MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಡಿಸೆಂಬರ್ 2, 2010

ಬದುಕು ಮತ್ತು ಕಷ್ಟ , ಅಗಸ ಮತ್ತು ಬಟ್ಟೆ.!

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ನಮ್ಮೆಲ್ಲರ ಬದುಕಿನಲ್ಲಿ ತೊಂದರೆ ತಾಪತ್ರಯಗಳು ಬಂದು ಆಗೊಮ್ಮೆ ಈಗೊಮ್ಮೆ ನಮ್ಮನ್ನು ಕಾಡಿರಬಹುದು. ನಮಗೇಕೆ ಹೀಗಾಯಿತು ಎಂದು ನೊಂದುಕೊಂಡಿರಬಹುದು. ಇಂತಹ ಪ್ರಸಂಗವೊಂದು ಭಗವಾನ್ ರಮಣ ಮಹರ್ಷಿಗಳ ಭಕ್ತರೊಬ್ಬರ ಬದುಕಿನಲ್ಲೂ ನಡೆದಿತ್ತು. ಅವರಿಗೆ ಒಮ್ಮೆ ಮೇಲಿಂದ ಮೇಲೆ ಏನೇನೋ ಸಮಸ್ಯೆಗಳು ಎದುರಾದಾಗ ಅವರು ಭಗವಾನರಿಗೆ ತಮ್ಮ ಗೋಳನ್ನು ಹೇಳಿಕೊಂಡರು. ದೇವರಿಗೆ ತಮ್ಮ ಮೇಲೇನೋ ಕೋಪ ಬಂದಿರಬೇಕು. ಅವನು ತಮಗಾಗಿ ಕಷ್ಟಗಳ ಸೃಷ್ಟಿ ಮಾಡಿ ಕಳುಹಿಸುತ್ತಿದ್ದಾನೆಂದು ಗೋಳಾಡಿದರು. ಭಗವಾನರು ನಸುನಕ್ಕು "ಅದಿರಲಿ ! ನಿಮ್ಮ ಊರಿನಲ್ಲಿ ಮಡಿವಾಳರು ಬಟ್ಟೆಯನ್ನು ಹೇಗೆ ಶುಭ್ರಗೊಳಿಸುತ್ತಾರೆ?"ಎಂದಾಗ ಭಗವಾನರು ಬಟ್ಟೆಯ ಮೇಲಿನ ಸಿಟ್ಟಿನಿಂದ ಮಡಿವಾಳರು ಅದನ್ನು ಎತ್ತೆತ್ತಿ ಬಡಿಯುವುದಿಲ್ಲ. ಹಾಗೆ ಬಡಿಯುವುದರಿಂದ ಬಟ್ಟೆ ಶುಭ್ರಗೊಳಿಸುತ್ತಾರೆ .. ಹಾಗೆಯೇ ನಿಮಗೆ ಕಷ್ಟಗಳು ಬಂದಿರುವುದು ದೇವರ ಸಿಟ್ಟಿನಿಂದಲ್ಲ. ಬಹುಶ; ನಿಮ್ಮನ್ನು ಗಟ್ಟಿಗೊಳಿಸಲು ಬಂದಿರಬೇಕು." ಎಂದು ಸಮಾಧಾನ ಮಾಡಿದರಂತೆ. ಅದಾದ ನಂತರ ಕೆಲವೇ ದಿನಗಳಲ್ಲಿ ಆ ಭಕ್ತರಿಗೆ ಒಳ್ಳೆಯ ಅವಕಾಶಗಳು ಬಂದೊದಗಿದವಂತೆ.

ನಮ್ಮ ಚಿಂತನೆಯೂ ಅಂತಹ ಸಂದರ್ಭಗಳಲ್ಲಿ ಇದೇ ದಾರಿಯಲ್ಲಿ ಸಾಗುವುದುಂಟು. ಯಾವುದೋ ದೈವ ನಮ್ಮ ಮೇಲೆ ಸೇಡು ತೀರಿಸಿ ಕೊಳ್ಳುತ್ತಿದೆಯೆಂಬ , ಬದುಕಿನ ಎಲ್ಲ ಮಾರ್ಗಗಳು ಮುಚ್ಚಿ ಹೋದುವೆಂಬ ಬಾವನೆ ಬರಬಹುದು. ಆದರೆ ಯಾರಿಗೆ ಗೊತ್ತು ? ಸಮಸ್ಯೆಯ ಒಳಗೊಂದು ಸದಾವಕಾಸ ಹುದುಗಿರಬಹುದು. ಅಂತಹ ಒಂದೆರಡು ಘಟನೆಗಳು.

ಒಬ್ಬ ಯುವಕನಿದ್ದ . ಆತನಿಗೆ ಓದುವ ಹುಚ್ಚು .ಆದರೆ ಸಣ್ಣ ಅಪಘಾತದಿಂದಾಗಿ ಆತ ತನ್ನೆರಡು ಕಣ್ಣುಗಳನ್ನು ಕಳೆದುಕೊಂಡ. ನಿರಾಸೆಯ ಕಾರ್ಮೋಡ ಕವಿಯಿತು. ಆದರೆ ಆತ ಸುಮ್ಮನೆ ಕೂರಲಿಲ್ಲ. ಕುರುಡರು ಓದುವುದಕ್ಕೆ ಸಾಧ್ಯವಾಗುವಂತ ದ್ದೇನಾದರೂ ಮಾಡಬೇಕೆಂಬ ಹುಮ್ಮಸ್ಸು ಬಂದಿತು. ಕೆಲವಾರು ವರ್ಷದ ಶ್ರಮದ ನಂತರ ಒಂದು ವಿಶೇಷ ಲಿಪಿ ಕಂಡು ಹಿಡಿದ. ಲಕ್ಷಾಂತರ ಜನರಿಗೆ ಉಪಕಾರಿಯಾದ. ಆ ಲಿಪಿ ಇಂದಿಗೂ ಬಳಕೆಯಲ್ಲಿದೆ. ಅದೇ ಬ್ರೈಲ್ ಲಿಪಿ. ಆ ಯುವಕನ ಹೆಸರು ಬ್ರೈಲ್ ! ಅವನ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಆ ಅಪಘಾತದಿಂದ ತನ್ನ ಬಾಳೇ ಸಾರ್ಥಕವಾಯಿತೆಂದು ಆತ ಹೇಳಿಕೊಳ್ಳುತ್ತಿದ್ದ.

ಭಾರತದ ಒಂದು ಪ್ರದೇಶದಲ್ಲಿ ಕಡಲೆ ಕಾಯಿಯನ್ನು ತಲೆತಲಾಂತರಗಳಿಂದ ಬೆಳೆದುಕೊಂಡು ಬರುತ್ತಿದ್ದರು. ಒಮ್ಮೆ ಸತತ ಮೂರು ವರ್ಷಗಳ ಕಾಲ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟಕ್ಕೊಳಗಾದರು . ಕೊನೆಗೆ ಯಾರೋ ಧೈರ್ಯ ಮಾಡಿ ಕಡಲೇಕಾಯಿ ಬೀಜದಿಂದ ಕಡಲೇಕಾಯಿ ಬೀಜ ಮತ್ತು ಬೆಲ್ಲದ ಮಿಶ್ರಣದಿಂದ ಮಿಟಾಯಿ ಮಾಡಿ ಮಾರಲು ಮೊದಲು ಮಾಡಿದರು. ಒಳ್ಳೆಯ ಲಾಭವೂ ಬಂತು. ಅದೀಗ ಲೋ-ಣಾವಾಲ ಚಿಕ್ಕಿ ಎಂಬ ಹೆಸರಿನಿಂದ ಪ್ರಖ್ಯಾತಿಯಾಗಿದೆ. ಮುಂಬೈಗೆ ಹೋಗುವ ದಾರಿಯಲ್ಲಿರುವ ಲೋಣಾವಾಲೆ ಯಲ್ಲಿ ಎಲ್ಲರೂ ಚಿಕ್ಕಿ ಕೊಂಡುಕೊಂಡೆ ಮುಂದೆ ಹೋಗುತ್ತಾರೆ. ಬೆಲೆ ಕುಸಿತ ಅವರಿಗೆ ಬದುಕಿನ ಹೊಸ ದಾರಿಯನ್ನು ತೋರಿಸಿತು.

ಬದುಕಿನ ದಾರಿಯಲ್ಲಿ ಅಡ್ಡಗಲ್ಲು ಎದುರಾದಾಗ ನಾವು ಅದನ್ನು ಸರಿಸಿ ಹೋಗಬಹುದು. ಅದನ್ನೇರಿ ದಾಟಿ ಹೋಗಬಹುದು. ಅದರಿಂದ ನುಸುಳಿ ಹೋಗಬಹುದು. ಅದನ್ನು ಬಳಸಿ ಹೋಗಬಹುದು. ಅಥವಾ ಅದನ್ನು ಒಡೆದು ಪುಡಿ ಮಾಡಿ ರಸ್ತೆಗೆ ಜಲ್ಲಿಯಂತೆ ಉಪಯೋಗಿಸಿ ಹೋಗಬಹುದು. ಅಥವಾ ದೇವರನ್ನು ದೂಷಿಸುತ್ತ ಕೂರಬಹುದು. ಆಯ್ಕೆ ನಮ್ಮದೇ ಅಲ್ಲವೇ.?

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ