MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಮೇ 29, 2010

ವೇಳಾಪಟ್ಟಿ ಯನ್ನು ಹಾಕಿಕೊಳ್ಳದೆ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ಸಾಧ್ಯವಲ್ಲದ ಮಾತು.

ಅತಿಯಾದ ಆಟ,ಟಿ.ವಿ.ಕಥೆ.ಕಾದಂಬರಿ ಹಾಗೂ ಅಲೆದಾಟಗಳಲ್ಲೇ ಮೈಮರೆತು ಕೊನೆಗೆ ಪರೀಕ್ಷೆ ಸಮೀಪಿಸಿದಾಗಮೈತಿಳಿದು ಎಲ್ಲ ಪಟ್ಯಪುಸ್ತಕಗಳನ್ನು ಒಟ್ಟಿಗೆ ಓದಿ ತಲೆಗೆ ತುಂಬಿಸಿಕೊಳ್ಳುತ್ತೆವೆಂದು ಪ್ರಯತ್ನಿಸಿ ,ಅದು ಸಾಧ್ಯವಾಗದೆ ತಲೆಕೆಡಿಸಿಕೊಂಡು ಕಂಗಾಲಾಗುವ ದೃಶ್ಯ ಸರ್ವೇ ಸಾಮಾನ್ಯ.ಇದುವಿದ್ಯಾರ್ಥಿಗಳ ವಿದ್ಯಾಭ್ಯಾಸದ ಲಕ್ಷಣವೇ ಅಲ್ಲ. ಆದರೆ ಅಲ್ಲಲ್ಲಿ ಕೆಲವು ವಿದ್ಯಾರ್ಥಿಗಳಿರುತ್ತಾರೆ .ಅವರಿಗೆ ತಮ್ಮ ತಾಯಿತಂದೆಯರದೋ ಅಧ್ಯಾಪಕರದೋ ಮಾರ್ಗದರ್ಶನವಿರುತ್ತದೆ.ಹಾಗೂ ಆ ವಿದ್ಯಾರ್ಥಿಗಳಲ್ಲೂ ಸ್ವಭಾವಸಹಜವಾಗಿ ಶಿಸ್ತು -ವಿಧೇಯತೆ ಇರುತ್ತದೆ. ಅಂಥವರು ತಮ್ಮದೇ ಆದ ವೇಳಾಪಟ್ಟಿಯೊಂದನ್ನು ಹಾಕಿಕೊಂಡು ಪ್ರತಿದಿನ ತಪ್ಪದೆ ಓದುತ್ತ ಬರೆಯುತ್ತ ಲೀಲಾಜಾಲವಾಗಿ ಮುಂದುವರಿಯುತ್ತಿರುತ್ತಾರೆ . ಈ ಬುದ್ದಿವಂತಿಕೆಯನ್ನು ನೀನೂ ಕಲಿತುಕೊಳ್ಳಬೇಕು.
ಶಾಲಾ ವೇಳೆಯನ್ನು ಬಿಟ್ಟರೆ ನಿನ್ನ ಸ್ವಂತದ ವೇಳೆ ಎಷ್ಟಿರುತ್ತದೆ ಎಂಬುದನ್ನು ನೋಡಿಕೊ. ಶನಿವಾರದ ಅರ್ಧ ದಿನ ,ಭಾನುವಾರ ಹಾಗೂ ಇತರ ರಜಾದಿನಗಳೆಲ್ಲ ನಿನ್ನ ಸ್ವಂತ ವೇಳೆಯೇ ಅಲ್ಲವೇ?ಇನ್ನು ಆಗಾಗ ಸಿಗುವ 'ಲೆಟ್ ಆಪ್' ವೇಳೆಯೂ ನಿನ್ನದೇ ಈ ವೇಳೆಯನ್ನು ಹಿಡಿದು ಅದರ ಪ್ರತಿಯೊಂದು ಕ್ಷಣವನ್ನೂ ಸದುಪಯೋಗ ಪಡಿಸಿಕೊಳ್ಳಬಲ್ಲೆ ಯಾದರೆ ಈ ಜಗತ್ತಿನಲ್ಲಿ ನೀನೊಬ್ಬ ಮಹೋನ್ನತ ವ್ಯಕ್ತಿಯಾಗುವುದು ಖಂಡಿತ .
ವೇಳಾಪಟ್ಟಿ ಯನ್ನು ಹಾಕಿಕೊಳ್ಳದೆ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ಸಾಧ್ಯವಲ್ಲದ ಮಾತು.ವೇಳಾಪಟ್ಟಿಯನ್ನು ಹೇಗೆ ಹಾಕಿಕೊಳ್ಳಬೇಕು ?ಮೊದಲು , ನೀನು ರಾತ್ರಿ ಮಲಗುವ ಹಾಗೂ ಬೆಳಗ್ಗೆ ಏಳುವ ಸಮಯವನ್ನು ಖಚಿತಪಡಿಸಿಕೊಂಡುಬಿಡಬೇಕು.ಏಕೆಂದರೆ ಮಲಗುವ,ಏಳುವ ವೇಳೆ ಯಲ್ಲಿ ವ್ಯತ್ಯಾಸವಾಯಿತೆಂದರೆ ನಿನ್ನ ವೇಳಾಪಟ್ಟಿಯನ್ನು ಸುಮ್ಮನೆ ಕಟ್ಟಿಡಬೇಕಾಗುತ್ತದೆ.ಹದಿಹರೆಯದ ನೀನು ರಾತ್ರಿ ಹತ್ತಕ್ಕೆ ಮಲಗಿ ಬೆಳಗ್ಗೆ ಐದಕ್ಕೆ ಏಳುವುದು ಅತ್ಯಂತ ಸೂಕ್ತ . ಸಮರ್ಪಕ . ದಿನವಿಡೀ ನಿನ್ನ ಮನಸ್ಸು ಶಾಂತವು ಸ್ಥಿರವೂ ಪ್ರಪುಲ್ಲವೂ ಆಗಿರಬೇಕಾದರೆ ರಾತ್ರಿಯಲ್ಲಿ ಮಾಡುವ ನಿದ್ರೆ ಅತ್ಯಂತ ಪ್ರಾಮುಖ್ಯದ್ದು . ಗಾಢನಿದ್ರೆಯೊಂದು ವರ. ಬೆಳಗ್ಗೆ ಐದರಿಂದ ರಾತ್ರಿ ಹತ್ತರವರೆಗೆ ನಿನಗೆ ದೊರೆಯುವ ಹದಿನೇಳು ಗಂಟೆಯ ಕಾಲವನ್ನು ನೀನು ಸದುಪಯೋಗ ಪಡಿಸಿಕೊಂಡು ಮೈ -ಮನಸ್ಸುಗಳನ್ನು ದುಡಿಸಿದ್ದೆ ಆದರೆ ರಾತ್ರಿ ದಿಂಬಿಗೆ ತಲೆಯಿಟ್ಟ ಕೂಡಲೇ ಗಾಢ ನಿದ್ರೆ ಹತ್ತುವುದು ಖಂಡಿತ.
ಬೆಳಗ್ಗೆ ಐದಕ್ಕೆ ಎದ್ದು ಶಾಲೆಗೆ ಹೋಗುವವರೆಗಿನ ವೇಳೆ ಹಾಗೂ ಶಾಲೆ ಯಿಂದ ಹಿಂದಿರುಗಿದ ಮೇಲೆ ರಾತ್ರಿ ಮಲಗುವವರಿಗಿನ ವೇಳೆ ನಿನ್ನದು. ಈ ಅವಧಿಯಲ್ಲಿ ನಿನ್ನ ವೈಯಕ್ತಿಕ ಪ್ರಾರ್ಥನೆ , ಅಧ್ಯಯನ ಹಾಗೂ ಇತರ ಕೆಲಸ ಕಾರ್ಯಗಳನ್ನು ಅಳವಡಿಸಿರುವ ವೇಳಾಪಟ್ಟಿಯೊಂದನ್ನು ತಯಾರಿಸಿಕೊಳ್ಳಬೇಕು . ಅದನ್ನು ನಿನ್ನ ಅಧ್ಯಾಪಕರಿಗೆ ತೋರಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯಬಹುದು.
-ಎ.ಟಿ.ನಾಗರಾಜ
-೯೧-೯೬೩೨೧೭೨೪೮೬
ಸನ್ ನ್ಯಾಚುರಲ್ ಫ್ಲಾಶ್ .ಕಂ/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ