MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ನವೆಂಬರ್ 30, 2010

ಯಾವುದೇ ಹೂಡಿಕೆ ಯಿಲ್ಲದೆ ಹೆಚ್ಚು ಹಣ ಗಳಿಸಲು ಒಂದು ಉತ್ತಮ ಅವಕಾಸ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಸ್ನೇಹಿತರೆ ಈ ದಿನ ನಾನು ನಿಮಗೆ ಒಂದು ಒತ್ತಮ ಅವಕಾಸವನ್ನು ಕೊಡುತ್ತಿದ್ದೇನೆ. ಯಾವುದೇ ಬಂಡವಾಳದ ಹೂಡಿಕೆ ಯಿಲ್ಲದೆ , ನೀವು ಇರುವ ಊರಿನಲ್ಲಿಯೇ ಹೆಚ್ಚು ಹಣ ಗಳಿಸುವುದು ಹೇಗೆ? ಎಂಬ ಬಗ್ಗೆ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮಾಹಿತಿ ಗಳೊಂದಿಗೆ mlmgurunag @gmail .com ಗೆ ಮೇಲ್ ಮಾಡಿ.
ನಿಮ್ಮ ಕಂಪನಿಯ ಹೆಸರು ( ಇದ್ದರೆಮಾತ್ರ )
ವಿಳಾಸ; ಹೆಸರು, ತಂದೆ ಹೆಸರು, ಗ್ರಾಮ,ಅಂಚೆ, ತಾಲೂಕು,ಜಿಲ್ಲೆ.ರಾಜ್ಯ,
ಮೊಬೇಲ್ ನಂಬರ್
ಲ್ಯಾಂಡ್ ಲೈನ್ ನಂಬರ್
ಇ-ಮೇಲ್ ಐ.ಡಿ
ಈಗ ಮಾಡುತ್ತಿರುವ ಉದ್ಯೋಗ (ವಿಧ್ಯಾರ್ಥಿ ಅಥವಾ ಗೃಹಿಣಿ ಆಗಿದ್ದರೆ ವಿಧ್ಯಾರ್ಥಿ ಅಥವಾ ಗೃಹಿಣಿ ಎಂದು ನಮೂದಿಸಿ )

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಭಾನುವಾರ, ನವೆಂಬರ್ 28, 2010

ಮಧ್ಯಾಹ್ನ ಸಿಂಹವನ್ನು ಹೆದರಿಸಿದ ತಾಯಿ ಸಂಜೆ ಬೋನಿನೋಳಗಿದ್ದ ಅದೇ ಸಿಂಹವನ್ನು ಕಂಡು ಹೆದರಿ ಮೂರ್ಛೆ ಹೋಗಿದ್ದುದ್ದು ಏಕೆ ?

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಮ್ಮೆ ಒಂದು ಊರಿಗೆ ಸರ್ಕಸ್ ಬಂದಿತ್ತು. ಆನೆ, ಸಿಂಹ ,ಹುಲಿ ಮುಂತಾದ ಪ್ರಾಣಿಗಳೆಲ್ಲ ಇದ್ದವು. ಊರಿನ ಮಕ್ಕಳಿಗೆಲ್ಲ ಕುತೂಹಲ. ಬಹಳಷ್ಟು ಜನ ಸರ್ಕಸ್ ನೋಡಿ ಬಂದು ಅದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು . ಮಗ ತನ್ನನ್ನೂ ಸರ್ಕಸ್ ಗೆ ಕರೆದು ಕೊಂಡು ಹೋಗುವಂತೆ ತಾಯಿಗೆ ಗೋಗರೆಯುತ್ತಿದ್ದ . ಆದರೆ ದುಡ್ಡಿಲ್ಲದ್ದರಿಂದ ತಾಯಿ ಇಂದು ನಾಳೆ ಎಂದು ದಿನ ತಳ್ಳುತ್ತಿದ್ದಳು . ಪ್ರತಿದಿನ ಬಾಲಕ ಸರ್ಕಸ್ ಟೆಂಟಿನ ಬಳಿ ಹೋಗಿ ಪ್ರಾಣಿಗಳನ್ನು ದೂರದಿಂದ ನೋಡುತ್ತಿದ್ದ.

ಒಂದು ದಿನ ತಾಯಿಯು ಮಗನೊಟ್ಟಿಗೆ ಕಾಡಿಗೆ ಸೌದೆಗಾಗಿ ಹೋಗಿದ್ದಳು. ಕೈಯಲ್ಲಿ ಮಚ್ಚಿತ್ತು . ಆಗ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಸರ್ಕಸ್ ಪಂಜರದಿಂದ ಒಂದು ಸಿಂಹ ತಪ್ಪಿಸಿಕೊಂಡಿತ್ತು. ಅದು ಓಡೋಡುತ್ತ ಇವರಿದ್ದ ಕಡೆಯೇ ಬಂತು. ಸಿಂಹವನ್ನು ಕಂಡ ಮಗನಿಗೆ ಸಂತೋಷವಾಯಿತು. ಅವನೂ ಅದರತ್ತ ಕಿರುಚುತ್ತ ಓಡತೊಡಗಿದ. ಕಿರುಚಾಟ ಕೇಳಿ ತಾಯಿ ತಲೆಯೆತ್ತಿ ನೋಡಿದಾಗ ಸಿಂಹ ತನ್ನ ಮಗನ ಕಡೆಗೆ ಧಾವಿಸುತ್ತಿರುವುದನ್ನು ಕಂಡು ಗಾಬರಿಗೊಂಡಳು. ಕೈಯಲ್ಲಿ ಮಚ್ಚು ಹಿಡಿದುಕೊಂಡೆ ತನ್ನ ಮಗನ ಕಡೆಗೆ ಓಡಿದಳು. ಮಗನಿಗೆ ಮೃತ್ಯುವಿನ ಭಯವಿರಲಿಲ್ಲ. ಆದರೆ ತಾಯಿಗೆ ತಲೆ ಖಾಲಿಯಾದಂತೆ ಅನಿಸುತ್ತಿತ್ತು. ಏನೂ ತೋಚುತ್ತಿರಲಿಲ್ಲ. ಸಿಂಹದ ಬಾಯಿಗೆ ಮಗ ತುತ್ತಾಗಬಾರದು ಎಂಬುದೊಂದೇ ಯೋಚನೆ. ನೇರವಾಗಿ ಸಿಂಹದ ದಾರಿಗೆ ಅಡ್ಡವಾಗಿ ನಿಂತಳು. ಇದ್ದಕ್ಕಿದ್ದಂತೆ ಎದುರಾದ ಈಕೆಯನ್ನು ಕಂಡ ಸಿಂಹ ಘರ್ಜಿಸಿತು. ಈಕೆಯತ್ತ ನುಗ್ಗಿತು. ತಾಯಿಗೆ ತನ್ನ ಪ್ರಾಣದ ಭಯವಿರಲಿಲ್ಲ. ಮಗನದ್ದೇ ಯೋಚನೆ. ಕಯಲ್ಲಿದ್ದ ಮಚ್ಚನ್ನು ಮನಸ್ಸು ಬಂದಂತೆಲ್ಲ ಬೀಸಿದಳು. ಸಿಂಹದ ಮೂಗಿಗೆ ಮುಖಕ್ಕೆ ಕಣ್ಣಿಗೆ ಪೆಟ್ಟಾಯಿತು. ರಕ್ತ ಸುರಿಯಹತ್ತಿತು. ಸಂಹ ಗಾಬರಿಯಾಗಿ ಓಡಿಹೋಯಿತು. ತಾಯಿ ಮಗನನ್ನು ಬಾಚಿ ತಬ್ಬಿಕೊಂಡು ಗೊಳೋ ಎಂದು ಅತ್ತಳು. ಮಗ ಸುರಕ್ಷಿತವಾಗಿದ್ದ. ಆಕೆಗೂ ಏನೂ ಆಗಿರಲಿಲ್ಲ. ಎಷ್ಟೋ ಹೊತ್ತಿನ ಮೇಲೆ ಆಕೆಗೆ ಎನೆನಾಯಿತೆಂಬ ಅರಿವು ಬಂತು. ಸಾವರಿಸಿಕೊಂಡು ಮನೆಗೆ ಹಿಂತಿರುಗಿದಳು.

ಮಧ್ಯಾಹ್ನದ ಹೊತ್ತಿಗೆ ಊರಲ್ಲೆಲ್ಲ ಇದರದ್ದೇ ಸುದ್ದಿ . ಸಿಂಹವನ್ನೇ ಹೆದರಿಸಿದವಳೆಂಬ ಶ್ಲಾಘನೆ. ಸಂಜೆಯ ಹೊತ್ತಿಗೆ ಸರ್ಕಸ್ ಕಂಪನಿಯವರಿಗೆ ಸಿಂಹ ಮತ್ತೆ ಸಿಕ್ಕಿತಂತೆ. ಇವರ ಮನೆಗೆ ಬಂದು ಸಮಾಧಾನ ಹೇಳಿದರು. ಒಂದಷ್ಟು ಹಣ ಮತ್ತು ಸಾಯಂಕಾಲದ ಸರ್ಕಸ್ ಆಟಕ್ಕೆ ಉಚಿತ ಪಾಸ್ ಕೊಟ್ಟರು.

ತಾಯಿ ಮಗ ಸಂತೋಷದಿಂದ ಸರ್ಕಸ್ ನೋಡಲು ಹೋದರು. ಇವರಿಗೆ ತುಂಬಾ ಗೌರವದ ಸನ್ಮಾನ . ಮುಂದಿನ ಸಾಲಿನಲ್ಲೇ ಸ್ಥಾನ . ಆಟದ ಮಧ್ಯೆ ಸಿಂಹದ ಪ್ರದರ್ಶನವಿತ್ತು. ಬೋನಿನಲ್ಲಿದ್ದ ಬೃಹದಾಕಾರದ ಸಿಂಹವನ್ನು ನೋಡಿ. ಅದರ ಗರ್ಜನೆಯನ್ನು ಕೇಳಿ ತಾಯಿ ಹೆದರಿಕೊಂಡರು. ಮೂರ್ಛೆ ಹೋದರು. ಸರ್ಕಸ್ ನವರೇ ವಾಹನದಲ್ಲಿ ಇವರನ್ನು ಮನೆಗೆ ಕಳುಹಿಸಿದರು.

ಮಧಾಹ್ನ ಆ ಸಿಂಹವನ್ನು ಹೆದರಿಸಿದ ತಾಯಿ ಸಂಜೆ ಬೋನಿನೋಳಗಿದ್ದ ಅದೇ ಸಿಂಹವನ್ನು ಕಂಡು ಹೆದರಿ ಮೂರ್ಛೆ ಹೋಗಿದ್ದೆಕ್ಕೆಂದು ಯಾರಿಗೂ ಅರ್ಥವಾಗಲಿಲ್ಲ. ಬಹುಶ; ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ತನ್ನ ಮಗನಿಗೆ ಏನೂ ಆಗಬಾರದೆಂಬ ಭಾವನೆ. ಆಕೆಗೆ ಶಕ್ತಿ ಕೊಟ್ಟಿತ್ತೇನೋ ?

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಗುರುವಾರ, ನವೆಂಬರ್ 25, 2010

ಜಗತ್ತಿನ ಸುವಿಖ್ಯಾತ ಸೆಲ್ ಫೋನ್ ಕಂಪನಿ ಹಚ್ ನ ಹುಟ್ಟಿನ ಕಥೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನೀವೆಲ್ಲೇ ಹೋದರು ನಮ್ಮ ನೆಟ್ ವರ್ಕ್ ನಿಮ್ಮನ್ನು ಹಿಂಬಾಲಿಸುತ್ತದೆ. ಈ ವಾಕ್ಯದೊಂದಿಗಿರುವ ಚಿತ್ರದಲ್ಲಿ ಒಬ್ಬ ಮುಗ್ಧ ಬಾಲಕನ ಹಿಂದೆ ಒಂದು ದ -ಡೂತಿ ನಾಯಿಮರಿ. ನಾವೆಲ್ಲಾ ಈ ಆಕರ್ಷಕ ಜಾಹೀರಾತು ಗಮನಿಸಿದ್ದೇವೆ. ಮುಗುಳ್ನಕ್ಕಿದ್ದೇವೆ . ಇದು ಸುವಿಖ್ಯಾತ ಸೆಲ್ ಫೋನ್ ಕಂಪನಿ " ಹಚ್ ನ ಜಾಹೀರಾತು. ಸಹಸ್ರಾರು ಕೋಟಿ ರೂಪಾಯಿಗಳಷ್ಟು ವ್ಯವಹಾರ ನಡೆಸುವ ಇದರ ಮೂಲ ಸಂಸ್ಥೆಯ ಸ್ಥಾಪಕರು ಹಾಂಗ್ ಕಾಂಗ್ ನ ಲೀ ಕಾಶಿಂಗ್ .

ಅವರು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಚೈನಿಯ ವ್ಯಕ್ತಿ. ಇದೆಲ್ಲರಿಗೂ ಗೊತ್ತಿರುವ ವಿಷಯ. ಆದರೆ ಗೊತ್ತಿರದ ವಿಷಯವೆಂದರೆ ಅವರು ಚೀನಾದ ಒಬ್ಬ ಬಡ ಶಾಲಾ ಮಾಸ್ತರರ ಮಗ. ಹರಕು ಬಟ್ಟೆ ಉಟ್ಟು ಹಾಂಗ್ ಕಾಂಗ್ ಗೆ ಬಂದ ಅವರು ಇಂದು ವಿಶ್ವದ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ . ಅದಕ್ಕೆ ಅವರ ಛಲ, ಶ್ರಮ , ಸಮಯಪ್ರಜ್ಞೆ ಮತ್ತು ಅಗಾಧ ಬುದ್ಧಿವಂತಿಕೆಯೇ ಕಾರಣ.

ಸಾವಿರದ ಒಂಭತ್ತು ನೂರ ನಲವತ್ತರಲ್ಲಿ ಚೀನಾ ದೇಶವನ್ನು ಅಂತರ್ಯುದ್ಧಗಳು ಮತ್ತು ಬಡತನ ಕಾಡುತ್ತಿದ್ದವು. ಅದರಿಂದ ಪಾರಾಗಲು ಒಬ್ಬ ಶಾಲಾಮಾಸ್ತರ್ ಸಂಸಾರಸಮೇತರಾಗಿ ಚೀನಾ ತೊರೆದು ಹಾಂಗಕಾಂಗ್ ಗೆ ಬರಿಗೈಯಲ್ಲಿ ಬಂದರು. ತಮ್ಮ ದೂರದ ನೆಂಟರ ಮನೆ ಸೇರಿದರು. ಆ ನೆಂಟ ಎಷ್ಟು ಶ್ರೀಮಂತನೋ ಅಷ್ಟೇ ದುರಂಕಾರಿ. ಆಗ ಮಾಸ್ತರ್ ಹಿರಿಯ ಮಗ ಲೀ ಕಾ ಶಿಂಗ್ ಗೆ ಹನ್ನೆರಡು ವರ್ಷ. ನೆಂಟರು ತಮ್ಮತ್ತ ತೋರುತ್ತಿದ್ದ ತಿರಸ್ಕಾರವನ್ನು ಕಂಡ ಲೀ ತಾನು ಮುಂದೊಂದು ದಿನ ಆತನಿಗಿಂತ ಶ್ರೀಮನ್ತನಾಗುತ್ತೆನೆಂದು ಛಲ ತೊಟ್ಟ. ಎರಡೇ ವರ್ಷಗಳಲ್ಲಿ ತಂದೆ ತೀರಿಕೊಂಡಾಗ ಲೀ ಸಂಸಾರದ ಜವಾಬ್ದಾರಿ ಹೊರಬೇಕಾಯಿತು. ಹಂಗಿನರಮನೆಗಿಂತ ಅಂಗಣದ ಗುಡಿ ಲೇಸೆಂದು ಭಾವಿಸಿದರು.

ನೆಂಟರ ಮನೆ ತೊರೆದು ಸಣ್ಣ ಮನೆ ಮಾಡಿದರು. ಹದಿನಾಲ್ಕನೆಯ ವಯಸ್ಸಿಗೆ ಕಾರ್ಖಾನೆಯಲ್ಲಿ ದಿನಕ್ಕೆ ಎಂಟು ಗಂಟೆಗಳ ಪಾಳಿಯಲ್ಲಿ ಕೂಲಿಗೆಲಸ. ಕೆಲವೇ ತಿಂಗಳಲ್ಲಿ ಅವರ ಸಂಬಳ ಎರಡರಷ್ಟಾಯಿತು . ಏಕೆಂದರೆ ಅವರು ದಿನಕ್ಕೆ ಹದಿನಾರು ಗಂಟೆ ದುಡಿಯುತ್ತಿದ್ದರು. ಕುಟುಂಬ ನಿರ್ವಹಣೆಗೆ ಅವರ ಒಂದು ಪಾಳಿಯ ಕೆಲಸದ ಸಂಬಳ ಸಾಕಾಗುತ್ತಿರಲಿಲ್ಲ.

ಕೆಲವೇ ವರ್ಷಗಳಲ್ಲಿ ಪ್ಲಾಸ್ಟಿಕ್ ಉದ್ಯಮದ ಅಂತರ್ಯಗಳನ್ನೆಲ್ಲ ಕಲಿತರು. ಬರುತ್ತಿದ್ದ ಸಂಬಳದಲ್ಲಿ ಸಂಸಾರವನ್ನು ಸಾಕಿ ಸ್ವಲ್ಪ ಉಳಿತಾಯ ಮಾಡಿದರು. ತಾವೇ ಒಂದು ಸಣ್ಣ ಪ್ಲಾಸ್ಟಿಕ್ ಫ್ಯಾಕ್ಟರಿ ತೆರೆದರು. ಆಗ ಹಾಂಗ್ ಕಾಂಗ್ ನಗರ ತುಂಬಾ ವೇಗವಾಗಿ ಬೆಳೆಯುತ್ತಿತ್ತು. ಲೀಯವರು ಜಮೀನು ಅಭಿವೃದ್ಧಿಯ ವ್ಯವಹಾರ ಪ್ರಾರಂಭಿಸಿದರು. ಗಗನಚುಂಬಿ ಕಟ್ಟಡಗಳ ನಿರ್ಮಾಣದಲ್ಲಿ ಅಪಾರ ಯಶಸ್ಸು ಗಳಿಸಿದರು. ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ ತೆಗೆದುಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಂಡರು. ನಿಧಾನವಾಗಿ ಬೃಹತ್ ವ್ಯಾಪಾರ ಮಳಿಗೆಗಳು , ವಿದ್ಯುತ್ ಉತ್ಪಾದನೆ , ಹಡಗುಗಳು ಮುಂತಾದ ವ್ಯವಹಾರಗಳಲ್ಲಿ ಹೇರಳ ಹಣ ಗಳಿಸಿದರು. ಹಚಿಸನ್ ಟೆಲಿಫೋನ್ ಕಂಪನಿ ಖರೀದಿಸಿದರು.

ಇಂದು ಅವರ ವ್ಯವಹಾರ ವಿಶ್ವದ ನಲವತ್ತು ದೇಶಗಳಲ್ಲಿ ಹರಡಿದೆ. ಸುಮಾರು ಒಂದು ಲಕ್ಷದ ಅರವತ್ತು ಸಾವಿರ ಜನರಿಗೆ ಉದ್ಯೋಗ ನೀಡಿದೆ. ಅವರು ಸ್ಥಾಪಿಸಿದ ಲೀ ಕಾ ಶಿಂಗ್ ಪೌನ್ದೆಶನ್ ಇದುವರೆವಿಗೆ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳಷ್ಟು ದೇಣಿಗೆಯನ್ನು ವಿದ್ಯೆ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ನೀಡಿದೆ. ಅವರ ಪ್ರಕಾರ ಯಶಸ್ಸಿಗೆ ಅವಶ್ಯಕವಿರುವ ವಿಷಯಗಳಲ್ಲಿ ಮುಖ್ಯವಾದವು ಮನುಷ್ಯನ ಹೃದಯ ಮತ್ತು ಬುದ್ಧಿಯಲ್ಲೇ ಅಡಗಿವೆ.!

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಸೋಮವಾರ, ನವೆಂಬರ್ 22, 2010

ಎಲ್ಲರಿಗೂ ಜುಲ್ಮಾನೆ ಬೀಳಬಹುದು ಎಚ್ಚರಿಕೆ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದು ಸಾವಿರದ ಒಂಬತ್ತು ನೂರ ನಲವತ್ತರ ಸುಮಾರಿನಲ್ಲಿ ಗ್ವಾರ್ಡಿಯಾ ಎನ್ನುವವರು ನ್ಯೂಯಾರ್ಕಿನ ಮೇಯರ್ ಆಗಿದ್ದಾಗ ಈ ಘಟನೆ ನಡೆಯಿತೆಂದು ಹಳುತ್ತಾರೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು . ನ್ಯೂಯಾರ್ಕ್ ನಗರದ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು ಗೌರವಿಸಲಾಗಿದೆ. ಆಗಿನ ಕಾಲದಲ್ಲಿ ನಗರದ ಮೇಯರ್ ಗೆ ನ್ಯಾಯಾಧೀಶರ ಅಧಿಕಾರವೂ ಇತ್ತಂತೆ.

ಒಂದು ದಿನ ಅವರು ನ್ಯಾಯಾಧೀಶರ ಕಾರ್ಯ ನಿರ್ವಹಿಸುತ್ತಿದ್ದರು. ನ್ಯಾಯಾಲಯದ ತುಂಬಾ ಜನ . ಆರೋಪಿಗಳು , ಅಪರಾಧಿಗಳು , ವಕೀಲರು ಹಾಗೂ ನಾಗರಿಕರು ಕಿಕ್ಕಿರಿದು ಸೇರಿದ್ದರು. ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಒಬ್ಬ ಮುದುಕಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ಆಕೆ ಚಳಿಗೋ ಅಥವಾ ಅಪಮಾನದಿಂದಲೋ ಗಡಗಡನೆ ನಡುಗುತ್ತಿದ್ದಳು. ಒಂದು ಫೌಂಡ್ ಬ್ರೆಡ್ ಕದ್ದಳೆಂಬ ಆರೋಪ ಆಕೆಯ ಮೇಲಿತ್ತು. ಆಕೆಯ ವಿವರಣೆಯನ್ನು ಕೇಳಿದಾಗ "ನನ್ನ ವಿಧವೆ ಮಗಳು ಮತ್ತು ಅವಳ ಇಬ್ಬರು ಪುಟ್ಟ ಮಕ್ಕಳು ನನ್ನೊಂದಿಗೆ ಇದ್ದಾರೆ . ಮಗಳಿಗೆ ತೀವ್ರ ಅನಾರೋಗ್ಯ . ಕೈಯಲ್ಲಿ ಕೆಲಸವೂ ಇಲ್ಲ , ಕಾಸೂ ಇಲ್ಲ ಮಕ್ಕಳು ಎರಡು ದಿನದಿಂದ ಉಪವಾಸ . ಅವರ ಅಳು ಕೇಳಲಾರದೆ ನಾನು ಬ್ರೆಡ್ ಕದ್ದದ್ದು ನಿಜ. ಬಡತನ ನನ್ನಿಂದ ಕಳ್ಳತನ ಮಾಡಿಸಿದೆ. ನ್ಯಾಯಾಲಯ ನನ್ನ ಅಸಹಾಯಕತೆಯನ್ನು ಗಮನಿಸಿ ಕ್ಷಮಾದಾನ ನೀಡಬೇಕು " ಎಂದು ಅಂಗಲಾಚಿದಳು.

ನ್ಯಾಯಾಲಯದಲ್ಲೇ ಹಾಜರಿದ್ದ ಬ್ರೆಡ್ ಅಂಗಡಿ ಮಾಲೀಕ ಎದ್ದು ನಿಂತು "ಈಕೆಗೆ ಕ್ಷಮಾದಾನ ಮಾಡಿದರೆ ಕೆಟ್ಟ ಉದಾಹರಣೆಯಾಗುತ್ತದೆ. ಎಲ್ಲರೂ ಇದೆ ರೀತಿ ಮಾಡುತ್ತಾರೆ. ಈಕೆಗೆ ಕಾನೂನಿನ ಪ್ರಕಾರ ದಂಡ ವಿಧಿಸಬೇಕು " ಎಂದು ವಾದಿಸಿದ. ಎಲ್ಲರ ಗಮನ ಮೇಯರ್ ಕಡೆಗೆ ಇತ್ತು. ಅವರು ಗಂಭೀರವಾಗಿ "ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಅಪರಾಧಕ್ಕೆ ದಂಡ ವಿಧಿಸಲೇ ಬೇಕು. ಈಕೆಗೆ ಹತ್ತು ಡಾಲರ್ ದಂಡ ವಿಧಿಸಲಾಗಿದೆ " ಎಂದು ಘೋಷಿಸಿದರು.

ಮುದುಕಿ "ಹತ್ತು ಡಾಲರ್ ನನ್ನ ಬಳಿ ಇದ್ದಿದ್ದರೆ ನಾನೇಕೆ ಬ್ರೆಡ್ ಕದಿಯುತ್ತಿದ್ದೆ ? ದಂಡ ಹೇಗೆ ಕಟ್ಟಲಿ "ಎಂದು ಅಳತೊಡಗಿದಳು. ಮೇಯರ್ ತಾವೇ ಹತ್ತು ಡಾಲರ್ ಕೊಟ್ಟು ಮುದುಕಿಯ ದಂಡ ಕಟ್ಟಿದರು. ನಂತರ " ಒಬ್ಬ ಬಡ ಮುದುಕಿ ಉಪವಾಸವಿರುವ ಮೊಮ್ಮಕ್ಕಳಿಗಾಗಿ ಕಳ್ಳತನ ಮಾಡುವ ಪರಿಸ್ಥಿತಿ ಈ ನಗರದಲ್ಲಿ ಇರುವುದು ದುರಂತ. ಇದರ ನೈತಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾನು ಈ ನ್ಯಾಯಾಲಯದಲ್ಲಿ ಇರುವ ಪ್ರತಿಯೊಬ್ಬರ ಮೇಲೂ ಅರ್ಧ ಡಾಲರ್ ಜುಲ್ಮಾನೆ ವಿಧಿಸುತ್ತಿದ್ದೇನೆ. ಆ ಹಣವನ್ನು ಸಂಗ್ರಹಿಸಿ ಮುದುಕಿಗೆ ಕೊಡುವುದು "ಎಂದು ಆಜ್ನೆಯಿತ್ತರು.. ತಾವೂ ಅರ್ಧ ಡಾಲರ್ ಹಣವನ್ನು ತೆಗೆದುಕೊಟ್ಟರು. ಅಲ್ಲಿದ್ದ ಬಹಳಷ್ಟು ಮಂದಿ ತಮ್ಮ ಪಾಲನ್ನು ಹಾಕಿದರು. ಸಂಗ್ರಹವಾದ ನಲವತ್ತೇಳು ಡಾಲರುಗಳನ್ನು ಮುದುಕಿಗೆ ಕೊಟ್ಟು ಕಳುಹಿಸಲಾಯಿತು. ನಡುಗುತ್ತ ಬಂದ ಮುದುಕಿ ನಗುತ್ತ ಹೋದಳು. ಈ ಘಟನೆ ನಡೆದು ಅರವತ್ತೇಳು ವರ್ಷಗಳಿಗಿಂತಲೂ ಜಾಸ್ತಿಯಾಗಿದೆ. ನಾವಿರುವ ಜಗತ್ತಿನಲ್ಲಿ ಇಂದಿಗೂ ಉಪವಾಸ ಪೀಡಿತ ಮಕ್ಕಳಿದ್ದಾರೆ. ಅವರ ನೈತಿಕ ಜವಾಬ್ದಾರಿ ನಮ್ಮ ಮೇಲಿದೆ.

ನಮಗೂ ಯಾರಾದರೂ ಜುಲ್ಮಾನೆ ವಿಧಿಸುವ ಮೊದಲೇ ನಮ್ಮ ಕೈಲಾದಷ್ಟು ಸಹಾಯ ನಾವೇ ಮಾಡಬಹುದೇ ? ಪ್ರತಿದಿನ ಸಾಧ್ಯವಿಲ್ಲದಿದ್ದರೆ , ವಾರಕ್ಕೊಮ್ಮೆಯಾದರೂ ಅಥವಾ ತಿಂಗಳ ಗೊಮ್ಮೆಯಾದರೂ ಅಥವಾ ನಮ್ಮ ಹುಟ್ಟುಹಬ್ಬ ಮುಂತಾದ ವಿಶೇಷ ದಿನಗಳಲ್ಲಿ ಒಂದಿಬ್ಬರ ಉಪವಾಸ ನೀಗಿಸಬಹುದೇ ? ಕಷ್ಟವೇನಿಲ್ಲ, ಏಕೆಂದರೆ ಮನಸ್ಸಿದ್ದರೆ ಮಾರ್ಗವೂ ಇದೆ !

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಶುಕ್ರವಾರ, ನವೆಂಬರ್ 19, 2010

ತಾಳ್ಮೆಗೆ ಬೆಲೆ !_ ಎ.ಟಿ.ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ದಂಪತಿ ಬೇರೆ ಬೇರೆ ಕಂಪನಿಗಳಲ್ಲಿ ಹಿರಿಯ ಹುದ್ದೆಗಳಲ್ಲಿದ್ದರು. ಇಬ್ಬರಿಗೂ ಕೈ ತುಂಬಾ ಕೆಲಸ. ಲಕ್ಷಗಟ್ಟಲೆ ವೇತನ , ಆಗಿಂದಾಗ್ಗೆ ವಿದೇಶ ಪ್ರಯಾಣ. ದೊಡ್ಡ ಬಂಗಲೆ. ಕಾರುಗಳು. ಎಲ್ಲಾ ಚೆನ್ನಾಗಿತ್ತು. ಒಮ್ಮೆ ಪತಿ ಜರ್ಮನಿಗೆ ಕಾರ್ಯನಿಮಿತ್ತ ಹೋಗಿಬಂದರು. ಬರುವಷ್ಟರಲ್ಲಿ ಅವರ ಮೇಲಧಿಕಾರಿಗಳಿಗೆ ಒಂದು ಸುದ್ಧಿ ಬಂತು . ಜರ್ಮನಿಗೆ ಹೋಗಿದ್ದ ಒಬ್ಬ ಭಾರತೀಯ ಅಧಿಕಾರಿ ಅಲ್ಲಿನ ಮಹಿಳಾ ಉದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದರೆಂದೂ , ಆಕೆಯ ದೂರಿನ ಅನ್ವಯ ಅಲ್ಲಿನ ಪೊಲೀಸರು ಆ ಭಾರತಿಯನನ್ನು ಬಂಧಿಸಬಹುದೆಂದೂ , ಆ ಭಾರತೀಯ ಇವರೇ ಇರಬಹುದೆಂಬ ಸುದ್ದಿ ಬಂತು . ಮೇಲಧಿಕಾರಿಗಳಿಗೆ ತಮ್ಮ ಕಂಪನಿಯ ಹೆಸರು ಕೆಡಬಹುದೆಂಬ ಹೆದರಿಕೆ. ಇವರಿಂದ ವಿಚಾರಣೆಯನ್ನೂ ಕೇಳಲಿಲ್ಲ. ಇವರನ್ನು ಕಡ್ಡಾಯ ನಿವ್ರುತ್ತಿಗೊಳಿಸಿ ಹಣಕಾಸಿನ ಎಲ್ಲ ಲೆಕ್ಕಗಳನ್ನು ಆಗಲೇ ಚುಕ್ತ ಮಾಡಿ ಕಳುಹಿಸಿಬಿಟ್ಟರು.
ಈ ಆಘಾತಕರ ದಿಢೀರ್ ಕ್ರಮದಿಂದ ಇವರಿಗೆ ದಿಕ್ಕು ತೋಚದಂತಾಯಿತು . ಹಣದ ಚಿಂತೆಯಿರಲಿಲ್ಲ. ಆದರೆ ಜನರಿಗೆ ಹೇಗೆ ಮುಖ ತೋರಿಸುವುದು , ಹೆಂಡತಿಗೆ ಏನು ಹೇಳುವುದು. ತನ್ನನ್ನು ಇನ್ನಾರು ನಮ್ಬುತ್ತಾರೆಮ್ಬುದೆ ಚಿಂತೆಯಾಗಿತ್ತು. ಮನೆ ತಲುಪುವ ಹೊತ್ತಿಗೆ ಅವರು ಆತ್ಮಹತ್ಯೆಯ ತೀರ್ಮಾನ ಮಾಡಿಯಾಗಿತ್ತು. ಮನೆಯಲ್ಲಿ ಅವರ ಪತ್ನಿ ಅಷ್ಟು ಹೊತಿಗಾಗಲೇ ಮಲಗಿ ನಿದ್ರಿಸುತ್ತಿದ್ದರು. ಆಕೆ ಮುಗ್ದವಾಗಿ ನಿದ್ರಿಸುತ್ತಿದ್ದುದು ಕಂಡ ಅವರಿಗೆ ತಮ್ಮ ಆತ್ಮಹತ್ಯೆಯಿಂದ ಆಕೆ ಗಾಬರಿಯಿಂದ ಎದ್ದೇಳುವುದನ್ನು ರಾತ್ರಿಯೆಲ್ಲ ನಿದ್ದೆಗೆಡುವುದನ್ನು ಕಲ್ಪಿಸಿಕೊಳ್ಳಲು ಆಗಲಿಲ್ಲ. ಬೆಳಗ್ಗೆ ಆಕೆ ಆಫೀಸಿಗೆ ಹೋದ ನಂತರ ಆತ್ಮಹತ್ಯೆ ಮಾಡಿಕೊಳ್ಳುವುದು ಸೂಕ್ತವೆನಿಸುತು . ಮಲಗಿಕೊಂಡರು. ನಿದ್ದೆ ಬರಲಿಲ್ಲ. ಏನೇನೋ ಯೋಚನೆಗಳು , ಯೋಜನೆಗಳು , ಬೆಳಗ್ಗೆ ಎದ್ದಾಗ ಚೆನ್ನಾಗಿ ಬೆಳಕಾಗಿತ್ತು. ಆತ್ಮಹತ್ಯೆಗೆ ಇದು ಒಳ್ಳೆ ಸಮಯ ಎಂದುಕೊಳ್ಳುವಷ್ಟರಲ್ಲಿ ಅವರ ಪತ್ನಿ ತಿಂಡಿಗೆ ಕರೆದರು. ಆಕೆ "ಇಂದು ನನಗೆ ರಜೆ ಇದೆ , ಸಾಧ್ಯವಿದ್ದರೆ ನೀವೂ ರಜೆ ಹಾಕಿ, ಎಲ್ಲಾದರೂ ಸುತ್ತಾಡಿ ಬರೋಣ " ಎಂದಾಗ ಅವರು ಮನಸ್ಸಿನಲ್ಲೇ "ಇನ್ನು ನನಗೆ ಸದಾ ರಜೆ ಬಹುಶ; ಬದುಕಿನ ಕೊನೆ ದಿನ " ಎಂದುಕೊಂಡು ಆಗಲಿ ಎಂದರು. ಇಬ್ಬರು ಸೆಲ್ ಫೋನನ್ನು ತೆಗೆದುಕೊಳ್ಳದೆ , ಕಾರನ್ನು ತೆಗೆದುಕೊಳ್ಳದೆ ನಡೆದೇ ಹೊರಟರು. ದೇವಸ್ಥಾನಕ್ಕೆ ಹೋದರು. ಶಾಪಿಂಗ್ ಮಾಲಿಗೆ ಹೋದರು. ಆಕೆ ಬೇಕೆನ್ದುದೆಲ್ಲ ಕೊಂಡುಕೊಂಡರು. ಸಂಜೆಯವರೆಗೆ ಸುತ್ತಾಡಿ ಮನೆಗೆ ಬಂದಾಗ ಇವರ ಸೆಲ್ ಫೋನ್ ನಲ್ಲಿ ಹಲವಾರು ಸಂದೆಶಗಳಿದ್ದವು, ಕೆಲಸದ ಸುದ್ದಿ ಗೊತಾಗಿದ್ದ ಬೇರೆ ಎರಡು ಕಂಪನಿಗಳವರು ಇವರಿಗೆ ಇನ್ನೂ ಹೆಚ್ಚಿನ ಸಂಬಳದೊಂದಿಗೆ ಕೆಲಸದ ಆಹ್ವಾನ ವಿತ್ತಿದ್ದರು. ಅವರ ಹಳೆಯ ಕಂಪನಿಯಿಂದ "ತಪ್ಪು ಮಾಹಿತಿಯಿಂದಾಗಿ ನಮ್ಮಿಂದ ಘೋರ ಅಪರಾಧವಾಗಿದೆ , ನಾಳೆಯಿಂದಲೇ ಮತ್ತೆ ಕೆಲಸಕ್ಕೆ ಬನ್ನಿ "ಎಂಬ ಸಂದೇಶವೂ ಇತ್ತು. ಪತ್ನಿಯನ್ನು ಕರೆದು ಕೆಲಸ ಹೋದದ್ದು, ಆತ್ಮಹತ್ಯೆ ಯ ಬಗ್ಗೆ ಚಿಂತಿಸಿದ್ದು , ಈಗ ಹೊಸ ಕೆಲಸದ ಆಹ್ವಾನ ಎಲ್ಲವನ್ನು ಹೇಳಿ ಬಿಟ್ಟರು. ಆಕೆ ನಸುನಕ್ಕು "ನೀವು ತಪ್ಪು ಮಾಡುವವರಲ್ಲ ಎನ್ನುವುದು ನನಗೆ ಗೊತ್ತಿತ್ತು., ನೀವು ಬುದ್ಧಿವಂತರು, ದುಡುಕಬೇಡಿ, ಯೋಚಿಸಿ ಏನು ಬೇಕಾದರೂ ಮಾಡಿ "ಎಂದಳು . ಅವರು ಹೊಸ ಕೆಲಸಕ್ಕೆ ಸೇರಿದರು. ಎಲ್ಲವು ಸುಖಾಂತವಾಯಿತು.

ಈ ಘಟನೆ ಅವರಿಗೆ ಒಳ್ಳೆಯದನ್ನೇ ಮಾಡಿತು. ಅಮೂಲ್ಯ ಪಾಠ ವನ್ನೂ ಕಲಿಸಿತು. ಬದುಕಿನಲ್ಲಿ ಆಘಾತಗಳು ಬಂದೆರಗಿದಾಗ ಆತ್ಮ ಹತ್ಯೆ ಒಂದು ಪರಿಹಾರವೇ ಅಲ್ಲ. ಅಂತಹ ಸಮಯದಲ್ಲಿ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ತಾಳ್ಮೆವಹಿಸಿದರೆ , ನಿಧಾನವಾಗಿ ಯೋಚಿಸಿದರೆ ಬೇರೆ ಮಾರ್ಗಗಳು ಕಾಣಬಹುದೆಮ್ಬುದನ್ನು ಅವರು ಸ್ವಾನುಭವದಿಂದ ಕಂಡುಕೊಂಡರು.

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಮಂಗಳವಾರ, ನವೆಂಬರ್ 16, 2010

ನಮ್ಮ ಪ್ರಯಾಣದ ಹಡಗು ಯಾವುದು ?-ಎ.ಟಿ.ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಅಂದು ಬಂದರಿನಲ್ಲಿ ಬೀಳ್ಕೊಡುಗೆಯ ಸಡಗರ, ಸಂಭ್ರಮ , ಆ ಊರಿನ ಮೂರು ತಂಡಗಳು ದೂರ ದೇಶವೊಂದರ ಅನ್ವೇಷಣೆಗಾಗಿ ಪ್ರಯಾಣ ಹೊರಟಿದ್ದವು. ದೂರದೇಶ ಸಪದ್ಬರಿತ ವಾದದ್ದೆಂದು , ಅಮೂಲ್ಯ ವಸ್ತುಗಳು ಹೇರಳವಾಗಿ ದೊರೆಯುತ್ತದೆಂದೂ ಜನ ಕೇಳಿದ್ದರು. ಶುಭಹಾರೈಕೆ ಜೈಕಾರಗಳನ್ನು ಸ್ವೀಕರಿಸಿ ಹಡಗುಗಳು ಹೊರಟವು.

ಹಡಗುಗಳಲ್ಲಿ ಬೇಕಾದಷ್ಟು ಆಹಾರದ ಸಂಗ್ರಹವಿತ್ತು. ನುರಿತ ಮಾರಗದರ್ಶಿಗಳಿದ್ದರು. ಮೊದಲ ವಾರ ಪ್ರಯಾಣ ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸಲಾರಮ್ಭಿಸಿತು . ಇಡೀ ಸಮುದ್ರವೇ ಅಲ್ಲೋಲಕಲ್ಲೋಲ . ಆಕಾಶದಲ್ಲಿ ಭಯಾನಕ ಕಾರ್ಮೋಡಗಳು , ಗಾಳಿ ರಭಸಕ್ಕೆ ಹಡಗುಗಳು ಹೊಯ್ದಾಡುತ್ತಿದ್ದವು. ಹಿಂದೆ ಮುಂದೆ ಏನೇನೂ ಕಾಣಿಸುತ್ತಿರಲಿಲ್ಲ. ಆಳೆತ್ತರದ ಅಲೆಗಳು . ಮೊದಲನೆಯ ಹಡಗಿನವರು ಹೌಹಾರಿದರು. ಎಲ್ಲರಿಗೂ ಪ್ರಾಣಭಯ, ಜಲಸಮಾಧಿಯಾಗದೆ ಬದುಕುಳಿದರೆ ಸಾಕೆನಿಸಿಬಿಟ್ಟಿತು. ಒತ್ತಾಯದಿಂದ ಹಡಗನ್ನು ತಮ್ಮೂರಿನ ಕಡೆಗೆ ಹಿಂತಿರುಗಿಸಿ ಊರು ತಲುಪಿದರು . ನಿಶ್ಯಬ್ಧವಾಗಿ ತಲೆಯ ಮೇಲೆ ಮುಸುಕೆಳೆದುಕೊಂಡು ತಮ್ಮ ತಮ್ಮ ಮನೆ ಸೇರಿಕೊಂಡರು.

ಇನ್ನುಳಿದ ಎರಡು ಹಡಗಿನವರು ಸುಂಟರಗಾಳಿಯನ್ನು ಧೈರ್ಯದಿಂದ ಎದುರಿಸಿದರು. ವೇಗ ಕಡಿಮೆಯಾಯಿತಾದರೂ ಧೈರ್ಯ ಕಡಿಮೆಯಾಗಲಿಲ್ಲ. ಒಂದೆರಡು ದಿನಗಳಲ್ಲಿ ಸುಂಟರಗಾಳಿ ಸುಮ್ಮನಾಯಿತು. ಪ್ರಯಾಣ ಮುಂದುವರಿಯಿತು. ಆದರೆ ತಿಂಗಳುಗಟ್ಟಲೆ ಪ್ರಯಾಣದ ನಂತರವೂ ಅವರಿಗೆ ಹೊರದೇಶದ ಸುಳಿವೇ ಕಾಣಬರಲಿಲ್ಲ. ಅಷ್ಟರಲ್ಲಿ ಅವರಿಗೆ ಒಂದು ದ್ವೀಪ ಕಂಡಿತು. ಅವರು ಅಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಹೊರಡೋಣವೆಂದು ತೀರ್ಮಾನಿಸಿ ದ್ವೀಪವನ್ನು ಪ್ರವೇಶಿಸಿದರು. ಅಲ್ಲಿ ವೈಭವೋಪೇತವಾದ ವಿಶ್ರಾನ್ಟಿಧಾಮಗಳಿದ್ದವು . ಮನರಂಜನೆಯ ತಾಣಗಳಿದ್ದವು. ಜೂಜಾಟದ ಅಡ್ಡೆ ಗಳಿದ್ದವು . ಇವರಿಗೆಲ್ಲ ಸ್ವರ್ಗವೇ ಸಿಕ್ಕಿದಂತಾಯಿತು. ಎರಡು ವಾರಗಳ ವಿಶ್ರಾಂತಿಯ ನಂತರ ಮೂರನೆಯ ಹಡಗಿನವರು ತಮ್ಮ ಪ್ರಯಾಣ ಮುಂದುವರಿಸಿದರು. ಆದರೆ ಎರಡನೆಯ ಹಡಗಿನವರಿಗೆ ಹೊರಡುವ ಮನಸ್ಸಾಗಲಿಲ್ಲ . ಆರಾಮವಾಗಿ, ತಿನ್ನುತ್ತ ,ಕುಡಿಯುತ್ತ , ಜೂಜಾಡುತ್ತ ಕಾಲ ಕಳೆಯುತ್ತಿದ್ದರು. ಎಲ್ಲರ ಜೇಬೂ ಖಾಲಿಯಾದ ಮೇಲೆ ಅವರಿಗೆ ಪ್ರಜ್ಞೆ ಮರಳಿತು. ಆದರೆ ದೂರ ದೇಶದತ್ತ ಹೋಗುವಷ್ಟು ಹಣ , ಶಕ್ತಿ ಉಳಿದಿರಲಿಲ್ಲ. ಬೇರೆದಾರಿಯಿಲ್ಲದೆ ತಮ್ಮೂರಿಗೆ ಮಧ್ಯರಾತ್ರಿಯಲ್ಲಿ ಮರಳಿದರು. ಯಾತ್ರೆ ಏನಾಯಿತೆಂದು ಕೇಳಿದವರಿಗೆ ಏನೋ ಹೇಳಿ ಮಾತು ಮರೆಸಿದರು.

ಮೂರನೆಯ ಹಡಗಿನವರು ಯಾನವನ್ನು ಮುಂದುವರಿಸಿ ದೂರ ದೇಶ ತಲುಪಿದರು. ಆ ಸಂಪದ್ಬರಿತ ದೇಶದಿಂದ ಬೇಕಾದದ್ದನ್ನೆಲ್ಲ ಹಡಗಿಗೆ ತುಂಬಿಕೊಂಡು ತಮ್ಮೂರಿಗೆ ಮರಳಿದರು. ಅವರಿಗೆ ಭವ್ಯ ಸ್ವಾಗತ ಸನ್ಮಾನಗಳು ದೊರೆತವು. ಅವರಿಗೂ ಅವರ ಊರಿಗೂ ಅನುಕೂಲವಾಯಿತು. ಈಗ ಊರಿನವರು ಮೊದಲನೆಯ ಹಡಗಿನವರು ಎದುರಿಗೆ ಬಂದರೆ ಗುರುತಿಸುವುದೂ ಇಲ್ಲ. ಎರಡನೆಯ ಹಡಗಿನವರು ಎಲ್ಲಾದರು ಕಂಡರೆ ತಿರಸ್ಕಾರಿಂದ ನೋಡುತ್ತಾರೆ. ಆದರೆ ಮೂರನೆಯ ಹಡಗಿನವರ ಹೆಸರುಗಳನ್ನು ಗೌರವದಿಂದ ಇತಿಹಾಸದ ಪುಟಗಳಲ್ಲಿ ಸೇರಿಸಿದ್ದಾರೆ.

ಇಂತಹ ಸಂದರ್ಭಗಳು ವಿಜ್ಞಾನಿಗಳಿಗೆ , ಕ್ರೀಡಾಪಟುಗಳಿಗೆ, ವ್ಯವಹಾರಸ್ಥರಿಗೆ , ಅಷ್ಟೇ ಏಕೆ ತಪಸ್ವಿಗಳಿಗೂ ಎದುರಾಗಬಹುದು. ಅಲ್ಪ ಸ್ವಲ್ಪ ಅಡ್ಡಿ ಆತಂಕಗಳು , ತೊಂದರೆ ತಾಪತ್ರಯಗಳು ಎದುರಾದಾಗ ಹೆದರಿ ಓಡಿಹೊಗುವವರು ಮೊದಲನೇ ಹಡಗಿನವರು . ಸಾಧನಾಪಥದಲ್ಲಿ ಒಂದಷ್ಟು ಯಶಸ್ಸು ಗಳಿಸಿ ಸುಖ ಸಂತೋಷ ಸಿಕ್ಕಾಗ ಅದಕ್ಕೆ ಮರುಳಾಗಿ ಅಲ್ಲಿಗೆ ಸಾಧನೆ ಕೈಬಿದುವವರು ಎರಡನೆ ಹಡಗಿನವರು . ಆದರೆ ಅಡ್ಡಿ ಆತಂಕಗಳಿಗೆ ಹೆದರದೆ ಅಲ್ಪ ಸ್ವಲ್ಪ ಸುಖ ಸಂತೋಷಗಳಿಗೆ ಮರುಳಾಗಿ ನಿಲ್ಲದೆ ಗುರಿಯತ್ತ ನಡೆದು ಯಶಸ್ವಿಯಾಗುವವರು ಮೂರನೆಯ ಹಡಗಿನವರು . ವಿಶ್ವಾಮಿತ್ರ ನಿಂದ ಹಿಡಿದು ಕೊಲಂಬಸ್ ವರೆಗೆ ಬರುವ ಜನ ಯಾವ ಹಡಗಿನವರೆಂದು ನಾವು ತೀರ್ಮಾನಿಸಬಹುದು ! ಹಾಗೆಯೇ ನಮ್ಮದು ಯಾವ ಹಡಗೆಮ್ಬುದನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಶನಿವಾರ, ನವೆಂಬರ್ 13, 2010

ಕೆರೆಯ ನೀರನ್ನು ಕೆರೆಗೆ ಚೆಲ್ಲದವರು ಅರ್ಥಾತ್ ಸಮಾಜದ ಋಣ ತೀರಿಸದವರು _ಎ.ಟಿ . ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ಸಿದ್ದಾಂತ.

ಜೀವನದಲ್ಲಿ ಯಶಸ್ವಿಗಳಾಗುವುದು ಹೇಗೆ ಅಥವಾ ಸಿರಿವಂತರಾಗುವುದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ನೂರಾರು ಪುಸ್ತಕಗಳು ಹೊರಬಂದಿವೆ. ಆದರೆ ಬಿಲ್ಲಿಲಿಮ್ ಎಂಬ ಮಲೇಶಿಯಾ ಬರಹಗಾರರು "ಡೇರ್ ಟು ಫೇಲ್ " ಅಂದರೆ (ಸೋಲಲು ಧೈರ್ಯ ಮಾಡಿ ) ಎಂಬ ಪುಸ್ತಕವನ್ನು ಬರೆದಿದ್ದಾರೆ.

ನಿಜ ಜೀವನದಲ್ಲಿ ಮೊದಮೊದಲು ಸೋಲನ್ನು ಅನುಭವಿಸಿ ಅದರಿಂದ ಪಾಠ ಕಲಿತು ಯಶಸ್ಸಿನತ್ತ ನಡೆದವರ ಅನೇಕ ಉದಾಹರಣೆಗಳನ್ನು ಅವರು ನೀಡಿದ್ದಾರೆ. ಪುಸ್ತಕದಲ್ಲಿ ಒಂದು ನಿಜ ಜೀವನದ ಘಟನೆಯ ಕುತೂಹಲಕಾರಿ ವಿವರಣೆಯಿದೆ.

ಒಂದುಸಾವಿರದ ಒಂಬತ್ತು ನೂರ ಇಪ್ಪತ್ತ ಮೂರರಲ್ಲಿ ದುಬಾರಿ ಹೋಟೆಲ್ ಒಂದರಲ್ಲಿ ಒಂದು ಮಹತ್ವದ ಸಭೆ ನಡೆಯಿತಂತೆ. ಅಂದಿನ ಕಾಲದ ಅತ್ಯಂತ ಶ್ರೀಮಂತರು ಹಾಗೂ ಅತ್ಯಂತ ಪ್ರಭಾವಶಾಲಿಗಳೂ ಆದ ಎಂಟು ಜನ ಭಾಗವಹಿಸಿದ್ದ ಒಂದು ಮಹತ್ವದ ಸಭೆಯಾಗಿತ್ತು. ಏಕೆಂದರೆ ಭಾಗವಹಿಸಿದವರೆಲ್ಲ ಸಾಮಾನ್ಯ ಜನರು ಊಹಿಸಿಕೊಳ್ಳಲೂ ಆಗದಷ್ಟು ಹಣ ಸಂಗ್ರಹಿಸಿದ್ದರು. ಮತ್ತು ರಾಜಕೀಯವಾಗಿ ವ್ಯಾವಹಾರಿಕವಾಗಿ ತುಂಬಾ ಪ್ರಭಾವಶಾಲಿ ಗಳಾಗಿದ್ದರು. ಎಂಟೂ ಜನರು ಒಟ್ಟುಗೂಡಿ -ದ್ದುದನ್ನು ಸಭೆಯ ನಿರ್ಧಾರಗಳನ್ನು ಪತ್ರಿಕೆಗಳಲಿಲ್ಲ ಒಂದು ಪ್ರಮುಖ ಸುದ್ದಿಯಾಗಿ ಪ್ರಕಟಿಸಿದ್ದವು. ಸುದ್ದಿ ಎಲ್ಲರ ಗಮನ ಸೆಳೆದಿತ್ತು.

ಆದರೆ ಅದಾದ ಇಪ್ಪತೈದು ವರ್ಷಗಳ ನಂತರ ಎಂಟು ಮಂದಿ ಮಹತ್ವದ ವ್ಯಕ್ತಿಗಳು ಎಲ್ಲಿದ್ದಾರೆ. ಏನಾಗಿದ್ದಾರೆ ಎಂಬುದರ ಬಗ್ಗೆ ಯಾರೋ ಒಬ್ಬರು ಸಂಶೋಧನೆಯನ್ನೇ ಮಾಡಿದ್ದರಂತೆ . ಅದರ ವಿವರಣೆ ಹೀಗಿದೆ;

ಅತ್ಯಂತ ದೊಡ್ಡ ಉಕ್ಕು ಕಾಖಾರ್ನೆಯ ಅಧ್ಯಕ್ಷರಾಗಿದ್ದ ಚಾಲ್ರ್ಸ್ ಸ್ಕಾವ್ಯ್ಬ್ ತಮ್ಮ ಅಂತ್ಯ ಕಾಲದಲ್ಲಿ ದಿವಾಳಿಯಾಗಿದ್ದರು.
ನ್ಯೂ ಯಾರ್ಕ್ ಸ್ಟಾಕ್ ಏಕ್ಸ್ಚೆಂಜಿನ ಅಧ್ಯಕ್ಷರಾಗಿದ್ದ ರಿಚರ್ಡ್ ವಿಟ್ನಿ ತಮ್ಮ ಕೊನೆಯ ದಿನಗಳನ್ನು ಒಂದು ಸಾಧಾರಣಾ ಕಾರಾಗೃಹದಲ್ಲಿ ಕಳೆದಿದ್ದರು. ಶೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ಆಟ ಗಾರನಾಗಿದ್ದು ಕೊಟ್ಯಂತರ ರೂಪಾಯಿ ಗಳಿಸಿದ್ದ ಜೆಸ್ ಲಿವರ್ ಮೋರ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಂದಿನ ಕಾಲಕ್ಕೆ ಜಗತ್ತಿನ ಅತಿ ದೊಡ್ಡ ಉದ್ಯೋಗಪತಿಯಾಗಿದ್ದ ಇವಾರ್ ಕ್ರೂಗೆರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಉತ್ತರ ಅಮೇರಿಕಾದ ಅತಿ ದೊಡ್ಡ ಗ್ಯಾಸ್ ವಿತರಣ ಕಂಪನಿಯ ಅಧ್ಯಕ್ಷ ಹೊವರ್ಡ್ ಹಾಪ್ಸನ್ ಅವರಿಗೆ ಹುಚ್ಚು ಹಿಡಿದಿತ್ತು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೃಹತ್ ಪ್ರಮಾಣದಲ್ಲಿ ಗೋಧಿ ವ್ಯವಹಾರ ಮಾಡುತ್ತಿದ್ದ ಅರ್ಥರ್ ಕಾಟನ್ ಎಂಬುವರು ಪರದೇಶದಲ್ಲಿ ಪ್ರಾಣ ಬಿಟ್ಟಾಗ ಅವರ ಬಳಿ ಒಂದು ಬಿಡಿಕಾಸೂ ಇರಲಿಲ್ಲ.. ಲಿಯೋನ್ ಪ್ರೇಸರ್ ಅವರು "ಬ್ಯಾಂಕ್ ಆಪ್ಹ್ ಇಂಟರ್ ನ್ಯಾಷನಲ್ ಸೆಟಲ್ ಮೆಂಟ್ ಅಧ್ಯಕ್ಷರಾಗಿದ್ದರು. ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟರು. ಅಮೇರಿಕಾದ ಆಗಿನ ಅಧ್ಯಕ್ಷರ ಸಂಪುಟದಲ್ಲಿ ಸಚಿವರಾಗಿದ್ದ ಆಲ್ಬರ್ಟ್ ಫಾಲ್ ಅವ್ಯವಹಾರವೊಂದರಲ್ಲಿ ಸಿಕ್ಕಿಹಾಕಿಕೊಂಡು ಸೇರೆಮನೆವಾಸವನ್ನು ಅನುಭವಿಸುತ್ತಿದ್ದರು.

ಈ ಮಹನೀಯರುಗಳ ಪರಿಸ್ಥಿತಿ ಹೀಗೇಕಾಯಿತು ಎಂಬುದರ ಬಗ್ಗೆ ಹಲವಾರು ಅಭಿಪ್ರಾಯಗಳು ಇರಬಹುದು . ಆದರೆ ಕೆಲವು ಪ್ರಮುಖರ ಅನಿಸಿಕೆಗಳು ಮತ್ತು ಸಲಹೆಗಳು ಹೀಗಿವೆ.

ಹಣ ಹೇಗೆ ಗಳಿಸಬೇಕೆಂಬ ಅರಿವಿರಬೇಕು. ಅದರೊಟ್ಟಿಗೆ ಹೇಗೆ ಬಳಸಬೇಕೆಂಬುದರ ಅರಿವೂ ಇರಬೇಕು. ನಾವು ಮಾತ್ರ ಬೆಳೆಯುತ್ತ ಹೋದರೆ ಸಾಲದು. ನಮ್ಮೊಂದಿಗೆ ಇತರರನ್ನೂ ಬೆಳೆಸಬೇಕು . ನಾವು ಹಣ ಗಳಿಸಲು ಅವಕಾಶವನ್ನಿತ್ತ ಸಮಾಜವನ್ನು ಮರೆಯಬಾರದು. ನಮಗೆ ನೀರನ್ನಿತ್ತ ಕೆರೆಗೆ ನಾವೂ ಒಂದಷ್ಟು ನೀರು ಚೆಲ್ಲಬೇಕಲ್ಲವೇ ?

ದಯವಿಟ್ಟು ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಬುಧವಾರ, ನವೆಂಬರ್ 10, 2010

ಬೇಸರದ ಬದುಕನ್ನು ರಸಮಯ ಗೊಳಿಸಿ ಕೊಳ್ಳಬಹುದು _ಎ.ಟಿ .ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಬ್ಬ ಸ್ವಾಮಿಜೀಯವರನ್ನು ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದ ಒಬ್ಬ ಸಜ್ಜನರು ಬೆಳಗ್ಗೆಯೇ ಭೇಟಿಯಾಗಿ "ಅದೇ ಬ್ಯಾಂಕು , ಚೆಕ್ ಗಳು, ಲೆಡ್ಜರ್ ಗಳು. ಗ್ರಾಹಕರು. ಲೋಕಲ್ ಟ್ರೈನು, ಅದೇ ಪ್ಲಾಟ್ , ಅದೇ ಸಂಸಾರ ಎಲ್ಲವೂ ಏಕತಾನವೆನಿಸುತ್ತಿದೆ ಏನು ಮಾಡಲಿ ?.ಎಂದರು. ಸ್ವಾಮೀಜಿಯವರು "ಹೌದಾ? ನೀವು ಬಂದದ್ದು ಒಳ್ಳೆಯದಾಯಿತು. ಹಿಮಾಲಯದಲ್ಲಿ ಪ್ರಾರಂಭವಾಗುತ್ತಿರುವ ಆಶ್ರಮವನ್ನು ನೋಡಿಕೊಳ್ಳಲು ನಿಮ್ಮಂಥವರ ಅವಶ್ಯಕತೆಯಿದೆ. ನೀವು ನಾಳೆ ಸಂಜೆ ಯಾರಿಗೂ ಹೇಳದೆ ಬಂದುಬಿಡಿ ನಿಮ್ಮ ಟಿಕೆಟ್ ಸಿದ್ಧವಾಗಿರುತ್ತದೆ. ಹಿಮಾಲಯದಲ್ಲಿ ಹೊಸಜೀವನ ನಿಮಗಾಗಿ ಕಾದಿರುತ್ತದೆ !. ಆದರೆ ಇಂದು ಮತ್ತು ನಾಳೆ ನಿಮ್ಮ ಆಫೀಸಿನಲ್ಲಿ, ಮನೆಯಲ್ಲಿ ನಿಮ್ಮ ಕೊನೆಯ ದಿನಗಳು ಎಂಬುದು ನೆನಪಿರಲಿ. ಎಲ್ಲರಿಗೂ ವಿದಾಯ ಹೇಳಿಬನ್ನಿ. ಕೊನೆಯ ಮಾತುಗಳು. ಪ್ರೀತಿ-ವಿಶ್ವಾಸ, ಕೃತಜ್ಞತೆಯ ಮಾತುಗಳು ಹೇಳುವುದಿದ್ದರೆ ನೇರವಾಗಿ ಹೇಳಬೇಡಿ . ಪರೋಕ್ಷವಾಗಿ ಹೇಳಿಬಿಡಿ. ಇವು ನಿಮ್ಮ ಕೊನೆಯ ಎರಡು ದಿನಗಳೆಂದು ಅವರಿಗೆ ಗೊತ್ತಾಗಬಾರದು" ಎಂದು ಹೇಳಿದರು. ಸಜ್ಜನರ ಮುಖ ಉತ್ಸಾಹದಿಂದ ಅರಳಿತು. ನಾಳೆ ಸಂಜೆ ಬರುತ್ತೇನೆ ಎಂದು ಹೇಳಿ ಹೋದರು.

ಅದರಂತೆ ಮರುದಿನ ಸಂಜೆ ಬಂದರು. ಆದರೆ ಮುಖದಲ್ಲಿ ನಗುವಿರಲಿಲ್ಲ. ಉತ್ಸಾಹವಿರಲಿಲ್ಲ. ಸ್ವಾಮೀಜಿಯವರು ಏನಾಯಿತೆಂದು ಕೇಳಿದಾಗ ಅವರು ಹೇಳಿದ್ದು "ನಾನು ಇನ್ನೇನು ಕೊನೆಯ ಎರಡು ದಿನಗಳೆಂದು ಆಫೀಸಿಗೆ ಹೋದೆ. ಯಾವಾಗಲೂ ಸಿಡುಕುವ ಮ್ಯಾನೇಜರ್ ಬಳಿ ಹೋಗಿ ನೀವು ಒಳ್ಳೆಯ ಬಾಸ್ , ನಿಮ್ಮಿಂದಾಗಿ ನಾನು ಕೆಲಸ ಕಲಿತೆ. ನಿಮಗೆ ಥ್ಯಾಂಕ್ಸ್ ಎಂದೆ. ಮೊದಲು ಅವರು ನನ್ನನ್ನು ವಿಚಿತ್ರವೆಂಬಂತೆ ನೋಡಿದರು. ನಿಧಾನವಾಗಿ ನಗೆ ಸೂಸಿದರು. ಕೂರಿಸಿದರು. ಚೆನ್ನಾಗಿ ಮಾತನಾಡಿಸಿದರು. ಕಾಫಿ ಕುಡಿಸಿ ಕಳುಹಿಸಿದರು. ನನ್ನ ಪ್ರಮೊಷನ್ನಿಗೆ ಶಿಫಾರಸು ಮಾಡುತ್ತೇನೆ ಎಂದರು. ಯಾವಾಗಲೂ ತಲೆನೋವಿನ ಒಬ್ಬ ಗ್ರಾಹಕನಿಗೆ ನಿನ್ನೆ ಒಳ್ಳೆಯ ಸೇವೆ ಕೊಟ್ಟೆ. ನಿಮ್ಮಂತಹ ದೊಡ್ಡ ಗ್ರಾಹಕರಿಂದ ನಮ್ಮ ಬ್ಯಾಂಕ್ ಬೆಳೆಯುತ್ತಿದೆ ಎಂದೆ. ಸಂಜೆ ಆತ ಅವರ ಕಂಪನಿಯ ಕ್ಯಾಲೆಂಡರ್ ಗಳನ್ನೂ ಸಿಹಿತಿಂಡಿಯ ಡಬ್ಬಗಳನ್ನು ಕಳುಹಿಸಿಕೊಟ್ಟರು. ನಾನು ಅದನ್ನು ನನ್ನ ಸಹೋದ್ಯೋಗಿಗಳಿಗೆ ಹಂಚಿದೆ. ಅವರೆಲ್ಲ ಥ್ಯಾಂಕ್ಸ್ ಹೇಳಿ ತೋರಿಸಿದ ವಿಶ್ವಾಸ ಕಂಡು ನನಗೆ ಆಶ್ಚರ್ಯವಾಯಿತು . ಸಂತೋಷವಾಯಿತು.

ನಗುನಗುತ್ತ ನಿನ್ನೆ ಸಂಜೆ ಮನೆಗೆ ಹೋಗುವಾಗ ನನ್ನ ಹೆಂಡತಿಗೆ ಮೈಸೂರುಪಾಕ್ , ಮಲ್ಲಿಗೆ ಹೂವು ಕಟ್ಟಿಸಿಕೊಂಡು ಹೋದೆ. ಆಕೆಗೆ ಖುಷಿಯೋ ಖುಷಿ , ಆಕೆ ನನಗಿಷ್ಟವಾದ ಅಡುಗೆ ಮಾಡಿದಳು. ಬೆಳಗ್ಗೆ ರುಚಿ ರುಚಿಯಾದ ತಿಂಡಿಯಿತ್ತು. ಸಾಯಂಕಾಲ ಬೇಗ ಬನ್ನಿ ಸಿನಿಮಾಕ್ಕೆ ಹೋಗೋಣ ಎಂದಳು. ನನಗೂ ಏಕಾಗಬಾರದೆನಿಸಿತು . ಈವತ್ತು ಮನೆ , ಆಫೀಸು ಎಲ್ಲ ಹೊಸದರಂತೆ ಕಾಣುತ್ತಿವೆ. ಈಗಿನದನ್ನೆಲ್ಲ ಬಿಟ್ಟು ಹಿಮಾಲಯಕ್ಕೆ ಹೇಗೆ ಹೋಗಲಿ ?. ಆದರೆ ನಿಮಗೆ ಮಾತು ಕೊಟ್ಟಿದ್ದೇನೆ. ಏನು ಮಾಡುವುದೋ ತೋಚುತ್ತಿಲ್ಲ. ಎಂದು ನಿಟ್ಟುಸಿರು ಬಿಟ್ಟರು. ಸ್ವಾಮೀಜಿಯವರು ಜೋರಾಗಿ ನಕ್ಕು " ಹಿಮಾಲಯವೂ ಇಲ್ಲ ! ಆಶ್ರಮವೂ ಇಲ್ಲ ! ನಾನು ನಿಮಗೆ ಸುಮ್ಮನೆ ಹೇಳಿದ್ದೆ. ನೀವು ಸ್ವಲ್ಪ ನಗೆ , ಒಂದೆರಡು ಒಳ್ಳೆಯ ಮಾತು. ಒಂದಿಷ್ಟು ಪ್ರೀತಿ ವಿಶ್ವಾಸಗಳನ್ನು ತುಂಬಿದ್ದರಿಂದ ಮನೆ ಬ್ಯಾಂಕು ಎಲ್ಲ ಹೊಸದರಂತಾಗಿವೆ, ಆನಂದವನ್ನಿಯುತ್ತಿವೆ. ಇದನ್ನು ಹೀಗೆಯೇ ಮುಂದುವರಿಸಿ. ಎಂದೂ ಬದುಕು ಬೇಸರವೆನಿಸುವುದಿಲ್ಲ .

ಬೇಸರದ ಬದುಕನ್ನು ರಸಮಯಗೊಳಿಸುವ ಸರಳ ಉಪಾಯಗಳು ಆ ಸಜ್ಜನರಿಗೆ ಗೊತ್ತಾದಂತೆ ನಿಮಗೂ ಗೊತ್ತಿದ್ದರೆ ಬರೆದು ತಿಳಿಸುತ್ತಿರಿ ತಾನೇ?

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಭಾನುವಾರ, ನವೆಂಬರ್ 7, 2010

ಹಣದ ಶ್ರೀಮಂತಿಕೆಯೊಂದಿಗೆ ಮುಗ್ಧನಂಬಿಕೆ ,ಹೃದಯ ಶ್ರೀಮಂತಿಕೆ ಸೇರಿದರೆ ಪವಾಡ ನಡೆಯುತ್ತದೆ _ಎ.ಟಿ. ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದು ಬಡ ಸಂಸಾರ. ಅಪ್ಪ ,ಅಮ್ಮ ಮತ್ತು ಆರು ಜನ ಹೆಣ್ಣುಮಕ್ಕಳು. ಕೂಲಿ ಕೆಲಸ. ಸಣ್ಣ ಗುಡಿಸಿಲಿನಲ್ಲಿ ವಾಸ. ಕೂಲಿಯಿಲ್ಲದ ದಿನ ಎಲ್ಲರೂ ಉಪವಾಸ. ಐದು ವರ್ಷದ ಅಮ್ಮಿ ಕೊನೆಯ ಹೆಣ್ಣುಮಗಳು ತುಂಬಾ ಚೂಟಿ. ಒಂದು ರಾತ್ರಿ ಅಪ್ಪ ಅಮ್ಮನ ಮಾತು ಕೇಳಿಸಿತು. ಅಮ್ಮ "ನಾಳೆಯೋ ನಾಳಿದ್ದೋ ನನಗೆ ಹೆರಿಗೆಯಾಗುತ್ತೆ . ಇದಾದರೂ ಗಂಡು ಮಗುವಾದರೆ, ಆಪರೇಶನ್ ಮಾಡಿಸಿಕೊಂಡು ಬಿಡಬೇಕು. ಹೆಣ್ಣಾದರೆ ಬಟ್ಟೆ ಬರೆಗೆ ಯೋಚನೆಯಿಲ್ಲ ಹಳೆ ಬಟ್ಟೆಗಳಿವೆ. ಗಂಡಾದರೆ ನಮ್ಮ ಹತ್ತಿರ ಗಂಡು ಮಕ್ಕಳ ಬಟ್ಟೆಗಳಿಲ್ಲ. ಗಂಡುಮಗುವಿಗೆ ಇನ್ನೂ ಏನೇನು ಬೇಕೋ ? ನಮ್ಮ ಹತ್ತಿರ ಏನೂ ಇಲ್ಲ " ಎಂದಾಗ , ಅಪ್ಪ "ಚಿಂತೆ ಮಾಡಬೇಡ, ಗುಡ್ಡದ ಹನುಮಂತ ರಾಯನ್ನ ಕೇಳಿಕೊಳ್ಳೋಣ "ಎಂದರು. ಇದೆಲ್ಲವನ್ನು ಕೇಳಿಸಿಕೊಂಡ ಅಮ್ಮಿ ಮುಂಜಾನೆಯೇ ಎದ್ದಳು . ಊರಿನ ಹತ್ತಿರವೇ ಒಂದು ಗುಡ್ಡ. ಅದರ ಮೇಲೊಂದು ಕಲ್ಲಿನ ಮಂಟಪ . ಅದರೊಳಗೆ ಹನುಮಂತನ ಚಿತ್ರ ಬರೆದಿದ್ದ ಒಂದು ಕಲ್ಲು ಚಪ್ಪಡಿ, ಜನ ಅದನ್ನೇ ಶ್ರದ್ಧೆಯಿಂದ ಪೂಜಿಸುತ್ತಿದ್ದರು.
ಅಮ್ಮಿ ಬಡಬಡನೆ ಗುಡ್ಡ ಏರಿದಳು . ಅಷ್ಟು ಹೊತ್ತಿನಲ್ಲಿ ಅಲ್ಲಿ ಯಾರೂ ಕಾಣಲಿಲ್ಲ. ಆಕೆ ದೇವರ ಮುಂದೆ ಹೋಗಿ ಕೈಮುಗಿದು , ಕಣ್ಣು ಮುಚ್ಚಿಕೊಂಡು " ಹನುಮಂತಪ್ಪ ! ನಾಳೆ ನಾಳಿದ್ದರಲ್ಲಿ ನಮ್ಮನೆಗೆ ಒಂದು ಗಂಡು ಮಗು ಬರುತ್ತಂತೆ . ಅದಕ್ಕೆ ಒಳ್ಳೆ ಬಟ್ಟೆಗಳೂ, ಏನೇನೋ ಬೇಕಂತೆ . ಅವ್ಯಾವೂ ನಮ್ಮನೆಯಲ್ಲಿ ಇಲ್ಲವಂತೆ . ನಿನ್ನನ್ನು ಕೇಳಿ ಕೊಳ್ಳ ಬೇಕು ಅಂತ ನಮ್ಮಪ್ಪ ಹೇಳಿದ್ದರು. ನಮ್ಮ ಗುಡಿಸಲು ಗುಡ್ಡದ ಪಕ್ಕದಲ್ಲಿದೆ. ನಮ್ಮಪ್ಪನ ಹೆಸರು ಕೊಲಿಯಪ್ಪ . ದಯವಿಟ್ಟು ಬೇಗ ಕಳುಹಿಸಿ ಕೊಡು .ಎಂದು ಪ್ರಾರ್ಥಿಸಿ ಕೆಳಗಿಳಿದು ಬಂದಳು. ಅಮ್ಮಿ ದಿನವೆಲ್ಲ ಗುಡಿಸಿಲಿನಲ್ಲಿ ಕುಳಿತ್ತಿದ್ದಳು. ರಸ್ತೆಯ ಕಡೆಯೇ ಗಮನ. ಮಧ್ಯಾಹ್ನವಾಯಿತು , ಸಾಯಂಕಾಲವೂ ಆಯಿತು. ಏನೂ ಆಗಲಿಲ್ಲ. ಅಮ್ಮಿಗೆ ನಿರಾಸೆ. ನಮ್ಮ ಗುಡಿಸಲು ಗುಡ್ದದಪ್ಪನಿಗೆ ಗೊತ್ತಾಗಲಿಲ್ಲವೇನೋ ಎಂದು ಚಿಂತಿಸುತ್ತಿದ್ದಳು. ಅಷ್ಟರಲ್ಲಿ ಯಾರೋ ಬಂದು ಕೂಲಿಯಪ್ಪನನ್ನು ಕರೆದು "ನಿಮಗೆ ಯಾರೋ ಹನುಮಂತಪ್ಪ ಅನ್ನೋರು ಪಾರ್ಸೆಲ್ ಕಳುಹಿಸಿದ್ದಾರೆ.ತಗೊಳ್ಳಿ " ಎಂದರು . ಕೂಲಿಯಪ್ಪ "ಯಾರೋ ಪಾರ್ಸಲ್ ಕಳಿಸುವಷ್ಟು ದೊಡ್ಡೋರು ನಾವಲ್ಲ. ಯಾವ ಹನುಮಂತರಾಯರೂ ನಮಗೆ ಗೊತ್ತಿಲ್ಲ. ನಮಗಿದು ಬೇಡ" ಎಂದಾಗ ಅಮ್ಮಿ ಓಡಿಬಂದು "ನೀವದನ್ನು ಈಸ್ಕೊಳ್ಳಿ " ಎಂದು ದುಂಬಾಲು ಬಿದ್ದಳು. ಕೂಲಿಯಪ್ಪ ಅಮ್ಮಿಯತ್ತ ವಿಚಿತ್ರವಾಗಿ ನೋಡಿ ಪಾರ್ಸೆಲ್ ಪಡೆದುಕೊಂಡ. ಒಡೆದು ನೋಡಿದ. ಒಳಗೆ ಗಂಡುಮಗುವಿನ ಬಟ್ಟೆಗಳು. ಟೋಪಿ, ಕಾಲ್ಚೀಲಗಳು , ಮಕ್ಕಳ ಪೌಡರ್ ಮುಂತಾದವೆಲ್ಲ ಇದ್ದವು.

ಮನೆಯವರೆಲ್ಲರೂ ಇದನ್ನು ಕಳಿಸಿದವರು ಯಾರಂತ ಗೊತ್ತಾಗಲಿಲ್ಲವೆಂದು ಮಾತನಾಡಿ ಕೊಳ್ಳುತ್ತಿದ್ದಾಗ , ಅಮ್ಮಿ ಮಾತನಾಡಲಿಲ್ಲ, ಏಕೆಂದರೆ ಕಳುಹಿಸಿದವರು ಯಾರೆಂದು ಅವಳಿಗೆ ಮಾತ್ರ ಗೊತ್ತಿತ್ತು. ಆದರೆ ನಿಜವಾಗಿ ಕಳಿಸಿದವರು ಅಮ್ಮಿ ಅಂದು ಕೊಂಡವರಲ್ಲ!. ಅಮ್ಮಿ ಹನುಮಂತನ ಮುನೇ ಕಣ್ಮುಚ್ಚಿ ಬೇಡಿಕೊಳ್ಳುತ್ತಿದ್ದಾಗ ಅಲ್ಲಿಗೆ ಶ್ರೀಮಂತರೊಬ್ಬರು ಬೆಳಗಿನ ವಾಯುಸಂಚಾರಕ್ಕೆಂದು ಬಂದಿದ್ದರು. ಎಲ್ಲವನ್ನೂ ಕೇಳಿಸಿ ಕೊಂಡಿದ್ದರು. ಅಮ್ಮಿ ಅವರನ್ನು ಗಮನಿಸಿರಲಿಲ್ಲ. ಅವರು ಆಕೆಯ ಮುಗ್ಧ ನಂಬಿಕೆಯನ್ನು ಕಂಡು ಮಗುವಿನ ನಂಬಿಕೆ ಸುಳ್ಳಾಗಬಾರದೆಂದು ಪಾರ್ಸೆಲ್ ಅನ್ನು ಹನುಮಂತರಾಯನ ಹೆಸರಿನಲ್ಲಿ ಕಳಿಸಿದ್ದರು!. ಅವರಿಗೆ ಹಣದ ಶ್ರೀಮಂತಿಕೆಯೊಂದಿಗೆ ಹೃದಯ ಶ್ರೀಮಂತಿಕೆಯೂ ಇತ್ತು !. ಬದುಕಿನಲ್ಲಿ ನಮಗೆ "ಮುಗ್ಧ ನಂಬಿಕೆ "ಇರಬೇಕು ! ಅಥವಾ "ಹೃದಯ ಶ್ರೀಮಂತಿಕೆ " ಇರಬೇಕು!. ದೇವರು ಇವೆರಡನ್ನೂ ಒಂದು ಕಡೆ ಸೇರಿಸಬೇಕು ! ಆಗ ಪವಾಡ ನಡೆಯಲೇಬೇಕು !

ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನು ಬರೆದು ಕಳುಹಿಸಿ

http://sunnaturalflash.trafficformula2.com/

http://sunnaturalflash.trafficformula2.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಗುರುವಾರ, ನವೆಂಬರ್ 4, 2010

ಎಲ್ಲರೂ ಸೋತರು ! ಆದರೆ ಎಲ್ಲರೂ ಗೆದ್ದರು !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಪ್ರೆಂಡ್ಸ್ ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ ಇವತ್ತು ಎಲ್ಲರೂ ಸೋತರು .ಆದರೆ ಎಲ್ಲರೂ ಗೆದ್ದರು ಎನ್ನುವ ವಿಷಯದ ಬಗ್ಗೆ ಲೇಖನ ಬರೆಯುತ್ತಿದ್ದೇನೆ .

ನೀವೆಲ್ಲರೂ ವಿಚಿತ್ರ ಎನಿಸುವ ಈ ಪ್ರಮಾಣ ವಚನವನ್ನು ಮತ್ತು ಒಂದು ಹೃದಯಸ್ಪರ್ಶಿ ಪ್ರಸಂಗವನ್ನು ಕೇಳಲೇಬೇಕು . ಮೊದಲು ವಿಚಿತ್ರ ಪ್ರಮಾಣ ವಚನ; "ನಾನು ಗೆಲ್ಲಲು ಬಿಡಿ. ನಾನು ಗೆಲ್ಲಲಾಗದಿದ್ದರೆ, ನನ್ನ ಪ್ರಯತ್ನದಲ್ಲಿ ನಾನು ಧೈರ್ಯವಾಗಿರಲು ಬಿಡಿ !" ಈ ಪ್ರಮಾಣ ವಚನವನ್ನು ವಿಶೇಷ ಒಲಿಂಪಿಕ್ಸ್ ಕ್ರೀಡಾ ಸ್ಪರ್ಧೆಗಳಲ್ಲಿ ಹೇಳಿಕೊಡಲಾಗುತ್ತದೆ.

ನಾವೆಲ್ಲಾ ಒಲಿಂಪಿಕ್ಸ್ ಕ್ರೀಡಾ ಸ್ಪರ್ಧೆಗಳ ಬಗ್ಗೆ ಕೇಳಿದ್ದೇವೆ. ಆದರೆ ವಿಶೇಷ ಒಲಿಂಪಿಕ್ಸ್ ಸ್ಪರ್ಧೆಗಳ ಬಗ್ಗೆ ಬಹಳಷ್ಟು ಜನ ಕೇಳಿರಲಿಕ್ಕಿಲ್ಲ . ಭೌದ್ಧಿಕ ವಿಕಲಚೆತನರಿಗಾಗಿಯೇ ಸ್ಥಾಪಿತವಾಗಿರುವ ಈ ಸ್ಪರ್ಧೆಗಳ ಉದ್ದೇಶವೂ ಉದಾತ್ತವಾದದ್ದೇ ! "ಭೌದ್ಧಿಕ ವಿಕಲಚೇತನ ಜನರು ಆತ್ಮವಿಶ್ವಾಸವನ್ನು ವಿಶೇಷ ಕೌಶಲ್ಯವನ್ನು ಮತ್ತು ವೈಯಕ್ತಿಕ ಸಾಧನೆಯ ಪ್ರಜ್ಞೆಯನ್ನು ತರಬೇತಿ ಮತ್ತು ಸ್ಪರ್ಧೆಗಳ ಮೂಲಕ ಬೆಳೆಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ " ಇದನ್ನು ಸ್ಥಾಪಿಸಲಾಗಿದೆ.

ಸುಮಾರು ಒಂದು ನೂರ ಎಪ್ಪತ್ತೈದು ದೇಶಗಳ ಎರಡು ಕೋಟಿ ಜನರು ಇದರಲ್ಲಿ ಭಾಗವಹಿಸುತ್ತಾರೆ . ಇವು ಕೂಡ ನಾಲ್ಕು ವರ್ಷಗಳಿಗೊಮ್ಮೆ ನಡೆಸಲ್ಪಡುತ್ತವೆ. ಆದರೆ ಬೇಸಿಗೆ ಕಾಲದ ಸ್ಪರ್ಧೆಗಳು ಮತ್ತು ಚಳಿಗಾಲದ ಸ್ಪರ್ಧೆಗಳು ಎಂಬ ಎರಡು ವಿಭಾಗಗಳಲ್ಲಿ ಇವನ್ನು ನಡೆಸಲಾಗುತ್ತದೆ.
ಸಿಯಾಟೆಲ್ ನಲ್ಲಿ ವಿಶೇಷ ಒಲಿಂಪಿಕ್ಸ್ ನ ಒಂದು ನೂರು ಮೀಟರ್ ಓಟದ ಸ್ಪರ್ಧೆ ನಡೆಯುತ್ತಿತ್ತು. ಒಂಬತ್ತು ಭೌದ್ಧಿಕ ವಿಕಲಚೇತನ ಮಕ್ಕಳು ಸಿದ್ಧವಾಗಿ ನಿಂತಿದ್ದರು. "ಹೊರಡಿ" ಎಂದು ಸೂಚಿಸುವ ಶಬ್ದ ಬಂದ ತಕ್ಷಣ ಎಲ್ಲರೂ ಓಡಲು ಮೊದಲು ಮಾಡಿದರು. ಓಡಿ ಗುರಿ ಮುಟ್ಟಬೇಕೆಂಬ, ಗೆಲ್ಲಬೇಕೆಂಬ ಉತ್ಸಾಹವಿತ್ತು. ಆದರೆ ಅಂತಹ ರಭಸ ಏನೂ ಇರಲಿಲ್ಲ. ಎಲ್ಲರೂ ಆರಾಮವಾಗಿಯೇ ಓಡುತ್ತಿದ್ದರು. ಸ್ವಲ್ಪ ದೂರ ಓಡುವಷ್ಟರಲ್ಲಿ ಒಬ್ಬ ಪುಟ್ಟ ಹುಡುಗ ಎಡವಿ ಬಿದ್ದುಬಿಟ್ಟ. ಒಂದೆರಡು ಉರುಳು ಉರುಳಿದ. ನೋವೋ ನಿರಾಸೆಯೋ ಜೋರಾಗಿ ಅಳಲು ಪ್ರಾರಂಭಿಸಿದ. ಈ ಅಳುವಿನ ಶಬ್ದ ಕೇಳಿ ಮುಂದೆ ಹೋಗಿದ್ದ ಎಂಟೂ ಜನ ಓಟಗಾರರು ಓಟ ನಿಲ್ಲಿಸಿದರು. ಅವನತ್ತ ನೋಡಿದರು. ಹಿಂತಿರುಗಿ ಬಂದರು. ಬಿದ್ದಿದ್ದವನ ಸುತ್ತಲೂ ನಿತರು. ಏನಾಯಿತು ಎಂದು ಕೇಳಿದರು. ಆಟ ಅಳುತ್ತಳುತ್ತಲೇ ತಾನು ಎಡವಿ ಬಿದ್ದದ್ದನ್ನೂ ತನಗೆ ಪೆಟ್ಟು ತಗುಲಿದ ಕಾಲಿನ ಭಾಗವನ್ನೂ ತೋರಿಸಿದ. ಎಲ್ಲ ಓಟಗಾರರೂ ಬಗ್ಗಿ ಆ ಕಾಲನ್ನು ಸವರಿದರು. ಒಂದಿಬ್ಬರು ಅಲ್ಲಿಗೆ ಮುತ್ತಿಟ್ಟು ಬೇಗ ವಾಸಿಯಾಗುತ್ತದೆ. ಚಿಂತಿಸಬೇಡ ಏನಾದರು. ಎಲ್ಲರು ಅವನನ್ನು ಹಿಡಿದು ಎಬ್ಬಿಸಿದರು.

ಇದೆಲ್ಲವನ್ನೂ ಗ್ಯಾಲರಿಯಲ್ಲಿ ಕುಳಿತಿದ್ದ ಸಾವಿರಾರು ಜನ ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ಓಟಗಾರರೆಲ್ಲ ಪರಸ್ಪರ ಕೈ ಹಿಡಿದುಕೊಂಡು ಸ್ಪರ್ಧೆಯ ಗುರಿಯತ್ತ ನಿಧಾನವಾಗಿ ನಡೆದು ಬಂದರು. ಗುರಿಯನ್ನು ಒಟ್ಟಾಗಿ ಮುಟ್ಟಿ ಗ್ಯಾಲರಿಯ ಕಡೆ ಕೈ ಬೀಸಿ ನಕ್ಕರು. ಗ್ಯಾಲರಿಯಲ್ಲಿದ್ದ ಜನ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದರು. ಬಹಳ ಸಮಯದವರೆಗೆ ಚಪ್ಪಾಳೆ ತಟ್ಟುತ್ತಲೇ ಇದ್ದರು. ಏಕೆಂದರೆ ಆ ಓಟ ಸ್ಪರ್ಧೆಯಲ್ಲಿ ಯಾರೋ ಒಬ್ಬರು ಗೆದ್ದಿರಲಿಲ್ಲ. ಎಲ್ಲರೂ ಸೋತಿದ್ದರು. ಆದರೆ ಎಲ್ಲರೂ ಗೆದ್ದಿದ್ದರು.! ಆ ಭೌದ್ಧಿಕ ವಿಕಲಚೇತನರ ಹೃದಯವಂತಿಕೆ ಗೆದ್ದಿತ್ತು. ಅಂದು ಒಲಿಂಪಿಕ್ಸ್ ಪಾಳೆಯದಲ್ಲಿ ಇದರದ್ದೇ ಮಾತು !. ಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ಇದರದ್ದೇ ಸುದ್ಧಿ !

ಬದುಕಿನಲ್ಲಿ ನಾವು ಗೆಲ್ಲುವುದೇ ಮುಖ್ಯವಲ್ಲ ! ನಮ್ಮೊಂದಿಗೆ ಓಡಲಾಗದೆ ಬಿದ್ದವರನ್ನು ಮೇಲಕ್ಕೆತ್ತುವುದು . ಅವರ ನೋವನ್ನು ನಾವೂ ಹಂಚಿಕೊಂಡು ಸಾಂತ್ವನ ಹೇಳುವುದು ಮುಖ್ಯ !

http://sunnaturalflash.trafficformula2.com/

http://sunnaturalflash.trafficformula2.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಬುಧವಾರ, ನವೆಂಬರ್ 3, 2010

ಒಂದು ಹೂವಿನ ಕಥೆ _ಎ.ಟಿ.ನಾಗರಾಜ ಮತ್ತು ಎ.ಟಿ.ನಾಗರತ್ನ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಹಲೋ ಪ್ರೆಂಡ್ಸ್ ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು . ಯಾರಿಗೂ ಏನೂ ತೊಂದರೆ ಕೊಡದೆ ನೀವೂ ತೊಂದರೆ ತೆಗೆದುಕೊಳ್ಳದೆ ಪಟಾಕಿ ಹಚ್ಚಿ.

ಇವತ್ತಿನ ವಿಷಯ "ಒಂದು ಹೂವಿನ ಕಥೆ " ನನ್ನ ಸಹೋದರಿಯೋಬ್ಬರು ಬಹಳ ದಿನದಿಂದ ತುಂಬಾ ನನಗೆ ಈ ವಿಷಯದ ಬಗ್ಗೆ ಚರ್ಚಿಸುತ್ತಿದ್ದರು. ಹಾಗೂ ಬರೆಯಲು ಪ್ರೇರೇಪಿಸುತ್ತಿದ್ದರು. ಎಲ್ಲರೂ ಹೆಚ್ಚು ಕಡಿಮೆ ಗ್ರಾಮೀಣ ಪ್ರದೇಶದಿಂದ ಬಂದವರೇ ಅಲ್ಲವೇ ? ಎಲ್ಲರಿಗೂ ಅಲ್ಲಿನ ವಾತಾವರಣ ತುಂಬಾ ಇಷ್ಟವಲ್ಲವೇ.? ಎಕರೆ ಘಟ್ಟಲೆ ಗದ್ದೆ-ಹೊಲ. ಹರಿಯುವ ನದಿ. ಕಾಣುವ ಬೆಟ್ಟ -ಗುಡ್ಡ. ಕಣ್ಮನ ಸೆಳೆಯುವ ಕಾಡು . ಓಹ್! ಕಾಡು ಕೋಳಿ, ಗಿಳಿ, ನವಿಲು ,ನರಿ ಗಳ ಕೂಗು ಒಂದೇ ಎರಡೇ . ಇವೆಲ್ಲದರ ಜತೆಗೆ ಇರುವುದು ಒಂದು ರೀತಿಯ ಸಂತಸ ಇಂದಿನ ನಮ್ಮ ನರಕದ ನಾಗರಿಕ ಜೀವನ ಏನೂ ಅಲ್ಲ ಅನ್ನಿಸುವುದಿಲ್ಲವೇ.

ಮನೆಯ ಮುಂದಿನ ತೋಟದಲ್ಲಿ ಬಾಳೆ, ಅಡಿಕೆ , ಹೂ ಬಳ್ಳಿಗಳ ,ಹೂವಿನ ವಾಸನೆ, ಅದು ಸೇವಂತಿ ಕೆಯದೋ , ಮಲ್ಲಿಗೆಯದೋ ,ಕನಕಾಂಬರ ,ಗುಲಾಬಿ ,ಸುಗಂಧರಾಜ ಇತ್ಯಾಧಿ ವಾಸನೆ. ಆದರೂ ಆ ಗಿಡದಲ್ಲಿ ಬಿಟ್ಟ ಹೂವಿಗೂ ಒಂದು ಉದ್ದೇಶ ಇರಬೇಕು ಅಲ್ಲವೇ.? ಒಂದು ಆ ಹೂವು ಆ ಗಿಡದಲ್ಲಿಯೇ ಮೊಗ್ಗಾಗಿ, ಹೊವಾಗಿ ಎಲ್ಲರಿಗೂ ಕಣ್ಣಿಗೆ ಕಂಡು, ವಾಸನೆ ಕೊಟ್ಟು ಕಾಲ ಚಕ್ರದಲ್ಲಿ ಬಾಡಿ . ಎಲೆಗಳು ಉದುರಿ . ಗಿಡದ ಬುಡದಲ್ಲಿ ಒಣಗಿ .ಕೊಳೆತು ,ಗೊಬ್ಬರವಾಗಿ . ಕೊನೆಗೂ ಆಯುಷ್ಯವಿದ್ದರೆ ಒಂದು ಬೀಜವಾಗಿ .ಮತ್ತೊಂದು ಗಿಡದ ಉತ್ಪತ್ತಿಗೆ ಕಾರಣವಾಗಿ ಬಿಡುವುದು ಒಂದು ರೀತಿಯಾದರೆ.

ಸುಂದರವಾದ ಹಾವು ಹೆಂಗಳೆಯರ ತಲೆಗೇರಿದರೆ , ದೇವರ ಮುಡಿಗೆರಗಿದರೆ ಹೂವಿನ ಆಸೆ ತೀರಿತೆಂದೇ ಅರ್ಥ. ಆದರೆ ಪ್ರಕೃತಿ ಯಲ್ಲಿ ಇರುವ ಪ್ರತಿಯೊಂದು ಜೀವಿಗೂ ಒಂದು ಉದ್ದೇಶ ಇದ್ದೆ ಇರುತ್ತದೆ. ಹಾಗೆಯೇ ಒಬ್ಬ ಮನುಷ್ಯನ ಜೀವನದಲ್ಲಿ ಆತನ ಉದ್ದೇಶವೇನು?. ಓದುವುದು.ಕೆಲಸಕ್ಕೆ ಸೇರುವುದು. ಮದುವೆಯಾಗುವುದು. ಮನೆ-ಕಾರು ಖರೀದಿಸುವುದು.ಹೀಗೆ ಸಾಗಿದರೆ ಆಯಿತಾ ?
ನಾವು ಪಡೆದುಕೊಂಡ , ನಮಗೆ ಸಹಾಯ ಮಾಡಿದ ಸಮಾಜಕ್ಕೆ ತಿರುಗಿ ಸಹಾಯ ಮಾಡಬೇಕೆ ?ಬೇಡವೇ ? ನಮಗೆ ಕೊಡಲಿ ಏಟು ಕೊಟ್ಟ ಜನರಿಗೆ ತಿರುಗಿ ಅವರ ಬಾಯಿಗೆ ಸಕ್ಕರೆ ಹಾಕ ಬೇಕೇ ?ಬೇಡವೇ ?.

ನಾವುಗಳು ಮಾತೃ ಭೂಮಿಯಲ್ಲಿ ಹುಟ್ಟಿ, ಮಾತೃ ಭಾಷೆಯನ್ನೂ ಕಲಿತು. ದೊಡ್ಡವರಾಗಿ ಬೇರೆ ಯಾವುದೊ ಪ್ರತಿಷ್ಟಿತ ಭಾಷೆಯನ್ನೂ ಕಲಿತು , ಪ್ರತಿಷ್ಟಿತ ದೇಶವೊಂದರಲ್ಲಿ, ಡಾಕ್ಟರೋ, ಇಂಜಿನೀಯರ್ ಅಥವಾ ಬಿಸಿನೆಸ್ ಮಾಡಿಯೋ ಪ್ರತಿಷ್ಟಿತ ವ್ಯಕ್ತಿಗಳಾಗಿ ಗಿಡದಲ್ಲಿ ಬಾಡಿ ಗೊಬ್ಬರವಾಗಿ ಹೋದ ಹೂವಿನ ರೀತಿ ಆಗಬೇಕೆ.? ಖಂಡಿತ ಆ ರೀತಿಯ ಜೀವನ ಬೇಡ. ನಾವೂ ಯಾವ ಹಂತದಿಂದ ಮೇಲೆ ಬಂದಿದ್ದೇವೆಯೋ ಆ ಹಂತದಲ್ಲಿ ಈಗ ಯಾರಿದ್ದಾರೋ ಅವರ ಬದುಕನ್ನು ಸುಧಾರಿಸಲು ನಾವು ಶ್ರಮಿಸಬೇಕು. ಅಂದರೆ ನಾವು ಈಗ ಏನೂ ಕಲಿತಿದ್ದೆವೆಯೋ ಅದನ್ನು ನಮ್ಮ ಕೆಳಗಿರುವ . ಜ್ನಾನವಿಲ್ಲದಿರುವ ವ್ಯಕ್ತಿಗಳಿಗೆ , ಜನಗಳಿಗೆ ಕಲುಹಿಸಬೇಕು. ಒಂದು ನಾವು ಕಲಿತ ಜ್ಞಾನ ಆಂಗ್ಲ ಭಾಷೆಯದ್ದಾದರೆ ಆಂಗ್ಲ ಭಾಷೆಯನ್ನೂ ನಮ್ಮ ಹೊಟ್ಟೂರಿನವರಿಗೆ,ನಮ್ಮ ಸಂಭಂದಿಕರಿಗೆ ಕಲುಹಿಸಬೇಕು . ಅಥವಾ ನಾವು ಕಲಿತ ಜ್ಞಾನವನ್ನು ನಮ್ಮ ಮಾತೃ ಭಾಷೆಯಲ್ಲಿಯೇ ನಮ್ಮ ಹುಟ್ಟೂರಿನವರಿಗೆ-ಸಂಭಂಧಿಕರಿಗೆ ಕಲುಹಿಸಬೇಕು.

ಅಂದರೆ ಈಗ ಪ್ರಾಚೀನ ಕಾಲದಷ್ಟು ಯಾವುದೇ ವಿಷಯ ಜಟಿಲವಾಗಿಲ್ಲ. ಕೇವಲ ಒಂದೆರಡು ನಿಮಿಷಗಳಲ್ಲಿ ಪ್ರಪಂಚದ ಯಾವುದೇ ಭಾಗವನ್ನು ತಂತ್ರ ಜ್ಞಾನದ ಮೂಲಕ ತಲುಪ ಬಹುದು. ಅದು ತುಂಬಾ ಅಗ್ಗದ ,ತುಂಬಾ ಸರಳ ಮಾರ್ಗದಿಂದ.

ನೀವು ನಿಮ್ಮ ಅನುಭವನ್ನು ಪ್ರಪಂಚಕ್ಕೆ ತಲುಪಿಸುವ ವ್ಯವಸ್ಥೆ ಇಂದಿನಿಂದಲೇ ಪ್ರಾರಂಭಿಸಬೇಕು. ನಾನು ಬರೆದುದೆಲ್ಲವೂ ನನ್ನ ಸ್ವನ್ತದೆಂದೆ ಹೇಳಲು ಇಷ್ಟಪಡುವುದಿಲ್ಲ. . ಹಲವಾರು ಪುಸ್ತಕವನ್ನೋದಿ ಅದನ್ನು ನನ್ನ ಅರ್ಥದಂತೆ ನಿಮಗೆ ತಲುಪಿಸಿದ್ದೇನೆ ಅಷ್ಟೇ. ಹಾಗೆಯೇ ನೀವೂ ನನ್ನ ಲೇಖನಗಳನ್ನು ಓದಿ ನಿಮ್ಮ ಮನಸ್ಸಿನ ರೀತಿ ಅರ್ಥ ಮಾಡಿಕೊಂಡು ನಿಮ್ಮ ಗೆಳೆಯರಿಗೆ ತಿಳಿಸುವ ಪ್ರಯತ್ನ ಮಾಡಿ.
ಬರೆ ವಿಷಯ ತಿಳಿಸುವುದರಿಂದ ಜೀವನ ಹಾಳು ಮಾಡಿಕೊಳ್ಳುವುದರಲ್ಲಿ ಏನೂ ಅರ್ಥ ವಿಲ್ಲ. ನಮ್ಮಲ್ಲಿ ಇರುವ ಯಾವುದಾದರೂ ಒಂದು ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಸೇರಿ . ಮುಂದಿನ ನಿಮ್ಮ ಸ್ನೇಹಿತರಿಗೂ ನಿಮ್ಮ ವಿಷಯದ ಜತೆ ನಿಮ್ಮ ಅವಕಾಸವನ್ನು ಕೊಡಿ . ಅವರನ್ನು ಜೀವನದಲ್ಲಿ ಶ್ರೀಮಂತರನ್ನಾಗಿ ಮಾಡಿ. ನಿಮ್ಮ ಮನೆಯ ಆಯಾ ಇರಬಹುದು. ನಿಮ್ಮ ಮನೆ ಕಾಯುವ ಸೆಕ್ಯುರಿಟಿ ಇರಬಹುದು. ನಿಮ್ಮ ಮನೆಯ ಡ್ರೈವರ್ ಇರಬಹುದು. ಅವರಿಗೆ ಅವಕಾಸ ಕೊಟ್ಟು ಅವರನ್ನು ಶ್ರೀಮಂತರನ್ನಾಗಿ ಮಾಡಿ.

ಯಾವಾಗಲೂ ನೀವು ನಿಮ್ಮ ತೋಟದಲ್ಲಿ ಒಂದು ಗಿಡ ನೆಟ್ಟ ಮೇಲೆ ಆ ಗಿಡದ ಜಾಗದಲ್ಲಿ ಬೇರೆ ಗಿಡವನ್ನು ನೆಡಲು ಪ್ರಯತ್ನಿಸಬೇಡಿ. ಮಾವಿನ ಗಿಡ ನೆಟ್ಟ ಜಾಗದಲ್ಲಿ ಯಾರೋ ಬಂದು ಹೇಳುತ್ತಾರೆ. ಮಾವಿನ ಗಿಡ ಸರಿಹೊಂದುವುದಿಲ್ಲ ಗೇರು ಗಿಡ ನಡು ಎಂದು . ಕೊನೆಗೆ ನೀವೂ ಯಾರದೋ ಮಾತು ಕೇಳಿ ಗೇರು ಗಿಡ ನೆಡುವುದು. ಮತ್ತೆ ಸ್ವಲ್ಪ ದಿನವಾದ ಮೇಲೇ ಬೇರೆ ಯಾರೋ ಬಂದು ಹೇಳುತ್ತಾರೆ ಗೇರು ಗಿಡಕ್ಕಿಂತ ಚಿಕ್ಕು ತುಂಬಾ ಒಳ್ಳೆಯದು ಎಂದು . ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಯಾವ ಗಿಡದಲ್ಲಿ ಯಾವ ಹಣ್ಣನ್ನು ತಿನ್ನಲು , ಯಾವ ಬೆಳೆ ಯನ್ನು ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ನೀವು ಒಂದು ದೃಢ ನಿರ್ಧಾರ ಮಾಡಿ ಆದ ಮೇಲೆ ಆ ಒಂದು ಉದ್ದೇಶವನ್ನು ಬದಾಲಾಯಿಸಲಿಕ್ಕೆ ಹೋಗಬೇಡಿ. ಹೀಗೆ ಬರೆಯುತ್ತಾ ಹೋದರೆ ಕೊನೆಯೇ ಇಲ್ಲ . ಒಟ್ಟಾರೆ ನೀವೂ ಒಂದು ಅವಕಾಸ ತೆಗೆದುಕೊಂಡು ನಿಮ್ಮ ಕೆಳಗಿರುವವರನ್ನು ಉನ್ನತ ವ್ಯಕ್ತಿಗಳನ್ನಾಗಿ ಮಾಡಿ.

http://sunnaturalflash.trafficformula2.com/

http://sunnaturalflash.trafficformula2.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
http://www.sunnaturalflash.com/

ಸೋಮವಾರ, ನವೆಂಬರ್ 1, 2010

ಕಿರಿಯರು ಮಾಡಿದ ಹಿರಿಯ ಕೆಲಸಗಳು

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಲಖನೌ ದ ಸೇನೆಯ ಕುದುರೆಯೊಂದಕ್ಕೆ ತುಂಬಾ ವಯಸ್ಸಾಗಿತ್ತು. ನಿಷ್ಪ್ರೋಯೋಜಕವಾಗಿತ್ತು . ಸೇನೆಯ ನಿಯಮದಂತೆ ಮುಡಿ ಕುದುರೆಯನ್ನು ಗುಂಡಿಕ್ಕಿ ಕೊಳ್ಳುವ ನಿರ್ಧಾರವಾಗಿತ್ತು. ಈ ಸುದ್ದಿ ಲಕ್ನೋದ ದಿನಪತ್ರಿಕೆಯಲ್ಲಿ ಪ್ರಕಟವಾದಾಗ ಸುದ್ದಿಯನ್ನೋದಿದ ಸುಮನ್ ಎಂಬ ಎಂಟನೆ ತರಗತಿ ಬಾಲಕಿಗೆ ಅಯ್ಯೋ ಎನಿಸಿತು . ಶಾಲೆಯ ಬಳಿಯೇ ಇದ್ದ ಸೇನಾಕಚೇರಿಗೆ ಹೋದಳು. ಧೈರ್ಯದಿಂದ ಅಧಿಕಾರಿಗಳನ್ನು ಭೇಟಿಯಾದಳು. ಕುದುರೆಯನ್ನು ಕೊಲ್ಲಬೇಡಿರೆಂದು ಬೇಡಿದಳು. ಆದರೆ ಅವರು ಸೇನಾನಿಯಮಗಳನ್ನು ಉಲ್ಲೇಖಿಸಿ ಕೈಚೆಲ್ಲಿದರು. ಆಕೆ ಖಿನ್ನವದನಲಾಗಿ ಶಾಲೆಗೇ ಹೋದಳು . ತನ್ನ ಗೆಳತಿಯರೊಂದಿಗೆ ಚರ್ಚಿಸಿದಳು. "ನಾವೆಲ್ಲ ನಮ್ಮ ಪಾಕೆಟ್ ಮನಿಯನ್ನು ಒಟ್ಟುಗೂಡಿಸಿ ಕುದುರೆಯನ್ನು ಸೇನೆಯಿಂದ ಬಿಡಿಸಿಕೊಂಡು ಬಂದು ಅದನ್ನು ಸಾಕೋಣ " ಎಂದು ಒಪ್ಪಿಸಿದಳು . ಸಂಜೆ ಎಲ್ಲರೂ ಸೇನಾಧಿಕಾರಿಗಳನ್ನು ಭೇಟಿಯಾಗಿ ಕುದುರೆಯನ್ನು ಕೊಲ್ಲುವುದು ಬೇಡ. ನಮಗೆ ಕೊಟ್ಟರೆ ನಾವು ಅದನ್ನು ಸಾಕಿಕೊಳ್ಳುತ್ತೇವೆ ಎಂದು ಬೇಡಿದರು. ಕಾಡಿದರು. ಕುದುರೆಯನ್ನು ಪಡೆದರು. ನಡೆಸಿಕೊಂಡು ತಂದರು. ಕಾಲೋನಿಯಲ್ಲಿದ್ದ ಸಾರ್ವಜನಿಕ ಪಾರ್ಕ್ ನಲಿ ಕುದುರೆಯನ್ನು ಕಟ್ಟಿಹಾಕಿದರು . ಬಾಲಕ-ಬಾಲಕಿಯರೆಲ್ಲ ಉತ್ಸಾಹದಿಂದ ಬರುತ್ತಿದ್ದರು. ಕುದುರೆಗೆ ಹುಲ್ಲು ಹುರುಳಿ ತಿನ್ನಿಸುತ್ತಿದ್ದರು . ಬಿಡುವಾದಾಗಲೆಲ್ಲ ಆಡುತ್ತಿದ್ದರು. ಒಂದೂವರೆ ವರ್ಷ ಬದುಕಿದ್ದ ಕುದುರೆ ಸಹಜ ಸಾವನ್ನಪ್ಪಿತು.

ಎರಡು ಸಾವಿರದ ಒಂದರಲ್ಲಿ ಹತ್ತು ವರ್ಷದ ಅಂತೋನಿಯ ಅಜ್ಜಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು.ಅವರ ತಲೆ ಕೂದಲುಗಳೆಲ್ಲ ಉದುರುತ್ತಿದ್ದವು. ಇದರಿಂದಾಗಿ ಆಕೆ ದುಃಖದಲ್ಲಿ ಮುಳುಗಿದ್ದರು . ನಗುವುದನ್ನೇ ಬಿಟ್ಟುಬಿಟ್ಟಿದ್ದರು . ಇದನ್ನು ಗಮನಿಸಿದ ಅಂತೋನಿ ಒಂದು ಬಣ್ಣಬಣ್ಣದ ವಿಚಿತ್ರ ಹ್ಯಾಟನ್ನು ಉಡುಗೊರೆಯಾಗಿ ಕೊಟ್ಟ ವಿಚಿತ್ರ ಹ್ಯಾಟನ್ನು ಕಂಡು ಅಜ್ಜಿ ನಕ್ಕುಬಿಟ್ಟರು. ಬಂದವರಿಗೆಲ್ಲ ಹೆಮ್ಮೆಯಿಂದ ಮೊಮ್ಮೊಗ ಕೊಟ್ಟ ಹ್ಯಾಟು ಎಂದು ತೋರಿಸುತ್ತಿದ್ದರು. ಅಜ್ಜಿಯ ನಗುವನ್ನು ಕಂಡ ಅಂತೋನಿ ge ಒಂದು ಯೋಜನೆ ಹೊಳೆಯಿತು. ತನ್ನ ಗೆಳೆಯರನ್ನೆಲ್ಲ ಸೇರಿಸಿ ಅವರ ಸಹಕಾರದಿಂದ ಹತ್ತಾರು ಹ್ಯಾಟು ಗಳನ್ನು ತಂದರು. ಕ್ಯಾನ್ಸರ್ ಚಿಕಿತ್ಸೆಯಿಂದ ಕೂದಲು ಕಳೆದುಕೊಳ್ಳುತ್ತಿದ್ದ ವ್ಯಕ್ತಿಗಳನ್ನೆಲ್ಲ ಹುಡುಕಿ ಹ್ಯಾಟ್ ಗಳನ್ನು ಉಡುಗೊರೆಯಾಗಿ ನೀಡಿ ಶುಭ ಹಾರೈಸಿ ಬರುತ್ತಿದ್ದರು. ತಮ್ಮ ಸಂಘಟನೆಗೆ "ಹೆವೆನ್ ಲೀ ಹ್ಯಾಟ್ಸ್ " ಎಂದು ಹೆಸರಿಟ್ಟರು. (ಸ್ವರ್ಗ ಲೋಕದ ಟೋಪಿಗಳು ). ಸಂಘವನ್ನು ಬೆಳೆಸುತ್ತ ಹೋದರು. ಇದೀಗ ಅಂತೋನಿ ಗೆ ಹದಿನಾರರ ವಯಸ್ಸು ಅವರ ಸಂಸ್ಥೆ ಅಮೆರಿಕದಾದ್ಯಂತ ಹರಡಿದೆ. ಇದುವರೆವಿಗೂ ಸುಮಾರು ಎಪ್ಪತ್ತೈದುಸಾವಿರ ಹ್ಯಾಟ್ ಗಳನ್ನು ಹಂಚಿದೆ .

ಒಂದುಸಾವಿರದ ಒಮ್ಭಾತ್ತುನೂರ ತೊಂಭಾತ್ತರರಲ್ಲಿ ಹತ್ತು ವರ್ಷದ ಆಬಿನ್ ಬರ್ನ್ ಸೈಡ್ ಎಂಬ ಬಾಲಕಿ ತನ್ನ ನೆರೆಹೊರೆಯ ಬಡಮಕ್ಕಳು ತಮ್ಮ ಬಟ್ಟೆ ಬರೆಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಒಯ್ಯುವುದನ್ನು ಗಮನಿಸಿದಾಗ ಅವಳಿಗೆ ಅಯ್ಯೋ ಎನಿಸಿತು. ತನ್ನ ಮನೆಯಲ್ಲಿದ್ದ ಹಾಗೂ ತನ್ನ ಸಂಗಡಿಗರಲ್ಲಿದ್ದ ಸೂಟ್ ಕೇಸು ಗಳನ್ನು ಕೇಳಿ ಪಡೆದಳು. ಪ್ಲಾಸ್ಟಿಕ್ ಚೀಲವನ್ನು ಹಿಡಿದು ಹೋಗುತ್ತಿದ್ದ ಬಡ ಮಕ್ಕಳಿಗೆಲ್ಲ ಉಚಿತವಾಗಿ ಸೂಟುಕೇಸುಗಳನ್ನು ಕೊಡುವ ವ್ಯವಸ್ಥೆ ಮಾಡಿದಳು. ಆಕೆಯೂ ತನ್ನ ಗೆಳೆಯರೊಂದಿಗೆ "ಸೂಟ್ ಕೆಸಸ್ ಫಾರ್ ಕಿಡ್ಸ್ "(ಮಕ್ಕಳಿಗಾಗಿ ಸೂಟ್ ಕೇಸುಗಳು ) ಎಂಬ ಸಂಘ ಸ್ಥಾಪಿಸಿಕೊಂಡರು . ಶಾಲೆಗಳಿಗೆ , ದೇವಾಲಯಗಳಿಗೆ ಮತ್ತು ಮನೆಮನೆಗೂ ಹೋಗಿ ಸೂಟ್ ಕೇಸ್ ಗಳನ್ನು ದಾನ ಬೇಡಿ ತಂದರು. ಎರಡೇ ವರ್ಷಗಳಲ್ಲಿ ಒಂದುಸಾವಿರದ ಏಳುನೂರು ಸೂಟ್ ಕೇಸ್ ಗಳನ್ನು ಸಂಗ್ರಹಿಸಿ ಹಂಚಿದರು . ಈಗ ಅಮೆರಿಕದಾದ್ಯಂತ ಶಾಖೆಗಳನ್ನು ಹೊಂದಿರುವ ಸಂಸ್ಥೆ ಇದುವರೆವಿಗೂ ಮೂವತ್ತು ಸಾವಿರಕ್ಕೂ ಹೆಚ್ಚು ಸೂಟ್ ಕೇಸ್ ಗಳನ್ನು ಹಂಚಿದೆ!.

ಈಗಲೂ ಈ ಸಂಸ್ಥೆ ಗಳನ್ನು ನಡೆಸುತ್ತಿರುವವರು ಮಕ್ಕಳೇ !.

ನಿಮ್ಮ ಊರಿನಲ್ಲಿ ಈ ರೀತಿಯ ಏನಾದರೂ ಮಕ್ಕಳು ಮಾಡಿದ ,ಸಂಘಟಿಸಿದ ದೊಡ್ಡ ಅಥವಾ ಚಿಕ್ಕ ಸಂಘಟನೆ ಗಳೇನಾದರೂ ಇದ್ದರೆ ನಮಗೆ ಬರೆಯಿರಿ. ವಿಶ್ವದ ಜತೆಗೆ ನಾವೂ ಹಂಚಿಕೊಳ್ಳೋಣ. ಇನ್ನು ಏಕೆ ಕೀಳರಿಮೆ ನಮಗೆ.?

ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಸ್ವ ಇಷ್ಟ ದಿಂದ ಸೇರಲು ನೂರು ಜನರಿಗೆ ಅವಕಾಸ ಕೊಡುತ್ತಿದ್ದೇವೆ. ಆಸಕ್ತರು ತಮ್ಮ ಹೆಸರು , ಊರು,ದೂರವಾಣಿ ಇಲ್ಲವೇ ಮೊಬೇಲ್ ನಂಬರ್ ನೊಂದಿಗೆ mlmgurunag @gmail .com ಗೆ ಕಳುಹಿಸಬೇಕು.

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.trafficformula2.com/

http://sunnaturalflash.trafficformula2.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com