MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಸೆಪ್ಟೆಂಬರ್ 17, 2010

ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ದುಡಿಯಲು ಬಂದ ಯುವಕ ಯುವತಿಯರನ್ನು ಕಂಡಾಗ ನನಗೆ ಅಇನ್-ಸ್ಟೀನ್ ನೆನಪಿಗೆ ಬರುತ್ತಾರೆ

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.

ಐನ್ಹ್ ಸ್ಟೀನ್ ಬರ್ನ್ ನಗರಕ್ಕೆ ಬಂದಾಗ ಆತನಿಗೆ ನೊಬೆಲ್ ಬಂದಿರಲಿಲ್ಲ . ಆತನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಸಾಮಾನ್ಯ ಅಲೆಮಾರಿಯಂತೆ ಬಂದ ಮೊದಲ ದಿನ ಆತನಿಗೆ ಮಲಗಲೊಂದು ಕೋಣೆಯೂ ಇರಲಿಲ್ಲ. ಕಾರಣ ಆತನ ಜೇಬಿನಲ್ಲಿ ಹಣವಿರಲಿಲ್ಲ. ಈ ಸಂಗತಿಗಳು ಇಲ್ಲ ಎಂಬುದನ್ನು ಬಿಟ್ಟರೆ ಐನ್ಹ್ ಸ್ಟೀನ್ ಬಳಿ ಎಲ್ಲವೂ ಇತ್ತು . ಆತ ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರದಲ್ಲಿ ಪದವೀಧರನಾಗಿದ್ದ . ಎರಡೂ ವಿಷಯಗಳಲ್ಲಿ ರಯ್ನ್ಕ್ ಗಳಿಸಿದ್ದ . ಗಣಿತದ ಯಾವುದೇ ಸಮಸ್ಯೆ ಸೂತ್ರಗಳನ್ನು ಸರಳವಾಗಿ ಬಿಡಿಸುತ್ತಿದ್ದ . ಸಮಸ್ಯೆ ಬಿಡಿಸುವ ಬೇರೆ ಬೇರೆ ಸಾಧ್ಯತೆಗಳನ್ನು ಹುಡುಕುತ್ತಿದ್ದ. ಹೀಗಾಗಿ ಆತನ ಉತ್ತರ ಕೆಲವೊಮ್ಮೆ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿತ್ತು. ಭೌತಶಾಸ್ತ್ರ ವಂತೂ ಆತನಿಗೆ ಅಚ್ಚು ಮೆಚ್ಚು . ತನಗೆ ಗೊತ್ತಿರುವ ಈ ಎರಡು ವಿಷಯಗಳಲ್ಲಿ ಪಾಠ ಮಾಡಿಕೊಂಡಿದ್ದರೆ ಹೇಗೋ ಹೊಟ್ಟೆ ಹೊರೆದು -ಕೊಳ್ಳಬಹುದೆಂದು ಭಾವಿಸಿದ್ದ ಐನ್ಹ್ ಸ್ಟೀನ್. ಐನ್ಹ್ ಸ್ಟೀನ್ ಬರ್ನ್ ನಗರಕ್ಕೆ ಬಂದರೆ ಯಾರೂ ಕಣ್ಣೆತ್ತಿ ನೋಡಲಿಲ್ಲ. ಅಲ್ಲಿನ ಕಾಲೇಜುಗಳಿಗೆ ಹೋಗಿ ಉಪನ್ಯಾಸ ಕೆಲಸ ಕೊಡುವಂತೆ ಅಂಗಲಾಚಿದ. ಕೆಲಸ ಕೊಡುವುದಿರಲಿ ಯಾರೂ ಅನುಕಂಪವನ್ನು ತೋರಲಿಲ್ಲ. ಮನೆಬಿಟ್ಟು ಬರುವಾಗ ತಂದ ಹಣ ಕರಗಲಾರಂಭಿಸಿತು . ದಿನ ಕಳೆದರೆ ಊಟ ತಿಂಡಿಗೂ ತತ್ಕಾರವಾಗ ಬಹುದೆಂದು ಹೋಟೆಲಿನಲ್ಲಿ ಸಪ್ಲೆಯರ್ ಆಗಿ ಕೆಲಸಕ್ಕೆ ಸೇರಿಕೊಂಡ. ಬೆಳಗಿನ ಹೊತ್ತಿನಲ್ಲಿ ಉದ್ಯೋಗಕ್ಕಾಗಿ ಅಲೆದಾಟ . ಮಧ್ಯಾಹ್ನ ಹೋಟೆಲಿನಲ್ಲಿ ಕೆಲಸ . ಯಾರೂ ಕೆಲಸ ಕೊಡಲಿಲ್ಲ. ಹೋಟೆಲ್ ಗೆ ಬರುವ ಗಿರಾಕಿಗಳ ಮುಂದೆ ಐನ್ಹ್ ಸ್ಟೀನ್ ದೈನ್ಯತೆಯಿಂದ ಬೇಡಿಕೊಳ್ಳುತ್ತಿದ್ದ . ನಾನು ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರ ಪದವೀಧರ ಚೆನ್ನಾಗಿ ಪಾಠ ಹೇಳಿ -ಕೊಡಬಲ್ಲೆ . ದಯವಿಟ್ಟು ನಿಮ್ಮ ಮಕ್ಕಳನ್ನು ನನ್ನ ಬಳಿ ಟ್ಯೂಶನ್ ಗೆ ಕಳಿಸಿ . ನಿಮ್ಮ ಸ್ನೇಹಿತರ ಮಕ್ಕಳಿಗೂ ಹೇಳಿ . ಇದಾವುದೋ ಮೆಂಟಲ್ ಕೇಸು ಇರಬೇಕೆಂದು ಜನ ಗೇಲಿಮಾಡಿ ಕೊಳ್ಳುತ್ತಿದ್ದರು. ಒಮ್ಮೆ ಈ ಸಂಗತಿ ಹೋಟೆಲ್ ಮಾಲೀಕನಿಗೆ ಗೊತ್ತಾಗಿ ಆತ ಐನ್ಹ್ ಸ್ಟೀನ್ ನನ್ನು ಕೆಲಸದಿಂದ ಹೊರಹಾಕಿದ್ದ. ಮತ್ತೊಂದು ಹೋಟೆಲ್ ಸೇರಿದರೂ ಐನ್ಹ್ ಸ್ಟೀನ್ ತನ್ನ ಮೊದಲ ಚಾಳಿ ಬಿಡಲಿಲ್ಲ. ಯಾರೇ ಬರಲಿ "ಸರ್ ನಾನು ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಟ್ಯೂಶನ್ ಹೇಳಿ ಕೊಡಬಲ್ಲೆ ನಿಮ್ಮ ಮಕ್ಕಳಿಗೆ " ಎಂದೇ ಶುರು ವಿಡುತ್ತಿದ್ದ. ಆದರೆ ಒಬ್ಬನೇ ಒಬ್ಬನೂ ಮುಂದೆ ಬರಲಿಲ್ಲ. ಹೋಟೆಲ್ ಮಾಣಿ ಭೌತಶಾಸ್ತ್ರ , ಗಣಿತ ಶಾಸ್ತ್ರ ಹೇಳಿಕೊಡುವುದು ಉಂಟಾ ? ಎಂದು ಎಲ್ಲರೂ ಅಪಹಾಸ್ಯ ಮಾಡುತ್ತಿದ್ದರು . ಪ್ರತಿಭಟನಾ ಕಾರರು ಮೆರವಣಿಗೆಯಲ್ಲಿ ವೈಕಾರ್ಡ್ ಹಿಡಿದು ಹೋಗುವಂತೆ ಬರ್ನ್ ನ ಬೀದಿ ಬೀದಿಗಳಲ್ಲಿ ಬೋರ್ಡ್ ಮೇಲೆ "ಟ್ಯೂಶನ್ ಹೇಳಿಕೊಡಲಾಗುವುದು " ಎಂದು ಬರೆಯಿಸಿಕೊಂಡು ಅಲೆದಾಡಿದ . ಯಾರೂ ಮುಂದೆ ಬರಲಿಲ್ಲ. ಒಂದು ತಿಂಗಳು ಉಚಿತ ಟ್ಯೂಶನ್ ಹೇಳಿಕೊಡುತ್ತೇನೆ ಎಂದರೂ ಯಾರೂ ಮೂಸಿ ನೋಡಲಿಲ್ಲ. ತಾನು ಕಲಿತ ವಿದ್ಯೆ ಎರಡು ಹೊತ್ತಿನ ಊಟಕ್ಕೂ ಆಗದೆ ಇದ್ದರೆ ಅದನ್ನು ಕಟ್ಟಿಕೊಂಡು ಆಗಬೇಕಾದದ್ದೇನು ? ಎಂದು ಅಕ್ಸರಶ; ಅನಿಸಿದರೂ ಎಲ್ಲ ನೋವು , ಸಂಕಟಗಳನ್ನು ಅವುಡುಗಚ್ಚಿ ಸಹಿಸಿಕೊಂಡ . ಆದರೆ ಆ ಹೊತ್ತಿಗೆ ಐನ್ಹ್ ಸ್ಟೀನ್ ಜರ್ಜರಿತನಾಗಿದ್ದ. ಕೆಲಸವಿಲ್ಲದೇ ಒಂದು ದಿನವನ್ನು ಕಳೆಯುವುದು ಸಾಧ್ಯವಿರಲಿಲ್ಲ. ಪಾಪ ! ಅಂದು ಆತ ಎಂತ ಅಸಹಾಯಕ ಸ್ಥಿತಿಯಲ್ಲಿದ್ದ ಅಂದರೆ ಟ್ರಂಕ್ ನಲ್ಲಿದ್ದ ಸರ್ಟಿಪಿಕೇಟ್ , ಪ್ರಶಸ್ತಿಪತ್ರ ,ನೋಟ್ ಬುಕ್ಕುಗಳನ್ನೆಲ್ಲ ಮನೆಯ ಮುಂದಿನ ತೊಟ್ಟಿಯಲ್ಲಿ ಹಾಕಿ ಬಂದು ಬಿಟ್ಟ. ಮರುದಿನ ಯಾರೋ ಬಂದು ಬಾಗಿಲು ಬಡಿದಾಗಲೇ ಐನ್ಹ್ ಸ್ಟೀನ್ ಗೆ ಎಚ್ಚರವಾಗಿದ್ದು !. " ಸರ್ , ಯಾರೋ ನಿಮ್ಮ ಅಮೂಲ್ಯ ದಾಖಲೆ -ಕಾಗದ ಪತ್ರಗಳನ್ನು ತೊಟ್ಟಿಯಲ್ಲಿ ಎಸೆದಿದ್ದಾರೆ. ನಿಮಗೆ ಬೇಕಾದ ಕಾಗದ ಪತ್ರಗಳೆಂದು ಅನಿಸಿದ್ದರಿಂದ ಕೊಟ್ಟು ಹೋಗಲು ಬಂದೆ . ಎಂದು ಅಪರಿಚಿತ ವ್ಯಕ್ತಿ ಯೊಬ್ಬ ಬಂದು ಕೊಟ್ಟು ಹೋಗದಿದ್ದರೆ ಐನ್ಹ್ ಸ್ಟೀನ್ ಬದುಕಿನಲ್ಲಿ ಅದೆಂತ ತಿರುವುಗಳು ಆಗುತ್ತಿದ್ದವೋ ಏನೋ ?. ಅಷ್ಟೊತ್ತಿಗೆ ಐನ್ಹ್ ಸ್ಟೀನ್ ನ ಕೋಪ ಇಳಿದಿತ್ತು . ಸುಮಾರು ಐದು ತಿಂಗಳು ನೌಕರಿಗಾಗಿ ಅಲೆದು ಅಲೆದು ಇನ್ನೇನು ಬರ್ನ್ ನಗರ ವನ್ನು ಬಿಟ್ಟು ಇಟಲಿಗೆ ಹೋಗಬೇಕೆಂದು ನಿರ್ಧರಿ ಸಿದ್ದ . ಆದರೆ ಐನ್ಹ್ ಸ್ಟೀನ್ ಹೋಟೆಲ್ ನಲ್ಲಿ ಸಂಧಿಸಿದ್ದ ವ್ಯಕ್ತಿಯೊಬ್ಬ ಅಚಾನಕ್ ಆಗಿ ಬೆಟಿಮಾಡಿ , ಭೌತಶಾಸ್ತ್ರ ವಿಷಯ ಪಾಠ ಮಾಡುವುದಾದರೆ ಸ್ಥಳೀಯ ಕಾಲೇಜಿನಲ್ಲಿ ಉಪನ್ಯಾಸಕನ ಕೆಲಸ ಕೊಡಿಸುತ್ತೇನೆಂದು ಹೇಳಿದ. ಈ ಒಂದು ಮಾತಿಗೆ ಅಷ್ಟು ದಿನಗಳ ತನಕ ಕಾತರದಿಂದ ಕಾಯುತ್ತಿರುವವನಂತೆ ಐನ್ಹ್ ಸ್ಟೀನ್ ಯಾವುದಾದರೂ ಕೆಲಸ ಕೊಡಿ. ಮಾಡಲು ಸಿದ್ದ. ಅದರಲ್ಲೂ ಉಪನ್ಯಾಸಕನ ಕೆಲಸವೆಂದರೆ ನನಗೆ ಇನ್ನೇನು ಬೇಕು ? ಆಯ್ತು ಸೇರಿಕೊಳ್ಳುತ್ತೇನೆ ಎಂದ.

ಕಾಲೇಜಿನಲ್ಲೂ ಐನ್ಹ್ ಸ್ಟೀನ್ ತನ್ನ ಪಾಡಿಗೆ ಪಾಠ ಮಾಡಿಕೊಂಡಿದ್ದ ಐನ್ಹ್ ಸ್ಟೀನ್ ಯಾರ ಗಮನಕ್ಕೂ ಬೀಳದಿದ್ದರೂ , ಯಾರ ತಂಟೆಗೂ ಹೋಗುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು . ಅದಕ್ಕಿಂತ ಹೆಚ್ಚಿನ ಚಟುವಟಿಕೆಗೆ ಆತನಲ್ಲಿ ಹಣವಿರಲಿಲ್ಲ. ಹೇಗೋ ಕಷ್ಟಪಟ್ಟು ಬಾಡಿಗೆ ಮನೆ ಮಾಡುವ ಹೊತ್ತಿಗೆ ಏಳು ಹನ್ನೊಂದಾಗಿತ್ತು . ಸದಾ ಸಂಬಳ ಸಾಕಾಗುತ್ತಿರಲಿಲ್ಲ. ಹಾಗಂದು ಅನ್ನುತ್ತಿರುವಾಗಲೇ ಮಗುವು ಆಯಿತು. ಒಮ್ಮೆಯಂತೂ ಮಗು ಶೀತಜ್ವರದಿಂದ ಬಳಲುತ್ತಿದ್ದರೆ ಡಾಕ್ಟರಿಗೆ ಕೊಡಲು ಹಣವಿಲ್ಲದೆ ಮಗುವಿಗೆ ಚಿಕಿತ್ಸೇಕೊಡಿಸದಿದ್ದಾಗ ಅದು ಸತ್ತು ಹೋಗುವನ್ತಾಗಿತ್ತು. ಸ್ನೇಹಿತರಿಂದ ಸಾಲಪಡೆದು ಮಗುವನ್ನು ಡಾಕ್ಟರಿಗೆ ತೋರಿಸಿದ. ಮಗು ಹೇಗೋ ಬದುಕುಳಿಯಿತು. ಇಷ್ಟಾದರೂ ಐನ್ಹ್ ಸ್ಟೀನ್ ಅಧ್ಯಯನ ನಿಲ್ಲಿಸಲಿಲ್ಲ . ಎಂಥ ವೈಯಕ್ತಿಕ ಸಮಸ್ಯೆ ಎದುರಾದಗಲೂ ತನ್ನ ಪ್ರೀತಿಯ ಭೌತಶಾಸ್ತ್ರ ವನ್ನು ಬಿಡಲಿಲ್ಲ. ಹಾಗೆಂದು ಯಾರೂ ಸಹ ಈತನ ಪ್ರತಿಭೆಗೆ ಪ್ರೋತ್ಸಾಹಿಸಲಿಲ್ಲ. ಉಪನ್ಯಾಸಕ ಕೆಲಸಕ್ಕೆ ಸೇರಿ ನಾಲ್ಕು ವರುಷಗಳಾದರೂ ವಿದ್ಯಾರ್ಥಿಗಳಿಗೆ ಬಿಟ್ಟರೆ ಆತನ ಪರಿಚಯ ಯಾರಿಗೂ ಇರಲಿಲ್ಲ. ಐದನೇ ವರ್ಷಕ್ಕೆ ಐನ್ಹ್ ಸ್ಟೀನ್ ರಿಲೇಟಿವಿಟಿ ನಿಯಮಕ್ಕೆ ಸಂಬಂಧಿಸಿದಂತೆ ಒಂದು ಪ್ರಭಂದ ಮಂಡಿಸಿದ. ಪ್ರಭಂದ ಭೌತಶಾಸ್ತ್ರ ವಿಜ್ಞಾನಿಗಳಲ್ಲಿ ಸಂಚಲನ ಮೂಡಿಸಿತು . ಇದಾಗಿ ಒಂದೆರಡು ವರ್ಷಗಳಲ್ಲಿ ಆತನ ಸುಮಾರು ಮೂವತ್ತು ಪ್ರಭಂದಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. ಆತ ರೂಪಿಸಿದ E =MC2 ಸೂತ್ರ ಭೌತಶಾಸ್ತ್ರ ದಲ್ಲಿ ಕ್ರಾಂತಿಯನ್ನು ಉಂಟುಮಾಡಿತು.

ಐನ್ಹ್ ಸ್ಟೀನ್ ಈ ಹೊತ್ತಿಗೆ ಬರ್ನ್ ನಗರ ಬಿಟ್ಟಿದ್ದ . ಆತನ ಈ ಸಾಧನೆಗೆ ನೊಬೆಲ್ ಪ್ರಶಸ್ತಿ ಬಂದಾಗಲೇ ಸ್ವಿಜರ್ಲ್ಯಾಂಡ್ ಜನರಿಗೆ ಗೊತ್ತಾದದ್ದು ಐನ್ಹ್ ಸ್ಟೀನ್ ಒಂಬತ್ತು ವರ್ಷ ತಮ್ಮ ದೇಶದಲ್ಲಿಯೇ ಇದ್ದ ಹಾಗೂ ಬರ್ನ್ ನಗರ ದಲ್ಲಿದ್ದಾಗಲೇ ರಿಲೇಟಿವಿಟಿ ನಿಯಮವನ್ನು ಪ್ರತಿಪಾದಿಸಿದ್ದ ಎಂದು !. ಅಲ್ಲಿಯತನಕ ಯಾರೂ ನೋಡಿರಲಿಲ್ಲ. ಪ್ರೀತಿಯ ಹಾಗೂ ಆತ್ಮೀಯ ಸ್ನೇಹಿತರೆ ನಾವು ಹಾಗೂ ನೀವೂ ಗಳು ಕೂಡ ಐನ್ಹ್ ಸ್ಟೀನ್ ಪಂಗಡದವರೇ ತಾನೇ ?.
ನಿಮಗಾಗಿ ಒಂದು ಅವಕಾಸ
http://sunnaturalflash.magneticsponsoringonline.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
http ;// www .sunnaturalflash .com /
sunnaturalflash @gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ