MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಮಾರ್ಚ್ 5, 2011

ಪ್ರತಿಕ್ರಿಯೆ ಇಲ್ಲದ ಪ್ರಜೆಗಳಿಂದ ದೇಶದ ಪ್ರಗತಿ ಸಾಧ್ಯವಾದೀತೆ ?

ನಾನು ಎಷ್ಟೋ ಸಲ ನೋಡಿದ್ದೇನೆ ಏನೂ ಹೇಳಿದರೂ ತಲೆ ಅಲ್ಲಾಡಿಸುವ ಜನರನ್ನು , ಮದುವೆ ಮನೆಗಳಲ್ಲಿ, ಸಭೆಸಮಾರಂಭಗಳಲ್ಲಿ, ಎಲ್ಲಂದರಲ್ಲಿ ಇವರು ಎಲ್ಲಿ ವರೆವಿಗೆ ಸುಮ್ಮನೆ ಕುಳಿತ್ತಿರುತ್ತಾರೆ ಎಂದರೆ ತಮ್ಮ ಊಟ ಮುಗಿದು ತಮ್ಮ ಎದುರಿಗೆ ಬಡಿಸಲು ಬಂದ ಅಡಿಗೆಯವರು ಬಡಿಸಲ ಎಂದು ಕೇಳಿದರೂ ಸುಮ್ಮನೆ ಇರುತ್ತಾರೆ . ಅವರು ಇವರು ಮೂಖರಿರಬಹುದು ಎಂದು ತಿಳಿದುಕೊಂಡು ತಂದಿದ್ದನ್ನು ಇವರ ತಟ್ಟೆಗೆ ಸುರುವಿ ಹೋಗುತ್ತಾರೆ. ಪುಣ್ಯಾತ್ಮ ಮಹಾಶಯರು ಎಲ್ಲರೂ ಊಟ ವಾದ ಮೇಲೆ ಅನ್ನವನ್ನು ತಟ್ಟೆಯಲ್ಲೇ ಬಿಟ್ಟು ಕೈತೊಳೆಯುತ್ತಾರೆ. ಅಡಿಗೆಮಾಡಿದವರು ಕೊನೆಯ ಪಂಕ್ತಿಗೆ ಅಡಿಗೆ ಮಾಡಿದ್ದು ಇಲ್ಲದೆ ಬೇಗ ಬೇಗ ಅಡಿಗೆ ಮಾಡಲು ಪ್ರಾರಂಭಿಸುತ್ತಾರೆ. ಇಂತವರು ಒಂದು ರೀತಿಯ ನಷ್ಟದ ಜನರು . ಸಮಾಜಕ್ಕೆ ಒಂದು ಹೊರೆ ಎಂದು ಹೇಳಿದರು ತಪ್ಪಾಗಲಾರದು.

ಯಾವುದೇ ಪತ್ರಿಕೆಯಾಗಲಿ, ಕಾರ್ಯಕ್ರಮವಾಗಲಿ, ಯಾವುದೇ ಕಂಪನಿಯ ವಸ್ತುವೇ ಆಗಲಿ ಆತ ಬರೆಯುವುದುಆರಂಭಿಸುವುದು , ತಯಾರಿಸುವುದು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು , ಓದುಗರ ಅಭಿಪ್ರಾಯದ ಮೇಲೆ ತಾನೂ ತನ್ನ ಪತ್ರಿಕೆಯ ಬರವಣಿಗೆಯನ್ನು ಉತ್ತಮಪಡಿಸಿ ಕೊಳ್ಳಬಲ್ಲ. ಕೇಳುಗರ ಅಥವಾ ನೋಡುಗರ ಅನಿಸಿಕೆ ಆಧಾರದ ಮೇಲೆ ತನ್ನ ಕಾರ್ಯಕ್ರಮವನ್ನು ಇನ್ನೂ ಸರಿಯಾಗಿ ಮಾಡಬಲ್ಲ. ಉಪಯೋಗಿಸುವವರ ಅನಿಸಿಕೆಯ ಮೇಲೆ ಇನ್ನೂ ಉತ್ತಮ ವಸ್ತುವನ್ನು ಗ್ರಾಹಕರಿಗಾಗಿ ತಯಾರಿಸಬಲ್ಲ. ಆದರೆ ಗ್ರಾಹಕ ನಾದವನು ದೇವರು ಕೊಟ್ಟ ಬಾಯಿ ಇದ್ದು , ನಾಲ್ಕು ಅಕ್ಷರ ಕಲಿತು ಬರೆಯಲು ಬೇರೆಯವರಿಗೆ ಕಲಿಸುವ ನೌಕರಿಯಲ್ಲಿದ್ದು , ಅಲ್ಲಿ ಕಲಿಸುವುದರ ಮೂಲಕ ಆತನ ಸಂಸಾರ ನಡೆಯುತ್ತಲಿದ್ದರೂ ಆತ ಯಾಕೆ ಮೂಖನಾಗಿರುತ್ತಾನೆ. ಒಂದು ಪ್ರಜ್ಞಾವಂತ ಆರೋಗ್ಯಕರ ಸಮಾಜಕ್ಕೆ ಹೊರೆ ಯಾಗಿ ಯಾಕೆ ಬಾಳುತ್ತಾನೆ. ಇಂತವರಿಂದ ಒಂದು ದೇಶದ ಪ್ರಗತಿ ಸಾಧ್ಯವೇ ? ನೀವೇ ಯೋಚಿಸಿ.

ವಂದನೆಗಳೊಂದಿಗೆ

.ಟಿ. ನಾಗರಾಜ
ನೇರಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ

,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ