MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಮೇ 18, 2010

ಓದಲು ಅಥವಾ ಬರೆಯಲು ಕುಳಿತಾಗ ಶರೀರ ತುಂಬಾ ಅಲುಗಾಡುವಂತೆ ಮಾಡುವುದು ಏಕಾಗ್ರತೆಗೆ ಮಾರಕ!

ಓದಲು ಅಥವಾ ಬರೆಯಲು ಕುಳಿತಾಗ ಶರೀರ ತುಂಬಾ ಅಲುಗಾಡುವಂತೆ ಮಾಡುವುದು ಏಕಾಗ್ರತೆಗೆ ಮಾರಕ!
ಪಾತ್ರೆ ಅಲುಗಾಡುತ್ತಿದ್ದರೆ ಅದರಲ್ಲಿರುವ ನೀರೂ ಅಲುಗಾಡುವಂತೆ ,ಶರೀರ ವಿವಿಧ ಚಲನವಲನಗಳನ್ನು ಸರಿಯಾದ ಕ್ರಮದಲ್ಲಿ ಕುಳಿತು ಓದಲು ಅಥವಾ ಬರೆಯಲು ತೊಡಗಬೇಕಾದದ್ದು ಪ್ರಮುಖ ಅಂಶ.

ಒಂದು ಸಲಕ್ಕೆ ಒಂದು ವಿಷಯವನ್ನು ಮಾತ್ರವೇ ಅಧ್ಯನಕ್ಕೆ ತೆಗೆದುಕೊಳ್ಳಬೇಕು
ಎಂಬುದನ್ನು ಪ್ರ್ಯತ್ಯೆಕವಾಗಿ ಹೇಳಬೇಕಾಗಿಲ್ಲ . ಆದರೆ ಒಂದು ವಿಷಯವನ್ನು ಅಧ್ಯಯನ ಮಾಡಲು ಕುಳಿತರೆ ಕನಿಷ್ಠ ಪಕ್ಷ ಒಂದು ಗಂಟೆಯ ಕಾಲವಾದರೂ ಮನಸ್ಸು ಅದರಲ್ಲೇ ತನ್ಮಯವಾಗಿರುವಂತೆ ನೋಡಿಕೊಳ್ಳಬೇಕು , ಪುಸ್ತಕವನ್ನು ಸುಮ್ಮನೆ ಓದಿಕೊಂಡು ಹೋದರೆ ಅಧ್ಯಯನ ಮಾಡಿದಂತಾಗುವುದಿಲ್ಲ.ಪುಸ್ತಕವನ್ನು ಸುಮ್ಮನೆ ಓದಿಕೊಂಡು -ಹೋಗುವುದಕ್ಕೂ ಅಧ್ಯಯನ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ ಎಂಬುದನ್ನು ತಿಳಿದಿರಬೇಕು. ಆದರೆ ಏಕಾಗ್ರತೆ ಮಾತ್ರ ಇವರೆಡಕ್ಕು ಸಮಾನವಾಗಿ ಅಗತ್ಯವಿರುವ ಅಂಶವೆನ್ನಿ.ಪುಸ್ತಕವನ್ನು ಸುಮ್ಮನೆ ಓದಿಕೊಂಡುಹೋದಾಗ ಅದರ ಅಭಿಪ್ರಾಯವೇನೆಂದು ತಿಳಿಯುತ್ತದೆ .ಅಷ್ಟೇ , ಆದರೆ ಅದನ್ನೇ ಅಧ್ಯಯನ ಮಾಡಿದಾಗ ನಮ್ಮ ಮನಸ್ಸು ಅದರಲ್ಲಿ ವಿವರಿಸಲಾದ ವಿಷಯದ ಆಳಕ್ಕೆ ಹೋಗಿ ಅಂತರಾರ್ಥವನ್ನು ಅರಿಯುತ್ತದೆ. ಇದರಿಂದಾಗಿ ಅಂದು ಮಾಡಿದ ಅಧ್ಯನ ವಿಷಯ ನಮ್ಮ ಸ್ವಾಧೀನಕ್ಕೆ ಬರುತ್ತದೆ ಮತ್ತು ಇದು ಮುಂದಿನ ವಿಷಯದ ಅಧ್ಯಯನಕ್ಕೆ ನೆರವಾಗುತ್ತದೆ.
ಒಮ್ಮೆ ಅಧ್ಯಯನಕ್ಕೆ ಕುಳಿತೆವೆಂದರೆ ಒಂದು ಗಂಟೆಯ ಕಾಲ ಅದರಲ್ಲೇ ತೊಡಗಿರಬೇಕು
ಎಂಬುದನ್ನು ಇಲ್ಲಿ ವಿಶೇಷವಾಗಿ ಗಮನಿಸಬೇಕು. ಮನಸ್ಸು ಒಂದು ವಿಷಯವನ್ನು ಏಕಾಏಕಿ ಗ್ರಹಿಸಲು ಸಿದ್ದವಿರುವುದಿಲ್ಲ . ಅಧ್ಯಯನಕ್ಕೆ ಕುಳಿತುಕೊಳ್ಳುವ ಮೊದಲು ನಾವು ಯಾವ ಕಾರ್ಯ ಮಾಡುತ್ತಿದ್ದೆವೋ ಅಥವಾ ಯಾವ ಮಾತನ್ನಾಡುತ್ತಿದ್ದೆವೋ ಅಥವಾ ಇನ್ನಾವ ವಿಷಯವನ್ನು ಚಿಂತಿಸುತ್ತಿದ್ದೆವೋ ವಿಷಯವೇ ನಮ್ಮ ಮನಸ್ಸಿನಲ್ಲಿ ಇನ್ನೂ ಸುಳಿದಾಡುತ್ತಿರುತ್ತದೆ.ಆದ್ದರಿಂದ ಈಗ ಅಧ್ಯಯನಕ್ಕೆ ಕುಳಿತಾಗ ಮನಸ್ಸು ಅಣೆಯಾಗುವುದಕ್ಕೆ ಎಂಟು-ಹತ್ತು ನಿಮಿಷಗಳಾದರೂ ಬೇಕಾಗಬಹುದು.ಮತ್ತು ಮನಸ್ಸು ವಿಷಯದ ಆಳಕ್ಕೆ ಪ್ರವೇಶಿಸಿ ಅರಿಯಲು ತೊಡಗುವ ವೇಳೆಗೆ ಸರಕ್ಕನೆ ಅಲ್ಲಿಂದ ಎದ್ದರೆ ಏಕಾಗ್ರತೆ ನಷ್ಟವಾಗುತ್ತದೆ . ಅಧ್ಯಯನ ಭ್ರಷ್ಟವಾಗುತ್ತದೆ.ಆದ್ದರಿಂದ ಮನಸ್ಸು ಅಧ್ಯಯನದಲ್ಲಿ ಕೆಂದ್ರೀಕ್ರುತವಾದಾಗ ಅವಕಾಶವನ್ನು ಉಪಯೋಗಿಸಿಕೊಂಡು ಇನ್ನೂ ಆಳಕ್ಕೆ ಮುಳುಗಬೇಕು. ಹೀಗೆ ಒಂದು ಗಂಟೆಯ ಕಾಲವಾದರೂ ಮನಸ್ಸು ಅಲ್ಲೇ ನಿಲ್ಲುವಂತೆ ಮಾಡಬೇಕು.
ಮನಸ್ಸನ್ನು ಹತೋಟಿಯಲ್ಲಿ ಇಡಬೇಕಾದ ಅವಶ್ಯಕತೆಯಾದರೂ ಏನಿದೆ?.-ಎಂಬ ಪ್ರಶ್ನೆಯೊಂದು ಏಳುತ್ತದೆ . ಅದಕ್ಕೊಂದು ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕು .ಉತ್ತರವಿಷ್ಟೇ; ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ ಅದರ ಮೂಲಕ ಮಹತ್ಕಾರ್ಯಗಳನ್ನೇ ಸಾಧಿಸಿಬಿಡಬಹುದು. ಅದು ನಮ್ಮ ಹತೊಟಿಯಲ್ಲಿರದಿದ್ದರೆ ಮಾತ್ರ ಅದರಿಂದ ಸಾಮಾನ್ಯ ಕಾರ್ಯವನ್ನೂ ಮಾಡಿಸಲು ಸಾಧ್ಯವಾಗುವುದಿಲ್ಲ.

ನಿಜಕ್ಕೂ ನಮ್ಮ ಮನಸ್ಸಿಗೆ ಪ್ರಚಂಡ ದೈತ್ಯ ಶಕ್ತಿಯೇ ಇದೆ. ಆದರೂ ಹಲವರು ಎಷ್ಟೋ ವೇಳೆ , ಅಥವಾ ಜೀವನವಿಡಿ ,ದುರ್ಬಲರಂತೆ ಇರುತ್ತಾರೆ. ಇದ್ದಕ್ಕೆ ಅವರ ಮನಶಕ್ತಿಯು ನಾನಾ ರೀತಿಗಳಿಂದ ಹಂಚಿಹೊಗಿರುವುದೇ ಕಾರಣವಾಗಿದೆ. ಸೂರ್ಯಕಿರಣಗಳಿಗೆ ಸುಡುವ ಶಕ್ತಿಯಿದಿಯೆಂಬ ಸತ್ಯ ಎಲ್ಲರಿಗೂ ತಿಳಿದಿಲ್ಲ , ಕಾರಣ , ಅವು ಇಲ್ಲಿಯವರೆಗೂ ಎಲ್ಲಿಯೂ ಬೆಂಕಿ ಹೊತ್ತಿಸಿ ವಸ್ತುಗಳನ್ನು ಸುಡಲಿಲ್ಲವಲ್ಲ! .ಆದರೆ ಅದೇ ಕಿರಣಗಳನ್ನು ಭೂತಕನ್ನಡಿಯ ಮೂಲಕ ಹಾಯಿಸಿ ಕಾಗದದ ಮೇಲೆ ಬಿಟ್ಟಾಗ ಬೆಂಕಿ ಹೊತ್ತಿಕೊಳ್ಳುವುದು ಕಾಣುತ್ತದೆ. ಆ ಕಿರಣಗಳಿಗೆ ಈಗ ಎಲ್ಲಿಂದ ಬಂತು ಈ ಸುಡುವ ಶಕ್ತಿ?. ಅವುಗಳನ್ನು ಏಕತ್ರ ಗೊಳಿಸಿದ್ದರಿಂದ ,ಹಿಂದೆ ಅವು ಹರಡಿಕೊಂಡಿದ್ದವು , ಆದ್ದರಿಂದ ಶಾಖಮಾತ್ರ ಇತ್ತು. ಈಗ ಏಕತ್ರ ಗೊಂಡಾಗ ಧಗಧಗಿಸುವ ಅಗ್ನಿಯೇ ಉದ್ಬವಿಸಿತು.ಇದೇ ನಾವು ಗಮನಿಸಬೇಕಾದ ರಹಸ್ಯ . ನಮ್ಮ ಮನದಲ್ಲಿ ಸಹಜವಾಗಿಯೇ ಅಪಾರ ಶಕ್ತಿಯಿದೆ . ಆದರೆ ಅದು ಬೇಕಾದ-ಬೇಡವಾದ ಎಲ್ಲ ವಿಷಯಗಳಲ್ಲೂ ಹರಡಿಕೊಂಡಿರುವುದರಿಂದ ನಮ್ಮಿಂದ ಸಾಮಾನ್ಯ ಕೆಲಸ ಕಾರ್ಯಗಳನ್ನು ಮಾಡಲು ಮಾತ್ರವೇ ಸಾಧ್ಯವಾಗುತ್ತದೆ.ಮಹತ್ಕಾರ್ಯವನ್ನೇ ನಾದರು ಸಾಧಿಸಬೇಕಾದರೆ ಹರಡಿಕೊಂಡಿರುವ ಮನಶ್ಯಕ್ತಿಯನ್ನು ಒಗ್ಗೂಡಿಸಬೇಕಾಗುತ್ತದೆ.ಮನಶ್ಯ್ಕತಿಯನ್ನು ಒಗ್ಗೂಡಿಸಬೇಕಾದರೆ ನಮ್ಮ ಮನಸ್ಸು ನಮ್ಮ ಅಧೀನದಲ್ಲಿರಬೇಕಾಗುತ್ತದೆ . ಕಂಡ ಕಂಡ ಕಡೆಗೆಲ್ಲ ಮಂಡೆಗೆಟ್ಟು ಓಡುವ ಮನಸ್ಸು ನಮ್ಮದಲ್ಲ. ಇಂದ್ರಿಯಗಳ ಆಹ್ವಾನಕ್ಕೆ ಓಗೊಟ್ಟು ವಿಷಯವಸ್ತುಗಳಲ್ಲಿ ಮುಳುಗಿರುವ ಮನಸ್ಸು ನಮ್ಮದಲ್ಲ. ನಮ್ಮದಲ್ಲ ದ ಮನಸ್ಸಿನಿಂದ ನಾವು ಏನು ತಾನೇ ಮಾಡಿಸಲು ಸಾದ್ಯ?

ಋಷಿಮುನಿಗಳು ಸತತ ಪ್ರಯತ್ನದಿಂದ ಮೊದಲು ಸಾಧಿಸಿದ್ದೆ ಮನಸ್ವಯಮವನ್ನು . ಎಂದರೆ ತಮ್ಮ ಮನಸ್ಸನ್ನು ತಮ್ಮ ಹಿಡಿತಕ್ಕೆ ತಂದು ಕೊಂಡದ್ದು.ಬಳಿಕ ಆ ಮನಸ್ಸನ್ನು ಹಿಡಿದು ಏಕಾಗ್ರಗೊಲಿಸಿದಾಗ ಅದು ಸಕಲ ಯೋಗರಹಸ್ಯಗಳನ್ನೇ ಬಯಲಿಗೆಳೆಯಿತು . ದಿವ್ಯ ಜ್ಞಾನವನ್ನೇ ಪ್ರಾಪ್ತಿಮಾಡಿಕೊಟ್ಟಿತು.

ಜೋಗದ ಜಲಪಾತದಂತೆ ಯುವಕರ ಮನಸ್ಸು!ಬೃಹತ್ ಪ್ರಮಾಣದ ನೀರು ಎತ್ತರದ ಬೆಟ್ಟದಿಂದ ಧುಮುಧುಮಿಸಿ ಧುಮಿಕಿ , ಎಲ್ಲೆಂದರಲ್ಲಿ ಹರಿದಾಡಿ , ಕೊನೆಗೂ ಯಾವ ಉಪಯೋಗಕ್ಕೂ ಬಾರದೆ ಸಮುದ್ರಕ್ಕೆ ಸೇರಿ ಹೇಳ ಹೆಸರಿಲ್ಲದಂತಾಗುತ್ತದೆ. ಆದರೆ ಆ ನೀರಿಗೆ ಆಣೆಕಟ್ಟು ಕಟ್ಟಿ , ಕಾಲುವೆಯಲ್ಲಿ ಹರಿಯಿಸಿ , ಹೊಲಗಳಿಗೆ ತಂದುಕೊಂಡಾಗ ಹಸನಾದ ಬೆಳೆ ನಳನಳಿಸುತ್ತದೆ.
ಹಾಗೆಯೇ , ಮನಬಂದಂತೆ ಕುಣಿದಾಡಿ , ವ್ರಥಾ ವ್ಯಯವಾಗುವ ಯುವಕರ ಅಶಿಕ್ಷಿತ ಮನಶಕ್ತಿಗೆ ನಿಯಮಗಳ ಆಣೆಕಟ್ಟು ಕಟ್ಟಿ, ಶಿಸ್ತಿನ ಕಾಲುವೆ ತೋಡಿ , ಅದನ್ನು ಶಿಕ್ಷಣ ಕಲೆ ಸಾಹಿತ್ಯ ಕರ್ಮಕೌಶಲಗಳೆಂಬ ಹೊಲಗಳಲ್ಲಿ ಹರಿಯಿಸಿದಾಗ ಸಂಸ್ಕೃತಿಯೆಂಬ ಫಸಲು ಸಮೃದ್ಧವಾಗುತ್ತದೆ.

ಚಳಿ ಇಳಿದಿದೆ ಇಳೆಗೆ
ನಡುಕವು ಗಿಳಿ ಮರಿಗೆ !

ಮರಮರದಲಿ ಎಲೆ ಉದಿರಿವೆ
ಬತ್ತಲೆಯ ಕಾಡು
ಮಾತೆಲ್ಲವ ಮರೆತಿರುವೆ
ಹೊಸ ಹದನೆ ಹಾಡು

ಗಿಳಿಗಿಳಿಯೇ ಇಳೀಳಿಯೆ
ನೋಡೋಣ ಬಾರೆ !
ಹಸಿಹಸಿರಿನ ಉಸಿಉಸಿರನು
ಬಸಿಬಸಿದು ತೋರೆ

ಜಗವೆಲ್ಲವು ಪಂಜರವು
ಹಾಗೆ ನೋಡಿದರೆ
ಅಲ್ಲದಿರೆ ರಂಜನೆಯು
ಬರಿದೆ ಹಾಡಿದರೆ !

----------------ರಾಜು ಹೆಗ್ಡೆ
ಕನ್ನಡ ಉಪನ್ಯಾಸಕ
ಎಂ ಎಂ ಕಾಲೇಜು ಸಿರ್ಸಿ [ಉ .ಕ ]



-.ಟಿ.ನಾಗರಾಜ
ಡಬ್ಲು
ಡಬ್ಲು ಡಬ್ಲು. ಸನ್ ನ್ಯಾಚುರಲ್ ಫ್ಲಾಶ್ . ಕಂ /
+೯೧ 9632172486

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ