MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಜುಲೈ 31, 2010

ಲಕ್ಷಾಧಿಪತಿ ಗಳಾಗುವುದು ತುಂಬಾ ಸುಲಭ !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆ ಗಳು

"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಇವತ್ತು ಅಗಸ್ಟ್ ತಿಂಗಳ ಒಂದನೇ ತಾರೀಖು ಇವತ್ತು ಏನೋ "ಸ್ನೇಹಿತರ ದಿನ "ವಂತೆ . ರಾತ್ರಿಯಿಂದ ನಮ್ಮ ಅಭಿಮಾನಿಗಳುಸ್ನೇಹಿತರು ಎಸ್.ಎಂ .ಎಸ್ ಮೇಲೆ ಎಸ್ .ಎಂ. ಎಸ್ ನನಗೆ ಕಳುಹಿಸುತ್ತಲೇ ಇದ್ದಾರೆ. ಆದರೆ ನಾನೂ ಅವರ ಜತೆ ಗೆ ನಿಮಗೂಕೂಡ ಏನೂ ಉಡುಗೊರೆ ಕೊಡುವುದು ಎಂದು ಯೋಚಿಸುತ್ತಿದ್ದೆ. ಕೊನೆಗೆ ಹೊಳೆಯಿತು ನಮ್ಮೆಲ್ಲ ಅಭಿಮಾನಿಗಳಿಗೆ " ಲಕ್ಷಾಧಿಪತಿ ಹೇಗೆ ಯಾಗುವುದು " ಎಂಬ ಬಗ್ಗೆ ಒಂದು ಕಿರು ಲೇಖನ . ಜತೆಗೆ ಅವಕಾಶವನ್ನು ಉಡುಗೊರೆಯಾಗಿ ಕೊಟ್ಟರೆ ಮುಂದಿನ ವರ್ಷಕ್ಕೆಅವರು ತಮ್ಮ ಸ್ನೇಹಿತರುಗಳಿಗೆ ನಾನು ಕೊಟ್ಟ ಉಡುಗೊರೆಯನ್ನು ಹಾಗೆಯೇ ಜೋಪಾನವಾಗಿಟ್ಟು ಕೊಡುವರು.

ಯಾರಿಗಿಲ್ಲ ಆಸೆ ! ಹಣದ ಆಸೆ, ! ಅಧಿಕಾರದ ಆಸೆ ! ಕಾರು ಆಸೆ ! ಬೈಕ್ ಆಸೆ ! ಪ್ರೇಮಿಗಳ ಆಸೆ ! ಪ್ರಾಣದ ಆಸೆ !.........ಹೀಗೆ ಬೆಳೆಯುತ್ತ ಹೋಗುತ್ತದೆ ಅಲ್ಲವೇ ಆಸೆಗಳ ಪಟ್ಟಿ. ಆದರೆ ಆಸೆ ಒಂದು ಇದ್ದರೆ ಸಾಲದು , ಆಸೆ ಎನ್ನುವುದು ಒಬ್ಬ ನೆಟ್ ವರ್ಕ್ಮಾರ್ಕೆಟಾರ್ ಗೋಡೆಯ ಮೇಲೆ ಅಂಟಿಸಿಕೊಂಡ" ಡ್ರೀಮ್ " ಫಲಕ ಆಗಿರಬಾರದು. ಅದನ್ನು ಕಾರ್ಯರೂಪಕ್ಕೆ ತರಲುಹಗಲಿರುಳು ಪ್ರಯತ್ನಿಸಬೇಕು. ಕೆಲವರು ಡ್ರೀಮ್ಸ್ ಪಟ್ಟಿ ಅಂಟಿಸಿಕೊಂಡು ಚೆನ್ನಾಗಿ ದುಡಿದು ಮುಂದೆ ಬಂದಿದ್ದಾರೆ ಅವರ ಬಗ್ಗೆ ನಾನು ಹೇಳುತ್ತಿಲ್ಲ. ಕೇವಲ ಕೆಲವು ಸೋಮಾರಿ ಜನರ ಬಗ್ಗೆ ನಾನು ಹೇಳುವುದು. "ಎಲ್ಲಕ್ಕೂ ದಾರಿ ಇದ್ದೆ ಇದೆ , ಎಲ್ಲವನ್ನೂಮಾಡಬಹುದು " ಆದರೆ ಸ್ವಲ್ಪ ತಾಳ್ಮೆ , ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಷ್ಟೇ !. ಅದಕ್ಕೆ ಹಿರಿಯವರು ಹೇಳಿದ್ದು ತಣ್ಣೀರು ಆದರೂ ತಣಿಸಿ ಕುಡಿ " . ಏನೇ ಇರೆಲಿ ಈಗ ಲಕ್ಷಾಧಿಪತಿ ಹೇಗೆ ಆಗಬಹುದು ನೋಡೋಣ.

ಪ್ರತಿಯೊಬ್ಬ ಮನುಷ್ಯನಿಗೂ ಮಗಳಮದುವೆಗೆ ,ಹೂಡಿಕೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ , ನಿವೃತ್ತಿ ವೇಳೆಯಲ್ಲಿ ಹಣ ಬೇಕೆಂದುಹೂಡಿಕೆ ಮಾಡಿಡುತ್ತಾರೆ ತಮ್ಮ ದುಡಿಮೆಯ ವೇಳೆಯಲ್ಲಿ . ಮಾಡಬೇಕೆಂಬ ಆಸೆ ಪ್ರತಿಯೊಬ್ಬನಿಗೂ ಇದ್ದೆ ಇದೆ. ಆದರೆ ಕೆಲವರಿಗೆಗೊತ್ತು , ಇನ್ನೂ ಕೆಲವರಿಗೆ ಗೊತ್ತಿಲ್ಲ.

---------------------------------------------------------------------------------------------
ಒಂದು ವರ್ಷದ ಅವದಿ ;-

ಪ್ರತಿ ತಿಂಗಳು ಎಂಟು ಸಾವಿರದ ಇಪ್ಪತೈದು ರೂಪಾಯಿಗಳಂತೆ ಹನ್ನೆರಡು ತಿಂಗಳು ನಿಮ್ಮ ಬ್ಯಾಂಕ್ ಅರ್,ಡಿ.ಖಾತೆಗೆಕಟ್ಟಿದರೆ ನಿಮಗೆ ಒಂದು ಲಕ್ಷದ ಎರಡು ನೂರ ಇಪ್ಪತೈದು ರೂಪಾಯಿಗಳು ಸಿಗುತ್ತದೆ. (೮೦೨೫*೧೨ =೯೬೩೦೦ ನೀವುಕಟ್ಟಿದ ಹಣ )
----------------------------------------------------------------------------------------------

ಎರಡು ವರ್ಷದ ಅವದಿ ;=

ಪ್ರತಿ ತಿಂಗಳು ಮೂರು ಸಾವಿರದ ಎಂಟು ನೂರ ಐವತ್ತು ರೂಪಾಯಿಗಳಂತೆ ಇಪ್ಪತ್ತನಾಲ್ಕು ತಿಂಗಳು ಬ್ಯಾಂಕ್ ನಿಮ್ಮ ಅರ್ .ಡಿಖಾತೆಗೆ ಕಟ್ಟಿದರೆ ನಿಮಗೆ ಒಂದು ಲಕ್ಷದ ಒಂದು ನೂರ ತೊಂಬತ್ತು ರೂಪಾಯಿಗಳು ಸಿಗುತ್ತದೆ.(೨೪*೩೮೫೦=೯೨೪೦೦ ನೀವುಕಟ್ಟಿದ ಹಣ )
----------------------------------------------------------------------------------------------

ಮೂರು ವರ್ಷದ ಅವದಿ ;-

ಪ್ರತಿ ತಿಂಗಳು ಎರಡು ಸಾವಿರದ ನಾಲ್ಕುನೂರ ಎಪ್ಪತೈದು ರೂಪಾಯಿಗಳನ್ನು ಮೂವತೈದು ತಿಂಗಳು ನಿಮ್ಮ ಬ್ಯಾಂಕ್ ಅರ್.ಡಿಖಾತೆಗೆ ಕಟ್ಟಿದರೆ ನಿಮಗೆ ಒಂದು ಲಕ್ಷದ ಒಂಬತ್ತು ನೂರ ಹತ್ತು ರೂಪಾಯಿಗಳು ಸಿಗುತ್ತದೆ .(೩೬*೨೪೭೫=೮೯೧೦೦ ನೀವು ಕಟ್ಟಿದಹಣ )
------------------------------------------------------------------------------------------------

ನಾಲ್ಕು ವರ್ಷದ ಅವದಿ;-
ಪ್ರತಿ ತಿಂಗಳು ಒಂದು ಸಾವಿರದ ಏಳು ನೂರ ಎಪ್ಪತೈದು ರೂಪಾಯಿಗಳನ್ನು ನಲವತ್ತೆಂಟು ತಿಂಗಳು ಬ್ಯಾಂಕ್ ನಿಮ್ಮ ಅರ್.ಡಿಖಾತೆಗೆ ಕಟ್ಟಿದರೆ ನಿಮಗೆ ಸಿಗುವ ಹಣ ಒಂದು ಲಕ್ಷದ ಐದು ನೂರ ಎಪ್ಪತ್ತೈದು ರೂಪಾಯಿಗಳು ಸಿಗುತ್ತದೆ.(೪೮*೧೭೭೫=೮೫೨೦೦ ರೂಪಾಯಿಗಳು ನೀವು ಕಟ್ಟಿದ ಹಣ )
-------------------------------------------------------------------------------------------------

ಐದು ವರ್ಷದ ಅವದಿ ;-
ಪ್ರತಿ ತಿಂಗಳು ಒಂದು ಸಾವಿರದ ಮೂರುನೂರ ಎಪ್ಪತೈದು ರೂಪಾಯಿಗಳನ್ನು ಅರವತ್ತು ತಿಂಗಳು ನಿಮ್ಮ ಬ್ಯಾಂಕ್ ಅರ್.ಡಿಖಾತೆಗೆ ಕಟ್ಟಿದರೆ ನಿಮಗೆ ಸಿಗುವ ಹಣ ಒಂದು ಲಕ್ಷದ ಒಂದು ಸಾವಿರದ ಐದು ನೂರ ಅರವತ್ತು ರೂಪಾಯಿಗಳು೧೩೭೫*೬೦=೮೨೫೦೦ ರೂಪಾಯಿಗಳು ನೀವು ಕಟ್ಟಿದ ಹಣ )
--------------------------------------------------------------------------------------------------

ಆರು ವರ್ಷದ ಅವದಿ;-
ಪ್ರತಿ ತಿಂಗಳು ಒಂದು ಸಾವಿರದ ಒಂದು ನೂರು ರೂಪಾಯಿಗಳಂತೆ ಎಪ್ಪತ್ತೆರಡು ತಿಂಗಳು ನಿಮ್ಮ ಬ್ಯಾಂಕ್ ಆರ್ .ಡಿ .ಖಾತೆಗೆಕಟ್ಟಿದರೆ ನಿಮಗೆ ಸಿಗುವ ಹಣ ಒಂದು ಲಕ್ಷದ ಒಂದು ಸಾವಿರದ ಏಳುನೂರ ಇಪ್ಪಾತ್ತೆಂಟು ರೂಪಾಯಿಗಳು .(೧೧೦೦*೭೨=೭೯೨೦೦ರೂಪಾಯಿಗಳು ನೀವು ಕಟ್ಟಿದ ಹಣ )

-------------------------------------------------------------------------------------------------

ಏಳು ವರ್ಷದ ಅವದಿ;-
ಪ್ರತಿ ತಿಂಗಳು ಒಂಬತ್ತು ನೂರು ರೂಪಾಯಿಗಳಂತೆ ಎಂಬತ್ತನಾಲ್ಕು ತಿಂಗಳು ನಿಮ್ಮ ಬ್ಯಾಂಕ್ ಅರ್.ಡಿ ಖಾತೆಗೆ ಕಟ್ಟಿದರೆ ನಿಮಗೆಸಿಗುವ ಹಣ ಒಂದು ಲಕ್ಷದ ಒಂದು ಸಾವಿರದ ಮೂರು ನೂರ ಅರವತ್ತ ಒಂಬತ್ತು ರೂಪಾಯಿಗಳು (೯೦೦*೮೪=೭೫೬೦೦ ರೂಪಾಯಿಗಳು ನೀವು ಕಟ್ಟಿದ ಹಣ )
-------------------------------------------------------------------------------------------------

ಎಂಟು ವರ್ಷದ ಅವದಿ;-
ಪ್ರತಿ ತಿಂಗಳು ಏಳು ನೂರ ಐವತ್ತು ರೂಪಾಯಿಗಳಂತೆ ತೊಂಬತ್ತಾರು ತಿಂಗಳು ನಿಮ್ಮ ಬ್ಯಾಂಕ್ ಅರ್.ಡಿ.ಖಾತೆ ಗೆ ಕಟ್ಟಿದರೆನಿಮಗೆ ಸಿಗುವ ಹಣ ಒಂದು ಲಕ್ಷದ ಆರು ಎಂಟು ನೂರ ಮೂವತ್ತೈದು ರೂಪಾಯಿಗಳು (೭೫೦*೯೬=೭೨೦೦೦ ರೂಪಾಯಿಗಳುನೀವು ಕಟ್ಟಿದ ಹಣ )
------------------------------------------------------------------------------------------------

ಒಂಬತ್ತು ವರ್ಷದ ಅವದಿ;-
ಪ್ರತಿ ತಿಂಗಳು ಆರುನೂರ ಐವತ್ತು ರೂಪಾಯಿಗಳಂತೆ ನೂರಾ ಎಂಟು ತಿಂಗಳು ನಿಮ್ಮ ಬ್ಯಾಂಕ್ ಆರ್ .ಡಿ ಖಾತೆಗೆ ಕಟ್ಟಿದರೆನಿಮಗೆ ಸಿಗುವ ಹಣ ಒಂದು ಲಕ್ಷದ ಎರಡು ಸಾವಿರದ ಏಳುನೂರ ಮೂವತ್ತೆಂಟು ರೂಪಾಯಿಗಳು (೬೫೦*೧೦೮=೭೦೨೦೦ರೂಪಾಯಿಗಳು ನೀವು ಕಟ್ಟಿದ ಹಣ )
----------------------------------------------------------------------------------------------

ಹತ್ತು ವರ್ಷದ ಅವದಿ;-
ಪ್ರತಿ ತಿಂಗಳು ಐದು ನೂರ ಐವತ್ತು ರೂಪಾಯಿಗಳಂತೆ ಒಂದು ನೂರ ಇಪ್ಪತ್ತು ರೂಪಾಯಿಗಳನ್ನು ನಿಮ್ಮ ಬ್ಯಾಂಕ್ ಅರ್.ಡಿಖಾತೆ ಗೆ ಕಟ್ಟಿದರೆ ನಿಮಗೆ ಸಿಗುವ ಹಣ ಒಂದು ಲಕ್ಷದ ಒಂಬತ್ತು ನೂರ ಎಂಬತ್ತ ಒಂಬತ್ತು ರೂಪಾಯಿಗಳು. (೫೫೦*೧೨೦=೬೬೦೦೦ ರೂಪಾಯಿಗಳು ನೀವು ಕಟ್ಟಿದ ಹಣ)
-------------------------------------------------------------------------------------------

ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಕಾರ್ಪೂರೆಶನ್ ಬ್ಯಾಂಕ್ ಅನ್ನು ಸಂಪರ್ಕಿಸಿ
ಉಚಿತ ಕರೆ ;೧೮೦೦ ೪೨೫ ೩೫೫೫




ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486















, " . . . (

ಶುಕ್ರವಾರ, ಜುಲೈ 30, 2010

ಪ್ರಕೃತಿ ಪ್ರೇಮಿಯ ವಿ- ನೂತನ ಪ್ರತಿಭಟನೆ !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಅಮೆರಿಕದ ದಕ್ಷಿಣ ಕ್ಯಾಲಿಪೋರ್ನಿಯಾದಲ್ಲಿ ಸುಮಾರು ನಾನ್ನೂರು ವರ್ಷ ವಯಸ್ಸಾಗಿದ್ದ ಒಂದು ದೊಡ್ಡ ಓಕ್ ಮರವಿತ್ತು. ಅದುಸುಮಾರು ಎಪ್ಪತ್ತು ಅಡಿಗಳಷ್ಟು ಎತ್ತರ ಮತ್ತು ನೂರು ಅಡಿಗಳಷ್ಟು ಅಗಲವಿತ್ತು. ಅಲ್ಲಿನ ಜನರಿಗೆ ಮತ್ತು ಮಕ್ಕಳಿಗೆ ಮರದ ಬಗ್ಗೆಬಹಳ ಪ್ರೀತಿ. ಅದನ್ನು "ಓಲ್ಡ್ ಗ್ಲೋರಿ " ಮರವೆಂದು ಕರೆಯುತ್ತಿದ್ದರು. ಒಂದು ಚತುಷ್ಪಥ ರಸ್ತೆಯ ಅಭಿವೃದ್ದಿಗಾಗಿ ಮರವನ್ನುಕಡಿದು ಹಾಕಲಾಗುವುದೆಂಬ ಸುದ್ಧಿ ಬರಸಿಡಿಲಿನಂತೆ ಬಂದೆರಗಿತು. ಸರಕಾರಕ್ಕೆ ಮತ್ತು ಅಭಿವೃದ್ದಿ ಮಂಡಳಿಗೆ ಮರವನ್ನುಕಡಿಯಬಾರದೆಂದೂ ,ರಸ್ತೆಯ ದಿಕ್ಕನ್ನು ಬದಲಾಯಿಸಬೇಕೆಂದೂ ಅನೇಕ ಮನವಿಗಳನ್ನು ಸಲ್ಲಿಸಲಾಯಿತು. ಆದರೆ ಮನವಿಗಳೆಲ್ಲ ಮಂಡಳಿಯ ಕಿವಿಯ ಮೇಲೆ ಬೀಳಲಿಲ್ಲ. ಜನರೆಲ್ಲಾ ಚಿಂತಾಕ್ರಾಂತರಾದರು.

ಆಗ ಬಂದವರು ಜಾನ್ ಕ್ವಿಗ್ಲಿ ಎಂಬ ನಲವತ್ತೆರಡು ವರ್ಷ ವಯಸ್ಸಿನ ಉತ್ಸಾಹಿ ವ್ಯಕ್ತಿ ಅವರಿಗೂ ಮರದ ಬಗ್ಗೆ ಅತೀವ ಪ್ರೀತಿ. ಮರ ಕಡಿಯಬಾರದೆಂಬ ಮನವಿಗಳಿಗೆ ಯಾರೂ ಕಿವಿಗೊಡದಿರುವುದು ಅವರಿಗೆ ಕಂಡು ಬಂತು. ಅವರು ಎರಡು ಸಾವಿರದ ಎರಡರಇಸವಿ ನವಂಬರ್ ತಿಂಗಳ ಒಂದನೇ ತಾರೀಕಿನಂದು , ಮರವನ್ನು ಹತ್ತಿದರು. ಒಂದು ಸಣ್ಣ ಅತ್ತವನ್ನು ನಿರ್ಮಿಸಿ ಅಲ್ಲಿಕುಳಿತುಬಿಟ್ಟರು. "ಮರ ಕಡಿಯುವುದಿದ್ದರೆ, ಮೊದಲು ನನ್ನನ್ನು ಕಡಿಯಿರಿ ! ಮರ ಉರುಳಿಸಿ !ಎಂಬ ಫಲಕಗಳನ್ನು ನೇತುಹಾಕಿದರು. ಅಭಿವೃದ್ಧಿ ಮಂಡಳಿಯವರು ಬಂದರು . ಸರಕಾರದವರು ಬಂದರು. ಪೋಲೀಸಿನವರು ಬಂದರು. ಯಾರು ಏನುಹೇಳಿದರೂ ಆತ ಕೆಳಗಿಳಿದು ಬರಲಿಲ್ಲ. ಮರವನ್ನು ಕಡಿಯುವುದಿಲ್ಲ ಎಂಬ ಭರವಸೆ ದೊರೆಯುವವರೆಗೂ ಕೆಳಗಿಳಿಯುವುದಿಲ್ಲ ಎಂದುಪಟ್ಟಾಗಿ ಕುಳಿತುಬಿಟ್ಟರು. ಅಟ್ಟದ ಮೇಲೆಯೇ ಊಟ, ತಿಂಡಿ, ನಿದ್ದೆ ಎಲ್ಲವೂ ನಡೆಯುತ್ತಿತ್ತು. ವಾರಗಳು , ತಿಂಗಳುಗಳುಕಳೆಯಿತು. ಇವರ ವಿನೂತನ ಪ್ರತಿಭಟನೆ ಇಲ್ಲರ ಗಮನ ಸೆಳೆಯಿತು. ಪತ್ರಿಕೆಗಳವರೂ, ಸುದ್ಧಿ ಮಾಧ್ಯಮದವರೂದೂರದರ್ಶನದವರೂ ಲ್ಲರೂ ಬರುತ್ತಿದ್ದರು. ಅವರ ಸಂದರ್ಶನ ಮಾಡುತ್ತಿದ್ದರು. ಜಾನ್ ಕೆಳಗಿಳಿದು ಬರುತ್ತಿರಲಿಲ್ಲ. ಟೆಲಿಫೋನ್ಮೂಲಕ ಅಥವಾ ವಾಕಿ ಟಾಕಿಯ ಮೂಲಕ ಸಂದರ್ಶನ ನಡೆಯುತ್ತಿತ್ತು. ರಾಷ್ಟ್ರಾದ್ಯಂತ ಸುದ್ಧಿ ಪ್ರಚಾರವಾಗುತ್ತಿತ್ತು. ಸ್ಥಳಿಯರುಮರದ ಕೆಳಗಡೆ ಟೆಂಟ್ ಹಾಕಿ ಕುಳಿತುಕೊಂಡರು . ದಿನೇ ದಿನೇ ಜನಸಂದಣೆ ಹೆಚ್ಚಾಗುತ್ತಾ ಹೋಯಿತು. ಜಾನ್ ರವರ ಮರದಮೇಲಿನ ವಾಸ ಎಪ್ಪತ್ತೊಂದು ದಿನಗಳಾದ ನಂತರ ಅಲ್ಲಿನ ಕೋರ್ಟ್ ಮಧ್ಯ ಪ್ರವೇಶಿಸಿ ಜಾನ್ ರನ್ನು ಮರದಿಂದಕೆಳಕ್ಕಿಳಿಸಬೇಕೆಂದೂ , ಮರವನ್ನೂ ಕಡಿಯದೇ ಬೇರೆಕಡೆಗೆ ಸ್ಥಳಅಂತರಿಸ ಬೇಕೆಂದೂ ತೀರ್ಮಾನ ನೀಡಿತು. ಎರಡುಸಾವಿರದಮೂರು ಜನವರಿ ಹತ್ತನೆಯ ತಾರೀಖು ಜಾನ್ ರನ್ನು ಕೆಳಗಿಳಿಸಲಾಯಿತು . ಅವರ ಹೋರಾಟ ಫಲ ನೀಡಿತು.

ತಜ್ಞರ ನೆರವಿನೊಂದಿಗೆ , ವೈಜ್ಞಾನಿಕ ಏರ್ಪಾಡುಗಳೊಂದಿಗೆ ಮರವನ್ನು ಸ್ಥಳಾಂತರಿಸಲಾಯಿತು . ನಾನ್ನೂರು ಕ್ವಿಂಟಾಲ್ ಗಳತೂಕದ ಮರವನ್ನು , ಒಂದುನೂರ ಇಪ್ಪತ್ತೆಂಟು ಚಕ್ರಗಳಿರುವ ಹದಿನಾರು ಟ್ರಾಲಿಗಳ ಮೇಲೆ ಏರಿಸಿ ಐದು ದೊಡ್ಡ ಟ್ರಕ್ಕುಗಳನೆರವಿನಿನಿಂದ ಸಾಗಿಸಿ ಅಲ್ಲಿಂದ ಒಂದು ಕಿಲೋ ಮೀಟರ್ ದೂರದ ಹೊಸ ಪಾರ್ಕಿನಲ್ಲಿ ನೆಡಲಾಯಿತು. ಈಗ "ಗ್ರ್ಯಾಂಡ್ ಗ್ಲೋರಿ " ಮರ ತನ್ನ ಪುನರ್ಜನ್ಮವನ್ನು ಆರೋಗ್ಯವಂತವಾಗಿ ಕಳೆಯುತ್ತಿದೆ.

ಒಬ್ಬ ವ್ಯಕ್ತಿಯ ದೃಢಸಂಕಲ್ಪ ಮತ್ತು ವಿನೂತನ ಹೋರಾಟ ಮರದ ಪುನರ್ಜನ್ಮಕ್ಕೆ ಕಾರಣವಾಯಿತು. ಭಾರತದ ಚಿಪ್ಕೋಆಂದೋಲನ ಅಮೆರಿಕದ ಕ್ಯಾಲಿಪೋರ್ನಿಯಾದ ವರಿಗೂ ಸ್ಫೂರ್ತಿ ನೀಡಿರಬಹುದೇ ?.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ /
+೯೧-9632172486














ಗುರುವಾರ, ಜುಲೈ 29, 2010

ಗೋಲ್ಕಂಡ ವಜ್ರದ ಗಣಿ ಹುಟ್ಟಿದ್ದು ಹೀಗೆ

ಪ್ರಪಂಚಂದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆ.
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಒಬ್ಬ ಅನುಕೂಲಸ್ಥ ರೈತನ ಸುಖಿ ಸಂಸಾರ. ಸಾಕಷ್ಟು ಹೊಲಗದ್ದೆ, ಹಣಕಾಸು ಎಲ್ಲವೂ ಇತ್ತು. ಆತನ ಮನೆ ಹಿಂದಗಡೆಪರ್ವತದ ತಪ್ಪಲಿನಿಂದಿಳಿದು ಬರುವ ತಿಳಿನೀರು ಬಿಳೀ ಮರಳಿನ ಮೇಲೆ ಹರಿದು ಹೋಗುತ್ತಿತ್ತು. ರೈತನಿಗೆ "ವಜ್ರಗಳು" ಏನೆಂದುಗೊತ್ತಿರಲಿಲ್ಲ. ಸೂರ್ಯನ ಕಿರಣಗಳನ್ನು ಮೀರಿಸುವ ಅತ್ಯಂತ ಬೆಲೆಬಾಳುವ ಕಲ್ಲುಗಳೇ ವಜ್ರಗಳೆಂದು ಗೊತ್ತಾಯಿತು. ಅದನ್ನುಹೊಂದಿದವರು ಶ್ರೀಮಂತರಾಗುತ್ತಾರೆಂದೂ ಗೊತ್ತಾಯಿತು. ಆತ ಅದನ್ನು ಹುಡುಕಿಕೊಂಡು ಹೊರಟ. ಯಾರನ್ನೋ "ವಜ್ರಗಳುಎಲ್ಲಿ ಸಿಗುತ್ತವೆ ?"ಎಂದು ಕೇಳಿದ . ಅವರು "ಪರ್ವತದಿಂದಿಳಿದು ಬರುವ ಬಿಳೀ ನೀರಿನ ಕಾಲುವೆಯಲ್ಲಿ ಸಿಗಬಹುದು "ಎಂದರು . ಆತ ತನ್ನ ಮನೆಯನ್ನೂ, ಹೊಲವನ್ನೂ ಮಾರಿದ. ಹೆಂಡತಿ ಮಕ್ಕಳಿಂದ ಬೀಳ್ಕೊಂಡು ,ಪ್ರಪಂಚ ಪರ್ಯಟನೆ ಪ್ರಾರಂಭಿಸಿದ. ವಜ್ರಹುಡುಕಿಕೊಂಡು ದೇಶದೆಶಾಂತರಗಳನ್ನು ವರ್ಷಗಟ್ಟಲೆ ತಿರುಗಿದ. ಎಲ್ಲಿಯೂ ವಜ್ರ ಸಿಗಲಿಲ್ಲ. ಕೊನೆಗೆ ನಿರಾಶೆಯಿಂದ ಸಮುದ್ರದಲ್ಲಿಧುಮುಕಿ ಪ್ರಾಣ ಕಳೆದುಕೊಂಡ.

ಕಡೆ ಆತನ ಜಮೀನನ್ನು ಕೊಂಡುಕೊಂಡ ಹೊಸಬ, ಜಮೀನನ್ನು ಅಭಿವೃದ್ಧಿ ಪಡಿಸಿದ. ಒಮ್ಮೆ ಆತನಿಗೆ ಕಾಲುವೆಯಲ್ಲಿಒಂದು ಕಪ್ಪು ಕಲ್ಲು ಸಿಕ್ಕಿತು. ಅದನ್ನು ತಂದು ಮಕ್ಕಳು ಆಟವಾದಲಿ ಎಂದು ಮನೆಯಲ್ಲಿಟ್ಟಿದ್ದ . ಮತ್ತದೇ ಪ್ರಯಾಣಿಕರು ರಸ್ತೆಯಲ್ಲಿಬಂದಾಗ ಕಲ್ಲನ್ನು ನೋಡಿ "ಇದು ಸಾಮಾನ್ಯ ಕಲ್ಲಲ್ಲ , ಇದು ವಜ್ರದ ಕಲ್ಲು , ಇದು ಎಲ್ಲಿ ಸಿಕ್ಕಿತು?" ಎಂದು ಕೇಳಿದರು. ಅಆತನಮ್ಮ ಮನೆಯ ಹಿಂದೆ ಹರಿಯುವ ಬಿಳೀ ನೀರಿನ ಕಾಲುವೆಯಲ್ಲಿ "ಎಂದ. ತಕ್ಷಣ ಎಲ್ಲರೂ ಹುಡುಕೋಣ ಬನ್ನಿ ಎಂದು ಎಲ್ಲರೂಅಲ್ಲಿಗೆ ಓಡಿದರು. ಕಾಲುವೆಯಲ್ಲಿ ಬಗೆದು ನೋಡಿದರು. ಒಂದಲ್ಲ, ಎರಡಲ್ಲ, ನೂರಾರು ಅಂತಹ ಕಲ್ಲುಗಳು ಸಿಕ್ಕಿದವು. ಅದನ್ನುತೆಗೆದುಕೊಂಡು ಬಂದು ಪಟ್ಟಣಕ್ಕೆ ಒಯ್ದಾಗ , ಅದರೊಳಗಡೆ ಬೆಲೆಬಾಳುವ ವಜ್ರಗಳು ಅಡಗಿವೆ ಎಂದು ಗೊತ್ತಾಯಿತು. ಹಾಗೆಮೊದಲಾಯಿತು ಗೋಲ್ಕಂಡ ಗಣಿಯ ಕತೆ. ಕೊಂಡುಕೊಂಡ ರೈತ ಅತ್ಯಂತ ಶ್ರೀಮಂತನಾದ . ಅದನ್ನು ಮಾರಿ ಹೋದ ರೈತನಿರ್ಗತಿಕನಾಗಿ , ನಿರಾಶೆಯಿಂದ ಪರದೇಶವೊಂದರಲ್ಲಿ ಪ್ರಾಣಬಿಟ್ಟಿದ್ದ. ಕತೆ ಇಲ್ಲಿಗೆ ಮುಗಿಯಿತು.

ಕತೆಯ ಸಂದೇಶ , ಬೆಲೆಬಾಳುವ ವಜ್ರಗಳು ರೈತನ ಮನೆಯ ಹಿತ್ತಲಲ್ಲೇ ಇದ್ದವು. ಆದರೆ ಆತ ಅದನ್ನುಹುಡುಕಿಕೊಂಡು ಪ್ರಪಂಚವನ್ನೇ ಸುತ್ತಿದ್ದ. ಹಾಗೆಯೇ ನಾವು ಅರಸುತ್ತಿರುವ ಯಶಸ್ಸು, ಶಾಂತಿ , ಸಮಾಧಾನ, ಕೀರ್ತಿ , ಸಿರಿಸಂಪತ್ತು ಅನೇಕ ಬಾರಿ ನಮ್ಮಲ್ಲೇ ಅಡಗಿರುತ್ತದೆ. ನಾವು ಅಲ್ಲಿ ಅಗೆಯದೇ , ಮತ್ತೆಲ್ಲೋ ಅಗೆಯಲು ಹೋಗುತ್ತೇವೆ. ನಿರಾಶರಾಗುತ್ತೇವೆ. .

ಕುರಾನ್ ಹೇಳುತ್ತದೆ "ಮುನುಷ್ಯ ನಷ್ಟು ತಾಳ್ಮೆಗೆಟ್ಟ ಪ್ರಾಣಿ ಪ್ರಪಂಚದಲ್ಲಿ ಬೇರೆಯಾವುದು ಇಲ್ಲ ".

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧-9632172486








"

ಬುಧವಾರ, ಜುಲೈ 28, 2010

ತವರಿನ ಋಣ ಅರ್ಥಾತ್ ಕೆರೆಯ ನೀರನ್ನು ಕೆರೆಗೆ ಚೆಲ್ಲಿ !

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆ ಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.

"ಎಲ್ಲರೂ ದುಡಿಯಬೇಕು ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ "

ನಾವು ಎಷ್ಟೋ ಜನ ವಿದ್ಯಾವನ್ತರನ್ನೂ ,ಕೆಲಸಗಾರರನ್ನೂ ನೋಡುತ್ತೇವೆ. ಯಾರ ಯಾರ ಕಾಲು ಕೈ ಹಿಡಿದುಡಾಕ್ಟರೋ,ಇನ್ಜಿನಿಯರ್, ಅಥವಾ ಯಾವುದೋ ಒಂದು ಕೆಲಸವನ್ನೂ ಕಲಿತು ಇಲ್ಲವೇ ಯಾರ ಯಾರ ಸಹಾಯ ಕೇಳಿ ,ಬೇಡಿಹೊರದೇಶಕ್ಕೆ ಹೋಗುತ್ತಾರೆ. ಅಲ್ಲಿ ಕೈ ತುಂಬಾ ಸಂಬಳ ತೆಗೆದುಕೊಂಡು ಇಲ್ಲಿ ಸಹಾಯ ಮಾಡಿದ ಜನರಿಗೆ , ಸಾಲ ಕೊಟ್ಟವರಿಗೆತಾಯ್ನಾಡಿಗೆ , ಕೆಲವರು ತಮ್ಮ ಕುಟುಂಬಕ್ಕೂ ಕೂಡ ಟಾಟ ,ಬೈ,ಬೈ ಹೇಳುತ್ತಾರೆ. ಅದರಲ್ಲಿ ಕೆಲವರು ಅಲ್ಲಿನ ರಸ್ತೆ , ಅಲ್ಲಿನ ನಗರವ್ಯವಸ್ಥೆ ಬಗ್ಗೆ ಹೊಗಳುತ್ತಾರೆ. ತಾಯ್ನಾಡನ್ನು ದೂರುತ್ತಾರೆ. ತಾವು ಹೇಗೆ ಮೇಲೆ ಬಂದೆವು ಎನ್ನುವುದನ್ನು ಮರೆಯುತ್ತಾರೆ. ಆದರೂಕೂಡ ನಮ್ಮನ್ನು ಹೆತ್ತು -ಹೊತ್ತು , ತನ್ನ ಆಹಾರದಲ್ಲಿ ನಮಗೆ ಪಾಲು ಕೊಟ್ಟ ತಾಯಿಗೆ ಸಮಾನ ತಮ್ಮ ತಾಯ್ನಾಡು ಎನ್ನುವುದನ್ನುಮರೆಯುವುದು ಒಂದು ವಿಷಾದದ ಸಂಗತಿ. ಕೆಲವರು ಪುಣ್ಯಾತ್ಮರು ಮಾತ್ರ ನಾವು ಪಟ್ಟ ಕಷ್ಟ ನಮ್ಮ ತಾಯ್ನಾಡಿನಲ್ಲಿ ಇರುವವರುಇನ್ನ್ನು ಮುಂದೆ ಪಡಬಾರದು ಏನಾದರೂ ಒಂದು ಅಳಿಲಿನ ಸೇವೆ ಮಾಡೋಣ ಎಂದು ಪ್ರಯತ್ನಿಸುತ್ತಾರೆ. ಅಂತ ಒಂದು ನೈಜಘಟನೆಯೇ ಇವತ್ತಿನ ವಿಷಯ ವಸ್ತು.

ಭಾರತದ ಹಿಂದುಳಿದ ಹಳ್ಳಿಯ ದಂಪತಿಗಳು ೧೯೭೦ ರಲ್ಲಿ ವಿದೇಶ ತಲುಪಿದರು. ಅವರು ಹೆಚ್ಚು ಓದಿದವರೇನಲ್ಲ . ಹಾಗಾಗಿದೊಡ್ಡ ಸಂಬಳದ ಕೆಲಸ ಅವರಿಗೆ ಸಿಗಲಿಲ್ಲ. ಪತಿ ಕಾರ್ ಡ್ರೈವಿಂಗ್ ಕಲಿತ್ತಿದ್ದರು. ಟ್ಯಾಕ್ಷಿ ಚಾಲಕರಾದರು. ಅವರ ಪತ್ನಿ ಆಸ್ಪತ್ರೆಯಲ್ಲಿಆಯಾ ಕೆಲಸ ಹಿಡಿದರು. ಬರುವ ಸಂಬಳದಲ್ಲಿ ಸಂಸಾರ ಸರಿದೂಗಿಸಿಕೊಂಡು ಹೋದರು. ಅದರಲ್ಲೇ ಉಳಿತಾಯ ಮಾಡಿ ಕೆಲವುವರ್ಷಗಳ ನಂತರ ಸ್ವಂತ ಟ್ಯಾಕ್ಷಿಯನ್ನು ಕೊಂಡು ಕೊಂಡರು. ಸಂಪಾದನೆ ಚೆನ್ನಾಗಿ ಆಯಿತು. ದಂಪತಿಗಳು ಅನುಕೂಲಸ್ಥರಾದರು. ಅವರಿಗೊಂದು ಯೋಚನೆ ಬಂತು. ತಮ್ಮ ಹಳ್ಳಿಯಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲಗಲಿಲ್ಲ. ತಾವು ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದರೆಇನ್ನೂ ಒಳ್ಳೆಯ ಕೆಲಸ ಸಿಗುತ್ತಿತ್ತು ಎಂದುಕೊಂಡು ಭಾರತದ ತಮ್ಮ ಹಳ್ಳಿಯಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ ೧೯೯೭ ರಲ್ಲಿ ಒಂದುಶಾಲೆ ಪ್ರಾರಂಭಿಸಿಬಿಟ್ಟರು. ಇನ್ನೂರು ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದರು.

ಶಾಲೆ ಪ್ರಾರಂಭಿಸಿದ ನಂತರ ದಂಪತಿಗಳು ಮತ್ತೆ ವಿದೇಶಕ್ಕೆ ಹಿಂತಿರುಗಿದರು. ತಮ್ಮ ದುಡಿಮೆ ಮುಂದುವರಿಸಿದರು. ತಮ್ಮಸ್ವಂತ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು. ಜತೆಗೆ ತಾವು ಸ್ಥಾಪಿಸಿದ ಶಾಲೆಯನ್ನೂ ಅಭಿವೃದ್ಧಿಪಡಿಸಿದರು . ನಂತರಹಳ್ಳಿಯಲ್ಲಿ ಒಂದು ಸಣ್ಣ ಆಸ್ಪತ್ರೆಯನ್ನೂ ಪ್ರಾರಂಭಿಸಿದರು.

ತಾವು ಶ್ರೀಮಂತರಲ್ಲದಿದ್ದರೂ ತಾಯ್ನಾಡಿನಲ್ಲಿ ಇಷ್ಟೆಲ್ಲಾ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಕಾರಣವನ್ನು ಕೇಳಿದಾಗಅವರು "ಬರಿಗೈಯಲ್ಲಿ ಬಂದೆವು, ಚೆನ್ನಾಗಿ ಸಂಪಾದನೆ ಮಾಡಿದೆವು . ನಾವು ಸತ್ತಾಗ ನಮ್ಮ ಸಂಪಾದನೆಯನ್ನು ಮೇಲಕ್ಕೆತೆಗೆದುಕೊಂಡು ಹೋಗಲಾಗುವುದಿಲ್ಲ. ಅದಕ್ಕಾಗಿ ತಾಯ್ನಾಡಿಗೆ ಹಿಂದಕ್ಕೆ ಕೊಡುತ್ತಿದ್ದೇವೆ . ಋಣ ಸ್ವಲ್ಪವಾದರೂ ತೀರಿಸುತ್ತಿದ್ದೇವೆಎನ್ನುತ್ತಾರೆ.

ದಾಸರು "ಕೆರೆಯ ನೀರನು ಕೆರೆಗೆ ಚೆಲ್ಲಿ , ವರವಪಡೆದವರಂತೆ ಕಾಣಿರೋ"ಎಂದು ಹಾಡಿದ್ದು ಇಂತಹವರ ಬಗ್ಗೆಯೇ ಇರಬೇಕು. ಇಂತಹ ಪುಣ್ಯಾತ್ಮರು ಇನ್ನೂ ಚೆನ್ನಾಗಿರಲಿ . ಇನ್ನೂ ಹೆಚ್ಚಾಗಲಿ ಎಂದು ನಾವು ನೀವುಗಳು ಕೂಡ ಹಾರೈಸೋಣವೇ ?.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ


.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486

























, ".

ಮಂಗಳವಾರ, ಜುಲೈ 27, 2010

ಸರಳವಾಗಿ ಮಾನಸಿಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ?

ಪ್ರಪಂಚದ ಪ್ರಾಮಾಣಿಕ ಹಾಗೂ ದೈರ್ಯವಂತ ದುಡಿಮೆಗಾಗರೇ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆ .

ಎಲ್ಲರೂ ದುಡಿಯಬೇಕು ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ


ವೈದ್ಯರೊಬ್ಬರು ಮಾನಸಿಕ ಒತ್ತಡ ನಿವಾರಣೆಯ ಬಗ್ಗೆ ಉಪನ್ಯಾಶ ನೀಡಲು ಒಂದು ಬಹಳ ಜನಸಮೂಹ ತುಂಬಿರುವ ಸಭೆಗೆಆಗಮಿಸಿದರು. ಅದು ಮಾನಸಿಕ ಒತ್ತಡ ನಿವಾರಣೆ ಎಂದರೆ ಕೇಳಬೇಕೆ , ಯಾರಿಗಿಲ್ಲ ಮಾನಸಿಕ ಒತ್ತಡ ?ಮಾನಸಿಕ ಒತ್ತಡ ನಿವಾರಣೆ ಯಾರಿಗೆ ಬೇಡ ? ಹಾಗಾಗಿಯೇ ಅಲ್ಲಿ ಸಭಿಕರು ಕಿಕ್ಕಿರಿದು ಜಮಾಯಿಸಿದ್ದು !.

ವೈದ್ಯರು ಮಾತನಾಡುತ್ತ "ಮಾನಸಿಕ ಒತ್ತಡಕ್ಕೆ ಮುಖ್ಯ ಕಾರಣ ,ಬದುಕಿನಲ್ಲಿ ಬರುವ ಸಮಸ್ಯೆಗಳಲ್ಲ, ಸಮಸ್ಯೆಗಳ ಬಗ್ಗೆಯೇಅನವಶ್ಯಕವಾಗಿ ಚಿಂತಿಸುತ್ತಾ ಇರುವುದು ಮುಖ್ಯ ಕಾರಣ "ಎಂದರು. ಸಭಿಕರು "ನಿಮ್ಮ ಮಾತುಗಳನ್ನು ವಿವರಿಸಿ ಹೇಳಿ " ಎಂದರು.

ಆಗ ವೈದ್ಯರು ಒಂದು ಪ್ರಯೋಗವನ್ನೇ ಮಾಡಿ ತೋರಿಸಿದರು. ಮೇಜಿನ ಮೇಲಿದ್ದ ಒಂದು ಸಣ್ಣ ಹೂವಿನ ಗುಚ್ಛವನ್ನು ತಮ್ಮಕೈಯಲ್ಲಿ ಎಲ್ಲರಿಗೂ ಕಾಣುವಂತೆ ಎತ್ತಿ ಹಿಡಿದು " ಹೂವಿನ ಗುಚ್ಹ ಎಷ್ಟು ತೂಕವಿರಬಹುದು ?"ಎಂದು ಕೇಳಿದರು. ಸಭಿಕರಿಂದಇನ್ನೂರ ಐವತ್ತು ಗ್ರಾಂ , ಮೂರು ನೂರು ಗ್ರಾಂ , ನಾಲ್ಕು ನೂರು ಗ್ರಾಂ, ಐದು ನೂರು ಗ್ರಾಂ ".ಎಂಬಿತ್ಯಾದಿಯಾಗಿ ಸರಿಯಾದಉತ್ತರ . ಈಗ ನಾನು ಇದನ್ನು ಕೈಯಲ್ಲಿ ಎತ್ತಿಹಿಡಿದುಕೊಂಡಿದ್ದೇನೆ . ಹತ್ತು ನಿಮಿಷ ಹೀಗೆ ಇಟ್ಟುಕೊಂಡರೆ ಏನಾಗುತ್ತದೆ ?
ಸಭಿಕರು ; ಏನೂ ಆಗುವುದಿಲ್ಲ
ವೈದ್ಯರು ; ಅರ್ಧ ಗಂಟೆ ಹಾಗೆ ಹಿಡಿದುಕೊಂಡಿದ್ದರೆ ?
ಸಭಿಕರು; ಕೈ ನೋವು ಬರುತ್ತದೆ.
ವೈದ್ಯರು ; ಎರಡು ಗಂಟೆಗಳ ಕಾಲ ಹಾಗೆಯೇ ಹಿಡಿದುಕೊಂಡರೆ ಏನಾಗುತ್ತದೆ ?
ಸಭಿಕರು; ಕೈ ಮರಗಟ್ಟಿಹೋಗುತ್ತದೆ.
ವೈದ್ಯರು; ನೀವು ಸರಿಯಾಗಿ ಹೇಳಿದಿರಿ ! ಇದನ್ನು ಇಡೀ ದಿನ ಹಿಡಿದಿಟ್ಟುಕೊಂಡರೆ ಏನಾಗುತ್ತದೆ ?
ಸಭಿಕರು; ನಿಮ್ಮ ತೋಳು ನಿರುಪಯೋಗವಾಗುತ್ತದೆ . ರಕ್ತ ಸಂಚಲನೆ ನಿಂತು ಹೋಗ ಬಹುದು. ತೋಳು ಪಾಶ್ರ್ವಾಯುವಿಗೆತುತ್ತಾಗಬಹುದು . ಚಿಕಿತ್ಸೆಗಾಗಿ ಆಸ್ಪತ್ರೆ ಸೇರಬೇಕಾಗಬಹುದು.

ವೈದ್ಯರು; ಖಂಡಿತವಾಗಿಯೂ ಹೌದು ! ಮಧ್ಯೆ ಹೂವಿನ ಗುಚ್ಛಕ್ಕೆ ಏನಾದರೂ ಆಗುತ್ತದೆಯೇ ?ಅದರ ತೂಕ ಹೆಚ್ಚು ಕಡಿಮೆಆಗುತ್ತದೆಯೇ ?
ಸಭಿಕರು; ಹೂವಿನ ಗುಚ್ಛಕ್ಕೆ ಏನೂ ಆಗುವುದಿಲ್ಲ . ಅದು ಹಾಗೆ ಇರುತ್ತದೆ .
ವೈದ್ಯರು; ತೋಳು ನೋವನ್ನೂ , ಮರಗಟ್ಟುವುದನ್ನೂ ನಿವಾರಿಸಲು ಏನೂ ಮಾಡಬೇಕು ?
ಸಭಿಕರು; ಹೂವಿನ ಗುಚ್ಛವನ್ನು ಕೆಳಗಿಟ್ಟರೆ ಸಾಕು !
ವೈದ್ಯರು; ಶಹಬ್ಬಾಶ್ ! ನಾನು ಇದೇ ಉತ್ತರವನ್ನು ನಿರೀಕ್ಷಿಸುತ್ತಿದ್ದೆ .
ಈಗ ಪ್ರಯೋಗ ಮಾಡಿ ತೋರಿಸಿದ ಉದ್ದೇಶ ನಿಮಗೆ ತಿಳಿಸುತ್ತೇನೆ. ಜೀವನದಲ್ಲಿ ಸಮಸ್ಯೆಗಳು ಬರುತ್ತವೆ . ಅದನ್ನು ಸ್ವಲ್ಪಹೊತ್ತು ಎತ್ತಿ ಹಿಡಿದರೆ ತೊಂದರೆ ಏನೂ ಆಗುವುದಿಲ್ಲ. ಆದರೆ ದೀರ್ಘಕಾಲ ಅದರ ಬಗೆಗೇ ಯೋಚಿಸುತ್ತಿದ್ದರೆ , ತಲೆಯಮೇಲಿಟ್ಟುಕೊಂಡರೆ ಆಗ ನಮ್ಮ ಜೀವನವೂ ಮರಗಟ್ಟು ತ್ತದೆ. ನೋವಾಗುತ್ತದೆ. ಪಾಶ್ರ್ವಾಯುವಿಗೆ ತುತ್ತಾಗುತ್ತದೆ . ಚಿಕಿತ್ಷೆಬೇಕಾಗುತ್ತದೆ. ಸಮಸ್ಯೆಗಳು ಬಂದಾಗ ಅವನ್ನು ಎದುರಿಸಬೇಕು . ಎಷ್ಟು ಬೇಕೋ ಅಷ್ಟು ಗಮನಕೊಡಬೇಕು. ಎತ್ತಿ ತಲೆಯಮೇಲಿಟ್ಟುಕೊಳ್ಳಬಾರದು . ಇದು ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವ ಒಂದು ಸರಳ ಉಪಾಯ !

ಈಗ ನಾವೂ ಯಾವೂದಾದರು ಹೂವಿನ ಗುಚ್ಛವನ್ನು ಎತ್ತಿಹಿಡಿದು ಕೊಂಡಿದ್ದರೆ ಅದನ್ನು ಕೆಳಗಿರಿಸುವ ಸರಳ ಉಪಾಯವನ್ನುಅನುಸರಿಸಬಹುದು.

ಹಾಗೆಯೇ ನೀವೂ ಯಾವುದಾದರು ಸಮಸ್ಯೆಯನ್ನು ತಲೆಯಲ್ಲಿ ಹೊತ್ತುಕೊಂಡಿದ್ದರೆ ನಿಮ್ಮ ಪಕ್ಕಕ್ಕೆ ಬಿಸಾಡಿ . ಆರಾಮ ವಾಗಿರಿ !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-9632172486





"

ಸೋಮವಾರ, ಜುಲೈ 26, 2010

ಪ್ರೇಮಿಗಳೇ ಗಮನಿಸಿ !

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

ನಿಮಗಿದು ತಿಳಿದಿರಲಿ ! ನೆಟ್ ನಾಗ ಅಥವಾ ಸನ್ ನ್ಯಾಚುರಲ್ಫ್ಳಶ್ ಸಿದ್ದಾಂತ ವೆ "ಎಲ್ಲರೂ ದುಡಿಯಬೇಕು "

ಆತನ ಹೆಸರು ಡಾನ್ಟೆ ಗೇಬ್ರಿಯಲ್ ರೋಸೆಟ್ಟಿ ಆತನ ಕೆಲವೇ ಕವನಗಳು ಮತ್ತು ಕೆಲವು ತೈಲವರ್ಣ ಚಿತ್ರಗಳುಪ್ರಕಟಗೊಂಡಿದ್ದವು. ಆತ ಚಿತ್ರಕಲೆ ಮತ್ತು ಕವಿತೆಗಳ ರಚನೆ ಎರಡರಲ್ಲೂ ಕೈಯಾಡಿಸುತ್ತಿದ್ದ.ಯಾವುದಾದರೂ ಒಂದು ಕ್ಷೇತ್ರದಲ್ಲಿಆಳವಾದ ಸಾಧನೆ ಮಾಡಲಿಲ್ಲ. ಅಲ್ಲಷ್ಟು ಇಲ್ಳಷ್ಟು ಸಾಧನೆಯಿಂದ ಯಾವುದರಲ್ಲೂ ಮಹಾನ್ ಆಗಲಿಲ್ಲ. ಹೀಗಿರುವಾಗ ಆತನಿಗೆ ಎಲಿಜಬತ್ ಸಿಡಾಲ್ ಎಂಬ ತರುಣೆಯೊಂದಿಗೆ ಪ್ರೇಮಾಂಕುರವಾಯಿತು. ಆತ ಆಕೆಯನ್ನುದ್ದೇಶಿಸಿ ಪ್ರೇಮ ಕವಿತೆಗಳನ್ನುಬರೆಯುತ್ತಲೇ ಹೋದ. ಎಂಟು ವರ್ಷದ ಒಡನಾಟದ ನಂತರ ಮದುವೆಯಾದ. ಅವರ ಮಧುಚಂದ್ರದ ಸಮಯದಲ್ಲಿ ಆತ ಆಕೆಗಾಗಿಒಂದು ವಿಶೇಷ ತೈಲಚಿತ್ರ ರಚಿಸಿದ ಮತ್ತು ಮದುವೆಯ ನಂತರವೂ ಪ್ರೇಮ ಕವನಗಳನ್ನು ಬರೆಯುತ್ತಿದ್ದ.

ಎಲ್ಲವೂ ಚೆನ್ನಾಗಿದೆ ಎನ್ನುವಷ್ಟರಲ್ಲಿ ಅನಾಹುತಗಳು ಅವರನ್ನು ಕಾಡಹತ್ತಿದವು. ಆಕೆ ಗರ್ಭಿಣಿಯಾದಳು . ಆದರೆ ಮಗುಹುಟ್ಟುವಾಗಲೇ ಸತ್ತುಹೋಗಿತ್ತು. ಆಕೆ ತೀವ್ರ ಖಿನ್ನತೆಗೆ ಒಳಗಾದಳು. ಮದ್ದು ಸೇವನೆಯ ದುರಭ್ಯಾಸಕ್ಕೆ ತುತ್ತಾದಳು. ಕೆಲವೇತಿಂಗಳುಗಳಲ್ಲಿ ಆಕೆ ಅತಿಯಾದ ಮದ್ದು ಸೇವನೆಯಿಂದ ಮೃತಪಟ್ಟಳು. ರೋಸೆಟ್ಟಿ ಶೋಕತಪ್ತನಾದ. ಶವಸಂಸ್ಕಾರದ ವೇಳೆಯಲ್ಲಿಭಾವಾವೇಶಕ್ಕೆ ಒಳಗಾಗಿದ್ದ ಆತ ಶವಪೆಟ್ಟಿಗೆಯಲ್ಲಿ ಹೆಂಡತಿಯ ಕಳೆಬರದೊಂದಿಗೆ ತಾನು ಆಕೆಗೆ ಬರೆದಿದ್ದ ಪ್ರೇಮಕವನಗಳಸಂಕಲನವನ್ನೂ ಇಟ್ಟ.

ಆಕೆಯ ಶವದೊಂದಿಗೆ ಪ್ರೇಮಕವನ ಸಂಕಲನವೂ ಮಣ್ಣಿನಲ್ಲಿ ಹೂತು ಹೋಯಿತು. ಇದಾದ ನಂತರ ರೋಸೆಟ್ಟಿ ಕೂಡ ಖಿನ್ನತೆಗೆಒಳಗಾಗಿ ಅಂತರ್ಮುಖಿಯಾದ . ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಂಡು ಜೀವನ ಸಾಗಿಸತೊಡಗಿದ. ಇಲಿಗಳು, ಗೂಬೆಗಳು, ಕಾಂಗರೂಗಳೇ ಸಂಗಾತಿಗಳಾದವು. ಆತ ಕೆಲ ಕಾಲ ಮಾಂತ್ರಿಕ ವಿದ್ಯೆಯಲ್ಲೂ ತೊಡಗಿಸಿಕೊಂಡ. ಮೃತ ಪತ್ನಿಯಆತ್ಮದೊಂದಿಗೆ ಮಾತನಾಡ ಬೇಕೆಂಬುವುದು ಅದರ ಉದ್ದೇಶ. ಹಗಲಲ್ಲಿ ಹೊರಗೆ ಬರುವುದನ್ನೇ ನಿಲ್ಲಿಸಿ ಬಿಟ್ಟ. ನಿದ್ರಾಹೀನತೆಗೆಮತ್ತು ಕಣ್ಣಿನ ಕಾಯಿಲೆಗೆ ಒಳಗಾದ. ಸಮಯದಲ್ಲಿ ಆತನಿಗೆ ಮತ್ತೆ ಕವಿತೆಗಳನ್ನು ಬರೆಯಬೇಕೆನಿಸಿತು. ತಾನು ಹಿಂದೆ ತನ್ನ ಪತ್ನಿಗೆಬರೆದ ಕವಿತೆಯ ಸಾಲುಗಳನ್ನು ಮರಳಿ ಬರೆಯಲು ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ. ಆಗ ತನ್ನ ಪತ್ನಿಯ ಶವಪೆಟ್ಟಿಗೆಯಲ್ಲಿ ಹಾಕಿದ್ದಕವನ ಸಂಕಲನ ಹೊರಗೆ ತೆಗೆಯಬೇಕೆನಿಸಿತು.

ಒಂದು ರಹಸ್ಯ ಕಾರ್ಯಾಚರಣೆಯಲ್ಲಿ ಕೆಲವರ ಸಹಾಯದಿಂದ ಸಮಾದಿ ಯನ್ನು ಅಗೆಸಿ ಶವ ಪೆಟ್ಟಿಗೆಯನ್ನು ಹೊರ ತೆಗೆಯಿಸಿ , ಅದರೊಳಗೆ ಕೊಳೆಯುತ್ತಿದ್ದ ಕವನಸಂಕಲನವನ್ನು ಮರಳಿ ಪಡೆದ. ಅಲ್ಲಿನ ಕವನಗಳನ್ನು ಮತ್ತೊಂದು ಪುಸ್ತಕಕ್ಕೆ ಬರೆದುಕೊಂಡುಹಳೆಯ ಪುಸ್ತಕವನ್ನು ನಾಶಗೊಳಿಸಿದ. ಮೊಹಾದ ಹೆಂಡತಿ ತೀರಿದ ಬಳಿಕ ಕವಿತೆಗಳಿನ್ಯಾಕೆ ಎಂದು ಬಿಸಾಡಿದ್ದ ಕವನ ಸಂಗ್ರಹ ಆಕೆಸತ್ತ ಎಂಟು ವರ್ಷಗಳ ನಂತರ "ಪೊಯಮ್ಸ್ ಬೈ ರೋಸೆಟ್ಟಿ " ಎಂಬ ಹೆಸರಿನಲ್ಲಿ ಪ್ರಕಟವಾಗಿ ಜನಪ್ರಿಯವಾಯಿತು. ಆತನೂಪ್ರಖ್ಯಾತನಾದ. ಆಶ್ಚರ್ಯವೆಂದರೆ ಇದ್ದಾದ ನಂತರ ಆತನ ನಿದ್ರಾಹೀನತೆ ಮತ್ತು ಕಣ್ಣಿನ ಕಾಯಿಲೆ ವಾಸಿಯಾಯಿತು. ಸಮಾಧಿಯಿಂದ ಎದ್ದು ಬಂದು ಪ್ರಕಟಗೊಂಡ ಪ್ರೇಮಕವನಗಳ ಸಂಗ್ರಹ ಪ್ರಸಂಗ ಓದಿದರೆ ಒಂಥರಾ ಅನಿಸುವುದಿಲ್ಲವೇ ? ರೋಸೆಟ್ಟಿ ಯಿಂದ ನಾವು ಕಲಿಯಬಹುದಾದ ಪಾಠ ಗಳು.
ಆಯ್ದುಕೊಂಡ ಯಾವುದಾದರೊಂದು ಕ್ಷೆತದಲ್ಲಿ ಆಳವಾದ ಸಾಧನೆ ಮಾಡುವುದು.
ಖಿನ್ನತೆಯ ಭಾವನೆ ನಮ್ಮನ್ನು ಆವರಿಸಿದಾಗ ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವುದು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-೯೬೩೨೧೭೨೪೮೬
--------------------------------------------------------------------------------------------
ನಿನ್ನೆ ಒಂದು ಎಸ್ ಎಂ ಎಸ್ ನನ್ನ ಆತ್ಮಿಯರೊಬ್ಬರು ನನಗೆ ಕಳುಹಿಸಿದ್ದಾರೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
"ಒಬ್ಬ ಮನುಷ್ಯ ಅವನ ಕಾರನ್ನು ಸ್ವಚ್ಛ ಗೊಳಿಸುತ್ತಿದ್ದ. ಆತನ ನಾಲ್ಕು ವರ್ಷದ ಮಗ ಕಲ್ಲಿನಿಂದ ಕಾರಿನ ಮೇಲೆಬರೆದ.ಕೋಪಗೊಂಡ ಮನುಷ್ಯ ತನ್ನ ಮಗನನ್ನು ಸುತ್ತಿಗೆ ಯಿಂದ ಮಗನ ಕೈಗಳ ಮೇಲೆ ಹೊಡೆದ. ಮಗ ತನ್ನ ಎಲ್ಲಬೆರಳುಗಳನ್ನು ಕಳೆದುಕೊಂಡ .ಮಗ ತಂದೆಯನ್ನು ಕೇಳಿದ ಅಪ್ಪಾ ನನ್ನ ಕೈಬೆರಳುಗಳು ಮತ್ತೆ ಯಾವಾಗ ಬೆಳೆಯುತ್ತವೆ ? ಮನುಷ್ಯನ ಹೃದಯ ಕಂಪಿಸ ತೊಡಗಿತು ಮತ್ತು ಚಿಂತಾಕ್ರಾಂತನಾದ . ಮನುಷ್ಯ ಮತ್ತೆ ಹೋಗಿ ಕಾರನ್ನು ನೋಡಿದ ಮಗ ಕಾರಿನಮೇಲೆ ಬರೆದಿದ್ದು "ಅಪ್ಪಾ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ " ತಂದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ,ಕೋಪಮಾತ್ತು ಪ್ರೀತಿ ಗೆ ಮಿತಿ ಇಲ್ಲ . ಯಾವಾಗಲು ನೆನಪಿನಲ್ಲಿಟ್ಟು ಕೊಳ್ಳಬೇಕು .















ಭಾನುವಾರ, ಜುಲೈ 25, 2010

ನಾನು ಬಡವ ಆತ ಬಡವಿ ಒಲವೆ ನನ್ನ ಬದುಕು !

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

ಒಂದೂರಿನಲ್ಲಿ ಬಡ ದಂಪತಿಗಳ ಬಳಿ ಒಂದು ಹಸುವಿತ್ತು. ಹಸು ಕೊಡುವ ಹಾಲೇ ಅವರ ಜೀವನಾಧಾರ. ಹಸುವಿಗೆ ಸಾಕಷ್ಟುಹುಲ್ಲು ಹಾಕಲು ಅವರಿಗೆ ಅನುಕೂಲಗಳಿರಲಿಲ್ಲ. ಪ್ರತಿ ದಿನ ಗೃಹಿಣಿ ಹಸುವಿಗೆ ಸ್ನಾನ ಮಾಡಿಸಿ , ಕುಂಕುಮ ವಿಟ್ಟು ಪೂಜಿಸುತ್ತಿದ್ದರು. "ನೀನು ನಮ್ಮ ಪಾಲಿನ ದೇವರು , ನಿನ್ನಿಂದಾಗಿ ನಮ್ಮ ಜೀವನ ನಡೆಯುತ್ತಿದೆ "ಎಂದು ಹೇಳಿ ಅದರ ಪಾದಕ್ಕೆ ನಮಸ್ಕರಿಸುತ್ತಿದ್ದರು. ನಂತರ ಹಸುವನ್ನು ಹುಲ್ಲು ಮೇಯ್ದು ಕೊಂಡು ಬರಲು ಅಟ್ಟುತ್ತಿದ್ದರು. ಹಸು ಯಾರದೋ ಹೊಲಕ್ಕೆ ಹೋಗುತ್ತಿತ್ತು. ಹುಲ್ಲುಮೇಯುತ್ತಿತ್ತು. ಕೆಲವೊಮ್ಮೆ ಹೊಲದ ಮಾಲೀಕರ ಕೈಗೆ ಸಿಕ್ಕಿಹಾಕಿಕೊಂಡು ಪಟ್ಟು ತಿನ್ನುತ್ತಿತ್ತು. ಅವರು ಹೊಡೆದು ಓಡಿಸಿದಾಗಅಲ್ಲಿಂದ ಮುಂದಿನ ಹೊಲಕ್ಕೆ ನುಗ್ಗುತ್ತಿತ್ತು . ಕೆಲವೊಮ್ಮೆ ಅಲ್ಲಿಯೂ ಹೊಡೆತ ತಿನ್ನುತ್ತಿತ್ತು. ಹೇಗೋ ಏನೋ ಅರೆ ಹೊಟ್ಟೆತುಂಬಿಸಿಕೊಂಡು ಸಂಜೆ ಮನೆಗೆ ಮರಳುತ್ತಿತ್ತು. ಆಗ ಗೃಹಿಣಿ ಅದರ ಕಾಲುಗಳನ್ನು ತೊಳೆದು "ನೀನು ನಮ್ಮ ಪಾಲಿನ ದೇವರು, ನಿನ್ನಿಂದಾಗಿ ನಮ್ಮ ಜೀವನ ನಡೆಯುತ್ತಿದೆ. " ಎಂದು ಹೇಳಿ ನಮಸ್ಕರಿಸಿ ಹಾಲು ಕರೆದುಕೊಳ್ಳುತ್ತಿದ್ದರು.

ಒಮ್ಮೆ ಎಲ್ಲೂ ಹುಲ್ಲು ಸಿಗದೇ ಬೇಸರಗೊಂಡ ಹಸು ಊರಂಚಿನಲ್ಲಿದ್ದ ಕಾಡನ್ನು ಪ್ರವೇಶಿಸಿತು . ಕಾಡಿನಲ್ಲಿ ದೊಡ್ಡ ಹುಲ್ಲು ಗಾವಲೇಇತ್ತು. ಆನಂದದಿಂದ ಹುಲ್ಲು ಮೇಯಿತು. ಬೈಯುವವರು ಹೊಡೆಯುವವರು ಯಾರೂ ಇರಲಿಲ್ಲ. ಕಾಡಿನಲ್ಲೇ ವಾಸವಾಗಿದ್ದಮತ್ತೊಂದು ಹಸುವಿನ ಪರಿಚಯವಾಯಿತು. ಎರಡು ಕಷ್ಟ ಸುಖ ಹಂಚಿ ಕೊಂಡವು . ಸಂಜೆ ಆಯಿತು ,ಹೊಟ್ಟೆ ತುಂಬಾ ಹುಲ್ಲುಮೇಯ್ದಿದ್ದ ಹಸು ಮನೆಗೆ ಹಿಂತಿರುಗಿತು. ಅಂದು ಒಂದೆರಡು ಲೀಟರ್ ಹಾಲು ಹೆಚ್ಚು ಕೊಟ್ಟಿತು. ಸಂತೋಷಗೊಂಡ ಗೃಹಿಣಿಮತ್ತೊಂದು ನಮಸ್ಕಾರ ಮಾಡಿದಳು. ಮರುದಿನ ಹಸು ಮತ್ತೆ ಕಾಡಿಗೆ ಹೋಯಿತು. ಸ್ವಚ್ಚಂದವಾಗಿ ಹುಲ್ಲು ಮೇಯುತ್ತಿದ್ದಾಗ ಕಾಡಿನಹಸು "ಇಲ್ಲಿ ಬೇಕಾದಷ್ಟು ಹುಲ್ಲಿದೆ , ಹೊಡೆಯುವವರು ಯಾರು ಇಲ್ಲ. ನೀನು ಇಲ್ಲೇ ಇದ್ದುಬಿಟ್ಟರೆ, ಊರಿಂದ ಇಲ್ಲಿಗೆ ಮೈಲುಗಟ್ಟಲೆನಡೆಯುವ ತೊಂದರೆ ಇರುವುದಿಲ್ಲ. ಒಂದು ಹಿಡಿ ಹುಲ್ಲು ಹಾಕದ ಮನೆಗೇಕೆ ಹೋಗುತ್ತಿಯ ?"ಎಂದು ಪ್ರಶ್ನಿಸಿತು. ಆಗ ಊರ ಹಸುಅವರು ನನಗೆ ಹುಲ್ಲು ಹಾಕುವುದಿಲ್ಲ ನಿಜ. ಅಲ್ಲಿಂದಿಲ್ಲಿಗೆ ನಡೆಯುವುದು ಕಷ್ಟವೆಂಬುದು ನಿಜ. ನನ್ನನ್ನು ಸಾಕಿ ಕೊಂಡವರು ಬಡವರು ಎಂಬುವುದು ನಿಜ. ಆದರೆ ಪ್ರತಿದಿನ ಬೆಳಗ್ಗೆ ಸಾಯಂಕಾಲ ಗೃಹಿಣಿ ನನ್ನ ಪಾದ ತೊಳೆದು ಪೂಜೆ ಮಾಡಿ ನಮಸ್ಕರಿಸಿ , ನೀನುನಮ್ಮ ಪಾಲಿನ ದೇವರು. ನಿನ್ನಿಂದಾಗಿ ನಮ್ಮ ಜೀವನ ನಡೆಯುತ್ತಿದೆ ಎನ್ನುವ ಒಳ್ಳೆಯ ಮಾತುಗಳನ್ನು ಕೇಳಿದಾಗ ಒಂದು ರೀತಿಯಆನಂದವಾಗುತ್ತದೆ. ಒಳ್ಳೆಯ ಮಾತುಗಳಿಗಾಗಿ ನಾನು ಅಲ್ಲಿಗೆ ಹೋಗುತ್ತೇನೆ "ಎಂದಿತು. ಎಂದೂ ಯಾರಿಂದಲೂ ಒಳ್ಳೆಯಮಾತು ಕೇಳದಿದ್ದ ಕಾಡಿನ ಹಸುವಿಗೆ ಊರ ಹಸುವಿನ ಮಾತು ಅರ್ಥವಾಗಲಿಲ್ಲ .

ಇಲ್ಲಿಗೆ ಕಥೆ ಅಂತ್ಯ ವಾಗಬಹುದು. ಆದರೆ ಅದರ ಸಂದೇಶಕ್ಕೆ ಅಂತ್ಯವಿಲ್ಲ. ಹೊಟ್ಟೆಗೆ ಸಾಕಷ್ಟು ಹುಲ್ಲು ಸಿಗದಿದ್ದರೂ ಒಂದು ಒಳ್ಳೆ ಮಾತಿಗಾಗಿ ಹಸು ಹಾತೊರೆಯುತ್ತದೆ. ಹಾಗೆಯೇ ನಮ್ಮ ಮನೆಯವರು , ಮಕ್ಕಳು , ಸಹೋದ್ಯೋಗಿಗಳು , ಗೆಳೆಯರು ಎಲ್ಲರೂಒಳ್ಳೆಯ ಮಾತಿಗಾಗಿ ಹಾತೊರೆಯುತ್ತಿದ್ದಾರೆ ಅಲ್ಲವೇ ?

ಸಿರಿತನಕ್ಕಿಂತ ನೆಮ್ಮದಿ ಪ್ರತಿಯೊಂದು ಜೀವಿಯಲ್ಲೂ ಎಷ್ಟು ಮುಖ್ಯ ಎಂಬುದು ಕಥೆಯ ಸಾರ !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ಬಂಧು ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್ .ಕಂ /
+೯೧-9632172486















"

ಶನಿವಾರ, ಜುಲೈ 24, 2010

"ಕೈಲಾಗದ "ಅಂತ್ಯಕ್ರಿಯೆ

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು

ಅಂದು ಎಸ್.ಎಸ್ .ಎಲ್.ಸಿ ತರಗತಿಗಳ ಮೊದಲನೇ ದಿನ ಉತ್ಸಾಹಿ ಶಿಕ್ಷಕರೊಬ್ಬರು ಎಲ್ಲರನ್ನೂ ಸ್ವಾಗತಿಸಿ. "ಒಂದು ಹೊಸ ಪ್ರಯೋಗದೊಂದಿಗೆ ತರಗತಿ ಪ್ರಾರಂಭಿಸೋಣ . ಈಗ ನೀವೆಲ್ಲ ಬಿಡಿ ಕಾಗದವನ್ನು ತೆಗೆದುಕೊಳ್ಳಿ . ಅದರಲ್ಲಿ ಮೇಲುಗಡೆ ನನ್ನ ಕೈಲಾಗುವುದಿಲ್ಲ ಎಂದು ಬರೆಯಿರಿ.ಅದರ ಕೆಳಗೆ ನಿಮ್ಮ ಕೈಯಲ್ಲಿ ಏನೇನು ಆಗುವುದಿಲ್ಲ ವೆಂಬ ಭಾವನೆ ಇದೆಯೋ , ಉದಹಾರಣೆಗೆ ಬೆಳಗ್ಗೆ ಬೇಗ ಏಳಲು, ಒಂದೇ ಸಮನೆ ಬೆಳಗ್ಗೆ ಓದಲು . ಓದುವಂತೆ ಸ್ಪುಟವಾಗಿ ಬರೆಯಲು ನನ್ನ ಕೈಯಲ್ಲಾಗುವುದಿಲ್ಲ. ಉತ್ತಮ ಅಂಕಗಳನ್ನು ಪಡೆಯಲು ನನ್ನ ಕೈಲಾಗುವುದಿಲ್ಲ ಮುಂತಾದವು. ಅವೆಲ್ಲವನ್ನು ಬರೆಯಿರಿ ಎಂದರು. ಅದರಂತೆ ಎಲ್ಲ ವಿದ್ಯಾರ್ಥಿಗಳು ಬರೆದರು. ಶಿಕ್ಷಕರು ತಮ್ಮ ಪಟ್ಟಿಯನ್ನು ಬರೆದರು. ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಎಲ್ಲರ ಪಟ್ಟಿಯನ್ನು ಹಾಕಿಸಿ ಭದ್ರವಾಗಿ ಮುಚ್ಚಿದರು. ನಂತರ ವಿದ್ಯಾರ್ಥಿಗಳನ್ನೆಲ್ಲ ಸಾಲಾಗಿ ಶಾಲೆಯ ಆಟದ ಮೈದಾನದ ಒಂದು ಮೂಲೆಗೆ ಕರೆದುಕೊಂಡು ಹೋದರು. ಅಲ್ಲಿ ಮೊದಲೇ ತೆಗೆದಿಟ್ಟಿದ್ದ ಹಳ್ಳದಲ್ಲಿ ರಟ್ಟಿನ ಪೆಟ್ಟಿಗೆಯನ್ನು ಇಳಿಸಿದರು. ವಿದ್ಯಾರ್ಥಿಗಳಿಗೆ ಹಳ್ಳಕ್ಕೆ ಮಣ್ಣು ತುಂಬುವಂತೆ ಹೇಳಿದರು. ಕೆಲವು ನಿಮಿಸಗಳಲ್ಲಿ ಪೆಟ್ಟಿಗೆ ಮುಚ್ಚಿಹೋಯಿತು. ಶಿಕ್ಷಕರು ಗಂಭೀರವಾದ ಧ್ವನಿಯಲ್ಲಿ "ಪ್ರೀತಿಯ ವಿದ್ಯಾರ್ಥಿಗಳೇ ನಿಮ್ಮ ಪುರಾತನ ಶತ್ರು , ನನ್ನ ಕೈಲಾಗುವುದಿಲ್ಲ ಎಂದು ತೀರಿಕೊಂಡಿದ್ದಾನೆ . ಅವನನ್ನು ನೀವೆಲ್ಲರೂ ಮಣ್ಣಲ್ಲಿ ಹೂತು ಹಾಕಿದ್ದೀರಿ , ಇನ್ನು ಮುಂದೆ ಎಂದೆಂದೂ ಅವನು ನಿಮ್ಮನ್ನು ಕಾಡಬಾರದು. ಅವನ ಸಹೋದರರಾದ ನಾನು ಮಾಡಬಲ್ಲೆ. ಇದು ನನ್ನಿಂದ ಸಾಧ್ಯ . ನಾನು ಪ್ರಯತ್ನಿಸುತ್ತೇನೆ. ನಾನು ಯಶಸ್ವಿಗಾಗಿ ಶ್ರಮಿಸುತ್ತೇನೆ. ಮುಂತಾದವರನ್ನು ಬಿಟ್ಟು ಹೋಗಿದ್ದಾನೆ. ನೀವು ಯಾವಾಗ ಬೇಕಾದದರೂ ಅವರನ್ನು ಕರೆಯಬಹುದು.

ನೀವು ಜೀವನದಲ್ಲಿ ಮುಂದೆ ಬರಲು ಅವರು ಸಹಾಯ ಮಾಡುತ್ತಾರೆ. ಈಗ ನಾವೆಲ್ಲರೂ ನನ್ನ ಕೈಲಾಗುವುದಿಲ್ಲ ಅವರ ಆತ್ಮಕ್ಕೆ ಒಂದು ನಿಮಿಸ ಮೌನ ಆಚರಿಸಿ , ಶಾಂತಿ ಕೋರೋಣ. ನಂತರ ತರಗತಿಗೆ ಹಿಂತಿರುಗೋಣ," ಎಂದರು. ಎಲ್ಲರು ತರಗತಿಗೆ ಹಿಂತಿರುಗಿದ ನಂತರ ಶಿಕ್ಷಕರು ತರಗತಿಯ ಗೋಡೆಯ ಮೇಲೆ ಒಂದು ಸಮಾಧಿಯ ಚಿತ್ರವನ್ನು ನೇತುಹಾಕಿದರು. ಚಿತ್ರದಲ್ಲಿ "ನನ್ನ ಕೈಲಾಗುವುದಿಲ್ಲರವರನ್ನು ಇಲ್ಲಿ ಸಮಾಧಿ ಮಾಡಲಾಗಿದೆ " ಎಂದು ಬರೆಯಲಾಗಿತ್ತು.

ಆ ಚಿತ್ರ ವರ್ಷದ ಕೊನೆಯವರೆಗೂ ಗೋಡೆಯ ಮೇಲೆ ನೇತಾಡುತ್ತಿತ್ತು. ಶಿಕ್ಷಕರು ವಿದ್ಯಾರ್ಥಿಗಳಿಗೆ ಏನಾದರು ಹೆಚ್ಚಿನ ಹೋಂ ವರ್ಕ್ ಕೊಟ್ಟಾಗ, ವಿಶೇಷ ತರಗತಿಗಳನ್ನು ಏರ್ಪಡಿಸಿದಾಗ , ಯಾವುದಾದರು ಪಾಠ ವನ್ನು ಸಂಪೂರ್ಣ ನೆನಪಿನಲ್ಲಿಟ್ಟುಕೊಳ್ಳಲು ಹೇಳಿದಾಗ. ನಾಳೆಯೇ ಟೆಸ್ಟ್ ಇದೆ. ಎಲ್ಲರೂ ಪರೀಕ್ಸೆ ತೆಗೆದುಕೊಳ್ಳಬೇಕು ಎಂದೆಲ್ಲ ಹೇಳಿದಾಗ, ವಿದ್ಯಾರ್ಥಿಗಳು ನಮ್ಮ ಕೈಯಲ್ಲಾಗುವುದಿಲ್ಲ ಎಂದರೆ , ಶಿಕ್ಷಕರು ಸರಳವಾಗಿ ಗೋಡೆಯ ಮೇಲಿನ ಚಿತ್ರವನ್ನು ತೋರಿಸಿ "ನನ್ನ ಕೈಲಾಗುವುದಿಲ್ಲ ಎಂಬುದು ಸತ್ತುಹೋಗಿದೆ !ನೀವೇ ಮಣ್ಣು ಮಾಡಿದ್ದೀರಿ ! ಈಗ ಅವರನ್ನು ಇಲ್ಲಿ ತರಬೇಡಿ "ಎನ್ನುತ್ತಿದ್ದರು. ಈಗ ವಿದ್ಯಾರ್ಥಿಗಳು "ಆಗಬಹುದು , ನಮಗಿದು ಸಾಧ್ಯವಾಗುತ್ತದೆ, ಪ್ರಯತ್ನಿಸುತ್ತೇವೆ " ಎನ್ನುತ್ತಿದ್ದರು .

ಈಗ ನಾವು ಕೂಡ "ನಮ್ಮ ಕೈಲಾಗುವುದಿಲ್ಲ "ಎಂಬ ಪಟ್ಟಿಯನ್ನು ಬರೆದು, ನಮ್ಮ ಮನೆಯ ಹಿತ್ತಲಲ್ಲಿ ಅದನ್ನು ಹೂತುಹಾಕುವುದನ್ನು ಕಲ್ಪಿಸಿ ಕೊಳ್ಳಬಹುದೇ? . ಇನ್ನು ಮುಂದೆ ಸಕಾರಾತ್ಮಕ ಉತ್ತರಗಳನ್ನೇ ನೀಡಬಹುದೇ ?

ನೀವು ಶಿಕ್ಷಕ ವೃತ್ತಿ ಮಾಡುತ್ತಿದ್ದರೆ, ಇಲ್ಲವೇ ಸಮಾಜದಲ್ಲಿ ನಿಮ್ಮಿಂದ ಏನಾದರೂ ಬದಲಾವಣೆ ಮಾಡಲು ಇಷ್ಟಪಟ್ಟರೆ ನೀವು ಈ ಪ್ರಯೋಗ ಮಾಡಿ ನೋಡಿ. ಆದರೆ ಈ ಪ್ರಯೋಗ ನೀವು ಪ್ರಾಮಾಣಿಕ ರಾಗಿದ್ದರೆ ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಕೊಡಬಲ್ಲದು. ನೀವು ಆತ್ಮವಂಚಕ ರಾದರೆ ನೈಜ ಫಲಿತಾಂಶ ಬರಲಾರದು.

ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486













ಶುಕ್ರವಾರ, ಜುಲೈ 23, 2010

ನಮ್ಮ ವೃತ್ತಿಯಲ್ಲಿ ಶ್ರಮವಹಿಸಿ ದುಡಿದರೆ , ಹೊಸ ಹೊಸ ನೈಪುಣ್ಯತೆಗಳನ್ನು ರೂಢಿಸಿಕೊಂಡರೆ , ಆಧುನಿಕ ತಂತ್ರಜ್ಞಾನ ಅಳವಡಿಸಿ ಕೊಳ್ಳುವುದರ ಜತೆಗೆ

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು

ಇದು ನನ್ನ ಜೀವನದಲ್ಲಿ ಹತ್ತಾರು ಬಿರುಗಾಳಿ ಬೀಸಿದಾಗ, ಅಲಸ್ಯ,ಬೇಸರ ,ಬಡತನ ಕಾಡುತ್ತಿದ್ದ ಕಾಲದಲ್ಲಿ ನನ್ನನ್ನು ಕೈಹಿಡಿದು ನಡೆಸಿದ ಕಥೆ . ನಿಮ್ಮ ಜೀವನದಲ್ಲಿ ಇದು ಅದರಲ್ಲೂ ಒಬ್ಬ ಎಂಟರ್ ಪ್ರಿನರ್ (ಸಹಾಸಗಾರ- ಉದ್ದಿಮೆ ಗಾರ )ಎನ್ನಿಸಿಕೊಳ್ಳಲು ಹೇಗೆ ಕಷ್ಟಪಡಬೇಕು. ಏನೆಲ್ಲಾ ಕಷ್ಟಗಳು ಬಂದು ನಮ್ಮನ್ನು ಅಲುಗಾಡಿಸುತ್ತವೆ, ಎಂಬುದನ್ನು ಅನುಭವಿಸಿ ನೋಡಬೇಕಾದರೆ ನಿಮ್ಮ ಜೀವನದಲ್ಲಿ ಅವಕಾಶಗಳ ಜತೆಗೆ ಮುನ್ನುಗ್ಗಬೇಕು. ಆದರೆ ನನ್ನ ಪ್ರಾರಂಭದ ದಿನಗಳಲ್ಲಿ ನನ್ನಲ್ಲಿ ಅವಕಾಶಗಳು ಇರಲಿಲ್ಲ. ಮಾರ್ಗದರ್ಶಕರು ಇರಲಿಲ್ಲ. ಕೈಯಲ್ಲಿ ಹಣ ಇರಲಿಲ್ಲ. ಕೆಲಸವೂ ಸರಿಯಾಗಿ ಗೊತ್ತಿರಲಿಲ್ಲ. ಆದರೂ ನನಗೆ ನಾನು ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎಂದು ಅನಿಸಿತು. ಹಲವಾರು ವರ್ಷಗಳ ನನ್ನ ಬಿಡುವಿಲ್ಲದ ಪ್ರಯತ್ನವೇ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಮೊಟ್ಟ ಮೊದಲ ಕನ್ನಡದ ವ್ಯಕ್ತಿ ವಿಕಾಸನ ಹಾಗೂ ವಿದ್ಯಾರ್ಥಿಗಾಗಿ ವಿಶೇಷ ಲೇಖನಗಳು (ನೆಟ್ ನಾಗ ) . ಇದು ಜೀವನದಲ್ಲಿ ಯಸಸ್ಸನ್ನು ಸಾಧಿಸುತ್ತೆನೆನ್ನುವವರಿಗೆ ತುಂಬಾ ಉಪಯುಕ್ತ. ಆದರೆ ಅದನ್ನು ಅಳವಡಿಸಿಕೊಳ್ಳುವುದು ನಿಮ್ಮ ಮುಂದೆ ಇದೆ.


ಬಹಳ ಹಿಂದೆ ಮಕ್ಕಾಎಂಬ ಮರ ಕಡಿಯುವವನು ಕಾಡಿನಂಚಿನ ಗುಡಿಸಿಲಲ್ಲಿ ವಾಸಿಸುತ್ತಿದ್ದ. ಕಷ್ಟಪಟ್ಟು ದುಡಿಯುತ್ತಿದ್ದರೂ, ಎರಡು ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿತ್ತು. ಏಕೆಂದರೆ ಕಾಡಿನಂಚಿನಲ್ಲಿ ಹೆಚ್ಚು ಮರಗಳಿರಲಿಲ್ಲ. ಒಂದು ಸಂಜೆ ಒಬ್ಬ ಸಾಧು ಬಂದರು . ಮಕ್ಕಾ ಅವರಿಗೆ ಊಟವಿಟ್ಟು ಗುಡಿಸಲಲ್ಲೇ ಇರಿಸಿಕೊಂಡು ಸತ್ಕರಿಸಿದ.

ಬೆಳಗ್ಗೆ ಸಾಧು ಹೊರಡುವ ಮುಂಚೆ ಅವನ ಮುರುಕಲು ಗುಡಿಸಲು , ಹರಕು ಬಟ್ಟೆಯ ಮನೆಯವರನ್ನು ನೋಡಿ "ನೀನು ಇನ್ನೂ ಮುಂದಕ್ಕೆ ಹೋದರೆ ಒಳ್ಳೆಯದಾಗುತ್ತೆ "ಎಂದು ಆಶೀವ್ರದಿಸಿ ಹೊರಟು ಹೋದರು. ಮಕ್ಕಾಗೆ ಅವರ ಮಾತು ಅರ್ಥವಾಗಲಿಲ್ಲ. ಅವನ ಹೆಂಡತಿ "ಬಹುಶ: ನೀವು
ಕಾಡಿನೊಳಕ್ಕೆ ಇನ್ನೂ ಮುಂದೆ ಹೋಗಿ ದುಡಿದರೆ ಒಳ್ಳೆಯದಾಗಬಹುದು. ಎಂಬರ್ಥವಿರಬಹುದು "ಎಂದಳು. ಆತ ಧೈರ್ಯದಿಂದ ಕೊಡಲಿ ಹಿಡಿದು ಒಂದೆರಡು ಮೈಲಿ ಕಾಡಿನೊಳಕ್ಕೆ ಹೋದ. ಅಲ್ಲಿ ಒಳ್ಳೆ ಜಾತಿಯ ಮರಗಳಿದ್ದವು . ಅದರ ಕೊಂಬೆಗಳನ್ನು ಕಡಿದು ಊರಿಗೆ ತಂದು ಮಾರಿದ.

ಕೈತುಂಬಾ ಹಣ ಸಿಕ್ಕಿತು. ಮನೆಗೆ ಬೇಕಾದ ದವಸ ಧಾನ್ಯಗಳನ್ನು ತಂದ, ಒಂದು ವಾರ ಕುಟುಂಬದವರಿಗೆಲ್ಲ ಹೊಟ್ಟೆ ತುಂಬಾ ಊಟ , ಅವನ ಹೆಂಡತಿ "ಸಾಧುಗಳ ಮಾತನ್ನು ಪಾಲಿಸಿದ್ದರಿಂದ ಒಂದು ವಾರ ಹೊಟ್ಟೆ ತುಂಬಾ ಉಂಡೆವು "ಎಂದಳು .ಮಕ್ಕಾ ಎದ್ದು ಒಂದಿಬ್ಬರು ಕೂಲಿಯವರನ್ನು , ಒಂದು ಬಾಡಿಗೆ ಎತ್ತಿನ ಗಾಡಿಯನ್ನು ತೆಗೆದುಕೊಂಡು ಮತ್ತೆ ಕಾಡಿನೊಳಕ್ಕೆ ಹೋದ. ಕೆಲಸಗಾರರು ಜೋತೆಗಿದ್ದರಿಂದ ಹೆಚ್ಚು ಮರ ಕಡಿದು ಗಾಡಿಯನು ತುಂಬಿಸಿಕೊಂಡು ಊರಿಗೆ ಬಂದು ಮಾರಿದ. ಅವನ ನಿರೀಕ್ಷೆಗೆ ಮೀರಿದಷ್ಟು ಹಣ ಸಿಕ್ಕಿತು. ತನ್ನ ಮುರುಕಲು ಗುಡಿಸಿಲನ್ನುರಿಪೇರಿ ಮಾಡಿಕೊಂಡ . ಮನೆಯವರಿಗೆಲ್ಲ ಒಳ್ಳೆ ಬಟ್ಟೆಗಳನ್ನು ತೆಗೆದುಕೊಂಡ . ಮತ್ತೆ ಕಾಡಿಗೆ ಹೊರಟಾಗ ನಾಲ್ಕು ಬಾಡಿಗೆ ಗಾಡಿಗಳನ್ನು , ಏಳೆಂಟು ಜನ ಕೆಲಸಗಾರರನ್ನು ಕರೆದೊಯ್ದು ಹೆಚ್ಚು ಮರಗಳನ್ನು ಪೇಟೆಗೆ ತಂದು ಮಾರಿದ. ಸಾಕಷ್ಟು ಹಣ ಸೇರಿತು. ಊರವರೆಲ್ಲ ಮಕ್ಕಾನನ್ನು "ಮಕ್ಕಪ್ಪ "ಎಂದು ಕರೆಯಲು ಪ್ರಾರಂಭಿಸಿದರು . ಮಕ್ಕಪ್ಪ ಸಾಧುವಿನ ಮಾತು ಮರೆಯಲಿಲ್ಲ.

ಕಾಡಿನಲ್ಲಿ ಇನ್ನೂ ಮುಂದಕೆ ಹೋದ, ವ್ಯವಹಾರ ಅಭಿವೃದ್ಧಿ ಯಾಯಿತು. ಮನೆ ದೊಡ್ಡದಾಯಿತು. ಬಾಡಿಗೆ ಎತ್ತಿನ ಗಾಡಿಯ ಬದಲು ಸ್ವಂತ ಲಾರಿಗಳನ್ನು ಕೊಂಡುಕೊಂಡ. " ಈಗ ಊರವರು ಮಕ್ಕಪ್ಪನನ್ನು "ಮಕ್ಕಪ್ಪ ನಾಯಕ "ಎಂದು ಕರೆಯಹತ್ತಿದರು. ಸಾಧುವಿನ ಮಾತನ್ನು ಮರೆಯದೆ ಮಕ್ಕಪ್ಪ ನಾಯಕರು ಕಾಡಿನಲ್ಲಿ ಇನ್ನೂ ಮುಂದೆ ಹೋದ. ಅವರಿಗೆ ಒಂದು ದೊಡ್ಡ ಶ್ರೀಗಂಧದ ಮರಗಳಿದ್ದ ತಾಣವೇ ಸಿಕ್ಕಿತು. ವ್ಯಾಪಾರ ಇನ್ನೂ ಬೆಳೆಯಿತು. ಮಕ್ಕಪ್ಪ ನಾಯಾ ಸಾಹುಕಾರ್ ಮಕ್ಕಪ್ಪ ನಾಯಕರಾದರು. ಅವರು ಕಾಡಿನಲ್ಲಿ ಇನ್ನೂ ಮುಂದಕ್ಕೆ ಹೋದರು. ಬೆಳ್ಳಿಯ ನಿಕ್ಷೇಪವೇ ಸಿಕ್ಕಿತು . ನಂತರ ಚಿನ್ನದ ಗಣಿ ಸಿಕ್ಕಿತು . ......................

ಆದರೆ "ಮರ ಕದಿಯುತ್ತಿದ್ದ ವ್ಯಕ್ತಿ ಯಾರು ? ಕಾಡು ಯಾವುದು ? ಎಂದು ಪ್ರಶ್ನಿಸುವುದಾದರೆ ಉತ್ತರ ಸರಳ !. ಆ ವ್ಯಕ್ತಿ ನಾವೇ ! ಆ ಕಾಡು ನಮ್ಮ ವೃತ್ತಿ ! ನಮ್ಮ ವೃತ್ತಿಯಲ್ಲೂ ಶ್ರಮವಹಿಸಿ ದುಡಿದರೆ, ಹೊಸ ಹೊಸ ನೈಪುಣ್ಯತೆಗಳನ್ನು ರೂಢಿಸಿಕೊಂಡರೆ , ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ , ಜ್ಞಾನ ಹೆಚ್ಚಿಸಿಕೊಂಡರೆ ನಾವು ಇನ್ನೂ ಮುಂದಕ್ಕೆ ಹೋಗಬಹುದು !. ಒಳ್ಳೆಯದಾಗಬಹುದು !. ನಮಗೂ ಗಂಧದ ಗುಡಿ ಸಿಗಬಹುದು. ಚಿನ್ನದ ಗಣಿ ಸಿಗಬಹುದು.

ಕೂತು ಕೂತು ,ಕೊರಗಿ ಕೊರಗಿ, ನರಳಿ ನರಳಿ ಸಾಯುವುದಕ್ಕಿಂತಲೂ ದುಡಿದು ದುಡಿದು ನಗುತ್ತಾ ನಗುತ್ತಾ ಸಂತೋಷದಿಂದ ಜೀವಿಸುವುದು ಮೇಲಲ್ಲವೇ ?

ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486







ಗುರುವಾರ, ಜುಲೈ 22, 2010

ನಂಬಿಕೆ ಶೇಕಡಾ ಹತ್ತರಷ್ಟು , ಪ್ರಯತ್ನ ಶೇಕಡ ತೊಂಬತ್ತರಷ್ಟು ಇದ್ದಾಗ ಯಸಸ್ಸು ದೊರಕುತ್ತದೆ.

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು

ಒಂದು ಮುಸ್ಸಂಜೆ ಪ್ರಸಾದ್ ಮನೆಗೆ ಬಂದಾಗ ಅವರ ತಂದೆ "ನನಗೆ ಮಂತ್ರಾಲಯಕ್ಕೆ ಹೋಗಬೇಕೆನಿಸುತ್ತದೆ , ಕಳುಹಿಸಿಕೊಡಲು ಸಾಧ್ಯವೇ ?"ಎಂದು ಕೇಳಿದರು. ಪ್ರಸಾದ್ "ಮಂತ್ರಾಲಯಕ್ಕೆ ಕಳುಹಿಸುವುದು ಕಷ್ಟವೇನಲ್ಲ , ಆದರೆ ನಮ್ಮೂರಿನಿಂದ ಮಂತ್ರಾಲಯಕ್ಕೆ ಹೋಗುವುದು ಒಂದೇ ಬಸ್ಸು . ಮೊದಲೇ ಬುಕ್ ಮಾಡಿಲ್ಲ, ಸೀಟು ಸಿಗುವುದು ಅನುಮಾನ . ನಾಳೆ ಪ್ರಯತ್ನಿಸೋಣ "ಎಂದ. ತಂದೆಯವರು " ಇಲ್ಲ ನಾನಿಂದೆ ಹೋಗಬೇಕು . ಬಸ್ ನಿಲ್ದಾಣಕ್ಕೆ ಹೋಗಿ ಪ್ರಯತ್ನಿಸೋಣ. ರಾಘವೇಂದ್ರ ಸ್ವಾಮಿ ಅನುಕೂಲ ಮಾಡಿಕೊಡುತ್ತಾರೆಂದು ನನ್ನ ನಂಬಿಕೆ "ಎಂದರು. ಪ್ರಸಾದ್ "ನಂಬಿಕೆಯ ಮಾತು ಸರಿ, ಆದರೆ ಟಿಕೆಟ್ ಸಿಗದಿದ್ದರೆ ಏನು ಮಾಡುವುದು ? ನಾಳೆಗೆ ಏನಾದರು ವ್ಯವಸ್ಥೆ ಮಾಡುತ್ತೇನೆ "ಎಂದರು. ಅವರು ಮತ್ತೆ "ನಾನಿಂದೇಹೋಗಬೇಕು , ರಾಘವೇಂದ್ರರು ಸಹಾಯ ಮಾಡುತ್ತಾರೆ , ಬಸ್ ನಿಲ್ದಾಣಕ್ಕೆ ಹೋಗೋಣ "ಎಂದರು. ತಂದೆ -ಮಗ ಬಸ್ ನಿಲ್ದಾಣಕ್ಕೆ ಬಂದರು. ಬಸ್ ಇತ್ತು. ಆದರೆ ಸೀಟು ಇರಲಿಲ್ಲ. ಪ್ರಸಾದ್ "ನಮ್ಮ ತಂದೆಯವರು ಇಂದು ಮಂತ್ರಾಲಯಕ್ಕೆ ಹೋಗಲೆಬೇಕಂತೆ , ಸಹಾಯ ಮಾಡಿ "ಎಂದು ಕಂಡಕ್ಟರಲ್ಲಿ ಗೋಗರೆದ. ತಾಳ್ಮೆ ಕಳೆದುಕೊಂಡ ಕಂಡಕ್ಟರ "ನಿಮ್ಮ ತಂದೆಯವರನ್ನು ನನ್ನ ತಲೆಯ ಮೇಲೆ ಕೂರಿಸಿಕೊಂಡು ಹೋಗಲೇ " ಎಂದು ರೇಗಿದರು. ತಂದೆಯವರು "ಮಗೂ ರಾಘವೇಂದ್ರಸ್ವಾಮಿ ಕೈಬಿಡುವುದಿಲ್ಲವೆಂಬ ನಂಬಿಕೆಯಿದೆ . ಕೊನೆಯವರೆಗೂ ಪ್ರಯತ್ನಿಸೋಣ "ಎಂದರು.

ಇವರನ್ನು "ಮಂತ್ರಾಲಯಕ್ಕೆ ಹೋಗುವ ಬಸ್ ಹೊರಟಿಲ್ಲವಾ? ನನ್ನ ಬಳಿ ಮಂತ್ರಾಲಯಕ್ಕೆ ರಿಸರ್ವ್ ಮಾಡಿಸಿದ ಟಿಕೆಟ್ ಇದೆ. ನಾನು ಹೋಗಲಾಗುತ್ತಿಲ್ಲ. ಅದಕ್ಕೆ ಟಿಕೆಟನ್ನು ಹಿಂತಿರುಗಿಸಿ ಹಣ ಮರಳಿ ಪಡೆಯಲು ಬಂದಿದ್ದೇನೆ "ಎಂದರು. ಪ್ರಸಾದ್ ತಕ್ಷಣ "ಟಿಕೆಟ್ ನಮಗೆ ಕೊಡಿ. ನಮ್ಮ ತಂದೆಯವರು ಹೋಗಬೇಕೆಂದಿದ್ದಾರೆ. ಟಿಕೆಟ್ ಹಣ ತಗೊಳ್ಳಿ "ಎಂದ. ಅವರು "ಮೊದಲು ನಿಮ್ಮ ತಂದೆಯವರನ್ನು ಬಸ್ ಹತ್ತಿಸಿ ಬನ್ನಿ ನಂತರ ಹಣ ಕೊಡುವಿರಂತೆ"ಎಂದರು. ತಂದೆಯವರು ಬಸ್ ಹತ್ತುವ ಮುಂಚೆ ಮಗನ ಕೈ ಹಿಸುಕಿ "ರಾಘವೇಂದ್ರ ಸ್ವಾಮಿ ಹೇಗಾದರೂ ಸಹಾಯ ಮಾಡುತ್ತಾರೆಂದು ನನಗೆ ನಂಬಿಕೆ ಯಿತ್ತು "ಎಂದರು. ಬಸ್ ಹೊರಟ ಮೇಲೆ ಮಗ ಟಿಕೆಟ್ ಕೊಟ್ಟವರಿಗೆ "ನಿಮ್ಮಿಂದಾಗಿ ನಮ್ಮ ತಂದೆಯವರ ಸಂಕಲ್ಪ ಈಡೇರಿತು.ಧನ್ಯವಾದ ಎಂದಾಗ, ಅವರು "ಎಲ್ಲ ಅವನ ಲೀಲೆ "ಎಂದರು. ಪ್ರಸಾದ್ ಟಿಕೆಟ್ ಹಣ ಕೊಡಲು ಹೋದಾಗ ಅವರು ಸ್ವೀಕರಿಸಲಿಲ್ಲ ."ಇದ್ಯಾವ ದೊಡ್ಡ ಮೊತ್ತ ಬಿಡಿ "ಎನ್ನುತ್ತಾ ಆಟೋ ಹತ್ತಿದರು.ನಿಮ್ಮ ವಿಳಾಸ ಕೊಡಿ . ಪ್ರಸಾದ ತಂದುಕೊಡುತ್ತೇನೆ ಎಂದಾಗ ಅವರು ಸಣ್ಣ ಕಾಗದದಲ್ಲಿ ತಮ್ಮ ವಿಳಾಸ ಬರೆದುಕೊಟ್ಟು ಹೊರಟುಹೋದರು . ಅದರಲ್ಲಿ ಪ್ರೋಪೆಸ್ಹರ್ ರಾಘವೇಂದ್ರ ಭಟ್ಟ, ಸಂಸ್ಕೃತ ಪ್ರಾಧ್ಯಾಪಕ ಎಂದಷ್ಟೇ ಬರೆದಿತ್ತು. ಮಗನಿಗೆ ತಂದೆಯವರು ಹೇಳಿದ ರಾಘವೇಂದ್ರ ಸ್ವಾಮಿ ಇವರೇ ಇರಬೇಕೆನಿಸಿ ಕಣ್ಣುಗಳು ತುಂಬಿ ಬಂದವು.

ಮರುದಿನ ತಂದೆಯವರು ಪ್ರಸಾದ್ ಗೆ ದೂರವಾಣಿಯಲ್ಲಿ ಮಂತ್ರಾಲಯ ತಲುಪಿದ್ದೇನೆಂದು ತಿಳಿಸಿದರು. ಪ್ರಸಾದ್ "ನಿಮ್ಮ ನಂಬಿಕೆ ಶೇಕಡ ನೂರರಷ್ಟು ಯಶಸ್ವಿಯಾಯಿತು "ಎಂದಾಗ , ಅವರ ತಂದೆಯವರು "ನಾವು ಕೇವಲ ನಂಬಿಕೆಯೊಂದನ್ನೇ ನಂಬಿ ಮನೆಯಲ್ಲಿ ಕುಳಿತಿದ್ದರೆ ,ಬಸ್ ನಿಲ್ದಾಣಕ್ಕೆ ಹೋಗಿ ಪ್ರಯತ್ನ ಮಾಡದಿದ್ದರೆ ಮಂತ್ರಾಲಯಕ್ಕೆ ಬರುತ್ತಿರಲಿಲ್ಲ . ನಂಬಿಕೆ ಶೇಕಡ ಹತ್ತರಷ್ಟು , ಪ್ರಯತ್ನ ಶೇಕಡ ತೊಂಬತ್ತರಷ್ಟು ಇದ್ದಾಗ ಯಶಸ್ಸುದೊರಕುತ್ತದೆ"ಎಂದರು.
ಅವರ ಯಶಸ್ಸಿನ ಸೂತ್ರ ನಮಗೆ ಮಾರ್ಗದರ್ಶಿ ಯಲ್ಲವೇ ?
ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486







ಬುಧವಾರ, ಜುಲೈ 21, 2010

ನಮ್ಮೊಂದಿಗೆ ಇರುವವರು ತಮ್ಮ ಕಷ್ಟ ಹೇಳಿಕೊಂಡಾಗ, ಸಾಧ್ಯವಿದ್ದರೆ ಸಹಾಯ ಮಾಡಬಹುದು, ಸಾಧ್ಯವಿಲ್ಲದಿದ್ದರೆ ಸಹಾನುಭೂತಿಯನ್ನಾದರೂ ತೋರಬಹುದು !

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು
ಒಂದೂರಿನಲ್ಲಿ ರೈತಪ್ಪ -ರೈತಮ್ಮ ಎಂಬ ಅನುಕೂಲಸ್ಥ ದಂಪತಿಗಳಿದ್ದರು. ಅವರ ಮನೆಯಲ್ಲಿ ಒಂದು ಇಲಿ , ಒಂದು ಕೋಳಿ, ಒಂದು ಹಂದಿ ಹಾಗೂ ಒಂದು ಆಡು ಇದ್ದವು. ಎಲ್ಲವು ಸುಖವಾಗಿದ್ದವು .ಕೆಲವೊಮ್ಮೆ ಇಲಿ ಹೆಚ್ಚು ಧಾನ್ಯವನ್ನು ಕಡಿದು ಹಾಕುತ್ತಿತ್ತು. ಚೀಲಗಳನ್ನು ತೂತು ಮಾಡುತಿತ್ತು. ರೈತಮ್ಮನಿಗೆ ಇಲಿಯ ಕಾಟ ಹೆಚ್ಚಾಯಿತೆನಿಸಿತು . ಇಲಿಯ ಪಾಷಾಣ ತರಿಸಿಕೊಂಡಳು. ಇದನ್ನು ಗಮನಿಸಿದ ಇಲಿ ಹೆದರಿಕೊಂಡಿತು.ಕೋಳಿಯ ಬಳಿ ಹೋಗಿ "ನನ್ನನ್ನು ಕೊಲ್ಲಲು ಪಾಷಾಣ ತಂದಿದ್ದಾರೆ "ಎಂದು ಗೋಳಾಡಿತು . ಕೋಳಿ "ನಾನುಂಟು ನನ್ನ ತಿಪ್ಪೆಗುಂಡಿಯ ಕಾಳುಂಟು. ನಾನು ಸುಖವಾಗಿದ್ದೇನೆ. ನಿನ್ನ ಗೋಳಿಗೆ ನಾನೇಕೆ ಅಳಲಿ?"ಎಂದು ಬಿಟ್ಟಿತು. ನಂತರ ಇಲಿಯು ಹಂದಿಗೆ
ತನ್ನ ಹೆದರಿಕೆಯನ್ನು ಹೇಳಿಕೊಂಡಿತು . ಹಂದಿ "ನಾನು ಉಂಟು ನನ್ನ ಕೆಸರು ಗುಂಡಿಯುಂಟು.". ನಾನು ಆನಂದವಾಗಿದ್ದೇನೆ. ನನಗೆ ಪಾಷಾಣದ ಹೆದರಿಕೆಯಿಲ್ಲ ನಿನ್ನ ಕಷ್ಟ ನಿನಗೆ "ಎಂದಿತು. ಇದಾದನಂತರ ಇಲಿ ಆಡಿನ ಬಳಿ ಹೋಗಿ ತನ್ನ ನೋವಿನ ಕತೆಯನ್ನು ಹೇಳಿತು. ಆಡು "ನಾನು ಮುಟ್ಟುವಷ್ಟು ಸೊಪ್ಪಿದೆ. ಬೆಚ್ಚನೆಯ ದೊಡ್ದಿಯಿದೆ. ನನ್ನ ಪಾಡು ನನಗೆ "ಎಂದು ಬಿಟ್ಟಿತು. ಇಲಿ ತುಂಬಾ ದು:ಖದಿಂದ ತನಗೆ ಯಾರಿಂದಲೂ ಸಹಾಯವೂ ಸಿಗಲಿಲ್ಲ. ಸಹಾನುಭೂತಿಯೂ ಸಿಗಲಿಲ್ಲ. ಎಂದು ಕೊರಗುತ್ತ ತನ್ನ ಬಿಲ ಸೇರಿಕೊಂಡಿತು.
ಅಂದು ಸಂಜೆ ರೈತಮ್ಮ ಪಾಷಾಣವನ್ನು ಸಿದ್ಧಗೊಳಿಸಿದಳು, ಸರಿಯಾಗಿ ಕೈತೊಳೆಯದೆ ಎಲೆ -ಅಡಿಕೆ ಹಾಕಿಕೊಂಡಳು . ಪಾಷಾಣದ ತುಣುಕು ಹೊಟ್ಟೆಗೆ ಸೇರಿರಬೇಕು. ಹೊಟ್ಟೆ ತೊಳಸು,ವಾಂತಿ ಶುರುವಾಯಿತು. ತಕ್ಷಣ ರೈತಪ್ಪ ವೈದ್ಯರನ್ನು ಕರೆಸಿದ.ವೈದ್ಯರು ಆಕೆಗೆ ಚಿಕಿತ್ಸೆ ನೀಡಿದರು. ಕತ್ತಲಾಗಿದ್ದರಿಂದ "ಇಲ್ಲೇ ಊಟಮಾಡಿಕೊಂಡು ಹೋಗಿ " ಎಂದು ರೈತ ವೈದ್ಯರಿಗೆ ಒತ್ತಾಯ ಮಾಡಿದ. ಅವರಿಗಾಗಿ ತನ್ನಲ್ಲಿದ್ದ ಕೋಳಿಯನ್ನು ಕತ್ತರಿಸಿ. ಪಲಾವ್ ಮಾಡಿಸಿ ಬಡಿಸಿದ. ಬೆಳಗ್ಗೆ "ರೈತಮ್ಮ ಪಾಷಣ ತಿಂದುಬಿಟ್ಟಿದ್ದಳಂತೆ. ಏನು ಕಷ್ಟವಿತ್ತೋ ಏನೋ "ಎಂಬ ಗಾಳಿಮಾತು ಊರಲೆಲ್ಲ ಹರಡಿತು. ಊರಿನವರೆಲ್ಲ ಬಂದು ರೈತಮ್ಮನಿಗೆ ಸಾಂತ್ವನ ಹೇಳಿ ಕುಳಿತರು. ಕೆಲವರು ಮಧ್ಯಾಹ್ನ ಊಟಕ್ಕೂ ಉಳಿದುಕೊಂಡರು. ಅವರಿಗಾಗಿ ರೈತಪ್ಪ ಹಂದಿಯನ್ನು ಕೊಂದು ಸಾರನ್ನು ಮಾಡಿ ಉಣಬಡಿಸಿದ. ಸಂಜೆಯ ಹೊತ್ತಿಗೆ ಈ ಸುದ್ಧಿ ದೂರದ ಬಂಧುಗಳಿಗೆ -ನೆಂಟರಿಷ್ಟರಿಗೆಲ್ಲ ಗೊತ್ತಾಗಿ ಅವರೆಲ್ಲಾ ಎತ್ತಿನ ಗಾಡಿಗಳಲ್ಲಿ, ಟ್ರ್ಯಾಕ್ಟರ್ ಗಳಲ್ಲಿ ಬಂದರು. ಮನೆ ತುಂಬಾ ನೆಂಟರಿಷ್ಟರು. ಅವರೆಲ್ಲರಿಗೂ ರೈತ ಆದನ್ನು ಕಡಿದು ಬಿರಿಯಾನಿ ಮಾಡಿ ಉಣಬಡಿಸಿದ . ಮಧ್ಯರಾತ್ರಿಯವರೆಗೂ ಎಲ್ಲರೂ ಮಾತನಾಡುತ್ತ ಕುಳಿತ್ತಿದ್ದರು. ಯಾರೋ ಒಬ್ಬರು " ಈ ಪಾಷಾಣ ಅಪಾಯಕಾರಿ ಮಕ್ಕಳು ಇರುವ ಮನೆಯಲ್ಲಿ ಇಟ್ಟುಕೊಳ್ಳಬಾರದು " ಎಂದರು. ತಕ್ಷಣ ರೈತಪ್ಪ ಪಾಷಾಣ ವನ್ನು ದೂರ ಬಿಸಾಡಿಸಿದ . ಇದನ್ನು ಕಂಡು ಇಲಿಗೆ ಸಂತೋಷವಾಯಿತು. ಸಂತಸ ಹಂಚಿಕೊಳ್ಳೋಣ ವೆಂದರೆ ಕೋಳಿ , ಹಂದಿ, ಆಡು ಎಲ್ಲ ಸತ್ತುಹೊಗಿದ್ದವು.

ಈ ಕತೆಯ ನೀತಿ ಈ ರೀತಿ ಇದೆ. ನನ್ನ ಪ್ರಕಾರ ;-
ನಮ್ಮೊಂದಿಗೆ ಇರುವವರು ತಮ್ಮ ಕಷ್ಟ ಹೇಳಿಕೊಂಡಾಗ , ಸಾಧ್ಯವಿದ್ದರೆ ಸಹಾಯ ಮಾಡಬಹುದು. ಸಾಧ್ಯವಿಲ್ಲದಿದ್ದರೆ ಸಹಾನುಭೂತಿಯನ್ನಾದರೂ ತೋರಬಹುದು !

ಊರಿಗೆ ಬೆಂಕಿ ಬಿದ್ದರೆ ನನಗೇನೂ ? ನಾನು ತಣ್ಣಗಿದ್ದೆನೆನ್ನುವ ಭಾವನೆ ಸರಿಯಲ್ಲ. ಬೆಂಕಿ ನಮ್ಮನ್ನೇ ಮೊದಲು ಸುಡಬಹುದು. !


ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486







ಸೋಮವಾರ, ಜುಲೈ 19, 2010

ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡಬಹುದೇ ? , ಅಥವಾ ಕೊಡಬಾರದೇ ?

ವಿಶ್ವದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು

ದೇವತೆಗಳ ಮುಖಂಡ ಇಂದ್ರನು ಸಕಲ ಸುಖ ಸೌಲಭ್ಯಗಳೂ ಇರುವ ಸ್ವರ್ಗದ ಅಧಿಪತಿ. ಒಮ್ಮೆ ಆತನಿಗೆ ಭೂಲೋಕವನ್ನುಸುತ್ತಾಡಿ ಬರಬೇಕೆಂದು ಆಸೆಯಾಯಿತಂತೆ. ಇತರ ದೇವತೆಗಳಿಗೆ ತನ್ನಿಚ್ಹೆಯನ್ನು ತಿಳಿಸಿದ. ಅವರು ಯಾವುದಾದರೂ ದೇಹವನ್ನುಧರಿಸಿ ಹೋದರೆ ಭೂಲೋಕದ ಅನುಭವ ಚೆನ್ನಾಗಿ ಆಗಬಹುದೆಂಬ ಸಲಹೆ ನೀಡಿದರು. ಆಗಬಹುದೆಂದು ಒಪ್ಪಿಕೊಂಡ ಆತಭೂಲೋಕಕ್ಕೆ ಹೊರಟನಂತೆ. ವರ್ಷಗಳೇ ಕಳೆದರೂ ಸ್ವರ್ಗಕ್ಕೆ ಮರಳಿ ಬರಲಿಲ್ಲವಂತೆ . ಚಿಂತಾಕ್ರಾಂತರಾದ ದೇವತೆಗಳುಇಂದ್ರನನ್ನು ಹುಡುಕಿಕೊಂಡು ಬರಲು ಒಬ್ಬ ದೇವದೂತನನ್ನು ಭೂಲೋಕಕ್ಕೆ ಕಳುಹಿಸಿದರು. ದೇವದೂತ ಭೂಲೋಕದಲ್ಲಿಇಂದ್ರನನ್ನು ಹುಡುಕುತ್ತಾ ಬಂದ. ಬಹಳ ಹುಡುಕಿದ ಮೇಲೆ ಆತನಿಗೆ ಒಂದು ಹಂದಿಯ ರೂಪದಲ್ಲಿದ್ದ ಇಂದ್ರ ಕಾಣಿಸಿಕೊಂಡ. ಹಂದಿಯ ಹಿಂದೆ ಒಂದು ಧಡೂತಿ ಹೆಣ್ಣು ಹಂದಿಯೂ ನಾಲ್ಕು ಹಂದಿ ಮರಿಗಳೂ ಇದ್ದವು. ದೇವದೂತನಿಗೆ ಇದು ಇಂದ್ರನೇ ಎಂದುಗೊತ್ತಾಯಿತು. ಆದರೆ ಇಂದ್ರನಿಗೆ ದೇವದೂತನ ಗುರುತು ಹತ್ತಲಿಲ್ಲ. ಆದರೂ ದೇವದೂತ ಹಂದಿಗೆ ನಮ್ನಸ್ಕರಿಸಿ "ತಾವು ಸ್ವರ್ಗಲೋಕವನ್ನು ಬಿಟ್ಟು ಬಂದು ಬಹಳ ದಿನಗಳಾಯಿತು. ತಮ್ಮನ್ನು ಮರಳಿ ಕರೆದುಕೊಂಡು ಹೋಗಲು ನನ್ನನ್ನು ಕಳುಹಿಸಿದ್ದಾರೆ . ಹೋಗೋಣ ಬನ್ನಿ ". ಎಂದು ಕರೆದ. ಹಂದಿ "ನಾನು ಸಾಮಾನ್ಯ ಹಂದಿ ನನಗೆ ಒಬ್ಬ ಹಂದಿ ಹೆಂಡತಿ ಇದ್ದಾಳೆ. ನಾಲ್ಕು ಹಂದಿಮಕ್ಕಳೂ ಇದ್ದಾರೆ. ಇವರನ್ನೆಲ್ಲ ಬಿಟ್ಟು ಹೇಗೆ ಬರಲಿ ? " ಎಂದು ಪ್ರಶ್ನಿಸಿತು . ದೇವದೂತ ನೀವು ಸಾಮಾನ್ಯ ಹಂದಿಯಲ್ಲ. ನೀವುದೇವೆಂದ್ರರು ಎಂದು ಎಷ್ಟು ಹೇಳಿದರೋ ಹಂದಿಗೆ ಅರ್ಥವಾಗಲಿಲ್ಲ. ದೇವದೂತನಿಗೆ ಬಹಳ ಸಿಟ್ಟು ಬಂತು. ತನ್ನ ಕೈಯಲ್ಲಿದ್ದದಂಡದಿಂದ ಹೊಡೆಯುತ್ತೇನೆಂದು ಹೆದರಿಸಿದ. ಹಂದಿಗೆ ಬಹಳ ಸಿಟ್ಟು ಬಂತು. "ನನ್ನ ದೂತನಾಗಿ ನನ್ನನ್ನೇಹೊದೆಯುತ್ತೆನೆನ್ನುತ್ತೀಯಾ ? ನಿನಗೆ ಶಾಪ ಕೊಡುತ್ತೇನೆ " ಎನ್ನುವಾಗ. ಹಂದಿಗೆ ತಾನು ದೇವೆಂದ್ರನೆಂಬ ನೆನಪುಮಸುಕುಮಸುಕಾಗಿ ಬಂತು. ಆಗ ದೇವದೂತ ದೃಢವಾದ ದನಿಯಲ್ಲಿ ನಿಧಾನವಾಗಿ ಇಂದ್ರನಿಗೆ ಅವನ ದೈವಿಕ ಲಕ್ಷಣಗಳನ್ನೂ , ಸ್ವರ್ಗದಲ್ಲಿನ ಸುಖ ಸೌಲಭ್ಯಗಳನ್ನು , ಅಲ್ಲಿ ದೊರೆಯುವ ವೈಭವೋಪೇತ ಸ್ವಾಗತವನ್ನೂ ತಿಳಿಯ ಹೇಳಿದ. ಇದೆಲ್ಲವನ್ನು ಕೇಳಿದಇಂದ್ರನಿಗೆ ಜ್ಞಾನೋದಯವಾಯಿತು . ಭೂಲೋಕದ ಅನುಭವ ಸಾಕೆಂದುಕೊಂಡು ಸ್ವರ್ಗಕ್ಕೆ ಹೊರಟನಂತೆ . ದೇವತೆಗಳುನಿಟ್ಟುಸಿರು ಬಿಟ್ಟರಂತೆ. ಇಂದ್ರನಂತವರಿಗೂ ತಾವ್ಯಾರೆಂಬುದು ಮರೆತು ಹೋಗಿತ್ತಂತೆ . ಕೋಲು ಕಂಡಾಗ ನೆನಪಾಯಿತಂತೆ. ಹಾಗೆಯೇ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ತಾವು ಶಾಲೆಗೇ ಬಂದದ್ದೇಕೆ ?ಅಲ್ಲಿ ಏನು ಕಲಿಯಬೇಕು ? ಅಲ್ಲಿ ಗೆಗೆ ವರ್ತಿಸಬೇಕು ? ಎಂಬುದು ಮರೆತುಹೋಗುವ ಸಂದರ್ಭಗಳಲ್ಲಿ ಶಿಕ್ಷಕರು ಅನುಸರಿಸಬಹುದಾದ ಮಾರ್ಗಗಳು;
ಶಿಕ್ಷಕರ ಕೈಯಲ್ಲಿ ಕೋಲಿರಬಹುದು , ಹೊಡೆಯಲು ಅಲ್ಲ ಹೆದರಿಸಲು ಮಾತ್ರ.
ಶಾಲಾ /ಕಾಲೇಜು ನಂತರದ ವೃತ್ತಿಜೀವನದ ಬಗ್ಗೆ ತಿಳಿಸಬೇಕು. ಹುರಿದುಂಬಿಸಬೇಕು
ಏನನ್ನಾದರೂ ಸಾಧಿಸಬೇಕೆಂಬ ಪ್ರೇರೇಪಣೆ ನೀಡಬೇಕು.
ಶುಭ ದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486






ಭಾನುವಾರ, ಜುಲೈ 18, 2010

ಇಂಥ ಹೆಂಡತಿಯರ ಸಂತತಿ ಸಾವಿರವಾಗಲಿ

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

ಹತ್ತೊಂಬತ್ತನೆಯ ಶತಮಾನ. ಇಂಗ್ಲೆಂಡಿನಲ್ಲಿ ದಂಪತಿಗಳಿದ್ದರು. ಪತಿ ಸರ್ಕಾರಿ ನೌಕರಿಯಲ್ಲಿದ್ದರು. ಬರುವ ಸಂಬಳದಲ್ಲಿ ಸಂಸಾರನಿರ್ವಹಣೆಯಾಗುತ್ತಿತ್ತು. ಒಂದು ದಿನ ಮಧ್ಯಾಹ್ನವೇ ಪತಿ ಮನೆಗೆ ಮರಳಿದರು. ಆಕಾಶವೇ ತಲೆಯ ಮೇಲೆ ಬಿದ್ದವರಂತಿದ್ದರು. ಮುಖ ಕಳೆಹೀನವಾಗಿತ್ತು. ಮುಗುಳ್ನಗೆಯೊಂದಿಗೆ ಪತಿಯನ್ನು ಸ್ವಾಗತಿಸಿದ ಸತಿ ಅವರ ಖಿನ್ನತೆಗೆ ಕಾರಣವನ್ನು ಕೇಳಿದಾಗ ಅವರುತಮ್ಮನ್ನು ನೌಕರಿಯಿಂದ ಕಿತ್ತು ಹಾಕಿದ್ದಾರೆ. ಮುಂದೇನು ಮಾಡುವುದೆಂದು ತೋಚುತ್ತಿಲ್ಲ"ಎಂದರು. ಆಘಾತಕರ ಸುದ್ಧಿಯನ್ನುಕೇಳಿ ಸತಿ ಗಂಡನನ್ನು ಸಾಂತ್ವನ ಹೇಳಿದರು. ಕಾಗದ ,ಪೆನ್ನು ಅವರ ಕೈಗಿತ್ತರು. "ನೌಕರಿ ಹೋಗಿದ್ದು ಒಳ್ಳೆಯದು ಆಯಿತು. ನೀವುಬಹಳ ದಿನಗಳಿಂದ ಕತೆಯೋ , ಕಾದಂಬರಿಯೋ ಬರೆಯಬೇಕು. ಸಮಯವಿಲ್ಲ ವೆನ್ನುತ್ತಿದ್ದಿರಿ . ಈಗ ಬರೆಯಲು ಮೊದಲು ಮಾಡಿಎಂದರು. ಪತಿ ನೋವಿನಲ್ಲೂ ನಗುತ್ತಾ "ಬರೆಯಲು ಸಮಯಾವಕಾಶ ಸಿಕ್ಕಿದೆ. ಆದರೆ ಸಂಸಾರ ನಡೆಯುವುದು ಹೇಗೆ ?ಎಂದುಪ್ರಶ್ನಿಸಿದರು. ಆಕೆ "ನೀವು ಮನೆಯ ಖರ್ಚಿಗೆ ಹಣ ಕೊಡುತ್ತಿದ್ದಿರಿ, ಎಂದೂ ಲೆಕ್ಕ ಕೇಳಿರಲಿಲ್ಲ. ಅದರಲ್ಲಿ ಸ್ವಲ್ಪ ಉಳಿತಾಯಮಾಡಿಟ್ಟಿದ್ದೇನೆ. ಆರು ತಿಂಗಳು ಹೇಗೋ ನಿಭಾಯಿಸಬಹುದು. ನೀವು ಚಿಂತಿಸಬೇಡಿ .ಬರೆಯುವುದರತ್ತ ಗಮನಕೊಡಿ " ಎಂದರು. ಪತಿ ಬರೆಯಲು ಪ್ರಾರಂಭಿಸಿದರು. ನಾಲ್ಕೂವರೆ ತಿಂಗಳಲ್ಲಿ ಅವರ ಮೊದಲನೆಯ ಕಾದಂಬರಿ "ದಿ ಸ್ಕಾರ್ಲೆಟ್ ಲೆಟರ್ಪ್ರಕಟವಾಯಿತು. ಜನಪ್ರಿಯವೂ ಆಯಿತು. ಅನಂತರ ಪತಿ ಪೂರ್ಣಾವಧಿ ಕಾದಂಬರಿಕಾರರಾದರು."ಹೌಸ್ ಆಪ್ಹ್ ಸೆವೆನ್ಗೇಬಲ್ಸ್"."ದಿ ಮಾರ್ಬಲ್ ಫಾನ್ " ಮುಂತಾದವು ಅವರ ಕಾದಂಬರಿಗಳು.

"ಅವರ ಹೆಸರು ನೆಥಾನಿಯಲ್ ಹತ್ಹೋರ್ನ್. ಪ್ರಸಂಗ ನಡೆದು ಒಂದೂವರೆ ಶತಮಾನವೇ ಕಳೆದಿದೆ. ಅವರ ಹೆಸರುಇಂಗ್ಲೀಷ್ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಅವರ ಪತ್ನಿಯ ಹೆಸರು ಯಾರಿಗೂ ನೆನಪಿಲ್ಲ. ಆದರೆ ಅಂದು ಆಕೆಪ್ರೋತ್ಸಾಹಿಸದಿದ್ದರೆ ಅವರು ಬರಹಗಾರರೇ ಆಗುತ್ತಿರಲಿಲ್ಲ.

ಮತ್ತೊಂದು ಘಟನೆ ಭಾರತ ದೇಶದಲ್ಲಿ ನಡೆದದ್ದು. ಕನ್ನಡದ ಹೆಸರಾಂತ ಕಾದಂಬರಿಕಾರ .ರಾ.ಸು . ರವರು ಭಾರತದಸ್ವತಂತ್ರ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರಂತೆ. ಸ್ವಾತಂತ್ರ್ಯದ ನಂತರ ಅವರ ಅನೇಕ ಜನ ಸ್ನೇಹಿತರುಗಳುಸರಕಾರದಲ್ಲಿ ಸಚಿವರುಗಳಾದರು. .ರಾ.ಸು ರವರು ಪೂರ್ಣಾವಧಿ ಲೇಖಕರಾದರು .ಅವರು ಬರೆದ ಕಾದಂಬರಿಗಳು ಅವರಿಗೆಜನಪ್ರಿಯತೆ ತಂದುಕೊಟ್ಟವವಾದರೂ . ಹೆಚ್ಚಿನ ಹಣಕಾಸು ತಂದುಕೊಡಲಿಲ್ಲ. ಒಮ್ಮೆ ಅವರು ಯಾವುದೋ ಸಮಾರಂಭದಲ್ಲಿಸಚಿವರೊಬ್ಬರನ್ನು ಭೇಟಿಯಾಗಿದ್ದರು. ಸಚಿವರು ಇವರ ಯೋಗಕ್ಷೇಮ ವಿಚಾರಿಸಿ ಮಂಡ್ಯದ ಬಳಿ ಒಂದೆರಡು ಎಕರೆ ಜಮೀನು ತೆಗೆದುಕೊಂಡರೆ ಜೀವನೋಪಾಯಕ್ಕೆ ಸಹಾಯವಾಗುತ್ತದೆಂದು ಸಲಹೆ ನೀಡಿದರು. .ರಾ.ಸು ರವರು ಜೆಮೀನು ಕೊಳ್ಳುವಷ್ಟು ಹಣಇಲ್ಲವೆಂದು ಹೇಳಿದಾಗ, ಸಚಿವರು "ಸ್ವಾತಂತ್ರ್ಯ ಹೋರಾಟಗಾರರು ದರಖಾಸ್ತು ಅರ್ಜಿ ಕೊಟ್ಟರೆ ಸರಕಾರವೇ ಉಚಿತವಾಗಿಜಮೀನು ಕೊಡುತ್ತದೆ "ಎಂದು ತಿಳಿಸಿ , ಅರ್ಜಿಯನ್ನೂ ತರಿಸಿಕೊಟ್ಟರಂತೆ, ಸಂಗತಿ .ರಾ.ಸು ರವರ ಪತ್ನಿ ಅಂಬುಜಮ್ಮನವರಿಗೆತಿಳಿದಾಗ ಅವರು ತಮ್ಮ ಪತಿಯನ್ನು "ನೀವು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದು ದೇಶಕ್ಕಾಗಿಯೋ ಅಥವಾ ಅದರಹೆಸರಿನಲ್ಲಿ ಜಮೀನು ಪಡೆಯುವುದಕ್ಕಾಗಿಯೋ ? "ಎಂದು ಕೇಳಿದರು. .ರಾ.ಸು ರವರು "ದೇಶಕ್ಕಾಗಿ "ಎಂದುತ್ತರಿಸಿದಾಗ, ಅಂಬುಜಮ್ಮನವರು ಅರ್ಜಿಯನ್ನು ಹರಿದು ಹಾಕಿ ಪತಿ ಯಾರ ದಾಕ್ಷಿಣ್ಯದಲ್ಲೂ ಬದುಕದಂತೆ ನೋಡಿಕೊಂಡರಂತೆ. ಇಂತಹಹೆಂಡತಿ ಸಂತತಿ ಸಾವಿರವಾಗಲಿ " ಎಂದು ನಾವೂ ಹರಸೋಣವೇ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486






" " " "

ಶನಿವಾರ, ಜುಲೈ 17, 2010

ಕಷ್ಟದಲ್ಲಿರುವವರಿಗೆ ನಮ್ಮ ಕಷ್ಟ ಲೆಕ್ಕಿಸದೇ ಅಷ್ಟೋ ಇಷ್ಟೋ ಸಹಾಯ ಮಾಡಿದರೆ ನಮ್ಮ ಕಷ್ಟ ಕರಗಿಹೊಗದಿರಬಹುದು . ಆದರೆ ಕಷ್ಟವನ್ನೆದುರಿಸಿ ನಡೆಯುವ ಚೈತನ್ಯ ನಮಗೆ ....

ಪ್ರಪಂಚದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.

ಕಳೆದ ಶತಮಾನದಲ್ಲಿ ಉತ್ತರ ಭಾರತದಲ್ಲಿ ಸಾಧು ಸುಂದರ್ ಸಿಂಗ್ ಎಂಬ ಧರ್ಮ ಪ್ರಚಾರಕರಿದ್ದರು . ಅವರು ತಮ್ಮ ಅನುಭವಗಳನ್ನು "ವಿಸ್ದಂ ಆಪ್ಹ್ ಎ ಸಾಧು " ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಹಲವಾರು ಅರ್ಥ ಗರ್ಭಿತ ಹಾಗೂ ತತ್ತ್ವ ಭೋಧಕ ಪ್ರಸಂಗಗಳಿವೆ. ಅಂತಹ ಒಂದು ಪ್ರಸಂಗ ಇಲ್ಲಿದೆ .

ಒಮ್ಮೆ ಈ ಸಾಧುಗಳು ಟಿಬೇಟಿನ ಹಿಮಾಲಯದಲ್ಲಿ ಒಬ್ಬ ಮಾರ್ಗದರ್ಶಿಯೊಡನೆ ಸುತ್ತಾಡುತ್ತಿದ್ದರು. ಅದು ಚಳಿಗಾಲ ರಕ್ತ ಹೆಪ್ಪುಗಟ್ಟುವಷ್ಟು ಚಳಿಗಾಳಿ . ಅದರೊಂದಿಗೆ ಹಿಮಪಾತ. ತುಂಬ ಶ್ರಮದಾಯಕವಾದ ಪ್ರಯಾಣ. ಶ್ರಮವೆಂದು ಕೂರುವಂತಿಲ್ಲ.ಕೂತರೆ ಚಳಿಗೆ ಕೈಕಾಲುಗಳು ಮರಗಟ್ಟುತ್ತವೆ . ಸಂಜೆಯಾಗುವುದರೊಳಗೆ ಮುಂದಿನ ಹಳ್ಳಿಯನ್ನು ಸೇರಿಕೊಳ್ಳುವ ಅವಸರ. ಆಗ ಅವರಿಗೆ ರಸ್ತೆಯಲ್ಲಿ ಒಬ್ಬ ಪ್ರಜ್ಞಾಹೀನ ಮನುಷ್ಯ ಕಂಡ. ಚಳಿಯ ಆಘಾತಕ್ಕೊಳಗಾಗಿದ್ದ. ಕುಟುಕು ಜೀವ ಇದ್ದಂತಿತ್ತು. ಉಸಿರಾಟ ನಿಧಾನವಾಗಿ ನಡೆಯುತ್ತಿತ್ತು. ಅವನನ್ನು ಆ ದು:ಸ್ಥಿತಿಯಲ್ಲೇ ಬಿಟ್ಟು ಹೋಗಲು ಸಾಧುಗಳಿಗೆ ಮನಸ್ಸು ಬರಲಿಲ್ಲ. ಅಲ್ಲಿಯೇ ನಿಂತರು. ಆತನ ಪಾದಗಳನ್ನು ಗಸಗಸನೆ ಉಜ್ಜಿ , ಶಾಖ ಬರುವಂತೆ ಮಾಡಲು ಪ್ರಾರಂಭಿಸಿದರು. ಅವರ ಜೊತೆಗಿದ್ದ ಸಂಗಾತಿ "ಈತನ ಕತೆ ಮುಗಿದಂತಿದೆ, ಏನು ಮಾಡಿದರೂ ಮತ್ತೆ ಚೇತರಿಸಿಕೊಳ್ಳುವುದಿಲ್ಲ .ಇಲ್ಲಿಯೇ ನಿಂತರೆ ನಾವೂ ತೊಂದರೆಗೆ ಸಿಕ್ಕಿಕೊಳ್ಳುತ್ತೇವೆ. ನಮ್ಮ ಸಾವನ್ನು ನಾವೇ ಆಹ್ವಾನಿಸಿದಂತಾಗುತ್ತದೆ. ಬೇಗ ಎದ್ದು ಹೊರಡಿ. ಸಂಜೆಗೆ ಮುಂಚೆ ಹತ್ತಿರದ ಯಾವುದಾದರೂ ಹಳ್ಳಿಯನ್ನು ಸೇರಿಕೊಳ್ಳೋಣ."ಎಂದು ಅವಸರಿಸಿದ. ಒಬ್ಬ ಮನುಷ್ಯನನ್ನು ಸಾವಿಗೊಪ್ಪಿಸಿ ಹೋಗಲು ಸಾಧುಗಳು ಸಿದ್ಧರಿರಲಿಲ್ಲ. ಮಾರ್ಗದರ್ಶಿಯ ಮಾತುಗಳಿಗೆ ಗಮನಕೊಡದೆ ತಮ್ಮ ಶುಶ್ರೂಷೆ ಮುಂದುವರೆಸಿದರು. ಮಾರ್ಗದರ್ಶಿ ಇವರಿಗೆ ಕಾಯದೆ ತನ್ನು ಪಾಡಿಗೆ ತಾನು ಹೊರಟುಹೋದ . ಸಾಧುಗಳು ಅರ್ಧ ಗಂಟೆಯ ಕಾಲ ಅಪರಿಚಿತನ ಪಾದಗಳನ್ನು ರಭಸದಿಂದ ಉಜ್ಜುತ್ತಲೇ ಹೋದರು. ಆತನಲ್ಲಿ ಸ್ಪಲ್ಪ ಚಲನವಲನ ಕಾಣಿಸಿಕೊಂಡಿತು. ತಕ್ಷಣ ಸಾಧುಗಳು ಆತನನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡರು. ಹತ್ತಿರದ ಹಳ್ಳಿಯ ಕಡೆಗೆ ಧಾಪುಗಾಲು ಹಾಕಲು ಆರಂಭಿಸಿದರು. ಈ ನಡಿಗೆಯಿಂದಾಗಿ ಅವರ ಮೈಯಲ್ಲೂ ಶಾಖ ಉತ್ಪಾದನೆಯಾಯಿತು . ಅವರ ಹೆಗಲ ಮೇಲೆ ಇದ್ದ ಮನುಷ್ಯನ ದೇಹದಲ್ಲೂ ಶಾಖ ಉತ್ಪಾದನೆಯಾಯಿತು. ನಿಧಾನವಾಗಿ ಪ್ರಜ್ಞೆ ಮರಳಿ ಬಂದಿತು. ಸ್ವಲ್ಪ ಹೊತ್ತಿಗೆ ಆತ ಮಾತನಾಡತೊಡಗಿದ. ತನ್ನನ್ನು ಕೆಳಗಿಳಿಸಿ ಎಂದ . ಆತ ಕೆಳಗಿಳಿದ ನಂತರ ಇಬ್ಬರೂ ಭರಭರನೆ ನಡೆಯಹತ್ತಿದರು. ಆ ವೇಗದ ನಡಿಗೆಯಿಂದ ಇಬ್ಬರ ದೇಹದಲ್ಲೋ ಚೈತನ್ಯ ತುಂಬಿಕೊಂಡಿತು.

ಒಂದೆರಡು ಮೈಲಿ ನಡೆಯುವಷ್ಟರಲ್ಲಿ ರಸ್ತೆಯಲ್ಲಿ ಮತ್ತೊಂದು ದೇಹ ಬಿದ್ದಿರುವುದು ಕಂಡಿತು. ನಡಿಗೆಯನ್ನು ನಿಲ್ಲಿಸಿ ಬಗ್ಗಿ ನೋಡಿದರೆ ಅಲ್ಲಿ ಬಿದ್ದಿದ್ದ ದೇಹ ಅವರ ಮಾರ್ಗದರ್ಶಿಯದಾಗಿತ್ತು. ಬಹುಶ : ಒಬ್ಬನೇ ನಡೆಯುತ್ತಾ ಚಳಿಯ ಹೊಡೆತಕ್ಕೆ ಕುಸಿದು ಬಿದ್ದಿರಬಹುದಾದ, ಹಿಮಪಾತಕ್ಕೆ ಸಿಕ್ಕಿ ದೇಹ ಮರಗಟ್ಟಿ ಹೋಗಿರಬಹುದಾದ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು . ಆ ಮಾರ್ಗದರ್ಶಿಯ ದುರಂತವನ್ನು ಕಂಡು ಒಂದೆರಡು ನಿಮಿಷ ಶೋಕಿಸಿದ ಸಾಧು ಮತ್ತು ಆ ಮನುಷ್ಯ ಪ್ರಯಾಣ ಮುಂದುವರೆಸಿದರು. ಮುಂದಿನ ಹಳ್ಳಿಗೆ ಸುರಕ್ಷಿತವಾಗಿ ತಲುಪಿದರು.


ಕಷ್ಟದಲ್ಲಿರುವವರಿಗೆ ನಮ್ಮ ಕಷ್ಟ ಲೆಕ್ಕಿಸದೇ ಅಷ್ಟೋ ಇಷ್ಟೋ ಸಹಾಯ ಮಾಡಿದರೆ ನಮ್ಮ ಕಷ್ಟ ಕರಗಿಹೊಗದಿರಬಹುದು . ಆದರೆಕಷ್ಟವನ್ನೆದುರಿಸಿ ನಡೆಯುವ ಚೈತನ್ಯ ನಮಗೆ
ದೊರೆಯಬಹುದು.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ

.ಟಿ.ನಾಗರಾಜ
ದಬ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-೯೬೩೨೧೭೨೪೮೬








ಶುಕ್ರವಾರ, ಜುಲೈ 16, 2010

ಇಬ್ಬರು ಮಹಾನುಭಾವರ ಜೀವನದ ಘಟನೆಗಳು

ಪ್ರಪಂಚದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.

" ಪಂಡಿತ ವಿಷ್ಣು ದಿಗಂಬರ ಪಲುಸೇಕರ್" ಎಂಬ ಮಹಾನ್ ವಿದ್ವಾಂಸರು "ರಘುಪತಿ ರಾಘವ ರಾಜಾರಾಂ " ಮತ್ತು "ಸಾರೇ ಜಹಾಂಸೆ ಅಚ್ಚಾ " ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದವರು. ಮಹಾತ್ಮಗಾಂಧಿಯವರೊಂದಿಗೆ ಸತ್ಯಾಗ್ರಹಗಳಲ್ಲಿ ಭಾಗವಹಿಸಿದವರು . ಹಿಂದೂಸ್ಥಾನಿ ಸಂಗೀತವನ್ನು ಜನಪ್ರಿಯಗೊಳಿಸಿದವರು. ಅಂದಿನಕಾಲದಲ್ಲಿ ರಾಜ-ಮಹಾರಾಜರು ಅಥವಾ ಶ್ರೀಮಂತರು ಮಾತ್ರ ಕೇಳುತ್ತಿದ್ದ ಸಂಗೀತವನ್ನು ಜನಸಾಮಾನ್ಯರೂ ಕೇಳುವಂತಾಗಬೇಕೆಂದು "ನಾಲ್ಕಾಣೆ "ತಿಕೀತ್ ಇಟ್ಟು ಸಂಗೀತ ಕಛೇರಿಗಳನ್ನು ಏರ್ಪಡಿಸುತ್ತಿದ್ದರು. ಬಂದ ಹಣದಿಂದ ಸಂಗೀತ ವಿದ್ಯಾಲಯ ನಡೆಸುತ್ತಿದ್ದರು . ಒಮ್ಮೆ ಒಂದು ಸಣ್ಣ ಊರಿನಲ್ಲಿ ಕಛೇರಿ ಏರ್ಪಾಡಾಗಿತ್ತು . ಸಂಗೀತ ಕೇಳಲು ಟಿಕೆಟ್ ಪಡೆದು ಬಂದಿದ್ದವರು ಕೇವಲ ಒಬ್ಬರು. ಆದರೂ ವಿಷ್ಣು ದಿಗಂಬರರು ಮೂರು ಗಂಟೆಗಳ ಕಾಲ ಆತನ ಮುಂದೆ ಹಾಡಿದರು. ಕೊನೆಯಲ್ಲಿ ಆತ ಪಂಡಿತರ ಬಳಿ ಬಂದು "ನಾಲ್ಕಾಣೆಗಾಗಿ ಇಷ್ಟೊಂದು ಹಾಡಿದ್ದಕ್ಕೆ ಧನ್ಯವಾದ ಅರ್ಪಿಸಿದ . "ನಾನು ನಾಲ್ಕಾಣೆಗಾಗಿ ಹಾಡಲಿಲ್ಲ, ನನ್ನ ಭಗವಂತನಿಗಾಗಿ ಹಾಡಿದೆ. ನನ್ನ ಆನಂದಕ್ಕಾಗಿ ಹಾಡಿದೆ . ನೀವು ಕೇಳಿಸಿಕೊಂಡಿರಿ ,ನಿಮಗೆ ಧನ್ಯವಾದಗಳು ಎಂದರು.

ಮತ್ತೊಬ್ಬ ಮಾಹಾನುಭಾವರು ಮನೆ ಮಾತಾಗಿರುವ ಕನ್ನಡ ನಾಟಕ ರಂಗದ ರೂವಾರಿ , ಅನೇಕ ವಿಕ್ರಮಗಳನ್ನು ಸ್ಥಾಪಿಸಿರುವ ,ಇವರ ನಾಟಕಗಳು ಸಾವಿರಾರು ಪ್ರದರ್ಶನಗಳನ್ನು ಕಂಡಿರುವ , ಮಾಸ್ಟರ್ ಹಿರಣ್ಣಯ್ಯ . ಇವರ ಮಾತುಗಳನ್ನು ಕೇಳುವುದೇ ಒಂದು ಆನಂದದಾಯಕ ಅನುಭವ. ವೇದಿಕೆಯ ಮೇಲಿರಲಿ ಅಥವಾ ಗೆಳೆಯರ ಮಧ್ಯದಲ್ಲಿರಲಿ ,ಅವರ ಮಾತುಗಳಲ್ಲಿ ನಗೆ ಬಾಂಬುಗಳು ಸಿಡಿಯುತ್ತಲೇ ಇರುತ್ತವೆ. ಬಹಳಷ್ಟು ಬಾರಿ ಅವರ ತಿಳಿನಗೆಯ ಹಿಂದೆ ಆಳವಾದ ವೇದಾನ್ತವೂ ,ಅಣಕವೂ ಅಡಗಿರುತ್ತದೆ.

೧೯೫೯ ರಲ್ಲಿ ಹೊಸದುರ್ಗದಲ್ಲಿ ಅವರ ನಾಟಕದ ಕ್ಯಾಂಪ್ ಪ್ರಾರಂಭ ವಾಯಿತಂತೆ. ದೊಡ್ಡ ಸಭಾಂಗಣದಲ್ಲಿ ಸಾವಿರಕ್ಕೂ ಹೆಚ್ಚು ಜನ ಕುಳಿತು ನಾಟಕ ನೋಡುವ ವ್ಯವಸ್ಥೆಯಿತ್ತು . ನಾಟಕ ತಂಡದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಕಲಾವಿದರಿದ್ದರು. ಅಂದು ಸಂತೆಯ ದಿನವಾದ್ದರಿಂದ ಭಾರಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು ಏನು ಕಾರಣವೋ ಗೊತ್ತಿಲ್ಲ. ಟಿಕೇಟು ಖರೀದಿಸಿ ನಾಟಕ ನೋಡಲು ಬಂದವರು ಕೇವಲ ಆರು ಜನ. ಕಲಾವಿದರಿಗೆಲ್ಲ ನಿರಾಶೆಯಾಯಿತು. ಬಂದ ಆರೂ ಜನರಿಗೆ ಹಣ ಹಿಂತಿರುಗಿಸಿ ಪ್ರದರ್ಶನವನ್ನು ರದ್ದು ಮಾಡೋಣವೆಂಬ ಸಲಹೆಯನ್ನು ಮಾಸ್ಟರ್ ಹಿರಣ್ಣಯ್ಯ ನವರು ಒಪ್ಪಲಿಲ್ಲ . ಎಲ್ಲ ಕಲಾವಿದರನ್ನು ಕರೆದು " ನಾಟಕವನ್ನು ಸಂಪೂರ್ಣವಾಗಿ ಆಡೋಣ. ಯಾರೂ ಸಂಭಾಷಣೆಗಳನ್ನು , ಸನ್ನಿವೇಷಗಳನ್ನು ಕಡಿತಗೊಳಿಸಬಾರದು. ನಾಟಕ ನೋಡಲು ಬಂದಿರುವವರು ನಮ್ಮ ಅನ್ನದಾತರು. ಅವರು ಮೆಚ್ಚಿ ಅಹುದಹುದು ಎನ್ನುವಂತೆ ನಾಟಕ ಅಭಿನಯಿಸೋಣ " ಎಂದು ಹೇಳಿದರು. ಕಲಾವಿದರೆಲ್ಲ ಮಾಸ್ಟರ್ ಹಿರಣ್ಣಯ್ಯ ರವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿದರು. ನಾಟಕ ಎಂದಿಗಿಂತ ಹದಿನೈದು ನಿಮಿಸ ಹೆಚ್ಚಾಗಿಯೇ ನಡೆಯಿತು. ಹಿರಣ್ಣಯ್ಯ ರವರೆ ಹೇಳುವಂತೆ ಅಂದು ತುಂಬು ಮನಸ್ಸಿನಿಂದ ಕಲಾವಿದರು ಪಟ್ಟ ಆನಂದ ಪ್ರೇಕ್ಷಕರು ಪಟ್ಟ ಆನಂದಕ್ಕಿಂತ ಹೆಚ್ಚಾಗಿತ್ತು.

ಎರಡು ಜನರ ಅನುಭವದ ಘಟನೆ ಗಳ ಜತೆ ಗೆ ನನ್ನ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಅಂದು ನಾವು ಯಾವುದೋ ಒಂದು ವ್ಯಕ್ತಿ ವಿಕಾಸನ ತರಬೇತಿ ಯಾ ಜತೆಗೆ ನೇರ ಮಾರುಕಟ್ಟೆ ಬಗ್ಗೆ ಕಾರ್ಯಕ್ರಮ ಏರ್ಪಡಿಸಿದ್ದೆವು. ಕಾರ್ಯಕ್ರಮಕ್ಕಾಗಿ ಸಾವಿರಾರು ಬಿತ್ತಿ ಪತ್ರಗಳನ್ನು ಹಂಚಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಗೆ ಹೋಗುವ ಮಾರ್ಗದಲ್ಲಿ ಹೊಸರೋಡ್ ಎಂಬ ಊರಿದೆ . ಅಲ್ಲಿ ಒಂದು ಸ್ಕೂಲ್ ನಲ್ಲಿ . ಸುಮಾರು ನೂರು ಜನಕ್ಕೆ ಕೂರುವ ವ್ಯವಸ್ಥೆ ಮಾಡಿದ್ದೆವು. ಕಾರ್ಯಕ್ರಮಕ್ಕೆ ಬಂದವರು ಕೇವಲ ಎಂಟು ಜನ. ನನ್ನ ಜತೆಗಿದ್ದವರು ಹದಿನೈದು ಜನ ಸಹಾಯಕರು. ಅವರು ಬಂದವರನ್ನು ವಾಪಾಸು ಕಳುಹಿಸಿ ಮನೆಗೆ ಹೋಗೋಣ ಎಂದರು. ಆದರೆ ನಾನು ಅವರ ಮಾತುಗಳನ್ನು ಕೇಳಲಿಲ್ಲ . ಕಾರ್ಯಕ್ರಮ ಪ್ರಾರಂಭಿಸಿಯೇ ಬಿಟ್ಟೆ. ಅವರವರ ಭಾಗಗಳನ್ನು ಅವರವರು ಬಂದು ಮಾತನಾಡಲೇ ಬೇಕೆಂದು ಮನವೊಲಿಸಿದೆ. ಅವರು ಸಹಕರಿಸಿದರು. ಅವತ್ತಿನ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು. ಕಾರ್ಯಕ್ರಮ ನೋಡಲು ಬಂದವರು ರೀತಿ ಕಾರ್ಯ ಕ್ರಮ ಎಂದು ನಮಗೆ ಮೊದಲೇ ಗೊತ್ತಿದ್ದರೆ ನಮ್ಮ ಮನೆಯವರು ಹಾಗು ಸ್ನೇಹಿತರನ್ನು ಕರೆದುಕೊಂಡು ಬರುತ್ತಿದ್ದೆವು ಎಂದರು. ಅಂದು ನಾವು ಅವರ ತಲೆಯಲ್ಲಿರುವ , ಕಾಡುತ್ತಿರುವ ಚಿಂತೆಗಳನ್ನು ಹೇಗೆ ತೆಗೆದು ಹಾಕಬಹುದು , ಹೇಗೆ ಶ್ರೀಮಂತ ರಾಗಬಹುದು ಎಂಬ ಬಗ್ಗೆ ಚೆನ್ನಾಗಿಯೇ ತಿಳಿಯುವಂತೆ ಹೇಳಿದೆವು. ನಮ್ಮ ಮಾತುಗಳು ಎಷ್ಟು ಪ್ರಭಾವ ಬೀರಿತ್ತೆಂದರೆ ಶಾಲೆಯ ಪ್ರಿನ್ಚಿಪಾಲ್ ನಿಮ್ಮ ಯಾವುದೇ ಕಾರ್ಯ ಕ್ರಮಕ್ಕೆ ನಾವು ತುಂಬು ಹೃದಯದಿಂದ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು. ನನ್ನ ಜತೆಗಿದ್ದ ನನ್ನ ಸ್ನೇಹಿತರು ಬಹಳ ಸಂತೋಷ ಪಟ್ಟರು.

ಅಂದು ಎಲ್ಲಾದರು ಹಾಗೆಯೇ ನಿರಾಶೆಯಿಂದ ಬಂದಿದ್ದರೆ ಇಂದು ನಿಮ್ಮ ಮುಂದೆ ಇಷ್ಟೊಂದು ಸಲಿಗೆಯಿಂದ, ಪ್ರೀತಿಯಿಂದ, ಆತ್ಮಿಯತೆಯಿಂದ ಅನುಭವವನ್ನು ಹಂಚಿಕೊಳ್ಳಲು ಆಗುತ್ತಿರಲಿಲ್ಲವೇನೋ ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ

.ಟಿ.ನಾಗರಾಜ
ದಬ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-೯೬೩೨೧೭೨೪೮೬








ಗುರುವಾರ, ಜುಲೈ 15, 2010

ನಾನು ನಿಮ್ಮನ್ನೇನು ಕೇಳಲಿಲ್ಲ. ಇಡೀ ಪ್ರಪಂಚವನ್ನು ಪೋಷಿಸುವ ಪರಮಾತ್ಮ ನನಗೂ ಊಟ ಕೊದುತ್ತಾನೆಂಬ ನಂಬಿಕೆ ನನಗಿದೆ

ಪ್ರಪಂಚದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗ್ಗಿನ ವಂದನೆಗಳು.

ಸ್ವಾಮಿ ವಿವೇಕಾನಂದರು ಇನ್ನೂ ಪ್ರಖ್ಯಾತರಾಗಿರಲಿಲ್ಲ. ಭಾರತದಲ್ಲೆಲ್ಲ ಸಂಚರಿಸುತ್ತಿದ್ದರು. ಒಮ್ಮೆ ರೈಲಿನಲ್ಲಿ ಪ್ರಯಾಣಮಾಡುತ್ತಿದ್ದರು .ಮದ್ಯಾಹ್ನದ ಸಮಯ ಹೊಟ್ಟೆ ಹಸಿಯುತ್ತಿತ್ತು . ಊಟಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಆದರೆ ಅದರ ಬಗ್ಗೆಅವರಿಗೆ ಚಿಂತೆಯೂ ಇರಲಿಲ್ಲ. ಅಷ್ಟರಲ್ಲಿ ಸಹಪ್ರಯಾಣಿಕ ಶ್ರೀಮಂತನೊಬ್ಬ ದೊಡ್ಡ ಬುಟ್ಟಿಯಿಂದ ಪೂರಿ -ಪಲ್ಯ , ಬಜ್ಜಿಮುಂತಾದವುಗಳನ್ನು ತೆಗೆದು ತಿನ್ನತೊಡಗಿದ. ಆಹಾರದ ಪರಿಮಳ ರೈಲಿನ ಭೋಗಿಯಲ್ಲೆಲ್ಲಾ ಹರಡಿತು. ಸ್ವಾಮೀಜಿಯವರುಅವನತ್ತ ನೋಡಿದರು. ಆತ ಸ್ವಾಮಿಜಿಯವರನ್ನುದ್ದೀಶಿಸಿ "ನೀವು ನಾನು ತಿನ್ನುವುದನ್ನೇ ನೋಡುತ್ತಿದ್ದೀರಿ, ಆದರೆ ನಾನು ನಿಮಗೆಒಂದಗುಳನ್ನೂ ನೀಡುವುದಿಲ್ಲ. ನೀವು ಕಾವಿಧಾರೀ ಸನ್ಯಾಸಿಗಳು, ಸಮಾಜಕ್ಕೊಂದು ಹೊರೆ "ಎಂದರು. ಸ್ವಾಮೀಜಿಯವರುಮುಗುಳ್ನಕ್ಕು " ನಾನು ನಿಮ್ಮನ್ನೇನೂ ಕೇಳಲಿಲ್ಲ. ಇಡೀ ಪ್ರಪಂಚವನ್ನು ಪೋಷಿಸುವ ಪರಮಾತ್ಮ ನನಗೂ ಊಟ ಕೊಡುತ್ತಾನೆಂಬನಂಬಿಕೆ ನನಗಿದೆ. ನಿಮ್ಮ ಪಾಡಿಗೆ ನೀವು ನಿಸ್ಸಂ ಕೋಚವಾಗಿ ತಿನ್ನಿ, ನೀವು ತಿಂದರೆ ನನಗೆ ನಾನೇ ತಿಂದಷ್ಟು ಸಮಾಧಾನಎಂದರು.

ಅಷ್ಟರಲ್ಲಿ ರೈಲು ಒಂದು ಸ್ಟೇಷನ್ನಲ್ಲಿ ನಿಂತಿತು. ಪ್ಲಾಟ್ ಫಾರ್ಮ್ ನಲ್ಲಿ ಒಬ್ಬಾತ ಎರಡೂ ಕೈಯಲ್ಲಿ ಬುತ್ತಿಗಳನ್ನು ಹಿಡಿದು ಓಡುತ್ತಿದ್ದಯಾರನ್ನೋ ಹುಡುಕುತ್ತಿದ್ದಂತೆ ಕಂಡಿತು. ಆತ ಸ್ವಾಮೀಜಿಯವರನ್ನು ಕಂಡೊಡನೆ ಅವರ ಭೋಗಿಯೊಳಕ್ಕೆ ನುಗ್ಗಿದ. ಬುಟ್ಟಿಗಳನ್ನುಸ್ವಾಮೀಜಿಯವರ ಮುಂದಿಟ್ಟ ಅವರಿಗೆ ನಮಸ್ಕರಿಸಿ " ಮಹಾತ್ಮರೇ ! ತಾವು ದಯವಿಟ್ಟು ನಾನು ತಂದಿರುವ ಆಹಾರವನ್ನುಸ್ವೀಕರಿಸಬೇಕು . ನನ್ನನ್ನು ಆಶೀರ್ವದಿಸಬೇಕು " ಎಂದ. ಸ್ವಾಮೀಜಿಯವರು ಆಶ್ಚರ್ಯಚಕಿತರಾಗಿ "ಅಣ್ಣಾ ! ನೀವ್ಯಾರೋ ನನಗೆಗೊತ್ತಿಲ್ಲ. ನಾನ್ಯಾರೋ ನಿಮಗೂ ಗೊತ್ತಿಲ್ಲ. ಬಹುಶ: ನೀವು ಇದನ್ನು ಬೇರೆಯಾರಿಗೋ ತಂದಿರಬೇಕು !"ಎಂದರು. ಆತ "ಸ್ವಾಮೀಜಿಇಂದು ನಾನೊಂದು ವಿಚಿತ್ರ ಕನಸು ಕಂಡೆ, ನನ್ನ ಆರಾಧ್ಯ ದೈವ ಈಶ್ವರ ಕನಸ್ಸಿನಲ್ಲಿ ಕಾಣಿಸಿಕೊಂಡು , ಒಳ್ಳೆಯ ಭೋಜನವನ್ನುರೈಲ್ವೆ ಸ್ಟೇಷನ್ ನಲ್ಲಿ ತೆಗೆದುಕೊಂಡು ಹೋಗಬೇಕೆಂದೂ, ರೈಲಿನಲ್ಲಿ ಬರುವ ಒಬ್ಬ ಸಾಧುವಿಗೆ ಅದನ್ನು ಅರ್ಪಿಸಬೇಕೆಂದೂಹೇಳಿದಂತಾಯಿತು . ನಾನು ಏನೂ ಕನಸು ಎಂದು ಮಲಗಿಬಿಟ್ಟೆ, ಆದರೆ ಮತ್ತೆ ಕನಸಿನಲ್ಲಿ ಈಶ್ವರ ಕಾಣಿಸಿಕೊಂಡು ಮತ್ತದೇಸೂಚನೆಯನ್ನು ನನಗೆ ನೀಡಿದ , ಊರಿನಲ್ಲಿ ನನ್ನದೊಂದು ಮಿಟಾಯಿ ಅಂಗಡಿಯಿದೆ , ನನ್ನ ಮನೆಯಿಂದ ತಂದ ಭೋಜನಮತ್ತು ನನ್ನ ಅಂಗಡಿಯಿಂದ ತಂದ ಸಿಹಿ ತಿಂಡಿಗಳು ಇಲ್ಲಿವೆ, ಈಶ್ವರ ಬಂದು ನನಗೆ ಕನಸಿನಲ್ಲಿ ಹೇಳಿದ ಸಾಧು ನೀವೇ ಎಂದು ನನಗೆಖಚಿತವಾಗಿದೆ, ದಯವಿಟ್ಟು ಸ್ವೀಕರಿಸಿ, ನನ್ನನು ಆಶೀರ್ವದಿಸಬೇಕು !" ಎಂದು ಬೇಡಿದರು. ಎಲ್ಲ ಈಶ್ವರನ ಲೀಲೆ ಎಂದುಕೊಂಡುಸ್ವಾಮಿಜೀ ಊಟಕ್ಕೆ ಕುಳಿತರು. ಇದೆಲ್ಲವನ್ನು ಅವರ ಸಹಪ್ರಯಾಣಿಕ ಶ್ರೀಮಂತ ತೆರೆದ ಕಣ್ಣು ಬಾಯಿಯಿಂದ ನೋಡುತ್ತಿದ್ದ . ಸ್ವಾಮೀಜಿ ಆತನಿಗೆ "ಭಯ್ಯಾ! ತಾವು ಕೇವಲ ಪೂರಿ -ಪಲ್ಯದ ಊಟ ಮಾಡಿದಿರಿ . ನನ್ನ ಅನಿಮಿತ್ತ ಬಂಧು ಸಿಹಿತಿಂಡಿಗಳನ್ನುತಂದಿದ್ದಾರೆ. ದಯವಿಟ್ಟು ಸಿಹಿ ತಿಂಡಿಗಳನ್ನು ನನ್ನೊಂದಿಗೆ ಸ್ವೀಕರಿಸಿ " ಎಂದು ಆಹ್ವಾನಿಸಿದರು. ಸ್ವಾಮೀಜಿಯವರ ಪ್ರೀತಿಯಮಾತುಗಳನ್ನು ಕೇಳಿ ಶ್ರೀಮಂತನಿಗೆ ಏನು ಹೇಳಬೇಕೋ ತೋಚಲಿಲ್ಲ , ಕಣ್ಣೀರುಗರೆಯುತ್ತ ಸ್ವಾಮೀಜಿಯವರ ಪಾದಗಳಿಗೆನಮಸ್ಕರಿಸಿದ .

ಹುಟ್ಟಿದ ದೇವರು ಹುಲ್ಲು ಮೆಯಿಸುವುದಿಲ್ಲವೇ.?
ಅವರವ ಯೋಗ್ಯತೆ ಅವರವರಿಗೆ ಗೊತ್ತೇ ಹೊರತು ಇತರರಿಗೆ ಏನು ಗೊತ್ತು
ಕೋಪಿಸಿ ಕೊಂಡವರನ್ನು ಪ್ರೀತಿಸುವುದು ಸ್ವಾಮೀಜಿಯವರ ಪರಿವರ್ತನೆಯ ಒಂದು ಪರಿ.
ಇದೆ ಕತೆಯ ನೀತಿ ನನ್ನ ದೃಷ್ಟಿಯಲ್ಲಿ . ನಿಮ್ಮ ದೃಷ್ಟಿಯಲ್ಲಿ ನನಗೆ ಬರೆಯಿರಿ.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ

.ಟಿ.ನಾಗರಾಜ
ದಬ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-೯೬೩೨೧೭೨೪೮೬

















"