MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಡಿಸೆಂಬರ್ 21, 2010

ಒಳ್ಳೆಯವರಿಗೆ , ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ನಮಗೂ ಒಳ್ಳೆಯಾದಾಗುತ್ತದಲ್ಲವೇ ?

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಪುಟ್ಟ ಎನ್ನುವ ವ್ಯಕ್ತಿ ಎಂ. ಎ .ಉತ್ತೀರ್ಣನಾಗಿದ್ದ . ಮದುವೆಯೂ ಆಗಿತ್ತು. ಉದ್ಹ್ಯೋಗವನ್ನರಸಿ ಹೆಂಡತಿಯೊಡನೆ ನಗರಕ್ಕೆ ಬಂದಿದ್ದ. ಸಣ್ಣ ಮನೆಯಲ್ಲಿ ಬಾಡಿಗೆಗಿದ್ದ . ಹೆಂಡತಿಗೆನೋ ಸಣ್ಣ ಕೆಲಸ ಸಿಕ್ಕಿತು. ಅವನಿಗೆ ಸಿಕ್ಕಿರಲಿಲ್ಲ. ಜೀವನ ಹೇಗೋ ನಡೆಯುತ್ತಿತ್ತು. ಪ್ರತಿದಿನ ತನ್ನ ಹಳೆಯ ಸೈಕಲ್ಲನ್ನೇರಿ ಊರೆಲ್ಲ ಕೆಲಸ ಹುಡುಕುತ್ತಿದ್ದ. ಒಮ್ಮೆ ಸಂಜೆ ನಿರಾಶನಾಗಿ ಮನೆಗೆ ಬರುತ್ತಿದ್ದ. ದೂರದಲ್ಲಿ ಒಂದು ದೊಡ್ಡ ಕಾರು ರಸ್ತೆಯಲ್ಲಿ ನಿಂತಿತ್ತು. ಪಕ್ಕದಲ್ಲಿ ಒಬ್ಬ ಹೆಂಗಸು ಚಿಂತಾಕ್ರಾಂತ ಳಾಗಿನಿಂತಿದ್ದಳು . ಈತ ಆಕೆಯನ್ನು ಏನಾಯಿತೆಂದು ಕೇಳಿದ.

ಆಕೆ ಈತನ ಹಳೆಯ ಸೈಕಲ್ , ಮಾಸಿದ ಬಟ್ಟೆ , ಕುರುಚಲು ಗಡ್ಡ ನೋಡಿ ಮಾತನಾಡಲು ಹೆದರಿದರು. ಆದರೆ ಬೇರೆ ದಾರಿಯಿಲ್ಲದಿದ್ದರಿಂದ "ನನ್ನ ಕಾರು ಪೆಟ್ರೋಲ್ ಮುಗಿದು ನಿಂತಿದೆ. ಗಂಟೆಗಟ್ಟಲೆ ಕಾದರೂ ಹೋಗಿ ಪೆಟ್ರೋಲ್ ತರಲು ಬೇರೆ ಯಾವುದೇ ಲಾರಿ, ಬಸ್ಸು ಸಿಕ್ಕಲಿಲ್ಲ "ಎಂದರು. ಈತ ತಾನು ತಂದುಕೊಡುವೆನೆಂದು ಹೇಳಿದ. ಆಕೆ ದುಡ್ಡು ಕೊಟ್ಟರು. ಈತ ಹೋಗಿ ದೂರದ ಪೆಟ್ರೋಲ್ ಬಂಕಿ ನಿಂದ ಪೆಟ್ರೋಲ್ ತಂದು ಕಾರಿಗೆ ತುಂಬಿಸಿದ. ಆಕೆ ಕಾರು ಹತ್ತಿ ಹೊರಡುವ ಮುನ್ನ ಈತನಿಗೆ ಧನ್ಯವಾದ ಹೇಳಿ ಒಂದಷ್ಟು ಹಣ ಕೊಡಲು ಬಂದರು. ಈತ ವಿನಯದಿಂದಲೇ ಹಣ ಬೇಡವೆಂದ . "ನೀವು ಒಳ್ಳೆಯವರು , ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ. ನಾನು ಹೆಚ್ಚೇನೂ ಮಾಡಿಲ್ಲ. ನಿಮಗೆ ಒಳ್ಳೆಯದಾಗಲಿ " ಎಂದಷ್ಟೇ ಹೇಳಿದ. ಆಕೆ ಮತ್ತೊಮ್ಮೆ ಧನ್ಯವಾದ ಹೇಳಿಹೋದರು. ಈತ ಉಸ್ಸಪ್ಪಾ ಎಂದುಕೊಂಡು ಮನೆಗೆ ತೆರಳಿದ.

ಕಾರಿನಾಕೆ ಕೊಂಚ ದೂರ ಹೋದನಂತರ ಕಂಡ ಪೆಟ್ರೋಲ್ ಬ್ಯಾಂಕಿನಲ್ಲಿ ಕಾರಿನ ಟ್ಯಾಂಕ್ ತುಂಬಿಸಿ ಕೊಳ್ಳೋಣ ವೆಂದು ನಿಲ್ಲಿಸಿದಾಗ , ಆಕೆಗೆ ಆಶ್ಚರ್ಯ ವಾಯಿತು. ಏಕೆಂದರೆ ಪೆಟ್ರೋಲ್ ಹಾಕಲು ಬಂದದ್ದು ಒಬ್ಬ ತುಂಬು ಗರ್ಭಿಣಿ ಹೆಂಗಸು . ಆಕೆ ಕಾರಿನಾಕೆಯನ್ನು ಕಂಡು ಮುಗುಳ್ನಕ್ಕಳು . ಕಾರಿನಾಕೆ ಹೇಳಿದಷ್ಟು ಪೆಟ್ರೋಲ್ ತುಂಬಿಸಿದಳು . ಚೆನ್ನಾಗಿ ಮಾತನಾಡಿಸಿದಳು . ಬೇಕಿದ್ದರೆ ಪಕ್ಕದಲ್ಲೇ ಕ್ಯಾಂಟೀನ್ ಇದೆ ಎಂದಳು. ಕಾರಿನ ಚಕ್ರಗಳಿಗೆ ಗಾಳಿ ಬೇಕಾ ವಿಚಾರಿಸಿದಳು. ಇಷ್ಟು ಹೊತ್ತಿನಲ್ಲಿ ಒಬ್ಬರೇ ಡ್ರೈವ್ ಮಾಡುತ್ತಿದ್ದಿರಲ್ಲ . ಬೇಗ ಮನೆ ಸೇರಿಕೊಳ್ಳಿ ಎಂದೆಲ್ಲ ಹೇಳಿದಳು. ಕಾರಿನಾಕೆಗೆ ಆ ತುಂಬು ಗರ್ಭಿಣಿ ಕೊಟ್ಟ ಸೇವೆಗೆ ಮನ ತುಂಬಿ ಬಂದಂತಾಯಿತು . ಈ ಸ್ಥಿತಿಯಲ್ಲೂ ಏಕೆ ಕೆಲಸ ಮಾಡು ತ್ತಿದ್ದಿರೆಂದೂ , ಹೆರಿಗೆ ಯಾವಾಗೆಂದೂ ಕೇಳಿದರು. ಈಕೆ ತಿಂಗಳ ಕೊನೆಗೆಂದು ಡಾಕ್ಟರ್ ಹೇಳಿದ್ದಾರೆ ಎಂದಳು. ಕಾರಿನಾಕೆ ಪೆಟ್ರೋಲಿನ ಹಣ ಕೊಟ್ಟರು.

ಈಕೆ ಬಿಲ್ಲು ಮತ್ತು ಚಿಲ್ಲರೆ ತರುವಷ್ಟರಲ್ಲಿ ಕಾರು ಹೊರಟೆ ಹೋಗಿತ್ತು. ಚಿಲ್ಲರೆ ಬಿಟ್ಟು ಹೋಗಿದ್ದಾರಲ್ಲ ಎಂದುಕೊಳ್ಳುವಷ್ಟರಲ್ಲಿ ಅಲ್ಲಿದ್ದ ಟೇಬಲ್ಲಿನ ಮೇಲೊಂದು ಕವರ್ ಇತ್ತು. ಒಳಗಡೆ ಒಂದು ಸಾವಿರ ರೂಪಾಯಿ ಮತ್ತು ಒಂದು ಕಾಗದವಿತ್ತು. ಕಾಗದದಲ್ಲಿ "ನೀವು ಒಳ್ಳೆಯವರು , ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ . ನಾನು ಹೆಚ್ಚೇನೂ ಕೊಟ್ಟಿಲ್ಲ . ನಿಮಗೆ ಒಳ್ಳೆಯದಾಗಲಿ " ಎಂದಷ್ಟೇ ಬರೆದಿತ್ತು. ಗರ್ಭಿಣಿ ಹೆಂಗಸ್ಸಿಗೆ ಏನೂ ತೋಚಲಿಲ್ಲ . ಕೆಲಸ ಮುಗಿಸಿ ಮನೆಗೆ ಬಂದಾಗ ಗಂಡ ಮಲಗಿಬಿಟ್ಟಿದ್ದ. ಈಕೆ ಅವನನ್ನು ಎಬ್ಬಿಸಿ "ಪುಟ್ಟಾ ! ನನ್ನ ಹೆರಿಗೆ ಖರ್ಚಿಗೆ ನೀನು ಯೋಚಿಸಬೇಡ. ಹಣ ಹೊಂದಿಕೆಯಾಗಿದೆ " ಎಂದಾಗ ಆಕೆಯ ನಿರುಧ್ಯೋಗಿ ಗಂಡ ಪುಟ್ಟ ಉಸ್ಸಪ್ಪಾ ಎಂದ .

ಈ ಕಥೆ ಯಾ ನೀತಿ ಎಂದರೆ ಒಳ್ಳೆಯವರಿಗೆ , ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ನಮಗೂ ಒಳ್ಳೆಯದಾಗುತ್ತದಲ್ಲವೇ ?
http://sunnaturalflash.magneticsponsoringonline.com/

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.

ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ.
http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ