MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಮೇ 22, 2010

ವೀರ್ಯಶಕ್ತಿಗಿಂತ ಶ್ರೇಷ್ಠವಾದ ಟಾನಿಕ್ಕು ಬೇರಾವುದೂ ಇಲ್ಲ

ಏಕಾಗ್ರತೆಯನ್ನು ಗಳಿಸಿಕೊಳ್ಳಬೇಕೆಂಬ ವಿದ್ಯಾರ್ಥಿಗಳು ಹರಟೆಹೊಡೆಯುವುದನ್ನು ವಿಷದಂತೆ ವರ್ಜೆಸಬೇಕು . ಆದರೆ ಅವರು ತಮ್ಮ ಪಟ್ಯಾ ವಿಷಯದ ಕುರಿತು ಸ್ಯೇಹಿತರೊಡನೆ ಚರ್ಚಿಸುವುದರಿಂದ ಬಾಧಕವಿಲ್ಲ . ಬದಲಾಗಿ ಅದು ಸಾಧಕವೇ ಆಗುತ್ತದೆ. ಆದರೆ ನಿಷ್ಪ್ರಯೋಜಕ ಹರಟೆಯಿಂದ ಮನಸ್ಸಿನ ಶಕ್ತಿ ಬಹಳ ಕುಂಟಿತಗೊಳ್ಳುತ್ತದೆ ಎಂಬುದು ಯೋಗೀಗಳು ಕಂಡುಕೊಂಡ ಸತ್ಯ.ಹರಟೆಯಿಂದ ಮನಸ್ಸಿನ ಶಿಸ್ತು -ಸುಸಂಬದ್ಧತೆ ಕೆಡುತ್ತದೆ . ಮನಸ್ಸು ದುರ್ಬಲಗೊಂಡಾಗ ಹಾಗೂ ಶಿಸ್ತನ್ನು ಕಳೆದುಕೊಂಡಾಗ ಏಕಾಗ್ರವಾಗಲು ಅಸಮರ್ಥವಾಗುತ್ತದೆ. ದುರ್ಬಲ ಶರೀರ -ಮನಸ್ಸಿನವರಿಗೆ ಏಕಾಗ್ರತೆ ಬಹುದೂರ.
ಏಕಾಗ್ರತೆಯಿಂದ ಓದಲು ಯತ್ನಿಸುವ ಕೆಲವು ವಿದ್ಯಾರ್ಥಿಗಳಿಗೆ ತಲೆನೋವು ಬರುವುದುಂಟು.ಇದಕ್ಕೆ ಪ್ರಧಾನ ಕಾರಣ ಅವರ ಮಿದುಳಿಗೆ ಶಕ್ತಿಯಿಲ್ಲದಿರುವುದು . ಮಿದುಳು ಬಲಗೊಳ್ಳುವಂತೆ ಪೌಷ್ಟಿಕ ಆಹಾರದೊಂದಿಗೆ ಟಾನಿಕ್ಕು ಅಧವಾ ಚ್ಯವನ ಪ್ರಾಶಾದಿಗಳನ್ನು ಸೇವಿಸಬೇಕು. ಹಿತವಾದ ಪ್ರಮಾಣದಲ್ಲಿ ಹಾಲು , ಬೆಣ್ಣೆ,ತುಪ್ಪ ಪ್ರತಿದಿನ ಸೇವಿಸಬೇಕು . ಆದರೆ ಯಾವುದನ್ನೇ ಆಗಲಿ ಅತಿಯಾಗಿ ಸೇವಿಸಿದರೆ ಗತಿಗೆಡುವುದು ನಿಶ್ಚಿತ . ವೀರ್ಯಶಕ್ತಿಗಿಂತ ಶ್ರೇಷ್ಠವಾದ ಟಾನಿಕ್ಕು ಬೇರಾವುದೂ ಇಲ್ಲ. ಈ ವೀರ್ಯಶಕ್ತಿಯನ್ನು ಅಂತ:ಕರಣಪೂರ್ವಕವಾಗಿ ಪ್ರಾರ್ಥಿಸಿಕೊಳ್ಳಬೇಕು. ಶರೀರ-ಮನಸ್ಸುಗಳನ್ನು ಸದಾ ಸುಚಿಯಾಗಿಟ್ಟಿರಬೇಕು.ಹುಲಿಕರಡಿಗಳಿಂದ ದೂರವಿರುವಂತೆ ವಿಲಾಸೀ ವಿದ್ಯಾರ್ಥಿಗಳ ಹಾಗೂ ಫಟಿಂಗ ಹುಡುಗರ ಸಹವಾಸಕ್ಕೆ ಸಿಕ್ಕಿಬೀಳದಂತೆ ಎಚ್ಚರಿಕೆಯಿಂದಿರಬೇಕು . ಆದರೆ ಅವರನ್ನು ನಿಂದಿಸಲು ಹೋಗಬಾರದು . ಹಾಗೆ ಮಾಡಿದರೆ ಅದು ಇನ್ನೊಂದು ಅನಾಹುತಕ್ಕೆ ಕಾರಣವಾಗುತ್ತದೆ.
ಏಕಾಗ್ರತೆಯನ್ನು ಸಿದ್ಧಿಸಿಕೊಳ್ಳಲು ಇನ್ನೊಂದು ಪ್ರಮುಖ ಸಾಧನವೆಂದರೆ ಶ್ರದ್ಧೆ, ಈ ಶ್ರದ್ಧೆ , ಹೊರಗಿನಿಂದ ಪಡೆಯುವ ವಸ್ತುವಲ್ಲ.ಒಳಗಿನಿಂದಲೇ ಬೆಳೆಯಬೇಕಾದ ಗುಣ.ಶ್ರದ್ದೆಯೆಂಬ ಗುಣ, ಶ್ರದ್ಧೆಯೆಂಬ ಶಬ್ದವನ್ನೇನೋ ಎಲ್ಲರೂ ಒಂದಲ್ಲ. ಒಂದು ಸಂದರ್ಭದಲ್ಲಿ ಕೇಳಿಯೇ ಇದ್ದಾರೆ . ಆದರೆ ಅದರ ಮರ್ಮವನ್ನರಿತವರು ಅತ್ಯಲ್ಪ ಮಂದಿ.ಅಂಥವರು ತಾವು ಹಿಡಿದ ಮಾರ್ಗದಲ್ಲಿ ಮುಂದುವರಿದು ತಮ್ಮ ಧ್ಯೇಯವನ್ನು ಸಿದ್ಧಿಸಿಕೊಂಡಿದ್ದಾರೆ . ಶ್ರದ್ಧೆಯ ಬಲವೇ ಅಂಥದು . ಅದು ಸಾಧಕನನ್ನು ಎಂದರೆ ಪ್ರಯತ್ನಶೀಲನನ್ನು , ಗುರಿ ಮುಟ್ಟಿಸದೆ ಬಿಡುವುದೇ ಇಲ್ಲ . ಹೀಗೆ ಹೇಳಿದಾಗ , ಹಾಗಾದರೆ ಈ ಶ್ರದ್ಧೆ, ಎಂದರೆ ಎಂತಹದು ಎಂಬ ಪ್ರಶ್ನೆ ಉದಿಸಿದರೆ ಆಶ್ಚರ್ಯವಿಲ್ಲ . ಶ್ರದ್ದೆಯೆಂದರೆ ತಮ್ಮ ಶಕ್ತಿಯಲ್ಲಿ ತಮಗೆ ಇರುವ ನಂಬಿಕೆ. ಇದಕ್ಕೆಆತ್ಮವಿಶ್ವಾಸ ಎನ್ನುವುದು . ಒಬ್ಬನಿಗೆ ಸಾಕಷ್ಟು ತೋಳ್ಬಲವಿರಬಹುದು . ಆದರೆ ತನ್ನ ತೋಳ್ಬಲದಲ್ಲಿ ಅವನಿಗೆ ನಂಬಿಕೆಯಿಲ್ಲದೆ ಹೋದರೆ ಅವನಿಗೆ ಅದರಿಂದೆನೂ ಪ್ರಯೋಜನವಾಗದು . ಹನುಮಂತನಲ್ಲಿ ಸಾಗರಲಂಘನ ಮಾಡುವ ಶಕ್ತಿಯಿದ್ದರೂ ಅವನಿಗೆ ಅದರಲ್ಲಿ ನಂಬಿಕೆಯಿರಲಿಲ್ಲ. ಆದ್ದರಿಂದ ಸುಮ್ಮನೆ ಕುಳಿತಿದ್ದ.ಆದರೆ ಜಾಂಬವಂತ ಅವನಲ್ಲಿ ನಂಬಿಕೆ ತುಂಬಿ ಶಕ್ತಿಯ ಅರಿವು ಮಾಡಿಕೊಟ್ಟಾಗ ಒಂದೇ ನೆಗೆತಕ್ಕೆ ಲಂಕೆಯನ್ನು ತಲುಪಿದ.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು . ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ