ಎಷ್ಟೋ ಜನಕ್ಕೆ ಕೆಲವು ಸುಲಭದ ಮಾರ್ಗದಲ್ಲಿ ಹಣ ಸಂಗ್ರಹಿಸುವುದು ಗೊತ್ತಿಲ್ಲ. ಪ್ರತಿಯೊಂದಕ್ಕೂ ನನ್ನಿಂದ ಸಾಧ್ಯವಿಲ್ಲ ಎನ್ನುತ್ತಲೇ ಜೀವನ ಸಾಗಿಸಿ ಕೊನೆಗೆ ಏನೂ ಮಾಡದೆ ಕಾಡಿಗೆ ಹೆಣವಲ್ಲ , ಊರಿಗೆ ಜನವಲ್ಲ ದ ಹಾಗೆ ಹೋಗುತ್ತಾರೆ. ಪ್ರತಿಯೊಬ್ಬ ಮನುಷ್ಯ ಏನಾದರೂ ಮಾಡುತ್ತಲೇ ಇದ್ದರೆ ಏನೋ ಒಂದು ಕೆಲಸದ ಅನುಭವ ಆಗುತ್ತದೆ. ಏನೂ ಮಾಡದೆ ಹೋದರೆ ಕೆಲಸ ಇದ್ದಲ್ಲೇ ಇರುತ್ತದೆ . ನಾವು ಕೂಡ ಏನೂ ಮಾಡದೆ ಇರುತ್ತೇವೆ.
ಈಗಿನ ಆಧುನಿಕ ಯುಗದಲ್ಲಿ ಎಲ್ಲರ ಮನೆಯಲ್ಲಿಯೂ ಮೊಬೇಲ್ ಇದ್ದೆ ಇದೆ ತಾನೇ? , ಹಾಗೆಯೇ ಅದರಲ್ಲಿ ಬೇಡವೆಂದರೂ ಐವತ್ತಕ್ಕಿಂತ ಹೆಚ್ಚಿನ ಜನರ ಹೆಸರು ,ಮೊಬೇಲ್ ನಂಬರ್ ಸೇವ್ ಮಾಡಿ ಇರುತ್ತೇವೆ ತಾನೇ. ಈಗ ಒಂದು ಕಡೆ ಮೊಬೇಲ್ ನಂಬರ್ ಬರೆಯಿರಿ , ಮತ್ತೊಂದು ಕಡೆ ವ್ಯಕ್ತಿಯ ಹೆಸರು ಬರೆಯಿರಿ, ಹಾಗೆಯೇ ಆತ ಮಾಡುವ ಕೆಲಸ ನಿಮಗೆ ಗೊತ್ತಿರುತ್ತದೆ. ಅದನ್ನು ಬರೆಯಿರಿ, ಹಾಗೆಯೇ ವಿಳಾಸ ,ಬರೆದರೆ ಸುಮಾರು ಐವತ್ತಕ್ಕಿಂತ ಹೆಚ್ಚು ವಿಳಾಸ ಸಂಗ್ರಹಿಸಬಹುದು.
ಪ್ರತಿಯೊಬ್ಬರ ಮನೆಗೂ ಮದುವೆಗೆ ಹೇಳುವವರು ಬರುತ್ತಾರೆ , ಅದರಲ್ಲಿ ಕೂಡ ವಿಳಾಸ ಸಂಗ್ರಹಿಸಬಹುದು. ಪ್ರಿಂಟಿಂಗ್ ಪ್ರೆಸ್ ವಿಳಾಸ,ಇತ್ಯಾಧಿ,
ಹಾಗೆಯೇ ನಿಮ್ಮ ಮನೆಗೆ ತರುವ ಸಾಮಾನುಗಳ ಕವಚಗಳ ಮೇಲಿರುವ ಕಂಪನಿಯ ಹೆಸರು , ಫೋನ್ ನಂಬರ್, ವಿಳಾಸ ಸಂಗ್ರಹಿಸುವುದು ಮರೆಯಬಾರದು.
ಬಡಗಿ ಕೆಲಸ, ಎಲೆಕ್ತ್ರಿಶನ್ ,ಮೆಕಾನಿಕ್, ಗಾರೆ ಕೆಲಸ ,ಹಾಡುವವರು, ಕುಣಿಯುವವರು ,ನಾಟಕದವರು,ಹೀಗೆ ಹಲವಾರು ಜನರ ವಿಳಾಸ ,ದೂರವಾಣಿ ಸಂಖ್ಯೆ ಸಂಗ್ರಹಿಸಬಹುದು.
ಇನ್ನೂ ಬೇರೆ ನಿಮ್ಮ ಆಲೋಚನೆ ಇದ್ದರೆ ನಮಗೆ ಬರೆಯಿರಿ,
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ