MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಸೆಪ್ಟೆಂಬರ್ 12, 2010

ಯಾವುದೇ ಕಾರ್ಯವನ್ನು ಅಸಾಧ್ಯವೆಂದು ಕಾರ್ಯಾರಂಭ ಮಾಡದೆ ಸಾಧ್ಯ ಎಂದುಕೊಂಡು ಕಾರ್ಯಾರಂಭ ಮಾಡಿದರೆ ನಾವೂ ಯಶಸ್ವಿಯಾಗಬಹುದು !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ನವೆಂಬರ್ ಒಂದರಂದು ನಮಗೆಲ್ಲ ಕನ್ನಡ ರಾಜ್ಯೋತ್ಸವದ ಸಂಭ್ರಮ . ಏಕೆಂದರೆ ಅಂದು "ಉದಯವಾಯಿತು ನಮ್ಮ ಚೆಲುವ ಕನ್ನಡನಾಡು ". ಬಹುದೂರದ ಅಮೆರಿಕದಲ್ಲಿನ ಮಿಚಿಗನ್ ರಾಜ್ಯದ ಜನರಿಗೂ ಅಂದು ಸಂಭ್ರಮ . ಆದರೆ ಕಾರಣ ಮಾತ್ರ ಬೇರೆ !. ಅವರ ರಾಜ್ಯದ ಎರಡು ಪ್ರಮುಖ ನಗರಗಳಾದ "ಮೆಕಿನಾ ಸಿಟಿ " ಮತ್ತು "ಸೇಂಟ್ ಇಗ್ನೇಸ್ "ಗಳನ್ನೂ ಜೋಡಿಸುವ ಐದು ಮೈಲಿ ಉದ್ದದ ತೂಗುಸೇತುವೆ ಒಂದುಸಾವಿರದ ಒಂಬತ್ತು ನೂರ ಐವತ್ತೆರಡು ನವೆಂಬರ್ ಒಂದರಂದು ಜನರ ಉಪಯೋಗಕ್ಕೆ ಸಂಭ್ರಮ ಸಡಗರಗಳಿಂದ ತೆರೆಯಲ್ಪಟ್ಟಿತು ! ಸಂಭ್ರಮಕ್ಕೆ ಕಾರಣ ನೋಡೋಣ !.

ಎರಡು ನಗರಗಳ ಮಧ್ಯೆ ಒಂದು ಆಳವಾದ , ಐದು ಮೈಲಿ ಅಗಲದ ಸರೋವರವಿದೆ , ಜನಗಳ ,ವಾಹನಗಳ ಮತ್ತು ಸಾಮಾನು ಸರಂಜಾಮುಗಳ ಸಾಗಾಣೆ ದೊಡ್ಡ ಗಾತ್ರದ ದೋಣಿಗಳ ಮೂಲಕವೇ ನಡೆಯುತ್ತಿತ್ತು. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಚಳಿಗಾಲದಲ್ಲಿ ಸರೋವರದ ನೀರು ಮಂಜು -ಗಟ್ಟಿದಾಗ ಸಂಪರ್ಕ ಕಡಿದೇ ಹೋಗುತ್ತಿತ್ತು. ಸೇತುವೆಯೊಂದರ ನಿರ್ಮಾಣ ಸಮಸ್ಯೆಗೆ ಪರಿಹಾರವೆಂದು ಇಲ್ಲರೂ ಹೇಳುತ್ತಿದ್ದರು. ನಿರ್ಮಾಣದ ಬಗ್ಗೆ ಹಲವಾರು ದಶಕಗಳ ಕಾಲ ಚರ್ಚಿಸಲಾಯಿತು . ಅನೇಕ ಸಮಿತಿಗಳ ನೇಮಕವಾಯಿತು. ಆದರೆ ಎಲ್ಲರೂ ಸಮಸ್ಯೆಗಳ ಪಟ್ಟಿಯನ್ನೇ ಮಾಡಿ ಸೇತುವೆ ನಿರ್ಮಾಣ ಅಸಾಧ್ಯವೆಂದೇ ತೋರಿಸುತ್ತಿದ್ದರು . ಎಂಬತ್ತು ವರ್ಷಗಳಾದರೂ ಸೇತುವೆ ನಿರ್ಮಾಣವಾಗಲಿಲ್ಲ. ಕೊನೆಗೆ ಒಂದು ಸಾವಿರದ ಒಂಮ್ಬತ್ತು ನೂರ ಐವತ್ತಾ ಮೂರರಲ್ಲಿ ಡೇವಿಡ್ ಸ್ಪೇನ್ ಮ್ಯಾನ್ ಎಂಬ ಇಂಜಿನಿಯರ್ ರನ್ನು ನೇಮಕ ಮಾಡಲಾಯಿತು. ಅತ ನಿರ್ಮಾಣ ಸಾಧ್ಯವೆಂಬ ಸಕಾರಾತ್ಮಕ ಚಿಂತನೆಯೊಂದಿಗೆ ಕಾರ್ಯಾರಂಭ ಮಾಡಿದ . ಸಮಸ್ಯೆಗಳನ್ನು ಒಂದೊಂದಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುತ್ತಾ ಹೋದ.

ಮೊದಲನೆಯ ಸಮಸ್ಯೆ; ಗಂಟೆಗೆ ಎಪ್ಪತ್ತು ಮೈಲಿಗಳಿಗೂ ಹೆಚ್ಚು ವೇಗದಲ್ಲಿ ಅಪ್ಪಳಿಸುತ್ತಿದ್ದ ಗಾಳಿ ನಿರ್ಮಾಣ ಕಾರ್ಯಕ್ಕೆ ತಡೆಯನ್ನು ಒಡ್ಡುತ್ತಿತ್ತು. ಆತ ದೀರ್ಘ ಸಂಶೋಧನೆಯ ನಂತರ ಗಂಟೆಗೆ ಒಂದು ನೂರ ಎಂಬತ್ತು ಮೈಲಿ ವೇಗದ ಗಾಳಿಯನ್ನು ತಡೆಯಬಲ್ಲ ಸೇತುವೆಯನ್ನು ವಿನ್ಯಾಸಗೊಳಿಸಿದ.

ಎರಡನೆಯ ಸಮಸ್ಯೆ; ಚಳಿಗಾಲದಲ್ಲಿ ನೀರು ಮಂಜುಗಟ್ಟುವುದರಿಂದ ಸೇತುವೆಯ ಸ್ಥಂಭಗಳು ದುರ್ಭಲವಾಗುತ್ತದೆಂದು ಹೇಳಲಾಗುತ್ತಿತ್ತು. ಆತ ಮೈನಸ್ ಇಪ್ಪತ್ತೈದು ಸೆಲ್ಷಿಯಸ್ ತಂಪನ್ನು ತಡೆಯುವಂತೆ ಸ್ಥಮ್ಭಗಳನ್ನು ವಿನ್ಯಾಸಗೊಳಿಸಿದ.

ಮೂರನೆಯ ಸಮಸ್ಯೆ; ಸೇತುವೆಯ ಭಾರವನ್ನು ಸರೋವರದ ಕೆಳಗಿನ ನೆಲ ತಡೆಯುವಷ್ಟು ಗಟ್ಟಿಯಿಲ್ಲವೆಂದು ಹೇಳಲಾಗುತ್ತಿತ್ತು . ಆತ ಅಡಿಪಾಯದ ಭಾರ ಒಂದೇ ಕಡೆ ಬೀಳದಂತೆ ಸೇತುವೆಯ ಉದ್ದಗಲಕ್ಕೂ ಹರಡುವಂತೆ ವಿನ್ಯಾಸಗೊಳಿಸಿದ.

ನಾಲ್ಕನೆಯ ಸಮಸ್ಯೆ; ಸೇತುವೆಯ ಕೆಳಗಿನಿಂದ ಬೀಸುವ ಗಾಳಿಯ ಒತ್ತಡ ಸೇತುವೆಯನು ಎತ್ತಿ ಒಗೆಯುತ್ತದೆಂದು ಭಾವಿಸಲಾಗುತ್ತಿತ್ತು. ಆತ ಸೇತುವೆಯ ಉದ್ದಕ್ಕೂ ರಂಧ್ರಗಳಿರುವಂತೆ ಆ ಮೂಲಕ ಗಾಳಿ ಹಾಯ್ದುಹೊಗುವಂತೆ ವಿನ್ಯಾಸಗೊಳಿಸಿದ. ವಿನೂತನ ವಿನ್ಯಾಸಗಳೊಂದಿಗೆ , ಸತತ ನಾಲ್ಕು ವರ್ಷಗಳ ಶ್ರಮದಿಂದ ಸೇತುವೆ ಯಶಸ್ವಿಯಾಗಿ ನಿರ್ಮಾಣಗೊಂಡಿತು . ಒಂದು ಸಾವಿರದ ಒಮ್ತತ್ತು ನೂರ ಐವತ್ತೆಳರ ನವೆಂಬರ್ ಒಂದರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು . ಇದೀಗ ಸೇತುವೆ ಐವತ್ತು ವರ್ಷಗಳ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ . ಗಾಳಿ ಈಗಲೂ ವೇಗವಾಗಿ ಬೀಸುತ್ತಿದೆ. ಸೇತುವೆಯ ಕೆಳಗಿನ ನೀರು ಮಂಜುಗಟ್ಟುತ್ತದೆ. ಆದರೂ ಸೇತುವೆ ಭದ್ರವಾಗಿ ನಿಂತಿದೆ. ಸ್ಪೇನ್ ಮ್ಯಾನ್ ನನ್ನು ಅಸಾಧ್ಯ ಸೇತುವೆ ಹೇಗೆ ಸಾಧ್ಯವಾಯಿತೆಂದು ಕೇಳಿದಾಗ ಆತ ನೀಡಿದ ಉತ್ತರ ."ಎಲ್ಲರೂ ಅಸಾಧ್ಯವೆಂದೇ ಸೇತುವೆಯ ನಿರ್ಮಾಣದ ಕಡೆ ಗಮನ ಹರಿಸುತ್ತಿದ್ದರು. ನಾನು ಮಾತ್ರ ಸಾಧ್ಯ ಎಂದುಕೊಂಡು ಸೇತುವೆಯ ನಿರ್ಮಾಣದ ಕಡೆ ಗಮನ ಹರಿಸಿದೆ. " ನಾವು ಕೂಡ ಯಾವುದೇ ಕಾರ್ಯವನ್ನು ಅಸಾಧ್ಯವೆಂದು ಕಾರ್ಯಾರಂಭ ಮಾಡದೆ ಸಾಧ್ಯ ಎಂದುಕೊಂಡು ಕಾರ್ಯಾರಂಭ ಮಾಡಿದರೆ ನಾವೂ ಯಶಸ್ವಿಯಾಗಬಹುದು !

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ .
http ;//www .sunnaturalflash .com /
sunnaturalflash @gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ