MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಫೆಬ್ರವರಿ 27, 2011

ಮುಂಬಾಳು ಗೋಕುಲ್ ಫಾರಂ ನ ಫಾದರ್ ಪಿ.ವಿ.ಜೋಸೆಪ್ ನ ಒಂದು ನೆನಪು

ಆಗಾಗ್ಗೆ ನಾನು ನಮ್ಮ ಅಕ್ಕನನ್ನು ತುಂಬಾ ಗೋಳು ಹೊಯ್ದು ಕೊಳ್ಳುತ್ತೇನೆ. ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದಿನ ಘಟನೆಗಳನ್ನು ನೆನಪಿಗೆ ತಂದು ಅರ್ಧ ಬರ್ಧ ನೆನಪಿರುವ ಘಟನೆಗಳಿಗೆ ಪೂರ್ಣ ಜೀವಬರುವಂತೆ ಮಾಡುವಂತೆ ನಮ್ಮ ಅಕ್ಕನಿಗೆ ತಲೆ ತಿನ್ನುವುದು ಜಾಸ್ತಿ. ಸುಮಾರು ಹತ್ತು ಹದಿನೈದು ವರ್ಷಗಳ ಹಿಂದಿನ ಘಟನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಗೋಕುಲ್ ಫಾರಂ ಫಾದರ್ ಪಿ.ವಿ. ಜೋಸೆಫ್ "ಜನ ಸೌಭಾಗ್ಯ "ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಕ್ಷರ ಕಲಿಸುವ ಸಾಕ್ಷರತ ಆಂದೋಲನ ಜಾರಿಗೆ ತಂದರು. ಆದರೆ ಅದು ಯಾವ ಮಟ್ಟಕ್ಕೆ ತಲುಪಿತ್ತೆಂದರೆ.
ಅವ್ರು ಸುಮಾರು ನೂರು ರೂಪಾಯಿ ಬೆಲೆಬಾಳುವ ಕಿಟ್ಟನ್ನು ಅಕ್ಷರ ಕಲಿಯುವವರಿಗಾಗಿ ಉಚಿತವಾಗಿ ಹಂಚಿದರು. ರಾತ್ರಿ ಹಗಲೆನ್ನದೆ ತಮ್ಮ ಕಾರ್ಯಕರ್ತರೊಡನೆ ನಿದ್ದೆಗೆಟ್ಟು ಹಳ್ಳಿಯೆಲ್ಲ ಸುತ್ತಿ ಜನರನ್ನು ಜಾಗ್ರತ ಗೊಳಿಸಿದರು. ನಮ್ಮ ಜನ ಎಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತಾರೆಂದರೆ ಅಕ್ಷರ ಕಲಿಯಲು ಪುಕ್ಕಟೆಯಾಗಿ ಕೊಟ್ಟ ಕಿಟ್ಟನ್ನು ಹಳ್ಳಿಗರು ಮೀನು ಹಿಡಿದು ಹಾಕಲು ಕೆರೆಬೇಟೆಗೆ ತೆಗೆದುಕೊಂಡು ಹೋಗಬೇಕೆ.?

ಮತ್ತೊಂದು ಮರೆಯಲಾಗದ ಘಟನೆ ಪಾದಾರ್ ಜೋಸೆಪ್ ಜನರನ್ನು ಜಾಗ್ರತಗೊಳಿಸಲು ,ಸಂಘಟಿಸಲು ಸಾಕ್ಷರತಆಂದೋಲನ ಪ್ರಚಾರಕ್ಕಾಗಿ ಹುಡುಗರನ್ನು ಕರೆದು ತಂದಿದ್ದರು. ಅವರು ಹೇಳಿದ್ದ ಹಾಡೊಂದು ಇನ್ನು ನೆನಪಿದೆ. "ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ " ಎನ್ನುವ ಹಾಡು . ಅಂದರೆ ಓದದೆ ಇದ್ದರೆ ಶ್ರೀಮಂತರು ಬಡವರನ್ನು ಶೋಷಣೆ ಮಾಡುತ್ತಾರೆ ಎಂಬ ಹಾಡು. ಆಗಿನ ವೇಳೆಯಲ್ಲಿ ಅದು ನನಗೆ ಯಾಕೋ ಹೌದು ಎನಿಸಿತ್ತು. ಆದರೆ ನಾನು ನನ್ನ ಕಾಲೇಜನ್ನು ಮುಗಿಸಿ ಬೆಂಗಳೂರಿಗೆ ಬಂದು ಪೈಲ್ ಹಿಡಿದುಕೊಂಡು ಕೆಲಸಕ್ಕಾಗಿ ತಿರುಗಿ , ತಿರುಗಿ ಕಂಗಾಲಾಗಿ ನನಗೂ ನನ್ನ ವಿದ್ಯಾಭ್ಯಾಸಕ್ಕೂ ಹೊಂದಾಣಿಕೆ ಇಲ್ಲದ ಕೆಲಸ ಮಾಡುತ್ತಿದ್ದಾಗ. ನಾನು ವ್ಯಕ್ತಿತ್ತ್ವ ವಿಕಾಸನ ಬಗ್ಗೆ ತುಂಬಾ ಘಾಡವಾಗಿ , ಆಳವಾಗಿ ಅಧ್ಯಯನ ಮಾಡತೊಡಗಿದಾಗ ಅವರ ಹಾಡು ಸುಳ್ಳು ಅನ್ನಿಸಿತು. ಯಾಕೆಂದರೆ ಅತೀ ತುಂಬಾ ಶ್ರೀಮಂತರು ಅನಕ್ಷರಸ್ತರೆ ಆಗಿದ್ದರು. ಅವರ ಅಡಿಯಾಳಾಗಿ ಇದ್ದವರು ಅಕ್ಷರಸ್ಥರೆ ಎಂಬುದು ಮರೆಯಲಾಗದ ಮಾತು.

ವಂದನೆಗಳೊಂದಿಗೆ

.ಟಿ.ನಾಗರಾಜ








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ