MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಅಕ್ಟೋಬರ್ 13, 2010

ಸುಳ್ಳು ಹೇಳಿದ್ದಕ್ಕೆ ಸುಳ್ಳು ಹೇಳಿದವನೇ ಜೀವನ ಪೂರ್ತಿ ತೆತ್ತುಕೊಂಡ ದಂಡ !

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನನ್ನ ಸ್ನೇಹಿತರಿಗೆ ನೆಟ್ ವರ್ಕ್ ಮಾರ್ಕೆಟಿಂಗ್ ನ ಜತೆಗೆ ಸ್ವಲ್ಪ ಬೇರೆ ಏನಾದರೂ ವಿಜಯದಶಮಿ ಸ್ಪೆಷಲ್ ಕೊಡೋಣ ಅಂತ ಸ್ವಲ್ಪ ವಿಷಯವನ್ನು ಬದಲಾಯಿಸುತ್ತೇನೆ.


ಒಬ್ಬ ಸಾಧಾರಣ ಯುವಕ ಸ್ವರದ್ರೂಪಿ ಯುವತಿಯನ್ನು ಒಂದು ದೊಡ್ಡ ಕಾರ್ಯಕ್ರಮದಲ್ಲಿ ಭೇಟಿಯಾದ. ಎಲ್ಲರ ಕಣ್ಣೂ ಆಕೆಯ ಮೇಲಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಆಟ ಧೈರ್ಯಮಾಡಿ ಆಕೆಯನ್ನು ನಿಮ್ಮೊಂದಿಗೆ ಕಾಫಿ ಕುಡಿಯಬಹುದೇ ಎಂದ. ಆಕೆ ಅರೆಮನಸ್ಸಿನ್ನಿಂದ ಒಪ್ಪಿದಳು. ತಕ್ಷಣ ಪರಿಚಾರಕನೊಬ್ಬನನ್ನು ಕಾಫಿ ತರಲು ಹೇಳಿದ. ಆತನಿಗೆ " ಏನೋ ಒಂಥರಾ " ರೋಮಾಂಚನ ಕಾಫಿ ತಂದ ಪರಿಚಾರಕನಿಗೆ " ನನ್ನ ಕಾಫಿಗೆ ಸ್ವಲ್ಪ ಉಪ್ಪು ಕೊಡಿ " ಎಂದ. ಉಪ್ಪು ಬಂತು ಕಾಫಿಗೆ ಬೆರಸಿ ಕುಡಿದ. ಎಲ್ಲರೂ ಈ ವಿಚಿತ್ರವನ್ನು ಗಮನಿಸುತ್ತಿದ್ದರು. ಆಕೆ ಮೆಲ್ಲನೆ "ಕಾಪಿಗೇಕೆ ಉಪ್ಪು ಹಾಕಿಕೊಂಡಿರಿ?" ಎಂದಾಗ ಆತ "ನಮ್ಮ ಊರು ಸಮುದ್ರದ ಪಕ್ಕದಲ್ಲಿದೆ . ನಾವೆಲ್ಲ ಸಮುದ್ರದತೀರದಲ್ಲೇ ಆಡುತ್ತಾ ಬೆದೆದವರು. ನಮ್ಮೂರಿನ ನೀರು ಸ್ವಲ್ಪ ಉಪ್ಪು ಉಪ್ಪಾಗಿರುತ್ತದೆ. ಉಪ್ಪು ಕಾಫಿ ಕುಡಿದಾಗ ನಮ್ಮ ಊರಿನದ್ದೆ ನೆನಪು , ನೀವೆಷ್ಟು ಒಳ್ಳೆಯವರು. ನೀವು ನಮ್ಮೂರಿನ ಹೆಣ್ಣು ಮಕ್ಕಳಂತೆ ಲಕ್ಷಣವಾಗಿದ್ದೀರಿ . ನಮ್ಮನ್ನು ನೋಡಿದಾಕ್ಷಣ ನಮ್ಮೂರಿನ ನೆನಪಾಯಿತು. " ಎಂದು ಏನೇನೋ ಮಾತನಾಡಿಬಿಟ್ಟ. ಆಕೆಗೆ ಕುತೂಹಲ ಉಂಟಾಯಿತು. ಆಕೆಯೂ ಮಾತನ್ನು ಪ್ರಾರಂಭಿಸಿದಳು . ತನ್ನ ಊರಿನ ಬಗ್ಗೆ ಹೇಳಿಕೊಂಡಳು. ಹೀಗೆ ಅವರಿಬ್ಬರೂ ಮಾತನಾಡಿ ಕೊಳ್ಳುತ್ತಲೇ ಇದ್ದರು. ಕಾರ್ಯಕ್ರಮ ಮುಗಿದ ನಂತರವೂ ಅವರು ಆಗಿಂದಾಗ್ಗೆ ಭೇಟಿಯಾಗುತ್ತಿದ್ದರು. ಭೇಟಿಯಾದಾಗಲೆಲ್ಲ ಈತ ಉಪ್ಪು ಕಾಫಿಯನ್ನೇ ಕುಡಿಯುತ್ತಿದ್ದ ಕೊನೆಗೆ ಪರಸ್ಪರ ಪ್ರೀತಿಸಿದರು. ಮದುವೆಯಾದರು. ಮನೆ ಕಟ್ಟಿಕೊಂಡರು . ಮಕ್ಕಳಾಯಿತು. ಸುಖಸಂಸಾರ ನಡೆಸಿದರು. ಆತ ಮಾತ್ರ ಜೀವಮಾನವಿಡೀ ಉಪ್ಪುಕಾಫಿಯನ್ನೇ ಕುಡಿಯುತ್ತಿದ್ದ ಸುಮಾರು ನಲವತ್ತು ವರ್ಷಗಳ ಸಹಜೀವನದ ನಂತರ ಆತ ತೀರಿಕೊಂಡ . ಆತನ ಆಸ್ತಿಪಾಸ್ತಿ ಕಾಗದ ಪತ್ರಗಳ ಜತೆಯಲ್ಲಿ ಪತ್ನಿಯ ಹೆಸರಿಗೆ ಒಂದು ಪತ್ರವಿತ್ತು. ಅದರಲ್ಲಿ ಹೀಗೆ ಬರೆದಿತ್ತು.

"ಪ್ರೀತಿಯ ಹುಡುಗಿ, ನಾವು ಪ್ರೀತಿಸಿ ಮದುವೆಯಾದವರು. ಮದುವೆಯಾಗಿಯೂ ಪ್ರೀತಿಸಿದವರು . ನಾನೀಗ ನಿನ್ನಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಏಕೆಂದರೆ ನಾನು ನಿನಗೆ ಒಂದೇ ಒಂದು ಸುಳ್ಳನ್ನು ಹೇಳಿದ್ದೇನೆ . ಆ ಸುಳ್ಳು ಯಾವುದು ಗೊತ್ತಾ ? ನಮ್ಮ ಮೊದಲ ಭೇಟಿಯ ನೆನಪಿದೆಯಾ ? ಕಾಫಿ ಕುಡಿಯಲು ನೀನು ಒಪ್ಪಿಕೊಂಡಾಗ ನನಗೆ ಏನೋ ಒಂಥರಾ ಆಗಿಹೋಯಿತು.. ಏನು ಮಾತನಾಡಬೇಕೆಂದು ಗೊತ್ತಾಗುತ್ತಿರಲಿಲ್ಲ.

ನಾನು ಸಕ್ಕರೆಯ ಬದಲು ಉಪ್ಪು ಕೇಳಿಬಿಟ್ಟೆ. ಉಪ್ಪು ಕಾಫಿ ಕುಡಿದೆ. ನಿನಗೆ ಸಮುದ್ರದ ಪಕ್ಕದೂರು . ಉಪ್ಪುನೀರು ಎಂದೇನೇನೋ ಸುಳ್ಳು ಹೇಳಿಬಿಟ್ಟೆ. ಅಲ್ಲಿಂದಾಚೆ ನಾವು ಪ್ರೀತಿಸಿದೆವು. ಮದುವೆಯೂ ಆದೆವು. ಚೆನ್ನಾಗಿ ಬಾಳಿದೆವು. ನಾನೀಗ ನಿಜ ಹೇಳುತ್ತಿದ್ದೇನೆ! ನನಗೆ ಉಪ್ಪು ಕಾಫಿ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಆದರೂ ಜೀವಮಾನವಿಡೀ ಉಪ್ಪು ಕಾಫಿಯನ್ನೇ ಕುಡಿದೆ. ಆದರೆ ನಿನ್ನಿಂದಾಗಿ ನನ್ನ ಬಾಳೆಲ್ಲ ಸಿಹಿಯಾಗಿಯೇ ಕಳೆಯಿತು. ನೀನು ಸುರಿಸಿದ ಪ್ರೀತಿಯ ಮಳೆಗಾಗಿ ಧನ್ಯವಾದಗಳು . ಪುನರ್ಜನ್ಮ ವೆಮ್ಬುದಿದ್ದರೆ ಮತ್ತೆ ನಾನು ನಿನ್ನೊಂದಿಗೆ ಬಾಳಲು ಬಯಸುತ್ತೇನೆ. ಉಪ್ಪು ಕಾಪಿಯನ್ನೇ ಕುಡಿಯುತ್ತೇನೆ. ! ಇತಿ ನಿನ್ನ ಪ್ರೀತಿಯ ಪತಿ "

ಪತ್ರವನ್ನೋದುತ್ತ ಆಕೆಗೆ ಕಣ್ಣೀರು ತಡೆಯಲಾಗಲಿಲ್ಲ. ಅಲ್ಲಿಗೆ ಬಂದ ಸೊಸೆ ಆಕೆಯನ್ನು ಸಮಾಧಾನಪಡಿಸಿ ಕಾಫಿ ತಂದು ಕೊಡಲೇ ಎಂದಾಗ ಆಕೆ ಉಪ್ಪು ಕಾಫಿ ತಂದು ಕೊಡೆಂದು ಹೇಳಿದಳು !

ಬದುಕನ್ನು ಸಿಹಿಯಾಗಿಸುವುದು ಸಕ್ಕರೆಯೋ, ಉಪ್ಪೋ ಅಥವಾ ಪ್ರೀತಿಯೋ , ಸುಳ್ಳೋ , ನಿಜವೋ ? ಅದು ನಿಮ್ಮ ಆಯ್ಕೆ ಗೆ ಬಿಟ್ಟಿದ್ದು.


ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ