MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಜನವರಿ 24, 2011

'ಶಿವನ' ಸಾಧುಗಳೊಡನೆ ಮಾಂತ್ರಿಕ ಸಮಾಗಮ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಕೆಲವು ತಾಸುಗಳ ಕಾಲ ಹುಲ್ಲು ಹಾಸಿನ ಕಾಲುದಾರಿಗಳಲ್ಲಿ ನಡೆದು ನಾವಿಬ್ಬರೂ ಒಂದು ಹಚ್ಹ ಹಸಿರು ತುಂಬಿದ ವಿಶಾಲ ಕಣಿವೆಗೆ ಕಾಲಿಟ್ಟೆವು. ಅದರ ಒಂದು ಬದಿಯಲ್ಲಿ ಹಿಮಾಚ್ಛಾದಿತ ಉನ್ನತ ಶಿಖರಗಳಿದ್ದರೆ ಇನ್ನೊಂದು ಬದಿಯಲ್ಲಿ ದೇವದಾರು ವೃಕ್ಷಗಳ ದಟ್ಟ ಅರಣ್ಯ ಬೆಳೆದಿತ್ತು. ಇವೆರಡೂ ಸೇರಿ ಅಲ್ಲಿ ಒಂದು ಅದ್ಬುತರಮ್ಯಲೋಕ ಸೃಷ್ಟಿಯಾಗಿತ್ತು.

ಸಾಧು ನನ್ನ ಕಡೆ ನೋಡಿ "ಶಿವನ ನಿರ್ವಾಣಕ್ಕೆ ಸುಸ್ವಾಗತ" ಎಂದು ಮುಗುಳ್ನಗುತ್ತಾ ಹೇಳಿದ.

ಇಬ್ಬರೂ ಅರಣ್ಯದೊಳಗಿನ ಅಸ್ವಷ್ಟ ಕಾಲುದಾರಿಯಲ್ಲಿ ನಡೆದೆವು. ಗಂಧ, ಚಂದನ ವೃಕ್ಷಗಳ ಪರಿಮಳ ಹೊತ್ತ ಮಂದಾನಿಲ ತಂಪಾಗಿ ಬೀಸುತ್ತಿತ್ತು. ಬೂಟಿನಲ್ಲಿ ಬಿಗಿದಿದ್ದ ಕಾಲ್ಬೆರಳುಗಳನ್ನು ಸಡಿಲಿಸಲು ನಾನು ಬರಿಗಾಲಿನಲ್ಲಿ ನಡೆಯುತ್ತಿದ್ದೆ. ನೆಲದಲ್ಲಿ ಬೆಳೆದಿದ್ದ ಹಾವಸೆಗಳನ್ನು ನನ್ನ ಪಾದಗಳು ಮುದ್ದಿಸುತ್ತಿದ್ದವು. ನಾನಾ ರೀತಿಯ ಗಿಡಮರ-ಬಳ್ಳಿಗಳು ಬಣ್ಣಬಣ್ಣದ ಹೂವುಗಳನ್ನು ಹೊತ್ತು ಲಾಸ್ಯವಾಡುತ್ತಿದ್ದವು. ಎಲ್ಲವೂ ಸೇರಿ ಒಂದು ಸುಂದರ, ಅನುಪಮ ಸ್ವರ್ಗವನ್ನೇ ಸೃಷ್ಟಿಸಿದನ್ತಿತ್ತು.

ದೂರದಲ್ಲಿ ಕಿವಿಗೆ ಹಿತವಾದ ಮ್ರದುಮಧುರ ದನಿಗಳು ಕೇಳಿಸುತ್ತಿದ್ದವು. ನಿಶಬ್ಧವಾಗಿ ಸಾಧುವನ್ನು ಹಿಂಬಾಲಿಸಿದೆ. ಇನ್ನು ಹದಿನೈದು ನಿಮಿಷ ನಡೆದ ನಂತರ ಒಂದು ಗೇಟನ್ನು ತಲಪಿದೆವು. ನಮ್ಮ ಮುಂದೆ ಕೇವಲ ಗುಲಾಬಿ ಹೂವುಗಳಿಂದಲೇ ನಿರ್ಮಿಸಲಾದನ್ತಿದ್ದ ಒಂದು ಹಳ್ಳಿಯಿತ್ತು. ಇದು ಸಾಕಷ್ಟು ಪ್ರವಾಸ ಮಾಡಿದ್ದ ನನಗೆ ಊಹಿಸಲಸಾಧ್ಯವಾದ ದೃಶ್ಯವಾಗಿತ್ತು. ನಡುವೆ ಒಂದು ಪುಟ್ಟ ದೇವಾಲಯ ಕಾಣಿಸುತ್ತಿತ್ತು. ಮೇಲ್ನೋಟಕ್ಕೆ ಅದು ನೇಪಾಳ , ಥೈಲ್ಯಾಂಡಿನಲ್ಲಿ ನಾನು ಹಿಂದೊಮ್ಮೆ ನೋಡಿದ್ದ ದೇವಾಲಯದನ್ತಿದ್ದರೂ , ನಿಜವಾಗಿ ಹಾಗಿರಲಿಲ್ಲ. ಈ ಗುಡಿಯಿಡೀ ನಾನ ವರ್ಣಗಳ ಹೂವುಗಳಿಂದಲೇ ನಿರ್ಮಿತವಾದನ್ತಿತ್ತು. ಸಮೀಪದ ಸುತ್ತುಮುತ್ತಲಲ್ಲಿ ನಾಲ್ಕಾರು ಗುಡಿಸಲುಗಳಿದ್ದವು. ಬಹುಶ; ಅವು ಅಲ್ಲಿದ್ದ ಸಾಧುಗಳ ಆಶ್ರಮಗಳಾಗಿರಬೇಕು. ಅವೂ ಗುಲಾಬಿಹೂವುಗಳಿಂದ ತುಂಬಿಕೊಂಡಿದ್ದವು. ಈ ಅಪೂರ್ವ ದೃಶ್ಯವನ್ನು ಕಂಡು ನಾನು ಮೂಕನಾದೆ.

ನನ್ನನ್ನು ಅಲ್ಲಿಗೆ ಕರೆತಂದಿದ್ದ ಸಾಧುವಿನ ಹೆಸರು ಯೋಗಿರಾಮನ್. ಅವ್ರು ಇಲ್ಲಿನ ಸಾದುಗಳಲ್ಲೇ ಅತ್ಯಂತ ಹಿರಿಯರು . ಹಾಗೂ ಸಾದು ಗುಂಪಿನ ಮುಖ್ಯಸ್ಥರು . ಈ ಸ್ವಪ್ನಸದ್ರುಷ ಹಳ್ಳಿಯಲ್ಲಿ ವಾಸಿಸುತ್ತಿರುವ ಎಲ್ಲರೂ , ಯೌವನ ಭರಿತರಾಗಿಯೂ, ತತ್ವನಿಷ್ಟ ಜೀವನ ನಡೆಸುತ್ತಿದ್ದ ಪ್ರಭುದ್ಧ ಮುನುಷ್ಯರಾಗಿಯೂ ಕಾಣುತ್ತಿದ್ದರು. ಆಗ ಅವರಲ್ಲಿ ಯಾರೂ ನನ್ನನ್ನು ಮಾತಾಡಿಸಲಿಲ್ಲ. ಆ ಸ್ಥಳದ ಅಗಾಧ ನೀರವತೆಯನ್ನು ಗೌರವಿಸಲೋ ಎಂಬಂತೆ ಎಲ್ಲರೂ ಮೌನವಾಗಿಯೇ ತಂತಮ್ಮ ಚಟುವಟಿಕೆಗಳಲ್ಲಿ ಮಗ್ನರಾಗಿದ್ದರು.

ಅಲ್ಲಿ ಸುಮಾರು ಹತ್ತು ಮಂದಿ ಸಾಧುಗಳಿದ್ದಿರಬಹುದು. ಅವರೆಲ್ಲರ ಉಡುಗೆಯೂ ಯೋಗಿರಾಮನ್ ಧರಿಸಿದ ಉಡುಗೆಯಂತಿತ್ತು. ನಾನು ಸಮೀಪಿಸಿದಾಗ ಮುಗುಳ್ನಗೆಯಿಂದ ಸ್ವಾಗತಿಸಿದರು. ನಮ್ಮ ಆಧುನಿಕ ಜಗತ್ತನ್ನು ಕಾಡುತ್ತಿರುವ ಪ್ರಕ್ಷುಬ್ಧತೆ , ಮಾನಸಿಕ ಒತ್ತಡ ಮತ್ತು ಉದ್ವಿಗ್ನತೆಗಳು ಈ ಪ್ರಶಾಂತ ಜಗತ್ತಿಗೆ ಕಾಲಿಡಲು ಹೆದರಿ ಓಡಿಹೊದಂತಿತ್ತು. ನನ್ನಂತಹ ಹೊಸಬನನ್ನು ಅವರು ನೋಡಿ ಅನೇಕ ಅನೇಕ ವರ್ಷಗಳಾಗಿದ್ದರೂ ಅವರ ಸ್ವಾಗತದಲ್ಲಿ ಅಪೂರ್ವ ಸಂಯಮವಿತ್ತು. ಮುಗುಳ್ನಗೆಯಿಂದ ತಲೆಬಾಗುವುದರಲ್ಲೇ ಅದು ವ್ಯಕ್ತವಾಗಿತ್ತು.

ಅಲ್ಲಿದ್ದ ಹೆಂಗಸರೂ ಲಕ್ಷಣವಾಗಿದ್ದರು. ಸುಂದರವಾದ ಸೀರೆಯನ್ನುಟ್ಟು , ಮುದುಗೆ ಕಮಲದ ಹೂವುಗಳನ್ನು ಮುಡಿದಿದ್ದ ಅವರು ಚುರುಕಾಗಿ ಓಡಾಡುತ್ತಿದ್ದರು. ಆದರೆ ಅವರ ಚಟುವಟಿಕೆಯನ್ನು ನಮ್ಮ ನಾಗರಿಕ ಸಮಾಜದ ಅತ್ಯಾಧುನಿಕ ಮಹಿಳೆಯರ ಚಟುವಟಿಕೆ ಯಂತೆ ಇರಲಿಲ್ಲ. ಅವರ ವರ್ತನೆಯಲ್ಲಿದ್ದ ಗಾಂಬೀರ್ಯವೇ ಭಿನ್ನವಾಗಿತ್ತು . ಝೆನ್ ಸಾಧಕರ ಏಕಾಗ್ರತೆಯಿಂದ ಅವರು ದೇವಾಲಯದ ಯಾವುದೋ ಉತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಂತೆ ಕಾಣಿಸುತ್ತಿತ್ತು. ಅವರಲ್ಲಿ ಕೆಲವರು ಕಟ್ಟಿಗೆ ತುಂಡುಗಳನ್ನೂ , ಬಟ್ಟೆಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು. ಎಲ್ಲರೂ ಒಂದು ಸೃಜನಶೀಲ ಚಟುವಟಿಕೆಯಲ್ಲಿ ಮಗ್ನರಾಗಿದ್ದರು. ಖುಷಿಯಾಗಿದ್ದರು.

ಕೊನೆಗೂ ಶಿವನ ಸಾಧುಗಳ ಮುಖಗಳು ಅವರ ವಿಶಿಷ್ಟ ಜೀವನ ವಿಧಾನ ಶಕ್ತಿಯನ್ನು ತೋರಿದವು. ಅವರೆಲ್ಲ ಪ್ರೌಢ ವಯಸ್ಕರಾಗಿದ್ದರು . ಅವರ ಕಣ್ಣಿನಲ್ಲಿ ಮಗುವಿನ ಮುಗ್ಧತೆಯಿತ್ತು. ಶರೀರದಲ್ಲಿ ತಾರುಣ್ಯದ ಲಾವಣ್ಯವಿತ್ತು. ಯಾರಮುಖದಲ್ಲೂ ಸುಕ್ಕುಗಳಿಲ್ಲ. ಯಾರ ತಲೆಯಲ್ಲೂ ಬಿಳಿಕೂದಲಿಲ್ಲ. ಯಾರೂ ವೃದ್ಧರಂತೆ ಕಾಣುತ್ತಿರಲಿಲ್ಲ.

ಇದನ್ನೆಲ್ಲ ನೋಡುತ್ತ ಅಚ್ಚರಿ ಪಡುತ್ತಿರುವಾಗಲೇ ನನಗೆ ತಾಜಾ ಹಣ್ಣು , ತರಕಾರಿಗಳ ಆಹಾರವನ್ನು ನೀಡಿದರು. ಈ ಆಹಾರವೇ ಸಾಧುಗಳ ದೀರ್ಘ ಆಯುಷ್ಯ . ಆರೋಗ್ಯದ ಗುಟ್ಟು ಎನ್ನುವ ಸತ್ಯ ನನಗೆ ಕಾಲಕ್ರಮೇಣ ಅರಿವಾಯಿತು. ಭೋಜನದ ನಂತರ ಯೋಗಿರಾಮನ್ ನನ್ನನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದರು. ಅದೊಂದು ಹೂ ಮುಡಿದಿಟ್ಟ ಪುಟ್ಟ ಗುಡಿಸಲು . ಅಲ್ಲಿದ್ದುದು ಒಂದು ಸಣ್ಣ ಹಾಸಿಗೆ ಹಾಗೂ ಬರೆಯುವ ಪ್ಯಾಡ್ , ಇದೆ ಅವರ ಬಹುಕಾಲದ ನಿವಾಸ.

ಇಂಥ ಅನೂಹ್ಯ ಲೋಕವನ್ನು ನಾನು ಹಿಂದೆಂದೂ ನೋಡಿರಲಿಲ್ಲವಾದರೂ , ಇಲ್ಲಿಗೆ ಬಂದ ಮೇಲೆ , ಸ್ವರ್ಗದಂತಿರುವ ನನ್ನದೇ ಮನೆಗೆ ಬಹುಕಾಲದ ನಂತರ ಹಿಂತಿರುಗಿದಂತಹ ಭಾವನೆ ಮೂಡಿತು. ಈ ಗುಲಾಬಿ ಹೂಗಳು ತುಂಬಿದ ಹಳ್ಳಿ ಅದೇಕೋ ಅಜ್ನಾತವೆನಿಸಲಿಲ್ಲ. ಅಲ್ಪಕಾಲಕ್ಕೆ ಆಗಲಿ ನಾನು ಇಲ್ಲಿಗೆ ಸೇರಿದವನು ಎಂದು ನನ್ನ ಅಂತರಾತ್ಮ ಹೇಳಿತು. ವೃತ್ತಿ ನಾಶಮಾಡಿದ ನನ್ನ ಜೀವನ ಸ್ಪೂರ್ತಿಯನ್ನು ಪುನ; ಪಡೆದುಕೊಳ್ಳಲು, ಅದರ ಅಘಾತದಿಂದಾದ ಗಾಯವನ್ನು ವಾಸಿಮಾದಿಕೊಳ್ಳಲು ಇದೇ ಸೂಕ್ತವಾದ ತಾಣವೆಂದು ಮನದಟ್ಟಾಯಿತು. ಈ ರೀತಿ ಶಿವನ ಸಾಧುಗಳ ಸಾನ್ನಿಧ್ಯದಲ್ಲಿ ಸರಳತೆ, ಗಾಂಭೀರ್ಯ , ಸಾಮರಸ್ಯ ತುಂಬಿದ ಹೊಸಬದುಕು ಆರಂಭವಾಯಿತು. ಮುಂದಿನ ಉನ್ನತ ಹಂತಕ್ಕೆರಲು ಸೋಪಾನವಾಯಿತು.

ನಿಮಗಾಗಿ ನಮ್ಮ ಅವಕಾಸಕ್ಕಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.
http://sunnaturalflash.buildingonabudget.com/letter.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ
http://www.sunnaturalflash.com/
....................................................................................................................................
ನಿಮಗೆ ನನ್ನ ಜತೆ ನೇರವಾಗಿ ಮಾತನಾಡಬೇಕೆಂದು ಅನಿಸಿದರೆ, ನಿಮ್ಮ ಅನುಭವಗಳನ್ನು ,ಅನಿಸಿಕೆಗಳನ್ನು ನೇರವಾಗಿ ನನ್ನ ಜತೆಗೆ ಹಂಚಿ ಕೊಳ್ಳಬೇಕೆನಿಸಿದರೆ ನಿಮ್ಮ ಹೆಸರು, ನಿಮ್ಮ ಈ ಮೇಲ್ ವಿಳಾಸ, ನಿಮ್ಮ ಮೊಬೇಲ್ ದೂರವಾಣಿ ಸಂಖ್ಯೆ ಜತೆಗೆ ನೀವು ಕರೆಯನ್ನು ಸ್ವೀಕರಿಸುವ ಸಮಯ ಬರೆದು ಕೆಳಗಿನ ಈ ಮೇಲ್ ವಿಳಾಸಕ್ಕೆ ಕಳುಹಿಸಿ . ನಾನು ನಿಮ್ಮ ಕೋರಿಕೆಯ ಇಪ್ಪತ್ತು ನಾಲ್ಕು ಗಂಟೆಯ ಯಿಂದ ನಲವತ್ತೆಂಟು ಗಂಟೆಯ ಒಳಗೆ ನಿಮ್ಮೊಂದಿಗೆ ಸಂಭಾಷಣೆಯಲ್ಲಿ ಇರುತ್ತೇನೆ.sunnaturalflash@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ