ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!
ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಒಬ್ಬ ರಾಜ ಒಂದು ರಾತ್ರಿ ರಸ್ತೆಯೊಂದರಲ್ಲಿ ಒಂದು ದೊಡ್ಡ ಬಂಡೆಕಲ್ಲನ್ನು ಹಾಕಿಸಿದ. ರಸ್ತೆಯ ಬಹುಪಾಲನ್ನು ಬಂಡೆ ಆವರಿಸಿಕೊಂಡಿತ್ತು . ತನ್ನ ಪ್ರಜೆಗಳು ಏನು ಮಾಡುತ್ತಾರೋ ನೋಡೋಣವೆಂದು ಮುಂಜಾನೆ ಆಟ ಮರೆಯಲ್ಲಿ ಅಡಗಿ ಕುಳಿತ. ಕೆಲವರು ಬಂದು ಬಂಡೆಕಲ್ಲನ್ನು ನೋಡಿ ಅದನ್ನು ಬೈದರು. ಬಂಡೆಯ ಪಕ್ಕದಲ್ಲಿದ್ದ ಕಿರಿದಾದ ಸ್ಥಳದಲ್ಲಿ ನುಸುಳಿಕೊಂಡು ಹೋದರು. ಮತ್ತೆ ಕೆಲವರು ಬಂದು ಸರಕಾರವನ್ನು ಸರಿಯಾಗಿ ಬೈದರು. ಬೇರೆ ದೇಶಗಳಲ್ಲಿ ಹೀಗಾಗುವುದಿಲ್ಲವೆನ್ದರು . ನಂತರ ಬೇರೆ ದಾರಿ ಹಿಡಿದು ಹೊರಟುಹೋದರು. ಇನ್ನು ಕೆಲವರು ತಮ್ಮ ಗ್ರಹಚಾರವನ್ನು ದೂಷಿಸಿದರು. ಇದೊಂದು ಅಪಶಕುನವೆಂದು ಪ್ರಯಾಣವನ್ನೇ ರದ್ದುಮಾಡಿ ಮನೆಗೆ ಹಿಂತಿರುಗಿದರು. ಕೆಲಸವಿಲ್ಲದ ಜನ ಗುಂಪುಗುಂಪಾಗಿ ಅಲ್ಲಿ ಸೇರಿದರು. ಒಂದಿಬ್ಬರು ನಮ್ಮ ಕಾಲದಲ್ಲಿ ಹೀಗೆಲ್ಲ ಆಗುತ್ತಿರಲಿಲ್ಲ. ಈಗ ಕಾಲ ಕೆಟ್ಟಿದೆ ಎಂದು ನೆರೆದ ಜನಕ್ಕೆ ಉಪದೇಶಿಸಿದರು . ಮಧ್ಯಾಹ್ನವಾಗುತ್ತಿದ್ದಂತೆ ಜನಜಂಗುಳಿ ನಿಧಾನವಾಗಿ ಕರಗುತ್ತಾ ಹೋಯಿತು. ರಾಜ ಮರೆಯಲ್ಲೇ ಕುಳಿತ್ತಿದ್ದ. ಆತನಿಗೆ ತನ್ನ ಪ್ರಜೆಗಳ ವರ್ತನೆಯ ಬಗ್ಗೆ ನಿರಾಸೆಯಾಯಿತು . ಆತನೂ ಹೊರಟು ಹೋಗೋಣವೆಂದು ಯೋಚಿಸುತ್ತಿದ್ದ.
ಅಷ್ಟರಲ್ಲಿ ಅಲ್ಲಿಗೊಬ್ಬ ರೈತ ತನ್ನ ಎತ್ತಿನ ಗಾಡಿಯಲ್ಲಿ ಬಂದ. ಬಂಡೆಯನ್ನು ನೋಡಿದ . ಸ್ವಲ್ಪ ಹೊತ್ತು ಯೋಚಿಸಿದ. ಗಾಡಿಯಿಂದ ಕೆಳಗಿಳಿದು ಬಂದ. ಕೈಗಳಿಂದ ಬಂಡೆಯನ್ನು ಸರಿಸಲು ಯತ್ನಿಸಿದ. ಸಾಧ್ಯವಾಗಲಿಲ್ಲ. ಸುತ್ತಮುತ್ತಲಿದ್ದ ಒಂದಿಬ್ಬರನ್ನು ಸಹಾಯಕ್ಕೆ ಕರೆದ. ಅವರು ಇದು ನಮ್ಮ ಕೆಲಸವಲ್ಲ. ಸರಕಾರ ಮಾಡಬೇಕಾದ ಕೆಲಸವೆಂದು ಅಲ್ಲಿಂದ ಜಾಗ ಖಾಲಿ ಮಾಡಿದರು. ಯಾರೋ ಒಂದಿಬ್ಬರು ಸಹಾಯ ಮಾಡಲು ಮುಂದೆ ಬಂದರು. ಗಾಡಿಯಿಂದ ರೈತ ದಪ್ಪನೆಯ ಹಗ್ಗವನ್ನು ತಂದ. ಬಡೆಯ ಸುತ್ತಲೂ ಅದನ್ನು ಕಟ್ಟಿದ. ಎತ್ತುಗಳನ್ನೂ ಕಟ್ಟಿದ. ಸಹಾಯ ಮಾಡುತ್ತಿದ್ದವರ ಬೆಂಬಲದಿಂದ ಬಂಡೆಕಲ್ಲನ್ನು ನಿಧಾನವಾಗಿ ಸರಿಸಲು ಮೊದಲು ಮಾಡಿದ. ಬಡಪೆಟ್ಟಿಗೆ ಬಂದೆ ಜಗ್ಗಲಿಲ್ಲ. ಆದರೆ ಇವರು ಪ್ರಯತ್ನ ಬಿಡಲಿಲ್ಲ.
ಅರ್ಧ ಗಂಟೆಯ ಪರಿಶ್ರಮದ ನಂತರ ಅವರು ಬಂಡೆಯನ್ನು ಪಕ್ಕಕ್ಕೆ ಸರಿಸುವುದರಲ್ಲಿ ಯಶಸ್ವಿಯಾದರು. ಎಲ್ಲಕ್ಕಿಂತ ಆಶ್ಚರ್ಯ ವೆಂದರೆ ಬಂಡೆಯ ಕೆಳಗೆ ಒಂದು ಹಣದ ಥೈಲಿಯಿತ್ತು. ಅದರಲ್ಲಿ ಸಾವಿರ ವರಹಗಳಿದ್ದವು. ಹಣ ದೊರಕಿದ ಸುದ್ದಿ ಕೇಳಿ ನೂರಾರು ಜನ ಸೇರಿದರು. ಕೆಲವರು ಆ ಹಣ ನಮ್ಮ ಊರಿನ ಬಳಿ ಸಿಕ್ಕಿರುವುದರಿಂದ ಇದು ನಮಗೆ ಸೇರಿದ್ದೆನ್ದರು. ಎಲ್ಲರಿಗೂ ಹಂಚಬೇಕೆನ್ದರು. ಇನ್ನು ಕೆಲವರು ರೈತನಿಗೂ ಒಂದೆರಡು ವರಹಗಳನ್ನು ಕೊಟ್ಟು ಕಳಿಸಬಹುದೆನ್ದರು. ಚರ್ಚೆ ವಾಗ್ವಾದಗಳು ಜೋರುಜೋರಾಗಿ ನಡೆದವು. ಆಗ ರಾಜ ಮರೆಯಿಂದ ಹೊರಬಂದು ಎಲ್ಲರಿಗೂ ಕಾಣಿಸಿಕೊಂಡು ಆ ಬಂಡೆಕಲ್ಲನ್ನು ಇಡಿಸಿದವನು ತಾನೇ ಎಂದು , ತನ್ನ ಪ್ರಜೆಗಳು ಇಂತಹ ಸಂದರ್ಭಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ತಿಳಿಯಲು ಇದೆಲ್ಲ ಮಾಡಿಸಿದನೆಂದೂ ಹೇಳಿ ಥೈಲಿಯಲ್ಲಿದ್ದ ಸಾವಿರ ವರಹಗಳಲ್ಲಿ ರೈತನಿಗೆ ಐನೂರು ವರಹಗಳನ್ನು ಉಳಿದ ಹಣವನ್ನು ಸಹಾಯ ಮಾಡಿದವರಿಗೆ ಮಾತ್ರ ಹಂಚಿ ಹೊರಟು ಹೋದನು.
ಜನರೆಲ್ಲ ರಾಜನಿಗೆ ಜೈಕಾರ ಹಾಕಿದರು. ರೈತನ ಹಣ ಪಡೆದವರ ಅದೃಷ್ಟವನ್ನು ಹೊಗಳಿದರು. ರೈತ ತನ್ನ ಪ್ರಯಾಣವನ್ನು ಮುಂದುವರಿಸಿದ.
ಬದುಕಿನ ಹಾದಿಯಲ್ಲಿ ಎದುರಾಗುವ ಬಂಡೆಕಲ್ಲುಗಳ ಹಿಂದೆ ಪಾರಿತೋಷಕ ಗಳೇ ಹುದುಗಿರಬಹುದು . ಬಂಡೆಕಲ್ಲನ್ನೂ ನಮ್ಮ ಅದೃಷ್ಟವನ್ನೂ ಅದನ್ನು ಹಾಕಿದವರನ್ನೂ ದೂಷಿಸುತ್ತ ಕೂಡುವ ಬದಲು ಅದನ್ನು ಸರಿಸಲೆತ್ನಿಸಿದರೆ ನಾವೂ ಪಾರಿತೋಷಕವನ್ನು ಪಡೆಯಬಹುದು.
ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.freeppcleads.com/
http://sunnaturalflash.freeppcleads.com/letter.php
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com
.................................................................................................................
ನನಗೆ ನನ್ನ ಮಿತ್ರ ಮಂಜುನಾಥ ಎನ್ನುವ ಶಿವಮೊಗ್ಗ ಜಿಲ್ಲೆಯ ಕೊಟೆಕೊಪ್ಪ ದಿಂದ ಒಂದು ಮೇಲ್ ಕಳುಹಿಸಿದ್ದಾರೆ. ಅದು ಈ ರೀತಿ ಇದೆ
"ಪುಟ್ಟುಗೊಸಿ ಹೆಣ್ಣಿನ ಶರೀರ ಎಂಥ ವ್ಯಕ್ತಿಯನ್ನು ಬೇಕಾದರೂ ಎಡವಿಬೀಳಿಸಬಹುದು. ಜೋಕೆ ಎಂದು ಎಲ್ಲರಿಗೂ ಹೇಳು "
................................................................................................................
ಬದುಕಿನಲ್ಲಿ ಸತ್ತವರನ್ನು ಬದುಕಿಸಲು ಏನು ಬೇಕು ?
ನೆಟ್ ನಾಗ ನ ಲೇಖನಗಳು ಸಾಕು .
-ಸಿ.ಆಶಾ ,
ಪದವಿ ಪೂರ್ವ ಕಾಲೇಜ್ , ಸೊರಬ
ಶಿವಮೊಗ್ಗ ಜಿಲ್ಲೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)











ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ