MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಏಪ್ರಿಲ್ 10, 2011

ರಾಷ್ಟ್ರಬಂಧು ರಾಜೀವ ದೀಕ್ಷಿತರ ಭಾಷಣ ಗಳ ಆಯ್ದ ತುಣುಕುಗಳು _ಬರಹಗಳು ;ಮಲ್ಲೇಶ್ . ಸಹಾಯ ;ಸುರೇಶ ಕರೆಮಣಿ

ರಾಷ್ಟ್ರಬಂಧು ರಾಜೀವ ದೀಕ್ಷಿತರ ಭಾಷಣ ಗಳ  ಆಯ್ದ ತುಣುಕುಗಳು _ಬರಹಗಳು ;ಮಲ್ಲೇಶ್  . ಸಹಾಯ ;ಸುರೇಶ ಕರೆಮಣಿ 
ಮಾಂಸಾಹಾರದ ಹಾನಿಗಳು
         ಇದು  ಇಡೀ ವಿಶ್ವಕ್ಕೆ ಸಂಬಂಧಿಸಿದ  ಒಂದು ಅತ್ಯಂತ  ಮಹತ್ವದ  ಸಂದೇಶವಾಗಿದೆ.  ಇತ್ತೇಚೆಗೆ  ನೀವೆಲ್ಲರೂ ವಿಶ್ವದ ವಾತಾವರಣದಲ್ಲಿನ  ಉಷ್ಣತೆಯ ಬಗ್ಗೆ ಎಲ್ಲಾ ಟಿ.ವಿ. ಚಾನೆಲ್ ಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ನೋಡಿ,  ಕೇಳಿ,  ಓದಿರಬಹುದು.  ಅದರ ಪ್ರಕಾರ ಇಂದು ಇಡೀ ಜಗತ್ತು  ಕ್ರಮೇಣ  ಹೆಚ್ಹೆಚ್ಚು ತಾಪಮಾನವಾಗುತ್ತಿದೆ.  ವಿಶ್ವದ ಎಲ್ಲಾ ವಿಜ್ಞಾನಿಗಳ  ಒಟ್ಟು ಅಭಿಪ್ರಾಯವೆಂದರೆ ,  "ಕಳೆದ ನೂರು ವರ್ಷಗಳ  ಅವಧಿಯಲ್ಲಿ  ಜಗತ್ತಿನ ಉಷ್ನತಾಪಮಾನವು ಎರಡು  ಡಿಗ್ರಿ ಸೆಂಟಿ ಗ್ರೆಡಿನಷ್ಟು ಹೆಚ್ಚಾಗಿದ್ದು ,   ಇದು ಇದೆ ರೀತಿ ಇನ್ನೂ ಐವತ್ತು ವರ್ಷ ಹೋದರೆ ತಾಪಮಾನದ ಹೆಚ್ಚಳ ಎರಡು ಡಿಗ್ರಿ ಯಿಂದ  ನಾಲ್ಕು ಡಿಗ್ರಿ ಸೆಂಟಿ ಗ್ರೇಡಿನ ವರೆಗೂ ಹೋಗಬಹುದು".  ಇದರಿಂದ  ಉತ್ತರದ್ರುವದಲ್ಲಿರುವ  ಹಿಮ ಬೇಗ ಕರಗಲಾರಮ್ಭಿಸುತ್ತದೆ.  ಭಾರತದ  ಹಿಮಾಲಯವೂ  ಸಹ ಕರಗಲಾರಮ್ಭಿಸಿ ,  ಅದರಿಂದ  ನದಿಗಳ ನೀರು ಹೆಚ್ಚಾಗುತ್ತದೆ.  ಕಡೆಗೆ ಅದು ಸಮುದ್ರವನ್ನು  ಸೇರುತ್ತದೆ.  ಹೀಗೆ ಸಮುದ್ರವನ್ನು ಸೇರುವ ನೀರಿನ ಮಟ್ಟ ಆರರಿಂದ ಏಳು ಇಂಚು  ಹೆಚ್ಚಾದರೂ ಸಹ ವಿಶ್ವದ ಸುಮಾರು ದೇಶಗಳು ಮುಳುಗಿ ಹೋಗುವ ಸಾಧ್ಯತೆಗಳಿವೆ.   ವಿಜ್ಞಾನಿಗಳ  ಪ್ರಕಾರ ಈ ಹೆಚ್ಚಳವು ಹನ್ನೆರಡರಿಂದ  ಹದಿನಾಲ್ಕು ಇಂಚುಗಳಷ್ಟು  ಹೆಚ್ಚಾಗಬಹುದೆಂದು  ಅಂದಾಜಿಸಿದ್ದಾರೆ.  ಇದರಿಂದ  ಭಾರತವೂ ಸಹ  ಸ್ವಲ್ಪ ಭಾಗ ಮುಳುಗಬಹುದು.  ಕರ್ನಾಟಕ ,  ಕೇರಳ ,  ಆಂಧ್ರ ಪ್ರದೇಶ,  ತಮಿಳುನಾಡು ,  ಬಂಗಾಳ ,  ಒರಿಸ್ಸಾ ,  ಗೋವಾ ,  ಮಹಾರಾಷ್ಟ್ರ .....ಹೀಗೆ  ಭಾರತದ ಸುಮಾರು  ಹನ್ನೆರಡು ರಾಜ್ಯಗಳು  ಅತೀ ದೊಡ್ಡ  ತೀರಪ್ರದೆಶಗಳನ್ನು  ಒಳಗೊಂಡಿದೆ.  ಇದರಿಂದ ಭಾರತದ ಸುಮಾರು ಎರಡು ಲಕ್ಷ ಹಳ್ಳಿಗಳಿಗೆ ಅಪಾಯವಿದೆ.  ಪ್ರಖ್ಯಾತ ನಗರವಾಗಿರುವ   ಗೋವಾ ಸಂಪೂರ್ಣವಾಗಿ ಮುಳುಗುವ ಸಾಧ್ಯತೆಯಿದೆ.   ಮತ್ತೊಂದು ನಗರ ಮುಂಬೈ  ಮಹಾನಗರ  ಸಹ   ಅಪಾಯದ ಅಂಚಿನಲ್ಲಿದೆ.   ಕೇರಳ ,  ಆಂಧ್ರ ಪ್ರದೇಶ ರಾಜ್ಯಗಳೂ ಸಹ ತಮ್ಮ  ಅರ್ಧ ಭಾಗಗಳಿಗಿಂತ  ಹೆಚ್ಚು ಪ್ರದೇಶವನ್ನು ಕಳೆದುಕೊಳ್ಳುವ  ಸಾಧ್ಯತೆಯಿದೆ.  ಇದು ಕೇವಲ ಭಾರತಕ್ಕೆ  ಮಾತ್ರ ಸೀಮಿತವಲ್ಲ.  ವಿಶ್ವದ ಅನೇಕ  ರಾಷ್ಟ್ರಗಳಿಗೆ  ಇದು ಅಪಾಯದ  ಅರಿವನ್ನೀಯುವ  ಮುನ್ಸೂಚನೆಯ ಘಂತೆಯಾಗಿದೆ.    ಭಾರತದಲ್ಲಿ ನೀವು ಯಾವುದಾದರೂ ಗಿರಿಧಾಮಗಳಿಗೆ  ಭೇಟಿನೀಡಿದಲ್ಲಿ ,  ಅಲ್ಲಿ ಆಯಾ ಸ್ಥಳವೂ ಸಮುದ್ರ ಮಟ್ಟಕ್ಕಿಂತ  ಎಷ್ಟು ಎತ್ತರದಲ್ಲಿದೆ ಎಂದು  ನಮೂದಿಸಿರುವ ಬೋರ್ಡನ್ನು  ಕಾಣುತ್ತೀರಿ.  ಹಾಗೆಯೇ  ಯುರೋಪ್ ನ ಹಾಲೆಂಡ್ ,  ನೆದರ್ ಲ್ಯಾಂಡ್ ನಂತಹ ದೇಶಗಳು  ಮುದಲಿನಿಂದಲೂ  ಸಮುದ್ರ ಮಟ್ಟಕ್ಕಿಂತ  ಕೆಳಗಿರುವ ದೇಶಗಳು .  ಆ ದೇಶಗಳಲ್ಲಿ ಕೆಲವೂ ಕಡೆಗಳಲ್ಲಿ ,  ಈ ಸ್ಥಳವೂ  ಸಮುದ್ರ ಮಟ್ಟಕ್ಕಿಂತ   ಎಷ್ಟು ಅಡಿ  ಅಥವಾ ಮೀಟರ್  ಕೆಳಗಿದೆ ಎಂಬ ಬರಹಗಳನ್ನು  ಕಾಣಬಹುದು.  ವಾತಾವರಣದ  ಉಷ್ಣತೆಯೂ  ಹೆಚ್ಚಾಗಿ  ,  ಹಿಮ ಕರಗಲಾರಂಭಿಸಿದರೆ  ಇಂತಹ ದೇಶಗಳಿಗೆ   ಇನ್ನೂ ಹೆಚ್ಚಿನ ಅಪಾಯವಿದೆ.  ಸಾವಿರಾರು ನಗರಗಳೂ,  ಲಕ್ಷಾಂತರ  ಜನರೂ  ಮುಳುಗಬಹುದಾಗಿದೆ.  ಮತ್ತು ಉಳಿದಿರುವ   ಮನುಷ್ಯನ ಜೀವನವೂ  ಕಷ್ಟಕರವಾಗುತ್ತದೆ.   ಹೇಗೆಂದರೆ  ವಾತಾವರಣದಲ್ಲಿ   ಬಿಸಿಲು ,  ಮಳೆ , ಚಳಿ ಇವುಗಳು  ಒಂದು ರೀತಿಯ  ಚಕ್ರೀಯ ಸಂಬಂಧದಲ್ಲಿ  ಆಂತರಿಕ ಜೋಡಣೆ ಯಾಗಿದೆ.  ಉದಾಹರಣೆಗೆ  ಬಿಸಿಲು ಹೆಚ್ಚಾದಲ್ಲಿ ಮಳೆ ಕಡಿಮೆಯಾಗಬಹುದು .    ಅಥವಾ ಮಳೆ ಹೆಚ್ಚಾದಲ್ಲಿ ಚಳಿಯೂ ಹೆಚ್ಚಾಗಬಹುದು .ಹೀಗೆ ಅವೂ ಮೂರು  ಒಂದನ್ನೊಂದು ಅವಲಂಭಿತವಾಗಿವೆ.    ಮಳೆ ಹೆಚ್ಚಾದರೆ  ಕೃಷಿಯ  ಉತ್ಪಾದನೆಯ  ಮೇಲೂ ಬಹಳ ಕೆಟ್ಟ ಪರಿಣಾಮ ವುಂಟಾಗುತ್ತದೆ.   ಮಳೆಯೂ ಕಡಿಮೆಯಾದರೂ ಕೃಷಿ ಕಷ್ಟ .  ವಾತಾವರಣದಲ್ಲಿ  ಅರ್ಧ ಸೆಂಟಿ ಗ್ರೇಡ್ ನಷ್ಟು  ಕಡಿಮೆಯಾದರೂ ಕೂಡ  ಗೋಧಿ ಬೆಳೆ ಪೂರ್ಣವಾಗುವುದಿಲ್ಲ.   ಶಾಖ ಅತೀ ಹೆಚ್ಚಾದಲ್ಲಿ  ಉಷ್ಣ ಬೆಳೆ ಗಳೂ ಸಹ ಹಾಳಾಗುತ್ತದೆ.  ಒಟ್ಟಿನಲ್ಲಿ ಮನುಷ್ಯನ ಜೀವನ ಕ್ರಮದ ಮೇಲೆ ಬಹಳ ಕೆಟ್ಟ ದುಷ್ಪರಿಣಾಮ ವಾಗುತ್ತದೆ.   ಆದ್ದರಿಂದ  ಲಕ್ಷಾಂತರ  ವರ್ಷಗಳಿಂದ ಪ್ರಕೃತಿ ತೀರ್ಮಾನಿಸಿದಂತೆ ಯಾವ ಕಾಲಕ್ಕೆ ಯಾವುದು ಎಷ್ಟಿರಬೇಕೋ ಅಷ್ಟಿದ್ದರೆ (ಬಿಸಿಲು -ಮಳೆ -ಚಳಿ ) ಇಡೀ ವಿಶ್ವದ ಜನತೆ  ಚೆನ್ನಾಗಿ ಜೀವಿಸಬಹುದು .  ಹಾಗಾಗದೆ ಹೋದಲ್ಲಿ ವಿಶ್ವದಲ್ಲಿ ಮನುಷ್ಯನ (ಜೀವಿಗಳ ) ಅಂತ್ಯ ಖಂಡಿತಾ.

              ಕಳೆದ  ನೂರು ವರ್ಷಗಳಲ್ಲಿ  ಅಂದರೆ ಒಂದು ಶತಮಾನದಿಂದ ಎರಡು ಡಿಗ್ರಿ ಸೆಂಟಿ ಗ್ರೇಡಿ ನಷ್ಟು  ಹೆಚ್ಚಾಗಿರುವ ಶಾಖದ  ತಾಪಮಾನದ ಹೆಚ್ಚಳ ,  ಮುಂದಿನ ಐವತ್ತು ವರ್ಷಗಳಲ್ಲಿ  ಎರಡು ಡಿಗ್ರಿ ಯಿಂದ ನಾಲ್ಕು ಡಿಗ್ರಿ ಯವರೆಗೂ ಹೆಚ್ಚಾಗಿ  ಸಮುದ್ರದ ನೀರಿನ ಮಟ್ಟವು ಹನ್ನೆರಡು ಇಂಚಿನಿಂದ ಹದಿನಾಲ್ಕು ಇಂಚಿನವರೆಗೂ ಹೆಚ್ಚಾದಲ್ಲಿ  ಭೀಕರ ಸುನಾಮಿ ಅಥವಾ  ಜಲಪ್ರಳಯವೇ ಸಂಭವಿಸಬಹುದು. ಎಂಬುದು  ವಿಜ್ಞಾನಿಗಳ ಮತ್ತೊಂದು ಚಿಂತಿತ ವಿಷಯವಾಗಿದೆ.  ಹೀಗಾಗಿ ವಿಶ್ವದ  ಸುಮಾರು ಒಂದು ನೂರ ಐವತ್ತು ದೇಶದ ಮುಖ್ಯಸ್ಥರೂ  ಜಪಾನಿನ  ಕ್ಯೂ -ಟೋ ಎಂಬ ಸ್ಥಳದಲ್ಲಿ  ಒಂದು ಸಾವಿರದ ಒಂಭತ್ತು ನೂರ ತೊಂಭತ್ತಾರರಲ್ಲಿ  ಒಂದು ಚರ್ಚೆಯಲ್ಲಿ ಭಾಗವಹಿಸಿದ್ದರು.  ಆ ಚರ್ಚೆಯ  ಬಹುಮುಖ್ಯವಾದ  ಅಂಶವೆಂದರೆ  "ಇಡೀ ವಿಶ್ವದ  ತಾಪಮಾನದ  ಹೆಚ್ಚಳಕ್ಕೆ ಕಾರಣವೇನು ? ಮತ್ತು ಇದನ್ನು  ಕಡಿಮೆ ಮಾಡುವುದು ಹೇಗೆ ?ಎಂಬುದಾಗಿತ್ತು.    ನಂತರ ಡಾಕ್ಟರ್  ಆರ್ .ಕೆ, ಪಚಾರಿ  ಅವರ ನೇತೃತ್ವದಲ್ಲಿ  ಸುಮಾರು ನಾಲ್ಕು  ವರ್ಷಕ್ಕಿಂತಲೂ  ಹೆಚ್ಚು ಕಾಲ ಅಧ್ಯಯನ ನಡೆಸಲಾಯಿತು.   ಅವರ ಪ್ರಕಾರ  ವಿಶ್ವದ ತಾಪಮಾನ ಹೆಚ್ಚಾಗಲು   ಕಾರಣ ಜನಗಳ ಜೀವನ ಶೈಲಿ. ಮತ್ತು ಅದರಲ್ಲೂ  ಪ್ರಮುಖ ದೊಡ್ಡ ಕಾರಣ  ಜನರ ಮಾಂಸಾಹಾರ ಸೇವನೆ  ಮತ್ತು ಮಾಂಸ ದ ಉತ್ಪಾದನೆ  .  ಇಂದು ವಿಶ್ವದಲ್ಲಿ  ನಾವು ಎರಡು ರೀತಿಯ ಜನರನ್ನು  ಕಾಣಬಹುದಾಗಿದೆ.  ಒಂದು ವರ್ಗದವರು ಹುಟ್ಟಿನಿಂದ  ಕಡೆಗಾಲದವರೆಗೂ  ಸಸ್ಯಾಹಾರಿಗಳಾಗಿ ಬದುಕುವವರು.  ಮತ್ತೊಬ್ಬರು ಮಾಂಸಾಹಾರಿಗಳು.    ಅಂದರೆ ಮಾಂಸಾ ಹೆಚ್ಚು ಸೇವಿಸುತ್ತಿರುವ ಮತ್ತು ಅದನ್ನು  ಹೆಚ್ಚು ಉತ್ಪಾದಿಸುತ್ತಿರುವ  ರಾಷ್ಟ್ರಗಳಿಂದ   ಇಡೀ ವಿಶ್ವದ ಜನತೆ  ಹೆಚ್ಚು ತಾಪಮಾನದಿಂದ ಬಳಳುವಂತಾಗಿದೆ.  ವಾತಾವರಣದಲ್ಲಿ ಶಾಖ ಉತ್ಪತ್ತಿಯಾಗಬಹುದಾದ   ಇಪ್ಪತ್ತು ಕಾರಣಗಳಲ್ಲಿ   ಅತೀ ದೊಡ್ಡ ಕಾರಣ  ಮಾಂಸಾಹಾರದ ಉತ್ಪಾದನೆ ಮತ್ತು ಸೇವನೆಯಾಗಿದೆ.   ಇಂದು ತಾಪಮಾನದ   ಹೆಚ್ಚಳಕ್ಕೆ  ಶೇಕಡಾ  ಇಪ್ಪಾತೈದರಷ್ಟು  ಕಾರಣ  ಮಾಂಸಾಹಾರ ಜೀವನಶೈಲಿಯಾಗಿದೆ.   ಶೇಕಡಾ ಹದಿನೆಂಟು  ರಷ್ಟು ಹೆಚ್ಚುತ್ತಿದ್ದು   ,  ಶೇಕಡಾ  ಮೂವತ್ತೆರದರಷ್ಟು ಹೆಚ್ಚಳ .  ಹೆಚ್ಚಳ ಅನಗತ್ಯ ವಸ್ತುಗಳ  ಉತ್ಪಾದನೆಯಿಂದ ಆಗುತ್ತಿದ್ದು   ಉಳಿದ ಸ್ವಲ್ಪ ಸ್ವಲ್ಪ ಭಾಗಕ್ಕೆ   ಭೂಮಿ ಹಾಗೂ  ಪಶುಪಕ್ಷಿಗಳು   ಕಾರಣವಾಗಿದೆ.  ಅಗತ್ಯ  ಉತ್ಪಾದನೆಗಳೆಂದರೆ    ನಮ್ಮ ದೈನಂದಿನ ದಿನಚರಿಗೆ  ಅಗತ್ಯವಾದ  ಕೃಷಿ ಬೆಳೆಗಳು  (ರಾಗಿ, ಭತ್ತ,ಗೋಧಿ, ಜೋಳ ಕಾಳುಗಳು) ಸ್ನಾನಕ್ಕೆ ಹಾಗೂ ಬಟ್ಟೆ ತೊಳೆಯಲು   ಸಾಬೂನು ವಸ್ತುಗಳು  ....ಹೀಗೆ  ದಿನನಿತ್ಯ  ಅಗತ್ಯವಾದ ವಸ್ತುಗಳು  ,  ಇವುಗಳಿಲ್ಲದೆ  ಜನರ ಬದುಕು  ಕಷ್ಟಸಾಧ್ಯ .  ಹಾಗಾಗಿ ಇವುಗಳ ಉತ್ಪಾದನೆ  ತಡೆಯಬಾರದು.   ಮತ್ತು ಅನಗತ್ಯ ಉತ್ಪಾದನೆಯಲ್ಲಿ ಮನುಷ್ಯ  ತನ್ನ ವಿಲಾಸ ಜೀವನಕ್ಕಾಗಿ  ,  ವೈಭೋಗದ  ಚಿಹ್ನೆಯಾಗಿ  ಉಪಯೋಗಿಸುವಂತಹ  ರೆಪ್ರಿಜ ರೆಟರ್ ,  ಹವಾನಿಯಂತ್ರಿತ  ಯಂತ್ರ  ... ಇನ್ನೂ ಮುಂತಾದ  ವಸ್ತುಗಳು ಬರುತ್ತವೆ.  ಇವುಗಳು ಇಲ್ಲದಿದ್ದರೂ ಸಹ  ಮನುಷ್ಯ ತನ್ನ  ಜೀವನವನ್ನು ಸರಾಗವಾಗಿ ನಡೆಸಬಹುದು .   ಆದ್ದರಿಂದ ಇಂತಹ   ಅನಗತ್ಯ ವಸ್ತುಗಳ  ಉತ್ಪಾದನೆಗಳನ್ನು ತಡೆಯಬೇಕು.   ಇಂದು ವಿಶ್ವದ  ಉಷ್ಣತೆಯನ್ನು   ಕಡಿಮೆ ಮಾಡಬಹುದಾದ  ಸಾಧ್ಯತೆಯಿರುವುದು  ಮಾಂಸದ  ಸೇವನೆ ಮತ್ತು  ಉತ್ಪಾದನೆಯನ್ನು  ಕಡಿತಗೊಳಿಸುವುದರ  ಮೂಲಕ ಮಾತ್ರ ಸಾಧ್ಯ.  ಮತ್ತು ಇದು ಬಹಳವೇ ಸುಲಭವಾದ  ಮಾರ್ಗವೂ  ಆಗಿದೆ.  ವಿಶ್ವದ ಎಲ್ಲಾ ಜನರೂ   ಮಾಂಸಾ ಹಾರವನ್ನು  ತ್ಯಜಿಸಿದರೆ , ಪ್ರಾಣಿಗಳ ಹತ್ಯೆಗಳನ್ನು  ತಡೆದರೆ ,  ಮಾಂಸದ ಉತ್ಪಾದನೆಯನ್ನು  ನಿಲ್ಲಿಸಿದ್ದೆ ಆದರೆ  ಜಗತ್ತಿನ ತಾಪಮಾನವೂ ಅತೀ ಶೀಘ್ರದಲ್ಲಿ    ಕಡಿಮೆಯಾಗಲಿದೆ.  ಇಂದು ಇಡೀ ವಿಶ್ವದಲ್ಲಿ  ಅಗತ್ಯವಿರುವಾಗ ನಡೆಸುವ ವಾಹನ ಚಾಲನೆಗೆ  ಒಂದು ಲೀಟರ್ ನಷ್ಟು  ಪೆಟ್ರೋಲ್  ಅಥವಾ ಡಿಸೇಲ್  ಖಾರ್ಚಾಗುತ್ತಿದೆ ಎಂದು ಕೊಂಡರೆ ,  ಅನಗತ್ಯ  ವಾಹನ ಚಾಲನೆಗಾಗಿ  ಒಂದೂವರೆ ಲೀಟರ್  ನಷ್ಟು ಪೆಟ್ರೋಲ್ ಅಥವಾ ಡಿಸೇಲ್  ಖರ್ಚಾಗುತ್ತಿದೆ.  ಅಂದರೆ  ಅಗತ್ಯಕ್ಕಿಂತ  ಅನಗತ್ಯ  ವಾಹನ ಚಾಲನೆಯೇ  ಹೆಚ್ಚಾಗಿದೆ .  ಇದಕ್ಕೂ ಸಹ ಮಾಂಸಾಹಾರವೇ ಕಾರಣವಾಗಿದೆ .  ಹೇಗೆಂದರೆ  ಮೊದಲು  ಕಸಾಯಿಖಾನೆಗಳಿಗಾಗಿ  ಪ್ರಾಣಿಗಳನ್ನು  ಒಂದು ಕಡೆಯಿಂದ  ಮತ್ತೊಂದು  ಕಡೆಗೆ  ಸಾಗಿಸಲಾಗುತ್ತದೆ.  ನಂತರ   ಅವುಗಳ  ಮಾಂಸವನ್ನು ಸಾಗಾಣೆ  ಮಾಡಲು ಸಾವಿರಾರು ಕಿಲೋ ಮೀಟರ್ ಗಳಷ್ಟು  ದೂರ ದೇಶದಿಂದ  ದೇಶಕ್ಕೆ  ಸಾಗಿಸಲಾಗುತ್ತದೆ.

     ಉದಾಹರಣೆಗೆ  ಕೆನಡಾದಿಂದ ಭಾರತಕ್ಕೆ  ,  ಭಾರತದಿಂದ  ಅಮೆರಿಕಾಕ್ಕೆ ,  ಸ್ವೀಡನ್ , ಸ್ಪೇನ್ ,  ಹೀಗೆ ಹಲವಾರು ದೇಶಗಳಿಗೆ ಸಾಗಿಸಲಾಗುತ್ತದೆ.   ಇದಕ್ಕಿಂತ ಮತ್ತೊಂದು ಮುಖ್ಯವಾದ  ವಿಷಯವೆಂದರೆ ,  ಹೀಗೆ ಒಂದು ದೇಶದಿಂದ  ಮತ್ತೊಂದು ದೇಶಕ್ಕೆ ಸಾವಿರಾರು ಕಿಲೋಮೀಟರ್  ಮಾಂಸಾ  ಸಾಗಾಣೆ ಮಾಡುವಾಗ,  ಅದನ್ನು ಹಾಳಾಗದಂತೆ  ಮಾಡಲು ,  ಒಂದು ನಿರ್ದಿಷ್ಟ  ಹವಾಮಾನದಲ್ಲಿ  ,  ಹವಾನಿಯಂತ್ರಿತ ವ್ಯವಸ್ಥೆಯಲ್ಲಿ  ಇಡಲಾಗುತ್ತದೆ.   ಇದರ  ವೆಚ್ಹ ಆ ಸಾವಿರಾರು ಕಿಲೋಮೀಟರ್  ಹೋಗಿ ಬರುವ  ಖರ್ಚಿಗಿಂತ  ಎಷ್ಟೋ ಪಾಲು  ಹೆಚ್ಚು .    ಆದ್ದರಿಂದ ಇಡೀ ವಿಶ್ವದ ಜನ  ಮಾಂಸಾಹಾರ ತ್ಯಜಿಸಿದರೆ   ಮತ್ತು ಅದರೊಡನೆ  ಈ ಅನಗತ್ಯ ವಾಹಾನ ಸಂಚಾರವೂ ಕಡಿಮೆಯಾಗುತ್ತದೆ.  ಅಂದರೆ ವಾತಾವರಣದ  ತಾಪಮಾನದ  ಹೆಚ್ಚಳಕ್ಕೆ ಕಾರಣವಾಗಿದ್ದ ಶೇಕಡಾ  ನಲವತ್ತ ಮೂರರಷ್ಟು  ಶಾಖಾ ತಾನಾಗಿಯೇ  ಕಡಿಮೆಯಾಗುತ್ತದೆ.  ಇದರೊಡನೆ ಅನಗತ್ಯ  ಉತ್ಪಾದನೆಯನ್ನೂ ನಿಲ್ಲಿಸಿದರೆ ಒಟ್ಟು  ಶೇಕಡಾ ಎಪ್ಪಾತೈದು   ಶಾಖ ಉತ್ಪನಕ್ಕೆ ಕಾರಣವಾದ ಅಂಶವನ್ನು  ಸುಲಭವಾಗಿ ತಡೆಯಬಹುದಾಗಿದೆ.

     ಮಾಂಸಾಹಾರಿಗಳ ಮತ್ತೊಂದು ವಾದವೆಂದರೆ  ಹೀಗೆ ಎಲ್ಲರೂ ಒಂದೇ ಬಾರಿಗೆ   ಮಾಂಸ ಸೇವನೆಯನ್ನು ತ್ಯಜಿಸಿದರೆ  ಎಲ್ಲರಿಗೂ ಸಾಕಾಗುವಷ್ಟು ಸಸ್ಯಾಹಾರಿ ಆಹಾರ,  ಕೃಷಿ ಉತ್ಪಾದನೆ , ಬೆಳೆ, ಹಾಲು , ಹಣ್ಣು  ಎಲ್ಲಾ ಇದೆಯಾ ಎಂಬುದು ?  ಅದಕ್ಕೆ ಉತ್ತರ ವೇನೆಂದರೆ  ಈಗ ಇಡೀ  ವಿಶ್ವದ ಜನಸಂಖ್ಯೆ   ಸುಮಾರು ಆರು ನೂರ ಐವತ್ತು ಕೋತಿ .  ಇದರಲ್ಲಿ  ಅತೀ ಹೆಚ್ಚು  ನೂರ ನಲವತ್ತು ಕೋಟಿ ಚೀನಾ ,  ಭಾರತ ಸುಮಾರು  ನೂರ ಹದಿನೈದು ಕೋಟಿ  ,  ಅಮೇರಿಕಾ  ಇಪ್ಪತ್ತೇಳು ಕೋಟಿ , ಯೂರೋಪ್ ,  ಪ್ರಾನ್ಸ್,  ಬ್ರಿಟನ್, ಜರ್ಮನಿ,  ಕೆನಡಾ, ಪೋರ್ಚುಗಲ್ ,ಮುಂತಾದ  ರಾಷ್ಟ್ರಗಳು ಸೇರಿ  ಸುಮಾರು ಮೂವತ್ತು ಕೋಟಿ,.....ಇತ್ಯಾದಿ,  ಈಗಿರುವ ಆರುನೂರ ಐವತ್ತು ಕೋಟಿ  ಜನರ ಜೊತೆ  ಇಂತಹ ಮತ್ತೊಂದು ವಿಶ್ವ ಹೋದರು ಸಹ  ,  ಈಗ ವಿಶ್ವದಲ್ಲಿ ಉತ್ಪಾದನೆ ಆಗುತ್ತಿರುವ   ಆಹಾರವೇ ಸಾಕಾಗುತ್ತದೆ.   ಅಂದರೆ ವಿಶ್ವದಲ್ಲಿ ಜನಸಂಖ್ಯೆ ದ್ವಿಗುಣ ವಾದರೂ ಸಹ  ಪ್ರಪಂಚದ ಎಲ್ಲಾ ಮಾಂಸದ ಅಂಗಡಿಗಳಿಗೆ  ಬೀಗ ಬಿದ್ದರೆ  ,  ಮಾಂಸದ ಉತ್ಪಾದನೆ  ಸಂಪೂರ್ಣವಾಗಿ ನಿಂತರೆ  ,  ಮಾಂಸದ ಸೇವನೆಯನ್ನು  ಎಲ್ಲರೂ ತ್ಯಜಿಸಿದ್ದೆ ಆದರೆ  ,  ಈಗ ಬೆಳೆಯುತ್ತಿರುವ  ಕೃಷಿ ಉತ್ಪಾದನೆಯೇ  ಒಂದು ಸಾವಿರದ ಮುನ್ನೂರು ಕೋಟಿ ಜನರಿಗೆ ಸಾಕಾಗುತ್ತದೆ.    ಹೇಗೆಂದರೆ ,  ಇಂದು ಪ್ರಾಣಿಗಳ ದೇಹದಲ್ಲಿ ಮಾಂಸ ಹೆಚ್ಚಲು  ಮನುಷ್ಯ ತಿನ್ನುವ ಆಹಾರವನ್ನು  ಪ್ರಾಣಿಗಳಿಗೆ ತಿನ್ನಿಸಲಾಗುತ್ತಿದೆ.   ಸಾಮಾನ್ಯವಾಗಿ  ಈ ಪ್ರಾಣಿಗಳ  ಸಹಜ  ಆಹಾರ ಬೇರೆಯೇ  ಆಗಿರುತ್ತದೆ.  ಉದಾಹರಣೆಗೆ , ಹಸು , ಕರು , ಎಮ್ಮೆ , ಕುರಿ, ಮೇಕೆ  ಮುಂತಾದ  ಪ್ರಾಣಿಗಳು ಹುಲ್ಲನ್ನು ತಿನ್ನುತ್ತವೆ.  ಹಂದಿಯು ಮನುಷ್ಯರ ಮಲವನ್ನು ತಿನ್ನುತ್ತದೆ.  ಆದರೆ ಈ ಪ್ರಾಣಿಗಳಿಗೆ  ಮನುಷ್ಯರ ಆಹಾರ ಪದಾರ್ಥಗಳಾದ   ಗೋಧಿ, ಭತ್ತ,  ರಾಗಿ  ..... ಮುಂತಾದ  ಬೆಳೆಗಳಿಂದ ಉಂಟಾದ  ಆಹಾರವನ್ನು ಕೇವಲ ಮಾಂಸದ  ಹೆಚ್ಚಳಕ್ಕಾಗಿ  ಕೊಡಲಾಗುತ್ತದೆ.  ಇದನ್ನು ಸೇವಿಸಿದ  ಪ್ರಾಣಿಗಳು ಬೇಗನೆ ದಪ್ಪಗಾಗುತ್ತವೆ.  ಆ ಪ್ರಾಣಿಗಳ  ಚರ್ಮವೂ ಹೆಚ್ಚುತ್ತದೆ.  ಮತ್ತು  ಅವುಗಳ ದೇಹ  ಭಾರಿ  ಗಾತ್ರದ್ದಾಗುತ್ತದೆ.ಇದರಿಂದ ಮನುಷ್ಯನಿಗೆ  ಆಹಾರ  ಕಡಿಮೆಯಾಗಿ ,  ವರ್ಷಕ್ಕೆ  ಲಕ್ಷಾಂತರ ಜನರು  ಹಸಿವೆಯಿಂದ ಸಾಯುವನ್ತಾಗುತ್ತದೆ.  ವಿಶ್ವದ ಎಲ್ಲಾ ರಾಷ್ಟ್ರಗಳನ್ನು  ಶ್ರೀಮಂತ ರಾಷ್ಟ್ರ ಮತ್ತು ಅಭಿವೃದ್ಧಿ  ಶೀಲ ರಾಷ್ಟ್ರ  ಗಳಾಗಿ ವಿಂಗಡಿಸ ಬಹುದಾದರೆ ,  ಅಮೆರಿಕಾದಂತಹ  ಶ್ರೀಮಂತ ರಾಷ್ಟ್ರ  ಗಳು   ತಮ್ಮ ದೇಶದ ಒಟ್ಟು ಕೃಷಿ ಉತ್ಪಾದನೆಯ   ಶೇಕಡಾ ಎಪ್ಪಾತ್ತರಷ್ಟು  ಭಾಗವನ್ನು ಕೇವಲ ಮಾಂಸಕ್ಕಾಗಿ  ಪ್ರಾಣಿಗಳಿಗೆ  ತಿನ್ನಿಸುತ್ತಾರೆ.  ಇದನ್ನು ತಿಂದ ಆ ಪ್ರಾಣಿಗಳು  ಹೆಚ್ಚು ಮಾಂಸಭರಿತವಾಗಿ  ,  ಬೇಗನೆ  ದಪ್ಪಗಾಗಿ ತಮಗೆ ಹೆಚ್ಚಿನ ಲಾಭ ಗಳಿಸಿ ಕೊಡಬಹುದೆಂಬ  ಉದ್ದೇಶದಿಂದ  ಈ ರೀತಿ  ತಮ್ಮ ಆಹಾರವನ್ನು  ಅವುಗಳಿಗೆ  ನೀಡಿ  ನಂತರ ಅವುಗಳನ್ನೇ  ತಮ್ಮ ಆಹಾರವನ್ನಾಗಿ ಸೇವಿಸುತ್ತಾರೆ .  ಭಾರತದಂತಹ ಬಡ  ಅಥವಾ ಅಭಿವೃದ್ದಿ  ಶೀಲ ರಾಷ್ಟ್ರಗಳು  ತಮ್ಮ ಕೃಷಿ  ಉತ್ಪಾದನೆಯ  ಶೇಕಡಾ  ನಲವತ್ತರಷ್ಟು  ಭಾಗವನ್ನು  ಪ್ರಾಣಿಗೆ ತಿನ್ನಿಸುತ್ತಾರೆ .

    ಅಂದರೆ ಒಂದು ಅಂದಾಜಿನ ಪ್ರಕಾರ ಸರಾಸರಿಯಾಗಿ  ಶೇಕಡಾ ಜಗತ್ತಿನ  ಆಹಾರದ ಉತ್ಪಾದನೆಯನ್ನು ಮಾಂಸ ಕ್ಕಾಗಿ  ಪ್ರಾಣಿಗಳಿಗೆ ತಿನ್ನಿಸಿ  ನಂತರ ಅದೇ ಪ್ರಾಣಿಗಳ ಮಾಂಸವನ್ನು ಸ್ವಲ್ಪ ಜನ ಮಾತ್ರ ತಿನ್ನುತ್ತಿದ್ದಾರೆ.  ಅದರ ಬದಲು ಅದೇ  ವಿಶ್ವದ ಜನರೇ ನೇರವಾಗಿ ಸೇವಿಸಿದರೆ ಇಡೀ ಪ್ರಪಂಚದಲ್ಲಿ  ಆಹಾರದ ಕೊರತೆ  ಬರದು !.  ಹೀಗಾಗಿ ಇಡೀ ವಿಶ್ವದಲ್ಲಿ  ಮಾಂಸ ನಿಷೇದವಾದಲ್ಲಿ  ಈಗಿರುವ ಆಹಾರ ಸಾಮರ್ಥ್ಯದಿಂದಲೇ  ಮತ್ತೊಂದು ವಿಶ್ವಕ್ಕೂ  ಸಾಕಾಗುತ್ತದೆ.   ಮತ್ತು ಪಶುಗಳ ಆಹಾರಕ್ಕೆಂದು ಮನುಷ್ಯ  ಪ್ರತ್ಯೇಕವಾಗಿ ಯೋಚಿಸುವ ಅಗತ್ಯವಿಲ್ಲ.  ಅವುಗಳ ಆಹಾರ ಪ್ರಕ್ರತಿಯಲ್ಲಿಯೇ ಇದೆ ಮತ್ತು ಮಾನವ ಉಪಯೋಗಿಸುವ  ಪ್ರತಿ ಆಹಾರ ಉತ್ಪನ್ನದಲ್ಲೂ  ಪಶುಗಳ ಪಾಲು  ಇದೆ.  ಆದ್ದರಿಂದ ಮನುಷ್ಯ  ಪ್ರಾಣಿಗಳ  ಆಹಾರದ ಬಗ್ಗೆ ಯೋಚಿಸದೆ  ಮತ್ತು ಅದರ ಮಾಂಸವನ್ನು ತಾನೇ ಸೇವಿಸದೆ  , ಅತ್ಯುತ್ತಮವಾದ  ಸಸ್ಯಾಹಾರದ ಬಗ್ಗೆ ಯೋಚಿಸಿ ,  ಮಾಂಸಹಾರವನ್ನು  ಬಿಡುವ ಮತ್ತು ಬಿಡಿಸುವ ಕುರಿತು  ಯೋಚಿಸುವುದೊಳಿತು .

     ಇಂದು ಮಾಂಸಾಕ್ಕಾಗಿ ಕೊಲ್ಲಲ್ಪಡುವ  ಪ್ರಾಣಿಗಳಲ್ಲಿ ಅತೀ ಹೆಚ್ಚಾಗಿ  ಕಸಾಯಿಖಾನೆಗಳಲ್ಲಿ ಕೊಲ್ಲಲ್ಪಡುತ್ತಿರುವ  ಪ್ರಾಣಿಯಾಗಿ ಒಂದನೇ ಸ್ಥಾನವನ್ನು  ಹಸು, ಕರು ಮತ್ತು ಎತ್ತುಗಳು ಹೊಂದಿವೆ.  ನಂತರದ ಸ್ಥಾನವನ್ನು  ಹಂದಿ , ಮೇಕೆ, ಎಮ್ಮೆ, , ಕುರಿ, ಕೋಳಿಗಳು  ಹೊಂದಿವೆ.  ಕಡೆಯ ಸ್ಥಾನ ಹೊಂದಿರುವ ಸಣ್ಣಪುಟ್ಟ ಪಕ್ಷಿಗಳನ್ನು  ಲೆಕ್ಕಿಸಲಾಗದೆ  ಕೇವಲ ಅಂದಾಜಿಸಲ್ಪಡುತ್ತದೆ.  ಇಂದು ವಿಶ್ವದ  ಮಾಂಸದ ಒಟ್ಟು ಉತ್ಪಾದನೆ  ವಾರ್ಷಿಕವಾಗಿ  ಸುಮಾರು ಇಪ್ಪತ್ತೆಂಟು ಕೋಟಿ   ಐವತ್ತು ಲಕ್ಷ ಮೆಟ್ರಿಕ್ ಟನ್.  ಒಂದು ಮೆಟ್ರಿಕ್ ಟನ್ ಎಂದರೆ  ಒಂದು ಸಾವಿರ  ಕಿಲೋ ಗ್ರಾಂ ಗಳು .  ಅಂದರೆ ಒಂದು  ವರ್ಷದ  ವಿಶ್ವದ ಒಟ್ಟು ಮಾಂಸದ  ಉತ್ಪಾದನೆ  ೨೮೫೦೦೦೦೦೦೦೦೦ ಕಿಲೋ ಗ್ರಾಂ ಆಗಿದೆ.  ಈ ರೀತಿ ಮಾಂಸದ ಉತ್ಪಾದನೆಯನ್ನು ಹೆಚ್ಚಿಸುತ್ತಿರುವ  ಕಂಪನಿಗಳು  ಎರಡು ಸಾವಿರದ ಐವತ್ತರ ವೇಳೆಗೆ   ಇದರ ಮೊತ್ತವನ್ನು ದ್ವಿಗುಣ ಗೊಳಿಸುವ  ಗುರಿಯನ್ನು ಹೊಂದಿದ್ದಾರೆ.   ವಿಶ್ವದಲ್ಲಿ ಮಾಂಸ ಉತ್ಪಾದಿಸುವವರು  ಮತ್ತು ಮಾಂಸ ಸೇವಿಸುವವರ ಸಂಖ್ಯೆ  ಹೆಚ್ಚಾದಾಗ ಮಾತ್ರ  ತಮ್ಮ ಗುರಿ ತಲುಪಲು ಸಾಧ್ಯ ಎಂದು ತಿಳಿದಿರುವ  ಅವರು ಇಡೀ ವಿಶ್ವವನ್ನು  ಮಾಂಸ ಹಾರ ವನ್ನಾಗಿಸುವ  ಯೋಚನೆಯಲ್ಲಿದ್ದಾರೆ.   ಇದಕ್ಕಾಗಿ ಅವರು ಪ್ರತಿದಿನ  ಪತ್ರಿಕೆಗಳ ಮತ್ತೂ  ರೇಡಿಯೋ  , ಟಿವಿ. ಮಾಧ್ಯಮಗಳ  ಮೊರೆ ಹೊಕ್ಕು ಅವುಗಳ ಸಹಾಯದಿಂದ ಜಾಹೀರಾತು  ಪ್ರಸಾರ ಮಾಡಲಾಗುತ್ತಿದೆ.  ಇದಕ್ಕಾಗಿ ಅವರು ಕೋಟ್ಯಾಂತರ  ಹಣ ಖರ್ಚು  ಮಾಡಿ "ದಿನಕ್ಕೊಂದು ಮೊಟ್ಟೆ  ತುಂಬುವುದು ಹೊಟ್ಟೆ "  ಮುಂತಾದ  ಅರ್ಥಹೀನ  ಜಾಹೀರಾತುಗಳನ್ನು  ಪ್ರಸಾರ ಮಾಡಲಾಗುತ್ತಿದೆ .    ಇದರಿಂದ ಬರುವ ಹಣಕ್ಕಾಗಿ ನಮ್ಮ  ಸಿಮಿಮಾ  ನಟರು ಮತ್ತು ಕ್ರೀಡಾಪಟುಗಳು  ಇಂತಹ ವ್ಯರ್ಥ  ,  ನಿಷ್ಪ್ರಯೋಜಕ  ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ.  ನಿಜ ಜೀವನದಲ್ಲಿ  ತಾವು ಹಾಗೆ ನಡೆಯದಿದ್ದರೂ ,  ಕೇವಲ ಹಣಕ್ಕಾಗಿ ಈ ರೀತಿ  ಜನರನ್ನು ಮೋಸಗೊಳಿಸಲು  ನಾಟಕವಾಡುತ್ತಿದ್ದಾರೆ.  ಇದು ಒಂದು ರೀತಿ  ಸುರ-ಅನುರರ  ನಡುವಿನ  ಹೋರಾಟದಂತಿದೆ.    ಒಂದೆಡೆಯಲ್ಲಿ  ಮಾಂಸ ಉತ್ಪಾದಿಸುವವರು ,  ಮಾಂಸ ತಿನ್ನುವವರು ,  ಮಾಂಸ ತಿನ್ನುವಂತೆ ಮಾಡುವವರು  ಮತ್ತು ಇವರೆಲ್ಲರ ಪ್ರೋತ್ಸಾಹಕರು ಅಸುರರಂತೆ ನಿಂತು ,  ಇಡೀ ವಿಶ್ವವನ್ನು  ಮಾಂಸ ಹಾರವನ್ನಾಗಿ  ಮಾಡಿ  ವಿಶ್ವದ ತಾಪಮಾನವನ್ನು  ವತ್ತಷ್ಟು ಹೆಚ್ಚಿಸಿ  ಪ್ರಪಂಚವನ್ನು  ಮ್ರುತ್ಯುಕೂಪವನ್ನಾಗಿಸುವ  ಕಾರ್ಯದಲ್ಲಿ ತೊಡಗಿದ್ದಾರೆ.  ಮತ್ತೊಂದು ಕಡೆಯಲ್ಲಿ ಸುರ ಸ್ವರೂಪಿಗಳಾಗಿ   ಯಾವ ಪ್ರಾಣಿಗಳಿಗೂ  ಹಿಂಸೆ ನೀಡದೆ  ,  ಯಾರಿಗೂ ಕೇಡನ್ನು ಬಯಸದೆ ,  ಹುಟ್ಟಿದಾಗಿನಿಂದ  ಜೀವಿತದ ಕಡೆಯ ಅವದಿಯವರೆಗೂ  ಸಸ್ಯಹಾರಿಯಾಗಿದ್ದುಕೊಂಡು  ಮತ್ತು ಮಾಂಸಹಾರಿಗಳನ್ನು  ಸಹ ಪ್ರಾಣಾಯಾಮ ,  ಯೋಗ , ಧ್ಯಾನ ,  ಬುದ್ಧಿಮಾತು  ಮತ್ತು ಮನೋಬಂದ ಸಹಾಯದಿಂದ ಸಸ್ಯಾಹಾರಿಗಳನ್ನಾಗಿ  ಮಾಡುವಲ್ಲಿ  ಯಶಸ್ವಿಯಾಗುತ್ತಿದ್ದಾರೆ.   ಇವರ ಜೊತೆ ನಾವೆಲ್ಲರೂ ಸಹ ಕೈ ಜೋಡಿಸಬೇಕಾಗಿದೆ.  ಸುಮಾರು ಎರಡು ಸಾವಿರದ ಐವತ್ತರ  ವೇಳೆಗೆ ನಾವು   ಸಫಲರಾದರೆ ,  ಇಡೀ ವಿಶ್ವ ಮಾಂಸಾಹಾರದಿಂದ  ಮುಕ್ತವಾಗುತ್ತದೆ.   ಜಗತ್ತಿನ ತಾಪಮಾನ  ಶೀಘ್ರವಾಗಿ ಕಡಿಮೆಯಾಗುತ್ತದೆ .    ಹಾಗಲ್ಲದೆ  ಒಂದು ವೇಳೆಗೆ  ಅವರು ಸಫಲರಾದಲ್ಲಿ   ಎರಡು ಸಾವಿರದ ಐವತ್ತರ ವೇಳೆಗೆ   ಎಲ್ಲರೂ ಮಾಂಸಹಾರಿಗಳಾಗಿ  ,  ಭೂಮಿಯ ಮೇಲೆ  ಮಾನವ ಪತನದ ಹಾದಿ  ತುಳಿಯುವುದು ಖಂಡಿತ !.

      ಇಂದು ವಿಶ್ವದಲ್ಲಿ  ಒಟ್ಟು ಉತ್ಪಾದನೆಯಾಗುತ್ತಿರುವ  ಮಾಂಸದಲ್ಲಿ  ಶ್ರೀಮಂತ ರಾಷ್ಟ್ರವೆನಿಸಿರುವ  ಕೇವಲ ಹದಿನಾರು ದೇಶಗಳು  ಶೇಕಡಾ ಅರವತ್ತರಷ್ಟು  ಉಪಯೋಗಿಸುತ್ತಿವೆ.  ಉಳಿದ ಶೇಕಡಾ ನಲವತ್ತು   ಮಾಂಸವನ್ನು  ಬಡ ಮತ್ತು ಅಭಿವೃದ್ಧಿ  ಶೀಲ ದೇಶಗಳಾದ  (ಭಾರತದಂತಹ ) ಒಂದು ನೂರ ಎಂಭತ್ತಾರು ದೇಶಗಳು ಉಪಯೋಗಿಸುತ್ತಿದ್ದಾರೆ .  ಅಂದರೆ ಇಪ್ಪತ್ತೆಂಟು  ಕೋಟಿ ಐವತ್ತು ಲಕ್ಷ  ಟನ್ ಮಾಂಸದಲ್ಲಿ ಸುಮಾರು ಹದಿನೆಂಟರಿಂದ ಹತ್ತೊಂಭತ್ತು  ಕೋಟಿಗಿಂತಲೂ  ಹೆಚ್ಚು ಮೆಟ್ರಿಕ್ ಟನ್ ಮಾಂಸವನ್ನು  ಕೇವಲ ಹದಿನಾರು  ಶ್ರೀಮಂತ ರಾಷ್ಟ್ರಗಳು  ಉಪಯೋಗಿಸುತ್ತಿವೆ.  ಉಳಿದ ರಾಷ್ಟ್ರಗಳು ಕಡಿಮೆ ಅಂದರೆ ಇದರ ನೇರ ಅರ್ಥವೇನೆಂದರೆ ,  ಇಂದಿಗೂ  ಸಹ ಶ್ರೀಮಂತರಾಷ್ಟ್ರಗಳಿಗಿಂತ ಉಳಿದ ರಾಷ್ಟ್ರಗಳು ಹೆಚ್ಚು ಧಾರ್ಮಿಕ,  ನೈತಿಕ ಮತ್ತು ಸಾತ್ವಿಕ  ಭಾವನೆ ವುಳ್ಳವರಾಗಿದ್ದಾರೆ.  ಅವರೇ ಹೆಚ್ಚು ಸಸ್ಯಾಹಾರಿಗಳಾಗಿದ್ದಾರೆ.  ಮತ್ತು ಯೋಗ, ಧ್ಯಾನ,  ಪ್ರಾಣಾಯಾಮಗಳ  ಮೂಲಕ  ಇತರರನ್ನೂ  ಮಾಂಸಾಹಾರ ತ್ಯಜಿಸುವಂತೆ ಮಾಡುತ್ತಾ ಹೆಚ್ಚು ಪವಿತ್ರತೆಯನ್ನು  ಹೊಂದಿದ್ದಾರೆ.   ಆದರೆ ಶ್ರೀಮಂತ  ದೇಶಗಳಲ್ಲಿ  ವರ್ಷಕ್ಕೆ  ಒಭತ್ತು ಕೋಟಿ ಟನ್ ಕೋಳಿ ,  ಹತ್ತು ಕೋಟಿ ಟನ್ ಹಂದಿ,  ಆರು ಕೋಟಿ ಎಪ್ಪತ್ತು ಲಕ್ಷ ಟನ್  ಹಸು , ಕರು ಮತ್ತು ಎಮ್ಮೆಗಳ  ಮಾಂಸ ಮಾರಾಟವಾಗುತ್ತಿದೆ.  ಒಟ್ಟಾರೆ  ವಿಶ್ವದಾದ್ಯಂತ  ಐದುಸಾವಿರದ ಆರುನೂರು ಕೋಟಿ ಟನ್ ನಷ್ಟು  ಅಮಾಯಕ ಪಶುಗಳು ,  ಎಂದೂ ಯಾರಿಗೂ ಸಹ  ಕೆಟ್ಟದನ್ನು ಬಯಸದ ,  ಮೂಖ ,  ನಿರ್ದೋಷಿ ಪ್ರಾಣಿಗಳು  ಮಾಂಸಹಾರಿಗಳ ಬಾಯಿಯ ಚಪಲಕ್ಕಾಗಿ  ಬಲಿಯಾಗುತ್ತಿವೆ.  ಇದರಲ್ಲಿ ಭಾರತದ ಪಾಲು ವರ್ಷಕ್ಕೆ ಸುಮಾರು ಐವತ್ತೆಂಟು  ಲಕ್ಷ ಮೆಟ್ರಿಕ್ ಟನ್ ನಷ್ಟು  ಮಾಂಸ .

     ಇಡೀ  ವಿಶ್ವದ ಮಾಂಸಹಾರಿಗಳ  ದಾಹ ತಣಿಸಲು ಉತ್ಪತ್ತಿಯಾಗುತ್ತಿರುವ  ಒಟ್ಟು ಮಾಂಸದಲ್ಲಿ  ಭಾರತದ ಉತ್ಪಾದನೆ  ಶೇಕಡಾ  ಎರಡು ಚುಕ್ಕಿ ಐದರಷ್ಟು ಮಾತ್ರ ವಿಶ್ವದ  ಸರಾಸರಿಯಲ್ಲಿ ಇದು ಬಹಳ ಕಡಿಮೆ.  ಇದರ ಅರ್ಥವೇನೆಂದರೆ  ಸಂಪೂರ್ಣ  ಸಸ್ಯಾಹಾರಿಯಾಗಲು ಬಹಳ ಬೇಗ ಹೊಂದುವ ಸಾಧ್ಯತೆ  ಭಾರತಕ್ಕಿದೆ .  ಜನಸಂಖ್ಯೆಯ ಆಧಾರದ ಮೇಲೆ ಹೇಳುವುದಾದರೆ,  ಸುಮಾರು ಒಂದು ನೂರ ಹದಿನೈದು ಕೋಟಿ  ಜನರಲ್ಲಿ ಶೇಕಡಾ ಎಪ್ಪತ್ತರಷ್ಟು  ಮಂದಿ ಸಸ್ಯಾಹಾರಿಗಳಾಗಿದ್ದಾರೆ.  ಉಳಿದ  ಶೇಕಡಾ ಮೂವತ್ತರಷ್ಟು ಮಂದಿ ಮಾತ್ರ ಮಾಂಸಾಹಾರಿ ಗಳಾಗಿದ್ದಾರೆ.  ಈ ಶೇಕಡಾ ಮೂವತ್ತು  ಮಂದಿಯ ಬಾಯಿ ಚಪಲಕ್ಕಾಗಿ  ಭಾರತದಲ್ಲಿ ವರ್ಷಕ್ಕೆ ಹದಿನಾಲ್ಕು  ಲಕ್ಷ ಟನ್ ಗಳಷ್ಟು  ಹಸು, ಕರುಗಳ ಮಾಂಸ  ,  ಹದಿನಾಲ್ಕು ಟನ್ ಎಮ್ಮೆಯ ಮಾಂಸ ,  ಆರು ಲಕ್ಷ  ಮೂವತ್ತು ಸಾವಿರ ಟನ್  ಹಂದಿಯ ಮಾಂಸ .  ಒಂದೂವರೆ ಲಕ್ಷ ಟನ್ ಗಳಷ್ಟು  ಕುರಿಯ ಮಾಂಸ ,  ನಾಲ್ಕೂವರೆ ಲಕ್ಷ ಟನ್ ಮೇಕೆಯ ಮಾಂಸ ಮತ್ತು ಹದಿನಾರು ಲಕ್ಷ ಟನ್ಗಳಷ್ಟು  ಕೋಳಿಯ ಮಾಂಸ  ಉತ್ಪಾದಿಸಲಾಗುತ್ತಿದೆ.  ಇಷ್ಟು ಮಾಂಸಕ್ಕಾಗಿ  ಭಾರತದಲ್ಲಿ ಪ್ರತಿವರ್ಷ  ಸುಮಾರು ಹತ್ತು ಕೋಟಿ ಐವತ್ತು ಲಕ್ಷ ನಿರಪರಾಧಿ ಪ್ರಾಣಿಗಳನ್ನು  ವಧೆ ಮಾಡಲಾಗುತ್ತಿದೆ .  ಇದರಲ್ಲಿ ನಾಲ್ಕು ವರೆ  ಕೋಟಿಯಷ್ಟು  ಹಸು , ಎಮ್ಮೆ ಮತ್ತು ಕರುಗಳಾಗಿದ್ದು ಉಳಿದವು ಕುರಿ, ಮೇಕೆ, ಹಂದಿ ಮತ್ತು ಕೋಳಿ ಗಳಾಗಿವೆ.  ಈ ಪ್ರಾಣಿಗಳ ಹತ್ಯೆಗಾಗಿ ನಮ್ಮ ಭಾರತದಲ್ಲಿ ಸುಮಾರು ಮೂರುಸಾವಿರದ ಆರುನೂರು ಅಧಿಕೃತ ಕಸಾಯಿಖಾನೆಗಳಿದ್ದು , ಅನಧಿಕೃತವಾಗಿ ಸುಮಾರು  ಮೂವತ್ತಾರು ಸಾವಿರಕ್ಕೂ ಹೆಚ್ಚು ಕಸಾಯಿಖಾನೆಗಳಿವೆ.  ಚೀನಾದಲ್ಲಿ ವರ್ಷಕ್ಕೆ  ಹನ್ನೆರಡು  ಕೋಟಿ ಮೆಟ್ರಿಕ್ ಟನ್ ಉತ್ಪತ್ತಿಯಾಗುತ್ತಿದೆ.  ಅಮೆರಿಕಾದಲ್ಲಿ ನಾಲ್ಕೂವರೆ ಕೋಟಿ ಮೆಟ್ರಿಕ್ ಟನ್ ಮತ್ತು ಯೂರೋಪ್ ದೇಶಗಳಲ್ಲಿ  ಮೂರು ಚುಕ್ಕಿ ಆರು ಕೋಟಿ ಮೆಟ್ರಿಕ್ ಟನ್ ಮಾಂಸ ಉತ್ಪಾದಿಸಲಾಗುತ್ತದೆ.  ಮಾಂಸದ ಹೆಚ್ಚಳಕ್ಕಾಗಿ  ಒಂದೆಡೆ ಪ್ರಾಣಿಗಳಿಗೆ  ,  ಮನುಷ್ಯರಿಗೆ ನೀಡುವ ಆಹಾರವನ್ನು ಬಲವಂತವಾಗಿ  ನೀಡುತ್ತಿದ್ದರೆ.  ಮತ್ತೊಂದೆಡೆ  ವಿಶ್ವದಲ್ಲಿ  ಪ್ರತಿದಿನ  ಸುಮಾರು ನಲವತ್ತುಸಾವಿರ  ಜನರು ಹಸಿವಿನಿಂದ ಸಾಯುತ್ತಿದ್ದಾರೆ .  ಇದರಲ್ಲಿ ಹಾಲಿಲ್ಲದೆ  ಸಾಯುವ ಮಕ್ಕಳ ಸಂಖ್ಯೆಯೂ ಇದೆ .  ಸಂಯುಕ್ತ ರಾಷ್ಟ್ರ  ಸಂಸ್ಥಾನದ  ಪ್ರಕಾರ ವಿಶ್ವದಲ್ಲಿ ಸುಮಾರು  ಎರಡು ಕೋಟಿ ಜನ ಆಹಾರವಿಲ್ಲದೆ ಸಾಯುವ ಸ್ಥಿತಿಯಲ್ಲಿದ್ದಾರೆ.

ಪುಡ್ ಅಂಡ್  ಅಗ್ರಿಕಲ್ಚುರಲ್  ಆರ್ಗನೈಜೆಸನ್ ಪ್ರಕಾರ ಮಾಂಸಾಹಾರ ಸೇವಿಸುವವರು ತಾವು ಸೇವಿಸುವ ಮಾಂಸಾಹಾರ ಪ್ರಮಾಣದಲ್ಲಿ ಶೇಕಡಾ  ಹತ್ತರಷ್ಟು ಕಡಿಮೆ ಮಾಡಿದಲ್ಲಿ ,  ವಿಶ್ವದ ಯಾವುದೇ ವ್ಯಕ್ತಿ ಅಥವಾ ಮಗು ಹಸಿವೆಯಿಂದ ಸಾಯುವುದಿಲ್ಲ.  ಅಮೆರಿಕಾದ  ಪ್ರತಿ ಮಾಂಸಾಹಾರಿ ವ್ಯಕ್ತಿ  ವರ್ಷಕ್ಕೆ  ಸುಮಾರು ಒಂದುಸಾವಿರದ ಅರವತ್ತೈದು ಕಿ ಲೋ ಗ್ರಾಂ  ಮಾಂಸ ಸೇವಿಸುತ್ತಾನೆ. ಚೀನಾದಲ್ಲಿ ಸರಾಸರಿ ತೊಂಭತ್ತೈದು  ಕಿಲೋ ಗ್ರಾಂ ಇದ್ದಾರೆ ,  ಯೂರೋಪ್  ಮತ್ತು ಕೆನಡಾದಲ್ಲಿ  ಈ ಸರಾಸರಿ ವಾರ್ಷಿಕವಾಗಿ ಒಂದುನೂರ ಮೂವತ್ತು ಕಿಲೋ ಗ್ರಾಂ ಆಗಿದೆ.  ಭಾರತದಲ್ಲಿ  ಈ ಸರಾಸರಿ ಕೇವಲ ಮೂರು ವರೆ ಕಿಲೋ ಗ್ರಾಂ ಆಗಿದೆ.  ಇವರೆಲ್ಲರೂ ಸಹ ತಮ್ಮ ಮಾಂಸಾಹಾರ  ಸೇವನೆಯಲ್ಲಿನ ಪ್ರಮಾಣದಲ್ಲಿ ಶೇಕಡಾ ಹತ್ತರಷ್ಟು ಕಡಿಮೆ ಮಾಡಿದರೆ  ವಿಶ್ವದ  ಎರಡು ನೂರು ಕೋಟಿ ಜನರ ಹಸಿವೆಯನ್ನು ನೀಗಿಸಬಹುದಾಗಿದೆ.  ಆದ್ದರಿಂದ  ವಿಶ್ವದಲ್ಲಿ ಎಲ್ಲರೂ  ಮಾಂಸಹಾರವನ್ನು ತ್ಯಜಿಸಿದರೆ ಹಸಿವಿನ  ಚಿಂತೆಯನ್ನು ಮರೆತು ಬದುಕಲು ಮಾರ್ಗ ತೆರೆದಂತಾಗುತ್ತದೆ.  ಹಸಿದವನಿಗೆ ಅನ್ನದೊರಕಿಸುವುದಕ್ಕಿಂತಲೂ ,  ಸಾಯುವವನಿಗೆ ಜೀವನ ನೀಡುವುದಕ್ಕಿಂತಲೂ ದೊಡ್ಡ ಪುಣ್ಯ ಕಾರ್ಯ ಮತ್ತೊಂದಿಲ್ಲ.  ಎಲ್ಲರೂ ಮಾಂಸಾಹಾರವನ್ನು  ತ್ಯಜಿಸುವ ಮೂಲಕ ಮತ್ತು ತ್ಯಜಿಸುವಂತೆ ಇತರರನ್ನು ಪ್ರೇರೇಪಿಸುವ ಮೂಲಕ ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬಹುದಾಗಿದೆ.

     ಈ ಮಾಂಸಾಹಾರದ  ಹಾನಿ,  ಭೂಮಿಯಲ್ಲಿನ ಕೃಷಿಯ ಮಣ್ಣು, ಗಾಳಿ, ನೀರು ಮತ್ತು ಮರಗಳ ನಾಶಕ್ಕೂ ಕಾರಣವಾಗಿದೆ .  ಮಾಂಸವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು  ಪ್ಯಾಕ್ ಮಾಡುವಾಗಿನ ಕಾಗದ ಮತ್ತು ಪೆಟ್ಟಿಗೆಗಾಗಿ  ಬಳಸುವ ಮರದ ಹಲಗೆಗಾಗಿ ಅರಣ್ಯದ  ಬಹುದೊಡ್ಡ ಭಾಗ ನಾಶವಾಗುತ್ತಿದೆ.  ಇದೂ ಸಹ ವಿಶ್ವದ  ತಾಪಮಾನದ ಏರಿಕೆಗೆ  ಕಾರಣವಾಗಿದೆ.  ಕಾಡನ್ನು ಉಳಿಸಲು  ಪ್ರಯತ್ನಿಸುವ ಹಾದಿಯಲ್ಲಿ  ಮಾಂಸಹಾರವನ್ನು  ಕಡಿತಗೊಳಿಸುವುದು ಒಂದು ದೊಡ್ಡ ಹೆಜ್ಜೆಯಾಗುತ್ತದೆಮ್ಬುದು  ವಿಶ್ವದ ವಿಜ್ಞಾನಿಗಳ  ಒಮ್ಮತದ ಅಭಿಪ್ರಾಯವಾಗಿದೆ. 

     ನೀರಿನ  ವಿಚಾರದಲ್ಲಿಯೂ ಸಹ ಮಾಂಸಾಹಾರವು ಮನುಕುಲಕ್ಕೆ ಸಾಕಷ್ಟು  ಹಾನಿಯನ್ನೇ ಮಾಡಿದೆ.  ಮಾಂಸ ತಯಾರು ಮಾಡುವಲ್ಲಿ  ವ್ಯರ್ಥವಾಗುವಷ್ಟು ನೀರು ವಿಶ್ವದ ಬೇರೆ ಯಾವುದೇ  ಕಾರ್ಯದಲ್ಲಿ  ಇಲ್ಲ.  ಒಂದು ಕಿಲೋ ಗ್ರಾಂ ಮಾಂಸ ಉತ್ಪಾದಿಸಲು  ಬೇಕಾಗುವ ನೀರಿಗೂ  ಮತ್ತು ಒಂದು ಕಿಲೋ ಗ್ರಾಂ  ಭತ್ತ,  ಗೋಧಿ, ಬೇಳೆ, ಕಬ್ಬು  ಇತರೆ ಯಾವುದೇ ಬೆಳೆ ಉತ್ಪಾದಿಸಲು ಖರ್ಚಾಗುವ  ನೀರಿನ ಪ್ರಮಾಣಕ್ಕೂ  ಅಜಗಜಾಂತರ  ವ್ಯತ್ಯಾಸವಿದೆ .  ಒಂದು ಕಿಲೋ ಗ್ರಾಂ ಭತ್ತ ಇತರೆ ಬೆಳೆ ಬೆಳೆಯಲು  ಅತ್ಯಂತ  ಕೆಟ್ಟ ಕೃಷಿ ಭೂಮಿಯಲ್ಲಿ ಸಹ ಐದು ಸಾವಿರ ಲೀಟರ್ ನೀರು ಬೇಕಾಗುತ್ತದೆ.  ಒಳ್ಳೆಯ ನೀರಾವರಿಯ ಭೂಮಿಯಲ್ಲಿ  ಮೂರು ಸಾವಿರದಿಂದ ಮೂರುವರೆ ಸಾವಿರ ಲೀಟರ್ ನೀರು  ಸಾಕಾಗುತ್ತದೆ.  ಹಾಗೆಯೇ ಭಾಜ್ರ ಬೆಳೆಯಲು  ಐದು ನೂರು ಲೀಟರ್ ,  ಮೆಕ್ಕೆ, ಜೋಳ ಬೆಳೆಯಲು ಏಳು ನೂರರಿಂದ ಏಳು ನೂರ ಐವತ್ತು ಲೀಟರ್ ನೀರು ,  ಗೋಧಿ ಬೆಳೆಯಲು ಅತೀ ಕೆಟ್ಟ ಕೃಷಿ ಭೂಮಿಯಲ್ಲಿ ಒಂದು ಸಾವಿರದಿಂದ ಒಂದು ವರೆ ಸಾವಿರ ಲೀಟರ್ ನೀರು ಮತ್ತು ಉತ್ತಮವಾದ  ಭೂಮಿಯಲ್ಲಿ ಏಳು ನೂರು ಲೀಟರ್ ನಿಂದ ಎಂಟು ನೂರು ಲೀಟರ್ ನಷ್ಟು ನೀರು ಬೇಕಾಗುತ್ತದೆ.   ಆದರೆ ಸಂಯುಕ್ತ ಸಂಸ್ಥಾನದ  ಒಂದು ದಾಖಲೆಯ ಪ್ರಕಾರ ಒಂದು ಕಿಲೋ ಗ್ರಾಂ  ಹಸುವಿನ ಮಾಂಸ ಉತ್ಪಾದಿಸಲು  ಕನಿಷ್ಠ ಎಪ್ಪತ್ತು ಸಾವಿರ ಲೀಟರ್  ನೀರು ಬೇಕಾಗುತ್ತದೆ.   ಆಹಾರ ಬೆಳೆಗಳಿಗೆ  ತಗಲುವ ನೀರಿನ  ಪ್ರಮಾಣಕ್ಕಿಂತ  ಶೇಕಡಾ ಹತ್ತರಿಂದ ಸುಮಾರು  ಶೇಕಡಾ ನೂರು ರಷ್ಟು ನೀರು ಮಾಂಸದ ಉತ್ಪಾದನೆಗಾಗಿ  ವ್ಯಯವಾಗುತ್ತಿದೆ.  ಅಂದರೆ ಪ್ರಪಂಚದಲ್ಲಿ  ವರ್ಷಕ್ಕೆ  ಇಪ್ಪತ್ತೆಂಟು ಕೋಟಿ ಐವತ್ತು ಲಕ್ಷ ಮೆಟ್ರಿಕ್ ತಂ ಮಾಂಸ ತಯಾರಿಸಲು  ಅನಗತ್ಯವಾಗಿ ಖರ್ಚಾಗುತ್ತಿರುವ  ನೀರಿನ ಪ್ರಮಾಣ  ಇಪ್ಪತ್ತೆಂಟು ಕೋಟಿ ಐವತ್ತು ಲಕ್ಷ ಗುಣಿಸು ಒಂದು ಸಾವಿರ ಗುಣಿಸು ಎಪ್ಪತ್ತು ಸಾವಿರ ಲೀಟರ್ .  ನೀರು ನಮಗೆಲ್ಲರಿಗೂ  ಎಂತಹ  ಅಗತ್ಯವಾದ ವಸ್ತುವೆಂದರೆ  , ವಿಜ್ಞಾನ ಮತ್ತು ತಾಂತ್ರಿಕತೆ ಎಷ್ಟೆಲ್ಲಾ  ಮುಂದುವರೆದಿದ್ದರೂ  ,  ಯಾವುದೇ  ರಾಸಾಯನಿಕಗಳ ಮಿಶ್ರಣಗಳಿಂದ ಕಾರ್ಖಾನೆಯಲ್ಲಿ  ಎಷ್ಟು  ಹಣ ವ್ಯಯಿಸಿದರೂ ಸಹ ತಯಾರಿಸಲಾಗುವುದಿಲ್ಲ .  ಅದು ಪ್ರಕೃತಿಯ ಮೂಲಕ  ಮಾತ್ರ ನಮಗೆ ದೊರೆಯುತ್ತದೆ. 

     ಸಮುದ್ರದ ನೀರು ಆವಿಯಾಗಿ  ಮೇಲೆ ಹೋಗಿ  ಬಾಷ್ಟಿಕರಣ ಗೊಂಡು ನಂತರ ಮೋಡಗಳಾಗಿ  ಶೇಖರಣೆ ಗೊಂಡು   ಸಂಚರಿಸುತ್ತಾ ಕಡಿಮೆ ಒತ್ತಡಗಳಿರುವ  ಸ್ಥಳಗಳಲ್ಲಿ  ಹನಿಹನಿಯಾಗಿ  ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತದೆ.  ಈ ಹನಿ ಹನಿ ನೀರಿನ  ವ್ಯರ್ಥ ಮತ್ತು ದುರುಪಯೋಗ ವಾಗುತ್ತಿರುವುದು  ಮಾಂಸ  ತಯಾರಿಸುವಲ್ಲಿ  ಹೆಚ್ಚು .  ಒಬ್ಬ ಸಾಧಾರಣ  ವ್ಯಕ್ತಿ ಬಾತ್ ರೂಮ್ ಗೆ  ಶವರ್ ಆನ್ ಮಾಡಿಕೊಂಡು  ಆರರಿಂದ ಏಳು ನಿಮಿಷ  ಪ್ರತಿ ದಿನದಂತೆ  ಆರು ತಿಂಗಳು  ಸ್ನಾನ ಮಾಡಿದರೆ ಖರ್ಚಾಗುವಷ್ಟು  ನೀರು ,  ಕೇವಲ  ಒಂದು ಕಿಲೋ ಗ್ರಾಂ ಮಾಂಸ ತಯಾರಿಸಲು  ವ್ಯರ್ಥವಾಗುತ್ತದೆ.  ಇದನ್ನೇ ಮತ್ತೊಂದು ವಿಧದಲ್ಲಿ ಹೇಳುವುದಾದರೆ  ಒಬ್ಬ ಆರೋಗ್ಯವಂತ ವ್ಯಕ್ತಿ ದಿಂಕ್ಕೆ ಮೂರು ಲೀಟರ್ ನೀರಿನಂತೆ  ತಿಂಗಳಿಗೆ  ತೊಂಭತ್ತು ಲೀಟರ್ ನೀರು  ,  ವರ್ಷಕ್ಕೆ  ಸುಮಾರು ಒಂದು ಸಾವಿರ ಲೀಟರ್ ನೀರಿನಂತೆ  ಎಪ್ಪತ್ತು ವರ್ಷ  ಕುಡಿಯಬಹುದಾದಷ್ಟು ನೀರು ಕೇವಲ  ಒಂದು ಕಿಲೋ ಗ್ರಾಮ ಮಾಂಸದ ಉತ್ಪಾದನೆಗಾಗಿ  ಕೆಲವೇ ಕ್ಷಣಗಳಲ್ಲಿ ಖರ್ಚಾಗುತ್ತದೆ .  ಕೌಟುಂಬಿಕವಾಗಿ ಯೋಚಿಸುವುದಾದರೆ  ಒಂದು ವರ್ಷದ ಮಾಂಸದ ಉತ್ಪಾದನೆಗಾಗಿ  ಖರ್ಚಾಗುವ ನೀರು  ನೂರು ವರ್ಷ ಬದುಕಬಹುದಾದ ಸುಮಾರು ಇಪ್ಪತ್ತು ಸಾವಿರ ಕೋಟಿ ಕುಟುಂಬಕ್ಕೆ  ಸಾಕಾಗುತ್ತದೆ. ದಯವಿಟ್ಟು ನೀವೇ ಒಮ್ಮೆ ಯೋಚಿಸಿ.

    ಸ್ವಾತಂತ್ಯ ಬಂದು  ಇಷ್ಟು ವರ್ಷಗಳಾದರೂ ದೇಶದಲ್ಲಿ ಹದಿನಾಲ್ಕು ಕೋಟಿ ಜನರಿಗೆ  ಕುಡಿಯುವ ನೀರಿನ ಸೌಕರ್ಯವಿಲ್ಲ .  ಈ ಕುಟುಂಬಗಳಲ್ಲಿನ ಮಹಿಳೆಯರು  ಕೇವಲ ಒಂದು ಮಡಿಕೆ ಅಥವಾ ಬಿಂದಿಗೆ  ನೀರಿಗಾಗಿ  ಮೂರರಿಂದ  ನಾಲ್ಕು ಕಿಲೋ ಮೀಟರ್  ನಡೆಯುವುದು  ಸಾಮಾನ್ಯ  ಸಂಗತಿಯಾಗಿದೆ .  ಮುಂಜಾನೆ  ಮೂರು ಅಥವಾ ನಾಲ್ಕು ಘಂಟೆಗೆ ಎದ್ದು  ಹೋಗಿ ನೀರು ತಂದು  ಬೆಳಗಿನ ಅಡುಗೆ ಮಾಡುವುದು .  ನಂತರ ಪುನ; ಅದೇ ಮಡಿಕೆ ಹಿಡಿದು ಹೊರತು  ನೀರು ತಂದು  ಸಂಜೆಯ ಅಡುಗೆ  ಮಾಡುವುದರಲ್ಲೇ ಎಷ್ಟೋ ಲಕ್ಷ ಜನ  ಜೀವನ ಕಳೆದು  ಹೋಗುತ್ತದೆ.  ನೀರಿಗಾಗಿ ಇಷ್ಟೆಲ್ಲಾ ಹಾಹಾಕಾರ  ಇರುವಾಗ  ಕೇವಲ ಮಾಂಸಕ್ಕಾಗಿ  ಎಷ್ಟೆಲ್ಲಾ ನೀರು  ವ್ಯರ್ಥ  ಮಾಡುತ್ತಿರುವುದು  ಸಾಮಾನ್ಯ ಜನರ ಮೇಲೆ ಮಾಡುತ್ತಿರುವ  ಅತ್ಯಾಚಾರವೇ ಸರಿ .

     ಮತ್ತೊಂದು ಕ್ರೂರವಾದ ವಿಚಾರವೆನೆಂದರೆ  ಕಸಾಯಖಾನೆಗೆ ಪ್ರಾಣೆಗಳನ್ನು ಕರೆದುಕೊಂಡು ಬಂದ ನಂತರ ,  ಅಲ್ಲಿ ಅವುಗಳನ್ನು ಅತ್ಯಂತ  ಹೀನಾಯವಾಗಿ ಕೊಲ್ಲಲಾಗುತ್ತದೆ.  ನೀವೇನಾದರೂ ಒಮ್ಮೆ ಕಸಾಯಖಾನೆಯಲ್ಲಿ ಆ ದ್ರಶ್ಯವನ್ನು  ಕಣ್ಣಾರೆ ಕಂಡಿದ್ದೆ ಆದರೆ  ಹಲವು ದಿನಗಳ ವರೆಗೆ ನಿದ್ರೆ  ಮತ್ತು ಆಹಾರ ಗಳನ್ನೂ  ನಿಯಮಿತವಾಗಿ ಮಾಡಲಾಗುವುದಿಲ್ಲ.  ಅಷ್ಟು ಕ್ರೂರವಾಗಿ ಕೊಲ್ಲಲಾಗುತ್ತದೆ.  ಮತ್ತು ಸಾಯುವ ಮುನ್ನ ಅವುಗಳ ಬಾಯಿಂದ ಹೊರಡುವ ಒಂದು ವಿಧವಾದ ನೆಗಟಿವ್ ಹಾರ್ಮೋನ್ ಮತ್ತು ಅವುಗಳ  ದೇಹದಿಂದ  ಉಂಟಾಗುವ  ಶಾಕ್ವೆವ್ಸ್  ಇಡೀ ವಿಶ್ವದ ವಾತಾವರಣವನ್ನು ತಾಪಮಯವನ್ನಾಗಿಸುತ್ತದೆ. 

     ಒಂದು ಉದಾಹರಣೆಯೊಂದಿಗೆ  ಇದನ್ನು ಯೋಚಿಸಿಕೊಳ್ಳಿ.   ಒಬ್ಬ ವ್ಯಕ್ತಿ ನಿಮ್ಮ ಮೇಲೆ ಆಕ್ರಮಣ ನಡೆಸಿ,  ನಿಮ್ಮನ್ನು ಕೊಳ್ಳುವ ನಿರ್ಧಾರ ಮಾಡಿದರೆ,  ನಿಮ್ಮ ಹೃದಯದ ಬಡಿತ ತಾನಾಗೆ ಹೆಚ್ಚಾಗುತ್ತದೆ.  ಬಹಳ ವೇಗವಾಗಿ  ಯಾವುದೇ ವಾತಾವರಣದಲ್ಲೂ  ಬೆವರು ಬರಲು ಶುರುವಾಗುತ್ತದೆ.  ದೇಹದ ನಾನಾ ಕಡೆ ಬೆವರಲು ಶುರುವಾಗುತ್ತದೆ .  ನಿಮ್ಮ ರಕ್ತದೊತ್ತಡವೂ ಸಹ ಬಹಳವೇ  ವೇಗವಾಗಿ ಹೆಚ್ಚುತ್ತಿರುತ್ತದೆ.  ನಿಮ್ಮ ಶರೀರದಲ್ಲಿ  ನಿಮ್ಮ ಆಕ್ರಮಣದ  ವೇಳೆ ಇಷ್ಟೆಲ್ಲಾ ಬದಲಾವಣೆಗಳು ಆಗಬಹುದಾದಲ್ಲಿ  ,  ಕಸಾಯಿಖಾನೆಯಲ್ಲಿ ಕೊಲ್ಲಲ್ಪಡುವ  ಪ್ರಾಣಿಗಳಲ್ಲೂ  ಸಹ ಇದೆಲ್ಲಾ ಆಗಬಹುದಾಗಿದೆ.  ಕಸಾಯಿಖಾನೆಯ ಬಗ್ಗೆ ಹಲವಾರು ಕಡೆ ನಿಮಗೆ ವಿಡಿಯೋ , ಸಿಡಿ,ಸಿನಿಮಾ ಸಿಡಿ, ಮುಂತಾದವು ಸಿಗಬಹುದು.  ಅವುಗಳನ್ನು ನೀವೊಮ್ಮೆ ನೋಡಿದ್ದೇ ಆದಲ್ಲಿ ಖಂಡಿತಾ ಕನಿಷ್ಠ  ಮೂರು ದಿನ ನಿದ್ರೆಯನ್ನು ನೆಮ್ಮದಿಯಿಂದ ಮಾಡಲಾಗುವುದಿಲ್ಲ.  ಕಸಾಯಿಖಾನೆಗಳಲ್ಲಿ  ಪ್ರಾಣಿಗಳನ್ನು ಅದರಲ್ಲೂ ಹಸು, ಕರು ಮತ್ತು ಎತ್ತುಗಳನ್ನು ಒಮ್ಮೆಲೇ ಸಾಯಿಸುವುದಿಲ್ಲ.  ಅವುಗಳನ್ನು ನಿರಾಹಾರಗೊಳಿಸಿ ,  ಸಾಯುವ ಹಂತಕ್ಕೆ ತಂದು,  ನಂತರ ನಿಧಾನವಾಗಿ ಕೊಲ್ಲಲಾಗುತ್ತದೆ.  ಕೆಲವೊಮ್ಮೆ ಅವುಗಳ ಚರ್ಮದ ಮ್ರದುತ್ವಕ್ಕಾಗಿ ಬದುಕ್ಕಿದ್ದಂತೆಯೇ ಕೊಲ್ಲುವ ಮುನ್ನ ಎಪ್ಪತ್ತು ಸೆಂಟಿ ಗ್ರೇಡ್ ನಿಂದ ಒಂದು ನೂರು ಸೆಂಟಿ ಗ್ರೇಡ್  ನವರೆಗೂ ಕುಡಿಯುವ ನೀರನ್ನು ಎರಚಲಾಗುತ್ತದೆ.  ನಂತರ ಅದು ಬದುಕಿದ್ದಂತೆಯೇ ಅದರ ಚರ್ಮವನ್ನು ಸುಲಿಯಲಾಗುತ್ತದೆ.  ಆ ವೇಳೆಯಲ್ಲಿ ಆ ದೇಹದಿಂದ ಸೋರುವ ರಕ್ತವನ್ನು ಸಹ ಶೇಖರಿಸಲಾಗುತ್ತದೆ.  ಕಾಲುಗಳನ್ನು ಕಟ್ಟಿ ಹಾಕಿರುವ ಆ ಸ್ಥಿತಿಯಲ್ಲಿ ಹಸುವಿನ  ಕತ್ತನ್ನು ಸ್ವಲ್ಪ ಮಾತ್ರ ಕತ್ತರಿಸಿ ನಂತರ ಅದು ಒದ್ದಾಡಿ ಒದ್ದಾಡಿ ತನ್ನ ಜೀವಿತದ ಅಂತಿಮ ಶ್ವಾಸವನ್ನು  ಹೊರಹಾಕುವವರೆಗೂ ಕಾಯ್ದು  ನಂತರ ಅದನ್ನು ಕತ್ತನ್ನು ಕತ್ತರಿಸಲಾಗುತ್ತದೆ.  ನಂತರ ಕಾಲುಗಳನ್ನು  ಬೇರ್ಪಡಿಸಿ  ,  ಹೊಟ್ಟೆಯ ಭಾಗವನ್ನು ಕೊಯ್ದು ,  ಮಾಂಸವನ್ನು ತೆಗೆದು ಅದನ್ನು ದೊಡ್ಡ ಮತ್ತು ಸಣ್ಣ  ಭಾಗಗಳನ್ನಾಗಿ  ಮಾಡಲಾಗುತ್ತದೆ.  ಆ ಹಸುವಿನ ಕತ್ತನ್ನು  ಸ್ವಲ್ಪ  ಕುಯ್ದು ,  ನಂತರ ಅದು ರಕ್ತವನ್ನು ಹೊರ ಹಾಕುತ್ತಾ  ಪೂರ್ತಿ ಸಾಯುವವರೆಗೂ ಚೀರುವ ಚೀತ್ಕಾರವನ್ನು ಖಂಡಿತವಾಗಿಯೂ ಯಾವುದೇ  ಸಾಮಾನ್ಯ ವ್ಯಕ್ತಿ  ಖಂಡಿತಾ ಕೇಳಲಾಗುವುದಿಲ್ಲ.  ಅದು ಕೇವಲ ಅಂತಹ ಹಸುಗಳನ್ನು ಪ್ರತಿನಿತ್ಯವೂ  ಕೊಲ್ಲುವ ಆ ಕಲ್ಲು ಹೃದಯದ  ಕಟುಕನಿಗೆ ಮಾತ್ರ ಸಾಧ್ಯ .  ಈ ರೀತಿ ಪ್ರಾಣಿಗಳಿಂದ ಹೊರಡುವ ಚೆತ್ಕಾರವು  ವಾತಾವರಣದಲ್ಲೇ ಓಡಾಡುತ್ತಿರುತ್ತದೆ.  ಆಧುನಿಕ  ವಿಜ್ಞಾನವೂ ಸಹ ಈ ಮಾತನ್ನು ದೃಡ ಪಡಿಸುತ್ತದೆ.

ವಂದನೆಗಳೊಂದಿಗೆ 

ಎ.ಟಿ.ನಾಗರಾಜ 

ನಿಮಗಾಗಿ ಒಂದು ಅವಕಾಸ ಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ  
http://sunnaturalflash.magneticsponsoringonline.com/letter.php 
sunnaturalflash@gmail.com 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ