MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಮೇ 20, 2010

ಅಧ್ಯಯನದಲ್ಲಿ ಏಕಾಗ್ರತೆಯನ್ನು ತಂದುಕೊಳ್ಳಲು ಇನ್ನೊಂದು ಉಪಾಯವನ್ನು ಸೇರಿಸಿಕೊಳ್ಳಬಹುದು -ವಿಷಯದ ಕಡೆಗೆ ಚೆನ್ನಾಗಿ ಗಮನ ವಿಟ್ಟು ಓದುವುದೇ ಆ ಉಪಾಯ .

ಅಧ್ಯಯನದಲ್ಲಿ ಏಕಾಗ್ರತೆಯನ್ನು ತಂದುಕೊಳ್ಳಲು ಇನ್ನೊಂದು ಉಪಾಯವನ್ನು ಸೇರಿಸಿಕೊಳ್ಳಬಹುದು -ವಿಷಯದ ಕಡೆಗೆ ಚೆನ್ನಾಗಿ ಗಮನ ವಿಟ್ಟು ಓದುವುದೇ ಉಪಾಯ . ಹೀಗೆ ಗಮನವಿಡುವುದಕ್ಕೆ 'ಅವಧಾನ 'ಎನ್ನುತ್ತಾರೆ . ಎಂದರೆ ಇದೇ ಮನಸ್ಸನ್ನು ಸಾಕಷ್ಟು ಎಚ್ಚರದ ಸ್ಥಿತಿಯಲ್ಲಿಟ್ಟು ಕೊಂಡರೆ ಮಾತ್ರ ಈ 'ಅವಧಾನ'ಸಿದ್ದಿಸುತ್ತದೆ.ಹೆಚ್ಚಿನ ವಿದ್ಯ್ಯಾರ್ಥಿಗಳು ಗಮನವಿಟ್ಟು ಅಧ್ಯಯನ ಮಾಡಲು ಅಸಮರ್ಥರಾಗಿರುತ್ತಾರೆ. ಏಕೆಂದರೆ,ಅವರ ಮನಸ್ಸು ಒಂದು ಬಗೆಯ ಸ್ವಪ್ನಾವಸ್ಥೆಯಲ್ಲಿಯೇ ಇರುತ್ತದೆ .ಅಥವಾ ಯಾವುದೋ ಒಂದು ಭಾವಾಲೋಕದಲ್ಲಿ ವಿಹರಿಸುತ್ತಿರುತ್ತದೆ.ಆದರೆ ಯಾರಮನಸ್ಸು ಎಚ್ಚರದಿಂದಿರುತ್ತದೆಯೋ ಅವರಿಗೆ ಏಕಾಗ್ರತೆ ಸುಲಭವಾಗಿ ಸಿದ್ಧಿಸುತ್ತದೆ. 'ಹಾಗಾದರೆ ಈ ಮನಸ್ಸನ್ನು ಎಚ್ಚರದ ಸ್ಥಿತಿಯಲ್ಲಿಡುವುದು ಹೇಗೆ?'ಎಂಬ ಪ್ರಶೆ ಹುಟ್ಟಿಕೊಳ್ಳಲು ಸಾಧ್ಯವಿದೆ . ಇದಕ್ಕೆ ಕೆಲವು ಸಲಹೆಗಳನ್ನು ಕೊಡಬಹುದು.
ಕೆಲವು ಬಗೆಯ ಆಹಾರಫದಾರ್ಥಗಳನ್ನು ಸೇವಿಸಿದರೆ ನಿದ್ರೆ ಅಧಿಕವಾಗುವುದುಂಟು . ಅಂಥವುಗಳನ್ನು ವರ್ಜೆಸಬೇಕು.
ಶರೀರದ ಅಂಗಪ್ರತ್ಯನಗವನ್ನು ಅತ್ಯಂತ ಶುಚಿಯಾಗಿಟ್ಟು ಕೊಳ್ಳುವುದರಿಂದ ಮನಸ್ಸು ಉಲ್ಲಸಭರಿತವಾಗಿರುತ್ತದೆ.ಜೊತೆಗೆ ಹಾಸಿಗೆ ಬಟ್ಟೆಯಿಂದ ಹಿಡಿದು ಧರಿಸುವ ಬಟ್ಟೆಬರೆಯವರೆಗೆ ಪ್ರತಿಯೊಂದು ಚೊಕ್ಕಟವಾಗಿರುವಂತೆ ಎಚ್ಚರಿಕೆ ವಹಿಸಬೇಕು.
ವಾಸದ ಕೋಣೆಯಲ್ಲಿರುವ ಹಾಗೂ ದೈನಂದಿನ ಬಳಕೆಯ ಎಲ್ಲ ವಸ್ತು ಗಳೂ ಅಚ್ಚುಕಟ್ಟು ಆಗಿರಬೇಕು . ಈ ಅಚ್ಹುಕತ್ತುತನವು ಮನಸ್ಸಿನ ಎಚ್ಚರಸ್ಥಿತಿ ಯನ್ನು ಸಾರಿಹೇಳುತ್ತದೆ. ಹೆಚ್ಚಿನ ವಿದ್ಯ್ಯಾರ್ಥಿಗಳಲ್ಲಿ ಕಂಡುಬರುವುದು ಎಚ್ಚರಗೇಡಿತನವೇ . ಅವರು ಉಪಯೋಗಿಸುವ ಪುಸ್ತಾಕಾದಿ ಸಕಲ ವಸ್ತುಗಳು ಅಸ್ತವ್ಯಸ್ತವಾಗಿರುವುದು ಆ ಎಚ್ಚರಗೇಡಿ- ತನವನ್ನು ಎತ್ತಿತೋರಿಸುತ್ತದೆ.
ಶರೀರ-ವಸ್ತ್ರ -ವಸ್ತುಗಳನ್ನು ಚೊಕ್ಕಟವಾಗಿಯೂ ವ್ಯವಸ್ತಿತವಾಗಿಯು ಇಟ್ಟುಕೊಳ್ಳಬೇಕಾದಂತೆಯೇ ಮನಸ್ಸನ್ನೂ ಚೊಕ್ಕಟವಾಗಿಟ್ಟಿರಬೇಕು ಎಂಬ ಮಹತ್ವದ ಸಂಗತಿಯೊಂದು ವಿದ್ಯಾರ್ಥಿಗಳಿಗೆ ತಿಳಿದಿರಬೇಕು.ಅಸಭ್ಯ ,ಅಶ್ಲೀಲ ವಿಚಾರಗಳು ಮನಸ್ಸಿನೊಳಗೆ ಪ್ರವೇಶವಾಗಲು ಬಿಡಬಾರದೆಂಬ ವಿಷಯವಂತಿರಲಿ , ಹತ್ತಿರವೇ ಸುಳಿಯದಂತೆ ನೋಡಿಕೊಳ್ಳಬೇಕು .ಏಕೆಂದರೆ ಮನಸ್ಸನ್ನೂ ಕೆಡಿಸುವ ಮಹಾಮಾರಿಗಳು ಅವು.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ