MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಜನವರಿ 2, 2011

ನಿಗೂಢ ಅತಿಥಿ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನಮ್ಮ ಕಂಪನಿಯ ಸದಸ್ಯರ ತುರ್ತು ಸಭೆ ನಡೆಯುತ್ತಿತ್ತು. ಬೋರ್ಡ್ ರೂಮಿನೊಳಗೆ ಹೋಗುತ್ತಿದ್ದಂತೆಯೇ ಅಲ್ಲೇನೋ ಸಮಸ್ಯೆಯಿದೆ ಎಂದು ನನಗನಿಸುತ್ತಿತ್ತು. ಸಭೆಯನ್ನುದ್ದೇಶಿಸಿ ಮೊದಲು ಮಾತಾಡಿದ್ದು ನಮಗೆಲ್ಲ ಹಿರಿಯರಾಗಿದ್ದ ಹಾರ್ಡಿಂಗ್ ಅವರು ಹೇಳಿದ್ದು ಹೀಗೆ;

"ನಾನೀಗೆ ನಿಮಗೊಂದು ಕೆಟ್ಟ ಸುದ್ಧಿ ಹೇಳಬೇಕಾಗಿದೆ. ನಿನ್ನೆ ಏರ್ಅಟ್ಲಾಂಟಿಕ್ ಕೇಸಿನಲ್ಲಿ ವಾದಮಾಡುತ್ತಿರುವಾಗ ಜೂಲಿಯನ್ ಮ್ಯಾನ್ ಟಾಲ್ ಗೆ ಆದದ್ದು ಭಾರಿ ಹ್ರುದಯಾಘಾತವೆಂದು ತಿಳಿದು ಬಂದಿದೆ. ಈಗ ಆತ ಆಸ್ಪತ್ರೆಯ ತುರ್ತು ಚಿಕಿತ್ಸಾವಿಭಾಗದಲ್ಲಿದ್ದಾರೆ . ಡಾಕ್ಟರರು ಹೇಳುವಂತೆ ಆತನ ದೇಹಸ್ಥಿತಿ ಸ್ಥಿರವಾಗಿದ್ದು ಶೀಘ್ರದಲ್ಲಿಯೇ ಗುನಮುಖನಾಗಲಿದ್ದಾನೆ . ಆದರೆ ಆತ ಒಂದು ನಿರ್ಧಾರ ಮಾಡಿದ್ದಾನೆ . ಅದು ನಿಮಗೂ ತಿಳಿಯಬೇಕು. ಇನ್ನು ಮುಂದೆ ಆತ ಲಾ ಪ್ರಾಕ್ಟೀಸ್ ಮಾಡುವುದಿಲ್ಲ. ಪುನ; ಆತ ನಮ್ಮ ಕಂಪನಿಗೆ ಮರಳುವುದಿಲ್ಲ ".

ಇದನ್ನು ಕೇಳಿ ನನಗೆ ಶಾಕ್ ಆಯಿತು. ಜೂಲಿಯನ್ ಗೆ ತನ್ನದೇ ಆದ ಕೆಲವು ತೊಂದರೆಗಳು ಇದ್ದುವೆಂದು ನನಗೆ ತಿಳಿದಿತ್ತು. ಆದರೆ ವೃತ್ತಿಯನ್ನೇ ಕೈಬಿಡುತ್ತಾನೆಂದು ನಾನೆಂದು ಊಹಿಸಿರಲಿಲ್ಲ . ಆತ ಈ ಸಂಗತಿಯ ಬಗ್ಗೆ ನನಗಾದರೂ ಹೇಳುವ ಸೌಜನ್ಯ ತೋರಬೇಕಾಗಿತ್ತು. ಆಸ್ಪತ್ರೆಯಲ್ಲೂ ಅವನನ್ನು ನೋದುಳು ಅವಕಾಶ ಕೊಟ್ಟಿರಲಿಲ್ಲ. ಪ್ರತಿಬಾರಿ ಆಸ್ಪತ್ರೆಗೆ ಹೋದಾಗಲೂ ನರ್ಸುಗಳು "ಅವರು ನಿದ್ರಿಸುತ್ತಿರುವುದರಿಂದ ತೊಂದರೆ ಕೊಡಬಾರದೆಂದು " ಹೇಳಲು ಆದೇಶಿಸಲಾಗಿತ್ತು. ನನ್ನ ಫೋನ್ ಕಾಲನ್ನು ಆತ ತೆಗೆದುಕೊಳ್ಳಲು ನಿರಾಕರಿಸಿದ್ದ. ಬಹುಶ; ತಾನು ಮರೆಯಬೇಕೆಂದು ನಿರ್ಧರಿಸಿದ್ದ ವೃತ್ತಿಯನ್ನು ನಾನು ನೆನಪಿಸುವುದು ಅವನಿಗೆ ಬೇಡವಾಗಿತ್ತು. ಯಾರಿಗೆ ಗೊತ್ತು ? ಒಂದಂತೂ ನಿಜ. ಆತನ ವರ್ತನೆ ನನಗೆ ತುಂಬಾ ನೋವುಂಟು ಮಾಡಿತ್ತು.

ಇದೆಲ್ಲ ನಡೆದು ಈಗ ಮೂರು ವರ್ಷಗಳು ಉರುಳಿವೆ. ಕಳೆದಸಲ ನಾನು ಜೂಲಿಯನ್ ಬಗ್ಗೆ ಕೇಳಿದ ಸುದ್ಧಿಯೆಂದರೆ ಆತ ಯಾವುದೋ ಸಂಶೋಧನೆಗಾಗಿ ಭಾರತಕ್ಕೆ ತೆರಲಿದ್ದನಂತೆ. ನನ್ನ ಸಹೋದ್ಯೋಗಿಯೊಡನೆ ಮಾತಾಡುತ್ತ "ನಾನಿಷ್ಟು ನನ್ನ ಬದುಕನ್ನು ಸರಳ ಗೊಳಿಸಬೇಕು ಎಂದಿದ್ದೇನೆ . ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ. ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ. ಆ ರಹಸ್ಯಮಯ ದೇಶದಲ್ಲಿ ಅವು ಸಿಗಬಹುದೆಂಬ ಭರವಸೆ ಇದೆ " ಎಂದು ಹೇಳಿದ್ದನಂತೆ . ಅಷ್ಟರಲ್ಲೇ ಆತ ತನ್ನ ಬಂಗಲೆಯನ್ನೂ . ಖಾಸಗಿ ದ್ವೀಪವನ್ನೂ . ಸ್ವಂತ ವಿಮಾನವನ್ನೂ ಮಾರಾಟಮಾಡಿದ್ದ . ತನ್ನ ಅತಿಮೆಚ್ಚಿನ ಫೆರಾರಿ ಕಾರನ್ನು ಮಾರಿದ್ದ. ಇದನ್ನು ಕೇಳಿ "ಜೂಲಿಯನ್ ಮ್ಯಾನ್ ಟಾಲ್ ಓರ್ವಭಾರತೀಯ ಯೋಗಿ ಆಗಲು ಸಾಧ್ಯವೇ ? ಏನೋ.ದೈವ ನಿಯಮ ನಡೆಯುವ ರೀತಿ ನಿಜಕ್ಕೂ ನಿಗೂಢ " ಎಂದು ಅಂದುಕೊಡಿದ್ದೆ.

ಆ ಮೂರು ವರ್ಷಗಳಲ್ಲಿ ನಾನು ಸಾಕಷ್ಟು ಬದಲಾಗಿದ್ದೆ. ಆಗ ಹಗಲೂ ರಾತ್ರಿ ದುಡಿಯುತ್ತಿದ್ದೆ. ಉತ್ಸಾಹಿ ತರುಣ ಲಾಯರ್ ನಾಗಿದ್ದ ನಾನು ಸಿನಿಕ ಸೀನಿಯರ್ ಲಾಯರ್ ಆಗಿ ಬದಲಾಗಿದ್ದೆ. ನಾನು . ನನ್ನ ಪತ್ನಿ ಚೆನ್ನಿ ಹಾಗೂ ಮಕ್ಕಳು -ಇಷ್ಟೇ ಪ್ರಪಂಚವಾಗಿತ್ತು. ಕ್ರಮೇಣ ಬದುಕಿನ ಅರ್ಥವೇನು ಎಂದು ಯೋಚಿಸಲು ತೊಡಗಿದೆ. ಬಹುಶ; ಅದಕ್ಕೆ ನನ್ನ ಮಕ್ಕಳೇ ಕಾರಣ. ಅವು ನನ್ನ ದೃಷ್ಟಿಯನ್ನೂ , ಪಾತ್ರದ ಸ್ವರೂಪವನ್ನೂ ಬದಲಿಸಿದವು. ನಮ್ಮಪ್ಪ ಒಮ್ಮೆ ಹೀಗೆ ಹೇಳಿದ್ದರು ; "ಜಾನ್ ಮರಣ ಶಯ್ಯೆಯಲ್ಲಿರುವಾಗ ನೀನು "ಇನ್ನಷ್ಟು ಕಾಲ ಆಪ್ಹೀಸಿನಲ್ಲಿದ್ದಿರಬೇಕಿತ್ತು " ಎಂದು ಬಯಸುವನ್ತಾಗಬಾರದು." ಹಾಗಾಗಿ ನಾನು ಹೆಂಡತಿ ಮಕ್ಕಳೊಡನೆ ಹೆಚ್ಚು ಹೆಚ್ಚು ಸಮಯ ಕಳೆಯತೊಡಗಿದೆ. ಮಹತ್ವಾಕಾಂಕ್ಷೆಯ ಶಿಖರದಿಂದ ಕೆಳಗಿಳಿದು ಸಾಮಾನ್ಯವಾದರೂ ತೃಪ್ತಿಕರವಾದ ಬದುಕಿಗೆ ಹೊಂದಿಕೊಂಡೆ. ನನ್ನ ಗ್ರಾಹಕರ ಖುಷಿಗಾಗಿ ರೋಟರಿ ಕ್ಲಬ್ಬಿಗೆ ಸೇರಿದೆ. ಪ್ರತಿ ಶನಿವಾರ ಸಂಜೆ ಗೊಲ್ಪ್ಹ್ ಆಡತೊಡಗಿದೆ. ಆಗಾಗ ನನ್ನ ಮನಸ್ಸಿನಲ್ಲಿ "ಜೂಲಿಯನ್ ಈಗ ಏನಾಗಿರಬಹುದು " ಎನ್ನುವ ಯೋಚನೆ ಮರುಕಳಿಸುತ್ತಿತ್ತು.

ಬಹುಶ; ಆತ ತನ್ನ ಅಶಾಂತ ಸ್ವಭಾವಕ್ಕೆ ವಿರುದ್ದವಾದ ಪ್ರಾಶಾಂತ ಭಾರತದಲ್ಲೆಲ್ಲೋ ನೆಲಸಿರಬಹುದು. ಅಥವಾ ನೇಪಾಲದ ಬೆಟ್ಟಗಳಲ್ಲಿ ಚಾರಣ ಮಾಡುತ್ತಿರಬಹುದು. ಒಂದಂತೂ ಸ್ಪಷ್ಟವಾಗಿತ್ತು. ವಕೀಲಿ ವೃತ್ತಿಗಂತೂ ಆತ ಮರಳಿರಲಿಲ್ಲ, ಇಲ್ಲಿಂದ ಹೊರಟ ನಂತರ ಆತನಿಂದ ಯಾರಿಗೂ ಒಂದು ಪೋಸ್ಟ್ ಕಾರ್ಡ್ ಸಹ ಬಂದಿರಲಿಲ್ಲ.

ಎರಡು ತಿಂಗಳ ಹಿಂದೆ ನನ್ನ ಮನೆಯ ಬಾಗಿಲನ್ನು ಯಾರೋ ತಟ್ಟಿದಾಗ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕುವಂತಾಯಿತು . ಆ ಸಂಜೆ ನಾನು ನನ್ನ ಕೊನೆಯ ಕಕ್ಷಿದಾರನೊಡನೆ ಮಾತಾಡಿ ಕಳಿಸಿದ್ದೇನಷ್ಟೇ, ಅಷ್ಟು ಹೊತ್ತಿಗೆ ಸರಿಯಾಗಿ ನನ್ನ ಸಹಾಯಕಿ; ಜೆಸಿ ಒಳಗೆ ಬಂದು ಹೇಳಿದಳು;

"ಜಾನ್, ನಿಮ್ಮನ್ನು ನೋಡಲು ಯಾರೋ ಒಬ್ಬರು ಬಂದಿದ್ದಾರೆ. ಅವರಿಗೇನೋ ಅರ್ಜೆಂಟಾಗಿ ಮಾತನಾಡಲು ಇದೆಯಂತೆ. ಮಾತಾಡದೆ ಹಿಂದಿರುಗುವುದಿಲ್ಲ ಎನ್ನುತ್ತಿದ್ದಾರೆ. "

"ಜೇಸಿ, ನಾನೀಗ ಹೊರಗಡೆ ಹೋಗುತ್ತಿದ್ದೇನೆ . ಏನಾದರೂ ಒಂದಿಷ್ಟು ತಿಂದು ಈ ಹಾ-ಮಿಲ್ಟನ್ ಕೇಸನ್ನು ಮುಗಿಸಬೇಕೆನ್ದಿದ್ದೇನೆ. ನನಗೀಗ ಯಾರನ್ನೂ ನೋಡಲು ಸಮಯವಿಲ್ಲ. ಬೇಕಾದರೆ ನನ್ನ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಲು ಹೇಳು. ಮತ್ತೂ ಆತ ತೊಂದರೆ ಕೊಟ್ಟರೆ ಸೆಕ್ಯುರಿಟಿಯವರಿಗೆ ಹೇಳು " ನಾನೆಂದೆ. ಅಸಹನೆಯ ದನಿಯಲ್ಲಿ.

"ಇಲ್ಲ ಜಾನ್ , ಆತ ನಿಮ್ಮನ್ನು ನೋಡಲೇ ಬೇಕೆಂದು ಹಟಮಾಡುತ್ತಿದ್ದಾನೆ."

ಒಂದು ಕ್ಷಣ ನಾನೂ ಸೆಕ್ಯುರಿಟಿಯವರನ್ನು ಕರೆಯೋಣ ಎಂದು ಯೋಚಿಸಿದೆ. ಆದರೆ ಮರುಕ್ಷಣ ಈ ವ್ಯಕ್ತಿಗೆ ನಿಜವಾದ ಅಗತ್ಯವಿರಲೂಬಹುದು ಎಂದು ಭಾವಿಸಿ "ಓಕೆ , ಅವನನ್ನು ಕಳುಹಿಸು . ನಾನು ಅವನನ್ನು ನನ್ನ ಬಿಸಿನೆಸ್ ಗೂ ಬಳಸಿಕೊಳ್ಳಬಹುದು "ಎಂದೆ.

ನನ್ನ ಕ್ಯಾಬಿನ್ನಿನ ಬಾಗಿಲು ನಿಧಾನವಾಗಿ ತೆರೆಯಿತು. ಅದು ಪೂರ್ಣ ತೆರೆದಾಗ ಸುಮಾರು ನಲವತ್ತರ ಹರೆಯದ ಎತ್ತರವಾದ , ಗಟ್ಟಿಮುಟ್ಟಾದ ಶರೀರದ ವ್ಯಕ್ತಿ ಎದುರಾದ. ಅವನ ಮುಖದಲ್ಲಿ ಮುಗುಳ್ನಗೆಯಿತ್ತು. ಉತ್ಸಾಹ ಚೈತನ್ಯ ಚಿಮ್ಮುತ್ತಿತ್ತು. ಅವನನ್ನು ಕಂಡಾಕ್ಷಣ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸ್ಕೂಲಿಗೆ ಹೋಗುತ್ತಿದ್ದ ಶ್ರೀಮಂತ ಕುಟುಂಬಗಳಿಗೆ ಸೇರಿದ, ಉತ್ಸಾಹ ಪುಟಿಯುತ್ತಿದ್ದ ಮುದ್ದಾದ ಮಕ್ಕಳ ನೆನಪಾಯಿತು. ಅವನ ವ್ಯಕ್ತಿತ್ವದಲ್ಲಿದ್ದ ಒಂದು ಅನಿವ್ರಚನೀಯ ಶಾಂತಿ ದಿವ್ಯಸಾನ್ನಿಧ್ಯವನ್ನು ನೀಡಿದಂತಿತ್ತು. ಇನ್ನು ಅವನ ಆ ನೀಲಿ ಕಣ್ಣುಗಳಂತೂ , ನವಯುವಕನ ಕೆನ್ನೆಯನ್ನು ಸವರುವ ಬ್ಲೇಡಿನಂತೆ ನನ್ನೊಳಗೆ ಸಲೀಸಾಗಿ ಪ್ರವೇಶಿಸಿದವು.

"ಬಹುಶ; ನನ್ನ ಉದ್ಯೋಗದ ಮೇಲೆ ಕಣ್ಣಿಟ್ಟಿರುವ ಮತ್ತೊಬ್ಬ ಪ್ರಚಂಡ ಲಾಯರ್ ಇರಬೇಕು" ಎಂದು ನಾನು ಒಂದು ಕ್ಷಣ ಯೋಚಿಸಿದೆ. "ಒಳ್ಳೆಯ ಕೇಸು. ಆದರೆ ಈತ ಹೀಗೇಕೆ ನನ್ನನ್ನು ನೋಡುತ್ತಾ ನಿಂತಿದ್ದಾನೆ ? ಕಳೆದವಾರ ನಾನು ಗೆದ್ದ ಡೈವೋರ್ಸ್ ಕೇಸಿಗೆ ಸಂಬಂಧಿಸಿದ ಪತಿಯಾಗಿರಲಾರನಷ್ಟೇ ? ಸೆಕ್ಯುರಿಟಿಗಾರ್ಡನ್ನು ಕರೆದಿದ್ದರೂ ತಪ್ಪಾಗುತ್ತಿರಲಿಲ್ಲವೆಂದು ಕಾಣುತ್ತದೆ..."ಹೀಗೆ ನನ್ನ ಯೋಚನೆ ಸಾಗಿತ್ತು.

ತನ್ನ ಮೆಚ್ಚಿನ ಶಿಷ್ಯನನ್ನು ವಾತ್ಸಲ್ಯಭಾವದಿಂದ ನೋಡುವ ಬುದ್ಧನಂತೆ ಈ ವ್ಯಕ್ತಿ ನನ್ನ ಕಡೆಗೆ ಮುಗುಳ್ನಗುತ್ತಾ ನೋಡುತ್ತಿದ್ದ . ಕೆಲಕ್ಷಣಗಳ ಮುಜುಗರದ ಮೌನದ ಬಳಿಕ ಆತ ಒಂದು ರೀತಿಯ ಅಧಿಕಾರವಾಣಿಯಿಂದ ಹೇಳಿದ ; "ಜಾನ್, ಬಂದ ಅತಿಥಿಗಳನ್ನು ನೀನು ಉಪಚರಿಸುವುದು ಹೀಗೇನಾ? ಅದೂ ನ್ಯಾಯಾಲಯದಲ್ಲಿ ಯಶಸ್ಸು ಗಳಿಸುವ ಕಳೆಯನು ಕಳಿಸಿದ ನನ್ನಂಥವರನ್ನೂ ? ಛೆ ! ನನ್ನ ವೃತ್ತಿಯ ಗುಟ್ಟುಗಳನ್ನು ನಾನೇ ಬಚ್ಚಿಟ್ಟು ಕೊಳ್ಳಬೇಕಾಗಿತ್ತು ".

ನನ್ನ ಹೊಟ್ಟೆಯಲ್ಲಿ ಏನೋ ವಿಚಿತ್ರ ತಳಮಳ. ಆ ಗಂಭೀರ. ಜೇನಿನಂತ ಸ್ವರವನ್ನು ಕೇಳಿದ ಕೂಡಲೇ ವ್ಯಕ್ತಿ ಯಾರೆಂದು ತಿಳಿಯಿತು. ನನ್ನ ಎದೆ ಬಡಿದುಕೊಂಡಿತು.

"ಅರೇ! ಜೂಲಿಯನ್ ? ನೀನೇನಾ ? ಇದು ನಿಜವಾ ? ನನಗೆ ನಂಬೋಕೆ ಆಗ್ತಾ ಇಲ್ಲ !"

ಆತ ಗಹಗಹಿಸಿ ನಕ್ಕಾಗ ನನ್ನ ಸಂದೇಹಕ್ಕೆ ಉತ್ತರ ದೊರೆಯಿತು. ನನ್ನೆದುರು ನಿಂತ ವ್ಯಕ್ತಿ ಹಿಂದೆ ಕಳೆದುಹೋಗಿದ್ದ ಭಾರತೀಯ ಯೋಗಿ -ಜೂಲಿಯನ್ ಮ್ಯಾನ್ ಟಾಲ್! ಅವನ ವ್ಯಕ್ತಿತ್ವದಲ್ಲಿ ಉಂಟಾಗಿದ್ದ ಅದ್ಭುತ ಪರಿವರ್ತನೆ ನನ್ನನ್ನು ದಂಗಾಗಿಸಿತ್ತು . ಅಂದು ಇದ್ದ ನಿಲ್ಲದ ಕೆಮ್ಮು, ನಿಸ್ತೇಜ ಕಣ್ಣು , ವೃದ್ಧಾಪ್ಯದ ಲಕ್ಷಣಗಳು ಮುಖದಲ್ಲಿ ಸ್ಥಾಯಿಯಾಗಿದ್ದ ಕಹಿಲೆಯ ಪ್ರೇತ ಕಳೆ -ಎಲ್ಲವೂ ಮಾಯವಾಗಿದ್ದವು. ಅದರ ಸ್ಥಾನದಲ್ಲಿ ತುಂಬಿದ , ಸುಕ್ಕಿಲ್ಲದ ಮುಖ ಆರೋಗ್ಯದ ಉಕ್ಕನ್ನು ಸಾರಿಹೇಳುತ್ತಿತ್ತು. ಅವನ ಕಣ್ಣುಗಳು ತೇಜಸ್ಸಿನಿಂದ ಹೊಳೆಯುತ್ತಿದ್ದವು. ಅದಕ್ಕಿಂತಲೂ ಅವನ ವ್ಯಕ್ತಿತ್ತ್ವದಲ್ಲಿದ್ದ ಪ್ರಾಶಾಂತ ಗಾಂಭೀರ್ಯ ಅಚ್ಚರಿ ಗೊಳಿಸು ವಂತಿತ್ತು. ಅವನನ್ನೇ ದಿಟ್ಟಿಸಿ ನೋಡುವುದೇ ಆನಂದವೆನಿಸಿತು. ಈಗ ಆತ ಬಿಗಿತ, ಉದ್ವೇಗಗಳಿಂದ ಸಟೆದುಕೊಂಡಿದ್ದ ಹಳೆಯ ಜೂಲಿಯನ್ ಆಗಿರಲಿಲ್ಲ . ಮುಗುಳ್ನಗುತ್ತಿರುವ ವೀರ್ಯವಂತ ಯುವಕನಾಗಿದ್ದ. ಪರಿವರ್ತನೆಯ ಪ್ರತೀಕವಾಗಿದ್ದ.



ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.magneticsponsoringonline.com/letter_1.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ