MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಜನವರಿ 27, 2011

ಸಾಧುಗಳ ಅಡಿಯಲ್ಲಿ ಆಧ್ಯಾತ್ಮಿಕ ಶಿಷ್ಯ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

"ಮಹಾನ್ ಕನಸುಗಾರರ ಕನಸುಗಳು ಎಂದೂ ನನಸಾಗುವುದಿಲ್ಲ. ಅವು ನನಸನ್ನು ಮೀರಿಹೊಗುತ್ತವೆ"_ಆಲ್ಪ್ರೆಡ್ ನಾರ್ತ್ ಹೆಡ್

ಆಗ ರಾತ್ರಿ ಎಂಟು ಗಂಟೆ, ಮರುದಿನದ ಕೋರ್ಟಿನ ಕೆಲಸಕ್ಕಾಗಿ ನಾನಿನ್ನೂ ಸಿದ್ಧತೆ ನಡೆಸಿರಲಿಲ್ಲ. ಆದರೂ ಭಾರತೀಯ ಸಾಧುಗಳ ಸನ್ನಿಧಿಯಲ್ಲಿ ಅದ್ಭುತ ಪರಿವರ್ತನೆಗೊಳಗಾಗಿದ್ದ ನನ್ನ ಮಿತ್ರನ ಅನುಭವಗಳಿಂದ ನಾನು ತೀವ್ರ ಆಕರ್ಷಣೆಗೆ ಒಳಗಾಗಿದ್ದೆ. ಎಂಥ ಆಶ್ಚರ್ಯಕರ ಪರಿವರ್ತನೆ ಇದು ! ಈ ಅನುಭವಗಳು ನನ್ನ ಬದುಕಿನ ಮೌಲ್ಯವನ್ನು ಹೆಚ್ಚಿಸಬಹುದೇ ? ನನ್ನ ಸೊರಗುತ್ತಿರುವ ಜೀವನಾಸಕ್ತಿಯನ್ನು ವರ್ಧಿಸಬಹುದೇ ? ಈ ಪ್ರಶ್ನೆಗಳು ನನ್ನ ಮನಸ್ಸಿನೊಳಗೆ ಮೂಡತೊಡಗಿದವು.. ಜೂಲಿಯನ್ ನ ಮಾತುಗಳನ್ನು ಕೇಳುತ್ತಾ ಹೋದಂತೆ ನನ್ನ ಅಂತಸ್ಪೂರ್ತಿಗೆ ತುಕ್ಕುಹಿಡಿದಿರುವುದು ನನಗೆ ಸ್ಪಷ್ಟವಾಗುತ್ತ ಹೋಯಿತು. ಯುವಕನಾಗಿದ್ದಾಗ ನಾನು ತೊಡಗಿಕೊಂಡಿದ್ದ ಪ್ರತಿಯೊಂದು ಚಟುವಟಿಕೆಯಲ್ಲೂ ತುಂಬಿರುತ್ತಿದ್ದ ಆಸಾಧಾರಣ ಸ್ಫೂರ್ತಿ ಈಗೆಲ್ಲಿ ಹೋಯಿತು ? ಆಗ ಬದುಕಿನ ಚಿಕ್ಕಪುಟ್ಟ ಸಂಗತಿಗಳೂ ಖುಷಿ ನೀಡುತ್ತಿದ್ದವು . ಬಹುಶ; ನಾನು ನನ್ನ ಭವಿಷ್ಯವನ್ನು ಪುನ; ಸಂಶೋಧಿಸಬೇಕಾಗಿದೆ ಅಂದುಕೊಂಡೆ.

ನನ್ನ ಮನಸ್ಸಿನಲ್ಲಿ ಜೂಲಿಯನ್ ಕಲಿತುಬಂದ ಆ ಸಾಧುಗಳ ಜೀವನತತ್ವಗಳ ಬಗ್ಗೆ ಕುತೂಹಲ ಬೆಳೆಯುತ್ತಿರುವುದನ್ನು ಆತ ಗ್ರಹಿಸಿದ. ತನ್ನ ಕಥನವನ್ನು ಮುಂದುವರಿಸಿದ. "ನನ್ನ ಜ್ಞಾನದಾಹ ಹಾಗೂ ವೃತ್ತಿಜೀವನದಲ್ಲಿ ಹರಿತಗೊಂಡ ಮೇದಾಶಕ್ತಿಗಳಿಂದ ನಾನು 'ಶಿವನ ಸಾಧು'ಗಳ ಗುಂಪಿನ ಮೆಚ್ಚಿಗೆ ಗಳಿಸಿದೆ. ಅದರ ಸಂಕೇತವಾಗಿ ಅವರು ನನ್ನನ್ನು ತಮ್ಮ ಗುಂಪಿನ ಗೌರವಸದಸ್ಯನಾಗಿ ಸ್ವೀಕರಿಸಿದರು. ತಮ್ಮ ಕುಟುಂಬದ ಓರ್ವ ಸದಸ್ಯನಂತೆ ಅಕ್ಕರೆಯಿಂದ ನೋಡಿಕೊಂಡರು.

ಶರೀರ, ಮನಸ್ಸು ಮತ್ತು ಆತ್ಮ- ಈ ಮೂರರ ಮೇಲೂ ನಿಯಂತ್ರಣ ಸಾಧಿಸುವ ಉದ್ದೇಶದಿಂದ ನಾನು ಯೋಗಿರಾಮನ್ನನ ಮಾರ್ಗದರ್ಶನದಲ್ಲಿ ಪ್ರತಿಕ್ಷಣವನ್ನೂ ವ್ಯಯಿಸಿದೆ. ನನಗೂ ಅವನಿಗೂ ವಯಸ್ಸಿನಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿದ್ದರೂ , ಆತ ನನ್ನ ಪಾಲಿಗೆ ಗುರುವಿಗಿಂತಲೂ ಹೆಚ್ಚಾಗಿ ತಂದೆಯನ್ತಾಗಿದ್ದ . ಆತನಲ್ಲಿ ಅನೇಕ ಜನ್ಮಗಳ ಜ್ಞಾನ ತುಂಬಿತ್ತು. ಅದನ್ನು ನನ್ನೊಂದಿಗೆ ಸಂತೋಷದಿಂದ ಹಂಚಿಕೊಳ್ಳಲು ಸಿದ್ಧನಾಗಿದ್ದ.

ಪ್ರತಿದಿನ ಪ್ರಾತ;ಕಾಲ ಆಶ್ರಮದಲ್ಲಿ ಕುಳಿತುಕೊಂಡು ಜೀವನದಲ್ಲಿ ಚೈತನ್ಯ ಸೃಜನಶೀಲತೆ ಹಾಗೂ ಸಾರ್ಥಕ್ಯವನ್ನು ವರ್ಧಿಸುವ ವಿಭಿನ್ನ ತಂತ್ರಗಳನ್ನು ಯೋಗಿರಾಮನ್ ಮುಖೇನ ತಿಳಿದುಕೊಳ್ಳುತ್ತಿದ್ದೆ. ಆತ ಉಪದೇಶಿಸಿದ ತತ್ವಗಳನ್ನು ಆಯುಷ್ಯ , ಆರೋಗ್ಯ , ಆನಂದ ವರ್ಧನೆಗಾಗಿ ಯಾರೂ ಬೇಕಾದರೂ ಉಪಯೋಗಿಸಬಹುದಾಗಿತ್ತು. ಆತ್ಮಪ್ರಭುತ್ವ ಹಾಗೂ ಸ್ವಯಂ ಸಾಧ್ಯತೆಗಳ ಸಾಧನೆಯಿಂದ ಹಿಂದೆ ತಾನು ವ್ರುತ್ತಿಜೀವನಕಾಲದಲ್ಲಿ ಅನುಭವಿಸಿದ್ದ ಗೊಂದಲ ಅನಾಹುತಗಳನ್ನು ಹೇಗೆ ನಿವಾರಿಸಿಕೊಳ್ಳಬಹುದೆನ್ನುವುದೂ ನನಗೆ ಅರಿವಾಯಿತು. ಸಾಧನೆಯಲ್ಲಿ ವಾರಗಳು ಕಳೆಯುತ್ತಿದ್ದಂತೆ ನನ್ನಲ್ಲಿ ಅದ್ಭುತವಾದ ಶಕ್ತಿ ಸುಪ್ತವಾಗಿದೆ. ಅದು ಜಾಗೃತಗೊಂಡು ಉದ್ದಾತ್ತ ಉದ್ದೇಶಗಳನ್ನು ಸಾಧಿಸಲು ಕಾಯುತ್ತಿದೆ ಎನ್ನುವ ಅರಿವು ಮೂಡಿತು. ಒಮ್ಮೊಮ್ಮೆ ನಾವಿಬ್ಬರೂ ಸುಮ್ಮನೆ ನಿಂತು ಆ ಹಿಮಾಲಯದ ಹಸಿರು ಕಣಿವೆಯನ್ನು ಬೆಳಗುತ್ತಿರುವ ಸೂರ್ಯನನ್ನು ವೀಕ್ಷಿಸುತ್ತಿದ್ದೆವು. ಕೆಲವೊಮ್ಮೆ ಮೌನದಲ್ಲಿ ಧ್ಯಾನಮಗ್ನರಾಗುತ್ತಿದ್ದೆವು . ಕೆಲವೊಮ್ಮೆ ತತ್ವಜ್ಞಾನ ಮಾಡುತ್ತಾ ದೇವದಾರು ವೃಕ್ಷಗಳ ಅರಣ್ಯದಲ್ಲಿ ಸುತ್ತಾಡುತ್ತಿದ್ದೆವು.

ಸುಮಾರು ಮೂರು ವಾರಗಳ ನಂತರ ನನಗೆ ಆತ್ಮವಿಸ್ತಾರದ ವಿಶಿಷ್ಟ ಅನುಭವ ಉಂಟಾಯಿತು. ಅದರ ಪರಿಣಾಮವಾಗಿ ರಾತ್ರಿಯ ತಾರಾಖಚಿತ ಆಕಾಶ , ಮಳೆನೀರಿನಿಂದ ತೋಯ್ದ ಜೇಡರಬಲೆ ಯಂತಹ ಚಿಕ್ಕ ಪುಟ್ಟ ಸಾಮಾನ್ಯ ವಸ್ತುಗಳಲ್ಲೂ ಸೌಂದರ್ಯ ದರ್ಶನ ಉಂಟಾಗತೊಡಗಿತು. ಅದೆಲ್ಲವನ್ನೂ ನಾನು ಹೀರಿಕೊಂಡೆ . ಹೊಸ ಜೀವನಶೈಲಿ ಮತ್ತು ಅಭ್ಯಾಸಗಳು ಆಂತರಿಕ ಜಗತ್ತಿನ ಮೇಲೂ ಗಾಢ ಪರಿಣಾಮ ಬೀರ ತೊಡಗಿದವು . ಒಂದೇ ತಿಂಗಳಲ್ಲಿ ಹಿಂದೆಂದೂ ಅನುಭವಿಸದಿದ್ದ ಮಾನಸಿಕ ಶಾಂತಿ ಹಾಗೂ ಗಾಂಭೀರ್ಯವನ್ನು ಅನುಭವಿಸತೊಡಗಿದೆ.

ದಿನೇ ದಿನೇ ನನ್ನಲ್ಲಿ ಸಂತೋಷ, ಸ್ಫೂರ್ತಿ, ಸೃಜನಶೀಲ ಚೈತನ್ಯ ಬೆಳೆಯುತ್ತಿತ್ತು. ದೈಹಿಕ ಶಕ್ತಿ ಹಾಗೂ ಆಧ್ಯಾತ್ಮಿಕ ಚೈತನ್ಯಗಳಿಂದ ನನ್ನ ಮನೋಧರ್ಮದಲ್ಲಿಯೂ ಪರಿವರ್ತನೆ ಉಂಟಾಯಿತು. ದೇಹದಲ್ಲಿ ಹಿಂದಿದ್ದ ಬೊಜ್ಜು ಕರಗಿತು. ಮುಖದಲ್ಲಿದ್ದ ನಿಸ್ತೇಜತೆ ಮಾಯಾವಾಗಿ ಆರೋಗ್ಯದ ಕಾಂತಿ ಕಾಣಿಸಿಕೊಂಡಿತು. ನಾನೀಗ ಏನನ್ನೂ ಮಾಡಬಲ್ಲೆ, ಏನೂ ಆಗಬಲ್ಲೆ , ನನ್ನ ಅಂತರ್ಯದಲ್ಲಿರುವ ಅಪಾರ ಸುಪ್ತಶಕ್ತಿಯ ದ್ವಾರವನ್ನು ತೆರೆಯಬಲ್ಲೆ ಎಂಬ ಭಾವನೆ ಉಂಟಾಯಿತು. ಬದುಕಿನ ಪ್ರತಿಯೊಂದು ಅಂಶದಲ್ಲೂ ದೈವಿಕತೆಯನ್ನೂ ಗುರುತಿಸುತ್ತಾ, ಜೀವನ ಪ್ರೀತಿಯನ್ನು ಹೆಚ್ಚಿಸಿ ಕೊಳ್ಳತೊಡಗಿದೆ. ಈ ರೀತಿಯಲ್ಲಿ ನಿಗೂಢ ಸಾಧುಗಳ ಪ್ರಾಚೀನ ತಂತ್ರಗಳು ಪವಾಡ ಮಾಡಲು ಆರಂಭಿಸಿದವು.

ಕೊಂಚ ಹೊತ್ತು ಸುಮ್ಮನಿದ್ದ ಜೂಲಿಯನ್ ಮತ್ತೆ ದಾರ್ಶನಿಕನಂತೆ ಹೀಗೆ ಹೇಳಿದ "ಜಾನ್, ನಾನು ತುಂಬಾ ಮಹತ್ವದ ವಿಷಯವೊಂದನ್ನು ಅರಿತುಕೊಂಡೆ, ನಮ್ಮ ಈ ಪ್ರಪಂಚ , ಮಾನಸಿಕ ಪ್ರಪಂಚವೂ ಸೇರಿದಂತೆ , ಒಂದು ವಿಶಿಷ್ಟ ಪ್ರದೇಶ , ಆಂತರಿಕ ಯಶಸ್ಸಿಲ್ಲದಿದ್ದರೆ ಬಾಹ್ಯ ಯಶಸ್ಸು ಅರ್ಥಹೀನವಾಗುತ್ತದೆ. ಶ್ರೀಮಂತನಾಗಿರುವುದಕ್ಕೂ ಸುಖಯಾಗಿರುವುದಕ್ಕೂ ಅಪಾರ ವ್ಯತ್ಯಾಸವಿದೆ. ಹಿಂದೆ ಪ್ರಸಿದ್ದ ಲಾಯರ್ ಆಗಿದ್ದ ಕಾಲದಲ್ಲಿ ನನಗೆ ಆಂತರಿಕ ಜೀವನದ ಸುಧಾರಣೆಯಲ್ಲಿ ತೊಡಗಿರುವವರ ಬಗ್ಗೆ ತಿರಸ್ಕಾರವಿತ್ತು. ಜೀವನದಲ್ಲಿ ಮಜಾ ಬೇಕು ಎನ್ನುವುದು ನನ್ನ ಆಗಿನ ಭಾವನೆಯಾಗಿತ್ತು. ಆದರೆ ದೇಹ , ಮನಸ್ಸು , ಆತ್ಮ -ಈ ಮೂರನ್ನೂ ಸರಿಯಾಗಿ ಫೋಶಿಸುವುದು ಬದುಕಿನ ಕನಸುಗಳನ್ನು ನನಸು ಮಾಡುವುದಕ್ಕೂ , ಅತ್ಯುನ್ನತ ಆನಂದವನ್ನು ಪಡೆಯುವುದಕ್ಕೂ ಅತ್ಯಗತ್ಯ ಎನ್ನುವುದನ್ನು ಕಲಿತಿದ್ದೇನೆ. ನಿನ್ನ ಆರೈಕೆಯನ್ನು ನೀನೆ ಮಾಡಿಕೊಳ್ಳದಿದ್ದರೆ , ಬೇರೆಯವರ ಆರೈಕೆಯನ್ನು ಹೇಗೆ ಮಾಡಲು ಸಾಧ್ಯ ?ನನ್ನ ಮೇಲೆ ನನಗೆ ಪ್ರೀತಿಯಿಲ್ಲದಿದ್ದರೆ , ಅನ್ಯರನ್ನು ಪ್ರೀತಿಸುವುದೂ ಅಸಾಧ್ಯ ."

ಸ್ವಲ್ಪ ಹೊತ್ತು ಜೂಲಿಯನ್ ಏನೋ ಸಂಕೋಚ ಭಾವನೆಯಿಂದ ಸುಮ್ಮನಾದಂತೆ ಕಂಡಿತು. ಅನಂತರ ಆತ ಮುಂದುವರಿದ . "ಕ್ಷಮಿಸು ಜಾನ್ , ನಾನು ಈವರೆಗೆ ನನ್ನ ಹೃದಯದೊಳಗಿದ್ದ ಈ ಅನುಭವಗಳನ್ನೂ ಯಾರೆದುರೂ ತೋಡಿಕೊಂಡಿರಲಿಲ್ಲ . ಹಿಮಾಲಯದ ಕಣಿವೆಯಲ್ಲಿ ನಾನು ಸಾಧುಗಳಡಿಯಲ್ಲಿ ಆಧ್ಯಾತ್ಮಿಕ ಶಿಷ್ಯನಾಗಿ ಪಡೆದ ಅಧ್ಬುತ ಅನುಭವ ಹಾಗೂ ವಿಶ್ವದ ಶಕ್ತಿಗಳ ಕುರಿತು ಅಲ್ಲಿ ನನ್ನಲ್ಲಿ ಉಂಟಾಗಿದ್ದ ಆಧ್ಯಾತ್ಮಿಕ ಜ್ಞಾನಸ್ಪೋಟ ಎನ್ತಹದಾಗಿತ್ತೆಂದರೆ ಅದನ್ನು ಯಾರಿಗೂ ಹೇಳಬೇಕೆಂಬ ಆಂತರಿಕ ಒತ್ತಡ ಉಂಟಾಗಿದೆ.

ಸಮಯ ಮೀರುತ್ತಿದೆ ಎಂದು ಭಾವಿಸಿದ ಜೂಲಿಯನ್ ನನಗೆ ವಿದಾಯ ಹೇಳಲು ಎದ್ದು ನಿಂತ . ಆಗ ನಾನೆಂದೆ ; "ಜೂಲಿಯನ್ , ನೀನೀಗ ಹೋಗಕೂಡದು, ನೀನು ಹಿಮಾಲಯದ ಸಾಧುಗಳಿಂದ ಪಡೆದ ಆ ದಿವ್ಯಸಂದೇಶಗಳನ್ನು ಕೇಳಲು ನನ್ನ ಮನಸ್ಸು ಕುತೂಹಲಿಯಾಗಿದೆ . ನನ್ನನ್ನು ಹೀಗೆ ಸಸ್ಪೆನ್ಸ್ ನಲ್ಲಿ ನರಳಿಸಬೇಡ . ಅದು ನನ್ನಿಂದಾಗದೆಂದು ನಿನಗೂ ಗೊತ್ತು ತಾನೇ".

"ಇಲ್ಲ . ನಾನು ಮತ್ತೊಮ್ಮೆ ಬರುತ್ತೇನೆ . ನಿನಗೂ ಗೊತ್ತಿದೆ -ಕತೆ ಹೇಳತೊಡಗಿದರೆ ಅದನ್ನು ಮುಗಿಸದೇ ಇರಲು ನನ್ನಿಂದ ಸಾಧ್ಯವಿಲ್ಲ . ನಿನಗೂ ಈಗ ನಿನ್ನ ಕೆಲಸವಿದೆ. ನನಗೂ ಸ್ವಲ್ಪ ಕೆಲಸ ಇದೆ." ಅವನೆಂದ.

"ಹಾಗಾದರೆ ಒಂದೇ ಮಾತು. "ಶಿವನಸ್ಥಾನದಲ್ಲಿ" ನೀನು ಕಲಿತ ವಿಷಯಗಳಿಂದ ನನಗೂ ಪ್ರಯೋಜನವಾದೀತೆ ?ನಾನೆಂದೆ.

"ಶಿಷ್ಯ ಸಿದ್ಧನಾದಾಗ ಗುರುಪ್ರತ್ಯಕ್ಷನಾಗುತ್ತಾನೆ. ನೀನೂ ,ನಿನ್ನಂತಹ ಇನ್ನೂ ಹಲವು ಗೆಳೆಯರು ನಾನು ಪಡೆದಿರುವ ಜ್ಞಾನವನ್ನು ಪಡೆದುಕೊಳ್ಳಲು ಸಿದ್ಧರಾಗಿದ್ದಾರೆ. ಆ ಸಾಧುಗಳು ನೀಡಿದ ಜ್ಞಾನವನ್ನು ಎಲ್ಲರೂ ಪಡೆಯಬೇಕು. ಪ್ರತಿಯೊಬ್ಬನಿಗೂ ಅದರಿಂದ ಲಾಭವಿದೆ. ಪ್ರತಿಯೊಬ್ಬನೂ ತನ್ನೊಳಗೆ ಸಹಜವಾಗಿರುವ ಪೂರ್ಣತೆಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಆ ಜ್ಞಾನವನ್ನು ನಾನು ನಿಮ್ಮೊಡನೆ ಖಂಡಿತ ಹಂಚಿಕೊಳ್ಳುವೆ. ಆದರೆ ಸ್ವಲ್ಪ ತಾಳ್ಮೆ ಇರಲಿ. ನಾಳೆ ಇದೇ ಸಮಯದಲ್ಲಿ ನಿನ್ನ ಮನೆಯಲ್ಲಿ ಭೇಟಿಯಾಗುವೆ. ನಿನ್ನ ಬದುಕಿಗೆ ಇನ್ನಷ್ಟು ಚೈತನ್ಯ ನೀಡುವ ಎಲ್ಲ ವಿಷಯಗಳನ್ನು ತಿಳಿಸುವೆ . ಸರಿತಾನೆ ?"

"ಸರಿ . ಇಷ್ಟು ವರ್ಷ ಅದಿಲ್ಲದೆ ಕಳೆದಿರುವಾಗ , ಇನ್ನು ಇಪ್ಪತ್ತನಾಲ್ಕು ತಾಸು ಕಳೆಯುವುದೇನೂ ದೊಡ್ಡದಲ್ಲ ." ನಾನೆಂದೆ ಕೊಂಚ ನಿರಾಶೆಯಿಂದ. ಕೂಡಲೇ ಭಾರತೀಯ ಯೋಗಿಯಾಗಿ ಬದಲಾದ ಖ್ಯಾತ ಲಾಯರ್ ಹೊರಟು ಹೋದ . ಕೂಡಲೇ ನೂರಾರು ಪ್ರಶ್ನೆಗಳೂ , ಯೋಚನೆಗಳೂ ನನ್ನ ಮನಸ್ಸನ್ನು ತುಂಬಿಕೊಂಡವು.

ನಾನು ಆಫೀಸಿನಲ್ಲಿ ಮೌನವಾಗಿ ಕುಳಿತೆ. ನಮ್ಮ ಜಗತ್ತು ಅದೆಷ್ಟು ಚಿಕ್ಕದು ಎಂದು ನನಗನಿಸಿತು. ಜ್ಞಾನಸಾಗರದ ನೀರಿಗೆ ನಾನಿನ್ನೂ ಬೆರಳನ್ನೂ ತೂರಿಸಿಲ್ಲವಲ್ಲ ಎಂದು ಯೋಚಿಸಿದೆ. ಒಂದು ಕಾಲದಲ್ಲಿ ನಾನು ತರುಣನಾಗಿದ್ದಾಗ ನನ್ನಲ್ಲಿದ್ದ ಜೀವನೋತ್ಸಾಹ ಕುತೂಹಲಗಳನ್ನು ಪುನ; ಪಡೆಯಲು ಸಾಧ್ಯವಾದರೆ ಹೇಗೆ ? ಆಗ ನನ್ನ ದೈನಂದಿನ ಚಟುವಟಿಕೆಗಳಿಗೆ ಇನ್ನಷ್ಟು ಚೈತನ್ಯ ತುಂಬಬಹುದು. ನನಗೂ ಒಂದು ಅಲೌಕಿಕದ ಕರೆ ಬರಬಹುದೆ? ಹೀಗೆಲ್ಲ ಯೋಚನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು , ಲೈಟುಗಳನ್ನು ಆರಿಸಿ , ಆಫೀಸಿಗೆ ಬೀಗ ಹಾಕಿ ಸೆಕೆಗಾಲದ ಆ ರಾತ್ರಿಯಲ್ಲಿ ಹೊರಹೊರಟೆ.

ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.buildingonabudget.com/



ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/

......................................................................
ನಿಮಗೆ ನನ್ನ ಜತೆ ನೇರವಾಗಿ ಮಾತನಾಡಬೇಕೆಂದು ಅನಿಸಿದರೆ, ನಿಮ್ಮ ಅನುಭವಗಳನ್ನು ,ಅನಿಸಿಕೆಗಳನ್ನು ನೇರವಾಗಿ ನನ್ನ ಜತೆಗೆ ಹಂಚಿ ಕೊಳ್ಳಬೇಕೆನಿಸಿದರೆ ನಿಮ್ಮ ಹೆಸರು, ನಿಮ್ಮ ಈ ಮೇಲ್ ವಿಳಾಸ, ನಿಮ್ಮ ಮೊಬೇಲ್ ದೂರವಾಣಿ ಸಂಖ್ಯೆ ಜತೆಗೆ ನೀವು ಕರೆಯನ್ನು ಸ್ವೀಕರಿಸುವ ಸಮಯ ಬರೆದು ಕೆಳಗಿನ ಈ ಮೇಲ್ ವಿಳಾಸಕ್ಕೆ ಕಳುಹಿಸಿ . ನಾನು ನಿಮ್ಮ ಕೋರಿಕೆಯ ಇಪ್ಪತ್ತು ನಾಲ್ಕು ಗಂಟೆಯ ಯಿಂದ ನಲವತ್ತೆಂಟು ಗಂಟೆಯ ಒಳಗೆ ನಿಮ್ಮೊಂದಿಗೆ ಸಂಭಾಷಣೆಯಲ್ಲಿ ಇರುತ್ತೇನೆ.sunnaturalflash@gmail.com




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ