MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಡಿಸೆಂಬರ್ 7, 2010

ವಿಷಯ ತಿಳಿಯದೆ ತೀರ್ಮಾನ ಘೋಶಿಸಿದವರಿಗೆ ಶಿಕ್ಷೆ !

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ಸಿದ್ದಾಂತ.
ಕೆಲವಾರು ವರ್ಷಗಳ ಹಿಂದೆ ರಮಣ ಶ್ರೀ ಶರಣ ಪ್ರಶಸ್ತಿಯನ್ನು ಪಡೆದುಕೊಂಡವರು ಹೆಸರಾಂತ ಗಾಯಕ ದೈವದತ್ತ ಮಧುರ ಕಂಟದ ಪಂಡೀತ್ ವೆಂಕಟೇಶ ಕುಮಾರರು.

ಒಬ್ಬ ಸಾಹುಕಾರರು ಒಂದು ವಾರ ದೇವಸ್ಥಾನದಲ್ಲಿ ಹಾಲುಪಾಯಸ ಹಂಚುವುದಾಗಿ ಹರಕೆ ಹೊತ್ತರಂತೆ. ಮೊದಲನೆಯ ದಿನ ಎಲ್ಲ ಚೆನ್ನಾಗಿತ್ತು. ಮನೆಯಲ್ಲಿ ಹಾಲುಪಾಯಸ ಮಾಡಿಸಿ ದೇವಸ್ಥಾನದಲ್ಲಿ ನೈವೇದ್ಯ ಮಾಡಿಸಿ ಭಕ್ತರಿಗೆ ಹಂಚಿದರಂತೆ. ಮರುದಿನ ಪಾಯಸ ಒಯ್ಯುವಾಗ ಒಂದು ಅನಾಹುತ ಅವರಿಗರಿವಿಲ್ಲದಂತೆ ನಡೆಯಿತು. ಆಕಾಶದಲ್ಲಿ ಹಾರುತ್ತಿದ್ದ ಒಂದು ಹದ್ದು ತನ್ನ ಬಾಯಲ್ಲಿ ನಾಗರಹಾವನ್ನು ಹಿಡಿದಿತ್ತು . ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದ ಹಾವಿನ ಬಾಯಿಂದ ಒಂದೆರಡು ಹನಿ ವಿಷ ಪಾಯಸದ ಪಾತ್ರೆಗೆ ಬಿತ್ತಂತೆ . ಅದು ಗೊತ್ತಿಲ್ಲದ ಸಾಹುಕಾರರು ಪಾಯಸವನ್ನು ಪುರೋಹಿತರಿಗೆ ಒಪ್ಪಿಸಿ., ನೈವೇದ್ಯ ಮಾಡಿಸಿ, ಅಲ್ಲಿದ್ದ ನಾಲ್ಕು ಜನಕ್ಕೆ ಹಂಚಿದರು. ಅದನ್ನು ಸೇವಿಸಿದ ನಾಲ್ಕು ಜನ ಅಲ್ಲೇ ಪ್ರಾಣಬಿಟ್ಟರು. ವಿಷಯ ರಾಜನವರೆಗೂ ಹೋಯಿತು. ವಿಚಾರಣೆ ನಡೆಯಿತು. ಜನ ಸತ್ತಿದ್ದಾರೆ . ಯಾರಿಗೆ ಶಿಕ್ಷೆ ಯಾಗಬೇಕು ?
ರಾಜ ಸಾಹುಕಾರನನ್ನು ಪಾಯಸ ತಯಾರಿಸಿದವರನ್ನು ಪುರೋಹಿತರನ್ನು ಸಂಬಂಧ ಪಟ್ಟವರನ್ನೆಲ್ಲ ಕರೆಸಿ ವಿಚಾರಣೆ ನಡೆಸಿದರು. ಇಂತವರದ್ದೇ ತಪ್ಪೆಂದು ತೀರ್ಮಾನಿಸುವುದು ಕಷ್ಟವಾಯಿತು . ಸ್ಥಳಪರೀಕ್ಷೆ ಮಾಡಿ ಯಾರಿಗೆ ಶಿಕ್ಷೆ ವಿಧಿಸಬೇಕೆಂದು ಶಿಫಾರಸು ಮಾಡುವುದಕ್ಕಾಗಿ ಸಮಿತಿಯೊಂದನ್ನು ನೇಮಿಸಿ ಕಳುಹಿಸಿದರು.

ಸಮಿತಿಯವರು ಸ್ಥಳ ಪರೀಕ್ಷೆ ಮಾಡುವಾಗ ಒಂದು ವಿಚಿತ್ರ ಪ್ರಸಂಗ ನಡೆಯಿತು. ಸ್ಥಳದಲ್ಲಿ ಊರಿನ ನೂರಾರು ಜನ ಸೇರಿದ್ದರು. ಆಗ ಅಲ್ಲಿಗೆ ಬೇರೆ ಊರಿನ ಎಂಟು ಜನ ಬಂದರು . ಅವರಿಗೆ ನಡೆದಿದ್ದ ದುರಂತದ ಬಗ್ಗೆ ಗೊತ್ತಿರಲಿಲ್ಲ . ಇಲ್ಲಿ ಹಂಚುವ ಹಾಲು ಪಾಯಸ ಸವಿಯಲು ಬಂದಿದ್ದೆವೆನ್ದರು.

ಅಲ್ಲಿದ್ದ ಒಬ್ಬ ಮುದುಕಿ ತಕ್ಷಣ 'ನಿನ್ನೆ ನಾಲ್ಕು ಜನರನ್ನು ಸಾಹುಕಾರ ಸಾಯಿಸಿದ್ದಾನೆ . ಇಂದು ಎಂಟು ಜನ ಸಾಯಲು ಬಂದಿದ್ದೀರಾ 'ಎಂದು ಒದರಿದಳು. ಸಮಿತಿ ಸದಸ್ಯರಿಗೆ ಈ ಮಾತುಗಳು ಸ್ಪಷ್ಟವಾಗಿ ಕೇಳಿಸಿದವು. ಅವರು ಅದನ್ನು ಬರೆದು ಇಟ್ಟುಕೊಂಡರು.

ಮರುದಿನ ಅವರು ತಮ್ಮ ಶಿಫಾರಸನ್ನು ರಾಜನಿಗೆ ಸಲ್ಲಿಸಿದರು. ಈ ಘಟನೆಗೆ ಯಾರೂ ನೇರ ಹೊಣೆಗಾರರಲ್ಲ. ಯಾರಿಗೂ ಶಿಕ್ಷೆ ವಿಧಿಸಲಾಗುವುದಿಲ್ಲ. ಆದರೆ ವಿಷಯ ಸರಿಯಾಗಿ ತಿಳಿದುಕೊಳ್ಳದೆ ಸಾಹುಕಾರನೆ ಕೊಲೆಗಾರ ಎಂಬರ್ಥದಲ್ಲಿ ಮಾತನಾಡಿ ಸಮಿತಿ ಅಭಿಪ್ರಾಯದ ಮೇಲೆ ಪ್ರಭಾವ ಬೀರಲೆತ್ನಿಸಿದ ಮುದುಕಿಗೆ ಶಿಕ್ಷೆ ವಿಧಿಸಬೇಕೆಂದು ಹೇಳಿದ್ದರಂತೆ . ಮುದುಕಿಗೆ ಶಿಕ್ಷೆಯಾಯಿತಂತೆ.

ಈ ಕಥೆಯ ಸಂದೇಶವೆಂದರೆ ವಿಷಯದ ಅರಿವಿಲ್ಲದೆ ಮತ್ತೊಬ್ಬರ ಮೇಲೆ ದೋಷಾರೋಪಣೆ ಮಾಡುವುದು ಸರಿಯಲ್ಲ."ಅವರ ಚರಿತ್ರೆ ನಮಗೆ ಗೊತ್ತು , ಇವರ ನಡತೆ ಸರಿಯಿಲ್ಲ. ಅವರು ನಂಬಲರ್ಹರಲ್ಲ ,ಅವನು ಉದ್ಧಾರವಾಗುವುದಿಲ್ಲ ' ಈ ದೇಶಕ್ಕೆ ಭವಿಷ್ಯವಿಲ್ಲ ಎಂಬಿತ್ಯಾದಿ ಮಾತುಗಳನ್ನಾಡುವವರನ್ನು ನಾವೆಲ್ಲಾ ಕಂಡಿದ್ದೇವೆ. ವಿಷಯ ಗೊತ್ತಿರಲಿ, ಗೊತ್ತಿಲ್ಲದಿರಲಿ , ಎಲ್ಲ ಬಲ್ಲವರಂತೆ ಮಾತನಾಡುವುದನ್ನು ನಾವು ಗಮನಿಸಿರುತ್ತೇವೆ. ಬೇಜವಾಬ್ದಾರಿ ಮಾತುಗಳು ,ತೀರ್ಪುಗಳು , ಘೋಷಣೆಗಳು , ಕೆಲವೊಮ್ಮೆ ಸಂಬಂಧ ಪದದ ವಿಷಯಗಳ ಬಗ್ಗೆಯೂ ಏನೇನೋ ಮಾತುಗಳು , ಅವುಗಳಿಂದ ಯಾರ ಮನಸ್ಸಿಗೂ ನೋವಾಗಬಹುದು. ಮತ್ಯಾರಿಗೋ ತೊಂದರೆಯೂ ಆಗಬಹುದು. ಅಥಾವಾ ಯಾರಿಗೆ ಗೊತ್ತು ? ಆ ಮುದುಕಿಗಾದಂತೆ ನಮಗೂ ಶಿಕ್ಷೆಯಾಗಬಹುದು !

ದಯವಿಟ್ಟು ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ