MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಏಪ್ರಿಲ್ 25, 2011

ಓದಿಗಿಂತ ಅನುಭವ ದೊಡ್ಡದು !

ಓದಿಗಿಂತ ಅನುಭವ ದೊಡ್ಡದು !.  ಇತ್ತೀಚಿಗೆ ನಾನು ಒಬ್ಬ ದೊಡ್ಡ ಉದ್ದಿಮೆ ದಾರರೋಬ್ಬರನ್ನು ಭೇಟಿ ಆದೆ.  ಸುಮಾರು ಒಂದೂವರೆ ಸಾವಿರ ಕೆಲಸಗಾರರನ್ನು ಹೊಂದಿರುವ ದೊಡ್ಡ ಕಂಪನಿಯ ಯಜಮಾನ ಅವರು.  ನಾವು ಪರಸ್ಪರ ಉಭಯ ಕುಶಲೋಪರಿಯನ್ನು ವಿಚಾರಿಸಿದ ಬಳಿಕ ಅವರ ಕಂಪನಿಯ ಬಗ್ಗೆ ಮಾತು ಪ್ರಾರಂಭಿಸಿದರು.  ಅವರು ತಮ್ಮ ಬಡತನದಲ್ಲಿ ಸಾಮಾನ್ಯ ಒಬ್ಬ ಸೆಕ್ಯುರಿಟಿ ಗಾರ್ಡ್ ಆಗಿ ದಿನದಲ್ಲಿ ಹನ್ನೆರಡು ಗಂಟೆ,  ಇಪ್ಪತ್ತು ನಾಲ್ಕು ಗಂಟೆ,  ಮೂವತ್ತಾರು ಗಂಟೆ, ಒಮ್ಮೊಮ್ಮೆ ನಲವತ್ತೆಂಟು ಗಂಟೆ ಕೆಲಸ ಮಾಡಿದ್ದು.  ನಿದ್ದೆ ,  ಸರಿಯಾದ ಆಹಾರ, ಸರಿಯಾದ ಭದ್ರತೆ ಇಲ್ಲದೆ ದುಡಿದದ್ದು.  ಎಷ್ಟೋ ಬಾರಿ ಕೆಲಸ ಕಳೆದುಕೊಂಡಿದ್ದು.  ಮನೆಯ ಹಿರಿಯ ಅಣ್ಣ ನ ವಂಚನೆಗೆ ಒಳಗಾಗಿದ್ದು .  ಹೀಗೆ ಅವರ ಜೀವನದ ನೋವಿನ ಸುರುಳಿ ಬಿಚ್ಚುತ್ತಾ ಬಂದು ಅಂತಹ ಒಂದು ಬೃಹದ್ ಆಕಾರದ ಕಂಪನಿಯ ಉದಯಕ್ಕೆ ಕಾರಣ ವಾದದ್ದು ಹೇಳುತ್ತಾ ಬಂದು ಮುಗಿಸಿದರು.  

    ಅವರು ಒಂದನ್ನು ಒತ್ತಿ ಒತ್ತಿ ಹೇಳಿದರು ನಾನು ನವ ಉದ್ದಿಮೆದಾರರಿಗೆ ಹೇಳುವುದೇನೆಂದರೆ ನೀವು ನಿಮ್ಮ ಉದ್ದಿಮೆಗೆ ದುಡಿಯುವ ದುಡಿಮೆವನ್ತರನ್ನು ಕೆಲಸಕ್ಕೆ ಸೇರಿಸಿಕೊಳ್ಳಿ.  ಒಂದು ಕೆಲಸ ಆಗಬೇಕು ಅಂತ ಹೇಳಿ.  ಇದೆ ರೀತಿ ಮಾಡಿ ಎಂದು ಹೇಳಬೇಡಿ.  ಅವನ ಅನುಭವದಿಂದ ಉತ್ತಮ ವಾಗಿಯೇ ಮಾಡುತ್ತಾನೆ.  ಯಾವತ್ತು ಕೆಲಸಕ್ಕೆ ನಿಯಮಿಸಿಕೊಳ್ಳುವಾಗ ಪಕ್ಷ ಭೇದ ಮಾಡಬೇಡಿ.  ಎಲ್ಲಾ ಕಾರ್ಮಿಕರಿಗೂ ಭತ್ಯೆ ಸರಿ ಸಮಾನವಾಗಿ ಕೊಡಿ.  ಹೀಗೆ ಅವರ ಮಾತು ಸಾಗಿತ್ತು.  ಒಬ್ಬ ವ್ಯಕ್ತಿ ಬೀಡಿ, ಸಿಗರೇಟು, ಮಧ್ಯಪಾನ, ದೂಮಪಾನ,ಕೆಟ್ಟ ಚಟ , ಸಿನಿಮಾ ಇವುಗಳಿಗೆ ಪ್ರತಿಯೊಬ್ಬ ವ್ಯಕ್ತಿ ತನ್ನ ದುಡಿಮೆಯ ಸ್ವಲ್ಪ ಹಣವನ್ನು ವಿನಿಯೋಗಿಸುತ್ತಾನೆ.  ಹಾಗೆಯೇ ನಾನು ನನ್ನ ಹಣವನ್ನು ಉತ್ತಮ ಪುಸ್ತಕಗಳಿಗೆ ವಿನಿಯೋಗಿಸಿದೆ. ಆ ಪುಸ್ತಕಗಳು ನನ್ನನ್ನು ಪ್ರಗತಿಯ ಕಡೆ ಉದ್ದಿಮೆ ಕಡೆ ,  ಹಣ ಸಂಪಾದನೆಯ ಕಡೆ ಹೋಗುವಂತೆ ತೋರಿಸಿದವು.  ಹಾಗೆಯೇ ನನ್ನ ಹಣ ಹಣ ಸಂಪಾದನೆಯ ಕಡೆ ಪ್ರಯೋಗಕ್ಕೆ ತೊಡಗಿದೆ.  ಇಂದು ದೊಡ್ಡ ಉದ್ದಿಮೆದಾರ ನಾಗಿದ್ದೇನೆ.  ನನ್ನ ಜತೆಗೆ ಕೆಲಸ ಮಾಡುತ್ತಿದ್ದ ಹಲವಾರು ಜನ ಇಂದಿಗೂ ಅಂದು ಹೇಗೆ ಇದ್ದರೋ ಇಂದು ಹಾಗೆಯೇ ಇದ್ದಾರೆ.  ಎಂದು ತಮ್ಮ ಮಾತು ಮುಗಿಸಿದರು.  ಅಂದರೆ ಅವರ ಪ್ರಕಾರ ನಾವು ಮಾಡುವ ಕೆಲಸದ ಜತೆಯಲ್ಲಿಯೇ ನಮ್ಮ ವಯಕ್ತಿಕ ದುಡಿಮೆಗೆ ಹಣವನ್ನು ಹೂಡಿಕೆಮಾಡಬೇಕು ಎಂದು ಅಲ್ಲವೇ.?




ವಂದನೆಗಳೊಂದಿಗೆ 


ಎ.ಟಿ.ನಾಗರಾಜ






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ