MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಮೇ 26, 2010

ಜೋಗದ ಜಲಪಾತದಂತೆ ಯುವಕರ ಮನಸ್ಸು!

ಇನ್ನು ಶ್ರೀಕೃಷ್ಣ ಹೇಳಿದ 'ವೈರಾಗ್ಯ'ದ ಅರ್ಥವೇನು? ಸಂನ್ಯಾಸವೆಂದೆ ?ಅಲ್ಲ. ವೈರಾಗ್ಯವೆಂದರೆ ಒಂದು ಉದ್ದೇಶವಿಟ್ಟುಕೊಂಡು ಅದನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದಾಗ , ಇನ್ನಾವ ಪ್ರಲೋಭನೆ-ಆಕರ್ಷಣೆಗಳೂ ಮನಸೆಳೆಯದಂತೆ ನೋಡಿಕೊಳ್ಳುವುದು.ಎಂದರೆ ಕೈಗೊಂಡ ಕಾರ್ಯದಲ್ಲಿ ಮಾತ್ರವೇ ಅನುರಾಗ,ಅದಕ್ಕೆ ವ್ಯತಿರಿಕ್ತವಾದ ವಿಷಯದಲ್ಲಿ ವಿರಾಗ-ಇದೇ ವೈರಾಗ್ಯ. ಸಂನ್ಯಾಸಿಗಳು ಆತ್ಮ ಸಾಕ್ಷಾತ್ಕಾರವನ್ನು ಜೇವನದ ಗುರಿಯಾಗಿಟ್ಟುಕೊಂಡಿರುವುದರಿಂದ ಜಗತ್ತಿನ ಇತರ ಎಲ್ಲ ಆಕರ್ಷಣೆಗಳನ್ನು ಬದಿಗೊತ್ತ ಬೇಕಾಯಿತು . ಸಾಮಾನ್ಯವಾಗಿ,ಅದನ್ನೇ ವೈರಾಗ್ಯವೆಂದು ಕರೆಯುವುದರಿಂದ ಇಂದು ಸಂನ್ಯಾಸಿಯಾಗುವುದು,ಕಾಡಿಗೆ ಹೋಗುವುದು ಎಂಬರ್ಥವೇ ಬರುತ್ತಿದೆ . ಆದರೆ ಅದು ಹಾಗಲ್ಲ.ಉದ್ದೇಶವನ್ನು ಸಿದ್ದಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುವವರೆಲ್ಲರಲ್ಲೂ ಈ ವೈರಾಗ್ಯದ ಅಂಶ ಇದ್ದೇ ಇರುತ್ತದೆ . ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾ ಜ್ಞಾನಾರ್ಜನೆಯಲ್ಲಿ ತೊಡಗಿರುವಾಗ ಇತರ ಆಕರ್ಷಣೆಗಳು ಅವರ ಮನಸ್ಸನ್ನು ಸೆಳೆಯುವಂತಿದ್ದರೆ ವಿದ್ಯಾಭ್ಯಾಸ ಹೇಗೆ ಯಶಸ್ವಿಯಾಗಲು ಸಾಧ್ಯ? ಅದರಲ್ಲೂ ಏಕಾಗ್ರತೆಯನ್ನು ಅಭ್ಯಾಸ ಮಾಡುವವರಂತು ಇತರ ವಿಷಯಗಳೆಡೆಗೆ ಕಣ್ಣೆತ್ತಿಯೂ ನೋಡುವಂತಿಲ್ಲ.
ಏಕಾಗ್ರತೆಯಲ್ಲಿ ಆನಂದವಿದೆ.ಏಕಾಗ್ರತೆಯಲ್ಲಿ ಸಿದ್ದಿಯಿದೆ ಎಂಬ ಸುದ್ದಿ ತಿಳಿದ ವಿದ್ಯಾರ್ಥಿಗಳು ಇನ್ನು ಸುಮ್ಮನಿರಬಾರದು , ಕಾರ್ಯತತ್ಪರನಾಗಬೇಕು.
ಮಾಡುವ ಅಧ್ಯಯನದಲ್ಲಿ ಮೈಮರೆತರೆ ಏಕಾಗ್ರತೆ ಸಿದ್ದಿಸಿದೆ ಎಂದರ್ಥ.
ಶಿಸ್ತುಬದ್ದ ಯೋಗಾಸನಗಳು ನರಮಂಡಲವನ್ನು ಬಲಗೊಳಿಸುವುದಲ್ಲದೆ ಚುರುಕಾಗಿಸುವುದರಿಂದ ಅವು ಏಕಾಗ್ರತೆಗೆ ಬಹಳ ಸಹಾಯಕಾರಿ.
ಜೋಗದ ಜಲಪಾತದಂತೆ ಯುವಕರ ಮನಸ್ಸು!ಬೃಹತ್ ಪ್ರಮಾಣದ ನೀರು ಎತ್ತರದ ಬೆಟ್ಟದಿಂದ ಧುಮುಧುಮಿಸಿ ಧುಮಿಕಿ , ಎಲ್ಲೆಂದರಲ್ಲಿ ಹರಿದಾಡಿ , ಕೊನೆಗೂ ಯಾವ ಉಪಯೋಗಕ್ಕೂ ಬಾರದೆ ಸಮುದ್ರಕ್ಕೆ ಸೇರಿ ಹೇಳ ಹೆಸರಿಲ್ಲದಂತಾಗುತ್ತದೆ. ಆದರೆ ನೀರಿಗೆ ಆಣೆಕಟ್ಟು ಕಟ್ಟಿ , ಕಾಲುವೆಯಲ್ಲಿ ಹರಿಯಿಸಿ , ಹೊಲಗಳಿಗೆ ತಂದುಕೊಂಡಾಗ ಹಸನಾದ ಬೆಳೆ ನಳನಳಿಸುತ್ತದೆ.
ಹಾಗೆಯೇ , ಮನಬಂದಂತೆ ಕುಣಿದಾಡಿ , ವ್ರಥಾ ವ್ಯಯವಾಗುವ ಯುವಕರ ಅಶಿಕ್ಷಿತ ಮನಶಕ್ತಿಗೆ ನಿಯಮಗಳ ಆಣೆಕಟ್ಟು ಕಟ್ಟಿ, ಶಿಸ್ತಿನ ಕಾಲುವೆ ತೋಡಿ , ಅದನ್ನು ಶಿಕ್ಷಣ ಕಲೆ ಸಾಹಿತ್ಯ ಕರ್ಮಕೌಶಲಗಳೆಂಬ ಹೊಲಗಳಲ್ಲಿ ಹರಿಯಿಸಿದಾಗ ಸಂಸ್ಕೃತಿಯೆಂಬ ಫಸಲು ಸಮೃದ್ಧವಾಗುತ್ತದೆ.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು . ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧ 9632172486

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ