MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಮೇ 28, 2010

ಶಾಲಾ ಅಧ್ಯಾಪಕರು ಹಾಕಿಕೊಂಡಿರುವ ವೇಳಾಪಟ್ಟಿಯೇ ಆ ಸುಸುತ್ರತೆಯ ಗುಟ್ಟು.

ನೋಡು ಪಾಠಗಳು ನಿನಗೆ ಅರ್ಥವಾಗಬೇಕಾದರೆ , ಮುಂದೆ ನೀನು ಯಶಸ್ವಿಯಾಗಿ ತೆರ್ಗಡೆಯಾಗಬೇಕಾದರೆ ಅದಕ್ಕೆಅಗತ್ಯವಾದ ಕೆಲವು ಸಲಹೆಗಳನ್ನು ನಿನ್ನ ಮುಂದಿಡುತ್ತೇನೆ. ಅವುಗಳನ್ನು ಸುಮ್ಮನೆ ಅನುಸರಿಸಿದರಾಯಿತು;ಜಯನಿನಗೆ ಕಟ್ಟಿಟ್ಟದ್ದು .
ಮೊಟ್ಟಮೊದಲನೆಯದಾಗಿ ನಿನಗೆ ಕೊಡಲಿಚ್ಚಿಸುವ ಸಲಹೆಯೆಂದರೆ , ನೀನು ಬೆಳಗ್ಗೆ ಎದ್ದ ಕೂಡಲೇ ಶೌಚಾದಿಗಳನ್ನುಮುಗಿಸಿಕೊಂಡು ದೇವರಿಗೆ,ತಾಯಿಗೆ, ತಂದೆಗೆ ಪ್ರಣಾಮ ಸಲ್ಲಿಸಬೇಕು. ಕಾರ್ಯದಿಂದ ನಿನ್ನ ದಿನಚರಿ ಪ್ರಾರಂಭವಾಗಬೇಕು , ನಿನ್ನೆಲ್ಲ ಯಶಸ್ಸಿಗೆ,ಪ್ರಯತ್ನದ ಸಫಲತೆಗೆ ದೇವರ ಹಾಗೂ ಗುರುಹಿರಿಯರ ಆಶೀರ್ವಾದವೇ ಮುಖ್ಯ ಎಂಬ ವಿಷಯದಲ್ಲಿ ನಿನಗೆಸಂಶಯ ಬಾರದಿರಲಿ . ಸರಿಯಾದ ಪ್ರಯತ್ನ ಮಾಡಿದರೆ ಅದಕ್ಕೆ ತಕ್ಕ ಫಲ ಬಂದೇ ಬರುತ್ತದೆ ಎನ್ನುವುದು ನಿಜವೇ .ಆದರೆಸರಿಯಾದ ಪ್ರಯತ್ನದಲ್ಲಿ ತೊಡಗುವುದಕ್ಕೆ ಬೇಕಾದ ಮನಸ್ಥಿತಿಯನ್ನು ಕೊಡುವುದು ದೇವರ, ಗುರುಹಿರಿಯರ ಆಶೀರ್ವಾದ . ಆಶೀರ್ವಾದ ಮಹಿಮೆಯನ್ನು ಈಗ ನಾನೆಷ್ಟೇ ವರ್ಣೆಸಿದರೂ ನಿನಗದು ಸರಿಯಾಗಿ ಅರ್ಥವಾಗುವುದು ನೀನು ಸಾಕಷ್ಟುಪ್ರಾಯಪ್ರಬುದ್ದನದ ಮೇಲೆಯೇ . ಆದರೂ ತತ್ಕಾಲಕ್ಕೆ ಮಾತಿನಲ್ಲಿ ನಂಬಿಕೆಯಿಟ್ಟು ನಡೆಯಲು ಯತ್ನಿಸು . ಇನ್ನೊಂದು
ಸ್ವಾರಸ್ಯವೆಂದರೆ , ಆಶೀರ್ವಾದವನ್ನು ನೀನು ಬಾಯ್ಬಿಚ್ಚಿ ಕೇಳಬೇಕಾಗಿಲ್ಲ . ಭಕ್ತಿಯಿಂದ ಮಣಿದಾಗ ದೇವರ ಹಾಗೂ ಗುರುಹಿರಿಯರಹೃದಯದಿಂದ 'ಇವನಿಗೆ ಶುಭವಾಗಲಿ'ಎಂಬ ಆಶೀವಾರ್ದದ ಭಾವ ತಾನಾಗಿಯೇ ಹರಿದು ಬರುತ್ತದೆ.
ಈಗ ನಿನಗೆ ವೇಳಾಪಟ್ಟಿಯ ಮಹತ್ವವನ್ನು ತಿಳಿಸಲೆತ್ನಿಸುತ್ತೇನೆ.ನಿನ್ನ ಶಾಲೆಯಲ್ಲಿ ಪ್ರಾರ್ಥನೆ ಪಾಠ ಆಟ ಎಲ್ಲವೂಸುಸೂತ್ರವಾಗಿ ನಡೆಯುವುದನ್ನು ಕಾಣುತ್ತಿರುವೆಯಷ್ಟೇ?. ಶಾಲಾ ಅಧ್ಯಾಪಕರು ಹಾಕಿಕೊಂಡಿರುವ ವೇಳಾಪಟ್ಟಿಯೇ ಸುಸುತ್ರತೆಯ ಗುಟ್ಟು.ದಿನಕ್ಕೆ ಸುಮಾರು ಏಳೆಂಟು ಕಾಲಾವಧಿ ಗಳಲ್ಲಿ ಬಗೆಬಗೆಯ ವಿಷಯಗಳ ಮೇಲೆ ಸ್ವಲ್ಪಸ್ವಲ್ಪವೇ ಪಾಠಪ್ರವಚನಗಳನ್ನು ನಡೆಸುತ್ತ ನಿಮಗೆ ಎಷ್ಟೊಂದು ಪಟ್ಯ ಪುಸ್ತಕಗಳ ಅಭ್ಯಾಸ ಮಾಡಿಸುತ್ತಾರೆ ನೋಡು!. ಆದರೂ ಇಂದಿನವಿದ್ಯಾರ್ಥಿಗಳು ಗುಟ್ಟನ್ನು ಅರಿತುಕೊಳ್ಳುವುದೇ ಇಲ್ಲ.ಬದಲಾಗಿ ಅವರು ಮನೆಗೆ ಬಂದು , ಮಾಡಿದ ಪಾಠ ಗಳ ಪುನರಾವರ್ತನೆಮಾಡದೆ, ಅತಿಯಾದ ಆಟ,ಟಿ.ವಿ.ಕಥೆ.ಕಾದಂಬರಿ ಹಾಗೂ ಅಲೆದಾಟಗಳಲ್ಲೇ ಮೈಮರೆತು ಕೊನೆಗೆ ಪರೀಕ್ಷೆ ಸಮೀಪಿಸಿದಾಗಮೈತಿಳಿದು ಎಲ್ಲ ಪಟ್ಯಪುಸ್ತಕಗಳನ್ನು ಒಟ್ಟಿಗೆ ಓದಿ ತಲೆಗೆ ತುಂಬಿಸಿಕೊಳ್ಳುತ್ತೆವೆಂದು ಪ್ರಯತ್ನಿಸಿ ,ಅದು ಸಾಧ್ಯವಾಗದೆ ತಲೆಕೆಡಿಸಿಕೊಂಡು ಕಂಗಾಲಾಗುವ ದೃಶ್ಯ ಸರ್ವೇ ಸಾಮಾನ್ಯ.
-.ಟಿ .ನಾಗರಾಜ
+ 91 9632172486
ಡಬ್ಲ್ಯು ,ಡಬ್ಲ್ಯು, ಡಬ್ಲ್ಯು. ಸನ್ನ್ಯಾಚುರಲ್ ಫ್ಲಾಶ್ .ಕಂ/

1 ಕಾಮೆಂಟ್‌: