ನಮ್ಮ ಮುಂದಿರುವ ಪ್ರಶ್ನೆ ಎಲ್ಲಾ ಕಷ್ಟಗಳಿಗೆ ಸ್ಪಂದಿಸಬೇಕೆ ? ಎನ್ನುವುದು ಯಾಕೆಂದರೆ , ಕೆಲವು ಕಷ್ಟಗಳನ್ನು ನಾವೇ ನಾವಾಗಿಯೇ ಸೃಷ್ಟಿಸಿಕೊಂಡು ಬೇರೆಯವರನ್ನು ಪೇಚಾಟಕ್ಕೆ ಸಿಲುಕಿಸಿ ನಾವೇ ದು;ಖಪಡುವುದು. ಉದಾಹರಣೆಗೆ ಸಾರಾಯಿ ದುಡಿಯಬೇಡಿ ಅದು ಆರೋಗ್ಯಕ್ಕೆ ಹಾನಿಕಾರಿ, ಬೀಡಿ ಸೇದಬೇಡಿ ಅದು ಆರೋಗ್ಯಕ್ಕೆ ಹಾನಿಕಾರಿ, ಗುಟುಕ, ತಂಬಾಕು ತಿನ್ನಬೇಡಿ ಇದು ಆರೋಗ್ಯಕ್ಕೆ ಹಾನಿಕಾರಿ, ಪೋಲಿ ತಿರುಗಬೇಡಿ, ಸುಮ್ಮನೆ ಕಾಲ ವ್ಯರ್ಥ ಮಾಡಬೇಡಿ, ಹೀಗೆ ಹೇಳುತ್ತಾ ಹೋದರೆ ಲೆಕ್ಕ ವಿಲ್ಲದಷ್ಟು ಸಲಹೆಗಳು. ಆದರೆ ನಾವು ಇವುಗಳನ್ನು ಕದ್ದು ಮುಚ್ಚಿ ಮಾಡುತ್ತೇವೆ. ಆದರೆ ಇವುಗಳು ನಮಗೆ ಹಾನಿಯನ್ನು ಬಹಿರಂಗ ವಾಗಿಯೇ ಮಾಡುತ್ತವೆ. ಇದರಿಂದ ನರಳುವವರಿಗೆ, ಖಾಯಿಲೆ ಅನುಭವಿಸುವವರಿಗೆ ಸಹಾಯ ನೀಡಬೇಕೆ ಬೇಡವೇ ?. ನನಗಂತೂ ಹೀಗೆ ಅನಿಸುತ್ತದೆ. ಇಂಥ ಮೂರ್ಖರಿಗೆ ಸಹಾಯ ಮಾಡಲೇ ಬಾರದು. ಇವರು ತಾವು ಮಾಡಿದ ತಪ್ಪಿಗೆ ನೋವು , ನರಳುವಿಕೆ ಅನುಭವಿಸಲೇ ಬೇಕು.!
ವಂದನೆಗಳೊಂದಿಗೆ
ಎ.ಟಿ.ನಾಗರಾಜ











ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ