಭೋಗಗಳನ್ನು ಬೆನ್ನಟ್ಟುವುದನ್ನು ಕೈಬಿಟ್ಟ ಬಳಿಕ ಚಿಕ್ಕ ಪುಟ್ಟ ಸಹಜ ಸುಂದರ ವಸ್ತುಗಳನ್ನು ಆನಂದಿಸತೊಡಗಿದೆ. ಬೆಳದಿಂಗಳ ರಾತ್ರಿಗಳು, ಆಗಸದಲ್ಲಿ ಮಿನುಗುವ ತಾರೆಗಳು , ಮುಂಜಾನೆಯ ಹೊಂಬಿಸಿಲು ಮುಂತಾದವು ನನಗೆ ಖುಷಿನೀಡತೊಡಗಿದವು . ಭಾರತದ ವಾತಾವರಣ ಅದೆಷ್ಟು ಬೌದ್ಧಿಕವಾಗಿ ಸೂರ್ತಿದಾಯಕವಾಗಿದೆಯೆಂದರೆ , ನಾನು ಬಿಟ್ಟು ಹೋದುದರ ಬಗ್ಗೆ ಒಂದು ಕ್ಷಣವೂ ಯೋಚಿಸಲಿಲ್ಲ ".

ವಿದ್ವಾಂಸರೂ , ಜ್ಞಾನಿಗಳೂ ಆಗಿದ್ದ ಸಾಧು ಸಂತರ ಮೊದಲ ಭೇಟಿಗಳಿಂದ ಮನಸ್ಸಿನ ಮೇಲೆ ನಿಗೂಢ ಪ್ರಭಾವ ಉಂಟಾದರೂ , ನಾನು ಯಾವುದರ ಹುಡುಕಾಟ ನಡೆಸುತ್ತಿದ್ದೇನೋ ಅದು ದೊರೆತಿರಲಿಲ್ಲ. ಜೀವನದ ಸ್ವರೂಪವನ್ನು ಅಮೂಲಾಗ್ರ ಪರಿವರ್ತನೆಗೆ ಈಡುಮಾಡುವ ತಾತ್ವಿಕತೆಯನ್ನಾಗಲೀ , ಅದರ ಅನುಷ್ಠಾನ ವಿಧಾನಗಳಾಗಲೀ ಆರಂಭದ ದಿನಗಳಲ್ಲಿ ನನ್ನ ಕೈವಶವಾಗಲಿಲ್ಲ . ಸುಮಾರು ಏಳು ತಿಂಗಳ ನಂತರ ನಿಜವಾದ ಪ್ರಥಮ ಸೋಪಾನ ಗೋಚರಿಸಿತು.

ಅದು ಸಂಭವಿಸಿದ್ದು ಹಿಮಾಲಯದ ತಪ್ಪಲಲ್ಲಿ ತಣ್ಣಗೆ ಮಲಗಿದ್ದ ಕಾಶ್ಮೀರದಲ್ಲಿ ; ಯೋಗಿ ಕೃಷ್ಣನ್ ಎಂಬ ಸಾಧುವಿನ ಭೇಟಿಯಲ್ಲಿ, ತೆಳ್ಳಗಿನ ಶರೀರದ, ಬೋಳುತಲೆಯ ಆ ಸಾಧು "ಹಿಂದಿನ ಅವತಾರದಲ್ಲಿ ನಾನೂ ಸಹ ಒಬ್ಬ ಲಾಯರಾಗಿದ್ದೆ " ಎಂದು ನಗುತ್ತ ಹೇಳಿದ್ದ. ದಿಲ್ಲಿಯ ಒತ್ತಡ ಭರಿತ ಜೀವನದಿಂದ ಬೇಸರಗೊಂಡು ಅವನೂ ಎಲ್ಲ ಸಂಪತ್ತನ್ನೂ ತ್ಯಜಿಸಿ , ಸರಳ ಸಾಧು ಜೀವನದ ಕಡೆ ಹೊರಳಿದ್ದನಂತೆ. ಸಮೀಪದ ಹಳ್ಳಿಯೊಂದರ ಗುಡಿಯಲ್ಲಿ ಅರ್ಚಕನಾಗಿ ಸಾಧನೆ ಮಾಡುತ್ತಾ ವಿಶ್ವಾತ್ಮಕ ಹಿನ್ನೆಲೆಯಲ್ಲಿ ಆತ್ಮಜ್ಞಾನವನ್ನು ಪಡೆದುಕೊಂಡಿದ್ದ.

"ಬಾಂಬರ್ ವಿಮಾನದ ದೀರ್ಘ ಅಭ್ಯಾಸದಂತೆ ಉದ್ವೆಗಭರಿತವಾಗಿದ್ದ ನನ್ನ ಬದುಕು ನನಗೆ ಬೇಸರ ಬರಿಸಿತ್ತು. ಅನ್ಯರ ಸೇವೆಮಾಡುತ್ತಾ , ಈ ಪ್ರಪಂಚವನ್ನು ಸ್ವಲ್ಪವಾದರೂ ಸುಧಾರಿಸುವುದೇ ನನ್ನ ಜೀವನದ ಉದ್ದೆಶವಾಗಬೇಕೆಂದು ನಾನು ಮನಗಂಡಿದ್ದೆ. ನಾನೀಗ ಅನ್ಯರಿಗೆ ನೀಡುವುದಕ್ಕಾಗಿಯೇ ಬದುಕಿದ್ದೇನೆ . ನಾನು ಈ ಗುಡಿಯಲ್ಲಿಯೇ ಹಗಲು ರಾತ್ರಿ ಕಳೆಯುತ್ತೇನೆ. ವಿರಕ್ತ ಜೀವನ ನಡೆಸುತ್ತಿದ್ದೇನೆ. ಇಲ್ಲಿಗೆ ಬರುವ ಜಿಜ್ಞಾಸು ಗಳೊಡನೆ ನಾನು ಪಡೆದಿರುವ ಜ್ಞಾನವನ್ನು ಹಂಚಿಕೊಳ್ಳುತ್ತೇನೆ. ದೀನರಿಗೆ ನನ್ನಿಂದಾದ ಸಹಾಯ ಮಾಡುತ್ತೇನೆ. ನಾನಿಲ್ಲಿ ಕೇವಲ ಪೂಜಾರಿಯಲ್ಲ. ನಾನು ನನ್ನ ಸ್ವರೂಪವನ್ನು ಪಡೆದುಕೊಂಡವನಷ್ಟೇ ". ಎಂದು ಕೃಷ್ಣನ್ ಹೇಳಿದ್ದ.

ನಾನು ನನ್ನ ಕತೆಯನ್ನು ಅವನಿಗೆ ಹೇಳಿದೆ. ಸಂಪತ್ತಿನ ದಾಹ, ದುಡಿಮೆಯ ಗೀಳು , ಭೋಗ ವೈಭವಗಳ ಅದಮ್ಯ ಆಕಾಂಕ್ಷೆ -ಇವು ನನ್ನಲ್ಲಿ ಭುಗಿಲೆಬ್ಬಿಸಿದ್ದ ತಳಮಳ. ಅಂತರಂಗದ ಆಘಾತಗಳು ನನ್ನ ಜೀವನದ ಸಮತೋಲನವನ್ನೇ ಕೆಡಿಸಿ, ಜೀವಚೈತನ್ಯವನ್ನೇ ಕುಂದಿಸುತ್ತಿದ್ದ ದಾರುಣ ಸ್ಥಿತಿಯ ಬಗ್ಗೆ ಭಾವುಕವಾಗಿ ತೋಡಿಕೊಂಡೆ. ಅದಕ್ಕೆ ಕೃಷ್ಣನ್ ಹೀಗೆಂದಿದ್ದ. "ಗೆಳೆಯಾ, ನಾನು ಒಮ್ಮೆ ಇದೆ ದಾರಿಯಲ್ಲಿ ನಡೆದಿದ್ದೆ. ನೀನು ಅನುಭವಿಸಿದ ನೋವುಗಳನ್ನೂ , ನಾನು ಅನುಭವಿಸಿದ್ದೇನೆ . ಆದರೂ ಪ್ರತಿಯೊಂದು ಘಟನೆಗೂ ಒಂದು ಕಾರಣವಿರುತ್ತದೆ. ಪ್ರತಿ ಘಟನೆಯ ಹಿಂದೆಯೂ ಒಂದು ಉದ್ದೇಶವಿರುತ್ತದೆ. ಪ್ರತಿ ಸೋಲಿನಲ್ಲೂ ಒಂದು ಪಾಠ ವಿರುತ್ತದೆ. ಸೋಲು ವೈಯಕ್ತಿಕವಾಗಿರಲಿ , ವ್ರುತ್ತಿಯದಾಗಿರಲಿ, ಆಧ್ಯಾತ್ಮಿಕವಾಗಿರಲಿ , ವ್ಯಕ್ತಿತ್ವದ ವಿಕಾಸಕ್ಕೆ ಅವಶ್ಯ ಎಂಬುದು ನನ್ನ ಭಾವನೆ, ಆದರಿಂದ ನಾವು ಆಂತರಿಕವಾಗಿ ಬೆಳೆಯುತ್ತೇವೆ. ಆದರಿಂದ ಅನೇಕ ಮಾನಸಿಕ ಲಾಭಗಳಿವೆ. ಗತಕಾಲದ ಬಗ್ಗೆ ಪಶ್ಕಾತ್ತಾಪ ಬೇಡ. ಅದನ್ನು ಗುರುವೆಂದು ಸ್ವೀಕರಿಸು.

ಇದನ್ನು ಕೇಳಿದ ಮೇಲೆ ನನಗೆ ತುಂಬಾ ಸಮಾಧಾನವಾಯಿತು. ಯೋಗಿ ಕೃಷ್ಣನ್ ನಲ್ಲಿ ಬಹುಶ; ನಾನು ಹುಡುಕುತ್ತಿದ್ದ ಗುರು ದೊರಕಿದ್ದ. ತನ್ನಂತೆ ಹಿಂದೆ ಲಾಯರ್ ಆಗಿದ್ದು, ಆಧ್ಯಾತ್ಮಿಕ ಸಾಧನೆಯಿಂದ ಉತ್ತಮ ಜೀವನ ವಿಧಾನವನ್ನು ಪಡೆದುಕೊಂಡಿರುವ ವ್ಯಕ್ತಿಗಿಂತ ಒಳ್ಳೆಯ ಗುರು ಬೇರೆ ಯಾರು ? ಸಮತೋಲದ , ಆನಂದದ ಆಹ್ಲಾದದ ಜೀವನಶೈಲಿಯ ರಹಸ್ಯಗಳನ್ನು ಇವನೇ ಕಲಿಸಬಲ್ಲ ಎಂದೆನಿಸಿತು .

ಆತ ಹೇಳಿದ. "ನಿನಗೆ ಬೇಕಾಗಿರುವ ಸಹಾಯ ಮಾಡಲು ನನಗೆ ಹೆಮ್ಮೆಯೆನಿಸುತ್ತದೆ . ಆದರೆ ಒಂದು ಸಲಹ "

"ಹೇಳು "

"ನಾನು ಬಂದಾಗಿನಿಂದಲೂ ಹಿಮಾಲಯದ ಉನ್ನತ ಪರ್ವತ ಗಳಲ್ಲಿರುವ ನಿಗೂಢ ಸಾಧುವರ್ಗದ ಬಗ್ಗೆ ಪಿಸುಮಾತುಗಳನ್ನು ಕೇಳುತ್ತಿದ್ದೇನೆ. ಈ ಸಾಧುಗಳು ಬದುಕಿನಲ್ಲಿ ಮಹಾನ್ ಪರಿವರ್ತನೆಯನ್ನು ಮಾಡುವ ಯಾವುದೋ ಒಂದು ವಿಧಾನವನ್ನು ಕಂಡು ಹಿಡಿದಿರುವರಂತೆ . ಪರಿವರ್ತನೆಯೆಂದರೆ ಕೇವಲ ಶಾರೀರಿಕವಾದುದಕ್ಕೆ ಸೀಮಿತವಲ್ಲ. ಶರೀರ, ಮನಸ್ಸು, ಆತ್ಮ ಈ ಮೂರನ್ನು ವಿಕತ್ರಗೊಳಿಸುವ ಸಾರ್ವಕಾಲಿಕ ಅನ್ವಯದ ಸಮಗ್ರ ಸೂತ್ರ ಹಾಗೂ ಸಾರ್ವಕಾಲಿಕ ತಂತ್ರಗಳ ಸಮುಚ್ಚಯ "

ನನ್ನಲ್ಲಿ ಕುತೂಹಲ ಮೂಡಿತು. ಅದೊಂದು ಪರಿಪೂರ್ಣ ವಿಧಾನವೆನಿಸಿತು.

"ಆ ಸಾಧುಗಳು ಇರುವ ಸ್ಥಳ ಯಾವುದು "?

"ಯಾರಿಗೂ ಸರಿಯಾಗಿ ತಿಳಿದಿಲ್ಲ. ನನಗೂ ಈಗ ವಯಸ್ಸಾಗಿರುವುದರಿಂದ ಹುಡುಕುತ್ತಾ ಹೋಗಲು ಸಾಧ್ಯವಿಲ್ಲ . ಆದರೂ ಒಂದು ಮಾತು ಹೇಳುತ್ತೇನೆ. ಅನೇಕರು ಅವರನ್ನು ಹುಡುಕಲು ಯತ್ನಿಸಿ ದುರಂತಕ್ಕೆ ಈಡಾಗಿದ್ದಾರೆ. ಹಿಮಾಲಯದ ಅತ್ತ್ಯುನ್ನತ ಸ್ತರಗಳು ತುಂಬಾ ಅಪಾಯಕಾರಿ. ಸಾಕಷ್ಟು ಅನುಭವವಿರುವ ಪರ್ವತರೋಹಿಗಳೂ ಅದರ ಅನಿರೀಕ್ಷಿತ ಅಪಾಯಗಳನ್ನು ಎದುರಿಸಲಾರರು. ನೀನು ಹುಡುಕುತ್ತಿರುವ
ಆರೋಗ್ಯ , ಆನಂದ ಹಾಗೂ ಸಾರ್ಥಕತೆಗಳನ್ನು ನೀಡುವ ಚೈತನ್ಯ ನನ್ನಲ್ಲಿಲ್ಲ . ಆದರೆ ಆ ಸಾಧುಗಳಲ್ಲಿದೆ."

ನಾನು ಸುಲಭವಾಗಿ ನನ್ನ ಛಲ ಬಿಡುವವನಲ್ಲ . ಯೋಗಿ ಕೃಷ್ಣನನ್ನು ನಾನು ಒತ್ತಾಯಿಸಿದೆ. "ನಿಜವಾಗಿಯೂ ನಿಮಗೆ ಆ ಸಾಧುಗಳಿರುವ ಜಾಗ ತಿಳಿದಿಲ್ಲವೇ ?"ಎಂದು ಕೇಳಿದೆ.

"ನನಗೆ ಗೊತ್ತಿರುವುದು ಇಷ್ಟೇ. ಅಲ್ಲಿನ ಜನ ಅವರನ್ನು ಶಿವನ ಸಾಧುಗಳೆಂದು ಕರೆಯುತ್ತಾರೆ. ಅವರ ಪುರಾಣಗಳ ಪ್ರಕಾರ "ಶಿವನ" ಎಂದರೆ "ಸಾಕ್ಷಾತ್ಕಾರದ ಓಯಸಿಸ್ "ಎಂದರ್ಥ. ಆ ಸಾಧುಗಳನ್ನು ದೈವಾಂಶ ಸಂಭೂತರೆಂದೆ ಭಾವಿಸುತ್ತಾರೆ. ಅವರು ಎಲ್ಲಿರುವರೆಂದು ನನಗೆ ತಿಳಿದಿದ್ದರೆ ಅದನ್ನು ನಿಮಗೆ ತಿಳಿಸುವುದು ನನ್ನ ಕರ್ತವ್ಯ . ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ. ನನಗೆ ಅದು ತಿಳಿದಿಲ್ಲ. ಬಹುಶ; ಯಾರಿಗೂ ತಿಳಿದಿಲ್ಲ ".

ಮುಂದಿನ ಮುಂಜಾನೆ ಪೂರ್ವದಿಗಂತದಲ್ಲಿ ಸೂರ್ಯ ವರ್ತಿಸುತ್ತಿದ್ದಂತೆ ನಾನು ಯಾರೂ ತಿಳಿಯದ "ಶಿವಸ್ಥಾನಕ್ಕೆ ನಡೆಯಲಾರಂಭಿಸಿದೆ . ಮೊದಲು ಸಹಾಯಕ್ಕೆ ಒಬ್ಬ ಶೆರ್ಪಾನನ್ನು ಜತೆಗೆ ಕರೆದುಕೊಂಡು ಹೋಗಬಯಸಿದ್ದೆ. ಆದರೆ ಅನಂತರ ಅದೇಕೋ ಬೇಡವೆನಿಸಿತು. ಈ ಮಹಾಯಾತ್ರೆಯನ್ನು ನಾನೊಬ್ಬನೇ ಏಕಾಕಿಯಾಗಿ ಕೈಕೊಳ್ಳಬೇಕೆನಿಸಿತು. ಬದುಕಿನಲ್ಲಿ ಮೊದಲ ಬಾರಿ ನಾನು ತರ್ಕಬುದ್ಧಿಯ ಬಂಧನವನ್ನು ತ್ಯಜಿಸಿ ಅಂತರಾತ್ಮದ ವಾಣಿಯಲ್ಲಿ ಶ್ರದ್ಧೆಯಿರಿಸಿದೆ. ನನಗೇನೋ ತೊಂದರೆಯಾಗದೆನ್ದೆನಿಸಿತು. ನಾನು ಹುಡುಕುತ್ತಿದ್ದುದು ನನಗೆ ಖಂಡಿತ ದೊರೆಯುವುದೆಂಬ ಭಾವನೆ ಹೇಗೋ ನನ್ನೊಳಗೆ ಮೂಡಿತ್ತು. ನಾನು ಚಲಬಿಡದೆ ಮೇಲೆರತೊಡಗಿದೆ.

ಆರಂಭದ ಕೆಲವು ದಿನಗಳಲ್ಲಿ ಎಲ್ಲ ಸುಲಭವಾಗಿತ್ತು. ಒಮ್ಮೊಮ್ಮೆ ಬೆಟ್ಟದ ತಪ್ಪಲಿನ ಹಳ್ಳಿಯಿಂದ ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದ ವಿರಳ ಪಥಿಕರೊಂದಿಗೆ ಸೇರಿನಡೆಯುವುದು . ಅಂಥವರಲ್ಲಿ ಕೆಲವರು ಯಾವುದೋ ಮರದ ತುಂಡನ್ನು ಹುಡುಕಿ ಒಯ್ಯುವವರು . ಇನ್ನು ಕೆಲವರು ಈ ಉನ್ನತ ಅಲೌಕಿಕ ತಾಣದಲ್ಲಿ ಶಾಂತಿಯ ಆಸರೆಯ ಅನ್ವೇಷಣೆ ಯಲ್ಲಿರುವವರು. ಕೆಲವೊಮ್ಮೆ ನಾನು ಬದುಕಿನಲ್ಲಿ ನಡೆದು ಬಂದ ದಾರಿಯನ್ನೂ , ಈಗ ನಡೆಯುತ್ತಿರುವ ದಾರಿಯನ್ನು ಕುರಿತು ಯೋಚಿಸುತ್ತಾ , ವಿಮರ್ಶಿಸುತ್ತಾ ಏಕಾಕಿಯಾಗಿ ನಡೆಯುತ್ತಿದ್ದೆ.

ಕೆಲವೇ ದಿನಗಳಲ್ಲಿ ನಾನು ಏರಿದ ಎತ್ತರದಿಂದ ನೋಡಿದಾಗ ಕೆಳಗಿದ್ದ ಹಳ್ಳಿಗಳ ನಿಸರ್ಗದ ಬೃಹತ್ ಕ್ಯಾನ್ವಾಸ್ನಲ್ಲಿ ಬಿಡಿಸಿದ ಸುಂದರ ಚಿಕ್ಕಿಗಳಂತೆ ಕಾಣಿಸಿದವು. ಹಿಮಾಚ್ಛಾದಿತ ಹಿಮಾಲಯ ಶಿಖರಗಳ ಸಾಲುಗಳ ಅಧ್ಬುತ ರಮ್ಯ ನೋಟ ಕೆಲಕಾಲ ಉಸಿರು ಕಟ್ಟಿಸಿದಂತಾಯಿತು . ಎದೆ ನಡುಗಿಸುವಂತಾಯಿತು . ಹಳೆಯ ಅಪ್ತಮಿತ್ರರು ತಮ್ಮ ಆತ್ಮೀಯ ಭಾವನೆಗಳನ್ನು ಹಂಚಿಕೊಳ್ಳುತ್ತಾ , ನಗೆಹನಿಗಳನ್ನು ಕೇಳಿ, ಕೇಳಿಸಿ ಖುಷಿಪಡುತ್ತಾ ದಿನಗಳೆದಂತೆ , ಆ ದಿವ್ಯವಾತಾವರಣದಲ್ಲಿ ನಾನು ಒಂದಾಗಿ ಹೋದೆ. ಉನ್ನತ ಪರ್ವತಗಳಲ್ಲಿ ಬೀಸುತ್ತಿದ್ದ ಗಾಳಿ ನನ್ನ ಮನಸ್ಸನ್ನು ಶುದ್ಧಗೊಳಿಸಿತು . ಚೈತನ್ಯಕ್ಕೆ ಶಕ್ತಿ ನೀಡಿತು. ಅನೇಕ ಬಾರಿ ಪ್ರಪಂಚ ಪರ್ಯಟನೆ ಮಾಡಿದ್ದ ನನಗೆ ಎಲ್ಲವನ್ನೂ ನೋಡಿಯಾಗಿದೆ ಎಂಬ ಭಾವನೆಯಿದ್ದಿತು. ಆದರೆ ಈಗ ಕಾಣುತ್ತಿರುವ ಅದ್ಭುತ ಸೌಂದರ್ಯ ವನ್ನು ಹಿಂದೆಂದೂ ನೋಡಿರಲಿಲ್ಲ. ಈ ಮಾಂತ್ರಿಕ ಕ್ಷಣಗಳಲ್ಲಿ ನನಗಾದ ಭವ್ಯದರ್ಶನ ಪ್ರಕೃತಿಯ ಅಲೌಕಿಕ ಸಂಗೀತಕ್ಕೆ ಅಮೂಲ್ಯ ಕಾಣಿಕೆಯಂತೆ ಇತ್ತು. ನಾನು ಆನಂದ, ಉತ್ಸಾಹಗಳಿಂದ ಹಾಯಾಗಿ ಮುಂದುವರಿದೆ. ಸಾಮಾನ್ಯ ಜನಜೀವನದಿಂದ ಎತ್ತರದಲ್ಲಿದ್ದ ಈ ಸ್ಥಳದಲ್ಲಿ ಸಾಮಾನ್ಯತೆಯ ಕೋಶವನ್ನು ಒಡೆದು ಅಸಾಮಾನ್ಯತೆಯ ಅನ್ವೇಷಣೆಯ ಕಡೆ ಜಿಗಿಯತೊಡಗಿದೆ.

ಈಗ ನನ್ನ ಮನಸ್ಸಿನಲ್ಲಿ ತುಡಿಯುತ್ತಿದ್ದ ವಿಚಾರವನ್ನು ಈಗಲೂ ಮರೆತಿಲ್ಲ. ಬದುಕೆಂದರೆ ಅಂತಿಮವಾಗಿ ಆಯ್ಕೆಗಳಿಗೆ ಸಂಭಂಧಿಸಿದ್ದು . ಅದೃಷ್ಟವು ನಾವು ಮಾಡುವ ಆಯ್ಕೆಗಳನ್ನು ಹೊಂದಿಕೊಂಡಿದೆ. ನಾನೀಗ ಸರಿಯಾದ ಆಯ್ಕೆಯನ್ನೇ ಮಾಡಿದ್ದೇನೆ ಎಂಬ ಭಾವನೆಯುಂಟಾಯಿತು. ನಾನಿನ್ನು ಹಿಂದಿನಂತಿರಲು ಸಾಧ್ಯವಿಲ್ಲ. ಅಧ್ಭುತವಾದ ಪವಾಡ ಸದ್ರುಶವಾದುದೇನೋ ನನ್ನ ಜೀವನದಲ್ಲಿ ಸಂಭವಿಸಲಿದೆ ಎಂಬ ಅಚ್ಚರಿಯ ಅರಿವು ಉಂಟಾಯಿತು.

ಇನ್ನೂ ಎತ್ತರದ ವಿರಳ ವಾತಾವರಣದಲ್ಲಿ ಸಾಗುತ್ತಿದ್ದಾಗ ಒಂದು ಬಗೆಯ ಆತಂಕದ ಭಾವನೆಯೂ ಮೂಡುತ್ತಿತ್ತು. ಆದರೆ ಅದು ಕೂಡ ಹಿಂದೆ ನಾನು ಕೋರ್ಟು ಕೇಸುಗಳನ್ನು ವಾದಿಸುತ್ತಿದ್ದಾಗ, ಮಾಧ್ಯಮಗಳು ನನ್ನನ್ನು ಬೆನ್ನಟ್ಟಿದಾಗ ಅನುಭವಿಸುಸುತ್ತಿದ್ದ ಆತಂಕದಂತೆಯೇ ಇತ್ತು. ನನ್ನ ಕೈಯಲ್ಲಿ ಯಾವುದೇ ನಕ್ಷೆಯಿರಲಿಲ್ಲ. ಆದರೂ ಒಂದು ತೆಳ್ಳಗಿನ ಕಾಲುದಾರಿ ಆ ಭಯಾನಕ ಪರ್ವತಗಳ ಮೈಯಲ್ಲೂ ಕಾಣುತ್ತಿತ್ತು. ನನ್ನೊಳಗೆ ಇದ್ದ ಅದೃಶ್ಯ ದಿಕ್ಸೂಚಿಯಂತೆ ಅದು ನನ್ನನ್ನು ಮುಂದೆ ತಳ್ಳುವಂತಿತ್ತು . ಆ ಹೊತ್ತಿನಲ್ಲಿ ಬಹುಶ; ನಾನು ಮನಸ್ಸು ಮಾಡಿದ್ದರೂ ಮೇಲೇರುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ.

ಹೀಗೆ ಶಿವನ ಸ್ಥಾನವನ್ನು ಸೇರಬೇಕೆಂದು ಮನದಲ್ಲೇ ಪ್ರಾರ್ಥಿಸುತ್ತಾ ಮುಂದುವರಿಯುತಿದ್ದಂತೆ ನನ್ನ ಮನಸ್ಸಿನಲ್ಲಿ ಆಗಾಗ ನನ್ನ ಜೀವನದ ಹಳೆಯ ನೆನಪುಗಳು ಮೂಡುತ್ತಿದ್ದವು . ಈಗ ನಾನೇನೋ ಮಾನಸಿಕ ಒತ್ತಡ, ಉದ್ವೇಗಗಳಿಂದ ಮುಕ್ತನಾಗಿರುವೆನಾದರೂ , ಹಿಂದೆ ಒಗ್ಗಿಕೊಂಡಿದ್ದ ವೃತ್ತಿಜೀವನದ ಬೌದ್ಧಿಕ ಸವಾಲುಗಳನ್ನೆದುರಿಸುವ ಅವಕಾಶವಿಲ್ಲದೆ ಕಳೆಯಲು ಮುಂದೆ ಸಾಧ್ಯವಾದೀತೆ ಎಂದೂ ಒಮ್ಮೊಮ್ಮೆ ಅನ್ನಿಸುತ್ತಿತ್ತು. ಆ ಗಗನಚುಂಬಿ ಸೌಧದಲ್ಲಿದ್ದ ನನ್ನ ಸುಂದರ ಆಫೀಸಿನ ನೆನಪಾಗುತ್ತಿತ್ತು. ಬೆಲೆಬಾಳುವ ಪೀತೊಪಕರಣ ಗಳಿಂದ ಅಲಂಕೃತವಾಗಿದ್ದ ಆ ಭವ್ಯ ಆಫೀಸನ್ನು ಪುಡಿಕಾಸಿಗೆ ಮಾರಾಟ ಮಾಡಿದ್ದೆ. ವಿಲಾಸಿ ಹೊಟೇಲುಗಳಲ್ಲಿ ಸೇರುತ್ತಾ ಸರಸ ಸಲ್ಲಾಪ ಗೈಯುತ್ತಿದ್ದ ಗೆಳೆಯ ಗೆಳತಿಯರೂ ನೆನಪಾಗುತ್ತಿದ್ದರು . ನನ್ನ ಮೆಚ್ಚಿನ ಫೆರಾರಿ ಕಾರಿನ ಎಂಜಿನ್ ಸ್ಟಾರ್ಟ್ ಮಾಡಿ ಅದರ ಘರ್ಜನೆ ಯೊಡನೆ ಜಿಗಿದಾಗ ಉಂಟಾಗುತ್ತಿದ್ದ ಹುಮ್ಮಸ್ಸೂ ಒಮ್ಮೊಮ್ಮೆ ಮನಸ್ಸಿನಲ್ಲಿ ಮರುಕಳಿಸುತ್ತಿತ್ತು.

ಅಷ್ಟರಲ್ಲಿ ನನ್ನ ಹಳೆಯ ನೆನಪುಗಳ ಮೆರವಣಿಗೆ ಹಠತ್ತನೆ ನಿಲ್ಲುವಂತ ಘಟನೆ ನಡೆಯಿತು. ಸ್ವಲ್ಪದೂರದಲ್ಲಿ ಒಂದು ವಿಚಿತ್ರ ಮಾನವಾಕೃತಿ ಗೋಚರಿಸಿತು . ಆತ ಕೆಂಪು ಬಣ್ಣದ ಉದ್ದನೆಯ ನಿಲುವಂಗಿ ಧರಿಸಿದ್ದ. ತಲೆಯ ಮೇಲೆ ನೀಲಿ ಟೊಪ್ಪಿಯೂ ಇತ್ತು. ಇಂಥ ನಿರ್ಜನ , ಭಯಾನಕ ಪ್ರದೇಶದಲ್ಲಿ ಇವನೆಲ್ಲಿಂದ ಬಂದ ಎಂದು ನನಗೆ ಆಶ್ಚರ್ಯವಾಯಿತು . ನನ್ನ ಗುರಿ ಎಲ್ಲೆದೆಯೆಂದು ನನಗೆ ತಿಳಿಯದಿದ್ದುದ್ದರಿಂದ ಈ ವ್ಯಕ್ತಿಯಿಂದಲಾದರೂ ಸಹಾಯವಾದೀತೇ ಎಂಬ ಭಾವನೆಯಿಂದ ನಾನು ಅವನಿಗೆ ಕೇಳಿಸುವಂತೆ ಕೂಗುಹಾಕಿದೆ.
ಆದರೆ ಆ ನಿಗೂಢವ್ಯಕ್ತಿ ನನ್ನ ಕಡೆ ಹಿಂದಿರುಗಿ ನೋಡಲೂ ಇಲ್ಲ. ನನ್ನ ಕರೆಗೆ ಸ್ಪಂದಿಸಲೂ ಇಲ್ಲ . ತನ್ನ ದಾರಿಯಲ್ಲಿ ಮತ್ತಷ್ಟು ಜೋರಾಗಿ ನಡೆಯತೊಡಗಿದ. ನಾನು ನೋಡುತ್ತಿದ್ದಂತೆಯೇ ಆತ ಓಡಲಾರಂಭಿಸಿದ, ಆತ ಧರಿಸಿದ್ದ ಸಡಿಲಾದ ಕೆಂಪು ನಿಲುವಂಗಿ ಬಾವುಟದಂತೆ ಹಿಂದುಗಡೆ ಹಾರಾಡುತ್ತಿತ್ತು.

"ಸ್ವಾಮೀ , ಶಿವನ ಸ್ಥಾನ ತಲುಪಲು ನನಗೆ ಸಹಾಯ ಮಾಡುತ್ತೀರಾ "

ನಾನು ಕಳೆದ ಏಳು ದಿನಗಳಿಂದ ಅನ್ನ ನೀರಿಲ್ಲದೆ ನಡೆಯುತ್ತಿದ್ದೇನೆ "ಎಂದು ನಾನು ಪುನ; ಕೂಗಿಕೊಂಡೆ .

ಆಶ್ಚರ್ಯ ! ಆ ವ್ಯಕ್ತಿ ತಕ್ಷಣ ನಿಂತ. ನಾನು ನಿಧಾನವಾಗಿ ಆತನ ಬಳಿ ಸಾಗಿದೆ. ಆತ ಮೌನವಾಗಿ ಸ್ಥಿರವಾಗಿ ನಿಂತಿದ್ದ . ಆತನ ತಲೆಯಾಗಲಿ , ಕೈಕಾಲುಗಳಾಗಲೀ ಸ್ವಲ್ಪವೂ ಚಲಿಸಲಿಲ್ಲ. ಟೋಪಿಯ ಮುಂಭಾಗ ಬಹುತೇಕ ಮುಚ್ಚಿದುದ್ದರಿಂದ ಅವನ ಮುಖವನ್ನು ಸರಿಯಾಗಿ ನೋಡಲಾಗಲಿಲ್ಲ. ಆದರೆ ಆತನ ಕೈಯಲ್ಲಿ ಒಂದು ಬುಟ್ಟಿಯಿತ್ತು. ಅದರಲ್ಲಿ ನಾನು ಹಿಂದೆಂದೂ ಕಂಡಿರದ ಅತ್ಯಂತ ಸುಂದರ ಹೂವುಗಳು ತುಂಬಿದ್ದವು. ನನ್ನನ್ನು ಕಂಡ ಕೂಡಲೇ ಆತ ಹೂಬುಟ್ಟಿ ಯನ್ನು ಅವುಚಿಕೊಂಡ . ಅದು ಅವನಿಗೆ ಅದರ ಬಗೆಗಿನ ಮಮತೆಯನ್ನೂ , ನನ್ನಂಥ ಅಪರಿಚಿತ ವಿದೇಶಿಯ ಬಗೆಗಿನ ಸಂದೆಹವನ್ನೂ ಸೂಸುತ್ತಿತ್ತು.

ನಾನೀಗ ಆತನ ಕಡೆ ಕುತೂಹಲದಿಂದ ನೋಡಿದೆ. ಅಂತ ಮನುಷ್ಯನನ್ನು ನಾನು ಈವರೆಗೆ ನೋಡಿರಲಿಲ್ಲ . ಆತನಿಗೆ ಸುಮಾರು ನನ್ನಷ್ಟೇ ವಯಸ್ಸಾಗಿದ್ದಿರಬಹುದು . ಆದರೆ ಅವನ ಮುಖವನ್ನು ನೋಡಿದಾಗ ನಾನೆಷ್ಟು ಮಂತ್ರಮುಗ್ಧನಾದೆನೆಂದರೆ ಆನಂತಕಾಲದವರೆಗೂ ನೋಡುತ್ತಲೇ ಇರೋಣ ಎಂಬ ಭಾವನೆ ಉಂಟಾಯಿತು. ಆತನ ಕಣ್ಣಿನಲ್ಲಿದ್ದ ವಿಲಕ್ಷಣ ತೇಜಸ್ಸು ಎಷ್ಟು ಪ್ರಖರವಾಗಿತ್ತೆಂದರೆ ನಾನು ನನ್ನ ಕಣ್ಣನ್ನು ಬೇರೆಡೆ ತಿರುಗಿಸಬೇಕಾಯಿತು. ಆತನ ಚರ್ಮ ನಯವಾಗಿತ್ತು. ಶರೀರ ಬಲಿಷ್ಟವಾಗಿತ್ತು. ಆತನ ಕೈಗಳನ್ನು ನೋಡುವಾಗ ಸಾಕಷ್ಟು ವಯಸ್ಸಾಗಿರುವಂತೆ ಕಂಡರೂ, ಆತನ ವ್ಯಕ್ತಿತ್ವ ಬೀರುತ್ತಿದ್ದ ತಾರುಣ್ಯದ ತೇಜಸ್ಸು , ವೀರ್ಯವನ್ತಿಕೆಯ ವರ್ಚಸ್ಸು ಎಷ್ಟು ಪ್ರಖರವಾಗಿತ್ತೆಂದರೆ ನಾನು ಇಂದ್ರಜಾಲಕನ ಚಮತ್ಕಾರಗಳನ್ನು ಮೊದಲಬಾರಿಗೆ ಕಂಡ ಬಾಲಕನಂತೆ ಮಂತ್ರ ಮುಗ್ಧನಾಗಿದ್ದೆ.

ಓಹೋ . ಇವನೇ ಶಿವನ ಸ್ಥಾನದ ಓರ್ವ ಮಹಾಯೋಗಿಯಾಗಿರಬೇಕು ಎಂದು ಸಂತೋಷ ತಡೆಯಲಾರದೆ ನನ್ನೊಳಗೆ ಹೇಳಿಕೊಂಡೆ.

"ನನ್ನ ಹೆಸರು ಜೂಲಿಯನ್ ಮ್ಯಾನ್-ಟಾಲ್ . ಶಿವನ ಸ್ಥಾನದ ಯೋಗಿಗಳನ್ನು ಕಾಣಲು ಬಂದಿದ್ದೇನೆ. ಅವರು ಎಲ್ಲಿ ಸಿಗುವರೆಂದು ತಿಳಿಸುವಿರಾ ?" ನಾನೆಂದೆ.

ಅಪರಿಚಿತ ವಿದೇಶಿಯನನ್ನು ಆತ ಯೋಚನಭರಿತ ದೃಷ್ಟಿಯಿಂದ ನೋಡಿದ. ಅವನ ಗಾಂಭೀರ್ಯ ಪೂರ್ಣ ನಿಲುವು, ಪ್ರಶಾಂತ ಮುಖಭಾವಗಳು ದೇವತೆಯ ಅಲೌಕಿಕತೆಯನ್ನು ಬಿಂಬಿಸುತ್ತಿದ್ದವು. ಆತ ಅತ್ಯಂತ ಮೃದುವಾದ ದನಿಯಲ್ಲಿ ಕೇಳಿದ;

"ಗೆಳೆಯ ನಿನಗೇಕೆ ಸಾಧುಗಳ ಸಂಗ ?"

ನಾನು ಈವರೆಗೂ ಹುಡುಕುತ್ತಿದ್ದ ವ್ಯಕ್ತಿ ಇವನೇ ಎಂದು ನನ್ನ ಹೃದಯ ಕೂಗಿ ಹೇಳಿತು. ನಾನು ಅವನಲ್ಲಿ ನನ್ನ ಬದುಕಿನ ಕಥೆಯನ್ನು ತೋಡಿಕೊಂಡೆ. ನನ್ನ ವೃತ್ತಿ ಜೀವನದ ಅಗಾಧ ಹೋರಾಟ , ಭೋಗ ವಿಳಾಸಗಳಿಗೆ ತೆತ್ತ ಬೆಲೆ, ಅನುಭವಿಸಿದ ಆಧ್ಯಾತ್ಮಿಕ ಆಘಾತ, ಕಳೆದುಕೊಂಡ ಆರೋಗ್ಯ , "ವೇಗದ ಬದುಕು, ವೇಗದ ಸಾವು " ಶೈಲಿಯ ಜೀವನದ ತೃಪ್ತಿಗಾಗಿ , ಹಣಕ್ಕಾಗಿ ಆತ್ಮವನ್ನೇ ಮಾರಿಕೊಂದದ್ದು, ಅನಂತರ ಎಲ್ಲವನ್ನೂ ತ್ಯಜಿಸಿ ಹಿಮಾಲಯಕ್ಕೆ ಬಂದದ್ದು . ತನ್ನಂತೆ ಹಿಂದೆ ಲಾಯರಾಗಿದ್ದು , ಅತ್ಮಶಾಂತಿಗಾಗಿ ಎಲ್ಲವನ್ನೂ ತ್ಯಾಗಮಾಡಿದ್ದ ಯೋಗಿ ಕೃಷ್ಣನ್ ನನ್ನು ಭೇಟಿಯಾದದ್ದು ಎಲ್ಲವನ್ನೂ ಹೇಳಿದೆ.

ಅತ ನಿಶ್ಚಲವಾಗಿ, ಮೌನವಾಗಿ ನಿಂತಿದ್ದ. ನಾನು ಆತ್ಮಸಾಕ್ಷಾತ್ಕಾರದ ದಿವ್ಯಜೀವನದ ಪುರಾತನ ಆರ್ಷೇಯ ತತ್ವಗಳನ್ನು ತಿಳಿಯಲೆಬೇಕೆಂಬ ಅದಮ್ಯ ಆಕಾಂಕ್ಷೆಯಿಂದ ಸಾಹಸಯಾತ್ರೆಯನ್ನು ಕೈಕೊಂಡಿರುವುದು ಅವನಿಗೆ ಮನದಟ್ಟಾದ ನಂತರವೇ ಆತ ಮಾತಾಡತೊಡಗಿದ. ನನ್ನ ಹೆಗಲಮೇಲೆ ತನ್ನ ಹೈಯನ್ನು ಇಟ್ಟು ಮೃದುವಾಗಿ ಹೇಳಿದ; "ದಿವ್ಯ ಜೀವನ ವಿವೇಕವನ್ನು ತಿಳಿಯಲು ನನ್ನಲ್ಲಿ ನಿಜವಾದ ಆಸಕ್ತಿಯಿದ್ದರೆ , ನಿನಗೆ ನೆರವಾಗುವುದು ನನ್ನ ಕರ್ತವ್ಯ . ನಿಜ- ನೀನು ವರೆಗೆ ಹುಡುಕುತ್ತಾ ಬಂದಿರುವ ಸಾಧುಗಳಲ್ಲಿ ನಾನೂ ಒಬ್ಬ. ಎಷ್ಟೋ ವರ್ಷಗಳ ನಂತರ ನನ್ನನ್ನು ಕಾಣಲು ಬಂದ ಪ್ರಥಮ ವ್ಯಕ್ತಿ ನೀನು . ಅಭಿನಂದನೆಗಳು . ನಿನ್ನ ಛಲ ನನಗೆ ಮೆಚ್ಚಿಗೆಯಾಯಿತು. ನಿನ್ನ ಜಿಗುಟುತನವನ್ನು ಕಂಡರೆ ನೀನು ನಿಜವಾಗಿಯೂ ಒಳ್ಳೆಯ ಲಾಯರಾಗಿದ್ದಿರಬೇಕು ಎಂದೆನಿಸುತ್ತದೆ."

ಒಂದು ಕ್ಷಣ ಮುಂದೇನು ಮಾಡಬೇಕು ಎಂದು ಯೋಚಿಸುವಂತೆ ಕಂಡ ಬಳಿಕ ಆತ ಹೇಳಿದ; "ನಿನಗೆ ಇಷ್ಟವಾದರೆ ನನ್ನ ಜತೆ ನಮ್ಮ ದೇವಸ್ಥಾನಕ್ಕೆ ಬರಬಹುದು. ಅದು ಇನ್ನೂ ನಾಲ್ಕಾರು ತಾಸು ನಡೆಯ ದೂರದಲ್ಲಿ ಬೆಟ್ಟಗಳ ನಡುವೆ ಅಡಗಿಕೊಂಡಿದೆ . ನೀನು ಬಂದರೆ ನನ್ನ ಸೋದರ- ಸೋದರಿಯರು ನಿನ್ನನ್ನು ತೆರೆದ ತೋಳುಗಳಿಂದ ಸ್ವಾಗತಿಸುವರು. ನಾವೆಲ್ಲಾ ಸೇರಿ ನಮ್ಮ ಹಿರಿಯರು ಪರಂಪರಾಗತವಾಗಿ ನಮಗೆ ಕಲಿಸಿದ ಪ್ರಾಚೀನ ತತ್ವಜ್ಞಾನ ಹಾಗೂ ಅನುಷ್ಠಾನ ತಂತ್ರಗಳನ್ನು ನಿನಗೆ ಕಲಿಸುತ್ತೇವೆ.."

"ಆದರೆ ನಮ್ಮ ರಹಸ್ಯ ಜಗತ್ತಿಗೆ ಒಯ್ದು , ಬದುಕಿನ ಆನಂದ ಉತ್ಸಾಹಗಳನ್ನು ವರ್ಧಿಸುವ ಸನಾತನ ತತ್ವಗಳನ್ನು ನಿನ್ನೊಡನೆ ಹಂಚಿಕೊಳ್ಳುವ ಮೊದಲು ನೀನೊಂದು ವಚನ ಕೊಡಬೇಕು. ಸನಾತನ ಸತ್ಯಗಳನ್ನು ಕಲಿತುಕೊಂಡ ಬಳಿಕ ನಿನ್ನ ದೇಶಕ್ಕೆ ಮರಳಿ, ಇದರ ಅವಶ್ಯಕತೆಯಿರುವವರಿಗೆಲ್ಲ ಹಂಚಬೇಕು. ನಾವು ಇಲ್ಲಿನ ಪ್ರಶಾಂತ ಜಗತ್ತಿನಲ್ಲಿದ್ದರೂ , ನೀವಿರುಅವ ಪ್ರಕ್ಷುಬ್ಧ ಜಗತ್ತಿನ ತವಕ-ತಲ್ಲಣಗಳೂ ನಮಗೆ ತಿಳಿದಿವೆ. ಅಲ್ಲಿ ಸಜ್ಜನರು ದಾರಿತಪ್ಪುತ್ತಿದ್ದಾರೆ. ನೀನು ಅವರಿಗೆ ಅವಶ್ಯವಾಗಿರುವ ಭರವಸೆಯನ್ನು ನೀಡಬೇಕು. ಅದಕ್ಕಿಂತಲೂ ಮುಖ್ಯವಾಗಿ ಅವರ ಕನಸುಗಳನ್ನು ನನಸಾಗಿಸಲು ಬೇಕಾದ ಸಾಧನಗಳನ್ನು ನೀಡಬೇಕು. ನಾನು ನಿನ್ನಿಂದ ಬಯಸುವುದು ಇಷ್ಟೇ."

ನಾನು ಶರತ್ತನ್ನು ತಕ್ಷಣ ಒಪ್ಪಿಕೊಂಡು ಅವರ ಅಮೂಲ್ಯ ಸಂದೇಶಗಳನ್ನು ಪಶ್ಚಿಮದಲ್ಲಿ ಹರಡುವುದಾಗಿ ವಚನ ನೀಡಿದೆ. ಸರಿ, ನಾವಿಬ್ಬರೂ ಶಿವನ ಸ್ಥಾನದ ಕಡೆ ಏರುತ್ತಿದ್ದಂತೆ, ಹಿಮಾಲಯದ ಸೂರ್ಯ ನಿಧಾನವಾಗಿ , ದಿನವಿಡೀ ಬೆಳಗಿ ಆಯಾಸ ಗೊಂಡವನಂತೆ ಕೆಂಪಾಗಿ ಆಸ್ತಾಲದ ಕಡೆ ಇಳಿಯತೊಡಗಿದ. ಕ್ಷಣ ನನ್ನ ಪಾಲಿಗೆ ನನ್ನ ಬದುಕಿನಲ್ಲೇ ಅವಿಸ್ಮರಣೀಯ ಕ್ಷಣವಾಗಿತ್ತು . ಓರ್ವ ಕಾಲಾತೀತ ಭಾರತೀಯ ಸಾಧುವಿನೊಂದಿಗೆ , ಅವನ ಸೋದರ ಪ್ರೇಮದ ನೆರಳಿನಲ್ಲಿ ನನ್ನ ಕನಸಿನ ಅಲೌಕಿಕ ಲೋಕದ ಕಡೆಗೆ ನಮ್ಮ ನಿಗೂಢಯಾತ್ರೆ ಸಾಗಿತು.

ಕೆಲವು ಮಹತ್ವಪೂರ್ಣ ಕ್ಷಣಗಳ ಪರಿಮಿತಿಗೆ ನನ್ನ ಬದುಕು ಸಂದಿತ್ತು. ಕ್ಷಣ ನನ್ನ ಮುಂದಿನ ಜೀವನದ ಪ್ರಥಮಕ್ಷಣ. ಅದು ಹಿಂದೆಂದಿಗಿಂತಲೂ ಸತ್ವಪೂರ್ಣವಾಗಲಿದೆ ಎಂಬ ಭಾವನೆ ಮನಸ್ಸಿನಲ್ಲಿ ಮಿಂಚಿತು.


ನೀವು ಹೆಚ್ಚಿನ ಫಲಿತಾಂಶ ಪಡೆಯಬೇಕಾದರೆ ನಮ್ಮಲ್ಲಿನ ಯಾವುದಾದರೂ ಅವಕಾಶಗಳನ್ನು ಉಪಯೋಗಿಸಿಕೊಂಡು ಬದುಕಿನಲ್ಲಿ ಪ್ರಯತ್ನಪಟ್ಟು ಮೇಲೆ ಬನ್ನಿ, ನೀವು ಬದುಕಿ , ಬೇರೆಯವರನ್ನು ಬದುಕಿನಲ್ಲಿ ಮೇಲೆತ್ತಿ. ಅವಾಗ ನಿಮ್ಮ ಜೀವನ ಸಾರ್ಥಕ.

/sunnaturalflash.magneticsponsoringonline.com/letter_1.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ
http://www.sunnaturalflash.com/
---------------------------------------------------------------------------------------------
ನಿಮಗೆ ನನ್ನ ಜತೆ ನೇರವಾಗಿ ಮಾತನಾಡಬೇಕೆಂದು ಅನಿಸಿದರೆ, ನಿಮ್ಮ ಅನುಭವಗಳನ್ನು ,ಅನಿಸಿಕೆಗಳನ್ನು ನೇರವಾಗಿ ನನ್ನ ಜತೆಗೆ ಹಂಚಿ ಕೊಳ್ಳಬೇಕೆನಿಸಿದರೆ ನಿಮ್ಮ ಹೆಸರು, ನಿಮ್ಮ ಈ ಮೇಲ್ ವಿಳಾಸ, ನಿಮ್ಮ ಮೊಬೇಲ್ ದೂರವಾಣಿ ಸಂಖ್ಯೆ ಜತೆಗೆ ನೀವು ಕರೆಯನ್ನು ಸ್ವೀಕರಿಸುವ ಸಮಯ ಬರೆದು ಕೆಳಗಿನ ಈ ಮೇಲ್ ವಿಳಾಸಕ್ಕೆ ಕಳುಹಿಸಿ . ನಾನು ನಿಮ್ಮ ಕೋರಿಕೆಯ ಇಪ್ಪತ್ತು ನಾಲ್ಕು ಗಂಟೆಯ ಯಿಂದ ನಲವತ್ತೆಂಟು ಗಂಟೆಯ ಒಳಗೆ ನಿಮ್ಮೊಂದಿಗೆ ಸಂಭಾಷಣೆಯಲ್ಲಿ ಇರುತ್ತೇನೆ.sunnaturalflash@gmail.com

ಭಾನುವಾರ, ಜನವರಿ 2, 2011

ನಿಗೂಢ ಅತಿಥಿ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನಮ್ಮ ಕಂಪನಿಯ ಸದಸ್ಯರ ತುರ್ತು ಸಭೆ ನಡೆಯುತ್ತಿತ್ತು. ಬೋರ್ಡ್ ರೂಮಿನೊಳಗೆ ಹೋಗುತ್ತಿದ್ದಂತೆಯೇ ಅಲ್ಲೇನೋ ಸಮಸ್ಯೆಯಿದೆ ಎಂದು ನನಗನಿಸುತ್ತಿತ್ತು. ಸಭೆಯನ್ನುದ್ದೇಶಿಸಿ ಮೊದಲು ಮಾತಾಡಿದ್ದು ನಮಗೆಲ್ಲ ಹಿರಿಯರಾಗಿದ್ದ ಹಾರ್ಡಿಂಗ್ ಅವರು ಹೇಳಿದ್ದು ಹೀಗೆ;

"ನಾನೀಗೆ ನಿಮಗೊಂದು ಕೆಟ್ಟ ಸುದ್ಧಿ ಹೇಳಬೇಕಾಗಿದೆ. ನಿನ್ನೆ ಏರ್ಅಟ್ಲಾಂಟಿಕ್ ಕೇಸಿನಲ್ಲಿ ವಾದಮಾಡುತ್ತಿರುವಾಗ ಜೂಲಿಯನ್ ಮ್ಯಾನ್ ಟಾಲ್ ಗೆ ಆದದ್ದು ಭಾರಿ ಹ್ರುದಯಾಘಾತವೆಂದು ತಿಳಿದು ಬಂದಿದೆ. ಈಗ ಆತ ಆಸ್ಪತ್ರೆಯ ತುರ್ತು ಚಿಕಿತ್ಸಾವಿಭಾಗದಲ್ಲಿದ್ದಾರೆ . ಡಾಕ್ಟರರು ಹೇಳುವಂತೆ ಆತನ ದೇಹಸ್ಥಿತಿ ಸ್ಥಿರವಾಗಿದ್ದು ಶೀಘ್ರದಲ್ಲಿಯೇ ಗುನಮುಖನಾಗಲಿದ್ದಾನೆ . ಆದರೆ ಆತ ಒಂದು ನಿರ್ಧಾರ ಮಾಡಿದ್ದಾನೆ . ಅದು ನಿಮಗೂ ತಿಳಿಯಬೇಕು. ಇನ್ನು ಮುಂದೆ ಆತ ಲಾ ಪ್ರಾಕ್ಟೀಸ್ ಮಾಡುವುದಿಲ್ಲ. ಪುನ; ಆತ ನಮ್ಮ ಕಂಪನಿಗೆ ಮರಳುವುದಿಲ್ಲ ".

ಇದನ್ನು ಕೇಳಿ ನನಗೆ ಶಾಕ್ ಆಯಿತು. ಜೂಲಿಯನ್ ಗೆ ತನ್ನದೇ ಆದ ಕೆಲವು ತೊಂದರೆಗಳು ಇದ್ದುವೆಂದು ನನಗೆ ತಿಳಿದಿತ್ತು. ಆದರೆ ವೃತ್ತಿಯನ್ನೇ ಕೈಬಿಡುತ್ತಾನೆಂದು ನಾನೆಂದು ಊಹಿಸಿರಲಿಲ್ಲ . ಆತ ಈ ಸಂಗತಿಯ ಬಗ್ಗೆ ನನಗಾದರೂ ಹೇಳುವ ಸೌಜನ್ಯ ತೋರಬೇಕಾಗಿತ್ತು. ಆಸ್ಪತ್ರೆಯಲ್ಲೂ ಅವನನ್ನು ನೋದುಳು ಅವಕಾಶ ಕೊಟ್ಟಿರಲಿಲ್ಲ. ಪ್ರತಿಬಾರಿ ಆಸ್ಪತ್ರೆಗೆ ಹೋದಾಗಲೂ ನರ್ಸುಗಳು "ಅವರು ನಿದ್ರಿಸುತ್ತಿರುವುದರಿಂದ ತೊಂದರೆ ಕೊಡಬಾರದೆಂದು " ಹೇಳಲು ಆದೇಶಿಸಲಾಗಿತ್ತು. ನನ್ನ ಫೋನ್ ಕಾಲನ್ನು ಆತ ತೆಗೆದುಕೊಳ್ಳಲು ನಿರಾಕರಿಸಿದ್ದ. ಬಹುಶ; ತಾನು ಮರೆಯಬೇಕೆಂದು ನಿರ್ಧರಿಸಿದ್ದ ವೃತ್ತಿಯನ್ನು ನಾನು ನೆನಪಿಸುವುದು ಅವನಿಗೆ ಬೇಡವಾಗಿತ್ತು. ಯಾರಿಗೆ ಗೊತ್ತು ? ಒಂದಂತೂ ನಿಜ. ಆತನ ವರ್ತನೆ ನನಗೆ ತುಂಬಾ ನೋವುಂಟು ಮಾಡಿತ್ತು.

ಇದೆಲ್ಲ ನಡೆದು ಈಗ ಮೂರು ವರ್ಷಗಳು ಉರುಳಿವೆ. ಕಳೆದಸಲ ನಾನು ಜೂಲಿಯನ್ ಬಗ್ಗೆ ಕೇಳಿದ ಸುದ್ಧಿಯೆಂದರೆ ಆತ ಯಾವುದೋ ಸಂಶೋಧನೆಗಾಗಿ ಭಾರತಕ್ಕೆ ತೆರಲಿದ್ದನಂತೆ. ನನ್ನ ಸಹೋದ್ಯೋಗಿಯೊಡನೆ ಮಾತಾಡುತ್ತ "ನಾನಿಷ್ಟು ನನ್ನ ಬದುಕನ್ನು ಸರಳ ಗೊಳಿಸಬೇಕು ಎಂದಿದ್ದೇನೆ . ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ. ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ. ಆ ರಹಸ್ಯಮಯ ದೇಶದಲ್ಲಿ ಅವು ಸಿಗಬಹುದೆಂಬ ಭರವಸೆ ಇದೆ " ಎಂದು ಹೇಳಿದ್ದನಂತೆ . ಅಷ್ಟರಲ್ಲೇ ಆತ ತನ್ನ ಬಂಗಲೆಯನ್ನೂ . ಖಾಸಗಿ ದ್ವೀಪವನ್ನೂ . ಸ್ವಂತ ವಿಮಾನವನ್ನೂ ಮಾರಾಟಮಾಡಿದ್ದ . ತನ್ನ ಅತಿಮೆಚ್ಚಿನ ಫೆರಾರಿ ಕಾರನ್ನು ಮಾರಿದ್ದ. ಇದನ್ನು ಕೇಳಿ "ಜೂಲಿಯನ್ ಮ್ಯಾನ್ ಟಾಲ್ ಓರ್ವಭಾರತೀಯ ಯೋಗಿ ಆಗಲು ಸಾಧ್ಯವೇ ? ಏನೋ.ದೈವ ನಿಯಮ ನಡೆಯುವ ರೀತಿ ನಿಜಕ್ಕೂ ನಿಗೂಢ " ಎಂದು ಅಂದುಕೊಡಿದ್ದೆ.

ಆ ಮೂರು ವರ್ಷಗಳಲ್ಲಿ ನಾನು ಸಾಕಷ್ಟು ಬದಲಾಗಿದ್ದೆ. ಆಗ ಹಗಲೂ ರಾತ್ರಿ ದುಡಿಯುತ್ತಿದ್ದೆ. ಉತ್ಸಾಹಿ ತರುಣ ಲಾಯರ್ ನಾಗಿದ್ದ ನಾನು ಸಿನಿಕ ಸೀನಿಯರ್ ಲಾಯರ್ ಆಗಿ ಬದಲಾಗಿದ್ದೆ. ನಾನು . ನನ್ನ ಪತ್ನಿ ಚೆನ್ನಿ ಹಾಗೂ ಮಕ್ಕಳು -ಇಷ್ಟೇ ಪ್ರಪಂಚವಾಗಿತ್ತು. ಕ್ರಮೇಣ ಬದುಕಿನ ಅರ್ಥವೇನು ಎಂದು ಯೋಚಿಸಲು ತೊಡಗಿದೆ. ಬಹುಶ; ಅದಕ್ಕೆ ನನ್ನ ಮಕ್ಕಳೇ ಕಾರಣ. ಅವು ನನ್ನ ದೃಷ್ಟಿಯನ್ನೂ , ಪಾತ್ರದ ಸ್ವರೂಪವನ್ನೂ ಬದಲಿಸಿದವು. ನಮ್ಮಪ್ಪ ಒಮ್ಮೆ ಹೀಗೆ ಹೇಳಿದ್ದರು ; "ಜಾನ್ ಮರಣ ಶಯ್ಯೆಯಲ್ಲಿರುವಾಗ ನೀನು "ಇನ್ನಷ್ಟು ಕಾಲ ಆಪ್ಹೀಸಿನಲ್ಲಿದ್ದಿರಬೇಕಿತ್ತು " ಎಂದು ಬಯಸುವನ್ತಾಗಬಾರದು." ಹಾಗಾಗಿ ನಾನು ಹೆಂಡತಿ ಮಕ್ಕಳೊಡನೆ ಹೆಚ್ಚು ಹೆಚ್ಚು ಸಮಯ ಕಳೆಯತೊಡಗಿದೆ. ಮಹತ್ವಾಕಾಂಕ್ಷೆಯ ಶಿಖರದಿಂದ ಕೆಳಗಿಳಿದು ಸಾಮಾನ್ಯವಾದರೂ ತೃಪ್ತಿಕರವಾದ ಬದುಕಿಗೆ ಹೊಂದಿಕೊಂಡೆ. ನನ್ನ ಗ್ರಾಹಕರ ಖುಷಿಗಾಗಿ ರೋಟರಿ ಕ್ಲಬ್ಬಿಗೆ ಸೇರಿದೆ. ಪ್ರತಿ ಶನಿವಾರ ಸಂಜೆ ಗೊಲ್ಪ್ಹ್ ಆಡತೊಡಗಿದೆ. ಆಗಾಗ ನನ್ನ ಮನಸ್ಸಿನಲ್ಲಿ "ಜೂಲಿಯನ್ ಈಗ ಏನಾಗಿರಬಹುದು " ಎನ್ನುವ ಯೋಚನೆ ಮರುಕಳಿಸುತ್ತಿತ್ತು.

ಬಹುಶ; ಆತ ತನ್ನ ಅಶಾಂತ ಸ್ವಭಾವಕ್ಕೆ ವಿರುದ್ದವಾದ ಪ್ರಾಶಾಂತ ಭಾರತದಲ್ಲೆಲ್ಲೋ ನೆಲಸಿರಬಹುದು. ಅಥವಾ ನೇಪಾಲದ ಬೆಟ್ಟಗಳಲ್ಲಿ ಚಾರಣ ಮಾಡುತ್ತಿರಬಹುದು. ಒಂದಂತೂ ಸ್ಪಷ್ಟವಾಗಿತ್ತು. ವಕೀಲಿ ವೃತ್ತಿಗಂತೂ ಆತ ಮರಳಿರಲಿಲ್ಲ, ಇಲ್ಲಿಂದ ಹೊರಟ ನಂತರ ಆತನಿಂದ ಯಾರಿಗೂ ಒಂದು ಪೋಸ್ಟ್ ಕಾರ್ಡ್ ಸಹ ಬಂದಿರಲಿಲ್ಲ.

ಎರಡು ತಿಂಗಳ ಹಿಂದೆ ನನ್ನ ಮನೆಯ ಬಾಗಿಲನ್ನು ಯಾರೋ ತಟ್ಟಿದಾಗ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕುವಂತಾಯಿತು . ಆ ಸಂಜೆ ನಾನು ನನ್ನ ಕೊನೆಯ ಕಕ್ಷಿದಾರನೊಡನೆ ಮಾತಾಡಿ ಕಳಿಸಿದ್ದೇನಷ್ಟೇ, ಅಷ್ಟು ಹೊತ್ತಿಗೆ ಸರಿಯಾಗಿ ನನ್ನ ಸಹಾಯಕಿ; ಜೆಸಿ ಒಳಗೆ ಬಂದು ಹೇಳಿದಳು;

"ಜಾನ್, ನಿಮ್ಮನ್ನು ನೋಡಲು ಯಾರೋ ಒಬ್ಬರು ಬಂದಿದ್ದಾರೆ. ಅವರಿಗೇನೋ ಅರ್ಜೆಂಟಾಗಿ ಮಾತನಾಡಲು ಇದೆಯಂತೆ. ಮಾತಾಡದೆ ಹಿಂದಿರುಗುವುದಿಲ್ಲ ಎನ್ನುತ್ತಿದ್ದಾರೆ. "

"ಜೇಸಿ, ನಾನೀಗ ಹೊರಗಡೆ ಹೋಗುತ್ತಿದ್ದೇನೆ . ಏನಾದರೂ ಒಂದಿಷ್ಟು ತಿಂದು ಈ ಹಾ-ಮಿಲ್ಟನ್ ಕೇಸನ್ನು ಮುಗಿಸಬೇಕೆನ್ದಿದ್ದೇನೆ. ನನಗೀಗ ಯಾರನ್ನೂ ನೋಡಲು ಸಮಯವಿಲ್ಲ. ಬೇಕಾದರೆ ನನ್ನ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಲು ಹೇಳು. ಮತ್ತೂ ಆತ ತೊಂದರೆ ಕೊಟ್ಟರೆ ಸೆಕ್ಯುರಿಟಿಯವರಿಗೆ ಹೇಳು " ನಾನೆಂದೆ. ಅಸಹನೆಯ ದನಿಯಲ್ಲಿ.

"ಇಲ್ಲ ಜಾನ್ , ಆತ ನಿಮ್ಮನ್ನು ನೋಡಲೇ ಬೇಕೆಂದು ಹಟಮಾಡುತ್ತಿದ್ದಾನೆ."

ಒಂದು ಕ್ಷಣ ನಾನೂ ಸೆಕ್ಯುರಿಟಿಯವರನ್ನು ಕರೆಯೋಣ ಎಂದು ಯೋಚಿಸಿದೆ. ಆದರೆ ಮರುಕ್ಷಣ ಈ ವ್ಯಕ್ತಿಗೆ ನಿಜವಾದ ಅಗತ್ಯವಿರಲೂಬಹುದು ಎಂದು ಭಾವಿಸಿ "ಓಕೆ , ಅವನನ್ನು ಕಳುಹಿಸು . ನಾನು ಅವನನ್ನು ನನ್ನ ಬಿಸಿನೆಸ್ ಗೂ ಬಳಸಿಕೊಳ್ಳಬಹುದು "ಎಂದೆ.

ನನ್ನ ಕ್ಯಾಬಿನ್ನಿನ ಬಾಗಿಲು ನಿಧಾನವಾಗಿ ತೆರೆಯಿತು. ಅದು ಪೂರ್ಣ ತೆರೆದಾಗ ಸುಮಾರು ನಲವತ್ತರ ಹರೆಯದ ಎತ್ತರವಾದ , ಗಟ್ಟಿಮುಟ್ಟಾದ ಶರೀರದ ವ್ಯಕ್ತಿ ಎದುರಾದ. ಅವನ ಮುಖದಲ್ಲಿ ಮುಗುಳ್ನಗೆಯಿತ್ತು. ಉತ್ಸಾಹ ಚೈತನ್ಯ ಚಿಮ್ಮುತ್ತಿತ್ತು. ಅವನನ್ನು ಕಂಡಾಕ್ಷಣ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸ್ಕೂಲಿಗೆ ಹೋಗುತ್ತಿದ್ದ ಶ್ರೀಮಂತ ಕುಟುಂಬಗಳಿಗೆ ಸೇರಿದ, ಉತ್ಸಾಹ ಪುಟಿಯುತ್ತಿದ್ದ ಮುದ್ದಾದ ಮಕ್ಕಳ ನೆನಪಾಯಿತು. ಅವನ ವ್ಯಕ್ತಿತ್ವದಲ್ಲಿದ್ದ ಒಂದು ಅನಿವ್ರಚನೀಯ ಶಾಂತಿ ದಿವ್ಯಸಾನ್ನಿಧ್ಯವನ್ನು ನೀಡಿದಂತಿತ್ತು. ಇನ್ನು ಅವನ ಆ ನೀಲಿ ಕಣ್ಣುಗಳಂತೂ , ನವಯುವಕನ ಕೆನ್ನೆಯನ್ನು ಸವರುವ ಬ್ಲೇಡಿನಂತೆ ನನ್ನೊಳಗೆ ಸಲೀಸಾಗಿ ಪ್ರವೇಶಿಸಿದವು.

"ಬಹುಶ; ನನ್ನ ಉದ್ಯೋಗದ ಮೇಲೆ ಕಣ್ಣಿಟ್ಟಿರುವ ಮತ್ತೊಬ್ಬ ಪ್ರಚಂಡ ಲಾಯರ್ ಇರಬೇಕು" ಎಂದು ನಾನು ಒಂದು ಕ್ಷಣ ಯೋಚಿಸಿದೆ. "ಒಳ್ಳೆಯ ಕೇಸು. ಆದರೆ ಈತ ಹೀಗೇಕೆ ನನ್ನನ್ನು ನೋಡುತ್ತಾ ನಿಂತಿದ್ದಾನೆ ? ಕಳೆದವಾರ ನಾನು ಗೆದ್ದ ಡೈವೋರ್ಸ್ ಕೇಸಿಗೆ ಸಂಬಂಧಿಸಿದ ಪತಿಯಾಗಿರಲಾರನಷ್ಟೇ ? ಸೆಕ್ಯುರಿಟಿಗಾರ್ಡನ್ನು ಕರೆದಿದ್ದರೂ ತಪ್ಪಾಗುತ್ತಿರಲಿಲ್ಲವೆಂದು ಕಾಣುತ್ತದೆ..."ಹೀಗೆ ನನ್ನ ಯೋಚನೆ ಸಾಗಿತ್ತು.

ತನ್ನ ಮೆಚ್ಚಿನ ಶಿಷ್ಯನನ್ನು ವಾತ್ಸಲ್ಯಭಾವದಿಂದ ನೋಡುವ ಬುದ್ಧನಂತೆ ಈ ವ್ಯಕ್ತಿ ನನ್ನ ಕಡೆಗೆ ಮುಗುಳ್ನಗುತ್ತಾ ನೋಡುತ್ತಿದ್ದ . ಕೆಲಕ್ಷಣಗಳ ಮುಜುಗರದ ಮೌನದ ಬಳಿಕ ಆತ ಒಂದು ರೀತಿಯ ಅಧಿಕಾರವಾಣಿಯಿಂದ ಹೇಳಿದ ; "ಜಾನ್, ಬಂದ ಅತಿಥಿಗಳನ್ನು ನೀನು ಉಪಚರಿಸುವುದು ಹೀಗೇನಾ? ಅದೂ ನ್ಯಾಯಾಲಯದಲ್ಲಿ ಯಶಸ್ಸು ಗಳಿಸುವ ಕಳೆಯನು ಕಳಿಸಿದ ನನ್ನಂಥವರನ್ನೂ ? ಛೆ ! ನನ್ನ ವೃತ್ತಿಯ ಗುಟ್ಟುಗಳನ್ನು ನಾನೇ ಬಚ್ಚಿಟ್ಟು ಕೊಳ್ಳಬೇಕಾಗಿತ್ತು ".

ನನ್ನ ಹೊಟ್ಟೆಯಲ್ಲಿ ಏನೋ ವಿಚಿತ್ರ ತಳಮಳ. ಆ ಗಂಭೀರ. ಜೇನಿನಂತ ಸ್ವರವನ್ನು ಕೇಳಿದ ಕೂಡಲೇ ವ್ಯಕ್ತಿ ಯಾರೆಂದು ತಿಳಿಯಿತು. ನನ್ನ ಎದೆ ಬಡಿದುಕೊಂಡಿತು.

"ಅರೇ! ಜೂಲಿಯನ್ ? ನೀನೇನಾ ? ಇದು ನಿಜವಾ ? ನನಗೆ ನಂಬೋಕೆ ಆಗ್ತಾ ಇಲ್ಲ !"

ಆತ ಗಹಗಹಿಸಿ ನಕ್ಕಾಗ ನನ್ನ ಸಂದೇಹಕ್ಕೆ ಉತ್ತರ ದೊರೆಯಿತು. ನನ್ನೆದುರು ನಿಂತ ವ್ಯಕ್ತಿ ಹಿಂದೆ ಕಳೆದುಹೋಗಿದ್ದ ಭಾರತೀಯ ಯೋಗಿ -ಜೂಲಿಯನ್ ಮ್ಯಾನ್ ಟಾಲ್! ಅವನ ವ್ಯಕ್ತಿತ್ವದಲ್ಲಿ ಉಂಟಾಗಿದ್ದ ಅದ್ಭುತ ಪರಿವರ್ತನೆ ನನ್ನನ್ನು ದಂಗಾಗಿಸಿತ್ತು . ಅಂದು ಇದ್ದ ನಿಲ್ಲದ ಕೆಮ್ಮು, ನಿಸ್ತೇಜ ಕಣ್ಣು , ವೃದ್ಧಾಪ್ಯದ ಲಕ್ಷಣಗಳು ಮುಖದಲ್ಲಿ ಸ್ಥಾಯಿಯಾಗಿದ್ದ ಕಹಿಲೆಯ ಪ್ರೇತ ಕಳೆ -ಎಲ್ಲವೂ ಮಾಯವಾಗಿದ್ದವು. ಅದರ ಸ್ಥಾನದಲ್ಲಿ ತುಂಬಿದ , ಸುಕ್ಕಿಲ್ಲದ ಮುಖ ಆರೋಗ್ಯದ ಉಕ್ಕನ್ನು ಸಾರಿಹೇಳುತ್ತಿತ್ತು. ಅವನ ಕಣ್ಣುಗಳು ತೇಜಸ್ಸಿನಿಂದ ಹೊಳೆಯುತ್ತಿದ್ದವು. ಅದಕ್ಕಿಂತಲೂ ಅವನ ವ್ಯಕ್ತಿತ್ತ್ವದಲ್ಲಿದ್ದ ಪ್ರಾಶಾಂತ ಗಾಂಭೀರ್ಯ ಅಚ್ಚರಿ ಗೊಳಿಸು ವಂತಿತ್ತು. ಅವನನ್ನೇ ದಿಟ್ಟಿಸಿ ನೋಡುವುದೇ ಆನಂದವೆನಿಸಿತು. ಈಗ ಆತ ಬಿಗಿತ, ಉದ್ವೇಗಗಳಿಂದ ಸಟೆದುಕೊಂಡಿದ್ದ ಹಳೆಯ ಜೂಲಿಯನ್ ಆಗಿರಲಿಲ್ಲ . ಮುಗುಳ್ನಗುತ್ತಿರುವ ವೀರ್ಯವಂತ ಯುವಕನಾಗಿದ್ದ. ಪರಿವರ್ತನೆಯ ಪ್ರತೀಕವಾಗಿದ್ದ.



ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.magneticsponsoringonline.com/letter_1.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/