MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಡಿಸೆಂಬರ್ 16, 2010

ಕೈ ಕೆಳಗಿನವರನ್ನು ಕೀಳಾಗಿ ಕಾಣದವರು ದೊಡ್ಡ ಮನುಷ್ಯರು !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಆಶ್ಚರ್ಯಕರ ವಿಷಯ ! ಎರಡು ವಿಭಿನ್ನ ದೇಶಗಳು ಪರಸ್ಪರ ಅಷ್ಟೇನೂ ಸೌಹಾದರ್ವಿಲ್ಲ. ಆದರೆ ಎರಡು ದೇಶಗಳ ರಾಷ್ಟ್ರಗೀತೆಯನ್ನು ಬರೆದವರು ಒಬ್ಬರೇ . ಒಂದೇ ಭಾರತ, ಮತ್ತೊಂದು ಬಾಂಗ್ಲಾದೇಶ . ಭಾರತ ದೇಶದ "ಜನ ಗಣ ಮನ "ಬಾಂಗ್ಲಾದೇಶದ "ಅಮರ್ ಸೋನಾರ್ ಬಾಂಗ್ಲಾ ". ಇವೆರಡು ರಾಷ್ಟ್ರಗೀತೆಗಳನ್ನು ಬರೆದವರು ರವೀಂದ್ರನಾಥ ಟ್ಯಾಗೋರ್ ! ರವೀಂದ್ರನಾಥ ಟ್ಯಾಗೋರರು ಇಂತಹ ಅನೇಕ ಆಶ್ಚರ್ಯಕರ ಸಂಗತಿಗಳಿಗೆ ಕಾರಣಿ ಭೂತರಾಗಿದ್ದಾರೆ . ಅವುಗಳಲ್ಲಿ ಕೆಲವು ಇಲ್ಲಿವೆ.


ತಮ್ಮ ಎಂಟನೆಯ ವಯಸ್ಸಿಗೆ ಕವನಗಳನ್ನು ರಚಿಸಿ, ಹದಿನಾರನೇ ವಯಸ್ಸಿಗೆ ಸುದೀರ್ಘ ಕಾವ್ಯಗಳನ್ನು ಬರೆದು ಪ್ರಕಟಿಸಿದವರು ವಿನೂತನ "ರವೀಂದ್ರ ಸಂಗೀತ " ಪದ್ಧತಿಯನ್ನು ಪ್ರಸಿದ್ಧಿಗೊಳಿಸಿದವರು, ಭಾರತಕ್ಕೆ ಮೊಟ್ಟಮೊದಲ ನೋಬಲ್ ಪ್ರಶಸ್ತಿ ತಂದು ಕೊಟ್ಟರು. ಅವರು ಸೃಷ್ಟಿಸಿದ ಕಾದಂಬರಿಗಳು , ನಾಟಕಗಳು ,ಕವನಗಳು ಮತ್ತು ಸುವಿಖ್ಯಾತ ಶಾಂತಿನಿಕೇತನ ದ ವಿಶ್ವಭಾರತಿ ವಿಶ್ವವಿಧ್ಯಾಲಯದಿಂದ ಅಮರರಾದವರು.

ಇದೆಲ್ಲಕ್ಕಿಂತ ಮುಖ್ಯವಾದುದು ಅವರ ಮಾನವೀಯ ಗುಣಗಳು . "ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ. ಎದುರುಗಡೆ ಬೈಯಬೇಡ ,"ಎಂಬುದನ್ನು ಅಕ್ಷರಶ ; ಪಾಲಿಸಿದವರು . ಇದಕ್ಕೆ ಕಾರಣ ಅವರ ಜೀವನದಲ್ಲಿ ನಡೆದ ಹೃದಯಸ್ಪರ್ಶಿ ಘಟನೆ.

ಒಂದು ಬೆಳಗ್ಗೆ ಟ್ಯಾಗೋರರ ಸೇವಕ ಕೆಲಸಕ್ಕೆ ಹಾಜರಾಗಲಿಲ್ಲ. ಅವನು ರಾತ್ರಿ ಮನೆಯಲ್ಲಿ ಇರಲಿಲ್ಲ. ಬಾಗಿಲು ಗಳೆಲ್ಲ ತೆಗೆದೇ ಇದ್ದವು. ಬಾವಿಯಿಂದ ನೀರು ಸೇದಿರಲಿಲ್ಲ . ಬೆಳಗಿನ ಉಪಾಹಾರ ಸಿದ್ಧವಿರಲಿಲ್ಲ. ಅಂದಿನ ಉಡುಪುಗಳನ್ನು ತೆಗೆದು ಇಟ್ಟಿರಲಿಲ್ಲ. ಟ್ಯಾಗೋರ್ ರರಿಗೆ ಅಂದು ಯಾವ ಕೆಲಸವೂ ಆಗಲಿಲ್ಲ. ದಿನವಿಡೀ ಕಸಿವಿಸಿ . ಎಲ್ಲವು ಏರುಪೇರು .ಟ್ಯಾಗೋರ್ ರವರಿಗೆ ಬಹಳ ಸಿಟ್ಟು ಬಂತು. ಸೇವಕ ಬಂದ ಮೇಲೆ ಅವನಿಗೆ ದೊಡ್ಡ ಶಿಕ್ಷೆ ನೀಡಬೇಕೆಂದು ತೀರ್ಮಾನಿಸಿದರು. ಸಂಜೆಯ ಹೊತ್ತಿಗೆ ಸೇವಕ ಬಂದು ಅವರ ಮುಂದೆ ತಲೆಬಾಗಿ ಕೈ ಕಟ್ಟಿ ನಿಂತ. ಟ್ಯಾಗೋರರು ಅವನಿಗೆ ಚೆನ್ನಾಗಿ ಬೈದು ಅವನನ್ನು ಕೆಲಸದಿಂದ ಕಿತ್ತು ಹಾಕಿದ್ದೇನೆಂದು ಅಲ್ಲಿಂದ ತೊಲಗಬೇಕೆಂದು ಆಜ್ಞಾಪಿಸಿದರು. ತಲೆ ಬಾಗಿ ನಿಂತಿದ್ದ ಅವನ ಮೌನದಿಂದ ಟ್ಯಾಗೋರರ ಸಿಟ್ಟು ಹೆಚ್ಚಾಯಿತು . "ಅಲ್ಲಿ ಸುಮ್ಮನ್ಯಾಕೆ ನಿಂತಿದ್ದೀಯಾ ?ಎಲ್ಲಿ ಸಾಯಲು ಹೋಗಿದ್ದೆ ? ಅದನ್ನಾದರೂ ಬೊಗಳು " ಎಂದು ಘರ್ಜಿಸಿದರು . ಆತ ಮೆಲುದನಿಯಲ್ಲಿ ಹೇಳಿದ . "ನಿನ್ನೆ ರಾತ್ರಿ ನನ್ನ ಪುಟ್ಟ ಮಗಳು ತೀರಿಕೊಂಡ ಲೆಂಬ ಸುದ್ದಿ ಬಂತು . ನನಗೇನು ಮಾಡಲು ತೋಚಲಿಲ್ಲ . ನೀವು ಮಲಗಿದ್ದಿರಿ . ನಿಮ್ಮನ್ನೆಬ್ಬಿಸುವ ಧೈರ್ಯವಾಗಲಿಲ್ಲ . ನಾನು ನನ್ನ ಊರಿಗೆ ಹೋಗಿ ಆ ಮಗುವಿನ ಅಂತ್ಯಕ್ರಿಯೆ ಮುಗಿಸಿ , ಈಗ ಮರಳಿ ಬಂದಿದ್ದೇನೆ . ನನ್ನ ತಪ್ಪನ್ನು ಕ್ಷಮಿಸಿ " ಎಂದು ಹೇಳಿ ನಿಧಾನವಾಗಿ ಮನೆಯೊಳಕ್ಕೆ ಹೋದ ತನ್ನ ಕಾರ್ಯದಲ್ಲಿ ತೊಡಗಿದ.

ಟ್ಯಾಗೋರ್ ರರಿಗೆ ಒಮ್ಮೆಲೇ ಹೊಟ್ಟೆ ತೊಳಸಿ ದಂತಾಯಿತು . ಏನು ಮಾಡಲು ತೋಚಲಿಲ್ಲ . ವಿಷಯವೇನೆಂದು ವಿಚಾರಿಸದೆ ವಾಚಾಮಗೋಚರ ಬೈದದ್ದಕ್ಕಾಗಿ ಪಶ್ಚಾತಾಪವಾಯಿತು . ಅದೇ ಕೊನೆಯ ಬಾರಿ ಅವರು ತಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ರೇಗಿದ್ದು , ಕೂಗಾಡಿದ್ದು , ತಮ್ಮ ಕಿರಿಯ ಸಹೋದರನಿಗೆ ತೋರಬಹುದಾದ ಗೌರವವನ್ನು ಪ್ರೀತ್ಯಾದಾರ ಗಳನ್ನೂ ತೋರುತ್ತಿದ್ದರಂತೆ . ನಾವೂ ಟ್ಯಾಗೋರ್ ರಿಂದ ಈ ಪಾಠ ಗಳನ್ನೂ ಕಲಿಯಬಹುದೇ ?. "ತಮಗಿಂತ ಮೇಲಿನವರನ್ನು ಯಾರು ಬೇಕಾದರೂ ಚೆನ್ನಾಗಿ ಮಾತನಾಡಿಸಬಹುದು . ಆದರೆ ತಮಗಿಂತ ಕೆಳಗಿನವರನ್ನು ಚೆನ್ನಾಗಿ ಮಾತನಾಡಿಸು ವವರು ದೊಡ್ಡ ಮನುಷ್ಯರೇ ಆಗಿರಬೇಕು " ಎಂಬ ಮಾತು ಎಷ್ಟು ನಿಜ ಅಲ್ಲವೇ ?
ಶುಭದಿನದ ಶುಭಾಶಯಗಳೊಂದಿಗೆ

ಎ.ಟಿ, ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೆತಿದಾರರು ಹಾಗೂ ನೆರಮಾರುಕಟ್ಟೆ ಪ್ರತಿನಿಧಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ