MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಫೆಬ್ರವರಿ 28, 2011

how do control travaling mind?

vidhyaarthigaagi forward part

"ನಮ್ಮ ನಾಡಿನಲ್ಲಿ ಸನ್ ನ್ಯಾಚುರಲ್ ಪ್ಲ್ಯಾಶ್ "

ಎಲ್ಲ ಓದುಗರಿಗೂ .ಟಿ. ನಾಗರಾಜ ಸನ್ ನ್ಯಾಚುರಲ್ ಪ್ಲ್ಯಾಶ್ ಶುಭಾವನ್ದನೆಗಳೊಂದಿಗೆ , ನಾವು ಇಂದು ಸ್ವಲ್ಪ ಬದಲಾವಣೆಗಳೊಂದಿಗೆ ಬರೆಯುತ್ತಿದ್ದೇವೆ. ಏಕೆಂದರೆ ಇವತ್ತು ನಾವು ನಮ್ಮ ಕಂಪನಿಯ ಬಗ್ಗೆ , ನಮ್ಮ ಉದ್ದೇಶದ ಬಗ್ಗೆ ಜನರಿಗೆ ತಿಳಿಸಲು ಜಾಹೀರಾತು ಮೂಲಕ ಸಾರ್ವಜನಿಕರಿಗೆ ತಿಳಿಸಲು ನಮ್ಮ ಜಾಹೀರಾತನ್ನು "ನಮ್ಮ ನಾಡು "ಪತ್ರಿಕೆಯಲ್ಲಿ ಪ್ರಕಟಿಸಿದ್ದೇವೆ. ನಮ್ಮ ಉದ್ದೇಶ ಇಷ್ಟೇ ವ್ಯಕ್ತಿತ್ವ ವಿಕಾಸನ ತರಭೇತಿಯ ಮೊದಲು ನಂತರ ಅವಕಾಸ.

ಯಾರೇ ಆಗಲಿ ಭೂಮಿಗೆ ಒಂದು ಬೀಜ ನೆಡಬೇಕಾದರೆ ಮೊದಲು ಭೂಮಿ ಉಳುಮೆ ಮಾಡಿ ನಂತರ ನೆಡಬೇಕು. ಹದವಾದ ಭೂಮಿಯಲ್ಲಿ ಪ್ರಪುಲ್ಲವಾದ ಪಸಲು ಬರುತ್ತದೆ. ಕಳೆ ತುಂಬಿದ, ಹದಮಾಡದ ಭೂಮಿಗೆ ಎನಾನ್ನಾದರೂ ಹಾಕಿದರೆ ಅಂದರೆ ಯಾವುದಾದರೂ ಬೀಜ ಹಾಕಿದರೆ ಯಾವುದೇ ಫಸಲು ಬರುವುದಿಲ್ಲ.

ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇರಲಿ.

ವಂದನೆಗಳೊಂದಿಗೆ

.ಟಿ.ನಾಗರಾಜ

ಭಾನುವಾರ, ಫೆಬ್ರವರಿ 27, 2011

ಮುಂಬಾಳು ಗೋಕುಲ್ ಫಾರಂ ನ ಫಾದರ್ ಪಿ.ವಿ.ಜೋಸೆಪ್ ನ ಒಂದು ನೆನಪು

ಆಗಾಗ್ಗೆ ನಾನು ನಮ್ಮ ಅಕ್ಕನನ್ನು ತುಂಬಾ ಗೋಳು ಹೊಯ್ದು ಕೊಳ್ಳುತ್ತೇನೆ. ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದಿನ ಘಟನೆಗಳನ್ನು ನೆನಪಿಗೆ ತಂದು ಅರ್ಧ ಬರ್ಧ ನೆನಪಿರುವ ಘಟನೆಗಳಿಗೆ ಪೂರ್ಣ ಜೀವಬರುವಂತೆ ಮಾಡುವಂತೆ ನಮ್ಮ ಅಕ್ಕನಿಗೆ ತಲೆ ತಿನ್ನುವುದು ಜಾಸ್ತಿ. ಸುಮಾರು ಹತ್ತು ಹದಿನೈದು ವರ್ಷಗಳ ಹಿಂದಿನ ಘಟನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಗೋಕುಲ್ ಫಾರಂ ಫಾದರ್ ಪಿ.ವಿ. ಜೋಸೆಫ್ "ಜನ ಸೌಭಾಗ್ಯ "ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಕ್ಷರ ಕಲಿಸುವ ಸಾಕ್ಷರತ ಆಂದೋಲನ ಜಾರಿಗೆ ತಂದರು. ಆದರೆ ಅದು ಯಾವ ಮಟ್ಟಕ್ಕೆ ತಲುಪಿತ್ತೆಂದರೆ.
ಅವ್ರು ಸುಮಾರು ನೂರು ರೂಪಾಯಿ ಬೆಲೆಬಾಳುವ ಕಿಟ್ಟನ್ನು ಅಕ್ಷರ ಕಲಿಯುವವರಿಗಾಗಿ ಉಚಿತವಾಗಿ ಹಂಚಿದರು. ರಾತ್ರಿ ಹಗಲೆನ್ನದೆ ತಮ್ಮ ಕಾರ್ಯಕರ್ತರೊಡನೆ ನಿದ್ದೆಗೆಟ್ಟು ಹಳ್ಳಿಯೆಲ್ಲ ಸುತ್ತಿ ಜನರನ್ನು ಜಾಗ್ರತ ಗೊಳಿಸಿದರು. ನಮ್ಮ ಜನ ಎಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತಾರೆಂದರೆ ಅಕ್ಷರ ಕಲಿಯಲು ಪುಕ್ಕಟೆಯಾಗಿ ಕೊಟ್ಟ ಕಿಟ್ಟನ್ನು ಹಳ್ಳಿಗರು ಮೀನು ಹಿಡಿದು ಹಾಕಲು ಕೆರೆಬೇಟೆಗೆ ತೆಗೆದುಕೊಂಡು ಹೋಗಬೇಕೆ.?

ಮತ್ತೊಂದು ಮರೆಯಲಾಗದ ಘಟನೆ ಪಾದಾರ್ ಜೋಸೆಪ್ ಜನರನ್ನು ಜಾಗ್ರತಗೊಳಿಸಲು ,ಸಂಘಟಿಸಲು ಸಾಕ್ಷರತಆಂದೋಲನ ಪ್ರಚಾರಕ್ಕಾಗಿ ಹುಡುಗರನ್ನು ಕರೆದು ತಂದಿದ್ದರು. ಅವರು ಹೇಳಿದ್ದ ಹಾಡೊಂದು ಇನ್ನು ನೆನಪಿದೆ. "ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ " ಎನ್ನುವ ಹಾಡು . ಅಂದರೆ ಓದದೆ ಇದ್ದರೆ ಶ್ರೀಮಂತರು ಬಡವರನ್ನು ಶೋಷಣೆ ಮಾಡುತ್ತಾರೆ ಎಂಬ ಹಾಡು. ಆಗಿನ ವೇಳೆಯಲ್ಲಿ ಅದು ನನಗೆ ಯಾಕೋ ಹೌದು ಎನಿಸಿತ್ತು. ಆದರೆ ನಾನು ನನ್ನ ಕಾಲೇಜನ್ನು ಮುಗಿಸಿ ಬೆಂಗಳೂರಿಗೆ ಬಂದು ಪೈಲ್ ಹಿಡಿದುಕೊಂಡು ಕೆಲಸಕ್ಕಾಗಿ ತಿರುಗಿ , ತಿರುಗಿ ಕಂಗಾಲಾಗಿ ನನಗೂ ನನ್ನ ವಿದ್ಯಾಭ್ಯಾಸಕ್ಕೂ ಹೊಂದಾಣಿಕೆ ಇಲ್ಲದ ಕೆಲಸ ಮಾಡುತ್ತಿದ್ದಾಗ. ನಾನು ವ್ಯಕ್ತಿತ್ತ್ವ ವಿಕಾಸನ ಬಗ್ಗೆ ತುಂಬಾ ಘಾಡವಾಗಿ , ಆಳವಾಗಿ ಅಧ್ಯಯನ ಮಾಡತೊಡಗಿದಾಗ ಅವರ ಹಾಡು ಸುಳ್ಳು ಅನ್ನಿಸಿತು. ಯಾಕೆಂದರೆ ಅತೀ ತುಂಬಾ ಶ್ರೀಮಂತರು ಅನಕ್ಷರಸ್ತರೆ ಆಗಿದ್ದರು. ಅವರ ಅಡಿಯಾಳಾಗಿ ಇದ್ದವರು ಅಕ್ಷರಸ್ಥರೆ ಎಂಬುದು ಮರೆಯಲಾಗದ ಮಾತು.

ವಂದನೆಗಳೊಂದಿಗೆ

.ಟಿ.ನಾಗರಾಜ








ಶನಿವಾರ, ಫೆಬ್ರವರಿ 26, 2011

ಎಲ್ಲ ಕನ್ಪ್ಯೂಸ್ !

ನಂಗೆ ಯಾಕಂತ ಗೊತ್ತಿಲ್ಲ ಸುಮ್ನೆ ಸುಮ್ನೆ ತುಂಬಾ ಕನ್ಪ್ಯೂಸ್ ಮಾಡ್ತಾರೆ ನಮ್ಮ ವಿದ್ಯಾವಂತ ಜನ. ಸಿಗರೆಟ್ ಸ್ಮೋಕಿಂಗ್ ಈಸ್ ಇನ್ಜೂರಿಯಸ್ ಹೆಲ್ತ್ ಅಂತ ಇದ್ದ್ರು ಲಾಯರ್ ,ಡಾಕ್ಟಾರ , ಇಂಜಿನೆಯರ್ ,ಪ್ರೊಪೆಸರ್ ಸಿಗರೆಟ್ ಜಾಸ್ತಿ ಸೇದ್ತಾರೆ. ಯಾಕೆ ಅಂತ ಗೊತ್ತಿಲ್ಲ. ಎಲ್ಲಾ ಕನ್ಪ್ಯೂಸ್ !

ನಾವು ಸರ್ಕಾರಿ ನೌಕರರು ನಾವು ಪಾರ್ಟ್ ಟೈಮ್ ,ಪುಲ್ ಟೈಮ್ ಬೇರೆ ಕೆಲಸ ಮಾಡ್ ಬಾರದು ಅಂತಾರೆ, ನೂರಕ್ಕೆ ತೊಂಬತ್ತರಷ್ಟು ಐ.ಎ.ಎಸ್, ಮತ್ತು ಕೆ.ಎ .ಎಸ್ ಅಧಿಕಾರಿಗಳ ಮೇಲೆ ಲಂಚ ಆರೋಪಣೆ ಇದೆ ಎಲ್ಲಾ ಕನ್ಪ್ಯೂಸ್ ಯಾಕೋ ಏನೋ ಗೊತ್ತಿಲ್ಲ.!

ನಾವು ಸರ್ಕಾರಿ ಅಧಿಕಾರಿಗಳು ಸಾಭೀತ್ ಇದ್ದೇವೆ ಅಂತಾರೆ ಆದ್ರೆ ಎಲ್ಲರ ಮನೆಲ್ಲೂ ಲೆಕ್ಕಕ್ಕೆ ಸಿಗದ ಹಣ , ಒಡವೆ , ಬೆಳ್ಳಿ ,ಬಂಗಾರ ಇದೆ. ಲೆಕ್ಕಕ್ಕೆ ಇಲ್ಲದಿದ್ದರೂ ಕಳೆದು ಹೋದಾಗ ದು;ಖಕ್ಕೆ ಇರುತ್ತದೆ ಯಾಕೋ ಏನೋ ಗೊತ್ತಿಲ್ಲ. ಎಲ್ಲಾ ಕಂಪ್ಯೋಸ್ !

ವಂದನೆಗಳೊಂದಿಗೆ

ಎ.ಟಿ.ನಾಗರಾಜ

ಶುಕ್ರವಾರ, ಫೆಬ್ರವರಿ 25, 2011

ಭಾರತ ಯಾಕೆ ಹಿಂದುಳಿದ ದೇಶ ?

ಒಬ್ಬ ಓದುಗ ಮಿತ್ರ ಕಳುಹಿಸಿದ ಮೇಲ್ ನಿಂದ (ಇಲ್ಲಿ ತಿಳಿಸಿರುವ ಅಂಕಿ ಸಂಖ್ಯೆಗಳು ಕಾಲ್ಪನಿಕ )

"ಭಾರತ ಏತಕ್ಕೆ ಅಭಿವೃದ್ಧಿ ಹೊಂದಿಲ್ಲ" ?
ಭಾರತದ ಒಟ್ಟು ಜನಸಂಖ್ಯೆ ಒಂದು ನೂರು ಕೋಟಿ ಗಳಿಗಿಂತಲೂ ಹೆಚ್ಚು
ನಿವೃತ್ತಿ ಹೊಂದಿದವರು ಏಳು ಚುಕ್ಕೆ ಒಂಬತ್ತು ಕೋಟಿ ಜನ (.)
ರಾಜ್ಯ ಸರಕಾರೀ ನೌಕರರು ಮೂವತ್ತು ಕೋಟಿ ಜನ
ಕೇಂದ್ರ ಸರಕಾರೀ ನೌಕರರು ಹದಿನೇಳು ಕೋಟಿ ಜನ
(ರಾಜ್ಯ ಹಾಗೂ ಕೇಂದ್ರ ಸರಕಾರದ ಜನ ಬೇರೆ ಯಾವುದೇ ಉದ್ಯೋಗ ಮಾಡುವುದಿಲ್ಲ )
ಮಾಹಿತಿ ತಂತ್ರಜ್ಞಾನ ದಲ್ಲಿ ಕೆಲಸ ಮಾಡುವವರ ಸಂಖ್ಯೆ ಒಂದು ಚುಕ್ಕೆ ಒಂದು ಕೋಟಿ
(ಇವರು ಭಾರತಕ್ಕೆ ಕೆಲಸ ಮಾಡುವುದಿಲ್ಲ , ಇವರ ಆದಾಯ ಹೊರ ರಾಷ್ಟ್ರಕ್ಕೆ ಸೇರುತ್ತದೆ )
ಶಾಲೆಗೇ ಹೋಗುವವರ ಸಂಖ್ಯೆ ಇಪ್ಪತೈದು ಕೋಟಿ
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎರಡು ಕೋಟಿ.
ನಿಮಗೆ ಗೊತ್ತಿದೆ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಒಂದು ಚುಕ್ಕೆ ಎರಡು ಕೋಟಿ ಜನ
ಜೈಲ್ ನಲ್ಲಿ ಇರುವವರ ಸಂಖ್ಯೆ ಸರಿ ಸುಮಾರು ಏಳು ಕೋಟಿ
ಇನ್ನು ದುಡಿಯಲಾಗದವರು , ಕುರುಡರು, ಕುಂಟರು , ಸೋಮಾರಿಗಳು, ಹೀಗೆ ಲೆಕ್ಕ ಹಾಕುತ್ತ ಹೋದರೆ ಒಂದು ಮನೆಯಲ್ಲಿ ಒಬ್ಬ ದುಡಿಮೆ ಗಾರ ಸಿಗಬಹುದೇನೋ.?

ಇದೊಂದು ಉಹೆ ಅಷ್ಟೇ !

ವಂದನೆಗಳೊಂದಿಗೆ

.ಟಿ. ನಾಗರಾಜ

ಗುರುವಾರ, ಫೆಬ್ರವರಿ 24, 2011

HOW DO CONTROL MIND?

ಬಡತನದಲ್ಲಿ ಹುಟ್ಟಿ , ಬಡತನದಲ್ಲಿ ಬೆಳೆದು, ಪ್ರಾಮಾಣಿಕತೆಯಿಂದ ಓದಿ, ಪ್ರಾಮಾಣಿಕತೆಯಿಂದ ವೃತ್ತಿ ಗಳಿಸಿಕೊಂಡ ವ್ಯಕ್ತಿಗಳು ಕೊನೆಗೆ ಬ್ರಷ್ಟಚಾರಿ ಗಳಾಗುವುದು ಏಕೆ ?

ಒಬ್ಬ ಪತ್ರಕರ್ತ ತನಗೆ ಬರುವ ಎಲ್ಲ ಪತ್ರಗಳಿಗೆ ಉತ್ತರಿಸಲು ಬಹುದು ಇಲ್ಲದಿರಲೂ ಬಹುದು. ಆದರೆ ಆನ್ ಲೈನ್ ನಲ್ಲಿ ಬರೆಯುವ , ಪ್ರಕಟಿಸುವ ಪ್ರತಿಯೊಬ್ಬನು ಉತ್ತರಿಸಲೇ ಬೇಕಾದ ಅನ್ನಿವಾರ್ಯತೆ ಇದೆ. ಇಲ್ಲಿ ಓದುಗ ಒಬ್ಬ ಸ್ವಾತಂತ್ರ ವ್ಯಕ್ತಿ, ಉತ್ತರ ಬರೆದಿಲ್ಲವೆಂದರೆ ಕಾಮೆಂಟ್ಸ್ ನಲ್ಲಿ ಬರಹಗಾರನ ಮೇಲೆ ತನ್ನ ಆಕ್ರೋಶವನ್ನು ತೀರಿಸಿಕೊಳ್ಳಬಹುದು. ನಾನು ನೆಟ್ ನಾಗ ಪ್ರಾರಂಭ ವಾದ ದಿನದಿಂದ ಅಂತ ಕೆಲವು ಬರಹಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದೇನೆ. ಹೆಚ್ಚು ಜನ ನನ್ನ ಓದುಗರು ವಿದ್ಯಾರ್ಥಿಗಳು ಹಾಗೂ ಯುವಜನರು ಆಗಿರುವುದರಿಂದ , ವಿಧ್ಯವಂತ ರಾಗಿರುವುದರಿಂದ ನನಗೆ ತುಂಬಾ ಸಹಾಯವಾಗಿದೆ.

ಮೊನ್ನೆ ತಾನೇ ಒಬ್ಬ ಯುವಕ ಒಂದು -ಮೇಲ್ ಕಳುಹಿಸಿದ್ದರು. ತುಂಬಾ ಚಿಂತನೆಗೆ ಅರ್ಹ್ಯ ವಾಗಿತ್ತು. ಅವರ ಪ್ರಕಾರ ನಾವು ಎಷ್ಟೋ ಜನ ರಾಜಕೀಯ ವ್ಯಕ್ತಿಗಳ ಹಾಗೂ ಅಧಿಕಾರಿಗಳ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿದ್ದೇವೆ. ಅವರು ಬಂದಿರುವುದು ಕಡು ಬಡತನದಿಂದ , ಅಥವಾ ಮಧ್ಯಮ ವರ್ಗದ ರೈತ ಕುಟುಂಬದಿಂದ . ಹೇಗೋ ಕಷ್ಟಪಟ್ಟು. ಓದಿ ,ಅಂಕ ಗಳಿಸಿ , ದೊಡ್ಡ ಹುದ್ದೆ ಗಿಟ್ಟಿಸಿ ಕೆಲವು ವ್ಯಕ್ತಿಗಳು ತಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನೇ ಶೋಷಣೆ ಮಾಡುತ್ತಿದ್ದಾರೆ . ಕೆಲವರು ತಾವು ಬೆಳೆದು ಬಂದ , ತಮ್ಮನ್ನು ಬೆಳೆಸಿದ ಸಮಾಜಕ್ಕೆ ವಂಚಿಸುತ್ತಿದ್ದಾರೆ . ಇದನ್ನು ಕಂಡು ಕಂಡು ವಿದ್ಯಾರ್ಥಿಗಳಿಗೆ , ಬಡವರಿಗೆ , ಹಿಂದುಳಿದವರಿಗೆ ಸಹಾಯ ಮಾಡಬೇಕೆ? . ದಯವಿಟ್ಟು ಉತ್ತರಿಸಿ.

ಬತ್ತದಿಂದ ಸಂಪೂರ್ಣವಾಗಿ ಹೊಟ್ಟನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಒಂದೆರಡು ಹೊಟ್ಟು ಜೆಳ್ಳು ಗಳು ಭತ್ತದ ಜತೆಗೆ ಸೇರಿರುತ್ತವೆ. ಬಿತ್ತುವಾಗ ಭತ್ತದ ಜತೆಯಲ್ಲಿಯೇ ಹೊಟ್ಟನ್ನು ಬಿತ್ತುತ್ತೇವೆ. ಕೆಲವು ವೇಳೆ ಅವು ನಾರಿ ಎಂಬ ಹೆಸರಿನಿಂದ ಪಸಲು ಬಂದ ಮೇಲೆ ಕಾಣಿಸಿಕೊಳ್ಳುತ್ತವೆ. ಹಾಗೆಯೇ ಸಮಾಜದಲ್ಲಿ ಅಂತ ಬ್ರಷ್ಟ ವ್ಯಕ್ತಿಗಳಿಗೆ ಪಾಠ ಕಲಿಸಲು ದೊಡ್ಡ ವ್ಯಕ್ತಿಗಳು ಇದ್ದಾರೆ. ಹಾಗಾಗಿ ಸಹಾಯ ಮಾಡುವುದರಲ್ಲಿ ತಪ್ಪೇನಿಲ್ಲ.

ಕೆಲವೊಮ್ಮೆ ಬೇರೆಯವರ ಒತ್ತಡಕ್ಕಾಗಿ ಮಾಡಬಾರದ ಕೆಲಸವನ್ನು ಮಾಡಿ ಕೇಳಬಾರದ ಅಪಪ್ರಚಾರ ಹೊರಬೇಕು. ಏನೂ ಮಾಡುವುದು ಭಾರತ ಸ್ವಾತಂತ್ರ ರಾಷ್ಟ್ರ.

ವಂದನೆಗಳೊಂದಿಗೆ

.ಟಿ.ನಾಗರಾಜ

ಬುಧವಾರ, ಫೆಬ್ರವರಿ 23, 2011

ನಾವು ರೈತರು ನಮಗೆ ನೆಲವನ್ನು ಅಗೆಯುವುದು , ಗೊಬ್ಬರ ಹಾಕುವುದು, ಬೀಜ ಬಿತ್ತುವುದಷ್ಟೇ ಗೊತ್ತು !

ನಾವು ಗ್ರಾಮೀಣ ಪ್ರದೇಶದಿಂದ ಬಂದವರು . ನಮಗೆ ಕೃಷಿ ಕೆಲಸ ಬಿಟ್ಟರೆ ಬೇರೇನೂ ಅನುಭವವಿಲ್ಲ. ಆದರೆ ಪ್ರತಿಯೊಂದು ಕೆಲಸಕ್ಕೂ ಕೃಷಿ ತಾಯಿ ಅಥವಾ ತಂದೆ ಇದ್ದ ಹಾಗೆ. ಒಬ್ಬ ವ್ಯಕ್ತಿಗೆ ಕೃಷಿ ಕೆಲಸ ಗೊತ್ತಿದ್ದರೆ ಆತ ಪ್ರಪಂಚದ ಯಾವುದೇ ಭಾಗದಲ್ಲಿ ಆದರೂ ಬದುಕಬಲ್ಲ . ಅದಕ್ಕೆ ಶರಣರು ಹೇಳಿದ್ದು "ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು " ಎಂದು . ಯಾಕೆಂದರೆ ಕೃಷಿ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬು . ಜತೆಗೆ ಅನುಭವವನ್ನು ಕಲಿಸುತ್ತದೆ.

ಹೇಗೆಂದರೆ ಕೃಷಿಯದು ಒಂದು ನಿಯಮ ವಿದೆ. ನೆಲವನ್ನು ಊಳಬೇಕು, ಅಥವಾ ಅಗೆಯಬೇಕು, ಗೊಬ್ಬರ ಹಾಕಬೇಕು. ನಂತರ ಬೀಜ ಬಿತ್ತಬೇಕು. ನಂತರ ನೀರು ,ಗೊಬ್ಬರ ,ಕ್ರಿಮಿಕೀಟ ನಾಶಕ ಸಿಂಪಡಿಸಿ, ದನ ಕರುಗಳ ಹಾವಳಿಯಿಂದ, ಕಳ್ಳ ಕಾಕರುಗಳ ಹಾವಳಿಯಿಂದ ರಕ್ಷಿಸುವುದು ರೈತನ ಕೆಲಸ.

ಆದರೆ ಪಸಲು ಕೈಯಿಗೆ ಬಂದೆ ಬರುತ್ತದೆ ಎಂಬ ಯಾವ ಬಲವಾದ ನಿರೀಕ್ಷೆ ಇರುವುದಿಲ್ಲ. ಬೂಮಿತಾಯಿ ತನ್ನ ಕೆಲಸಮಾಡಿಸಿಕೊಂಡಿದ್ದಕ್ಕೆ ಏನೋ ಕೊಟ್ಟೆ ಕೊಡುತ್ತಾಳೆ ಎನ್ನುವ ನಂಬಿಕೆ ರೈತನದು. ಅದು ನಿಜ . ಯಾವತ್ತೂ ಭೂಮಿ ರೈತನಿಗೆ ಮೋಸ ಮಾಡಿಲ್ಲ. ಏನೂ ಕೆಲಸ ಮಾಡದವನಿಗೆ ಪಾಠ ಕಲಿಸದೆ ಬಿಟ್ಟಿಲ್ಲ.

ಇಲ್ಲೂ ಹಾಗೆಯೇ ನೀವೇ ಭೂಮಿ , ನಿಮ್ಮ ಮನಸ್ಸಿನಲ್ಲಿ ಇರುವ ದೊಡ್ಡದೇ ಆದ ಅಥವಾ ಚಿಕ್ಕದೆ ಆದ ಆಸೆಯೇ ಬೀಜ, ನಿಮ್ಮಲ್ಲಿರುವ ನಕಾರಾತ್ಮಕ , ಮೈಸಬ್ಬಿಗೆಯ ,ಸೋಮಾರಿತನ, ಮೋಸ ,ವಂಚನೆ ಗಳೇ ಕಳೆಗಳು . ಅವುಗಳೆಲ್ಲವನ್ನು ಕಿತ್ತು . ನಿಮ್ಮ ಮನಸ್ಸಿನಲ್ಲಿರುವ ಆಸೆಯನ್ನು ಜೀವನದಲ್ಲಿ ಮೇಲೆ ಬರುವ ಬೀಜವನ್ನು ಬಿತ್ತಿ, ಮೇಲೆ ಬನ್ನಿ.

ಎಲ್ಲಿಯವರೆಗೆ ನೀವು ಬೀಜವನ್ನು ಬಿತ್ತುವುದಿಲ್ಲವೋ ಅಲ್ಲಿಯವರೆಗೆ ನೀವೂ ಏನನ್ನೂ ಪಡೆಯುವುದಿಲ್ಲ ಎನ್ನುವುದನ್ನುಮರೆಯಬೇಡಿ. ಇಂದಿನ ದಿನವೇ ಶುಭ ದಿನ . ಇಂದೇ ಪ್ರಾರಂಭಿಸಿ.

ವಂದನೆಗಳೊಂದಿಗೆ

.ಟಿ.ನಾಗರಾಜ





ಮಂಗಳವಾರ, ಫೆಬ್ರವರಿ 22, 2011

HOW DO MAKE STUDY FOR KANNADA SCHOOL STUDENTS

ಕೆರೆಯ ನೀರನ್ನು ಕೆರೆಗೆ ನೀರು ಚೆಲ್ಲುವುದೇ ನನ್ನ ಕೆಲಸ !

ನಿನ್ನೆ ಅಷ್ಟೇ ನನ್ನ ಬಹುದಿನದ ಆಸೆ ಹಾಗೂ ನನ್ನ ಆಪ್ತ ಸ್ನೇಹಿತರು , ಬಂಧುಗಳು , ಓದುಗರ ಕೋರಿಕೆಯ ಮೇಲೆ ನೆಟ್ ನಾಗ ದಲ್ಲಿ ಸನ್ ನ್ಯಾಚು ರಲ್ ಪ್ಲಾಸ್ ಹೆಸರಿನಲ್ಲಿ ಯು ಟ್ಯೂಬ್ ನಲ್ಲಿ ವಿಡಿಯೋ ಪ್ರಕಟಗೊಂಡಿತ್ತು. ದೇಶ ,ವಿದೇಶ ದಿಂದ ಹಲವಾರು ಪರಿಚಯಸ್ತರು ನನಗೆ ಫೋನ್ ಮಾಡಿದರು . -ಮೇಲ್ ಕಳುಹಿಸಿದರು. ಆದರೆ ಎಲ್ಲರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಆಗಲಿಲ್ಲ . ಕಾರಣ ನನಗೆ ಮೊದಲಿನಿಂದಲೂ ದೂರವಾಣಿಯ ಮೂಲಕ ಮಾತನಾಡುವುದರಿಂದ ದಣಿವು ಹಾಗೂ ತಲೆ ನೋವೂ ಆಗುತ್ತಿದ್ದು , ತಡೆಯುವುದು ಕಷ್ಟವಾಗುತ್ತಿತ್ತು. ಹಾಗಾಗಿ ಮಾನ್ಯ ಓದುಗರು -ಹಿತೈಷಿಗಳು ನಿಮ್ಮ ಮೇಲೆ ಕೋಪದಿಂದ ಮಾತನಾಡಲಿಲ್ಲ ಎಂದು ಅಂದುಕೊಳ್ಳಬೇಡಿ. ನನ್ನ ಒಂದು ಚಿಕ್ಕ ಸಮಸ್ಯೆಗೆ ದಯವಿಟ್ಟು ಸ್ಪಂದಿಸಿ.

ಹಲವಾರು -ಮೇಲ್ ಗಳಿಗೆ ಆದಷ್ಟು ಉತ್ತರ ನನ್ನ ಆಟೋ ರೆಸ್ಪೇನ್ ಡರ್ ನಿಂದ ಉತ್ತರ ತನ್ನಿಂದ ತಾನೇ ಹೋಗುತ್ತಿತ್ತು. ಆದರೂ ಕೆಲವರ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದದ್ದು ನನ್ನ ಕರ್ತವ್ಯ ಆಗಿದೆ. "ನಾಗರಾಜ್ . .ಟಿ. ಯವರೇ ನೀವೂ ಇಷ್ಟೊಂದು ಸಹಾಯ ನಿಮ್ಮ ಯುವಜನತೆಗೆ -ವಿದ್ಯಾರ್ಥಿಗಳಿಗೆ ಮಾಡುತ್ತಿದ್ದಿರಲ್ಲ ಅವರಿಂದ ನಿಮಗೇನು ಪ್ರಯೋಜನ ವಿದೆಯೇ ?". ಜನಕ್ಕೆ ಎಷ್ಟು ಉಪಕಾರ ಮಾಡಿದರೆ ಅಷ್ಟೇ ಎಂದು ಒಬ್ಬ ಓದುಗ ಮಿತ್ರರು ಬರೆದಿದ್ದರು. ಅದಕ್ಕೆ ನನ್ನ ಉತ್ತರ ರೀತಿ ಇದೆ.

ನಾನು ಹುಟ್ಟಿದ್ದು ಮಧ್ಯಮ ವರ್ಗದ ಕುಟುಂಬದಲ್ಲಿ , ಬೆಳೆದದ್ದು ಗ್ರಾಮೀಣ ಪ್ರದೇಶದಲ್ಲಿ, ನಮ್ಮ ತಂದೆ ತಾಯಿ ಅನಕ್ಸರಸ್ತರು, ನಮ್ಮ ಕುಟುಂಬದಲ್ಲಿ ನನ್ನನ್ನು ಮಟ್ಟಕ್ಕೆ ಬೆಳೆಸಲು ಸಹಕರಿಸಿದ್ದು ನನ್ನ ಅಕ್ಕ ನಾಗರತ್ನಕ್ಕ, ಹಾಗೆಯೇ ನಮ್ಮ ತಾಯಿ,ಅಣ್ಣ, ಅಕ್ಕಂದಿರರು. ಜತೆಗೆ ನಮ್ಮ ಊರಿನವರು . ಸಮಾಜದವರು ನನ್ನ ಓದಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಆದರೆ ಸಹಾಯ ಮಾಡಿದವರಿಗೆ ನನ್ನಿಂದ ಸಹಾಯ ಮಾಡಲು ಆಗಲಿಲ್ಲ ಎಂಬ ಕೊರಗು ಇದೆ. ಕಾರಣ ಕೆಲವರು ಈಗಾಗಲೇ ಸಾವನ್ನಪ್ಪಿದ್ದಾರೆ. ಆದರೂ ಅವರ ಮಕ್ಕಳು -ಮೊಮ್ಮಕ್ಕಳಿಗಾದರೂ ನನ್ನ ಚಿಕ್ಕ ಸಹಾಯ ತೀರಲೆಂದು ಬರೆಯುತ್ತಿದ್ದೇನೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವುದರಲ್ಲಿ ಏನೋ ಒಂದು ರೀತಿಯ ಸಂತಸ ಇದೆ ಎಂದೆನಿಸುತ್ತದೆ. ನಿಮಗೆ ಅದೇ ರೀತಿ ಏನೂ ?

ವಂದನೆಗಳೊಂದಿಗೆ
.ಟಿ,ನಾಗರಾಜ

ಸೋಮವಾರ, ಫೆಬ್ರವರಿ 21, 2011

HOW DO GET SUCCESS STUDENT AND ENTERPRINER

sunnaturalflash's webcam video Feb 20, 2011, 09:55 AM

ಹೆಚ್ಚು ಕಷ್ಟ ಪಟ್ಟು ಕೆಲಸ ಮಾಡುವುದು ಒಂದು ಹವ್ಯಾಸ !

ಮಾನ್ಯರೇ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ನಾನು ದಿನದಲ್ಲಿ ಹದಿನೆಂಟು ಗಂಟೆ ದುಡಿಯುತ್ತೇನೆ. ಕೆಲವರಿಗೆ ಇದು ಕಷ್ಟ ಎಂದು ಕಾಣಬಹುದು. ಆದರೆ ಅಭ್ಯಾಸವಾದರೆ ಇದಕ್ಕಿಂತ ಉತ್ತಮೆ ಹಾದಿ ಬೇರೆ ಯಾವುದು ಇಲ್ಲ. ನಾನಾಯಿತು ನನ್ನ ಕೆಲಸವಾಯಿತು ನನಗೆ ನನ್ನ ಕೆಲಸ ವಾಗ ಬೇಕಷ್ಟೇ.!

ನೀವು ನೋಡಿರಬಹುದು ಎಷ್ಟೋ ಜನ ಬಿಸಿನೆಸ್ ಪ್ರಾರಂಭಿಸುತ್ತಾರೆ. ಬಿಸಿನೆಸ್ ಸರಿಯಾಗಿ ನಡೆದರೆ ಸಂತೋಷಕ್ಕಾಗಿ ಕುಡಿಯುತ್ತಾರೆ. ಬಿಸಿನೆಸ್ ನಷ್ಟವಾದರೆ ಚಿಂತೆಗಾಗಿ ಕುಡಿಯುವುದು ಮಾಡುತ್ತಾರೆ. ಆದರೆ ಇವೆರಡು ಸರಿಯಾದ ಹವ್ಯಾಸಗಳಲ್ಲ.
ಓದಿನಲ್ಲಿ ಪೇಲಾಗಲಿ, ವ್ಯವಹಾರದಲ್ಲಿ ನಷ್ಟ ಉಂಟಾಗಲಿ ನಾವು ಕೆಟ್ಟ ಚಟಗಳಿಗೆ ಬಲಿಯಾಗಬಾರದು. ನಮಗಿಂತ ನಮ್ಮ ಕುಟುಂಬದ ಜನಗಳಿಗೆ ಅಂದರೆ ಅಣ್ಣನಿರಬಹುದು, ಅಕ್ಕ -ತಮ್ಮ -ತಂಗಿ -ತಂದೆ -ತಾಯಿ - ಹೆಂಡತಿ -ಮಕ್ಕಳಿಗೆ . ಒಂದು ಪರಿಸ್ಥಿತಿ ಬಂದಾಗ ಹೆಚ್ಚು ಓದಲು ಕುಳಿತರೆ ಒಳ್ಳೆಯದು. ಇಲ್ಲವೇ ಕೆಲಸದಲ್ಲಿ ತಲ್ಲೀನರಾದರೆ ಒಳ್ಳೆಯದು. ಯಾವುದೇ ಕಾರಣಕ್ಕೆ ನಮ್ಮ ಜತೆಗಿರುವ ಜನರ ಜತೆ ಸೇರಬಾರದು.

ಕೆಲಸವೇ ನಮ್ಮ ಮೂಲ ಮಂತ್ರ ವಾಗಬೇಕು. ನೀವು ಎಷ್ಟೋ ಕಂಪನಿಯ ನಿರ್ಧೆಶಕರನ್ನು ನೋಡಿದ್ದೀರಿ, ಆದರೆ ಅವರು ಯಾವಾಗಲಾದರೂ ಹರಟೆ ಹೊಡೆಯುವುದು. ಸುಮ್ಮನೆ ತಿರುಗುವುದು ನೋಡಿದ್ದೀರಾ ? ಇಲ್ಲ . ಆತ ತನ್ನ ಕೆಲಸವಾಯಿತು , ತಾನಾಯಿತು. ರೀತಿ ಒಬ್ಬ ವಿಧ್ಯಾರ್ಥಿ ಓದಿನಲ್ಲಿ ಪೇಲಾಗಲಿ -ವ್ಯವಹಾರದಲ್ಲಿ ನಷ್ಟವಾದಾಗ ಮತ್ತೆ ಪ್ರಯತ್ನ ಪಟ್ಟು ಯಶಸ್ಸನ್ನು ಗಳಿಸಿಕೊಳ್ಳಬೇಕು. ಬೇರೆಯವರು ಸಿಗರೆಟ್ ಬೀಡಿಗೆ ,ಮಧ್ಯ ಜೂಜೂಗಾರಿಕೆಗೆ ದಾಸರಾದರೆ ನೀವು ಮಾಡುವ ಕೆಲಸಕ್ಕೆ ದಾಸರಾಗಬೇಕು. ಇದುವೇ ಯಶಸ್ಸಿನ ಗುಟ್ಟು.!

ನಿಮ್ಮ ಸನ್ ನ್ಯಾಚುರಲ್ ಪ್ಲಾಶ್ ಈಗ ಯು ಟ್ಯುಬಿ ನಲ್ಲಿ ನೋಡಲು ಮರೆಯದಿರಿ . ಇಂದೇ ನೋಡಿ

ವಂದನೆಗಳೊಂದಿಗೆ

.ಟಿ.ನಾಗರಾಜ