MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಫೆಬ್ರವರಿ 23, 2011

ನಾವು ರೈತರು ನಮಗೆ ನೆಲವನ್ನು ಅಗೆಯುವುದು , ಗೊಬ್ಬರ ಹಾಕುವುದು, ಬೀಜ ಬಿತ್ತುವುದಷ್ಟೇ ಗೊತ್ತು !

ನಾವು ಗ್ರಾಮೀಣ ಪ್ರದೇಶದಿಂದ ಬಂದವರು . ನಮಗೆ ಕೃಷಿ ಕೆಲಸ ಬಿಟ್ಟರೆ ಬೇರೇನೂ ಅನುಭವವಿಲ್ಲ. ಆದರೆ ಪ್ರತಿಯೊಂದು ಕೆಲಸಕ್ಕೂ ಕೃಷಿ ತಾಯಿ ಅಥವಾ ತಂದೆ ಇದ್ದ ಹಾಗೆ. ಒಬ್ಬ ವ್ಯಕ್ತಿಗೆ ಕೃಷಿ ಕೆಲಸ ಗೊತ್ತಿದ್ದರೆ ಆತ ಪ್ರಪಂಚದ ಯಾವುದೇ ಭಾಗದಲ್ಲಿ ಆದರೂ ಬದುಕಬಲ್ಲ . ಅದಕ್ಕೆ ಶರಣರು ಹೇಳಿದ್ದು "ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು " ಎಂದು . ಯಾಕೆಂದರೆ ಕೃಷಿ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬು . ಜತೆಗೆ ಅನುಭವವನ್ನು ಕಲಿಸುತ್ತದೆ.

ಹೇಗೆಂದರೆ ಕೃಷಿಯದು ಒಂದು ನಿಯಮ ವಿದೆ. ನೆಲವನ್ನು ಊಳಬೇಕು, ಅಥವಾ ಅಗೆಯಬೇಕು, ಗೊಬ್ಬರ ಹಾಕಬೇಕು. ನಂತರ ಬೀಜ ಬಿತ್ತಬೇಕು. ನಂತರ ನೀರು ,ಗೊಬ್ಬರ ,ಕ್ರಿಮಿಕೀಟ ನಾಶಕ ಸಿಂಪಡಿಸಿ, ದನ ಕರುಗಳ ಹಾವಳಿಯಿಂದ, ಕಳ್ಳ ಕಾಕರುಗಳ ಹಾವಳಿಯಿಂದ ರಕ್ಷಿಸುವುದು ರೈತನ ಕೆಲಸ.

ಆದರೆ ಪಸಲು ಕೈಯಿಗೆ ಬಂದೆ ಬರುತ್ತದೆ ಎಂಬ ಯಾವ ಬಲವಾದ ನಿರೀಕ್ಷೆ ಇರುವುದಿಲ್ಲ. ಬೂಮಿತಾಯಿ ತನ್ನ ಕೆಲಸಮಾಡಿಸಿಕೊಂಡಿದ್ದಕ್ಕೆ ಏನೋ ಕೊಟ್ಟೆ ಕೊಡುತ್ತಾಳೆ ಎನ್ನುವ ನಂಬಿಕೆ ರೈತನದು. ಅದು ನಿಜ . ಯಾವತ್ತೂ ಭೂಮಿ ರೈತನಿಗೆ ಮೋಸ ಮಾಡಿಲ್ಲ. ಏನೂ ಕೆಲಸ ಮಾಡದವನಿಗೆ ಪಾಠ ಕಲಿಸದೆ ಬಿಟ್ಟಿಲ್ಲ.

ಇಲ್ಲೂ ಹಾಗೆಯೇ ನೀವೇ ಭೂಮಿ , ನಿಮ್ಮ ಮನಸ್ಸಿನಲ್ಲಿ ಇರುವ ದೊಡ್ಡದೇ ಆದ ಅಥವಾ ಚಿಕ್ಕದೆ ಆದ ಆಸೆಯೇ ಬೀಜ, ನಿಮ್ಮಲ್ಲಿರುವ ನಕಾರಾತ್ಮಕ , ಮೈಸಬ್ಬಿಗೆಯ ,ಸೋಮಾರಿತನ, ಮೋಸ ,ವಂಚನೆ ಗಳೇ ಕಳೆಗಳು . ಅವುಗಳೆಲ್ಲವನ್ನು ಕಿತ್ತು . ನಿಮ್ಮ ಮನಸ್ಸಿನಲ್ಲಿರುವ ಆಸೆಯನ್ನು ಜೀವನದಲ್ಲಿ ಮೇಲೆ ಬರುವ ಬೀಜವನ್ನು ಬಿತ್ತಿ, ಮೇಲೆ ಬನ್ನಿ.

ಎಲ್ಲಿಯವರೆಗೆ ನೀವು ಬೀಜವನ್ನು ಬಿತ್ತುವುದಿಲ್ಲವೋ ಅಲ್ಲಿಯವರೆಗೆ ನೀವೂ ಏನನ್ನೂ ಪಡೆಯುವುದಿಲ್ಲ ಎನ್ನುವುದನ್ನುಮರೆಯಬೇಡಿ. ಇಂದಿನ ದಿನವೇ ಶುಭ ದಿನ . ಇಂದೇ ಪ್ರಾರಂಭಿಸಿ.

ವಂದನೆಗಳೊಂದಿಗೆ

.ಟಿ.ನಾಗರಾಜ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ