MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ನವೆಂಬರ್ 25, 2010

ಜಗತ್ತಿನ ಸುವಿಖ್ಯಾತ ಸೆಲ್ ಫೋನ್ ಕಂಪನಿ ಹಚ್ ನ ಹುಟ್ಟಿನ ಕಥೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನೀವೆಲ್ಲೇ ಹೋದರು ನಮ್ಮ ನೆಟ್ ವರ್ಕ್ ನಿಮ್ಮನ್ನು ಹಿಂಬಾಲಿಸುತ್ತದೆ. ಈ ವಾಕ್ಯದೊಂದಿಗಿರುವ ಚಿತ್ರದಲ್ಲಿ ಒಬ್ಬ ಮುಗ್ಧ ಬಾಲಕನ ಹಿಂದೆ ಒಂದು ದ -ಡೂತಿ ನಾಯಿಮರಿ. ನಾವೆಲ್ಲಾ ಈ ಆಕರ್ಷಕ ಜಾಹೀರಾತು ಗಮನಿಸಿದ್ದೇವೆ. ಮುಗುಳ್ನಕ್ಕಿದ್ದೇವೆ . ಇದು ಸುವಿಖ್ಯಾತ ಸೆಲ್ ಫೋನ್ ಕಂಪನಿ " ಹಚ್ ನ ಜಾಹೀರಾತು. ಸಹಸ್ರಾರು ಕೋಟಿ ರೂಪಾಯಿಗಳಷ್ಟು ವ್ಯವಹಾರ ನಡೆಸುವ ಇದರ ಮೂಲ ಸಂಸ್ಥೆಯ ಸ್ಥಾಪಕರು ಹಾಂಗ್ ಕಾಂಗ್ ನ ಲೀ ಕಾಶಿಂಗ್ .

ಅವರು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಚೈನಿಯ ವ್ಯಕ್ತಿ. ಇದೆಲ್ಲರಿಗೂ ಗೊತ್ತಿರುವ ವಿಷಯ. ಆದರೆ ಗೊತ್ತಿರದ ವಿಷಯವೆಂದರೆ ಅವರು ಚೀನಾದ ಒಬ್ಬ ಬಡ ಶಾಲಾ ಮಾಸ್ತರರ ಮಗ. ಹರಕು ಬಟ್ಟೆ ಉಟ್ಟು ಹಾಂಗ್ ಕಾಂಗ್ ಗೆ ಬಂದ ಅವರು ಇಂದು ವಿಶ್ವದ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ . ಅದಕ್ಕೆ ಅವರ ಛಲ, ಶ್ರಮ , ಸಮಯಪ್ರಜ್ಞೆ ಮತ್ತು ಅಗಾಧ ಬುದ್ಧಿವಂತಿಕೆಯೇ ಕಾರಣ.

ಸಾವಿರದ ಒಂಭತ್ತು ನೂರ ನಲವತ್ತರಲ್ಲಿ ಚೀನಾ ದೇಶವನ್ನು ಅಂತರ್ಯುದ್ಧಗಳು ಮತ್ತು ಬಡತನ ಕಾಡುತ್ತಿದ್ದವು. ಅದರಿಂದ ಪಾರಾಗಲು ಒಬ್ಬ ಶಾಲಾಮಾಸ್ತರ್ ಸಂಸಾರಸಮೇತರಾಗಿ ಚೀನಾ ತೊರೆದು ಹಾಂಗಕಾಂಗ್ ಗೆ ಬರಿಗೈಯಲ್ಲಿ ಬಂದರು. ತಮ್ಮ ದೂರದ ನೆಂಟರ ಮನೆ ಸೇರಿದರು. ಆ ನೆಂಟ ಎಷ್ಟು ಶ್ರೀಮಂತನೋ ಅಷ್ಟೇ ದುರಂಕಾರಿ. ಆಗ ಮಾಸ್ತರ್ ಹಿರಿಯ ಮಗ ಲೀ ಕಾ ಶಿಂಗ್ ಗೆ ಹನ್ನೆರಡು ವರ್ಷ. ನೆಂಟರು ತಮ್ಮತ್ತ ತೋರುತ್ತಿದ್ದ ತಿರಸ್ಕಾರವನ್ನು ಕಂಡ ಲೀ ತಾನು ಮುಂದೊಂದು ದಿನ ಆತನಿಗಿಂತ ಶ್ರೀಮನ್ತನಾಗುತ್ತೆನೆಂದು ಛಲ ತೊಟ್ಟ. ಎರಡೇ ವರ್ಷಗಳಲ್ಲಿ ತಂದೆ ತೀರಿಕೊಂಡಾಗ ಲೀ ಸಂಸಾರದ ಜವಾಬ್ದಾರಿ ಹೊರಬೇಕಾಯಿತು. ಹಂಗಿನರಮನೆಗಿಂತ ಅಂಗಣದ ಗುಡಿ ಲೇಸೆಂದು ಭಾವಿಸಿದರು.

ನೆಂಟರ ಮನೆ ತೊರೆದು ಸಣ್ಣ ಮನೆ ಮಾಡಿದರು. ಹದಿನಾಲ್ಕನೆಯ ವಯಸ್ಸಿಗೆ ಕಾರ್ಖಾನೆಯಲ್ಲಿ ದಿನಕ್ಕೆ ಎಂಟು ಗಂಟೆಗಳ ಪಾಳಿಯಲ್ಲಿ ಕೂಲಿಗೆಲಸ. ಕೆಲವೇ ತಿಂಗಳಲ್ಲಿ ಅವರ ಸಂಬಳ ಎರಡರಷ್ಟಾಯಿತು . ಏಕೆಂದರೆ ಅವರು ದಿನಕ್ಕೆ ಹದಿನಾರು ಗಂಟೆ ದುಡಿಯುತ್ತಿದ್ದರು. ಕುಟುಂಬ ನಿರ್ವಹಣೆಗೆ ಅವರ ಒಂದು ಪಾಳಿಯ ಕೆಲಸದ ಸಂಬಳ ಸಾಕಾಗುತ್ತಿರಲಿಲ್ಲ.

ಕೆಲವೇ ವರ್ಷಗಳಲ್ಲಿ ಪ್ಲಾಸ್ಟಿಕ್ ಉದ್ಯಮದ ಅಂತರ್ಯಗಳನ್ನೆಲ್ಲ ಕಲಿತರು. ಬರುತ್ತಿದ್ದ ಸಂಬಳದಲ್ಲಿ ಸಂಸಾರವನ್ನು ಸಾಕಿ ಸ್ವಲ್ಪ ಉಳಿತಾಯ ಮಾಡಿದರು. ತಾವೇ ಒಂದು ಸಣ್ಣ ಪ್ಲಾಸ್ಟಿಕ್ ಫ್ಯಾಕ್ಟರಿ ತೆರೆದರು. ಆಗ ಹಾಂಗ್ ಕಾಂಗ್ ನಗರ ತುಂಬಾ ವೇಗವಾಗಿ ಬೆಳೆಯುತ್ತಿತ್ತು. ಲೀಯವರು ಜಮೀನು ಅಭಿವೃದ್ಧಿಯ ವ್ಯವಹಾರ ಪ್ರಾರಂಭಿಸಿದರು. ಗಗನಚುಂಬಿ ಕಟ್ಟಡಗಳ ನಿರ್ಮಾಣದಲ್ಲಿ ಅಪಾರ ಯಶಸ್ಸು ಗಳಿಸಿದರು. ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ ತೆಗೆದುಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಂಡರು. ನಿಧಾನವಾಗಿ ಬೃಹತ್ ವ್ಯಾಪಾರ ಮಳಿಗೆಗಳು , ವಿದ್ಯುತ್ ಉತ್ಪಾದನೆ , ಹಡಗುಗಳು ಮುಂತಾದ ವ್ಯವಹಾರಗಳಲ್ಲಿ ಹೇರಳ ಹಣ ಗಳಿಸಿದರು. ಹಚಿಸನ್ ಟೆಲಿಫೋನ್ ಕಂಪನಿ ಖರೀದಿಸಿದರು.

ಇಂದು ಅವರ ವ್ಯವಹಾರ ವಿಶ್ವದ ನಲವತ್ತು ದೇಶಗಳಲ್ಲಿ ಹರಡಿದೆ. ಸುಮಾರು ಒಂದು ಲಕ್ಷದ ಅರವತ್ತು ಸಾವಿರ ಜನರಿಗೆ ಉದ್ಯೋಗ ನೀಡಿದೆ. ಅವರು ಸ್ಥಾಪಿಸಿದ ಲೀ ಕಾ ಶಿಂಗ್ ಪೌನ್ದೆಶನ್ ಇದುವರೆವಿಗೆ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳಷ್ಟು ದೇಣಿಗೆಯನ್ನು ವಿದ್ಯೆ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ನೀಡಿದೆ. ಅವರ ಪ್ರಕಾರ ಯಶಸ್ಸಿಗೆ ಅವಶ್ಯಕವಿರುವ ವಿಷಯಗಳಲ್ಲಿ ಮುಖ್ಯವಾದವು ಮನುಷ್ಯನ ಹೃದಯ ಮತ್ತು ಬುದ್ಧಿಯಲ್ಲೇ ಅಡಗಿವೆ.!


ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ