MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಮಾರ್ಚ್ 31, 2011

kaadu kudure

Shimoga Subbanna Live: "Kaadu Kudure Odi Bandittha.."

kelasa kalisuttade shistu, !

   ನೀವು ಎಂದಾದರೂ ಪರೀಕ್ಷೆ ಮಾಡಿ ನೋಡಿದ್ದೀರಾ ಕೆಲಸ ವೆಂಬುದು ಜೀವನದಲ್ಲಿ ಒಂದು ರೀತಿಯ ಶಿಸ್ತು,  ಹಣ ಸಂಪಾದನೆ, ಶಾಂತಿ ಮುಂತಾದವುಗಳನ್ನು ತಂದುಕೊಡುತ್ತದೆ.  ಯಾಕೆಂದರೆ ಯಾವಾಗಲೂ ಕೆಲಸದಲ್ಲಿ ತಲ್ಲೀನ ರಾಗಿದ್ದರೆ ಮನಸ್ಸು ಉಲ್ಲಾಸ, ಹರ್ಷ ಗಳನ್ನೂ ತಂದುಕೊಡುವುದಲ್ಲದೆ,  ಚಿಂತೆಗಳು ದೂರವಾಗುವುದಲ್ಲದೆ ,  ಜಗಳಗಳು ,  ಕೆಟ್ಟ ಆಲೋಚನೆಗಳು ದೂರವಾಗುತ್ತವೆ.  ಹಾಗಾಗಿಯೇ  ಶರಣರು ಹೇಳಿದ್ದು "ಕಾಯಕವೇ ಕೈಲಾಸ "  ಎಂದು !
    ನೀವೂ ಜೀವನದಲ್ಲಿ ಶಾಂತಿ ಯನ್ನು ಗಳಿಸಬೇಕೆ ?  ನೀವೂ ಮಾಡುವ ಕೆಲಸದಲ್ಲಿ ದೊಡ್ಡ ಸಾಧನೆ ಮಾಡಬೇಕೆ ?  ಹಾಗಾದರೆ ನೀವೂ ಮಾಡುವ ಕೆಲಸದಲ್ಲಿ ತಲೀನರಾಗಿರಿ !
ವಂದನೆಗಳೊಂದಿಗೆ 
ಎ.ಟಿ,ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ, ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ

STUDY KEY!

ಬುಧವಾರ, ಮಾರ್ಚ್ 30, 2011

Ningi Ningi - Hoovu Hannu (1993) - Kannada

daayaadi tana vamsha paarampaaryavaagi munduvariyabeke ?

  ಈ ಶೀರ್ಷಿಕೆ ಯಡಿ ಲೇಖನ ಬರೆಯುತ್ತಿರುವುದು 31 -03 -2011  ನೆ ತಾರೀಖು ! .  ನಿನ್ನೆ ಅಷ್ಟೇ ನಮ್ಮ ವಿಶ್ವದ ಕ್ರಿಕೆಟ್ ಪ್ರೇಮಿಗಳು ಕೆಲಸಗಳನ್ನು ಬಿಟ್ಟು ಕ್ರಿಕೆಟ್ ನೋಡಲು ಟಿ.ವಿ . ನೆಟ್ ಗಳನ್ನೂ ಬಳಸಿ ತುಂಬಾ ಉತ್ಸುಕದಿಂದ ನೋಡಿದರು.  ಅದು ನೋಡುವಾಗ ಸುಮ್ಮನೆ ನೋಡುತ್ತಾರೆಯೇ ?  ಇವರು ಕುಳಿತಲ್ಲಿಯೇ ಕ್ರಿಕೆಟ್ ಆಟಗಾರರಿಗೆ ಸಲಹೆ ಕೊಡುವಷ್ಟು ಸಮರ್ಥರಾಗಿರುತ್ತಾರೆ .  ಆದರೆ ಇವರಿಗೆ ಎಲ್ಲಾದರೂ ಅವಕಾಸ ಕೊಟ್ಟರೆ ಕತೆಯೇ ಮುಗಿಯಿತು !. ಬಿಡಿ.

   ಏನೇ ಇರಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಆಡುವಾಗ ಭಾರತದ ಹಿಂದೂಗಳಿಗಿಂತಲೂ,  ಪಾಕಿಸ್ತಾನದ ಮುಸ್ಲಿಂ ಗಳಿಗಿಂತಲೂ ಬೇರೆ ದೇಶದವರು ಹೆಚ್ಚು ಆಸಕ್ತಿ ಕೊಟ್ಟು ನೋಡುವುದೇಕೆ ?  ಅದು ಅಕ್ಷರಸ್ಥರಿಂದ ಹಿಡಿದು ಅನಕ್ಷರಸ್ಥರ ವರೆಗೆ .  ಪಾಕಿಸ್ತಾನ ಹಾಗೂ ಹಿಂದೂ ವಿರೋಧಿ ರಾಷ್ಟ್ರಗಳು ಎಂದೇ ?  .  ನಿಜಕ್ಕೂ ಭಾರತಕ್ಕೂ ಪಾಕಿಸ್ತಾನಕ್ಕೂ ಅಷ್ಟೇನೂ ದೊಡ್ಡ ಹಗೆತನವಿಲ್ಲ ,  ಜನ ಸೃಷ್ಟಿ ಮಾಡಿದ್ದು ,  ಮಾಡುತ್ತಿರುವುದು .  ಪಾಕಿಸ್ತಾನ ಭಾರತದ ಒಂದು ಭಾಗ ಅಷ್ಟೇ !.  ಓದು ದೊಡ್ಡ ನಿಮ್ಮದೊಂದು ಕುಟುಂಬ  ,  ಅದರಲ್ಲಿ ತಂದೆ , ತಾಯಿ,  ಅಕ್ಕ, ತಮ್ಮ, ಅಣ್ಣ , ತಮ್ಮ , ತಂಗಿ ಹೀಗೆ ಎಲ್ಲರೂ ಇರುತ್ತಾರೆ.  ಅಣ್ಣ ಮದುವೆಯಾದ ಮೇಲೆ ನನಗೆ ಈ ಮನೆಯಲ್ಲಿ ಇರುವುದಕ್ಕೆ ಇಷ್ಟವಿಲ್ಲ ಎಂದು ಹೇಳಿ ಮನೆಯಿಂದ ಬೇರೆಯಾಗಿ ಹೊರಗಡೆ ಎಲ್ಲೋ ಜೀವನ ತನ್ನ ಹೆಂಡತಿ ಮಕ್ಕಳೊಡನೆ ಪ್ರಾರಂಭಿಸುತ್ತಾನೆ.  ಹಾಗೆ ಮನೆಯಿಂದ ಹೊರಹೋದ ಅಣ್ಣ ತಾನೂ ಬಿಟ್ಟು ಬಂದ ಮನೆಯ ಮೇಲೆ,  ಮನೆಯಲ್ಲಿರುವ ತನ್ನ ಸಹೋದರರ ಮೇಲೆ,  ಮನೆಯಲ್ಲಿರುವ ಸಹೋದರರು ಮನೆ ಬಿಟ್ಟು ಹೋದ ತಮ್ಮ ಸಹೋದರನ ಮೇಲೆ ಹಗೆತನ ದಿಂದ ನೋಡಬೇಕೆ ?.  ಈ ಹಗೆತನ ಸಂತತಿ ಎಲ್ಲಿಯ ವರೆಗೆ ಇರುತ್ತದೆ ಅಲ್ಲಿಯ ವರೆಗೆ ಇರುತ್ತದೆ ಅಲ್ಲಿಯ ವರೆಗೆ ಬೆಳೆಸಿಕೊಂಡು ಹೋಗಬೇಕೆ.? .  ರಾಮ ರಾವಣ ರ ಕಾಳಗದಲ್ಲಿ ರಾಮ ರಾವಣ ಸೃಷ್ಟಿಸಿಕೊಂಡ ಹಗೆತನಗಳಿಗಿಂತ ಬೇರೆಯವರು ,  ಸಂಬಂದ ವಿಲ್ಲದವರು ಸೃಷ್ಟಿಸಿಕೊಂಡ ಹಗೆತನವೇ ಜಾಸ್ತಿ !.  ಜಾಣರಾದ ನೀವೇ ಯೋಚಿಸಿ,  ತೀರ್ಮಾನ ನಿಮ್ಮದು.  ಹಗೆತನ ಸಂತತಿ ಇರುವ ವರೆಗೆ ಬೆಳೆಸಬೇಕೆ ?  ಇಲ್ಲವೇ ಬಿಡಬೇಕೇ ?
ವಂದನೆಗಳೊಂದಿಗೆ
ಎ.ಟಿ. ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ,  ಮತ್ತು ವ್ಯಕ್ತಿತ್ವ ವಿಕಾಸನ ಪ್ರತಿನಿಧಿ

FIRST READ LESSON AFTER YOU WRITE YOUR OWN WORDS

ಮಂಗಳವಾರ, ಮಾರ್ಚ್ 29, 2011

Ibbani Thabbida - Rashmi (1994) - Kannada

entu varshagala hindina nenapu !

   ಸುಮಾರು ಎಂಟು ವರ್ಷಗಳ ಹಿಂದಿನ ನೆನಪು ನನಗೆ ನೆಟ್ ವರ್ಕ್ ಮಾರ್ಕೆಟಿಂಗ್ ಬಗ್ಗೆ ಹೆಚ್ಚಿನ ಅನುಭವವಿರಲಿಲ್ಲ.  ಒಂದು ರೈನ್ ಬೊ ಎನ್ನುವ ಮಾರ್ಕೆಟಿಂಗ್ ಕಂಪನಿಗೆ ಸೇರಿದೆ.  ಅಲ್ಲಿ ಇದ್ದ ವಸ್ತುಗಳು ತುಂಬಾ ಚೆನ್ನಾಗಿದ್ದವು.  ಆದರೆ ವಸ್ತುಗಳನ್ನು ನಾವು ಮನೆ ಮನೆಗಳಿಗೆ ತೆಗೆದುಕೊಂಡು  ಹೋಗಿ ಮಾರಬೇಕಾಗಿತ್ತು.  ನನಗಂತೂ ನನ್ನ ಚಿಕ್ಕ ದೇಹಕ್ಕೆ ಮನೆಯಿಂದ ಮನೆಗೆ ವಸ್ತುಗಳನ್ನು ಹೊತ್ತುಕೊಂಡು ಹೋಗಿಯೇ ಸುಸ್ತಾಗುತ್ತಿತ್ತು.  ಬೆಳಿಗ್ಗೆ ಆರಕ್ಕೆ ಮನೆ ಬಿಟ್ಟರೆ ರಾತ್ರಿ ಹನ್ನೊಂದು ಗಂಟೆಗೆ ಮನೆ ಬಂದು ಸೇರುತ್ತಿದ್ದೆ.  ಆದರೆ ನಾನು ಸಂಪಾದಿಸಿದ್ದು ಕೇವಲ ಸೊನ್ನೆ !  .  ಒಂದು ವೇಳೆ ಅಂದು ಮಾಡಿದ್ದ ಕೆಲಸ ನನಗೆ ಉತ್ತಮ ಪ್ರತಿಫಲ ಕೊಟ್ಟಿದ್ದರೆ ಇಂದು ನಾನು ಇಷ್ಟು ಅನುಭವವನ್ನು ಹಂಚಿಕೊಳ್ಳಲು ಆಗುತ್ತಿರಲಿಲ್ಲವೇನೋ ?  . ಎಲ್ಲ ದೈವ ಇಚ್ಛೆ ತಾನೇ !
ವಂದನೆಗಳೊಂದಿಗೆ 

ಎ.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೆತಿಗಾರ ಮತ್ತು ನೇರ ಮಾರುಕಟ್ಟೆ ಪ್ರತಿನಿಧಿ.

COPY WRITING IS VERY IMPORTENT!

ಸೋಮವಾರ, ಮಾರ್ಚ್ 28, 2011

Chinnari mutta-Naavu iruvaga

21 MAY 2011 GOD DAY!

ನಮ್ಮ ಮುಂದೆ ಅಲ್ಲಿ ಇಲ್ಲಿ ಕಾಣ ಬರುತ್ತಿದೆ ಮೇ ಇಪ್ಪತ್ತೊಂದು ಎರಡು ಸಾವಿರದ ಹನ್ನೊಂದು "ನ್ಯಾಯ ನಿರ್ಣಯದ ದಿನ " ವಿಶ್ವದ ಅಂತ್ಯ ! ಎಂದು.  ಆದರೆ ಮಾನವನ ಅಥವಾ ಪ್ರತಿಯೊಂದು ಜೀವಿಯೂ ಹುಟ್ಟಿದ ಮೇಲೆ ಸಾಯಲೇ ಬೇಕು .  ಇದು ಕಡ್ಡಾಯ .  ಆದರೆ ನಾವು ನೀವೆಲ್ಲರೂ ಈಗ ಉಸಿರು ಕಟ್ಟುವ  ,  ಅನ್ಯಾಯದ ,  ಅಭದ್ರತೆಯ ,  ಆಕ್ರಮಣಕಾರರ , ಮೋಸಗಾರರ ಹಿಡಿತಕ್ಕೆ ಒಳಗಾಗಿದ್ದೇವೆ.  ಇವರೆಲ್ಲರಿಂದ  ಹೆದರಿ ಹೆದರಿ ಬದುಕುವುದಕ್ಕಿಂತ ದೇವರ ನ್ಯಾಯ ನಿರ್ಣಯದ ದಿನಕ್ಕೆ ಒಟ್ಟು ಕೊಡುವುದು ಉತ್ತಮ ಎಂದೆನಿಸುತ್ತದೆ .  ನಿಮಗೆ ಎನೆನಿಸುತ್ತದೆ. ಬರೆಯಿರಿ.

ವಂದನೆಗಳೊಂದಿಗೆ 
ಎ.ಟಿ.ನಾಗರಾಜ 

Why May 21, 2011 Is Judgment Day: Study #2; The Importance Of God's Time...

GOOD HANDWRITING TIPS

ಭಾನುವಾರ, ಮಾರ್ಚ್ 27, 2011

USE COLD WATER AFTER ONE HOUR AGAIN A HOUR

kashta andre enu ?

   ನನಗೆ ಕಷ್ಟ ಅಂದ್ರೆ ಏನು ? ಅಂತ ಯಾರಾದ್ರು ಕೇಳಿದ್ರೆ ಉತ್ರ ಕೊಡಲಿಕ್ಕೆ ಆಗುವುದಿಲ್ಲ ?  ಯಾಕೆಂದರೆ ನಾನು ಪಟ್ಟ ಶ್ರಮ ಜಗತ್ತಿನ ಮಹಾನ್ ವ್ಯಕ್ತಿಗಳು ಪಟ್ಟ ಶ್ರಮಕ್ಕಿಂತ,  ಕಷ್ಟಗಳಿಗಿಂತ ತುಂಬಾ ಸಣ್ಣದು !.  ದಿನಕ್ಕೆ ಹದಿನೈದು ಕೂಡು ಹದಿನೈದು ಕಿ.ಲೋ ಮೀಟರ್ ಸೈಕಲ್ ಹೊಡೆಯುತ್ತೇನೆ.  ನಮ್ಮ ಹಳ್ಳಿಯವರು ದಿನಕ್ಕೆ ಇದರ ಎರಡರಷ್ಟು ದೂರ ಸೈಕಲ್ ತುಳಿಯುತ್ತಾರೆ.!.      ಬೆಳಿಗ್ಗೆ ಬೇಗನೆ ಏಳುತ್ತೇನೆ.  ನನಗಿಂತ ಬೆಂಗಳೂರಿನ ಜನ ಮೊದಲ ಶಿಪ್ಟ್ ಗೆ ಹೋಗುವವರು,  ಪೇಪರ್ ನವರು,  ಹಾಲು ಹಾಗು ತರಕಾರಿ ತರಲು ಹೋಗುವವರು ಮುಂಜಾನೆ ಎದ್ದು ಹೋಗುತ್ತಾರೆ.!.  ನನಗೆ ದೂರವಾಣಿ ಗಳಲ್ಲಿ ಮಾತನಾಡಲು ತುಂಬಾ ತಲೆ ನೋವು ಬರುತ್ತದೆ.  ನಮ್ಮ ಹಳ್ಳಿಯವರು ದೂರವಾಣಿಯನ್ನು ಬಳಸುವುದೇ ಅಪರೂಪ ! ...................!  ಹೀಗೆ ಬರೆಯುತ್ತ ಹೋದರೆ ನಾನು ಪಟ್ಟ ಶ್ರಮ ಅಥವಾ ಕಷ್ಟ ಏನೂ ಅಲ್ಲ ಎಂದೇ ಹೇಳಬಹುದು .

ವಂದನೆಗಳೊಂದಿಗೆ 

ಎ.ಟಿ.ನಾಗರಾಜ
ನೆರಮಾರುಕಟ್ಟೆ ಪ್ರತಿನಿಧಿ ,  ವಕ್ತಿತ್ವ ವಿಕಾಸನ ತರಭೆತಿಗಾರ 
ನಿಮ್ಮ ಅನಿಸಿಕೆ ನಮಗೆ ಕಳುಹಿಸಿ sunnaturalflash@gmail.com

ಶನಿವಾರ, ಮಾರ್ಚ್ 26, 2011

Baby Vs Cobra!! How dare?????!!!!!!

PREPARE FOR CLASS ROOM STUDY

ellaa kashtagalige spandisabeke ?

ನಮ್ಮ ಮುಂದಿರುವ ಪ್ರಶ್ನೆ ಎಲ್ಲಾ ಕಷ್ಟಗಳಿಗೆ ಸ್ಪಂದಿಸಬೇಕೆ ?  ಎನ್ನುವುದು  ಯಾಕೆಂದರೆ ,  ಕೆಲವು ಕಷ್ಟಗಳನ್ನು ನಾವೇ ನಾವಾಗಿಯೇ ಸೃಷ್ಟಿಸಿಕೊಂಡು ಬೇರೆಯವರನ್ನು ಪೇಚಾಟಕ್ಕೆ ಸಿಲುಕಿಸಿ ನಾವೇ ದು;ಖಪಡುವುದು.  ಉದಾಹರಣೆಗೆ ಸಾರಾಯಿ ದುಡಿಯಬೇಡಿ ಅದು ಆರೋಗ್ಯಕ್ಕೆ ಹಾನಿಕಾರಿ,  ಬೀಡಿ ಸೇದಬೇಡಿ ಅದು ಆರೋಗ್ಯಕ್ಕೆ ಹಾನಿಕಾರಿ,  ಗುಟುಕ, ತಂಬಾಕು ತಿನ್ನಬೇಡಿ ಇದು ಆರೋಗ್ಯಕ್ಕೆ ಹಾನಿಕಾರಿ,  ಪೋಲಿ ತಿರುಗಬೇಡಿ,  ಸುಮ್ಮನೆ ಕಾಲ ವ್ಯರ್ಥ ಮಾಡಬೇಡಿ,  ಹೀಗೆ ಹೇಳುತ್ತಾ ಹೋದರೆ  ಲೆಕ್ಕ ವಿಲ್ಲದಷ್ಟು ಸಲಹೆಗಳು.  ಆದರೆ ನಾವು ಇವುಗಳನ್ನು ಕದ್ದು ಮುಚ್ಚಿ ಮಾಡುತ್ತೇವೆ.   ಆದರೆ ಇವುಗಳು ನಮಗೆ ಹಾನಿಯನ್ನು ಬಹಿರಂಗ ವಾಗಿಯೇ ಮಾಡುತ್ತವೆ.  ಇದರಿಂದ ನರಳುವವರಿಗೆ,  ಖಾಯಿಲೆ ಅನುಭವಿಸುವವರಿಗೆ ಸಹಾಯ ನೀಡಬೇಕೆ ಬೇಡವೇ ?.  ನನಗಂತೂ ಹೀಗೆ ಅನಿಸುತ್ತದೆ.  ಇಂಥ  ಮೂರ್ಖರಿಗೆ ಸಹಾಯ ಮಾಡಲೇ ಬಾರದು.  ಇವರು ತಾವು ಮಾಡಿದ ತಪ್ಪಿಗೆ ನೋವು , ನರಳುವಿಕೆ ಅನುಭವಿಸಲೇ ಬೇಕು.!


ವಂದನೆಗಳೊಂದಿಗೆ 

ಎ.ಟಿ.ನಾಗರಾಜ 



ಶುಕ್ರವಾರ, ಮಾರ್ಚ್ 25, 2011

preparence for bathing

bhaashaa baayi helida kathe

            ನಿನ್ನೆ ನಮ್ಮ ಪರಿಚಯಸ್ಥ ಭಾಷಾ ಬಾಯಿ ಒಂದು ಕಥೆ ಹೇಳಿದರು.  ಒಮ್ಮೆ ನಗರ ಪ್ರದೇಶದ ಉಪನ್ಯಾಶಕರಿಬ್ಬರೂ ಒಂದು ಗ್ರಾಮೀಣ ಪ್ರದೇಶಕ್ಕೆ ಕಾರಿನಲ್ಲಿ ಹೋಗುತ್ತಾರೆ.  ಆ ವೇಳೆ ಬೇಸಿಗೆ ಕಾಲ ಆಗಿರುವುದರಿಂದ ಇವರಿಗೆ ನೀರಡಿಕೆ ಆಗುತ್ತದೆ.  ಹಳ್ಳಿಗಾಡಿನಲ್ಲಿ ರಸ್ತೆಗೆ ಹತ್ತಿರವಾಗಿರುವ ಮನೆಗೆ ಹೋಗಿ ನೀರು ಕೇಳುತ್ತಾರೆ.  ಆ ಮನೆಯವರು ಒಂದು ಚೆಂಬು ನೀರು ಒಬ್ಬೊಬ್ಬರಿಗೆ ಕೊಟ್ಟು ಮೊದಲು ಮುಖ ತೊಳೆಯಿರಿ ನಂತರ ಕುಡಿಯಲು ಕೊಡುತ್ತೇವೆ ಎಂದರು.  ಇವರು ಮೊದಲು ಮುಖ ತೊಳೆದರು.  ನಂತರ ಆ ಹಳ್ಳಿಯವನ ಮನೆಯ ಒಳಗಡೆ ಹೋದರು.  ಹಳ್ಳಿಯವರು ಇವರಿಗೆ ಕೂರಲು ಚಾಪೆ ಹಾಕಿ ,  ಕುಡಿಯಲು ಮಜ್ಜಿಗೆ ಕೊಟ್ಟರು.  ಅವರ ಮನೆಯಲ್ಲಿ ಸುಮಾರು ಐದು ಗಂಡು ಮಕ್ಕಳನ್ನು ನೋಡಿದರು.  ಈ ಮಕ್ಕಳನ್ನು ಶಾಲೆಗೇ ಕಳುಹಿಸಿಲ್ಲ ಯಾಕೆ ಎಂದು ಕೇಳಿದರು.  ಅದಕ್ಕೆ ಹಳ್ಳಿಯವರು ಕೊಟ್ಟ ಉತ್ತರ ಸೋಜಿಗವಾಗಿತ್ತು.  "ಶಾಲೆಗೇ ಹೋಗಿ ವಿಧ್ಯವನ್ತರಾದರೆ ಇವರು ಸಮಾಜಕ್ಕೆ ತೊಂದರೆ ಮಾಡುತ್ತಾರೆ,  ಓದದೆ ಇದ್ದರೆ ಮನೆಯಲ್ಲಿರುವ ಕೆಲಸ ಮಾಡಿಕೊಂಡು ಆರಾಮವಾಗಿ ಯಾರ ತಂಟೆಗೂ ಹೋಗದೆ ತಮ್ಮಷ್ಟಕ್ಕೆ ತಾವೂ ಇರುತ್ತಾರೆ.". ಎಂದರಂತೆ .  ಇದನ್ನು ಕೇಳಿದ ಉಪನ್ಯಾಷಕರಿಗೆ ಏನೋ  ಹಳ್ಳಿಯವರು ಹೇಳುತ್ತಿರುವುದು ಸರಿ ಎನಿಸಿ ಬಂದರಂತೆ.!

ವಂದನೆಗಳೊಂದಿಗೆ 

ಎ.ಟಿ.ನಾಗರಾಜ

ಗುರುವಾರ, ಮಾರ್ಚ್ 24, 2011

IMPORTENSE OF TIME TABLE

ಕನ್ನಡ ವಿದ್ಯಾರ್ಥಿಗಳಿಗೆ ಕೊಟ್ಟ ಕಾಣಿಕೆ

ಒಬ್ಬ ಓದುಗರು ಮೊನ್ನೆ ತಾನೇ ದೂರವಾಣಿ ಮೂಲಕ ನೀವು ನಿಮ್ಮ ಸ್ಥಳೀಯ ಜನರಿಗೆ ಏನೂ ಕಾಣಿಕೆಯನ್ನು ಕೊಟ್ಟಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು ನೆಟ್ ನಾಗ ಲೇಖನಗಳನ್ನು ಹಾಗೂ ಯು ಟುಬ್ ನಲ್ಲಿ ನಾನು ಮಾಡಿದ ವಿಡಿಯೋ ಲೇಖನಗಳನ್ನು ತೋರಿಸಿ ಇದುವೇ ಕನ್ನಡ ನಾಡಿನ ವಿದ್ಯಾರ್ಥಿಗಳಿಗೆ ನಾನು ಕೊಟ್ಟ ಕಾಣಿಕೆ ಎಂದೆ. ನಿಮ್ಮ ಮುಂದೆ ಲೇಖನಗಳು ಹಾಗೂ ವಿಡಿಯೋ ಚಿತ್ರೀಕರಣ ಇದೆ . ಉಪಯೋಗಿಸಿಕೊಳ್ಳುವುದು ನಿಮಗೆ ಬಿಟ್ಟದ್ದು.

ವಂದನೆಗಳೊಂದಿಗೆ

ಎ.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೆತಿಗಾರ, ನೇರ ಮಾರುಕಟ್ಟೆ ಪ್ರತಿನಿಧಿ

ಬುಧವಾರ, ಮಾರ್ಚ್ 23, 2011

Test

TIME TABLE IS VERY IMPORTENT!

ದೇವರ ನಾಡಿನಲ್ಲಿ ನಾನು ಒಬ್ಬ ಪ್ರಾಮಾಣಿಕ ಕೆಲಸಗಾರ !

ಎಷ್ಟೋ ಸಲ ನನ್ನ ಓದುಗರು ಕೇಳುವುದುಂಟು ನಿಮ್ಮ ಈ ಪ್ರಾಮಾಣಿಕೆಯ ಹಿಂದಿನ ರಹಸ್ಯ, ಗುಟ್ಟು ಏನೂ ? ಎಂದು . ಅದಕ್ಕೆ ನನ್ನ ಉತ್ತರ ಈ ಭೂಮಿ ಎನ್ನುವುದು ದೇವರ ಕಾರ್ಯಗಾರ , ಇಲ್ಲಿನ ಎಲ್ಲಾ ಜೀವಿಗಳು (ಮನುಷ್ಯನು ಸೇರಿದಂತೆ ) ಕೆಲಸಗಾರರು. ಇಲ್ಲಿ ಪ್ರತಿಯೊಂದು ಜೀವಿಯೂ ತನ್ನ ಜೀವಿತಕ್ಕಾಗಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು . ಅವರವರ ಪ್ರಾಮಾಣಿತ್ವಕ್ಕಾಗಿ ಅವರವರಿಗೆ ಆದಾಯ ಸಂದಾಯ ವಾಗುತ್ತದೆ. ಇಲ್ಲಿ ಯಾರೂ ಹೆಚ್ಚು ತಾಳ್ಮೆ, ಪ್ರಾಮಾಣಿಕತೆ ಹೊಂದಿರುತ್ತಾರೋ ಅವರಿಗೆ ಆದಾಯ ಜಾಸ್ತಿ !. ಇದುವೇ ನನ್ನ ಕೆಲಸದ ಗುಟ್ಟು ಎಂದು ಉತ್ತರ ಕೊಡುತ್ತೇನೆ ಅಷ್ಟೇ !

ವಂದನೆಗಳೊಂದಿಗೆ

ಎ.ಟಿ.ನಾಗರಾಜ
ನೇರಮಾರುಕಟ್ಟೆ ಪ್ರತಿನಿಧಿ , ವ್ಯಕ್ತಿತ್ವ ವಿಕಾಸನ ತರಭೆತಿಗಾರ

ಮಂಗಳವಾರ, ಮಾರ್ಚ್ 22, 2011

FIRST GIVE RESPECT TO GOD,FATHER, MOTHER AND OTHER PEOPLE

ಒಂದು ದೊಡ್ಡ ಆಘಾತ ಕೇವಲ ಹತ್ತು ವರ್ಷಗಳಲ್ಲಿ !

ಈಗಾಗಲೇ ನಾವು ನೋಡಿದ್ದೇವೆ ಬ್ಯಾಂಕಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧಿಸಲು ಹೋಗಿ ಆಘಾತಕ್ಕೆ ಒಳಗಾಗಿ ಒಟ್ಟು ಆರ್ಥಿಕ ವ್ಯವಸ್ಥೆ ಕೆಳಮಟ್ಟಕ್ಕೆ ಇಳಿದದ್ದು. ಅಂತಹದ್ದೇ ಒಂದು ಆಘಾತ ಭೋಧನೆ ಕ್ಷೇತ್ರದಲ್ಲಿರುವವರಿಗೂ ಆಗಬಹುದು. ನಮ್ಮಲ್ಲಿ ಈಗಾಗಲೇ ಮುಂದುವರಿದಿರುವ ತಂತ್ರಜ್ಞಾನದಿಂದ ಸಾವಿರಾರು ಜನ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದು. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಈಗಾಗಲೇ ನೆಟ್ ವರ್ಕ್ ಮಾರ್ಕೆಟಿಂಗ್ ಇಡಿ ವಿಶ್ವವನ್ನು ವ್ಯಾಪಿಸಿರುವುದು. ವ್ಯಾಪಿಸುತ್ತಿರುವುದು. ಈಗಿರುವ ತಂತ್ರಜ್ಞಾನದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉನ್ನತ ಗುಣಮಟ್ಟದ ಶಿಕ್ಷಣವನ್ನು ಕೊಡಲು ಸಾಧ್ಯ !
ವಂದನೆಗಳೊಂದಿಗೆ

ಎ.ಟಿ.ನಾಗರಾಜ

ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ಪ್ರತಿನಿಧಿ

ಸೋಮವಾರ, ಮಾರ್ಚ್ 21, 2011

ದುಡಿದಾತನ ದುಡ್ಡು ನುಡಿದಾತ ತಿಂದ !

ಪ್ರಚಲಿತದಲ್ಲಿ ನೋಡುತ್ತಿರುತ್ತೇವೆ ಹಲವಾರು ಜನರಿಗೆ ತಾವು ಮಾಡುವ ಕೆಲಸ ತುಂಬಾ ಜಾಗರೂಕತೆಯಿಂದ ಅಚ್ಚು ಕಟ್ಟಾಗಿ ಮಾಡುತ್ತಾರೆ ಆದರೆ ಅವರಿಗೆ ತಮ್ಮ ಕೌಶಲ್ಯದ ಬಗ್ಗೆ ನಾಲ್ಕು ಮಾತನಾಡಲು ಬರುವುದಿಲ್ಲ. ಆದರೆ ಎಷ್ಟೋ ಜನ ಕೇವಲ ಇವರು ಮಾಡಿದ ಕೆಲಸವನ್ನು ಜನರ ಮುಂದೆ ಹೋಗಲಿ ಹೋಗಲಿ ಹಣದ ಕಂತೆಯನ್ನೇ ಸಂಗ್ರಹಿಸುತ್ತಾರೆ . ಇದೆ ಸಾಮಾನ್ಯ ಜ್ಞಾನಕ್ಕೂ , ವಿಶೇಷ ಜ್ಞಾನಕ್ಕೂ ಇರುವ ವ್ಯತ್ಯಾಸ !

ವಂದನೆಗಳೊಂದಿಗೆ

ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ

LESSONS NOT UNDERSTANDING WHAT CAN I DO ?

ಶನಿವಾರ, ಮಾರ್ಚ್ 19, 2011

TOP 10 MOST EXPENSIVE ACCIDENTS OF THE WORLD.

youth mind as for jog falls

ಅವಮಾನ ಮಾಡಿದವರಿಗೆ ತಿರುಗಿ ಅವಮಾನ ಮಾಡಲು ಹೋಗಬೇಡಿ , ನೀವು ಅವರಿಗಿಂತ ಎತ್ತರವಾಗಿ ಬೆಳೆದು ತೋರಿಸಿ

ನೀವು ಮೂಖರಿರಬಹುದು ಪರವಾಗಿಲ್ಲ ನನಗೇನೂ ತೊಂದರೆ ಇಲ್ಲ. ನಿಮ್ಮ ತೊಂದರೆ ಹೇಳಿಕೊಳ್ಳುವುದಕ್ಕೆ ನನ್ನಲ್ಲಿ ನಿಮಗೆ ಕೀಳರಿಮೆ ಇರಬಹುದು ತೊಂದರೆ ಇಲ್ಲ. ಆದರೆ ನಾನು ಹೇಳುವ ಪ್ರತಿಯೊಂದು ವಿಷಯವು ನಾನು ಹೇಳಿದೆಂದು, ನಾನೇ ವಿಶ್ವದಲ್ಲಿ ಅವಮಾನ ಪಟ್ಟವನ್ನು, ನಾನೇ ಹೆಚ್ಚು ಕಷ್ಟವನ್ನು ಪಟ್ಟವನೆಂದು, ನಾನು ವಿಷಯವನ್ನು ಸ್ವತ; ಸೃಷ್ಟಿಸಿದವನೆಂದು ಹೇಳಲಾರೆ. ಈಗಾಗಲೇ ನಮಗಿಂತ ಅವಮಾನ ಪಟ್ಟ ಸಹಸ್ರಾರು ಜನ ಭೂಮಿಯಲ್ಲಿ ಹುಟ್ಟಿ , ಸಾಧನೆ ಸಾಧಿಸಿ ಹೋಗಿದ್ದಾರೆ. ಮಹಾತ್ಮಗಾಂಧಿ , ಬಿ.ಆರ್ ,ಅಮ್ಬೆಡ್ಕಾರ್ , ಯೇಸು ಕ್ರಿಸ್ತ, ಮೊಹಮ್ಮದ್ ಪೈಗಂಬರ್ ಮೊದಲಾದವರ ಜೀವನವನ್ನು ಇಣುಕಿನೋಡಿದರೆ ನಾವು ಪಟ್ಟ ಅವಮಾನ , ಕಷ್ಟ ಏನೂ ಅಲ್ಲ.

ಆದರೆ ನೀವು ನಿಮ್ಮ ಅವಮಾನಕ್ಕಾಗಿ ಕೊರಗದಿರಿ. ನಗಿ ಮನಸ್ಸು ಬಿಚ್ಚಿ ನಗಿ, ಈಗ ನೀವು ಏನನ್ನು ಬೇಕಾದರೂಸಾಧಿಸಬಹುದು.ಸಾಧನೆ ನಿಮ್ಮ ಕೈಯಲ್ಲಿದೆ. ನಿಮ್ಮನ್ನು ಅವಮಾನಿಸುವುದು ಬೇರೆಯವರ ಕೈಯಲ್ಲಿದೆ .

ವಂದನೆಗಳೊಂದಿಗೆ

.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೆತಿಗಾರ ಮತ್ತು ನೇರಮಾರುಕಟ್ಟೆ ಪ್ರತಿನಿಧಿ

ದೇವರ ಭೂಮಿ ಇಲ್ಲಿ ಬೂಮಿಗಾಗಿ ಹೊಡೆದಾಟ ವೇಕೆ ?

ಈ ಭೂಮಿ ದೇವನದ್ದು . ಆತ ತನ್ನ ಎಲ್ಲ ವಸ್ತುಗಳನ್ನು ನಮಗಾಗಿ ಕೊಟ್ಟ. ಆದರೂ ನಾವು ಕೊಟ್ಟವನ ಬಗ್ಗೆ ಚಿಂತಿಸದೆ ಬಡಿದಾಡುತ್ತೇವೆ ಏಕೆ ?

ವಂದನೆಗಳೊಂದಿಗೆ

ಎ.ಟಿ.ನಾಗರಾಜ

ಶುಕ್ರವಾರ, ಮಾರ್ಚ್ 18, 2011

student . student, student

Tokyo City Vibes

Himalaya: First View of Everest

【駅撮5】500系「こだま」×500系「こだま」×N700系「のぞみ」

ಅಣ್ಣ ಕುಡುಕ , ತಮ್ಮ ಕಾಮುಕ

ಕೆಲವು ಕುಟುಂಬಗಳಲ್ಲಿ ತಂದೆ ತೀರಿ ಹೋದ ಬಳಿಕ ಅಣ್ಣ ನಾದವನು ಮನೆಯ ಯಜಮಾನಿಕೆ ಯನ್ನು ನಿಬಾಯಿಸಿಕೊಂಡು ಹೋಗುವುದುಂಟು . ಅಣ್ಣ ದಾರಿ ತಪ್ಪಿದರೆ ತಮ್ಮ ಯಜಮಾನಿಕೆ , ಮನೆಯಲ್ಲಿ ಆಗುವ ಶುಭ ಕಾರ್ಯಗಳನ್ನು ಮಾಡುವುದುಂಟು . ಆದರೆ ಅಣ್ಣ ಕುಡುಕನಾಗಿ ತಮ್ಮ ಮನೆಯ ಸದಸ್ಯರನ್ನೇ ಕಾಮಿಸತೊಡಗಿದರೆ ಮನೆಯಲ್ಲಿ ಇದ್ದವರು ಯಾರಿಗೆ ದೂರಬೇಕು. ಏನು ಮಾಡಬೇಕು. ಇದು ವಾಸ್ತವ ಸ್ಥಿತಿಗೆ ಅನ್ವಹಿಸುವುದಿಲ್ಲವೇ? ಯೋಚಿಸಿ ನೋಡಿ.

ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಬ್ಹೇತಿಗಾರ

ಗುರುವಾರ, ಮಾರ್ಚ್ 17, 2011

consentration !consentration !consentration!

ಯುವಕನೊಬ್ಬನ ಕರುಣಾ ಜನಕ ನೈಜ ಕಥೆ , ಬಾಳಾ ವ್ಯಥೆ !

ನನಗಂತೂ ವಿಧ್ಯಾರ್ಥಿಗಳು ,ಯುವಕರು ಎಂದರೆ ತುಂಬಾ ಇಷ್ಟ. ಹಾಗೆಯೇ ನನ್ನನ್ನು ತುಂಬಾ ಪ್ರೀತಿಸುವ ವಿದ್ಯಾರ್ಥಿಗಳು ,ಯುವಕ -ಯುವತಿಯರಿಗೆನೂ ಕಮ್ಮಿಯಿಲ್ಲ . ಮೊನ್ನೆ ಒಬ್ಬ ಹುಡುಗ ಸಿಕ್ಕಿದ್ದ , ಆತ ತೆಳ್ಳಗೆ ಇದ್ದು, ಏನೋ ಆತನ ಮನಸ್ಸಿನಲ್ಲಿ ಘಾಡ
ನಿರಾಸೆ -ದು; ತುಂಬಿತ್ತು. ಆತನನ್ನು ಆತ್ಮೀಯ ವಾಗಿ ಮಾತನಾಡಿಸಿದೆ. ಆತ ಬಂದ ಊರು , ಮಾಡಿದ ಕೆಲಸ , ಈಗ ಮಾಡುತ್ತಿರುವ ಕೆಲಸ ಎಲ್ಲ ವಿಚಾರಿಸಿದೆ. ಕೊನೆಗೆ ಆತ ಕಲಿತ ಕೆಲಸ ಟ್ರಾಕ್ಟರ್ ಓಡಿಸುವುದು . ದ್ವಿಚಕ್ರ ವಾಹನಗಳನ್ನು ಜೋಡಿಸುವುದು ಆತನಿಗೆ ಗೊತ್ತಿತ್ತು. ಆತ ಇಷ್ಟವಿಲ್ಲದೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಆತ ಏನಕ್ಕೆ ಕೆಲಸ ಮಾಡುತ್ತಾನೆ ಎಂದು ಆತನನ್ನೇ ಕೇಳಿದಾಗ ನನಗೆ ತುಂಬಾ ಬೇಸರವಾಯಿತು. "ನಮ್ಮ ದಾಯಾದಿಗಳು ಹೊಟ್ಟೆ ಕಿಚ್ಚಿನಿಂದ ನನ್ನ ಮೇಲೆ ಕೇಸ್ ಹಾಕಿದ್ದಾರೆ , ಪೋಲಿಸ್ ನನ್ನನ್ನು ಹುಡುಕುವ ನಾಟಕ ವಾಡುತ್ತಿದ್ದಾರೆ. ಒಬ್ಬ ಒಳ್ಳೆ ವಯಸ್ಸಾದ ಪೋಲಿಷ್ ಹಿರಿಯ ಅಧಿಕಾರಿ ನೀನು ಬೇರೆ ಊರಲ್ಲಿ ಹೋಗಿ ಬದುಕು . ಇಲ್ಲಿ ನಿನ್ನ ಮೇಲೆ ತುಂಬಾ ಕೇಡನ್ನು ಬಯಸುವವರು ಇದ್ದಾರೆ. ನೀನು ಹುಡುಗ ನಾವು ನಿನ್ನ ಭವಿಷ್ಯಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಕೋರ್ಟು ,ಕಚೇರಿ ಕೆಲಸ ಕೆಲಸವಿಲ್ಲದಿದ್ದವರಿಗೆ ಮಾತ್ರ ಎಂದು ಬುದ್ಧಿ ವಾದ ಹೇಳಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ." ಎಂದ ! ನನಗೆ ಅನಿಸಿತು. ಪಟ್ಟಣಗಳಲ್ಲಿ ಮನಸ್ಸಿಲ್ಲದೆ ಕೆಲಸ ಮಾಡುವ ಹುಡುಗರ ಹಿಂದೆ ನೋವಿನ ಕಥೆ ಇದೆ. ಪೋಲಿಷ್ ಅಧಿಕಾರಿಗಳು ಕೂಡ ಮುಗ್ದ ಯುವಕರ ನೋವನ್ನು ಅನುಭವಿಸಿಕೊಂಡು ತಾಳ್ಮೆ ಯಿಂದ ಬದುಕುವಂತೆ ಮಾಡುತ್ತಾರಲ್ಲ . ತಾಯಿ ಹೃದಯದ ಎಲ್ಲ ಪೋಲಿಷ್ ಅಧಿಕಾರಿಗೆ ನಾನು ಚಿರ ಋಣಿ .

ವಂದನೆಗಳೊಂದಿಗೆ


.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ

ಬುಧವಾರ, ಮಾರ್ಚ್ 16, 2011

Stalin - Handicapped Kids Running Race

Breakdancing Of Disabled People!!!

USE PEACE OF MIND

ಶ್ರೀಗಂಧ ಕ್ಕೆ ನೊಣಗಳು ಮುತ್ತುವುದುಕಡಿಮೆ ಯಾಕೆ ?

ತುಂಬಾ ಯೋಚಿಸಿದ್ದೇನೆ ಆದರೂ ಉತ್ತರ ಹೊಳೆದಿಲ್ಲ . ಒಂದು ವೇಳೆ ನಿಮಗೆ ಉತ್ತರ ಗೊತ್ತಿದ್ದರೆ ನನಗೆ ತಿಳಿಸಿ. ನೀವು ಯಾವುದೇ ದೇವರ ಪೂಜೆ ಮಾಡುವಾಗ ಶ್ರೀಗಂಧ ಉಪಯೋಗಿಸಿಯೇ ಉಪಯೋಗಿಸುತ್ತೀರಿ. ಆದರೆ ಅದಕ್ಕೆ ನೊಣಗಳು ಮುತ್ತುವುದು ತುಂಬಾ ವಿರಳ. ಅದೇ ಹೇಸಿಗೆಗೆ ನೊಣಗಳು ಜಾಸ್ತಿ ಮುತ್ತುತ್ತವೆ. ಅದರಿಂದ ಖಾಯಿಲೆ ಬರುತ್ತದೆ. ಅದೇ ರೀತಿ ಒಂದು ಒಳ್ಳೆಯ ವಿಚಾರಕ್ಕೆ ಜನ ಬಂದು ಸೇರುವುದು ತುಂಬಾ ಕಡಿಮೆ. ಆದರೆ ಯಾವುದಾದರೂ ಕೆಟ್ಟ ವಿಚಾರಕ್ಕೆ ಜನರು ಬಂದು ಸೇರುವುದು ಜಾಸ್ತಿ. ಮನೆ ಮುರಿಯಲು , ಗಂಡ ಹೆಂಡರ ಬೇರೆ ಮಾಡಲು, ಅಪ್ಪ ಮಕ್ಕಳಿಗೆ ಹೊಡೆದಾಟಕ್ಕೆ ಹಚ್ಚಿ ಮೋಜು ಮಾಡಲು, ಸುಳ್ಳು ಅಪವಾದ ಕೊಟ್ಟು ಪೋಲಿಸ್ ಸ್ಟೇಶನ್ ಗೆ ಕಳುಹಿಸಲು ಮುಂದಾಗುವವರು ಜಾಸ್ತಿ . ನನಗಂತೂ ಇದಕ್ಕೆ ಉತ್ತರ ಗೊತ್ತಿಲ್ಲ . ನಿಮಗೆ ಗೊತ್ತಿದ್ದರೆ ತಿಳಿಸಿ.

ವಂದನೆಗಳೊಂದಿಗೆ

ಎ.ಟಿ.ನಾಗರಾಜ

ಮಂಗಳವಾರ, ಮಾರ್ಚ್ 15, 2011

LOVE IS VERY IMPORTENT

ಕಣ್ಣೀರು ಮತ್ತು ಹೆಣ್ಣು

ಓ ಗಂಡೆ ನಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಸಾಕು ನಮ್ಮ ನಾಲ್ಕು ಕಣ್ಣೀರು !
-ಮಧು ಮಾಲ, ಜಪಾನ್

ವಂದನೆಗಳೊಂದಿಗೆ

ಎ.ಟಿ.ನಾಗರಾಜ

ಸೋಮವಾರ, ಮಾರ್ಚ್ 14, 2011

oh. consentration i depend upon your up and down

ವಿರೋದಾಭ್ಯಾಸ !

ನನಗೆ ಇವತ್ತಿಗೂ ಸ್ವಲ್ಪ ಗೊಂದಲ ವೆಂದರೆ ಮಕ್ಕಳು ಚಿಕ್ಕವರಾಗಿದ್ದಾಗ ತಾಯಿ ತಂದೆ ಯರ ಹತ್ತಿರವಿದ್ದೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹತ್ತಿರವಾಗುತ್ತಾರೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಕೆಲವರು ಅದರಲ್ಲೂ ವಿಧ್ಯಾವನ್ತರಲ್ಲಿ ಕಾಣಬಹುದಾದ ಒಂದು ನ್ಯೂನ್ಯತೆ ಎಂದರೆ ತಂದೆ ತಾಯಿಯರು ಹತ್ತಿರವಿರುತ್ತಾರೆ ದೈಹಿಕವಾಗಿ ! ಮಾನಸಿಕವಾಗಿ ದೂರವಿರುತ್ತಾರೆ.
ಕೆಲವು ತಂದೆ ತಾಯಿಗಳು ದೈಹಿಕವಾಗಿ ದೂರವಿರುತ್ತಾರೆ. ಮಾನಸಿಕವಾಗಿ ಹತ್ತಿರವಿರುತ್ತಾರೆ. !. ಇದರ ಬಗ್ಗೆ ನೀವೇನೆನ್ನುತ್ತೀರಿ.

ವಂದನೆಗಳೊಂದಿಗೆ

.ಟಿ.ನಾಗರಾಜ

ಭಾನುವಾರ, ಮಾರ್ಚ್ 13, 2011

BURNING DESIRE IS VERY IMPORTENT

ಭಾರತದಂತಹ ದೊಡ್ಡ ರಾಷ್ಟದಲ್ಲಿ ಸೋಮಾರಿಗಳ ಮಾತು ಕೇಳಬೇಕೆ. ? ಸೋಮಾರಿಗಳನ್ನು ನೋಡಿ ಕಲಿಯಬೇಕೆ ?

ಒಮ್ಮೊಮ್ಮೆ ನನಗೆ ಒಂದು ರೀತಿಯ ರೋಷ ಉಕ್ಕುತ್ತದೆ. ಕೆಲಸ ಮಾಡುವವರನ್ನು ನೋಡಿ ಅಲ್ಲ. ಕೆಲಸಕ್ಕೆ ಹೇಳುವವರನ್ನು ಕೇಳಿ. ಯಾಕೆಂದರೆ ಒಂದು ವರ್ಗದ ಜನರಿದ್ದಾರೆ ಅವರಿಗೆ ಬೇರೆಯವರಿಗೆ ಉಪದೇಶ ಮಾಡಿ ತಾವು ಐಶಾರಾಮದ ಜೇವನ ನಡೆಸುವುದು. ಮತ್ತೊಂದು ವರ್ಗ ತಾವು ಹೊಟ್ಟೆ ಪಾಡಿಗೆ ಭೋದನೆ ಮಾಡುತ್ತಾ ಏನೂ ಬೇರೆ ಕೆಲಸ ಮಾಡದೆ ಜೀವನ ಸಾಗಿಸುವವರು. ಎರಡು ವರ್ಗದವರಿಂದ ಸಮಾಜಕ್ಕೆ ಒಳ್ಳೆಯದಕ್ಕಿಂತ ಹಾನಿ ಜಾಸ್ತಿ. ಯಾಕೆಂದರೆ ಸೋಮಾರಿಗಳಿಂದ ಏನೂ ತಾನೇ ಸಾಧ್ಯವಾದೀತು.?
ವಂದನೆಗಳೊಂದಿಗೆ

.ಟಿ.ನಾಗರಾಜ

ಶನಿವಾರ, ಮಾರ್ಚ್ 12, 2011

how do com headcheque?

ನಂಗೆ ಕ್ರಿಕೆಟ್ ಅಂದ್ರೆ ಬೋರ್ !

ಮೊದಲಿನಿಂದಲೂ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ನನಗೆ ಕ್ರಿಕೆಟ್ ಅಂದರೆ ಹೆಚ್ಚೇನೂ ಮೋಜಿನ ಆಟವಲ್ಲ. ಯಾವತ್ತೂ ಕ್ರಿಕೆಟ್ ಬಾಜಿ ಹಗರಣ ನಡೆಯಿತೋ ಅಂದೇ ಅಲ್ಪ ಸ್ವಲ್ಪ ಭರವಸೆ ಇದ್ದ ಕ್ರಿಕೆಟ್ ವ್ಯಾಮೋಹ ದೂರವಾಯಿತು.

ಯಾರಾದರೂ ಸಿನಿಮಾಕ್ಕೆ ಹೋಗೋಣ ಎಂದರೆ ನಾನು ಆರಾಮ ವಾಗಿ ಸಪ್ನಾ ಬುಕ್ ಶಾಪ್ ಗೆ ಹೋಗಿ ಬರುತ್ತೇನೆ. ನೀವು ಸಿನಿಮ ನೋಡಿಕೊಂಡು ಬಂದು ನನಗೆ ಕಾಲ್ ಮಾಡಿ ಬರುತ್ತೇನೆ ಎನ್ನುತ್ತೇನೆ.

ಯಾರಾದರೂ ಊಟಕ್ಕೆ ಬನ್ನಿ ನಮ್ಮ ಮನೆಯಲ್ಲಿ ಕಾರ್ಯಕ್ರಮ ಇದೆ ಎಂದರೆ ನಮ್ಮ ಮನೆಯಲ್ಲಿ ಅಕ್ಕ ನನಗಾಗಿ ಅಡಿಗೆ ಮಾಡಿ ಊಟಕ್ಕೆ ಕಾಯುತ್ತಿದ್ದಾಳೆ ಎನ್ನುತ್ತೇನೆ.

ಹೀಗೆ ಯಾಕೆ ಆದೆ ನನಗೆ ಗೊತ್ತಿಲ್ಲ. !

ವಂದನೆಗಳೊಂದಿಗೆ

.ಟಿ.ನಾಗರಾಜ

ಶುಕ್ರವಾರ, ಮಾರ್ಚ್ 11, 2011

one time one subject

ಲೋಕವನ್ನು ತಲ್ಲಣಿಸಿದ ಜಾಪಾನ್ ಸುನಾಮಿ !

ಮನುಷ್ಯ ಇರುವಾಗ ಚೆನ್ನಾಗಿ ಇರಬೇಕು. ತಾಯಿ ಬಂದು ಯಾವಾಗ ಮಗುವನ್ನು ಆಟದಿಂದ ಕರೆದು ಕೊಂಡು ಹೋಗುತ್ತಾಳೋ ಗೊತ್ತಿಲ್ಲ. ನಾವು ನಮ್ಮ ಬಗ್ಗೆ ಯೋಚಿಸಿದರೆ ನಾವ್ಯಾರೆಂದು ಗೊತ್ತಿಲ್ಲ. ಒಂದು ರೀತಿಯ ಅಸಮಾಧಾನ , ಗೊಂದಲ,ದು;ಖ ದಿಂದ ಇಂದು ನಾವೆಲ್ಲರೂ ಇದ್ದೇವೆ. ನಾವೆಲ್ಲರೂ ಜಪಾನಿಗೆ ಹೋಗಲು ಆಗದಿದ್ದರೂ ಮನಸ್ಸಿನಲ್ಲಿ ಯಾದರೂ ದೇವರಲ್ಲಿ ಇರುವವರನ್ನಾದರೂ ಬದುಕಲು ಬಿಡು. ಅವರ ಪಾಪವನ್ನು ಕ್ಷಮಿಸು, ಎಂದು ಬೇಡೋ ಣವೇ

ವಂದನೆಗಳೊಂದಿಗೆ

ಎ.ಟಿ.ನಾಗರಾಜ

ಗುರುವಾರ, ಮಾರ್ಚ್ 10, 2011

mind control your self

ಎರಡೂ ಕಾಲುಗಳಿಲ್ಲ !ಎರಡು ಕೈಗಳಿಲ್ಲ ದ ವ್ಯಕ್ತಿಯ ಸಾಧನೆ ಮೆಚ್ಚುವಂತದ್ದು !

ಇಂದು ನಾನು ಆಯ್ಕೆ ಮಾಡಿ ಪೋಸ್ಟ್ ಮಾಡಿದ ವಿಡಿಯೋ ದಲ್ಲಿ ಒಬ್ಬ ಕಾಲು ,ಕೈಗಳಿಲ್ಲದ ವ್ಯಕ್ತಿ ನೀರಿನಲ್ಲಿ ಈಜುವುದು , ದುಮುಕುವುದು , ಹಾಡುವುದು , ಮುಂತಾದ ಕೆಲಸಗಳನ್ನು ಮಾಡುತ್ತಿದ್ದ. ನಮ್ಮ ವಿಶ್ವಕ್ಕೆ ಹಾಗೂ ಅವನಿಗೆ ಹೋಲಿಕೆ ಮಾಡಿ ನೋಡಿದರೆ ನಮ್ಮಲ್ಲಿ ಕೈ ಕಾಲುಗಳಿರುವ ಸೋಮಾರಿ ಜನರಿಗಿಂತ , ಕೈ ಕಾಲುಗಳಿಲ್ಲದ ವ್ಯಕ್ತಿ ಮಾಡಿದ ಸಾಧನೆ ದೊಡ್ಡದು.! ನಿಮ್ಮ ಅನಿಸಿಕೆ , ಅಭಿಪ್ರಾಯ ವಿಡಿಯೋ ನೋಡಿ ಬರೆಯಿರಿ.

ವಂದನೆಗಳೊಂದಿಗೆ

.ಟಿ.ನಾಗರಾಜ

ಬುಧವಾರ, ಮಾರ್ಚ್ 9, 2011

LOOK AT YOURSELF AFTER WATCHING THIS.mp4

CONSENTRATION TO ONLY ONE SUBJECT ONE TIME

I Love Living Life. I Am Happy.

Inspirational Talk - Life Without Limits | No Arms | No Limbs | No Worri...

ಅಂಗವಿಕಲತೆ ಹಾಗೂ ಬಡತನ ಇವುಗಳು ದೇವರು ಕೊಟ್ಟ ಶಾಪಗಳಲ್ಲ , ವರಗಳು !

ಇಂದು ನಾವು ಮಾಡಿದ ಹಲವಾರು ವಿಡಿಯೋ ಪೋಸ್ಟ್ ಗಳಿಂದ ತಿಳಿದುಬರುವುದು ಏನೆಂದರೆ "ಅಂಗವಿಕಲತೆ ಎನ್ನುವುದು ಹಾಗೂ ಬಡತನ ವೆನ್ನುವುದು ದೇವರು ಕೊಟ್ಟ ವರಗಳು , ಶಾಪಗಳಲ್ಲ" ಎನ್ನುವುದು ಸ್ಪಷ್ಟವಾಗಿದೆ. ಹೇರಳವಾದ ಸಾಕ್ಷ್ಯಾಧಾರಗಳು ನಿಮ್ಮ ಮುಂದೆ ಇವೆ. ರೀತಿ ಒಂದು ಲೆಕ್ಕ ದಲ್ಲಿ ನೋಡುವುದಾದರೆ ಜೀವನದಲ್ಲಿ ಪ್ರಯತ್ನ ಪಡದೆ ಇರುವವರನ್ನು ಅಂಗವಿಕಲರೆಂದು ಕರೆಯಬಹುದು ಎಂದೆನಿಸುತ್ತದೆ. ನಿಮ್ಮ ಉತ್ತರ ಬರೆದು ತಿಳಿಸಿ.

ವಂದನೆಗಳೊಂದಿಗೆ

.ಟಿ.ನಾಗರಾಜ
ನೇರಮಾರುಕಟ್ಟೆ ಪ್ರತಿನಿಧಿ , ಹಾಗೂ ವ್ಯಕ್ತಿತ್ವ ವಿಕಸನ ತರಭೇತಿಧಾರ

ಮಂಗಳವಾರ, ಮಾರ್ಚ್ 8, 2011

Baby Bang - Amazing Kid w/z Amazing Dance Talent

She without arm, he without leg - ballet - Hand in Hand

Guy without legs wins national dance competition - amazing

2 handicapped pakistanis dance and win pakistani idols

public festivals mike-radio disturbe to student study

ಹೆದರಿ ಹೆದರಿ ,ಅಂಜಿ ಅಂಜಿ ಸಾಯುವುದಕ್ಕಿಂತ ಧೈರ್ಯಮಾಡಿ ದುಡಿದು ಮಡಿಯುವುದು ಉತ್ತಮ !

ಮಾನ್ಯರೇ ನೀವು ಯಾವುದೇ ಒಂದು ಕೆಲಸವನ್ನು ಆರಂಭಿಸಿ ಭಯ ಎನ್ನುವುದು ಪ್ರತಿಯೊಬ್ಬನಿಗೂ ಇದ್ದೆ ಇರುತ್ತದೆ. ಯಾಕೆಂದರೆ ನಾವು ಮಾಡುತ್ತಿರುವುದು ನಮ್ಮ ಜೀವಮಾನದಲ್ಲಿ ಮೊದಲ ಕೆಲಸ. ಹಾಗಾಗಿ ಕೆಲಸ ಮಾಡುತ್ತಾ ಹೋದಂತೆ ಧೈರ್ಯ ಅನುಭವ ಎರಡು ಹೆಚ್ಚುತ್ತದೆ. ಹಾಗಾಗಿ ಹೆದರಿಕೆಯಿಂದ ಯಾವುದೇ ಕೆಲಸ ಪ್ರಾರಮ್ಭಿಸಬೇಡಿ. ಯಾವುದಾದರೂ ವೆಬ್ ಸೈಟ್ ಗೆ ಲಾಗ್ ಆನ್ ಮಾಡಲು ಹೆಸರು , ನಿಮ್ಮ -ಮೇಲ್ ವಿಳಾಸ ಕೊಡುವಾಗಲು ಧೈರ್ಯದಿಂದ ಕೊಡಿ. ನಿಮಗೆ ಧೈರ್ಯವಿಲ್ಲದಿದ್ದರೆ ತೆಪ್ಪಗೆ ಕುಳಿತಿರಿ.
ನಿಮ್ಮ ಮನೆಯ ಮುಂದೆ ಕುಳಿತಿರುವ ನಾಯಿ ಬೆಕ್ಕಿನ ರೀತಿ.!

ವಂದನೆಗಳೊಂದಿಗೆ

.ಟಿ.ನಾಗರಾಜ

ಸೋಮವಾರ, ಮಾರ್ಚ್ 7, 2011

DO NOT CALL ME WITH IN HALF ON HOUR

ಬಿದ್ದವರನ್ನು ಎತ್ತುವ ಬದಲು ಏಳಲು ಪ್ರಯತ್ನಿಸುತ್ತಿರುವವರನ್ನು ಮೇಲಕ್ಕೆತ್ತಲು ಸಹಾಯ ಮಾಡುವುದು ಒಳ್ಳೆಯದು !

ನಾವು ಎಷ್ಟೋ ವೇಳೆ ಅಂದು ಕೊಳ್ಳುತ್ತೇವೆ ಜೀವನದಲ್ಲಿ ಬಡತನದಲ್ಲಿ ಇರುವವರಿಗೆ ಏನಾದರೂ ಸಹಾಯ ಮಾಡಿ ಅವರ ಬಡತನ ಹೋಗಲಾಡಿಸೋಣ ಎಂದು . ಆದರೆ ನಾವು ಮಾಡಿದ ಸಹಾಯಕ್ಕೆ ಇವರು ನಮ್ಮಿಂದ ಪಡೆದ ಉಪಕಾರಕ್ಕೆ ಅಪಕಾರವನ್ನೇ ಮಾಡುವುದು ಜಾಸ್ತಿ, ಜತೆಗೆ ನಮ್ಮ ಹಣ ,ಸಮಯ ವ್ಯರ್ಥ ಹಾನಿ. ಹಾಗಾಗಿ ಯಾರೂ ಜೀವನದಲ್ಲಿ ಕಷ್ಟಪಟ್ಟು ಮೇಲೆ ಬರಲು ಪ್ರಯತ್ನಿಸುತ್ತಾರೋ ಅಂತವರಿಗೆ ಸಹಾಯ ಮಾಡಿದರೆ ಅವರಿಂದ ನಮಗೆ ಹಾಗೂ ಸಮಾಜಕ್ಕೆ ಒಳ್ಳೆಯ ಉಪಕಾರ ಆದೀತು.

ವಂದನೆಗಳೊಂದಿಗೆ

.ಟಿ.ನಾಗರಾಜ

ಭಾನುವಾರ, ಮಾರ್ಚ್ 6, 2011

The MLM Downline Code - Introduction

Karnataka Dance

if you want to start study minimum one hour is sitting to study

karnataka folk dance

if you want to start study minimum one hour is sitting to study

ಒಡೆದು ಆಳುವ ಮುಟ್ಟಾ ಳರ ಬಗ್ಗೆ ಒಂದು ಮಾತು

ಮನುಷ್ಯ ಬೆಳೆದಂತೆ ಅಂದರೆ ಶ್ರೀಮಂತಿಕೆ , ಅಧಿಕಾರ ಆತನ ಕೈವಸವಾದಂತೆ ಆತ ಮ್ರುಗವಾಗುತ್ತಾನೆ. ಆತ ತಾನು ಬಂದ ಜನರನ್ನು , ತಾಯಿತಂದೆಯನ್ನು , ಅಕ್ಕ -ತಮ್ಮ , ಅಣ್ಣ -ತಂಗಿ , ಸಹೋದ್ಯೋಗಿ ಗಳನ್ನೂ ಕಡೆಗಣಿ -ಸತೊಡಗುತ್ತಾನೆ . ಇಂತಹ ಮೂರ್ಖರನ್ನು ನಾನು ನನ್ನ ವೃತ್ತಿ ಜೀವನದ ಉದ್ದಕ್ಕೂ ನೋಡಿ ಬೇಸರವಾಗಿಯೇ ಜೆ , ,ಬಿ (ಜಾಬ್ ) ಕಡೆ ವಾಲಿದ್ದು. ನೀವು ತಿಳಿದಂತೆ ನಾನು ಜೆ ,. ಬಿ .ಜಾಬ್ ಎಂದರೆ ಕೆಲಸವೆನ್ದರ್ಥವಲ್ಲ. ಜರ್ನಿ ಆನ್ ಬಿಸಿನೆಸ್. ಅಂದರೆ ವ್ಯವಹಾರದ ಮೇಲೆ ಪ್ರಯಾಣ ವೆಂದರ್ಥ. ನಾವು ಕೈಕಾಲು ಗಟ್ಟಿ ಇದ್ದು. ಅವರಿಗಿಂತಲೂ ವಿಧ್ಯಭ್ಯಾಸದಲ್ಲಿ , ಮಾತಿನಲ್ಲಿ , ಆಲೋಚನೆಯಲ್ಲಿ , ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಇದ್ದು , ಕೇವಲ ಅವಕಾಸ ಸಿಗದೇ ಇರುವುದಕ್ಕೆ ಇನ್ನೊಬ್ಬನ ಆಳಾಗಿಯೇ ಸಾಯಬೇಕೆ ? ಎಂದು ನನಗೆ ನಾನೇ ಪ್ರಶ್ನೆ ಹಾಕಿಕೊಂಡು ಉದ್ಯೋಗದ ಜತೆ ಸಹ ಉದ್ಯೋಗ ನೇರಮಾರುಕಟ್ಟೆ ಗೆ ದುಮುಕಿದೆ. ಕೈಯಲ್ಲಿ ಕಾಸಿರಲಿಲ್ಲ ! ಕೇವಲ ಧೈರ್ಯವಿತ್ತು. ಆಲೋಚನೆಯಿತ್ತು. ಇಂದು ನಿಮ್ಮ ಮುಂದೆ ನಿಂತು ನನ್ನ ಅನುಭವವನ್ನು ಹೇಳುವವನಾಗಿದ್ದೇನೆ. ಇದಕ್ಕೆಲಾ ಕಾರಣ ಮೇಲೆ ಬರಲೇ ಬೇಕೆಂಬ ಹಠ,! ಅವಮಾನ , ಮರ್ಯಾದೆ ಹರಾಜು, ಟೀಕೆ , ಟಿಪ್ಪಣಿ , ಗೆಳೆಯರೆಲ್ಲ -ವೈರಿಗಳೆಲ್ಲ ನನ್ನ ನೋಡಿ ಬಿದ್ದು ಬಿದ್ದು ನಗುತ್ತಲಿದ್ದಾರೆ. ಆದರೆ ಇಂದು ಎಲ್ಲರೂ ನನ್ನನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಲಿದ್ದಾರೆ. ಹಾಗಾಗಿ ಜೀವನದಲ್ಲಿ ಸಿಟ್ಟು, ಅವಮಾನ, ದು; , ಹಠ ,ಸಾಧನೆ ತುಂಬಾ ಮುಖ್ಯ .

ಒಡೆದು ಆಳುವ ಮುಟ್ಟಾ ಳರು ಕೊಡಬೇಕಾದ ಹಣಕ್ಕಾಗಿ ಮಾತ್ರ ಒಡೆದು ಆಳುತ್ತಾರೆ . ಆದರೆ ಕೆಲಸ ಮಾತ್ರಎಲ್ಲರೊಡನೆಯೂ ಕಾಲೋ ,ಕೈಯೋ, ಹಿಡಿಯಲು ಸಿಕ್ಕಿದ ಕಡೆ ಹಿಡಿದುಕೊಂಡು ಕೆಲಸಮಾಡಿ ಜೈ ಎನಿಸುತ್ತಾರೆ. ಇಂತವರ ಬಗ್ಗೆ ನನಗೆ ಇಂದಿಗೂ ಒಳ್ಳೆ ಮಾತಿಲ್ಲ. ಇದರಲ್ಲಿ ಒಂದು ಕಂಪನಿಯ ಅಧ್ಯಕ್ಷ ನಾಗಲಿ, ಮುಖ್ಯಸ್ತನಾಗಲಿ ಬೇರೆ ಅಲ್ಲ. ಎಲ್ಲರೂ ಅವರೇ ಮನೆಮುರುಕರು. ಹೇಗಿದೆ ನನ್ನ ಲೆಕ್ಕಾಚಾರ. ತಪ್ಪಿದ್ದರೆ ಬರೆದು ತಿಳಿಸಿ ನಿಮ್ಮ ಅಭಿಪ್ರಾಯ. ಸರಿಯಿದ್ದರೆ ಯಾಕೆ ಸರಿಯಿದೆ ಎಂದು ಕಳುಹಿಸಿ. ಆದರೆ ಬದುಕಿ ಸತ್ತಂತೆ ಇರಬೇಡಿ.

ವಂದನೆಗಳೊಂದಿಗೆ

.ಟಿ.ನಾಗರಾಜ

ಶನಿವಾರ, ಮಾರ್ಚ್ 5, 2011

59 Romanian dances from Lőrincréve. Lőrincrévei román táncok

WHEN YOU ARE MAKING STUDY TAKE ONE HOUR COMPULSORY

HOW DO GET SUCCESS STUDENT AND ENTERPRINER

ಪ್ರತಿಕ್ರಿಯೆ ಇಲ್ಲದ ಪ್ರಜೆಗಳಿಂದ ದೇಶದ ಪ್ರಗತಿ ಸಾಧ್ಯವಾದೀತೆ ?

ನಾನು ಎಷ್ಟೋ ಸಲ ನೋಡಿದ್ದೇನೆ ಏನೂ ಹೇಳಿದರೂ ತಲೆ ಅಲ್ಲಾಡಿಸುವ ಜನರನ್ನು , ಮದುವೆ ಮನೆಗಳಲ್ಲಿ, ಸಭೆಸಮಾರಂಭಗಳಲ್ಲಿ, ಎಲ್ಲಂದರಲ್ಲಿ ಇವರು ಎಲ್ಲಿ ವರೆವಿಗೆ ಸುಮ್ಮನೆ ಕುಳಿತ್ತಿರುತ್ತಾರೆ ಎಂದರೆ ತಮ್ಮ ಊಟ ಮುಗಿದು ತಮ್ಮ ಎದುರಿಗೆ ಬಡಿಸಲು ಬಂದ ಅಡಿಗೆಯವರು ಬಡಿಸಲ ಎಂದು ಕೇಳಿದರೂ ಸುಮ್ಮನೆ ಇರುತ್ತಾರೆ . ಅವರು ಇವರು ಮೂಖರಿರಬಹುದು ಎಂದು ತಿಳಿದುಕೊಂಡು ತಂದಿದ್ದನ್ನು ಇವರ ತಟ್ಟೆಗೆ ಸುರುವಿ ಹೋಗುತ್ತಾರೆ. ಪುಣ್ಯಾತ್ಮ ಮಹಾಶಯರು ಎಲ್ಲರೂ ಊಟ ವಾದ ಮೇಲೆ ಅನ್ನವನ್ನು ತಟ್ಟೆಯಲ್ಲೇ ಬಿಟ್ಟು ಕೈತೊಳೆಯುತ್ತಾರೆ. ಅಡಿಗೆಮಾಡಿದವರು ಕೊನೆಯ ಪಂಕ್ತಿಗೆ ಅಡಿಗೆ ಮಾಡಿದ್ದು ಇಲ್ಲದೆ ಬೇಗ ಬೇಗ ಅಡಿಗೆ ಮಾಡಲು ಪ್ರಾರಂಭಿಸುತ್ತಾರೆ. ಇಂತವರು ಒಂದು ರೀತಿಯ ನಷ್ಟದ ಜನರು . ಸಮಾಜಕ್ಕೆ ಒಂದು ಹೊರೆ ಎಂದು ಹೇಳಿದರು ತಪ್ಪಾಗಲಾರದು.

ಯಾವುದೇ ಪತ್ರಿಕೆಯಾಗಲಿ, ಕಾರ್ಯಕ್ರಮವಾಗಲಿ, ಯಾವುದೇ ಕಂಪನಿಯ ವಸ್ತುವೇ ಆಗಲಿ ಆತ ಬರೆಯುವುದುಆರಂಭಿಸುವುದು , ತಯಾರಿಸುವುದು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು , ಓದುಗರ ಅಭಿಪ್ರಾಯದ ಮೇಲೆ ತಾನೂ ತನ್ನ ಪತ್ರಿಕೆಯ ಬರವಣಿಗೆಯನ್ನು ಉತ್ತಮಪಡಿಸಿ ಕೊಳ್ಳಬಲ್ಲ. ಕೇಳುಗರ ಅಥವಾ ನೋಡುಗರ ಅನಿಸಿಕೆ ಆಧಾರದ ಮೇಲೆ ತನ್ನ ಕಾರ್ಯಕ್ರಮವನ್ನು ಇನ್ನೂ ಸರಿಯಾಗಿ ಮಾಡಬಲ್ಲ. ಉಪಯೋಗಿಸುವವರ ಅನಿಸಿಕೆಯ ಮೇಲೆ ಇನ್ನೂ ಉತ್ತಮ ವಸ್ತುವನ್ನು ಗ್ರಾಹಕರಿಗಾಗಿ ತಯಾರಿಸಬಲ್ಲ. ಆದರೆ ಗ್ರಾಹಕ ನಾದವನು ದೇವರು ಕೊಟ್ಟ ಬಾಯಿ ಇದ್ದು , ನಾಲ್ಕು ಅಕ್ಷರ ಕಲಿತು ಬರೆಯಲು ಬೇರೆಯವರಿಗೆ ಕಲಿಸುವ ನೌಕರಿಯಲ್ಲಿದ್ದು , ಅಲ್ಲಿ ಕಲಿಸುವುದರ ಮೂಲಕ ಆತನ ಸಂಸಾರ ನಡೆಯುತ್ತಲಿದ್ದರೂ ಆತ ಯಾಕೆ ಮೂಖನಾಗಿರುತ್ತಾನೆ. ಒಂದು ಪ್ರಜ್ಞಾವಂತ ಆರೋಗ್ಯಕರ ಸಮಾಜಕ್ಕೆ ಹೊರೆ ಯಾಗಿ ಯಾಕೆ ಬಾಳುತ್ತಾನೆ. ಇಂತವರಿಂದ ಒಂದು ದೇಶದ ಪ್ರಗತಿ ಸಾಧ್ಯವೇ ? ನೀವೇ ಯೋಚಿಸಿ.

ವಂದನೆಗಳೊಂದಿಗೆ

.ಟಿ. ನಾಗರಾಜ
ನೇರಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ

,