MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಅಕ್ಟೋಬರ್ 30, 2010

ಕಥೆ ಕೇಳುವುದರಿಂದ ಪ್ರಯೋಜನವೇನು ?

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಮ್ಮೆ ಒಬ್ಬ ಶಿಷ್ಯ ರೊಬ್ಬರು ತಮ್ಮ ಗುರುಗಳನ್ನು "ನೀತಿಬೋಧಕ ಕತೆಗಳನ್ನು ಕೇಳಿದಾಕ್ಷಣ ನಾವು ನೀತಿವನ್ತರಾಗಿ ಬಿಡುತ್ತೇವೆಯೇ ? ಪ್ರೇರೇಪ- ಣಾ ಘಟನೆಗಳನ್ನು ಓದಿದ ತಕ್ಷಣ ನಾವು ಪ್ರೇರೆಪಿತರಾಗುತ್ತೆವೆಯೇ ?" ಎಂದು ಪ್ರಶ್ನಿಸಿದರು.

ಅದಕ್ಕೆ ಗುರುಗಳು ಈ ರೀತಿ ಉತ್ತರ ಕೊಟ್ಟರು ; ನಾವು ರಾತ್ರಿ ಟಿ.ವಿ .ಯಲ್ಲಿ ಯಾವುದೋ ಟೂತ್ ಪೇಸ್ಟಿನ ಜಾಹೀರಾತು ನೋಡುತ್ತೇವೆ. ಆ ರಾತ್ರಿಯಲ್ಲಿ ಎದ್ದು ಅಂಗಡಿಗೆ ಹೋಗಿ ಆ ಟೂತ್ ಪೇಸ್ಟನ್ನು ಕೊಂಡು ತರುವುದಿಲ್ಲ. ಆದರೆ ಮುಂದೆ ಯಾವಾಗಲೋ ಅಂಗಡಿಗೆ ಹೋದಾಗ ಜಾಹೀರಾತು ನಮಗೆ ನೆನಪಾಗುತ್ತದೆ. ಆ ಟೂತ್ ಪೇಸ್ಟನ್ನು ಕೇಳಿ ಕೊಳ್ಳುತ್ತೇವೆ. ಹಾಗೆಯೇ ನೀತಿಬೋಧಕ ಕತೆಗಳು . ಅಂತಹ ಸಂದರ್ಭ ಬದುಕಿನಲ್ಲಿ ಎದುರಾದಾಗ ನೀತಿಮಾತಿನಂತೆ ನಡೆಯಲು ಸಾಧ್ಯವೇ ಎಂದು ಪರಿಶೀಲಿಸುತ್ತೇವೆ . ಅಷ್ಟರ ಮಟ್ಟಿಗೆ ನೀತಿಬೋಧಕ ಕತೆಗಳು ನಮಗೆ ಸಹಾಯ ಮಾಡುತ್ತವೆ." ಎಂದು ಉತ್ತರಿಸಿ ಒಂದು ಕಥೆಯನ್ನು ಪ್ರಾರಂಭಿಸಿದರು.
ಒಬ್ಬ ಕಳ್ಳ ಎಂದಿನಂತೆ ಕಳ್ಳತನ ಮಾಡಲು ಹೋಗುತ್ತಿದ್ದಾಗ ಒಂದು ದೇವಸ್ಥಾನದ ಮುಂದೆ ನಡೆದು ಹೋಗಬೇಕಾಗಿ ಬಂತು. ದೇವಸ್ಥಾನದಲ್ಲಿ ದೇವಿಭಾಗವತದ ಪ್ರವಚನ ನಡೆಯುತ್ತಿತ್ತು. ಅದನ್ನು ಕೇಳಲಿಚ್ಚಿಸದ ಕಳ್ಳ ತನ್ನ ಎರಡೂ ಕಿವಿಗಳನ್ನು ಮುಚ್ಚಿಕೊಂಡ. ಆದರೆ ಆಕಸ್ಮಿಕವಾಗಿ ಎಡವಿಬಿದ್ದ . ಏಳುವಾಗ ಕಿವಿಯನ್ನು ಮುಚ್ಚಿದ್ದ ಕೈಗಳು ತೆರೆದುಕೊಂಡವು. ಪ್ರವಚನಕಾರರು ಹೇಳುತ್ತಿದ್ದ "ದೇವಿ ನಡೆಯುವಾಗ ಆಕೆಯ ನೆರಳು ನೆಲದ ಮೇಲೆ ಬೀಳುವುದಿಲ್ಲ " ಎಂಬ ಮಾತುಗಳು ಕಿವಿಗೆ ಬಿದ್ದವು. ಆತ ಮುಂದೆ ಹೋದ. ಅಂದು ರಾತ್ರಿ ರಾಜನ ತಿಜೋರಿಗೆ ಕನ್ನ ಹಾಕಿ ಭರ್ಜರಿ ಕಳ್ಳತನ ಮಾಡಿದ. ರಾಜನಿಗೆ ತನ್ನ ತಿಜೋರಿಯೇ ಕಳ್ಳತನ ಮಾಡದ್ದು ಬಹಳ ಸಿಟ್ಟನ್ನು ಉಂಟುಮಾಡಿತು. ಕಳ್ಳನನ್ನು ಹಿಡಿಯಲು ಎಲ್ಲೆಡೆ ಗೂಢಚಾರರನ್ನು ಬಿಟ್ಟ . ಕಳ್ಳರು ಸ್ತ್ರೀ ದೇವತೆಗಳಿಗೆ ಹೆದರುತ್ತಾರೆಂದು ಯಾರೋ ಹೇಳಿದರು. ಅವರು ಒಬ್ಬ ಯುವತಿಗೆ ದೇವಿಯ ವೇಷ ತೊಡಿಸಿ ಕಳ್ಳರ ಪಾಳೆಯದಲ್ಲಿ ಸುತ್ತಾಡಿ ವಿಷಯ ಸಂಗ್ರಹಿಸಲು ಕಳುಹಿಸಿದರು. ಆ ವೇಷಧಾರಿ ಸ್ತ್ರೀ ಬಂದಾಗ ಸಾಕ್ಷಾತ್ ದೆವೆಯೇ ಬಂದಂತೆ ಭಾಸವಾಗುತ್ತಿತ್ತು. ಕಳ್ಳರಿಗೆಲ್ಲ ಅಂಜಿಕೆಯಾಗುತ್ತಿತ್ತು . ಆದರೆ ನಿಜವಾದ ಕಳ್ಳನಿಗೆ "ದೇವಿ ನಡೆಯುವಾಗ ಆಕೆಯ ನೆರಳು ನೆಲದ ಮೇಲೆ ಬೀಳುವುದಿಲ್ಲ."ಎಂಬ ಪ್ರವಚನದ ಮಾತು ನೆನಪಿಗೆ ಬಂತು. ಆತ ಒಂದು ಬೆಳಕಿನ ದೀವಟಿಗೆ ತರಿಸಿದ. ದೇವಿ ಪಾತ್ರದಾರಿಗೆ ನಮಸ್ಕರಿಸಿದ. ದೀವಟಿಗೆಯ ಬೆಳಕಿನಲ್ಲಿ ದೇವಿಯ ನೆರಳು ನೆಲದ ಮೇಲೆ ಬೀಳುವುದನ್ನು ಗಮನಿಸಿದ. ಆಕೆ ನಿಜವಾದ ದೇವಿ ಅಲ್ಲವೆಂದು ಆತನಿಗೆ ಭರವಸೆಯಾಯಿತು . ದೇವಿಯ ಭೇಟಿ ವಿಫಲವಾಯಿತು . ಆತ ನಿರಾತಂಕವಾಗಿದ್ದ . ಗೂಧಚಾರರ ಕೈಯಲ್ಲಿ ಸಿಕ್ಕಿಹಾಕಿಕೊಳ್ಳದೆ ಉಳಿದುಕೊಂಡ.

ಇದಾದ ನಂತರ ಕಳ್ಳ ತೀವ್ರ ಚಿಂತನೆಗೊಳಗಾದ . ದೇವಿ ಪ್ರವಚನದ ಒಂದೇ ಒಂದು ವಾಕ್ಯ ಕೇಳಿ ತಾನು ಕಷ್ಟದಿಂದ ಪಾರಾದೆ. ಸಂಪೂರ್ಣವಾಗಿ ಕೇಳಿದರೆ ಏನಾಗಬಹುದು ಎಂದು ಯೋಚಿಸಿದ. ಅಂದಿನಿಂದಲೇ ಪ್ರತಿನಿತ್ಯ ಪ್ರವಚನ ಕೇಳಲು ಹೋಗತೊಡಗಿದ. ನಿಧಾನವಾಗಿ ತನ್ನ ಬದುಕಿನ ಶೈಲಿಯನ್ನು ಬದಲಿಸಿಕೊಂಡು ಸಭ್ಯ ಜೀವನ ರೂಢಿಸಿಕೊಂಡ.

ನೀವು ಕೂಡ ಕಥೆಗಳನ್ನು ಕೇಳುವುದರಿಂದ ಮನ ಪರಿವರ್ತನೆ ಆಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೀರಿ ತಾನೇ.

ಸಮಸ್ತ ಓದುಗರಿಗೂ ಸನ್ ನ್ಯಾಚುರಲ್ ಪ್ಲಾಶ್ ಹಾಗೂ ನೆಟ್ ನಾಗ ಬಳಗದವರಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು


ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com
.................................................................................................................................

ಹಿಂದೂ ಕುಲಾಲ್ ಅಥವಾ ಹಿಂದೂ ಕುಂಬಾರ ಸಂಘ ಇವರು ತಮ್ಮದೇ ಜಾತಿಗೆ ಸೇರಿದ ವಧು-ವರರ ಅನ್ವೇಷಣೆಗೆ ಸಹಾಯ ಮಾಡುತ್ತಿದ್ದಾರೆ. ಆಸಕ್ತರು kulalasangha@yahoo.co.in ಅಥವಾ
lalithsalian@yahoo.com ಅಥವಾ http://www.kulalasangha.com/ ಇಲ್ಲಿ ಪಡೆದುಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಳಾಸದವರನ್ನು ಸಂಪರ್ಕಿಸಬಹುದು
...........................................................................................................
Kulala Samaja Bangalore (R)
C/o. Chandra Printers
7, 1st Floor, G.G. Lane,
Nagarthpet Cross,
Bangalore - 560 002.
Ph.: 22224924

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ