MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಡಿಸೆಂಬರ್ 11, 2010

ರಾಜನ ಕುದುರೆ ಕೆಟ್ಟ ಕನಸು ಕಂಡಾಗ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಕುದುರೆಗಳಿಗೂ ಕೆಟ್ಟ ಕನಸುಗಳು ಬೀಳುತ್ತವೆಯೇ ? ಜೀವಂತವಿರುವ ಮತ್ತು ಯೋಚಿಸುವ ಸಾಮರ್ಥ್ಯವಿರುವ ಎಲ್ಲ ಪ್ರಾಣಿಗಳಿಗೂ ಕನಸುಗಳು ಬೀಳುವುದು ಸಹಜವೆನ್ನುತ್ತಾರೆ.

ಒಬ್ಬ ರಾಜನ ಬಳಿ ಉತ್ತಮ ತಳಿಯ ಕುದುರೆಯೊಂದಿತ್ತು. ಒಂದು ದಿನ ಬೆಳಿಗ್ಗೆ ಎದ್ದು ತಾನಿದ್ದ ಸ್ಥಳದಲ್ಲೇ ಕದಲದೆ ಕುಳಿತಿತ್ತು. ಒತ್ತಾಯದಿಂದ ಎಬ್ಬಿಸಿದಾಗಲೂ ಮೂರು ಕಾಲಿನ ಮೇಲೆ ನಿಲ್ಲುತ್ತಿತ್ತು. ಮುಂಗಾಲನ್ನು ನೆಲದ ಮೇಲೆ ಊರುತ್ತಿರಲಿಲ್ಲ. ಮತ್ತೆ ಅಲ್ಲೇ ಕುಸಿದು ಬೀಳುತ್ತಿತ್ತು. ರಾವುತನಿಗೆ ಗಾಬರಿ. ಪ್ರೀತಿಯ ಕುದುರೆಗೆ ಹೀಗಾದದ್ದನ್ನು ಕಂಡು ರಾಜನಿಗೂ ಚಿಂತೆ. ಪಶುವೈದ್ಯರು ಕುದುರೆಯನ್ನು ಕೂಲಂಕುಶವಾಗಿ ಪರೀಕ್ಷಿಸಿ "ಕುದುರೆ ಕಾಲಿಗೆ ಪೆಟ್ಟಾಗಿಲ್ಲ, ಅದು ಆರೋಗ್ಯಕರವಾಗಿದೆ. ಬಹುಶ; ಕುದುರೆ ಕಾಲಿಗೆ ಪೆಟ್ಟು ಬಿದ್ದಹಾಗೆ. ಅದು ಮುರಿದು ಹೋದ ಹಾಗೆ ಕನಸು ಕಂಡಿರಬೇಕು. ಈಗ ಎದ್ದ ಮೇಲೂ ಕನಸಿನ ಅನುಭವ ಮರೆಯಾಗುತ್ತಿಲ್ಲ. ಕಾಲು ತುಂಡು ಆಗಿಹೋಗಿದೆ ಎಂಬ ಭಾವನೆ ಅದರ ಮನಸ್ಸಿನಲ್ಲಿ ದೃಢವಾಗಿ ನಿಂತಿದೆ. ಹಾಗಾಗಿ ಅದು ಆ ಕಾಲನ್ನೂರಲು ನಿರಾಕರಿಸುತ್ತಿದೆ."ಎಂದರು. ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ಒಂದು ಬಯಲಿನಲ್ಲಿ ಎಪ್ಪತ್ತು ಕುದುರೆಗಳನ್ನು ಸಾಲಾಗಿ ನಿಲ್ಲಿಸಿದರು. ಕಷ್ಟಪಟ್ಟು ಈ ಕುದುರೆಯನ್ನೂ ಅಲ್ಲಿಗೆ ಕರೆದೊಯ್ದು ಸಾಲಿನಲ್ಲಿ ನಿಲ್ಲಿಸಿದರು. ಎಲ್ಲವೂ ಸಿದ್ಧವಾಗಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಬಹುಜೋರು ಶಬ್ಧದ ನಗಾರಿಗಳನ್ನು ಬಾರಿಸಲಾಯಿತು. ಫಿರಂಗಿಗಳಿಂದ ತೋಪು ಹಾರಿಸಲಾಯಿತು. ದಿ ಡೀರೆಂದು ಬಂದ ಕಿವಿಗಡಚಿಕ್ಕುವ ಧ್ವನಿ ಕೇಳಿ ಎಲ್ಲ ಕುದುರೆಗಳು ಗಾಬರಿಗೊಂಡು ಸಿಕ್ಕಾಪಟ್ಟೆ ಓಡ ಹತ್ತಿದವು. ಇದನ್ನು ಕಂಡ ರಾಜನ ಕುದುರೆಗೆ ಕನಸಿನ ನೆನಪು ಮರೆತು ಹೋಯಿತು. ಎಲ್ಲ ಕುದುರೆಗಳೊಂದಿಗೆ ಈ ಕುದುರೆಯೂ ಓಡಲು ಹತ್ತಿತು. ಆಶ್ಚರ್ಯವೆಂದರೆ ಓಡುವಾಗ ಈ ಕುದುರೆ ಕುಂಟುತ್ತಿರಲಿಲ್ಲ. ಸಹಜವಾಗಿ ಓಡುತ್ತಿತ್ತು. ಮತ್ತು ಕೆಲವೇ ನಿಮಿಷಗಳಲ್ಲಿ ಉಳಿದ ಕುದುರೆಗಳನ್ನು ಹಿಂದೆ ಹಾಕಿತು. ಇದನ್ನು ಕಂಡ ರಾಜನಿಗೆ ನಿರಾಳವಾಯಿತು.

ನಮ್ಮ ಜೀವನಗಳಲ್ಲಿಯೂ ಇಂತಹ ಪರಿಸ್ಥಿತಿಗಳು ಅನೇಕ ಬಾರಿ ಬರಬಹುದು. ನಾವು ಕನಿಸಿಗೆ ಹೆದರದಿರಬಹುದು. ಆದರೆ ಬೇರೆಯವರು ಆಡುವ ಮಾತುಗಳಿಗೆ ಹೆದರಿಬಿಡುತ್ತೇವೆ. ಯಾರಾದರೂ ನಮ್ಮ ಸಾಮರ್ಥ್ಯದ ಬಗ್ಗೆ ಕಡಿಮೆ ಅಂದಾಜು ಮಾಡಿದರೆ ನಾವದನ್ನು ನಂಬಿ ಬಿಡುತ್ತೇವೆ. ಅಥವಾ ನಮ್ಮ ಮುಂದಿನ ದಿನಗಳಲ್ಲಿ ಏನೋ ಕೆಡುಕಾಗುತ್ತದೆಯೆಂದು ಯಾರೋ ಭವಿಷ್ಯ ನುಡಿದರೆ ಗಾಬರಿಯಾಗಿಬಿಡುತ್ತೇವೆ.

ಇದಕ್ಕೊಂದು ನಿಜ ಜೀವನದ ಉದಾಹರಣೆ ಎಂದರೆ ಒಂದು ತರಗತಿಯಲ್ಲಿ ನಲವತ್ತೆರಡು ವಿದ್ಯಾರ್ಥಿಗಳಿದ್ದರು. ಪರೀಕ್ಷೆಯ ಮುನ್ನಾದಿನ ಉಪಾಧ್ಯಾಯರು " ಈ ವರ್ಷದಿಂದ ಪರೀಕ್ಷಾ ಪದ್ಧತಿ ಬದಲಾಗಿದೆ. ಪ್ರಬಂಧ ರೀತಿಯ ಉತ್ತರಗಳ ಬದಲು ಕೇವಲ ಹೌದು ಅಥವಾ ಇಲ್ಲ ಎಂಬ ರೀತಿಯ ಉತ್ತರಗಳನ್ನು ನೀಡಬೇಕು. ಇದು ಬಹಳ ಕಷ್ಟಕರ ಪದ್ಧತಿ."ಎಂದು ವಿಧ್ಯಾರ್ಥಿಗಳಿಗೆ ತಿಳಿಸಿದರು. "ಹೊಸ ಪದ್ಧತಿ ಬಹಳ ಕಷ್ಟಕರ " ಶಬ್ಧಗಳನ್ನು ಕೇಳಿದ ಹದಿನಾರು ಜನ ಪರೀಕ್ಷೆಗೆ ಬರಲೇ ಇಲ್ಲ. ಹೆದರಿ ಮನೆಯಲ್ಲೇ ಕುಳಿತರು. ಆದರೆ ಪರೀಕ್ಷೆಗೆ ಬಂದ ಇಪ್ಪತ್ತಾರು ಜನಕ್ಕೆ ಹೊಸ ಪದ್ಧತಿ ಬಹಳ ಸರಳವೆನಿಸಿತು. ಎಲ್ಲರೂ ಉತ್ತೀರ್ಣರಾದರು. ಹೆದರಿ ಪರೀಕ್ಷೆಗೆ ಬಾರದಿದ್ದ ಹದಿನಾರು ಜನ ಕೈ ಕೈ ಹಿಸುಕಿಕೊಂಡರು. ಹೆದರದೆ ಪರೀಕ್ಷೆಗೆ ಹಾಜರಾಗಿದ್ದರೆ ತಾವೂ ಉತ್ತಿರ್ಣರಾಗುತ್ತಿದ್ದೆವಲ್ಲ ಎಂದು ಪೇಚಾಡಿಕೊಂಡರು.

ಮುಂದಿನ ಬಾರಿ ನಾವು ಕಷ್ಟ ಅಪಾಯ ಮುಂತಾದ ಮಾತುಗಳು ಕೇಳಿದಾಗ ಅದಕ್ಕೆ ಹೆದರದೆ ನಮ್ಮ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಂಡರೆ ಆ ಕುದುರೆಯ ಪರಿಸ್ಥಿತಿ ನಮಗಾಗುವುದಿಲ್ಲ.

ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ