MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಡಿಸೆಂಬರ್ 28, 2010

ಎಚ್ಚರಿಕೆಯ ಗಂಟೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಅದೊಂದು ಹಟಾತ್ ಸಂಭವಿಸಿದ ಅನಿರೀಕ್ಷಿತ ಘಟನೆ. ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಕೊಲೆ ಮೊಕದ್ದಮೆಯಲ್ಲಿ ನ್ಯಾಯಾಧೀಶರ ಮುಂದೆ ಪ್ರಚಂಡ ವಾದ ಮಾಡುತ್ತಿದ್ದ ಪ್ರಾಖ್ಯಾತ ಕ್ರಿಮಿನಲ್ ಲಾಯರ್ ಜೂಲಿಯನ್ ಮ್ಯಾನ್-ಟಾಲ್ ಹಟಾತ್ತನೆ ಅಲ್ಲೇ ಕುಸಿದುಬಿದ್ದ. ದುಬಾರಿ ಬೆಲೆಯ ಇಟಾಲಿಯನ್ ಸೂಟ್ ಧರಿಸಿದ್ದ . ಆತನ ಭವ್ಯ ಶರೀರ ನೆಲಕ್ಕೊರಗಿತ್ತು. ನೂರಾರು ಕ್ಲಿಷ್ಟ ಕ್ರಿಮಿನಲ್ ಕೇಸುಗಳನ್ನು ಗೆದ್ದ ಸೂಪರ್ ಸ್ಟಾರ್ ಲಾಯರ್ ಎಂದು ಪ್ರಸಿದ್ಧನಾಗಿದ್ದ. ಜೂಲಿಯನ್ ನ ಈ ಹ್ರುದ್ರಾವಕ ಸ್ಥಿತಿಯನ್ನು ಕಂಡು ನಾನು ಶಾಕ್ ನಿಂದ ಮರಗಟ್ಟಿ ದಂತಾಗಿ ಸುಮ್ಮನೆ ನಿಂತೆ. ಅಂತ ದೊಡ್ಡ ಮನುಷ್ಯ ಈಗ ನೆಲದಮೇಲೆ ಹುಚ್ಚನಂತೆ ಹೊರಳಾಡುತ್ತಾ, ನರಳಾಡುತ್ತಾ ಬಿದ್ದುಕೊಂಡಿದ್ದಾನೆ. ಆತನ ಪಾಲಿಗೆ ಎಲ್ಲವೂ -'ಸ್ಲೌಮೊಶನ್ "ನಲ್ಲಿ ನಡೆಯುತ್ತಿರುವಂತೆ ಕಾಣುತ್ತಿತ್ತು. ಅವನ ಜೂನಿಯರ್ ಲಾಯರ್ 'ಅಯ್ಯೋ ದೇವರೇ, ಜೂಲಿಯನ್ ಗೆ ಏನೋ ಆಗಿದೆ ' ಎಂದು ಕೂಗಿಕೊಂಡಳು. ಆ ಉದ್ಗಾರ ಮಿಂಚಿನಂತೆ ಸಂಭವಿಸಿದ ಆ ದುರ್ಘಟನೆಯ ಕ್ಷಣದರ್ಶನ ನೀಡಿದಂತೆ ಇತ್ತು. ನ್ಯಾಯಾಧೀಶರೂ ಶಾಕ್ ಆಗಿ, ಪಕ್ಕದಲ್ಲಿದ್ದ ಫೋನನ್ನು ಎತ್ತಿಕೊಂಡು ಏನೋ ಹೇಳಿದರು. ನಾನಂತೂ ಗಾಬರಿ, ಗೊಂದಲ , ಆತಂಕಗಳಲ್ಲಿ ಮುಳುಗಿಹೋಗಿದ್ದೆ. "ಇಷ್ಟು ಬೇಗ ಸಾಯಬೇಡ ಮಹರಾಯ, ನಿನ್ನಂಥವರಿಗೆ ಈ ಗತಿ ಬರಬಾರದು ' ಎಂದು ನನ್ನ ಮನಸ್ಸು ಕೂಗಿಹೇಳುತ್ತಿತ್ತು.

ಇದನ್ನೆಲ್ಲಾ ಕಲ್ಲು ಬೊಂಬೆಯಂತೆ ನೋಡುತ್ತಿದ್ದ ಕೋರ್ಟ್ ನ ಅಮೀನ ಹಟಾತ್ ಪ್ರಜ್ಞೆ ಬಂದವನ್ತಂತೆ ನೆಲದಲ್ಲಿ ಬಿದ್ದಿದ್ದ ಜೂಲಿಯನ್ ಬಳಿ ಹೋಗಿ , ಅವನ ಎದೆಗೆ ಮಸಾಜ್ ಮಾಡತೊಡಗಿದ. ಜೂನಿಯರ್ ಲಾಯರ್ ಸಹ ಅವನೆದೆ ಬಾಗಿ ಏನೋ ಸಾಂತ್ವನದ ಶಬ್ಧಗಳನ್ನು ಉಚ್ಚರಿಸ -ತೊಡಗಿದಳು . ಆಕೆಯ ಮುಂಗುರುಳು ಅವನ ಮುಖದ ಮೇಲೆ ನಲಿಯುತ್ತಿತ್ತು . ಆದರೆ ಆತ ಅವಳ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಈ ಜೂಲಿಯನ್ ಗೂ ನನಗೂ ಕಳೆದ ಹದಿನೇಳು ವರ್ಷಗಳಿಂದ ಪರಿಚಯ, ಸ್ನೇಹ . ಆತನನ್ನು ಮೊದಲ ಬಾರಿ ಭೇಟಿಯಾಗಿದ್ದಾಗ ನಾನು ವಿದ್ಯಾರ್ಥಿಯಾಗಿದ್ದೆ . ಆಗ ಅವನಲ್ಲಿ ಬೇಕಾದುದೆಲ್ಲವೂ ಇತ್ತು . ಅತ್ಯಂತ ಮೇಧಾವಿ, ನಿರ್ಭೀತ, ಚಾಣಾಕ್ಷ ಕ್ರಿಮಿನಲ್ ಲಾಯರ್ ಎಂದು ಪ್ರಸಿದ್ಧನಾಗಿದ್ದ . ನೋಡುವುದಕ್ಕೆ ಸ್ಪುರದ್ರೂಪಿ . ಮನಸ್ಸಿನಲ್ಲಿ ಭೋರ್ಗರೆಯುತ್ತಿರುವ ಮಹತ್ವಾಕಾಂಕ್ಷೆ . ದುಡ್ಡಿನ ಮಳೆಸುರಿಸುವ ಸಾಮರ್ಥ್ಯ . ಕಂಪನಿಯ ಉದ್ಯೋನುಖ ಸೂಪರ್ ಸ್ಟಾರ್ . ಅಂದಿನ ಆ ರಾತ್ರಿ ನನಗೆ ಈಗಲೂ ಚೆನ್ನಾಗಿ ನೆನಪಿದೆ. ತುಂಬಾ ಹೊತ್ತು ಕೆಲಸಮಾಡಿ, ಮುಗಿಸಿ ಹಿಂತಿರುಗುತ್ತಿದ್ದಾಗ ನಾನು ಅವನ ಭಾರೀ ಮೇಜಿನ ಮೇಲೆ ಪ್ರೇಂ ಹಾಕಿರಿಸಿದ್ದ ವಿನ್ ಸ್ಟನ್ ಚರ್ಚಿಲರ ಸುಭಾಷಿತವನ್ನು ಕ್ಷಣಕಾಲ ನೋಡಿದ್ದು , ಅದು ಅವನ ವ್ಯಕ್ತಿತ್ವವನ್ನು ಸಾರಿಹೇಳುತ್ತಿತ್ತು.

"ನಾವೇ ನಮ್ಮ ಅದೃಷ್ಟದ ಶಿಲ್ಪಿಗಳು. ನಾವು ಸಾಧಿಸಬೇಕೆಂದು ನಿರ್ಧರಿಸಿರುವ ಕಾರ್ಯ ಎಂದಿಗೂ ನಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದುದಲ್ಲ. ಅದು ನೀಡುವ ಶ್ರಮ , ನೋವುಗಳು ನಮ್ಮ ಶಹನಾಶಕ್ತಿಯನ್ನು ಮೀರಿದ್ದಲ್ಲ . ನಮ್ಮ ಧ್ಯೇಯದ ಬಗ್ಗೆ ಎಲ್ಲಿಯವರೆಗೆ ನಮ್ಮ ಶ್ರಧ್ಹೆ ಆಚಲವಾಗಿರುವುದೋ , ಎಲ್ಲಿಯವರೆಗೆ ಗೆಲ್ಲುವ ಛಲ ನಮ್ಮಲ್ಲಿರುವುದೋ . ಯಶಸ್ಸು ನಮ್ಮದಾಗಲೇ ಬೇಕು . ಇದು ನಿಶ್ಚಿತ ."

ಜೂಲಿಯನ್ ನುಡಿದಂತೆ ನಡೆದ ವ್ಯಕ್ತಿ . ತಾನು ಹುಟ್ಟಿರುವುದು ಯಶಸ್ವಿಯಾಗುವುದಕ್ಕೆ ಎಂದು ದೃಢವಾಗಿ ನಂಬಿದ್ದ. ಆತ ದಿನಕ್ಕೆ ಹದಿನೆಂಟು ತಾಸು ಪಟ್ಟು ಹಿಡಿದು ದುಡಿಯುತ್ತಿದ್ದ. ಆತ ಪ್ರತಿಷ್ಟಿತ ಕುಲದವನು. ಆತನ ತಂದೆ ಫೆಡರಲ್ ಕೋರ್ಟಿನಲ್ಲಿ ನ್ಯಾಯಾಧೀಶನಾಗಿದ್ದನಂತೆ . ತಾತ ಹೆಸರಾಂತ ಸೆನೇಟರ್ಆಗಿದ್ದನಂತೆ . ಇಂಥ ಆಗರ್ಭ ಶ್ರೀಮಂತ ಹಿನ್ನೆಲೆಯಿಂದ ಬಂದ ಅವನ ಹೆಗಲ ಮೇಲೆ ಭಾರೀ ನಿರೀಕ್ಷೆಗಳ ಹೊರೆಯಿದ್ದುದು ಸ್ಪಷ್ಟವಾಗಿತ್ತು. ಒಂದು ವಿಷಯವಂತೂ ಸತ್ಯವಾಗಿತ್ತು. ಆತ ತನ್ನದೇ ಆದ ರೇಸ್ ನಲ್ಲಿ ಓಡುತ್ತಿದ್ದ. ತನ್ನದೇ ರೀತಿಯಲ್ಲಿ ಕೆಲಸಮಾದಬೇಕೆಂದು ನಿರ್ಧರಿಸಿದ್ದ . ಅಷ್ಟೇ ಅಲ್ಲ . ಅದನ್ನು ಇತರರ ಕಣ್ಣು ಕುಕ್ಕುವಂತೆ "ಶೋ" ಮಾಡುವುದರಲ್ಲಿ ಖುಷಿಪಡುತ್ತಿದ್ದ.

ನ್ಯಾಯಾಲಯದ ಕಲಾಪಗಳಲ್ಲಿ ಆತ ನಡೆಸುತ್ತಿದ್ದ ನಾಟಕೀಯ ವಾದಗಳು ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ . ಆಕ್ರಮಣಕಾರಿ ಧೋರಣೆಯುಳ್ಳ ಚಾಣಾಕ್ಷ ಲಾಯರ್ ಬೇಕಾದಾಗಲೆಲ್ಲ ಶೀಮಂತರು ಆತನ ಮೊರೆ ಹೋಗುತ್ತಿದ್ದರು. ಆತನ "ಪಟ್ಯೇತರ" ಚಟುವಟಿಕೆಗಳೂ ಪ್ರಸಿದ್ಧವಾಗಿದ್ದವು , ನಗರದ ಪ್ರತಿಷ್ಟಿತ ನೈಟ್ ಕ್ಲಬ್ಬು ಗಳಲ್ಲಿ ಆತನ ಪಾನಗೊಷ್ಟಿಗಳು , ಚೆಲುವೆಯರ ಜತೆಗಿನ ಚೆಲ್ಲಾಟಗಳು , ರೌಡಿಗಳ ಸಹವಾಸ ಮುಂತಾದ ವಿಷಯಗಳು ದಂತಕತೆಗಳಂತೆ ಪ್ರಚಾರವಸ್ತುವಾಗಿದ್ದವು.

ಅಂದಿನ ಭಯಂಕರ ಕೊಲೆಕೇಸು ಭಾರೀ ಸುದ್ಧಿಮಾಡಿದ್ದ ಕೇಸು. ಅದರಲ್ಲಿ ವಾದಿಸುತ್ತಿರುವ ಸಂದರ್ಭದಲ್ಲಿ ಜೂಲಿಯನ್ ನನ್ನನ್ನು ಸಹಾಯಕ ಲಾಯರ್ ಆಗಿ ಏಕೆ ಆರಿಸಿಕೊಂಡಿದ್ದನೋ ನನಗೆ ತಿಳಿಯದು . ನಾನು ಲಾ ಓದಿದ್ದು ಆತ ಓದಿದ್ದ ಹಾರ್ವರ್ಡ್ ಸ್ಕೂಲಿನಲ್ಲೇ ಎಂಬುದೇನೋ ನಿಜ. ಆದರೆ ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಾಯರುಗಳ ಪೈಕಿ ಭಾರೀ ಚಾಣಾಕ್ಷ ನೆಂದೇನೋ ಹೆಸರು ಮಾಡಿರಲಿಲ್ಲ. ಅಲ್ಲದೆ ನಾನು ಪ್ರತಿಷ್ಟಿತ ಮನೆತನಕ್ಕೆ ಸೇರಿದವನೂ ಆಗಿರಲಿಲ್ಲ. ನನ್ನ ತಂದೆ ಸ್ವಲ್ಪಕಾಲ ನೌಕಾದಳದಲ್ಲಿ ಕೆಲಸಮಾಡಿ ಅನಂತರ ಬ್ಯಾಂಕೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದವನು. ತಾಯಿಯೂ ಪ್ರಸಿದ್ಧ ವ್ಯಕ್ತಿಯಲ್ಲ. ಹೀಗಿದ್ದರೂ ಜೂಲಿಯನ್ ನನ್ನನ್ನು ಆಯ್ಕೆಮಾಡಿದ್ದ. ಇದು " ಎಲ್ಲ ಕೊಲೇಕೆಸುಗಳ ರಾಜ " ಎಂದು ಪ್ರಸಿದ್ಧವಾಗಿತ್ತು. ಇದರಲ್ಲಿ ಜೂಲಿಯನ್ನನ ಸಹಾಯಕರಾಗಲು ಕೆಲವರು ಲಾಬಿ ನಡೆಸಿದ್ದೂ ನನಗೆ ಗೊತ್ತಿತ್ತು. ನನ್ನನ್ನೇಕೆ ಆಯ್ಕೆಮಾಡಿದೆ ಎಂದು ಕುತೂಹಲದಿಂದ ನಾನು ಕೇಳಿದ್ದಕ್ಕೆ ಆತ "ನಿನ್ನ "ಹಸಿವೆ "ಅದಕ್ಕೆ ಕಾರಣ " ಎಂದು ಹೇಳಿದ್ದ. ಅದೇನೇ ಇರಲಿ ನಾವೂ ಆ ಕೇಸಿನಲ್ಲಿ ಜಯಗಳಿಸಿದ್ದೆವು. ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಮಾಡಿದ್ದ ಅಧಿಕಾರಿಯೊಬ್ಬನಿಗೆ ಸಂಬಂಧಿಸಿದ್ದ ಆ ಕೇಸಿನಲ್ಲಿ ಆರೋಪಿಗೆ ಖುಲಾಸೆಯಾಗಿತ್ತು.

ಆ ಬೇಸಗೆಯಲ್ಲಿ ನಾನ್ನು ಬಹಳಷ್ಟು ಪಾಠ ಗಳನ್ನೂ ಕಲಿತ್ತಿದ್ದೆ . ಅದು ಸಂದೇಹಕ್ಕೆಡೆಯಿಂದ ಸನ್ನಿವೇಶ ಗಳಲ್ಲಿ ಸಂದೇಹವನ್ನು ಸೃಷ್ಟಿಸುವುದಷ್ಟೇ ಆಗಿರಲಿಲ್ಲ. ಅದನ್ನು ಯಾವ ಲಾಯರೂ ಮಾಡಬಲ್ಲ. ನಾನು ಕಲಿತ ಪಾಠ ಎಂಥ ಕೆಸಿನಲ್ಲೇ ಆಗಲಿ , ಗೆಲ್ಲುವ ಮನಸ್ಥಿತಿಯನ್ನು ಸಾಧಿಸುವ ಪಾಠ ವಾಗಿತ್ತು. ಈ ಕಲೆಯಲ್ಲಿ ಅಸಾಮಾನ್ಯ ಪ್ರಭುತ್ವ ಹೊಂದಿದ್ದ ಗುರು ತನ್ನ ವೃತ್ತಿ ಕೌಶಲ್ಯದಲ್ಲಿ ವಿಜ್ರು ಮ್ಭಿಸುತ್ತಿರುವುದನ್ನು ಕಣ್ಣಾರೆ ನೋಡುವ, ಕಿವಿಯಾರೆ ಕೇಳುವ ಅಪೂರ್ವ ಅವಕಾಶ ದೊರೆತಿತ್ತು. ಆದರೆ ಸಾರವನ್ನೆಲ್ಲ ನಾನು ಸ್ಪಂಜಿನಂತೆ ಹೀರಿಕೊಂಡಿದ್ದೆ.

ಜೂಲಿಯನ್ ನೀಡಿದ ಸಲಹೆಯಂತೆ ನಾನೂ ಅವನಿದ್ದ ಕಂಪನಿಯಲ್ಲಿ ಮುಂದುವರಿದೆ. ನನ್ನೊಳಗೆ ಕ್ರಮೇಣ ಸುದೀರ್ಘಕಾಲದ ಗಾಢಸ್ನೇಹ ಬೆಳೆಯಿತು. ಆದರೆ ಅವನೊಂದಿಗೆ ಕೆಲಸಮಾಡುವುದೇನೂ
ಸುಲಭವಾಗಿರಲಿಲ್ಲ. ಅದೊಂದು ರೀತಿಯ ನಿರಾಶಾದಾಯಕ ಹೋರಾಟ ದಂತೆ ಅನಿಸಿದ್ದೂ ಉಂಟು. ಅದು ನಡುರಾತ್ರಿಯ ಜಗಳಗಳಿಗೂ ಕಾರಣವಾಗಿತ್ತು. ಜೂಲಿಯನ್ ಪಾಲಿಗೆ ತಾನು ನಡೆದದ್ದೇ ಹೆದ್ದಾರಿ . ತಾನೂ ಎಂದಿಗೂ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂಬ ಅಚಲ ಆತ್ಮವಿಶ್ವಾಸ . ಮೇಲು ನೋಟಕ್ಕೆ ಇಂಥ ಗಟ್ಟಿಮನಸ್ಸಿನ ಮನುಷ್ಯನಾದರೂ , ಅವನಲ್ಲಿ ಒಳಗೊಳಗೇ ಅನ್ಯರಿಗಾಗಿ ತುಡಿಯುವ ಹೃದಯವಂತಿಕೆಯೂ ಇತ್ತು.

ಆತ ವೃತ್ತಿಯಲ್ಲಿ ಎಷ್ಟೇ "ಬಿಸಿ"ಯಾಗಿದ್ದರೂ ನನ್ನ ಪತ್ನಿ, ಮಕ್ಕಳನ್ನು ಆಗಾಗ ವಿಚಾರಿಸಿಕೊಳ್ಳುತ್ತಿದ್ದ . ತಾನು ಅಷ್ಟು ಶ್ರಮಪಡುವುದು ಕಂಪನಿಯ ಪ್ರಗತಿಗಾಗಿಯೇ ಎಂದು ಸಮರ್ಥಿಸಿಕೊಳ್ಳುತ್ತಿದ್ದ. "ಮುಂದಿನ ವರ್ಷ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ, ಒಂದು ತಿಂಗಳು ರಜೆ ಹಾಕಿ ಹವಾಯಿಗೆ ಹೋಗಿ ರಿಲ್ಯಾಕ್ಸ್ ಮಾಡುತ್ತೇನೆ. "ಎನ್ನುತ್ತಿದ್ದ. ಆದರೆ ಕಾಲಕಳೆದಂತೆ ಅವನ ಪ್ರತಿಭೆಯ ಕೀರ್ತಿ ಪಸರಿಸುತ್ತಾ ಹೋದಂತೆ, ಕೆಲಸದ ರಾಶಿಯೂ ಅಗಾಧವಾಗಿ ಬೆಳೆಯುತ್ತಾ ಹೋಯಿತು. ದೊಡ್ಡ ದೊಡ್ಡ ಕೇಸುಗಳು ಬರುತ್ತಿದ್ದಂತೆ, ಅವುಗಳ ಕಟಿಣ ಸವಾಲುಗಳನ್ನು ಎದುರಿಸುವುದಕ್ಕಾಗಿ ಮತ್ತಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಯಿತು. "ನನಗೀಗ ದಿನಕ್ಕೆ ಎರಡು ತಾಸಾದರೂ ನಿಶ್ಚಿಂತೆ ಯಿಂದ ನಿದ್ರಿಸಲು ಸಾಧ್ಯಾವಾಗುತ್ತಿಲ್ಲ " ಎಂದು ಆಗಾಗ ಹೇಳುತ್ತಿದ್ದ. ಈ ಮಾತನ್ನು ಕೇಳಿದಾಗ ಇನ್ನಷ್ಟು ಕೀರ್ತಿ , ಪ್ರತಿಷ್ಠೆ ಗಳಿಸಬೇಕೆಂಬ ಆತನ ಅದಮ್ಯ ಹಸಿವು ಕಡಿಮೆಯಾಗಿಲ್ಲವೆಂದು ಮನದಟ್ಟಾಗಿತ್ತು.

ಆತ ನಿರೀಕ್ಷಿದಂತೆ ವೃತ್ತಿಯಲ್ಲಿ ಅದ್ಭುತ ಯಶಸ್ಸನ್ನು ಪಡೆದ ಬಹುತೇಕ ಎಲ್ಲರೂ ಬಯಸುವ ಎಲ್ಲವನ್ನೂ ಸಾಧಿಸಿದ ವೃತ್ತಿಯಲ್ಲಿ ಭಾರೀ ಹೆಸರು, ಏಳು ಅಂಕೆಯ ಆದಾಯ . ನಗರದ ಪ್ರತಿಷ್ಟಿತ ಬಡಾವಣೆಯಲ್ಲಿ ವೈಭವೋಪೇತ ಬಂಗಲೆ. ಸ್ವಂತ ಖಾಸಗೀ ಜೆಟ್ ವಿಮಾನ, ಹವಾಯಿ ಸಮೀಪದಲ್ಲೊಂದು ಭಾರಿ ಬಂಗಲೆ. ಹಾಗೂ ಆತನಿಗೆ ಅತ್ಯಂತ ಅಚ್ಹುಮೆಚ್ಚಿನದಾಗಿದ್ದ ದುಬಾರಿ ಬೆಲೆಯ ಪ್ರತಿಷ್ಟಿತ "ಫೆರಾರಿ "ಕಾರು ಇವೆಲ್ಲ ಅವನ ತೆಕ್ಕೆಯಲ್ಲಿದ್ದವು.

ಇಷ್ಟೆಲ್ಲಾ ಇದ್ದರೂ ಹೊರನೋಟಕ್ಕೆ ಕಾಣುವಷ್ಟು ಅವನ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿಲ್ಲ ಎಂದು ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಅನಿಸುತ್ತಿತ್ತು. ಜತೆಗೆ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದುದರಿಂದಲೋ ಏನೋ . ಆತ ಯಾವುದೊ ಭಯಂಕರ ಅಪಾಯದ ಕಡೆ ಧಾವಿಸುತ್ತಿರುವನೆಂದು ಅನಿಸುತ್ತಿತ್ತು. ನಾವಿಬ್ಬರೂ ಜತೆಜತೆಯಾಗಿಯೇ ದುಡಿಯುತ್ತಿದ್ದೆವು. ಹಾಗಾಗಿ ಜತೆಯಲ್ಲೇ ದಿನದ ಬಹುಕಾಲ ಇರುತ್ತಿದ್ದೆವು. ಆಗ ಯಾವುದೂ ನಿಧಾನವಾಗಿ ಸಾಗುತ್ತಿರಲಿಲ್ಲ. ಒಂದು ಕೇಸು ಮುಗಿಯುವುದರೊಳಗೆ ಮತ್ತೊಂದು ಅದಕ್ಕಿಂತ ದೊಡ್ಡ ಕೇಸು ಕಾದಿರುತ್ತಿತ್ತು. ಜೂಲಿಯನ್ಗಂತೂ ಎಷ್ಟು ಪೂರ್ವಸಿದ್ಧತೆ ಮಾಡಿದರೂ ತೃಪ್ತಿಯಿಲ್ಲ. ನ್ಯಾಯಾಧೀಶರು ಆ ಪ್ರಶ್ನೆ ಕೇಳಿದರೆ ?ಈ ಪ್ರಶ್ನೆ ಕೇಳಿದರೆ ? ತುಂಬಿದ ನ್ಯಾಯಾಲಯದಲ್ಲಿ ವಾದ-ವಿವಾದಗಳು ನಡೆಯುತ್ತಿರುವಾಗಲೇ ಹಟಾತ್ತನೆ ನನ್ನ ಮನಸ್ಸಿಗೆ ಮಂಕು ಕವಿದರೆ ? ಹೀಗೆ ನೂರಾರು ಪ್ರಶ್ನೆಗಳು ಹಾಗಾಗಿ ನಾವು ಮಿತಿಮೀರಿ ಶ್ರಮಿಸುತ್ತಿದ್ದೆವು. ನಮ್ಮದೇ ಶ್ರಮ ಕೇಂದ್ರಿತ ದುಡಿತದಲ್ಲಿ ಮುಳುಗಿ ಹೋಗಿದ್ದೆವು. ಜಾಣಜನರು ತಂತಮ್ಮ ಮನೆಗಳಲ್ಲಿ ಕುಟುಂಬದ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದರೆ , ನಾವು ಆ ಹೊತ್ತಿಗೆ ನಮ್ಮ ಉಕ್ಕಿನ ಗೋಪುರದ ಅರವತ್ತನಾಲ್ಕನೆಯ ಅಂತಸ್ತಿನಲ್ಲಿ ಹಗಲುರಾತ್ರಿ ದುಡಿಯುತ್ತ ಜಗತ್ತಿನ ಬಾಲವನ್ನೇ ಕೈಯಲ್ಲಿ ಹಿಡಿದಿರುವೆವೆಂಬ ಯಶಸ್ಸಿನ ಭ್ರಮೆಯಲ್ಲಿ ಮೈಮರೆಯುತ್ತಿದ್ದೆವು.

ಜೂಲಿಯನ್ ನನ್ನು ಕಂಡಾಗ ನನಗೆ ಒಮ್ಮೊಮ್ಮೆ ಆತ ಆತ್ಮಹತ್ಯೆಯ ಕಡೆ ಧಾವಿಸುತ್ತಿರುವನೋ ಎಂಬ ಭಾವನೆ ಮೂಡುತ್ತಿತ್ತು. ಏಕೆಂದರೆ ಆತ ತೀವ್ರ ಅತೃಪ್ತಿಯಿಂದ ನರಳುತ್ತಿದ್ದ. ಹೀಗಾಗಿ ಕ್ರಮೇಣ ಅವನ ದಾಂಪತ್ಯ ಕುಸಿಯಿತು. ಆತ ತನ್ನ ತಂದೆಯೊಡನೆ ಮಾತಾಡುವುದೂ ನಿಂತಿತು. ಎಲ್ಲ ಭೋಗ, ವಿಲಾಸ, ಸುಖ ಸಂಪತ್ತುಗಳಿದ್ದರೂ , ಆತ ನಿಜವಾಗಿಯೂ ಯಾವುದನ್ನೂ ಹುಡುಕುತ್ತಿದ್ದನೋ ಅದು ಸಿಕ್ಕಿರಲಿಲ್ಲ. ಇದೊಂದು ಆಧ್ಯಾತ್ಮಿಕ , ಮಾನಸಿಕ ಸೋಲಾಗಿತ್ತು. ಶಾರೀರಿಕವಾಗಿಯೂ ಅದು ಸಂಭವಿಸಿದ್ದು ಕ್ರಮೇಣ ನಿಚ್ಚಳವಾಗತೊಡಗಿತು.

ವಯಸ್ಸು ಇನ್ನೂ ಐವತ್ತಮೂರಷ್ಟೇ ಆಗಿದ್ದರೂ ಜೂಲಿಯನ್ ಎಪ್ಪತ್ತರ ವೃದ್ಧನಂತೆ ಕಾಣಿಸುತ್ತಿದ್ದ. ತೂಕತಪ್ಪಿದ ಜೀವನಶೈಲಿಯ ಆಘಾತಗಳ ಸಾಕ್ಷಿಯೋ ಎಂಬಂತೆ ಆತನ ಮುಖದಲ್ಲಿ ಸುಕ್ಕುಗಳು ತುಂಬಿದ್ದವು. ಅಪರಾತ್ರಿಯವರೆಗಿನ ಅವ್ಯಾಹತ ಕುಡಿತ, ನಿರಂತರ ಸಿಗರೇಟ್ ಸೇವನೆ , ಫ್ರೆಂಚ್ ರೆಸ್ಟೋರೆಂಟ್ ಗಳಲ್ಲಿ ಭೂರಿಭೋಜನ - ಇವುಗಳ ಕಾರಣವಾಗಿ ಶರೀರ ವಿಕಾರವಾಗಿ ಕಾಣುವಷ್ಟು ಬೊಜ್ಜು ಬೆಳೆದಿತ್ತು. ಆಗಾಗ ಆತ ತನ್ನ ಅಸ್ವಸ್ಥತೆ , ಆಯಾಸಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದ . ಅವನ ಹಾಸ್ಯಪ್ರಜ್ಞೆ ಮಾಯವಾಗಿಬಿಟ್ಟಿತ್ತು. ಒಂದು ಕಾಲದಲ್ಲಿ ಉಕ್ಕುತ್ತಿದ್ದ ಉತ್ಸಾಹದ ವ್ಯಕ್ತಿತ್ವ ಈಗ ಮ್ರುತ್ಯುಸದ್ರಶ ಗಾಂಭೀರವಾಗಿ ಬದಲಾಗಿತ್ತು. ಜೀವನದ ಉದ್ದೇಶವನ್ನೇ ಆತ ಮರೆತಂತಿತ್ತು.

ಇನ್ನೂ ವಿಷಾದ ಸಂಗತಿಯೆಂದರೆ ಕೋರ್ಟಿನ ಕಲಾಪಗಳಲ್ಲೂ ಆತ ಮೊನಚನ್ನು ಕಳೆದುಕೊಂಡಿದ್ದ. ಮೊದಲು ತನ್ನ ಅದ್ಭುತ ವಾಗ್ಜ್ಹರಿಯಿಂದ ಮೊಕದ್ದಮೆಗಳ ಅಂತಿಮ ವಾದ -ಮಂಡನೆಯಲ್ಲಿ ಸಮಸ್ತ ಪ್ರೇಕ್ಷಕರನ್ನು ದಂಗುಬಡಿಸುತ್ತಿದ್ದ ಜೂಲಿಯನ್ . ಕ್ರಮೇಣ ಮೊಕದ್ದಮೆಗೆ ಸಂಬಂಧವೇ ಇಲ್ಲದ ಯಾವಾವುದೋ ವಿಷಯಗಳ ಬಗ್ಗೆ ಉದ್ದುದ ಮಾತಾಡುತ್ತ ಬೋರ್ ಹೊಡೆಸಲಾರಮ್ಭಿಸಿದ. ಪ್ರತಿವಾದಿಯ ಆಕ್ಷೇಪಗಳಿಗೆ ಜಾಣ್ಮೆಯಿಂದ ಉತ್ತರಿಸುತ್ತಿದ್ದವನೆ ಈಗ ವ್ಯಂಗ್ಯ . ವಕ್ತ್ರೋಕ್ತಿಗಳನ್ನಾಡಿ ತನ್ನ ಬಗ್ಗೆ ತುಂಬು ಅಭಿಮಾನವಿರಿಕೊಂಡಿದ್ದ ನ್ಯಾಯಾಧೀಶರಿಗೆ ಬೇಸರಬರಿಸ ತೊಡಗಿದ . ಒಂದೇ ಮಾತಿನಲ್ಲಿ ಹೇಳುವುದಾದರೆ ಅವನ ಬದುಕಿನ ಬೆಳಕೇ ಸೊರಗಲಾರಮ್ಭಿಸಿದಂತೆ ಕಾಣುತ್ತಿತ್ತು.

ದುರಂತದೆಡೆಗೆ ಸಾಗುವನ್ತಿದ್ದ ಅವನ ಈ ದುಸ್ಥಿತಿಗೆ ಅತಿವೇಗದ ಜೀವನಶೈಲಿಯೊಂದೆ ಕಾರಣವಾಗಿರಲಿಲ್ಲ. ಅವನ ನಿಜವಾದ ಸಮಸ್ಯೆ ಆಧ್ಯಾತ್ಮಿಕ ಸಮಸ್ಯೆಯಾಗಿತ್ತು ಎಂದು ನನ್ನ ಭಾವನೆ. ಆತ ಆಗಾಗ ತಾನು ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿ ಹೊರಟುಹೋಗಿದೆ. ಯಾವುದೋ ಒಂದು ಆಂತರಿಕ ಶೂನ್ಯತೆ ನಾನ್ನನ್ನು ಕಾಡುತ್ತಿದೆ ಎಂದು ಗೊಣಗುತ್ತಿದ್ದ. "ನಾನು ಆರಂಭದಲ್ಲಿ , ನಮ್ಮ ಕುಟುಂಬದ ಒತ್ತಾಯದ ಕಾರಣ ವಕೀಲಿವೃತ್ತಿಗೆ ಸೇರಿದರೂ, ನಾನು ಅದನ್ನು ಗಾಢವಾಗಿ ಪ್ರೀತಿಸುತ್ತಿದ್ದೆ. ಕಾನೂನಿನ ಸೂಕ್ಷ್ಮಗಳು , ಭೌದ್ಧಿಕ ಸವಾಲುಗಳು ನನ್ನನ್ನು ಮಂತ್ರಮುಗ್ಧಗೊಳಿಸಿದವು. ಸಮಾಜವನ್ನೇ ಪರಿವರ್ತಿಸಬಲ್ಲ ಕಾನೂನಿನ ಅಗಾಧಶಕ್ತಿ ನನಗೆ ಅಪಾರ ಪ್ರೇರಣೆ ನೀಡಿತ್ತು. ಆಗ ನಾನು ಕನೆಕ್ವಿ ಕಟ್ ನಗರದ ಶ್ರೀಮಂತ ಯುವಕನಾಗಿದ್ದೆ. ಸಮರ್ಥ ವಕೀಲನಾಗಿ ನನ್ನ ಪ್ರತಿಭೆಯನ್ನು ಸೂಕ್ತವಾಗಿ ಬೆಳೆಸಿಕೊಂಡು ಸಮಾಜದ ಪ್ರಗತಿಗೆ ಕಾರಣವಾಗಬಲ್ಲೆ. ಅನ್ಯರಿಗೆ ಉಪಕಾರ ಮಾಡಬಲ್ಲೆ ಎಂದು ಭಾವಿಸಿದ್ದೆ. ಈ ಮಹತ್ವಾಕಾಂಕ್ಷೆ ನನ್ನ ಬದುಕಿಗೆ ವಿಶಿಷ್ಟ ಅರ್ಥ ನೀಡಿತ್ತು . ಧ್ಯೇಯವನ್ನೂ . ಶಕ್ತಿಯನ್ನೂ ನೀಡಿತ್ತು." ಎಂದು ಹೇಳುತ್ತಿದ್ದ.

ಆದರೂ ಅವನ ಜೀವನದಲ್ಲಿ ಯಾವುದೋ ಒಂದು ನಿಗೂಢ ದುರಂತ ಸಂಭವಿಸಿತ್ತೆಂದು ನನಗೆ ಗೊತ್ತು. ಅದರ ನಿಶ್ಚಿತ ಸ್ವರೂಪವೇನೆಂದು ಎಷ್ಟು ಪ್ರಯತ್ನಿಸಿದರೂ ತಿಳಿದುಕೊಳ್ಳಲಾಗಲಿಲ್ಲ. ಅವನ ಅಪ್ತಮಿತ್ರರಲ್ಲೋಬ್ಬರಾದ ಹಾಡ್ರಿಂಜ್ ಹರಕುಬಾಯಿಯವನೆಂದೇ ಪ್ರಸಿದ್ಧನಾದರೂ , ಆತನೂ ಈ ವಿಷಯದಲ್ಲಿ ಬಾಯಿ ಬಿಟ್ಟಿರಲಿಲ್ಲ . " ಆ ವಿಷಯದಲ್ಲಿ ನಾನು ಗೌಪ್ಯತೆಯ ಪ್ರತಿಜ್ಞೆ ಮಾಡಿದ್ದೇನೆ "ಎಂದು ಹೇಳುತ್ತಿದ್ದ. ಅದೇನೇ ಇರಲಿ . ಜೂಲಿಯನ್ನನ ಈಗಿನ ದುಸ್ಥಿತಿಗೆ ಅದರ ಕೊಡುಗೆಯೂ ಸಾಕಷ್ಟಿರಬೇಕೆಂದು ನನ್ನ ಮನಸ್ಸು ಹೇಳುತ್ತಿತ್ತು. ಒಟ್ಟಾರೆಯಾಗಿ ನನ್ನ ಈ ಗುರು ಹಾಗೂ ಮಿತ್ರನ ಇಂದಿನ ಸ್ಥಿತಿಯ ಬಗ್ಗೆ ನಾನು ಚಿಂತಿತನಾಗಿದ್ದೆ. ಆತನಿಗೆ ಏನಾದರೂ ಸಹಾಯ ಮಾಡಬೇಕೆಂದು ಯೋಚಿಸುತ್ತಿದ್ದೆ.

ಅಷ್ಟರಲ್ಲಿ ಈ ದುರ್ಘಟನೆ ನಡೆದುಹೋಗಿತ್ತು. ಭಾರೀ ಹೃದಯಾಘಾತ ಅವನನ್ನು ನೆಲಕ್ಕುರಳಿಸಿತ್ತು.
ಯಾವ ನ್ಯಾಯಾಲಯದ ಸಭಾಭವನದಲ್ಲಿ "ಕೊಲೆ ಮೊಕದ್ದಮೆಗಳ ರಾಜ " ಎನಿಸಿದ ಮೊಕದ್ದಮೆಯನ್ನು ಗೆದ್ದು ವಿಜ್ರಂಭಿಸಿದ್ದನೋ , ಅದೇ ಸ್ಥಳ ಅವನ ಪಾಲಿಗೆ ಬದುಕಿನ ನಶ್ವರತೆಯ ಸ್ಪರ್ಶವನ್ನು ನೀಡಿತ್ತು.


ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.buildingonabudget.com/

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/








ಸೋಮವಾರ, ಡಿಸೆಂಬರ್ 27, 2010

ಬದುಕೇ ಬೆಲೆಬಾಳುವ ಬಳುವಳಿ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದು ವಿಶೇಷವನ್ನು ಗಮನಿಸಿರಬಹುದು ! ಯಾವ ಮಕ್ಕಳು ತಮ್ಮ ಜನ್ಮದಿನದ ಬಗ್ಗೆ ಹೇಳುವಾಗ ಅದನ್ನು ಬರ್ತ್ ಡೇ ಎಂದು ಹೇಳುವುದಿಲ್ಲ. ಹ್ಯಾಪಿ ಬರ್ತ್ ಡೇ ಎಂದೇ ಹೇಳುತ್ತಾರೆ. ಅಂದರೆ ಹುಟ್ಟುಹಬ್ಬದ ದಿನ ಆನಂದ ಮಯವಾಗಿರುತ್ತದೆಂಬ ವಿಶ್ವಾಸ ಅವರದ್ದು ! ಅದು ಸಹಜವೂ ಹೌದು . ಏಕೆಂದರೆ ಅಂದು ಅವರಿಗೆ ಹೊಸ ಬಟ್ಟೆ ,ಕೇಕ್ ,ಉಡುಗೊರೆ ಮತ್ತು ಶುಭಾಶಯಗಳು ದೊರೆಯುತ್ತವೆ.

ಪುಟ್ಟ ಎಂಟು ವರ್ಷದ ಬಾಲಕ. ಶ್ರೀಮಂತ ಕುಟುಂಬದವನು . ಮನೆಯ ಹಿರಿಯರಾದ ಅಜ್ಜ ಆಗರ್ಭ ಶ್ರೀಮಂತರು . ಮೊಮ್ಮಗನ ಮೇಲೆ ಅಪಾರ ಪ್ರೀತಿ. ಪುಟ್ಟಣ ಹುಟ್ಟು ಹಬ್ಬ ಬಂತು. ಅಜ್ಜನಿಂದ ದೊಡ್ಡ ಉಡುಗೊರೆ ದೊರೆಯುತ್ತದೆಯೆಂದು ನಿರೀಕ್ಷಿಸಿದ್ದ . ತನ್ನ ಗೆಳೆಯರೊಂದಿಗೆ ತಾತ ಕೊಡಬಹುದಾದ ಉಡುಗೊರೆಯ ಬಗ್ಗೆ ಚರ್ಚಿಸಿದ್ದ , ಅವನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಯಿತು . ಸಮಾರಂಭ ಮುಗಿದ ನಂತರ ಪುಟ್ಟ ತನಗೆ ಬಂದ ಉಡುಗೊರೆಗಳನ್ನು ಒಂದೊಂದಾಗಿ ತೆಗೆದು ನೋಡುತ್ತಿದ್ದ.

ಪ್ರತಿ ಉಡುಗೊರೆ ಗೂ ಆನಂದದ ಉದ್ಘಾರ ತೆಗೆಯುತ್ತಿದ್ದ. ಆಟಿಕೆಗಳು , ಪುಸ್ತಕಗಳು ಇನ್ನೂ ಏನೇನೋ ಬಂದಿದ್ದವು. ಅಜ್ಜನ ಉಡುಗೊರೆಯ ಪ್ಯಾಕೆಟ್ ಮಾತ್ರ ಚಿಕ್ಕದಿತ್ತು. ಪುಟ್ಟನಿಗೆ ಕೊಂಚ ನಿರಾಶೆಯಾಯಿತು. ಅದರ ಒಳಗಡೆ ಒಂದಷ್ಟು ಕಾಗದ ಪತ್ರ ಗಳು ಇದ್ದವು . ಪುಟ್ಟನಿಗೆ ಸಿಟ್ಟೇ ಬಂತು. ಆ ಕಾಗದ ಪತ್ರಗಳನ್ನು ದೂರಕ್ಕೆ ಬಿಸಾಡಿದ. ಅಲ್ಲಿಯೇ ಕುಳಿತ್ತಿದ್ದ ಅಜ್ಜ , ಅಪ್ಪ -ಅಮ್ಮ ಎಲ್ಲರೂ ದಿಗ್ಮೂಢ ರಾದರು. ಅಮ್ಮ ತಕ್ಷಣ ಎದ್ದು ಹೋಗಿ ಆ ಕಾಗದ ಪತ್ರಗಳನ್ನು ಜೋಪಾನವಾಗಿ ಎತ್ತಿಕೊಂಡು ನೋಡಿದಳು. ಆಕೆಯ ಮುಖ ಅರಳಿತು. ಪುಟ್ಟನಿಗೆ "ಹಾಗೆಲ್ಲ ಮಾಡಬಾರದು. ಅಜ್ಜನ ಮನಸ್ಸಿಗೆ ನೋವಾಗುತ್ತದೆ. ಅಜ್ಜನಲ್ಲಿ ಕ್ಷಮಾಪಣೆ ಕೇಳು " ಎಂದರು. ಪುಟ್ಟ ಅರ್ಧಮನಸ್ಸಿನಲ್ಲೇ ಎದ್ದು ನಿಧಾನವಾಗಿ ಅಜ್ಜನ ಬಳಿಗೆ ತೆರಳಿದ. ಅವನು ಕ್ಷಮಾಪಣೆ ಕೇಳುವ ಮೊದಲೇ ,ಎಲ್ಲವನ್ನು ಗಮನಿಸಿದ್ದ ಅಜ್ಜ ತಮ್ಮ ಜೇಬಿನಿಂದ ಒಂದಷ್ಟು ನಾಣ್ಯಗಳನ್ನು ತೆಗೆದು ಪುಟ್ಟಣ ಕೈಗಿತ್ತರು. ನಿನಗೇನೂ ಬೇಕೋ ಕೊಂಡುಕೋ ಎಂದರು. ಪುಟ್ಟನಿಗೆ ಆನಂದವೋ ಆನಂದ. ಅಜ್ಜನಿಗೆ ಧನ್ಯವಾದ ಹೇಳಿ ಸಂತೋಷದಿಂದ ಹೊರಗೆ ಓಡಿಹೋದ . ಏಕೆಂದರೆ ಅಜ್ಜ ಇಷ್ಟೊಂದು ದುಡ್ಡು ಕೊಟ್ಟಿದ್ದಾರೆಂದು ತನ್ನ ಗೆಳೆಯರಿಗೆಲ್ಲ ಹೇಳಬೇಕಿತ್ತು.

ಪುಟ್ಟಣ ಅಪ್ಪ ಅಮ್ಮ ಎದ್ದು ಅಜ್ಜನ ಬಳಿಗೆ ಹೋಗಿ "ಪುಟ್ಟ ಇನ್ನು ಚಿಕ್ಕ ಹುಡುಗ ಅವನಿಗೆ ಅರ್ಥವಾಗುವುದಿಲ್ಲ . ಅವನ ನಡವಳಿಕೆಯನ್ನು ಮನ್ನಿಸಿಬಿಡಿ. ನೀವು ಪುಟ್ಟನಿಗೆ ಬರೆದುಕೊಟ್ಟಿರುವ ಈ ಕಾಫಿ ಎಸ್ಟೇಟ್ ಗಾಗಿ ನಿಮಗೆ ಧನ್ಯವಾದಗಳು . ಎಂದು ಹೇಳಿದರು. ಅಜ್ಜ ತನ್ನ ಹುಟ್ಟು ಹಬ್ಬದ ಉಡುಗೊರೆಯಾಗಿ ಕೊಟ್ಟಿದ್ದ ಕಾಫಿ ಎಸ್ಟೇಟ್ ನ ಬೆಲೆ ಅರ್ಥ ಮಾಡಿ ಕೊಳ್ಳದ ಪುಟ್ಟ ತನ್ನ ಕೈಗೆ ಸಿಕ್ಕಿದ್ದ ಪುಡಿಗಾಸಿಗೆ ಸಂತೋಷ ಪಡುತ್ತಿದ್ದ !

ಈ ಘಟನೆಯ ಪುಟ್ಟ ಬೇರೆ ಯಾರೋ ಅಲ್ಲ. ಬಹುಶ; ಕ್ಷಣ ಹೊತ್ತು ಅಣೆಮುತ್ತು ಪುಸ್ತಕದ ಲೇಖಕ ಎಸ್.ಷಡಕ್ಷರಿ ಇರಬೇಕು!. ನಾವೂ ಅನೇಕ ಬಾರಿ ಪುಟ್ಟನಂತೆಯೇ ವರ್ತಿಸುತ್ತೇವೆ. ಬದುಕು ನಮಗೆ ಸಿಕ್ಕ ಬೆಲೆಬಾಳುವ ಬಳುವಳಿ ನಾವದನ್ನು ಉದಾಸೀನ ಮಾಡುತ್ತೇವೆ. ಬಳಸದೆ ದೂರ ಎಸೆಯುತ್ತೇವೆ. ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳದೆ ಇಷ್ಟೇನಾ ಎಂದು ಕುಗ್ಗುತ್ತೇವೆ . ಸಣ್ಣ ಪುಟ್ಟ ಬಳುವಳಿಗಳು ಸಿಕ್ಕಾಗ ಹಿಗ್ಗುತ್ತೇವೆ. ಚಿಲ್ಲರೆ ದುಡ್ಡು ಝಣ ಝಣ ಶಬ್ದ ಮಾಡಿದಾಗ ನಮಗೆ ಬೇರೇನೋ ಕೇಳಿಸುವುದಿಲ್ಲ. ಮಾನವ ಜನ್ಮ ದೊಡ್ಡದು ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಅದನ್ನು ಹಾನಿ ಮಾಡಿಕೊಳ್ಳುವ ಹುಚ್ಚಪ್ಪ ಗಳಾಗುತ್ತೇವೆ.

ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.buildingonabudget.com/

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/

















ಭಾನುವಾರ, ಡಿಸೆಂಬರ್ 26, 2010

ತಾಯಿ ತಿಳಿಸಿಕೊಟ್ಟ ಹೊಸ ರುಚಿ ಯಿಂದ ಕೆಂಟಕಿ ಪ್ರೈಡ್ ಚಿಕನ್ ಉಪಹಾರ ಗೃಹಗಳು ಹುಟ್ಟಿದವು.

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ತಾಯಂದಿರು ಯಾವುದಾದರು ವಿಶೇಷ ತಿಂಡಿ ಮಾಡುವುದನ್ನು ಹೇಳಿಕೊಟ್ಟಿ ದ್ದರೆ ಅದನ್ನು ಮರೆಯಬಾರದು. ಯಾರಿಗೆ ಗೊತ್ತು ಮುಂದೊಂದು ದಿನ ಅದು ಕೊಟ್ಯಾಧೀಶರನ್ನಾಗಿ ಮಾಡಬಹುದು ! ಕರ್ನಲ್ ಸ್ಯಾಂಡರ್ಸ್ ರವರು ಅವರ ತಾಯಿ ಕಳಿಸಿದ್ದ ಚಿಕನ್ ಮಾಡುವ ವಿಧಾನವನ್ನು ಬಳಸಿದ್ದರಿಂದ ಕೊಟ್ಯಾಧೀಶರಾದರು! ಒಂದು ಸಾವಿರದ ಒಂಭತ್ತು ನೂರರಲ್ಲಿ ಸ್ಯಾಂಡರ್ಸ್ ಆರು ವರ್ಷ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು . ಸಂಸಾರ ನಿರ್ವಹಣೆಗಾಗಿ ಅವರ ತಾಯಿ ದಿನವಿಡೀ ದುಡಿಯಬೇಕಿತ್ತು. ಸ್ಯಾಂಡರ್ಸ್ ರವರೆ ತನ್ನ ತಮ್ಮನ್ದೀರರನ್ನು ನೋಡಿಕೊಳ್ಳಬೇಕಿತ್ತು. ಆಗ ಸ್ಯಾಂಡರ್ಸ್ ಗೆ ಅವರ ತಾಯಿ ಕೋಳಿ ಬೇಯಿಸುವ ವಿಶೇಷ ವಿಧಾನವನ್ನು ಹೇಳಿಕೊಟ್ಟರು.

ಬೆಳೆದು ದೊಡ್ಡವರಾದ ಮೇಲೆ ಸ್ಯಾಂಡರ್ಸ್ ಎಲ್ಲೆಲ್ಲೋ ಕೆಲಸ ಮಾಡಿದರು. ರೈಲ್ವೆ ಇಲಾಖೆಯಲ್ಲಿ ಸೇನೆಯಲ್ಲಿ ದುಡಿದರು. ವಕೀಲಿಕಿ ಮಾಡಿದರು. ಇನ್ಸೂರೆನ್ಸ್ ಏಜೆಂಟ ರಾದರು . ಟೈರು ಮಾರಾಟಗಾರರಾದರು. ಕೊನೆಗೆ ಪೆಟ್ರೋಲ್ ಬಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬರುವವರಿಗೆ ಕೋಳಿ ತಿನಿಸುಗಳನ್ನು ಮಾರುತ್ತಿದ್ದರು . ತನ್ನ ತಾಯಿ ಹೇಳಿ ಕೊಟ್ಟಿದ್ದ ವಿಧಾನದ ಜತೆಯಲ್ಲಿ ಹನ್ನೊಂದು ಬಗೆಯ ಮೂಲಿಕೆಗಳನ್ನು ಬೇರುಗಳನ್ನು ಬಳಸಿ ಹೊಸ ರೀತಿಯ ಪ್ರೇಜರ್ ಕುಕರ್ ನಲ್ಲಿ ಬೇಯಿಸುತ್ತಿದ್ದರು . ಇವರ ಪ್ರೈಡ್ ಚಿಕನ್ ವಿನೂತನ ರುಚಿ ಹೊಂದಿರುತ್ತಿತ್ತು. ಬಹಳ ಜನಪ್ರಿಯವಾಯಿತು . ವ್ಯಾಪಾರವೂ ಅಭಿವೃದ್ಧಿಯಾಯಿತು . ಪೆಟ್ರೋಲ್ ಬಂಕಿನ ಎದುರಿನ ಕಟ್ಟಡದಲ್ಲಿ ದೊಡ್ಡ ಉಪಾಹಾರ ಗೃಹ ಪ್ರಾರಂಭಿಸಿದರು. ಒಂಭತ್ತು ವರ್ಷಗಳ ಕಾಲ ವ್ಯಾಪಾರ ಜೋರಾಗಿತ್ತು.

ದುರದೃಷ್ಟಕರ ಬೆಳವಣಿಗೆಯಲ್ಲಿ ರಸ್ತೆಯ ವಿಸ್ತರಣೆಗಾಗಿ ಇವರ ಕಟ್ಟಡ ಕೆಡವಲಾಯಿತು. ಒಂದೇ ದಿನದಲ್ಲಿ ಸ್ಯಾಂಡರ್ಸ್ ಎಲ್ಲವನ್ನು ಕಳೆದುಕೊಂಡರು. ಚಿಕನ್ ಮಾಡುವ ವಿಶೇಷ ಜ್ಞಾನವೊಂದು ಬಿಟ್ಟು ಮತ್ತೇನೂ ಉಳಿದಿರಲಿಲ್ಲ. ಗೆಳೆಯ ಹರ್ಮನ್ ಎಂಬುವವರಿಗೆ ತನ್ನ ವಿಶೇಷ ವಿಧಾನವನ್ನು ಹೇಳಿಕೊಟ್ಟು ಸ್ವಲ್ಪ ಹಣ ಪಡೆದು ಊರು ಬಿಟ್ಟುಹೋದರು. ಕೆಲವು ತಿಂಗಳ ನಂತರ ಹಳೆಯ ಊರಿಗೆ ಬಂದು ನೋಡಿದರೆ ಹರ್ಮನ್ ಅವರ ಉಪಾಹಾರ ಗೃಹದ ಮುಂದೆ "ಕೆಂಟಕಿ ಚಿಕನ್ ಹೊಸ ವಿಧಾನ -ಹೊಸ ರುಚಿ "ಎಂಬ ದೊಡ್ಡ ಫಲಕವಿತ್ತು. ವಿಚಾರಿಸಿದಾಗ ಹರ್ಮನ್ ರು ನಿಮ್ಮ ಕೆಂಟಕಿ ಚಿಕನ್ ಬಹಳ ಯಶಸ್ವಿಯಾಗಿದೆ . ಒಳ್ಳೆಯ ಲಾಭ ತರುತ್ತಿದೆಯೇನ್ದರು.

ಇದಾದದ್ದು ಒಂದುಸಾವಿರದ ಒಂಭತ್ತು ನೂರ ಐವತ್ತಾ ಎರಡರಲ್ಲಿ ಆಗ ಸ್ಯಾಂಡರ್ಸ್ ರಿಗೆ ಅರವತ್ತರ ವಯಸ್ಸು . ಅವರು ಸುಮ್ಮನೆ ಕೂರಲಿಲ್ಲ .ಒಂದು ಹಳೆಯ ಕಾರಿನಲ್ಲಿ ಬಕೆಟ್ ತುಂಬಾ ತಮ್ಮ ಚಿಕನ್ ತಿನಿಸು ತಯಾರಿಸಿ ತುಂಬಿಕೊಂಡರು. ರೆಸ್ಟೋರೆಂಟ್ ಗಳಿಗೆ ಹೋಗಿ ಕೆಂಟಕಿ ಚಿಕನ್ ಮಾಡುವ ತಂತ್ರಜ್ಞಾನವನ್ನು ನೀಡತೊಡಗಿದರು. ಅದಕ್ಕಾಗಿ ಒಂದು ಫೀಜು ಗೊತ್ತುಪಡಿಸಿದರು. ಅವರು ಮತ್ತು ಅವರ ಹೆಂಡತಿ ಊರಿಂದೂರಿಗೆ ಹೋಗಿ ತಾವು ಸಿದ್ದಗೊಳಿಸಿದ ಪ್ರೇಜರ್ ಕುಕ್ಕರ್ ಮತ್ತು ಸಾಂಬಾರ ಪದಾರ್ಥಗಳನ್ನು ಮಾರತೊಡಗಿದರು. ಅಲ್ಲೆಲ್ಲ "ಕೆಂಟಕಿ ಪ್ರೈಡ್ ಚಿಕನ್ " ಫಲಕಗಳನ್ನು ಹಚ್ಚತೊಡಗಿದರು. ಕೆಲವೇ ವರ್ಷಗಳಲ್ಲಿ ಅಮೇರಿಕಾದ ಎಲ್ಲೆಡೆಯಲ್ಲೂ ಕೆಂಟಕಿ ಚಿಕನ್ ಉಪಾಹಾರ ಗೃಹಗಳು ನೂರಾರು ಸಂಖ್ಯೆಯಲ್ಲಿ ಬೆಳೆಯತೊಡಗಿದವು . ಒಂದುಸಾವಿರದ ಅರವತ್ತ ನಾಲ್ಕರಲ್ಲಿ ಆರು ನೂರಕ್ಕೂ ಹೆಚ್ಚು ಕೆಂಟಕಿ ಗಳು ದೇಶದಲ್ಲೆಲ್ಲ ಹರಡಿದ್ದವು. ಆಗ ಸ್ಯಾಂಡರ್ಸ್ ಎರಡು ದಶಲಕ್ಷ ಡಾಲರುಗಳಿಗೆ ತನ್ನ ವ್ಯಾವಹಾರವನ್ನು ಮಾರಿಬಿಟ್ಟರು .

ಈಗ ಕೆಂಟಕಿ ಚಿಕನ್ ಉಪಾಹಾರ ಗೃಹಗಳು ಪೆಪ್ಸಿ ಕಂಪನಿಯ ಮಾಲೀಕತ್ವದಲ್ಲಿವೆ. ವಿಶ್ವದಾದ್ಯಂತ ಹನ್ನೊಂದು ಸಾವಿರಕ್ಕೂ ಹೆಚ್ಚು ಕೆಂಟಕಿ ಗಳು ಇವೆ ! ಬೆಂಗಳೂರಿನಲ್ಲೂ ಹಲವಾರು ಕೆಂಟಕಿ ಗಳಿವೆ. ಸ್ಯಾಂಡರ್ಸ್ ರವರ ಚಿತ್ರ ಎಲ್ಲೆಡೆಯಲ್ಲೂ ರಾರಾಜಿಸುತ್ತಿದೆ. ಇಷ್ಟೆಲ್ಲಾ ಆದದ್ದು ಒಬ್ಬ ಮಗ ತನ್ನ ತಾಯಿ ಹೇಳಿಕೊಟ್ಟ ಪಾಕ ವಿಧಾನವನ್ನು ಅನುಸರಿಸಿದ್ದರಿಂದ.

ನೀವು ಕೂಡ ನಿಮ್ಮ ತಂದೆ ತಾಯಿ ಹೇಳಿಕೊಟ್ಟ ಕಳುಹಿಸಿಕೊಟ್ಟ ,ತಿಳಿಸಿಕೊಟ್ಟ ಯಾವುದಾದರು ವಿಧಾನಕ್ಕೆ ನಿಮ್ಮ ಒಂದು ಕಲ್ಪನಾ ಶಕ್ತಿಯನ್ನು ,ಅಥವಾ ನಿಮ್ಮ ಒಂದು ತಂತ್ರ ಜ್ಞಾನವನ್ನು ಸೇರಿಸಿ ಸ್ಯಾಂಡರ್ಸ್ ರವರ ರೀತಿ ಜೀವನದಲ್ಲಿ ಹೊಸ ಕ್ರಾಂತಿಯನ್ನು ಏಕೆ ಮಾಡಬಾರದು. ಜೀವನದಲ್ಲಿ ಸಂಭವಿಸಿದ ಕಷ್ಟ , ತೊಂದರೆ, ದುಃಖ ನಮ್ಮ ಒಳ್ಳೆಯದಕ್ಕೆ , ದೇವರು ಕಳುಹಿಸಿದ ಅವಕಾಸ ಎಂದು ತಿಳಿದು ಕಷ್ಟ ಪಟ್ಟು ಏಕೆ ಮೇಲೆ ಬರಬಾರದು ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/



ಶನಿವಾರ, ಡಿಸೆಂಬರ್ 25, 2010

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಬ್ಬ ಸ್ಪುರದ್ರೂಪಿ ಯುವಕನಿದ್ದ. ಬುದ್ಧಿವಂತ , ಕೈತುಂಬಾ ಸಂಬಳದ ಉದ್ಯೋಗ . ನೃತ್ಯದಲ್ಲಿ ಸಂಗೀತದಲ್ಲಿ ಆಸಕ್ತಿ. ಅವರ ಮನೆಯ ಬಳಿ ಒಬ್ಬ ನಿವೃತ್ತ ಮಿಲಿಟರಿ ಅಧಿಕಾರಿ ಇದ್ದರು. ದಪ್ಪದ -ಡೂತಿ ವ್ಯಕ್ತಿ. ಮೂಗಿನ ಮೇಲೆ ಸಿಟ್ಟಂತೆ. ಅವರ ಬಳಿ ಯಾವಾಗಲೂ ಲೋಡ್ ಆಗಿರುವ ಪಿಸ್ತೂಲ್ ಮತ್ತು ಬಂದೂಕು ಇರುತ್ತಿತ್ತಂತೆ. ಅವರಿಗೆ ಒಬ್ಬಳೇ ಮಗಳು. ಜಗದೇಕ ಸುಂದರಿ. ಒಳ್ಳೆಯ ನೃತ್ಯಗಾತಿ . ಯುವಕನಿಗೆ ಅವಳನ್ನು ಮದುವೆಯಾಗುವಂತೆ ಕೇಳುವ ಆಸೆ. ಆದರೆ ಆಕೆಯ ನಿರಾಕರಣೆಯ ಮತ್ತು ಪಿಸ್ತೂಲ್, ಬಂದೂಕು ಹೊಂದಿರುವ ಅವರ ತಂದೆಯ ಹೆದರಿಕೆ.

ಒಂದು ರಾತ್ರಿ ಇದೆ ಯೋಚನೆಯಲ್ಲಿ ಮಲಗಿದ. ಮುಂಜಾನೆಯ ಕನಸಿನಲ್ಲಿ ಜಗದೇಕ ಸುಂದರಿಯೇ ಬಂದಳು. ಮದುವೆಗೆ ಸಿದ್ಧವೆನ್ದಳು. ಇವನು "ಸಂಪ್ರದಾಯದ ಮದುವೆಯೋ ? ಅಥವಾ ರಿಜಿಸ್ಟರ್ ಮದುವೆಯೋ " ಎಂದಾಗ ಆಕೆ "ಕನಸು ನಿಮ್ಮದು ! ತೀರ್ಮಾನವೂ ನಿಮ್ಮದು ! ಎಂದಳು.

ಈತ ತನ್ನ ತೀರ್ಮಾನಿಸುವಷ್ಟರಲ್ಲಿ ಅವರ ಅಪ್ಪ ಬಂದರು. ಕೈಯಲ್ಲಿ ಪಿಸ್ತೂಲಿತ್ತು. ಬಂದೂಕಿತ್ತು. ಸಿಟ್ಟಿನಿಂದ ನಿನ್ನನ್ನು ಕೊಲ್ಲುತ್ತೇನೆಂದು ಗರ್ಜಿಸಿದರು. ಈತ ಹೆದರದೆ "ಪಿಸ್ತೂಲಿನಿಂದ ಕೊಳ್ಳುತ್ತೀರೋ ಅಥವಾ ಬಂದೂಕಿನಿಂದ ಕೊಳ್ಳುತ್ತೀರೋ " ಎಂದಾಗ ಅವರು "ಕನಸು ನಿನ್ನದು ! ತೀರ್ಮಾನವೂ ನಿನ್ನದೇ !"ಎಂದರು. ಆಗ ಆತನಿಗೆ ಎಚ್ಚರವಾಯಿತು. ಮತ್ತೆ ನಿದ್ದೆ ಮಾಡಲಿಲ್ಲ. ಕನಸೂ ನನ್ನದೇ ಬದುಕೂ ನನ್ನದೇ. ಸುಮ್ಮನೆ ಕೂತರಾಗದು ಎನಿಸಿತು . ಬೇಗನೆದ್ದು ಸಿದ್ಧನಾದ. ತನ್ನ ಕಿರು ಪರಿಚಯ ಮತ್ತು ವೇತನದ ವಿವರಗಳನ್ನು ಬರೆದುಕೊಂಡ . ಶಿಸ್ತಾಗಿ ಅವರ ಮನೆಗೆ ಹೋದ. ಮನೆಯ ಮುಂದೆಯೇ ಅವರ ಕನಸಿನ ಕನ್ಯೆ ಸಿಕ್ಕಳು. ಇವನು ನೇರವಾಗಿ ಆಕೆಯನ್ನು ಮಾತನಾಡಿಸಿ ತನ್ನ ಉದ್ದೇಶ ತಿಳಿಸಿದ. ಆಕೆ ತನ್ನ ತಂದೆಯೊಂದಿಗೆ ಮಾತನಾಡಿ ಎಂದಳು. ಅವರು ಮನೆಯ ವರಾಂಡದಲ್ಲಿ ಪತ್ರಿಕೆಯೊಂದನ್ನು ಓದುತ್ತ ಕುಳಿತಿದ್ದರು. ಅವರಿಗೆ ತನ್ನ ಬೇಡಿಕೆ ತಿಳಿಸಿದಾಗ ಅವರು ಗಂಭೀರವಾಗಿ "ನಿಮ್ಮ ತಂದೆ ತಾಯಿ ಬಂದು ಮಾತನಾಡುವುದು ಸಂಪ್ರದಾಯ " ಎಂದರು. ಮುಂದಿನ ದಿನಗಳಲ್ಲಿ ಜಾತಿ ಅಂತಸ್ತು ಸಂಪ್ರದಾಯ ಇನ್ನು ಏನೇನೋ ಅಡ್ಡ ಬಂದವು. ಆದರೆ ಪ್ರಯತ್ನ ಕೈಬಿಡಲಿಲ್ಲ. ಮುಂದೆ ಸಂಭವಿಸಿದ್ದನ್ನು ಸುದೀರ್ಘವಾಗಿ ಹೇಳಿ ಸಮಯ ವ್ಯರ್ಥ ಮಾಡುವುದೇಕೆ ? ಈಗ ಅವರದ್ದು ಸುಖಿ ಸಂಸಾರ !

ಎಲ್ಲರ ಕನಸು ಸುಲಭವಾಗಿ ನನಸಾಗುವುದಿಲ್ಲವೆಮ್ಬುದು ನಿಜ. ಆದರೆ ಕನಸು ಕಂಡು ಮೇಲೆದ್ದು ಅದನ್ನು ನನಸಾಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಲ್ಲವೇ ? ನಿರಾಕರಣೆಗೆ ಹೆದರದೆ, ಬಂದೂಕಿಗೆ ಬಗ್ಗದೆ, ಜಾತಿ ಅಂತಸ್ತುಗಳಿಗೆ ಬೆಲೆ ಕೊಡದೆ ಪ್ರಯತ್ನ ಪಟ್ಟರೆ ಕನಸು ನನಸಾದೀತು. ಇದು ಕೇವಲ ಮದುವೆಯ ವಿಷಯದಲ್ಲಿ ಮಾತ್ರವಲ್ಲ. ವಿಧ್ಯಾಭ್ಯಾಸ , ಉದ್ಯೋಗ , ಉದ್ಯಮ ಮುಂತಾದ ಕ್ಷೇತ್ರಗಳಲ್ಲೂ ನಿಜ. ಕನಸು ಕಂಡು ಮತ್ತೆ ಚಾದರ ಹೊದ್ದು ಮಲಗಿದರೆ ಕನಸು ಹೇಗೆ ನನಸಾದೀತು ? ಜಾರ್ಜ್ ಬರ್ನಾಡ್ ಷಾ ಅವರ "ಕನಸು ಕಂಡು ಏಕೆ ಎಂದು ಮಲಗಬಾರದು . ಕನಸು ಕಂಡು ಏಕಾಗಬಾರದು ಎಂದೆಳಬೇಕು!" ಎನ್ನುವ ಮಾತು ಎಷ್ಟು ನಿಜವಲ್ಲವೆ ?

ನಿಮಗಾಗಿ ಅವಕಾಸhttp://sunnaturalflash.trafficformula2.com/


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

http://www.sunnaturalflash.com/



ಶುಕ್ರವಾರ, ಡಿಸೆಂಬರ್ 24, 2010

ಇಂಗ್ಲಿಷ್ ಬಂದಿದ್ದರೆ ಗಂಟೆ ಬಾರಿಸಿಕೊಂಡಿರುತ್ತಿದ್ದೆ.......

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದೂರಿನ ಹಳೆ ದೇವಸ್ಥಾನದಲ್ಲಿ ಗಂಟೆಯನ್ನು ಬಾರಿಸುವ ಕೆಲಸ ಮಾಡಿಕೊಂಡು ಬೆಲ್ಲಪ್ಪನೆಂಬ ಅನಕ್ಷರಸ್ಥನಿದ್ದ . ಸಣ್ಣ ಸಂಬಳ , ದೇವಸ್ಥಾನದಲ್ಲಿ ಉಚಿತ ಊಟ, ಜೀವನ ಸಾಗುತ್ತಿತ್ತು. ಹಲವಾರು ವರ್ಷಗಳ ನಂತರ ದೇವಸ್ಥಾನಕ್ಕೆ ಯುವಕರೇ ಹೆಚ್ಚಿದ್ದ ಹೊಸ ಆಡಳಿತ ಮನದಲಿ ಬಂತು.

ಅವರು ಹಳೆಯ ದೇವಸ್ಥಾನದ ಆದಾಯ ಹೆಚ್ಚಿಸುವುದಕ್ಕಾಗಿ ಕಟ್ಟಡಕ್ಕೆ ಸುಣ್ಣ -ಬಣ್ಣದ ಅಲಂಕಾರ ಮಾಡಿಸಿದರು. ಹೊಸ ಅರ್ಚಕರನ್ನು ಹೊಸ ಸಿಬ್ಬಂದಿಯನ್ನು ನೇಮಿಸಿದರು. ಸಿಬ್ಬಂದಿ ಇಂಗ್ಲೀಷ್ ನಲ್ಲೆ ಮಾತನಾಡಬೇಕೆಂಬ ನಿಯಮ ತಂದರು. ಆದರೆ ಬೆಲ್ಲಪ್ಪನಿಗೆ ಇಂಗ್ಲೀಷ್ ಗೊತ್ತಿರಲಿಲ್ಲ. ಇದೆ ಕಾರಣಕ್ಕಾಗಿ ಒಂದು ದಿನ ಮಂಡಳಿಯವರು ಆತನನ್ನು ಕಡ್ಡಾಯ ನಿವೃತ್ತಿ ಗೊಳಿಸಿದರು. ಸ್ವಲ್ಪ ಹಣ ಕೈ ಗಿತ್ತು ಹೊರಕ್ಕಟ್ಟಿದರು. ಆತನಿಗೆ ಏನೂ ತೋಚಲಿಲ್ಲ. ಬಾಯಿ ಒಣಗಿತ್ತು. ಪಾನ್ ಬೀಡ ತಿನ್ನಬೇಕೆನಿಸಿತು . ಆ ರಸ್ತೆಯಲ್ಲಿ ಒಂದೂ ಪಾನ್ ಶಾಪ್ಹ್ ಕಾಣಲಿಲ್ಲ. ಎರಡು ರಸ್ತೆಯಾಚೆಯ ಪಾನ್ ಬೀಡ ತಿಂದ. ಸಮಾಧಾನವಾಯಿತು. ಮುಂದೇನು ಮಾಡಬೇಕೆಂದು ಯೋಚಿಸತೊಡಗಿದ.

ದೇವಸ್ಥಾನದ ರಸ್ತೆಯಲ್ಲಿ ಒಂದೂ ಪಾನ್ ಶಾಪಿಲ್ಲ , ತನ್ನ ಬಳಿ ಅಲ್ಪ ಸ್ವಲ್ಪ ಹಣವಿದೆ. ತಾನೇ ಏಕೆ ಒಂದು ಪಾನ್ ಶಾಪ್ ತೆರೆಯಬಾರದೆನಿಸಿತು. ರಸ್ತೆಯಲ್ಲಿ ಒಂದು ಜಾಗ ಹುಡುಕಿದ. ಸಣ್ಣ ಅಂಗಡಿಯಲ್ಲಿ ಬೆಲ್ಲಪನ ಪಾನ್ ಶಾಪ್ಹ್ ಪ್ರಾರಂಭವಾಯಿತು. ಒಳ್ಳೆಯ ಎಲೆ-ಅಡಿಕೆ ಬಳಸುತ್ತಿದ್ದುದರಿಂದ ಮತ್ತು ನಗು ಮೊಗದಿಂದ ಗ್ರಾಹಕರನ್ನು ಮಾತನಾಡಿಸುತ್ತಿದ್ದುದರಿಂದ ಚೆನ್ನಾಗಿ ವ್ಯಾಪಾರ ಆಗತೊಡಗಿತು. ಕೆಲವೇ ತಿಂಗಳಲ್ಲಿ ಆತನ ಮಾಸಿಕ ಆದಾಯ ದೇವಸ್ಥಾನದವರು ಕೊಡುತ್ತಿದ್ದ ಸಂಬಳಕ್ಕಿಂತ ಹೆಚ್ಚಾಗಿತ್ತು. ತನ್ನ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿರುವುದನ್ನು ಕಂಡು ರಸ್ತೆಯ ಮತ್ತೊಂದು ತುದಿಯಲ್ಲಿ ತಾನೇ ಇನ್ನೊಂದು ಅಂಗಡಿ ತೆರೆದ. ತನ್ನ ಮಗನನ್ನು ಅಲ್ಲಿರಿಸಿದ. ವ್ಯಾಪಾರ ಬೆಳೆಯುತ್ತಲೇ ಹೋಯಿತು. ಬೆಲ್ಲಪ್ಪನ ಪಾನ್ ಬೀಡ ಹೆಸರು ವಾಸಿಯಾಯಿತು. ಇನ್ನೊಂದು ಅಂಗಡಿ ಇನ್ನೊಂದು ಅಂಗಡಿ ಇನ್ನೊಂದು ಬೀದಿಯಲ್ಲಿ ಪ್ರಾರಂಭಿಸಿದ. ಗೀಗೆಯೇ ಹತ್ತು ವರ್ಷಗಳಲ್ಲಿ ಬೆಲ್ಲಪ್ಪನ ಅಂಗಡಿಗಳು ಊರಿನ ತುಂಬೆಲ್ಲ ಆದವು. ಬೆಲ್ಲಪ್ಪನ ಬಳಿ ಹಣ ಸೇರುತ್ತ ಹೋಯಿತು. ಅದು ಹತ್ತು ಲಕ್ಷ ವಾದಾಗ ಅದನ್ನು ಬ್ಯಾಂಕಿನಲ್ಲಿ ಇಡಬೇಕೆಂದು ತೀರ್ಮಾನಿಸಿ ಹತ್ತಿರದ ಬ್ಯಾಂಕಿಗೆ ಹೋಗಿ ಮ್ಯಾನೇಜರ್ ನನ್ನು ಕಂಡು ಡಿಪಾಸಿಟ್ ಇಡುತ್ತೆನೆಂದ. ಹತ್ತು ಲಕ್ಷ ದ ಡಿಪಾಸಿಟ್ ಆದ್ದರಿಂದ ಮ್ಯಾನೇಜರ್ ಸ್ವತಹ ಅವನನ್ನು ಕೂರಿಸಿಕೊಂಡು ಮಾತನಾಡಿ ಡಿಪಾಸಿಟ್ ಅರ್ಜಿಯನ್ನು ತುಂಬಿಸಿ , ಅದನ್ನು ಓದಿ ಸಹಿ ಮಾಡಲು ಬೆಲ್ಲಪ್ಪನಿಗಿತ್ತರು. ಬೆಲ್ಲಪ್ಪ ಇಂಗ್ಲೀಷಿನಲ್ಲಿದ್ದ ಅರ್ಜಿಯನ್ನು ನೋಡಿ ನನಗೆ ಇಂಗ್ಲೀಷ್ ಬರುವುದಿಲ್ಲವೆಂದ. ಆಶ್ಚರ್ಯಗೊಂಡ ಮಾನೇಜರ್ ಕಣ್ಣರಳಿಸಿಕೊಂಡು "ಇಂಗ್ಲೀಷ್ ಬಾರದೆ ನೀವು ಇಷ್ಟೊಂದು ದೊಡ್ಡ ವ್ಯಾವಹಾರ ನಡೆಸುತ್ತಿದ್ದೀರಿ . ಇಂಗ್ಲೀಷ್ ಬಂದಿದ್ದರೆ ನೀವೆನಾಗುತ್ತಿದ್ದೀರೋ ?" ಎಂದರು. ಬೆಲ್ಲಪ್ಪ ಶಾಂತದನಿಯಲ್ಲಿ "ನನಗೆ ಇಂಗ್ಲೀಷ್ ಬಂದಿದ್ದರೆ ದೇವಸ್ಥಾನದ ಗಂಟೆ ಬಾರಿಸಿಕೊಂಡಿರುತ್ತಿದ್ದೆ . ದೇವರ ದಯೆಯಿಂದ ನನಗೆ ಇಂಗ್ಲೀಷ್ ಬರುತ್ತಿರಲಿಲ್ಲ ." ಎಂದುತ್ತರಿಸಿ ಡಿಪಾಸಿಟ್ ಸರ್ಟಿಪಿಕೇಟ್ ಪಡೆದು ಹೊರಟು ಹೋದ. ಮ್ಯಾನೇಜರ್ ದಿಗ್ಮೂಢರಾಗಿ ಕುಳಿತರು.

ಕೆಲಸ ಕಳೆದು ಕೊಂಡಾಗ ಅಳುತ್ತಾ ಕೂರದೆ , ಹೊಸ ದಾರಿ ಕಂಡು ಕೊಂಡು , ಅದರಲ್ಲೇ ಏಳಿಗೆಯಾದ ಬೆಲ್ಲಪ್ಪನ ಬಾಳಿದ ಕತೆಯಲ್ಲಿ ಒಳ್ಳೆಯ ಸಂದೇಶ ಇದೆಯಲ್ಲವೇ ? ಅನೇಕ ಬಾರಿ ಬದುಕಿನಲ್ಲಿ ಒಂದು ಬಾಗಿಲು ಬಂದಾದರೆ ಹಲವಾರು ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವಲ್ಲವೇ? ನಾವು ಎಚ್ಚರವಾಗಿರಬೇಕಷ್ಟೇ !.
ನಿಮ್ಮ ಅವಕಾಸ
http://sunnaturalflash.magneticsponsoringonline.com/letter.ಫ್ಪ್



ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com




ಗುರುವಾರ, ಡಿಸೆಂಬರ್ 23, 2010

ಕತ್ತಲ ಉಪಾಹಾರ ಗೃಹಗಳು

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ವಿಚಿತ್ರ ಉಪಾಹಾರ ಗೃಹದ ಬಗ್ಗೆ ಕಲ್ಪಿಸಿ ಕೊಳ್ಳುವುದೂ ಕಷ್ಟ. ಆದರೆ ಅಂತಹ ಉಪಾಹಾರ ಗೃಹ ಜೂರಿಚ್ ನಲ್ಲಿದೆ. ಒಂದುಸಾವಿರದ ಒಮ್ಭಾತ್ತುನೂರ ತೊಂಬತ್ತೊಮ್ಭಾತ್ತರಲ್ಲಿ ಪ್ರಾರಂಭವಾಗಿ ಇಂದಿಗೂ ಯಶಸ್ವಿಯಾಗಿ ನಡೆಯುತ್ತಿದೆ. ಅದು ಏಕೆ ಪ್ರಾರಂಭ ವಾಯಿತೆಂದು ತಿಳಿದುಕೊಳ್ಳೋಣ. ಉಪಹಾರ ಗೃಹದಲ್ಲಿ ಸಂಪೂರ್ಣ ಕತ್ತಲೆ. ಬೆಳಕಿನ ಲವಲೇಶವು ಅಲ್ಲಿರುವುದಿಲ್ಲ. ನೀವು ಒಮ್ಮೆ ಉಪಾಹಾರ ಗೃಹದ ಒಳಗೆ ಹೋದರೆ ಕತ್ತಲೆಯಲ್ಲಿ ತಡಕಾಡಬೇಕಿಲ್ಲ. ಏಕೆಂದರೆ ಅಲ್ಲಿನ ಪರಿಚಾರಕರು ತಮ್ಮ ಕಾಲುಗಳಿಗೆ ಗಂಟೆಗಳನ್ನು ಕಟ್ಟಿಕೊಂಡಿರುತ್ತಾರೆ. ಅವರು ನಡೆದಾಡುವಾಗ ಗಂಟೆಗಳು ಡನ್ ಡನ್ ಶಬ್ದ ಮಾಡುತ್ತಿರುತ್ತವೆ.

ಪರಿಚಾರಕ ಬಂದು ನಿಮ್ಮ ಕೈ ಹಿಡಿದು ನಿಧಾನವಾಗಿ ನಿಮ್ಮನ್ನು ಮೇಜಿನ ಬಳಿ ಕರೆದೊಯ್ಯುತ್ತಾನೆ . ನಿಮ್ಮನ್ನು ಕುರ್ಚಿಯ ಮೇಲೆ ಕೂರಿಸುತ್ತಾನೆ. ಕತ್ತಲೆಯಿರುವುದರಿಂದ ನಿಮಗೆ ಪಕ್ಕದ ಟೇಬಲ್ , ಅಲ್ಲಿ ಯಾರು ಕುಳಿತಿದ್ದಾರೆ ಎಂಬುದು ಕಾಣಿಸುವುದಿಲ್ಲ. ನಿಮ್ಮ ಮೇಜಿನ ಮೇಲಿರುವ ತಟ್ಟೆ ಚಮಚವೂ ಕಾಣಿಸುವುದಿಲ್ಲ. ನೀವು ಅದನ್ನು ಮುಟ್ಟಿ ತಿಳಿದುಕೊಳ್ಳಬಹುದು. ಪರಿಚಾರಕ ನಿಮ್ಮ ಆರ್ಡರ್ ತೆಗೆದುಕೊಳ್ಳುತ್ತಾನೆ. ದಯವಿಟ್ಟು ಕಾಯಿರಿ ಎಂದು ಹೇಳಿ ಹೋಗುತ್ತಾನೆ. ಮಂದ ಸಂಗೀತ ನಿಮ್ಮ ಕಿವಿಗಳಿಗೆ ಬೀಳುತ್ತದೆ. ಅಕ್ಕ ಪಕ್ಕದವರು ಮಾತನಾಡುವುದು ನಿಮಗೆ ಕೇಳಿಸುತ್ತದೆ. ಆದರೆ ಯಾವುದೂ ಕಾಣಿಸುವುದಿಲ್ಲ.

ನಿಮ್ಮ ಊಟದ ಟೇಬಲ್ ಮೇಲೆ ಪುಟ್ಟ ಗಂಟೆ ಇರುತ್ತದೆ. ನಿಮಗೇನಾದರೂ ಬೇಕಿದ್ದರೆ ಗಂಟೆ ಬಾರಿಸಿದರೆ ಪರಿಚಾರಕರು ಬಂದು ನಿಮಗೆ ಸೇವೆ ಸಲ್ಲಿಸುತ್ತಾರೆ. ಕತ್ತಲೆಯಲ್ಲೇ ಊಟ ಬಡಿಸುತ್ತಾರೆ. ಕತ್ತಲೆಯಲ್ಲೇ ನೀವು ಊಟ ಮಾಡುತ್ತೀರಿ. ಅವನು ಬಿಲ್ ಇಷ್ಟೆಂದು ಹೇಳುತ್ತಾನೆ. ನೀವು ಅಂದಾಜಿನ ಮೇಲೆ ಹಣ ಕೊಡುತ್ತೀರಿ. ಅವನು ಮಾತ್ರ ಸರಿಯಾದ ಚಿಲ್ಲರೆಯನ್ನು ವಾಪಸ್ಸು ಕೊಡುತ್ತಾನೆ. ನೀವು ಹೊರಡುವಾಗ ಗಂಟೆ ಬಾರಿಸಿದರೆ ಪರಿಚಾರಕ ಬಂದು ನಿಮ್ಮ ಕೈ ಹಿಡಿದು ನಿಮ್ಮನ್ನು ಉಪಾಹಾರದ ಹೊರಗಿನವರೆಗೂ ಕರೆತಂದು ಬಿಡುತ್ತಾರೆ. ನಿಮ್ಮ ಕೈ ಕುಳುಕುತ್ತಾನೆ. ಊಟ ಮಾಡಿದ್ದಕ್ಕಾಗಿ , ಅವರನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿ ಉಪಹಾರದ ಬಾಗಿಲು ತೆಗೆದು ನಿಮ್ಮನ್ನು ಕಳುಹಿಸಿಕೊಡುತ್ತಾನೆ. ಹೊರಗೆ ಬಂದಾಗ ಹೊರಗಿನ ಬೆಳಕು ನಿಮ್ಮ ಕಣ್ಣು ಚುಚ್ಚುತ್ತದೆ. ಆದರೆ ಪರಿಚಾರಕ ಕಣ್ಣು ಚುಚ್ಚುವುದಿಲ್ಲ. ಏಕೆಂದರೆ ಅಲ್ಲಿ ಕೆಲಸ ಮಾಡುವ ಎಲ್ಲರೂ ಸಂಪೂರ್ಣ ಹುಟ್ಟು ಕುರುಡರು !, ಉಪಹಾರ ಗೃಹದ ಹೆಸರು "ಡೈ ಬ್ಲೈಂಡೆ ಕೂ"(ಕುರುಡು ಹಸು ) . "ಕಳೆದ ಒಂಬತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಜಾರ್ಜ್ ಸ್ವೀಲ್ ಮೆನ್ ಎಂಬುವವರೂ ಕುರುಡರು. ಅವರು ಕಣ್ಣು ಉಳ್ಳ ಪುಣ್ಯವಂತರು ಕಣ್ಣಿಲ್ಲದವರ ಬಗ್ಗೆ ಬರಿಯ ಸಹಾನುಭೂತಿಯ ಮಾತನಾಡಿದರೆ ಸಾಲದು. ಅವರ ಬದುಕು ಹೇಗಿರುತ್ತೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂಬುದಕ್ಕಾಗಿ ಉಪಹಾರ ಗೃಹ ಸ್ಥಾಪಿಸಲಾಗಿದೆ ಎನ್ನುತ್ತಾರೆ.

ಇದೆ ಮಾದರಿಯ "ಡಾನ್ಸ್ ಲೇ ನೋಯರ್" (ಕತ್ತಲೆಯಲ್ಲಿ ) ಎಂಬ ಹೆಸರಿನ ಬಾರುಗಳು ಪ್ಯಾರಿಸ್ ಮತ್ತು ಲಂಡನ್ ನಲ್ಲಿ ನಡೆಯುತ್ತಿವೆ. ಒಮ್ಮೆ ಉಪಾಹಾರ ಗೃಹದಲ್ಲಿ ಉಂಡು ಅದರ ಅನುಭವ ಪಡೆದರೆ ಬಹುಶ; ದೃಷ್ಟಿಹೀನರ ಬಗ್ಗೆ ನಮ್ಮ ದೃಷ್ಟಿ ಬದಲಾಗಬಹುದೇನೋ ? ಜೂರಿಚ್ ,ಪ್ಯಾರಿಸ್ ಅಥವಾ ಲಂಡನ್ ಗೆ ಹೋದಾಗ ಇವುಗಳಿಗೆ ಭೇಟಿಕೊಟ್ಟು ಅವರನ್ನು ಪ್ರೋತ್ಸಾಹಿಸಬಹುದೇನೋ ? ಅದಾಗದಿದ್ದರೆ ನಮ್ಮ ಮನೆಯಲ್ಲೇ ಕಣ್ಣಿಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಒಮ್ಮೆಯಾದರೂ ಅರ್ಧ ದಿನ ಅಥವಾ ಅರ್ಧ ಗಂಟೆ ಅದರನುಭವ ಪಡೆಯಬಹುದೇನೋ?

ನಿಮ್ಮ ಅವಕಾಸ
http://sunnaturalflash.magneticsponsoringonline.com/letter.ಫ್ಪ್

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ

ಮಂಗಳವಾರ, ಡಿಸೆಂಬರ್ 21, 2010

ಇಲ್ಲದುದರ ಬಗ್ಗೆ ಕೊರಗದೆ ಇರುವುದನ್ನು ಬಳಸಿದಾಗ ............!

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ಸಿದ್ದಾಂತ.

ಅಚ್ಚರಿ
ಮೂಡಿಸುವ ಸಂಗೀತಗಾರ . ಪರ್ಲ್ -ಮನ್ . ಅವರ ವಾದ್ಯ ವಯೊಲಿನ್ , ಒಂದು ಸಾವಿರದ ಒಂಭತ್ತು ನೂರನಲವತ್ತೈದರಲ್ಲಿ ಇಸ್ರೇಲ್ ನಲ್ಲಿ ಜನನ. ಬಾಲ ಪ್ರತಿಭೆ, ವಯೊಲಿನ್ ನಡೆಸುವುದರಲ್ಲಿ ತರಭೇತಿ ಪಡೆದು ತಮ್ಮ ಹದಿಮೂರನೆಯ ವಯಸ್ಸಿಗೆ ಅಮೇರಿಕಾದಲ್ಲಿ ಎಡ್ -ಸಲೈವನ್ ಶೋನಲ್ಲಿ ಪ್ರಶಸ್ತಿ ಗಳಿಸಿದರು. ನಾಲ್ಕು ಎಮ್ಮಿ ಅವಾರ್ಡ್ ಗಳನ್ನೂ ಹದಿನೈದು ಗ್ರ್ಯಾಮ್ಮಿ ಅವಾರ್ಡ್ ಗಳನ್ನೂ ಗಳಿಸಿದ್ದಾರೆ. ಹಾವರ್ಡ್ .ಎಲ್ . ರೂಸ್ ವೆಲ್ಟ್ ಮುಂತಾದ ವಿಶ್ವ ವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಅಚ್ಚರಿ ಇರುವುದು ಸಾಧನೆಗಳಲ್ಲಿ ಅಲ್ಲ. ಅವರ ಸ್ಥೈರ್ಯದಲ್ಲಿ !. ಚಿಕ್ಕ ವಯಸ್ಸಿನಲ್ಲೇ ಪೋಲಿಯೋಕ್ಕೆ ತುತ್ತಾದ ಅವರು ವಿಕಲ -ಚೇತನರು . ಎರಡೂ ದುರ್ಬಲ ಕಾಲುಗಳಿಗೆ ಬ್ರೇಸ್ ಗಳನ್ನುಧರಿಸಿ , ಊರುಗೊಲುಗಳ ಸಹಾಯದಿಂದ ನಡೆಯುವವರು. ಇಷ್ಟಾಗಿಯೂ ಅವರು ಸದಾ ಹಸನ್ಮುಖಿ . ಲವಲವಿಕೆಯುಲ್ಲವರು.

ಒಮ್ಮೆ ಒಂದುಸಾವಿರದ ಒಂಬತ್ತು ನೂರ ತೊಂಬತ್ತೈದರಲ್ಲಿ ಲಿಂಕನ್ ಸೆಂಟರ್ನಲ್ಲಿ ಅವರ ಸಂಗೀತ ಕಚೇರಿ ಏರ್ಪಾಡಾಗಿತ್ತು. ಎಂದಿನಂತೆ ಸಭೆ ಕಿಕ್ಕಿರಿದು ತುಂಬಿತ್ತು. ಪರ್ಲ್ ಮನ್ ನುಡಿಸಲು ಆರಂಭಿಸಿದರು. ಮೊದಲ ಒಂದೆರಡು ಕ್ರುತಿಗಳಲ್ಲೇ ಪ್ರೇಕ್ಷಕರ ಮನ ಗೆದ್ದರು. ಎಲ್ಲರೂ ಆಸನದ ತುದಿಯಲ್ಲಿ ಕುಳಿತು ಏಕಚಿತ್ತರಾಗಿ ಕೇಳುತ್ತಿರುವಾಗ ಟಿಪ್ ಎಂಬ ಶಬ್ದ ಕೇಳಿಬಂತು . ವಯೋಲಿನ್ನಿನ ಒಂದು ತಂತಿ ತುಂಡಾಗಿತ್ತು. ಬಹುಶ; ಪರ್ಲ್ ಮನ್ ಅವರು ವಯೊಲಿನ್ ಅನ್ನು ಕಳುಹಿಸಿ ತಂತಿ ಹಾಕಿಸಿ ಕೊಳ್ಳುತ್ತಾರೆಂದು ಅಥವಾ ಬೇರೆಯ ವಯೊಲಿನ್ ತರಿಸುತ್ತಾರೆಂದು ಜನ ನಿರೀಕ್ಷಿಸಿದ್ದರು. ಸಾವಿರಾರು ಮಂದಿಯ ಗಮನ ಪರ್ಲ್ ಮನ್ ರವರ ಮೇಲೆ ನೆಟ್ಟಿತ್ತು. ಪರ್ಲ್ ಮನ್ ಅವರು ಒಂದರಕ್ಷಣ ವಿಚಲಿತರಾದವರಂತೆ ಕಂಡರೂ , ತಕ್ಷಣ ಸಾವರಿಸಿಕೊಂಡು ಸಭಿಕರತ್ತ ನೋಡಿ ಮುಗುಳ್ನಕ್ಕರು .ಮತ್ತೆ ತಮ್ಮ ಪದ್ಧತಿಯಂತೆ ಕಣ್ಣು ಮುಚ್ಚಿಕೊಂಡು ಮೂರೇ ತಂತಿಗಳ ಮೂಲಕ ವಯೊಲಿನ್ ನುಡಿಸಲು ಪ್ರಾರಂಭಿಸಿದರು.

ಕೆಲವೇ ಕ್ಷಣಗಳಲ್ಲಿ ಕಚೇರಿಯಲ್ಲಿ ಏನು ಆಗಿಲ್ಲವೇನೋ ಎನ್ನುವಂತೆ ಕಾರ್ಯಕ್ರಮ ಮುಂದುವರಿಯಿತು. ಮೂರು ತಂತಿಗಳನ್ನು ಬಳಸಿ ಸಂಗೀತ ಹೊರಹೊಮ್ಮಿಸುವುದು ಸಾಮಾನ್ಯ ಸಂಗತಿ ಅಲ್ಲ. ಆದರೆ ಪರ್ಲ್ ಮ್ಯಾನ್ ಸಾಮಾನ್ಯರು ಅಲ್ಲ. ಮುಂದೆ ಒಂದೂವರೆ ಗಂಟೆಗಳ ಕಾಲ ಪರ್ಲ್ ಮ್ಯಾನ್ ರವರ ವಾದ್ಯ ಸಂಗೀತ ನಿರಾಳವಾಗಿ ನಡೆಯಿತು. ಒಂದು ತಂತಿ ತುಂಡಾಗಿದೆ ಎಂದು ಯಾರಿಗೂ ಅನ್ನಿಸಲಿಲ್ಲ. ಕಚೇರಿ ಮುಗಿದಾಗಲೇ ಅವರಿಗೆ ಸಮಯದ ಅರಿವಾದದ್ದು. ಒಬ್ಬೊಬ್ಬರಾಗಿ ಎಲ್ಲರೂ ಎದ್ದು ನಿಂತು ಜೋರಾಗಿ ಕರತಾಡನ ಮಾಡಿದರು. ಚಪ್ಪಾಳೆಯ ಧ್ವನಿ ನಿಲ್ಲುವ ಮೊದಲೇ ಪರ್ಲ್ ಮ್ಯಾನ್ ರು ವಯೊಲಿನ್ ನನ್ನು ನಿಧಾನವಾಗಿ ಪಕ್ಕಕ್ಕಿಟ್ಟರು. ಕಷ್ಟಪಟ್ಟು ಎದ್ದು ನಿಂತರು. ಸಭಿಕರತ್ತ ಮಂದಹಾಸ ಬೀರಿದರು. ಚಪ್ಪಾಳೆ ನಿಲ್ಲಿಸುವಂತೆ ಸೂಚನೆ ಕೊಟ್ಟರು.

ನಿಧಾನವಾಗಿ ಮಧುರ. ವಿನಮ್ರವಾದ ಧ್ವನಿಯಲ್ಲಿ "ಇಂದು ನೀವೆಲ್ಲ ಗಮನಿಸಿದ್ದೀರಿ , ಸಂಗೀತ ಇರುವುದು ವಯೋಲಿನ್ನಿನ ತಂತಿಯಲ್ಲಿ ಅಲ್ಲ. ಸಂಗೀತವಿರುವುದು ಕಲಾವಿದನ ಹೃದಯದಲ್ಲಿ !. ಇಲ್ಲದುದರ ಬಗ್ಗೆ ಕೊರಗದೆ ಇರುವುದನ್ನು ಬಳಸಿ ಅದ್ಬುತ ಸಂಗೀತ ಹೊರಹೊಮ್ಮಿಸಬಹುದೆಮ್ಬುದನ್ನು ನೀವೂ , ನಾವೂ ಇಂದು ಕಂಡುಕೊಂಡಿದ್ದೇವೆ . ನಿಮಗೆಲ್ಲ ಧನ್ಯವಾದಗಳು . ಮತ್ತು ಶುಭರಾತ್ರಿ !"ಎಂದು ಹೇಳಿ ವೇದಿಕೆಯಿಂದ ನಡೆದು ಹೊರಟಾಗ ಮತ್ತೆ ಸಭಾಂಗಣ ಚಪ್ಪಾಳೆ ಯಿಂದ ತುಂಬಿಹೋಯಿತು .

ಪರ್ಲ್ ಮ್ಯಾನ್ ರ ಮಾತುಗಳಲ್ಲಿ ಅಮೋಘ ಸಂದೇಶ ಅಡಗಿದೆ. "ಇಲ್ಲದುದರ ಬಗ್ಗೆ ಕೊರಗದೆ ಇರುವುದನ್ನು ಬಳಸಿದರೆ ಅದ್ಬುತ ಸಂಗೀತ ಹೊರಹೊಮ್ಮಿಸಬಹುದು " ಎಂಬ ಮಾತು ಕೇವಲ ಸಂಗೀತ ಕ್ಷೇತ್ರಕ್ಕೆ ಅನ್ವಯವಾಗುವುದಿಲ್ಲ . ಪರ್ಲ್ ಮ್ಯಾನ್ ರಿಗೆ ಮಾತ್ರ ಅನ್ವಯವಾಗುವುದಿಲ್ಲ. ಬದುಕಿನ ಎಲ್ಲ ಕ್ಷೇತ್ರಗಳಿಗೂ , ನಮಗೂ, ನಿಮಗೂ, ಎಲ್ಲರಿಗೂ ಅನ್ವಯವಾಗುತ್ತದೆ ಅಲ್ಲವೇ ?

ನಿಮ್ಮ ಅವಕಾಸ
http://sunnaturalflash.magneticsponsoringonline.com/letter.ಫ್ಪ್

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ
http://www.sunnaturalflash.com/

ಒಳ್ಳೆಯವರಿಗೆ , ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ನಮಗೂ ಒಳ್ಳೆಯಾದಾಗುತ್ತದಲ್ಲವೇ ?

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಪುಟ್ಟ ಎನ್ನುವ ವ್ಯಕ್ತಿ ಎಂ. ಎ .ಉತ್ತೀರ್ಣನಾಗಿದ್ದ . ಮದುವೆಯೂ ಆಗಿತ್ತು. ಉದ್ಹ್ಯೋಗವನ್ನರಸಿ ಹೆಂಡತಿಯೊಡನೆ ನಗರಕ್ಕೆ ಬಂದಿದ್ದ. ಸಣ್ಣ ಮನೆಯಲ್ಲಿ ಬಾಡಿಗೆಗಿದ್ದ . ಹೆಂಡತಿಗೆನೋ ಸಣ್ಣ ಕೆಲಸ ಸಿಕ್ಕಿತು. ಅವನಿಗೆ ಸಿಕ್ಕಿರಲಿಲ್ಲ. ಜೀವನ ಹೇಗೋ ನಡೆಯುತ್ತಿತ್ತು. ಪ್ರತಿದಿನ ತನ್ನ ಹಳೆಯ ಸೈಕಲ್ಲನ್ನೇರಿ ಊರೆಲ್ಲ ಕೆಲಸ ಹುಡುಕುತ್ತಿದ್ದ. ಒಮ್ಮೆ ಸಂಜೆ ನಿರಾಶನಾಗಿ ಮನೆಗೆ ಬರುತ್ತಿದ್ದ. ದೂರದಲ್ಲಿ ಒಂದು ದೊಡ್ಡ ಕಾರು ರಸ್ತೆಯಲ್ಲಿ ನಿಂತಿತ್ತು. ಪಕ್ಕದಲ್ಲಿ ಒಬ್ಬ ಹೆಂಗಸು ಚಿಂತಾಕ್ರಾಂತ ಳಾಗಿನಿಂತಿದ್ದಳು . ಈತ ಆಕೆಯನ್ನು ಏನಾಯಿತೆಂದು ಕೇಳಿದ.

ಆಕೆ ಈತನ ಹಳೆಯ ಸೈಕಲ್ , ಮಾಸಿದ ಬಟ್ಟೆ , ಕುರುಚಲು ಗಡ್ಡ ನೋಡಿ ಮಾತನಾಡಲು ಹೆದರಿದರು. ಆದರೆ ಬೇರೆ ದಾರಿಯಿಲ್ಲದಿದ್ದರಿಂದ "ನನ್ನ ಕಾರು ಪೆಟ್ರೋಲ್ ಮುಗಿದು ನಿಂತಿದೆ. ಗಂಟೆಗಟ್ಟಲೆ ಕಾದರೂ ಹೋಗಿ ಪೆಟ್ರೋಲ್ ತರಲು ಬೇರೆ ಯಾವುದೇ ಲಾರಿ, ಬಸ್ಸು ಸಿಕ್ಕಲಿಲ್ಲ "ಎಂದರು. ಈತ ತಾನು ತಂದುಕೊಡುವೆನೆಂದು ಹೇಳಿದ. ಆಕೆ ದುಡ್ಡು ಕೊಟ್ಟರು. ಈತ ಹೋಗಿ ದೂರದ ಪೆಟ್ರೋಲ್ ಬಂಕಿ ನಿಂದ ಪೆಟ್ರೋಲ್ ತಂದು ಕಾರಿಗೆ ತುಂಬಿಸಿದ. ಆಕೆ ಕಾರು ಹತ್ತಿ ಹೊರಡುವ ಮುನ್ನ ಈತನಿಗೆ ಧನ್ಯವಾದ ಹೇಳಿ ಒಂದಷ್ಟು ಹಣ ಕೊಡಲು ಬಂದರು. ಈತ ವಿನಯದಿಂದಲೇ ಹಣ ಬೇಡವೆಂದ . "ನೀವು ಒಳ್ಳೆಯವರು , ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ. ನಾನು ಹೆಚ್ಚೇನೂ ಮಾಡಿಲ್ಲ. ನಿಮಗೆ ಒಳ್ಳೆಯದಾಗಲಿ " ಎಂದಷ್ಟೇ ಹೇಳಿದ. ಆಕೆ ಮತ್ತೊಮ್ಮೆ ಧನ್ಯವಾದ ಹೇಳಿಹೋದರು. ಈತ ಉಸ್ಸಪ್ಪಾ ಎಂದುಕೊಂಡು ಮನೆಗೆ ತೆರಳಿದ.

ಕಾರಿನಾಕೆ ಕೊಂಚ ದೂರ ಹೋದನಂತರ ಕಂಡ ಪೆಟ್ರೋಲ್ ಬ್ಯಾಂಕಿನಲ್ಲಿ ಕಾರಿನ ಟ್ಯಾಂಕ್ ತುಂಬಿಸಿ ಕೊಳ್ಳೋಣ ವೆಂದು ನಿಲ್ಲಿಸಿದಾಗ , ಆಕೆಗೆ ಆಶ್ಚರ್ಯ ವಾಯಿತು. ಏಕೆಂದರೆ ಪೆಟ್ರೋಲ್ ಹಾಕಲು ಬಂದದ್ದು ಒಬ್ಬ ತುಂಬು ಗರ್ಭಿಣಿ ಹೆಂಗಸು . ಆಕೆ ಕಾರಿನಾಕೆಯನ್ನು ಕಂಡು ಮುಗುಳ್ನಕ್ಕಳು . ಕಾರಿನಾಕೆ ಹೇಳಿದಷ್ಟು ಪೆಟ್ರೋಲ್ ತುಂಬಿಸಿದಳು . ಚೆನ್ನಾಗಿ ಮಾತನಾಡಿಸಿದಳು . ಬೇಕಿದ್ದರೆ ಪಕ್ಕದಲ್ಲೇ ಕ್ಯಾಂಟೀನ್ ಇದೆ ಎಂದಳು. ಕಾರಿನ ಚಕ್ರಗಳಿಗೆ ಗಾಳಿ ಬೇಕಾ ವಿಚಾರಿಸಿದಳು. ಇಷ್ಟು ಹೊತ್ತಿನಲ್ಲಿ ಒಬ್ಬರೇ ಡ್ರೈವ್ ಮಾಡುತ್ತಿದ್ದಿರಲ್ಲ . ಬೇಗ ಮನೆ ಸೇರಿಕೊಳ್ಳಿ ಎಂದೆಲ್ಲ ಹೇಳಿದಳು. ಕಾರಿನಾಕೆಗೆ ಆ ತುಂಬು ಗರ್ಭಿಣಿ ಕೊಟ್ಟ ಸೇವೆಗೆ ಮನ ತುಂಬಿ ಬಂದಂತಾಯಿತು . ಈ ಸ್ಥಿತಿಯಲ್ಲೂ ಏಕೆ ಕೆಲಸ ಮಾಡು ತ್ತಿದ್ದಿರೆಂದೂ , ಹೆರಿಗೆ ಯಾವಾಗೆಂದೂ ಕೇಳಿದರು. ಈಕೆ ತಿಂಗಳ ಕೊನೆಗೆಂದು ಡಾಕ್ಟರ್ ಹೇಳಿದ್ದಾರೆ ಎಂದಳು. ಕಾರಿನಾಕೆ ಪೆಟ್ರೋಲಿನ ಹಣ ಕೊಟ್ಟರು.

ಈಕೆ ಬಿಲ್ಲು ಮತ್ತು ಚಿಲ್ಲರೆ ತರುವಷ್ಟರಲ್ಲಿ ಕಾರು ಹೊರಟೆ ಹೋಗಿತ್ತು. ಚಿಲ್ಲರೆ ಬಿಟ್ಟು ಹೋಗಿದ್ದಾರಲ್ಲ ಎಂದುಕೊಳ್ಳುವಷ್ಟರಲ್ಲಿ ಅಲ್ಲಿದ್ದ ಟೇಬಲ್ಲಿನ ಮೇಲೊಂದು ಕವರ್ ಇತ್ತು. ಒಳಗಡೆ ಒಂದು ಸಾವಿರ ರೂಪಾಯಿ ಮತ್ತು ಒಂದು ಕಾಗದವಿತ್ತು. ಕಾಗದದಲ್ಲಿ "ನೀವು ಒಳ್ಳೆಯವರು , ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ . ನಾನು ಹೆಚ್ಚೇನೂ ಕೊಟ್ಟಿಲ್ಲ . ನಿಮಗೆ ಒಳ್ಳೆಯದಾಗಲಿ " ಎಂದಷ್ಟೇ ಬರೆದಿತ್ತು. ಗರ್ಭಿಣಿ ಹೆಂಗಸ್ಸಿಗೆ ಏನೂ ತೋಚಲಿಲ್ಲ . ಕೆಲಸ ಮುಗಿಸಿ ಮನೆಗೆ ಬಂದಾಗ ಗಂಡ ಮಲಗಿಬಿಟ್ಟಿದ್ದ. ಈಕೆ ಅವನನ್ನು ಎಬ್ಬಿಸಿ "ಪುಟ್ಟಾ ! ನನ್ನ ಹೆರಿಗೆ ಖರ್ಚಿಗೆ ನೀನು ಯೋಚಿಸಬೇಡ. ಹಣ ಹೊಂದಿಕೆಯಾಗಿದೆ " ಎಂದಾಗ ಆಕೆಯ ನಿರುಧ್ಯೋಗಿ ಗಂಡ ಪುಟ್ಟ ಉಸ್ಸಪ್ಪಾ ಎಂದ .

ಈ ಕಥೆ ಯಾ ನೀತಿ ಎಂದರೆ ಒಳ್ಳೆಯವರಿಗೆ , ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ನಮಗೂ ಒಳ್ಳೆಯದಾಗುತ್ತದಲ್ಲವೇ ?
http://sunnaturalflash.magneticsponsoringonline.com/

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ.
http://www.sunnaturalflash.com/

ಶನಿವಾರ, ಡಿಸೆಂಬರ್ 18, 2010

ಬೇರೆಯವರು ತನ್ನತ್ತ ಎಸೆಯುವ ಕಲ್ಲುಗಳಿಂದಲೇ ತನ್ನ ಕಟ್ಟಡದ ಅಡಿಪಾಯವನ್ನು ಕಟ್ಟುವವನು ಯಶಸ್ವಿ ಪುರುಶನಾಗುತ್ತಾನೆ.

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಬಹಳ ಹಿಂದೆ ಒಬ್ಬ ಶ್ರೀಮಂತ ರೈತನ ತೋಟದ ಮನೆಯಲ್ಲಿದ್ದ ಅನೇಕ ಪ್ರಾಣಿಗಳಲ್ಲಿ ಒಂದು ಹೇಸರಗತ್ತೆ ಮತ್ತು ಅದರ ಮರಿಯೂ ಇದ್ದವು. ಹೆಸರಗತ್ತೆಗೆ ವಯಸ್ಸಾಗಿತ್ತು. ದೂರದ್ರುಷ್ಟಿಯೂ ಇರಲಿಲ್ಲ . ಸಮೀಪ ದೃಷ್ಟಿಯೂ ಇರಲಿಲ್ಲ. ತೋಟದಲ್ಲೊಂದು ಹಳೆಯ ಬತ್ತಿಹೋದ ಬಾವಿಯಿತ್ತು . ಒಮ್ಮೆ ಹೇಸರಗತ್ತೆ ಬಾವಿಯಲ್ಲಿ ಜಾರಿಬಿತ್ತು. ಬಾವಿಯಲ್ಲಿ ನೀರಿರಲಿಲ್ಲ. ಆದರೆ ಹೇಸರಗತ್ತೆ ತಾನೇ ಮೇಲೇಳಲು ಸಾಧ್ಯವಾಗದಷ್ಟು ಆಳವಿತ್ತು. ಬಾವಿಯೋಳಗಿನಿಂದ ಹೇಸರಗತ್ತೆ ಪ್ರಾಣಭಯದಿಂದ ಕಿರುಚಲು ಪ್ರಾರಂಭಿಸಿತು.

ತೋಟದಲ್ಲಿನ ಉಳಿದ ಪ್ರಾಣಿಗಳೆಲ್ಲ ಬಾವಿಯ ದಡದಲ್ಲಿ ನಿಂತು ಬಗ್ಗಿ ನೋಡುತ್ತಿದ್ದವು. ಕೆಲವಕ್ಕೆ ಕನಿಕರ. ಮತ್ತೆ ಕೆಲವಕ್ಕೆ ಉದಾಸೀನ . ಮರಿ ಹೇಸರಗತ್ತೆ ಮಾತ್ರ ತನ್ನ ತಾಯಿಯ ಪಾಡನ್ನು ಕಂಡು ಕಣ್ಣೀರು ಸುರಿಸುತ್ತಾ ನಿಂತಿತ್ತು. ಪಾಪ, ಅದು ಮತ್ತೇನು ಮಾಡಲು ಸಾಧ್ಯವಿತ್ತು ?. ಗಲಾಟೆ ಕೇಳಿ ರೈತ ಬಂದ. ಬತ್ತಿಹೋದ ಬಾವಿಯನ್ನೂ ಅದರಲ್ಲಿ ಬಿದ್ದಿದ್ದ ಮುದಿ ಹೆಸರಗತ್ತೆಯನ್ನು ನೋಡಿದ.

ಆತನ ಲೆಕ್ಕಾಚಾರದ ಬುದ್ಧಿ ಚುರುಕಾಯಿತು. ಹೆಸರಗತ್ತೆಯನ್ನು ಮೇಲಕ್ಕೆತ್ತಲು ಹಣ, ಸಮಯ ಮತ್ತು ಶಕ್ತಿಯ ಉಪಯೋಗ ಮಾಡುವುದು ನಿರರ್ಥಕವೆನ್ದುಕೊಂಡ , ತನ್ನ ಕೆಲಸಗಾರರನ್ನು ಕರೆದು ಹೇಸರಗತ್ತೆ ಒಳಗಿರುವಂತೆಯೇ ಮಣ್ಣು ಸುರಿದು ಬಾವಿಯನ್ನು ಮುಚ್ಚಿ ಬಿಡಲು ಹೇಳಿದ . ಮುದಿ ಕಟ್ಟೆಯನ್ನು ಸಮಾಧಿ ಮಾಡಿದನ್ತೆಯೂ ಆಗುತ್ತದೆ. ಬತ್ತಿಹೋದ ಬಾವಿಯೂ ತುಂಬಿದಂತಾಗುತ್ತದೆ ಎಂಬುದು ಆತನ ಲೆಕ್ಕಾಚಾರ.

ಕೆಲಸಗಾರರು ಮಣ್ಣು ತುಂಬಲು ಆರಂಭಿಸಿದರು. ಒಂದೆರಡು ಮಕ್ಕರಿ ಮಣ್ಣು ಬಿದ್ದಾಗ ಹೆಸರಗತ್ತೆಗೆ ಏನಾಗುತ್ತಿದೆ ಎಂಬ ಅರಿವಾಗಲಿಲ್ಲ. ಆದರೆ ಒಂದೇ ಸಮನೆ ಮಣ್ಣು ತನ್ನ ಮೇಲೆ ಬೀಳುತ್ತಿರುವುದು ಕಂಡಾಗ ಅದಕ್ಕೆ ಗಾಬರಿಯಾಯಿತು . ದಡದ ಮೇಲಿದ್ದ ಪ್ರಾಣಿಗಳಲ್ಲಿ ಕೆಲವು ಹೇಸರಗತ್ತೆಯ ಕಷ್ಟವನ್ನು ಕಂಡು ಇದರ ಉಸಾಬರಿ ನಮಗೇಕೆ ಎಂದುಕೊಂಡು ಓಡಿಹೋದವು. ಮತ್ತೆ ಕೆಲವು ಪುಕ್ಕಟೆ ಮನರಂಜನೆ ಪಡೆಯುತ್ತಾ ನಿಂತವು.

ಮರಿ ಹೇಸರಗತ್ತೆ ಮಾತ್ರ "ಅಮ್ಮಾ ! ಮಣ್ಣನ್ನು ಕೆಡವಿಕೋ , ಹೆದರಬೇಡ , ಮಣ್ಣಿನ ಮೇಲೆ ಹತ್ತಿ ನಿಂತುಕೋ "ಎನ್ನುತ್ತಿತ್ತು. ಮೇಲಿಂದ ಒಂದೇ ಸಮನೆ ಬೀಳುತ್ತಿದ್ದ ಮಣ್ಣಿನಿಂದಾಗಿ ಹೆಸರಗತ್ತೆಗೆ ಅಲ್ಪಸ್ವಲ್ಪ ಪೆಟ್ಟಾಯಿತು. ಆದರೆ ಹೇಸರಗತ್ತೆ ಮಣ್ಣು ಮೈ ಮೇಲೆ ಬಿದ್ದ ತಕ್ಷಣ ಮೈ ಒದರುತ್ತಿತ್ತು . ಮಣ್ಣೆಲ್ಲ ಕೆಳಗೆ ಬೀಳುತ್ತಿತ್ತು. ಹೇಸರಗತ್ತೆ ಅದನ್ನು ಮೆಟ್ಟಿ ನಿಲ್ಲುತ್ತಿತ್ತು . ಮೇಲಿನಿಂದ ಮರಿ ಹೇಸರಗತ್ತೆಯ ಮಂತ್ರ ಪಟ ಣ . ಕೆಳಗೆ ಹೇಸರಗತ್ತೆಯ ಪ್ರಯತ್ನ . ಬಾವಿಯಲ್ಲಿ ಮಣ್ಣಿನ ಮತ್ತ ಹೆಚ್ಚುತ್ತಲೇ ಹೋಯಿತು. ಕೊನೆಗೆ ಬಾವಿ ಮುಕ್ಕಾಲು ಭಾಗ ಮುಚ್ಚಿಕೊಳ್ಳುವ ಹೊತ್ತಿಗೆ ಹೇಸರಗತ್ತೆ ಸರಾಗವಾಗಿ ಹೊರಗಡೆ ನಡೆದು ಬಂತು. ತನ್ನ ಮರಿಯನ್ನು ಕೂಡಿಕೊಂಡಿತು. ಇದಾದ ನಂತರ ತಾಯಿ ಮತ್ತು ಮರಿ ಅನೇಕ ವರ್ಷ ಸುಖವಾಗಿ ಬದುಕಿದವು.

ಇದು ಬದುಕು ! ಬದುಕಿನಲ್ಲಿ ವಿಧಿ ಕಷ್ಟಗಳ ಮಳೆ ಸುರಿಸಿದಾಗ ಸಕಾರಾತ್ಮಕ ದೃಷ್ಟಿಯಿಂದ ಅದನ್ನು ನೋಡಬೇಕು. ಗಾಬರಿಗೊಳ್ಳಬಾರದು, ವಿಧಿಯನ್ನು ದೂಷಿಸಬಾರದು. ಹತ್ತಿರದವರ ಹಿತೈಷಿಗಳ ಸಲಹೆ ಸ್ವೀಕರಿಸಿ , ಸ್ವಬುದ್ಧಿಯನ್ನೂಉಪಯೋಗಿಸಿ , ಪ್ರಯತ್ನ ಪಡುವುದಾದರೆ ಕಷ್ಟಗಳ ಮಳೆ ಮುಂಗಾರು ಮಳೆಯಾಗಬಹುದು !
ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.ಫ್ಪ್

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಶುಕ್ರವಾರ, ಡಿಸೆಂಬರ್ 17, 2010

ನಾವೂ ಪವಾಡಗಳನ್ನು ಮಾಡಬಹುದು _ರಘುನಾಥ ಮಷೆಲ್ಕರ್

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದು ಸಾವಿರದ ಒಂಭತ್ತು ನೂರ ಅರವತ್ತರಲ್ಲಿ ಒಬ್ಬ ಬಾಲಕ ಮುಂಬಯಿಯಲ್ಲಿ ಸರಕಾರೀ ಶಾಲೆಯಲ್ಲಿ ಓದುತ್ತಿದ್ದ . ತಂದೆ ಇಲ್ಲ ,ತಾಯಿ ಅನಕ್ಷರಸ್ಥೆ , ದಿನಗೂಲಿ ಕೆಲಸ, ಕಡು ಬಡತನ, ಎರಡು ಹೊತ್ತಿನ ಊಟವೂ ಇರುತ್ತಿರಲಿಲ್ಲ , ಆದರೆ ತಾಯಿಗೆ ಮಗನನ್ನು ಏನಾದರೂ ಮಾಡಿ ಓದಿಸಬೇಕೆಂಬ ತವಕ. ಆ ಬಾಲಕ ತನ್ನ ಹನ್ನೆರಡನೆಯ ವಯಸ್ಸಿನವರೆಗೂ ಬರಿಗಾಲಲ್ಲಿ ಓಡಾಡುತ್ತಿದ್ದ . ಚಪ್ಪಲಿ ಕೊಳ್ಳುವ ಹಣದಲ್ಲಿ ಒಂದು ಹೊತ್ತಿನ ಊಟವೋ , ಒಂದು ಪೆನ್ಸಿಲ್ಲೋ ಕೊಳ್ಳಬಹುದೆಮ್ಬಷ್ಟು ಬಡತನ.

ಬಾಲಕ ಅಸಾಧಾರಣ ಬುದ್ಧಿವಂತ. ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿದ. ಹನ್ನೊಂದನೆಯ ಶ್ರೇಣಿ ಪಡೆದ. ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲಗಳು ಇಲ್ಲದಿದ್ದರಿಂದ ಓದು ನಿಲ್ಲಿಸಬೇಕು ಎಂದಿದ್ದ . ಆದರೆ ಅದೇ ಬಾಲಕ ಮುಂದೊಂದು ದಿನ ಭಾರತದ ರಾಷ್ಟ್ರೀಯ ವಿಜ್ಞಾನ ಆಕಾಡೆಮಿಯ ಅಧ್ಯಕ್ಷನಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಹಿರಿಯ ಸಾಧನೆಗಳನ್ನು ಮಾಡಿದ್ದು ಪವಾಡವಲ್ಲವೇ ?

ರಘುನಾಥ ಮಷೆಲ್ಕರ್ ಅವರೇ ಆ ಬಾಲಕ ! ಅವರ ಪ್ರಕಾರ "ಈ ಪವಾಡ ಭಾರತದ ಒಬ್ಬ ಬಾಲಕನ ಬದುಕಿನಲ್ಲಿ ಸಂಭವಿಸಬಹುದಾದರೆ , ಎಲ್ಲ ಮಹತ್ವಾಕಾಂಕ್ಷಿ ಬಾಲಕರ ಬದುಕಿನಲ್ಲೂ ಸಂಭವಿಸಬಹುದು !" ಈ ಪವಾಡಕ್ಕೆ ಎರಡು ಕಾರಣಗಳು. ಮೊದಲನೆಯದ್ದು ಅವರ ಶಾಲೆಯ ವಿಜ್ಞಾನ ಮಾಸ್ತರರಾದ ಭಾವೆಯವರು ಒಮ್ಮೆ ಭೂತಗನ್ನಡಿಯಾ ಬಗ್ಗೆ ವಿವರಿಸುತ್ತ ಎಲ್ಲರನ್ನು ಬಿಸಿಲಿಗೆ ಕರೆದುಕೊಂಡು ಬಂದರು. ನೆಲದ ಮೇಲೊಂದು ಕಾಗದವನ್ನು ಇಟ್ಟು ಭೂತಗನ್ನಡಿ ಯಾ ಬೆಳಕನ್ನು ಕಾಗದದ ಮೇಲೆ ಕೇಂದ್ರಿಕರಿಸಿದರು. ಎರಡೇ ನಿಮಿಷಗಳಲ್ಲಿ ಕಾಗದ ಉರಿಯಲು ಪ್ರಾರಂಭಿಸಿತು . " ರಘುನಾಥ ! ನಿನ್ನೆಲ್ಲ ಸಂಕಲ್ಪವನ್ನೂ , ಶಕ್ತಿಯನ್ನೂ ಒಂದೆಡೆ ಕೇಂದ್ರಿಕರಿಸಿದರೆ ನಿನ್ನ ಬದುಕು ಉಜ್ವಲವಾಗಿ ಉರಿಯಬಹುದು "ಎಂದರಂತೆ .

ರಘುನಾಥರು ಅಂದೇ ವಿಜ್ಞಾನಿ ಯಾಗಬೇಕೆಂದು ತೀರ್ಮಾನಿಸಿದರಂತೆ . ಎರಡನೆಯದ್ದು ಹಣದ ಅಭಾವದಿಂದ ಅವರು ಓದು ನಿಲ್ಲಿಸಲು ತೀರ್ಮಾನಿಸಿದಾಗ ಸರ್ ದೊರಾಬ್ ಟಾಟಾ ಟ್ರಸ್ಟ್ ನವರು ಪ್ರತಿ ತಿಂಗಳು ಅರವತ್ತು ರೂಪಾಯಿಗಳ ವಿದ್ಯಾರ್ಥಿವೇತನ ನೀಡಲು ಆರಂಭಿಸಿದರಂತೆ . ಈ ಸಹಾಯದಿಂದಾಗಿ ಮಷೆಲ್ಕರ್ ರು ವಿಜ್ಞಾನದ ಸ್ನಾತಕೋತ್ತರ ಪದವಿ ಪಡೆದು ಮುಂದೆ ವಿಜ್ಞಾನಿ ಆದರಂತೆ .

ಈ ಅರವತ್ತು ರೂಪಾಯಿಗಳ ಸಹಾಯಧನ ಟಾಟಾ ರವರ ಸಂಪತ್ತನ್ನು ಕಡಿಮೆ ಮಾಡಲಿಲ್ಲ. ಆದರೆ ಭಾರತಕ್ಕೆ ಒಬ್ಬ ವಿಜ್ಞಾನಿ ಹೆಚ್ಚಳವಾದ ! ಮಸ್ಹೆಲ್ಕರು ಒಮ್ಮೆ ಅಮೇರಿಕಾದ ಅನಿವಾಸಿ ಭಾರತೀಯರಿಗೆ ಕೊಟ್ಟ ಒಂದು ಚಿಂತನಾರ್ಹ ಸಲಹೆಯನ್ನು ಬೆಂಗಳೂರಿಗೂ ಅನ್ವಯಿಸಿಕೊಂಡು ನೋಡಬಹುದು. ಬೆಂಗಳೂರಿನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವೇತನ ಪಡೆಯುವವರು ಹತ್ತು ಲಕ್ಷ ಜನ ಇದ್ದಾರಂತೆ . ಅವರು ತಲಾ ತಿಂಗಳಿಗೆ ಕೇವಲ ಒಂದು ನೂರು ರೂಪಾಯಿ ದಾನವಾಗಿ ಕೊಟ್ಟರೆ ಪ್ರತಿ ತಿಂಗಳೂ ಹತ್ತು ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಅಂದರೆ ಒಂದು ವರ್ಷ ಕ್ಕೆ ಒಂದು ನೂರ ಇಪ್ಪತ್ತು ಕೋಟಿ
ರೂಪಾಯಿ ಸಂಗ್ರಹವಾಗುತ್ತದೆ. ಅದರಲ್ಲಿ ಒಬ್ಬೊಬ್ಬ ವಿದ್ಯಾರ್ಥಿಗೆ ವರ್ಷಕ್ಕೆ ಹತ್ತು ಸಾವಿರದಂತೆ ಸಹಾಯಧನ ಸಿಕ್ಕರೆ ಬಹುಶ; ಇಪ್ಪತ್ತು ಸಾವಿರ ಜನ ರಾಷ್ಟ್ರೀಯ ವೈಜ್ಞಾನಿಕ ಸಂಸ್ತೆಯ ಅಧ್ಯಕ್ಷರುಗಳು ತಯಾರಾದರು ! .ಇಂತಹ ಪವಾಡಗಳನ್ನು ನಾವೂ ಮಾಡಬಹುದು.!

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿhttp://sunnaturalflash.buildingonabudget.com/http://buildingonabudget.com/letter2.phpಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.ಎ.ಟಿ. ನಾಗರಾಜವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆಪ್ರತಿನಿಧಿ

ಗುರುವಾರ, ಡಿಸೆಂಬರ್ 16, 2010

ಕೈ ಕೆಳಗಿನವರನ್ನು ಕೀಳಾಗಿ ಕಾಣದವರು ದೊಡ್ಡ ಮನುಷ್ಯರು !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಆಶ್ಚರ್ಯಕರ ವಿಷಯ ! ಎರಡು ವಿಭಿನ್ನ ದೇಶಗಳು ಪರಸ್ಪರ ಅಷ್ಟೇನೂ ಸೌಹಾದರ್ವಿಲ್ಲ. ಆದರೆ ಎರಡು ದೇಶಗಳ ರಾಷ್ಟ್ರಗೀತೆಯನ್ನು ಬರೆದವರು ಒಬ್ಬರೇ . ಒಂದೇ ಭಾರತ, ಮತ್ತೊಂದು ಬಾಂಗ್ಲಾದೇಶ . ಭಾರತ ದೇಶದ "ಜನ ಗಣ ಮನ "ಬಾಂಗ್ಲಾದೇಶದ "ಅಮರ್ ಸೋನಾರ್ ಬಾಂಗ್ಲಾ ". ಇವೆರಡು ರಾಷ್ಟ್ರಗೀತೆಗಳನ್ನು ಬರೆದವರು ರವೀಂದ್ರನಾಥ ಟ್ಯಾಗೋರ್ ! ರವೀಂದ್ರನಾಥ ಟ್ಯಾಗೋರರು ಇಂತಹ ಅನೇಕ ಆಶ್ಚರ್ಯಕರ ಸಂಗತಿಗಳಿಗೆ ಕಾರಣಿ ಭೂತರಾಗಿದ್ದಾರೆ . ಅವುಗಳಲ್ಲಿ ಕೆಲವು ಇಲ್ಲಿವೆ.


ತಮ್ಮ ಎಂಟನೆಯ ವಯಸ್ಸಿಗೆ ಕವನಗಳನ್ನು ರಚಿಸಿ, ಹದಿನಾರನೇ ವಯಸ್ಸಿಗೆ ಸುದೀರ್ಘ ಕಾವ್ಯಗಳನ್ನು ಬರೆದು ಪ್ರಕಟಿಸಿದವರು ವಿನೂತನ "ರವೀಂದ್ರ ಸಂಗೀತ " ಪದ್ಧತಿಯನ್ನು ಪ್ರಸಿದ್ಧಿಗೊಳಿಸಿದವರು, ಭಾರತಕ್ಕೆ ಮೊಟ್ಟಮೊದಲ ನೋಬಲ್ ಪ್ರಶಸ್ತಿ ತಂದು ಕೊಟ್ಟರು. ಅವರು ಸೃಷ್ಟಿಸಿದ ಕಾದಂಬರಿಗಳು , ನಾಟಕಗಳು ,ಕವನಗಳು ಮತ್ತು ಸುವಿಖ್ಯಾತ ಶಾಂತಿನಿಕೇತನ ದ ವಿಶ್ವಭಾರತಿ ವಿಶ್ವವಿಧ್ಯಾಲಯದಿಂದ ಅಮರರಾದವರು.

ಇದೆಲ್ಲಕ್ಕಿಂತ ಮುಖ್ಯವಾದುದು ಅವರ ಮಾನವೀಯ ಗುಣಗಳು . "ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ. ಎದುರುಗಡೆ ಬೈಯಬೇಡ ,"ಎಂಬುದನ್ನು ಅಕ್ಷರಶ ; ಪಾಲಿಸಿದವರು . ಇದಕ್ಕೆ ಕಾರಣ ಅವರ ಜೀವನದಲ್ಲಿ ನಡೆದ ಹೃದಯಸ್ಪರ್ಶಿ ಘಟನೆ.

ಒಂದು ಬೆಳಗ್ಗೆ ಟ್ಯಾಗೋರರ ಸೇವಕ ಕೆಲಸಕ್ಕೆ ಹಾಜರಾಗಲಿಲ್ಲ. ಅವನು ರಾತ್ರಿ ಮನೆಯಲ್ಲಿ ಇರಲಿಲ್ಲ. ಬಾಗಿಲು ಗಳೆಲ್ಲ ತೆಗೆದೇ ಇದ್ದವು. ಬಾವಿಯಿಂದ ನೀರು ಸೇದಿರಲಿಲ್ಲ . ಬೆಳಗಿನ ಉಪಾಹಾರ ಸಿದ್ಧವಿರಲಿಲ್ಲ. ಅಂದಿನ ಉಡುಪುಗಳನ್ನು ತೆಗೆದು ಇಟ್ಟಿರಲಿಲ್ಲ. ಟ್ಯಾಗೋರ್ ರರಿಗೆ ಅಂದು ಯಾವ ಕೆಲಸವೂ ಆಗಲಿಲ್ಲ. ದಿನವಿಡೀ ಕಸಿವಿಸಿ . ಎಲ್ಲವು ಏರುಪೇರು .ಟ್ಯಾಗೋರ್ ರವರಿಗೆ ಬಹಳ ಸಿಟ್ಟು ಬಂತು. ಸೇವಕ ಬಂದ ಮೇಲೆ ಅವನಿಗೆ ದೊಡ್ಡ ಶಿಕ್ಷೆ ನೀಡಬೇಕೆಂದು ತೀರ್ಮಾನಿಸಿದರು. ಸಂಜೆಯ ಹೊತ್ತಿಗೆ ಸೇವಕ ಬಂದು ಅವರ ಮುಂದೆ ತಲೆಬಾಗಿ ಕೈ ಕಟ್ಟಿ ನಿಂತ. ಟ್ಯಾಗೋರರು ಅವನಿಗೆ ಚೆನ್ನಾಗಿ ಬೈದು ಅವನನ್ನು ಕೆಲಸದಿಂದ ಕಿತ್ತು ಹಾಕಿದ್ದೇನೆಂದು ಅಲ್ಲಿಂದ ತೊಲಗಬೇಕೆಂದು ಆಜ್ಞಾಪಿಸಿದರು. ತಲೆ ಬಾಗಿ ನಿಂತಿದ್ದ ಅವನ ಮೌನದಿಂದ ಟ್ಯಾಗೋರರ ಸಿಟ್ಟು ಹೆಚ್ಚಾಯಿತು . "ಅಲ್ಲಿ ಸುಮ್ಮನ್ಯಾಕೆ ನಿಂತಿದ್ದೀಯಾ ?ಎಲ್ಲಿ ಸಾಯಲು ಹೋಗಿದ್ದೆ ? ಅದನ್ನಾದರೂ ಬೊಗಳು " ಎಂದು ಘರ್ಜಿಸಿದರು . ಆತ ಮೆಲುದನಿಯಲ್ಲಿ ಹೇಳಿದ . "ನಿನ್ನೆ ರಾತ್ರಿ ನನ್ನ ಪುಟ್ಟ ಮಗಳು ತೀರಿಕೊಂಡ ಲೆಂಬ ಸುದ್ದಿ ಬಂತು . ನನಗೇನು ಮಾಡಲು ತೋಚಲಿಲ್ಲ . ನೀವು ಮಲಗಿದ್ದಿರಿ . ನಿಮ್ಮನ್ನೆಬ್ಬಿಸುವ ಧೈರ್ಯವಾಗಲಿಲ್ಲ . ನಾನು ನನ್ನ ಊರಿಗೆ ಹೋಗಿ ಆ ಮಗುವಿನ ಅಂತ್ಯಕ್ರಿಯೆ ಮುಗಿಸಿ , ಈಗ ಮರಳಿ ಬಂದಿದ್ದೇನೆ . ನನ್ನ ತಪ್ಪನ್ನು ಕ್ಷಮಿಸಿ " ಎಂದು ಹೇಳಿ ನಿಧಾನವಾಗಿ ಮನೆಯೊಳಕ್ಕೆ ಹೋದ ತನ್ನ ಕಾರ್ಯದಲ್ಲಿ ತೊಡಗಿದ.

ಟ್ಯಾಗೋರ್ ರರಿಗೆ ಒಮ್ಮೆಲೇ ಹೊಟ್ಟೆ ತೊಳಸಿ ದಂತಾಯಿತು . ಏನು ಮಾಡಲು ತೋಚಲಿಲ್ಲ . ವಿಷಯವೇನೆಂದು ವಿಚಾರಿಸದೆ ವಾಚಾಮಗೋಚರ ಬೈದದ್ದಕ್ಕಾಗಿ ಪಶ್ಚಾತಾಪವಾಯಿತು . ಅದೇ ಕೊನೆಯ ಬಾರಿ ಅವರು ತಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ರೇಗಿದ್ದು , ಕೂಗಾಡಿದ್ದು , ತಮ್ಮ ಕಿರಿಯ ಸಹೋದರನಿಗೆ ತೋರಬಹುದಾದ ಗೌರವವನ್ನು ಪ್ರೀತ್ಯಾದಾರ ಗಳನ್ನೂ ತೋರುತ್ತಿದ್ದರಂತೆ . ನಾವೂ ಟ್ಯಾಗೋರ್ ರಿಂದ ಈ ಪಾಠ ಗಳನ್ನೂ ಕಲಿಯಬಹುದೇ ?. "ತಮಗಿಂತ ಮೇಲಿನವರನ್ನು ಯಾರು ಬೇಕಾದರೂ ಚೆನ್ನಾಗಿ ಮಾತನಾಡಿಸಬಹುದು . ಆದರೆ ತಮಗಿಂತ ಕೆಳಗಿನವರನ್ನು ಚೆನ್ನಾಗಿ ಮಾತನಾಡಿಸು ವವರು ದೊಡ್ಡ ಮನುಷ್ಯರೇ ಆಗಿರಬೇಕು " ಎಂಬ ಮಾತು ಎಷ್ಟು ನಿಜ ಅಲ್ಲವೇ ?
ಶುಭದಿನದ ಶುಭಾಶಯಗಳೊಂದಿಗೆ

ಎ.ಟಿ, ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೆತಿದಾರರು ಹಾಗೂ ನೆರಮಾರುಕಟ್ಟೆ ಪ್ರತಿನಿಧಿ





ಬುಧವಾರ, ಡಿಸೆಂಬರ್ 15, 2010

ಕುಡಿದು ಕಾರು ನಡೆಸುವವರಿಗಾಗಿ ಒಂದು ಕವನ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ. ಬೃಹತ್ ನಗರಗಳಲ್ಲಿ 'ಮದ್ಯಪಾನ ಮಾಡಿ ಕಾರು ಓಡಿಸಬೇಡಿ' ಎಂದು ಪ್ರಚಾರ ಮಾಡುತ್ತಲೇ ಇರುತ್ತಾರೆ. ಆದರೆ ಎಷ್ಟೋ ಅಹಿತಕರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಇಲ್ಲಿ ಒಂದು ಅಂತಹ ಕಹಿ ಘಟನೆಯ ಒಂದು ಅನುಭವದ ಕವನ ಇದೆ.
ನಾನು ಪಾರ್ಟಿಗೆ ಹೋಗಿದ್ದೆ ಅಲ್ಲಿ ಎಲ್ಲರೂ ಕುಡಿಯುತ್ತಿದ್ದರು ನಾನು ಬರೀ ಸೋಡಾ ಕುಡಿದೆ , ಏಕೆಂದರೆ ಕುಡಿಯುವುದು ಒಳ್ಳೆಯದಲ್ಲವೆಂದು ನೀವು ಹೇಳಿದ್ದೀರಿ , ಅಮ್ಮಾ !ಪಾರ್ಟಿಯ ನಂತರ , ನಾನು ಮನೆಯ ಕಡೆ ನಡೆದು ಹೊರಟೆ ,ನಾನು ಕುಡಿದಿರಲಿಲ್ಲ , ನಾನು ಎಚ್ಚರಿಕೆಯಿಂದಲೇ ನಡೆಯುತ್ತಿದ್ದೆ ಬೇಗ ಮನೆ ಸೇರಿ ನಿಮಗೆ ಪಾರ್ಟಿಯ ಬಗ್ಗೆ ಹೇಳಬೇಕಿತ್ತು , ಅಮ್ಮಾ !ಇದ್ದಕ್ಕಿದ್ದಂತೆ ದೊಡ್ಡ ಕಾರು ಅಡ್ಡಾದಿಡ್ಡಿ ಬಂದು ಪುಟ್ ಪಾತನ್ನೆರಿತು ,ಡಿಕ್ಕಿ ಹೊಡೆದು ನಡುರಸ್ತೆ ಗೆಸೆಯಿತು . ರಕ್ತ ಸುರಿಯಿತು. ಅರೆ ಪ್ರಜ್ಞಾವಸ್ಥೆ ಯಾರೋ ಕಾರಿನವರು ಕುಡಿದು ಕಾರು ಓಡಿಸುತ್ತಿದ್ದನೆನ್ನುವುದು ಕೇಳಿಸಿತು , ಅಮ್ಮಾ !ಡಿಕ್ಕಿ ಹೊಡೆದವನು ಓಡಿಹೋದ , ನಾನೀಗ ಆಸ್ಪತ್ರೆಯಲ್ಲಿ ಬಿದ್ದಿದ್ದೇನೆ .ಮೈಯೆಲ್ಲಾ ಗಾಯ, ರಕ್ತ , ನೋವು ,ನಾನು ಬದುಕುಳಿಯುವುದು ಅನುಮಾನವಂತೆ ,ಡಾಕ್ಟರುಗಳು ಪಿಸುಗುಟ್ಟುತ್ತಿರುವುದು ಕೇಳಿಸುತ್ತಾ ಇದೆ, ಅಮ್ಮಾ !ನಾನು ನಿಮ್ಮನ್ನು ನೋಡಬೇಕು , ನಾನು ಕುಡಿಯಲಿಲ್ಲವೆಂದು ಹೇಳಬೇಕು ಆ ಕಾರು ದೊಡ್ಡದಿತ್ತು , ಬಹುಶ; ಅವರು ಸಾಹುಕಾರರೇ ಇರಬೇಕು ಅವರು ಕುಡಿದು ಕಾರು ಓದಿಸಿದ್ದಕ್ಕೆ ನಾನೇಕೆ ಸಾಯಬೇಕು ಅಮ್ಮಾ.!ನೀವು ಅಳಬೇಡಿ , ನನ್ನ ತಮ್ಮನಿಗೂ ಅಳಬೇಡವೆಂದು ಹೇಳಿ ,ಅಪ್ಪನಿಗೆ ತುಂಬಾ ಪ್ರೀತಿಸುತ್ತೇನೆಂದು ದಯವಿಟ್ಟು ಹೇಳಿ ,ಕುಡಿದು ಕಾರು ಓಡಿಸಬಾರದೆಂದು ದೊಡ್ಡ ಕಾರಿನವರಿಗೆ ಯಾರೂ ಹೇಳಲಿಲ್ಲವೇ ಅಮ್ಮಾ !ಕಾರು ಡಿಕ್ಕಿ ಹೊಡೆಯದಿದ್ದರೆ ,ನಾನು ಸಾಯುತ್ತಿರಲಿಲ್ಲವೇನೋ ,ನನ್ನ ಬಾಳಿನ ಬಲೂನ್ ಡಬ್ ಎಂದಿದೆ , ನಿಮ್ಮನ್ನು ತಬ್ಬಬೇಕೆನಿಸುತ್ತಿದೆ .ನಿಮ್ಮ ಮಡಿಲಲ್ಲಿ ಕೊನೆಯುಸಿರು ಬಿಡಬೇಕು ಎನಿಸುತ್ತಿದೆ ಅಮ್ಮಾ !ನಿಮ್ಮನ್ನೆಲ್ಲ ಬಿಟ್ಟು ಎಲ್ಲಿಗೆ ಹೋಗುತ್ತಿದ್ದೆನೋ ಗೊತ್ತಿಲ್ಲ .ನನ್ನ ಪ್ರಶ್ನೆಗಳಿಗೆಲ್ಲ ನೀವು ಸದಾ ತಾಳ್ಮೆಯಿಂದ ಉತ್ತರಿಸುತ್ತಿದ್ದೀರಿ ಈಗ ಕೊನೆಯ ಪ್ರಶ್ನೆ ನಾನು ಕುಡಿದಿರಲಿಲ್ಲ , ನಾನೇಕೆ ಸಾಯುತ್ತಿದ್ದೇನೆ ಹೇಳಿ , ಅಮ್ಮಾ !
ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ http://sunnaturalflash.buildingonabudget.com/
http://buildingonabudget.com/letter2.php
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜವ್ಯಕ್ತಿತ್ವ ವಿಕಾಸನ ತರಭೇತಿ ಗಾರರು
, ಹಾಗೂ ನೇರ ಮಾರುಕಟ್ಟೆಪ್ರತಿನಿಧಿ

ಮಂಗಳವಾರ, ಡಿಸೆಂಬರ್ 14, 2010

ದಕ್ಷಿಣ ಆಫ್ರಿಕಾದ ಪಕ್ಷಿ ಮಳೆ ತರುವುದೇ ?

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ವಿಚಿತ್ರವಾದ ಒಂದು ನಂಬಿಕೆ ದಕ್ಷಿಣ ಆಫ್ರಿಕಾದ ಕೆಲ ಜನಾಂಗಗಳಲ್ಲಿ ಇದೆಯಂತೆ. ಅಲ್ಲಿನ ದಟ್ಟಅಡವಿಗಳಲ್ಲಿ ವಾಸಿಸುವ ಜನಗಳಿಗೆ ಪಕ್ಷಿಗಳು ಹೊಸತೇನಲ್ಲ. ಆದರೆ ನಮ್ಮ ಗುಬ್ಬಚ್ಚಿಯನ್ನು ಹೋಲುವ ಒಂದು ಪುಟ್ಟ ಹಕ್ಕಿ ಅಲ್ಲಿದೆಯಂತೆ. ಅದು ಕಾಣಿಸಿಕೊಳ್ಳುವುದು ಅಪರೂಪ. ಆದರೆ ಅದನ್ನು ಕಂಡಾಗ ಅವರು "ಮಳೆ ಹಕ್ಕಿ ಬಂತು , ಇಂದು ನಾಳೆಯಲ್ಲಿ ಮಳೆ ಬರುವುದು ಖಚಿತ " ಎಂದು ನಮ್ಬುತ್ತಾರಂತೆ. ಆ ನಂಬಿಕೆಗೆ ಕಾರಣ ಅವರ ಪ್ರಚಲಿತದ ಒಂದು ಜಾನಪದ ಕಥೆ .

ಬಹಳ ಹಿಂದೆ ಅನೇಕ ಪ್ರಾಣಿ ಪಕ್ಷಿಗಳು ವಾಸಿಸುತ್ತಿದ್ದ ಆಫ್ರಿಕಾದ ಅಡವಿಯ ಒಂದು ಭಾಗದಲ್ಲಿ ಭೀಕರವಾದ ಕಾಳ್ಗಿಚ್ಚು ಎದ್ದಿತಂತೆ. ಬೆಂಕಿಯ ಜ್ವಾಲೆಗಳು ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದವು. ಪ್ರಾಣಿಗಳೆಲ್ಲ ಹೆದರಿ ಓಡಿಹೋದವು. ಎತ್ತರದ ಮರಗಳಲ್ಲಿ ಗೂಡು ಕಟ್ಟಿ ವಾಸಿಸುತ್ತಿದ್ದ ಹಕ್ಕಿಗಳು ತಮ್ಮ ಗೂಡು ಸುಟ್ಟು ಬೂದಿಯಾಗುತ್ತಿರುವುದನ್ನು ಕಂಡು ದು;ಖಿತರಾಗಿ ತಮ್ಮ ಮಕ್ಕಳು -ಮರಿ ಸಮೇತ ಬೇರೆ ಕಾಡನ್ನು ಹುಡುಕಿಕೊಂಡು ಹಾರಿಹೋದವು. ಎಲ್ಲ ಪಕ್ಷಿಗಳು ಹೀಗೆ ಗುಂಪುಗುಂಪಾಗಿ ಹೊರಟು ಹೋಗುವುದನ್ನು ಕಂಡು ಅಲ್ಲೇ ಇದ್ದ ಒಂದು ಸಣ್ಣ ಹಕ್ಕಿ ತುಂಬಾ ಚಿಂತನೆಗೆ ಒಳಗಾಯಿತು. ಹಲವಾರು ವರ್ಷಗಳಿಂದ ನಮಗೆ ಆಶ್ರಯ ಕೊಟ್ಟಿದ್ದ ಕಾಡು ಈಗ ಬೆಂಕಿಗೆ ಆಹುತಿಯಾಗುತ್ತಿದೆ. ಬೆಂಕಿಯನ್ನು ನಂದಿಸಿ ಕಾಡನ್ನು ಕಾಪಾಡುವ ಬದಲು ಎಲ್ಲರು ಕಾಡನ್ನು ತೊರೆದು ಹೋಗುತಿದ್ದಾರಲ್ಲ ಎಂದು ಕೊರಗಿತು. ಬೆಂಕಿಯನ್ನು ಆರಿಸಲು ತಾನು ಏನಾದರೂ ಮಾಡಬೇಕೆಂದು ಯೋಚಿಸಿತು. ದೂರದಲ್ಲಿ ಒಂದು ಸರೋವರವಿತ್ತು. ಈ ಹಕ್ಕಿ ಸರೋವರಕ್ಕೆ ಹೋಗಿ ತನ್ನ ಪುಟ್ಟ ಬಾಯಿಯ ತುಂಬಾ ನೀರು ತುಮ್ಬಿಸಿಕೊಂಡಿತು. ಮತ್ತೆ ಎಚ್ಚರಿಕೆಯಿಂದ ಮೇಲೇರಿ ಕಾಡಿನ ಮೇಲೆ ಹಾರಿ ಬಂತು. ತನ್ನ ಬಾಯಲ್ಲಿದ್ದ ನೀರನ್ನೆಲ್ಲ ಕೆಳಗೆ ಉರಿಯುತ್ತಿದ್ದ ಬೆಂಕಿಯ ಮೇಲೆ ಉಗುಳಿತು. ಹಕ್ಕಿಗೆ ತಾನು ಉಗುಳುವ ನೀರಿನಿಂದ ಬೆಂಕಿ ತಣ್ಣಗಾಗ ಬಹುದೆಂಬ ಆಸೆ . ಮತ್ತೆ ಸರೋವರಕ್ಕೆ ಹಾರಿ ನೀರು ತುಂಬಿಕೊಂಡು ಬಂದು ಮತ್ತೆ ಬೆಂಕಿಯ ಮೇಲೆ ಚೆಲ್ಲುತ್ತಿತ್ತು. ಹೀಗೆ ಹತ್ತಾರು ಬಾರಿ ಮಾಡಿತು. ಈ ತುಂತುರು ನೀರಿನಿಂದ ಬೆಂಕಿಯ ಜ್ವಾಲೆಯೇನು ಕಡಿಮೆಯಾಗಲಿಲ್ಲ. ಆದರೆ ಈ ಹಕ್ಕಿ ಮಾಡುತ್ತಿದ್ದ ಕೆಲಸವನ್ನು ಮೇಲಿದ್ದ ದೇವತೆಗಳ ಗಮನ ಸೆಳೆಯಿತಂತೆ. ಹಕ್ಕಿ ಕಾಡಿನ ಬಗ್ಗೆ ತೋರುತ್ತಿದ್ದ ಕಾಳಜಿಗೆ, ಬೆಂಕಿ ಆರಿಸಲು ಮಾಡುತ್ತಿದ್ದ ಪ್ರಾಮಾಣಿಕ ಪ್ರಯತ್ನಕ್ಕೆ ಮೆಚ್ಚಿ ತಲೆದೂಗಿದರಂತೆ. ಕೇವಲ ತಲೆದೂಗಿ ಸುಮ್ಮನಾಗುವುದಕ್ಕೆ ಅವರೇನು ಮನುಷ್ಯರೇ ? ತಕ್ಷಣ ಧೋ ಎಂದು ಧಾರಾಕಾರ ಮಳೆ ಸುರಿಸಿದರಂತೆ. ಮಳೆಯ ನೀರಿಗೆ ಬೆಂಕಿಯ ಜ್ವಾಲೆ ತಣ್ಣಗಾಯಿತು. ಕಾಡು ಉಳಿಯಿತು. ಹಕ್ಕಿಯ ಗೂಡು ಉಳಿಯಿತು. ಅಂದಿನಿಂದ ಆ ಹಕ್ಕಿಗೆ ಮಳೆ ತರುವ ಹಕ್ಕಿ ಎಂದು ಹೆಸರಾಯಿತು. ಅದು ಕಾಣಿಸಿಕೊಂಡರೆ ಅದರ ಹಿಂದೆಯೇ ಮಳೆ ಬರುತ್ತದೆಂಬ ನಂಬಿಕೆ ಆ ಜನಾಂಗಕ್ಕೆ ಉಂಟಾಯಿತು.

ಅವರ ನಂಬಿಕೆಯನ್ನು ನಾವು ನಂಬದಿರಬಹುದು ಘಟನೆ ಪೂರ್ಣ ಸತ್ಯವಲ್ಲದಿರಬಹುದು . ಆದರೆ ಆಶ್ರಯವಿತ್ತವರ ಸಂಕಷ್ಟ ಸಮಯದಲ್ಲಿ ನಾವೂ ಸಹಾಯ ಮಾಡಲು ಪ್ರಯತ್ನಿಸಿದರೆ . ನಮ್ಮ ಪ್ರಯತ್ನಕ್ಕೆ ಮತ್ತಾರದೋ ಪ್ರಯತ್ನವೂ ಸೇರಿ ಒಟ್ಟು ಪ್ರಯತ್ನ ಫಲಕಾರಿಯಾಗಬಹುದು ಎಂಬುದಂತೂ ಸತ್ಯ. ಈ ಮಾತನ್ನು ಈ ಪುಟ್ಟ ಹಕ್ಕಿ ಸಾಧಿಸಿ ತೋರಿಸಿದೆ. ನಾವೂ ಬೇಕಿದ್ದರೆ ಪ್ರಯತ್ನಿಸಿ ನೋಡಬಹುದು.

ಮಾನ್ಯ ಓದುಗ ಮಹಾಶಯರಲ್ಲಿ ವಿನಂತಿ ಏನೆಂದರೆ ನೀವೂ ಬರಿ ನಮ್ಮ ಲೇಖನಗಳನ್ನು ಓದಿದರೆ ನಿಮಗೆ ಏನೂ ಲಾಭವಿಲ್ಲ . ನೀವೂ ನಮ್ಮ ಯಾವುದಾದರೊಂದು ಅವಕಾಸ ತೆಗೆದುಕೊಂಡು ನಿಮ್ಮ ಸ್ನೇಹಿತರನ್ನು,ಬಂದುಗಳಿಗೆ ಸಹಾಯ ಮಾಡಲು ಪ್ರಯತ್ನಿಸಿ ಆಗ ನಿಮಗೆ ಉತ್ತಮ ಫಲಿತಾಂಶ ಬರುತ್ತದೆ. ಅನುಯಾಯಿಯಾಗಿ ಇಲ್ಲವೇ ಅನ್ವೇಷಕರಾಗಿ , ಏನೂ ಆಗದೆ ನಿಮ್ಮ ಕಾಲ ಹಣ ವನ್ನು ದುರುಪಯೋಗ ಮಾಡಬೇಡಿ.
ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ http://sunnaturalflash.buildingonabudget.com/http://buildingonabudget.com/letter2.php ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.ಎ.ಟಿ. ನಾಗರಾಜವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆಪ್ರತಿನಿಧಿ


ಸೋಮವಾರ, ಡಿಸೆಂಬರ್ 13, 2010

ಅವಿವೇಕಿ ಗಳಿಗೊಂದು ಕಿವಿ ಮಾತು !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!
ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ನಮ್ಮ ಮುಂದಿರುವ ಒಂದು ದೊಡ್ಡ ಪ್ರಶ್ನೆ ಎಂದರೆ ವಿಧ್ಯವಂತ ಅವಿವೇಕಿ ಗಳನ್ನು ಸರಿದಾರಿಗೆ ತರುವುದ ಅಥವಾ ಅವಿಧ್ಯವಂತ ಅವಿವೇಕಿಗಳನ್ನು ಸರಿಯಾದ ದಾರಿಗೆ ತರುವುದ ? ವಿಧ್ಯವಂತ ಅವಿವೇಕಿಗಳು ತಮ್ಮ ಹದಿನೈದು ವರ್ಷ ವಿಧ್ಯಾರ್ಥಿ ದೆಸೆಯನ್ನು ಹಾಳುಮಾಡಿ ಕೊಂಡು ಇನ್ನು ಮುಂದೆ ಹೀಗೆ ಹೋದರೆ ಒಂದು ಸಮಾಜ ಹಾಳಾಗುತ್ತದೆ ಅಂತ ಅವಿವೇಕಿಗಳು ಯಾರು ಇರಬಹುದು ಎನ್ನುವುದನ್ನು ತಿಳಿಯಲು ನಿಮ್ಮ ಪೇಸ್ ಬುಕ್ ನಲ್ಲಿ ಹುಡುಕಿ ಮಾನಗೆಟ್ಟ ,ಮರ್ಯಾದೆ ಬಿಟ್ಟ ಕುಲಹೀನ ಜಾತಿಯ ಯವರು ಸಿಗುತ್ತಾರೆ ಅಂತವರು ಯಾರು ಎಂದು ಪ್ರಕಟ ಪಡಿಸುವುದ ರೊಳಗಾಗಿ ಸರಿಯಾದ ದಾರಿಗೆ ಬಂದರೆ ಸರಿ ಇಲ್ಲ ವೆಂದರೆ ಮಾನ ಮರ್ಯಾದೆ ಹರಾಜ್ ಖಂಡಿತ !
ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ http://sunnaturalflash.buildingonabudget.com/
http://buildingonabudget.com/letter2.php ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.ಎ.ಟಿ. ನಾಗರಾಜವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆಪ್ರತಿನಿಧಿ

ಶನಿವಾರ, ಡಿಸೆಂಬರ್ 11, 2010

ರಾಜನ ಕುದುರೆ ಕೆಟ್ಟ ಕನಸು ಕಂಡಾಗ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಕುದುರೆಗಳಿಗೂ ಕೆಟ್ಟ ಕನಸುಗಳು ಬೀಳುತ್ತವೆಯೇ ? ಜೀವಂತವಿರುವ ಮತ್ತು ಯೋಚಿಸುವ ಸಾಮರ್ಥ್ಯವಿರುವ ಎಲ್ಲ ಪ್ರಾಣಿಗಳಿಗೂ ಕನಸುಗಳು ಬೀಳುವುದು ಸಹಜವೆನ್ನುತ್ತಾರೆ.

ಒಬ್ಬ ರಾಜನ ಬಳಿ ಉತ್ತಮ ತಳಿಯ ಕುದುರೆಯೊಂದಿತ್ತು. ಒಂದು ದಿನ ಬೆಳಿಗ್ಗೆ ಎದ್ದು ತಾನಿದ್ದ ಸ್ಥಳದಲ್ಲೇ ಕದಲದೆ ಕುಳಿತಿತ್ತು. ಒತ್ತಾಯದಿಂದ ಎಬ್ಬಿಸಿದಾಗಲೂ ಮೂರು ಕಾಲಿನ ಮೇಲೆ ನಿಲ್ಲುತ್ತಿತ್ತು. ಮುಂಗಾಲನ್ನು ನೆಲದ ಮೇಲೆ ಊರುತ್ತಿರಲಿಲ್ಲ. ಮತ್ತೆ ಅಲ್ಲೇ ಕುಸಿದು ಬೀಳುತ್ತಿತ್ತು. ರಾವುತನಿಗೆ ಗಾಬರಿ. ಪ್ರೀತಿಯ ಕುದುರೆಗೆ ಹೀಗಾದದ್ದನ್ನು ಕಂಡು ರಾಜನಿಗೂ ಚಿಂತೆ. ಪಶುವೈದ್ಯರು ಕುದುರೆಯನ್ನು ಕೂಲಂಕುಶವಾಗಿ ಪರೀಕ್ಷಿಸಿ "ಕುದುರೆ ಕಾಲಿಗೆ ಪೆಟ್ಟಾಗಿಲ್ಲ, ಅದು ಆರೋಗ್ಯಕರವಾಗಿದೆ. ಬಹುಶ; ಕುದುರೆ ಕಾಲಿಗೆ ಪೆಟ್ಟು ಬಿದ್ದಹಾಗೆ. ಅದು ಮುರಿದು ಹೋದ ಹಾಗೆ ಕನಸು ಕಂಡಿರಬೇಕು. ಈಗ ಎದ್ದ ಮೇಲೂ ಕನಸಿನ ಅನುಭವ ಮರೆಯಾಗುತ್ತಿಲ್ಲ. ಕಾಲು ತುಂಡು ಆಗಿಹೋಗಿದೆ ಎಂಬ ಭಾವನೆ ಅದರ ಮನಸ್ಸಿನಲ್ಲಿ ದೃಢವಾಗಿ ನಿಂತಿದೆ. ಹಾಗಾಗಿ ಅದು ಆ ಕಾಲನ್ನೂರಲು ನಿರಾಕರಿಸುತ್ತಿದೆ."ಎಂದರು. ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ಒಂದು ಬಯಲಿನಲ್ಲಿ ಎಪ್ಪತ್ತು ಕುದುರೆಗಳನ್ನು ಸಾಲಾಗಿ ನಿಲ್ಲಿಸಿದರು. ಕಷ್ಟಪಟ್ಟು ಈ ಕುದುರೆಯನ್ನೂ ಅಲ್ಲಿಗೆ ಕರೆದೊಯ್ದು ಸಾಲಿನಲ್ಲಿ ನಿಲ್ಲಿಸಿದರು. ಎಲ್ಲವೂ ಸಿದ್ಧವಾಗಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಬಹುಜೋರು ಶಬ್ಧದ ನಗಾರಿಗಳನ್ನು ಬಾರಿಸಲಾಯಿತು. ಫಿರಂಗಿಗಳಿಂದ ತೋಪು ಹಾರಿಸಲಾಯಿತು. ದಿ ಡೀರೆಂದು ಬಂದ ಕಿವಿಗಡಚಿಕ್ಕುವ ಧ್ವನಿ ಕೇಳಿ ಎಲ್ಲ ಕುದುರೆಗಳು ಗಾಬರಿಗೊಂಡು ಸಿಕ್ಕಾಪಟ್ಟೆ ಓಡ ಹತ್ತಿದವು. ಇದನ್ನು ಕಂಡ ರಾಜನ ಕುದುರೆಗೆ ಕನಸಿನ ನೆನಪು ಮರೆತು ಹೋಯಿತು. ಎಲ್ಲ ಕುದುರೆಗಳೊಂದಿಗೆ ಈ ಕುದುರೆಯೂ ಓಡಲು ಹತ್ತಿತು. ಆಶ್ಚರ್ಯವೆಂದರೆ ಓಡುವಾಗ ಈ ಕುದುರೆ ಕುಂಟುತ್ತಿರಲಿಲ್ಲ. ಸಹಜವಾಗಿ ಓಡುತ್ತಿತ್ತು. ಮತ್ತು ಕೆಲವೇ ನಿಮಿಷಗಳಲ್ಲಿ ಉಳಿದ ಕುದುರೆಗಳನ್ನು ಹಿಂದೆ ಹಾಕಿತು. ಇದನ್ನು ಕಂಡ ರಾಜನಿಗೆ ನಿರಾಳವಾಯಿತು.

ನಮ್ಮ ಜೀವನಗಳಲ್ಲಿಯೂ ಇಂತಹ ಪರಿಸ್ಥಿತಿಗಳು ಅನೇಕ ಬಾರಿ ಬರಬಹುದು. ನಾವು ಕನಿಸಿಗೆ ಹೆದರದಿರಬಹುದು. ಆದರೆ ಬೇರೆಯವರು ಆಡುವ ಮಾತುಗಳಿಗೆ ಹೆದರಿಬಿಡುತ್ತೇವೆ. ಯಾರಾದರೂ ನಮ್ಮ ಸಾಮರ್ಥ್ಯದ ಬಗ್ಗೆ ಕಡಿಮೆ ಅಂದಾಜು ಮಾಡಿದರೆ ನಾವದನ್ನು ನಂಬಿ ಬಿಡುತ್ತೇವೆ. ಅಥವಾ ನಮ್ಮ ಮುಂದಿನ ದಿನಗಳಲ್ಲಿ ಏನೋ ಕೆಡುಕಾಗುತ್ತದೆಯೆಂದು ಯಾರೋ ಭವಿಷ್ಯ ನುಡಿದರೆ ಗಾಬರಿಯಾಗಿಬಿಡುತ್ತೇವೆ.

ಇದಕ್ಕೊಂದು ನಿಜ ಜೀವನದ ಉದಾಹರಣೆ ಎಂದರೆ ಒಂದು ತರಗತಿಯಲ್ಲಿ ನಲವತ್ತೆರಡು ವಿದ್ಯಾರ್ಥಿಗಳಿದ್ದರು. ಪರೀಕ್ಷೆಯ ಮುನ್ನಾದಿನ ಉಪಾಧ್ಯಾಯರು " ಈ ವರ್ಷದಿಂದ ಪರೀಕ್ಷಾ ಪದ್ಧತಿ ಬದಲಾಗಿದೆ. ಪ್ರಬಂಧ ರೀತಿಯ ಉತ್ತರಗಳ ಬದಲು ಕೇವಲ ಹೌದು ಅಥವಾ ಇಲ್ಲ ಎಂಬ ರೀತಿಯ ಉತ್ತರಗಳನ್ನು ನೀಡಬೇಕು. ಇದು ಬಹಳ ಕಷ್ಟಕರ ಪದ್ಧತಿ."ಎಂದು ವಿಧ್ಯಾರ್ಥಿಗಳಿಗೆ ತಿಳಿಸಿದರು. "ಹೊಸ ಪದ್ಧತಿ ಬಹಳ ಕಷ್ಟಕರ " ಶಬ್ಧಗಳನ್ನು ಕೇಳಿದ ಹದಿನಾರು ಜನ ಪರೀಕ್ಷೆಗೆ ಬರಲೇ ಇಲ್ಲ. ಹೆದರಿ ಮನೆಯಲ್ಲೇ ಕುಳಿತರು. ಆದರೆ ಪರೀಕ್ಷೆಗೆ ಬಂದ ಇಪ್ಪತ್ತಾರು ಜನಕ್ಕೆ ಹೊಸ ಪದ್ಧತಿ ಬಹಳ ಸರಳವೆನಿಸಿತು. ಎಲ್ಲರೂ ಉತ್ತೀರ್ಣರಾದರು. ಹೆದರಿ ಪರೀಕ್ಷೆಗೆ ಬಾರದಿದ್ದ ಹದಿನಾರು ಜನ ಕೈ ಕೈ ಹಿಸುಕಿಕೊಂಡರು. ಹೆದರದೆ ಪರೀಕ್ಷೆಗೆ ಹಾಜರಾಗಿದ್ದರೆ ತಾವೂ ಉತ್ತಿರ್ಣರಾಗುತ್ತಿದ್ದೆವಲ್ಲ ಎಂದು ಪೇಚಾಡಿಕೊಂಡರು.

ಮುಂದಿನ ಬಾರಿ ನಾವು ಕಷ್ಟ ಅಪಾಯ ಮುಂತಾದ ಮಾತುಗಳು ಕೇಳಿದಾಗ ಅದಕ್ಕೆ ಹೆದರದೆ ನಮ್ಮ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಂಡರೆ ಆ ಕುದುರೆಯ ಪರಿಸ್ಥಿತಿ ನಮಗಾಗುವುದಿಲ್ಲ.

ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ

ಮಂಗಳವಾರ, ಡಿಸೆಂಬರ್ 7, 2010

ವಿಷಯ ತಿಳಿಯದೆ ತೀರ್ಮಾನ ಘೋಶಿಸಿದವರಿಗೆ ಶಿಕ್ಷೆ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ಸಿದ್ದಾಂತ.
ಕೆಲವಾರು ವರ್ಷಗಳ ಹಿಂದೆ ರಮಣ ಶ್ರೀ ಶರಣ ಪ್ರಶಸ್ತಿಯನ್ನು ಪಡೆದುಕೊಂಡವರು ಹೆಸರಾಂತ ಗಾಯಕ ದೈವದತ್ತ ಮಧುರ ಕಂಟದ ಪಂಡೀತ್ ವೆಂಕಟೇಶ ಕುಮಾರರು.

ಒಬ್ಬ ಸಾಹುಕಾರರು ಒಂದು ವಾರ ದೇವಸ್ಥಾನದಲ್ಲಿ ಹಾಲುಪಾಯಸ ಹಂಚುವುದಾಗಿ ಹರಕೆ ಹೊತ್ತರಂತೆ. ಮೊದಲನೆಯ ದಿನ ಎಲ್ಲ ಚೆನ್ನಾಗಿತ್ತು. ಮನೆಯಲ್ಲಿ ಹಾಲುಪಾಯಸ ಮಾಡಿಸಿ ದೇವಸ್ಥಾನದಲ್ಲಿ ನೈವೇದ್ಯ ಮಾಡಿಸಿ ಭಕ್ತರಿಗೆ ಹಂಚಿದರಂತೆ. ಮರುದಿನ ಪಾಯಸ ಒಯ್ಯುವಾಗ ಒಂದು ಅನಾಹುತ ಅವರಿಗರಿವಿಲ್ಲದಂತೆ ನಡೆಯಿತು. ಆಕಾಶದಲ್ಲಿ ಹಾರುತ್ತಿದ್ದ ಒಂದು ಹದ್ದು ತನ್ನ ಬಾಯಲ್ಲಿ ನಾಗರಹಾವನ್ನು ಹಿಡಿದಿತ್ತು . ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದ ಹಾವಿನ ಬಾಯಿಂದ ಒಂದೆರಡು ಹನಿ ವಿಷ ಪಾಯಸದ ಪಾತ್ರೆಗೆ ಬಿತ್ತಂತೆ . ಅದು ಗೊತ್ತಿಲ್ಲದ ಸಾಹುಕಾರರು ಪಾಯಸವನ್ನು ಪುರೋಹಿತರಿಗೆ ಒಪ್ಪಿಸಿ., ನೈವೇದ್ಯ ಮಾಡಿಸಿ, ಅಲ್ಲಿದ್ದ ನಾಲ್ಕು ಜನಕ್ಕೆ ಹಂಚಿದರು. ಅದನ್ನು ಸೇವಿಸಿದ ನಾಲ್ಕು ಜನ ಅಲ್ಲೇ ಪ್ರಾಣಬಿಟ್ಟರು. ವಿಷಯ ರಾಜನವರೆಗೂ ಹೋಯಿತು. ವಿಚಾರಣೆ ನಡೆಯಿತು. ಜನ ಸತ್ತಿದ್ದಾರೆ . ಯಾರಿಗೆ ಶಿಕ್ಷೆ ಯಾಗಬೇಕು ?
ರಾಜ ಸಾಹುಕಾರನನ್ನು ಪಾಯಸ ತಯಾರಿಸಿದವರನ್ನು ಪುರೋಹಿತರನ್ನು ಸಂಬಂಧ ಪಟ್ಟವರನ್ನೆಲ್ಲ ಕರೆಸಿ ವಿಚಾರಣೆ ನಡೆಸಿದರು. ಇಂತವರದ್ದೇ ತಪ್ಪೆಂದು ತೀರ್ಮಾನಿಸುವುದು ಕಷ್ಟವಾಯಿತು . ಸ್ಥಳಪರೀಕ್ಷೆ ಮಾಡಿ ಯಾರಿಗೆ ಶಿಕ್ಷೆ ವಿಧಿಸಬೇಕೆಂದು ಶಿಫಾರಸು ಮಾಡುವುದಕ್ಕಾಗಿ ಸಮಿತಿಯೊಂದನ್ನು ನೇಮಿಸಿ ಕಳುಹಿಸಿದರು.

ಸಮಿತಿಯವರು ಸ್ಥಳ ಪರೀಕ್ಷೆ ಮಾಡುವಾಗ ಒಂದು ವಿಚಿತ್ರ ಪ್ರಸಂಗ ನಡೆಯಿತು. ಸ್ಥಳದಲ್ಲಿ ಊರಿನ ನೂರಾರು ಜನ ಸೇರಿದ್ದರು. ಆಗ ಅಲ್ಲಿಗೆ ಬೇರೆ ಊರಿನ ಎಂಟು ಜನ ಬಂದರು . ಅವರಿಗೆ ನಡೆದಿದ್ದ ದುರಂತದ ಬಗ್ಗೆ ಗೊತ್ತಿರಲಿಲ್ಲ . ಇಲ್ಲಿ ಹಂಚುವ ಹಾಲು ಪಾಯಸ ಸವಿಯಲು ಬಂದಿದ್ದೆವೆನ್ದರು.

ಅಲ್ಲಿದ್ದ ಒಬ್ಬ ಮುದುಕಿ ತಕ್ಷಣ 'ನಿನ್ನೆ ನಾಲ್ಕು ಜನರನ್ನು ಸಾಹುಕಾರ ಸಾಯಿಸಿದ್ದಾನೆ . ಇಂದು ಎಂಟು ಜನ ಸಾಯಲು ಬಂದಿದ್ದೀರಾ 'ಎಂದು ಒದರಿದಳು. ಸಮಿತಿ ಸದಸ್ಯರಿಗೆ ಈ ಮಾತುಗಳು ಸ್ಪಷ್ಟವಾಗಿ ಕೇಳಿಸಿದವು. ಅವರು ಅದನ್ನು ಬರೆದು ಇಟ್ಟುಕೊಂಡರು.

ಮರುದಿನ ಅವರು ತಮ್ಮ ಶಿಫಾರಸನ್ನು ರಾಜನಿಗೆ ಸಲ್ಲಿಸಿದರು. ಈ ಘಟನೆಗೆ ಯಾರೂ ನೇರ ಹೊಣೆಗಾರರಲ್ಲ. ಯಾರಿಗೂ ಶಿಕ್ಷೆ ವಿಧಿಸಲಾಗುವುದಿಲ್ಲ. ಆದರೆ ವಿಷಯ ಸರಿಯಾಗಿ ತಿಳಿದುಕೊಳ್ಳದೆ ಸಾಹುಕಾರನೆ ಕೊಲೆಗಾರ ಎಂಬರ್ಥದಲ್ಲಿ ಮಾತನಾಡಿ ಸಮಿತಿ ಅಭಿಪ್ರಾಯದ ಮೇಲೆ ಪ್ರಭಾವ ಬೀರಲೆತ್ನಿಸಿದ ಮುದುಕಿಗೆ ಶಿಕ್ಷೆ ವಿಧಿಸಬೇಕೆಂದು ಹೇಳಿದ್ದರಂತೆ . ಮುದುಕಿಗೆ ಶಿಕ್ಷೆಯಾಯಿತಂತೆ.

ಈ ಕಥೆಯ ಸಂದೇಶವೆಂದರೆ ವಿಷಯದ ಅರಿವಿಲ್ಲದೆ ಮತ್ತೊಬ್ಬರ ಮೇಲೆ ದೋಷಾರೋಪಣೆ ಮಾಡುವುದು ಸರಿಯಲ್ಲ."ಅವರ ಚರಿತ್ರೆ ನಮಗೆ ಗೊತ್ತು , ಇವರ ನಡತೆ ಸರಿಯಿಲ್ಲ. ಅವರು ನಂಬಲರ್ಹರಲ್ಲ ,ಅವನು ಉದ್ಧಾರವಾಗುವುದಿಲ್ಲ ' ಈ ದೇಶಕ್ಕೆ ಭವಿಷ್ಯವಿಲ್ಲ ಎಂಬಿತ್ಯಾದಿ ಮಾತುಗಳನ್ನಾಡುವವರನ್ನು ನಾವೆಲ್ಲಾ ಕಂಡಿದ್ದೇವೆ. ವಿಷಯ ಗೊತ್ತಿರಲಿ, ಗೊತ್ತಿಲ್ಲದಿರಲಿ , ಎಲ್ಲ ಬಲ್ಲವರಂತೆ ಮಾತನಾಡುವುದನ್ನು ನಾವು ಗಮನಿಸಿರುತ್ತೇವೆ. ಬೇಜವಾಬ್ದಾರಿ ಮಾತುಗಳು ,ತೀರ್ಪುಗಳು , ಘೋಷಣೆಗಳು , ಕೆಲವೊಮ್ಮೆ ಸಂಬಂಧ ಪದದ ವಿಷಯಗಳ ಬಗ್ಗೆಯೂ ಏನೇನೋ ಮಾತುಗಳು , ಅವುಗಳಿಂದ ಯಾರ ಮನಸ್ಸಿಗೂ ನೋವಾಗಬಹುದು. ಮತ್ಯಾರಿಗೋ ತೊಂದರೆಯೂ ಆಗಬಹುದು. ಅಥಾವಾ ಯಾರಿಗೆ ಗೊತ್ತು ? ಆ ಮುದುಕಿಗಾದಂತೆ ನಮಗೂ ಶಿಕ್ಷೆಯಾಗಬಹುದು !

ದಯವಿಟ್ಟು ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಭಾನುವಾರ, ಡಿಸೆಂಬರ್ 5, 2010

ಸಂಗೀತದಲ್ಲಿ ಯಶಸ್ಸನ್ನು ಗಳಿಸಲು ಏಳು ಸ್ವರಗಳ ಜತೆಗೆ ಏಳು ಕಾರಣಗಳು _ಎ. ಟಿ .ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ಸಿದ್ದಾಂತ.
ಕೆಲವಾರು ವರ್ಷಗಳ ಹಿಂದೆ ರಮಣ ಶ್ರೀ ಶರಣ ಪ್ರಶಸ್ತಿಯನ್ನು ಪಡೆದುಕೊಂಡವರು ಹೆಸರಾಂತ ಗಾಯಕ ದೈವದತ್ತ ಮಧುರ ಕಂಟದ ಪಂಡೀತ್ ವೆಂಕಟೇಶ ಕುಮಾರರು.

ಒಮ್ಮೆ ಅವರು ಅನೇಕ ದಾಸರ ಪದಗಳನ್ನು ಶರಣರ ವಚನಗಳನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಸುಶ್ರಾವ್ಯವಾಗಿ ಹಾಡಿ ಎಲ್ಲರೂ ತಲೆದೂಗುವಂತೆ ಮಾಡಿದರು. ಕೊನೆಯಲ್ಲಿ ಮಂಗಳ ಹಾಡಿದಾಗಲೇ ಸಮಯದ ಅರಿವು ಶ್ರೋತೃಗಳಿಗೆ ಆಗಿದ್ದು . ಅಷ್ಟಾಗಿಯೂ ಅವರು ಕೊಂಚವೂ ದಣಿದವರಂತೆ ಕಾಣಲಿಲ್ಲ. ಕಚೇರಿಯುದ್ದಕ್ಕೂ ಸರಾಗವಾಗಿ ಹಾಡುತ್ತಿದ್ದರು. ಕೆಲವು ಪ್ರೇಕ್ಷಕರು ವೇದಿಕೆಗೆ ಹೋಗಿ ಇಷ್ಟು ಸರಾಗವಾಗಿ ಹೇಗೆ ಹಾಡಲು ಸಾಧ್ಯವಾಯಿತೆಂದು ಕೇಳಿದಾಗ ಅವರು ತಮ್ಮದೇ ಆದ ಶೈಲಿಯಲ್ಲಿ "ಅದೇನು ಕಷ್ಟವಲ್ಲ ! ಬಹಳ ಸುಲಭ "ಎಂದರು. "ಸ್ವಲ್ಪ ನಮಗೂ ಹೇಳಿ " ಎಂದು ಪ್ರೇಕ್ಷಕರು ಕೇಳಿದಾಗ . ಅವರು ಹತ್ತು ನಿಮಿಷ ಸಮಯ ಕೊಟ್ಟರೆ ಹೇಳುತ್ತೇನೆ ಎಂದಾಗ ಪ್ರೇಕ್ಷಕರು ಅವರ ಮುಂದೆ ಕುಳಿತರು. ಅವರು ತಮ್ಮ ಯಶಸ್ಸಿನ, ಸಾಧನೆಯ ಗುಟ್ಟನ್ನು ಹೇಳತೊಡಗಿದರು.

'ಹೀಗೆ ಸರಾಗವಾಗಿ ಹಾಡಲಿಕ್ಕೆ ಏಳು ಕಾರಣಗಳು ಇವೆ. ಮೊದಲನೆಯದು ಕನಸು, ನಾನು ಚಿಕ್ಕಂದಿನಿಂದಲೂ ಹಾಡುಗಾರನಾಗಬೇಕೆಂಬ ಕನಸು ಕಾಣುತ್ತಲೇ ಇದ್ದೆ. ಎರಡನೆಯದ್ದು ಅಭ್ಯಾಸ . ನನ್ನ ಗುರುಗಳು ಪೂಜ್ಯ ಪುಟ್ಟರಾಜ ಗವಾಯಿಗಳ ಬಳಿಯಲ್ಲಿಯೇ ಇದ್ದು ಹನ್ನೊಂದು ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡಿದೆ. ಒಂದು ದಿನವೂ ರಜೆ ಯಿಲ್ಲದೆ. ಮುಂಜಾವಿನಿಂದ ರಾತ್ರಿಯವರೆವಿಗೂ ಪಾಠ ಕಲಿಯಬೇಕಿತ್ತು. ಮೂರನೆಯದ್ದು ಆಹಾರ ಮತ್ತು ನಿದ್ದೆಯ ತ್ಯಾಗ ಮಾಡಬೇಕಿತ್ತು. ನಾಲ್ಕನೆಯದ್ದು ಗುರುಗಳ ಮಾರ್ಗದರ್ಶನವನ್ನು ಚಾಚು ತಪ್ಪದೆ ಪಾಲಿಸಬೇಕಿತ್ತು . ಆ ದೀರ್ಘ ಅಧ್ಯಯನದ ನಂತರ ನಮ್ಮ ಕಾಲ ಮೇಲೆ ನಾವು ನಿಂತೆವು.

ಐದನೆಯದು ಈಗಲೂ ಪ್ರತಿದಿನ ನಾಲ್ಕೈದು ಗಂಟೆಗಳ ಕಾಲ ಅಭ್ಯಾಸ ಮಾಡುತ್ತೇನೆ. ಊಟ ಬಿಡುತ್ತೇನೆ ಆದರೆ ಅಭ್ಯಾಸ ಬಿಡುವ ಹಾಗಿಲ್ಲ. ಒಂದು ದಿನ ಅಭ್ಯಾಸ ಮಾಡದೆ ಎಲ್ಲಾದರೂ ಹಾಡಲು ಕುಳಿತರೆ ನಮಗೂ ಕೇಳುಗರಿಗೂ ಇಂದು ಅಭ್ಯಾಸ ಮಾಡಿಲ್ಲ ಎಂಬುದರ ಸುಳಿವು ಗೊತ್ತಾಗಿಬಿಡುತ್ತದೆ.
ಈಗಲೂ ಏನು ತಿನ್ನಬೇಕು ಏನು ತಿನ್ನಬಾರದೆಮ್ಬುದರ ಬಗ್ಗೆ ಬಹಳ ಎಚ್ಚರ ವಹಿಸಬೇಕಾಗುತ್ತದೆ. ಇಷ್ಟಪಟ್ಟಿ ದ್ದನ್ನೆಲ್ಲ ತಿನ್ನುವಂತಿಲ್ಲ. ಮತ್ತು ಆರನೆಯದ್ದು ಸಂಗೀತವನ್ನು ಬಿಟ್ಟು ಮತ್ತೇನೂ ಚಿಂತಿಸುವುದಿಲ್ಲ. ಮಾತನಾಡುವುದಿಲ್ಲ. ಬದುಕೆಲ್ಲ ಅದಕ್ಕೆ ಮೀಸಲಾಗಿದೆ. ಏಳನೆಯದ್ದು ಇವೆಲ್ಲದರ ಜತೆಗೆ ಸ್ವಲ್ಪ ದೇವರ ದಯೆ ಮತ್ತು ಗುರುಗಳ ಅಶ್ರೀವಾದವೂ ಇರಬೇಕು. ಈ ಸಪ್ತ ನಿಯಮಗಳನ್ನು ಪಾಲಿಸಿದರೆ ಯಾರು ಬೇಕಾದರೂ ಸರಾಗವಾಗಿ ನನಗಿಂತ ಚೆನ್ನಾಗಿ ಹಾಡಬಹುದು . ಅದರಲ್ಲೇನೂ ಕಷ್ಟವಿಲ್ಲ.'.'

ಅವರ ಸಂಗೀತಕ್ಕೆ ತಲೆದೂಗಿದ ಹಾಗೆಯೇ ಅವರ ಅರ್ಥಪೂರ್ಣ ಮಾತುಗಳಿಗೂ ಪ್ರೇಕ್ಷಕರು ತಲೆದೂಗಿದರು. ಸಂಗೀತ ಕ್ಷೇತ್ರ ದಲ್ಲಿ ಯಶಸ್ಸಿಗೆ ಕೇವಲ ಸಪ್ತ ಸ್ವರಗಳು ಸಾಲದು. ಅದರೊಟ್ಟಿಗೆ ಕನಸು , ಅಧ್ಯಯನ , ಶ್ರಮ , ಸುಖತ್ಯಾಗ , ನಿತ್ಯಾಭ್ಯಾಸ , ಸಂಪೂರ್ಣ ಸಮರ್ಪಣೆ ಮತ್ತು ಗುರು-ದೈವಗಳ ಕೃಪೆ ಎಂಬ ಸಪ್ತ ನಿಯಮಗಳನ್ನೂ ಪಾಲಿಸಬೇಕೆಮ್ಬುದು ಎಷ್ಟು ನಿಜವಲ್ಲವೆ ? ಈ ನಿಯಮಗಳು ಬದುಕಿನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದಲ್ಲವೇ ?


ದಯವಿಟ್ಟು ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php