MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಡಿಸೆಂಬರ್ 5, 2010

ಸಂಗೀತದಲ್ಲಿ ಯಶಸ್ಸನ್ನು ಗಳಿಸಲು ಏಳು ಸ್ವರಗಳ ಜತೆಗೆ ಏಳು ಕಾರಣಗಳು _ಎ. ಟಿ .ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ಸಿದ್ದಾಂತ.
ಕೆಲವಾರು ವರ್ಷಗಳ ಹಿಂದೆ ರಮಣ ಶ್ರೀ ಶರಣ ಪ್ರಶಸ್ತಿಯನ್ನು ಪಡೆದುಕೊಂಡವರು ಹೆಸರಾಂತ ಗಾಯಕ ದೈವದತ್ತ ಮಧುರ ಕಂಟದ ಪಂಡೀತ್ ವೆಂಕಟೇಶ ಕುಮಾರರು.

ಒಮ್ಮೆ ಅವರು ಅನೇಕ ದಾಸರ ಪದಗಳನ್ನು ಶರಣರ ವಚನಗಳನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಸುಶ್ರಾವ್ಯವಾಗಿ ಹಾಡಿ ಎಲ್ಲರೂ ತಲೆದೂಗುವಂತೆ ಮಾಡಿದರು. ಕೊನೆಯಲ್ಲಿ ಮಂಗಳ ಹಾಡಿದಾಗಲೇ ಸಮಯದ ಅರಿವು ಶ್ರೋತೃಗಳಿಗೆ ಆಗಿದ್ದು . ಅಷ್ಟಾಗಿಯೂ ಅವರು ಕೊಂಚವೂ ದಣಿದವರಂತೆ ಕಾಣಲಿಲ್ಲ. ಕಚೇರಿಯುದ್ದಕ್ಕೂ ಸರಾಗವಾಗಿ ಹಾಡುತ್ತಿದ್ದರು. ಕೆಲವು ಪ್ರೇಕ್ಷಕರು ವೇದಿಕೆಗೆ ಹೋಗಿ ಇಷ್ಟು ಸರಾಗವಾಗಿ ಹೇಗೆ ಹಾಡಲು ಸಾಧ್ಯವಾಯಿತೆಂದು ಕೇಳಿದಾಗ ಅವರು ತಮ್ಮದೇ ಆದ ಶೈಲಿಯಲ್ಲಿ "ಅದೇನು ಕಷ್ಟವಲ್ಲ ! ಬಹಳ ಸುಲಭ "ಎಂದರು. "ಸ್ವಲ್ಪ ನಮಗೂ ಹೇಳಿ " ಎಂದು ಪ್ರೇಕ್ಷಕರು ಕೇಳಿದಾಗ . ಅವರು ಹತ್ತು ನಿಮಿಷ ಸಮಯ ಕೊಟ್ಟರೆ ಹೇಳುತ್ತೇನೆ ಎಂದಾಗ ಪ್ರೇಕ್ಷಕರು ಅವರ ಮುಂದೆ ಕುಳಿತರು. ಅವರು ತಮ್ಮ ಯಶಸ್ಸಿನ, ಸಾಧನೆಯ ಗುಟ್ಟನ್ನು ಹೇಳತೊಡಗಿದರು.

'ಹೀಗೆ ಸರಾಗವಾಗಿ ಹಾಡಲಿಕ್ಕೆ ಏಳು ಕಾರಣಗಳು ಇವೆ. ಮೊದಲನೆಯದು ಕನಸು, ನಾನು ಚಿಕ್ಕಂದಿನಿಂದಲೂ ಹಾಡುಗಾರನಾಗಬೇಕೆಂಬ ಕನಸು ಕಾಣುತ್ತಲೇ ಇದ್ದೆ. ಎರಡನೆಯದ್ದು ಅಭ್ಯಾಸ . ನನ್ನ ಗುರುಗಳು ಪೂಜ್ಯ ಪುಟ್ಟರಾಜ ಗವಾಯಿಗಳ ಬಳಿಯಲ್ಲಿಯೇ ಇದ್ದು ಹನ್ನೊಂದು ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡಿದೆ. ಒಂದು ದಿನವೂ ರಜೆ ಯಿಲ್ಲದೆ. ಮುಂಜಾವಿನಿಂದ ರಾತ್ರಿಯವರೆವಿಗೂ ಪಾಠ ಕಲಿಯಬೇಕಿತ್ತು. ಮೂರನೆಯದ್ದು ಆಹಾರ ಮತ್ತು ನಿದ್ದೆಯ ತ್ಯಾಗ ಮಾಡಬೇಕಿತ್ತು. ನಾಲ್ಕನೆಯದ್ದು ಗುರುಗಳ ಮಾರ್ಗದರ್ಶನವನ್ನು ಚಾಚು ತಪ್ಪದೆ ಪಾಲಿಸಬೇಕಿತ್ತು . ಆ ದೀರ್ಘ ಅಧ್ಯಯನದ ನಂತರ ನಮ್ಮ ಕಾಲ ಮೇಲೆ ನಾವು ನಿಂತೆವು.

ಐದನೆಯದು ಈಗಲೂ ಪ್ರತಿದಿನ ನಾಲ್ಕೈದು ಗಂಟೆಗಳ ಕಾಲ ಅಭ್ಯಾಸ ಮಾಡುತ್ತೇನೆ. ಊಟ ಬಿಡುತ್ತೇನೆ ಆದರೆ ಅಭ್ಯಾಸ ಬಿಡುವ ಹಾಗಿಲ್ಲ. ಒಂದು ದಿನ ಅಭ್ಯಾಸ ಮಾಡದೆ ಎಲ್ಲಾದರೂ ಹಾಡಲು ಕುಳಿತರೆ ನಮಗೂ ಕೇಳುಗರಿಗೂ ಇಂದು ಅಭ್ಯಾಸ ಮಾಡಿಲ್ಲ ಎಂಬುದರ ಸುಳಿವು ಗೊತ್ತಾಗಿಬಿಡುತ್ತದೆ.
ಈಗಲೂ ಏನು ತಿನ್ನಬೇಕು ಏನು ತಿನ್ನಬಾರದೆಮ್ಬುದರ ಬಗ್ಗೆ ಬಹಳ ಎಚ್ಚರ ವಹಿಸಬೇಕಾಗುತ್ತದೆ. ಇಷ್ಟಪಟ್ಟಿ ದ್ದನ್ನೆಲ್ಲ ತಿನ್ನುವಂತಿಲ್ಲ. ಮತ್ತು ಆರನೆಯದ್ದು ಸಂಗೀತವನ್ನು ಬಿಟ್ಟು ಮತ್ತೇನೂ ಚಿಂತಿಸುವುದಿಲ್ಲ. ಮಾತನಾಡುವುದಿಲ್ಲ. ಬದುಕೆಲ್ಲ ಅದಕ್ಕೆ ಮೀಸಲಾಗಿದೆ. ಏಳನೆಯದ್ದು ಇವೆಲ್ಲದರ ಜತೆಗೆ ಸ್ವಲ್ಪ ದೇವರ ದಯೆ ಮತ್ತು ಗುರುಗಳ ಅಶ್ರೀವಾದವೂ ಇರಬೇಕು. ಈ ಸಪ್ತ ನಿಯಮಗಳನ್ನು ಪಾಲಿಸಿದರೆ ಯಾರು ಬೇಕಾದರೂ ಸರಾಗವಾಗಿ ನನಗಿಂತ ಚೆನ್ನಾಗಿ ಹಾಡಬಹುದು . ಅದರಲ್ಲೇನೂ ಕಷ್ಟವಿಲ್ಲ.'.'

ಅವರ ಸಂಗೀತಕ್ಕೆ ತಲೆದೂಗಿದ ಹಾಗೆಯೇ ಅವರ ಅರ್ಥಪೂರ್ಣ ಮಾತುಗಳಿಗೂ ಪ್ರೇಕ್ಷಕರು ತಲೆದೂಗಿದರು. ಸಂಗೀತ ಕ್ಷೇತ್ರ ದಲ್ಲಿ ಯಶಸ್ಸಿಗೆ ಕೇವಲ ಸಪ್ತ ಸ್ವರಗಳು ಸಾಲದು. ಅದರೊಟ್ಟಿಗೆ ಕನಸು , ಅಧ್ಯಯನ , ಶ್ರಮ , ಸುಖತ್ಯಾಗ , ನಿತ್ಯಾಭ್ಯಾಸ , ಸಂಪೂರ್ಣ ಸಮರ್ಪಣೆ ಮತ್ತು ಗುರು-ದೈವಗಳ ಕೃಪೆ ಎಂಬ ಸಪ್ತ ನಿಯಮಗಳನ್ನೂ ಪಾಲಿಸಬೇಕೆಮ್ಬುದು ಎಷ್ಟು ನಿಜವಲ್ಲವೆ ? ಈ ನಿಯಮಗಳು ಬದುಕಿನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದಲ್ಲವೇ ?


ದಯವಿಟ್ಟು ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ