MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಡಿಸೆಂಬರ್ 28, 2010

ಎಚ್ಚರಿಕೆಯ ಗಂಟೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಅದೊಂದು ಹಟಾತ್ ಸಂಭವಿಸಿದ ಅನಿರೀಕ್ಷಿತ ಘಟನೆ. ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಕೊಲೆ ಮೊಕದ್ದಮೆಯಲ್ಲಿ ನ್ಯಾಯಾಧೀಶರ ಮುಂದೆ ಪ್ರಚಂಡ ವಾದ ಮಾಡುತ್ತಿದ್ದ ಪ್ರಾಖ್ಯಾತ ಕ್ರಿಮಿನಲ್ ಲಾಯರ್ ಜೂಲಿಯನ್ ಮ್ಯಾನ್-ಟಾಲ್ ಹಟಾತ್ತನೆ ಅಲ್ಲೇ ಕುಸಿದುಬಿದ್ದ. ದುಬಾರಿ ಬೆಲೆಯ ಇಟಾಲಿಯನ್ ಸೂಟ್ ಧರಿಸಿದ್ದ . ಆತನ ಭವ್ಯ ಶರೀರ ನೆಲಕ್ಕೊರಗಿತ್ತು. ನೂರಾರು ಕ್ಲಿಷ್ಟ ಕ್ರಿಮಿನಲ್ ಕೇಸುಗಳನ್ನು ಗೆದ್ದ ಸೂಪರ್ ಸ್ಟಾರ್ ಲಾಯರ್ ಎಂದು ಪ್ರಸಿದ್ಧನಾಗಿದ್ದ. ಜೂಲಿಯನ್ ನ ಈ ಹ್ರುದ್ರಾವಕ ಸ್ಥಿತಿಯನ್ನು ಕಂಡು ನಾನು ಶಾಕ್ ನಿಂದ ಮರಗಟ್ಟಿ ದಂತಾಗಿ ಸುಮ್ಮನೆ ನಿಂತೆ. ಅಂತ ದೊಡ್ಡ ಮನುಷ್ಯ ಈಗ ನೆಲದಮೇಲೆ ಹುಚ್ಚನಂತೆ ಹೊರಳಾಡುತ್ತಾ, ನರಳಾಡುತ್ತಾ ಬಿದ್ದುಕೊಂಡಿದ್ದಾನೆ. ಆತನ ಪಾಲಿಗೆ ಎಲ್ಲವೂ -'ಸ್ಲೌಮೊಶನ್ "ನಲ್ಲಿ ನಡೆಯುತ್ತಿರುವಂತೆ ಕಾಣುತ್ತಿತ್ತು. ಅವನ ಜೂನಿಯರ್ ಲಾಯರ್ 'ಅಯ್ಯೋ ದೇವರೇ, ಜೂಲಿಯನ್ ಗೆ ಏನೋ ಆಗಿದೆ ' ಎಂದು ಕೂಗಿಕೊಂಡಳು. ಆ ಉದ್ಗಾರ ಮಿಂಚಿನಂತೆ ಸಂಭವಿಸಿದ ಆ ದುರ್ಘಟನೆಯ ಕ್ಷಣದರ್ಶನ ನೀಡಿದಂತೆ ಇತ್ತು. ನ್ಯಾಯಾಧೀಶರೂ ಶಾಕ್ ಆಗಿ, ಪಕ್ಕದಲ್ಲಿದ್ದ ಫೋನನ್ನು ಎತ್ತಿಕೊಂಡು ಏನೋ ಹೇಳಿದರು. ನಾನಂತೂ ಗಾಬರಿ, ಗೊಂದಲ , ಆತಂಕಗಳಲ್ಲಿ ಮುಳುಗಿಹೋಗಿದ್ದೆ. "ಇಷ್ಟು ಬೇಗ ಸಾಯಬೇಡ ಮಹರಾಯ, ನಿನ್ನಂಥವರಿಗೆ ಈ ಗತಿ ಬರಬಾರದು ' ಎಂದು ನನ್ನ ಮನಸ್ಸು ಕೂಗಿಹೇಳುತ್ತಿತ್ತು.

ಇದನ್ನೆಲ್ಲಾ ಕಲ್ಲು ಬೊಂಬೆಯಂತೆ ನೋಡುತ್ತಿದ್ದ ಕೋರ್ಟ್ ನ ಅಮೀನ ಹಟಾತ್ ಪ್ರಜ್ಞೆ ಬಂದವನ್ತಂತೆ ನೆಲದಲ್ಲಿ ಬಿದ್ದಿದ್ದ ಜೂಲಿಯನ್ ಬಳಿ ಹೋಗಿ , ಅವನ ಎದೆಗೆ ಮಸಾಜ್ ಮಾಡತೊಡಗಿದ. ಜೂನಿಯರ್ ಲಾಯರ್ ಸಹ ಅವನೆದೆ ಬಾಗಿ ಏನೋ ಸಾಂತ್ವನದ ಶಬ್ಧಗಳನ್ನು ಉಚ್ಚರಿಸ -ತೊಡಗಿದಳು . ಆಕೆಯ ಮುಂಗುರುಳು ಅವನ ಮುಖದ ಮೇಲೆ ನಲಿಯುತ್ತಿತ್ತು . ಆದರೆ ಆತ ಅವಳ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಈ ಜೂಲಿಯನ್ ಗೂ ನನಗೂ ಕಳೆದ ಹದಿನೇಳು ವರ್ಷಗಳಿಂದ ಪರಿಚಯ, ಸ್ನೇಹ . ಆತನನ್ನು ಮೊದಲ ಬಾರಿ ಭೇಟಿಯಾಗಿದ್ದಾಗ ನಾನು ವಿದ್ಯಾರ್ಥಿಯಾಗಿದ್ದೆ . ಆಗ ಅವನಲ್ಲಿ ಬೇಕಾದುದೆಲ್ಲವೂ ಇತ್ತು . ಅತ್ಯಂತ ಮೇಧಾವಿ, ನಿರ್ಭೀತ, ಚಾಣಾಕ್ಷ ಕ್ರಿಮಿನಲ್ ಲಾಯರ್ ಎಂದು ಪ್ರಸಿದ್ಧನಾಗಿದ್ದ . ನೋಡುವುದಕ್ಕೆ ಸ್ಪುರದ್ರೂಪಿ . ಮನಸ್ಸಿನಲ್ಲಿ ಭೋರ್ಗರೆಯುತ್ತಿರುವ ಮಹತ್ವಾಕಾಂಕ್ಷೆ . ದುಡ್ಡಿನ ಮಳೆಸುರಿಸುವ ಸಾಮರ್ಥ್ಯ . ಕಂಪನಿಯ ಉದ್ಯೋನುಖ ಸೂಪರ್ ಸ್ಟಾರ್ . ಅಂದಿನ ಆ ರಾತ್ರಿ ನನಗೆ ಈಗಲೂ ಚೆನ್ನಾಗಿ ನೆನಪಿದೆ. ತುಂಬಾ ಹೊತ್ತು ಕೆಲಸಮಾಡಿ, ಮುಗಿಸಿ ಹಿಂತಿರುಗುತ್ತಿದ್ದಾಗ ನಾನು ಅವನ ಭಾರೀ ಮೇಜಿನ ಮೇಲೆ ಪ್ರೇಂ ಹಾಕಿರಿಸಿದ್ದ ವಿನ್ ಸ್ಟನ್ ಚರ್ಚಿಲರ ಸುಭಾಷಿತವನ್ನು ಕ್ಷಣಕಾಲ ನೋಡಿದ್ದು , ಅದು ಅವನ ವ್ಯಕ್ತಿತ್ವವನ್ನು ಸಾರಿಹೇಳುತ್ತಿತ್ತು.

"ನಾವೇ ನಮ್ಮ ಅದೃಷ್ಟದ ಶಿಲ್ಪಿಗಳು. ನಾವು ಸಾಧಿಸಬೇಕೆಂದು ನಿರ್ಧರಿಸಿರುವ ಕಾರ್ಯ ಎಂದಿಗೂ ನಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದುದಲ್ಲ. ಅದು ನೀಡುವ ಶ್ರಮ , ನೋವುಗಳು ನಮ್ಮ ಶಹನಾಶಕ್ತಿಯನ್ನು ಮೀರಿದ್ದಲ್ಲ . ನಮ್ಮ ಧ್ಯೇಯದ ಬಗ್ಗೆ ಎಲ್ಲಿಯವರೆಗೆ ನಮ್ಮ ಶ್ರಧ್ಹೆ ಆಚಲವಾಗಿರುವುದೋ , ಎಲ್ಲಿಯವರೆಗೆ ಗೆಲ್ಲುವ ಛಲ ನಮ್ಮಲ್ಲಿರುವುದೋ . ಯಶಸ್ಸು ನಮ್ಮದಾಗಲೇ ಬೇಕು . ಇದು ನಿಶ್ಚಿತ ."

ಜೂಲಿಯನ್ ನುಡಿದಂತೆ ನಡೆದ ವ್ಯಕ್ತಿ . ತಾನು ಹುಟ್ಟಿರುವುದು ಯಶಸ್ವಿಯಾಗುವುದಕ್ಕೆ ಎಂದು ದೃಢವಾಗಿ ನಂಬಿದ್ದ. ಆತ ದಿನಕ್ಕೆ ಹದಿನೆಂಟು ತಾಸು ಪಟ್ಟು ಹಿಡಿದು ದುಡಿಯುತ್ತಿದ್ದ. ಆತ ಪ್ರತಿಷ್ಟಿತ ಕುಲದವನು. ಆತನ ತಂದೆ ಫೆಡರಲ್ ಕೋರ್ಟಿನಲ್ಲಿ ನ್ಯಾಯಾಧೀಶನಾಗಿದ್ದನಂತೆ . ತಾತ ಹೆಸರಾಂತ ಸೆನೇಟರ್ಆಗಿದ್ದನಂತೆ . ಇಂಥ ಆಗರ್ಭ ಶ್ರೀಮಂತ ಹಿನ್ನೆಲೆಯಿಂದ ಬಂದ ಅವನ ಹೆಗಲ ಮೇಲೆ ಭಾರೀ ನಿರೀಕ್ಷೆಗಳ ಹೊರೆಯಿದ್ದುದು ಸ್ಪಷ್ಟವಾಗಿತ್ತು. ಒಂದು ವಿಷಯವಂತೂ ಸತ್ಯವಾಗಿತ್ತು. ಆತ ತನ್ನದೇ ಆದ ರೇಸ್ ನಲ್ಲಿ ಓಡುತ್ತಿದ್ದ. ತನ್ನದೇ ರೀತಿಯಲ್ಲಿ ಕೆಲಸಮಾದಬೇಕೆಂದು ನಿರ್ಧರಿಸಿದ್ದ . ಅಷ್ಟೇ ಅಲ್ಲ . ಅದನ್ನು ಇತರರ ಕಣ್ಣು ಕುಕ್ಕುವಂತೆ "ಶೋ" ಮಾಡುವುದರಲ್ಲಿ ಖುಷಿಪಡುತ್ತಿದ್ದ.

ನ್ಯಾಯಾಲಯದ ಕಲಾಪಗಳಲ್ಲಿ ಆತ ನಡೆಸುತ್ತಿದ್ದ ನಾಟಕೀಯ ವಾದಗಳು ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ . ಆಕ್ರಮಣಕಾರಿ ಧೋರಣೆಯುಳ್ಳ ಚಾಣಾಕ್ಷ ಲಾಯರ್ ಬೇಕಾದಾಗಲೆಲ್ಲ ಶೀಮಂತರು ಆತನ ಮೊರೆ ಹೋಗುತ್ತಿದ್ದರು. ಆತನ "ಪಟ್ಯೇತರ" ಚಟುವಟಿಕೆಗಳೂ ಪ್ರಸಿದ್ಧವಾಗಿದ್ದವು , ನಗರದ ಪ್ರತಿಷ್ಟಿತ ನೈಟ್ ಕ್ಲಬ್ಬು ಗಳಲ್ಲಿ ಆತನ ಪಾನಗೊಷ್ಟಿಗಳು , ಚೆಲುವೆಯರ ಜತೆಗಿನ ಚೆಲ್ಲಾಟಗಳು , ರೌಡಿಗಳ ಸಹವಾಸ ಮುಂತಾದ ವಿಷಯಗಳು ದಂತಕತೆಗಳಂತೆ ಪ್ರಚಾರವಸ್ತುವಾಗಿದ್ದವು.

ಅಂದಿನ ಭಯಂಕರ ಕೊಲೆಕೇಸು ಭಾರೀ ಸುದ್ಧಿಮಾಡಿದ್ದ ಕೇಸು. ಅದರಲ್ಲಿ ವಾದಿಸುತ್ತಿರುವ ಸಂದರ್ಭದಲ್ಲಿ ಜೂಲಿಯನ್ ನನ್ನನ್ನು ಸಹಾಯಕ ಲಾಯರ್ ಆಗಿ ಏಕೆ ಆರಿಸಿಕೊಂಡಿದ್ದನೋ ನನಗೆ ತಿಳಿಯದು . ನಾನು ಲಾ ಓದಿದ್ದು ಆತ ಓದಿದ್ದ ಹಾರ್ವರ್ಡ್ ಸ್ಕೂಲಿನಲ್ಲೇ ಎಂಬುದೇನೋ ನಿಜ. ಆದರೆ ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಾಯರುಗಳ ಪೈಕಿ ಭಾರೀ ಚಾಣಾಕ್ಷ ನೆಂದೇನೋ ಹೆಸರು ಮಾಡಿರಲಿಲ್ಲ. ಅಲ್ಲದೆ ನಾನು ಪ್ರತಿಷ್ಟಿತ ಮನೆತನಕ್ಕೆ ಸೇರಿದವನೂ ಆಗಿರಲಿಲ್ಲ. ನನ್ನ ತಂದೆ ಸ್ವಲ್ಪಕಾಲ ನೌಕಾದಳದಲ್ಲಿ ಕೆಲಸಮಾಡಿ ಅನಂತರ ಬ್ಯಾಂಕೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದವನು. ತಾಯಿಯೂ ಪ್ರಸಿದ್ಧ ವ್ಯಕ್ತಿಯಲ್ಲ. ಹೀಗಿದ್ದರೂ ಜೂಲಿಯನ್ ನನ್ನನ್ನು ಆಯ್ಕೆಮಾಡಿದ್ದ. ಇದು " ಎಲ್ಲ ಕೊಲೇಕೆಸುಗಳ ರಾಜ " ಎಂದು ಪ್ರಸಿದ್ಧವಾಗಿತ್ತು. ಇದರಲ್ಲಿ ಜೂಲಿಯನ್ನನ ಸಹಾಯಕರಾಗಲು ಕೆಲವರು ಲಾಬಿ ನಡೆಸಿದ್ದೂ ನನಗೆ ಗೊತ್ತಿತ್ತು. ನನ್ನನ್ನೇಕೆ ಆಯ್ಕೆಮಾಡಿದೆ ಎಂದು ಕುತೂಹಲದಿಂದ ನಾನು ಕೇಳಿದ್ದಕ್ಕೆ ಆತ "ನಿನ್ನ "ಹಸಿವೆ "ಅದಕ್ಕೆ ಕಾರಣ " ಎಂದು ಹೇಳಿದ್ದ. ಅದೇನೇ ಇರಲಿ ನಾವೂ ಆ ಕೇಸಿನಲ್ಲಿ ಜಯಗಳಿಸಿದ್ದೆವು. ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಮಾಡಿದ್ದ ಅಧಿಕಾರಿಯೊಬ್ಬನಿಗೆ ಸಂಬಂಧಿಸಿದ್ದ ಆ ಕೇಸಿನಲ್ಲಿ ಆರೋಪಿಗೆ ಖುಲಾಸೆಯಾಗಿತ್ತು.

ಆ ಬೇಸಗೆಯಲ್ಲಿ ನಾನ್ನು ಬಹಳಷ್ಟು ಪಾಠ ಗಳನ್ನೂ ಕಲಿತ್ತಿದ್ದೆ . ಅದು ಸಂದೇಹಕ್ಕೆಡೆಯಿಂದ ಸನ್ನಿವೇಶ ಗಳಲ್ಲಿ ಸಂದೇಹವನ್ನು ಸೃಷ್ಟಿಸುವುದಷ್ಟೇ ಆಗಿರಲಿಲ್ಲ. ಅದನ್ನು ಯಾವ ಲಾಯರೂ ಮಾಡಬಲ್ಲ. ನಾನು ಕಲಿತ ಪಾಠ ಎಂಥ ಕೆಸಿನಲ್ಲೇ ಆಗಲಿ , ಗೆಲ್ಲುವ ಮನಸ್ಥಿತಿಯನ್ನು ಸಾಧಿಸುವ ಪಾಠ ವಾಗಿತ್ತು. ಈ ಕಲೆಯಲ್ಲಿ ಅಸಾಮಾನ್ಯ ಪ್ರಭುತ್ವ ಹೊಂದಿದ್ದ ಗುರು ತನ್ನ ವೃತ್ತಿ ಕೌಶಲ್ಯದಲ್ಲಿ ವಿಜ್ರು ಮ್ಭಿಸುತ್ತಿರುವುದನ್ನು ಕಣ್ಣಾರೆ ನೋಡುವ, ಕಿವಿಯಾರೆ ಕೇಳುವ ಅಪೂರ್ವ ಅವಕಾಶ ದೊರೆತಿತ್ತು. ಆದರೆ ಸಾರವನ್ನೆಲ್ಲ ನಾನು ಸ್ಪಂಜಿನಂತೆ ಹೀರಿಕೊಂಡಿದ್ದೆ.

ಜೂಲಿಯನ್ ನೀಡಿದ ಸಲಹೆಯಂತೆ ನಾನೂ ಅವನಿದ್ದ ಕಂಪನಿಯಲ್ಲಿ ಮುಂದುವರಿದೆ. ನನ್ನೊಳಗೆ ಕ್ರಮೇಣ ಸುದೀರ್ಘಕಾಲದ ಗಾಢಸ್ನೇಹ ಬೆಳೆಯಿತು. ಆದರೆ ಅವನೊಂದಿಗೆ ಕೆಲಸಮಾಡುವುದೇನೂ
ಸುಲಭವಾಗಿರಲಿಲ್ಲ. ಅದೊಂದು ರೀತಿಯ ನಿರಾಶಾದಾಯಕ ಹೋರಾಟ ದಂತೆ ಅನಿಸಿದ್ದೂ ಉಂಟು. ಅದು ನಡುರಾತ್ರಿಯ ಜಗಳಗಳಿಗೂ ಕಾರಣವಾಗಿತ್ತು. ಜೂಲಿಯನ್ ಪಾಲಿಗೆ ತಾನು ನಡೆದದ್ದೇ ಹೆದ್ದಾರಿ . ತಾನೂ ಎಂದಿಗೂ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂಬ ಅಚಲ ಆತ್ಮವಿಶ್ವಾಸ . ಮೇಲು ನೋಟಕ್ಕೆ ಇಂಥ ಗಟ್ಟಿಮನಸ್ಸಿನ ಮನುಷ್ಯನಾದರೂ , ಅವನಲ್ಲಿ ಒಳಗೊಳಗೇ ಅನ್ಯರಿಗಾಗಿ ತುಡಿಯುವ ಹೃದಯವಂತಿಕೆಯೂ ಇತ್ತು.

ಆತ ವೃತ್ತಿಯಲ್ಲಿ ಎಷ್ಟೇ "ಬಿಸಿ"ಯಾಗಿದ್ದರೂ ನನ್ನ ಪತ್ನಿ, ಮಕ್ಕಳನ್ನು ಆಗಾಗ ವಿಚಾರಿಸಿಕೊಳ್ಳುತ್ತಿದ್ದ . ತಾನು ಅಷ್ಟು ಶ್ರಮಪಡುವುದು ಕಂಪನಿಯ ಪ್ರಗತಿಗಾಗಿಯೇ ಎಂದು ಸಮರ್ಥಿಸಿಕೊಳ್ಳುತ್ತಿದ್ದ. "ಮುಂದಿನ ವರ್ಷ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ, ಒಂದು ತಿಂಗಳು ರಜೆ ಹಾಕಿ ಹವಾಯಿಗೆ ಹೋಗಿ ರಿಲ್ಯಾಕ್ಸ್ ಮಾಡುತ್ತೇನೆ. "ಎನ್ನುತ್ತಿದ್ದ. ಆದರೆ ಕಾಲಕಳೆದಂತೆ ಅವನ ಪ್ರತಿಭೆಯ ಕೀರ್ತಿ ಪಸರಿಸುತ್ತಾ ಹೋದಂತೆ, ಕೆಲಸದ ರಾಶಿಯೂ ಅಗಾಧವಾಗಿ ಬೆಳೆಯುತ್ತಾ ಹೋಯಿತು. ದೊಡ್ಡ ದೊಡ್ಡ ಕೇಸುಗಳು ಬರುತ್ತಿದ್ದಂತೆ, ಅವುಗಳ ಕಟಿಣ ಸವಾಲುಗಳನ್ನು ಎದುರಿಸುವುದಕ್ಕಾಗಿ ಮತ್ತಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಯಿತು. "ನನಗೀಗ ದಿನಕ್ಕೆ ಎರಡು ತಾಸಾದರೂ ನಿಶ್ಚಿಂತೆ ಯಿಂದ ನಿದ್ರಿಸಲು ಸಾಧ್ಯಾವಾಗುತ್ತಿಲ್ಲ " ಎಂದು ಆಗಾಗ ಹೇಳುತ್ತಿದ್ದ. ಈ ಮಾತನ್ನು ಕೇಳಿದಾಗ ಇನ್ನಷ್ಟು ಕೀರ್ತಿ , ಪ್ರತಿಷ್ಠೆ ಗಳಿಸಬೇಕೆಂಬ ಆತನ ಅದಮ್ಯ ಹಸಿವು ಕಡಿಮೆಯಾಗಿಲ್ಲವೆಂದು ಮನದಟ್ಟಾಗಿತ್ತು.

ಆತ ನಿರೀಕ್ಷಿದಂತೆ ವೃತ್ತಿಯಲ್ಲಿ ಅದ್ಭುತ ಯಶಸ್ಸನ್ನು ಪಡೆದ ಬಹುತೇಕ ಎಲ್ಲರೂ ಬಯಸುವ ಎಲ್ಲವನ್ನೂ ಸಾಧಿಸಿದ ವೃತ್ತಿಯಲ್ಲಿ ಭಾರೀ ಹೆಸರು, ಏಳು ಅಂಕೆಯ ಆದಾಯ . ನಗರದ ಪ್ರತಿಷ್ಟಿತ ಬಡಾವಣೆಯಲ್ಲಿ ವೈಭವೋಪೇತ ಬಂಗಲೆ. ಸ್ವಂತ ಖಾಸಗೀ ಜೆಟ್ ವಿಮಾನ, ಹವಾಯಿ ಸಮೀಪದಲ್ಲೊಂದು ಭಾರಿ ಬಂಗಲೆ. ಹಾಗೂ ಆತನಿಗೆ ಅತ್ಯಂತ ಅಚ್ಹುಮೆಚ್ಚಿನದಾಗಿದ್ದ ದುಬಾರಿ ಬೆಲೆಯ ಪ್ರತಿಷ್ಟಿತ "ಫೆರಾರಿ "ಕಾರು ಇವೆಲ್ಲ ಅವನ ತೆಕ್ಕೆಯಲ್ಲಿದ್ದವು.

ಇಷ್ಟೆಲ್ಲಾ ಇದ್ದರೂ ಹೊರನೋಟಕ್ಕೆ ಕಾಣುವಷ್ಟು ಅವನ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿಲ್ಲ ಎಂದು ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಅನಿಸುತ್ತಿತ್ತು. ಜತೆಗೆ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದುದರಿಂದಲೋ ಏನೋ . ಆತ ಯಾವುದೊ ಭಯಂಕರ ಅಪಾಯದ ಕಡೆ ಧಾವಿಸುತ್ತಿರುವನೆಂದು ಅನಿಸುತ್ತಿತ್ತು. ನಾವಿಬ್ಬರೂ ಜತೆಜತೆಯಾಗಿಯೇ ದುಡಿಯುತ್ತಿದ್ದೆವು. ಹಾಗಾಗಿ ಜತೆಯಲ್ಲೇ ದಿನದ ಬಹುಕಾಲ ಇರುತ್ತಿದ್ದೆವು. ಆಗ ಯಾವುದೂ ನಿಧಾನವಾಗಿ ಸಾಗುತ್ತಿರಲಿಲ್ಲ. ಒಂದು ಕೇಸು ಮುಗಿಯುವುದರೊಳಗೆ ಮತ್ತೊಂದು ಅದಕ್ಕಿಂತ ದೊಡ್ಡ ಕೇಸು ಕಾದಿರುತ್ತಿತ್ತು. ಜೂಲಿಯನ್ಗಂತೂ ಎಷ್ಟು ಪೂರ್ವಸಿದ್ಧತೆ ಮಾಡಿದರೂ ತೃಪ್ತಿಯಿಲ್ಲ. ನ್ಯಾಯಾಧೀಶರು ಆ ಪ್ರಶ್ನೆ ಕೇಳಿದರೆ ?ಈ ಪ್ರಶ್ನೆ ಕೇಳಿದರೆ ? ತುಂಬಿದ ನ್ಯಾಯಾಲಯದಲ್ಲಿ ವಾದ-ವಿವಾದಗಳು ನಡೆಯುತ್ತಿರುವಾಗಲೇ ಹಟಾತ್ತನೆ ನನ್ನ ಮನಸ್ಸಿಗೆ ಮಂಕು ಕವಿದರೆ ? ಹೀಗೆ ನೂರಾರು ಪ್ರಶ್ನೆಗಳು ಹಾಗಾಗಿ ನಾವು ಮಿತಿಮೀರಿ ಶ್ರಮಿಸುತ್ತಿದ್ದೆವು. ನಮ್ಮದೇ ಶ್ರಮ ಕೇಂದ್ರಿತ ದುಡಿತದಲ್ಲಿ ಮುಳುಗಿ ಹೋಗಿದ್ದೆವು. ಜಾಣಜನರು ತಂತಮ್ಮ ಮನೆಗಳಲ್ಲಿ ಕುಟುಂಬದ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದರೆ , ನಾವು ಆ ಹೊತ್ತಿಗೆ ನಮ್ಮ ಉಕ್ಕಿನ ಗೋಪುರದ ಅರವತ್ತನಾಲ್ಕನೆಯ ಅಂತಸ್ತಿನಲ್ಲಿ ಹಗಲುರಾತ್ರಿ ದುಡಿಯುತ್ತ ಜಗತ್ತಿನ ಬಾಲವನ್ನೇ ಕೈಯಲ್ಲಿ ಹಿಡಿದಿರುವೆವೆಂಬ ಯಶಸ್ಸಿನ ಭ್ರಮೆಯಲ್ಲಿ ಮೈಮರೆಯುತ್ತಿದ್ದೆವು.

ಜೂಲಿಯನ್ ನನ್ನು ಕಂಡಾಗ ನನಗೆ ಒಮ್ಮೊಮ್ಮೆ ಆತ ಆತ್ಮಹತ್ಯೆಯ ಕಡೆ ಧಾವಿಸುತ್ತಿರುವನೋ ಎಂಬ ಭಾವನೆ ಮೂಡುತ್ತಿತ್ತು. ಏಕೆಂದರೆ ಆತ ತೀವ್ರ ಅತೃಪ್ತಿಯಿಂದ ನರಳುತ್ತಿದ್ದ. ಹೀಗಾಗಿ ಕ್ರಮೇಣ ಅವನ ದಾಂಪತ್ಯ ಕುಸಿಯಿತು. ಆತ ತನ್ನ ತಂದೆಯೊಡನೆ ಮಾತಾಡುವುದೂ ನಿಂತಿತು. ಎಲ್ಲ ಭೋಗ, ವಿಲಾಸ, ಸುಖ ಸಂಪತ್ತುಗಳಿದ್ದರೂ , ಆತ ನಿಜವಾಗಿಯೂ ಯಾವುದನ್ನೂ ಹುಡುಕುತ್ತಿದ್ದನೋ ಅದು ಸಿಕ್ಕಿರಲಿಲ್ಲ. ಇದೊಂದು ಆಧ್ಯಾತ್ಮಿಕ , ಮಾನಸಿಕ ಸೋಲಾಗಿತ್ತು. ಶಾರೀರಿಕವಾಗಿಯೂ ಅದು ಸಂಭವಿಸಿದ್ದು ಕ್ರಮೇಣ ನಿಚ್ಚಳವಾಗತೊಡಗಿತು.

ವಯಸ್ಸು ಇನ್ನೂ ಐವತ್ತಮೂರಷ್ಟೇ ಆಗಿದ್ದರೂ ಜೂಲಿಯನ್ ಎಪ್ಪತ್ತರ ವೃದ್ಧನಂತೆ ಕಾಣಿಸುತ್ತಿದ್ದ. ತೂಕತಪ್ಪಿದ ಜೀವನಶೈಲಿಯ ಆಘಾತಗಳ ಸಾಕ್ಷಿಯೋ ಎಂಬಂತೆ ಆತನ ಮುಖದಲ್ಲಿ ಸುಕ್ಕುಗಳು ತುಂಬಿದ್ದವು. ಅಪರಾತ್ರಿಯವರೆಗಿನ ಅವ್ಯಾಹತ ಕುಡಿತ, ನಿರಂತರ ಸಿಗರೇಟ್ ಸೇವನೆ , ಫ್ರೆಂಚ್ ರೆಸ್ಟೋರೆಂಟ್ ಗಳಲ್ಲಿ ಭೂರಿಭೋಜನ - ಇವುಗಳ ಕಾರಣವಾಗಿ ಶರೀರ ವಿಕಾರವಾಗಿ ಕಾಣುವಷ್ಟು ಬೊಜ್ಜು ಬೆಳೆದಿತ್ತು. ಆಗಾಗ ಆತ ತನ್ನ ಅಸ್ವಸ್ಥತೆ , ಆಯಾಸಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದ . ಅವನ ಹಾಸ್ಯಪ್ರಜ್ಞೆ ಮಾಯವಾಗಿಬಿಟ್ಟಿತ್ತು. ಒಂದು ಕಾಲದಲ್ಲಿ ಉಕ್ಕುತ್ತಿದ್ದ ಉತ್ಸಾಹದ ವ್ಯಕ್ತಿತ್ವ ಈಗ ಮ್ರುತ್ಯುಸದ್ರಶ ಗಾಂಭೀರವಾಗಿ ಬದಲಾಗಿತ್ತು. ಜೀವನದ ಉದ್ದೇಶವನ್ನೇ ಆತ ಮರೆತಂತಿತ್ತು.

ಇನ್ನೂ ವಿಷಾದ ಸಂಗತಿಯೆಂದರೆ ಕೋರ್ಟಿನ ಕಲಾಪಗಳಲ್ಲೂ ಆತ ಮೊನಚನ್ನು ಕಳೆದುಕೊಂಡಿದ್ದ. ಮೊದಲು ತನ್ನ ಅದ್ಭುತ ವಾಗ್ಜ್ಹರಿಯಿಂದ ಮೊಕದ್ದಮೆಗಳ ಅಂತಿಮ ವಾದ -ಮಂಡನೆಯಲ್ಲಿ ಸಮಸ್ತ ಪ್ರೇಕ್ಷಕರನ್ನು ದಂಗುಬಡಿಸುತ್ತಿದ್ದ ಜೂಲಿಯನ್ . ಕ್ರಮೇಣ ಮೊಕದ್ದಮೆಗೆ ಸಂಬಂಧವೇ ಇಲ್ಲದ ಯಾವಾವುದೋ ವಿಷಯಗಳ ಬಗ್ಗೆ ಉದ್ದುದ ಮಾತಾಡುತ್ತ ಬೋರ್ ಹೊಡೆಸಲಾರಮ್ಭಿಸಿದ. ಪ್ರತಿವಾದಿಯ ಆಕ್ಷೇಪಗಳಿಗೆ ಜಾಣ್ಮೆಯಿಂದ ಉತ್ತರಿಸುತ್ತಿದ್ದವನೆ ಈಗ ವ್ಯಂಗ್ಯ . ವಕ್ತ್ರೋಕ್ತಿಗಳನ್ನಾಡಿ ತನ್ನ ಬಗ್ಗೆ ತುಂಬು ಅಭಿಮಾನವಿರಿಕೊಂಡಿದ್ದ ನ್ಯಾಯಾಧೀಶರಿಗೆ ಬೇಸರಬರಿಸ ತೊಡಗಿದ . ಒಂದೇ ಮಾತಿನಲ್ಲಿ ಹೇಳುವುದಾದರೆ ಅವನ ಬದುಕಿನ ಬೆಳಕೇ ಸೊರಗಲಾರಮ್ಭಿಸಿದಂತೆ ಕಾಣುತ್ತಿತ್ತು.

ದುರಂತದೆಡೆಗೆ ಸಾಗುವನ್ತಿದ್ದ ಅವನ ಈ ದುಸ್ಥಿತಿಗೆ ಅತಿವೇಗದ ಜೀವನಶೈಲಿಯೊಂದೆ ಕಾರಣವಾಗಿರಲಿಲ್ಲ. ಅವನ ನಿಜವಾದ ಸಮಸ್ಯೆ ಆಧ್ಯಾತ್ಮಿಕ ಸಮಸ್ಯೆಯಾಗಿತ್ತು ಎಂದು ನನ್ನ ಭಾವನೆ. ಆತ ಆಗಾಗ ತಾನು ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿ ಹೊರಟುಹೋಗಿದೆ. ಯಾವುದೋ ಒಂದು ಆಂತರಿಕ ಶೂನ್ಯತೆ ನಾನ್ನನ್ನು ಕಾಡುತ್ತಿದೆ ಎಂದು ಗೊಣಗುತ್ತಿದ್ದ. "ನಾನು ಆರಂಭದಲ್ಲಿ , ನಮ್ಮ ಕುಟುಂಬದ ಒತ್ತಾಯದ ಕಾರಣ ವಕೀಲಿವೃತ್ತಿಗೆ ಸೇರಿದರೂ, ನಾನು ಅದನ್ನು ಗಾಢವಾಗಿ ಪ್ರೀತಿಸುತ್ತಿದ್ದೆ. ಕಾನೂನಿನ ಸೂಕ್ಷ್ಮಗಳು , ಭೌದ್ಧಿಕ ಸವಾಲುಗಳು ನನ್ನನ್ನು ಮಂತ್ರಮುಗ್ಧಗೊಳಿಸಿದವು. ಸಮಾಜವನ್ನೇ ಪರಿವರ್ತಿಸಬಲ್ಲ ಕಾನೂನಿನ ಅಗಾಧಶಕ್ತಿ ನನಗೆ ಅಪಾರ ಪ್ರೇರಣೆ ನೀಡಿತ್ತು. ಆಗ ನಾನು ಕನೆಕ್ವಿ ಕಟ್ ನಗರದ ಶ್ರೀಮಂತ ಯುವಕನಾಗಿದ್ದೆ. ಸಮರ್ಥ ವಕೀಲನಾಗಿ ನನ್ನ ಪ್ರತಿಭೆಯನ್ನು ಸೂಕ್ತವಾಗಿ ಬೆಳೆಸಿಕೊಂಡು ಸಮಾಜದ ಪ್ರಗತಿಗೆ ಕಾರಣವಾಗಬಲ್ಲೆ. ಅನ್ಯರಿಗೆ ಉಪಕಾರ ಮಾಡಬಲ್ಲೆ ಎಂದು ಭಾವಿಸಿದ್ದೆ. ಈ ಮಹತ್ವಾಕಾಂಕ್ಷೆ ನನ್ನ ಬದುಕಿಗೆ ವಿಶಿಷ್ಟ ಅರ್ಥ ನೀಡಿತ್ತು . ಧ್ಯೇಯವನ್ನೂ . ಶಕ್ತಿಯನ್ನೂ ನೀಡಿತ್ತು." ಎಂದು ಹೇಳುತ್ತಿದ್ದ.

ಆದರೂ ಅವನ ಜೀವನದಲ್ಲಿ ಯಾವುದೋ ಒಂದು ನಿಗೂಢ ದುರಂತ ಸಂಭವಿಸಿತ್ತೆಂದು ನನಗೆ ಗೊತ್ತು. ಅದರ ನಿಶ್ಚಿತ ಸ್ವರೂಪವೇನೆಂದು ಎಷ್ಟು ಪ್ರಯತ್ನಿಸಿದರೂ ತಿಳಿದುಕೊಳ್ಳಲಾಗಲಿಲ್ಲ. ಅವನ ಅಪ್ತಮಿತ್ರರಲ್ಲೋಬ್ಬರಾದ ಹಾಡ್ರಿಂಜ್ ಹರಕುಬಾಯಿಯವನೆಂದೇ ಪ್ರಸಿದ್ಧನಾದರೂ , ಆತನೂ ಈ ವಿಷಯದಲ್ಲಿ ಬಾಯಿ ಬಿಟ್ಟಿರಲಿಲ್ಲ . " ಆ ವಿಷಯದಲ್ಲಿ ನಾನು ಗೌಪ್ಯತೆಯ ಪ್ರತಿಜ್ಞೆ ಮಾಡಿದ್ದೇನೆ "ಎಂದು ಹೇಳುತ್ತಿದ್ದ. ಅದೇನೇ ಇರಲಿ . ಜೂಲಿಯನ್ನನ ಈಗಿನ ದುಸ್ಥಿತಿಗೆ ಅದರ ಕೊಡುಗೆಯೂ ಸಾಕಷ್ಟಿರಬೇಕೆಂದು ನನ್ನ ಮನಸ್ಸು ಹೇಳುತ್ತಿತ್ತು. ಒಟ್ಟಾರೆಯಾಗಿ ನನ್ನ ಈ ಗುರು ಹಾಗೂ ಮಿತ್ರನ ಇಂದಿನ ಸ್ಥಿತಿಯ ಬಗ್ಗೆ ನಾನು ಚಿಂತಿತನಾಗಿದ್ದೆ. ಆತನಿಗೆ ಏನಾದರೂ ಸಹಾಯ ಮಾಡಬೇಕೆಂದು ಯೋಚಿಸುತ್ತಿದ್ದೆ.

ಅಷ್ಟರಲ್ಲಿ ಈ ದುರ್ಘಟನೆ ನಡೆದುಹೋಗಿತ್ತು. ಭಾರೀ ಹೃದಯಾಘಾತ ಅವನನ್ನು ನೆಲಕ್ಕುರಳಿಸಿತ್ತು.
ಯಾವ ನ್ಯಾಯಾಲಯದ ಸಭಾಭವನದಲ್ಲಿ "ಕೊಲೆ ಮೊಕದ್ದಮೆಗಳ ರಾಜ " ಎನಿಸಿದ ಮೊಕದ್ದಮೆಯನ್ನು ಗೆದ್ದು ವಿಜ್ರಂಭಿಸಿದ್ದನೋ , ಅದೇ ಸ್ಥಳ ಅವನ ಪಾಲಿಗೆ ಬದುಕಿನ ನಶ್ವರತೆಯ ಸ್ಪರ್ಶವನ್ನು ನೀಡಿತ್ತು.


ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.buildingonabudget.com/

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ