MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಮೇ 27, 2010

ವಿದ್ಯಾರ್ಥಿಗೊಂದು ಪತ್ರ

ವಿದ್ಯಾರ್ಥಿಗೊಂದು ಪತ್ರ
ಪ್ರಿಯ ಸೋಮಶೇಖರ
ನಿನ್ನ ಪತ್ರ ತಲುಪಿತು.ನಿನ್ನ ಅಸಹಾಯಕ ಪರಿಸ್ಥಿತಿಯ ಅರಿವೂ ಆಯಿತು.ಗ್ರಾಮಾಂತರ ಶಾಲೆಯ ವಿದ್ಯಾರ್ಥಿಯಾದ ನಿನಗೆ ಕೆಲವು ಅನನುಕುಲತೆಗಳಿವೆ ಎಂಬುದು ನಿಜವಾದರೂ ಹಲವಾರು ಅನುಕೂಲತೆಗಳು ಇವೆ ಎಂಬುದನ್ನು ನೀನು ಮರೆಯಬಾರದು . ಪೇಟೆ ಪಟ್ಟಣ ನಗರಗಳಲ್ಲಿರುವ ವಿದ್ಯಾರ್ಥಿಗಳ ಅಧ್ಯಯಾನಕ್ಕೆ ಅಡ್ಡಿ ಆತಂಕಗಳು ಅಧಿಕವೆಂದೇ ಹೇಳಬೇಕು. ಟಿ.ವಿ.ಸಿನೆಮಾ , ಹೋಟೆಲುಗಳು , ಲೌಡ್ ಸ್ವೀಕರ್ ಅರಚಾಟದಿಂದ ಉಂಟಾಗುವ ಶಬ್ದಮಾಲಿನ್ಯ , ಇನ್ನು ಏನೇನೋ , ಗ್ರಾಮಾಂತರ ಪ್ರದೇಶದ ಪರಿಶುದ್ದ ಹವಾಗುಣದಿಂದ ಕೂಡಿದ ಪ್ರಶಾಂತ ವಾತಾವರಣವೊಂದೆ ಸಾಕು. ಏಕಾಗ್ರತೆಯಿಂದ ಕುಳಿತು ಅಧ್ಯಯನ ಮಾಡಲು. ಪಟ್ಟಣಗಳ ವಿಧ್ಯ್ಯಾರ್ಥಿಗಳಿಗೆ ಅನೇಕ ಅನುಕೂಲತೆಗಳಿವೆ ಎಂಬ ಮಾತನ್ನು ಅಲ್ಲಗಳೆಯುವುದಿಲ್ಲ ನಾನು.ಆದರೆ ಈ ವಿದ್ಯ್ಯಾರ್ಥಿಗಳು ಪೋಲಿತನಕ್ಕೆ ಬಲಿಬೀಳುವ ಸಂಭವ ಹೆಚ್ಚು.ಆದ್ದರಿಂದ ಅವರ ತಾಯ್ತಂದೆಯರು , ಅಧ್ಯಾಪಕರು ಅವರನ್ನು ರಕ್ಷಿಸಲು ಅದೆಷ್ಟು ಪರಿಪಾಟು ಪಡಬೇಕಾಗುತ್ತದೆಎಂಬುದನ್ನು ತಿಳಿದಿರಬೇಕು ನೀನು. ನಗರಗಳಲ್ಲಿ ಆದರ್ಶದಿಂದ ಜಾರಲು ನೂರಾರು ದಾರಿಗಳಿವೆ . ತಮ್ಮ ಹುಡುಗರನ್ನು ಯಾವದೋ ಒಂದು ಜಾರುದಾರಿಯಿಂದ ತಪ್ಪಿಸಿದ ಮಾತ್ರಕ್ಕೆ ತಾಯ್ತಂದೆ ಯರು ಸುಮ್ಮನೆ ಕುಳಿತಿರುವಂತಿಲ್ಲ
ಇತರ ಜಾರುದಾರಿಗಳತ್ತ ಹೋಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾಗುತ್ತದೆ.
ಆ ವಿಷಯ ಹಾಗಿರಲಿ.'ನಾನೀಗ ಎಸ್ಸೆಸ್ಸೆಲ್ಸಿ ತರಗತಿಗೆ ಬಂದಿದ್ದೇನೆ.ಪಾಠ ಪ್ರವಚನಗಳು ಪ್ರಾರಂಭವಾಗಿವೆ . ಆದರೆ ಎಷ್ಟೋ ವಿಷಯಗಳು ಅರ್ಥವೇ ಆಗುತ್ತಿಲ್ಲ' ಎಂದು ಬರೆದಿರುವೆ.ಇನ್ನೊಬ್ಬ ವಿದ್ಯಾರ್ಥಿಯು ಒಂದು ಪತ್ರ ಬರೆದಿದ್ದಾನೆ.. ಅವನ ಅಧ್ಯಾಪಕರು ಸರಿಯಾಗಿ ಪಾಠವನ್ನೇ ಮಾಡುವುದಿಲ್ಲವಂತೆ . ಅರ್ಥವಾಗದ ವಿಷಯವನ್ನು ಕೇಳಿದರೆ ಉತ್ತರ ಹೇಳುವುದೂ ಇಲ್ಲವಂತೆ . ಅದು ಅವನ ದುರದೃಷ್ಟ . ನಿನ್ನ ಅಧ್ಯಾಪಕರು ಚೆನ್ನಾಗಿ ಪಾಠ ಮಾಡುತ್ತಾರಲ್ಲ. ಅದು ನಿನ್ನ ಪುಣ್ಯ!.
........ಮುಂದುವರಿಯುವುದು.ಪ್ರತಿದಿನ ಓದಿ
ಈ ಅಂಕಣಕ್ಕೆ ನಿಮ್ಮ ಪ್ರಶ್ನೆಗಳನ್ನು ಕಳುಹಿಸುವಾಗ ಎಂಎಲ್ಎಂಗುರುನಗ್ಅಟ್ ಜಿಮೇಲ್ ಡಾಟ್ ಕಂ ಗೆ ಕಳುಹಿಸಬೇಕು. ನಿಮ್ಮ ಪೂರ್ಣ ಹೆಸರು , ವಿಳಾಸ ನಮೂದಿಸಿ. ದೂರವಾಣಿಯೂ ಇರಲಿ
ವಂದನೆಗಳೊಂದಿಗೆ
ನಿಮ್ಮ ನೆಟ್ನಾಗ
ಎ.ಟಿ .ನಾಗರಾಜ
+೯೧-9632172486

2 ಕಾಮೆಂಟ್‌ಗಳು: