MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಆಗಸ್ಟ್ 18, 2010

ಯಶಸ್ಸನ್ನು ನಮ್ಮ ಗುಣಮಟ್ಟ ಕ್ಕಿಳಿಸುವ ಬದಲು ನಮ್ಮ ಗುಣಮಟ್ಟವನ್ನು ಯಶಸ್ಸಿನ ಮಟ್ಟಕ್ಕೆರಿಸಬೇಕು

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಯಶಸ್ಸನ್ನು ನಮ್ಮ ಗುಣಮಟ್ಟ ಕ್ಕಿಳಿಸುವ ಬದಲು ನಮ್ಮ ಗುಣಮಟ್ಟವನ್ನು ಯಶಸ್ಸಿನ ಮಟ್ಟಕ್ಕೆರಿಸಬೇಕು

ಬಹಳ ಹಿಂದೆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಮ್ಮಂತಹವರಿಗೆ ಮೊದಲ ಬಾರಿ ಫಟ್ ಫಟ್ ಶಬ್ದದ ಮೋಟಾರ್ ಸೈಕಲ್ ಅಥವಾ ಚುಕ್ ಬುಕ್ ಎಂದೊಡುವ ರೈಲು ಕಂಡಾಗ ನಮಗಾದ ಆಶ್ಚರ್ಯ . ಅದರ ಹತ್ತಿರ ನಿಂತಾಗ ಆದ ರೋಮಾಂಚನ ನೆನಪಿದೆಯಾ ? ಪಟ್ಟಣದಲ್ಲಿ ಹುಟ್ಟಿ ಬೆಳೆದ ಇಂದಿನವರಿಗೆ ಅವೆಲ್ಲವನ್ನು ಕಂಡಾಗ ಏನೂ ಅನಿಸದಿರಬಹುದು. ಆದರೆ ನಮಗೆ ಅವೆಲ್ಲ ಕಣ್ಣರಳಿಸಿ ನೋಡುವ ವಸ್ತುಗಳಾಗಿದ್ದವು!. ನಮ್ಮಂತೆಯೇ ಒಬ್ಬ ಹತ್ತು ವರ್ಷದ ಬಾಲಕ ಕಳೆದ ಶತಮಾನದ ಮೊದಲ ಭಾಗದಲ್ಲಿ ಜಪಾನಿನ "ಯಮಹಿಗಾಷಿ"ಎಂಬ ಸಣ್ಣ ಹಳ್ಳಿಯಲ್ಲಿದ್ದ . ಒಮ್ಮೆ ರಸ್ತೆಯಲ್ಲಿ ಆಡುತ್ತಿರುವಾಗ ವಿಚಿತ್ರ ರೀತಿಯ ಸದ್ದು ಕೇಳಿಸಿತು. ಬಾಲಕ ಕುತೂಹಲದಿಂದ ಆ ದಿಕ್ಕಿನಲ್ಲಿ ನೋಡತೊಡಗಿದ . ಆತ ಎಂದೂ ನೋಡಿರದಿದ್ದ "ಕಾರ್ " ಬರುವುದು ಕಾಣಿಸಿತು. ಅದರ ಶಬ್ದ ಅದರ ವೇಗಕ್ಕಿಂತ ಆಶ್ಚರ್ಯದ ವಿಷಯವೆಂದರೆ ಅದು ತಾನೇ ಚಲಿಸುತ್ತಿತ್ತು. ಅದನ್ನು ಕುದುರೆಗಳು ಎಳೆಯುತ್ತಿರಲಿಲ್ಲ. ಅದು ಹತ್ತಿರ ಬಂದಂತೆ ಬಾಲಕನಿಗೆ ರೋಮಾಂಚನವಾಯಿತು. ದೇಹ ನಡುಗಹತ್ತಿತು . ಕಾರು ಅವನಿದ್ದಲ್ಲಿಯೇ ಬಂದು ಮುಂದಕ್ಕೆ ಹೊರಟುಹೋಯಿತು . ತನಗೆ ಅರಿವಿಲ್ಲದಂತೆ ಬಾಲಕ ಅದರ ಹಿಂದೆ ಓಡತೊಡಗಿದ . ಎಷ್ಟು ಓಡಿದರೂ ಅದನ್ನು ಹಿಡಿಯಲಾಗಲಿಲ್ಲ. ಅದರ ವೇಗ ಹಾಗಿತ್ತು .
ಬಾಲಕ ರಸ್ತೆಯಲ್ಲಿ ಓಡಿ ಓಡಿ ಕುಸಿದುಬಿದ್ದ . ಆ ದಿಕ್ಕನ್ನೇ ನೋಡುತ್ತಾ ಕುಳಿತ . ಈ ಘಟನೆ ಮುಂದೆ ಆತನ ಬದುಕನ್ನೂ ಬದಲಿಸಿತು. ಏಕೆಂದರೆ ಮುಂದೊಂದು ದಿನ ಆತ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯ ಮೋಟಾರ್ ಸೈಕಲ್ ಉತ್ಪಾದಿಸುವ ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸಿದ . ಆ ಬಾಲಕನ ಹೆಸರು ಸೂಯ್ ಚಿರೋ ಹೊಂಡ ಮತ್ತು ಆತನ ಉದ್ಯಮದ ಹೆಸರು ಹೊಂಡ ಮೋಟಾರ್ ಕಂಪನಿ.!

ಅಂದು ಆತ ರೋಮಾಂಚನ -ಗೊಂಡು ಸುಮ್ಮನೆ ಕೂರಲಿಲ್ಲ. ಆತನ ತಂದೆ ನಡೆಸುತ್ತಿದ್ದ ಹಳ್ಳಿಯ ಕಮ್ಮಾರಿಕೆಯ ಮತ್ತು ಒಂದು ಸಣ್ಣ ಸೈಕಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡ ತೊಡಗಿದ. ಸಣ್ಣ ಪುಟ್ಟ ಆಟಿಕೆಗಳನ್ನು ತಯಾರಿಸತೊಡಗಿದ. ಯಾವಾಗಲೂ ಏನೋ ರಿಪೇರಿ , ಏನೋ ಕೆಲಸ !. ತನ್ನ ಹದಿನೈದನೆ ವಯಸ್ಸಿಗೆ ಟೋಕಿಯೋಗೆ ಓಡಿಹೋದ . ಅಲ್ಲಿ ಒಂದು ಕಾರ್ ಗ್ಯಾರೇಜಿನಲ್ಲಿ ಕೆಲಸಕ್ಕೆ ಸೇರಿಕೊಂಡ . ಕಾರಿನ ವಿವಿದ ಭಾಗಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ. ಒಂದೂವರೆ ದಶಕಗಳು ದುಡಿದು ತನ್ನ ಊರಿಗೆ ಹಿಂತಿರುಗಿ ಒಂದು ಸಣ್ಣ ಉದ್ದಿಮೆ ಸ್ಥಾಪಿಸಿ ಪಿಸ್ಟನ್ ರಿಂಗುಗಳನ್ನು ತಯಾರು ಮಾಡುತ್ತಿದ್ದ . ಹತ್ತು ವರ್ಷಗಳಲ್ಲಿ ಚೆನ್ನಾಗಿ ಬೆಳೆದಿದ್ದ ತನ್ನ ಕಾರ್ಖಾನೆಯನ್ನು ಟೊಯೋಟ ಕಂಪನಿಗೆ ದೊಡ್ಡ ಮೊತ್ತಕ್ಕೆ ಮಾರಿಬಿಟ್ಟ.

ಬಂದ ಹಣದಿಂದ ಹೊಂಡ ಮೋಟಾರ್ ಕಂಪನಿ ಎಂಬ ಹೆಸರಿನಲ್ಲಿ ಮೋಟಾರ್ ಸೈಕಲ್ಲುಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಿದ. ಅಂದಿನ ಕಾಲದ ಹೆಸರುವಾಸಿಯಾದ "ಟ್ರಂ -ಫ್ " ಮತ್ತು "ಹಾರ್ಲೆ -ಡೇವಿಡ್ಸನ್" ಮೋಟಾರ್ ಸೈಕಲ್ ಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಹೊಂಡ ಮೋಟಾರ್ ಸೈಕಲ್ ಗಳು ಪಡೆದವು !. ಒಂದು ಯಶಸ್ಸಿನಿಂದ ಮತ್ತೊಂದು ಯಶಸ್ಸಿನತ್ತ ದಾಪುಗಾಲು ಹಾಕುತ್ತಲೇ ಹೋದ. ಹೊಂಡ ಉದ್ಯಮ ಸಾಮ್ರಾಜ್ಯವನ್ನೇ ಸ್ಥಾಪಿಸಿದ .ಇಂದು ಹೊಂಡ ವಿಶ್ವ ವ್ಯಾಪಿಯಾಗಿದೆ.

ಅವರ ಯಸಸ್ಸಿನ ಸೂತ್ರದ ಬಗ್ಗೆ ಅವರೇ ಹೇಳುತ್ತಿದ್ದ ಮಾತುಗಳು " ನಮ್ಮ ಕಾರ್ಯ ಉತ್ತಮವಾಗಿರಬೇಕು , ಮುಂದಿನದ್ದು ಇನ್ನೂ ಉತ್ತಮವಾಗಿರಬೇಕು , ಮತ್ತು ಅದರ ಮುಂದಿನದ್ದು ಅತ್ಯುತ್ತಮವಾಗಬೇಕು ! ಯಶಸ್ಸನ್ನು ನಮ್ಮ ಗುಣಮಟ್ಟ -ಕ್ಕಿಳಿಸುವ ಬದಲು ನಮ್ಮ ಗುಣಮಟ್ಟವನ್ನು ಯಶಸ್ಸಿನ ಮಟ್ಟಕ್ಕೆ -ಏರಿಸಬೇಕು !.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
http ;// www .sunnaturalflash .com /
sunnaturalflash @gmail .com

ಮಂಗಳವಾರ, ಆಗಸ್ಟ್ 17, 2010

ಬದುಕಿನಲ್ಲಿ ಅನೇಕ ಬಾಗಿಲುಗಳು ನಮಗೆ ಪ್ರವೇಶ ನಿರಾಕರಿಸಬಹುದು . ನಾವು ಅಂತಹ ಸಂದರ್ಭಗಳಲ್ಲಿ ಆ ಬಾಗಿಲನ್ನೇ ಮುರಿದು ಹಾಕುವ ಹುಂಬತನ ತೋರಬೇಕು. !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.

"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ.

ಬಹಳ ವರ್ಷಗಳ ಹಿಂದೆ ಇನ್ನೂ ಬ್ರಿಟಿಷರು ಭಾರತವನ್ನಾಳುತ್ತಿದ್ದ ಕಾಲದಲ್ಲಿ ಮುಂಬಯಿಯಲ್ಲಿ ವ್ಯಾಟ್ ಸನ್ ಎಂಬ ಹೋಟೆಲ್ ಇತ್ತು. ಅಲ್ಲಿನ ಸೇವೆಯೂ ಮೇಲ್ದರ್ಜೆಯದಾಗಿತ್ತು. ಅಲ್ಲಿನ ಬೆಲೆಗಳು ಜನಸಾಮಾನ್ಯರ ಕೈಗೆಟುಕದಷ್ಟು ಮೇಲ್ದರ್ಜೆಯಲ್ಲೇ ಇತ್ತು. ಒಂದು ದಿನ ಒಬ್ಬ ಪಾರ್ಸಿ ಯುವಕ ಹೋಟೆಲ್ ಅನ್ನು ಪ್ರವೇಶಿಸಿದ. ಆದರೆ ಹೋಟೆಲ್ ನವರು ಅವನನ್ನು ಒಳಗೆ ಹೋಗಲು ಬಿಡಲಿಲ್ಲ. ಏಕೆಂದು ಕೇಳಿದಾಗ ಹೋಟೆಲ್ ಕೇವಲ ಬಿಳಿಯರಿಗಾಗಿ ಮಾತ್ರ. ಕಂದು ಬಣ್ಣದ ಭಾರತೀಯರಿಗೆ ಪ್ರವೇಶವಿಲ್ಲವೆಂದು ಖಡಖಂಡಿತವಾಗಿ ತಿಳಿಸಲಾಯಿತು. ಹಣಕ್ಕಿಂತ ದೇಹದ ಬಣ್ಣ ಮುಖ್ಯವೆಂದು ಯುವಕನನ್ನು ಬಲಾತ್ಕಾರವಾಗಿ ಹೊರದೂಡಲಾಯಿತು. ಹೊರಗಡೆ ಹೋಗುವುದಕ್ಕೆ ಮುಂಚೆ ಯುವಕ ದೃಢವಾದ ದನಿಯಲ್ಲಿ "ನಾನು ಹೋಗುತ್ತಿದ್ದೇನೆ . ಆದರೆ ನಿಮ್ಮ ಹೋಟೆಲ್ ಅನ್ನೂ ಮೀರಿಸುವ ಉತ್ಕೃಷ್ಟ ದರ್ಜೆಯ ಹೋಟೆಲ್ ಸ್ಥಾಪಿಸುತ್ತೇನೆ . ಅಲ್ಲಿ ಭಾರತೀಯರೂ ಸೇವೆ ಪಡೆಯುವ ಅವಕಾಶವಿರುತ್ತದೆ. ಸೇವೆ ಸಲ್ಲಿಸುವವರಲ್ಲಿ ನಿಮ್ಮಂತಹ ಬಿಳಿಯ ಜನರೂ ಇರುತ್ತಾರೆ " ಎಂದು ಘೋಷಿಸಿ ಹೊರಟು ಹೋದ . ಅವನ ಮಾತುಗಳನ್ನು ಕೇಳಿ ಎಲ್ಲರೂ ನಕ್ಕರು.

ಕೊನೆಗೆ ಅವನ ಬಂಧುಬಳಗದವರು ಅವನನ್ನು "ನೀನು ನಿಜವಾಗಿಯೂ ಭಾತರ್ ಖಾನ ಅಂದರೆ ತಿಂಡಿ ಮನೆ ನಿರ್ಮಿಸುತ್ತೀಯಾ ?"ಎಂದು ಹಾಸ್ಯ ಮಾಡಿ ನಕ್ಕರು . ಹಾಗೆ ಹೋದ ಯುವಕ ಸುಮ್ಮನೆ ಕೂರಲಿಲ್ಲ . ಮುಂಬಯಿಯ ಪ್ರತಿಷ್ಠಿತ ಸ್ಥಳವಾದ ಅಪೋಲೋ ಬಂದರ್ ನಲ್ಲಿ ಒಂದು ಜಾಗವನ್ನು ಖರೀದಿಸಿದ. ವಿದೇಶಿ ಕಟ್ಟಡ ವಿನ್ಯಾಸ ಕಾರರನ್ನು ನೇಮಿಸಿದ. ಒಂದು ದೊಡ್ಡ ವೈಭವೋಪೇತ ಹೋಟೆಲನ್ನು ನಿರ್ಮಿಸಿದ . ಅದು ಮುಂಬಯಿಯಲ್ಲಿ ವಿದ್ಯುತ್ ಶಕ್ತಿಯನ್ನು ಬಳಸುವ ಮೊಟ್ಟ ಮೊದಲನೆಯ ಕಟ್ಟಡವಾಗಿತ್ತು. ಅದರಲ್ಲಿ ಅಮೆರಿಕದಿಂದ ಆಮದು ಮಾಡಿಕೊಂಡ ಫ್ಯಾನುಗಳಿದ್ದವು. ಜರ್ಮನಿಯ ಎಲಿವೇಟರ್ ಗಳಿದ್ದವು . ಟರ್ಕಿ ದೇಶದಿಂದ ತರಿಸಿದ ಸ್ನಾನದ ತೊಟ್ಟಿಗಲಿದ್ದವು . ಪ್ರೆಂಚ್ ದೇಶದಿಂದ ತರಿಸಿದ ದೀಪದ ಸ್ಯಾಂಡಲಿಯರ್ ಗಳಿದ್ದವು. ಅಂದಿನ ಕಾಲದಲ್ಲಿ ಕನಸಿನಲ್ಲೂ ಊಹಿಸಲಾರದಷ್ಟು ವೈಭವಗಳನ್ನು ಕಟ್ಟಡ ಹೊಂದಿತ್ತು. ಒಂದುಸಾವಿರದ ಒಂಬತ್ತು ನೂರ ಮೂರರಲ್ಲಿ ಉದ್ಘಾಟನೆಗೊಂಡು ಭಾರತೀಯರಿಗೂ ಸೇವೆ ಪಡೆಯುವ ಅವಕಾಶವಿದ್ದ ಹೋಟೆಲ್ ನಿರ್ಮಾಣಕ್ಕೆ ಖರ್ಚಾಗಿದ್ದುದ್ದು ನಾಲ್ಕೂವರೆ ಕೋಟಿ ರೂಪಾಯಿಗಳು !. ಮತ್ತು ಸೇವೆ ಸಲ್ಲಿಸುವ ಸಿಬ್ಬಂದಿಯಲ್ಲಿ ಬ್ರಿಟಿಷ್ ಬಟ್ಲರ್ ಗಳು ಇದ್ದರು. ! ಭಾರತೀಯರೆಲ್ಲರೂಹೆಮ್ಮೆಪಡುವಂತಹ ಸಾಧನೆ ಮಾಡಿದ ಯುವಕನ ಹೆಸರು "ಜೆಮ್ ಶೇಟ್ ಜೀ ನಸರ್ ವಾನ್ ಜೀ ಟಾಟ ಮತ್ತು ಹೋಟೆಲ್ ಹೆಸರು "ತಾಜ್ ಹೋಟೆಲ್ "!.

ಅಂದು ಪ್ರಾರಂಭವಾದ ತಾಜ್ ಹೋಟೆಲ್ ಇಂದಿಗೂ ಹೋಟೆಲ್ ಉದ್ಯಮದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಉತ್ಕ್ರುಷ್ಟ
ಸೇವೆಗೆ ಹೆಸರಾಗಿದೆ. ಇಂದು ತಾಜ್ ಹೋಟೆಲ್ ಸಮೂಹ ಭಾರತದಾದ್ಯಂತ ಎಪ್ಪತೈದು ಹೋಟೆಲ್ ಗಳನ್ನೂ ಮತ್ತುವಿದೇಶಗಳಲ್ಲಿ ಹದಿನೈದಕ್ಕೂ ಹೆಚ್ಚು ಹೋಟೆಲ್ ಗಳನ್ನೂ ನಡೆಸುತ್ತಿದೆ. ಇದೆಲ್ಲಕ್ಕಿಂತ ಪ್ರಶಂಸಾರ್ಹ ವಿಷಯವೆಂದರೆ ತಾಜ್ ಹೋಟೆಲ್ ಗಳನ್ನೂ ನಡೆಸುವ ಇಂಡಿಯನ್ ಹೋಟೆಲ್ ಕಂಪನಿಯ ಲಾಭದ ಶೇಕಡ ಅರವತ್ತರಷ್ಟು ಭಾಗ ಎಲ್ಲಿಗೆ ಹೋಗುತ್ತದೆ ಗೊತ್ತಾ? ಬಾಂಬೆ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ಇತರೆ ವೈದ್ಯಕೀಯ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಬಳಕೆ ಆಗುತ್ತದೆ.

ಬದುಕಿನಲ್ಲಿ ಅನೇಕ ಬಾಗಿಲುಗಳು ನಮಗೆ ಪ್ರವೇಶ ನಿರಾಕರಿಸಬಹುದು . ನಾವು ಅಂತಹ ಸಂದರ್ಭಗಳಲ್ಲಿ ಬಾಗಿಲನ್ನೇ ಮುರಿದು ಹಾಕುವ ಹುಂಬತನ ತೋರಬಹುದು. ಅಥವಾ ಅಳುತ್ತಾ ಕೂರುವ ಮೂರ್ಖತನ ತೋರಿಸಬಹುದು. ಅಥವಾ ಜೆಮ್ ಶೇಡ್ ಜೀಯವರಂತೆ ನಮಗೆ ಪ್ರವೇಶ ನಿರಾಕರಿಸಿದ ಬಾಗಿಲಿಗಿಂತ ದೊಡ್ಡ ಬಾಗಿಲನ್ನು ನಾವೇ ನಿರ್ಮಿಸುವ ಮುಂದಾಳುತನ ತೋರಿಸಬಹುದು.!

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧-9632172486












ಸೋಮವಾರ, ಆಗಸ್ಟ್ 16, 2010

ಜೀವನದಲ್ಲಿ ಮಾನಸಿಕವಾಗಿ ಸತ್ತವರನ್ನು ಬದುಕಿಸುವ ಹಾಯ್ ಬೆಂಗಳೂರು ಪತ್ರಿಕೆಯ ರವಿಬೆಳಗೆರೆಯ ಖಾಸ್ ಬಾತ್ ಹಾಗೂ ಬಾಟಮ್ ಐ -ಟಾಮ್ ಗಳ ಬಗ್ಗೆ ನನ್ನ ಒಂದು ಅನಿಸಿಕೆ .

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು.

" ಎಲ್ಲರೂ ದುಡಿಯ ಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಸುಮಾರು ಎಂಟು ವರ್ಷಗಳ ಹಿಂದಿನ ನೆನಪು ನಾನು ಆಗಷ್ಟೇ ಬೆಂಗಳೂರಿಗೆ ಎರಡನೇ ಬಾರಿ ಕೆಲಸಕ್ಕೆಂದು ಹೋಗಿದ್ದೆ. ಆದರೆನನಗೆ ಕೆಲಸ ಸಿಕ್ಕಿರಲಿಲ್ಲ . ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೆ. ಒಂದು ವೇಳೆಯಲ್ಲಿ ನಮ್ಮ ರೂಂ ಮೆಂಟ್ ಅಣ್ಣ ಷಣ್ಮುಖ ಊರಿನಿಂದ ಬಂದಿದ್ದ. ಅವನು ರವಿಬೆಳೆಗೆರೆ ಆಫೀಸಿಗೆ ಹೋಗಬೇಕು . ರವಿಬೆಳಗೆರೆ ಜತೆ ಮಾತನಾಡಬೇಕು ಎಂದು ಹೇಳಿದ. ನಾನು ಯಾವಾಗಲೂ ಹಾಯ್ ಬೆಂಗಳೂರು ಓದುತ್ತಿದ್ದೆ. ನನಗೆ ರವಿ ಬೆಳಗೆರೆ ಯಾ ಬಾಟಮ್ -ಟಾಮ್ ಹಾಗೂ ಖಾಸ್ ಬಾತ್ಗಳು ನನ್ನನ್ನು ತುಂಬಾ ಆಕರ್ಷಿಸಿದ್ದವು . ಒಂದೊಂದು ಬಾರಿ ನನಗೆ ಕೆಲಸ ಇಲ್ಲದಿದ್ದರಿಂದ ಪತ್ರಿಕೆ ಕೊಳ್ಳಲೂ ಸಾಧ್ಯವಾಗುತ್ತಿರಲ್ಲಿಲ್ಲ. ಒಂದು ವೇಳೆಯಲ್ಲಿ ನನ್ನ ಅಕ್ಕ ಹೆಚ್ಚು ಓದಿದವಳಲ್ಲ . ಭಾವನೂ ಕೂಡ ಹೆಚ್ಚು ಓದಿದವರಲ್ಲ. ಅವರು ಎರಡು ಮೂರು ಬಾರಿ ನನ್ನಮನಸ್ಸಿನ ಸ್ತಿತಿಯನ್ನು ಗುರುತಿಸಿ ಅವರು ಊರಿನಿಂದ ಬರುವಾಗ ಪತ್ರಿಕೆಯನ್ನು ತೆಗೆದುಕೊಂಡು ಬಂದು ಕೊಟ್ಟಿದ್ದರು.

ನನಗೂ ಕೂಡ ರವಿ ಬೆಳೆಗೆರೆ ಯನ್ನು ನೇರವಾಗಿ ನೋಡಬೇಕು ಅನಿಸಿತು. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯರುಹೇಳಿದ್ದೂ ಹಾಲು ಅನ್ನ ಅನ್ನುವ ರೀತಿ ನಾನು ಹೋಗಲು ಒಪ್ಪಿದೆ. ಇಬ್ಬರೂ ಹೋಗಿ ನಾವು ಶಿವ ಮೊಗ್ಗಾದಿಂದ ಬಂದಿದ್ದೇವೆ , ರವಿಬೆಳಗೆರೆ ಯವರನ್ನು ನೋಡಬೇಕು ಎಂದು ಅವರ ಆಫೀಸಿನ ಸಿಬ್ಬಂದಿಯವರೊಡನೆ ಹೇಳಿದೆವು. ಅವರು ರವಿ ಬೆಳೆಗೆರೆ ಬಂದತಕ್ಷಣ ನಮ್ಮನ್ನು ಮೊದಲು ಅವರನ್ನು ಬೇಟಿ ಮಾಡಲು ಅವಕಾಶ ಕೊಟ್ಟರು. ನಾನು ರವಿಬೆಳೆಗೆರೆ ಯವರನ್ನು ಕೇಳಿದೆ .? "ಸರ್ . ನೀವು ಸಮಾಜದಲ್ಲಿ ನಡೆಯುವ ಕೆಟ್ಟ ಕೆಲಸಗಳ ಬಗ್ಗೆ ಬರೆಯುತ್ತೀರಿ ಆದರೆ ಸರಕಾರದವರು ಯಾಕೆ ಕ್ರಮ ಕೆಟ್ಟ ಕೆಲಸ ಮಾಡಿದವರಬಗ್ಗೆ ಜರುಗಿಸುವುದಿಲ್ಲ ?"ಎಂದು ಕೇಳಿದೆ.

ಅದಕ್ಕೆ ರವಿಬೆಳಗೆರೆ ನಗುತ್ತಾ ಹೇಳಿದರು ನಾಗರಾಜ್ ನೀವೂ ರೈತಾಪಿ ವರ್ಗದಿಂದ ಬಂದವರು . ನೀವು ಬತ್ತವನ್ನುಬೆಳೆಯುತ್ತೀರಿ . ಅದನ್ನು ಮಾರುತ್ತೀರಿ , ಬತ್ತ ಕೊಂಡ ವ್ಯಕ್ತಿ ಅದನ್ನು ಅಕ್ಕಿ ಮಾಡಿಸಿಯೋ -ಅವಲಕ್ಕಿ ಮಾಡಿಸಿಯೋ ಬೇರೆಯೊಬ್ಬವ್ಯಾಪಾರಿಗೆ ಮಾರುತ್ತಾನೆ. ಅಕ್ಕಿ ಅಥವಾ ಅವಲಕ್ಕಿ ಕೊಂಡ ವ್ಯಕ್ತಿ ಗ್ರಾಹಕನಿಗೆ ತಲುಪಿಸುತ್ತಾನೆ. ಒಂದು ಸರಪಳಿಯಲ್ಲಿಎಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾರೆಂದು ಹೇಳಲು ಬರುವುದಿಲ್ಲ. ಕೆಲವರು ಪ್ರಾಮಾಣಿಕವಾಗಿ ದುಡಿಯುತ್ತಾರೆ. ಕೆಲವರು ಹಾಗೆ ಇರಲೂ ಬಹುದು. ನಾನು ಒಂದು ಸರಪಳಿಯಲ್ಲಿ ಇರುವ ಒಂದು ಲಿಂಕ್ ರೀತಿ . ನಾನು ನನಗೆ ತಿಳಿದಿದ್ದನ್ನುನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಅಷ್ಟೇ . ಬೇರೆಯವರಿಗೆ ನನ್ನಂತೆ ಕೆಲಸ ಮಾಡಿ ಎಂದು ಒತ್ತಾಯಿಸುವುದು ನನ್ನಕೆಲಸವಲ್ಲ ಎಂದರು.

ಮತ್ತೊಂದು ಮುಖ್ಯ ಅಂಶ ನಾನು ಅಲ್ಲಿ ಗಮನಿಸಿದ್ದು ಅವರ ಆಫೀಸಿನಲ್ಲಿ ಅಂದರೆ ನಾವು ಹೋಗಿದ್ದು ಗುರುವಾರ ದಿನ ಅವರಆಫೀಸಿನ ಸಿಬ್ಬಂದಿಗಳು ಹಾಯ್ ಬೆಂಗಳೂರು ಪತ್ರಿಕೆಯನ್ನು ಓದುತ್ತಿರುವುದು ಕಂಡೆ. ಅಂದರೆ ಒಬ್ಬ ಮುಂದಾಳು ಅಥವಾ ನಾಯಕಎಲ್ಲರಿಗೂ ಒಂದೇ ರೀತಿಯ ಸರಿಸಮಾನ ನಡೆಯಬೇಕು. ಮಾರುಕಟ್ಟೆಗೆ ಪತ್ರಿಕೆ ಗುರುವಾರ ಹೋದರೆ ಅವರ ಆಫಿಸಿನಲ್ಲಿಯೂ ಕೂಡಅದೇ ದಿನ ಪತ್ರಿಕೆ ಓದುತ್ತಿರುವುದು ನನಗೆ ವಿಚಿತ್ರವಾಗಿ ಕಂಡು ಬಂತು . ರವಿ ಬೆಳೆಗೆರೆ ವಿಷಯವನ್ನು ಬಾಂಬ್ ಬ್ಲಾಸ್ಟ್ ಮಾಡಿದಹಾಗೆ ಹೇಗೆ ತಮ್ಮ ಜತೆಗೆ ಇರುವವರಿಗೂ ಗೊತ್ತಿಲ್ಲದ ಹಾಗೆ ವಿಷಯವನ್ನು ಒಂದೇ ಬಾರಿ ಓದುಗರಿಗೆ ಹಾಗೂ ಆಫೀಸಿನಸಿಬ್ಬಂಧಿಗಳಿಗೆ ಒಂದೇ ಬಾರಿ ವಿಷಯವನ್ನು ತಿಳಿಸುತ್ತಾರೆ. ಇದು ಒಂದು ಯಶಸ್ವಿ ಪತ್ರಿಕೆಯ ಯಶಸ್ಸಿನ ತಂತ್ರ ಅಲ್ಲದೆ ಮತ್ತೇನು ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486









ಭಾನುವಾರ, ಆಗಸ್ಟ್ 15, 2010

ನನ್ನ ಮೆಚ್ಚಿನ ಅಧ್ಯಾಪಕಿ ಸುನಂದಾ ಕನಕ ಪಂಡಿತ್ ಹೇಳಿದ ಕಥೆ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.

" ಎಲ್ಲರೂ ದುಡಿಯಬೇಕು" ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ .

ನಾನು ಹೈಸ್ಕೂಲ್ ಹಾಗೂ ನನ್ನ ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಮುಗಿಸಿದ್ದು ಸಾಗರ ತಾಲೋಕಿನ , ಆನಂದಪುರಂ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು .ದಾಸಕೊಪ್ಪ , ಆನಂದಪುರಂ ನಲ್ಲಿ . ಆ ವೇಳೆಯಲ್ಲಿ ನನ್ನ ಮೇಲೆ ಅಗಾಧ ಪರಿಣಾಮ ಬೀರಿದವರು ಕನ್ನಡ ಪಂಡೀತ್ ಸದಾನಂದ ನಾರಾಯಣ ನಾಯಕ್ , ಹಾಗೂ ವಿಜ್ಞಾನ ಬೋಧನೆ ಮಾಡುತ್ತಿದ್ದ ಎಸ್.ಕೆ . ಪಿ . ಟೀಚರ್ .

ಆಗಷ್ಟೇ ಸುನಂದಾ ಕನಕ ಪಂಡೀತ್ ರವರ ಜೀವನದಲ್ಲಿ ಒಂದು ಕಹಿ ಘಟನೆ ಜರುಗಿತ್ತು. ಅವರ ಪುತ್ರ ನೊಬ್ಬ ಆಕಸ್ಮಿಕವಾಗಿ ಸಾವಿಗೆ ಈಡಾಗಿದ್ದ. ಆದರೆ ಸಾಯುವ ವಯಸ್ಸಿನವನಾಗಿರಲಿಲ್ಲ. ನನಗಿಂತ ಚಿಕ್ಕವನು. ಇದಾದ ಸುಮಾರು ಒಂದೆರಡು ತಿಂಗಳನಂತರ ಸುನಂದಾ ಕನಕ ಪಂಡೀತ್ ನಮ್ಮ ಪಕ್ಕದ ಊರು ಅಡೂರು ಅಲ್ಲಿ ನನಗೆ ಹಿಂದಿ ಕಲಿಸಿದ ಸುಶೀಲಮ್ಮ ಸತ್ಯನಾರಾಯಣ . ಹಾಗೂ ನನಗೆ ಜೀವನದಲ್ಲಿ ಮಾರ್ಗ ದರ್ಶನ ನೀಡಿದ ತುಂಬಾ ಹತ್ತಿರದ ಗೆಳತಿ ಗೋದಲಕ್ಷ್ಮಿ ಅವರ ಮನೆಗೆ ಬಂದಿದ್ದರು. ಹಾಗೆಯೇ ನಮ್ಮ ಮನೆಗೂ ಬಂದರು. ನನಗೆ ಧೈರ್ಯ ವಾಗಿ ಅವರನ್ನು ನಡೆದ ಘಟನೆ ಬಗ್ಗೆ ಕೇಳಲು ಮನಸ್ಸು ಬರಲಿಲ್ಲ. ಆದರೂ ಸುತ್ತುಬಳಸಿ ಕೇಳಿದೆ.

ಅವರು ಗಂಭೀರವಾಗಿ ಹೀಗೆ ಹೇಳಿದರು. "ನಾಗರಾಜ ಜೀವನ ದಲ್ಲಿ ಕೆಟ್ಟದ್ದು ಎನ್ನುವುದು , ನಡೆಯಲೇ ಬೇಕು, ಎನ್ನುವ ಘಟನೆ ಅದು ಅನ್ನಿವಾರ್ಯ ಕೂಡ. ಒಂದು ಹಸುಗಳ ಹಿಂಡಿನಲ್ಲಿ ನೂರು ಹಸುಗಳು , ಇಪ್ಪತ್ತೈದು ಕರುಗಳು ಇವೆ ಎಂದು ಭಾವಿಸು. ಆ ಕರುಗಳು ಹೇಗೆ ಅವುಗಳ ತಾಯಿಯ ಹತ್ತಿರ ಹೋಗಿ ಹಾಲನ್ನು ಕುಡಿಯುತ್ತವೆಯೇ ಹೊರತು ಬೇರೆ ಹಸುಗಳ ಹತ್ತಿರ ಹೋಗಿ ಹಾಲು ಕುಡಿಯುವುದಿಲ್ಲ. ಹಾಗೆಯೇ ಸಾವಿರ ಜನರ ನಡುವೆ ಇರುವಾಗ ನೋವಿನ ಘಟನೆ ನಮಗೆ ಬರಬೇಕಾದರೆ ಬರಲೇ ಬೇಕು. ಅದು ವಿಧಿ ಬರೆದದ್ದು." ಎಂದರು.

ಈಗ ಯೋಚಿಸಿದರೂ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಬರೆ ಓದುವ ವಿದ್ಯೆ ಜತೆಗೆ ಜೀವನ ಭೋಧನೆ ನೀಡುವ ಶಿಕ್ಷಕರು ನಮಗೆ ಮಾರ್ಗ ದರ್ಶಕರಲ್ಲವೇ ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧-9632172486





ಶನಿವಾರ, ಆಗಸ್ಟ್ 14, 2010

ಒಂದು ಮಹತ್ತರ ಕನಸು, ಛಲ ಬಿಡದ ಪರಿಶ್ರಮ , ತಾಳ್ಮೆ ಮತ್ತು ಕಷ್ಟಗಳನ್ನೆದುರಿಸಿ ನಿಲ್ಲುವ ಧೈರ್ಯವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು .

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು.

"ಎಲ್ಲರೂ ದುಡಿಯಲೇ ಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಎಲ್ಲ ರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳೊಂದಿಗೆ

ವಿಜಯ ಸಿಂಗ್ ಎಂಬುದು ಭಾರತೀಯ ಹೆಸರಾದರೂ, ಆತ ಭಾರತಿಯನಲ್ಲ. ಏಕೆಂದರೆ ಒಂದು ಸಾವಿರದ ಒಂಬತ್ತು ನೂರಅರವತ್ತಾ ಮೂರರಲ್ಲಿ ಜನಿಸಿದ್ದು ಫಿಜಿ ದೇಶದಲ್ಲಿ, ಅವರ ತಂದೆಗೆ ವಿಮಾನ ನಿಲ್ದಾಣದಲ್ಲಿ ಟೆಕ್ನಿಷಿಯನ್ ಕೆಲಸ ಮತ್ತು ಬಿಡುವಿನಸಮಯದಲ್ಲಿ ಗಾಲ್ಪ್ಹ್ ಆಟದ ತರಬೇತಿ ನೀಡುವ ಹವ್ಯಾಸ . ಗಾಲ್ಪ್ಹ್ ಆಟದ ಮೈದಾನದ ಬಳಿಯಲ್ಲೇ ವಾಸವಿದ್ದುದ್ದರಿಂದ ಬಾಲಕವಿಜಯ್ ಸಿಂಗ್ ಚಿಕ್ಕಂದಿನಿಂದಲೇ ಗಾಲ್ಪ್ಹ್ ಆಟವನ್ನು ನೋಡುತ್ತಾ ಬಂದ. ಆಡಬೇಕೆಂಬ ಆಸಕ್ತಿ ಬೆಳೆಸಿಕೊಂಡ . ಮುಂದೊಂದುದಿನ ವಿಶ್ವ ಚಾಂಪಿಯನ್ ಆಗಬೇಕೆಂಬ ಕನಸು ಕಾಣುತ್ತಿದ್ದ. ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ ಆಟವಾಡಲು ಅವಕಾಶದೊರೆಯುತ್ತಿರಲಿಲ್ಲ. ಏಕೆಂದರೆ ಗಾಲ್ಪ್ಹ್ ಎಂಬುದು ಶ್ರೀಮಂತರು ಮಾತ್ರ ಆಡುವ ಆಟ ಹತ್ತಿರದಿಂದ ಆಟವನ್ನು ನೋಡಿಯಾದರೂತೃಪ್ತಿ ಪಡೋಣವೆಂದು ಗಾಲ್ಪ್ಹ್ ಮೈದಾನದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡ . ಹೀಗೆಯೇ ಇದ್ದಾರೆ ತನ್ನ ಕನಸ್ಸುನನಸಾಗುವುದಿಲ್ಲವೆಂದು ಆತನಿಗೆ ಅರ್ಥವಾಯಿತು . ಹಲವಾರು ಸಂಕಷ್ಟಗಳನ್ನು ಎದುರಿಸಿ ಮಲೇಶಿಯಾಕ್ಕೆ ವಲಸೆ ಹೋದ . ಗಾಲ್ಪ್ಹ್ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡ. ಹಗಲೆಲ್ಲ ಗಾಲ್ಪ್ಹ್ ಬಾಲ್ ಅಭ್ಯಾಸ. ರಾತ್ರಿ ಪ್ಲಾಟ್ ಫಾರಂ ನಲ್ಲಿ ವಾಸ. ಅಭ್ಯಾಸ ಮಾಡುತ್ತಿರುವಾಗಲೇ ಮಲೇಶಿಯಾದಲ್ಲಿ ನೆಲೆಸಬೇಕೆಂದು ಅರ್ಜಿ ಹಾಕಿದ. ಕೈಯ್ಯಲ್ಲಿ ಕಾಸಿಲ್ಲದವನನು ಯಾವ ದೇಶಆದರಿಸುತ್ತದೆ ? . ಈತನ ಅರ್ಜಿ ನಿರಾಕರಿಸಲ್ಪಟ್ಟಿತು. ದೇಶದಿಂದಲೇ ತೆರಳಬೇಕಾದ ದುರವಸ್ಥೆ , ಕಂಡವರಿಗೆಲ್ಲ ಕೈಮುಗಿದು , ಕಾಲು ಹಿಡಿದು, ಕಾಡಿ ಬೇಡಿ , ಅಮೇರಿಕಾ ಸೇರಿಕೊಂಡ . ಈತನ ಆಸಕ್ತಿ ಮತ್ತು ಸಾಮರ್ಥ್ಯ ಕಂಡ ಕೆಲವರು ಸಹಾಯ ಹಸ್ತಚಾಚಿದರು. ಮತ್ತೆ ಗಾಲ್ಪ್ಹ್ ಅಭ್ಯಾಸ ಪ್ರಾರಂಭವಾಯಿತು. ಹಲವಾರು ವರ್ಷಗಳ ಛಲಬಿಡದ ಪರಿಶ್ರಮ ಫಲ ನೀಡಿತು . ಒಂದುಸಾವಿರದ ಒಂಬತ್ತು ನೂರ ಎಂಬತ್ತ ಎರಡರಲ್ಲಿ ವೃತ್ತಿಪರ ಗಾಲ್ಪ್ಹ್ ಆಟಗಾರನಾಗಿ ಆಯ್ಕೆಯಾದ . ಅಂತರಾಷ್ಟ್ರೀಯ ಸ್ಪರ್ಧೆ ಗಳಲ್ಲಿ ಭಾಗವಹಿಸತೊಡಗಿದ.

ಆಶರ್ಯವೆಂದರೆ ಆತನ ಮೊದಲ ಗೆಲುವು ಮಲೇಶಿಯಾದಲ್ಲೇ ದೊರಕಿತು. ಯಾವ ದೇಶ ಆತನಿಗೆ ಆಶ್ರಯ ನಿರಾಕರಿಸಿತ್ತೋಅದೇ ದೇಶದಲ್ಲಿ ಆಟ ಮೊಟ್ಟ ಮೊದಲ ಚಾಂಪಿಯನ್ ಷಿಪ್ಹ್ ಪಡೆದ. ಅದಾದನಂತರ ವಿಜಯ ಸಿಂಗ್ ವಿಜಯಿ ಆಗುತ್ತಲೇಹೋದ. ನೈಜೀರಿಯ , ಐವರಿ ಕೋಸ್ಟ್ , ಎಲ್ .ಬೋಸ್ಕ್ ಓಪನ್ ಪ್ರಶಸ್ತಿ ಮತ್ತು ಕಿಂಗ್ಹ್ ಹಸನ್ ಟ್ರೋಫಿ ಮುಂತಾದವುಗಳನ್ನು ಗೆದ್ದ. ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು . ಆದರೆ ಆರೋಗ್ಯ ಕೈಕೊಟ್ಟಿತು. ಕಟ್ಟು ಮತ್ತು ಬೆನ್ನಿನ ನೋವು ಕಾಡ ಹತ್ತಿತು. ಇನ್ನುಗಾಲ್ಪ್ಹ್ ಆಡಲೆಬಾರದೆಂದು ವೈದ್ಯರು ಕಡ್ಡಾಯ ಮಾಡಿದರು. ವಿಶ್ವ ಚಾಂಪಿಯನ್ ಆಗುವ ಕನಸು ಇನ್ನು ನನಸಾಗಿರಲಿಲ್ಲ. ವಿಜಯ್ ಧೈರ್ಯ ಕಳೆದುಕೊಳ್ಳಲಿಲ್ಲ. ಒಂದು ವರ್ಷ ವಿಶ್ರಾಂತಿ ಪಡೆದು ಮತ್ತೆ ಗಾಲ್ಪ್ಹ್ ಆಡಲು ಮೊದಲು ಮಾಡಿದ. ಪಿ. ಜಿ. . ರೋಕಿ ಆಗಿ ನಾಮಕರಣಗೊಂಡ . ಸ್ಪ್ರಧೆಗಳಲ್ಲಿ ಭಾಗವಹಿಸುತ್ತಲೇ ಹೋಗಿ ಒಂದುಸಾವಿರದ ಒಂಬತ್ತು ನೂರ ತೊಂಬತ್ತ ಎಂಟರಲ್ಲಿವಾಷಿಂಗ್ -ಟನ್ ಪಿ.ಜಿ.. ಚಾಂಪಿಯನ್ ಷಿಪ್ಹ್ ಪ್ರಶಸ್ತಿ ಪಡೆದ. ಕೊನೆಗೆ ಎರಡು ಸಾವಿರದಲ್ಲಿ ವಿಶ್ವ ಚಾಂಪಿಯನ್ ಪ್ರಶಸ್ತಿಪಡೆದು ತನ್ನ ಕನಸು ನನಸ್ಸಾಗಿಸಿಕೊಂಡ.

ಇದೀಗ ವಿಜಯ್ ಸಿಂಗ್ ತನ್ನ ಪತ್ನಿ ಮತ್ತು ಮಗನ್ನೊಂದಿಗೆ ಪ್ಲೋರಿ -ಡಾದ ಪೊಂಟೆವೆಡ್ರಾ ಬೀಚಿನ ಬೃಹತ್ ಬಂಗಲೆಯಲ್ಲಿವಾಸಿಸುತ್ತಿದ್ದಾರೆ . ವಿಜಯ್ ಸಿಂಗ್ ಚಾರಿಟಬಲ್ ಫೌಂಡೆಶನ್ ಎಂಬ ಸಂಸ್ತೆಯನ್ನು ಸ್ತಾಪಿಸಿದ್ದಾರೆ. ಅಸಹಾಯಕ ಸ್ತ್ರೀಯರ ಮತ್ತುಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಒಂದು ಮಹತ್ತರ ಕನಸು. ಛಲ ಬಿಡದ ಪರಿಶ್ರಮ . ತಾಳ್ಮೆ ಮತ್ತು ಕಷ್ಟಗಳನ್ನೆದುರಿಸಿ ನಿಲ್ಲುವಧೈರ್ಯವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ವಿಜಯಸಿಂಗ್ಹ್ ಅವರ ಸಾಹಸಗಾಥೆ ಎಲ್ಲರಿಗೂಮಾರ್ಗದರ್ಶಿಯಾಗುವಂಥದ್ದು.


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
















ಶುಕ್ರವಾರ, ಆಗಸ್ಟ್ 13, 2010

ಈ ಪ್ರಶ್ನೆಗೆ ಉತ್ತರಿಸಿ ಕನ್ನಡ ಪುಸ್ತಕ ಬಹುಮಾನವಾಗಿ ಗೆಲ್ಲಿ

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು

"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಪ್ರಶ್ನೆ ;- ಭಾರತೀಯರು ಚಂದ್ರ ಲೋಕಕ್ಕೆ ಹೋಗುವಾಗ ಯಾವ ಪೆನ್ನನ್ನು ಬರೆಯಲು ತೆಗೆದುಕೊಂಡು ಹೋಗಿದ್ದರು ?

ಉತ್ತರ ಕಳುಹಿಸುವಾಗ ನಿಮ್ಮ ಹೆಸರು, ಅಂಚೆ ವಿಳಾಸ, ಮೊಬೆಲ್ ಅಥವಾ ದೂರವಾಣಿ ಸಂಖ್ಯೆ ತಪ್ಪದೆ ಬರೆಯಿರಿ .ವಿಜೇತರಾದವರಿಗೆ ದೂರವಾಣಿ ಮೂಲಕ ತಿಳಿಸಲಾಗುವುದು.

ಶುಭದಿನದ ಶುಭಾಶಯ ಗಳೊಂದಿಗೆ

.ಟಿ.ನಾಗರಾಜ

ಗುರುವಾರ, ಆಗಸ್ಟ್ 12, 2010

ಚಿಕ್ಕ ಮಗುವಿಗೆ ತಾಯಿ ಒತ್ತಾಯಿಸಿ ತಿನ್ನಿಸುವುದೇಕೆ ?

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ಬೆಳಗಿನ ವಂದನೆಗಳು.

"ಎಲ್ಲರೂ ದುಡಿಯಲೇ ಬೇಕು" ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ.

ಒಂದು ಕ್ಷಣ ಯೋಚಿಸಿ . ಮೊದಲು ನಾವು ಏನಾಗಿದ್ದೇವೋ ಎಲ್ಲ ಹಂತಗಳನ್ನು ನಾವು ಪ್ರತಿನಿತ್ಯ ನಮ್ಮ ಕಣ್ಣ ಮುಂದೆನೋಡುತ್ತಿರುತ್ತೇವೆ. ನಾವು ತುಂಬಾ ಚಿಕ್ಕರಿದ್ದೆವು ಆಗ ನಮ್ಮನ್ನು ನಮ್ಮ ತಂದೆ ,ತಾಯಿ ಅಥವಾ ನಮ್ಮ ಅಕ್ಕನೋ , ಅಮ್ಮನೋಯಾರೋ ನಮ್ಮನ್ನು ಬಟ್ಟೆ ಹಾಕು ಎಂದು ಒತ್ತಾಯಿಸುವುದು , ನಾವು ಬಟ್ಟೆ ಹಾಕಿಕೊಳ್ಳುವುದಕ್ಕು ಪ್ರತಿಭಟಿಸುವುದು. ಕೊನೆಗೆನಮ್ಮನ್ನು ಮೊದಲು ಪ್ರೀತಿಯಿಂದ ಮೂದಲಿಸಿ ಬಟ್ಟೆ ಹಾಕಿಸುವುದು . ಅದೂ ನಾವು ಕೇಳದೆ ಹೋದಾಗ ಎರಡು ಒದೆ ಕೊಟ್ಟು ಬಟ್ಟೆಹಾಕಿಸಿ , ಅಳುವ ನಮ್ಮನ್ನು ಸುಮ್ಮನಿರಿಸುವುದು . ಆದರೆ ಇಂದು ನಾವು ಬೆಳೆದು ದೊಡ್ಡವರಾಗಿದ್ದೇವೆ , ನಮ್ಮ ಮಕ್ಕಳು ರೀತಿಏನಾದರೂ ಹಠ ಮಾಡಿದಾಗ ಪಿತ್ತ ನೆತ್ತಿಗೆ ಏರುತ್ತದೆ . ಆದರೆ ನಾವು ಚಿಕ್ಕವರಾಗಿದ್ದಾಗ ನಾವು ಮಾಡಿದ ಪ್ರತಿ ಭಟನೆ ಮರೆತಿದ್ದೇವೆ.

ಇದು ಕೇವಲ ಬಟ್ಟೆ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ . ಊಟ ಮಾಡುವುದಕ್ಕೆ. ಕಣ್ಣಿಗೆ ಕಂಡಿದ್ದು ಪೋಷಕರುಕೊಂಡು ಕೊಡಲೇ ಬೇಕು ಮುಂತಾದ ಹಲವಾರು ಪ್ರತಿಭಟನೆಗಳನ್ನು ಸಣ್ಣ ವಯಸ್ಸಿನಲ್ಲಿ ಮಾಡಿದ್ದೇವೆ . ಆದರೆ ನಾವು ಇಂದುಎಲ್ಲವನ್ನು ಮರೆತಿದ್ದೇವೆ. ಸಮಾಜ ಅಥವಾ ಪ್ರಕೃತಿ ಒಂದು ರೀತಿಯ ನಮ್ಮ ನೆರಳಿನ ಪ್ರತಿಗಳು ಇದ್ದಹಾಗೆ ಅನ್ನಿಸುತ್ತದೆ. ನಮ್ಮ ಮನೆಯ ಮುಂದಿರುವ ಹೂವಿನ ತೋಟವನ್ನೇ ನೋಡಿ ಅದರಲ್ಲಿ ಬಗೆ ಬಗೆಯ ಹೂವಿನ ಗಿಡಗಳು ಇರುತ್ತವೆ. ಮೊಗ್ಗಾಗುತ್ತದೆ. ಹೂವಾಗುತ್ತದೆ. ಚೆನ್ದಾವಾಗಿ ಕಾಣುತ್ತದೆ. ಅದೃಷ್ಟವಿದ್ದರೆ ದೇವರ ಮುಡಿ, ಇಲ್ಲವೇ ಹೆಂಗಳೆಯರ ಮುಡಿ ಅದೃಷ್ಟ ಕೆಟ್ಟರೆ ಅದೇಗಿಡದಲ್ಲಿ ಬಾಡಿ ಒಣಗಿ ಹೇಳ ಹೆಸರಿಲ್ಲದಂತೆ ಕೊಳೆತು ಗೊಬ್ಬರವಾಗಿ ಹೋಗುವುದು. ಆದರೆ ನಮ್ಮ ಮಾನವರ ವಿಷಯದಲ್ಲಿಯೂಅಷ್ಟೇ ಎಷ್ಟೋ ಜನ ಬರುತ್ತಾರೆ . ತಮ್ಮ ಬದುಕಿನ ಒಂದು ಕೊಡುಗೆಯನ್ನು ಕೊಟ್ಟು ಹೋಗುತ್ತಾರೆ. ಇವೆಲ್ಲವನ್ನೂ ನೋಡುತ್ತಾಇದ್ದೇವೆ.

ಆದರೆ ಸ್ವಲ್ಪ ಯೋಚಿಸಿದರೆ ನಾವು ಹಿಂದೆ ಏನು ಆಗಿದ್ದೆವು . ಮುಂದೆ ಏನು ಆಗಬಹುದು ಎಂಬುದನ್ನು ಊಹಿಸಿತಿಳಿದುಕೊಳ್ಳಬಹುದು. ಒಬ್ಬ ತಾಯಿ ಒಂದು ಮಗುವಿಗೆ ಹಾಲು ಉಣಿಸುತ್ತಿದ್ದರೆ ನಾನು ಚಿಕ್ಕವನಾಗಿದ್ದಾಗ ಇಲ್ಲವೇಚಿಕ್ಕವಳಾಗಿದ್ದಾಗ ನಮ್ಮ ಅಮ್ಮ ಇದೆ ರೀತಿ ಹಾಲು ಉಣ್ಣಿಸುತ್ತಿದ್ದಳು ಎಂಬ ಭಾವನೆ.

ಇಷ್ಟೆಲ್ಲ ಮಾತು ಯಾಕೆ ಹೇಳುತ್ತಿದ್ದೇನೆಂದರೆ ನಮ್ಮಲ್ಲಿ ನಮಗೆ ಏನು ಗೊತ್ತಿರುವುದಿಲ್ಲವೋ ಅವೆಲ್ಲವನ್ನು ನಾವು ದ್ವೇಷಿಸುತ್ತೇವೆ. ಆದರೆ ಅದರ ಬಗ್ಗೆ ತುಂಬಾ ಗೊತ್ತಾದಾಗ ಅದನ್ನು ಪ್ರೀತಿಸುತ್ತೇವೆ. ನಮ್ಮ ನೆಟ್ ನಾಗ ಬಗ್ಗೆ ಯೂ ಇದೆ ಯಾರಿಗೆ ನೆಟ್ ನಾಗ ಬಗ್ಗೆ ಚೆನ್ನಾಗಿ ಗೊತ್ತು ಅವರು ನೆಟ್ ನಾಗ ಕ್ಕೆ ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿಕೊಂಡಿದ್ದಾರೆ . ಆದರೆ ನಮ್ಮ ಓದುಗರು ಸ್ವಲ್ಪಅವರ ಸ್ನೇಹಿತರಿಗೂ ನೆಟ್ ನಾಗ ಬಗ್ಗೆ ತಿಳಿಸಿದರೆ ತುಂಬಾ ಚೆನ್ನಾಗಿರುತ್ತದೆ. ಸ್ವಲ್ಪ ನಿಮ್ಮ ಸ್ನೇಹಿತರಿಗೂ ನೆಟ್ ನಾಗದ ಬಗ್ಗೆತಿಳಿಸುತ್ತಿರೆಂಬ ನಂಬಿಕೆ ಯಿಂದ ಇವತ್ತಿನ ಲೇಖನವನ್ನು ಮುಗಿಸುತ್ತೇನೆ.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ .ಕಂ
+೯೧-9632172486







ಬುಧವಾರ, ಆಗಸ್ಟ್ 11, 2010

ಸಕಾರಾತ್ಮಕ ಚಿಂತನೆ ಯಶಸ್ಸಿಗೆ ಕಾರಣ !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.
"ಎಲ್ಲರೂ ದುಡಿಯಲೇ ಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಜಾರ್ಜ್ ಡ್ಯಾನ್ ಟ್ಜಿಗ್ ಎಂಬ ಯುವಕ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿದ್ದ . ಅಪ್ರತಿಮ ಬುದ್ಧಿವಂತನಲ್ಲದಿದ್ದರೂ ಹಿಡಿದದ್ದನ್ನು ಸಾಧಿಸುವ ಮನೋಭಾವವಿತ್ತು. ಒಂದು ದಿನ ಪ್ರೊ.ನೇಮ್ಯಾನ್ ಅವರ ತರಗತಿಗೆತಡವಾಗಿ ಬಂದ. ಕಪ್ಪು ಹಲಗೆಯ ಮೇಲೆ ಎರಡು ಗಣಿತಶಾಸ್ತ್ರದ ಸಮಸ್ಯೆಗಳನ್ನು ಬರೆಯಲಾಗಿತ್ತು. ಬಹುಶ; ಅದು ಹೋಂ ವರ್ಕ್ ಇರಬಹುದೆಂದು ಭಾವಿಸಿದ ಜಾರ್ಜ್ ಅದನ್ನು ತನ್ನ ಪುಸ್ತಕದಲ್ಲಿ ಬರೆದು ಕೊಂಡ. ಸಂಜೆ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸಿದ. ಅವು ಜಟಿಲ ಸಮಸ್ಯೆಗಳಾಗಿದ್ದವು. ಅವನ ತಲೆ ಚಿಟ್ಟು ಹಿಡಿಯಿತು. ಆದರೂ ಪ್ರಯತ್ನ ಬಿಡಲಿಲ್ಲ. ಹಲವಾರು ದಿನಗಳ ಕಠಿಣ ಶ್ರಮದನಂತರ ಎರಡೂ ಸಮಸ್ಯೆಗಳಿಗೆ ಪರಿಹಾರ ದೊರಕಿತು. ಮರುದಿನ ಪರಿಹಾರಗಳನ್ನೋಳಗೊಂಡಿದ್ದ ಕಾಗದಗಳನ್ನು ಪ್ರೊಫೆಸರಿಗೆಸಲ್ಲಿಸಿದ. ಕಾರ್ಯಮಗ್ನರಾಗಿದ್ದ ಪ್ರೊಫೆಸರ್ ಅದನ್ನು ಮೇಜಿನ ಮೇಲಿಟ್ಟು ಹೋಗಲು ಹೇಳಿದರು. ಮೇಜು ಕಾಗದ ಪತ್ರಗಳಿಂದತುಂಬಿಹೋಗಿತ್ತು. ಅವುಗಳ ಮಧ್ಯೆ ತನ್ನ ಉತ್ತರಪತ್ರಿಕೆ ಎಲ್ಲಿ ಕಳೆದು ಹೋಗುತ್ತದೋ ಎಂಬ ಚಿಂತೆಯಾಯಿತಾದರೂ ಬೇರೆದಾರಿಯಿಲ್ಲದೆ ಅದನ್ನು ಅಲ್ಲೇ ಇಟ್ಟು ಬಂದ. ಮೂರು ನಾಲ್ಕು ವಾರಗಳಾದರೂ, ಪ್ರೊಫೆಸರ್ ಅವನ ಉತ್ತರ ಪತ್ರಿಕೆಯ ಬಗ್ಗೆ ಏನೂಹೇಳಲಿಲ್ಲ. ಮುಂದೊಂದು ದಿನ ಭಾನುವಾರ ಬೆಳಗಿನ ಸಮಯ ಜಾರ್ಜ್ ಇನ್ನು ಹಾಸಿಗೆಯಿಂದೆದ್ದಿರಲಿಲ್ಲ . ಅವನ ಕೊಟಡಿಯಬಾಗಿಲನ್ನು ಯಾರೋ ದಬದಬ ತಟ್ಟುತ್ತಿದ್ದರು . ಬಾಗಿಲು ತೆಗೆದಾಗ ಅಲ್ಲಿ ಅವರ ಪ್ರೊಫೆಸರ್ ನಿಂತಿದ್ದರು. ಆತನಿಗೆ ಆಶ್ಚರ್ಯ . ಅವರು "ಜಾರ್ಜ್ ! ಜಾರ್ಜ್ ! ಎರಡು ಸಮಸ್ಯೆಗಳನ್ನು ನೀನು ಬಿಡಿಸಿದೆಯಾ ? ನನಗೆ ನಂಬಲಾಗುತ್ತಿಲ್ಲ !" ಎಂದು ಒಂದೇಉಸಿರಲ್ಲಿ ಕಿರುಚಿದರು.

" ಹೌದು ! ನಾನು ಹೋಂ ವರ್ಕ್ ಮಾಡಿದೆ . ನನ್ನಿಂದ ಬೇರೆ ಏನಾದರೂ ನಿರೀಕ್ಷೆಯಿತ್ತೆ ?" ಎಂದು ಜಾರ್ಜ್ ಕೇಳಿದ. ಆಗಪ್ರೊಫೆಸರ್ " ಇದುವರೆವಿಗೂ ಸಮಸ್ಯೆಗಳಿಗೆ ಯಾರೂ ಪರಿಹಾರ ಕಂಡುಹಿಡಿದಿಲ್ಲ . ಐ -ನ್ಹ್ - ಸ್ಟೀನ್ ರಂತಹ ವಿಜ್ಞಾನಿ ಕೂಡಇದರಲ್ಲಿ ವಿಫಲರಾಗಿದ್ದಾರೆ . ಎಂದು ತಿಳಿಸಲು ನಾನು ಅವನ್ನು ಕಪ್ಪು ಹಲಗೆಯ ಮೇಲೆ ಬರೆದಿದ್ದೆ. ಬಹುಶ; ನೀನು ಅಂದುತಡವಾಗಿ ಬಂದದ್ದರಿಂದ ಅದನ್ನು ಹೋಂ ವರ್ಕ್ ಎಂದು ಭಾವಿಸಿರಬೇಕು . ಆದರೆ ಅದಕ್ಕೆ ಪರಿಹಾರ ಕಂಡುಹಿಡಿದು ಒಂದು ದೊಡ್ಡವಿಕ್ರಮ ಸಾಧಿಸಿದ್ದೀಯ . ಅಭಿನಂದನೆಗಳು ! ಇದನ್ನು ವೈಜ್ಞಾನಿಕ ಪ್ರಪಂಚಕ್ಕೆ ತಿಳಿಸಲು ನಾನು ಕಾತುರನಾಗಿದ್ದೇನೆ . ಏನೇನ್ನುತ್ತಿಯಾ?" ಎಂದರು.

ಪ್ರಕಟವಾದ ಕೆಲವೇ ದಿನಗಳಲ್ಲಿ ಆತನ ಸಂಶೋಧನೆ ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡಿತು. ಮುಂದೆ ಜಾರ್ಜ್ ಡ್ಯಾ ನ್ಟ್ಜಿಗ್ ಸ್ಟ್ಯಾನ್ ಪೋರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆ ಮತ್ತು ಕಂಪ್ಯೂಟರ್ ಮಿಭಾಗದಮುಖ್ಯಸ್ಥರಾಗಿ "ಲೀನಿಯರ್ ಗಣಿತಶಾಸ್ತ್ರದ ಜನಕ " ಎಂದು ಪ್ರಖ್ಯಾತರಾದರು . ಘಟನೆ ದಂತಕತೆಯಂತೆ ಪ್ರಚಾರವಾಯಿತುಜಾರ್ಜ್ ರವರನ್ನು ಸಾಧನೆ ಹೇಗೆ ಸಾಧ್ಯಾವಾಯಿತೆಂದು ಕೇಳಿದವರಿಗೆ ಅವರು ನೀಡುತ್ತಿದ್ದ ಉತ್ತರ " ಸಮಸ್ಯೆಗಳನ್ನುಇದುವರೆಗೂ ಯಾರೂ ಬಿಡಿಸಿಲ್ಲವೆಂದು ಹೇಳಿದ್ದರೆ ನಾನೂ ನಿರುತ್ಸಾಹಗೊಳ್ಳುತ್ತಿದ್ದೆ . ಬಹುಶ; ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ಇದು ಬಿಡಿಸಬಹುದಾದ ಸಮಸ್ಯೆ ಎಂದು ನಾನು ಸಕಾರಾತ್ಮಕವಾಗಿ ಚಿಂತಿಸಿದ್ದರಿಂದ ನನಗೆ ಯಶಸ್ಸು ದೊರೆಯಿತು.!"
ಸಕಾರಾತ್ಮಕ ಚಿಂತನೆ ಯಶಸ್ಸಿಗೆ ಕಾರಣ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಬೇಕೇ ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ಬಂಧು ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲು ಸನ್ ನ್ಯಾಚುರಲ್ಫ್ಳಶ್ .ಕಂ /
+೯೧-9632172486













.

ಮಂಗಳವಾರ, ಆಗಸ್ಟ್ 10, 2010

ನಾನು ಹುಟ್ಟುವುದಕ್ಕಾಗಿ ನೀವು ಕಾಯುತ್ತಾ ಕುಳಿತು ಕಳೆದುಕೊಂಡ ಚಿನ್ನದ ಪದಕವನ್ನು ನಾನು ಗೆದ್ದು ತರುತ್ತಿದ್ದೇನೆ !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.

"ಎಲ್ಲರೂ ದುಡಿಯಲೇ ಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ಧಾಂತ .

ಒಬ್ಬ ಯುವಕ ನಿದ್ದ . ಆತನ ಹೆಸರು ಬಿಲ್ ಹೆವೆನ್ಸ್ . ಆತ ದೋಣಿ ಚಾಲನೆ ಸ್ಪರ್ಧೆಯಲ್ಲಿ ವರ್ಷಗಟ್ಟಲೆ ತರಬೇತಿ ಪಡೆದುನಿಪುಣತೆ ಸಾಧಿಸಿದ್ದ. ಪ್ಯಾರಿಸ್ ನಲ್ಲಿ ನಡೆಯಲಿದ್ದ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡಕ್ಕೆ ಆತನೂ ಆಯ್ಕೆಯಾಗಿದ್ದ . ಅವನ ತಂಡ
ಚಿನ್ನದ ಪದಕವನ್ನೇ ಗೆದ್ದುತರುತ್ತದೆಂಬ ನಿರೀಕ್ಷೆಯಿತ್ತು . ಆದರೆ ಆತನ ಪತ್ನಿಗೆ ಚೊಚ್ಚಲ ಹೆರಿಗೆಯ ಸಮಯ.

ಸಮಯದಲ್ಲಿ ತನ್ನ ಪತ್ನಿಯೊಂದಿಗಿರಬೇಕಾದ ಕರ್ತವ್ಯ ತನ್ನದೆಂಬ ನಂಬಿಕೆ ಆತನದ್ದು , ಹಾಗಾಗಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿಭಾಗವಹಿಸಿ ಚಿನ್ನದ ಪದಕಕ್ಕೆ ಪ್ರಯತ್ನಿಸುವುದೋ ಅಥವಾ ಪತ್ನಿಯೊಂದಿಗೆ ಇರುವುದೋ ಎರಡರಲ್ಲಿ ಒಂದನ್ನುಆಯ್ದುಕೊಳ್ಳಬೇಕಾದ ಸಂದಿಗ್ದ ಪರಿಸ್ಥಿತಿ. ಅಂದು ಜೆಟ್ ವಿಮಾನಗಳಿರಲಿಲ್ಲ. ತಿಂಗಳುಗಟ್ಟಲೆ ಹಡಗಿನಲ್ಲಿ ಪ್ರಯಾಣ ಮಾಡಿ ಪ್ಯಾರಿಸ್ತಲುಪಬೇಕಿತ್ತು. ಕೊನೆಗೆ ಆತನ ಪತ್ನಿಯೇ ಪ್ಯಾರಿಸ್ ಗೆ ಹೋಗಿಬನ್ನಿ. ನನ್ನದು ಹೇಗೋ ಆಗುತ್ತೆ ಎಂದು ಒತ್ತಾಯ ಮಾಡಿದಳು. ಬಹಳ ಯೋಚನೆಯ ನಂತರ ಒಲಿಂಪಿಕ್ಸ್ ಅವಕಾಶವನ್ನು ನಿರಾಕರಿಸಿ ಹೆರಿಗೆಯ ಸಮಯದಲ್ಲಿ ಪತ್ನಿಯೊಂದಿಗೆ ಇರುವತೀರ್ಮಾನವನ್ನು ಆತ ತೆಗೆದುಕೊಂಡ.

ಆತನನು ಬಿಟ್ಟು ದೇಶದ ತಂಡ ಪ್ಯಾರಿಸ್ ಗೆ ತೆರಳಿತು. ಎಲ್ಲರ ನಿರೀಕ್ಷೆ ಸುಳ್ಳಾಗಲಿಲ್ಲ . ಅವರ ತಂಡಕ್ಕೆ ಚಿನ್ನದ ಪದಕವೇಲಭಿಸಿತು. ಇತ್ತ ಬಿಲ್ ಪತ್ನಿಯ ಹೆರಿಗೆ ಬಹಳ ತಡವಾಗಿ ಆಯಿತು. ಎಷ್ಟು ತಡವಾಯಿತೆಂದರೆ ಚಿನ್ನದ ಪದಕ ಪಡೆದ ತಂಡದೇಶಕ್ಕೆ ಮರಳಿದ ನಂತರ ಆಕೆ ಗಂಡು ಮಗುವಿಗೆ ಜನ್ಮವಿತ್ತಳು. ಜನರೆಲ್ಲಾ "ಬಿಲ್ ತುಂಬಾ ದೊಡ್ಡ ತಪ್ಪು ಮಾಡಿದ , ನಾಚಿಕೆಗೇಡಿನ ಕೆಲಸ ಮಾಡಿಬಿಟ್ಟ, ಜೀವಮಾನವಿಡೀ ಪಶ್ಚಾತಾಪ ಪಡುತ್ತಾನೆ. " ಎಂದೆಲ್ಲ ಮಾತನಾಡಿಕೊಂಡರು. ಆದರೆ ಬಿಲ್ ಗೆತಾನು ತಪ್ಪು ಮಾಡಿದೆನೆಂದು ಅನಿಸಲಿಲ್ಲ. ತನ್ನ ಕುಟುಂಬಕ್ಕಾಗಿ ತಾನು ತನ್ನ ಕರ್ತವ್ಯ ನಿಭಾಯಿಸಿದ್ದೆನೆಂಬ ಸಮಾಧಾನಆತನಿಗಿತ್ತು. ಇಂತಹ ಗಂಡನನ್ನು ಪಡೆದ ಹೆಮ್ಮೆ ಆತನ ಹೆಂಡತಿಗಿತ್ತು. ದಂಪತಿಗಳು ಮಗನಿಗೆ ಪ್ರ್ಯಾಂಕ್ ಹೆವೆನ್ಸ್ ಎಂದುಹೆಸರಿಟ್ಟರು. ಚೆನ್ನಾಗಿ ಸಾಕಿ ಬೆಳೆಸಿದರು. ಸಂಸಾರ ಸುಖ ಸಂತೋಷಗಳಿಂದ ಬದುಕಿತು.

ಇದಾದ ಇಪ್ಪತ್ತೆಂಟು ವರ್ಷಗಳ ನಂತರ ಅಂದರೆ ಸಾವಿರದ ಒಂಬತ್ತು ನೂರ ಐವತ್ತಾ ಎರಡರಲ್ಲಿ ಫಿನ್ ಲೆಂಡ್ ಹೆಲ್ಸಿಂಕಿಯಿಂದ ಒಂದು ಟೆಲಿಗ್ರಾಂ ಬಂದಿತು. ಅದನ್ನು ಕಳುಹಿಸಿದವರು ಅವರ ಮಗ ಪ್ರ್ಯಾಂಕ್ ! ಟೆಲಿಗ್ರಾಂ ನಲ್ಲಿ " ಪ್ರೀತಿಯಾಅಪ್ಪಾ! ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ದೋಣಿ ಚಾಲನೆ ಸ್ಪರ್ಧೆಯಲ್ಲಿ ನಾನು ಚಿನ್ನದ ಪದಕ ಗೆದ್ದಿದ್ದೇನೆ ! ಸಾವಿರದ ಒಂಬತ್ತುನೂರ ಇಪ್ಪತ್ತ ನಾಲ್ಕರಲ್ಲಿ ನಾನು ಹುಟ್ಟುವುದಕ್ಕಾಗಿ ನೀವು ಕಾಯುತ್ತಾ ಕಳೆದುಕೊಂಡ ಚಿನ್ನದ ಪದಕವನ್ನು ನಾನು ಗೆದ್ದುತರುತ್ತಿದ್ದೇನೆ !" ಎಂದು ಬರೆದಿತ್ತು.

ಅವರ ಮಗ ಪ್ರ್ಯಾಂಕ್ ಫಿನ್ ಲೆಂಡ್ ನಲ್ಲಿ ನಡೆಯುತ್ತಿದ್ದ ಒಲಿಂಪಿಕ್ಸ್ ದೋಣಿ ಚಾಲನೆ ಸ್ಪರ್ಧೆಯಲ್ಲಿ ಭಾಗವಹಿಸಿ ತನ್ನ ತಂದೆಪಡೆಯಲಾಗದಿದ್ದ ಚಿನ್ನದ ಪದಕವನ್ನು ಗೆದ್ದು ತಂದಿದ್ದ. ಬಿಲ್ " ನಾನು ಅಂದು ತಪ್ಪು ನಿರ್ಣಯ ತೆಗೆದುಕೊಳ್ಳಲಿಲ್ಲ ವೆಂಬುದು ಮತ್ತೊಮ್ಮೆ ರುಜುವಾತು ಆಯಿತು " ಎಂದಷ್ಟೇ ಹೇಳಿದ !. ಅಂದು ಬಿಲ್ ನನ್ನು ದೂಷಿಸಿದ್ದ ಅದೇ ಜನ " ತಂದೆ ಇದ್ದರೆ ಬಿಲ್ಹಾಗಿರಬೇಕು . ಮಗನಿದ್ದರೆ ಪ್ರ್ಯಾಂಕ್ ಹಾಗಿರಬೇಕು " ಎಂದು ಪ್ರಶಂಸೆ ಮಾಡಿದರು.


ನೀವೇ ಬಿಲ್ ಸ್ಥಾನದಲ್ಲಿದ್ದರೆ ಯಾವ ರೀತಿ ನಿರ್ಣಯ ತೆಗೆದುಕೊಳ್ಳುತ್ತಿದ್ದಿರಿ .ದಯವಿಟ್ಟು ನನಗೆ ತಿಳಿಸುತ್ತೀರಾ ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ. ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ /
+೯೧-೯೬೩೨೧೭೨೪೮೬

























ಸೋಮವಾರ, ಆಗಸ್ಟ್ 9, 2010

ಮಹನೀಯರಿಗೆ ಹೃತ್ಪೂರ್ವಕ ಅಭಿನಂದನೆಗಳು

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ಧಾಂತ .

ಕೆಲವೊಮ್ಮೆ ಕೆಲವು ವ್ಯಕ್ತಿಗಳು ಸಾರ್ವಜನಿಕ ಕೆಲಸಗಳಿಗೆ ಅದರಲ್ಲೋ ಅಧಿಕಾರಿಯಾಗಿ ಯಾವುದೇ ಪ್ರಲೋಭನೆಗಳಿಗೆಆಸೆಪಡದೆ ಬೇಗ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸುತ್ತಾರೆ . ಅಂತ ವ್ಯಕ್ತಿಗಳಿಂದ ಒಂದು ಇಲಾಕೆಗೆ ಘನತೆ ,ಗೌರವಹೆಚ್ಚುತ್ತದೆ. ಜತೆಗೆ ಜನರಿಗೆ ಉತ್ತಮ ವ್ಯಕ್ತಿಯಾಗಿ ಕಂಡುಬರುತ್ತಾರೆ. ಅಂತ ಒಂದು ಕಿರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದುಸನ್ ನ್ಯಾಚುರಲ್ ಫ್ಲಾಶ್ ಇಂದಿನ ವಿಶೇಷ .

ಮೊದಲನೆಯದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನೀಯರ್ ಮಾನ್ಯ ಸತೀಶ್ ಹಾಗೂಅವರ ಸಹುದ್ಯೋಗದವರಿಂದ ಬೆಂಗಳೂರಿನ ಹಲವಾರು ಕಡೆ ನೀರಿನ ಸಮಸ್ಯೆ ತುಂಬಾ ಕ್ಷಿಪ್ರ ವಾಗಿ ಬಗೆ ಹರಿಸಿರುವುದು ಅದೂಶಾಶ್ವತವಾಗಿ ಕಂಡುಬರುತ್ತಿದೆ, ಹಲವಾರು ಕಡೆ ಬಗೆಹರಿದಿದೆ. ಹಾಗಾಗಿ ನಮ್ಮ ಸನ್ ನ್ಯಾಚುರಲ್ ಫ್ಲಾಶ್ ಹೃತ್ಪೂರ್ವಕಅಭಿನಂದನೆ ಯನ್ನು ಬಿ.ಡಬ್ಲ್ಯು.ಎಸ್,ಎಸ್ ,ಬಿ ಇಲಾಖೆ ಗೆ ಅಭಿನಂದನೆ ಯನ್ನು ಅರ್ಪಿಸುತ್ತದೆ.

ಎರಡನೆಯದಾಗಿ ಬೆಂಗಳೂರು ಜಲಮಂಡಲಿ ಯಾ ಒಬ್ಬ ಯುವ ಸಾರ್ವಜನಿಕ ಕುಂದುಕೊರತೆ ನಿವಾರಣಾಧಿಕಾರಿ ಶ್ರೀ ಮಾನ್ನಿಕಿಲ್ ಎನ್ನುವವರು ಸಾರ್ವಜನಿಕ ರಿಂದ ನೀರಿನ ಸಮಸ್ಯೆ ಬಗ್ಗೆ ದೂರನ್ನು ಪಡೆದುಕೊಂಡು ಆದಷ್ಟು ಬೇಗ ಸಂಬದಪಟ್ಟ ಅಧಿಕಾರಿಗೆದೂರನ್ನು ರವಾನಿಸಿ ಸಾರ್ವಜನಿಕ ನೀರಿನ ಸಮಸ್ಯೆ ಯನ್ನು ಬಗೆ ಹರಿಸುವುದು . ಸನ್ ನ್ಯಾಚುರಲ್ ಫ್ಲಾಶ್ ಗಮನಕ್ಕೆಬಂದಿರುತ್ತದೆ. ಹಾಗಾಗಿ ನಿಕಿಲ್ ಹಾಗೂ ಬೆಂಗಳೂರು ಜಲಮಂಡಳಿಗೆ ಸನ್ ನ್ಯಾಚುರಲ್ ಫ್ಲಾಶ್ ಹೃತ್ಪೂರ್ವಕ ಅಭಿನಂದನೆಗಳು.

ಮೂರನೆಯದಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಮಧ್ಯಾನ ಮೂರುಗಂಟೆ ಪ್ರಯಾಣಿಕ ರೈಲನ್ನು ಬೆಂಗಳೂರಿಗೆಆದಷ್ಟು ರಾತ್ರಿ ಹತ್ತೂವರೆ ಒಳಗಡೆ ತಲುಪುವಂತೆ ಶಿವಮೊಗ್ಗ ರೈಲ್ವೆ ಸ್ಟೇಶನ್ ಸಿಬ್ಬಂದಿ ಯೋಬ್ಬರೊಡನೆ ಸನ್ ನ್ಯಾಚುರಲ್ಫ್ಲಾಶ್ . ಸಾರ್ವಜನಿಕ ಪರವಾಗಿ ಕೇಳಿಕೊಂಡಿತ್ತು. ಮಾನ್ಯ ಅಧಿಕಾರಿಗಳು ಸಂಬಂಧ ಪಟ್ಟವರಿಗೆ ತಿಳಿಸಿ ಆದಷ್ಟು ಬೇಗಕಾರ್ಯರೂಪಕ್ಕೆ ತರುವುದಾಗಿ ಹೇಳಿದ್ದರು. ಅವರಿಗೂ ಕೂಡ ಹೃತ್ಪೂರ್ವಕ ಅಭಿನಂದನೆಗಳು.
ರಾತ್ರಿ ಹತ್ತೊವರೆ ನಂತರ ಬಿ,ಎಂ, ಟಿ.ಸಿ ಗೆ ಸಂಬಂಧ ಪಟ್ಟ ಬಸ್ ಗಳು ಸಿಗಬಹುದು. ಆದರೆ ಎಲ್ಲಿ ಮುಖ್ಯ ರಸ್ತೆ ಇದೆಯೋಅಲ್ಲಿಯವಗೆ ಮಾತ್ರ. ಕೆಲವು ಬಡಾವಣೆ ಗಳ ಒಳಗೆ ರಾತ್ರಿ ಹತ್ತರ ನಂತರ ಹೋಗುವುದು ಸ್ವಲ್ಪ ಕಷ್ಟ. ಕಾರಣ ಮೊದಲನೆಯದುನಾಯಿಗಳಿಂದಾದರೆ, ಎರಡನೆಯದು ಬೆದರಿಕೆ ಹಾಕಿ ಕೈಯಲ್ಲಿ ಇರುವ ಕಾಸು , ಮೊಬೆಲ್ಲು , ಬೆಲೆಬಾಳುವ ವಸ್ತು ದೋಚು ವವರುಹೆಚ್ಚಾಗಿರುವುದರಿಂದ.

ನಾಲ್ಕನೆಯದಾಗಿ ಮಾನ್ಯ ಸುರೇಶ ಶೆಟ್ಟಿ , ಶಿವಮೊಗ್ಗ ಇವರು ಸನ್ ನ್ಯಾಚುರಲ್ ಫ್ಲಾಶ್ ಹಾಗೂ ನೆಟ್ ನಾಗದ ಬಗ್ಗೆ ತುಂಬಾಉತ್ಸುಕ ರಾಗಿ ಸಲಹೆ ಯನ್ನು ನೀಡುತ್ತಿರುವುದಕ್ಕೆ ಅವರಿಗೂ ಸನ್ ನ್ಯಾಚುರಲ್ ಫ್ಲಾಶ್ ಹೃತ್ಪೂರ್ವಕ ಅಭಿನಂದನೆ ಅರ್ಫಿಸುತ್ತದೆ.

ಐದನೆಯದಾಗಿ ಬೆಂಗಳೂರು ನಗರದ ಶಿವಾಜಿನಗರ ವ್ಯಾಪ್ತಿಯ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ರಸ್ತೆ ಸರಿಯಾಗಿ ಇರಲಿಲ್ಲ ಆ ರಸ್ತೆಯನ್ನು ಸರಿಪಡಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರವಿ ಕುಮಾರ್ ಎನ್ನುವವರ ಹತ್ತಿರ ಸನ್ ನ್ಯಾಚುರಲ್ ಫ್ಲಾಶ್ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರ ಪರವಾಗಿ ಕೇಳಿಕೊಂಡಿತ್ತು. ಮಾನ್ಯ ರವಿಕುಮಾರ್ ಹೆಚ್ಚಿನ ಗಮನ ವಹಿಸಿ ಕೇವಲ ಮೂರೇ ದಿನಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್ ರಸ್ತೆ ಯನ್ನು ಸರಿಪಡಿಸಿದ್ದಾರೆ. ನಾವು ಅವರಿಗೂ, ಅವರ ಇಲಾಖೆ ಯಾ ಹಿರಿ ಕಿರಿಯರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ. ನಾಗರಾಜ
ಸನ್ ನ್ಯಾಚುರಲ್ ಫ್ಲಾಶ್.ಕಂ /









ಶನಿವಾರ, ಆಗಸ್ಟ್ 7, 2010

ನನ್ನನ್ನು ಮೂರ್ಖನೆಂದು ಭಾವಿಸಿದರೆ ಚಿಂತೆಯಿಲ್ಲ, ಮುಂದೆ ಯಾರಾದರು ತೊಂದರೆಯಲ್ಲಿರುವವರು ಸಹಾಯ ಬೇಡಿದಾಗ ಸಹಾಯಹಸ್ತ ಚಾಚಲು ಜನ ಹಿಂದೆ ಮುಂದೆ ನೋಡುವಂತಾಗಬಾರದು.........!

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

'ಎಲ್ಲರು ದುಡಿಯಬೇಕು "ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ಧಾಂತ .

ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ , ಸಿರಿವಂತನಾದರೂ ಕಷ್ಟದಲ್ಲಿರುವವರನ್ನು ಕಂಡರೆ ಮರುಗುವ ಮುಗ್ದ ಸ್ವಭಾವ. ಆತನ ಬಳಿ ಒಂದು ಅಪರೂಪದ ಕುದುರೆಯಿತ್ತು. ಅದನ್ನು ಆತನಿಗೆ ಕಂಡರೆ ಬಹಳ ಪ್ರೀತಿ. ಬಹಳಷ್ಟು ಜನ ಕುದುರೆಯನ್ನುಕೊಳ್ಳಲು ಬರುತ್ತಿದ್ದರು. ಎಂತಹ ಒಳ್ಳೆಯ ಬೆಲೆ ಬಂದರೂ ಆತ "ಕುದುರೆಗೆ ಬೆಲೆ ಕಟ್ಟಬಹುದು. ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ?" ಎಂದು ನಿರಾಕರಿಸುತ್ತಿದ್ದ.

ಪಕ್ಕದ ಊರಿನಲ್ಲಿದ್ದ ಪಾಳೆಗಾರನ ಲಾಯದಲ್ಲಿ ಹತ್ತಾರು ಕುದುರೆಗಳಿದ್ದರೂ ಆತನಿಗೆ ಶ್ರೀಮಂತನ ಕುದುರೆ ಮೇಲೇ ಕಣ್ಣುಹಲವಾರು ಬಾರಿ ಬಂದು ಕುದುರೆಯನ್ನು ಮಾರುವುದಾದರೆ ಕೇಳಿದಷ್ಟು ಬೆಲೆ ಕೊಡಲು ಸಿದ್ಧ ಎನ್ನುತ್ತಿದ್ದ. ಆದರೆ ಶ್ರೀಮಂತನನಿರಾಕರಣೆಯಿಂದ ನಿರಾಶನಾಗುತ್ತಿದ್ದ . ಕೊನೆಗೊಮ್ಮೆ ಕುದುರೆಯನ್ನು ಕದ್ದಾದರೂ ಸರಿ ಪಡೆಯಲೇಬೇಕೆಂದು ತೀರ್ಮಾನಮಾಡಿದ. ಶ್ರೀಮಂತ ಕುದುರೆಯನ್ನೇರಿ ಬರುವ ದಾರಿಯಲ್ಲಿ ಭಿಕ್ಷುಕನ ವೇಷ ಹಾಕಿಕೊಂಡು ತೀವ್ರ ಅನಾರೋಗ್ಯದಿಂದಿರುವಂತೆನಟಿಸುತ್ತಾ ಕುಳಿತುಕೊಂಡ. ಶ್ರೀಮಂತ ಹತ್ತಿರ ಬಂದಾಗ "ಅಯ್ಯೋ! ನೋವು ಸಹಿಸಲಾರೆ. ಯಾರಾದರೂ ಚಿಕಿತ್ಸೆ ಕೊಡಿಸಿಕಾಪಾಡಿ " ಎಂದು ನರಳಲು ಶುರುಮಾಡಿದ . ನರಳುವಿಕೆ ಶ್ರೀಮಂತನಲ್ಲಿ ಕರುಣೆ ಉಕ್ಕಿಸಿತು. ಆತ ಕುದುರೆಯಿಂದ ಇಳಿದುಅವನ ಯೋಗಕ್ಷೇಮ ವಿಚಾರಿಸಿ "ನಿನ್ನನು ವೈದ್ಯರ ಬಳಿ ಕರೆದೊಯ್ಯುತ್ತೇನೆ . ಚಿಕಿತ್ಸೆ ಕೊಡಿಸುತ್ತೇನೆ ಬಾ " ಎಂದು ಕರೆದ. ಭಿಕ್ಷುಕನಡೆದು ಬರುವಷ್ಟು ಶಕ್ತಿಯೂ ಇಲ್ಲವೆಂದಾಗ, ಶ್ರೀಮಂತ ಅವನನ್ನೆತ್ತಿ ಕುದುರೆಯ ಮೇಲೆ ಕುಳ್ಳಿರಿಸಿ ಕುದುರೆಯ ಜೀನನ್ನು ಭಿಕ್ಷುಕ ಕೈಯಲ್ಲಿ ಕೊಟ್ಟ . ತಾನು ಪಕ್ಕದಲ್ಲಿ ನಡೆದುಕೊಂಡು ಹೊರಟ. ಭಿಕ್ಷುಕ ಕುದುರೆಯ ಮೇಲೆ ಪಟ್ಟಾಗಿ ಕುಳಿತುಕೊಂಡ . ಕುದುರೆಯನು ವಶಕ್ಕೆ ತೆಗೆದುಕೊಂಡ. ಸ್ವಲ್ಪ ದೂರ ಹೋದ ನಂತರ ಜೋರಾಗಿ ಗಹಗಹಿಸಿ ನಕ್ಕು "ನಾನು ಭಿಕ್ಷುಕನಲ್ಲ. ನಾನುಪಾಳೇಗಾರ.

ನಿನ್ನ ಕುದುರೆ ನನಗೆ ಸಿಕ್ಕಿತು. ಇನ್ನಿದು ನನ್ನದೇ ಎಂದು ಹೇಳಿ ಕುದುರೆ ಯನ್ನು ವೇಗವಾಗಿ ಓಡಿಸಿಕೊಂಡು ಹೋದ. ಆಗಶ್ರೀಮಂತನಿಗೆ ತಾನು ಮೋಸ ಹೋದುದರ ಅರಿವಾಯಿತು. ಪೆಚ್ಚೆನಿಸಿತು. ಆದರೆ ಕೆಲವೇ ಕ್ಷಣಗಳಲ್ಲಿ ಸಾವರಿಸಿಕೊಂಡು "ನನ್ನಕುದುರೆಯನ್ನು ಪಡೆದುಕೊಂಡಿದ್ದೀಯ . ನನಗೊಂದು ಉಪಕಾರ ಮಾಡು. ಕುದುರೆಯನ್ನು ನೀನು ಹೇಗೆ ಪಡೆದುಕೊಂಡೆಎಂಬುದನ್ನು ಯಾರಿಗೂ ಹೇಳಬೇಡ. ನನಗಷ್ಟೇ ಸಾಕು "ಎಂದು ಕಿರುಚಿ ಹೇಳಿದ. ಓಡುತ್ತಿದ್ದ ಕುದುರೆಯನ್ನು ನಿಲ್ಲಿಸಿದ ಪಾಳೇಗಾರಏಕೆ ಹೇಳಬಾರದು ?" ಜನ ನಿನ್ನನ್ನು ಮೂರ್ಖನೆಂದು ಭಾವಿಸುತ್ತಾರೆಂದೇ?"ಎಂದು ಕೇಳಿದ. ಆಗ ಶ್ರೀಮಂತ "ನನ್ನನ್ನುಮೂರ್ಖನೆಂದು ಭಾವಿಸಿದರೆ ಚಿಂತೆಯಿಲ್ಲ . ಮುಂದೆ ಯಾರಾದರು ತೊಂದರೆಯಲ್ಲಿರುವವರು ಸಹಾಯ ಬೇಡಿದಾಗ ಸಹಾಯಹಸ್ತಚಾಚಲು ಜನ ಹಿಂದೆ ಮುಂದೆ ನೋಡುವಂತಾಗ-ಬಾರದೆಂಬುದೆ ನನ್ನ ಚಿಂತೆ " . ಮಾತುಗಳನ್ನು ಕೇಳಿ ಪಾಳೇಗಾರ ಕುದುರೆಯಮೇಲೆ ಸ್ಥಬ್ಧನಾಗಿ ಕುಳಿತ. ತನ್ನ ಬಗ್ಗೆ ತನಗೆ ನಾಚಿಕೆಯಾಯಿತು. ನಿಧಾನವಾಗಿ ಕುದುರೆಯನ್ನು ನಡೆಸಿಕೊಂಡು ಬಂದುಶ್ರೀಮಂತನಿಗೆ ಅದನ್ನೊಪ್ಪಿಸಿ ಮರು ಮಾತನಾಡದೆ ಹೊರಟು ಹೋದ . ಅಂದಿನಿಂದ ಶ್ರೀಮಂತ ಸಹಾಯ ಮಾಡುವುದನ್ನುನಿಲ್ಲಿಸಲಿಲ್ಲ . ಆದರೆ ಇಹಪರ ವಿಚಾರಿಸದೆ ಸಹಾಯ ಮಾಡುವುದನ್ನು ನಿಲ್ಲಿಸಿದ. ಕುದುರೆಯ ಜೀನನ್ನು ಹತೋಟಿಯನ್ನೂ ಅವರಿಗೇ ಕೊಟ್ಟು ತಾನು ನಡೆದು ಬರುವುದನ್ನು ನಿಲ್ಲಿಸಿದ.

ಕಥೆ ಯಿಂದ ತಿಳಿದು ಬರುವುದೇನೆಂದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮುನ್ನ ಆತನನ್ನು ವಿಚಾರಿಸಿ ಸಹಾಯಮಾಡಬೇಕು ಎನಿಸುತ್ತದೆ ನಿಮಗೆ ಎನೆನಿಸುತ್ತದೆ ನನಗೆ ತಿಳಿಸುವಿರ ?.


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ಬಂಧು ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-9632172486






























"

ಶುಕ್ರವಾರ, ಆಗಸ್ಟ್ 6, 2010

ಅರ್ಜಿ ,ಸಂದರ್ಶನ ಗಳಿಲ್ಲದೆ ದೊಡ್ಡ ಹುದ್ದೆ ಗಿಟ್ಟಿಸಿಕೊಂಡ ಜಾರ್ಜ್ ರವರ ನೈಜ ಜೀವನದ ಕಥೆ

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.

"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಒಂದು ಸಣ್ಣ ಊರಿನಲ್ಲಿ ಪುಟ್ಟ ಹೋಟೆಲ್ ಒಂದಿತ್ತು. ರಾತ್ರಿ ಪಾಳಿಯಲ್ಲಿ ಜಾರ್ಜ್ ಎಂಬ ಯುವಕ ಸೂಪರ್ ವೈಸರ್ ಆಗಿದ್ದ. ಮೃದುಭಾಷಿ , ಸದಾ ಮುಗುಳ್ನಗೆಯಿಂದ, ಬಹಳ ಶ್ರದ್ಧೆಯಿಂದ ಕೆಲಸ ಮಾಡುವ ಸ್ವಭಾವದವನು. ಒಂದು ರಾತ್ರಿ ಹೋಟೆಲಿನ ಎಲ್ಲಕೋಣೆಗಳು ತುಂಬಿದ್ದವು. ಮಧ್ಯರಾತ್ರಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಹೊರಗಡೆ ಚಳಿಯಿತ್ತು. ಆಗ ಹೋಟೆಲ್ಬಾಗಿಲನ್ನು ತುಂಬಾ ವಯಸ್ಸಾದ ದಂಪತಿ ತಟ್ಟಿದರು. ಕೋಣೆ ಒಂದನ್ನು ಕೇಳಿದರು. ಜಾರ್ಜ್ ವಿನಯದಿಂದ "ಹೋಟೆಲ್ಭರ್ತಿಯಾಗಿದೆ . ಒಂದು ಕೋಣೆ ಯೂ ಖಾಲಿಯಿಲ್ಲ. ಕ್ಷಮಿಸಿ " ಎಂದ. ಮುದುಕಪ್ಪ "ನಾಲ್ಕಾರು ಹೋಟೆಲ್ ಗಳಲ್ಲಿಪ್ರಯತ್ನಿಸಿದೆವು. ಎಲ್ಲೂ ಕೋಣೆಗಳು ಸಿಗುತ್ತಿಲ್ಲ ಹೇಗಾದರೂ ಮಾಡಿ , ರಾತ್ರಿ ಕಳೆಯಲು ಒಂದು ಕೋಣೆ ಕೊಡಿ . ಬೆಳಗ್ಗೆಯೇಹೊರಟುಹೋಗುತ್ತೇವೆ." ಎಂದು ಬೇಡಿಕೊಂಡ. "ರಿಸರ್ವೇಶನ್ ಇಲ್ಲದೆ ಬಂದರೆ ಹೇಗೆ ಕೋಣೆ ಸಿಗುತ್ತದೆ ? ನಮ್ಮಲ್ಲೂ ಕೋಣೆಗಳುಖಾಲಿಯಿಲ್ಲ. ನಾನೇನು ಮಾಡಲು ಸಾಧ್ಯ "? ಎಂದೆಲ್ಲ ಜಾರ್ಜ್ ಹೇಳಬಹುದಿತ್ತು. ಆದರೆ ಚಳಿಯಿಂದ ನಡುಗುತ್ತಿದ್ದ ಮುದಿದಂಪತಿಯನ್ನು ಹೊರಕ್ಕೆ ಕಳುಹಿಸಲು ಆತನಿಗೆ ಮನಸ್ಸಾಗಲಿಲ್ಲ. ಅವರನ್ನು ಕೂರಿಸಿ ಬಿಸಿ ಕಾಫಿ ಕೊಟ್ಟು ಉಪಚರಿಸಿದ. "ರಾತ್ರಿಪಾಳಿಯಲ್ಲಿರುವ ನನಗೆ ವಿಶ್ರಾಂತಿ ಪಡೆಯಲು ಒಂದು ಪುಟ್ಟ ಕೋಣೆಯಿದೆ, ನಿಮಗೆ ಅಭ್ಯಂತರವಿಲ್ಲದಿದ್ದರೆ ಅದನ್ನು ನಿಮಗೆಬಿಟ್ಟುಕೊಡುತ್ತೇನೆ " ಎಂದ . "ರಾತ್ರಿ ಮಲಗಿ ಬೆಳಗ್ಗೆಯೇ ಎದ್ದು ಹೋಗಲು ಎಂತಹ ಕೊಟಡಿಯಾದರೂ ಅಭ್ಯಂತರವಿಲ್ಲ " ಎಂದವರು ಹೇಳಿದರು. ಜಾರ್ಜ್ ತನ್ನ ಸಹಾಯಕರನ್ನು ಕರೆದು ತನ್ನ ಕೊಟಡಿಯನ್ನು ಶುಭ್ರಗೊಳಿಸಿ , ಹೊಸ ಹೊದಿಕೆಗಳನ್ನುಹಾಕಿಸಿ ಅವರಿಗೆ ಬಿಟ್ಟುಕೊಟ್ಟ. ಹಸಿದಿದ್ದ ಅವರಿಗೆ ಬಿಸಿ ಸ್ಯಾಂಡ್ವಿಚ್ ಮಾಡಿಸಿಕೊಟ್ಟ. ದಂಪತಿ ರಾತ್ರಿ ಅಲ್ಲಿದ್ದು ಬೆಳಗ್ಗೆಯೇ ಜಾರ್ಜ್ ಗೆಬಹಳಷ್ಟು ಧನ್ಯವಾದಗಳನ್ನು ಹೇಳಿಹೋದರು. "ನನ್ನ ಕರ್ತವ್ಯ ನಾನು ಮಾಡಿದ್ದೇನೆ . ನಿಮ್ಮ ಸೇವೆ ಮಾಡುವ ಅವಕಾಶನೀಡಿದ್ದಕ್ಕಾಗಿ ಧನ್ಯವಾದಗಳು "ಎಂದು ಜಾರ್ಜ್ ಅವರನ್ನು ಬೀಳ್ಕೊಟ್ಟ . ಅದಾದ ನಂತರ ಘಟನೆಯನ್ನು ಮರೆತು ಬಿಟ್ಟ.

ಆದರೆ ಮುಂದಿನ ವರ್ಷ ನ್ಯೂಯಾರ್ಕ್ ನಲ್ಲಿ "ವಾಲ್ದಾರ್ಪ್ಹ್ ಆಸ್ಟೋರಿಯಾ "ಎಂಬ ಬಹು ದೊಡ್ಡ ಹೋಟೆಲ್ ಸಿದ್ಧವಾಯಿತು. ಹೋಟೆಲ್ ನಡೆಸಲು ಮ್ಯಾನೇಜರ್ ಹುದ್ದೆಗೆ ಅರ್ಜಿ ಕರೆಯಬೇಕೆಂದಾಗ ಅದರ ಮಾಲೀಕ ಜಾನ್ ಆಶ್ಟರ್ "ಮ್ಯಾನೇಜರ್ ಗಾಗಿಹುಡುಕಬೇಕಿಲ್ಲ . ನಾನು ಹೋದವರ್ಶವೇ ಅವನ ಅರ್ಜಿ , ಇಂಟರ್ವ್ಯೂ ಎಲ್ಲ ಮಾಡಿ ಮುಗಿಸಿದ್ದೇನೆ. ಆಯ್ಕೆಯನ್ನು ಮಾಡಿಟ್ಟಿದ್ದೇನೆ." ಎಂದು ಹೇಳಿ ಮ್ಯಾನೇಜರ್ ಅಭ್ಯರ್ಥಿಯನ್ನು ಕರೆಸಿ ದೊಡ್ಡ ಸಂಬಳವನಿತ್ತು ನೇಮಿಸಿದರು. ಮುಂದೆ ಆತಹೋಟೆಲ್ ಉದ್ಯಮದಲ್ಲಿ ಬಹು ದೊಡ್ಡ ಯಶಸ್ಸನ್ನು ಸಾಧಿಸಿದ.

ಹಾಗೆ ನೇಮಕಗೊಂಡ ಮ್ಯಾನೇಜರ್ ಮುಂದೆ ಯಾರು ? ಹೋಟೆಲ್ ಮಾಲೀಕ ಜಾನ್ ಆಶ್ಟರ್ ಯಾರು ? ಅರ್ಜಿ, ಇಂಟರ್ವ್ಯೂನಡೆದಿದ್ದು ಯಾವಾಗ ? ಸಣ್ಣ ನಗರದ ಪುಟ್ಟ ಹೋಟೆಲ್ ರಾತ್ರಿ ಪಾಳಿಯ ಸೂಪರ್ ವೈಸರ್ ನೆ ಹಾಗೆ ನೇಮಕಗೊಂಡವನು ! ಅಂದು ರಾತ್ರಿ ಮಳೆಯಲ್ಲಿ ತೋಯ್ದು ಚಳಿಯಲ್ಲಿ ನಡುಗುತ್ತ ಹೋಟೆಲ್ ಕೋಣೆಗಾಗಿ ಅರಸುತ್ತಿದ್ದವರೇ ಜಾನ್ ಆಶ್ಟರ್ ! ತನ್ನ ನಿಗದಿತಕೆಲಸಕ್ಕಿಂತ ಹೆಚ್ಚು ಕೆಲಸವನ್ನು ಮಾನವೀಯತೆಯೊಂದಿಗೆ, ಮುಗುಳ್ನಗೆಯೊಂದಿಗೆ , ಮೃದು ಭಾಷೆಯೊಂದಿಗೆ ಏನೂನಿರೀಕ್ಷಿಸದೆ ಮಾಡಿದ್ದೇ ಜಾರ್ಜ್ ನೀಡಿದ್ದ ಅರ್ಜಿ ಮತ್ತು ಇಂಟರ್ವ್ಯೂ !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-9632172486

































ಗುರುವಾರ, ಆಗಸ್ಟ್ 5, 2010

ಕಾಲುಗಳನ್ನು ಕಳೆದು ಕೊಂಡು ಹೃದಯವನ್ನು ಉಳಿಸಿಕೊಂಡವರ ಕಥೆ !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು .
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಭಾರ ಎತ್ತುವಿಕೆಯಲ್ಲಿ ನಾಲ್ಕು ಬಾರಿ ವಿಶ್ವಚಾಂಪಿಯನ್ ಎತ್ತಿದ ತೂಕ ಐದು ನೂರ ಎಪ್ಪತ್ತು ಪೌಂಡ್ . ಸಾವಿರದ ಒಮ್ಬತ್ತುನೂರತೊಂಬತ್ತ ಆರರಲ್ಲಿ ಆರು ಸಾವಿರದ ಇನ್ನೂರು ಮೈಲಿ ಉದ್ದದ ಸೈಕಲ್ ಸ್ಪರ್ಧೆಯಲ್ಲಿ ಪ್ರಶಸ್ತಿ . ಎರಡು ಸಾವಿರದ ಮೂರರಲ್ಲಿ ಲಾಸ್ಎಂಜಲೀಸ್ ಸ್ಪರ್ಧೆಯಲ್ಲಿ ಮ್ಯಾರಥಾನ್ ಪ್ರಶಸ್ತಿ. ಸಾವಿರದ ಒಮ್ಭಾತ್ತುನೂರ ಎಂಬತ್ತ ಒಂಬತ್ತರಲ್ಲಿ "ಅತ್ಯಂತ ಸ್ಪೂರ್ತಿದಾಯಕವ್ಯಕ್ತಿ ", ಅಮೇರಿಕಾದ "ಆರು ಜನ ಅತ್ಯಂತ ಆಶ್ಚ್ಯರ್ಯ ಕರ ವ್ಯಕ್ತಿ ಗಳಲ್ಲಿ ಒಬ್ಬರು "ಪ್ರಶಸ್ತಿ. ಇಡೀ ಅಮೆರಿಕಾದ ಉದ್ದವನ್ನುಎರಡು ಬಾರಿ ನಡೆದ ಹೆಗ್ಗಳಿಕೆ. ಇದನ್ನು ಓದಿ "ಯಾರು ಬೇಕಾದರೂ ಮಾಡಬಹುದು. ಇದರಲ್ಲೇನು ಮಹತ್ವ ?"ಎನಿಸಬಹುದು. ಇಲ್ಲಿನ ಮಹತ್ವವೆಂದರೆ ಇದೆಲ್ಲ ಸಾಧಿಸಿದಾಗ ಬಾಬ್ ರವರಿಗೆ ಎರಡೂ ಕಾಲುಗಳಿರಲಿಲ್ಲ. ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದಾಗತನ್ನ ಸಹ ಸೈನಿಕ ಒಬ್ಬನನ್ನು ಉಳಿಸುವ ಪ್ರಯತ್ನದಲ್ಲಿ ಆಕಸ್ಮಿಕವಾಗಿ ಭೂಗತ ಸ್ಪೋಟಕವೊಂದರ ಮೇಲೆ ಕಾಲಿಟ್ಟರು . ದೇಹಚಿದ್ರಗೊಂಡಿತು.

ರಕ್ತಮಯವಾಗಿ ಚಿದ್ರಗೊಂಡಿದ್ದ ಬಾಬ್ ರವರ ದೇಹವನ್ನು ಆಸ್ಪತ್ರೆಗೆ ತಂದಾಗ ನೋಡಿದ ವೈದ್ಯರು "ಬರುವಾಗಲೇ ಸತ್ತುಹೋಗಿದ್ದಾರ ?" ಎಂದರಂತೆ. ಆದರೆ ಮಾಂಸದ ಮೂಟೆಯಾಗಿದ್ದ ಬಾಬ್ ದೃಢ ಧ್ವನಿಯಲ್ಲಿ "ಬರುವಾಗ ಬದುಕಿದ್ದೇನೆ ಎಂದರಂತೆ. ಬಾಬ್ ರವರು ದೀರ್ಘ ಚಿಕಿತ್ಸೆಯ ನಂತರ ಅಮೆರಿಕಕ್ಕೆ ಮರಳಿದರು. ಯುದ್ಧಕ್ಕೆ ಹೋಗುವಾಗ ಇನ್ನೂರು ಪೌಂಡ್ತೂಕವಿದ್ದ ಅವರು ಯುದ್ಧದಿಂದ ಬರುವಾಗ ಕೇವಲ ನೂರು ಪೌಂಡ್ ತೂಕವಿದ್ದರು. ಏಕೆಂದರೆ ಅವರ ಎರಡೂ ಕಾಲುಗಳನ್ನು ತೆಗೆದುಹಾಕಲಾಗಿತ್ತು. ನಗುನಗುತ್ತಲೇ ನಾನು ನನ್ನ ಕಾಲುಗಳನ್ನು ಕಳೆದುಕೊಂಡಿದ್ದೇನೆ . ನನ್ನ ಹೃದಯವನ್ನಲ್ಲ " ಎಂಬ ಉದ್ಗಾರದೊಂದಿಗೆ ಮತ್ತೆ ಚಟುವಟಿಕೆಯ ಜೀವನಕ್ಕೆ ಮರಳಿದ ಅವರು ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸತೊಡಗಿದರು. ನಾಲ್ಕು ಬಾರಿವಿಶ್ವ ಚಾಂಪಿಯನ್ ಆದರು.

ಚಾಂಪಿಯನ್ ಸ್ಪರ್ಧೆಯ ನಿಯಮಗಳಲ್ಲಿ ಪಾದಕ್ಕೆ ಷೂಸ್ ಧರಿಸಬೇಕೆಂಬ ಒಂದು ನಿಯಮ ಜಾರಿಗೆ ಬಂತು. ಇವರಿಗೆ ಷೂಸ್
ಇತ್ತು. ಆದರೆ ಧರಿಸಲು ಪಾದಗಳೇ ಇರಲಿಲ್ಲ. ಮುಂದೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಬಾಬ್ ಧೈರ್ಯಕಳೆದುಕೊಳ್ಳಲಿಲ್ಲ. ಕೈಗಳಿಗೆ ರಬ್ಬರ್ ಕವಚಗಳನ್ನು ಧರಿಸಿ ಕೈಗಳನ್ನು ಉಪಯೋಗಿಸಿ ನಡೆಯುವ ಅಭ್ಯಾಸ ಮಾಡಿದರು. ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅಲ್ಲಿಯೂ ವಿಜೇತರಾದರು. ಇಡೀ ಅಮೆರಿಕಾದ ಉದ್ದವನ್ನು ಮೂರು ವರ್ಷ ಎಂಟುತಿಂಗಳು ಆರು ದಿನಗಳಲ್ಲಿ ಕೈಗಳನ್ನು ಉಪಯೋಗಿಸಿಯೇ ನಡೆದರು. ಇದಾದ ನಂತರ ಮೂರು ಚಕ್ರಗಳ ಟ್ರೈಸಿಕಲ್ಲಿನ ಅಭ್ಯಾಸಮಾಡಿದರು. ಸಾವಿರದ ಒಂಬತ್ತು ನೂರ ತೊಂಬತ್ತಾ ಆರರಲ್ಲಿ ಆರು ಸಾವಿರದ ಎರಡು ನೂರು ಮೈಲಿ ಉದ್ದದ ಸ್ಪರ್ಧೆಯಲ್ಲಿಪ್ರಶಸ್ತಿ ಪಡೆದರು. ತಮ್ಮ ವಿಕಲಚೇತನತೆ ಯನ್ನು ದೂಷಿಸದೆ ಅವರು ಒಂದರ ನಂತರ ಮತ್ತೊಂದು ಸಾಧನೆಯನ್ನು ಮಾಡುತ್ತಿದ್ದಾರೆ . ಕಾಲ್ಚೆಂಡಾಟದ ಕೋಚ್ ಆಗಿದ್ದಾರೆ. ಇದೀಗ ಅವರು ಅತ್ಯಂತ ಸ್ಪೂರ್ತಿದಾಯಕ ಉಪನ್ಯಾಸಕರಾಗಿ ಸಾವಿರಾರುಜನರನ್ನು ಉತ್ತೇಜಿಸುತ್ತಿದ್ದಾರೆ. ದೂರದರ್ಶನಗಳಲ್ಲಿ ಟಾಕ್ ಶೋಗಳನ್ನು ಕೊಡುತ್ತಿದ್ದಾರೆ. ತಮ್ಮ ಉಪನ್ಯಾಸಗಳಲ್ಲಿ "ವಿಕಲಚೇತನವ್ಯಕ್ತಿ ಇಷ್ಟು ಒಂದು ಸಾಧನೆಯನ್ನು ಮಾಡಲು ಸಾಧ್ಯವಾಗುವುದಾದರೆ ಪೂರ್ಣ ಅಂಗರಾದ ನೀವು ಇನ್ನೆಷ್ಟು ಸಾಧನೆಮಾಡಬಹುದು ?" ಎಂಬ ಪ್ರಶ್ನೆಯೊಂದಿಗೆ ತಮ್ಮ ಮಾತು ಮುಗಿಸುತ್ತಾರೆ. ಇದಕ್ಕೆ ನಿಮ್ಮ ಉತ್ತರವೇನು ? ದಯವಿಟ್ಟುನಮ್ಮೊಂದಿಗೆ ಹಂಚಿಕೊಳ್ಳಿ.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ಬಂಧು ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ ಡಾಟ್ ಕಾಂ /
+೯೧-೯೬೩೨೧೭೨೪೮೬

































"

ಸೋಮವಾರ, ಆಗಸ್ಟ್ 2, 2010

ದುಡಿಮೆಗಾರನನ್ನು ಸೋಮಾರಿಯನ್ನಾಗಿ ಮಾಡಿದ ಕಥೆ !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.
"ಎಲ್ಲರೂ ದುಡಿಯಬೇಕು"ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಒಂದೂರಿನ ಹೊಲದಲ್ಲಿ ಮೊದಲಪ್ಪ , ಕೆಸರಪ್ಪ ,ಬೊಗಳಪ್ಪ ಮತ್ತು ಮೆಲುಕಪ್ಪ ಎಂಬ ನಾಲ್ಕು ಜನರಿದ್ದರು. ಮೊದಲಪ್ಪಎಲ್ಲರಿಗಿಂತ ಮುಂಚೆಯೇ ಏಳುತ್ತಿದ್ದ . ಸದಾ ಚಟುವಟಿಕೆಯ ಬುದ್ಧಿವಂತ , ಕೆಸರಪ್ಪ ತಾನೂ ಕೆಸರಿನಲ್ಲಿದ್ದು , ಬೇರೆಯವರತ್ತ ಕೆಸರುಚೆಲ್ಲಿ ಖುಷಿಪಡುವವ . ಬೊಗಳಪ್ಪ ಯಾವಾಗಲೂ ಕಾರಣವಿಲ್ಲದೆಯೋ, ಕಾರಣವಿದ್ದೋ ಬೊಗಳುತ್ತಲೇ ಇರುವವನು. ಮೆಲುಕಪ್ಪಎಂದೋ ತಿಂದದ್ದನ್ನು ಇಂದು ಕೂಡ ಮೆಲುಕು ಹಾಕುತ್ತಾ ಇರುವವನು. ಒಮ್ಮೆ ಮೊದಲಪ್ಪನಿಗೆ ಬಿತ್ತಲು ಯೋಗ್ಯವಾದ ಒಂದಷ್ಟುಗೋಧಿ ಸಿಕ್ಕಿತು. ಆತ ಇತರರಿಗೆ ಗೋಧಿಯನ್ನು ಬಿತ್ತಿ ಬೆಳೆ ತೆಗೆಯೋಣ ಎಂದಾಗ ಕೆಸರಪ್ಪ ತನ್ನ ಕೆಸರು ಗುಂಡಿಯಿಂದ ಹೊರಗೆಬರಲೇ ಇಲ್ಲ. ಬೊಗಳಪ್ಪ "ಉತ್ತು, ಬಿತ್ತು,ಬೆಳೆ ತೆಗೆಯಲು ನಾವೇನು ರೈತರೇ ?, ನಮಗೇನು ಬುದ್ಧಿ ಕೆಟ್ಟಿದೆಯೇ", ಎಂದುಕೂಗಾಡಿದ . ಮೆಲುಕಪ್ಪ "ನಾವು ಎಂದೂ ಬೆಳೆದವರಲ್ಲ ಹೀಗೆಯೇ ಬದುಕಿದ್ದೇವೆ . ಕಾಲ ಹಿಂದಿನಂತಿಲ್ಲ , ಮುಂದೆ ಹೇಗೋ ಏನೋ "ಎಂದು ನಿರಾಸಕ್ತಿ ತೋರಿಸಿದ. ಮಾತುಗಳನ್ನು ಕೇಳಿಯೂ ಉತ್ಸಾಹ ಕುಗ್ಗದ ಮೊದಲಪ್ಪ ಗೋಧಿಯನ್ನು ಬಿತ್ತಿಯೇಬಿಟ್ಟ. ಕೆಲವು ತಿಂಗಳುಗಳಲ್ಲಿ ಗೋಧಿ ಬೆಳೆ ಕೊಯ್ಲಿಗೆ ಬಂತು. ಮೊದಲಪ್ಪ ಇತರರನ್ನು ಕೊಯ್ಲಿಗೆ ಕರೆದ . ಯಾರೂ ಸಹಾಯಮಾಡಲಿಲ್ಲ. ಅದರ ಬದಲು , ನಿರುತ್ತೇಜಕ ಮಾತುಗಳನ್ನಾಡಿದರು . ಎದೆಗುಂದದ ಮೊದಲಪ್ಪ ಬೆಳೆಯನ್ನು ಕೊಯ್ದುಗೋಧಿಯನ್ನು ಸಂಗ್ರಹಿಸಿದ. ಯಾರದೋ ಸಹಾಯ ಪಡೆದು ಅದನ್ನು ಹಿಟ್ಟು ಮಾಡಿಸಿದ. ಗೋಧಿ ಹಿಟ್ಟಿನಿಂದ ರೊಟ್ಟಿ ತಟ್ಟಲು ತನ್ನಮೂವರು ಗೆಳೆಯರನ್ನು ಕರೆದ . ಎಲ್ಲರೂ ಮತ್ತದೇ ಮಾತುಗಳನ್ನಾಡಿದರು. ಛಲ ಬಿಡದ ಮೊದಲಪ್ಪ ತಾನೊಬ್ಬನೇ ಶ್ರಮವಹಿಸಿರೊಟ್ಟಿಗಳನ್ನು ಬೇಯಿಸಿದ. ಒಟ್ಟು ಹತ್ತು ರೊಟ್ಟಿಗಳು ಸಿದ್ದವಾದವು. ಅದನ್ನು ತಿನ್ನಲು ಮೊದಲಪ್ಪ ಕುಳಿತಾಗ , ಬೊಗಳಪ್ಪ ಬಂದುನೀನು ಸ್ವಾರ್ಥಿ ನೀನೊಬ್ಬನೇ ತಿನ್ನಲು ಕುಳಿತ್ತಿದ್ದೀಯ ನಮಗೇಕೆ ಕೊಡುತ್ತಿಲ್ಲ. ಎಂದು ಬೊಗಳಾಡಿದ. ಕೆಸರಪ್ಪನಂತು ನಿನ್ನ ರೊಟ್ಟಿನಮ್ಮ ಬಾಯಲ್ಲಿ ನೀರೂರಿಸುತ್ತಿದೆ . ನೀನೊಬ್ಬನೇ ತಿನ್ನುವುದು ಯಾವ ನ್ಯಾಯ ? ನಮಗೂ ಕೊಟ್ಟು ನೀನು ತಿನ್ನಬೇಕು ಎಂದುಕೂಗಾಡಿದ . ಮೆಲುಕಪ್ಪ ಹಿಂದಿನ ಕಾಲದಲ್ಲಿ ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು. ಈಗ ಕಾಲ ಕೆಟ್ಟಿದೆ . ರೊಟ್ಟಿಯನ್ನುನಮ್ಮೊಂದಿಗೆ ಹಂಚಿಕೊಳ್ಳದಿದ್ದರೆ, ನಾವು ಪ್ರತಿಭಟಿಸುತ್ತೇವೆ ಎಂದು ಕಿರುಚಿದ. ಕೂಗಾಟ , ಕಿರುಚಾಟ, ಎಳೆದಾಟ, ಹೊಡೆದಾಟಗಳ ಗಲಾಟೆಯನ್ನು ಕೇಳಿ ಹೊಲದ ಮಾಲೀಕ ಬಂದ . ನೆಲದ ರಾಜನೂ ಬಂದ . ರಾಜನೂ ಅಲ್ಲಿದ್ದ ಹತ್ತು ರೊಟ್ಟಿಗಳಲ್ಲಿ ಶೇಕಡನಲವತ್ತು ಅಂದರೆ ನಾಲ್ಕು ರೊಟ್ಟಿಗಳು ಸರ್ಕಾರದ ಸುಂಕವೆಂದು ಹೇಳಿ ಅಷ್ಟನ್ನು ಕಿತ್ತುಕೊಂಡು ಹೊರಟುಹೋದ. ಹೊಲದಮಾಲೀಕ ಬೆಳೆ ಬೆಳೆದ ಜಮೀನು ನನ್ನದು. ಅರ್ಧ ನನಗೆ ಸಲ್ಲಬೇಕು ಎಂದು ಹೇಳಿ ಉಳಿದಿದ್ದ ಆರು ರೊಟ್ಟಿಗಳಲ್ಲಿ ಮೂರನ್ನು ತೆಗೆದುಕೊಂಡು ಹೊರಟುಹೋದ. ಉಳಿದ ಮೂರು ರೊಟ್ಟಿಗಳನ್ನು ಕೆಸರಪ್ಪ, ಬೊಗಳಪ್ಪ ಮತ್ತು ಮೆಲುಕಪ್ಪ ತಲಾ ಒಂದರಂತೆಕಿತ್ತುಕೊಂಡು ತಿಂದರು. ಮೊದಲಪ್ಪನಿಗೆ ಏನೂ ಉಳಿಯಲಿಲ್ಲ. ಇದಾದ ನಂತರ ಮೊದಲಪ್ಪ ಎಂದೂ ಬೆಳೆ ಬೆಳೆಯಲು ಹೋಗಲೇ ಇಲ್ಲ. ತನ್ನ ಪಾಡಿಗೆ ತಾನು ಅಲ್ಲಿ ಇಲ್ಲಿ ಸಿಕ್ಕ ಕಾಳುಗಳನ್ನು ತಿಂದು ಬದುಕ ತೊಡಗಿದ.

ಸದಾ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದ ಮೊದಲಪ್ಪ ಹೀಗೆಕಾದ ಎಂಬುದು ಯಾರಿಗೂ ಅರ್ಥವಾಗಲಿಲ್ಲ . ನಿಮಗೇನಾದರೂಅರ್ಥವಾದರೆ ನಮಗೆ ಬರೆದು ತಿಳಿಸಿ.

ನಮ್ಮ ಗ್ರಾಮೀಣ ಪ್ರದೇಶದಲ್ಲಿಯೂ ಇಂಥ ಮನೆಮುರುಕರು ಇನ್ನೂ ಇದ್ದಾರೆ . ಸಮಾಜ ಅವರಿಗೂ ಮಣೆ ಹಾಕಿ ಕೂರಿಸುತ್ತಿದೆಎಂದರೆ ಪ್ರಾಮಾಣಿಕರೂ, ಮೊದಲಪ್ಪ ನಂತವರೂ ತಲೆ ತಗ್ಗಿಸಬೇಕಾದ ಸಂಗತಿ !. ಯಾವುದೇ ಕೆಲಸ ಮಾಡಲು ಮುಂದಾಳತ್ವವಹಿಸಿಕೊಂಡು ಹೋಗುವವರಿಗೆ ಕೇವಲ ಬೆಂಬಲ ವಾಗಿದ್ದರೆ ಸಾಕು . ಉಳಿದೆಲ್ಲ "ರಿಸ್ಕ್ " ಮೊದಲಪ್ಪ ನಂತಹ ಮೊದಲ ವ್ಯಕ್ತಿತೆಗೆದುಕೊಳ್ಳುತ್ತಾರೆ. ಒಂದು ಕುಟುಂಬ ವನ್ನಾಗಲಿ , ಒಂದು ಸಮಾಜವನ್ನಾಗಲೀ , ಒಂದು ರಾಷ್ಟ್ರವನ್ನಾಗಲಿ ಮುಂದೆ ಅಭಿವೃದ್ದಿಪಥದತ್ತ ತೆಗೆದುಕೊಂಡು ಹೋಗುತ್ತಾರೆ. ಎಲ್ಲಿ ದುಡಿಯುವ ಕೈಗೆ ಮರ್ಯಾದೆ ಸಿಗುವುದಿಲ್ಲವೋ ಅಲ್ಲಿ ವಿನಾಶ ವಿದ್ದದ್ದೆ. ಇದುನೂರಕ್ಕೆ ನೂರು ಸತ್ಯ. ಇನ್ನಾದರೂ ಮೊದಲಪ್ಪ ನಂತಹ ವ್ಯಕ್ತಿಗಳಿಗೆ ನಮ್ಮ ಸಮಾಜ ಸಹಾಯ ಮಾಡಬಲ್ಲದೆ ಕಾದುನೋಡೋಣ





ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486


















!