MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಫೆಬ್ರವರಿ 16, 2011

ಜೀವನದ ಬಗ್ಗೆ ನನ್ನದೊಂದು ಮಾತು

ಎಷ್ಟೋ ಜನ ಏನೇನೋ ಮಾಡಿ , ಏನೇನೋ ಆಗಿ ಹೇಳದೆ ಕೇಳದೆ ಪ್ರಪಂಚವನ್ನು ತ್ಯಜಿಸಿ ತಾನೂ ಮಾಡಿದ್ದು , ಸಂಪಾದಿಸಿದ್ದು ಎಲ್ಲವನ್ನೂ ಬಿಟ್ಟು ಹೋಗಿರುತ್ತಾರೆ. ಹಾಗಾದರೆ ಜೀವನದ ಉದ್ದೇಶವೇನು ?. ನನ್ನ ಪ್ರಕಾರ " ಕ್ಷಣದಲ್ಲಿ ಬದುಕುವುದೇ ಜೀವನದ ಉದ್ದೇಶ ", ಕ್ಷಣಕ್ಕಾಗಿ ಅಂದ ತಕ್ಷಣ ಕೆಲವರಿಗೆ ಅನ್ನಿಸಬಹುದು ನಾನು ಹೇಳುವುದು ಎಲ್ಲಾ ಸುಳ್ಳು ಎಂದು . ನಮ್ಮ ಜೀವನ ಒಂದು ಮಕ್ಕಳಾಟ ದಂತೆ ಅಷ್ಟೇ . ನಾವು ವಿಧೀಯ ಮಕ್ಕಳು. ಆಕೆಗೆ ನಾವೆಂದರೆ ತುಂಬಾ ಪ್ರೀತಿ. ನಾವು ನಮ್ಮ ಮಕ್ಕಳು ಸುಳ್ಳರಾದರೆ, ಕಳ್ಳರಾದರೆ,ವಂಚಕರಾದರೆ,ದುಷ್ಟರಾದರೆ, ಪೋಲಿಗಳಾದರೆ ಎಷ್ಟೂ ದು;ಖಪಡುತ್ತೆವೆಯೋ ಹಾಗೆಯೇ ವಿಧಿ ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಗಮನಿಸುತ್ತ ಇರುತ್ತದೆ. ಯಾವ ತಾಯಿ ತಂದೆಗೆ ತಮ್ಮ ಇಷ್ಟ ವಾದ , ತಮ್ಮ ಮಾತನ್ನು ಕೇಳುವ , ತಾವು ಹೇಳಿದ ಕೆಲಸವನ್ನು ಮಾಡುವ ಮಕ್ಕಳ ಮೇಲೆ ಹೆಚ್ಚು ಪ್ರೀತಿ ವಿಶ್ವಾಸ ತೋರಿಸಿ ತಮ್ಮ ಕಣ್ಣ ಮುಂದೆಯೇ ಇಟ್ಟು ಕೊಳ್ಳುತ್ತಾರೋ ಹಾಗೆಯೇ ವಿಧಿ ಯಾರೂ ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿರುತ್ತಾರೆಯೋ ಅಂಥವರನ್ನು ಬೇಗ ತನ್ನ ಬಳಿಗೆ ಕರೆದುಕೊಳ್ಳುತ್ತಾನೆ. ಹಾಗಾಗಿಯೇ ಉತ್ತಮರ ಬದುಕು ಅಣಬೆ ಯಂತೆ ಸ್ವಲ್ಪ ವೇಳೆ ಅಷ್ಟೇ . ಜನ ಹೇಳಿಕೊಳ್ಳುವುದು ಅವರು ಅಷ್ಟು ಬೇಗ ಸತ್ತರಲ್ಲ , ಇನ್ನೂ ಸ್ವಲ್ಪ ದಿನ ಬದುಕಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು.

ಇನ್ನೂ ಕೆಲವರನ್ನೂ ನೋಡುತ್ತೇವೆ ಅವರು ಜೀವ ತೆಗೆದುಕೊಳ್ಳಲು ವಿಷ ಕುಡಿಯುತ್ತಾರೆ, ಬೇಡವಾದದ್ದನ್ನು ಮಾಡುತ್ತಾರೆ , ಆದರೆ ಅವರು ಸಾಯುವುದಿಲ್ಲ . ಮುಂದೊಂದು ದಿನ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಪ್ರಜ್ವಲಿಸುತ್ತಾರೆ.

ಇನ್ನೂ ಸ್ವಲ್ಪ ಜನ ಅಕಷ್ಮಿಕ ವಾಗಿ ಹಟಾತ್ ಮರಣ ಒಪ್ಪುವುದು , ರಸ್ತೆ ಅಪಘಾತ , ಕೊಲೆ ಇತ್ಯಾಧಿ ಆಗಿ ಸಾಯುತ್ತಾರೆ. ತಾಯಿ ತನ್ನ ಮಗುವನ್ನು ತನ್ನ ಬಳಿಗೆ ಕರೆದುಕೊಳ್ಳಲು ಬೇರೆಯವರ ಅಪ್ಪಣೆ ಕೇಳ ಬೇಕೇ ?

ಕೂರಾನ್ ನಲ್ಲಿ ಒಂದೆಡೆ ಹೇಳಲಾಗಿದೆ ಪ್ರತಿಯೊಂದು ಕಲ್ಲಿಗೂ ಅದು ಯಾರ ಮೇಲೆ ಬೀಳಬೇಕು , ಯಾವಾಗ ಬೀಳಬೇಕು , ಯಾರೂ ಸಾಯಬೇಕು ಎಂದು ಮೊದಲೇ ಬರೆದಿದೆ ಅಂತೆ !

ಒಬ್ಬ ವ್ಯಕ್ತಿ ಹುಟ್ಟಿದ್ದು ಆತನ ಕೆಲಸ ವಿಧಿಯ ಇಚ್ಚೆಯಂತೆ ಪೂರೈಸಿದ ಮೇಲೆ ಹೇಳದೆ ಕೇಳದೆ ವಿಧಿಯ ಬಳಿಗೆ ಹೋಗಲೇ ಬೇಕು. ಆತ ಯಾರನ್ನೂ ವಂಚಿಸುವುದಿಲ್ಲ. ಎಲ್ಲರ ಮೇಲೂ ಕಣ್ಣು ಇಟ್ಟಿರುತ್ತಾನೆ. ತನ್ನ ಕೆಲಸ ಪೂರೈಸಿದ ಮಗನನ್ನು ಒಂದು ಕ್ಷಣ ಇಟ್ಟು ಕೊಳ್ಳುವುದಿಲ್ಲ . ತನ್ನಲ್ಲಿಗೆ ಕರೆಸಿಕೊಳ್ಳುತ್ತಾನೆ. ಇದೆ ವಿಧಿಯ ಗುಟ್ಟು.

ಇಷ್ಟೆಲ್ಲಾ ಹೇಳಲು ನಾನು ವೇಧಾಂತಿ ಅಲ್ಲ . ಯಾಕೋ ಏನೋ ಗೊತ್ತಿಲ್ಲ ಇಂದು ಮುಸ್ಲಿಂ ಹಬ್ಬ ಹಾಗಾಗಿ !

ಇಂತಿ ನಿಮ್ಮ ವಿಶ್ವಾಶಿ

.ಟಿ. ನಾಗರಾಜ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ