MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಮೇ 17, 2010

ವಿದ್ಯಾರ್ಥಿಗಾಗಿ ಭಾಗ 6

ಸ್ವಾಮಿ ವಿವೇಕಾನಂದರು ಹೇಳುವಂತೆ , ಏಕಾಗ್ರಗೊಂಡ ಮನಸ್ಸು ಒಂದು ಸರ್ಚ್ ಲೈಟ್ ಇದ್ದಹಾಗೆ. ಸರ್ಚ್ಲೈಟು ದೂರದ ಮೂಲೆಯಲ್ಲಿರುವ ವಸ್ತುವನ್ನು ದ್ರಗ್ಗೊಚರವಾಗುವಂತೆ ಮಾಡುತ್ತದೆ.
ಈಗ
, ಮನಸ್ಸನ್ನು ಏಕಾಗ್ರ ಗೋಳಿಸಬೇಕೆಂಬುದೇನೋ ಸರಿಯೇ, ಆದರೆ ಯಾವುದರ ಮೇಲೆ ಏಕಾಗ್ರ ಗೊಳಿಸಬೇಕು? ಪ್ರಶ್ನೆಗೆ ಸರ್ವರೂ ಏಕಕಾಲ ದಲ್ಲಿ ಇಪ್ಪುವಂತಹ ಉತ್ತರ ಕೊಡಲು ಬರುವಂತಿಲ್ಲ . ಏಕೆಂದರೆ,ಮನಸ್ಸನ್ನು ಆತ್ಮಜ್ಯೋತಿಯ ಮೇಲೆ ಏಕಾಗ್ರಗೊಳಿಸಬೇಕು ಎಂದು ಹೇಳಿಬಿಟ್ಟರೆ ಸರ್ವರೂ ಯೋಗಿಗಳಾಗಲು ಹೊರಟಿಲ್ಲವಲ್ಲ! ಮನಸ್ಸನ್ನು ಭಗವಂತನ ಮೇಲೆ ಏಕಾಗ್ರ ಗೊಳಿಸಬೇಕು ಎಂದುಬಿಟ್ಟರೆ ಸರ್ವರೂ ಭಕ್ತರಲ್ಲವಲ್ಲ! ಮನಸ್ಸನ್ನು ಪಾಠದ ಮೇಲೆ ಏಕಾಗ್ರ ಗೊಳಿಸಬೇಕು ಎಂದು ಬಿಟ್ಟರೆ ಸರ್ವರೂ ಶಾಲಾವಿದ್ಯಾರ್ಥಿಗಳೆನಲ್ಲವಲ್ಲ! ಆದ್ದರಿಂದ ಅವರವರು ತಮತಮಗೆ ಅಗತ್ಯ ವಾದ ವಿಷಯದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು ಎನ್ನುವುದೇ ಸರಿ.
ಇಲ್ಲಿ
ನಾವು,ವಿದ್ಯಾರ್ಥಿಗಳು ತಮ್ಮ ಪಟ್ಯ ವಿಷಯದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕಾದ ಬಗೆಯನ್ನು ನೋಡೋಣ , ಏಕೆಂದರೆ, ಇದು ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ ಬರೆದ ಲೇಖನ.
ಯೋಗಿಗೆ
ಧ್ಯಾನಕ್ಕೆ ಕುಳಿತುಕೊಳ್ಳಲು ಒಂದು ಮೆತ್ತನೆಯ ಆಸನವಿರಬೇಕಾದಂತೆ , ವಿದ್ಯಾರ್ಥಿಗಳಿಗೆ ತಮ್ಮ ಪುಸ್ತಕ ವನ್ನು ಇಟ್ಟುಕೊಂಡು ಆರಾಮವಾಗಿ ಓದಲು ಅನುಕೂಲಿಸುವಂತೆ ಮೇಜು -ಕುರ್ಚಿ ಇರಬೇಕು .ವಿದ್ಯಾರ್ಥಿಯೂ ಹೆಚ್ಚ್ಹು ಕಡಿಮೆ ಒಬ್ಬ ಯೋಗಿಯನ್ತೆಯೇ . ಸಹಸ್ರಾರು ಬಡ ವಿದ್ಯಾರ್ಥಿಗಳು ಮೇಜು ಕುರ್ಚಿಗೆಲ್ಲಿಗೆ ಹೋಗಬೇಕು -ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಬಾರದು ."ಸರ್ ಎಂ ವಿಶ್ವೇಶ್ವರ ಯ್ಯನವರು ವಿದ್ಯಾರ್ಥಿಯಾಗಿದ್ದಾಗ ಅವರಿಗೆಲ್ಲಿತ್ತು ಮೇಜು -ಕುರ್ಚಿ ? ಬೀದಿಯ ಬೆಳಕಿನಲ್ಲಿ ಓದಿಯೇ ವಿಖ್ಯಾತರಾಗಲಿಲ್ಲವೇ?"ಎಂಬ ವಾದವನ್ನು ಇಲ್ಲಿ ತರಬಾರದು. ಏಕೆಂದರೆ ಬೀದಿಯ ಬೆಳಕಿನಲ್ಲಿ ಓದಿದವರೆಲ್ಲರೂ ವಿಶ್ವೇಶ್ವರ ಯ್ಯ ಆಗಲಾರರು. ವಿಚಾರ ಹಾಗಿರಲಿ , ಮೇಜು-ಕುರ್ಚಿಯ ಅನುಕೂಲತೆಯಿಲ್ಲದವರು ಒಂದು ಸರಿಯಾದ ಡೆಸ್ಕ್ ಅನ್ನಾದರೂ ಇಟ್ಟುಕೊಳ್ಳಬೇಕು
ಓದಲು
ಅಥವಾ ಬರೆಯಲು ಕುಳಿತಾಗ ಶರೀರ ತುಂಬಾ ಅಲುಗಾಡದೇ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು . ಹೆಚ್ಚಿನ ವಿದ್ಯಾರ್ಥಿಗಳು ಬಗೆಬಗೆಯ ಚಿತ್ರವಿಚಿತ್ರ ಭಾವಭಂಗಿಗಳಲ್ಲಿ ಕುಳಿತು ಓದುವುದು ಕಂಡುಬರುತ್ತದೆ . ಏನೋ ಮಹಾ ಆಲೋಚಿಸುವವರಂತೆ ಕಣ್ಣುಗಳನ್ನು ಅತ್ತಿತ್ತ ಚಲಿಸುತ್ತ,ಪೆನ್ನನ್ನೋ , ಪೆನ್ಸಿಲನ್ನೋ ಬಾಯಿಗಿಟ್ಟುಕೊಂಡು ಕಚ್ಚುತ್ತ ಓದುವವರೂ ಉಂಟು.
ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ ಎಂಬ ಸತ್ಯವನ್ನು ಅರಿತವರೇ ಜಾಣರು . ಈ ಏಕಾಗ್ರತೆ ಇಂಬುದು ಯೋಗಿಗಳಿಗೆ ಮಾತ್ರ ಅವಶ್ಯವಿರುವ ಸೊತ್ತು ಎಂದು ತಿಳಿಯುವುದು ಶುದ್ದ ತಪ್ಪು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೋರ್ವರಿಗೂ ಈ ಏಕಾಗ್ರತೆ ಅತ್ಯಗತ್ಯ . ಕಮ್ಮಾರರಲ್ಲಿ ,ಹಜಾಮರಲ್ಲಿ,ಬಡಗಿಗಳಲ್ಲಿ,ಅಕ್ಕಸಾಲಿಗರಲ್ಲಿ, ನೆಯ್ಗೆಯವರಲ್ಲಿ , ಈ ಏಕಾಗ್ರತೆ ಎಂಬುದು ಸಹಜವಾಗಿಯೇ ರೂಡ ಮೂಲ ಆಗಿರುವುದನ್ನು ಕಾಣಬಹುದು .ಕಮ್ಮಾರನ ಸುತ್ತಿಗೆ ಗುರಿತಪ್ಪಿದರೆ ಕೈಮುರಿದು ಕೊಳ್ಳುವ ಸಂಭವ ;ಹಜಾಮನ ಕಟ್ಟಿ ಸ್ವಲ್ಪ ಜಾರಿದರೂ ಚರ್ಮ ಕತ್ತರಿಸಿ ರಕ್ತ ಸುರಿಯುವ ಸಂಭವ; ಬಡಗಿಗೆ ತನ್ನ ಉಳಿಯ ಮೇಲೆ ಹಿಡಿತವಿಲ್ಲದಿದ್ದರೆ ಅವನ ಕಾಲುಬೆರಳಿಗೆ ಉಳಿಗಾಲವಿಲ್ಲ; ಅಕ್ಕಸಾಲಿಗಳ ಚಿನ್ನದ ಕೆಲಸವಂತೂ ಅತ್ಯಂತ ನಾಜುಕಿನದು ;ನೆಯ್ಗೆಯವರು ತಮ್ಮ ಲಾಳಿಗಳ ಮೇಲೆ ಸತತ ಕಣ್ಣು ಇಟ್ಟು ಇದ್ದರೆ ಮಾತ್ರ ಉತ್ತಮ ವಸ್ತ್ರಗಳು ಹೊರಬರಲು ಸಾಧ್ಯ.

ಆದರೆ ಇವರೆಲ್ಲರೂ ಪುಸ್ತಕಗಳನ್ನೋದಿಯೋ,.ಭಾಷಣ ಕೇಳಿಯೋ ಏಕಾಗ್ರತೆಯನ್ನು ಅಭ್ಯಾಸ ಮಾಡಿದವರಲ್ಲ.ಪರಿಸ್ಥಿತಿಯ ಒತ್ತಡದಿಂದ ಇವರಿಗೆ ಏಕಾಗ್ರತೆ ಲ್ಲಭಿಸಿದೆ . ಹಾಗಾದರೆ ಯಾವುದು ಆ ಪರಿಸ್ತಿತಿ? ತಮ್ಮ ಕೈಕೆಲಸದಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ
ಅಪಘಾತ ಸಂಭವಿಸಬಹುದೆಂಬ ಪರಿಸ್ಥಿತಿ .ಇವರೆಲ್ಲ ತಮ್ಮ ಕೆಲಸ ಕಾರ್ಯಗಳ ಅವಧಿಯಲ್ಲಿ ಅಪಾಯಗಳ ಅಂಚಿನಲ್ಲೇ ಇರುವವರು. ಆದ್ದರಿಂದ ಇವರು ತಮ್ಮ ಮನಸ್ಸನ್ನು ಬಿಗಿಹಿಡಿದುಕೊಂಡು ಅತ್ಯಂತ ಎಚ್ಚರಿಕೆಯಿಂದಲೇ ಕೆಲಸ ಮಾಡುತ್ತಿರಬೇಕು . ಈ ಮೊಲಕ ಇವರಿಗೆ ಒಂದು ಬಗೆಯ ಏಕಾಗ್ರತೆ - ಇವರ ವೃತ್ತಿ ಗೆ ಸಂಬಂಧಪಟ್ಟ ಏಕಾಗ್ರತೆ ಸಿದ್ಧಿಸಿರುತ್ತದೆ. ಅಷ್ಟೆ ಅಲ್ಲ . ಈ ಬಗೆಯ ಏಕಾಗ್ರತೆ ವಂಶ- ಪಾರಂಪರ್ಯವಾಗಿ ಹರಿದುಬಂದ ಉದಾಹರಣೆಗಳು ಹೇರಳವಾಗಿವೆ . ಅದು ಹೇಗೆಂದರೆ ,ಕಬ್ಬಿಣದ ಕೆಲಸಗಳಿಗೆ ಸಂಬಂಧಿಸಿದ ವೃತ್ತಿಶಿಕ್ಷಣವನ್ನು ಪಡೆಯುವ ವಿಧ್ಯಾರ್ಥಿಗಳಲ್ಲಿ ಕಮ್ಮಾರನ ಹುಡುಗ ಎಲ್ಲರಿಗಿಂತಲೂ ಹೆಚ್ಚು ಪ್ರಾವಿಣ್ಯ ತೋರಿಸುವುದು ಕಂಡುಬರುತ್ತದೆ. ಹಾಗೆಯೇ ಈ ಮಾತು ಇತರ ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಆದರೆ ಅಲ್ಲಲ್ಲಿ ಒಬ್ಬೊಬ್ಬರು ಹೊಸ ವಿಷಯದಲ್ಲೂ ನೈಪುಣ್ಯ ತೋರಬಹುದು . ಆದರದು ತುಂಬಾ ಅಪರೂಪ .

ಇಲ್ಲಿಯವರೆಗೆ ನೋಡಿದ ಕೆಲವು ಅಂಶಗಳ ಆಧಾರದ ಮೇಲೆ ನಾವು ಇಷ್ಟನ್ನು ಸ್ವಷ್ಟವಾಗಿ ತಿಳಿಯಬಹುದು . ಏನೆಂದರೆ ಸತತ ಅಭ್ಯಾಸದಿಂದ ಏಕಾಗ್ರತೆಯ ಸಿದ್ದಿ . ಅರ್ಜುನ ಕೇಳಿದ ಪ್ರಶ್ನೆಗೆ ಶ್ರೀಕೃಷ್ಣ ನೀಡಿದ ಉತ್ತರವೂ ಇದೆ; ಅಭ್ಯಾಸದಿಂದ ಸಿದ್ದಿ. ಅರ್ಜುನನ ಪ್ರಶ್ನೆಯೇನು ?"ಕೃಷ್ಣ , ಈ ಮನಸ್ಸು ಬಹಳ ಚಂಚಳವಾದದ್ದು , ಇದನ್ನು ತದೆದಿಡುವುದು ಒಂದೇ, ಗಾಳಿಯನ್ನು ಹಿಡಿದು ಕಟ್ಟಿ ಇಡುವುದು ಒಂದೇ, ಇಂತಹ ಮನಸ್ಸನ್ನು ಸ್ವಾಧೀನಕ್ಕೆ ತಂದುಕೊಳ್ಳುವುದು ಹೇಗೆ ?" ಎಡಕ್ಕೆ ಶ್ರೀಕೃಷ್ಣನ ಉತ್ತರ; "ನೀನೆನ್ನುವುದು ನಿಜ ಅರ್ಜುನ, ಈ ಮನಸ್ಸು ಅತ್ಯಂತ ಚಂಚಳವೆಮ್ಬುದು ಸತ್ಯ, ಮತ್ತು ಅದನ್ನು ಹತೋಟಿಯಲ್ಲಿ ಇಟ್ಟಿರುವುದು ಕಷ್ಟವೆಂಬುದು ಸತ್ಯ, ಆದರೆ ಒಂದು ಮುಖ್ಯ ಅಂಶವನ್ನು ನಿನಗೆ ಹೇಳುತ್ತೇನೆ ಕೇಳು- ಇಂತಹ ಚಂಚಲ ಮನಸ್ಸನ್ನು ಕೊಡ ಅಭ್ಯಾಸ ಬಲದಿಂದ ಹಾಗು ವ್ಯೆರಾಗ್ಯದಿಂದ ನಿಗ್ರಹಿಸಿ ಹತೋಟಿಯಲ್ಲಿಡಲು ಸಾಧ್ಯವೆಂಬುದು ಸತ್ಯ".

ಅರ್ಜುನನ ಪ್ರಶ್ನೆ ಎಷ್ಟು ಸಹಜವಾಗಿದೆಯೋ ಅಷ್ಟೇ ಸರಳವಾಗಿದೆ ಶ್ರೀ ಕೃಷ್ಣನ ಉತ್ತರ. ಅಂತೂ ಈ ಚಂಚಲ ಮನಸ್ಸಿನ ಸಮಾಚಾರ ಎಂದು ನಿನ್ನೆಯದಲ್ಲ , ಹಿಂದಿನಿಂದಲೂ ಇದ್ದದ್ದೇ .ಆದರೆ ಈಗಿನ ಅನೀತಿ -ಅಶಿಸ್ತಿನ ಜೀವನದ ಪರಿಣಾಮವಾಗಿ ಅದು ಸ್ವಲ್ಪ ಹೆಚ್ಚಾಗಿರಬಹುದು , ಅಂತಹ ಧೀರ ಧರ್ಮಿಷ್ಟನಾದ ಅರ್ಜುನನ ಮನಸ್ಸೇ ಚಂಚಲವಾಗಿತ್ತೆನ್ನುವಾಗ ಎಂದಿನ ಫೋಕಿಲಾಲರ ಮನಸ್ಸು ಸ್ಥಿರವಾಗಿರುವುದು ಉಂಟೆ?.

ಮನಸ್ಸನ್ನು ತಮ್ಮ ಸ್ವಾಧೀನಕ್ಕೆ ತಂದು ಕೊಳ್ಳಲೇ ಬೇಕು ಎಂಬುವವರು ಮೊಟ್ಟ ಮೊದಲನೆಯದಾಗಿ , ತಾವು ಎಂತಹ ಮನಸ್ಸಿನೋದಿಗೆ ಹೋರಾಡಬೇಕಾಗಿದೆ ಎಂಬುದರ ಸ್ವಷ್ಟ ಕಲ್ಪನೆಯನ್ನು ಹೊಂದಿರಬೇಕಾಗುತ್ತದೆ .

ಈ ಮನಸ್ಸು ಮರ್ಕಟನಂತೆ ಚಂಚಲ . ಮದಬರಿತ ಸಲಗನಂತೆ ಬಲಿಷ್ಠ . ಅರ್ಜುನನೆನ್ನುವಂತೆ ,ಇದನ್ನು ನಿಯಂತ್ರಿಸುವುದೆಂದರೆ ಗಾಳಿಯನ್ನು ತಡೆಹಿಡಿದು ಕಟ್ಟಿಡುವ ಕೆಲಸ . ಸಂಯಮಕ್ಕೆ ತಂದುಕೊಳ್ಳುವಲ್ಲಿ ಕೋತಿಯನ್ನು ಹಿಡಿಯುವ ,ಸಲಗವನ್ನು ಪಳಗಿಸುವ ಚಾನಾಕ್ಷತೆಯೇ ಬೇಕಾಗುತ್ತದೆ.

ಮನಸ್ಸನ್ನು ನಿಗ್ರಹಿಸುವ ಕೆಲಸ ಅತ್ಯಂತ ಕಷ್ಟ ಎಂದು ಅರ್ಜುನ ಹೇಳಿದಾಗ ಶ್ರೀ ಕೃಷ್ಣಾ "ಏನಯ್ಯಾ , ಎಂತೆಂಥ ವೀರರನ್ನೇ ನಿಗ್ರಹಿಸಿದ ನಿನಗೆ ಈ ಮನಸ್ಸನ್ನು ನಿಗ್ರಹಿಸುವುದು ಯಾವ ಲೆಕ್ಕ? ಅಲ್ಲದೆ ಅದು ಎಷ್ಟಾದರೂ ನಿನ್ನ ಮನಸ್ಸೇ ಅಲ್ಲವೆನಯ್ಯ? ತುಂಬಾ ಸುಲಭವಾಗಿ ನಿಗ್ರಹಿಸಿಬಿಡಬಹುದು"ಎಂದು ಈ ರೀತಿಯಲ್ಲಿ ಹಗುರವಾಗಿ ಹೇಳಲಿಲ್ಲ . ಪರಿಸ್ಥಿತಿಯ ಗಾಂಭೀರ್ಯ ವನ್ನರಿತು ಹೇಳುತ್ತಾನೆ . "ನೀನೆನ್ನುವುದು ನಿಜ ಅರ್ಜುನ, ಈ ಮನಸ್ಸು ಅತ್ಯಂತ ಚಂಚಲ ವೆಂಬುದು ಸತ್ಯ ಮತ್ತು ಅದನ್ನು ಹತೋಟಿಯಲ್ಲಿ ಇಟ್ಟಿರುವುದು ಕಷ್ಟವೆಂಬುದು ಸತ್ಯ" ಎಂದು ಶ್ರೀಕೃಷ್ಣ ಹೀಗೆ ಹೇಳಲು ಕಾರಣ - ಅವನು ಈ ಮನಸ್ಸಿನ ಸ್ವಭಾವವನ್ನು ಬಲ್ಲ.
ಈ ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಗೂ , ವಸ್ತುವಿಗೂ ಅದರದೇ ಆದ ಸ್ವಭಾವವಿರುತ್ತದೆ - ಗಾಳಿಗೆ ಬೀಸುವ ಸ್ವಭಾವ, ಬೆಂಕಿಗೆ ಸುಡುವ ಸ್ವಭಾವ, ನೀರಿಗೆ ಹರಿಯುವ ಸ್ವಭಾವ; ಹಾಗೆಯೇ ಮನಸ್ಸಿಗೆ ಕಂಡಕಂಡಲ್ಲಿ ಮೊಗು ಹಾಕುವ ಸ್ವಭಾವ ,ಹುಚ್ಚೆದ್ದು ಕುಣಿಯುವ ಸ್ವಭಾವ , ಬಗೆಬಗೆಯ ಆಸೆಗಳನ್ನು ತಾಳುವ ಸ್ವಭಾವ,ಹಲವಿಧದ ಯೋಚನೆ ಮಾಡುವ ಸ್ವಭಾವ, ಹಲವು ಹದೆನೆಂಟು ಚಿಂತೆ ಗಳನ್ನೂ ಇಟ್ಟುಕೊಂಡು ಕೊರಗುವ ಸ್ವಭಾವ, ಆಶಾಗೋಪುರ ಕಟ್ಟುವ ಸ್ವಭಾವ,ಮಾಡಬೇಕಾದ ಕೆಲಸವೊಂದನ್ನು ಬಿಟ್ಟು ಉಳಿದೆಲ್ಲ ವಿಚಾರ ಗಳಲ್ಲೂ ತಲೆ ಹಾಕುವ ಸ್ವಭಾವ! ಸ್ವಭಾವತ:ಚಂಚಲ ವಾಗಿರುವ ಇಂತಹ ಮನಸ್ಸನ್ನು ಇನ್ನಷ್ಟು ಚಂಚಲಗೊಳಿಸುವ ಪರಿಸರಗಳೇ ಇದ್ದರೆ ಸುತ್ತ -ಮುತ್ತ , ಇನ್ನು ಕೇಳುವುದು ಏನಿದೆ ?ಕುಣಿದಾಡುವುದು ಒಂದೇ!. ಆದ್ದರಿಂದ ಮನಸ್ಸನ್ನು ಸ್ವಾದೀನದಲ್ಲಿ ಇಟ್ಟುಕೊಳ್ಳ ಬೇಕೆಮ್ಬವರು ಚಂಚಲಗೊಳಿಸುವ ಪರಿಸರದಿಂದ ದೂರವಾಗಬೇಕು;ಎಂದರೆ ಊರು ಬಿಟ್ಟು ಹೋಗಬೇಕೆಂದಲ್ಲ ,ಮನಸ್ಸನ್ನು ಅತ್ತ ಹರಿಯ ಗೊಡದಿರಬೇಕು .ಹೇಗೆ?ಇಲ್ಲಿ . ಇಂದ್ರಿಯಗಳ ಪಾತ್ರ ಬರುತ್ತದೆ. ಕಣ್ಣು, ಕಿವಿ, ನಾಲಗೆ ,ಮೊಗು ,ಚರ್ಮ-ಇವು ಮನಸ್ಸಿನ ವಾಹನಗಳು. ಒಂದು ಸುಂದರವಾದ ವಸ್ತುವನ್ನು ಕಣ್ಣು ಕಂಡರೆ ಸಾಕು, ಮನಸ್ಸು ಹಾರಿಹೋಗಿ ಅಲ್ಲಿ ಕುಳಿತಾಯಿತು.ಹೀಗೆಯೇ ಐದು ಇಂದ್ರಿಯ ಗಳು ಮನಸ್ಸನ್ನು ಎಲ್ಲಿಎಂದರೆ ಅಲ್ಲಿಗೆ ಕರೆದೊಯ್ಯುತ್ತಿರುತ್ತವೆ . ಆದ್ದರಿಂದ ಬುದ್ದಿ ಉಪಯೋಗಿಸಿ ಈ ಇಂದ್ರಿಯಗಳನ್ನು ನಮ್ಮ ವಶದಲ್ಲಿ ಇಟ್ಟು ಇರಬೇಕು .ಎಂದರೆ ನೋಡಬಾರದ್ದನ್ನು ನೋಡದಿರಬೇಕು,ಕೇಳಬಾರದ್ದನ್ನು ಕೇಳದಿರಬೇಕು. ತಿನ್ನಬಾರದ್ದನ್ನು ತಿನ್ನದಿರಬೇಕು ,ಮಾಡಬಾರದ್ದನ್ನು ಮಾಡದಿರಬೇಕು.ಹೀಗೆ ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ "ದಮ"ಎಂದು ಹೆಸರು. ಕೆಲವೊಮ್ಮೆ ಈ ಮನಸ್ಸು ಇಂದ್ರಿಯಗಳ ಸಹಾವಿಲ್ಲದೆಯೇ ,ಸ್ವತಂತ್ರವಾಗಿ ತನಗೆ ಬೇಕೆಮ್ಬಲ್ಲಿಗೆ ಹಾರಿಹೋಗುತ್ತಿರುತ್ತದೆ.ಆಗ ಬುದ್ದಿಯ ಸಹಾಯದಿಂದ ಅದನ್ನು ಹಿಂದಿರುಗಿಸಿ ಎಳೆದು ತರಬೇಕು. ಹೀಗೆ ಮನಸ್ಸನ್ನು ಸಂಯಮದಲ್ಲಿ ಇಡುವುದಕ್ಕೆ"ಶಾಮ"ಎಂದು ಹೆಸರು.

ಮನಸ್ಸನ್ನು ಹತೋಟಿಯಲ್ಲಿ ಇಡಬೇಕಾದ ಅವಶ್ಯಕತೆಯಾದರೂ ಏನಿದೆ?.-ಎಂಬ ಪ್ರಶ್ನೆಯೊಂದು ಏಳುತ್ತದೆ . ಅದಕ್ಕೊಂದು ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕು .ಉತ್ತರವಿಷ್ಟೇ; ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ ಅದರ ಮೂಲಕ ಮಹತ್ಕಾರ್ಯಗಳನ್ನೇ ಸಾಧಿಸಿಬಿಡಬಹುದು. ಅದು ನಮ್ಮ ಹತೊಟಿಯಲ್ಲಿರದಿದ್ದರೆ ಮಾತ್ರ ಅದರಿಂದ ಸಾಮಾನ್ಯ ಕಾರ್ಯವನ್ನೂ ಮಾಡಿಸಲು ಸಾಧ್ಯವಾಗುವುದಿಲ್ಲ.

ನಿಜಕ್ಕೂ ನಮ್ಮ ಮನಸ್ಸಿಗೆ ಪ್ರಚಂಡ ದೈತ್ಯ ಶಕ್ತಿಯೇ ಇದೆ. ಆದರೂ ಹಲವರು ಎಷ್ಟೋ ವೇಳೆ , ಅಥವಾ ಜೀವನವಿಡಿ ,ದುರ್ಬಲರಂತೆ ಇರುತ್ತಾರೆ. ಇದ್ದಕ್ಕೆ ಅವರ ಮನಶಕ್ತಿಯು ನಾನಾ ರೀತಿಗಳಿಂದ ಹಂಚಿಹೊಗಿರುವುದೇ ಕಾರಣವಾಗಿದೆ. ಸೂರ್ಯಕಿರಣಗಳಿಗೆ ಸುಡುವ ಶಕ್ತಿಯಿದಿಯೆಂಬ ಸತ್ಯ ಎಲ್ಲರಿಗೂ ತಿಳಿದಿಲ್ಲ , ಕಾರಣ , ಅವು ಇಲ್ಲಿಯವರೆಗೂ ಎಲ್ಲಿಯೂ ಬೆಂಕಿ ಹೊತ್ತಿಸಿ ವಸ್ತುಗಳನ್ನು ಸುಡಲಿಲ್ಲವಲ್ಲ! .ಆದರೆ ಅದೇ ಕಿರಣಗಳನ್ನು ಭೂತಕನ್ನಡಿಯ ಮೂಲಕ ಹಾಯಿಸಿ ಕಾಗದದ ಮೇಲೆ ಬಿಟ್ಟಾಗ ಬೆಂಕಿ ಹೊತ್ತಿಕೊಳ್ಳುವುದು ಕಾಣುತ್ತದೆ. ಆ ಕಿರಣಗಳಿಗೆ ಈಗ ಎಲ್ಲಿಂದ ಬಂತು ಈ ಸುಡುವ ಶಕ್ತಿ?. ಅವುಗಳನ್ನು ಏಕತ್ರ ಗೊಳಿಸಿದ್ದರಿಂದ ,ಹಿಂದೆ ಅವು ಹರಡಿಕೊಂಡಿದ್ದವು , ಆದ್ದರಿಂದ ಶಾಖಮಾತ್ರ ಇತ್ತು. ಈಗ ಏಕತ್ರ ಗೊಂಡಾಗ ಧಗಧಗಿಸುವ ಅಗ್ನಿಯೇ ಉದ್ಬವಿಸಿತು.ಇದೇ ನಾವು ಗಮನಿಸಬೇಕಾದ ರಹಸ್ಯ . ನಮ್ಮ ಮನದಲ್ಲಿ ಸಹಜವಾಗಿಯೇ ಅಪಾರ ಶಕ್ತಿಯಿದೆ . ಆದರೆ ಅದು ಬೇಕಾದ-ಬೇಡವಾದ ಎಲ್ಲ ವಿಷಯಗಳಲ್ಲೂ ಹರಡಿಕೊಂಡಿರುವುದರಿಂದ ನಮ್ಮಿಂದ ಸಾಮಾನ್ಯ ಕೆಲಸ ಕಾರ್ಯಗಳನ್ನು ಮಾಡಲು ಮಾತ್ರವೇ ಸಾಧ್ಯವಾಗುತ್ತದೆ.ಮಹತ್ಕಾರ್ಯವನ್ನೇ ನಾದರು ಸಾಧಿಸಬೇಕಾದರೆ ಹರಡಿಕೊಂಡಿರುವ ಮನಶ್ಯಕ್ತಿಯನ್ನು ಒಗ್ಗೂಡಿಸಬೇಕಾಗುತ್ತದೆ.ಮನಶ್ಯ್ಕತಿಯನ್ನು ಒಗ್ಗೂಡಿಸಬೇಕಾದರೆ ನಮ್ಮ ಮನಸ್ಸು ನಮ್ಮ ಅಧೀನದಲ್ಲಿರಬೇಕಾಗುತ್ತದೆ . ಕಂಡ ಕಂಡ ಕಡೆಗೆಲ್ಲ ಮಂಡೆಗೆಟ್ಟು ಓಡುವ ಮನಸ್ಸು ನಮ್ಮದಲ್ಲ. ಇಂದ್ರಿಯಗಳ ಆಹ್ವಾನಕ್ಕೆ ಓಗೊಟ್ಟು ವಿಷಯವಸ್ತುಗಳಲ್ಲಿ ಮುಳುಗಿರುವ ಮನಸ್ಸು ನಮ್ಮದಲ್ಲ. ನಮ್ಮದಲ್ಲ ದ ಮನಸ್ಸಿನಿಂದ ನಾವು ಏನು ತಾನೇ ಮಾಡಿಸಲು ಸಾದ್ಯ?

ಋಷಿಮುನಿಗಳು ಸತತ ಪ್ರಯತ್ನದಿಂದ ಮೊದಲು ಸಾಧಿಸಿದ್ದೆ ಮನಸ್ವಯಮವನ್ನು . ಎಂದರೆ ತಮ್ಮ ಮನಸ್ಸನ್ನು ತಮ್ಮ ಹಿಡಿತಕ್ಕೆ ತಂದು ಕೊಂಡದ್ದು.ಬಳಿಕ ಆ ಮನಸ್ಸನ್ನು ಹಿಡಿದು ಏಕಾಗ್ರಗೊಲಿಸಿದಾಗ ಅದು ಸಕಲ ಯೋಗರಹಸ್ಯಗಳನ್ನೇ ಬಯಲಿಗೆಳೆಯಿತು . ದಿವ್ಯ ಜ್ಞಾನವನ್ನೇ ಪ್ರಾಪ್ತಿಮಾಡಿಕೊಟ್ಟಿತು.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು ಡಾಟ್ ಸನ್ ನ್ಯಾಚುರಲ್ ಫ್ಲಾಶ್ ಡಾಟ್ ಕಾಂ
+೯೧ 9632172486


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ