MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಜೂನ್ 30, 2010

ಹಸಿವು ಹೆಚ್ಚಿಸಲು- ಹಸಿವು ತಗ್ಗಿಸಲು -ಜೀರ್ಣಿಸಿಕೊಳ್ಳಲು ಮಾತ್ರೆಗಳಿವೆ, ದಪ್ಪಗಾಗಳು ,ಸಣ್ಣಗಾಗಳು , ತೆಪ್ಪಗಿರಲು- ಕುಪ್ಪಳಿಸುತ್ತಿರಲು ಮಾತ್ರೆಗಳಿವೆ !

ಬರವಣಿಗೆ ಹೆಚ್ಚಾಗಿದೆ, ಆದರೆ ಅರಿವು ಕಡಿಮೆಯಾಗಿದೆ !
ಹೆಚ್ಚು ಯೋಚಿಸುತ್ತೇವೆ, ಆದರೆ ಕಡಿಮೆ ಸಾಧಿಸುತ್ತೇವೆ !
ಧಾವಂತ ಪಡುವುದನ್ನು ಕಲಿತಿದ್ದೇವೆ, ಆದರೆ ನಿಧಾನವನ್ನು ಮರೆತಿದ್ದೇವೆ !
ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ ಆದರೆ ನೈತಿಕತೆ ಕುಸಿದಿದೆ !
ಇದು ವಿವಿಧ ಭಕ್ಷ್ಯಗಳ, ಆದರೆ ಕಡಿಮೆ ಜೀರ್ನಶಕ್ತಿಯ ಕಾಲ !
ಎತ್ತರದ ಆಕಾರ, ಆದರೆ ಕುಬ್ಜ ವ್ಯಕ್ತ್ತಿತ್ವದ ಮನುಷ್ಯರ ಕಾಲ !
ಒಳ್ಳೆ ಲಾಭ ಸಂಪಾದನೆ, ಆದರೆ ಟೊಳ್ಳು ಸಂಬಂಧಗಳ ಕಾಲ !
ವಿಶ್ವಶಾಂತಿಯ ಬಗ್ಗೆ ಮಾತನಾಡುತ್ತೇವೆ, ಆದರೆ ಮನೆಯವರೊಂದಿಗೆ ಕಾದಾದುತ್ತೇವೆ;
ಹೆಚ್ಚು ವಿರಾಮವಿದೆ, ಆದರೆ ಕಡಿಮೆ ಆರಾಮವಿದೆ !
ಗಂಡ ಹೆಂಡಿರಿಬ್ಬರ ದುಡಿಮೆ ಹೆಚ್ಚಾಗಿದೆ, ಆದರೆ ವಿಚ್ಹೇದನಗಳೂ ಹೆಚ್ಚಾಗಿವೆ !
ಅದ್ಭುತ ವಿನ್ಯಾಸದ ನಿವಾಸಗಳಿವೆ, ಆದರೆ ವಾಸಸ್ಥಾನವೇ ಮುರಿದು ಬಿದ್ದಿದೆ !
ಹಸಿವು ಹೆಚ್ಚಿಸಲು- ಹಸಿವು ತಗ್ಗಿಸಲು -ಜೀರ್ಣಿಸಿಕೊಳ್ಳಲು ಮಾತ್ರೆಗಳಿವೆ, ದಪ್ಪಗಾಗಳು ,ಸಣ್ಣಗಾಗಳು , ತೆಪ್ಪಗಿರಲು- ಕುಪ್ಪಳಿಸುತ್ತಿರಲು ಮಾತ್ರೆಗಳಿವೆ !
ನಿದ್ದಿಗೂ -ನಿದ್ದೆಗೆಡುವುದಕ್ಕೂ , ಬದುಕುವುದಕ್ಕೂ -ಕೊನೆಗೆ ಸಾಯುವುದಕ್ಕೂ ಮಾತ್ರೆಗಳೇ ಬೇಕು.

ರೀತಿ ಇದೆ . ನಮ್ಮ ಸಮಾಜದಲ್ಲಿ ಇಂದಿನ ಪರಿಸ್ಥಿತಿ ,

ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ .ಕಂ /
+೯೧-962172486











ತುಂಬ ಹೆಚ್ಚು ಮಾತನಾಡುತ್ತೇವೆ, ತುಂಬ ಕಡಿಮೆ ಪ್ರೀತಿಸುತ್ತೇವೆ,ತುಂಬ ಸುಳ್ಳು ಹೇಳುತ್ತೇವೆ !

ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ. ಆದರೆ ಸ್ಪೋಟಿಸುವ ಸ್ವಭಾವಗಳೂ ಇವೆ !
ರಸ್ತೆಗಳು ವಿಶಾಲವಾಗಿವೆ, ಆದರೆ ದೃಷ್ಟಿಕೋನಗಳು ಸಂಕುಚಿತವಾಗಿವೆ!
ನಾವು ಹೆಚ್ಚು ಖರೀದಿಸುತ್ತೇವೆ, ಆದರೆ ಕಡಿಮೆ ಉಪಯೋಗಿಸುತ್ತೇವೆ !
ನಮ್ಮ ಮನೆಗಳು ದೊಡ್ಡದಾಗುತ್ತಿವೆ,ಆದರೆ ಕುಟುಂಬ ಚಿಕ್ಕದಾಗುತ್ತಿದೆ !
ಅನುಕೂಲಗಳು ಹೆಚ್ಚಿವೆ, ಆದರೆ ಅನುಭವಿಸಲು ಸಮಯವೇ ಇಲ್ಲ !
ಅಸಾಮಾನ್ಯ ವಿದ್ಯಾರ್ಹತೆಗಳಿವೆ, ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ !
ವಿಷಯ ಸಂಗ್ರಹ ಹೆಚ್ಚಾಗಿದೆ , ಆದರೆ ವಿವೇಚನೆ ಕಡಿಮೆ ಆಗಿದೆ !
ಪರಿಣತರು ಹೆಚ್ಚಿದ್ದಾರೆ , ಸಮಸ್ಯೆಗಳೂ ಹೆಚ್ಚಿವೆ !
ಮಾತ್ರೆ,ಟಾನಿಕುಗಳು ಹೆಚ್ಚಿವೆ, ಆರೋಗ್ಯ ಕಡಿಮೆ ಆಗಿದೆ !
ನಾವು ಹೆಚ್ಚು ಗಳಿಸುತ್ತೇವೆ, ಆದರೆ ಕಡಿಮೆ ನಗುತ್ತೇವೆ !
ತುಂಬ ವೇಗವಾಗಿ ಹೋಗುತ್ತೇವೆ,ತುಂಬ ಬೇಗ ಕೋಪಿಸಿಕೊಳ್ಳುತ್ತೇವೆ!
ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ, ಬೆಳಗ್ಗೆ ತುಂಬ ಬಳಲಿಕೆಯಿಂದ ಏಳುತ್ತೇವೆ !
ಕಡಿಮೆ ಓದುತ್ತೇವೆ, ತುಂಬ ಟೀವಿ ನೋಡುತ್ತೇವೆ, ಅಪರೂಪಕ್ಕೆ ಪ್ರಾರ್ಥಿಸುತ್ತೇವೆ.
ನಮ್ಮ ಆಸ್ತಿಪಾಸ್ತಿಯ ಬೆಲೆ ಏರಿದೆ, ಆದರೆ ನಮ್ಮ ಮೌಲ್ಯಗಳೇ ಇಳಿದಿವೆ !
ತುಂಬ ಹೆಚ್ಚು ಮಾತನಾಡುತ್ತೇವೆ, ತುಂಬ ಕಡಿಮೆ ಪ್ರೀತಿಸುತ್ತೇವೆ,ತುಂಬ ಸುಳ್ಳು ಹೇಳುತ್ತೇವೆ !
ಜೀವನೋಪಾಯ ಮಾರ್ಗ ಅರಿತಿದ್ದೇವೆ, ಆದರೆ ಜೀವಿಸುವುದು ಹೇಗೆಂಬುದನ್ನು ಮರೆತಿದ್ದೇವೆ!
ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತಿದ್ದೇವೆ, ಆದರೆ ವರ್ಷಗಳಿಗೆ ಜೀವ ತುಂಬುತ್ತಿಲ್ಲ !
ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, ಆದರೆ ನಮ್ಮ ಕಾಂಪೌಂಡ್ ದಾಟಿ ನೆರೆಯವರನ್ನು ಭೇಟಿಯಾಗಲು ಹೋಗಿಲ್ಲ !
ನಾವು ಬಹಿರಂಗದಲ್ಲಿ ಗೆಲ್ಲುತ್ತಿದ್ದೇವೆ. ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ !
ಗಾಳಿಯನ್ನು ಶುದ್ಧಿಕರಿಸಿದ್ದೇವೆ , ಆದರೆ ನಮ್ಮ ಆತ್ಮವನ್ನು ಮಲಿನಗೊಳಿಸಿದ್ದೇವೆ!
ಅಣುವನ್ನೂ ಖಂಡತುಂಡ ಮಾಡಿದ್ದೇವೆ, ಆದರೆ ನಮ್ಮ ಆಹಂ ಅಖಂಡವಾಗಿ ಉಳಿದಿದೆ!

ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನಾಯ್ಚುರಲ್ ಫ್ಲಾಶ್ .ಕಂ /
+೯೧-9632172486





























ಮಂಗಳವಾರ, ಜೂನ್ 29, 2010

ನರನ ಸಾವಿಗೆ ನೂರು ಕಾರಣಗಳಿರಬಹುದು. ಆದರೆ ಜೀವ ಭಯ ಎಲ್ಲಕ್ಕೂ ಮಿಗಿಲಹುದು. ಮನದಲಿಹ -ಜೀವಭಯ ತೆಗೆಯುವುದು ಧೈರ್ಯದಲಿ . ಧೈರ್ಯದಲಿ ಬಾಳೆಂದ ಶ್ರೀರಂಗನಾಥ.

ನೆಟ್ ನಾಗ ಸ್ನೇಹಿತರು ಗಳೆಲ್ಲರಿಗೂ ಆದರದ ಸ್ವಾಗತ . ಇಂದು ನಾವು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಅದೇನೆಂದರೆ ಜೀವನಾನುಭವವಿಲ್ಲದೆ ಕೇವಲ ಗ್ರಂಥಾಲಯದ ಹುಳುವಿನಂತೆ ಚಿಂತನೆ ಮಾಡುವವರಿಗೆ ಮೌಲ್ಯಗಳ ವಾಸ್ತವಸ್ವರೂಪ ಮತ್ತು ಸಂಕೀರ್ಣತೆಗಳು ಅರ್ಥವಾಗುವುದು ಅಪರೂಪ ಹಾಗಾಗಿ ರೀತಿ ಆಗಬಾರದು.

ಇಂದು ಅಡ್ಡ ಹಾದಿಗೆ ಎಳೆಯುವ ಸಾಮಾಜಿಕ ಪ್ರಭಾವಗಳು ಹಾಗು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಕೆಟ್ಟ ಹಾವಳಿಯ ಕಾಲದಲ್ಲಿ ಮಕ್ಕಳಿಗೆ ಇಂಥ ವಿಷಯಗಳನ್ನು ಪರಿಚಯಿಸುವುದು,ಮತ್ತು ಅವುಗಳ ರುಚಿ ಹತ್ತಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ಮಾನವನ ವ್ಯಕ್ತಿತ್ವ ವಿಕಾಸಗೊಳ್ಳದೆ ,ಉಳಿದ ಯಾವುವೂ ಮನುಕುಲದ ಒಳಿತಿಗೆ ಪೂರಕವಾಗಲಾರವು.ಆದುದ್ದರಿಂದ ವ್ಯಕ್ತಿತ್ವವಿಕಾಸನಕ್ಕೆ ಪುಷ್ಟಿ ನೀಡುವ ಅನೇಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಒಳ್ಳೆಯ ವಿಚಾರಗಳು ನಮಗೆಎಲ್ಲಾ ದಿಕ್ಕುಗಳಿಂದಲೂ ಹರಿದು ಬಂದರು ಅದನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು.

ಓದಿ ನೀ ಪದವಿಗಳ ಪಡೆಯಲು ಬಹುದು. ಕಾದಿ ನೀ ಪದಕಗಳ ಧರಿಸಲೂ ಬಹುದು . ನೊಂದಿಹರ ಕಣ್ಣೀರ ಒರೆಸುವಂತಾದಾಗಬದುಕು ಸಾರ್ಥಕವೆಂದ ಶ್ರೀ ರಂಗನಾಥ.

ನರನ ಸಾವಿಗೆ ನೂರು ಕಾರಣಗಳಿರಬಹುದು. ಆದರೆ ಜೀವ ಭಯ ಎಲ್ಲಕ್ಕೂ ಮಿಗಿಲಹುದು. ಮನದಲಿಹ -ಜೀವಭಯ ತೆಗೆಯುವುದುಧೈರ್ಯದಲಿ . ಧೈರ್ಯದಲಿ ಬಾಳೆಂದ ಶ್ರೀರಂಗನಾಥ.

ಅಂದರೆ ನಿಮಗೆ ನಮ್ಮ ಉದ್ದೇಶ ಗೊತ್ತಾಗಿರಬಹುದು . ಜೊತೆಗೆ ನಿಮ್ಮ ಸಹಕಾರವು ಅಗತ್ಯ.

ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ.


.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+9632172486







,

ಸೋಮವಾರ, ಜೂನ್ 28, 2010

ಅದೃಷ್ಟವಶಾತ್ ಇಂದಿಗೂ ನಮ್ಮ ಮಕ್ಕಳಲ್ಲಿ ತರುಣ-ತರುಣಿಯರಲ್ಲಿ , ಪೂರ್ವಜ ಋಷಿಗಳ ರಕ್ತ ಇನ್ನೂ ಹಸಿಯಾಗಿ ಹರಿಯುತ್ತಿದೆ. ಸದವಕಾಶಗಳನ್ನು ಒದಗಿಸಿದಾಗಲೆಲ್ಲ ಅದು ಅಭಿವ್ಯಕ್ತವಾಗಿ ಅದ್ಬುತ

ಇನ್ನು ಕೆಲವು ವಿದ್ಯಾರ್ಥಿಗಳಿದ್ದಾರೆ . ಅವರಿಗೆ ದೇವರಲ್ಲಿ ನಂಬಿಕೆಯಿಲ್ಲ , ನಂಬುವುದಕ್ಕೆ ಇಷ್ಟವೂ ಇಲ್ಲ. ಅಂಥವರು ಏನುಮಾಡಬೇಕು? ಪ್ರಶ್ನೆಗೂ ಉತ್ತರವಿದೆ. ಅಂಥವರು ತಮಗೆ ತಾವೇ ಹೀಗೆ ದೃಢವಾಗಿ ಹೇಳಿಕೊಳ್ಳಲಿ ;

"ನಾನು ಹೆಚ್ಹೆಚ್ಚು ಓದುತ್ತೇನೆ , ಹೆಚ್ಹೆಚ್ಚು ಅಧ್ಯಯನ ಮಾಡುತ್ತೇನೆ ,
ಅಧ್ಯಯನ ಮಾಡಿದ್ದನ್ನು ಅರ್ಥಮಾಡಿಕೊಳ್ಳುತ್ತೇನೆ, ಮತ್ತು
ಚೆನ್ನಾಗಿ ನೆನಪಿಟ್ಟು ಕೊಳ್ಳುತ್ತೇನೆ, ಹೀಗೆ ಮಾಡುತ್ತ ನಾನು ಸಕಾಲದಲ್ಲಿ
ಶ್ರೇಷ್ಠ ವಿದ್ಯಾವಂತನಾಗಿಯೇ ತೀರುತ್ತೇನೆ "

ಇದು ಪ್ರಾರ್ಥನೆಯಲ್ಲ. ಇದೊಂದು ಭಾವನೆ. ರೀತಿ ಭಾವಿಸುತ್ತ ಭಾವಿಸುತ್ತಲೇ ವಿದ್ಯಾರ್ಥಿಯು ಸಕಾಲದಲ್ಲಿ ಶ್ರೇಷ್ಠವಿದ್ಯಾವಂತನಾಗುವುದು ಖಂಡಿತ. ಏಕೆಂದರೆ "ಯದ್ಭಾವಂ ತದ್ಭವತಿ " ಎಂಬಂತೆ . ನಾವು ಹೇಗೆ ಭಾವಿಸುತ್ತೆವೇಯೋಹಾಗೆಯೇ ಆಗುತ್ತೇವೆ. ಇದೊಂದು ಅನಿವಾರ್ಯ ನಿಯಮ. ಆದರೆ ಭಾವಿಸುವುದನ್ನು ಹೃತ್ಪೂರ್ವಕವಾಗಿ ಭಾವಿಸಬೇಕು. ಶ್ರದ್ಧೆಯಿಂದ ಭಾವಿಸಬೇಕು. ಇದು ಬಹಳ ಮುಖ್ಯ . ಏಕೆಂದರೆ ಪ್ರಾರ್ಥನೆಯೇ ಆಗೆಲಿ ಭಾವನೆಯೇ ಆಗಲಿ , ಶಕ್ತಿಯುತವಾಗುವುದುಹಾಗೂ ಫಲಕಾರಿಯಾಗುವುದು ಶ್ರದ್ಧೆಯಿಂದ. ರಹಸ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತಿರಬೇಕು.

ಪ್ರಾರ್ಥನೆಯನ್ನು ಅಥವಾ ಭಾವನೆಯನ್ನು ರಾತ್ರಿ ಮಲಗುವ ಹೊತ್ತಿಗೆ ಮಾಡಬೇಕೆಂಬುದರಲ್ಲಿ ಇನ್ನೊದು ರಹಸ್ಯವಿದೆ . ಮಲಗುವ ವೇಳೆಯಲ್ಲಿ ಮಾಡಿದ ಆಲೋಚನೆಗಳು , ಭಾವನೆಗಳು ಮನಸ್ಸಿನ ಆಳಕ್ಕೆ ಇಳಿಯುತ್ತವೆ . ಬೆಳಗ್ಗೆ ಏಳುವಾಗ ಅದೇಭಾವನೆಗಳೇ ಇನ್ನಷ್ಟು ಪುಷ್ಟಿಗೊಂಡು ವ್ಯಕ್ತವಾಗುತ್ತವೆ. ಒಂದೇ ಭಾವನೆಯನ್ನು ಕೆಲವಾರು ತಿಂಗಳ ಕಾಲ ಭಾವಿಸುತ್ತ ಬಂದಾಗಅದು ಅತ್ಯಂತ ಶಕ್ತಿಶಾಲಿಯಾಗಿ ವ್ಯಕ್ತವಾಗುತ್ತದೆ. ಇಂಥ ಶಕ್ತಿಶಾಲಿಯಾದ ಭಾವನೆಯಿಂದ ನಾವು ಏನನ್ನು ಬೇಕಾದರೂ ಸಾಧಿಸಲುಸಮರ್ಥರಾಗುತ್ತೇವೆ. ಉದಾಹರಣೆಗೆ ಮಹಾಪುರುಷರನ್ನು ತೆಗೆದುಕೊಳ್ಳಿ , ನಮ್ಮಂತೆಯೇ ಮಾನವರಾದ ಅವರುಮಹಾಪುರುಷರಾದದ್ದು ಹೇಗೆ? ಪ್ರಬಲ ಭಾವನಾಶಕ್ತಿಯಿಂದ , ಪ್ರಬಲ ಸಂಕಲ್ಪ ಶಕ್ತಿಯಿಂದ ! ಅವರು ಉನ್ನತ, ಉದಾತ್ತಯೋಜನೆಗಳನ್ನು ಹಾಕಿಕೊಂಡು ಸದಾ ಭಾವಿಸುತ್ತ ಬಂದರು;" ನಾನು ಇಂತಿಂಥದನ್ನು ಮಾಡುತ್ತೇನೆ. ಮಾಡಿಯೇತೀರುತ್ತೇನೆ " ಎಂದು ಕೊನೆಗೊಂದು ದಿನ ಅದನ್ನು ಮಾಡಿಯೇ ತೀರಿದರು. ಮಾಹಾ- ಪುರುಷರೆನಿಸಿದರು . ಆದ್ದರಿಂದ ವಿದ್ಯಾರ್ಥಿಯೂಭಾವಿಸುತ್ತಿರಲಿ;

"ನಾನು ಹೆಚ್ಹೆಚ್ಚು ಓದುತ್ತೇನೆ , ಹೆಚ್ಹೆಚ್ಚು ಅಧ್ಯಯನ ಮಾಡುತ್ತೇನೆ ,
ಅಧ್ಯಯನ ಮಾಡಿದ್ದನ್ನು ಅರ್ಥಮಾಡಿಕೊಳ್ಳುತ್ತೇನೆ, ಮತ್ತು
ಚೆನ್ನಾಗಿ ನೆನಪಿಟ್ಟು ಕೊಳ್ಳುತ್ತೇನೆ, ಹೀಗೆ ಮಾಡುತ್ತ ನಾನು ಸಕಾಲದಲ್ಲಿ
ಶ್ರೇಷ್ಠ ವಿದ್ಯಾವಂತನಾಗಿಯೇ ತೀರುತ್ತೇನೆ "

ಭಾವನೆಯ ಶಕ್ತಿ ಅದೆಷ್ತೆಂದರೆ ಅದರ ಪ್ರಭಾವದಿಂದ ವಿದ್ಯಾರ್ಥಿಯೂ ಕಾರ್ಯೋನ್ಮುಖನಾಗುತ್ತಾನೆಕಾರ್ಯತತ್ಪರನಾಗುತ್ತಾನೆ ........ಕೃತ ಕೃತ್ಯನಾಗುತ್ತಾನೆ . -ಎಂದರೆ ಒಂದು ದಿನ ಶ್ರೇಷ್ಠ ವಿದ್ಯವಂತನೆಂದು ಸನ್ಮಾನಿತನಾಗುತ್ತಾನೆ.

ಪ್ರಾರ್ಥನೆಯ ಮಹತ್ವವನ್ನು ಸಮರ್ಥಿಸಲು ಬೇರೆ ಮಾತು ಬೇಕಿಲ್ಲ . ಏಕೆಂದರೆ ಸ್ವತ: ಪ್ರಾರ್ಥನೆ ಮಾಡುವವನಿಗೆಕ್ರುತಾರ್ಥತೆಯ ಅನುಭವವಾಗುವುದಲ್ಲ !

ಕೊನೆಯ ಮಾತು
' ಇಂದಿನ ಮಕ್ಕಳು ಮುಂದಿನ ಪ್ರಜೆಗಳು ! ' ' ಇಂದಿನ ಯುವಜನರೆ ನಾಳಿನ ನೇತಾರರು !' ' ನೀವೇ ದೇಶವನ್ನು ಮುಂದೆನಡೆಸಿ ನಮ್ಮನ್ನು ರಕ್ಷಿಸುವವರು !' ಎಂದೆಲ್ಲ ನಾವು ನಮ್ಮ ಮಕ್ಕಳಿಗೆ, ಯುವಜನರಿಗೆ, ಉದುದ್ದನೆ ಉಪದೇಶಗಳನ್ನು ನೀಡುತ್ತಿದ್ದೇವೆ. ಆದರೆ ಅವರು ರೀತಿ ಬೆಳೆದು ಜವಾಬುದಾರಿಯುತ ಸ್ಥಾನಗಳನ್ನು ತುಂಬಲು ಬೇಕಾದ ವಿದ್ಯೆಯನ್ನಾಗಲೀ ಶೀಕ್ಷಣವನ್ನಾಗಲೀ ಕೊಡುತ್ತಿಲ್ಲ. ತದ್ವಿಪರೀತವಾಗಿ ಅವರು ಸಾಕಷ್ಟು ಕೆಟ್ಟು ಇತರರನ್ನು ಕೆಡಿಸಲು ಅನುಕೂಲವಾದಂತಹ ವಾತಾವರಣವನ್ನು ನಮ್ಮಅವಿವೇಕದಿಂದ ದುರಾಶೆಯಿಂದ ಇಂದ್ರಿಯ ಲೋಲುಪತೆಯಿಂದ ನಿರ್ಮಿಸುತ್ತಿದ್ದೇವೆ.

ಆದರೆ ಅದೃಷ್ಟವಶಾತ್ ಇಂದಿಗೂ ನಮ್ಮ ಮಕ್ಕಳಲ್ಲಿ ತರುಣ-ತರುಣಿ ಯರಲ್ಲಿ , ಪೂರ್ವಜ ಋಷಿಗಳ ರಕ್ತ ಇನ್ನೂ ಹಸಿಯಾಗಿಹರಿಯುತ್ತಿದೆ. ಸದವಕಾಶಗಳನ್ನು ಒದಗಿಸಿದಾಗಲೆಲ್ಲ ಅದು ಅಭಿವ್ಯಕ್ತವಾಗಿ ಅದ್ಬುತ ಕಾರ್ಯವನ್ನೆಸಗುತ್ತಿದೆ . ಇಂತಹಸದವಕಾಶವನ್ನು ನಿರ್ಮಿಸಿಕೊಡುವುದು ಹಿರಿಯರಾದ ನಮ್ಮ ಕರ್ತವ್ಯ . ಹಿಂದೆ ಪ್ರಕಟಿಸಿದ ಸಂಪುಟವು ಅಂತಹಸದವಕಾಶವನ್ನು ಸರಳ ಭಾಷೆಯಲ್ಲಿ , ಎಲ್ಲರ ತಲೆಗೂ ಹತ್ತುವಂತಹ ಭಾಷೆಯಲ್ಲಿ ಒದಗಿಸುತ್ತಿದೆ.

ಇಂದಿನ ವಿದ್ಯಾರ್ಥಿ ಯುವಜನರ ಅತ್ಯಂತ ಕಾತರದ ಸಮಸ್ಯೆಯೆಂದರೆ ತಮ್ಮ ಅಧ್ಯಯನದಲ್ಲಿ ಹೇಗೆ ಏಕಾಗ್ರತೆಯನ್ನುಸಂಪಾದಿಸಿ ಓದಿದ್ದನ್ನೆಲ್ಲ ನೆನಪಿನಲ್ಲಿಟ್ಟುಕೊಳ್ಳುವುದು ಎಂಬುದು. ಅದಕ್ಕೆಲ್ಲ ಮಾರ್ಗೋಪಾಯ ಲೇಖನಗಳಲ್ಲಿವೆ.

ನಾವು ಲೇಖನಗಳಿಗಾಗಿ ಆಯ್ದುಕೊಂಡ ಪುಸ್ತಕವು ಡಿಸೆಂಬರ್ ೧೯೯೫ ರಿಂದ ಮೇ ೨೦೦೯ ವರೆಗೆ ಹದಿನೆಂಟು ಭಾರಿಮುದ್ರಣಗಳನ್ನು ಕಂಡು ಐದು ಲಕ್ಷ ಪುಸ್ತಕಗಳು ಮಾರಾಟ ವಾಗಿವೆ. ಇದರ ಬೆಲೆ ಕೇವಲ ಹತ್ತು ರೂಪಾಯಿಗಳು. ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಡಬಹುದು .ವಿದ್ಯಾರ್ಥಿಯೂ ಸಂಗ್ರಹ ಯೋಗ್ಯ ಪುಸ್ತಕ ಇದು. ಒಬ್ಬ ವಿದ್ಯಾರ್ಥಿಯವಿದ್ಯಾಭ್ಯಾಸದ ಪ್ರಾರಂಭದಿಂದ ಆತನ ವಿದ್ಯಾಭ್ಯಾಸದ ಕೊನೆಯ ಹಂತದವರೆಗೂ ಇದು ಸಹಾಯಕನಾಗಿ ಕೆಲಸ ಮಾಡುತ್ತದೆ.
......
ಪುಸ್ತಕದ ಹೆಸರು ; ವಿದ್ಯಾರ್ಥಿಗಾಗಿ
ಲೇಖಕರು ; ಸ್ವಾಮಿ ಪುರುಷೋತ್ತಮಾನಂದ

ಬೆಲೆ; ೧೦ ರೂಪಾಯಿಗಳು

ನಿಮ್ಮ ಅನಿಸಿಕೆ ,ಅಭಿಪ್ರಾಯ ,ಸಲಹೆ,ಟೀಕೆ ,ಟಿಪ್ಪಣಿಗಳನ್ನು ದಯವಿಟ್ಟು ನಮಗೆ ಬರೆದು ಕಳುಹಿಸಿ.

ನೆಟ್ ನಾಗ @ ಜೀ ಮೇಲ್. ಕಂ


ಶುಭದಿನದ ಶುಭಾಶಯಗಳೊಂದಿಗೆ

.ಟಿ.ನಾಗರಾಜ

ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
.............................................................................................................

ನಾಳೆಯಿಂದ ಬದುಕು ಬದಲಾಗಲು ಕ್ಷಣ ಹೊತ್ತು ಸಾಕು. ಇದು ಸನ್ ನ್ಯಾಚುರಲ್ ಫ್ಲಾಶ್ ನ ಹೆಮ್ಮೆಯ ಕೊಡುಗೆ.









ಭಾನುವಾರ, ಜೂನ್ 27, 2010

ದೇವರು ಸರ್ವಶಕ್ತ ನಾದುದ್ದರಿಂದ ನಮ್ಮ ಪ್ರಾರ್ಥನೆ ಯನ್ನೂ ಈಡೇರಿಸಿ ಕೊಡುತ್ತಾನೆ

ಜೂನ್ ಬಂತೆಂದರೆ ಶಾಲೆಗಳು ತೆರೆದು ಪಾಠಪ್ರವಚನಗಳು ಪ್ರಾರಂಭ. ಸುಮಾರು ಒಂದೂವರೆ ತಿಂಗಳ ರಜೆಯ ಮಜವನ್ನುಅನುಭವಿಸಿದ ವಿದ್ಯಾರ್ಥಿಗಳು ಈಗ ಒಮ್ಮನಸ್ಸಿನಿಂದ ಅಧ್ಯಯನದಲ್ಲಿ ತೊಡಗಬೇಕು. ಸಾಮಾನ್ಯ ವಿದ್ಯಾರ್ಥಿಗಳು ಇನ್ನೂರಜಾದಿನಗಳ ಗುಂಗಿನಲ್ಲೇ ಇದ್ದರೂ ಉತ್ತಮ ವಿದ್ಯಾರ್ಥಿಗಳು ಮಾತ್ರ ಶ್ರದ್ಧೆಯಿಂದಲೇ ಅಧ್ಯಯನವನ್ನು ಪ್ರಾರಂಭಿಸುತ್ತಾರೆ .ಆದರೆ ಶ್ರದ್ಧಾವಂತ ವಿದ್ಯಾರ್ಥಿಗಳಲ್ಲಿ ಹಲವರನ್ನು ಪರೀಕ್ಷಾ ಭಯವೊಂದು ಹಿಡಿದುಕೊಂಡಿರುತ್ತದೆ. ಇನ್ನು ಕೆಲವರು ತಮ್ಮ ಹತ್ತಾರುಪಟ್ಯ ವಿಷಯಗಳನ್ನು ಓದಿ ನೆನಪಿಟ್ಟುಕೊಳ್ಳಲು ಕಷ್ಟ ಪಡುತ್ತಿರುತ್ತಾರೆ.ಮತ್ತೆ ಕೆಲವರಿಗೆ ಪಾಠ ಸರಿಯಾಗಿ ಅರ್ಥವೇ ಆಗುತ್ತಿಲ್ಲವಲ್ಲಎಂಬ ಸಂಕಟ . ಇದೊಂದು ವಿಶ್ವ ವ್ಯಾಪಕ ಸಮಸ್ಯೆ . ಸಮಸ್ಯೆಗೆ ಪರಿಹಾರಗಳು ಇಲ್ಲದಿಲ್ಲ. ಆದರೆ ಪರಿಹಾರಗಳನ್ನುಕಂಡುಕೊಳ್ಳಲು ತಾಳ್ಮೆಯಿಂದ ಆಲೋಚಿಸಬೇಕು.ಕೆಲವಾರು ಪರಿಹಾರೋಪಾಯಗಳನ್ನು 'ಅಧ್ಯಯನದಲ್ಲಿ ಏಕಾಗ್ರತೆ 'ಹಾಗೂವಿದ್ಯಾರ್ಥಿಗೊಂದು ಪತ್ರ' ಎಂಬ ಲೇಖನಗಳಲ್ಲಿ ಅದಾಗಲೇ ಓದಿದ್ದೀರಿ . ಈಗ ಇನ್ನೂ ಒಂದು ಉಪಾಯ ಇಲ್ಲಿದೆ.

ಇದು ಅತ್ಯಂತ ಪರಿಣಾಮಕಾರಿ ಮತ್ತು ಒಂದು ದೃಷ್ಟಿಯಿಂದ ತುಂಬ ಸುಲಭ ಕೂಡ . ಆದರೆ ಇಲ್ಲಿ ಸೂಚಿಸಿದಂತೆ ತಪ್ಪದೆಮಾಡುತ್ತ ಬರಬೇಕು. ಅಷ್ಟೆ. ಯಾವುದು ಉಪಾಯ?- ಪ್ರಾರ್ಥನೆ . ಪ್ರಾರ್ಥನೆ ಎಂದಾಕ್ಷಣ ಅದು ಭಗವಂತನಿಗೇ ಎಂಬುದುನಿಶ್ಹಯ. ಭಗವಂತ ಯಾರು? ಯಲ್ಲಿದ್ದಾನೆ ?ಅವನು ನಮ್ಮ ಹೃದಯದೊಳಗೆ ಇದ್ದಾನೆ. ಅವನನ್ನು ರಾಮ, ಕೃಷ್ಣಾಗಣೇಶ,ಲಕ್ಷ್ಮಿ,ಸರಸ್ವತಿ, ಏಸುಕ್ರಿಸ್ತ ,ಅಲ್ಲಾ ಇವೇ ಮೊದಲಾದ ಯಾವ ನಾಮರೂಪಗಳಿಂದ ಬೇಕಾದರೂ ಭಾವಿಸಬಹುದು. ಅದುಅವರವರ ಇಷ್ಟ . ಅವನು ಸರ್ವಶಕ್ತ. ಅವನು ಸರ್ವವ್ಯಾಪಿ,ಅವನು ಸರ್ವಜ್ಞ . ಅವನು ಪರಮ ಕರುಣಾಮಯ,ಅವನುಸರ್ವಶಕ್ತನಾದುದರಿಂದ ನಮ್ಮ ಪ್ರಾರ್ಥನೆಯನ್ನು ಈಡೇರಿಸಿಕೊಡಲು ಅವನಿಗೆನೇನೂ ಕಷ್ಟವಿಲ್ಲ.ಅವನುಪರಮಕರುಣಾಮಯನಾದ್ದರಿಂದ ಪ್ರಾರ್ಥನೆಗೆ ಓಗೊಡದೆ ಇರಲಾರ.ಆದರೆ ಭಗವಂತ ನಮ್ಮ ಪ್ರಾರ್ಥನೆಗೆ ಓಗೊಟ್ಟೆಗೊಡುತ್ತಾನೆಎಂಬ ವಿಶ್ವಾಸ ಶ್ರದ್ಧೆ ಇರಬೇಕಾದ್ದು ಬಹಳ ಮುಖ್ಯ.

ಈಗ ವಿದ್ಯಾರ್ಥಿಗಳು ಏನೆಂದು ಪ್ರಾರ್ಥನೆ ಮಾಡಬೇಕು? ಯಾರಿಗೆ ಏನು ಬೇಕೋ ಅವರು ಅದಕ್ಕಾಗಿ ಪ್ರಾರ್ಥಿಸುವುದುಲೋಕರೂಡಿ . ವಿದ್ಯಾರ್ಥಿಗಳಿಗೆ ವಿದ್ಯೆ ಬೇಕು. ವಿದ್ಯೆ ತಲೆಗೆ ಹತ್ತಬೇಕು . ಪರೀಕ್ಷೆಯಲ್ಲಿ ಪಾಸಾಗಬೇಕು. ಉತ್ತಮ ಶ್ರೇಣಿದೊರಕಬೇಕು -ಅಲ್ಲವೇ? ಆದ್ದರಿಂದ ಭಗವಂತನಲ್ಲಿ ಇದನ್ನೇ ಪ್ರಾರ್ಥಿಸಬೇಕು.

ಹೇ ಭಗವಾನ್, ನಿನಗೆ ಭಕ್ತಿಪೂರ್ವಕ ಪ್ರಣಾಮಗಳು .
ನನಗೆ ಹೆಚ್ಹೆಚ್ಚು ಓದಲು ಬುದ್ದಿ ಕೊಡು;
ಓದಿದ್ದನ್ನು ಅರ್ಥ ಮಾಡಿಕೊಳ್ಳಲು ಸಾಮರ್ಥ್ಯ ಕೊಡು;
ಅರ್ಥವಾದದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ಕೊಡು;
ನನ್ನನ್ನು ಉತ್ತಮ ವಿದ್ಯಾವಂತನನ್ನಾಗಿ ಮಾಡು.
ಹೇ ದೇವಾ. ನಿನಗೆ ಶರಣಾಗಿದ್ದೇನೆ.
ದಯಮಾಡಿ ನನ್ನೀ ಪ್ರಾರ್ಥನೆಯನ್ನು ಈಡೇರಿಸಿಕೊಡು.

ಪ್ರಾರ್ಥನೆ ಮಾಡುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳುವುದು ಒಳ್ಳೆಯದು. ಏಕೆಂದರೆ ಕಣ್ಣುಗಳು ತೆರೆದಿರುವಾಗ ಹೊರಗಣ ಬೆಳಕುವಸ್ತುಗಳು ಕಾಣಿಸುವುದರಿಂದ ಮನಸ್ಸು ಹೃದಯದೊಳಕ್ಕೆ ಸರಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಣ್ಣುಗಳನ್ನುಮುಚ್ಚಿಕೊಂಡು ,ಅಂತರಗದೊಳಗಿರುವ ಪರಮಾತ್ಮನನ್ನು ಹೃತ್ಪೂರ್ವಕವಾಗಿ ಪ್ರಾರ್ಥಿಸಬೇಕು.

ವಿದ್ಯೆ ಬೇಕೆಂಬ ವಿದ್ಯಾರ್ಥಿಗಳು ರಾತ್ರಿ ಮಲಗಿಕೊಳ್ಳುವ ಮುನ್ನ ಪ್ರಾರ್ಥನೆಯನ್ನು ತಪ್ಪದೆ ಮೂರು ತಿಂಗಳ ಕಾಲಮಾಡಿನೋಡಲಿ . ಇದರ ಸತ್ಪರಿಣಾಮದ ಮಧುರ ಫಲವನ್ನು ಅವರು ಅಲ್ಪಾವಧಿಯಲ್ಲೇ ಅನುಭವಿಸುವುದು ಖಂಡಿತ. ಆದರೆಪ್ರಾರ್ಥನೆ ಹ್ರುತ್ಪೂರ್ವಕವಾಗಿರಬೇಕು . ಶ್ರದ್ದೆಯಿಂದ ಕೂಡಿರಬೇಕು . ಏಕೆಂದರೆ ಶ್ರದ್ಧೆಯೇ ಸಿದ್ಧಿಯ ಕೀಲಿಕೈ.

ಭಗವಂತನು ನಮ್ಮ ಪ್ರಾರ್ಥನೆಯನ್ನು ಹೇಗೆ ನಡೆಸಿಕೊಡುತ್ತಾನೆ ಗೊತ್ತೆ? ಅವನು ಮನಸ್ಸನ್ನು ಅಧ್ಯಯನಕ್ಕೆಆಣೆಗೊಳಿಸಿಬಿಡುತ್ತಾನೆ . ಮನಸ್ಸಿನಲ್ಲಿ ಶಕ್ತಿ ಯನ್ನೂ ತೇಜಸ್ಸನ್ನು ತುಂಬುತ್ತಾನೆ. ಆಗ ಮನಸ್ಸು ಸಮರ್ಥವಾಗುತ್ತದೆ. ಸಮರ್ಥಮನಸ್ಸು ಸಾಧಿಸಲಾರದ್ದು ಯಾವುದಿದೆ ? ಆದ್ದರಿಂದ ಪ್ರಾರ್ಥನೆ ಎಂಬ ಅದ್ಬುತ ಉಪಾಯದ ಪ್ರಯೋಜನವನ್ನು ಪ್ರತಿಯೊಬ್ಬವಿದ್ಯಾರ್ಥಿಯು ಹೆಚ್ಹೆಚ್ಚು ಪಡೆಯುವಂತಾಗಬೇಕು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
. ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧-೯೬೩೨೧೭೨೪೮೬

.............................................................................................................

ನಿರೀಕ್ಷಿಸಿ
ನಿಮ್ಮ ನೆಟ್ ನಾಗದಲ್ಲಿ
ಪ್ರಥಮ ಬಾರಿಗೆ
ಬದುಕು
ಬದಲಾಗಲು
ಕ್ಷಣ ಹೊತ್ತು
ಸಾಕು!

ಅತೀ ಶೀಘ್ರಾದಲ್ಲಿ ಪ್ರಕಟ. ಇದು ಸನ್ ನ್ಯಾಚುರಲ್ ಫ್ಲಾಶ್ .ಕಂ / ನ ಕೊಡುಗೆ . ನೊಂದ ಮನಸ್ಸಿಗೆ ತಂಪನ್ನು ನೀಡುವ ಲೇಖನಗಳು .












































' , -

ಶನಿವಾರ, ಜೂನ್ 26, 2010

ಸಾವಿರ ಜನ ಸೇರಿರುವ ಸಾರ್ವಜನಿಕರ ಸಭೆಯೊಂದಕ್ಕೆ ಮುಖ್ಯ ಅತಿಥಿಗಳೋ , ಮಾನ್ಯ ಮಂತ್ರಿಗಳೋ ಒಂದು ಗಂಟೆ ತಡವಾಗಿ ಬಂದರೆಂದರೆ ಒಂದು ಸಾವಿರ ಗಂಟೆಗಳನ್ನು ಅವರು 'ಕೊಲೆ'ಗೈದರೆಂದೇ ಅರ್ಥ

ವಿದ್ಯಾರ್ಥಿಗಳ ವಿಷಯದಲ್ಲಿ ಹೇಳುವುದಾದರೆ, ಅವರ ಸಮಯ ವ್ಯರ್ಥವಾಗುವ ಸಂದರ್ಭಗಳು ಬಹಳ. ಒಂದೇ ಒಂದುಉದಾಹರಣೆ -'ಲೆಟ್ ಆಪ್'ಗಳು. ಅನಿರೀಕ್ಷಿತವಾಗಿ ಹೀಗೆ ಮತ್ತೆ ಮತ್ತೆ ದೊರಕುವ ಬಿಡುವಿನ ವೇಳೆಯನ್ನು ಮಿಂಚಿನಂತೆತಲೆಯೋಡಿಸಿ ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳು ಮೊದಲೇ ಸಿದ್ಧರಾಗಿರಬೇಕಾಗುತ್ತದೆ.

ಸಮಯವನ್ನು ವ್ಯರ್ಥವಾಗಿ ಕಳೆಯಲೇ ಬೇಕಾದ ಸಂದರ್ಭಗಳನ್ನು ಸದುಪಯೋಗಪಡಿಸಿಕೊಳ್ಳಲು ಕೆಲವು ಸಲಹೆಗಳನ್ನುಮಾತ್ರ ಇಲ್ಲಿ ಇಡಲಾಗಿದೆ. ಆದರೆ ಅವರವರೇ ಬುದ್ಧಿ ಉಪಯೋಗಿಸಿ ಇನ್ನೂ ಹಲವು ಉಪಾಯಗಳನ್ನು ಕಂಡುಕೊಳ್ಳಬೇಕು. ಸುಮ್ಮನೆ ಸೋರಿಹೋಗುವ ಸಮಯದ ಬಗ್ಗೆ ಒಂದು ಅರಿವನ್ನು ಮೂಡಿಸುವ ಪ್ರಯತ್ನ ಮಾಡಲಾಗಿದೆ ಇಲ್ಲಿ.

ಇನ್ನೂ ನಮ್ಮ ಸ್ನೇಹಿತರು, ಬಂಧುಗಳು, ಪರಿಚಯಸ್ಥರು ಇದ್ದಾರೆ; ಇರಬೇಕಾದ್ದೇ . ಆದರೆ ಇವರೆಲ್ಲ ತಮ್ಮ ಅತಿವಿಶ್ವಾಸದಿಂದನಮ್ಮ ಅಮೂಲ್ಯ ಸಮಯವನ್ನು ತಿಂದುಹಾಕದಂತೆ ಒಂದು ಕಣ್ಣಿಟ್ಟಿರಬೇಕಾಗುತ್ತದೆ . ಹಾಗೆಯೇ ಅವರ ಸಮಯವೂ ನಮ್ಮಿಂದಾಗಿನಷ್ಟವಾಗುವಂತಾದರೆ ನ್ಯಾಯವಲ್ಲ.

ಇಂಗ್ಲೀಷಿನಲ್ಲಿ'ಮ್ಯಾನ್-ಹಔರ್' ಎಂಬ ಪದವಿದೆ. ಯೋಚಿಸಿ ನೋಡಿದರೆ ಇದೊಂದು ಅತ್ಯಂತ ಪ್ರಾಮುಖ್ಯವಾದ ಅಂಶ. ಮ್ಯಾನ್-ಪವರ್ ಇರುವಂತೆ ಮ್ಯಾನ್ ಹಔರ್ . ಅಂದರೇನು?-ದಿನದ ಇಪ್ಪತ್ತನಾಲ್ಕು ಗಂಟೆಗಳು ಪ್ರತಿಯೊಬ್ಬನ ಸೊತ್ತು ಎನ್ನುವವಿಷಯಕ್ಕೆ ಎದುರುಮಾತಿಲ್ಲ ತಾನೇ?. ಹಾಗೆಯೇ ಕೊಟ್ಯಂತ ಜನ ಸಮಯವನ್ನು ಉಪಯೋಗಿಸಿಕೊಳ್ಳುತ್ತಿದ್ದರು ದಿನದಗಂಟೆಗಳು ಮಾತ್ರ ಇಪ್ಪತ್ತನಾಲ್ಕೆ ಎಂಬುದು ದಿಟತಾನೆ? ಆದರೆ, ವಿಚಾರ ಮಾಡಿ ನೋಡಿದಾಗ ತಿಳಿಯುತ್ತದೆ. ಒಬ್ಬನಿಗೆಇಪ್ಪತ್ತನಾಲ್ಕು ಗಂಟೆಯಂತೆ ಇಬ್ಬರಿಗೆ ನಲವತ್ತೆಂಟು ಗಂಟೆ, ನೂರು ಮಂದಿಗೆ ಎರಡು ಸಾವಿರದ ನಾನ್ನೂರು ಗಂಟೆ! ಆದ್ದರಿಂದ, ಸಾವಿರ ಜನ ಸೇರಿರುವ ಸಾರ್ವಜನಿಕರ ಸಭೆಯೊಂದಕ್ಕೆ ಮುಖ್ಯ ಅತಿಥಿಗಳೋ , ಮಾನ್ಯ ಮಂತ್ರಿಗಳೋ ಒಂದು ಗಂಟೆ ತಡವಾಗಿಬಂದರೆಂದರೆ ಒಂದು ಸಾವಿರ ಗಂಟೆಗಳನ್ನು ಅವರು 'ಕೊಲೆ'ಗೈದರೆಂದೇ ಅರ್ಥ. ಮಾನವ ಇತಿಹಾಸವನ್ನೊಮ್ಮೆ ಭಾವಿಸಿನೋಡಿದರೆ ರೀತಿಯಾಗಿ ಕಾಲನಷ್ಟ ಮಾಡಿಕೊಂಡವರೆಷ್ಟೋ ! ಆದರೆ ಅವರೆಲ್ಲ 'ಕಾಲವಶ'ರಾಗಿಬಿಟ್ಟರೆನ್ನಿ! ಈಗಲಾದರೂ ನಾವುಸ್ವಲ್ಪ ಎಚ್ಚರ ವಹಿಸಿ ಬುದ್ದಿ ಉಪಯೋಗಿಸಿ ಕಾಲವನ್ನು ವಶದಲ್ಲಿ ಇಟ್ಟುಕೊಳ್ಳುವ ತಂತ್ರವನ್ನು ಕಂಡುಕೊಳ್ಳಬೇಕು . ತನ್ಮೂಲಕಮಹತ್ಕಾರ್ಯಗಳನ್ನು ಸಾಧಿಸಬೇಕು. ಮಹಾನ್ ವ್ಯಕ್ತಿಗಳಾಗಬೇಕು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ.
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486
.......................................................................................................

ನಿರೀಕ್ಷಿಸಿ
ಮೊಟ್ಟ ಮೊದಲ ಬಾರಿಗೆ ನಿಮ್ಮ ನೆಟ್ ನಾಗದಲ್ಲಿ ,ಸನ್ ನ್ಯಾಚುರಲ್ ಫ್ಲಾಶ್ ಪ್ರಸ್ತುತ ಪಡಿಸುತ್ತಿದೆ.
ಬದುಕು
ಬದಲಾಗಲು
ಒಂದೇ
ಕ್ಷಣ
ಸಾಕು!

ತಪ್ಪದೆ ಓದಿ . ಯಾರ ಜೀವನದ ತಿರುವು ಯಲ್ಲಿ ಇದೆಯೋ ಗೊತ್ತಿಲ್ಲ. ಶೀಘ್ರದಲ್ಲಿ ಪ್ರಕಟ!


-------------------------------------------------------------------------------------------
















ಶುಕ್ರವಾರ, ಜೂನ್ 25, 2010

ಬಸ್ಸು-ರೈಲುಗಳಲ್ಲಿ ದೂರದ ಊರಿಗೆ ಪ್ರಯಾಣ ಮಾಡುವಾಗ ಉಪಾಯವಾಗಿ ಕಿಟಕಿಯ ಪಕ್ಕದಲ್ಲಿ ಜಾಗ ಮಾಡಿಕೊಂಡರೆದಾರಿಯುದ್ದಕ್ಕೂ ಕಾಣಸಿಗುವ ವಿಭಿನ್ನ ವಿಚಿತ್ರ ನಿಸರ್ಗ ಸೌಂದರ್ಯವನ್ನು ವೀಕ್ಷಿಸು

ಎಷ್ಟೋ ಸಲ ಸಮಯವನ್ನು ವ್ಯರ್ಥವಾಗಿ ಕಳೆಯಲೇ ಬೇಕಾದ ಸಂದರ್ಭಗಳು ಬರುವುದೂ ಉಂಟು . ಉದಾಹರಣೆಗೆ ಪ್ರಯಾಣಕಾಲ,ಕ್ಯೂಗಳಲ್ಲಿ ನಿಂತಿದ್ದಾಗ , ಯಾರಿಗಾದರೂ ಕಾಯುವಾಗ, ಶಾಲಾ ಕಾಲೇಜಿನಲ್ಲಿ ,'ಲೆಟ್ ಆಪ್'ಕೊಟ್ಟಾಗ ಇತ್ಯಾದಿ .

ಬಸ್ಸು-ರೈಲುಗಳಲ್ಲಿ ದೂರದ ಊರಿಗೆ ಪ್ರಯಾಣ ಮಾಡುವಾಗ ಉಪಾಯವಾಗಿ ಕಿಟಕಿಯ ಪಕ್ಕದಲ್ಲಿ ಜಾಗ ಮಾಡಿಕೊಂಡರೆದಾರಿಯುದ್ದಕ್ಕೂ ಕಾಣಸಿಗುವ ವಿಭಿನ್ನ ವಿಚಿತ್ರ ನಿಸರ್ಗ ಸೌಂದರ್ಯವನ್ನು ವೀಕ್ಷಿಸುತ್ತಾ ಆಸ್ವಾದಿಸಬಹುದು.ವ್ಯಕ್ತಿ ಆಧ್ಯಾತ್ಮಿಕಮನೋಭಾವದವರಾದರೆ ಭಗವನ್ನಾಮ ಜಪವನ್ನೋ ಪಾರಯಣವನ್ನೂ ಮಾಡಬಹುದು.ಇನ್ನು ಕೆಲವರು ನಿದ್ರೆ ಹೊಡೆಯುವವರುಇದ್ದಾರೆ .ಅವರ ಪಾಲಿಗೆ ಅದೇ ಸಮಯದ ಸದುಪಯೋಗ ! ವಿಮಾನ ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವ ಭಾಗ್ಯವಿಲ್ಲ. ಅವರಿಗೆ ಪುಸ್ತಕ ಓದುವ ಅಭ್ಯಾಸವಿದ್ದರೆ ಒಳ್ಳೆಯದು.

ಕ್ಯೂಗಳಲ್ಲಿ ನಿಂತಿರುವಾಗ ಜೊತೆಯಲ್ಲಿ ನಿಂತಿರುವವರು ಸಮಾನ ಮನಸ್ಕರಾದರೆ ಅವರೊಂದಿಗೆ ಉಪಯುಕ್ತ ಸಂಭಾಷಣೆಯಲ್ಲಿ ತೊಡಗಬಹುದು ಅಥವಾ ಓದಿ ತಿಳಿದ ಒಂದೆರಡು ಉದಾತ್ತ ವಿಚಾರಗಳನ್ನು ನೆನಪಿಗೆ ತಂದುಕೊಂಡು ಮೆಲಕು ಹಾಕಬಹುದು. ಇಲ್ಲವೇ ನೆನಪಿರುವ ಕೆಲವು ಶ್ಲೋಕಗಳ ಮೇಲೆ ಮನನ ಮಾಡಬಹುದು. ಕೆಲವೊಮ್ಮೆ ಯಾರಿಗಾದರೂ ಕಾಯುತ್ತ ಕುಳಿತು ಕೊಳ್ಳುವಸಂದರ್ಭ ಬರುವುದುಂಟು.ಆಗ ಕಾಯುವವರ ಮನಸ್ಸಿನಲ್ಲಿ 'ಅವರು ಯಾಕಿನ್ನು ಬರಲಿಲ್ಲ?'-ಎಂಬ ಕಾತರತೆ ಆರಂಭವಾಗುತ್ತದೆ.ಆದರೆ ಕಾತರೆಯಿಂದೇನು ಪ್ರಯೋಜನವಿಲ್ಲ. ಏಕೆಂದರೆ, ನಾವು ಕಾತರಗೊಂಡೆವೆಂದು ಅವರೇನೂ ಬೇಗಬರುವುದಿಲ್ಲ. ಅಲ್ಲದೆ , ಅವರು ತಡವಾಗುವುದಕ್ಕೆ ಏನಾದರು ಕಾರಣವಿದ್ದರೂ ಇರಬಹುದು; ಅಥವಾ ಕಾರಣಾಂತರಗಳಿಂದ ಅವರುಅಂದು ಬರದೆಯೇ ಹೋಗಬಹುದು , ಆಗ ಸಮಯ ನಷ್ಟವಾಯಿತೆ! .ನಾವು ಸುಮ್ಮನೆ ಕಾತರ ಪಟ್ಟದ್ದೆಲ್ಲ ವ್ಯರ್ಥವಾಯಿತೆ! ಕಾಯುವುದೇನು ತಪ್ಪುವುದಿಲ್ಲವಾದ್ದರಿಂದ ಕಾಯೋಣ; ಕಾತರಗೊಳ್ಳದೆ ಮತ್ತು ಕಾಲ ವ್ಯರ್ಥವಾಗದಂತೆ ಏನಾದರೊಂದುಕಾರ್ಯದಲ್ಲಿ ನಿರತರಾಗಿರೋಣ!

ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ


.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-೯೬೩೨೧೭೨೪೮೬


...............................................................................................................................................................................
ನಿರೀಕ್ಷಿಸಿ !

ಬದುಕು
ಬದಲಾಗಲು
ಕ್ಷಣ ಹೊತ್ತು
ಸಾಕು!
ನೆಟ್ ನಾಗದಲ್ಲಿ ಶೀಘ್ರದಲ್ಲಿ ಪ್ರಾರಂಭ. ಇದು ಸನ್ ನ್ಯಾಚುರಲ್ ಫ್ಲಾಶ್ ಪ್ರಕಟಪಡಿಸುತ್ತದೆ

ಗುರುವಾರ, ಜೂನ್ 24, 2010

ಸಾರೀನೂ ಇಲ್ಲ ಗೀರೀನು ಇಲ್ಲ . ಏನ್ರಿ , ನನ್ನಹತ್ರ ನಾಟಕ ಆಡ್ತಿದ್ದೀರೆನ್ರಿ ?"

ಎಚ್ಚರಗೇಡಿತನವನ್ನು ಹೋಗಲಾಡಿಸಿಕೊಳ್ಳುವುದು ಹೇಗೆ? ನಮಗೆ ನಾವೇ ಬುದ್ಧಿ ಹೇಳಿಕೊಳ್ಳುವುದರ ಮೂಲಕ, ಏನೆಂದು ಬುದ್ಧಿಹೇಳಬೇಕು?"ನೋಡು ನೀನು ಹೀಗೆ ಮರೆಯುತ್ತ ಹೋದರೆ ನಿನಗೆ ಕಷ್ಟ -ನಷ್ಟ-ಭ್ರಷ್ಟ ಕಟ್ಟಿಟ್ಟಿದ್ದು. ಆದ್ದರಿಂದ ಪ್ರತಿಯೊಂದುವಿಷಯದಲ್ಲೂ ಎಚ್ಚರವಹಿಸುವುದನ್ನು ಅಭ್ಯಾಸಮಾಡಿಕೋ.ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಎಷ್ಟು ಲಾಭವಿದೆ ಗೊತ್ತೇ?" ಎಂದು.

ಒಮ್ಮೆ ಒಬ್ಬ ಬೆಂಗಳೂರಿನಿಂದ ಬೊಂಬಾಯಿಗೆ ಹೊರಟ-ಬಹುಮುಖ್ಯ ಸಮ್ಮೇಳನವೊಂದರಲ್ಲಿ ಭಾಗವಹಿಸಲು,ಜೊತೆಯಲ್ಲಿತೆಗೆದುಕೊಂಡು ಹೋಗಬೇಕಾದ ಸಾಮಾನು ಸರಂಜಾಮೂಗಳನ್ನೆಲ್ಲ ಎಣಿಸಿ ನೋಡಿದ -ಪೆಟ್ಟಿಗೆ,ಹಣ್ಣಿನ ಬುಟ್ಟಿ,ಕೈಚೀಲ , ರೈಳುತಂಬಿಗೆ ಎಲ್ಲ ಸರಿಯಾಗಿದೆ,ಎಲ್ಲವನ್ನು ತೆಗೆದುಕೊಂಡು ದಡದಡ ನಡೆದ, ರೈಲು ಹತ್ತಿ ಕಿಟಕಿಯ ಬಳಿಯಿದ್ದ ತನ್ನ ಸ್ಥಾನದಲ್ಲಿಆರಾಮವಾಗಿ ಕುಳಿತ. ರೈಲು ಹೊರಟಿತು.ಇವನು ಕಿಟಕಿಯ ಹೊರಗೆ ಕಣ್ಣು ಹಾಯಿಸಿದ . ಓಡುವ ಗಾಡಿ ಕ್ಷಣಕ್ಷಣಕ್ಕೂ ಹೊಸ ಹೊಸದೃಶ್ಯಗಳನ್ನು ಒದಗಿಸಿ ಕೊಡುತ್ತಿತ್ತು.ನಗರದ ಕಟ್ಟಡಗಳನ್ನೇ ,ಕಟ್ಟಡಗಳ ಗೋಡೆಗಳನ್ನೇ ನೋಡಿದ್ದ ಅವನ ಕಣ್ಣುಗಳಿಗೆ ಹಬ್ಬ.ಅವನಮನಸ್ಸು ಪ್ರಕೃತಿಯ ಆನಂತತೆಯನ್ನು ಅನುಭವಿಸುತ್ತ,, ಅದರಲ್ಲೇ ಲೀನವಾಯಿತು . ಆಗ ಇದ್ದಕ್ಕಿದ್ದಂತೆ ಒಂದು ಧ್ವನಿ ಕೇಳಿಸಿತು;
"ಟಿಕೆಟ್ ತೋರಿಸ್ರಿ"
ಟಿಕೆಟ್ ಕಲೆಕ್ಟರ್ ಗೊಗ್ಗರು ಧ್ವನಿ ಅದು .ಈತ ವಾಸ್ತವಿಕ ಸ್ಥಿತಿಗೆ ಇಳಿದು ಜೇಬಿಗೆ ಕೈಹಾಕಿದ ಟಿಕೆಟ್ ತೆಗೆಯುವುದಕ್ಕೆ .ಆದರೆಆದರೆ!ಜೇಬಿನಲ್ಲಿ ಟಿಕೆಟ್ ಇಲ್ಲ! ಎಲ್ಲಿ ?ಟಿಕೆಟ್ ಎಲ್ಲಿ ?

"ಓಹ್ ! ಮರೆತೇಬಿಟ್ಟೆ . ಟಿಕೇಟು ಮನೆಯಲ್ಲೇ ಉಳಿದುಬಿಟ್ಟಿದೆ ಸರ್ ! ಭದ್ರವಾಗಿರಲಿ ಅಂತ ಬೀರುವಿನಲ್ಲಿಟ್ಟಿದ್ದೆ . ಹೊರಡುವಗಡಿಬಿಡಿಯಲ್ಲಿ ಮರೆತುಬಿಟ್ಟೆ .ಸಾರಿ ಸರ್ !"

"ಸಾರೀನೂ ಇಲ್ಲ ಗೀರೀನು ಇಲ್ಲ . ಏನ್ರಿ , ನನ್ನಹತ್ರ ನಾಟಕ ಆಡ್ತಿದ್ದೀರೆನ್ರಿ ?"

"ಇಲ್ಲ ಸರ್ ! ಖಂಡಿತವಾಗಿಯೂ ಟಿಕೆಟ್ ಮನೆಲಿದೆ ಸರ್ !"

"ನೋಡಿ, ಅದೆಲ್ಲ ಆಗೋದಿಲ್ಲ. ಒಂದೋ ನೀವು ದಂಡ ತೆರಬೇಕು . ಇಲ್ಲವಾದರೆ ಮುಂದಿನ ನಿಲ್ದಾಣದಲ್ಲಿ ಇಳಿಯಿರಿ ."
ಆತನ ಬಳಿ ದಂಡ ತರುವಷ್ಟು ಹಣ ಇಲ್ಲದ್ದರಿಂದ ಮುಂದಿನ ನಿಲ್ದಾಣದಲ್ಲಿ ಇಳಿದ. ಆದರೂ ಸ್ವಲ್ಪ ದಂಡವನ್ನಂತುತೆರಲೆಬೇಕಾಯಿತು.ಬಳಿಕ ಹೊಸದಾಗಿ ಟಿಕೆಟ್ ಕೊಂದು ಮುಂದಿನ ರೈಲಿನಲ್ಲಿ ಮುಂದುವರಿದ. ಆದರೆ ಬೊಂಬಾಯಿಗೆತಲುಪುವಷ್ಟರಲ್ಲಿ ಸಮ್ಮೇಳನದ ಬಹುಭಾಗ ಮುಗಿದು ಹೋಗಿತ್ತು. ಒಂದು ಸಣ್ಣ ಮರವೆಯಿಂದಾಗಿ ಕಷ್ಟ-ನಷ್ಟ -ಭ್ರಷ್ಟ ! ಸಮ್ಮೇಳನಕ್ಕೂ ಸಮಯಕ್ಕೆ ಸರಿಯಾಗಿ ಬರಲಾಗಲಿಲ್ಲ.

ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ /
+೯೧-9632172486
















!

ಬುಧವಾರ, ಜೂನ್ 23, 2010

ಹಣದ ಅಗತ್ಯ ಬಿದ್ದಾಗ ಸ್ನೇಹಿತನ ನೆನಪಾಗಿ ಸಾಲ ತೆಗೆದುಕೊಂಡು ಹೋಗಿ, ಹಿಂದಿರುಗಿಸುವ ಸಮಯದಲ್ಲಿ ಮಾತ್ರ ಸುಲಭವಾಗಿ ಮರೆಯುವವರಿದ್ದಾರೆ. ಇದು ಮಾತ್ರ ಜಾಣತನದ ಮರವು!

ಸಮಯ ಮಿಗಿಸಿ ಏನು ಮಾಡಬೇಕಾಗಿದೆ ಎನ್ನುವ ಭೂಪರು ಇದ್ದಾರೆ , ಇರಲಿ ಆದರೆ ಮಿಗಿಸಿದ ಸಮಯವನ್ನುಸದುಪಯೋಗಪಡಿಸಿಕೊಳ್ಳಬೇಕೆನ್ನುವವರು ಮಾತ್ರ ಇಂಥವರಿಂದ ದೂರವಿರಬೇಕು!

ಸಮಯವನ್ನು ನಷ್ಟಗೊಳಿಸುವಲ್ಲಿ ಮರವೇ ವಹಿಸುವ ಪಾತ್ರ ಬಹಳ ದೊಡ್ಡದು . ತನ್ನ ಕೋಣೆಗೆ ಬೀಗ ಹಾಕಿಕೊಂಡು ದೂರದಸ್ನೇಹಿತನ ಮನೆಗೆ ಹೋದವನೊಬ್ಬ ಅಲ್ಲಿ ಕಾಫಿ-ತಿಂಡಿ ತಿಂದು ಮಾತುಕತೆ ಮುಗಿಸಿ ಕೋಣೆಗೆ ಹಿಂದಿರುಗಿದ ; ಬೀಗ ತೆಗೆಯಹೊರಟ, ಆದರೆ ಕೀಲಿಕೈಯೇ ಇಲ್ಲ !ಎಲ್ಲಿ ?....... ಕೀಲಿಕೈ ಎಲ್ಲಿ ? ಹಾ !ಸ್ನೇಹಿತನ ಮನೆಯಲ್ಲೇ ಬಿಟ್ಟು ಬಂದಿದ್ದಾನೆ! ಹಾಳಾದಮರವು! ಈಗ ಮತ್ತೆ ಅಷ್ಟು ದೂರ ಹೋಗಿ ಬರಬೇಕಾಯಿತು; ಸಮಯ ನಷ್ಟವಾಯಿತು.

ಎಷ್ಟೋ ಜನರಿಗೆ ಕುಳಿತರೆ-ನಿಂತರೆ ಮರವು, ಈಗತಾನೆ ಊಟ ಮಾಡಿದ್ದನ್ನು ಇನ್ನೊಂದು ಘಳಿಗೆಯಲ್ಲಿ ಮರೆಯುವವರುಉಂಟು.ಹಣದ ಅಗತ್ಯ ಬಿದ್ದಾಗ ಸ್ನೇಹಿತನ ನೆನಪಾಗಿ ಸಾಲ ತೆಗೆದುಕೊಂಡು ಹೋಗಿ, ಹಿಂದಿರುಗಿಸುವ ಸಮಯದಲ್ಲಿ ಮಾತ್ರಸುಲಭವಾಗಿ ಮರೆಯುವವರಿದ್ದಾರೆ. ಇದು ಮಾತ್ರ ಜಾಣತನದ ಮರವು! ಲಾಭದಾಯಕ ಮರುವು!

ಮರವಿಗೆ ಕಾರಣವೇನಿರಬಹುದು? ಕಾರಣಗಳು ಬಹಳ.ಅವುಗಳಲ್ಲಿ ಎಚ್ಚರಗೇಡಿತನವೇ ಮುಖ್ಯ ಕಾರಣ.

ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ.

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+9632172486

ಮಂಗಳವಾರ, ಜೂನ್ 22, 2010

ಸಮಯದ ಕುರಿತು ಇನ್ನೂ ಕೆಲವು ಅಂಶಗಳು

ಸಮಯವೂ ಹಣಕ್ಕಿಂತಲೂ ಶ್ರೇಷ್ಠ ಎನ್ನುವವರುಂಟು.ಆಲೋಚಿಸಿ ನೋಡಿದರೆ ಎರಡೂ ಶ್ರೇಷ್ಠ. ಸಮಯವನ್ನುಸದುಪಯೋಗಪಡಿಸಿಕೊಂಡರೆ ಹಣ ಗಳಿಸಬಹುದು. ಹಣವನ್ನು ಸದುಪಯೋಗಪಡಿಸಿಕೊಂಡರೆ ಸಮಯ ಮಿಗಿಸಬಹುದು.ಆದರೆಸದುಪಯೋಗಪಡಿಸಿಕೊಳ್ಳುವ ಬುದ್ಧಿಬೇಕು ಅಷ್ಟೆ

ಹಗಲುಗನಸು ಕಾಣುತ್ತ ಆಕಾಶಗೋಪುರ ಕಟ್ಟುವವರ ಸಮಯ ನಿರರ್ಥಕ . ಸದ್ಬಾವನೆಗಳನ್ನು ತಾಳುತ್ತ ಸುಸಂಬದ್ಧವಾಗಿಆಲೋಚಿಸುವವರ ಸಮಯ ಸಾರ್ಥಕ.

ಒಂದೇ ಸಮನೆ ಹರಟೆ ಹೊಡೆಯುವವರ ಸಮಯ ನಿರರ್ಥಕ.ಉಪಯುಕ್ತ ಮಾತುಕತೆಗಳಲ್ಲಿ ತೊಡಗುವವರ ಸಮಯಸಾರ್ಥಕ.

ಜೂಜು -ಜುಗಾರಿ ,ಇಸ್ಪೀಟು-ಲಾಟರಿ ಇವುಗಳಿಗೆ ಬಲಿಬಿದ್ದವರ ಸಮಯ ನಿರರ್ಥಕ. ಉಪಯುಕ್ತ ಕಾರ್ಯಗಳಲ್ಲಿ ನಿರತರಾದವರ ಸಮಯ ಸಾರ್ಥಕ.

ಬುದ್ಧಿ ಚುರುಕಿಲ್ಲದವರ , ವಿಲಾಸದಲ್ಲಿ ಮೈ ಮರೆಯುವವರ ,ಕಾಯಿಲೆಗಳಿಗೆ ಈಡಾದವರ ,ಕೋರ್ಟು ಕಛೇರಿ ತಿರುಗುವವರಸಮಯವೆಲ್ಲ ಇಳಿಜಾರಿನಲ್ಲಿ ಹರಿದುಹೋಗುವ ನೀರಿನಂತೆ ಕಳೆದು ಹೋಗುತ್ತದೆ.

ಹಣ ಕಳೆದುಹೋದರೆ ಬಾಯ್ಬಾಯಿ ಬಡಿದುಕೊಳ್ಳುವವರೇ ಎಲ್ಲ.ಸಮಯ ನಷ್ಟವಾಯಿತೆಂದು ದು:ಖಿಸುವವನುಸಾವಿರಕ್ಕೊಬ್ಬನು ಇಲ್ಲ!

ಸಮಯ ಬೇಕೆಂಬವರು ತಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಸ್ವಲ್ಪ ಬೇಗ ಮಾಡಿ ಮುಗಿಸಲೆತ್ನಿಸಿ ಸಮಯ-ಮಿಗಿಸಬೇಕು. ಎಂಟು ಗಂಟೆ ನಿದ್ರೆ ಮಾಡುವ ಬದಲು ಏಳೇ ಗಂಟೆ ನಿದ್ರೆ ಮಾಡುವುದರ ಮೂಲಕ , ಇಪ್ಪತ್ತು ನಿಮಿಷ ಕುಳಿತು ಊಟಮಾಡುವವರು ಹದಿನೈದೇ ನಿಮಿಷಕ್ಕೆ ಏಳುವುದರ ಮೂಲಕ , ಸ್ನಾನಕ್ಕೆ ಇಪ್ಪತ್ತು ನಿಮಿಷ ಹಿಡಿಯುತ್ತಿದ್ದರೆ ಹತ್ತೇ ನಿಮಿಷದಲ್ಲಿ ಮಾಡಿಮುಗುಸುವುದರ ಮೂಲಕ ಸಮಯ ಮಿಗಿಸಬಹುದು . ಆದರೆ ಮಿಗಿಸಿದ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆಎನ್ನುವುದು ಮಾತ್ರ ತಿಳಿದಿರಬೇಕು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ನ್ಯಾಚುರಲ್ ಫ್ಲಾಶ್.ಕಂ/
+೯೧-9632172486


ಸೋಮವಾರ, ಜೂನ್ 21, 2010

ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬವರಿಗೆ ಕೆಲವು ಸಲಹೆಗಳು;

ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬವರಿಗೆ ಕೆಲವು ಸಲಹೆಗಳು;

೧. ಸಮಯವು ಅತ್ಯಂತ ಮಹತ್ವ ಪೂರ್ಣವಾದದ್ದು ಎಂಬ ಅರಿವಿರಲಿ.

೨. ಕಳೆದುಹೋದ ಕಾಲ ಮರಳಿ ಬಾರದು ಎಂಬ ಕಟುಸತ್ಯ ತಿಳಿದಿರಲಿ.

೩. 'ಯಾವಯಾವ ಸಮಯದಲ್ಲಿ ಏನೇನನ್ನು ಮಾಡಬೇಕೆಂದು ಕೊಂಡಿರುವೆನೋ ಅದನ್ನು ಮಾಡಿಯೇ ತೀರುತ್ತೇನೆ 'ಎಂಬ ದೃಢತೆಯಿರಲಿ.

೪. ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಕಾರ್ಯವನ್ನು ಮಾಡುವ ಅಭ್ಯಾಸವಿದ್ದರೆ 'ಈಗೇನು ಮಾಡಲಿ, ಇನ್ನೇನು ಮಾಡಲಿ'ಎಂದು ತಲೆಕೆರೆದುಕೊಳ್ಳುವುದು ತಪ್ಪುತ್ತದೆ. ಸಮಯ ಉಳಿಯುತ್ತದೆ.

೫. ಕೈಗೊಳ್ಳುವ ಪುಟ್ಟ ಕಾರ್ಯದ ವಿಷಯದಲ್ಲೂ ಸ್ಪಷ್ಟ ಕಲ್ಪನೆಯಿರಲಿ .

೬. ಯಾವುದೇ ಕಾರ್ಯವನ್ನು ಉತ್ಸಾಹದಿಂದಲೂ ಎಚ್ಚರಿಕೆಯಿಂದಲೂ ಮಾಡದಿದ್ದರೆ ಸಮಯ ನಷ್ಟವಾಗುತ್ತದೆ.ಎಂಬ ಸೂಕ್ಷ್ಮ ತಿಳಿದಿರಲಿ.

೭. ಮಾಡಿದ ಕೆಲಸವೊಂದು ಕೆಟ್ಟುಹೋದಾಗ ತಲೆಗೆ ಕೈಕೊಟ್ಟು ಚಿಂತಿಸುತ್ತಾ ಕುಳಿತುಕೊಳ್ಳುವುದರ ಬದಲು ಅದನ್ನು ಸರಿಪಡಿಸುವುದರ ಬಗ್ಗೆ ಆಲೋಚಿಸುವುದು ಅಥವಾ ಮುಂದಿನ ಕಾರ್ಯಕ್ಕೆ ಗಮನಹರಿಸುವುದು ಲಾಭದಾಯಕ.

೮. ಸಮಯೋಚಿತವಾಗಿ ಯೋಚಿಸಬಲ್ಲವನು ಎಲ್ಲ ವಿಷಯಗಳಲ್ಲೂ ಜಯಶಾಲಿಯಾಗುತ್ತಾನೆ.


ಶುಭ ದಿನದ ಶುಭಾಶಯಗಳೊಂದಿಗೆ

ನೆಟ್ ನಾಗ
ಎಬ್ಬೋಡಿ ತಿಮ್ಮಪ್ಪ ನಾಗರಾಜ
ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486 -

ಶನಿವಾರ, ಜೂನ್ 19, 2010

ಸಮಯದ ಮಹತ್ವ ಅದೆಷ್ಟು ಎಂದರೆ ಅದನ್ನು ಸದುಪಯೋಗ ಪಡಿಸಿ ಕೊಂಡರೆ ಸಾಮ್ರಾಟನೆ ಆಗಿಬಿಡಬಹುದು

ಇಂದು ಜಗತ್ತಿನಲ್ಲಿ ಹಣ ಮತ್ತು ಅದರಿಂದ ಪಡೆಯಬಹುದಾದ ವಸ್ತು -ಇವುಗಳಿಗೆ ಬೆಲೆ. ಇವುಗಳನ್ನು ನಿರ್ಮಾಣಮಾಡಿದವನುಮನುಷ್ಯ.ಆದರೆ ಮನುಷ್ಯನೇ ಇಂದು ತನ್ನ ಮೌಲ್ಯವನ್ನು ಮರೆತು ಕುಳಿತಿದ್ದಾನೆ . ಇನ್ನೂ ಸೋಜಿಗದ ಸಂಗತಿಯೆಂದರೆ,ಮನುಷ್ಯ, ಹಣ -ಇವೆಲ್ಲ ಒಂದು ಅವಧಿಯಲ್ಲಿ ಕಾಣಿಸಿಕೊಂಡು ಕಣ್ಮರೆಯಾಗುವಂಥವು . ಅವಧಿಗೆ ಸಮಯವೆಂದು ಹೆಸರು. ಸಮಯ ಅಥವಾ ಕಾಲವೆಂಬುದು ಎಂಥ ಮಹತ್ವಪೂರ್ಣವಾದದ್ದು! ಅದನ್ನು ಅರಿಯಲು ಸಾಕಷ್ಟು ಆಲೋಚಿಸಿ ನೋಡಬೇಕು. ಆಗತಿಳಿಯುತ್ತದೆ.ಸಮಯವೇ ಸಂಪತ್ತು ಎಂದು

ಪ್ರತಿಯೊಬ್ಬನೂ ರಾತ್ರಿ ಮಲಗಿ ಬೆಳಗ್ಗೆ ಏಳುವ ವೇಳೆಗೆ ಇಪ್ಪತ್ತನಾಲ್ಕು ಗಂಟೆಗಳೆಂಬ ಸಂಪತ್ತನ್ನು ,ದುಡಿಯದೆಯೇಪಡೆದಿರುತ್ತಾನೆ.ಇದನ್ನು ಸದುಪಯೋಗಪಡಿಸಿಕೊಂಡು ಮನುಷ್ಯ ಏನನ್ನು ಬೇಕಾದರೂ ಪಡೆಯಬಹುದು .ಸಮಯದ ಮಹತ್ವ ಅದೆಸ್ಟು ಎಂದರೆ ಅದನ್ನು ಸದುಪಯೋಗಪಡಿಸಿ ಕೊಂಡರೆ ಸಾಮ್ರಾಟ
ನೆ ಆಗಿಬಿಡಬಹುದು.

ಸಮಯವನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂಬವರಿಗೆ ಕೆಲವು ಸಲಹೆಗಳು ನಾಳೆಯಿಂದ ನೋಡೋಣ

ಶುಭ ದಿನದ ಶುಭಾಶಯಗಳೊಂದಿಗೆ

ನೆಟ್ ನಾಗ
ಎಬ್ಬೋಡಿ ತಿಮ್ಮಪ್ಪ ನಾಗರಾಜ
ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486 -

ಶುಕ್ರವಾರ, ಜೂನ್ 18, 2010

ಗುರಿಯಿಟ್ಟು ಗುಂಡು ಹೊಡೆಯಬೇಕಾದರು ಸೈನಿಕ ಅಭ್ಯಾಸಮಾಡಿರಬೇಕಾಗುತ್ತದೆ.ರುಚಿಯಾದ ಅಡುಗೆ ಮಾಡಬೇಕಾದರೂ ಗೃಹಿಣಿ ಅಭ್ಯಾಸ ಮಾಡಿರಬೇಕಾಗುತ್ತದೆ.

ಯಾವ ಗುರುಹಿರಿಯರು ಸುಮ್ಮನಿದ್ದರೂ ದುಷ್ಟಪರಿಣಾಮಗಳು ಸುಮ್ಮನಿರುವುದಿಲ್ಲ. ಶರೀರ ಮನಸ್ಸು ಇಂದ್ರಿಯಗಳ ಸ್ವಭಾವ-ಮರ್ಮಗಳನ್ನರಿಯದೆ ಅವುಗಳನ್ನು ಯದ್ವಾತದ್ವಾ ಬಳಸಿದಾಗ ಭೀಕರ ದುಷ್ಟಪರಿಣಾಮಗಳು ಎರಗಿ ಶಾಂತಿ-ಸೌಖ್ಯಸಮಾಧಾನಗಳೆಲ್ಲ ಕೊಚ್ಚಿ ಹೋಗಿ ಹಾಹಾಕಾರಗೈಯುವ ಪರಿಸ್ಥಿತಿ ಬರುತ್ತದೆ.ಆಗ ಕಾಲ ಮಿಂಚಿ ಹೋಗಿರುತ್ತದೆ !

ಒಟ್ಟಿನಲ್ಲಿ ಹತೋಟಿಯಲ್ಲಿಡದ ಇಂದ್ರಿಯಗಳು ಮನಸ್ಸಿನ ಏಕಾಗ್ರತೆಯನ್ನು ಧ್ವಂಸಮಾಡಿಬಿಡಬಲ್ಲವು ಎಂಬ ಕಟು ಸತ್ಯ ಎಷ್ಟುಬೇಗ ತಿಳಿದರೆ ಅಷ್ಟು ಕ್ಷೇಮ.

ಅಧ್ಯಯನದಲ್ಲಿ ಏಕಾಗ್ರತೆಯನ್ನು ತಂದುಕೊಳ್ಳಲು ಇನ್ನೊಂದು ಬಹುಮುಖ್ಯ ಉಪಾಯವೆನೆಂದರೆ ಪಟ್ಯ ವಿಷಯವನ್ನು ಚೆನ್ನಾಗಿಸ್ವಷ್ಟವಾಗಿ ಅರ್ಥಮಾಡಿಕೊಂಡು ಮುಂದೆ ಸಾಗುವುದು . ಒಂದು ವಾಕ್ಯವನ್ನು ಓದುವಾಗ ಅದರಲ್ಲಿ ಒಂದೆರಡು ಕಷ್ಟದ ಶಬ್ದಗಳುಕಂಡುಬಂದರೆ ಕೂಡಲೇ ಶಬ್ದ ಕೋಶದ ಸಹಾಯದಿಂದ ಅದರ ಅರ್ಥವನ್ನು ಹುಡುಕಿ, ವಾಕ್ಯವನ್ನು ಓದಿ ಮುಗಿಸಿ ಇಡೀ ವಾಕ್ಯಏನು ಹೇಳುತ್ತಿದೆ ಎಂಬುದನ್ನು ಆಗಲೇ ಆಲೋಚಿಸಿ ತಿಳಿದುಕೊಳ್ಳಬೇಕು . ಹೀಗೆ ಒಂದು ಪ್ಯಾರಾ ಓದಿ ಮುಗಿಸಿದಾಗ ಇಡೀಪ್ಯಾರಾ ಯಾವ ಅಂಶವನ್ನು ತಿಳಿಸಿತು ಎಂಬುದನ್ನು ಆಗಾಗಲೇ ಮನಸ್ಸಿಗೆ ತಂದುಕೊಳ್ಳಬೇಕು. ವಿಧಾನದಿಂದ ಓದುತ್ತಿದ್ದರೆವಿಷಯಗಳು ಅರ್ಥವಾಗುತ್ತವೆ.ಅರ್ಥವಾಗುವುದರಿಂದ ಆನಂದ ಉಂಟಾಗುತ್ತದೆ . ಆನಂದ ಉಂಟಾಗುವುದರಿಂದ ಅಧ್ಯಯನದಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ.ಪ್ರೀತಿ ಹುಟ್ಟಿದಾಗ ತಾನೇತಾನಾಗಿ ಏಕಾಗ್ರತೆ ಬರುತ್ತದೆ.

ಎಲ್ಲಿ ನಮ್ಮ ಪ್ರೀತಿ ಇರುತ್ತದೆಯೋ ಅಲ್ಲಿಯೇ ನಮ್ಮ ಮನಸ್ಸಿರುತ್ತದೆ . ಎಲ್ಲಿ ನಮ್ಮ ಮನಸ್ಸು ಇರುತ್ತದೆಯೋ ಅಲ್ಲಿಯೇ ಏಕಾಗ್ರತೆಮೂಡಿಬರುತ್ತದೆ.-ಇದೊಂದು ಅನಿವಾರ್ಯ ನಿಯಮ. 'ನನಗೆ ನನ್ನ ಪಾಠಗಳ ವಿಷಯದಲ್ಲೇ ಪ್ರೀತಿಯಿಲ್ಲವಲ್ಲ ?ಏನು ಮಾಡಲಿಎನ್ನುವ ವಿದ್ಯಾರ್ಥಿಗಳು ಇದ್ದಾರೆ . ಅಂಥವರು ಒಂದೋ ತಮಗೆ ಇಷ್ಟವಾಗುವ ಬೇರೆ ವಿಷಯವನ್ನು ಆರಿಸಿಕೊಳ್ಳಬೇಕು; ಅಥವಾಈಗಿರುವ ಪಟ್ಯವಿಷಯದಲ್ಲೇ ಪ್ರೀತಿಯನ್ನು ತಂದುಕೊಳ್ಳಬೇಕು.

ಮನಸ್ಸಿನ ಏಕಾಗ್ರತೆಗೆ ಅಭ್ಯಾಸಬಲವೇ ಕಾರಣ ಎಂಬುದು ಇನ್ನೊಂದು ಬಹುಮುಖ್ಯ ಅಂಶ, ಅಭ್ಯಾಸ ಎಂದರೇನು ? ಪುನಹಪುನಹ ಮಾಡುವ ಪ್ರಯತ್ನ.ಬರೆದೂ ಬರೆದೂ ಅಭ್ಯಾಸ ಮಾಡಿದರೆ ಬರವಣಿಗೆ ಅಂದವಾಗುತ್ತದೆ. ಓದೀ ಓದೀ ಅಭ್ಯಾಸ ಮಾಡಿದರೆಅಧ್ಯಯನ ಮಾಡಿದರೆ ಅಧ್ಯಯನ ಯಸಸ್ವಿಯಾಗುತ್ತದೆ. ಗುರಿಯಿಟ್ಟು ಗುಂಡು ಹೊಡೆಯಬೇಕಾದರು ಸೈನಿಕ ಅಭ್ಯಾಸಮಾಡಿರಬೇಕಾಗುತ್ತದೆ.ರುಚಿಯಾದ ಅಡುಗೆ ಮಾಡಬೇಕಾದರೂ ಗೃಹಿಣಿ ಅಭ್ಯಾಸ ಮಾಡಿರಬೇಕಾಗುತ್ತದೆ. ಅಭ್ಯಾಸದಿಂದ ಸಿದ್ಧಿಎಂಬ ಮಾತು ಎಲ್ಲ ಕಾಲಕ್ಕೂ ಸತ್ಯ. ಆದರೆ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಉತ್ಸಾಹದಿಂದ ಅಭ್ಯಾಸ ಮಾಡಬೇಕು . ಬುದ್ಧಿಉಪಯೋಗಿಸಿ ಅಭ್ಯಾಸ ಮಾಡಬೇಕು . ಬಗೆಯಿಂದ ಅಭ್ಯಾಸ ಮಾಡುತ್ತಾ ಹೋದರೆ ಏಕಾಗ್ರತೆ ಏಕೆ ಬರುವುದಿಲ್ಲ ?

-ಪ್ರೀತಿ ಹಾಗೂ ವಿಶ್ವಾಸಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.


.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
-9632172486


















- ?'

ಗುರುವಾರ, ಜೂನ್ 17, 2010

"ಜೀವನದಲ್ಲಿ ಸುಖ ಪಡಬೇಕಾದದ್ದುಯುವಕನಾಗಿರುವಾಗಲಲ್ಲದೆ ಮುದುಕನಾದ ಮೇಲೆಯೇ?"

ಶಿಸ್ತುಬದ್ಧವಾದ ಜೇವನ ನಡೆಸಬೇಕಾದದ್ದು ಬಹಳ ಮುಖ್ಯ. ಶಿಸ್ತಿನ ಜೀವನವೆಂದರೇನು ? ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗಿನ ಸಮಯದಲ್ಲಿ, ಮಾಡಬೇಕೆಂದುಕೊಂಡಿರುವ ಸಕಲ ಕಾರ್ಯಕಲಾಪಗಳನ್ನು ನಿಯತ್ತಾಗಿ ಮಾಡುತ್ತಾ ಬರುವುದು. ಜೊತೆಗೆ ಕೆಟ್ಟ ಆಲೋಚನೆಗಳು ಹುಟ್ಟದಂತೆ, ಹರಟೆಯ ಮಾತುಗಳು ಹೊರಡದಂತೆ,ವ್ಯರ್ಥಕಾರ್ಯಗಳು ನಡೆಯದಂತೆಎಚ್ಚರದಿಂದಿರಬೇಕು.ಆದರೆ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ನಡುನಡುವೆ ತಪ್ಪು ಸಂಭವಿಸಬಹುದು.ಆಗ ಪುನಹ ಮತ್ತೊಮ್ಮೆ ಪಾಠಹೇಳಬೇಕು. ಹೀಗೆ ಸ್ವಲ್ಪ ಕಾಲ ಹೋರಾಡಿ ಹೋರಾಡಿ ನಮ್ಮ ನಡವಳಿಕೆಯನ್ನು ಒಂದು ಹದಕ್ಕೆ ತಂದುಕೊಳ್ಳಬೇಕಾಗುತ್ತದೆ. ರೀತಿಯಾಗಿ ನಮ್ಮ ದೈನಂದಿನ ನಡವಳಿಕೆಗಳು ಒಂದು ನಿಶ್ಹಿತ ಗತಿಯಲ್ಲಿ ಸಾಗತೊದಗಿದಾಗ ಮನಸ್ಸು ಬಹಳಮಟ್ಟಿಗೆಸಮಸ್ಥಿತಿಯನ್ನು ಮುಟ್ಟುತ್ತದೆ. ಇಂತಹ ಮನಸ್ಸು ಅತ್ಯಂತ ವಿಧೇಯ ಸೇವಕನಂತೆ ಸದಾ ಸಹಾಯಕಾರಿ ಯಾಗುತ್ತದೆ.

ನಾವು ಆಗಲೇ ನೋಡಿದಂತೆ ನಮ್ಮ ಐದು ಇಂದ್ರಿಯಗಳು ಮನಸ್ಸನ್ನು ಎಳೆದಾಡುವಂಥವುಗಳಾದ್ದರಿಂದ ಅವುಗಳ ಮೇಲೂಕಾವಲಿನ ಕಣ್ಣಿಟ್ಟಿರಬೇಕಾಗುತ್ತದೆ. ಅವುಗಳು ಹೊತ್ತುಗೊತ್ತುಗಳಿಲ್ಲದೆ ಏನೇನನ್ನೋ ಕೇಳುತ್ತಿರುತ್ತವೆ. ಅವು ಎಷ್ಟಾದರೂ ನಮ್ಮಇಂದ್ರಿಯಗಳಲ್ಲವೆ ಎಂಬ ಮೋಹದಿಂದ ಅವು ಕೇಳಿದ್ದನ್ನು ಕೊಡುತ್ತ ಬಂದರೆ ಅವುಗಳ ಜೊತೆಯಲ್ಲೇ ಇರುವ ಮನಸ್ಸು ಮತ್ತೆಮಂಗನಂತಾಗುವುದು ಖಂಡಿತ.ಆದ್ದರಿಂದ ಮನಸ್ಸಿನ ಏಕಾಗ್ರತೆಯನ್ನು ಬಯಸುವವರು ಇಂದ್ರಿಯಗಳು ಕೇಳಿದ್ದನ್ನೆಲ್ಲ ಕೊಟ್ಟು ಅತಿಮುದ್ದು ಮಾಡುವ ಅವಿವೇಕಕ್ಕೆ ಹೋಗಬಾರದು.

ಇಂದಿನ ವಿದ್ಯಾರ್ಥಿಗಳು ಪಾಶ್ಚಾತ್ಯ ನಾಗರಿಕತೆಗೆ ಮರುಳಾಗಿಯೋ ಅಥವಾ ಕಲಿಗಾಲದ ಪ್ರಭಾವದಿಂದಲೋ ತಮ್ಮಇಂದ್ರಿಯಗಳನ್ನು ಸ್ವೇಚ್ಚೆಯಾಗಿ ಹರಿಯಗೊಟ್ಟಂತೆ ಕಂಡುಬರುತ್ತದೆ. "ಜೀವನದಲ್ಲಿ ಸುಖ ಪಡಬೇಕಾದದ್ದು ಯುವಕನಾಗಿರುವಾಗಲಲ್ಲದೆ ಮುದುಕನಾದ ಮೇಲೆಯೇ?"ಎಂಬ ತರ್ಕಬದ್ದ ವಾದಸರಣಿಯನ್ನು ಮುಂದಿಟ್ಟು ಮಂದಹಾಸ ಬೀರುತ್ತನಿಂತಿರುವ ಯುವಕರಿಗೆ ಯಾವ ಗುರುಹಿರಿಯರು ವಿವೇಕ ಹೇಳಲು ಮುಂದಾಗುತ್ತಿಲ್ಲ.ಅಸಂಖ್ಯಾತ ಯುವಕರು ಒಕ್ಕೊರಳಿನಿಂದ ಹೇಳುವ ಮಾತಿನಲ್ಲಿ ಸತ್ಯಾಂಶ ವಿರಬಹುದೆಂಬ ಭ್ರಾಂತಿ ಮೂಡಿದಂತಿದೆ ಗುರುಹಿರಿಯರಲ್ಲಿ !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486
















ಬುಧವಾರ, ಜೂನ್ 16, 2010

"ಓ ಮನಸ್ಸೇ ! ! ನೀನು ನನ್ನಸೇವಕ.ನಾನು ಹೇಳಿದಂತೆ ನೀನು ಕೇಳಲೇ ಬೇಕು"

ಏಕಾಗ್ರತೆಯನ್ನು ತಂದುಕೊಳ್ಳುವುದು ಹೇಗೆ?

ಪ್ರಶ್ನೆಯನ್ನು ವಿದ್ಯಾರ್ಥಿಗಳು ಕೇಳುತ್ತಿರುತ್ತಾರೆ. ಆಧ್ಯಾತ್ಮಿಕ ಸಾಧಕರು ಕೇಳುತ್ತಿರುತ್ತಾರೆ. ಏಕ ಎಂದರೆ ಒಂದು; ಅಗ್ರ ಎಂದರೆತುದಿ ಅಥವಾ ಮೊನೆ. ಆದ್ದರಿಂದ ಏಕಾಗ್ರತೆಯಿಂದರೆ ಒಮ್ಮುಖವಾಗಿರುವುದು ಅಥವಾ ಕೆಂದ್ರಿಕೃತವಾಗಿರುವುದು.ಮನಸ್ಸಿನಏಕಾಗ್ರತೆಯೆಂದರೆ ಮನಸ್ಸನ್ನು ಕೇಂದ್ರಿಕೃತಗೊಳಿಸುವುದು ಅಥವಾ ಒಮ್ಮುಖವಾಗಿಸುವುದು.ಹಾಗಾದರೆ ನಮ್ಮ ಮನಸ್ಸು ಈಗಕೆಂದ್ರಿಕೃತವಾಗಿಲ್ಲವೇ? ಎಂದು ಕೇಳಿದರೆ "ಇಲ್ಲ" ಎಂದೇ ಹೇಳಬೇಕಾಗುತ್ತದೆ. ಏಕೆಂದರೆ,ಸ್ವಭಾವತ; ಮನಸ್ಸುಚಂಚಲ.ಜೊತೆಗೆ ನಮ್ಮ ಕಣ್ಣು, ಕಿವಿ,ಮೂಗೂ ,ನಾಲಗೆ,ಚರ್ಮಗಳೆಂಬ ಪಂಚೇಂದ್ರಿಯಗಳು ಮನಸ್ಸನ್ನು ತಮ್ಮೆಡೆಗೆ ಸದಾಸೆಳೆಯುತ್ತಲೇ ಇರುತ್ತವೆ.ನಮ್ಮ ಐದು ಇಂದ್ರಿಯಗಳು ಬಹಳ ಪ್ರಬಲವಾದವುಗಳಾದ್ದರಿಂದ ನಮ್ಮ ಮನಸ್ಸು ಐದು ಕಡೆಗೂಹರಿದಾಡುತ್ತಲೇ ಇರುತ್ತದೆ. ಅಲ್ಲದೆ , ಮನಸ್ಸಿಗೆ ತನ್ನದೇ ಆದ ಬಗೆಬಗೆಯ ಆಸೆಗಳಿರುತ್ತವೆ. ಆಸೆಗಳಿಗೆ ಸೆಳೆಯುವ ಶಕ್ತಿಯಿದೆಹೀಗೆ ಆಸೆಗಳ ಸೆಳೆತಗಳಿಗೆ ಇಂದ್ರಿಯಗಳ ಸಹಕಾರವು ಸಿಕ್ಕಿ ಬಡಪಾಯಿ ಮನಸ್ಸು ಕೋತಿಯಂತೆ ಕುಣಿದಾಡುತ್ತಿರುತ್ತದೆ. ಹೀಗೆಕುಣಿದಾಡುವ ಮನಸ್ಸಿನಲ್ಲಿ ಏಕಾಗ್ರತೆಯನ್ನು ನಿರೀಕ್ಷಿಲು ಉಂಟೆ ?
ಹಾಗಾದರೆ ಮನಸ್ಸನ್ನು ಸಮಸ್ಥಿತಿಯಲ್ಲಿಡುವುದು ಹೇಗೆ?. ಹತ್ತಾರು ದಿಕ್ಕುಗಳಲ್ಲಿ ಹರಿದಾಡುವ ಮನಸ್ಸನ್ನು ಒಂದೇದಿಕ್ಕಿನತ್ತ ಹರಿಯಿಸುವುದು ಹೇಗೆ ?.ಮನಸ್ಸನ್ನು ಸುಶಿಕ್ಷಿತ ಗೊಳಿಸಿ ಶಿಸ್ತುಬದ್ದವಾಗಿಸುವುದೇ ಅದಕ್ಕೆ ತಕ್ಕ ಉಪಾಯ.ಮನಸ್ಸಿಗೆಶಿಕ್ಷಣ ಕೊಡುವುದು ಹೇಗೆ?-ಇದು ಎರಡನೆಯ ಪ್ರಶ್ನೆ.ಒಂದು ಸಲಕ್ಕೆ ಒಂದೇ ವಿಷಯದಲ್ಲಿ ತೊಡಗಿರುವಂತೆ ಮನಸ್ಸಿಗೆ ತಿಳಿಯಹೇಳಬೇಕು. " ಮನಸ್ಸೇ ಈಗ ನಾನು ಪಾಠವನ್ನು ಓದಿ ತಿಳಿದುಕೊಳ್ಳಬೇಕಾಗಿದೆ.ಆದ್ದರಿಂದ ನೀನು ಇತರ ವಿಷಯಗಳನ್ನುಯೋಚಿಸದೆ ಪಾಠದಲ್ಲೇ ನೆಲೆಗೊಂಡು ಅದನ್ನು ಹ್ರುದ್ಗತಮಾಡಿಕೊಳ್ಳಲು ನನಗೆ ನೆರವಾಗು"ಎಂದು. ಹೀಗೆ ಮೃದುವಾಗಿ ಹೇಳಿದಮಾತನ್ನು ಮನಸ್ಸು ಕೇಳದೆ ಹೋದರೆ ಸ್ವಲ್ಪ ಕಟುವಾಗಿಯೇ ಹೇಳಿಬಿಡಬೇಕಾಗುತ್ತದೆ.; " ಮನಸ್ಸೇ ! ! ನೀನು ನನ್ನಸೇವಕ.ನಾನು ಹೇಳಿದಂತೆ ನೀನು ಕೇಳಲೇ ಬೇಕು" ಎಂದು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486















.

ಮಂಗಳವಾರ, ಜೂನ್ 15, 2010

ಪರೀಕ್ಷಯಲ್ಲಿ ಪಾಸಾಗದಿದ್ದರೂ ಲಂಚ ಕೊಟ್ಟು ಯೋಗ್ಯತಾಪತ್ರವನ್ನು (ಸರ್ಟಿಫಿಕೇಟ್) ಪಡೆಯಬಹುದೇನೋ . ಆದರೆಯೋಗ್ಯತೆಯನ್ನು ಪಡೆಯಲಾಗದು.

ಪರೀಕ್ಷಯಲ್ಲಿ ಪಾಸಾಗದಿದ್ದರೂ ಲಂಚ ಕೊಟ್ಟು ಯೋಗ್ಯತಾಪತ್ರವನ್ನು (ಸರ್ಟಿಫಿಕೇಟ್) ಪಡೆಯಬಹುದೇನೋ . ಆದರೆಯೋಗ್ಯತೆಯನ್ನು ಪಡೆಯಲಾಗದು.

ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಅಧ್ಯಯನವನ್ನೇನೋ ಚೆನ್ನಾಗಿಯೇ ಮಾಡಿರುತಾರೆ. ಆದರೆ ಎಷ್ಟೋ ಪ್ರಶ್ನೆಗಳಿಗೆ ಅವರುಉತ್ತರಿಸಿರುವುದು ಮಾತ್ರ ತಪ್ಪಾಗಿರುತ್ತದೆ.. ಕಾರಣವೇನು?

ಭಯ,ದಿಗಿಲು! ದಿಗಿಲಿನಿಂದ ಗಲಿಬಿಲಿ .! ಗಲಿಬಿಲಿಯಿಂದ ತಪ್ಪು ಉತ್ತರ!.

ಇನ್ನು ಕೆಲವು ವಿದ್ಯಾರ್ಥಿಗಳು ಅಷ್ಟಾಗೆನೋ ಅಧ್ಯಯನ ಮಾಡಿರುವುದಿಲ್ಲ.ಆದರೆ ಹೆಚ್ಚಿನ ಪ್ರಶ್ನೆಗಳಿಗೆ ಅವರು ಸರಿಯಾದಉತ್ತರವನ್ನೇ ಬರೆದುಬಂದಿರುತ್ತಾರೆ.ಇದಕ್ಕೆ ಕಾರಣವೇನು?

ಇವರಿಗೆ ಭಯವೆಂಬುದಿಲ್ಲ,ಪರಿಣಾಮವಾಗಿ ಮನದಲ್ಲಿ ಗಲಿಬಿಲಿಯಿಲ್ಲ. ಆದ್ದರಿಂದ ,ಅವರು ಏನು ಸ್ವಲ್ಪ ಓದಿಕೊಂಡಿದ್ದರೋ ಅವೆಲ್ಲಉತ್ತರ ಬರೆಯುವ ಹೊತ್ತಿಗೆ ನೆನಪಿಗೆ ಬಂದವು !

ಆದ್ದರಿಂದ ಹೆದರಿಕೊಂದರೆ ಚೆನ್ನಾಗಿ ಓದಿದ್ದು ಮರೆತುಹೋಗಿಬಿಡುತ್ತದೆ. ಧೈರ್ಯದಿಂದಿದ್ದರೆ , ಓದಿದ್ದೆಲ್ಲವೂ ಸಕಾಲದಲ್ಲಿ ನೆನಪಿಗೆಬರುತ್ತದೆ.

ಶುಭಾದಿನದೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ


.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-೯೬೩೨೧ 72486

ಸೋಮವಾರ, ಜೂನ್ 14, 2010

ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ ಅಂದರೆ ಅದಕ್ಕೆ ಹೊರಗಿನ ಗದ್ದಲಕ್ಕಿಂತ ನಿಮ್ಮೊಳಗಿನ ಸಣ್ಣಪುಟ್ಟ ತಲ್ಲಣ.ಆತಂಕ ಕಾರಣ,

ಸಾಮಾನ್ಯ ಮಟ್ಟದ ವಿದ್ಯಾರ್ಥಿಗಳು ಯಾವಾಗಲೂ ಅಧ್ಯಯನದಲ್ಲೇ ತೊಡಗಿರುವಂತಾದರೆ ಕಲೆ-ಕೈಗಾರಿಕೆಗಳನ್ನುಕಲಿತುಕೊಳ್ಳಲು ಅವರಿಗೆ ಅವಕಾಶ ಇಲ್ಲವೆಂದಂತಾಯಿತು?

ಉತ್ತರ; ಏಕಿಲ್ಲ ! ದಸರಾ (ನವರಾತ್ರಿ)ರಜಾ ದಿನಗಳಲ್ಲಿ , ಬೇಸಿಗೆಕಾಲದ ರಜಾದಿನಗಳಲ್ಲಿ ಅವರು ತಮ್ಮ ಅಭಿರುಚಿಯವಿಷಯವೊಂದನ್ನು ಅಭ್ಯಸಿಸಬಹುದಲ್ಲ.

ಎರಡು ಹೊತ್ತೂ ಸ್ನಾನವೆಂದಿರಿ . ವಿದ್ಯಾರ್ಥಿನಿಯರಿಗೆ ದಿನಾಲೂ ತಲೆಸ್ನಾನ ಅಸಾಧ್ಯ.ಕೂದಲನ್ನು ಒಣಗಿಸಿಕೊಳ್ಳುವುದೊಂದುದೊಡ್ಡ ಕೆಲಸವೇ ಆಗಿಬಿಡುತ್ತದೆ.

ಪತ್ರವನ್ನು ವಿದ್ಯಾರ್ಥಿಯನ್ನುದ್ದೇಶಿಸಿ ಬರೆದುದರಿಂದ ವಿದ್ಯಾರ್ಥಿನಿಯರ ತಲೆಸ್ನಾನದ ಸಮಸ್ಯೆ ಎದ್ದಿರಲಿಲ್ಲ. ವಿದ್ಯಾರ್ಥಿನಿಯರು ವಾರಕ್ಕೊಮ್ಮೆ ತಲೆಸ್ನಾನ ಮಾಡಿದರೆ ಸಾಕು. ಚೆನ್ನಾಗಿ ಎಣ್ಣೆ ಹಚ್ಚಿಕುದಲನ್ನು ಪ್ರತಿದಿನ ಬಾಚಿಕೊಳ್ಳುವುದು ಇದ್ದೇಇದೆಯಲ್ಲ!


ಪತ್ರವನ್ನೋದಿದಾಗ ಇನ್ನು ಕೆಲವು ಸಣ್ಣಪುಟ್ಟ ಪ್ರಶ್ನೆಗಳು ಏಳಬಹುದೇನೋ . ಉದಾಹರಣೆಗೆ ; ಜ್ವರವೇ ಮೊದಲಾದಕಾಯಿಲೆಗಳು ಬಂದಾಗ ಅಥವಾ ಬೇರೆಊರುಗಳಿಗೆ ಹೋದಾಗ ವೇಳಾಪಟ್ಟಿಯಂತೆ ನಡೆದುಕೊಳ್ಳಲಾಗುವುದಿಲ್ಲ. ಆಗ ಪಾಠಪಟ್ಟಿಯಎಷ್ಟೋ ಅಂಶಗಳು ಅಧ್ಯಯನವಾಗದೆ ಬಾಕಿ ಉಳಿದುಬಿಡುತ್ತವೆ. ಆಗೇನು ಮಾಡುವುದು?ಎಂಧು . ಇಂತಿಂಥ ಪ್ರಶ್ನೆಗಳಿಗೆಲ್ಲಅವರವರೇ ಉತ್ತರ ಕಂಡುಕೊಳ್ಳಬೇಕು . ಮನಸ್ಸಿದ್ದರೆ ಮಾರ್ಗವಿದೆ . ಅಧ್ಯಯನ ಮಾಡುವ ಪ್ರಬಲ ಹಂಬಲವೊಂದಿದ್ದು ಬಿಟ್ಟರೆ ಏಳುವುದಿಲ್ಲ . ಎದ್ದರೂ ಅದಕ್ಕೆ ತಕ್ಕ ಪರಿಹಾರವೊಂದು ಹೊಳದೆ ಹೊಳೆಯುತ್ತದೆ.

ವಿದ್ಯಾರ್ಥಿಗಳ ಪರಿಸ್ಥಿತಿಗಳು ಹಲವು ತೆರನಾಗಿರುತ್ತವೆ;
ಓದಲು ಮನಸ್ಸುಳ್ಳವರಿಗೆ ಅನುಕೂಲಗಳಿಲ್ಲ ; ಅನುಕೂಲ ಇರುವವರಿಗೆ ಓದಲು ಮನಸ್ಸಿಲ್ಲ.

ಕೆಲವರಿಗೆ,ಓದಲು ಮನಸ್ಸೂ ಇದೆ. ಅನುಕೂಲವು ಇದೆ

ಇನ್ನು ಕೆಲವರಿಗೆ ಓದಲು ಅನುಕೂಲ ,ಮನಸ್ಸೂ ಎರಡೂ ಇದ್ದರೂ ಬುದ್ಧಿ ಶಕ್ತಿಯೇ ಇರುವುದಿಲ್ಲ .

ಇನ್ನು ಕೆಲವರಿಗೆ ಓದಲು ಅನುಕೂಲವೂ ಇಲ್ಲ. ಮನಸ್ಸೂ ಇಲ್ಲ.

ಹಾಗಾದರೆ ಇಂಥವರಿಗೆಲ್ಲ ಏನು ಉಪಾಯ? ಎಂದು ಕೇಳಿದರೆ,ಇವರೆಲ್ಲರೂ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯಯನ್ನುಸಂಪಾದಿಸುತ್ತಾರೆ.


ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ ಅಂದರೆ ಅದಕ್ಕೆ ಹೊರಗಿನ ಗದ್ದಲಕ್ಕಿಂತ ನಿಮ್ಮೊಳಗಿನ ಸಣ್ಣಪುಟ್ಟ ತಲ್ಲಣ.ಆತಂಕ ಕಾರಣ, ನಮ್ಮೊಳಗೇ ಒಂದು ಶಾಂತಿ ,ಸಮಾಧಾನ ಸೃಷ್ಟಿಸಿಕೊಳ್ಳುವುದು ಬಹಳ ಮುಖ್ಯ.

ಇನ್ನೊಬ್ಬರ ಕೆಲಸ ಮಾಡಿಕೊಡುವ ನೆರವು ನೀಡುವ ವಿಚಾರದಲ್ಲಿ ಬರೀ ಕಾರಣ-ನೆಪಹೇಳುವುದು ಒಳ್ಳೆಯದಲ್ಲ.ಇದರಿಂದಅವರಿಗೆ ತೊಂದರೆ ಆಗುವುದು ಜತೆಗೆ ನಿಮ್ಮಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ.


-ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ .ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486










ಭಾನುವಾರ, ಜೂನ್ 13, 2010

ನಿಮ್ಮ ನಡುವೆ ನಗುನಗುತ್ತ ಓಡಾಡುವವರಿಗೆ ಯಾವುದೇ ಸಮಸ್ಯೆಗಳು ಇರಲಾರದು ಎಂದು ಭಾವಿಸಬೇಡಿಅವರಿಗೂ ಸಮಸ್ಯೆಗಳಿವೆ . ಆದರೆ ಅಂತಹ ಸಮಸ್ಯೆಗಳನ್ನು ಎದುರಿಸುವ ಸಾಮಾರ್ಥ್ಯ ಅವರಿಗಿದೆ .

ವೇಳಾಪಟ್ಟಿಯ ತಂತ್ರವನ್ನು ವಿವರಿಸಿ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ವಿಧಾನವನ್ನು ತಿಳಿಸಿರುವಿರಿ. ಆದರೆಸಾಕಷ್ಟು ಅಧ್ಯಯನ ಮಾಡಿದ ಮೇಲೂ ಮಿಗುವ ಸಮಯವನ್ನು ಬಳಸಿ ಕೊಳ್ಳುವುದು ಹೇಗೆ? ಎಂದು ಇಲ್ಲೊಬ್ಬ ವಿಧ್ಯಾರ್ಥಿಬರೆದಿದ್ದಾರೆ
ಇದು ಬುದ್ಧಿವಂತ -ವಿದ್ಯಾರ್ಥಿಗಳ ಸಮಸ್ಯೆ . ಏಕೆಂದರೆ ಅವರು ಮಾತ್ರ ಕಡಿಮೆ ಸಮಯದಲ್ಲಿ ಹೆಚ್ಚು ಓದಬಲ್ಲರಲ್ಲದೆ ಓದಿದ್ದನ್ನುನೆನಪಿಟ್ಟು ಕೊಳ್ಳಬಲ್ಲರು .ಅಂಥವರು ಚಿತ್ರಕಲೆ ,ಸಂಗೀತ, ನೃತ್ಯ,ಕೈಗಾರಿಕೆ, ಸಾಹಿತ್ಯವೇ ಮೊದಲಾದ ವಿಷಯಗಳಲ್ಲಿತಮಗಿಷ್ಟವಾದುದನ್ನು ಆರಿಸಿಕೊಂಡು ಅಭ್ಯಸಿಸಬಹುದು.ಆದರೆ, ಮೂರನೇ ಶ್ರೇಣಿಯಲ್ಲಿ ಉತ್ತಿರ್ಣರಾಗುವ ಅಥವಾ ನಪಾಸೇಆಗಬಹುದಾದ ವಿದ್ಯಾರ್ಥಿಗಳು ತಮ್ಮ ಪಾಠವಿಷಯಗಳಲ್ಲೇ ಹೆಚ್ಚು ಮಗ್ನರಾಗಿರುವುದು ಒಳ್ಳೆಯದು.ಹೀಗೆ ಮಾಡಿದರೆ , ನಪಾಸಾಗುವವರು ಮೂರನೇ ಶ್ರೇಣಿಯಲ್ಲಿ ಆದರು ಉತ್ತೀರ್ಣರಾದರು;ಮೂರನೇ ಶ್ರೇಣಿಯಲ್ಲಿ ಪಾಸಾಗುವವರು ಎರಡನೇಶ್ರೇಣಿಯಲ್ಲಿ ಪಾಸಾದಾರು.ಎರಡನೇ ಶ್ರೇಣಿಯಲ್ಲಿ ಪಾಸಾಗುವವರು ಪ್ರಥಮ ಶ್ರೇಣಿಯಲ್ಲಿ ಪಾಸಾದಾರು. ಕನಿಷ್ಠ ಪಕ್ಷ ಪ್ರಥಮಶ್ರೇಣಿಯಲ್ಲಾದರು ಪಾಸಾದರೆ ಮುಂದೆ ಕಾಲೇಜು ವಿದ್ಯಾಭ್ಯಾಸ -ಸುಲಭ ಸುಗಮವಾಗಲು ಸಾಧ್ಯವಾಗುತ್ತದೆ.ಎಸ್ಸೇಸ್ಸಲ್ಸಿ ಯಲ್ಲೇಮೂರನೇ ಶ್ರೇಣಿಯಲ್ಲಿ ಪಾಸಾಗುವವರು ಕಾಲೇಜಿನಲ್ಲಿ ಡುಮ್ಕಿ ಹೊಡಿಯುವುದು ಖಂಡಿತ.


ನಿಮ್ಮ ನಡುವೆ ನಗುನಗುತ್ತ ಓಡಾಡುವವರಿಗೆ ಯಾವುದೇ ಸಮಸ್ಯೆಗಳು ಇರಲಾರದು ಎಂದು ಭಾವಿಸಬೇಡಿಅವರಿಗೂ ಸಮಸ್ಯೆಗಳಿವೆ . ಆದರೆ ಅಂತಹ ಸಮಸ್ಯೆಗಳನ್ನು ಎದುರಿಸುವ ಸಾಮಾರ್ಥ್ಯ ಅವರಿಗಿದೆ . ತೊಂದರೆಗಳ ನಡುವೆಯೂನಗುವುದನ್ನು ಕಲಿಯಿರಿ.

-ಶುಭದಿನದೊಂದಿಗೆ
ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
.

ಶನಿವಾರ, ಜೂನ್ 12, 2010

ಜೀವನ ಅಂದ್ರೆ ಪುಟ್ಬಾಲ್ ಆಟವಿದ್ದಂತೆ , ನಾವು ಕಾಲ್ಚೆಂಡುಗಳು ,ಜನರಿಂದ ಆಗಾಗ ಒದೆ ತಿನ್ನಬೇಕಾಗುತ್ತದೆ . ಒದೆ ತಿನ್ನದೇಕಷ್ಟ,ಅವಮಾನ ಅನುಭವಿಸದೆ )ಯಶಸ್ಸು (ಗೋಲ್ )ತಲುಪಲು ಆಗುವುದಿಲ

ಶಿಸ್ತುಬದ್ಧ ಅಧ್ಯಯನದೊಂದಿಗೆ , ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದರ ಮೂಲಕ , ಮನದ ಮೂಲೆಯಲ್ಲಿ ಮನೆಮಾಡಿಕೊಂಡಿರುವ ಭಯದ ಮನೋವೃತ್ತಿಯನ್ನು ನಿವಾರಿಸಿಕೊಳ್ಳಬೇಕಾದುದು ಮುಖ್ಯವಾಗುತ್ತದೆ. ನೋಡಿದೆಯಾ,ಇಲ್ಲಿ ನೀನುಇನ್ನೊಂದು ಹೊಸ ಶಬ್ದವನ್ನು ಕೇಳುತ್ತಿರುವೆ ! ಆತ್ಮವಿಶ್ವಾಸ!ಎಂದರೇನು?ನಿನ್ನ ಶಕ್ತಿಯಲ್ಲಿ ನಿನಗೆ ನಂಬಿಕೆ;ನೀನು ಮಾಡಿದಅಧ್ಯಯನದಲ್ಲಿ ನಿನಗೆ ನಂಬಿಕೆ !ಪರೀಕ್ಷೆಯಲ್ಲಿ ಶಾಂತ ಮನಸ್ಕನಾಗಿ ಸರಿಯಾದ ಉತ್ತರವನ್ನೇ ಬರೆಯುತ್ತೇನೆ ಎಂಬ ದೃಢವಿಶ್ವಾಸಇದೇ ಆತ್ಮವಿಶ್ವಾಸ. ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆಯಾದರೆ ಉತ್ಸಾಹ ಬರುತ್ತದೆ. ಹೆದರಿಕೆ ಹೋಗುತ್ತದೆ.
ಸರಿ. ನೀನೀಗ ಹಲವಾರು ವಿಚಾರಗಳನ್ನು ತಿಳಿದಂತಾಯಿತು. ಇಷ್ಟು ವಿಚಾರಗಳನ್ನು ತಿಳಿದ ನಿನಗೆ ಯಶಸ್ಸು ಕಟ್ಟಿಟ್ಟದ್ದು . ಆದರೆಅಷ್ಟೇ ಅಲ್ಲ; ಇನ್ನು ಒಂದು ವಿಚಾರವನ್ನು ತಿಳಿಯುವುದು ಬಾಕಿಯಿದೆ.ನೀನು ಪತ್ರವನ್ನು ಆಗಾಗ ಓದಿಕೊಳ್ಳಬೇಕೆಂಬುದೇ ವಿಚಾರ. ನೀನು ನಿನ ಟ್ಯಾಪುಸ್ತಕಗಳನ್ನು ಅಹ್ಯಯನ ಮಾಡಲು ಆರಂಭಿಸುವುದಕ್ಕಿಂತ ಮೊದಲು ಪತ್ರವನ್ನು ಅಧ್ಯಯನಮಾಡಿ ಇದರಲ್ಲಿ ನೀಡಿರುವ ಸಲಹೆಗಳಂತೆ ದಿನಂಪ್ರತಿಯು ನಡೆದು ಕೊಳ್ಳುತ್ತಿರುವೆಯೋ ಇಲ್ಲವೋ ಎಂಬುದನ್ನೂ ಆಗಾಗನೋಡಿಕೊಳ್ಳುತ್ತಿರಬೇಕು.
ಮುಂದಿನ ಪರೀಕ್ಷೆಯಲ್ಲಿ ನೀನು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣನಾಗುವಂತೆ ದೇವರು ನಿನಗೆ ಅನುಗ್ರ ಮಾಡಲಿ!
ಹೃತ್ಪೂರ್ವಕ ಶುಭಾಶಯಗಳೊಂದಿಗೆ .

ಆತ್ಮೀಯ ಸ್ನೇಹಿತರೆ ಹಿಂದೆ ಸೋಮಶೇಖರ ಎನ್ನುವ ವಿದ್ಯಾರ್ಥಿ ತನ್ನ ಮನದಲ್ಲಿ ಮೂಡಿದ ಅನುಮಾನವನ್ನು ಪ್ರಶ್ನೆಕೇಳುವುದರ ಮೂಲಕ ಹೇಗೆ ಬಗೆ ಹರಿಸಿಕೊಂಡ ಎನ್ನುವುದನ್ನು ನೋಡಿದ್ದೀರಿ . ಹಾಗೇ ನಿಮ್ಮ ಮನದಲ್ಲಿ ಮೂಡಿದ ಪ್ರಶ್ನೆಗಳನ್ನು ನನಗೆಬರೆದು ಕಳುಹಿಸಿ. ಏಕೆಂದರೆ ಇಲ್ಲಿ ಸೋಮಶೇಖರ ಎನ್ನುವ ವಿದ್ಯಾರ್ಥಿ ಕೇಳಿದ ಪ್ರಶ್ನೆ ಎಲ್ಲರ ಮನದ ಪ್ರಶ್ನೆ ಆಗಿತ್ತು. ಹಾಗೆಯೇಲೇಖಕರು ಕೊಟ್ಟ ಉತ್ತರ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿತ್ತು. ಹಾಗಾಗಿ ಯಾವಾಗಲು ನಿಮ್ಮ ಅನುಮಾನಗಳನ್ನು
ನಿಮ್ಮ ಗುರುಗಳ ಹತ್ತಿರ ಕೇಳಿ ಪರಿಹರಿಸಿಕೊಳ್ಳಿ,ಎಂದೂ ಗುರುಗಳನ್ನು ಪರೀಕ್ಷಿಸುವ ಒಂದು ಅಭ್ಯಾಸ ಕ್ಕೆ ಹೋಗಬೇಡಿ. ಏಕೆಂದರೆಎಲ್ಲವನ್ನು ಮನುಷ್ಯ ನಾದವನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.ಹಾಗೆಯೇ ಎಲ್ಲ ವಿಷಯಗಳನ್ನು ಒಬ್ಬನೇ ಒಬ್ಬವ್ಯಕ್ತಿ ತಿಳಿದುಕೊಂಡಿರುವುದು ಅಸಾಧ್ಯ.
ಜೀವನ ಅಂದ್ರೆ ಪುಟ್ಬಾಲ್ ಆಟವಿದ್ದಂತೆ , ನಾವು ಕಾಲ್ಚೆಂಡುಗಳು ,ಜನರಿಂದ ಆಗಾಗ ಒದೆ ತಿನ್ನಬೇಕಾಗುತ್ತದೆ . ಒದೆ ತಿನ್ನದೇ ಕಷ್ಟ,ಅವಮಾನಅನುಭವಿಸದೆ )ಯಶಸ್ಸು (ಗೋಲ್ )ಲುಪಲು ಆಗುವುದಿಲ್ಲ.
ಶುಭಾದಿನದೊಂದಿಗೆ
ನೆಟ್ನಾಗ
.ಟಿ.ನಾಗರಾಜ
ಡಬ್ಲ್ಯು ,ಡಬ್ಲ್ಯು,ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486











ಶುಕ್ರವಾರ, ಜೂನ್ 11, 2010

"ಹೆದರಿಕೊಂದರೆ ನನಗೆ ಸಿಗುವುದಾದರೂ ಏನು ? ಕಾಯಿಲೆ. ಈ ಸೌಭಾಗ್ಯಕ್ಕೆ ನಾನೇಕೆ ಹೆದರಿಕೊಂಡು ಸಾಯಲಿ? ಇಲ್ಲ. ನಾನು ಚೆನ್ನಾಗಿ ಅಧ್ಯಯನ ಮಾಡುತ್ತೇನೆ ಮತ್ತು ಧೈರ್ಯದಿಂದ ಪರೀಕ್ಷೆಯಲ್ಲಿ

ನಿನ್ನ ಮಾರ್ಗದಲ್ಲಿ ಇನ್ನೊಂದು ವೈರಿ ಇದೆ ಎಂಬುದನ್ನು ನೀನು ಈಗಿನಿಂದಲೇ ತಿಳಿದಿರಬೇಕು.ಯಾವುದು ಗೊತ್ತೇನು ವೈರಿ?ಹೆದರಿಕೆ!ಪರೀಕ್ಷಾ ಭೀತಿ! ವೈರಿಯು ಸುಮಾರಾಗಿ ಎಲ್ಲ ವಿದ್ಯಾರ್ಥಿಗಳ ಮೇಲೂ ಆಕ್ರಮಣ ಮಾಡುತ್ತಿರುತ್ತದೆ. ದುರ್ಬಲವಿದ್ಯಾರ್ಥಿಗಳು ವೈರಿಯ ಹೊಡೆತವನ್ನು ತಾಳಲಾರದೆ ಜ್ವರ ಬೀಳುವುದುಂಟು . ವಾಂತಿ-ಭೇದಿಗೆ ಬಲಿಯಾಗುವುದುಂಟು . ಹಾಗೆಯೇ ಇನ್ನು ಏನೇನೋ ಶರೀರ-ಮನೋವಿಕಾರಗಳಿಗೆ ಗುರಿಯಾಗುವುದುಂಟು . ಬಗೆಯ ಜ್ವರಕ್ಕೆ ಪರೀಕ್ಷಾ ಜ್ವರ ಎಂದೇಹೆಸರಾಗಿದೆ. ಜ್ವರವೇ ಮೊದಲಾದ ವಿವಿಧ ವಿಕಾರಗಳಿಗೆ ಮುಖ್ಯ ಕಾರಣ ಹೆದರಿಕೆಯೇ ಹೊರತು ಇನ್ನೇನು ಅಲ್ಲ. ಆದ್ದರಿಂದ ಈಗನಿನಗೆ ನೀನೆ ಒಂದು ಪ್ರಶ್ನೆ ಹಾಕಿಕೊ; "ಹೆದರಿಕೊಂದರೆ ನನಗೆ ಸಿಗುವುದಾದರೂ ಏನು ? ಕಾಯಿಲೆ. ಸೌಭಾಗ್ಯಕ್ಕೆ ನಾನೇಕೆಹೆದರಿಕೊಂಡು ಸಾಯಲಿ? ಇಲ್ಲ. ನಾನು ಚೆನ್ನಾಗಿ ಅಧ್ಯಯನ ಮಾಡುತ್ತೇನೆ ಮತ್ತು ಧೈರ್ಯದಿಂದ ಪರೀಕ್ಷೆಯಲ್ಲಿಬರೆಯುತ್ತೇನೆ"ಎಂದು
ನಿಜ; ಪರೀಕ್ಷಾ ಭೀತಿಯಿಂದ ಪಾರಾಗಲು ಇಲ್ಲಿದೆ ಉಪಾಯ. ಯಾವುದು ಉಪಾಯ? ವರ್ಷದ ಪ್ರಾರಂಭದಿಂದಲೇ ಶಿಸ್ತಿನಿಂದಅಧ್ಯಯನ ಮಾಡುವುದು. ಶಿಸ್ತಿನಿಂದ ಅಧ್ಯಯನ ಮಾಡುವವನು ಪರೀಕ್ಷೆಗೆ ಹೆದರಬೇಕಾಗಿಯೇ ಇಲ್ಲ . ಆದರೂ, ನೋಡು. ಮನುಷ್ಯನ ಸ್ವಭಾವದಲ್ಲಿ ಭೀತಿಎಂಬುದೊಂದು ಸೇರಿಕೊಂಡೆ ಇರುತ್ತದೆ. ಆದ್ದರಿಂದ ನೀನು ಎಷ್ಟೇ ಅಧ್ಯಯನ ಮಾಡಿದರೂ ಭೀತಿ ನಿನ್ನನ್ನು ಕಾಡಬಹುದು.ಅಲ್ಲದೆ ನಿನ್ನ ಶಾಲೆಯ ಇತರ ಸೋಮಾರಿ ವಿದ್ಯಾರ್ಥಿಗಳು ."ಅಯ್ಯೋ ,ಪರೀಕ್ಷೆ ಹತ್ತಿರ ಬಂದೇಬಿಟ್ಟಿತು;ರಿವಿಶನ್ ಇನ್ನು ಮುಗಿದಿಲ್ಲ. ಏನು ಮಾಡಲಿ ಈಗ! "ಎಂದು ಹೆದರಿಕೊಳ್ಳುವುದನ್ನು ಕಂಡು ನಿನ್ನ ಮನಸ್ಸು ವಿನಾಕಾರಣಭಯಗ್ರಸ್ತವಾಗುವ ಸಂಭವವಿದೆ. ಆದರೆ, ತಿಳಿದುಕೋ . ಭಯಕ್ಕೆನಾದರು ನೀನು ಆಶ್ರಯ ಕೊಟ್ತೆಯೋ ಅದು ನಿನ್ನನ್ನುಸಾಯಿಸದಿರಬಹುದು . ಆದರೆ ನಿನ ಶರೀರ-ಮನಸ್ಸುಗಳ ಶಕ್ತಿಯನ್ನು ಉಡುಗಿಸುವುದು ಖಂಡಿತ. ಇದರ ಪರಿಣಾಮವಾಗಿಆಗುವುದಿಷ್ಟೇ-ಪರೀಕ್ಷೆಯಲ್ಲಿ ಬರೆಯುವ ವೇಳೆಗೆ ಸರಿಯಾಗಿ ನೀನು ಕಲಿತದ್ದೆಲ್ಲ ಮರವೆಯಾದಂತೆನಿಸುವುದು .ಒಂದು ಪ್ರಶ್ನೆಗೆಇನ್ನೊಂದು ಉತ್ತರವನ್ನು ಬರೆಯುವಂತಾಗುವುದು ಹೆದರಿಕೆಯ ದೆಸೆಯಿಂದಲೇ .
-ಶುಭಾದಿನದೊಂದಿಗೆ
ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು .ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486












ಗುರುವಾರ, ಜೂನ್ 10, 2010

"ಈ ಸಲದ ಪರೀಕ್ಷೆಯಲ್ಲಿ ನನ್ನ ಸ್ನೇಹಿತರಿಗಿಂತಲೂ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತೇನೆ"

ಇದಕ್ಕೆ ಇನ್ನೊಂದು ಉಪಾಯವನ್ನು ಅನುಸರಿಸಬಹುದು-" ಸಲದ ಪರೀಕ್ಷೆಯಲ್ಲಿ ನನ್ನ ಸ್ನೇಹಿತರಿಗಿಂತಲೂ ಹೆಚ್ಚಿನಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತೇನೆ"ಎಂದು ನಿನಗೆ ನೀನೆ ಶಪಥ ಮಾಡಿಕೊ. ಇದುನಿಶ್ಚಯವಾಗಿಯೂ ನಿನ್ನೊಳಗಿರುವ ಛಲವನ್ನು ಬಡಿದೆಬ್ಬಿಸುತ್ತದೆ.
ಒಟ್ಟಿನಲ್ಲಿ ನೀನು ಉತ್ಸಾಹದಿಂದ ಪುಟಿಯುವ ಚಂಡಿನಂತಿರಬೇಕೆ ಹೊರತು ನೆನೆಸಿದ ನಸೆ ನಸೆ ಅವಲಕ್ಕಿಯಂತೆಇರಬಾರದು.ಸದಾ ಪ್ರಸನ್ನನಾಗಿರು. ಅಳುಮೋರೆ ಅಥವಾ ಗಂಟು ಮುಖ ಹಾಕಿಕೊಂಡಿದ್ದರೆ ಆದು ಇರುವ ಅಲ್ಪ ಉತ್ಸಾಹವನ್ನುವರ್ಧಿಸುತ್ತ ಅದಮ್ಯ ಚೈತನ್ಯದ ಪ್ರತಿರೂಪವೇ ನೀನಾಗುವೆ. ಹೀಗೆ , ಯಾವಾಗ ಉತ್ಸಾಹವನ್ನು ನೀನುಕಾಪಾದಿಕೊಳ್ಳುತ್ತಿಯೋ ಆಗ ನಿನ್ನ ಅಧ್ಯಯನವೆಲ್ಲ ಆನಂದಮಯವಾಗುತ್ತದೆ.ಯಶಸ್ವಿಯಾಗುತ್ತದೆ. ಆದ್ದರಿಂದ ದಿನೇ ದಿನೇ ನಿನ್ನಉತ್ಸಾಹದ ಚಿಲುಮೆ ಇನ್ನಷ್ಟು ಹೆಚ್ಚು ಚಿಮ್ಮುವಂತೆ ನೋಡಿಕೊ.
ಉತ್ಸಾಹಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಂಶವನ್ನು ತಿಳಿದುಕೊಳ್ಳಲೇ ಬೇಕುನೀನು .ಮನಸ್ಸು ನಿದ್ರೆಯ ಜಾಡ್ಯವನ್ನುಕಳೆದುಕೊಂಡು ಸಂಪೂರ್ಣ ಎಚ್ಚತ್ತುಕೊಂಡಿರುವಾಗ ಅದು ಚಟುವಟಿಕೆಯಿಂದ ಕೂಡಿ ಚುರುಕಾಗಿರುತ್ತದೆ. ಆದ್ದರಿಂದ ಸಹಜವಾಗಿಉತ್ಸಾಹಪೂರ್ಣವಾಗಿರುತ್ತದೆ. ಹಾಗೆಯೇ ಉತ್ಸಾಹಪೂರ್ಣ ವಾತಾವರಣದಲ್ಲಿ ಮನಸ್ಸು ತನ್ನ ನಿದ್ರೆಯ ಜಾಡ್ಯವನ್ನು ತ್ಯಜಿಸಿಎಚ್ಚರವಾಗಿರುತ್ತದೆ. ಅಂಶವನ್ನು ಗಮನಿಸಿದಾಗ ನೀನು ನಿನ್ನ ಉತ್ಸಾಹವನ್ನು ಕಾಪಾಡಿಕೊಂಡರೆ ಅದರ ಪರಿಣಾಮವಾಗಿ ನಿನ್ನಮನಸ್ಸು ಸದಾ ಜಾಗೃತವಾಗಿರುತ್ತದೆ ಎಂಬುದು ತಿಳಿಯುವುದಿಲ್ಲವೇ?
ಮನಸ್ಸನ್ನು ಎಚ್ಚರವಾಗಿಡುವುದಕ್ಕಾಗಿಯೇ ಎಷ್ಟೋ ವಿದ್ಯಾರ್ಥಿಗಳು ಗಂಟೆ ಗಂಟೆಗೂ ಟೀ-ಕಾಫಿ ಕುಡಿಯುವುದನ್ನು ನೀನುನೋಡಿರಬಹುದು.ಆದರೆ ಕಾಫಿ-ಟೀ ಕ್ರಮೇಣ ಮೈಗೆ ಒಗ್ಗಿ ಅದನ್ನು ಕುಡಿದೇ ಗಾಢ ನಿದ್ರೆ ಮಾಡಿಬಿಡುತ್ತಾರೆ ಅವರು! ಆದ್ದರಿಂದಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮಹದಾಕಾಂಕ್ಷೆಯನ್ನು ಇಟ್ಟುಕೊಳ್ಳುವುದೇ ಉತ್ಸಾಹವನ್ನು ಕಾಪಾಡಿಕೊಳ್ಳಲು ಉತ್ತಮಉಪಾಯ. ನಿನ್ನ ವಿಷಯದಲ್ಲಿ ಮಹದಾಕಾಂಕ್ಷೆ ಎಂದರೇನು? ಇತರರಿಗಿಂತ ಅಧಿಕ ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿಯಲ್ಲಿತೇರ್ಗಡೆಹೊಂದುವ ಅಭಿಲಾಷೆ.
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486












ಬುಧವಾರ, ಜೂನ್ 9, 2010

ಮನಸ್ಸುಏಕಾಗ್ರವಾಗಳು ಅತ್ಯಂತ ಮುಖ್ಯಾಂಶ ವೆಂದರೆ ಪ್ರೀತಿ

ನಿನ್ನೆ ನಾವು ಮನಸ್ಸನ್ನು ಏಕಾಗ್ರಗೊಳಿಸಲು ಅಭ್ಯಾಸವೇ ಪ್ರಧಾನ ಸಾಧನ ಎಂದು ತಿಳಿದುಕೊಂಡೆವು . ಇವತ್ತು ಮನಸ್ಸು ಏಕಾಗ್ರವಾಗಳು ಅತ್ಯಂತ ಮುಖ್ಯಾಂಶ ವೆಂದರೆ ಪ್ರೀತಿ ವೆಂಬ ವಿಷಯದ ಬಗ್ಗೆ ತಿಳಿದು ಕೊಳ್ಳೋಣ.ನೀನು ಯಾವುದನ್ನೂ ಪ್ರೀತಿಸುತ್ತೀಯೋ ಅದರಲ್ಲಿ ನಿನ್ನ ಮನಸ್ಸು ಏಕಾಗ್ರಗೊಂಡಿರುತ್ತದೆ. ಇದು ನಿಯಮ. ಆದ್ದರಿಂದ ನೀನು ನಿನ್ನ ಪಟ್ಯ ವಿಷಯಗಳಲ್ಲಿ ಪ್ರೀತಿಯಿಡಬೇಕು.ಆಗ ಅವುಗಳಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಇವಿಷ್ಟು ನಿನ್ನ ಅಧ್ಯಯನಕ್ಕೆ ನೇರವಾಗಿ ಸಂಬಂಧಪಟ್ಟ ವಿಚಾರಗಳಾಯಿತು. ಇನ್ನು ಕೆಲವು ಅಂಶಗಳಕಡೆಗೆ ನೀನು ಗಮನಹರಿಸಬೇಕಾದದ್ದಿದೆ . ಮೊದಲನೆಯದಾಗಿ ನಿನ್ನ ಊಟ ತಿಂಡಿಯ ವಿಷಯ, ಹಿತವಾಗಿ ಮಿತವಾಗಿ ಕಾಲಕ್ಕೆ ಸರಿಯಾಗಿ ಊಟಮಾಡುವುದರಿಂದ ಮನಸ್ಥಿತಿ ಸದಾ ಹದವಾಗಿರುತ್ತದೆ. ಅತಿಯಾಗಿ ಉಂಡರೆ ನಿದ್ರೆ,ಅತಿ ಕಡಿಮೆ ಉಂಡರೆ ನಿತ್ರಾಣ ಕಾಲಕಾಲಕ್ಕೆಸರಿಯಾಗಿ ಊಟ ಮಾಡದಿದ್ದರೆ ಮನಸ್ಸು ಏರಿಳಿತಗಳಿಗೆ ಒಳಗಾಗುತ್ತದೆ.
ಇನ್ನು ವ್ಯಾಯಾಮದ ವಿಷಯ. ಆಟಗಳನ್ನಾಡುವವರು ಆಡಿಕೊಳ್ಳಲಿ , ನೀನು ಮಾತ್ರ ಒಂದೋ ಯೋಗಾಸನಗಳನ್ನು ಅಭ್ಯಾಸಮಾಡು. ಅಥವಾ ಅಂಗಸಾಧನೆ ಮಾಡು. ಕೇವಲ ಮುಕ್ಕಾಲು ಗಂಟೆಯಲ್ಲಿ ನಿನ್ನ ಶರೀರದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮಸಿಗುವಂತಿದ್ದರಾಯಿತು . ವ್ಯಾಯಾಮದ ವಿಷಯದಲ್ಲಿ 'ಹೆಚ್ಚಿಗೆ ಮಾಡಬೇಡ , ಮಾಡುವುದನ್ನು ಬಿಡಬೇಡ' ಎಂಬನಿಯಮಾವನ್ನಿಟ್ಟುಕೊಂಡರೆ ಕ್ಷೇಮ .
ಯಾವಾಗಲೂ ಕುದಿಸಿ ಆರಿದ ನೀರನ್ನೇ ಕುಡಿಯುವ ಅಭ್ಯಾಸವಿಟ್ಟುಕೊಂಡರೆ ಎಷ್ಟೋ ಕಾಯಿಲೆಗಳು ಹತ್ತಿರವೇ ಸುಳಿಯದಂತೆಮಾಡಬಹುದು.ನಿನ್ನೆಲ್ಲ ಪ್ರಗತಿಗೆ ದೊಡ್ಡ ಪ್ರತಿಬಂಧಕವೆಂದರೆ ಕಾಯಿಲೆಗಳು. ಶರೀರ-ಮನಸ್ಸುಗಳ ಹುಮ್ಮಸ್ಸ್ನ್ನೆಅಪಹರಿಸಿಬಿದುತ್ತವೆ
ಅವುಗಳು. ಆದ್ದರಿಂದ ಎಚ್ಚರ!.
ಇನ್ನೊಂದು ವಿಚಾರ. ಇದನ್ನು ಅತ್ಯಂತ ಮುಖ್ಯ ವಿಚಾರವೆಂದೇ ಭಾವಿಸಬಹುದು . ಅದೇನೆಂದು ಹೇಳಲೇ? ಉತ್ಸಾಹ ! ನಿನ್ನಲ್ಲಿ ಸದಾ ಉತ್ಸಾಹ ತುಂಬಿಕೊಂಡಿರಲಿ-ಅಚ್ಚಳಿಯದ ಉತ್ಸಾಹ!ನಿತ್ಯೋತ್ಸಾಹ! ಜೀವನದ ಎಲ್ಲ ಕ್ಷೇತ್ರಗಳಲ್ಲೂ ನಮ್ಮನುಜಯಶಾಲಿಯಾಗಿಸುವ ಕೀಲಿಕೈ ಉತ್ಸಾಹ. ನೀನೊಂದು ಉತ್ಸಾಹದ ಬುಗ್ಗೆಯೇ ಆಗಬೇಕು. ಸಂಸ್ಕೃತ ಪದವಾದ ಉತ್ಸಾಹಕ್ಕೆ ಕನ್ನಡದಲ್ಲಿ ಹುಮ್ಮಸ್ಸು.ಹುರುಪು ಎನ್ನಬಹುದು. ನಿನ್ನ ಹಿರಿಯರು ನಿನ್ನನ್ನು ಹುರಿದುಂಬಿಸುವುದರ ಮುಲಕ ಉತ್ಸಾಹವನ್ನು ನಿನ್ನಲ್ಲಿ ಮೂಡಿಸಬೇಕು.ಆದರೆ ಹೆಚ್ಚಿನ ಹಿರಿಯರು ತಮ್ಮ ತಮ್ಮ ತಾಪತ್ರಯಗಲ್ಲೇ ಮುಳುಗಿ ಅವರೇ ಇತರರಿಂದಪ್ರೋತ್ಸಾಹವನ್ನು ನಿರೀಕ್ಷಿಸುತ್ತಿರುವಾಗ ನಿನಗಾರು ನೀಡುತ್ತಾರೆ ಉತ್ಸಾಹವನ್ನು? ಆದ್ದರಿಂದ ನೀನೆ ಅದನ್ನು ನಿನ್ನೋಳಗಿನಿಂದಲೇ ಹೊರ ಹೊಮ್ಮಿಸಿಕೊಳ್ಳಬೇಕು.
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486