MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಅಕ್ಟೋಬರ್ 20, 2010

ಹೋಟೆಲ್ ಗಳಲ್ಲಿ ಧರ್ಮ ಗ್ರಂಥಗಳನ್ನು ಯಾಕೆ ಇಡುತ್ತಾರೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಆತ್ಮೀಯ ಸ್ನೇಹಿತರೆ ಈ ಸಣ್ಣ ಹೃದಯಸ್ಪರ್ಶಿ ಘಟನೆ ಮುಂದೆ ದೊಡ್ಡ ಅಂತರಾಷ್ಟ್ರೀಯ ಆಂದೋಲನಕ್ಕೆ ಕಾರಣವಾಯಿತು. ಒಂದುಸಾವಿರದ ಎಂಟುನೂರ ಎಪ್ಪತ್ತರಲ್ಲಿ ಒಬ್ಬ ತಾಯಿ ತನ್ನ ಕೊನೆಯುಸಿರೆಳೆಯುವ ಸಂದರ್ಭ . ಆಕೆಯ ಮಗ ಜಾನ್ ನಿಕೊಲ್ ಸನ್ ಎಂಬಾತ ಪಕ್ಕದಲ್ಲೇ ನಿಂತಿದ್ದ , ಇನ್ನೇನು ಪ್ರಾಣಹೋಗುವ ಸಮಯ. ಮಗ ತಾಯಿಯ ಕೊನೆಯಾಸೆ ಏನೆಂದು ಕೇಳಿದ. ಆಕೆ "ನನಗೇನೂ ಆಸೆಗಳಿಲ್ಲ , ನೀನು ಪ್ರತಿನಿತ್ಯ ಬೈಬಲ್ಲಿನ ಒಂದೆರಡು ಪುಟಗಳನ್ನಾದರೂ ಓದುತ್ತೆನೆಂದು ಮಾತುಕೊಟ್ಟರೆ ನನಗಷ್ಟೇ ಸಾಕು " ಎಂದಳು. ಮಗ ಮಾತು ಕೊಟ್ಟ ತಾಯಿ ತೀರಿಕೊಂಡರು. ಮಗ ಮಾತಿಗೆ ತಪ್ಪಲಿಲ್ಲ. ಪ್ರತಿದಿನ ಬೈಬಲ್ಲಿನ ಕೆಲವು ಪುಟಗಳನ್ನೋದುವ , ಪ್ರಾರ್ಥಿಸುವ ಅಭ್ಯಾಸ ಬೆಳೆಸಿಕೊಂಡ.

ಹೀಗೆಯೇ ಇಪ್ಪತ್ತೆಂಟು ವರ್ಷಗಳು ಕಳೆಯಿತು. ಒಮ್ಮೆ ಕಾರ್ಯ ನಿಮಿತ್ತ ದೂರದ ವಿಸ್ಕಾನ್ಸಿನ್ ಎಂಬ ನಗರಕ್ಕೆ ಹೋಗಿದ್ದ. ಹೋಟೆಲೊಂದರಲ್ಲಿ ತಂಗಿದ್ದ. ಆತ ತನ್ನ ಬೈಬಲ್ ತರುವುದನ್ನು ಮರೆತಿದ್ದ. ಅದೇ ಹೋಟೆಲಿನಲ್ಲಿದ್ದ ಸ್ಯಾಮ್ಯುವೆಲ್ ಹಿಲ್ ಎಂಬುವರೊಂದಿಗೆ ಮಾತನಾಡುತಿದ್ದಾಗ ಜಾನ್ ತನ್ನ ಅಭ್ಯಾಸವನ್ನೂ ಮತ್ತು ಬೈಬಲ್ ತರಲು ಮರೆತಿದ್ದನ್ನು ಹೇಳಿ ಪೇಚಾಡಿಕೊಂಡ . ಅವರಿಬ್ಬರೂ ಪ್ರವಾಸದಲ್ಲಿರುವವರಿಗೆ ಬೈಬಲ್ ಬೇಕಿದ್ದರೆ ಅವರಿಳಿದುಕೊಂಡಿರುವ ಹೋಟೆಲ್ ನಲ್ಲೆ ಉಚಿತವಾಗಿ ಸಿಗುವ ವ್ಯವಸ್ಥೆಯನ್ನು ಮಾಡಬೇಕೆಂದು ತೀರ್ಮಾನಿಸಿದರು . ಮಹತ್ವದ ಕನಸು ಕಾರ್ಯಗತಗೊಳಿಸುವ ಮನಸ್ಸಿತ್ತು. ಆದರೆ ಕೈಯಲ್ಲಿ ಕಾಸಿರಲಿಲ್ಲ. ಅವರು ಅಂದಿನ ಕಾಲದ ನೂರು ಜನ ಶ್ರೀಮಂತರ ಪಟ್ಟಿ ಮಾಡಿ ಅವರಿಗೆಲ್ಲ ಕಾಗದ ಬರೆದು ಸಹಾಯ ಯಾಚಿಸಿದರು. ಒಂದು ಸಭೆ ಕರೆದರು. ಆದರೆ ಸಭೆಗೆ ವಿಲಿಯಂ ನೈಟ್ಸ್ ಎಂಬ ಒಬ್ಬರು ಮಾತ್ರ ಬಂದಿದ್ದರು. ಉಳಿದ ತೊಂಬತ್ತೊಂಬತ್ತು ಜನ ಬಂದಿರಲಿಲ್ಲ. ನಿರುತ್ಸಾಹ ಗೊಳ್ಳದ ಮೂರೂ ಜನ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಿದರು . ತಮ್ಮಲ್ಲಿದ್ದ ಹಣವನ್ನೆಲ್ಲ ಒಟ್ಟುಗೂಡಿಸಿ ಆ ಊರಿನ ಎಲ್ಲಾ ಹೋಟೆಲ್ ಗಳ ಕೊಟಡಿಗಳಲ್ಲಿ ಇಡಲು ಬೈಬಲ್ ಪುಸ್ತಕಗಳನ್ನು ಉಚಿತವಾಗಿ ಕೊಟ್ಟರು. ಈ ಕಾರ್ಯ ನಿರ್ವಹಿಸುವ ಸಂಸ್ಥೆಗೆ "ಗಿಡಿಯನ್ಸ್ ಸಂಸ್ಥೆ "ಎಂದು ಹೆಸರಿಟ್ಟರು .(ಗಿಡಿಯನ್ಸ್ ಎಂದರೆ ದೇವರ ಇಚ್ಚೆಯಂತೆಯೆ ನಡೆಯುವ ದೇವದೂತ ಎಂದರ್ಥ ). ಮುಂದೆ ಇತರ ನಗರಗಳ ಹೋಟೆಲ್ ಗಳಿಗೂ ಉಚಿತ ಹಂಚಿಕೆಯನ್ನು ವಿಸ್ತರಿಸಲಾಯಿತು .ಒಂದು ಸಾವಿರದ ಒಮ್ಬತ್ತುನೂರ ಎಂಟರಲ್ಲಿ ಪ್ರಾರಂಭವಾದ ಗಿಡಿಯನ್ಸ್ ಸಂಸ್ಥೆ ಇಂದು ವಿಶ್ವದಾದ್ಯಂತ ಬೆಳೆದಿದೆ. ಸುಮಾರು ಒಂದುನೂರ ಎಪ್ಪತೈದು ದೇಶಗಳಲ್ಲಿ ಎಂಬತ್ತು ಭಾಷೆಗಳಲ್ಲಿ ಬೈಬಲ್ ಪುಸ್ತಕಗಳನ್ನು ಹೋಟೆಲ್ ಗಳಿಗೆ ಉಚಿತವಾಗಿ ಹಂಚುತ್ತಿದೆ . ಇದುವರೆವಿಗೂ ಸುಮಾರೂ ಗಿಡಿಯನ್ಸ್ ಸಂಸ್ಥೆ ಸುಮಾರು ಐದೂವರೆ ಕೋಟಿಗೂ ಹೆಚ್ಚು ಪುಸ್ತಕಗಳನ್ನು ಹಂಚಿದೆ.

ಧಾರ್ಮಿಕ ಪುಸ್ತಕಗಳನ್ನು ತಾರಾ ಹೋಟೆಲ್ ಗಳ ಕೊಟಡಿಗಳಲ್ಲಿಡುವ ಒಳ್ಳೆಯ ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬೆಳೆದಿದೆ. ಭಾರತದ ಅನೇಕ ಹೋಟೆಲ್ ಗಳ ಕೊಟಡಿ ಗಳಲ್ಲಿ ಶ್ರೀಮದ್ಬಗವದ್ಗೀತೆಯ ಪುಸ್ತಕಗಳನ್ನು , ಜಪಾನಿನ ನಿಕ್ಕೋ ಹೋಟೆಲ್ ಗಳಲ್ಲಿ ಭೌದ್ದಧರ್ಮದ ಗ್ರಂಥಗಳನ್ನು , ಮ್ಯಾರಿಯೆಟ್ ಹೋಟೆಲ್ ಗಳಲ್ಲಿ ಮೊರ್ಮೊನ್ ಪಂಥದ ಪುಸ್ತಕಗಳನ್ನು , ಮಧ್ಯ ಪ್ರ್ಯಾಚ್ಯ ದೇಶಗಳ ಹೋಟೆಲ್ ಗಳಲ್ಲಿ ಇಸ್ಲಾಂ ಪ್ರಾರ್ಥನೆಗಳ ಪುಸ್ತಕಗಳನ್ನು ಇಡಲಾಗುತ್ತಿದೆ.. ಭಾರತದ ಒಂದು ಪ್ರಖ್ಯಾತ ಹೋಟೆಲ್ ಗಳ ಸಮೂಹ "ಬುಕ್ ಆಪ್ ಪ್ರೆಯರ್ಸ್ " ಎಂಬ ವಿವಿಧ ಧರ್ಮಗಳ ಪ್ರಾರ್ಥನೆಗಳನ್ನೋಳಗೊಂಡ ಪುಸ್ತಕಗಳನ್ನು ಇಡುತ್ತಿದೆ. ರಮಣಶ್ರೀ ಹೋಟೆಲ್ ಗಳಲ್ಲಿ ಭಗವಾನ್ ರಮಣಮಹರ್ಷಿಗಳ "ರಮಣ ಗೀತಾ "ಪುಸ್ತಕಗಳನ್ನು ಇಡುವ ಪದ್ದತಿಯಿದೆ.

ಒಬ್ಬ ಆಸ್ತಿಕ ತಾಯಿಯ ಅಂತಿಮ ಆಸೆ ಹೀಗೊಂದು ವಿಶ್ವ ಆಂದೋಲನವಾದದ್ದು ಆಶ್ಚರ್ಯವಲ್ಲವೇ ? ನಾವು ಯಾರಿಗಾದರೂ ಮಾತು ಕೊಟ್ಟಿದ್ದೇವೆಯೇ ? ಮಾತು ಉಳಿಸಿಕೊಂಡಿದ್ದೆವೆಯೇ?

. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.buildingonabudget.com/

http://buildingonabudget.com/letter2.php

ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ