MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ನವೆಂಬರ್ 4, 2010

ಎಲ್ಲರೂ ಸೋತರು ! ಆದರೆ ಎಲ್ಲರೂ ಗೆದ್ದರು !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಪ್ರೆಂಡ್ಸ್ ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ ಇವತ್ತು ಎಲ್ಲರೂ ಸೋತರು .ಆದರೆ ಎಲ್ಲರೂ ಗೆದ್ದರು ಎನ್ನುವ ವಿಷಯದ ಬಗ್ಗೆ ಲೇಖನ ಬರೆಯುತ್ತಿದ್ದೇನೆ .

ನೀವೆಲ್ಲರೂ ವಿಚಿತ್ರ ಎನಿಸುವ ಈ ಪ್ರಮಾಣ ವಚನವನ್ನು ಮತ್ತು ಒಂದು ಹೃದಯಸ್ಪರ್ಶಿ ಪ್ರಸಂಗವನ್ನು ಕೇಳಲೇಬೇಕು . ಮೊದಲು ವಿಚಿತ್ರ ಪ್ರಮಾಣ ವಚನ; "ನಾನು ಗೆಲ್ಲಲು ಬಿಡಿ. ನಾನು ಗೆಲ್ಲಲಾಗದಿದ್ದರೆ, ನನ್ನ ಪ್ರಯತ್ನದಲ್ಲಿ ನಾನು ಧೈರ್ಯವಾಗಿರಲು ಬಿಡಿ !" ಈ ಪ್ರಮಾಣ ವಚನವನ್ನು ವಿಶೇಷ ಒಲಿಂಪಿಕ್ಸ್ ಕ್ರೀಡಾ ಸ್ಪರ್ಧೆಗಳಲ್ಲಿ ಹೇಳಿಕೊಡಲಾಗುತ್ತದೆ.

ನಾವೆಲ್ಲಾ ಒಲಿಂಪಿಕ್ಸ್ ಕ್ರೀಡಾ ಸ್ಪರ್ಧೆಗಳ ಬಗ್ಗೆ ಕೇಳಿದ್ದೇವೆ. ಆದರೆ ವಿಶೇಷ ಒಲಿಂಪಿಕ್ಸ್ ಸ್ಪರ್ಧೆಗಳ ಬಗ್ಗೆ ಬಹಳಷ್ಟು ಜನ ಕೇಳಿರಲಿಕ್ಕಿಲ್ಲ . ಭೌದ್ಧಿಕ ವಿಕಲಚೆತನರಿಗಾಗಿಯೇ ಸ್ಥಾಪಿತವಾಗಿರುವ ಈ ಸ್ಪರ್ಧೆಗಳ ಉದ್ದೇಶವೂ ಉದಾತ್ತವಾದದ್ದೇ ! "ಭೌದ್ಧಿಕ ವಿಕಲಚೇತನ ಜನರು ಆತ್ಮವಿಶ್ವಾಸವನ್ನು ವಿಶೇಷ ಕೌಶಲ್ಯವನ್ನು ಮತ್ತು ವೈಯಕ್ತಿಕ ಸಾಧನೆಯ ಪ್ರಜ್ಞೆಯನ್ನು ತರಬೇತಿ ಮತ್ತು ಸ್ಪರ್ಧೆಗಳ ಮೂಲಕ ಬೆಳೆಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ " ಇದನ್ನು ಸ್ಥಾಪಿಸಲಾಗಿದೆ.

ಸುಮಾರು ಒಂದು ನೂರ ಎಪ್ಪತ್ತೈದು ದೇಶಗಳ ಎರಡು ಕೋಟಿ ಜನರು ಇದರಲ್ಲಿ ಭಾಗವಹಿಸುತ್ತಾರೆ . ಇವು ಕೂಡ ನಾಲ್ಕು ವರ್ಷಗಳಿಗೊಮ್ಮೆ ನಡೆಸಲ್ಪಡುತ್ತವೆ. ಆದರೆ ಬೇಸಿಗೆ ಕಾಲದ ಸ್ಪರ್ಧೆಗಳು ಮತ್ತು ಚಳಿಗಾಲದ ಸ್ಪರ್ಧೆಗಳು ಎಂಬ ಎರಡು ವಿಭಾಗಗಳಲ್ಲಿ ಇವನ್ನು ನಡೆಸಲಾಗುತ್ತದೆ.
ಸಿಯಾಟೆಲ್ ನಲ್ಲಿ ವಿಶೇಷ ಒಲಿಂಪಿಕ್ಸ್ ನ ಒಂದು ನೂರು ಮೀಟರ್ ಓಟದ ಸ್ಪರ್ಧೆ ನಡೆಯುತ್ತಿತ್ತು. ಒಂಬತ್ತು ಭೌದ್ಧಿಕ ವಿಕಲಚೇತನ ಮಕ್ಕಳು ಸಿದ್ಧವಾಗಿ ನಿಂತಿದ್ದರು. "ಹೊರಡಿ" ಎಂದು ಸೂಚಿಸುವ ಶಬ್ದ ಬಂದ ತಕ್ಷಣ ಎಲ್ಲರೂ ಓಡಲು ಮೊದಲು ಮಾಡಿದರು. ಓಡಿ ಗುರಿ ಮುಟ್ಟಬೇಕೆಂಬ, ಗೆಲ್ಲಬೇಕೆಂಬ ಉತ್ಸಾಹವಿತ್ತು. ಆದರೆ ಅಂತಹ ರಭಸ ಏನೂ ಇರಲಿಲ್ಲ. ಎಲ್ಲರೂ ಆರಾಮವಾಗಿಯೇ ಓಡುತ್ತಿದ್ದರು. ಸ್ವಲ್ಪ ದೂರ ಓಡುವಷ್ಟರಲ್ಲಿ ಒಬ್ಬ ಪುಟ್ಟ ಹುಡುಗ ಎಡವಿ ಬಿದ್ದುಬಿಟ್ಟ. ಒಂದೆರಡು ಉರುಳು ಉರುಳಿದ. ನೋವೋ ನಿರಾಸೆಯೋ ಜೋರಾಗಿ ಅಳಲು ಪ್ರಾರಂಭಿಸಿದ. ಈ ಅಳುವಿನ ಶಬ್ದ ಕೇಳಿ ಮುಂದೆ ಹೋಗಿದ್ದ ಎಂಟೂ ಜನ ಓಟಗಾರರು ಓಟ ನಿಲ್ಲಿಸಿದರು. ಅವನತ್ತ ನೋಡಿದರು. ಹಿಂತಿರುಗಿ ಬಂದರು. ಬಿದ್ದಿದ್ದವನ ಸುತ್ತಲೂ ನಿತರು. ಏನಾಯಿತು ಎಂದು ಕೇಳಿದರು. ಆಟ ಅಳುತ್ತಳುತ್ತಲೇ ತಾನು ಎಡವಿ ಬಿದ್ದದ್ದನ್ನೂ ತನಗೆ ಪೆಟ್ಟು ತಗುಲಿದ ಕಾಲಿನ ಭಾಗವನ್ನೂ ತೋರಿಸಿದ. ಎಲ್ಲ ಓಟಗಾರರೂ ಬಗ್ಗಿ ಆ ಕಾಲನ್ನು ಸವರಿದರು. ಒಂದಿಬ್ಬರು ಅಲ್ಲಿಗೆ ಮುತ್ತಿಟ್ಟು ಬೇಗ ವಾಸಿಯಾಗುತ್ತದೆ. ಚಿಂತಿಸಬೇಡ ಏನಾದರು. ಎಲ್ಲರು ಅವನನ್ನು ಹಿಡಿದು ಎಬ್ಬಿಸಿದರು.

ಇದೆಲ್ಲವನ್ನೂ ಗ್ಯಾಲರಿಯಲ್ಲಿ ಕುಳಿತಿದ್ದ ಸಾವಿರಾರು ಜನ ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ಓಟಗಾರರೆಲ್ಲ ಪರಸ್ಪರ ಕೈ ಹಿಡಿದುಕೊಂಡು ಸ್ಪರ್ಧೆಯ ಗುರಿಯತ್ತ ನಿಧಾನವಾಗಿ ನಡೆದು ಬಂದರು. ಗುರಿಯನ್ನು ಒಟ್ಟಾಗಿ ಮುಟ್ಟಿ ಗ್ಯಾಲರಿಯ ಕಡೆ ಕೈ ಬೀಸಿ ನಕ್ಕರು. ಗ್ಯಾಲರಿಯಲ್ಲಿದ್ದ ಜನ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದರು. ಬಹಳ ಸಮಯದವರೆಗೆ ಚಪ್ಪಾಳೆ ತಟ್ಟುತ್ತಲೇ ಇದ್ದರು. ಏಕೆಂದರೆ ಆ ಓಟ ಸ್ಪರ್ಧೆಯಲ್ಲಿ ಯಾರೋ ಒಬ್ಬರು ಗೆದ್ದಿರಲಿಲ್ಲ. ಎಲ್ಲರೂ ಸೋತಿದ್ದರು. ಆದರೆ ಎಲ್ಲರೂ ಗೆದ್ದಿದ್ದರು.! ಆ ಭೌದ್ಧಿಕ ವಿಕಲಚೇತನರ ಹೃದಯವಂತಿಕೆ ಗೆದ್ದಿತ್ತು. ಅಂದು ಒಲಿಂಪಿಕ್ಸ್ ಪಾಳೆಯದಲ್ಲಿ ಇದರದ್ದೇ ಮಾತು !. ಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ಇದರದ್ದೇ ಸುದ್ಧಿ !

ಬದುಕಿನಲ್ಲಿ ನಾವು ಗೆಲ್ಲುವುದೇ ಮುಖ್ಯವಲ್ಲ ! ನಮ್ಮೊಂದಿಗೆ ಓಡಲಾಗದೆ ಬಿದ್ದವರನ್ನು ಮೇಲಕ್ಕೆತ್ತುವುದು . ಅವರ ನೋವನ್ನು ನಾವೂ ಹಂಚಿಕೊಂಡು ಸಾಂತ್ವನ ಹೇಳುವುದು ಮುಖ್ಯ !





http://sunnaturalflash.trafficformula2.com/

http://sunnaturalflash.trafficformula2.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ