MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಮೇ 31, 2010

ಬೆಳಗ್ಗೆ ಸಂಜೆ ಎರಡು ಹೊತ್ತು ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಲು ಸಾಧ್ಯವಾದರೆ ಇನ್ನು ಒಳ್ಳೆಯದು

ಬೆಳಗ್ಗೆ ಸಂಜೆ ಎರಡು ಹೊತ್ತು ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಲು ಸಾಧ್ಯವಾದರೆ ಇನ್ನು ಒಳ್ಳೆಯದು. ತಣ್ಣೀರ ಸ್ನಾನಅತ್ತ್ಯುತ್ತಮ . ಸಾಧ್ಯವಾಗದಿದ್ದರೆ ಉಗುರು ಬೆಚ್ಚಗಿನ ನೀರು ಬಿಸಿ ನೀರನ್ನು ಮಾತ್ರ ಬಳಸಲೇ ಬೇಡ.ತಣ್ಣೀರ ಸ್ನಾನವನ್ನುರೂಡಿಸಿಕೊಳ್ಳಬೇಕೆಂದಿದ್ದರೆ ಸೆಕೆಗಾಲದಲ್ಲಿ ಪ್ರಾರಂಭಿಸುವುದು ಸುಲಭ. ತಣ್ಣೀರ ಸ್ನಾನದಿಂದ ಎರಡು ಮಹಾಪ್ರಾಯೋಜನಗಳಿವೆ-ಮೊದಲನೆಯದಾಗಿ ಶರೀರವೂ ಚಟುವಟಿಕೆಯಿಂದಿರುತ್ತದೆ.ಮನಸ್ಸೂ ಚುರುಕಾಗಿರುತ್ತದೆ . ಎರಡನೆಯದಾಗಿಬ್ರಹ್ಮಚರ್ಯ ಪಾಲನೆಗೆ ಅದು ಬಹಳ ಸಹಾಯಕಾರಿ.
ಈಗ. ವೇಳಾಪಟ್ಟಿಗೆ ಅನುಸಾರವಾಗಿ ಅಧ್ಯಯನ ಮಾದಬೇಕೆಮ್ಬುದೇನೋ ಸರಿಯೆ. ಆದರೆ ಇಲ್ಲಿ ಒಂದು ಸಣ್ಣ ಸಲಹೆನೀಡಲಿಚ್ಚಿಸುತ್ತೇನೆ. ನೋಡು . ನಿನ್ನ ತರಗತಿಯಲ್ಲಿ ಅಂದಂದು ನಡೆಯುವ ಪಾಠಗಳನ್ನೂ ಮುಂಚಿತವಾಗಿಯೇ ಓದಿತಯಾರಾಗಿರಬೇಕು. ಹೀಗೆ ಮಾಡಿದರೆ , ಅಧ್ಯಾಪಕರು ಪಾಠ ವಿಷಯಗಳನ್ನು ವಿವರಿಸುವಾಗ ಮನಸ್ಸಿಗೆ ಅದು ಚೆನ್ನಾಗಿನಾಟುತ್ತದೆ.
- .ಟಿ.ನಾಗರಾಜ
ಡಬ್ಲು.ಡಬ್ಲು.ಡಬ್ಲು.ಸನ್ ನಚುರಲ್ ಫ್ಲಾಶ್.ಕಂ/
+೯೧-9632172486

ಭಾನುವಾರ, ಮೇ 30, 2010

ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮುಗಿಸಿದ ಮೇಲೆ ನಿನ್ನ ಶಕ್ತ್ಯನುಸಾರ ಹತ್ತು ನಿಮಿಷವೋ ಅರ್ಧಗಂಟೆಯೋ ಸ್ತೋತ್ರ -ಪಟನ ಪ್ರಾರ್ಥನೆ ಧ್ಯಾನ ಮುಂತಾದವುಗಳ ಕಾರ್ಯವೊಂದು ನಿನ್ನ ವೇಳಾಪಟ್ಟಿಯಲ್ಲಿ ಅವಶ್ಯವಾಗಿ ಸೇರಿರಲಿ . ನಿನ್ನ ಮನಸ್ಸಿನ ಆರೋಗ್ಯಕ್ಕೆ ,ಸಮಸ್ಥಿತಿಗೆ ಇದು ಅತ್ಯಂತ ಸಹಾಯಕ. ಹಾಗೆಯೇ ರಾತ್ರಿ ಮಲಗುವ ಸಮಯದಲ್ಲಿಯೂ ನಿನ್ನ ಇಷ್ಟ ದೇವತೆಯನ್ನು ಪ್ರಾರ್ಥಿಸಿ ಕೊಳ್ಳಬೇಕು;
"ಹೇ ಭಗವಾನ್, ನಿನ್ನ ದಯೆಯಿಂದ ಇಂದಿನ ದಿನವನ್ನು ಸಾಧ್ಯವಾದಷ್ಟು ಪ್ರಾಮಾಣಿಕತೆಯಿಂದ ಸದುಪಯೋಗ ಪಡಿಸಿಕೊಂಡಿದ್ದೇನೆ . ಆದರೂ ಕೆಲವಾರು ಲೋಪದೋಷಗಳು ಇರಬಹುದು . ನಾಳೆಯ ದಿನ ಆ ಲೋಪದೋಷಗಳು ಆಗದಂತೆ ನನಗೆ ಶಕ್ತಿ-ವಿವೇಕ ಕೊಟ್ಟು ಮುನ್ನಡೆಸು."
ಈ ಪ್ರಾರ್ಥನೆ ಹೃತ್ಪೋರ್ವಕವಾಗಿರಲಿ . ದೇವರು ಅದನ್ನು ಖಂಡಿತ ಈಡೆರಿಸುತ್ತಾನೆ.ಮತ್ತು ನಿನ್ನ ಮನಶ್ಯಕ್ತಿ ದಿನೇ ದಿನೇ ಹೆಚ್ಚುವುದನ್ನು ನೀನೆ ನೋಡಬಹುದು.
ಸ್ನಾನ ಎಂದೇನಲ್ಲ . ಇದನ್ನು ಮಾತ್ರ ಖಂಡಿತ ಕಡೆಗಣಿಸಬೇಡ . ಪ್ರತಿದಿನವೂ ತಲೆಯಿಂದ ಕಾಲಿನವರೆಗೂ ಬೆವರಿ ಬೆವರಿ , ಅದು ಗಾಳಿಗೆ ಆರಿ ಉಪ್ಪು ಹೆಪ್ಪುಗಟ್ಟಿರುತ್ತದೆ.ಜೊತೆಗೆ ಧೂಳು ಅಂಟಿಕೊಂಡಿರುತ್ತದೆ.ಇಂಥ ತಲೆ-ಮೈಯನ್ನು ತೊಳೆಯದಿದ್ದರೆ ಮನಸ್ಸು ಲವಲವಿಕೆಯನ್ನು ಕಳೆದುಕೊಳ್ಳುತ್ತದೆ. ಆಗ ಅಧ್ಯಯನ ಮಾಡುವ . ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅರ್ಧಕ್ಕೆ ಅರ್ಧ ಕುಂಠಿತವಾಗುತ್ತದೆ.
-ಎ.ಟಿ.ನಾಗರಾಜ
ಡಬ್ಲ್ಯು ಡಬ್ಲು ಡಬ್ಲು .ಸನ್ ನಯ್ಚುರಲ್ ಫ್ಲಾಶ್ .ಕಂ/
+೯೧-9632172486

ಶನಿವಾರ, ಮೇ 29, 2010

ವೇಳಾಪಟ್ಟಿ ಯನ್ನು ಹಾಕಿಕೊಳ್ಳದೆ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ಸಾಧ್ಯವಲ್ಲದ ಮಾತು.

ಅತಿಯಾದ ಆಟ,ಟಿ.ವಿ.ಕಥೆ.ಕಾದಂಬರಿ ಹಾಗೂ ಅಲೆದಾಟಗಳಲ್ಲೇ ಮೈಮರೆತು ಕೊನೆಗೆ ಪರೀಕ್ಷೆ ಸಮೀಪಿಸಿದಾಗಮೈತಿಳಿದು ಎಲ್ಲ ಪಟ್ಯಪುಸ್ತಕಗಳನ್ನು ಒಟ್ಟಿಗೆ ಓದಿ ತಲೆಗೆ ತುಂಬಿಸಿಕೊಳ್ಳುತ್ತೆವೆಂದು ಪ್ರಯತ್ನಿಸಿ ,ಅದು ಸಾಧ್ಯವಾಗದೆ ತಲೆಕೆಡಿಸಿಕೊಂಡು ಕಂಗಾಲಾಗುವ ದೃಶ್ಯ ಸರ್ವೇ ಸಾಮಾನ್ಯ.ಇದುವಿದ್ಯಾರ್ಥಿಗಳ ವಿದ್ಯಾಭ್ಯಾಸದ ಲಕ್ಷಣವೇ ಅಲ್ಲ. ಆದರೆ ಅಲ್ಲಲ್ಲಿ ಕೆಲವು ವಿದ್ಯಾರ್ಥಿಗಳಿರುತ್ತಾರೆ .ಅವರಿಗೆ ತಮ್ಮ ತಾಯಿತಂದೆಯರದೋ ಅಧ್ಯಾಪಕರದೋ ಮಾರ್ಗದರ್ಶನವಿರುತ್ತದೆ.ಹಾಗೂ ಆ ವಿದ್ಯಾರ್ಥಿಗಳಲ್ಲೂ ಸ್ವಭಾವಸಹಜವಾಗಿ ಶಿಸ್ತು -ವಿಧೇಯತೆ ಇರುತ್ತದೆ. ಅಂಥವರು ತಮ್ಮದೇ ಆದ ವೇಳಾಪಟ್ಟಿಯೊಂದನ್ನು ಹಾಕಿಕೊಂಡು ಪ್ರತಿದಿನ ತಪ್ಪದೆ ಓದುತ್ತ ಬರೆಯುತ್ತ ಲೀಲಾಜಾಲವಾಗಿ ಮುಂದುವರಿಯುತ್ತಿರುತ್ತಾರೆ . ಈ ಬುದ್ದಿವಂತಿಕೆಯನ್ನು ನೀನೂ ಕಲಿತುಕೊಳ್ಳಬೇಕು.
ಶಾಲಾ ವೇಳೆಯನ್ನು ಬಿಟ್ಟರೆ ನಿನ್ನ ಸ್ವಂತದ ವೇಳೆ ಎಷ್ಟಿರುತ್ತದೆ ಎಂಬುದನ್ನು ನೋಡಿಕೊ. ಶನಿವಾರದ ಅರ್ಧ ದಿನ ,ಭಾನುವಾರ ಹಾಗೂ ಇತರ ರಜಾದಿನಗಳೆಲ್ಲ ನಿನ್ನ ಸ್ವಂತ ವೇಳೆಯೇ ಅಲ್ಲವೇ?ಇನ್ನು ಆಗಾಗ ಸಿಗುವ 'ಲೆಟ್ ಆಪ್' ವೇಳೆಯೂ ನಿನ್ನದೇ ಈ ವೇಳೆಯನ್ನು ಹಿಡಿದು ಅದರ ಪ್ರತಿಯೊಂದು ಕ್ಷಣವನ್ನೂ ಸದುಪಯೋಗ ಪಡಿಸಿಕೊಳ್ಳಬಲ್ಲೆ ಯಾದರೆ ಈ ಜಗತ್ತಿನಲ್ಲಿ ನೀನೊಬ್ಬ ಮಹೋನ್ನತ ವ್ಯಕ್ತಿಯಾಗುವುದು ಖಂಡಿತ .
ವೇಳಾಪಟ್ಟಿ ಯನ್ನು ಹಾಕಿಕೊಳ್ಳದೆ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ಸಾಧ್ಯವಲ್ಲದ ಮಾತು.ವೇಳಾಪಟ್ಟಿಯನ್ನು ಹೇಗೆ ಹಾಕಿಕೊಳ್ಳಬೇಕು ?ಮೊದಲು , ನೀನು ರಾತ್ರಿ ಮಲಗುವ ಹಾಗೂ ಬೆಳಗ್ಗೆ ಏಳುವ ಸಮಯವನ್ನು ಖಚಿತಪಡಿಸಿಕೊಂಡುಬಿಡಬೇಕು.ಏಕೆಂದರೆ ಮಲಗುವ,ಏಳುವ ವೇಳೆ ಯಲ್ಲಿ ವ್ಯತ್ಯಾಸವಾಯಿತೆಂದರೆ ನಿನ್ನ ವೇಳಾಪಟ್ಟಿಯನ್ನು ಸುಮ್ಮನೆ ಕಟ್ಟಿಡಬೇಕಾಗುತ್ತದೆ.ಹದಿಹರೆಯದ ನೀನು ರಾತ್ರಿ ಹತ್ತಕ್ಕೆ ಮಲಗಿ ಬೆಳಗ್ಗೆ ಐದಕ್ಕೆ ಏಳುವುದು ಅತ್ಯಂತ ಸೂಕ್ತ . ಸಮರ್ಪಕ . ದಿನವಿಡೀ ನಿನ್ನ ಮನಸ್ಸು ಶಾಂತವು ಸ್ಥಿರವೂ ಪ್ರಪುಲ್ಲವೂ ಆಗಿರಬೇಕಾದರೆ ರಾತ್ರಿಯಲ್ಲಿ ಮಾಡುವ ನಿದ್ರೆ ಅತ್ಯಂತ ಪ್ರಾಮುಖ್ಯದ್ದು . ಗಾಢನಿದ್ರೆಯೊಂದು ವರ. ಬೆಳಗ್ಗೆ ಐದರಿಂದ ರಾತ್ರಿ ಹತ್ತರವರೆಗೆ ನಿನಗೆ ದೊರೆಯುವ ಹದಿನೇಳು ಗಂಟೆಯ ಕಾಲವನ್ನು ನೀನು ಸದುಪಯೋಗ ಪಡಿಸಿಕೊಂಡು ಮೈ -ಮನಸ್ಸುಗಳನ್ನು ದುಡಿಸಿದ್ದೆ ಆದರೆ ರಾತ್ರಿ ದಿಂಬಿಗೆ ತಲೆಯಿಟ್ಟ ಕೂಡಲೇ ಗಾಢ ನಿದ್ರೆ ಹತ್ತುವುದು ಖಂಡಿತ.
ಬೆಳಗ್ಗೆ ಐದಕ್ಕೆ ಎದ್ದು ಶಾಲೆಗೆ ಹೋಗುವವರೆಗಿನ ವೇಳೆ ಹಾಗೂ ಶಾಲೆ ಯಿಂದ ಹಿಂದಿರುಗಿದ ಮೇಲೆ ರಾತ್ರಿ ಮಲಗುವವರಿಗಿನ ವೇಳೆ ನಿನ್ನದು. ಈ ಅವಧಿಯಲ್ಲಿ ನಿನ್ನ ವೈಯಕ್ತಿಕ ಪ್ರಾರ್ಥನೆ , ಅಧ್ಯಯನ ಹಾಗೂ ಇತರ ಕೆಲಸ ಕಾರ್ಯಗಳನ್ನು ಅಳವಡಿಸಿರುವ ವೇಳಾಪಟ್ಟಿಯೊಂದನ್ನು ತಯಾರಿಸಿಕೊಳ್ಳಬೇಕು . ಅದನ್ನು ನಿನ್ನ ಅಧ್ಯಾಪಕರಿಗೆ ತೋರಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯಬಹುದು.
-ಎ.ಟಿ.ನಾಗರಾಜ
-೯೧-೯೬೩೨೧೭೨೪೮೬
ಸನ್ ನ್ಯಾಚುರಲ್ ಫ್ಲಾಶ್ .ಕಂ/

ಶುಕ್ರವಾರ, ಮೇ 28, 2010

ಶಾಲಾ ಅಧ್ಯಾಪಕರು ಹಾಕಿಕೊಂಡಿರುವ ವೇಳಾಪಟ್ಟಿಯೇ ಆ ಸುಸುತ್ರತೆಯ ಗುಟ್ಟು.

ನೋಡು ಪಾಠಗಳು ನಿನಗೆ ಅರ್ಥವಾಗಬೇಕಾದರೆ , ಮುಂದೆ ನೀನು ಯಶಸ್ವಿಯಾಗಿ ತೆರ್ಗಡೆಯಾಗಬೇಕಾದರೆ ಅದಕ್ಕೆಅಗತ್ಯವಾದ ಕೆಲವು ಸಲಹೆಗಳನ್ನು ನಿನ್ನ ಮುಂದಿಡುತ್ತೇನೆ. ಅವುಗಳನ್ನು ಸುಮ್ಮನೆ ಅನುಸರಿಸಿದರಾಯಿತು;ಜಯನಿನಗೆ ಕಟ್ಟಿಟ್ಟದ್ದು .
ಮೊಟ್ಟಮೊದಲನೆಯದಾಗಿ ನಿನಗೆ ಕೊಡಲಿಚ್ಚಿಸುವ ಸಲಹೆಯೆಂದರೆ , ನೀನು ಬೆಳಗ್ಗೆ ಎದ್ದ ಕೂಡಲೇ ಶೌಚಾದಿಗಳನ್ನುಮುಗಿಸಿಕೊಂಡು ದೇವರಿಗೆ,ತಾಯಿಗೆ, ತಂದೆಗೆ ಪ್ರಣಾಮ ಸಲ್ಲಿಸಬೇಕು. ಕಾರ್ಯದಿಂದ ನಿನ್ನ ದಿನಚರಿ ಪ್ರಾರಂಭವಾಗಬೇಕು , ನಿನ್ನೆಲ್ಲ ಯಶಸ್ಸಿಗೆ,ಪ್ರಯತ್ನದ ಸಫಲತೆಗೆ ದೇವರ ಹಾಗೂ ಗುರುಹಿರಿಯರ ಆಶೀರ್ವಾದವೇ ಮುಖ್ಯ ಎಂಬ ವಿಷಯದಲ್ಲಿ ನಿನಗೆಸಂಶಯ ಬಾರದಿರಲಿ . ಸರಿಯಾದ ಪ್ರಯತ್ನ ಮಾಡಿದರೆ ಅದಕ್ಕೆ ತಕ್ಕ ಫಲ ಬಂದೇ ಬರುತ್ತದೆ ಎನ್ನುವುದು ನಿಜವೇ .ಆದರೆಸರಿಯಾದ ಪ್ರಯತ್ನದಲ್ಲಿ ತೊಡಗುವುದಕ್ಕೆ ಬೇಕಾದ ಮನಸ್ಥಿತಿಯನ್ನು ಕೊಡುವುದು ದೇವರ, ಗುರುಹಿರಿಯರ ಆಶೀರ್ವಾದ . ಆಶೀರ್ವಾದ ಮಹಿಮೆಯನ್ನು ಈಗ ನಾನೆಷ್ಟೇ ವರ್ಣೆಸಿದರೂ ನಿನಗದು ಸರಿಯಾಗಿ ಅರ್ಥವಾಗುವುದು ನೀನು ಸಾಕಷ್ಟುಪ್ರಾಯಪ್ರಬುದ್ದನದ ಮೇಲೆಯೇ . ಆದರೂ ತತ್ಕಾಲಕ್ಕೆ ಮಾತಿನಲ್ಲಿ ನಂಬಿಕೆಯಿಟ್ಟು ನಡೆಯಲು ಯತ್ನಿಸು . ಇನ್ನೊಂದು
ಸ್ವಾರಸ್ಯವೆಂದರೆ , ಆಶೀರ್ವಾದವನ್ನು ನೀನು ಬಾಯ್ಬಿಚ್ಚಿ ಕೇಳಬೇಕಾಗಿಲ್ಲ . ಭಕ್ತಿಯಿಂದ ಮಣಿದಾಗ ದೇವರ ಹಾಗೂ ಗುರುಹಿರಿಯರಹೃದಯದಿಂದ 'ಇವನಿಗೆ ಶುಭವಾಗಲಿ'ಎಂಬ ಆಶೀವಾರ್ದದ ಭಾವ ತಾನಾಗಿಯೇ ಹರಿದು ಬರುತ್ತದೆ.
ಈಗ ನಿನಗೆ ವೇಳಾಪಟ್ಟಿಯ ಮಹತ್ವವನ್ನು ತಿಳಿಸಲೆತ್ನಿಸುತ್ತೇನೆ.ನಿನ್ನ ಶಾಲೆಯಲ್ಲಿ ಪ್ರಾರ್ಥನೆ ಪಾಠ ಆಟ ಎಲ್ಲವೂಸುಸೂತ್ರವಾಗಿ ನಡೆಯುವುದನ್ನು ಕಾಣುತ್ತಿರುವೆಯಷ್ಟೇ?. ಶಾಲಾ ಅಧ್ಯಾಪಕರು ಹಾಕಿಕೊಂಡಿರುವ ವೇಳಾಪಟ್ಟಿಯೇ ಸುಸುತ್ರತೆಯ ಗುಟ್ಟು.ದಿನಕ್ಕೆ ಸುಮಾರು ಏಳೆಂಟು ಕಾಲಾವಧಿ ಗಳಲ್ಲಿ ಬಗೆಬಗೆಯ ವಿಷಯಗಳ ಮೇಲೆ ಸ್ವಲ್ಪಸ್ವಲ್ಪವೇ ಪಾಠಪ್ರವಚನಗಳನ್ನು ನಡೆಸುತ್ತ ನಿಮಗೆ ಎಷ್ಟೊಂದು ಪಟ್ಯ ಪುಸ್ತಕಗಳ ಅಭ್ಯಾಸ ಮಾಡಿಸುತ್ತಾರೆ ನೋಡು!. ಆದರೂ ಇಂದಿನವಿದ್ಯಾರ್ಥಿಗಳು ಗುಟ್ಟನ್ನು ಅರಿತುಕೊಳ್ಳುವುದೇ ಇಲ್ಲ.ಬದಲಾಗಿ ಅವರು ಮನೆಗೆ ಬಂದು , ಮಾಡಿದ ಪಾಠ ಗಳ ಪುನರಾವರ್ತನೆಮಾಡದೆ, ಅತಿಯಾದ ಆಟ,ಟಿ.ವಿ.ಕಥೆ.ಕಾದಂಬರಿ ಹಾಗೂ ಅಲೆದಾಟಗಳಲ್ಲೇ ಮೈಮರೆತು ಕೊನೆಗೆ ಪರೀಕ್ಷೆ ಸಮೀಪಿಸಿದಾಗಮೈತಿಳಿದು ಎಲ್ಲ ಪಟ್ಯಪುಸ್ತಕಗಳನ್ನು ಒಟ್ಟಿಗೆ ಓದಿ ತಲೆಗೆ ತುಂಬಿಸಿಕೊಳ್ಳುತ್ತೆವೆಂದು ಪ್ರಯತ್ನಿಸಿ ,ಅದು ಸಾಧ್ಯವಾಗದೆ ತಲೆಕೆಡಿಸಿಕೊಂಡು ಕಂಗಾಲಾಗುವ ದೃಶ್ಯ ಸರ್ವೇ ಸಾಮಾನ್ಯ.
-.ಟಿ .ನಾಗರಾಜ
+ 91 9632172486
ಡಬ್ಲ್ಯು ,ಡಬ್ಲ್ಯು, ಡಬ್ಲ್ಯು. ಸನ್ನ್ಯಾಚುರಲ್ ಫ್ಲಾಶ್ .ಕಂ/

ಗುರುವಾರ, ಮೇ 27, 2010

ವಿದ್ಯಾರ್ಥಿಗೊಂದು ಪತ್ರ

ವಿದ್ಯಾರ್ಥಿಗೊಂದು ಪತ್ರ
ಪ್ರಿಯ ಸೋಮಶೇಖರ
ನಿನ್ನ ಪತ್ರ ತಲುಪಿತು.ನಿನ್ನ ಅಸಹಾಯಕ ಪರಿಸ್ಥಿತಿಯ ಅರಿವೂ ಆಯಿತು.ಗ್ರಾಮಾಂತರ ಶಾಲೆಯ ವಿದ್ಯಾರ್ಥಿಯಾದ ನಿನಗೆ ಕೆಲವು ಅನನುಕುಲತೆಗಳಿವೆ ಎಂಬುದು ನಿಜವಾದರೂ ಹಲವಾರು ಅನುಕೂಲತೆಗಳು ಇವೆ ಎಂಬುದನ್ನು ನೀನು ಮರೆಯಬಾರದು . ಪೇಟೆ ಪಟ್ಟಣ ನಗರಗಳಲ್ಲಿರುವ ವಿದ್ಯಾರ್ಥಿಗಳ ಅಧ್ಯಯಾನಕ್ಕೆ ಅಡ್ಡಿ ಆತಂಕಗಳು ಅಧಿಕವೆಂದೇ ಹೇಳಬೇಕು. ಟಿ.ವಿ.ಸಿನೆಮಾ , ಹೋಟೆಲುಗಳು , ಲೌಡ್ ಸ್ವೀಕರ್ ಅರಚಾಟದಿಂದ ಉಂಟಾಗುವ ಶಬ್ದಮಾಲಿನ್ಯ , ಇನ್ನು ಏನೇನೋ , ಗ್ರಾಮಾಂತರ ಪ್ರದೇಶದ ಪರಿಶುದ್ದ ಹವಾಗುಣದಿಂದ ಕೂಡಿದ ಪ್ರಶಾಂತ ವಾತಾವರಣವೊಂದೆ ಸಾಕು. ಏಕಾಗ್ರತೆಯಿಂದ ಕುಳಿತು ಅಧ್ಯಯನ ಮಾಡಲು. ಪಟ್ಟಣಗಳ ವಿಧ್ಯ್ಯಾರ್ಥಿಗಳಿಗೆ ಅನೇಕ ಅನುಕೂಲತೆಗಳಿವೆ ಎಂಬ ಮಾತನ್ನು ಅಲ್ಲಗಳೆಯುವುದಿಲ್ಲ ನಾನು.ಆದರೆ ಈ ವಿದ್ಯ್ಯಾರ್ಥಿಗಳು ಪೋಲಿತನಕ್ಕೆ ಬಲಿಬೀಳುವ ಸಂಭವ ಹೆಚ್ಚು.ಆದ್ದರಿಂದ ಅವರ ತಾಯ್ತಂದೆಯರು , ಅಧ್ಯಾಪಕರು ಅವರನ್ನು ರಕ್ಷಿಸಲು ಅದೆಷ್ಟು ಪರಿಪಾಟು ಪಡಬೇಕಾಗುತ್ತದೆಎಂಬುದನ್ನು ತಿಳಿದಿರಬೇಕು ನೀನು. ನಗರಗಳಲ್ಲಿ ಆದರ್ಶದಿಂದ ಜಾರಲು ನೂರಾರು ದಾರಿಗಳಿವೆ . ತಮ್ಮ ಹುಡುಗರನ್ನು ಯಾವದೋ ಒಂದು ಜಾರುದಾರಿಯಿಂದ ತಪ್ಪಿಸಿದ ಮಾತ್ರಕ್ಕೆ ತಾಯ್ತಂದೆ ಯರು ಸುಮ್ಮನೆ ಕುಳಿತಿರುವಂತಿಲ್ಲ
ಇತರ ಜಾರುದಾರಿಗಳತ್ತ ಹೋಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾಗುತ್ತದೆ.
ಆ ವಿಷಯ ಹಾಗಿರಲಿ.'ನಾನೀಗ ಎಸ್ಸೆಸ್ಸೆಲ್ಸಿ ತರಗತಿಗೆ ಬಂದಿದ್ದೇನೆ.ಪಾಠ ಪ್ರವಚನಗಳು ಪ್ರಾರಂಭವಾಗಿವೆ . ಆದರೆ ಎಷ್ಟೋ ವಿಷಯಗಳು ಅರ್ಥವೇ ಆಗುತ್ತಿಲ್ಲ' ಎಂದು ಬರೆದಿರುವೆ.ಇನ್ನೊಬ್ಬ ವಿದ್ಯಾರ್ಥಿಯು ಒಂದು ಪತ್ರ ಬರೆದಿದ್ದಾನೆ.. ಅವನ ಅಧ್ಯಾಪಕರು ಸರಿಯಾಗಿ ಪಾಠವನ್ನೇ ಮಾಡುವುದಿಲ್ಲವಂತೆ . ಅರ್ಥವಾಗದ ವಿಷಯವನ್ನು ಕೇಳಿದರೆ ಉತ್ತರ ಹೇಳುವುದೂ ಇಲ್ಲವಂತೆ . ಅದು ಅವನ ದುರದೃಷ್ಟ . ನಿನ್ನ ಅಧ್ಯಾಪಕರು ಚೆನ್ನಾಗಿ ಪಾಠ ಮಾಡುತ್ತಾರಲ್ಲ. ಅದು ನಿನ್ನ ಪುಣ್ಯ!.
........ಮುಂದುವರಿಯುವುದು.ಪ್ರತಿದಿನ ಓದಿ
ಈ ಅಂಕಣಕ್ಕೆ ನಿಮ್ಮ ಪ್ರಶ್ನೆಗಳನ್ನು ಕಳುಹಿಸುವಾಗ ಎಂಎಲ್ಎಂಗುರುನಗ್ಅಟ್ ಜಿಮೇಲ್ ಡಾಟ್ ಕಂ ಗೆ ಕಳುಹಿಸಬೇಕು. ನಿಮ್ಮ ಪೂರ್ಣ ಹೆಸರು , ವಿಳಾಸ ನಮೂದಿಸಿ. ದೂರವಾಣಿಯೂ ಇರಲಿ
ವಂದನೆಗಳೊಂದಿಗೆ
ನಿಮ್ಮ ನೆಟ್ನಾಗ
ಎ.ಟಿ .ನಾಗರಾಜ
+೯೧-9632172486

ಬುಧವಾರ, ಮೇ 26, 2010

ಜೋಗದ ಜಲಪಾತದಂತೆ ಯುವಕರ ಮನಸ್ಸು!

ಇನ್ನು ಶ್ರೀಕೃಷ್ಣ ಹೇಳಿದ 'ವೈರಾಗ್ಯ'ದ ಅರ್ಥವೇನು? ಸಂನ್ಯಾಸವೆಂದೆ ?ಅಲ್ಲ. ವೈರಾಗ್ಯವೆಂದರೆ ಒಂದು ಉದ್ದೇಶವಿಟ್ಟುಕೊಂಡು ಅದನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದಾಗ , ಇನ್ನಾವ ಪ್ರಲೋಭನೆ-ಆಕರ್ಷಣೆಗಳೂ ಮನಸೆಳೆಯದಂತೆ ನೋಡಿಕೊಳ್ಳುವುದು.ಎಂದರೆ ಕೈಗೊಂಡ ಕಾರ್ಯದಲ್ಲಿ ಮಾತ್ರವೇ ಅನುರಾಗ,ಅದಕ್ಕೆ ವ್ಯತಿರಿಕ್ತವಾದ ವಿಷಯದಲ್ಲಿ ವಿರಾಗ-ಇದೇ ವೈರಾಗ್ಯ. ಸಂನ್ಯಾಸಿಗಳು ಆತ್ಮ ಸಾಕ್ಷಾತ್ಕಾರವನ್ನು ಜೇವನದ ಗುರಿಯಾಗಿಟ್ಟುಕೊಂಡಿರುವುದರಿಂದ ಜಗತ್ತಿನ ಇತರ ಎಲ್ಲ ಆಕರ್ಷಣೆಗಳನ್ನು ಬದಿಗೊತ್ತ ಬೇಕಾಯಿತು . ಸಾಮಾನ್ಯವಾಗಿ,ಅದನ್ನೇ ವೈರಾಗ್ಯವೆಂದು ಕರೆಯುವುದರಿಂದ ಇಂದು ಸಂನ್ಯಾಸಿಯಾಗುವುದು,ಕಾಡಿಗೆ ಹೋಗುವುದು ಎಂಬರ್ಥವೇ ಬರುತ್ತಿದೆ . ಆದರೆ ಅದು ಹಾಗಲ್ಲ.ಉದ್ದೇಶವನ್ನು ಸಿದ್ದಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುವವರೆಲ್ಲರಲ್ಲೂ ಈ ವೈರಾಗ್ಯದ ಅಂಶ ಇದ್ದೇ ಇರುತ್ತದೆ . ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾ ಜ್ಞಾನಾರ್ಜನೆಯಲ್ಲಿ ತೊಡಗಿರುವಾಗ ಇತರ ಆಕರ್ಷಣೆಗಳು ಅವರ ಮನಸ್ಸನ್ನು ಸೆಳೆಯುವಂತಿದ್ದರೆ ವಿದ್ಯಾಭ್ಯಾಸ ಹೇಗೆ ಯಶಸ್ವಿಯಾಗಲು ಸಾಧ್ಯ? ಅದರಲ್ಲೂ ಏಕಾಗ್ರತೆಯನ್ನು ಅಭ್ಯಾಸ ಮಾಡುವವರಂತು ಇತರ ವಿಷಯಗಳೆಡೆಗೆ ಕಣ್ಣೆತ್ತಿಯೂ ನೋಡುವಂತಿಲ್ಲ.
ಏಕಾಗ್ರತೆಯಲ್ಲಿ ಆನಂದವಿದೆ.ಏಕಾಗ್ರತೆಯಲ್ಲಿ ಸಿದ್ದಿಯಿದೆ ಎಂಬ ಸುದ್ದಿ ತಿಳಿದ ವಿದ್ಯಾರ್ಥಿಗಳು ಇನ್ನು ಸುಮ್ಮನಿರಬಾರದು , ಕಾರ್ಯತತ್ಪರನಾಗಬೇಕು.
ಮಾಡುವ ಅಧ್ಯಯನದಲ್ಲಿ ಮೈಮರೆತರೆ ಏಕಾಗ್ರತೆ ಸಿದ್ದಿಸಿದೆ ಎಂದರ್ಥ.
ಶಿಸ್ತುಬದ್ದ ಯೋಗಾಸನಗಳು ನರಮಂಡಲವನ್ನು ಬಲಗೊಳಿಸುವುದಲ್ಲದೆ ಚುರುಕಾಗಿಸುವುದರಿಂದ ಅವು ಏಕಾಗ್ರತೆಗೆ ಬಹಳ ಸಹಾಯಕಾರಿ.
ಜೋಗದ ಜಲಪಾತದಂತೆ ಯುವಕರ ಮನಸ್ಸು!ಬೃಹತ್ ಪ್ರಮಾಣದ ನೀರು ಎತ್ತರದ ಬೆಟ್ಟದಿಂದ ಧುಮುಧುಮಿಸಿ ಧುಮಿಕಿ , ಎಲ್ಲೆಂದರಲ್ಲಿ ಹರಿದಾಡಿ , ಕೊನೆಗೂ ಯಾವ ಉಪಯೋಗಕ್ಕೂ ಬಾರದೆ ಸಮುದ್ರಕ್ಕೆ ಸೇರಿ ಹೇಳ ಹೆಸರಿಲ್ಲದಂತಾಗುತ್ತದೆ. ಆದರೆ ನೀರಿಗೆ ಆಣೆಕಟ್ಟು ಕಟ್ಟಿ , ಕಾಲುವೆಯಲ್ಲಿ ಹರಿಯಿಸಿ , ಹೊಲಗಳಿಗೆ ತಂದುಕೊಂಡಾಗ ಹಸನಾದ ಬೆಳೆ ನಳನಳಿಸುತ್ತದೆ.
ಹಾಗೆಯೇ , ಮನಬಂದಂತೆ ಕುಣಿದಾಡಿ , ವ್ರಥಾ ವ್ಯಯವಾಗುವ ಯುವಕರ ಅಶಿಕ್ಷಿತ ಮನಶಕ್ತಿಗೆ ನಿಯಮಗಳ ಆಣೆಕಟ್ಟು ಕಟ್ಟಿ, ಶಿಸ್ತಿನ ಕಾಲುವೆ ತೋಡಿ , ಅದನ್ನು ಶಿಕ್ಷಣ ಕಲೆ ಸಾಹಿತ್ಯ ಕರ್ಮಕೌಶಲಗಳೆಂಬ ಹೊಲಗಳಲ್ಲಿ ಹರಿಯಿಸಿದಾಗ ಸಂಸ್ಕೃತಿಯೆಂಬ ಫಸಲು ಸಮೃದ್ಧವಾಗುತ್ತದೆ.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು . ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧ 9632172486

ಮಂಗಳವಾರ, ಮೇ 25, 2010

ಅಭ್ಯಾಸ ಮತ್ತು ವೈರಾಗ್ಯದಿಂದ ಮನಸ್ಸಿನ ಏಕಾಗ್ರತೆಯನ್ನು ಸಿದ್ದಿಸಿಕೊಳ್ಳಬಹುದು

ಇಂದಿನ ವಿದ್ಯ್ಯಾರ್ಥಿಗಳ ವಿದ್ಯಾಮಟ್ಟ ಮುಖ್ಯವಾಗಿ ಲೇಖನಸಾಮರ್ಥ್ಯ ಎಷ್ಟರ ಮಟ್ಟಿಗೆ ಕೆಳಗಿಳಿದಿದೆ ಎಂಬುದನ್ನು ತಿಳಿಯಲು ಅವರಿಂದ ಯಾವುದಾದರೊಂದು ವಿಷಯದ ಮೇಲೆ ಪ್ರಬಂಧ ಬರೆಯಿಸಿ ನೋಡಬೇಕು .ಒಂದೊಂದು ಪುಟದಲ್ಲೂ ತಪ್ಪು ಪದಪ್ರಯೋಗ ಹಾಗೂ ವಾಕ್ಯದೊಷಗಳು ಹೇರಳವಾಗಿರುತ್ತವೆ . ಇನ್ನು ಅಕ್ಷರದೊಷವನ್ನಂತು ನೋಡಲೆಬಾರದು! ವಿದ್ಯಾರ್ಥಿಯು ಎಷ್ಟೇ ಬುದ್ದಿವಂತನಾಗಿದ್ದರೂ ಅಭ್ಯಾಸ ಮಾಡದಿದ್ದರೆ ಏನೂ ಸಿದ್ದಿಸಲಾರದು.
ಆದ್ದರಿಂದಲೇ ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.."ಅಭ್ಯಾಸ ಮತ್ತು ವೈರಾಗ್ಯದಿಂದ ಮನಸ್ಸಿನ ಏಕಾಗ್ರತೆಯನ್ನು ಸಿದ್ದಿಸಿಕೊಳ್ಳಬಹುದು ". ಎಂದು . ಅಭ್ಯಾಸವೆಂದರೆ ಪುನ: ಪುನಃ ಮಾಡುವ ಪ್ರಯತ್ನ . ವಿದ್ಯಾರ್ಥಿಯೊಬ್ಬ ಐದು ವರ್ಷದ ಬಾಲಕನಾಗಿದ್ದಾಗ ಕಷ್ಟದಿಂದ ಕಾಗುಣಿತ ತಿದ್ದುತ್ತಿದ್ದವನು ಹಾಗೇ ಬರೆದೂ ಬರೆದೂ ಎಸ್ಸೆಸ್ಸೆಲ್ಸಿಯ ವೇಳೆಗೆ ಸರಾಗವಾಗಿ ಬರೆಯಲು ಸಾದ್ಯವಾಯಿತಲ್ಲವೇ? ಇದೇ ಅಭ್ಯಾಸದ ಮಹತ್ವ. ಜಗತ್ತಿನಲ್ಲಿ ಎಂತೆಂತ ಮಹಾಕಾರ್ಯಗಳೆಲ್ಲ ನಡೆದಿವೆ .ನಡೆಯುತ್ತಿವೆ;ಅವುಗಳನ್ನೆಲ್ಲ ಒಮ್ಮೆ ಭಾವಿಸಿ ನೋಡಬೇಕು; ಅವುಗಳ ಹಿನ್ನೆಲೆಯಲ್ಲಿ ಎಷ್ಟೊಂದು ಜನರ ಅವಿರತ ಅಭ್ಯಾಸ-ಪರಿಶ್ರಮ ಇದೆ! ಅಭ್ಯಾಸದಿಂದ ಸಾಧ್ಯವಾಗದುದೇ ಇಲ್ಲ . ಆದರೆ ಕ್ರಮವರಿತ ಶಿಸ್ತುಬದ್ಧ ಅಭ್ಯಾಸ ಅದಾಗಬೇಕು.
-ಎ.ಟಿ.ನಾಗರಾಜ ಶಿವಮೊಗ್ಗ
ಡಬ್ಲು ಡಬ್ಲು ಡಬ್ಲು .ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486

ಸೋಮವಾರ, ಮೇ 24, 2010

ಮೊದಮೊದಲು ಅಧ್ಯಯನದ ವಿಷಯದಲ್ಲಿ ಪ್ರೀತಿಯನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕು. ಆಮೇಲಾಮೇಲೆ ವಿಷಯ ಅರ್ಥವಾಗತೊಡಗುವುದರಿಂದ ತಾನಾಗಿಯೇ ಅದರಲ್ಲಿ ಪ್ರೀತಿ ಉಂಟಾಗುತ್ತದೆ. ಪ್ರೀತಿ ಉಂಟಾದಾಗ ಏಕಾಗ್ರತೆ ಸಿದ್ದಿಸಿತೆಂದೇ ಅರ್ಥ.
ಶ್ರದ್ಧೆ ಮತ್ತು ಪ್ರೀತಿಯಿಂದ ಸಿದ್ದಿಸಿಕೊಳ್ಳುವ ಏಕಾಗ್ರತೆಯೇ ಅತ್ಯಂತ ಸಹಜವಾದುದು. ಅಲ್ಲಿ ಶ್ರಮವಿರುವುದಿಲ್ಲ . ತಿಕ್ಕಾಟ-ತಿಣುಕಾಟ ಗಳಿರುವುದಿಲ್ಲ.
ಆದರೆ. ಇಲ್ಲಿ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಸೂಚನೆಯನ್ನು ಕೊಡಬೇಕಾಗುತ್ತದೆ.ಏನೆಂದರೆ , ಅವರು ಮೇಲೆ ಹೇಳಿರುವಂತೆ ಹನ್ನೊಂದು ಅಂಶ ಗಳನ್ನು ಗಮನದಲ್ಲಿರಿಸಿಕೊಂಡು ಮುಂದುವರಿದರೂ ಅವರು ಅಧ್ಯಯನ ಮಾಡುವ ವಿಷಯವು ಸರಿಯಾಗಿ ಅರ್ಥವಾಗತೊಡಗುವವರೆಗೆ ಅವರಿಗೆ ಏಕಾಗ್ರತೆ ಸಿದ್ದಿಸಿತು ಎಂದು ಹೇಳುವಂತಿಲ್ಲ. ಆದ್ದರಿಂದ, 'ನನಗಿನ್ನೂ ಏಕಾಗ್ರತೆ ಏಕೆ ಸಿದ್ದಿಸಿಲ್ಲ? 'ಎಂದು ಕೊರಗಬಾರದು . ಬದಲಾಗಿ ಪಾಠವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ತಾಳ್ಮೆಯಿಂದ ಓದುತ್ತ ಹೋಗಬೇಕು. ಕ್ಲಿಷ್ಟ ಶಬ್ದಗಳ ಅರ್ಥವನ್ನು ಶಬ್ದಕೋಶದ ಸಹಾಯದಿಂದ ತಿಳಿದುಕೊಳ್ಳದೆ ಮುಂದೆ ಹೋಗಲೆಬಾರದು . ಹಾಗೆ ಅರ್ಥಮಾಡಿಕೊಳ್ಳದೆ ಓದಿದರೆ ಕೇವಲ ಸಮಯ ಹಾಳು,ಶಕ್ತಿ ನಷ್ಟ , ಪ್ರಯೋಜನ ಸೊನ್ನೆ , ಕ್ಲಿಷ್ಟ ಶಬ್ದಗಳನ್ನು ಅರ್ಥಮಾಡಿಕೊಳ್ಳದಿದ್ದರೆ ವಿಷಯ ಅರ್ಥವಾಗುವುದುಉಂಟೆ ?
- ಎ.ಟಿ .ನಾಗರಾಜ
ಡಬ್ಲು ಡಬ್ಲು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧ 9632172486

ಭಾನುವಾರ, ಮೇ 23, 2010

"ಓ ಶ್ರದ್ದೆ! ನೀನಿದ್ದರೆ ನಾ ಗೆದ್ದೆ. ನೀ ಕೈಬಿಟ್ಟರೆ ನಾ ಬಿದ್ದೆ"

ಪ್ರತಿಯೊಬ್ಬ ವಿದ್ಯ್ಯಾರ್ಥಿಯಲ್ಲೂ ಅಪೂರ್ವ ಜ್ಞಾನವನ್ನು ಪಡೆಯಬಲ್ಲ ಅಪಾರ ಶಕ್ತಿ ಅಡಗಿದೆ .ಇದರಲ್ಲಿ ಸಂಶಯವೇ ಇಲ್ಲ. ಆದರೆ ವಿದ್ಯ್ಯರ್ಥಿಯು ತನ್ನ ವಿಷಯದಲ್ಲಿ ತಾನೇ ಸಂಶಯ ತಾಳಬಾರದು. ಅಷ್ಟೇ. ಶ್ರದ್ದೆಯ ವೈರಿಯೇ ಸಂಶಯ. ಸಂಶಯ ತಾಳಿದ ಕೂಡಲೇ ಅವನಲ್ಲಿ ಅಡಗಿರುವ ಶಕ್ತಿಯೆಲ್ಲ ಉಡುಗಿ ಹೋಗುತ್ತದೆ. ಆಮೇಲೆ ಪಶ್ಚಾತ್ತಾಪ ಪಡುತ್ತ ಕುಲಿತಿರುವುದೊಂದೇ ಅವನ ಹಣೆಬರಹವಾದೀತು. ಅಂತರಂಗದಲ್ಲಿರುವ ಜ್ಞಾನವನ್ನು ವ್ಯಕ್ತಗೊಳಿಸಲು ಬಹಿರಂಗದ ಅಧ್ಯಯನವೇ ದಾರಿ. 'ನನ್ನೊಳಗಿರುವ ಜ್ಞಾನವನ್ನು ವ್ರುದ್ದಿಸಿಕೊಂಡೆ ತೀರುತ್ತೇನೆ'ಎಂಬ ದೃಡಸಂಕಲ್ಪ ಮಾಡಿ ಶ್ರದ್ದೆಯಿಂದ ಅಧ್ಯಯನಕ್ಕೆ ಕುಳಿತಾಗ ಮನಸ್ಸು ತನ್ನಷ್ಟಕ್ಕೆ ತಾನೇ ಏಕಾಗ್ರವಾಗುವ ವೈಖರಿಯನ್ನು ಅನುಭವಿಸಿಯೇ ನೋಡಬೇಕು .
ನಿಜಕ್ಕೂ ಈ ಶ್ರದ್ಧೆಯ ಮಹಿಮೆ ಅಪಾರ. ಆದ್ದರಿಂದ ಸದಾ ಹೇಳಿಕೊಳ್ಳುತ್ತಿರಬೇಕು-"ಓ ಶ್ರದ್ದೆ! ನೀನಿದ್ದರೆ ನಾ ಗೆದ್ದೆ. ನೀ ಕೈಬಿಟ್ಟರೆ ನಾ ಬಿದ್ದೆ",
ಏಕಾಗ್ರತೆಗೆ ಇನ್ನೊಂದು ಕೀಲಿಕೈ ಇದೆ. ಇದು ಮಾಸ್ಟರ್ ಕೀ ಅದೇ ಪ್ರೀತಿ . ಎಲ್ಲಿ ಪ್ರೀತಿಯಿರುವುದೋ ಅಲ್ಲಿ ನಮ್ಮ ಮನಸ್ಸು ನಾಟಿರುತ್ತದೆ ಎಂಬುದು ಅನಿವಾರ್ಯ ನಿಯಮ. ಪ್ರೀತಿ ಅಧಿಕವಾಗಿರುವಲ್ಲಿ ಮನಸ್ಸು ಗಾಢವಾಗಿ ಸಂಯೋಗಗೊಂಡಿರುತ್ತದೆ.. ಈ ಅಂಶವನ್ನು ಹೆಚ್ಚು ವಿವರಿಸಬೇಕಾಗಿಲ್ಲ.ಏಕೆಂದರೆ ಅವರವರ ಪ್ರೀತಿಯ ವಸ್ತುವಿನಲ್ಲಿ ಅವರವರ ಮನಸ್ಸು ನಾಟಿಕೊಂಡಿರುವುದನ್ನು ಅವರವರೇ ನೋಡಿಕೊಂಡರಾಯಿತು.ಆದ್ದರಿಂದ ವಿದ್ಯ್ಯಾರ್ಥಿಯು ತನ್ನ ಅಧ್ಯಯನದ ವಿಷಯದಲ್ಲಿ ಪ್ರೀತಿ ತಾಳಬೇಕಾದದ್ದು ಅತ್ಯಂತ ಅವಶ್ಯಕ .
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ . ಕಂ/
+ ೯೧ ೯೬೩೨೧೭೨೪೮೬

ಶನಿವಾರ, ಮೇ 22, 2010

ವೀರ್ಯಶಕ್ತಿಗಿಂತ ಶ್ರೇಷ್ಠವಾದ ಟಾನಿಕ್ಕು ಬೇರಾವುದೂ ಇಲ್ಲ

ಏಕಾಗ್ರತೆಯನ್ನು ಗಳಿಸಿಕೊಳ್ಳಬೇಕೆಂಬ ವಿದ್ಯಾರ್ಥಿಗಳು ಹರಟೆಹೊಡೆಯುವುದನ್ನು ವಿಷದಂತೆ ವರ್ಜೆಸಬೇಕು . ಆದರೆ ಅವರು ತಮ್ಮ ಪಟ್ಯಾ ವಿಷಯದ ಕುರಿತು ಸ್ಯೇಹಿತರೊಡನೆ ಚರ್ಚಿಸುವುದರಿಂದ ಬಾಧಕವಿಲ್ಲ . ಬದಲಾಗಿ ಅದು ಸಾಧಕವೇ ಆಗುತ್ತದೆ. ಆದರೆ ನಿಷ್ಪ್ರಯೋಜಕ ಹರಟೆಯಿಂದ ಮನಸ್ಸಿನ ಶಕ್ತಿ ಬಹಳ ಕುಂಟಿತಗೊಳ್ಳುತ್ತದೆ ಎಂಬುದು ಯೋಗೀಗಳು ಕಂಡುಕೊಂಡ ಸತ್ಯ.ಹರಟೆಯಿಂದ ಮನಸ್ಸಿನ ಶಿಸ್ತು -ಸುಸಂಬದ್ಧತೆ ಕೆಡುತ್ತದೆ . ಮನಸ್ಸು ದುರ್ಬಲಗೊಂಡಾಗ ಹಾಗೂ ಶಿಸ್ತನ್ನು ಕಳೆದುಕೊಂಡಾಗ ಏಕಾಗ್ರವಾಗಲು ಅಸಮರ್ಥವಾಗುತ್ತದೆ. ದುರ್ಬಲ ಶರೀರ -ಮನಸ್ಸಿನವರಿಗೆ ಏಕಾಗ್ರತೆ ಬಹುದೂರ.
ಏಕಾಗ್ರತೆಯಿಂದ ಓದಲು ಯತ್ನಿಸುವ ಕೆಲವು ವಿದ್ಯಾರ್ಥಿಗಳಿಗೆ ತಲೆನೋವು ಬರುವುದುಂಟು.ಇದಕ್ಕೆ ಪ್ರಧಾನ ಕಾರಣ ಅವರ ಮಿದುಳಿಗೆ ಶಕ್ತಿಯಿಲ್ಲದಿರುವುದು . ಮಿದುಳು ಬಲಗೊಳ್ಳುವಂತೆ ಪೌಷ್ಟಿಕ ಆಹಾರದೊಂದಿಗೆ ಟಾನಿಕ್ಕು ಅಧವಾ ಚ್ಯವನ ಪ್ರಾಶಾದಿಗಳನ್ನು ಸೇವಿಸಬೇಕು. ಹಿತವಾದ ಪ್ರಮಾಣದಲ್ಲಿ ಹಾಲು , ಬೆಣ್ಣೆ,ತುಪ್ಪ ಪ್ರತಿದಿನ ಸೇವಿಸಬೇಕು . ಆದರೆ ಯಾವುದನ್ನೇ ಆಗಲಿ ಅತಿಯಾಗಿ ಸೇವಿಸಿದರೆ ಗತಿಗೆಡುವುದು ನಿಶ್ಚಿತ . ವೀರ್ಯಶಕ್ತಿಗಿಂತ ಶ್ರೇಷ್ಠವಾದ ಟಾನಿಕ್ಕು ಬೇರಾವುದೂ ಇಲ್ಲ. ಈ ವೀರ್ಯಶಕ್ತಿಯನ್ನು ಅಂತ:ಕರಣಪೂರ್ವಕವಾಗಿ ಪ್ರಾರ್ಥಿಸಿಕೊಳ್ಳಬೇಕು. ಶರೀರ-ಮನಸ್ಸುಗಳನ್ನು ಸದಾ ಸುಚಿಯಾಗಿಟ್ಟಿರಬೇಕು.ಹುಲಿಕರಡಿಗಳಿಂದ ದೂರವಿರುವಂತೆ ವಿಲಾಸೀ ವಿದ್ಯಾರ್ಥಿಗಳ ಹಾಗೂ ಫಟಿಂಗ ಹುಡುಗರ ಸಹವಾಸಕ್ಕೆ ಸಿಕ್ಕಿಬೀಳದಂತೆ ಎಚ್ಚರಿಕೆಯಿಂದಿರಬೇಕು . ಆದರೆ ಅವರನ್ನು ನಿಂದಿಸಲು ಹೋಗಬಾರದು . ಹಾಗೆ ಮಾಡಿದರೆ ಅದು ಇನ್ನೊಂದು ಅನಾಹುತಕ್ಕೆ ಕಾರಣವಾಗುತ್ತದೆ.
ಏಕಾಗ್ರತೆಯನ್ನು ಸಿದ್ಧಿಸಿಕೊಳ್ಳಲು ಇನ್ನೊಂದು ಪ್ರಮುಖ ಸಾಧನವೆಂದರೆ ಶ್ರದ್ಧೆ, ಈ ಶ್ರದ್ಧೆ , ಹೊರಗಿನಿಂದ ಪಡೆಯುವ ವಸ್ತುವಲ್ಲ.ಒಳಗಿನಿಂದಲೇ ಬೆಳೆಯಬೇಕಾದ ಗುಣ.ಶ್ರದ್ದೆಯೆಂಬ ಗುಣ, ಶ್ರದ್ಧೆಯೆಂಬ ಶಬ್ದವನ್ನೇನೋ ಎಲ್ಲರೂ ಒಂದಲ್ಲ. ಒಂದು ಸಂದರ್ಭದಲ್ಲಿ ಕೇಳಿಯೇ ಇದ್ದಾರೆ . ಆದರೆ ಅದರ ಮರ್ಮವನ್ನರಿತವರು ಅತ್ಯಲ್ಪ ಮಂದಿ.ಅಂಥವರು ತಾವು ಹಿಡಿದ ಮಾರ್ಗದಲ್ಲಿ ಮುಂದುವರಿದು ತಮ್ಮ ಧ್ಯೇಯವನ್ನು ಸಿದ್ಧಿಸಿಕೊಂಡಿದ್ದಾರೆ . ಶ್ರದ್ಧೆಯ ಬಲವೇ ಅಂಥದು . ಅದು ಸಾಧಕನನ್ನು ಎಂದರೆ ಪ್ರಯತ್ನಶೀಲನನ್ನು , ಗುರಿ ಮುಟ್ಟಿಸದೆ ಬಿಡುವುದೇ ಇಲ್ಲ . ಹೀಗೆ ಹೇಳಿದಾಗ , ಹಾಗಾದರೆ ಈ ಶ್ರದ್ಧೆ, ಎಂದರೆ ಎಂತಹದು ಎಂಬ ಪ್ರಶ್ನೆ ಉದಿಸಿದರೆ ಆಶ್ಚರ್ಯವಿಲ್ಲ . ಶ್ರದ್ದೆಯೆಂದರೆ ತಮ್ಮ ಶಕ್ತಿಯಲ್ಲಿ ತಮಗೆ ಇರುವ ನಂಬಿಕೆ. ಇದಕ್ಕೆಆತ್ಮವಿಶ್ವಾಸ ಎನ್ನುವುದು . ಒಬ್ಬನಿಗೆ ಸಾಕಷ್ಟು ತೋಳ್ಬಲವಿರಬಹುದು . ಆದರೆ ತನ್ನ ತೋಳ್ಬಲದಲ್ಲಿ ಅವನಿಗೆ ನಂಬಿಕೆಯಿಲ್ಲದೆ ಹೋದರೆ ಅವನಿಗೆ ಅದರಿಂದೆನೂ ಪ್ರಯೋಜನವಾಗದು . ಹನುಮಂತನಲ್ಲಿ ಸಾಗರಲಂಘನ ಮಾಡುವ ಶಕ್ತಿಯಿದ್ದರೂ ಅವನಿಗೆ ಅದರಲ್ಲಿ ನಂಬಿಕೆಯಿರಲಿಲ್ಲ. ಆದ್ದರಿಂದ ಸುಮ್ಮನೆ ಕುಳಿತಿದ್ದ.ಆದರೆ ಜಾಂಬವಂತ ಅವನಲ್ಲಿ ನಂಬಿಕೆ ತುಂಬಿ ಶಕ್ತಿಯ ಅರಿವು ಮಾಡಿಕೊಟ್ಟಾಗ ಒಂದೇ ನೆಗೆತಕ್ಕೆ ಲಂಕೆಯನ್ನು ತಲುಪಿದ.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು . ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486

ಶುಕ್ರವಾರ, ಮೇ 21, 2010

'ಒಂದು ಗಂಟೆಯ ಅವಧಿಯಲ್ಲಿ ಇಂತಿಷ್ಟು ವಿಷಯಗಳನ್ನು ಅಧ್ಯಯನ ಮಾಡಿ ಮುಗಿಸುತ್ತೇನೆ 'ಎಂದು ವಿದ್ಯಾರ್ಥಿಗಳು ತಮಗೆ ತಾವೇ ನಿಬಂಧನೆ ಹಾಕಿಕೊಳ್ಳಬೇಕು

ಮನಸ್ಸು ನಿದ್ರಾವಸ್ಥೆಯಲ್ಲಿದ್ದರೂ ನಷ್ಟವಿಲ್ಲ . ಸ್ವಪ್ನಾವಸ್ಥೆಯಲ್ಲಿದ್ದರು ಬಾಧಕವಿಲ್ಲ; ಆದರೆ ಈ ಮನಸ್ಸು ಅಸಭ್ಯತೆ, ಅಶ್ಲೀಲತೆಗಳನ್ನು ಮೈಗೂಡಿಸಿಕೊಂಡಿತೆಂದರೆ ಏಕಾಗ್ರತೆಯ ಮಾತನ್ನೆಲ್ಲ ಕಟ್ಟಿಡಬೇಕಾಗುತ್ತದೆ. ಶುಚಿಯಾದ , ಪವಿತ್ರವಾದ ಮನಸ್ಸಿಗೆ ಏಕಾಗ್ರತೆಎಂಬುದು ಸುಲಭವಾಗಿ ಸಿದ್ಧಿಸುತ್ತದೆಯಾದ್ದರಿಂದ ಅಸಭ್ಯತೆ ಅಶ್ಲೀಲತೆಗಳನ್ನು ಬಳಿಯೇ ಸುಳಿಯಗೊಡದಿರಬೇಕು .
'ಒಂದು ಗಂಟೆಯ ಅವಧಿಯಲ್ಲಿ ಇಂತಿಷ್ಟು ವಿಷಯಗಳನ್ನು ಅಧ್ಯಯನ ಮಾಡಿ ಮುಗಿಸುತ್ತೇನೆ 'ಎಂದು ವಿದ್ಯಾರ್ಥಿಗಳು ತಮಗೆ ತಾವೇ ನಿಬಂಧನೆ ಹಾಕಿಕೊಳ್ಳಬೇಕು ಮತ್ತು ಆ ಅವಧಿಯೊಳಗೆ ಅದನ್ನು ಮುಗಿಸಲು ತವಕಪಡಬೇಕು. ಮೊದಮೊದಲು ಆ ಅವಧಿಯೊಳಗೆ ಮುಗಿಸಲು ಸಾಧ್ಯವಾಗದೆ ಹೋಗಬಹುದು . ಆದರೆ ಪ್ರಯತ್ನದಲ್ಲಿ ತವಕ ಎದ್ದರೆ ಮನಸ್ಸು ಹೆಚ್ಚು ಎಚ್ಚರವಾಗಿರಲು ಸಾಧ್ಯವಾಗುವುದು ಖಂಡಿತ.
ಹೀಗೆ ಮನಸ್ಸನ್ನು ಸದಾ ಎಚ್ಚರವಾಗಿಡಲು ಯತ್ನಿಸಿದರೆ , ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದು.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ .ಕಂ
+೯೧ 9632172486

ಗುರುವಾರ, ಮೇ 20, 2010

ಅಧ್ಯಯನದಲ್ಲಿ ಏಕಾಗ್ರತೆಯನ್ನು ತಂದುಕೊಳ್ಳಲು ಇನ್ನೊಂದು ಉಪಾಯವನ್ನು ಸೇರಿಸಿಕೊಳ್ಳಬಹುದು -ವಿಷಯದ ಕಡೆಗೆ ಚೆನ್ನಾಗಿ ಗಮನ ವಿಟ್ಟು ಓದುವುದೇ ಆ ಉಪಾಯ .

ಅಧ್ಯಯನದಲ್ಲಿ ಏಕಾಗ್ರತೆಯನ್ನು ತಂದುಕೊಳ್ಳಲು ಇನ್ನೊಂದು ಉಪಾಯವನ್ನು ಸೇರಿಸಿಕೊಳ್ಳಬಹುದು -ವಿಷಯದ ಕಡೆಗೆ ಚೆನ್ನಾಗಿ ಗಮನ ವಿಟ್ಟು ಓದುವುದೇ ಉಪಾಯ . ಹೀಗೆ ಗಮನವಿಡುವುದಕ್ಕೆ 'ಅವಧಾನ 'ಎನ್ನುತ್ತಾರೆ . ಎಂದರೆ ಇದೇ ಮನಸ್ಸನ್ನು ಸಾಕಷ್ಟು ಎಚ್ಚರದ ಸ್ಥಿತಿಯಲ್ಲಿಟ್ಟು ಕೊಂಡರೆ ಮಾತ್ರ ಈ 'ಅವಧಾನ'ಸಿದ್ದಿಸುತ್ತದೆ.ಹೆಚ್ಚಿನ ವಿದ್ಯ್ಯಾರ್ಥಿಗಳು ಗಮನವಿಟ್ಟು ಅಧ್ಯಯನ ಮಾಡಲು ಅಸಮರ್ಥರಾಗಿರುತ್ತಾರೆ. ಏಕೆಂದರೆ,ಅವರ ಮನಸ್ಸು ಒಂದು ಬಗೆಯ ಸ್ವಪ್ನಾವಸ್ಥೆಯಲ್ಲಿಯೇ ಇರುತ್ತದೆ .ಅಥವಾ ಯಾವುದೋ ಒಂದು ಭಾವಾಲೋಕದಲ್ಲಿ ವಿಹರಿಸುತ್ತಿರುತ್ತದೆ.ಆದರೆ ಯಾರಮನಸ್ಸು ಎಚ್ಚರದಿಂದಿರುತ್ತದೆಯೋ ಅವರಿಗೆ ಏಕಾಗ್ರತೆ ಸುಲಭವಾಗಿ ಸಿದ್ಧಿಸುತ್ತದೆ. 'ಹಾಗಾದರೆ ಈ ಮನಸ್ಸನ್ನು ಎಚ್ಚರದ ಸ್ಥಿತಿಯಲ್ಲಿಡುವುದು ಹೇಗೆ?'ಎಂಬ ಪ್ರಶೆ ಹುಟ್ಟಿಕೊಳ್ಳಲು ಸಾಧ್ಯವಿದೆ . ಇದಕ್ಕೆ ಕೆಲವು ಸಲಹೆಗಳನ್ನು ಕೊಡಬಹುದು.
ಕೆಲವು ಬಗೆಯ ಆಹಾರಫದಾರ್ಥಗಳನ್ನು ಸೇವಿಸಿದರೆ ನಿದ್ರೆ ಅಧಿಕವಾಗುವುದುಂಟು . ಅಂಥವುಗಳನ್ನು ವರ್ಜೆಸಬೇಕು.
ಶರೀರದ ಅಂಗಪ್ರತ್ಯನಗವನ್ನು ಅತ್ಯಂತ ಶುಚಿಯಾಗಿಟ್ಟು ಕೊಳ್ಳುವುದರಿಂದ ಮನಸ್ಸು ಉಲ್ಲಸಭರಿತವಾಗಿರುತ್ತದೆ.ಜೊತೆಗೆ ಹಾಸಿಗೆ ಬಟ್ಟೆಯಿಂದ ಹಿಡಿದು ಧರಿಸುವ ಬಟ್ಟೆಬರೆಯವರೆಗೆ ಪ್ರತಿಯೊಂದು ಚೊಕ್ಕಟವಾಗಿರುವಂತೆ ಎಚ್ಚರಿಕೆ ವಹಿಸಬೇಕು.
ವಾಸದ ಕೋಣೆಯಲ್ಲಿರುವ ಹಾಗೂ ದೈನಂದಿನ ಬಳಕೆಯ ಎಲ್ಲ ವಸ್ತು ಗಳೂ ಅಚ್ಚುಕಟ್ಟು ಆಗಿರಬೇಕು . ಈ ಅಚ್ಹುಕತ್ತುತನವು ಮನಸ್ಸಿನ ಎಚ್ಚರಸ್ಥಿತಿ ಯನ್ನು ಸಾರಿಹೇಳುತ್ತದೆ. ಹೆಚ್ಚಿನ ವಿದ್ಯ್ಯಾರ್ಥಿಗಳಲ್ಲಿ ಕಂಡುಬರುವುದು ಎಚ್ಚರಗೇಡಿತನವೇ . ಅವರು ಉಪಯೋಗಿಸುವ ಪುಸ್ತಾಕಾದಿ ಸಕಲ ವಸ್ತುಗಳು ಅಸ್ತವ್ಯಸ್ತವಾಗಿರುವುದು ಆ ಎಚ್ಚರಗೇಡಿ- ತನವನ್ನು ಎತ್ತಿತೋರಿಸುತ್ತದೆ.
ಶರೀರ-ವಸ್ತ್ರ -ವಸ್ತುಗಳನ್ನು ಚೊಕ್ಕಟವಾಗಿಯೂ ವ್ಯವಸ್ತಿತವಾಗಿಯು ಇಟ್ಟುಕೊಳ್ಳಬೇಕಾದಂತೆಯೇ ಮನಸ್ಸನ್ನೂ ಚೊಕ್ಕಟವಾಗಿಟ್ಟಿರಬೇಕು ಎಂಬ ಮಹತ್ವದ ಸಂಗತಿಯೊಂದು ವಿದ್ಯಾರ್ಥಿಗಳಿಗೆ ತಿಳಿದಿರಬೇಕು.ಅಸಭ್ಯ ,ಅಶ್ಲೀಲ ವಿಚಾರಗಳು ಮನಸ್ಸಿನೊಳಗೆ ಪ್ರವೇಶವಾಗಲು ಬಿಡಬಾರದೆಂಬ ವಿಷಯವಂತಿರಲಿ , ಹತ್ತಿರವೇ ಸುಳಿಯದಂತೆ ನೋಡಿಕೊಳ್ಳಬೇಕು .ಏಕೆಂದರೆ ಮನಸ್ಸನ್ನೂ ಕೆಡಿಸುವ ಮಹಾಮಾರಿಗಳು ಅವು.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486

ಬುಧವಾರ, ಮೇ 19, 2010

ಏಕಾಗ್ರತೆಯಿಂದ ಅಧ್ಯಯನಕ್ಕೆ ಕುಳಿತ ಸಂದರ್ಭದಲ್ಲಿ ಯಾರಾದರೂ ಮನೆಮಂದಿ ಬಂದು ಯಾವುದೋ ಕೆಲಸಕ್ಕೆ ಕರೆಯಬಹುದು. ಆದ್ದರಿಂದ ಅವರಿಗೆ ಮೊದಲೇ ಹೇಳಿಟ್ಟಿರಬೇಕು. "ಒಂದು ಗಂಟೆಯ ಕಾಲ ಯಾರೂ ನ

ಏಕಾಗ್ರತೆಯಿಂದ ಅಧ್ಯಯನಕ್ಕೆ ಕುಳಿತ ಸಂದರ್ಭದಲ್ಲಿ ಯಾರಾದರೂ ಮನೆಮಂದಿ ಬಂದು ಯಾವುದೋ ಕೆಲಸಕ್ಕೆ ಕರೆಯಬಹುದು. ಆದ್ದರಿಂದ ಅವರಿಗೆ ಮೊದಲೇ ಹೇಳಿಟ್ಟಿರಬೇಕು. "ಒಂದು ಗಂಟೆಯ ಕಾಲ ಯಾರೂ ನನ್ನನ್ನು ಕರೆಯಬೇಡಿ "
ಎಂದು , ಏಕೆಂದರೆ , ಯಾರಾದರೂ ಬಂದು ಕರೆದಾರು ಎಂಬ ನಿರೀಕ್ಷೆ ಮನದಲ್ಲಿ ಕಿಂಚಿತ್ತು ಇದ್ದರೂ ಕೂಡ ಏಕಾಗ್ರತೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ.

ಇನ್ನು ಶಬ್ದ ಮಾಲಿನ್ಯದ ಸಮಸ್ಯೆಯೊಂದಿದೆ; ಹಳ್ಳಿಗಳೇ ಮೊದಲಾದ ಪ್ರಶಾಂತ ವಾತಾವರಣದಲ್ಲಿರುವ ವಿದ್ಯಾರ್ಥಿಗಳು ಈ ವಿಷಯದಲ್ಲಿ ಭಾಗ್ಯವಂತರು , ಆದರೆ ಪಟ್ಟಣಗಳಲ್ಲಿ , ಅದರಲ್ಲೂ ರಾಜಧಾನಿಗಳಲ್ಲಿ , ವಾಸವಾಗಿರುವ ವಿಧ್ಯಾರ್ಥಿಗಳು ಅನಾವಶ್ಯಕ ಗದ್ದಲಗಳೊಂದಿಗೆ ಗುದ್ದಾಡುತ್ತಿರಬೇಕಾಗುತ್ತದೆ. ಈ ಗದ್ದಲಗಳೆಲ್ಲ ನಗರಗಳಲ್ಲಿ ಅನಿವಾರ್ಯವಾದ್ದರಿಂದ ಅದಕ್ಕೆ ಹೊಂದಿಕೊಳ್ಳದೆ ಬೇರೆ ದಾರಿಯಿಲ್ಲ . ಆದರೆ ಎಷ್ಟು ಹೊಂದಿಕೊಳ್ಳಬೇಕೆಂದರೂ ಧ್ವನಿವರ್ಧಕಗಳು ಅರಚಾಡಲು ಆರಂಭಿಸಿದುವೆಂದರೆ , ಅಧ್ಯಯನವೆಲ್ಲ ಅಧ್ವಾನವಾಗಿಬಿಡುತ್ತದೆ.ವಿನಾಯಕ ಚೌತಿ ಬಂತೆಂದರೆ ಒಂದು ತಿಂಗಳು ಕರ್ಣಕರ್ಕಶ , ಕನ್ನಡ ರಾಜ್ಯೋತ್ಸವ ಬಂದಾಗ ಇನ್ನೊಂದು ತಿಂಗಳು ಗುಲ್ಲೋಗುಲ್ಲು . ಶ್ರೀರಾಮನವಮಿಯ ತಿಂಗಳಲ್ಲಂತೂ ವಿದ್ಯಾರ್ಥಿಗಳ ಪಾಡು ಅವರಿಗೆ ಗೊತ್ತು. ಇವೆಲ್ಲ ನಗರದ ಕೆಲವು ನರಕಸದೃಶ ಪರಿಸ್ಥಿತಿಗಳು ಸಮಾಜದ ವಿದ್ಯಾವಂತರು,ಶಿಕ್ಷಣತಜ್ಞರು ಈ ವಿಷಯದಲ್ಲಿ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿರುವುದು ಕಂಡುಬರುತ್ತದೆ. ಶಿಕ್ಷಣತಜ್ನರಿಗೆ ಅಧಿಕಾರಬಲವಿಲ್ಲವೆಂದು ತೋರುತ್ತದೆ.ಅಧಿಕಾರಬಲವಿರುವವರಿಗೆ ವಿವೆಕಪ್ರಜ್ನೆಯಿರುವಂತೆ ಕಾಣುತ್ತಿಲ್ಲ. ಇರಲಿ ವಿದ್ಯಾರ್ಥಿಗಳು ಧ್ವನಿಮಾಲಿನ್ಯದಿಂದ ಪಾರಾಗಲು ಒಂದೇ ಒಂದು ದಾರಿಯೆಂದರೆ ತಾವು ಅತ್ಯಂತ ಉನ್ನತ ಮಟ್ಟದ ವಿದ್ಯಾವಂತರಾಗಬೇಕೆನ್ನುವ ಹಂಬಲವನ್ನು ತೀವ್ರಗೊಳಿಸುವುದು .ಮನದಲ್ಲಿ ಹಂಬಲವಿದ್ದರೆ ಹೊರಗಣ ಯಾವ ಗದ್ದಲವೂ ಕೇಳಿಸುವುದೇ ಇಲ್ಲ .ಉದಾಹರಣೆಗೆ ತಲೆಯಲ್ಲಿ ಚಿಂತೆಯೊಂದು ತುಂಬಿಕೊಂಡಿದ್ದರೆ ಪಕ್ಕದಲ್ಲಿ ತಮ್ಮಟೆ ಬಾರಿಸುತ್ತಿದ್ದರೂ ಅದರ ಕಡೆಗೆ ನಮ್ಮ ಗಮನವಿರುವುದಿಲ್ಲ . ಪರೀಕ್ಷೆ ಸಮೀಪಿಸಿದಾಗ ಈ ಹಂಬಲ ಸಾಕಷ್ಟು ತೀವ್ರ ವಾಗುವುದುಂಟು . ಆದರೆ ಪರೀಕ್ಸೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇರುವಾಗಲೇ ಆ ತೀವ್ರಹಂಬಲವಿದ್ದರೆ ಏಕಾಗ್ರತೆಯನ್ನು ಚೆನ್ನಾಗಿ ಬೆಳಸಿಕೊಳ್ಳಬಹುದು. ದಿಡೀರನೆ ಏಕಾಗ್ರತೆಯನ್ನು ಬರಿಸಿ ಕೊಳ್ಳುವುದು ಎಂಥವರಿಂದಲೂ ಸಾಧ್ಯವಿಲ್ಲ ಎಂಬ ಸಂಗತಿಯನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು .ಸನ್ ನಾಚುರಲ್ ಫ್ಲಾಶ್ .ಕಂ /
+೯೧ -9632172486

ಮಂಗಳವಾರ, ಮೇ 18, 2010

ಓದಲು ಅಥವಾ ಬರೆಯಲು ಕುಳಿತಾಗ ಶರೀರ ತುಂಬಾ ಅಲುಗಾಡುವಂತೆ ಮಾಡುವುದು ಏಕಾಗ್ರತೆಗೆ ಮಾರಕ!

ಓದಲು ಅಥವಾ ಬರೆಯಲು ಕುಳಿತಾಗ ಶರೀರ ತುಂಬಾ ಅಲುಗಾಡುವಂತೆ ಮಾಡುವುದು ಏಕಾಗ್ರತೆಗೆ ಮಾರಕ!
ಪಾತ್ರೆ ಅಲುಗಾಡುತ್ತಿದ್ದರೆ ಅದರಲ್ಲಿರುವ ನೀರೂ ಅಲುಗಾಡುವಂತೆ ,ಶರೀರ ವಿವಿಧ ಚಲನವಲನಗಳನ್ನು ಸರಿಯಾದ ಕ್ರಮದಲ್ಲಿ ಕುಳಿತು ಓದಲು ಅಥವಾ ಬರೆಯಲು ತೊಡಗಬೇಕಾದದ್ದು ಪ್ರಮುಖ ಅಂಶ.

ಒಂದು ಸಲಕ್ಕೆ ಒಂದು ವಿಷಯವನ್ನು ಮಾತ್ರವೇ ಅಧ್ಯನಕ್ಕೆ ತೆಗೆದುಕೊಳ್ಳಬೇಕು
ಎಂಬುದನ್ನು ಪ್ರ್ಯತ್ಯೆಕವಾಗಿ ಹೇಳಬೇಕಾಗಿಲ್ಲ . ಆದರೆ ಒಂದು ವಿಷಯವನ್ನು ಅಧ್ಯಯನ ಮಾಡಲು ಕುಳಿತರೆ ಕನಿಷ್ಠ ಪಕ್ಷ ಒಂದು ಗಂಟೆಯ ಕಾಲವಾದರೂ ಮನಸ್ಸು ಅದರಲ್ಲೇ ತನ್ಮಯವಾಗಿರುವಂತೆ ನೋಡಿಕೊಳ್ಳಬೇಕು , ಪುಸ್ತಕವನ್ನು ಸುಮ್ಮನೆ ಓದಿಕೊಂಡು ಹೋದರೆ ಅಧ್ಯಯನ ಮಾಡಿದಂತಾಗುವುದಿಲ್ಲ.ಪುಸ್ತಕವನ್ನು ಸುಮ್ಮನೆ ಓದಿಕೊಂಡು -ಹೋಗುವುದಕ್ಕೂ ಅಧ್ಯಯನ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ ಎಂಬುದನ್ನು ತಿಳಿದಿರಬೇಕು. ಆದರೆ ಏಕಾಗ್ರತೆ ಮಾತ್ರ ಇವರೆಡಕ್ಕು ಸಮಾನವಾಗಿ ಅಗತ್ಯವಿರುವ ಅಂಶವೆನ್ನಿ.ಪುಸ್ತಕವನ್ನು ಸುಮ್ಮನೆ ಓದಿಕೊಂಡುಹೋದಾಗ ಅದರ ಅಭಿಪ್ರಾಯವೇನೆಂದು ತಿಳಿಯುತ್ತದೆ .ಅಷ್ಟೇ , ಆದರೆ ಅದನ್ನೇ ಅಧ್ಯಯನ ಮಾಡಿದಾಗ ನಮ್ಮ ಮನಸ್ಸು ಅದರಲ್ಲಿ ವಿವರಿಸಲಾದ ವಿಷಯದ ಆಳಕ್ಕೆ ಹೋಗಿ ಅಂತರಾರ್ಥವನ್ನು ಅರಿಯುತ್ತದೆ. ಇದರಿಂದಾಗಿ ಅಂದು ಮಾಡಿದ ಅಧ್ಯನ ವಿಷಯ ನಮ್ಮ ಸ್ವಾಧೀನಕ್ಕೆ ಬರುತ್ತದೆ ಮತ್ತು ಇದು ಮುಂದಿನ ವಿಷಯದ ಅಧ್ಯಯನಕ್ಕೆ ನೆರವಾಗುತ್ತದೆ.
ಒಮ್ಮೆ ಅಧ್ಯಯನಕ್ಕೆ ಕುಳಿತೆವೆಂದರೆ ಒಂದು ಗಂಟೆಯ ಕಾಲ ಅದರಲ್ಲೇ ತೊಡಗಿರಬೇಕು
ಎಂಬುದನ್ನು ಇಲ್ಲಿ ವಿಶೇಷವಾಗಿ ಗಮನಿಸಬೇಕು. ಮನಸ್ಸು ಒಂದು ವಿಷಯವನ್ನು ಏಕಾಏಕಿ ಗ್ರಹಿಸಲು ಸಿದ್ದವಿರುವುದಿಲ್ಲ . ಅಧ್ಯಯನಕ್ಕೆ ಕುಳಿತುಕೊಳ್ಳುವ ಮೊದಲು ನಾವು ಯಾವ ಕಾರ್ಯ ಮಾಡುತ್ತಿದ್ದೆವೋ ಅಥವಾ ಯಾವ ಮಾತನ್ನಾಡುತ್ತಿದ್ದೆವೋ ಅಥವಾ ಇನ್ನಾವ ವಿಷಯವನ್ನು ಚಿಂತಿಸುತ್ತಿದ್ದೆವೋ ವಿಷಯವೇ ನಮ್ಮ ಮನಸ್ಸಿನಲ್ಲಿ ಇನ್ನೂ ಸುಳಿದಾಡುತ್ತಿರುತ್ತದೆ.ಆದ್ದರಿಂದ ಈಗ ಅಧ್ಯಯನಕ್ಕೆ ಕುಳಿತಾಗ ಮನಸ್ಸು ಅಣೆಯಾಗುವುದಕ್ಕೆ ಎಂಟು-ಹತ್ತು ನಿಮಿಷಗಳಾದರೂ ಬೇಕಾಗಬಹುದು.ಮತ್ತು ಮನಸ್ಸು ವಿಷಯದ ಆಳಕ್ಕೆ ಪ್ರವೇಶಿಸಿ ಅರಿಯಲು ತೊಡಗುವ ವೇಳೆಗೆ ಸರಕ್ಕನೆ ಅಲ್ಲಿಂದ ಎದ್ದರೆ ಏಕಾಗ್ರತೆ ನಷ್ಟವಾಗುತ್ತದೆ . ಅಧ್ಯಯನ ಭ್ರಷ್ಟವಾಗುತ್ತದೆ.ಆದ್ದರಿಂದ ಮನಸ್ಸು ಅಧ್ಯಯನದಲ್ಲಿ ಕೆಂದ್ರೀಕ್ರುತವಾದಾಗ ಅವಕಾಶವನ್ನು ಉಪಯೋಗಿಸಿಕೊಂಡು ಇನ್ನೂ ಆಳಕ್ಕೆ ಮುಳುಗಬೇಕು. ಹೀಗೆ ಒಂದು ಗಂಟೆಯ ಕಾಲವಾದರೂ ಮನಸ್ಸು ಅಲ್ಲೇ ನಿಲ್ಲುವಂತೆ ಮಾಡಬೇಕು.
ಮನಸ್ಸನ್ನು ಹತೋಟಿಯಲ್ಲಿ ಇಡಬೇಕಾದ ಅವಶ್ಯಕತೆಯಾದರೂ ಏನಿದೆ?.-ಎಂಬ ಪ್ರಶ್ನೆಯೊಂದು ಏಳುತ್ತದೆ . ಅದಕ್ಕೊಂದು ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕು .ಉತ್ತರವಿಷ್ಟೇ; ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ ಅದರ ಮೂಲಕ ಮಹತ್ಕಾರ್ಯಗಳನ್ನೇ ಸಾಧಿಸಿಬಿಡಬಹುದು. ಅದು ನಮ್ಮ ಹತೊಟಿಯಲ್ಲಿರದಿದ್ದರೆ ಮಾತ್ರ ಅದರಿಂದ ಸಾಮಾನ್ಯ ಕಾರ್ಯವನ್ನೂ ಮಾಡಿಸಲು ಸಾಧ್ಯವಾಗುವುದಿಲ್ಲ.

ನಿಜಕ್ಕೂ ನಮ್ಮ ಮನಸ್ಸಿಗೆ ಪ್ರಚಂಡ ದೈತ್ಯ ಶಕ್ತಿಯೇ ಇದೆ. ಆದರೂ ಹಲವರು ಎಷ್ಟೋ ವೇಳೆ , ಅಥವಾ ಜೀವನವಿಡಿ ,ದುರ್ಬಲರಂತೆ ಇರುತ್ತಾರೆ. ಇದ್ದಕ್ಕೆ ಅವರ ಮನಶಕ್ತಿಯು ನಾನಾ ರೀತಿಗಳಿಂದ ಹಂಚಿಹೊಗಿರುವುದೇ ಕಾರಣವಾಗಿದೆ. ಸೂರ್ಯಕಿರಣಗಳಿಗೆ ಸುಡುವ ಶಕ್ತಿಯಿದಿಯೆಂಬ ಸತ್ಯ ಎಲ್ಲರಿಗೂ ತಿಳಿದಿಲ್ಲ , ಕಾರಣ , ಅವು ಇಲ್ಲಿಯವರೆಗೂ ಎಲ್ಲಿಯೂ ಬೆಂಕಿ ಹೊತ್ತಿಸಿ ವಸ್ತುಗಳನ್ನು ಸುಡಲಿಲ್ಲವಲ್ಲ! .ಆದರೆ ಅದೇ ಕಿರಣಗಳನ್ನು ಭೂತಕನ್ನಡಿಯ ಮೂಲಕ ಹಾಯಿಸಿ ಕಾಗದದ ಮೇಲೆ ಬಿಟ್ಟಾಗ ಬೆಂಕಿ ಹೊತ್ತಿಕೊಳ್ಳುವುದು ಕಾಣುತ್ತದೆ. ಆ ಕಿರಣಗಳಿಗೆ ಈಗ ಎಲ್ಲಿಂದ ಬಂತು ಈ ಸುಡುವ ಶಕ್ತಿ?. ಅವುಗಳನ್ನು ಏಕತ್ರ ಗೊಳಿಸಿದ್ದರಿಂದ ,ಹಿಂದೆ ಅವು ಹರಡಿಕೊಂಡಿದ್ದವು , ಆದ್ದರಿಂದ ಶಾಖಮಾತ್ರ ಇತ್ತು. ಈಗ ಏಕತ್ರ ಗೊಂಡಾಗ ಧಗಧಗಿಸುವ ಅಗ್ನಿಯೇ ಉದ್ಬವಿಸಿತು.ಇದೇ ನಾವು ಗಮನಿಸಬೇಕಾದ ರಹಸ್ಯ . ನಮ್ಮ ಮನದಲ್ಲಿ ಸಹಜವಾಗಿಯೇ ಅಪಾರ ಶಕ್ತಿಯಿದೆ . ಆದರೆ ಅದು ಬೇಕಾದ-ಬೇಡವಾದ ಎಲ್ಲ ವಿಷಯಗಳಲ್ಲೂ ಹರಡಿಕೊಂಡಿರುವುದರಿಂದ ನಮ್ಮಿಂದ ಸಾಮಾನ್ಯ ಕೆಲಸ ಕಾರ್ಯಗಳನ್ನು ಮಾಡಲು ಮಾತ್ರವೇ ಸಾಧ್ಯವಾಗುತ್ತದೆ.ಮಹತ್ಕಾರ್ಯವನ್ನೇ ನಾದರು ಸಾಧಿಸಬೇಕಾದರೆ ಹರಡಿಕೊಂಡಿರುವ ಮನಶ್ಯಕ್ತಿಯನ್ನು ಒಗ್ಗೂಡಿಸಬೇಕಾಗುತ್ತದೆ.ಮನಶ್ಯ್ಕತಿಯನ್ನು ಒಗ್ಗೂಡಿಸಬೇಕಾದರೆ ನಮ್ಮ ಮನಸ್ಸು ನಮ್ಮ ಅಧೀನದಲ್ಲಿರಬೇಕಾಗುತ್ತದೆ . ಕಂಡ ಕಂಡ ಕಡೆಗೆಲ್ಲ ಮಂಡೆಗೆಟ್ಟು ಓಡುವ ಮನಸ್ಸು ನಮ್ಮದಲ್ಲ. ಇಂದ್ರಿಯಗಳ ಆಹ್ವಾನಕ್ಕೆ ಓಗೊಟ್ಟು ವಿಷಯವಸ್ತುಗಳಲ್ಲಿ ಮುಳುಗಿರುವ ಮನಸ್ಸು ನಮ್ಮದಲ್ಲ. ನಮ್ಮದಲ್ಲ ದ ಮನಸ್ಸಿನಿಂದ ನಾವು ಏನು ತಾನೇ ಮಾಡಿಸಲು ಸಾದ್ಯ?

ಋಷಿಮುನಿಗಳು ಸತತ ಪ್ರಯತ್ನದಿಂದ ಮೊದಲು ಸಾಧಿಸಿದ್ದೆ ಮನಸ್ವಯಮವನ್ನು . ಎಂದರೆ ತಮ್ಮ ಮನಸ್ಸನ್ನು ತಮ್ಮ ಹಿಡಿತಕ್ಕೆ ತಂದು ಕೊಂಡದ್ದು.ಬಳಿಕ ಆ ಮನಸ್ಸನ್ನು ಹಿಡಿದು ಏಕಾಗ್ರಗೊಲಿಸಿದಾಗ ಅದು ಸಕಲ ಯೋಗರಹಸ್ಯಗಳನ್ನೇ ಬಯಲಿಗೆಳೆಯಿತು . ದಿವ್ಯ ಜ್ಞಾನವನ್ನೇ ಪ್ರಾಪ್ತಿಮಾಡಿಕೊಟ್ಟಿತು.

ಜೋಗದ ಜಲಪಾತದಂತೆ ಯುವಕರ ಮನಸ್ಸು!ಬೃಹತ್ ಪ್ರಮಾಣದ ನೀರು ಎತ್ತರದ ಬೆಟ್ಟದಿಂದ ಧುಮುಧುಮಿಸಿ ಧುಮಿಕಿ , ಎಲ್ಲೆಂದರಲ್ಲಿ ಹರಿದಾಡಿ , ಕೊನೆಗೂ ಯಾವ ಉಪಯೋಗಕ್ಕೂ ಬಾರದೆ ಸಮುದ್ರಕ್ಕೆ ಸೇರಿ ಹೇಳ ಹೆಸರಿಲ್ಲದಂತಾಗುತ್ತದೆ. ಆದರೆ ಆ ನೀರಿಗೆ ಆಣೆಕಟ್ಟು ಕಟ್ಟಿ , ಕಾಲುವೆಯಲ್ಲಿ ಹರಿಯಿಸಿ , ಹೊಲಗಳಿಗೆ ತಂದುಕೊಂಡಾಗ ಹಸನಾದ ಬೆಳೆ ನಳನಳಿಸುತ್ತದೆ.
ಹಾಗೆಯೇ , ಮನಬಂದಂತೆ ಕುಣಿದಾಡಿ , ವ್ರಥಾ ವ್ಯಯವಾಗುವ ಯುವಕರ ಅಶಿಕ್ಷಿತ ಮನಶಕ್ತಿಗೆ ನಿಯಮಗಳ ಆಣೆಕಟ್ಟು ಕಟ್ಟಿ, ಶಿಸ್ತಿನ ಕಾಲುವೆ ತೋಡಿ , ಅದನ್ನು ಶಿಕ್ಷಣ ಕಲೆ ಸಾಹಿತ್ಯ ಕರ್ಮಕೌಶಲಗಳೆಂಬ ಹೊಲಗಳಲ್ಲಿ ಹರಿಯಿಸಿದಾಗ ಸಂಸ್ಕೃತಿಯೆಂಬ ಫಸಲು ಸಮೃದ್ಧವಾಗುತ್ತದೆ.

ಚಳಿ ಇಳಿದಿದೆ ಇಳೆಗೆ
ನಡುಕವು ಗಿಳಿ ಮರಿಗೆ !

ಮರಮರದಲಿ ಎಲೆ ಉದಿರಿವೆ
ಬತ್ತಲೆಯ ಕಾಡು
ಮಾತೆಲ್ಲವ ಮರೆತಿರುವೆ
ಹೊಸ ಹದನೆ ಹಾಡು

ಗಿಳಿಗಿಳಿಯೇ ಇಳೀಳಿಯೆ
ನೋಡೋಣ ಬಾರೆ !
ಹಸಿಹಸಿರಿನ ಉಸಿಉಸಿರನು
ಬಸಿಬಸಿದು ತೋರೆ

ಜಗವೆಲ್ಲವು ಪಂಜರವು
ಹಾಗೆ ನೋಡಿದರೆ
ಅಲ್ಲದಿರೆ ರಂಜನೆಯು
ಬರಿದೆ ಹಾಡಿದರೆ !

----------------ರಾಜು ಹೆಗ್ಡೆ
ಕನ್ನಡ ಉಪನ್ಯಾಸಕ
ಎಂ ಎಂ ಕಾಲೇಜು ಸಿರ್ಸಿ [ಉ .ಕ ]



-.ಟಿ.ನಾಗರಾಜ
ಡಬ್ಲು
ಡಬ್ಲು ಡಬ್ಲು. ಸನ್ ನ್ಯಾಚುರಲ್ ಫ್ಲಾಶ್ . ಕಂ /
+೯೧ 9632172486

ಸೋಮವಾರ, ಮೇ 17, 2010

ವಿದ್ಯಾರ್ಥಿಗಾಗಿ ಭಾಗ 6

ಸ್ವಾಮಿ ವಿವೇಕಾನಂದರು ಹೇಳುವಂತೆ , ಏಕಾಗ್ರಗೊಂಡ ಮನಸ್ಸು ಒಂದು ಸರ್ಚ್ ಲೈಟ್ ಇದ್ದಹಾಗೆ. ಸರ್ಚ್ಲೈಟು ದೂರದ ಮೂಲೆಯಲ್ಲಿರುವ ವಸ್ತುವನ್ನು ದ್ರಗ್ಗೊಚರವಾಗುವಂತೆ ಮಾಡುತ್ತದೆ.
ಈಗ
, ಮನಸ್ಸನ್ನು ಏಕಾಗ್ರ ಗೋಳಿಸಬೇಕೆಂಬುದೇನೋ ಸರಿಯೇ, ಆದರೆ ಯಾವುದರ ಮೇಲೆ ಏಕಾಗ್ರ ಗೊಳಿಸಬೇಕು? ಪ್ರಶ್ನೆಗೆ ಸರ್ವರೂ ಏಕಕಾಲ ದಲ್ಲಿ ಇಪ್ಪುವಂತಹ ಉತ್ತರ ಕೊಡಲು ಬರುವಂತಿಲ್ಲ . ಏಕೆಂದರೆ,ಮನಸ್ಸನ್ನು ಆತ್ಮಜ್ಯೋತಿಯ ಮೇಲೆ ಏಕಾಗ್ರಗೊಳಿಸಬೇಕು ಎಂದು ಹೇಳಿಬಿಟ್ಟರೆ ಸರ್ವರೂ ಯೋಗಿಗಳಾಗಲು ಹೊರಟಿಲ್ಲವಲ್ಲ! ಮನಸ್ಸನ್ನು ಭಗವಂತನ ಮೇಲೆ ಏಕಾಗ್ರ ಗೊಳಿಸಬೇಕು ಎಂದುಬಿಟ್ಟರೆ ಸರ್ವರೂ ಭಕ್ತರಲ್ಲವಲ್ಲ! ಮನಸ್ಸನ್ನು ಪಾಠದ ಮೇಲೆ ಏಕಾಗ್ರ ಗೊಳಿಸಬೇಕು ಎಂದು ಬಿಟ್ಟರೆ ಸರ್ವರೂ ಶಾಲಾವಿದ್ಯಾರ್ಥಿಗಳೆನಲ್ಲವಲ್ಲ! ಆದ್ದರಿಂದ ಅವರವರು ತಮತಮಗೆ ಅಗತ್ಯ ವಾದ ವಿಷಯದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು ಎನ್ನುವುದೇ ಸರಿ.
ಇಲ್ಲಿ
ನಾವು,ವಿದ್ಯಾರ್ಥಿಗಳು ತಮ್ಮ ಪಟ್ಯ ವಿಷಯದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕಾದ ಬಗೆಯನ್ನು ನೋಡೋಣ , ಏಕೆಂದರೆ, ಇದು ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ ಬರೆದ ಲೇಖನ.
ಯೋಗಿಗೆ
ಧ್ಯಾನಕ್ಕೆ ಕುಳಿತುಕೊಳ್ಳಲು ಒಂದು ಮೆತ್ತನೆಯ ಆಸನವಿರಬೇಕಾದಂತೆ , ವಿದ್ಯಾರ್ಥಿಗಳಿಗೆ ತಮ್ಮ ಪುಸ್ತಕ ವನ್ನು ಇಟ್ಟುಕೊಂಡು ಆರಾಮವಾಗಿ ಓದಲು ಅನುಕೂಲಿಸುವಂತೆ ಮೇಜು -ಕುರ್ಚಿ ಇರಬೇಕು .ವಿದ್ಯಾರ್ಥಿಯೂ ಹೆಚ್ಚ್ಹು ಕಡಿಮೆ ಒಬ್ಬ ಯೋಗಿಯನ್ತೆಯೇ . ಸಹಸ್ರಾರು ಬಡ ವಿದ್ಯಾರ್ಥಿಗಳು ಮೇಜು ಕುರ್ಚಿಗೆಲ್ಲಿಗೆ ಹೋಗಬೇಕು -ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಬಾರದು ."ಸರ್ ಎಂ ವಿಶ್ವೇಶ್ವರ ಯ್ಯನವರು ವಿದ್ಯಾರ್ಥಿಯಾಗಿದ್ದಾಗ ಅವರಿಗೆಲ್ಲಿತ್ತು ಮೇಜು -ಕುರ್ಚಿ ? ಬೀದಿಯ ಬೆಳಕಿನಲ್ಲಿ ಓದಿಯೇ ವಿಖ್ಯಾತರಾಗಲಿಲ್ಲವೇ?"ಎಂಬ ವಾದವನ್ನು ಇಲ್ಲಿ ತರಬಾರದು. ಏಕೆಂದರೆ ಬೀದಿಯ ಬೆಳಕಿನಲ್ಲಿ ಓದಿದವರೆಲ್ಲರೂ ವಿಶ್ವೇಶ್ವರ ಯ್ಯ ಆಗಲಾರರು. ವಿಚಾರ ಹಾಗಿರಲಿ , ಮೇಜು-ಕುರ್ಚಿಯ ಅನುಕೂಲತೆಯಿಲ್ಲದವರು ಒಂದು ಸರಿಯಾದ ಡೆಸ್ಕ್ ಅನ್ನಾದರೂ ಇಟ್ಟುಕೊಳ್ಳಬೇಕು
ಓದಲು
ಅಥವಾ ಬರೆಯಲು ಕುಳಿತಾಗ ಶರೀರ ತುಂಬಾ ಅಲುಗಾಡದೇ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು . ಹೆಚ್ಚಿನ ವಿದ್ಯಾರ್ಥಿಗಳು ಬಗೆಬಗೆಯ ಚಿತ್ರವಿಚಿತ್ರ ಭಾವಭಂಗಿಗಳಲ್ಲಿ ಕುಳಿತು ಓದುವುದು ಕಂಡುಬರುತ್ತದೆ . ಏನೋ ಮಹಾ ಆಲೋಚಿಸುವವರಂತೆ ಕಣ್ಣುಗಳನ್ನು ಅತ್ತಿತ್ತ ಚಲಿಸುತ್ತ,ಪೆನ್ನನ್ನೋ , ಪೆನ್ಸಿಲನ್ನೋ ಬಾಯಿಗಿಟ್ಟುಕೊಂಡು ಕಚ್ಚುತ್ತ ಓದುವವರೂ ಉಂಟು.
ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ ಎಂಬ ಸತ್ಯವನ್ನು ಅರಿತವರೇ ಜಾಣರು . ಈ ಏಕಾಗ್ರತೆ ಇಂಬುದು ಯೋಗಿಗಳಿಗೆ ಮಾತ್ರ ಅವಶ್ಯವಿರುವ ಸೊತ್ತು ಎಂದು ತಿಳಿಯುವುದು ಶುದ್ದ ತಪ್ಪು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೋರ್ವರಿಗೂ ಈ ಏಕಾಗ್ರತೆ ಅತ್ಯಗತ್ಯ . ಕಮ್ಮಾರರಲ್ಲಿ ,ಹಜಾಮರಲ್ಲಿ,ಬಡಗಿಗಳಲ್ಲಿ,ಅಕ್ಕಸಾಲಿಗರಲ್ಲಿ, ನೆಯ್ಗೆಯವರಲ್ಲಿ , ಈ ಏಕಾಗ್ರತೆ ಎಂಬುದು ಸಹಜವಾಗಿಯೇ ರೂಡ ಮೂಲ ಆಗಿರುವುದನ್ನು ಕಾಣಬಹುದು .ಕಮ್ಮಾರನ ಸುತ್ತಿಗೆ ಗುರಿತಪ್ಪಿದರೆ ಕೈಮುರಿದು ಕೊಳ್ಳುವ ಸಂಭವ ;ಹಜಾಮನ ಕಟ್ಟಿ ಸ್ವಲ್ಪ ಜಾರಿದರೂ ಚರ್ಮ ಕತ್ತರಿಸಿ ರಕ್ತ ಸುರಿಯುವ ಸಂಭವ; ಬಡಗಿಗೆ ತನ್ನ ಉಳಿಯ ಮೇಲೆ ಹಿಡಿತವಿಲ್ಲದಿದ್ದರೆ ಅವನ ಕಾಲುಬೆರಳಿಗೆ ಉಳಿಗಾಲವಿಲ್ಲ; ಅಕ್ಕಸಾಲಿಗಳ ಚಿನ್ನದ ಕೆಲಸವಂತೂ ಅತ್ಯಂತ ನಾಜುಕಿನದು ;ನೆಯ್ಗೆಯವರು ತಮ್ಮ ಲಾಳಿಗಳ ಮೇಲೆ ಸತತ ಕಣ್ಣು ಇಟ್ಟು ಇದ್ದರೆ ಮಾತ್ರ ಉತ್ತಮ ವಸ್ತ್ರಗಳು ಹೊರಬರಲು ಸಾಧ್ಯ.

ಆದರೆ ಇವರೆಲ್ಲರೂ ಪುಸ್ತಕಗಳನ್ನೋದಿಯೋ,.ಭಾಷಣ ಕೇಳಿಯೋ ಏಕಾಗ್ರತೆಯನ್ನು ಅಭ್ಯಾಸ ಮಾಡಿದವರಲ್ಲ.ಪರಿಸ್ಥಿತಿಯ ಒತ್ತಡದಿಂದ ಇವರಿಗೆ ಏಕಾಗ್ರತೆ ಲ್ಲಭಿಸಿದೆ . ಹಾಗಾದರೆ ಯಾವುದು ಆ ಪರಿಸ್ತಿತಿ? ತಮ್ಮ ಕೈಕೆಲಸದಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ
ಅಪಘಾತ ಸಂಭವಿಸಬಹುದೆಂಬ ಪರಿಸ್ಥಿತಿ .ಇವರೆಲ್ಲ ತಮ್ಮ ಕೆಲಸ ಕಾರ್ಯಗಳ ಅವಧಿಯಲ್ಲಿ ಅಪಾಯಗಳ ಅಂಚಿನಲ್ಲೇ ಇರುವವರು. ಆದ್ದರಿಂದ ಇವರು ತಮ್ಮ ಮನಸ್ಸನ್ನು ಬಿಗಿಹಿಡಿದುಕೊಂಡು ಅತ್ಯಂತ ಎಚ್ಚರಿಕೆಯಿಂದಲೇ ಕೆಲಸ ಮಾಡುತ್ತಿರಬೇಕು . ಈ ಮೊಲಕ ಇವರಿಗೆ ಒಂದು ಬಗೆಯ ಏಕಾಗ್ರತೆ - ಇವರ ವೃತ್ತಿ ಗೆ ಸಂಬಂಧಪಟ್ಟ ಏಕಾಗ್ರತೆ ಸಿದ್ಧಿಸಿರುತ್ತದೆ. ಅಷ್ಟೆ ಅಲ್ಲ . ಈ ಬಗೆಯ ಏಕಾಗ್ರತೆ ವಂಶ- ಪಾರಂಪರ್ಯವಾಗಿ ಹರಿದುಬಂದ ಉದಾಹರಣೆಗಳು ಹೇರಳವಾಗಿವೆ . ಅದು ಹೇಗೆಂದರೆ ,ಕಬ್ಬಿಣದ ಕೆಲಸಗಳಿಗೆ ಸಂಬಂಧಿಸಿದ ವೃತ್ತಿಶಿಕ್ಷಣವನ್ನು ಪಡೆಯುವ ವಿಧ್ಯಾರ್ಥಿಗಳಲ್ಲಿ ಕಮ್ಮಾರನ ಹುಡುಗ ಎಲ್ಲರಿಗಿಂತಲೂ ಹೆಚ್ಚು ಪ್ರಾವಿಣ್ಯ ತೋರಿಸುವುದು ಕಂಡುಬರುತ್ತದೆ. ಹಾಗೆಯೇ ಈ ಮಾತು ಇತರ ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಆದರೆ ಅಲ್ಲಲ್ಲಿ ಒಬ್ಬೊಬ್ಬರು ಹೊಸ ವಿಷಯದಲ್ಲೂ ನೈಪುಣ್ಯ ತೋರಬಹುದು . ಆದರದು ತುಂಬಾ ಅಪರೂಪ .

ಇಲ್ಲಿಯವರೆಗೆ ನೋಡಿದ ಕೆಲವು ಅಂಶಗಳ ಆಧಾರದ ಮೇಲೆ ನಾವು ಇಷ್ಟನ್ನು ಸ್ವಷ್ಟವಾಗಿ ತಿಳಿಯಬಹುದು . ಏನೆಂದರೆ ಸತತ ಅಭ್ಯಾಸದಿಂದ ಏಕಾಗ್ರತೆಯ ಸಿದ್ದಿ . ಅರ್ಜುನ ಕೇಳಿದ ಪ್ರಶ್ನೆಗೆ ಶ್ರೀಕೃಷ್ಣ ನೀಡಿದ ಉತ್ತರವೂ ಇದೆ; ಅಭ್ಯಾಸದಿಂದ ಸಿದ್ದಿ. ಅರ್ಜುನನ ಪ್ರಶ್ನೆಯೇನು ?"ಕೃಷ್ಣ , ಈ ಮನಸ್ಸು ಬಹಳ ಚಂಚಳವಾದದ್ದು , ಇದನ್ನು ತದೆದಿಡುವುದು ಒಂದೇ, ಗಾಳಿಯನ್ನು ಹಿಡಿದು ಕಟ್ಟಿ ಇಡುವುದು ಒಂದೇ, ಇಂತಹ ಮನಸ್ಸನ್ನು ಸ್ವಾಧೀನಕ್ಕೆ ತಂದುಕೊಳ್ಳುವುದು ಹೇಗೆ ?" ಎಡಕ್ಕೆ ಶ್ರೀಕೃಷ್ಣನ ಉತ್ತರ; "ನೀನೆನ್ನುವುದು ನಿಜ ಅರ್ಜುನ, ಈ ಮನಸ್ಸು ಅತ್ಯಂತ ಚಂಚಳವೆಮ್ಬುದು ಸತ್ಯ, ಮತ್ತು ಅದನ್ನು ಹತೋಟಿಯಲ್ಲಿ ಇಟ್ಟಿರುವುದು ಕಷ್ಟವೆಂಬುದು ಸತ್ಯ, ಆದರೆ ಒಂದು ಮುಖ್ಯ ಅಂಶವನ್ನು ನಿನಗೆ ಹೇಳುತ್ತೇನೆ ಕೇಳು- ಇಂತಹ ಚಂಚಲ ಮನಸ್ಸನ್ನು ಕೊಡ ಅಭ್ಯಾಸ ಬಲದಿಂದ ಹಾಗು ವ್ಯೆರಾಗ್ಯದಿಂದ ನಿಗ್ರಹಿಸಿ ಹತೋಟಿಯಲ್ಲಿಡಲು ಸಾಧ್ಯವೆಂಬುದು ಸತ್ಯ".

ಅರ್ಜುನನ ಪ್ರಶ್ನೆ ಎಷ್ಟು ಸಹಜವಾಗಿದೆಯೋ ಅಷ್ಟೇ ಸರಳವಾಗಿದೆ ಶ್ರೀ ಕೃಷ್ಣನ ಉತ್ತರ. ಅಂತೂ ಈ ಚಂಚಲ ಮನಸ್ಸಿನ ಸಮಾಚಾರ ಎಂದು ನಿನ್ನೆಯದಲ್ಲ , ಹಿಂದಿನಿಂದಲೂ ಇದ್ದದ್ದೇ .ಆದರೆ ಈಗಿನ ಅನೀತಿ -ಅಶಿಸ್ತಿನ ಜೀವನದ ಪರಿಣಾಮವಾಗಿ ಅದು ಸ್ವಲ್ಪ ಹೆಚ್ಚಾಗಿರಬಹುದು , ಅಂತಹ ಧೀರ ಧರ್ಮಿಷ್ಟನಾದ ಅರ್ಜುನನ ಮನಸ್ಸೇ ಚಂಚಲವಾಗಿತ್ತೆನ್ನುವಾಗ ಎಂದಿನ ಫೋಕಿಲಾಲರ ಮನಸ್ಸು ಸ್ಥಿರವಾಗಿರುವುದು ಉಂಟೆ?.

ಮನಸ್ಸನ್ನು ತಮ್ಮ ಸ್ವಾಧೀನಕ್ಕೆ ತಂದು ಕೊಳ್ಳಲೇ ಬೇಕು ಎಂಬುವವರು ಮೊಟ್ಟ ಮೊದಲನೆಯದಾಗಿ , ತಾವು ಎಂತಹ ಮನಸ್ಸಿನೋದಿಗೆ ಹೋರಾಡಬೇಕಾಗಿದೆ ಎಂಬುದರ ಸ್ವಷ್ಟ ಕಲ್ಪನೆಯನ್ನು ಹೊಂದಿರಬೇಕಾಗುತ್ತದೆ .

ಈ ಮನಸ್ಸು ಮರ್ಕಟನಂತೆ ಚಂಚಲ . ಮದಬರಿತ ಸಲಗನಂತೆ ಬಲಿಷ್ಠ . ಅರ್ಜುನನೆನ್ನುವಂತೆ ,ಇದನ್ನು ನಿಯಂತ್ರಿಸುವುದೆಂದರೆ ಗಾಳಿಯನ್ನು ತಡೆಹಿಡಿದು ಕಟ್ಟಿಡುವ ಕೆಲಸ . ಸಂಯಮಕ್ಕೆ ತಂದುಕೊಳ್ಳುವಲ್ಲಿ ಕೋತಿಯನ್ನು ಹಿಡಿಯುವ ,ಸಲಗವನ್ನು ಪಳಗಿಸುವ ಚಾನಾಕ್ಷತೆಯೇ ಬೇಕಾಗುತ್ತದೆ.

ಮನಸ್ಸನ್ನು ನಿಗ್ರಹಿಸುವ ಕೆಲಸ ಅತ್ಯಂತ ಕಷ್ಟ ಎಂದು ಅರ್ಜುನ ಹೇಳಿದಾಗ ಶ್ರೀ ಕೃಷ್ಣಾ "ಏನಯ್ಯಾ , ಎಂತೆಂಥ ವೀರರನ್ನೇ ನಿಗ್ರಹಿಸಿದ ನಿನಗೆ ಈ ಮನಸ್ಸನ್ನು ನಿಗ್ರಹಿಸುವುದು ಯಾವ ಲೆಕ್ಕ? ಅಲ್ಲದೆ ಅದು ಎಷ್ಟಾದರೂ ನಿನ್ನ ಮನಸ್ಸೇ ಅಲ್ಲವೆನಯ್ಯ? ತುಂಬಾ ಸುಲಭವಾಗಿ ನಿಗ್ರಹಿಸಿಬಿಡಬಹುದು"ಎಂದು ಈ ರೀತಿಯಲ್ಲಿ ಹಗುರವಾಗಿ ಹೇಳಲಿಲ್ಲ . ಪರಿಸ್ಥಿತಿಯ ಗಾಂಭೀರ್ಯ ವನ್ನರಿತು ಹೇಳುತ್ತಾನೆ . "ನೀನೆನ್ನುವುದು ನಿಜ ಅರ್ಜುನ, ಈ ಮನಸ್ಸು ಅತ್ಯಂತ ಚಂಚಲ ವೆಂಬುದು ಸತ್ಯ ಮತ್ತು ಅದನ್ನು ಹತೋಟಿಯಲ್ಲಿ ಇಟ್ಟಿರುವುದು ಕಷ್ಟವೆಂಬುದು ಸತ್ಯ" ಎಂದು ಶ್ರೀಕೃಷ್ಣ ಹೀಗೆ ಹೇಳಲು ಕಾರಣ - ಅವನು ಈ ಮನಸ್ಸಿನ ಸ್ವಭಾವವನ್ನು ಬಲ್ಲ.
ಈ ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಗೂ , ವಸ್ತುವಿಗೂ ಅದರದೇ ಆದ ಸ್ವಭಾವವಿರುತ್ತದೆ - ಗಾಳಿಗೆ ಬೀಸುವ ಸ್ವಭಾವ, ಬೆಂಕಿಗೆ ಸುಡುವ ಸ್ವಭಾವ, ನೀರಿಗೆ ಹರಿಯುವ ಸ್ವಭಾವ; ಹಾಗೆಯೇ ಮನಸ್ಸಿಗೆ ಕಂಡಕಂಡಲ್ಲಿ ಮೊಗು ಹಾಕುವ ಸ್ವಭಾವ ,ಹುಚ್ಚೆದ್ದು ಕುಣಿಯುವ ಸ್ವಭಾವ , ಬಗೆಬಗೆಯ ಆಸೆಗಳನ್ನು ತಾಳುವ ಸ್ವಭಾವ,ಹಲವಿಧದ ಯೋಚನೆ ಮಾಡುವ ಸ್ವಭಾವ, ಹಲವು ಹದೆನೆಂಟು ಚಿಂತೆ ಗಳನ್ನೂ ಇಟ್ಟುಕೊಂಡು ಕೊರಗುವ ಸ್ವಭಾವ, ಆಶಾಗೋಪುರ ಕಟ್ಟುವ ಸ್ವಭಾವ,ಮಾಡಬೇಕಾದ ಕೆಲಸವೊಂದನ್ನು ಬಿಟ್ಟು ಉಳಿದೆಲ್ಲ ವಿಚಾರ ಗಳಲ್ಲೂ ತಲೆ ಹಾಕುವ ಸ್ವಭಾವ! ಸ್ವಭಾವತ:ಚಂಚಲ ವಾಗಿರುವ ಇಂತಹ ಮನಸ್ಸನ್ನು ಇನ್ನಷ್ಟು ಚಂಚಲಗೊಳಿಸುವ ಪರಿಸರಗಳೇ ಇದ್ದರೆ ಸುತ್ತ -ಮುತ್ತ , ಇನ್ನು ಕೇಳುವುದು ಏನಿದೆ ?ಕುಣಿದಾಡುವುದು ಒಂದೇ!. ಆದ್ದರಿಂದ ಮನಸ್ಸನ್ನು ಸ್ವಾದೀನದಲ್ಲಿ ಇಟ್ಟುಕೊಳ್ಳ ಬೇಕೆಮ್ಬವರು ಚಂಚಲಗೊಳಿಸುವ ಪರಿಸರದಿಂದ ದೂರವಾಗಬೇಕು;ಎಂದರೆ ಊರು ಬಿಟ್ಟು ಹೋಗಬೇಕೆಂದಲ್ಲ ,ಮನಸ್ಸನ್ನು ಅತ್ತ ಹರಿಯ ಗೊಡದಿರಬೇಕು .ಹೇಗೆ?ಇಲ್ಲಿ . ಇಂದ್ರಿಯಗಳ ಪಾತ್ರ ಬರುತ್ತದೆ. ಕಣ್ಣು, ಕಿವಿ, ನಾಲಗೆ ,ಮೊಗು ,ಚರ್ಮ-ಇವು ಮನಸ್ಸಿನ ವಾಹನಗಳು. ಒಂದು ಸುಂದರವಾದ ವಸ್ತುವನ್ನು ಕಣ್ಣು ಕಂಡರೆ ಸಾಕು, ಮನಸ್ಸು ಹಾರಿಹೋಗಿ ಅಲ್ಲಿ ಕುಳಿತಾಯಿತು.ಹೀಗೆಯೇ ಐದು ಇಂದ್ರಿಯ ಗಳು ಮನಸ್ಸನ್ನು ಎಲ್ಲಿಎಂದರೆ ಅಲ್ಲಿಗೆ ಕರೆದೊಯ್ಯುತ್ತಿರುತ್ತವೆ . ಆದ್ದರಿಂದ ಬುದ್ದಿ ಉಪಯೋಗಿಸಿ ಈ ಇಂದ್ರಿಯಗಳನ್ನು ನಮ್ಮ ವಶದಲ್ಲಿ ಇಟ್ಟು ಇರಬೇಕು .ಎಂದರೆ ನೋಡಬಾರದ್ದನ್ನು ನೋಡದಿರಬೇಕು,ಕೇಳಬಾರದ್ದನ್ನು ಕೇಳದಿರಬೇಕು. ತಿನ್ನಬಾರದ್ದನ್ನು ತಿನ್ನದಿರಬೇಕು ,ಮಾಡಬಾರದ್ದನ್ನು ಮಾಡದಿರಬೇಕು.ಹೀಗೆ ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ "ದಮ"ಎಂದು ಹೆಸರು. ಕೆಲವೊಮ್ಮೆ ಈ ಮನಸ್ಸು ಇಂದ್ರಿಯಗಳ ಸಹಾವಿಲ್ಲದೆಯೇ ,ಸ್ವತಂತ್ರವಾಗಿ ತನಗೆ ಬೇಕೆಮ್ಬಲ್ಲಿಗೆ ಹಾರಿಹೋಗುತ್ತಿರುತ್ತದೆ.ಆಗ ಬುದ್ದಿಯ ಸಹಾಯದಿಂದ ಅದನ್ನು ಹಿಂದಿರುಗಿಸಿ ಎಳೆದು ತರಬೇಕು. ಹೀಗೆ ಮನಸ್ಸನ್ನು ಸಂಯಮದಲ್ಲಿ ಇಡುವುದಕ್ಕೆ"ಶಾಮ"ಎಂದು ಹೆಸರು.

ಮನಸ್ಸನ್ನು ಹತೋಟಿಯಲ್ಲಿ ಇಡಬೇಕಾದ ಅವಶ್ಯಕತೆಯಾದರೂ ಏನಿದೆ?.-ಎಂಬ ಪ್ರಶ್ನೆಯೊಂದು ಏಳುತ್ತದೆ . ಅದಕ್ಕೊಂದು ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕು .ಉತ್ತರವಿಷ್ಟೇ; ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ ಅದರ ಮೂಲಕ ಮಹತ್ಕಾರ್ಯಗಳನ್ನೇ ಸಾಧಿಸಿಬಿಡಬಹುದು. ಅದು ನಮ್ಮ ಹತೊಟಿಯಲ್ಲಿರದಿದ್ದರೆ ಮಾತ್ರ ಅದರಿಂದ ಸಾಮಾನ್ಯ ಕಾರ್ಯವನ್ನೂ ಮಾಡಿಸಲು ಸಾಧ್ಯವಾಗುವುದಿಲ್ಲ.

ನಿಜಕ್ಕೂ ನಮ್ಮ ಮನಸ್ಸಿಗೆ ಪ್ರಚಂಡ ದೈತ್ಯ ಶಕ್ತಿಯೇ ಇದೆ. ಆದರೂ ಹಲವರು ಎಷ್ಟೋ ವೇಳೆ , ಅಥವಾ ಜೀವನವಿಡಿ ,ದುರ್ಬಲರಂತೆ ಇರುತ್ತಾರೆ. ಇದ್ದಕ್ಕೆ ಅವರ ಮನಶಕ್ತಿಯು ನಾನಾ ರೀತಿಗಳಿಂದ ಹಂಚಿಹೊಗಿರುವುದೇ ಕಾರಣವಾಗಿದೆ. ಸೂರ್ಯಕಿರಣಗಳಿಗೆ ಸುಡುವ ಶಕ್ತಿಯಿದಿಯೆಂಬ ಸತ್ಯ ಎಲ್ಲರಿಗೂ ತಿಳಿದಿಲ್ಲ , ಕಾರಣ , ಅವು ಇಲ್ಲಿಯವರೆಗೂ ಎಲ್ಲಿಯೂ ಬೆಂಕಿ ಹೊತ್ತಿಸಿ ವಸ್ತುಗಳನ್ನು ಸುಡಲಿಲ್ಲವಲ್ಲ! .ಆದರೆ ಅದೇ ಕಿರಣಗಳನ್ನು ಭೂತಕನ್ನಡಿಯ ಮೂಲಕ ಹಾಯಿಸಿ ಕಾಗದದ ಮೇಲೆ ಬಿಟ್ಟಾಗ ಬೆಂಕಿ ಹೊತ್ತಿಕೊಳ್ಳುವುದು ಕಾಣುತ್ತದೆ. ಆ ಕಿರಣಗಳಿಗೆ ಈಗ ಎಲ್ಲಿಂದ ಬಂತು ಈ ಸುಡುವ ಶಕ್ತಿ?. ಅವುಗಳನ್ನು ಏಕತ್ರ ಗೊಳಿಸಿದ್ದರಿಂದ ,ಹಿಂದೆ ಅವು ಹರಡಿಕೊಂಡಿದ್ದವು , ಆದ್ದರಿಂದ ಶಾಖಮಾತ್ರ ಇತ್ತು. ಈಗ ಏಕತ್ರ ಗೊಂಡಾಗ ಧಗಧಗಿಸುವ ಅಗ್ನಿಯೇ ಉದ್ಬವಿಸಿತು.ಇದೇ ನಾವು ಗಮನಿಸಬೇಕಾದ ರಹಸ್ಯ . ನಮ್ಮ ಮನದಲ್ಲಿ ಸಹಜವಾಗಿಯೇ ಅಪಾರ ಶಕ್ತಿಯಿದೆ . ಆದರೆ ಅದು ಬೇಕಾದ-ಬೇಡವಾದ ಎಲ್ಲ ವಿಷಯಗಳಲ್ಲೂ ಹರಡಿಕೊಂಡಿರುವುದರಿಂದ ನಮ್ಮಿಂದ ಸಾಮಾನ್ಯ ಕೆಲಸ ಕಾರ್ಯಗಳನ್ನು ಮಾಡಲು ಮಾತ್ರವೇ ಸಾಧ್ಯವಾಗುತ್ತದೆ.ಮಹತ್ಕಾರ್ಯವನ್ನೇ ನಾದರು ಸಾಧಿಸಬೇಕಾದರೆ ಹರಡಿಕೊಂಡಿರುವ ಮನಶ್ಯಕ್ತಿಯನ್ನು ಒಗ್ಗೂಡಿಸಬೇಕಾಗುತ್ತದೆ.ಮನಶ್ಯ್ಕತಿಯನ್ನು ಒಗ್ಗೂಡಿಸಬೇಕಾದರೆ ನಮ್ಮ ಮನಸ್ಸು ನಮ್ಮ ಅಧೀನದಲ್ಲಿರಬೇಕಾಗುತ್ತದೆ . ಕಂಡ ಕಂಡ ಕಡೆಗೆಲ್ಲ ಮಂಡೆಗೆಟ್ಟು ಓಡುವ ಮನಸ್ಸು ನಮ್ಮದಲ್ಲ. ಇಂದ್ರಿಯಗಳ ಆಹ್ವಾನಕ್ಕೆ ಓಗೊಟ್ಟು ವಿಷಯವಸ್ತುಗಳಲ್ಲಿ ಮುಳುಗಿರುವ ಮನಸ್ಸು ನಮ್ಮದಲ್ಲ. ನಮ್ಮದಲ್ಲ ದ ಮನಸ್ಸಿನಿಂದ ನಾವು ಏನು ತಾನೇ ಮಾಡಿಸಲು ಸಾದ್ಯ?

ಋಷಿಮುನಿಗಳು ಸತತ ಪ್ರಯತ್ನದಿಂದ ಮೊದಲು ಸಾಧಿಸಿದ್ದೆ ಮನಸ್ವಯಮವನ್ನು . ಎಂದರೆ ತಮ್ಮ ಮನಸ್ಸನ್ನು ತಮ್ಮ ಹಿಡಿತಕ್ಕೆ ತಂದು ಕೊಂಡದ್ದು.ಬಳಿಕ ಆ ಮನಸ್ಸನ್ನು ಹಿಡಿದು ಏಕಾಗ್ರಗೊಲಿಸಿದಾಗ ಅದು ಸಕಲ ಯೋಗರಹಸ್ಯಗಳನ್ನೇ ಬಯಲಿಗೆಳೆಯಿತು . ದಿವ್ಯ ಜ್ಞಾನವನ್ನೇ ಪ್ರಾಪ್ತಿಮಾಡಿಕೊಟ್ಟಿತು.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು ಡಾಟ್ ಸನ್ ನ್ಯಾಚುರಲ್ ಫ್ಲಾಶ್ ಡಾಟ್ ಕಾಂ
+೯೧ 9632172486