MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಸೆಪ್ಟೆಂಬರ್ 16, 2010

ನಾವೂ ಬದುಕಿನ ಸುಂಟರಗಾಳಿ ಯಲ್ಲಿ ಸುಖವಾಗಿ ನಿದ್ರಿಸಬಹುದು

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಒಬ್ಬ ಶ್ರೀಮಂತ ಜಮೀನುದಾರನ ತೋಟ -ಮನೆ ಎಲ್ಲವೂ ಸುಂಟರಗಾಳಿ ಪೀಡಿತ ಪ್ರದೇಶದ ಲ್ಲಿದ್ದವು .ಆಗಿಂದಾಗ್ಗೆ ಸುಂಟರಗಾಳಿ ಬಂದ್ದಪ್ಪಳಿಸಿ ತುಂಬಾ ತೊಂದರೆ ಕೊಟ್ಟು ಹೋಗುತ್ತಿತ್ತು. ಸದಾ ಅದರದ್ದೇ ಹೆದರಿಕೆ . ಹಾಗಾಗಿ ಕೂಲಿ ಕೆಲಸಗಾರರು ಬರುತ್ತಿರಲಿಲ್ಲ. ಬಂದವರೂ ಬಹಳ ದಿನ ಇರುತ್ತಿರಲಿಲ್ಲ. ಕೆಲಸಗಾರರದ್ದೇ ಸಮಸ್ಯೆ . ಒಮ್ಮೆ ಯುವಕನೊಬ್ಬ ಕೆಲಸಕ್ಕಾಗಿ ಬಂದ . ಆರೋಗ್ಯವಂತ, ದೃಢಕಾಯ ,ಹಸನುಮ್ಖಿಯಾಗಿದ್ದ , ಬುದ್ಧಿವಂತನಂತೆ ಕಂಡುಬಂದ, ಆದರೆ ದುಬಾರಿ ವೇತನ ನಿರೀಕ್ಷಿಸುತ್ತಿದ್ದ . ಜಮೀನುದಾರ "ಇಷ್ಟೊಂದು ವೇತನದ ಅರ್ಹತೆ ನಿನ್ನಲ್ಲೇನಿದೆ" ಎಂದು ಕೇಳಿದಾಗ ಆತ " ನಾನು ಸುಂಟರಗಾಳಿ ಯಲ್ಲೂ ಸುಖವಾಗಿ ನಿದ್ರಿಸಬಲ್ಲೆ " ಎಂದ . ಜಮೀನುದಾರನಿಗೆ ಇದನ್ನು ಕೇಳಿ ಕುತೂಹಲ ಉಂಟಾಯಿತು . ಆತ ಬಯಸಿದಷ್ಟೇ ವೇತನ ಕೊಟ್ಟು ಕೆಲಸಕ್ಕೆ ನೇಮಿಸಿಕೊಂಡ.

ಕೆಲಸ ಪ್ರಾರಂಭವಾಯಿತು . ಮುಂಜಾವಿನಿಂದ ಸಂಜೆಯವರೆಗೂ ಕೆಲಸ ಮಾಡುತ್ತಿದ್ದ. ಕೆಲಸದಲ್ಲಿ ಅಚ್ಚುಕಟ್ಟು , ನಿಪುಣತೆ, ಸ್ವಚ್ಚತೆಗಳಿರುತ್ತಿದ್ದವು. ನಿರೀಕ್ಷೆಗಿಂತ ಹೆಚ್ಚಿನ ಕೆಲಸವನ್ನು ನಗುಮುಖದಿಂದ ನಿರ್ವಹಿಸುತ್ತಿದ್ದ ಇದನ್ನು ಗಮನಿಸಿದ ಜಮೀನುದಾರನಿಗೆ ಹೆಚ್ಚಿನ ಸಂಬಳ ಕೊಡುತ್ತಿರುವುದು ಸಾರ್ಥಕವೆನಿಸಿತು.

ಕೆಲವು ದಿನಗಳ ನಂತರ ಒಂದು ರಾತ್ರಿ ಸುಂಟರಗಾಳಿ ಬೀಸಲು ಪ್ರಾರಂಭವಾಯಿತು. ಜಮೀನುದಾರ ಗಡಬಡಿಸಿ ಎದ್ದ. ಮನೆಯಿಂದ ಹೊರಗಡೆ ಕೆಲಸದವನನ್ನು ಎಬ್ಬಿಸಿ . "ಏಳಯ್ಯ ! ಸುಂಟರಗಾಳಿ ಬರುತ್ತಿದೆ. ಎಲ್ಲವನ್ನೂ ಭದ್ರಪಡಿಸಬೇಕು" ಎಂದು ಅವಸರಿಸಿದ . ಆದರೆ ಕೆಲಸದವನು ಹಾಸಿಗೆ ಬಿಟ್ಟೇಳಲಿಲ್ಲ. "ಚಿಂತಿಸಬೇಡಿ ಸ್ವಾಮೀ ! ನಾನು ಸುಂಟರಗಾಳಿ ಯಲ್ಲೂ ನಿದ್ರಿಸಬಲ್ಲೆನೆಂದು ನಾನು ನಿಮಗೆ ಮೊದಲೇ ಹೇಳಿದ್ದೇನೆ " ಎಂದು ಹೇಳಿ ಮಗ್ಗುಲು ಬದಲಿಸಿ ಮಲಗಿಬಿಟ್ಟ. ಜಮೀನುದಾರನಿಗೆ ಕೆಲಸಗಾರನನ್ನು ನಿಂತಲ್ಲೇ ಕೆಲಸದಿಂದ ಕಿತ್ತೊಗೆಯುವಷ್ಟು ಸಿಟ್ಟು ಬಂತು. ಆದರೂ ಸಾವರಿಸಿಕೊಂಡು ಹೊರಗೆ ಬಂದು ತೋಟದಲ್ಲೆಲ್ಲ ಓಡಾಡಿದ . ಹುಲ್ಲಿನ ಬಣವೆಯನ್ನು ಭದ್ರವಾಗಿ ಬಿಗಿಯಲಾಗಿತ್ತು. ದನಕರುಗಳನ್ನೆಲ್ಲ ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ಕೋಳಿಗಳನ್ನು ಗೂಡಿನಲ್ಲಿ ಭದ್ರಪದಿಸಲಾಗಿತ್ತು. ಎಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಲಾಗಿತ್ತು. ಸುಂಟರಗಾಳಿಗೆ ಸಿಕ್ಕಿ ಹಾರಿಹೊಗುವನ್ತದ್ದು ಏನೂ ಇರಲಿಲ್ಲ. ಜಮೀನುದಾರನಿಗೆ ಸಮಾಧಾನವಾಯಿತು . ಕೆಲಸಗಾರನ ಮುಂಜಾಗರೂಕತೆಯನ್ನು ಮೆಚ್ಚಿಕೊಂಡ . ಆಗ ಆತನಿಗೆ ಕೆಲಸಗಾರನ "ನಾನು ಸುಂಟರಗಾಳಿ ಯಲ್ಲೂ ನಿದ್ರಿಸಬಲ್ಲೆ " ಎಂಬ ಮಾತಿನ ಆರ್ಥವಾಯಿತು .

ನಾವೂ ಬದುಕಿನ ಸುಂಟರಗಾಳಿ ಯಲ್ಲಿ ಸುಖವಾಗಿ ನಿದ್ರಿಸಬಹುದು ಈ ಕೆಳಗಿನಂತೆ

ಯಾರಿಂದಾದರೂ ಉಪಕಾರ ಪಡೆದರೆ , ತಕ್ಷಣ ಧನ್ಯವಾದ ತಿಳಿಸಬೇಕು . ಹಾಗೆಯೇ ತಪ್ಪಾದರೆ ಕ್ಷಮೆ ಕೇಳಬೇಕು . ಯಾರಿಗಾದರೂ ಉಪಕಾರ ಮಾಡಿದ್ದರೆ ಸಾಧ್ಯವಾದಷ್ಟು ಬೇಗ ಮರೆತುಬಿಡಬೇಕು . ವಿಮಾ ಪಾಲಿಸಿಗಳನ್ನು ಚಾಲ್ತಿಯಲ್ಲಿಡಬೇಕು, ಕಂತುಗಳು ಬಾಕಿಯಿದ್ದರೆ ಇಂದೇ ಕಟ್ಟಬೇಕು. ಸಾಲವಿದ್ದರೆ ತೀರಿಸಲು ಪ್ರಯತ್ನಿಸಬೇಕು . ನಮ್ಮಿಂದ ಯಾರಾದರೂ ದೊಡ್ಡಮೊತ್ತದ ಸಾಲ ಪಡೆದಿದ್ದರೆ , ಸರಿ ಯಾದ ದಾಖಲೆಗಳಿದ್ದರೆ , ಮನೆಯವರಿಗೆ ತಿಳಿಸಿರಬೇಕು . ಮೊತ್ತ ಸಣ್ಣದಿದ್ದರೆ ಅದನ್ನು ಮರೆತುಬಿಡಬೇಕು . ಪ್ರಪಂಚ ನಮ್ಮ ಮೇಲೆ ಅವಲಂಬಿತವಾಗಿಲ್ಲವೆಮ್ಬುದು ಮತ್ತು ನಾವು ಪ್ರಪಂಚದಲ್ಲೊಂದು ಭಾಗವೆಂಬುದು ನೆನಪಿರಬೇಕು. ನಾವು ನಗುತ್ತಿದ್ದರೆ ನಮ್ಮೊಂದಿಗೆ ಎಲ್ಲರೂ ನಗುತ್ತಿರುತ್ತಾರೆಂದೂ , ನಾವು ಅಳುತ್ತಿದ್ದರೆ ನಾವೊಬ್ಬರೇ ಅಳಬೇಕೆಮ್ಬುದನ್ನು ಮರೆಯಬಾರದು.

ನಿಮಗಾಗಿ ಒಂದು ಅವಕಾಸ
http://sunnaturalflash.magneticsponsoringonline.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
http ;// www .sunnaturalflash .com /
sunnaturalflash @gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ