MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಡಿಸೆಂಬರ್ 27, 2010

ಬದುಕೇ ಬೆಲೆಬಾಳುವ ಬಳುವಳಿ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದು ವಿಶೇಷವನ್ನು ಗಮನಿಸಿರಬಹುದು ! ಯಾವ ಮಕ್ಕಳು ತಮ್ಮ ಜನ್ಮದಿನದ ಬಗ್ಗೆ ಹೇಳುವಾಗ ಅದನ್ನು ಬರ್ತ್ ಡೇ ಎಂದು ಹೇಳುವುದಿಲ್ಲ. ಹ್ಯಾಪಿ ಬರ್ತ್ ಡೇ ಎಂದೇ ಹೇಳುತ್ತಾರೆ. ಅಂದರೆ ಹುಟ್ಟುಹಬ್ಬದ ದಿನ ಆನಂದ ಮಯವಾಗಿರುತ್ತದೆಂಬ ವಿಶ್ವಾಸ ಅವರದ್ದು ! ಅದು ಸಹಜವೂ ಹೌದು . ಏಕೆಂದರೆ ಅಂದು ಅವರಿಗೆ ಹೊಸ ಬಟ್ಟೆ ,ಕೇಕ್ ,ಉಡುಗೊರೆ ಮತ್ತು ಶುಭಾಶಯಗಳು ದೊರೆಯುತ್ತವೆ.

ಪುಟ್ಟ ಎಂಟು ವರ್ಷದ ಬಾಲಕ. ಶ್ರೀಮಂತ ಕುಟುಂಬದವನು . ಮನೆಯ ಹಿರಿಯರಾದ ಅಜ್ಜ ಆಗರ್ಭ ಶ್ರೀಮಂತರು . ಮೊಮ್ಮಗನ ಮೇಲೆ ಅಪಾರ ಪ್ರೀತಿ. ಪುಟ್ಟಣ ಹುಟ್ಟು ಹಬ್ಬ ಬಂತು. ಅಜ್ಜನಿಂದ ದೊಡ್ಡ ಉಡುಗೊರೆ ದೊರೆಯುತ್ತದೆಯೆಂದು ನಿರೀಕ್ಷಿಸಿದ್ದ . ತನ್ನ ಗೆಳೆಯರೊಂದಿಗೆ ತಾತ ಕೊಡಬಹುದಾದ ಉಡುಗೊರೆಯ ಬಗ್ಗೆ ಚರ್ಚಿಸಿದ್ದ , ಅವನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಯಿತು . ಸಮಾರಂಭ ಮುಗಿದ ನಂತರ ಪುಟ್ಟ ತನಗೆ ಬಂದ ಉಡುಗೊರೆಗಳನ್ನು ಒಂದೊಂದಾಗಿ ತೆಗೆದು ನೋಡುತ್ತಿದ್ದ.

ಪ್ರತಿ ಉಡುಗೊರೆ ಗೂ ಆನಂದದ ಉದ್ಘಾರ ತೆಗೆಯುತ್ತಿದ್ದ. ಆಟಿಕೆಗಳು , ಪುಸ್ತಕಗಳು ಇನ್ನೂ ಏನೇನೋ ಬಂದಿದ್ದವು. ಅಜ್ಜನ ಉಡುಗೊರೆಯ ಪ್ಯಾಕೆಟ್ ಮಾತ್ರ ಚಿಕ್ಕದಿತ್ತು. ಪುಟ್ಟನಿಗೆ ಕೊಂಚ ನಿರಾಶೆಯಾಯಿತು. ಅದರ ಒಳಗಡೆ ಒಂದಷ್ಟು ಕಾಗದ ಪತ್ರ ಗಳು ಇದ್ದವು . ಪುಟ್ಟನಿಗೆ ಸಿಟ್ಟೇ ಬಂತು. ಆ ಕಾಗದ ಪತ್ರಗಳನ್ನು ದೂರಕ್ಕೆ ಬಿಸಾಡಿದ. ಅಲ್ಲಿಯೇ ಕುಳಿತ್ತಿದ್ದ ಅಜ್ಜ , ಅಪ್ಪ -ಅಮ್ಮ ಎಲ್ಲರೂ ದಿಗ್ಮೂಢ ರಾದರು. ಅಮ್ಮ ತಕ್ಷಣ ಎದ್ದು ಹೋಗಿ ಆ ಕಾಗದ ಪತ್ರಗಳನ್ನು ಜೋಪಾನವಾಗಿ ಎತ್ತಿಕೊಂಡು ನೋಡಿದಳು. ಆಕೆಯ ಮುಖ ಅರಳಿತು. ಪುಟ್ಟನಿಗೆ "ಹಾಗೆಲ್ಲ ಮಾಡಬಾರದು. ಅಜ್ಜನ ಮನಸ್ಸಿಗೆ ನೋವಾಗುತ್ತದೆ. ಅಜ್ಜನಲ್ಲಿ ಕ್ಷಮಾಪಣೆ ಕೇಳು " ಎಂದರು. ಪುಟ್ಟ ಅರ್ಧಮನಸ್ಸಿನಲ್ಲೇ ಎದ್ದು ನಿಧಾನವಾಗಿ ಅಜ್ಜನ ಬಳಿಗೆ ತೆರಳಿದ. ಅವನು ಕ್ಷಮಾಪಣೆ ಕೇಳುವ ಮೊದಲೇ ,ಎಲ್ಲವನ್ನು ಗಮನಿಸಿದ್ದ ಅಜ್ಜ ತಮ್ಮ ಜೇಬಿನಿಂದ ಒಂದಷ್ಟು ನಾಣ್ಯಗಳನ್ನು ತೆಗೆದು ಪುಟ್ಟಣ ಕೈಗಿತ್ತರು. ನಿನಗೇನೂ ಬೇಕೋ ಕೊಂಡುಕೋ ಎಂದರು. ಪುಟ್ಟನಿಗೆ ಆನಂದವೋ ಆನಂದ. ಅಜ್ಜನಿಗೆ ಧನ್ಯವಾದ ಹೇಳಿ ಸಂತೋಷದಿಂದ ಹೊರಗೆ ಓಡಿಹೋದ . ಏಕೆಂದರೆ ಅಜ್ಜ ಇಷ್ಟೊಂದು ದುಡ್ಡು ಕೊಟ್ಟಿದ್ದಾರೆಂದು ತನ್ನ ಗೆಳೆಯರಿಗೆಲ್ಲ ಹೇಳಬೇಕಿತ್ತು.

ಪುಟ್ಟಣ ಅಪ್ಪ ಅಮ್ಮ ಎದ್ದು ಅಜ್ಜನ ಬಳಿಗೆ ಹೋಗಿ "ಪುಟ್ಟ ಇನ್ನು ಚಿಕ್ಕ ಹುಡುಗ ಅವನಿಗೆ ಅರ್ಥವಾಗುವುದಿಲ್ಲ . ಅವನ ನಡವಳಿಕೆಯನ್ನು ಮನ್ನಿಸಿಬಿಡಿ. ನೀವು ಪುಟ್ಟನಿಗೆ ಬರೆದುಕೊಟ್ಟಿರುವ ಈ ಕಾಫಿ ಎಸ್ಟೇಟ್ ಗಾಗಿ ನಿಮಗೆ ಧನ್ಯವಾದಗಳು . ಎಂದು ಹೇಳಿದರು. ಅಜ್ಜ ತನ್ನ ಹುಟ್ಟು ಹಬ್ಬದ ಉಡುಗೊರೆಯಾಗಿ ಕೊಟ್ಟಿದ್ದ ಕಾಫಿ ಎಸ್ಟೇಟ್ ನ ಬೆಲೆ ಅರ್ಥ ಮಾಡಿ ಕೊಳ್ಳದ ಪುಟ್ಟ ತನ್ನ ಕೈಗೆ ಸಿಕ್ಕಿದ್ದ ಪುಡಿಗಾಸಿಗೆ ಸಂತೋಷ ಪಡುತ್ತಿದ್ದ !

ಈ ಘಟನೆಯ ಪುಟ್ಟ ಬೇರೆ ಯಾರೋ ಅಲ್ಲ. ಬಹುಶ; ಕ್ಷಣ ಹೊತ್ತು ಅಣೆಮುತ್ತು ಪುಸ್ತಕದ ಲೇಖಕ ಎಸ್.ಷಡಕ್ಷರಿ ಇರಬೇಕು!. ನಾವೂ ಅನೇಕ ಬಾರಿ ಪುಟ್ಟನಂತೆಯೇ ವರ್ತಿಸುತ್ತೇವೆ. ಬದುಕು ನಮಗೆ ಸಿಕ್ಕ ಬೆಲೆಬಾಳುವ ಬಳುವಳಿ ನಾವದನ್ನು ಉದಾಸೀನ ಮಾಡುತ್ತೇವೆ. ಬಳಸದೆ ದೂರ ಎಸೆಯುತ್ತೇವೆ. ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳದೆ ಇಷ್ಟೇನಾ ಎಂದು ಕುಗ್ಗುತ್ತೇವೆ . ಸಣ್ಣ ಪುಟ್ಟ ಬಳುವಳಿಗಳು ಸಿಕ್ಕಾಗ ಹಿಗ್ಗುತ್ತೇವೆ. ಚಿಲ್ಲರೆ ದುಡ್ಡು ಝಣ ಝಣ ಶಬ್ದ ಮಾಡಿದಾಗ ನಮಗೆ ಬೇರೇನೋ ಕೇಳಿಸುವುದಿಲ್ಲ. ಮಾನವ ಜನ್ಮ ದೊಡ್ಡದು ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಅದನ್ನು ಹಾನಿ ಮಾಡಿಕೊಳ್ಳುವ ಹುಚ್ಚಪ್ಪ ಗಳಾಗುತ್ತೇವೆ.

ನಿಮಗಾಗಿ ಒಂದು ಅವಕಾಸ ಇಲ್ಲಿದೆ.
http://sunnaturalflash.buildingonabudget.com/

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ


http://www.sunnaturalflash.com/

















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ