MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ನವೆಂಬರ್ 22, 2010

ಎಲ್ಲರಿಗೂ ಜುಲ್ಮಾನೆ ಬೀಳಬಹುದು ಎಚ್ಚರಿಕೆ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದು ಸಾವಿರದ ಒಂಬತ್ತು ನೂರ ನಲವತ್ತರ ಸುಮಾರಿನಲ್ಲಿ ಗ್ವಾರ್ಡಿಯಾ ಎನ್ನುವವರು ನ್ಯೂಯಾರ್ಕಿನ ಮೇಯರ್ ಆಗಿದ್ದಾಗ ಈ ಘಟನೆ ನಡೆಯಿತೆಂದು ಹಳುತ್ತಾರೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು . ನ್ಯೂಯಾರ್ಕ್ ನಗರದ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು ಗೌರವಿಸಲಾಗಿದೆ. ಆಗಿನ ಕಾಲದಲ್ಲಿ ನಗರದ ಮೇಯರ್ ಗೆ ನ್ಯಾಯಾಧೀಶರ ಅಧಿಕಾರವೂ ಇತ್ತಂತೆ.

ಒಂದು ದಿನ ಅವರು ನ್ಯಾಯಾಧೀಶರ ಕಾರ್ಯ ನಿರ್ವಹಿಸುತ್ತಿದ್ದರು. ನ್ಯಾಯಾಲಯದ ತುಂಬಾ ಜನ . ಆರೋಪಿಗಳು , ಅಪರಾಧಿಗಳು , ವಕೀಲರು ಹಾಗೂ ನಾಗರಿಕರು ಕಿಕ್ಕಿರಿದು ಸೇರಿದ್ದರು. ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಒಬ್ಬ ಮುದುಕಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ಆಕೆ ಚಳಿಗೋ ಅಥವಾ ಅಪಮಾನದಿಂದಲೋ ಗಡಗಡನೆ ನಡುಗುತ್ತಿದ್ದಳು. ಒಂದು ಫೌಂಡ್ ಬ್ರೆಡ್ ಕದ್ದಳೆಂಬ ಆರೋಪ ಆಕೆಯ ಮೇಲಿತ್ತು. ಆಕೆಯ ವಿವರಣೆಯನ್ನು ಕೇಳಿದಾಗ "ನನ್ನ ವಿಧವೆ ಮಗಳು ಮತ್ತು ಅವಳ ಇಬ್ಬರು ಪುಟ್ಟ ಮಕ್ಕಳು ನನ್ನೊಂದಿಗೆ ಇದ್ದಾರೆ . ಮಗಳಿಗೆ ತೀವ್ರ ಅನಾರೋಗ್ಯ . ಕೈಯಲ್ಲಿ ಕೆಲಸವೂ ಇಲ್ಲ , ಕಾಸೂ ಇಲ್ಲ ಮಕ್ಕಳು ಎರಡು ದಿನದಿಂದ ಉಪವಾಸ . ಅವರ ಅಳು ಕೇಳಲಾರದೆ ನಾನು ಬ್ರೆಡ್ ಕದ್ದದ್ದು ನಿಜ. ಬಡತನ ನನ್ನಿಂದ ಕಳ್ಳತನ ಮಾಡಿಸಿದೆ. ನ್ಯಾಯಾಲಯ ನನ್ನ ಅಸಹಾಯಕತೆಯನ್ನು ಗಮನಿಸಿ ಕ್ಷಮಾದಾನ ನೀಡಬೇಕು " ಎಂದು ಅಂಗಲಾಚಿದಳು.


ನ್ಯಾಯಾಲಯದಲ್ಲೇ ಹಾಜರಿದ್ದ ಬ್ರೆಡ್ ಅಂಗಡಿ ಮಾಲೀಕ ಎದ್ದು ನಿಂತು "ಈಕೆಗೆ ಕ್ಷಮಾದಾನ ಮಾಡಿದರೆ ಕೆಟ್ಟ ಉದಾಹರಣೆಯಾಗುತ್ತದೆ. ಎಲ್ಲರೂ ಇದೆ ರೀತಿ ಮಾಡುತ್ತಾರೆ. ಈಕೆಗೆ ಕಾನೂನಿನ ಪ್ರಕಾರ ದಂಡ ವಿಧಿಸಬೇಕು " ಎಂದು ವಾದಿಸಿದ. ಎಲ್ಲರ ಗಮನ ಮೇಯರ್ ಕಡೆಗೆ ಇತ್ತು. ಅವರು ಗಂಭೀರವಾಗಿ "ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಅಪರಾಧಕ್ಕೆ ದಂಡ ವಿಧಿಸಲೇ ಬೇಕು. ಈಕೆಗೆ ಹತ್ತು ಡಾಲರ್ ದಂಡ ವಿಧಿಸಲಾಗಿದೆ " ಎಂದು ಘೋಷಿಸಿದರು.

ಮುದುಕಿ "ಹತ್ತು ಡಾಲರ್ ನನ್ನ ಬಳಿ ಇದ್ದಿದ್ದರೆ ನಾನೇಕೆ ಬ್ರೆಡ್ ಕದಿಯುತ್ತಿದ್ದೆ ? ದಂಡ ಹೇಗೆ ಕಟ್ಟಲಿ "ಎಂದು ಅಳತೊಡಗಿದಳು. ಮೇಯರ್ ತಾವೇ ಹತ್ತು ಡಾಲರ್ ಕೊಟ್ಟು ಮುದುಕಿಯ ದಂಡ ಕಟ್ಟಿದರು. ನಂತರ " ಒಬ್ಬ ಬಡ ಮುದುಕಿ ಉಪವಾಸವಿರುವ ಮೊಮ್ಮಕ್ಕಳಿಗಾಗಿ ಕಳ್ಳತನ ಮಾಡುವ ಪರಿಸ್ಥಿತಿ ಈ ನಗರದಲ್ಲಿ ಇರುವುದು ದುರಂತ. ಇದರ ನೈತಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾನು ಈ ನ್ಯಾಯಾಲಯದಲ್ಲಿ ಇರುವ ಪ್ರತಿಯೊಬ್ಬರ ಮೇಲೂ ಅರ್ಧ ಡಾಲರ್ ಜುಲ್ಮಾನೆ ವಿಧಿಸುತ್ತಿದ್ದೇನೆ. ಆ ಹಣವನ್ನು ಸಂಗ್ರಹಿಸಿ ಮುದುಕಿಗೆ ಕೊಡುವುದು "ಎಂದು ಆಜ್ನೆಯಿತ್ತರು.. ತಾವೂ ಅರ್ಧ ಡಾಲರ್ ಹಣವನ್ನು ತೆಗೆದುಕೊಟ್ಟರು. ಅಲ್ಲಿದ್ದ ಬಹಳಷ್ಟು ಮಂದಿ ತಮ್ಮ ಪಾಲನ್ನು ಹಾಕಿದರು. ಸಂಗ್ರಹವಾದ ನಲವತ್ತೇಳು ಡಾಲರುಗಳನ್ನು ಮುದುಕಿಗೆ ಕೊಟ್ಟು ಕಳುಹಿಸಲಾಯಿತು. ನಡುಗುತ್ತ ಬಂದ ಮುದುಕಿ ನಗುತ್ತ ಹೋದಳು. ಈ ಘಟನೆ ನಡೆದು ಅರವತ್ತೇಳು ವರ್ಷಗಳಿಗಿಂತಲೂ ಜಾಸ್ತಿಯಾಗಿದೆ. ನಾವಿರುವ ಜಗತ್ತಿನಲ್ಲಿ ಇಂದಿಗೂ ಉಪವಾಸ ಪೀಡಿತ ಮಕ್ಕಳಿದ್ದಾರೆ. ಅವರ ನೈತಿಕ ಜವಾಬ್ದಾರಿ ನಮ್ಮ ಮೇಲಿದೆ.

ನಮಗೂ ಯಾರಾದರೂ ಜುಲ್ಮಾನೆ ವಿಧಿಸುವ ಮೊದಲೇ ನಮ್ಮ ಕೈಲಾದಷ್ಟು ಸಹಾಯ ನಾವೇ ಮಾಡಬಹುದೇ ? ಪ್ರತಿದಿನ ಸಾಧ್ಯವಿಲ್ಲದಿದ್ದರೆ , ವಾರಕ್ಕೊಮ್ಮೆಯಾದರೂ ಅಥವಾ ತಿಂಗಳ ಗೊಮ್ಮೆಯಾದರೂ ಅಥವಾ ನಮ್ಮ ಹುಟ್ಟುಹಬ್ಬ ಮುಂತಾದ ವಿಶೇಷ ದಿನಗಳಲ್ಲಿ ಒಂದಿಬ್ಬರ ಉಪವಾಸ ನೀಗಿಸಬಹುದೇ ? ಕಷ್ಟವೇನಿಲ್ಲ, ಏಕೆಂದರೆ ಮನಸ್ಸಿದ್ದರೆ ಮಾರ್ಗವೂ ಇದೆ !

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ