MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಅಕ್ಟೋಬರ್ 23, 2010

ಒಂದೊಂದು ಅಕ್ಕಿಕಾಳಿಗೆ ಒಂದೊಂದು ಹಣದ ಥೈಲಿ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಬಹಳ ಹಿಂದೆ ಒಬ್ಬ ತಿರುಕ ಊರ ಮುಂದಿನ ಮುರುಕು ಧರ್ಮಶಾಲೆಯಲ್ಲಿ ಇರುತ್ತಿದ್ದ. ದಿನಾ ಭಿಕ್ಷೆ ಬೇಡುತ್ತಿದ್ದ . ಒಂದಷ್ಟು ಅಕ್ಕಿಕಾಳು , ಒಂದಷ್ಟು ಪುಡಿಗಾಸು ಸಿಗುತ್ತಿತ್ತು. ಹಗಲೆಲ್ಲ ಸುತ್ತಾಡಿ ಸಂಜೆ ಧರ್ಮಶಾಲೆಗೆ ಬಂದು ಅಡುಗೆ ಮಾಡಿಕೊಂಡು ಉಂಡು ಮಲಗುತ್ತಿದ್ದ. ಹೇಗೋ ಸಾಗುತ್ತಿದ್ದ ಜೀವನದಿಂದ ಆತನಿಗೆ ಸಾಕುಸಾಕಾಗಿತ್ತು.

ಒಮ್ಮೆ ಆ ರಾಜ್ಯದ ಮಹಾರಾಜರು ಆ ಊರಿನ ಮೂಲಕ ಹಾಡು ಹೋಗುತ್ತಾರೆಂದು ಗೊತ್ತಾಯಿತು. ಅವರ ಸ್ವಾಗತಕ್ಕೆ ಊರಿನಲ್ಲೆಲ್ಲ ತಳಿರು-ತೋರಣಗಳ ಶೃಂಗಾರ . ಜನರಿಗೆಲ್ಲ ಸಂಭ್ರಮ-ಸಡಗರ. ಇದನ್ನು ಕಂಡ ತಿರುಕ ದಯಾಳುವಾದ ಮಹಾರಾಜರಿಗೆ ತನ್ನ ಬಡತನವನ್ನು ನಿವೆದಿಸಿಕೊಂಡರೆ , ಅವರು ಏನಾದರೂ ದೊಡ್ಡ ಭಿಕ್ಷೆಯನ್ನು ನೀಡಿ ತನ್ನ ಬಡತನ ನಿವಾರಣೆ ಮಾಡಬಹುದೆಂದು ಆಶಿಸಿದ. ಅಂದು ಇರುವುದರಲ್ಲಿಯೇ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ಎಂದಿನಂತೆ ಭಿಕ್ಷೆ ಬೇಡಿದ.ಊರಿನವರು ಸಂಭ್ರಮದಲ್ಲಿದ್ದುದ್ದರಿಂದ ಜೋಳಿಗೆ ತುಂಬುವಷ್ಟು ಅಕ್ಕಿ ದೊರೆಯಿತು. ಆತ ಜೋಲಿಗೆಯೊಂದಿಗೆ ಮಹಾರಾಜರ ರಥ ಬರುವ ರಸ್ತೆಯ ಬದಿಯಲ್ಲಿ ನಿಂತ . ಸಂಜೆಯ ಹೊತ್ತಿಗೆ ರಥದಲ್ಲಿ ಕುಳಿತ ಮಹಾರಾಜರ ಮೆರವಣಿಗೆ ಇವನು ನಿಂತಲ್ಲಿಯೇ ಬಂತು. ತಿರುಕ ರಸ್ತೆಗೆ ಧುಮುಕಿ ರಥಕ್ಕೆ ಅಡ್ಡವಾಗಿ ನಿಂತು ಮಹಾರಾಜನಿಗೆ ನಮಸ್ಕರಿಸಿದ . ಅವರೂ ನಮಸ್ಕರಿಸಿದರು. ಈತ "ಏನನ್ನಾದರೂ ದಾನ ಮಾಡಿ " ಎಂದು ಬೇಡಿದ. ಮಹಾರಾಜರು "ನೀನು ನಮಗೇನು ಕೊಡುತ್ತಿಯೋ ಕೊಡು " ಎಂದು ಕೈ ಚಾಚಿದರು. ಈ ಮಾತುಗಳನ್ನು ಕೇಳುತ್ತಲೇ ತಿರುಕನ ಉತ್ಸಾಹ ಜರ್ರನೆ ಇಳಿದು ಹೋಯಿತು. ಮಹಾರಾಜರು "ನನಗೇನಾದರೂ ನೀಡುವ ಬದಲು ನನ್ನಲ್ಲೇ ಬೇಡುತ್ತಿದ್ದರಲ್ಲ" ಎಂದುಕೊಂಡ. ಒಲ್ಲದ ಮನಸ್ಸಿನಿಂದ ಜೋಳಿಗೆಯೊಳಗೆ ಕೈ ಹಾಕಿದ . ಜೋಳಿಗೆಯಲ್ಲಿ ಅಕ್ಕಿ ತುಂಬಿತ್ತು. ಅದರೊಳಗಿಂದ ಐದು ಅಕ್ಕಿ ಕಾಳು ಆರಿಸಿ ಮಹಾರಾಜರ ಕೈಗೆ ಹಾಕಿದ. ರಾಜದೂತರು ಈತ ಯಾರು.ಎಲ್ಲಿರುತ್ತಾನೆಂದು ವಿಚಾರಿಸಿಕೊಂಡರು. ಮೆರವಣಿಗೆ ಮುಂದುವರಿಯಿತು. ಮಹಾರಾಜ ಹೊರಟುಹೋದ. ತಿರುಕನಿಗೆ ಮಹಾರಾಜನಿಂದ ಏನೂ ಸಿಗಲಿಲ್ಲವಾದ್ದರಿಂದ ನಿರಾಶೆಗೊಂಡು ಕಾಲೆಳೆಯುತ್ತಾ ತನ್ನು ಮುರುಕು ಧರ್ಮಶಾಲೆಗೆ ಬಂದ.

ಬೇಸರದಿಂದಲೇ ಒಂದಷ್ಟು ಅಡುಗೆ ಬೇಯಿಸಿಕೊಂಡು ತಿಂದು ಮಲಗಿದ. ಕೆಲ ದಿನಗಳ ನಂತರ ಇಬ್ಬರು ರಾಜದೂತರು ಧರ್ಮಶಾಲೆಗೆ ಬಂದು ಇವನನ್ನು ಕರೆದು ಈತನಿಗೆ ಐದು ಥೈಲಿ ಹಣವನ್ನಿತ್ತು "ಮಹಾರಾಜರು ಯಾರಿಂದಲೂ ಏನೂ ಬೇಡುವುದಿಲ್ಲ , ಬೇಡಿದಾಗ ಏನನ್ನಾದರೂ ನೀಡಿದವರಿಗೆ ದೊಡ್ಡ ಬಳುವಳಿಯನ್ನು ಕೊಡುವುದು ಅವರ ಸಂಪ್ರದಾಯ. ನೀವು ಮಹಾರಾಜರಿಗೆ ಐದು ಅಕ್ಕಿ ಕಾಲಿನ ದಾನವನ್ನಿತ್ತಿರಂತೆ . ಸಂಪ್ರದಾಯದಂತೆ ಮಹಾರಾಜರು ಒಂದೊಂದು ಅಕ್ಕಿಕಾಲಿಗೆ ಒಂದೊಂದು ಥೈಲಿ ಕಳುಹಿಸಿಕೊಟ್ಟಿದ್ದಾರೆ. ತೆಗೆದುಕೊಳ್ಳಿ " ಎಂದು ಹೇಳಿ ಹಣವನ್ನು ಕೊಟ್ಟುಹೋದರು. ಮಹಾರಾಜ ಭಿಕ್ಷೆ ಕೇಳಿದಾಗ ಜೋಳಿಗೆಯ ತುಂಬಾ ಅಕ್ಕಿ ಇದ್ದರೂ ಕೇವಲ ಐದೇ ಕಾಲುಗಳನ್ನು ಮಹಾರಾಜರಿಗಿತ್ತ ತನ್ನ ಮೂರ್ಖತನಕ್ಕೆ ತಿರುಕ ತಲೆ ತಲೆ ಚಚ್ಚಿಕೊಂಡ .

ನಮ್ಮ ಅಕ್ಕಿ ಜೋಳಿಗೆ ತುಂಬಿರುವಾಗ , ಯಾರಾದರೂ ದಾನ ಬೇಡಿದಾಗ ಇಡೀ ಜೋಳಿಗೆಯನ್ನು ದಾನ ಮಾಡಬೇಕಿಲ್ಲ ! ಒಂದು ಹಿಡಿಯಷ್ಟನ್ನಾದರೂ ದಾನ ಮಾಡಿದರೆ ಅದರ ಅನೇಕ ಪಟ್ಟು ಬೇರಾವುದೋ ರೂಪದಲ್ಲಿ , ಫಲವಾಗಿ ಬರಬಹುದು !



೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ