MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಡಿಸೆಂಬರ್ 26, 2010

ತಾಯಿ ತಿಳಿಸಿಕೊಟ್ಟ ಹೊಸ ರುಚಿ ಯಿಂದ ಕೆಂಟಕಿ ಪ್ರೈಡ್ ಚಿಕನ್ ಉಪಹಾರ ಗೃಹಗಳು ಹುಟ್ಟಿದವು.

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ತಾಯಂದಿರು ಯಾವುದಾದರು ವಿಶೇಷ ತಿಂಡಿ ಮಾಡುವುದನ್ನು ಹೇಳಿಕೊಟ್ಟಿ ದ್ದರೆ ಅದನ್ನು ಮರೆಯಬಾರದು. ಯಾರಿಗೆ ಗೊತ್ತು ಮುಂದೊಂದು ದಿನ ಅದು ಕೊಟ್ಯಾಧೀಶರನ್ನಾಗಿ ಮಾಡಬಹುದು ! ಕರ್ನಲ್ ಸ್ಯಾಂಡರ್ಸ್ ರವರು ಅವರ ತಾಯಿ ಕಳಿಸಿದ್ದ ಚಿಕನ್ ಮಾಡುವ ವಿಧಾನವನ್ನು ಬಳಸಿದ್ದರಿಂದ ಕೊಟ್ಯಾಧೀಶರಾದರು! ಒಂದು ಸಾವಿರದ ಒಂಭತ್ತು ನೂರರಲ್ಲಿ ಸ್ಯಾಂಡರ್ಸ್ ಆರು ವರ್ಷ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು . ಸಂಸಾರ ನಿರ್ವಹಣೆಗಾಗಿ ಅವರ ತಾಯಿ ದಿನವಿಡೀ ದುಡಿಯಬೇಕಿತ್ತು. ಸ್ಯಾಂಡರ್ಸ್ ರವರೆ ತನ್ನ ತಮ್ಮನ್ದೀರರನ್ನು ನೋಡಿಕೊಳ್ಳಬೇಕಿತ್ತು. ಆಗ ಸ್ಯಾಂಡರ್ಸ್ ಗೆ ಅವರ ತಾಯಿ ಕೋಳಿ ಬೇಯಿಸುವ ವಿಶೇಷ ವಿಧಾನವನ್ನು ಹೇಳಿಕೊಟ್ಟರು.

ಬೆಳೆದು ದೊಡ್ಡವರಾದ ಮೇಲೆ ಸ್ಯಾಂಡರ್ಸ್ ಎಲ್ಲೆಲ್ಲೋ ಕೆಲಸ ಮಾಡಿದರು. ರೈಲ್ವೆ ಇಲಾಖೆಯಲ್ಲಿ ಸೇನೆಯಲ್ಲಿ ದುಡಿದರು. ವಕೀಲಿಕಿ ಮಾಡಿದರು. ಇನ್ಸೂರೆನ್ಸ್ ಏಜೆಂಟ ರಾದರು . ಟೈರು ಮಾರಾಟಗಾರರಾದರು. ಕೊನೆಗೆ ಪೆಟ್ರೋಲ್ ಬಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬರುವವರಿಗೆ ಕೋಳಿ ತಿನಿಸುಗಳನ್ನು ಮಾರುತ್ತಿದ್ದರು . ತನ್ನ ತಾಯಿ ಹೇಳಿ ಕೊಟ್ಟಿದ್ದ ವಿಧಾನದ ಜತೆಯಲ್ಲಿ ಹನ್ನೊಂದು ಬಗೆಯ ಮೂಲಿಕೆಗಳನ್ನು ಬೇರುಗಳನ್ನು ಬಳಸಿ ಹೊಸ ರೀತಿಯ ಪ್ರೇಜರ್ ಕುಕರ್ ನಲ್ಲಿ ಬೇಯಿಸುತ್ತಿದ್ದರು . ಇವರ ಪ್ರೈಡ್ ಚಿಕನ್ ವಿನೂತನ ರುಚಿ ಹೊಂದಿರುತ್ತಿತ್ತು. ಬಹಳ ಜನಪ್ರಿಯವಾಯಿತು . ವ್ಯಾಪಾರವೂ ಅಭಿವೃದ್ಧಿಯಾಯಿತು . ಪೆಟ್ರೋಲ್ ಬಂಕಿನ ಎದುರಿನ ಕಟ್ಟಡದಲ್ಲಿ ದೊಡ್ಡ ಉಪಾಹಾರ ಗೃಹ ಪ್ರಾರಂಭಿಸಿದರು. ಒಂಭತ್ತು ವರ್ಷಗಳ ಕಾಲ ವ್ಯಾಪಾರ ಜೋರಾಗಿತ್ತು.

ದುರದೃಷ್ಟಕರ ಬೆಳವಣಿಗೆಯಲ್ಲಿ ರಸ್ತೆಯ ವಿಸ್ತರಣೆಗಾಗಿ ಇವರ ಕಟ್ಟಡ ಕೆಡವಲಾಯಿತು. ಒಂದೇ ದಿನದಲ್ಲಿ ಸ್ಯಾಂಡರ್ಸ್ ಎಲ್ಲವನ್ನು ಕಳೆದುಕೊಂಡರು. ಚಿಕನ್ ಮಾಡುವ ವಿಶೇಷ ಜ್ಞಾನವೊಂದು ಬಿಟ್ಟು ಮತ್ತೇನೂ ಉಳಿದಿರಲಿಲ್ಲ. ಗೆಳೆಯ ಹರ್ಮನ್ ಎಂಬುವವರಿಗೆ ತನ್ನ ವಿಶೇಷ ವಿಧಾನವನ್ನು ಹೇಳಿಕೊಟ್ಟು ಸ್ವಲ್ಪ ಹಣ ಪಡೆದು ಊರು ಬಿಟ್ಟುಹೋದರು. ಕೆಲವು ತಿಂಗಳ ನಂತರ ಹಳೆಯ ಊರಿಗೆ ಬಂದು ನೋಡಿದರೆ ಹರ್ಮನ್ ಅವರ ಉಪಾಹಾರ ಗೃಹದ ಮುಂದೆ "ಕೆಂಟಕಿ ಚಿಕನ್ ಹೊಸ ವಿಧಾನ -ಹೊಸ ರುಚಿ "ಎಂಬ ದೊಡ್ಡ ಫಲಕವಿತ್ತು. ವಿಚಾರಿಸಿದಾಗ ಹರ್ಮನ್ ರು ನಿಮ್ಮ ಕೆಂಟಕಿ ಚಿಕನ್ ಬಹಳ ಯಶಸ್ವಿಯಾಗಿದೆ . ಒಳ್ಳೆಯ ಲಾಭ ತರುತ್ತಿದೆಯೇನ್ದರು.

ಇದಾದದ್ದು ಒಂದುಸಾವಿರದ ಒಂಭತ್ತು ನೂರ ಐವತ್ತಾ ಎರಡರಲ್ಲಿ ಆಗ ಸ್ಯಾಂಡರ್ಸ್ ರಿಗೆ ಅರವತ್ತರ ವಯಸ್ಸು . ಅವರು ಸುಮ್ಮನೆ ಕೂರಲಿಲ್ಲ .ಒಂದು ಹಳೆಯ ಕಾರಿನಲ್ಲಿ ಬಕೆಟ್ ತುಂಬಾ ತಮ್ಮ ಚಿಕನ್ ತಿನಿಸು ತಯಾರಿಸಿ ತುಂಬಿಕೊಂಡರು. ರೆಸ್ಟೋರೆಂಟ್ ಗಳಿಗೆ ಹೋಗಿ ಕೆಂಟಕಿ ಚಿಕನ್ ಮಾಡುವ ತಂತ್ರಜ್ಞಾನವನ್ನು ನೀಡತೊಡಗಿದರು. ಅದಕ್ಕಾಗಿ ಒಂದು ಫೀಜು ಗೊತ್ತುಪಡಿಸಿದರು. ಅವರು ಮತ್ತು ಅವರ ಹೆಂಡತಿ ಊರಿಂದೂರಿಗೆ ಹೋಗಿ ತಾವು ಸಿದ್ದಗೊಳಿಸಿದ ಪ್ರೇಜರ್ ಕುಕ್ಕರ್ ಮತ್ತು ಸಾಂಬಾರ ಪದಾರ್ಥಗಳನ್ನು ಮಾರತೊಡಗಿದರು. ಅಲ್ಲೆಲ್ಲ "ಕೆಂಟಕಿ ಪ್ರೈಡ್ ಚಿಕನ್ " ಫಲಕಗಳನ್ನು ಹಚ್ಚತೊಡಗಿದರು. ಕೆಲವೇ ವರ್ಷಗಳಲ್ಲಿ ಅಮೇರಿಕಾದ ಎಲ್ಲೆಡೆಯಲ್ಲೂ ಕೆಂಟಕಿ ಚಿಕನ್ ಉಪಾಹಾರ ಗೃಹಗಳು ನೂರಾರು ಸಂಖ್ಯೆಯಲ್ಲಿ ಬೆಳೆಯತೊಡಗಿದವು . ಒಂದುಸಾವಿರದ ಅರವತ್ತ ನಾಲ್ಕರಲ್ಲಿ ಆರು ನೂರಕ್ಕೂ ಹೆಚ್ಚು ಕೆಂಟಕಿ ಗಳು ದೇಶದಲ್ಲೆಲ್ಲ ಹರಡಿದ್ದವು. ಆಗ ಸ್ಯಾಂಡರ್ಸ್ ಎರಡು ದಶಲಕ್ಷ ಡಾಲರುಗಳಿಗೆ ತನ್ನ ವ್ಯಾವಹಾರವನ್ನು ಮಾರಿಬಿಟ್ಟರು .

ಈಗ ಕೆಂಟಕಿ ಚಿಕನ್ ಉಪಾಹಾರ ಗೃಹಗಳು ಪೆಪ್ಸಿ ಕಂಪನಿಯ ಮಾಲೀಕತ್ವದಲ್ಲಿವೆ. ವಿಶ್ವದಾದ್ಯಂತ ಹನ್ನೊಂದು ಸಾವಿರಕ್ಕೂ ಹೆಚ್ಚು ಕೆಂಟಕಿ ಗಳು ಇವೆ ! ಬೆಂಗಳೂರಿನಲ್ಲೂ ಹಲವಾರು ಕೆಂಟಕಿ ಗಳಿವೆ. ಸ್ಯಾಂಡರ್ಸ್ ರವರ ಚಿತ್ರ ಎಲ್ಲೆಡೆಯಲ್ಲೂ ರಾರಾಜಿಸುತ್ತಿದೆ. ಇಷ್ಟೆಲ್ಲಾ ಆದದ್ದು ಒಬ್ಬ ಮಗ ತನ್ನ ತಾಯಿ ಹೇಳಿಕೊಟ್ಟ ಪಾಕ ವಿಧಾನವನ್ನು ಅನುಸರಿಸಿದ್ದರಿಂದ.

ನೀವು ಕೂಡ ನಿಮ್ಮ ತಂದೆ ತಾಯಿ ಹೇಳಿಕೊಟ್ಟ ಕಳುಹಿಸಿಕೊಟ್ಟ ,ತಿಳಿಸಿಕೊಟ್ಟ ಯಾವುದಾದರು ವಿಧಾನಕ್ಕೆ ನಿಮ್ಮ ಒಂದು ಕಲ್ಪನಾ ಶಕ್ತಿಯನ್ನು ,ಅಥವಾ ನಿಮ್ಮ ಒಂದು ತಂತ್ರ ಜ್ಞಾನವನ್ನು ಸೇರಿಸಿ ಸ್ಯಾಂಡರ್ಸ್ ರವರ ರೀತಿ ಜೀವನದಲ್ಲಿ ಹೊಸ ಕ್ರಾಂತಿಯನ್ನು ಏಕೆ ಮಾಡಬಾರದು. ಜೀವನದಲ್ಲಿ ಸಂಭವಿಸಿದ ಕಷ್ಟ , ತೊಂದರೆ, ದುಃಖ ನಮ್ಮ ಒಳ್ಳೆಯದಕ್ಕೆ , ದೇವರು ಕಳುಹಿಸಿದ ಅವಕಾಸ ಎಂದು ತಿಳಿದು ಕಷ್ಟ ಪಟ್ಟು ಏಕೆ ಮೇಲೆ ಬರಬಾರದು ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ