MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ನವೆಂಬರ್ 16, 2010

ನಮ್ಮ ಪ್ರಯಾಣದ ಹಡಗು ಯಾವುದು ?-ಎ.ಟಿ.ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.


ಅಂದು ಬಂದರಿನಲ್ಲಿ ಬೀಳ್ಕೊಡುಗೆಯ ಸಡಗರ, ಸಂಭ್ರಮ , ಆ ಊರಿನ ಮೂರು ತಂಡಗಳು ದೂರ ದೇಶವೊಂದರ ಅನ್ವೇಷಣೆಗಾಗಿ ಪ್ರಯಾಣ ಹೊರಟಿದ್ದವು. ದೂರದೇಶ ಸಪದ್ಬರಿತ ವಾದದ್ದೆಂದು , ಅಮೂಲ್ಯ ವಸ್ತುಗಳು ಹೇರಳವಾಗಿ ದೊರೆಯುತ್ತದೆಂದೂ ಜನ ಕೇಳಿದ್ದರು. ಶುಭಹಾರೈಕೆ ಜೈಕಾರಗಳನ್ನು ಸ್ವೀಕರಿಸಿ ಹಡಗುಗಳು ಹೊರಟವು.

ಹಡಗುಗಳಲ್ಲಿ ಬೇಕಾದಷ್ಟು ಆಹಾರದ ಸಂಗ್ರಹವಿತ್ತು. ನುರಿತ ಮಾರಗದರ್ಶಿಗಳಿದ್ದರು. ಮೊದಲ ವಾರ ಪ್ರಯಾಣ ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸಲಾರಮ್ಭಿಸಿತು . ಇಡೀ ಸಮುದ್ರವೇ ಅಲ್ಲೋಲಕಲ್ಲೋಲ . ಆಕಾಶದಲ್ಲಿ ಭಯಾನಕ ಕಾರ್ಮೋಡಗಳು , ಗಾಳಿ ರಭಸಕ್ಕೆ ಹಡಗುಗಳು ಹೊಯ್ದಾಡುತ್ತಿದ್ದವು. ಹಿಂದೆ ಮುಂದೆ ಏನೇನೂ ಕಾಣಿಸುತ್ತಿರಲಿಲ್ಲ. ಆಳೆತ್ತರದ ಅಲೆಗಳು . ಮೊದಲನೆಯ ಹಡಗಿನವರು ಹೌಹಾರಿದರು. ಎಲ್ಲರಿಗೂ ಪ್ರಾಣಭಯ, ಜಲಸಮಾಧಿಯಾಗದೆ ಬದುಕುಳಿದರೆ ಸಾಕೆನಿಸಿಬಿಟ್ಟಿತು. ಒತ್ತಾಯದಿಂದ ಹಡಗನ್ನು ತಮ್ಮೂರಿನ ಕಡೆಗೆ ಹಿಂತಿರುಗಿಸಿ ಊರು ತಲುಪಿದರು . ನಿಶ್ಯಬ್ಧವಾಗಿ ತಲೆಯ ಮೇಲೆ ಮುಸುಕೆಳೆದುಕೊಂಡು ತಮ್ಮ ತಮ್ಮ ಮನೆ ಸೇರಿಕೊಂಡರು.

ಇನ್ನುಳಿದ ಎರಡು ಹಡಗಿನವರು ಸುಂಟರಗಾಳಿಯನ್ನು ಧೈರ್ಯದಿಂದ ಎದುರಿಸಿದರು. ವೇಗ ಕಡಿಮೆಯಾಯಿತಾದರೂ ಧೈರ್ಯ ಕಡಿಮೆಯಾಗಲಿಲ್ಲ. ಒಂದೆರಡು ದಿನಗಳಲ್ಲಿ ಸುಂಟರಗಾಳಿ ಸುಮ್ಮನಾಯಿತು. ಪ್ರಯಾಣ ಮುಂದುವರಿಯಿತು. ಆದರೆ ತಿಂಗಳುಗಟ್ಟಲೆ ಪ್ರಯಾಣದ ನಂತರವೂ ಅವರಿಗೆ ಹೊರದೇಶದ ಸುಳಿವೇ ಕಾಣಬರಲಿಲ್ಲ. ಅಷ್ಟರಲ್ಲಿ ಅವರಿಗೆ ಒಂದು ದ್ವೀಪ ಕಂಡಿತು. ಅವರು ಅಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಹೊರಡೋಣವೆಂದು ತೀರ್ಮಾನಿಸಿ ದ್ವೀಪವನ್ನು ಪ್ರವೇಶಿಸಿದರು. ಅಲ್ಲಿ ವೈಭವೋಪೇತವಾದ ವಿಶ್ರಾನ್ಟಿಧಾಮಗಳಿದ್ದವು . ಮನರಂಜನೆಯ ತಾಣಗಳಿದ್ದವು. ಜೂಜಾಟದ ಅಡ್ಡೆ ಗಳಿದ್ದವು . ಇವರಿಗೆಲ್ಲ ಸ್ವರ್ಗವೇ ಸಿಕ್ಕಿದಂತಾಯಿತು. ಎರಡು ವಾರಗಳ ವಿಶ್ರಾಂತಿಯ ನಂತರ ಮೂರನೆಯ ಹಡಗಿನವರು ತಮ್ಮ ಪ್ರಯಾಣ ಮುಂದುವರಿಸಿದರು. ಆದರೆ ಎರಡನೆಯ ಹಡಗಿನವರಿಗೆ ಹೊರಡುವ ಮನಸ್ಸಾಗಲಿಲ್ಲ . ಆರಾಮವಾಗಿ, ತಿನ್ನುತ್ತ ,ಕುಡಿಯುತ್ತ , ಜೂಜಾಡುತ್ತ ಕಾಲ ಕಳೆಯುತ್ತಿದ್ದರು. ಎಲ್ಲರ ಜೇಬೂ ಖಾಲಿಯಾದ ಮೇಲೆ ಅವರಿಗೆ ಪ್ರಜ್ಞೆ ಮರಳಿತು. ಆದರೆ ದೂರ ದೇಶದತ್ತ ಹೋಗುವಷ್ಟು ಹಣ , ಶಕ್ತಿ ಉಳಿದಿರಲಿಲ್ಲ. ಬೇರೆದಾರಿಯಿಲ್ಲದೆ ತಮ್ಮೂರಿಗೆ ಮಧ್ಯರಾತ್ರಿಯಲ್ಲಿ ಮರಳಿದರು. ಯಾತ್ರೆ ಏನಾಯಿತೆಂದು ಕೇಳಿದವರಿಗೆ ಏನೋ ಹೇಳಿ ಮಾತು ಮರೆಸಿದರು.

ಮೂರನೆಯ ಹಡಗಿನವರು ಯಾನವನ್ನು ಮುಂದುವರಿಸಿ ದೂರ ದೇಶ ತಲುಪಿದರು. ಆ ಸಂಪದ್ಬರಿತ ದೇಶದಿಂದ ಬೇಕಾದದ್ದನ್ನೆಲ್ಲ ಹಡಗಿಗೆ ತುಂಬಿಕೊಂಡು ತಮ್ಮೂರಿಗೆ ಮರಳಿದರು. ಅವರಿಗೆ ಭವ್ಯ ಸ್ವಾಗತ ಸನ್ಮಾನಗಳು ದೊರೆತವು. ಅವರಿಗೂ ಅವರ ಊರಿಗೂ ಅನುಕೂಲವಾಯಿತು. ಈಗ ಊರಿನವರು ಮೊದಲನೆಯ ಹಡಗಿನವರು ಎದುರಿಗೆ ಬಂದರೆ ಗುರುತಿಸುವುದೂ ಇಲ್ಲ. ಎರಡನೆಯ ಹಡಗಿನವರು ಎಲ್ಲಾದರು ಕಂಡರೆ ತಿರಸ್ಕಾರಿಂದ ನೋಡುತ್ತಾರೆ. ಆದರೆ ಮೂರನೆಯ ಹಡಗಿನವರ ಹೆಸರುಗಳನ್ನು ಗೌರವದಿಂದ ಇತಿಹಾಸದ ಪುಟಗಳಲ್ಲಿ ಸೇರಿಸಿದ್ದಾರೆ.

ಇಂತಹ ಸಂದರ್ಭಗಳು ವಿಜ್ಞಾನಿಗಳಿಗೆ , ಕ್ರೀಡಾಪಟುಗಳಿಗೆ, ವ್ಯವಹಾರಸ್ಥರಿಗೆ , ಅಷ್ಟೇ ಏಕೆ ತಪಸ್ವಿಗಳಿಗೂ ಎದುರಾಗಬಹುದು. ಅಲ್ಪ ಸ್ವಲ್ಪ ಅಡ್ಡಿ ಆತಂಕಗಳು , ತೊಂದರೆ ತಾಪತ್ರಯಗಳು ಎದುರಾದಾಗ ಹೆದರಿ ಓಡಿಹೊಗುವವರು ಮೊದಲನೇ ಹಡಗಿನವರು . ಸಾಧನಾಪಥದಲ್ಲಿ ಒಂದಷ್ಟು ಯಶಸ್ಸು ಗಳಿಸಿ ಸುಖ ಸಂತೋಷ ಸಿಕ್ಕಾಗ ಅದಕ್ಕೆ ಮರುಳಾಗಿ ಅಲ್ಲಿಗೆ ಸಾಧನೆ ಕೈಬಿದುವವರು ಎರಡನೆ ಹಡಗಿನವರು . ಆದರೆ ಅಡ್ಡಿ ಆತಂಕಗಳಿಗೆ ಹೆದರದೆ ಅಲ್ಪ ಸ್ವಲ್ಪ ಸುಖ ಸಂತೋಷಗಳಿಗೆ ಮರುಳಾಗಿ ನಿಲ್ಲದೆ ಗುರಿಯತ್ತ ನಡೆದು ಯಶಸ್ವಿಯಾಗುವವರು ಮೂರನೆಯ ಹಡಗಿನವರು . ವಿಶ್ವಾಮಿತ್ರ ನಿಂದ ಹಿಡಿದು ಕೊಲಂಬಸ್ ವರೆಗೆ ಬರುವ ಜನ ಯಾವ ಹಡಗಿನವರೆಂದು ನಾವು ತೀರ್ಮಾನಿಸಬಹುದು ! ಹಾಗೆಯೇ ನಮ್ಮದು ಯಾವ ಹಡಗೆಮ್ಬುದನ್ನು ಆಯ್ಕೆ ಮಾಡಿಕೊಳ್ಳಬಹುದು.


ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.magneticsponsoringonline.com/

http://sunnaturalflash.magneticsponsoringonline.com/letter_1.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ